ಸಿಗದ ವ್ಹೀಲ್​ಚೇರ್, ಕೆಲಸದ ಒತ್ತಡ, ನ್ಯಾಯಾಲಯದಿಂದ ಹಾರಿ ಪ್ರಾಣ ಬಿಟ್ಟ ದಿವ್ಯಾಂಗ ಕ್ಲರ್ಕ್​ – Kannada News | Disabled Clerk Suicide: Saket Court Work Pressure, Wheelchair Plea Ignored

ನವದೆಹಲಿ, ಜನವರಿ 09: ಕೆಲಸದ ಒತ್ತಡದಿಂದ ಬೇಸತ್ತು ದಿವ್ಯಾಂಗ ಗುಮಾಸ್ತರೊಬ್ಬರು ದೆಹಲಿಯ ಸಾಕೇತ್ ನ್ಯಾಯಾಲಯದ ಕಟ್ಟಡದಿಂದ ಹಾರಿ ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ನಡೆದಿದೆ. ಮೃತ ಉದ್ಯೋಗಿಯನ್ನು ನ್ಯಾಯಾಲಯದ ಆವರಣದಲ್ಲಿ ಗುಮಾಸ್ತರಾಗಿದ್ದ ಹರೀಶ್ ಸಿಂಗ್ ಮಹಾರ್ ಎಂದು ಗುರುತಿಸಲಾಗಿದೆ. ಘಟನಾ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಆತ್ಮಹತ್ಯೆ ಪತ್ರವೂ ಪತ್ತೆಯಾಗಿದ್ದು, ಅದರಲ್ಲಿ ಅವರು ಈ ಕಠಿಣ ಕ್ರಮ ತೆಗೆದುಕೊಳ್ಳಲು ಕಾರಣಗಳನ್ನು ವಿವರಿಸಿದ್ದಾರೆ. ಹರೀಶ್ ಶೇ.60ರಷ್ಟು ಅಂಗವಿಕಲರಾಗಿದ್ದರು.

ತಮ್ಮ ಸಾವಿಗೆ ಯಾರೂ ಕಾರಣರಲ್ಲ ಎಂದು ಆತ್ಮಹತ್ಯೆಗೆ ಪತ್ರ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ನ್ಯಾಯಾಲಯದ ಸಿಬ್ಬಂದಿ ಎದುರಿಸುತ್ತಿರುವ ಸವಾಲುಗಳ ಮೇಲೆ ಬೆಳಕು ಚೆಲ್ಲುವ ಮೂಲಕ ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ.

ನ್ಯಾಯಾಲಯದ ದಾಖಲೆಗಳನ್ನು ನಿರ್ವಹಿಸುವ ಮತ್ತು ನ್ಯಾಯಾಧೀಶರಿಗೆ ಸಹಾಯ ಮಾಡುವ ಜವಾಬ್ದಾರಿಯುತ ಹರೀಶ್ ಸಿಂಗ್​ರದ್ದು, ಕೆಲಸದ ಸಮಯದಲ್ಲಿ ಸಾಕೇತ್ ನ್ಯಾಯಾಲಯದ ಕಟ್ಟಡದ ಅತಿ ಎತ್ತರದ ಮಹಡಿಗೆ ಹತ್ತಿ ಅಲ್ಲಿಂದ ಹಾರಿ ಪ್ರಾಣಬಿಟ್ಟಿದ್ದಾರೆ. ಸಿಬ್ಬಂದಿ ಸ್ಥಳಕ್ಕೆ ಓಡಿ ಬಂದಿದ್ದರಿಂದ ನ್ಯಾಯಾಲಯದ ಕಲಾಪಗಳು ಸ್ವಲ್ಪ ಸಮಯದವರೆಗೆ ಸ್ಥಗಿತಗೊಂಡಿದ್ದವು.

ಸಿಂಗ್ ಅವರಿಂದ ವಶಪಡಿಸಿಕೊಂಡ ಆತ್ಮಹತ್ಯೆ ಪತ್ರದಲ್ಲಿ, ಅವರ ನಿರ್ಧಾರಕ್ಕೆ ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯನ್ನು ಹೊಣೆಗಾರರನ್ನಾಗಿ ಮಾಡಬಾರದು ಎಂದು ಸ್ಪಷ್ಟವಾಗಿ ಹೇಳಲಾಗಿದೆ. ಆತ್ಮಹತ್ಯೆ ಪತ್ರದಲ್ಲಿ ಯಾರ ಹೆಸರನ್ನು ಅವರು ಹೇಳದೇ ಇದ್ದರು, ಇತರೆ ಸಿಬ್ಬಂದಿ ಇವರು ಕೆಲಸದ ಒತ್ತಡದಿಂದಾಗಿಯೇ ಪ್ರಾಣ ಕಳೆದುಕೊಂಡಿದ್ದಾಗಿ ಹೇಳಿದ್ದಾರೆ.

ಮತ್ತಷ್ಟು ಓದಿ: ದೆಹಲಿಯ ಪಂಚತಾರಾ ಹೋಟೆಲ್​ನಿಂದ ಹಾರಿ ವ್ಯಕ್ತಿ ಆತ್ಮಹತ್ಯೆ

ಹೆಚ್ಚುವರಿಯಾಗಿ, ದೆಹಲಿ ಪೊಲೀಸ್ ತಂಡವು ಅವರ ಸಹೋದ್ಯೋಗಿಗಳನ್ನು ಪ್ರಶ್ನಿಸುವುದು ಸೇರಿದಂತೆ ಸಂಪೂರ್ಣ ತನಿಖೆ ನಡೆಸುತ್ತಿದೆ. ಜತೆಗೆ ಆತ್ಮಹತ್ಯಾ ಪತ್ರದಲ್ಲಿ ವ್ಹೀಲ್​ ಚೇರ್ ನೀಡುವಂತೆ ಮನವಿ ಮಾಡಿದ್ದಾರೆ, ವ್ಹೀಲ್​ ಚೇರ್ ನೀಡಿದರೆ ಮುಂದೆ ಬರುವ ದಿವ್ಯಾಂಗ ಗುಮಾಸ್ತರಿಗೆ ಅನುಕೂಲವಾಗುತ್ತದೆ ಎಂದು ಬರೆದಿದ್ದಾರೆ.

ನ್ಯಾಯಾಲಯದ ಗುಮಾಸ್ತನಾದಾಗಿನಿಂದಲೂ ತನಗೆ ಆತ್ಮಹತ್ಯೆಯ ಆಲೋಚನೆಗಳು ಬರುತ್ತಿದ್ದವು, ಆದರೆ ಅದರ ಬಗ್ಗೆ ಯಾರಿಗೂ ಹೇಳಿರಲಿಲ್ಲ ಎಂದು ಅವರು ವಿವರಿಸಿದ್ದಾರೆ. ಅದನ್ನು ನಿವಾರಿಸಲು ಅವರು ಪ್ರಯತ್ನಿಸಿದ್ದರು, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಅವರು ಕೆಲಸದ ಒತ್ತಡದಲ್ಲಿದ್ದರು, ಅದನ್ನು ನಿಭಾಯಿಸಲು ಸಾಧ್ಯವಿಲ್ಲ ಅದಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬಿಳಿಗಿರಿರಂಗನ ಬೆಟ್ಟದಲ್ಲಿ ಅಗ್ನಿ ಅವಘಡ; ಅಂಗಡಿಗಳು ಭಸ್ಮ! – Kannada News | Biligirirangana Betta Fire: Shops Burnt, Lakhs Loss, Cylinders Explode

ಚಾಮರಾಜನಗರ, ಜನವರಿ 09: ಬಿಳಿಗಿರಿರಂಗನ ಬೆಟ್ಟದ ಬಸ್ ನಿಲ್ದಾಣದ ಬಳಿ ಸಂಭವಿಸಿದ ಅಗ್ನಿ ಅವಘಡದಲ್ಲಿ 8ಕ್ಕೂ ಹೆಚ್ಚು ಅಂಗಡಿಗಳು ಭಸ್ಮವಾಗಿವೆ. ಮೂರಕ್ಕೂ ಹೆಚ್ಚು ಸಿಲಿಂಡರ್‌ಗಳು ಸ್ಫೋಟಗೊಂಡಿದ್ದು, ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದು, ಅದೃಷ್ಟವಶಾತ್ ಯಾವುದೇ ಜೀವಹಾನಿ ಸಂಭವಿಸಿಲ್ಲ. ಶಾರ್ಟ್ ಸರ್ಕ್ಯೂಟ್ ಆಗಿರಬಹುದು ಅಥವಾ ಕಿಡಿಗೇಡಿಗಳ ಕೃತ್ಯವಾಗಿದ್ದಿರಬಹುದೆಂದು ಶಂಕೆ ವ್ಯಕ್ತವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಟವೆಲ್ ಹಾಕಿದ ರಾಜಣ್ಣ: ಮಾಜಿ ಸಚಿವರ ಸ್ಫೋಟಕ ಹೇಳಿಕೆ – Kannada News | K.N. Rajanna says he is an aspirant for the KPCC president post

ಬೆಂಗಳೂರು, ಜನವರಿ 09: ಪಕ್ಷದ ಅಧ್ಯಕ್ಷ ಗಿರಿ ಕೊಟ್ರೆ ಮಂತ್ರಿ ಸ್ಥಾನ ಬಿಡ್ತೀನಿ ಎಂದು ಸಚಿವನಾಗಿದ್ದಾಗಲೇ ಹೇಳಿದ್ದೆ. ಈಗ ಬಿಡೋಕೆ ಯಾವುದೇ ಸ್ಥಾನ ಬಾಕಿ ಇಲ್ಲ. ನಾನು ಕೆಪಿಸಿಸಿ ಅಧ್ಯಕ್ಷನಾದ್ರೆ ಪಕ್ಷ ಸಂಘಟನೆ ಮಾಡ್ತೀನಿ. ಹೈಕಮಾಂಡ್​​ಗೆ ಈ ಬಗ್ಗೆ ವಿಷಯ ತಿಳಿಸಿದ್ದೇನೆ ಎಂದು ಮಾಜಿ ಸಚಿವ ಕೆ.ಎನ್​. ರಾಜಣ್ಣ ಹೇಳಿದ್ದಾರೆ. ಸಂಪುಟ ಪುನಾರಚನೆ ಆದ್ರೆ ಮತ್ತೆ ಸಚಿವರು ಆಗ್ತೀರಾ ಎಂಬ ಪ್ರಶ್ನೆಗೂ ಉತ್ತರಿಸಿದ ಅವರು, ಸಚಿವನಾದರೂ ಹೀಗೆ ಇರ್ತೇನೆ. ಇಲ್ಲ ಅಂದ್ರೂ ಹೀಗೆ ಇದ್ದೇನೆ. ನಾನು ಯಾವತ್ತೂ ಅಧಿಕಾರ ಹುಡುಕಿಕೊಂಡು ಹೋದವನಲ್ಲ ಎಂದು ತಿಳಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Shukra Dosha Remedies: ಜಾತಕದಲ್ಲಿ ಶುಕ್ರ ದೋಷವಿದ್ದರೆ ಶುಕ್ರವಾರದಂದು ತಪ್ಪದೇ ಈ ಕೆಲಸ ಮಾಡಿ – Kannada News | Shukra Dosha Remedies: Strengthen Weak Venus on Fridays with Vastu Tips

ಜಾತಕದಲ್ಲಿ ಶುಕ್ರ ದೋಷ ಅಥವಾ ಶುಕ್ರ ದುರ್ಬಲ ಸ್ಥಾನದಲ್ಲಿ ಇರುವವರಿಗೆ ಶುಕ್ರವಾರದಂದು ವಾಸ್ತು ಶಾಸ್ತ್ರವು ಕೆಲವು ವಿಶೇಷ ಪರಿಹಾರಗಳನ್ನು ಸೂಚಿಸಿದೆ. ಈ ಪರಿಹಾರಗಳನ್ನು ಅನುಸರಿಸಿದರೆ, ಜಾತಕದಲ್ಲಿ ಶುಕ್ರ ದೋಷದ ಪರಿಣಾಮಗಳು ನಿವಾರಣೆಯಾಗುತ್ತವೆ ಮತ್ತು ದುರ್ಬಲ ಶುಕ್ರನು ಬಲಶಾಲಿಯಾಗುತ್ತಾನೆ. ಇದರೊಂದಿಗೆ, ಶುಕ್ರನು ಅಶುಭ ಫಲಿತಾಂಶಗಳನ್ನು ನೀಡುವ ಬದಲು ಶುಭ ಫಲಿತಾಂಶಗಳನ್ನು ನೀಡಲು ಪ್ರಾರಂಭಿಸುತ್ತಾನೆ ಎಂದು ನಂವಲಾಗಿದೆ.

ಜಾತಕದಲ್ಲಿ ಶುಕ್ರ ದೋಷದ ಲಕ್ಷಣ:

ಜಾತಕದಲ್ಲಿ ಶುಕ್ರ ದೋಷ ಅಥವಾ ಶುಕ್ರ ದುರ್ಬಲ ಸ್ಥಾನದಲ್ಲಿರುವ ಜನರು ಆರ್ಥಿಕ ನಷ್ಟವನ್ನು ಅನುಭವಿಸುತ್ತಾರೆ. ಅಂತಹ ಜನರು ಮದ್ಯ, ಜೂಜು, ಮಾದಕ ದ್ರವ್ಯಗಳು ಮತ್ತು ಕೆಟ್ಟ ಸಹವಾಸದತ್ತ ಒಲವು ತೋರುತ್ತಾರೆ. ಮದುವೆ ವಿಳಂಬವಾಗುತ್ತವೆ. ಸಂಬಂಧಗಳು ಹಾಳಾಗುತ್ತವೆ. ಚರ್ಮ ಮತ್ತು ಕಣ್ಣಿನ ಸಮಸ್ಯೆಗಳು ಉದ್ಭವಿಸುತ್ತವೆ. ಜೀವನದಲ್ಲಿ ಭೌತಿಕ ಸೌಕರ್ಯಗಳು ಕೊರತೆಯಿರುತ್ತವೆ. ಪ್ರೇಮ ಸಂಬಂಧಗಳು ಯಶಸ್ವಿಯಾಗುವುದಿಲ್ಲ. ಧೂಮಪಾನ ಮತ್ತು ಮದ್ಯಪಾನದಂತಹ ಕೆಟ್ಟ ಅಭ್ಯಾಸಗಳಿಗೆ ವ್ಯಸನಿಯಾಗಬಹುದು.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಶುಕ್ರವಾರ ಈ ಪರಿಹಾರಗಳನ್ನು ಮಾಡಿ:

ಶುಕ್ರನ ದುಷ್ಟ ಪ್ರಭಾವಗಳನ್ನು ತೆಗೆದುಹಾಕಲು ಮತ್ತು ನಿಮ್ಮ ಜಾತಕದಲ್ಲಿ ಶುಕ್ರನನ್ನು ಬಲಪಡಿಸಲು, ಶುಕ್ರವಾರದಂದು ಬಿಳಿ ವಸ್ತುಗಳನ್ನು ದಾನ ಮಾಡಿ. 11 ಶುಕ್ರವಾರಗಳಂದು ವೈಭವ ಲಕ್ಷ್ಮಿ ಉಪವಾಸವನ್ನು ಆಚರಿಸಿ. ಇದು ಶುಕ್ರನನ್ನು ಮೆಚ್ಚಿಸುತ್ತದೆ. ಶುಕ್ರವಾರದಂದು ಬಡವರಿಗೆ ಆಹಾರ ನೀಡಿ. ಹಸುಗಳಿಗೆ ತುಪ್ಪ ಹಚ್ಚಿ ಬೆಲ್ಲವನ್ನು ತಿನ್ನಿಸಿ. ಇದು ನಿಮ್ಮ ಜಾತಕದಲ್ಲಿ ಶುಕ್ರನನ್ನು ಬಲಪಡಿಸುತ್ತದೆ. ದುರ್ಬಲ ಶುಕ್ರ ಇರುವವರು ನಿಯಮಿತವಾಗಿ ‘ಓಂ ಶುಕ್ರಯಣ ನಮಃ’ ಎಂಬ ಮಂತ್ರವನ್ನು ಜಪಿಸಬೇಕು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಿ ಶಾಲೆಯ ಜಾಗ ಕಬಳಿಸಿ ನಿರ್ಮಾಣವಾಗ್ತಿದೆ ಮಸೀದಿ! ಮುಳಬಾಗಿಲು ಗುಂಡ್ಲಹಳ್ಳಿ ಗ್ರಾಮದಲ್ಲಿ ಭಾರಿ ವಿವಾದ – Kannada News | Alleged Encroachment of Government School Land for Mosque Construction Sparks Major Controversy in Mulbagal, Kolar

ಸರ್ಕಾರಿ ಶಾಲೆಯ ಜಾಗ ಕಬಳಿಸಿ ನಿರ್ಮಾಣವಾಗ್ತಿದೆ ಮಸೀದಿ!

ಕೋಲಾರ, ಜನವರಿ 9: ಕೋಲಾರ (Kolar) ಜಿಲ್ಲೆಯ ಮುಳಬಾಗಿಲು ತಾಲೂಕಿನ ಸಿ.ಗುಂಡ್ಲಹಳ್ಳಿ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಜಾಗವನ್ನು ಒತ್ತುವರಿ ಮಾಡಿ ಮಸೀದಿ (Mosque) ನಿರ್ಮಾಣ ಮಾಡಲಾಗುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿವೆ. ಈ ವಿಷಯ ಗ್ರಾಮದಲ್ಲಿ ವಿವಾದಕ್ಕೆ ಕಾರಣವಾಗಿದ್ದು, ಸ್ಥಳೀಯರು ಹಾಗೂ ಗ್ರಾಮಸ್ಥರು ಮಸೀದಿ ನಿರ್ಮಾಣಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಗ್ರಾಮದ ಸರ್ಕಾರಿ ಶಾಲೆಗೆ ಸೇರಿದ ಜಾಗದಲ್ಲಿ ಹಾಗೂ ಶಾಲಾ ಆವರಣದ ಸಮೀಪದಲ್ಲಿರುವ ದೇವಸ್ಥಾನದ ಬಳಿಯೇ ಮಸೀದಿ ನಿರ್ಮಾಣ ಕಾಮಗಾರಿ ಆರಂಭಗೊಂಡಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಗ್ರಾಮ ಪಂಚಾಯತಿಯಿಂದ ಅನುಮತಿ ಪಡೆದು ಮಸೀದಿ ನಿರ್ಮಾಣ ಮಾಡಲಾಗುತ್ತಿದೆ ಎನ್ನಲಾಗಿದ್ದು, ಆದರೆ ಆ ಜಾಗವು ಸರ್ಕಾರಿ ಶಾಲೆಗೆ ಸೇರಿದ್ದು ಎನ್ನುವ ಆರೋಪವನ್ನು ಗ್ರಾಮಸ್ಥರು ಮುಂದಿಟ್ಟಿದ್ದಾರೆ.

ಈ ಸಂಬಂಧ ಗ್ರಾಮಸ್ಥರು ಹಾಗೂ ಸ್ಥಳೀಯರು ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ. ಶಾಲೆಯ ಮುಖ್ಯೋಪಾಧ್ಯಾಯರು ಸಹ ಮುಳಬಾಗಿಲು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಜಮೀನು ದಾಖಲೆ ಪತ್ರಗಳ ಪ್ರತಿಯ ಸಹಿತ ದೂರು ನೀಡಿದ್ದಾರೆ. ಅದರಲ್ಲಿ, ಶಾಲಾ ಜಾಗ ಒತ್ತುವರಿ ಮಾಡಿಕೊಂಡು ಮಸೀದಿ ನಿರ್ಮಾಣ ಮಾಡುತ್ತಿರುವುದಾಗಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿದೆ. ಶಾಲಾ ಮಕ್ಕಳ ಭವಿಷ್ಯ ಹಾಗೂ ಸರ್ಕಾರಿ ಆಸ್ತಿಯ ರಕ್ಷಣೆಗೆ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಲಾಗಿದೆ.

ಸಿ.ಗುಂಡ್ಲಹಳ್ಳಿ ಗ್ರಾಮದ ಸರ್ಕಾರಿ ಶಾಲೆ

ವಿವಾದ ತೀವ್ರಗೊಂಡ ಹಿನ್ನೆಲೆ, ಮಸೀದಿ ನಿರ್ಮಾಣ ಕಾಮಗಾರಿ ತಾತ್ಕಾಲಿಕವಾಗಿ ನಿಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳು ಸೂಚನೆ ನೀಡಿದ್ದಾರೆ. ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದ್ದು, ಕಾಮಗಾರಿ ಸ್ಥಗಿತಗೊಳಿಸುವಂತೆ ಪೊಲೀಸರಿಂದಲೂ ಸೂಚನೆ ನೀಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ಜಾಗದ ನೈಜ ಸ್ಥಿತಿಯನ್ನು ಸ್ಪಷ್ಟಪಡಿಸಲು ಸರ್ವೆ ಕಾರ್ಯ ನಡೆಸಲಾಗುವುದು. ಅದರ ವರದಿ ಬಂದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೋಗಿಲು ಬೆನ್ನಲ್ಲೇ ನಾಗವಾರ ಬಳಿ ಬೃಹತ್ ಒತ್ತುವರಿ ತೆರವು ಕಾರ್ಯಾಚರಣೆ: 30ಕ್ಕೂ ಹೆಚ್ಚು ಮನೆ, ಶೆಡ್, ಗ್ಯಾರೇಜ್ ಧ್ವಂಸ

ಶಾಲಾ ಜಾಗ ಒತ್ತುವರಿ ಪ್ರಕರಣದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಈ ವಿಚಾರ ಇದೀಗ ತಾಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಚರ್ಚೆಗೆ ಗ್ರಾಸವಾಗಿದ್ದು, ಮುಂದಿನ ಬೆಳವಣಿಗೆಗಳತ್ತ ಸಾರ್ವಜನಿಕರ ಗಮನ ನೆಟ್ಟಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಮಕೂರು ಜನರಿಗೆ ಗುಡ್​​ನ್ಯೂಸ್​: ಮೆಟ್ರೋ ಮಾರ್ಗದ ಕಾಮಗಾರಿ ಆರಂಭ, ಯಾವೆಲ್ಲ ಮಾರ್ಗದಲ್ಲಿ ಸಂಚಾರಿಸಲಿದೆ? – Kannada News | Namma Metro Phase 4: Bengaluru Tumakuru DPR Finalized

ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಗೆ ಅಧಿಕೃತವಾಗಿ ಘೋಷಣೆ

ಬೆಂಗಳೂರು, ಜ.9: ಬಹುಕಾಲ ಬೇಡಿಕೆಯಾಗಿದ್ದ ಬೆಂಗಳೂರು-ತುಮಕೂರು ಮೆಟ್ರೋ ಯೋಜನೆಯು ಅಧಿಕೃತವಾಗಿ ಘೋಷಣೆ ಆಗಿ, ಇದೀಗ ಅಡಿಪಾಯಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ಮಹತ್ವಾಕಾಂಕ್ಷೆಯ ಅಂತರ್​ ಜಿಲ್ಲಾ ಕಾರಿಡಾರ್‌ ಬಗ್ಗೆ ಯೋಜನಾ ವರದಿ (ಡಿಪಿಆರ್) ತಯಾರಿಕೆ ಮಾಡಲಾಗಿದೆ. ನಿರ್ಮಾಣ ಕಾರ್ಯಕ್ಕೆ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಇದರ ವೆಚ್ಚ ಹಾಗೂ ವಿಸ್ತರಣೆ ಹೆಚ್ಚಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಯೋಜನೆ ಬಂದರೆ ಬೆಂಗಳೂರು ಹಾಗೂ ತುಮಕೂರು ಜನರಿಗೆ ಹೆಚ್ಚು ಪ್ರಯೋಜನವಾಗಲಿದೆ ಎಂದು ಹೇಳಿದ್ದಾರೆ.

ಈ ಯೋಜನೆಗೆ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್, ಆರ್ವೀ ಎಂಜಿನಿಯರಿಂಗ್ ಕನ್ಸಲ್ಟೆಂಟ್ಸ್‌ಗೆ ಡಿಪಿಆರ್ ಸಲಹಾ ಕಾರ್ಯವನ್ನು ನೀಡಿದೆ. ಸಂಸ್ಥೆಯು 1.2 ಕೋಟಿ ರೂ. ವೆಚ್ಚದ 59.60 ಕಿಮೀ ಉದ್ದದ ಮೆಟ್ರೋ ಮಾರ್ಗಕ್ಕಾಗಿ ಡಿಪಿಆರ್ ಈಗಾಗಲೇ ಸಿದ್ಧತೆಗಳನ್ನು ಮಾಡಿಕೊಂಡಿದೆ. ಇದರ ಟೆಂಡರ್‌ಗಳನ್ನು ನವೆಂಬರ್ 2025 ರಲ್ಲಿ ಕರೆಯಲಾಯಿತು. ಇನ್ನು ಈ ಕಾರಿಡಾರ್​​ಗಾಗಿ ಅಧಿಕಾರಿಗಳು ಹಾಗೂ ತಜ್ಞರು ಕ್ಷೇತ್ರಮಟ್ಟದ ಅಧ್ಯಯನವನ್ನು ಪ್ರಾರಂಭಿಸಿದ್ದಾರೆ. ಹಾಗೂ ನಮ್ಮ ಮೆಟ್ರೋದ 4ನೇ ಹಂತದ ವಿಸ್ತರಣೆಯ ಭಾಗವಾಗಿರುವ ಈ ಯೋಜನೆಯು 20,649 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ನ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶವಂತ್ ಚವಾಣ್ ದಿ ಹಿಂದೂಗೆ ತಿಳಿಸಿದ್ದಾರೆ.

ಈಗ ನಡೆಯುತ್ತಿರುವ ಕಾಮಗಾರಿಯ ಬಗ್ಗೆ ಸಮೀಕ್ಷೆಗಳು ನಡೆಯುತ್ತಿದೆ. ಇದರಲ್ಲಿ ಸಂಚಾರ ಮತ್ತು ಪ್ರಯಾಣದ ಮಾದರಿಗಳ ಕುರಿತು ದತ್ತಾಂಶ ಸಂಗ್ರಹಣೆ, ಪ್ರಾಥಮಿಕ ಜೋಡಣೆ ಪರಿಶೀಲನೆಗಳು, ವಿವಿಧ ಮೌಲ್ಯಮಾಪನಗಳು ಮತ್ತು ಆರಂಭಿಕ ಭೂತಾಂತ್ರಿಕ ತನಿಖೆಗಳನ್ನು ಒಳಗೊಂಡಿದೆ. ಜತೆಗೆ ಮುಂದಿನ ದಿನಗಳಲ್ಲಿ ಇದರ ವಿಸ್ತರಣೆ ಬಗ್ಗೆಯೂ ಚರ್ಚೆಗಳು ಆಗಿದೆ ಎಂದು ಹೇಳಿದ್ದಾರೆ. ಬೆಂಗಳೂರು-ತುಮಕೂರು ಮೆಟ್ರೋವನ್ನು ನಮ್ಮ ಮೆಟ್ರೋದ 4 ನೇ ಹಂತದ ವಿಸ್ತರಣೆಯ ಭಾಗವಾಗಿ ಯೋಜಿಸಲಾಗಿದೆ ಮತ್ತು ಇದು ರಾಜ್ಯದ ಸಾರಿಗೆ ಮಾರ್ಗದಲ್ಲಿ ಅತ್ಯಂತ ದುಬಾರಿ ಯೋಜನೆಗಳಲ್ಲಿ ಒಂದಾಗಿದೆ.

ಯೋಜನೆಯ ಪ್ರಮುಖ ವಿವರಗಳು:

ಒಟ್ಟು ಮಾರ್ಗದ ಉದ್ದ: 59.60 ಕಿ.ಮೀ.

ಅಂದಾಜು ವೆಚ್ಚ: 20,649 ಕೋಟಿ ರೂ.

ಒಟ್ಟು ನಿಲ್ದಾಣಗಳು: 26

ಪ್ರಯಾಣ: ಮಾದವರ (ಬೆಂಗಳೂರು)ನಿಂದ ನಾಗಣ್ಣನಪಾಳ್ಯ (ತುಮಕೂರು)ವರೆಗೆ

ಇದನ್ನೂ ಓದಿ: ಬೆಂಗಳೂರು – ತುಮಕೂರು ಮೆಟ್ರೋ ಯೋಜನೆ ಡಿಪಿಆರ್​ಗೆ ಬಿಡ್ ಕರೆದ ಬಿಎಂಆರ್ ಸಿಎಲ್

ಈ ಕಾರಿಡಾರ್ ಪೂರ್ಣಗೊಂಡ ನಂತರ, ಬೆಂಗಳೂರಿನ ವಾಯುವ್ಯ ಹೊರವಲಯ ಮತ್ತು ನಗರ ಕೇಂದ್ರದಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ತುಮಕೂರು ನಡುವೆ ಪ್ರಯಾಣಿಸುವ ಪ್ರಯಾಣಿಕರಿಗೆ ಸೇವೆ ಸಲ್ಲಿಸುವ ನಿರೀಕ್ಷೆಯಿದೆ. ಕಳೆದ ವರ್ಷ ಮೇ ತಿಂಗಳಲ್ಲಿ ಬಿಎಂಆರ್‌ಸಿಎಲ್ ಸಲ್ಲಿಸಿದ ಕಾರ್ಯಸಾಧ್ಯತಾ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿದ ನಂತರ ಡಿಪಿಆರ್‌ನೊಂದಿಗೆ ಮಾತುಕತೆ ನಡೆಸಿ, ಮುಂದುವರಿದಿದೆ. ಗೃಹ ಸಚಿವ ಜಿ ಪರಮೇಶ್ವರ ಅವರು ಈ ಹಿಂದೆ ವರದಿಯನ್ನು ಅನುಮೋದಿಸಲಾಗಿದೆ ಎಂದು ಹೇಳಿದ್ದರು. ವಿಶೇಷವಾಗಿ ತುಮಕೂರಿಗೆ ಪೂರ್ಣ ಪ್ರಮಾಣದ ಮೆಟ್ರೋ ಅಗತ್ಯವಿದೆಯೇ ಎಂದು ಹೇಳಲಾಗಿತ್ತು. ಈ ಯೋಜನೆ ಮುಗಿದ ನಂತರ ಅದನ್ನು ಕೂಡ ವಿಸ್ತರಣೆ ಮಾಡಲಾಗವುದು ಎಂದು ಹೇಳಿದ್ದಾರೆ.

ಕಾರಿಡಾರ್‌ನಲ್ಲಿ ಯೋಜಿಸಲಾದ ಕೆಲವು ಪ್ರಮುಖ ನಿಲ್ದಾಣಗಳು:

ಮಕಾಲಿ

ದಾಸನಪುರ

ನೆಲಮಂಗಲ

ನೆಲಮಂಗಲ ಟೋಲ್‌ಗೇಟ್

ಟಿ. ಬೇಗೂರ್

ತಿಪ್ಪಗೊಂಡನಹಳ್ಳಿ

ಸೋಂಪುರ ಕೈಗಾರಿಕಾ ಪ್ರದೇಶ

ಡಾಬ್ಸ್‌ಪೇಟೆ

ಹಿರೇಹಳ್ಳಿ ಕೈಗಾರಿಕಾ ಪ್ರದೇಶ

ಕ್ಯಾತ್ಸಂದ್ರ

ತುಮಕೂರು ಬಸ್ ನಿಲ್ದಾಣ

ತುಡಾ ಲೇಔಟ್

ನಾಗಣ್ಣನಪಾಳ್ಯ

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಾರ್ಟಿಯಲ್ಲಿ ಶಂಕರ್​​ ನಾಗ್ ಹಾಡು ಹಾಡಿದ ಯಶ್; ಇಲ್ಲಿದೆ ವಿಡಿಯೋ – Kannada News | Yash Sings Shankar Nag Song: Viral Video Proves Kannada Love

ನಟ ರಾಕಿಂಗ್ ಸ್ಟಾರ್ ಯಶ್ ಅವರು ಶಂಕರ್​ ನಾಗ್ ಅವರ ದೊಡ್ಡ ಅಭಿಮಾನಿ. ಇದು ಹಲವು ಬಾರಿ ಸಾಬೀತಾಗಿದೆ. ಯಶ್​ ಅವರು ‘ಗೂಗ್ಲಿ’ ಸಿನಿಮಾದಲ್ಲಿ ಶಂಕರ್ ನಾಗ್ ಗೆಟಪ್​​ನಲ್ಲಿಯೂ ಕಾಣಿಸಿಕೊಂಡಿದ್ದರು. ಈಗ ಯಶ್ ಅವರು ಪಾರ್ಟಿಯಲ್ಲಿ ಶಂಕರ್ ನಾಗ್ ಸಿನಿಮಾದ ಹಾಡು ಹಾಡಿದ್ದಾರೆ. ಈ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ. ಯಶ್ ಅವರ ಕನ್ನಡ ಪ್ರೀತಿಗೆ ಅನೇಕರು ಮೆಚ್ಚುಗೆ ಸೂಚಿಸಿದ್ದಾರೆ. ಅಂದಹಾಗೆ ಇದು ಅವರ ಬರ್ತ್​​​ಡೇ ಪಾರ್ಟಿ ಸಂದರ್ಭದ ವಿಡಿಯೋ ಹೌದೋ ಅಥವಾ ಇಲ್ಲವೋ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಯಶ್ ಅವರು ಎಷ್ಟೇ ಎತ್ತರಕ್ಕೆ ಬೆಳೆದರೂ ಕನ್ನಡದ ಬಗ್ಗೆ ಅವರು ತೋರುವ ಪ್ರೀತಿ ಕಡಿಮೆ ಮಾಡಿಲ್ಲ. ಪರಭಾಷೆಯಲ್ಲಿ ಹೆಚ್ಚು ನಟಿಸೋ ಬದಲು, ಪರಭಾಷೆಯವರನ್ನು ಇಲ್ಲಿಗೆ ಕರೆಸಬೇಕು ಎಂಬ ಆಲೋಚನೆ ಅವರಿಗೆ ಯಾವಾಗಲೂ ಇತ್ತು. ‘ಟಾಕ್ಸಿಕ್’ ಚಿತ್ರ ಅದಕ್ಕೆ ಉತ್ತಮ ಉದಾಹರಣೆ. ಪರಭಾಷಾ ತಂತ್ರಜ್ಞರು ಹಾಗೂ ಕಲಾವಿದರನ್ನು ಯಶ್ ಈ ಚಿತ್ರಕ್ಕಾಗಿ ಕರೆಸಿಕೊಂಡಿದ್ದಾರೆ. ಹಾಲಿವುಡ್ ತಂತ್ರಜ್ಞರು ಈ ಚಿತ್ರಕ್ಕಾಗಿ ಕೆಲಸ ಮಾಡಿದ್ದಾರೆ. ಆದರೆ, ಅವರ ಕನ್ನಡ ಪ್ರಿತಿ ಕಡಿಮೆ ಆಗಿಲ್ಲ.

ಇದನ್ನೂ ಓದಿ: ದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್; ಇದು ಯಶ್ ಹವಾ

ಜನವರಿ 8 ಯಶ್ ಬರ್ತ್​​ಡೇ. ಈ ಸಂದರ್ಭದ ವಿಡಿಯೋ ಎಂದು ವಿಡಿಯೋ ಒಂದು ವೈರಲ್ ಆಗುತ್ತಿದೆ.ಈ ವಿಡಿಯೋದಲ್ಲಿ ಯಶ್ ಅವರು ಶಂಕರ್ ನಾಗ್ ಅವರ ‘ಸಿಬಿಐ ಶಂಕರ್’ ಸಿನಿಮಾದ ‘ಗೀತಾಂಜಲಿ’ ಹಾಡನ್ನು ಹಾಡುತ್ತಿದ್ದಾರೆ. ಈ ವಿಡಿಯೋ ಗಮನ ಸೆಳೆಯುವ ರೀತಿಯಲ್ಲಿ ಇದೆ. ಇದು ಹಳೆಯ ವಿಡಿಯೋ ಎನ್ನಲಾಗುತ್ತಿದೆ.

ಯಶ್ ಅವರು ಸದ್ಯ ಮುಂಬೈನಲ್ಲಿದ್ದಾರೆ. ಅಲ್ಲದೆ, ಯಶ್ ಅವರು ಇತ್ತೀಚೆಗೆ ಗೆಟಪ್​ ಬದಲಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದಲೇ ಅವರು ಮುಖ ಹಾಗೂ ತಲೆಯನ್ನು ಮುಚ್ಚಿಕೊಂಡು ಹೋಗಿದ್ದರು. ಈ ವಿಡಿಯೋದಲ್ಲಿ ಅವರು ಹಳೆಯ ಗೆಟಪ್​​ನಲ್ಲೇ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

RBI Sachet: ಆನ್​ಲೈನ್ ಫ್ರಾಡ್ ಆದರೆ, ಹೂಡಿಕೆ ಸ್ಕೀಮ್ ಬಗ್ಗೆ ಅನುಮಾನ ಬಂದರೆ ಆರ್​ಬಿಐನ ಸಚೇತ್ ಪೋರ್ಟಲ್ ಮೊರೆಹೋಗಿ – Kannada News | RBI Sachet Portal helps detecting online frauds and filing complaint

ಕಳ್ಳತನ, ದರೋಡೆ ಮಾಡುವವರ ಒಂದು ವರ್ಗವಾದರೆ, ಆನ್​ಲೈನ್​ನಲ್ಲಿ ವಿವಿಧ ಸ್ಕೀಮ್​ಗಳ ಮೂಲಕ ಒಮ್ಮೆಗೇ ನೂರಾರು, ಸಾವಿರಾರು, ಲಕ್ಷಾಂತರ ಜನರನ್ನು ಯಾಮಾರಿಸಿ ಕೋಟ್ಯಂತ ರೂ ಗುಳುಂ ಮಾಡುವ ವಂಚಕರು (Fraudsters) ಹೆಚ್ಚಾಗುತ್ತಿದ್ದಾರೆ. ಹಣ ಡಬಲ್ ಮಾಡುತ್ತೇವೆ, ಷೇರು ಹೂಡಿಕೆಯಿಂದ ಭರ್ಜರಿ ಲಾಭ ಕೊಡಿಸುತ್ತೇವೆ, ಅತ್ಯಧಿಕ ರಿಟರ್ನ್ ಕೊಡುತ್ತೇವೆ ಇತ್ಯಾದಿ ನಾನಾ ಪ್ರಲೋಬನೆಗಳನ್ನು ಒಡ್ಡಿ ಜನರಿಂದ ಹಣ ಪಡೆದು ಯಾಮಾರಿಸುವ ವಂಚಕರು ಹಲವರಿದ್ದಾರೆ.

ತಾವು ಸಾಚಾ ಎಂದು ತೋರಿಸಿಕೊಳ್ಳಲು ಸೆಬಿ, ಆರ್​ಬಿಐ, ಐಆರ್​ಡಿಎ ಇತ್ಯಾದಿ ರೆಗ್ಯುಲೇಟಿ ಸಂಸ್ಥೆಗಳ ನೊಂದಣಿ ಮಾಡಿಕೊಂಡಿದ್ದೇವೆ ಎಂದು ಹೇಳಿಕೊಳ್ಳುವುದುಂಟು. ಕೆಲವೊಮ್ಮೆ ಹೂಡಿಕೆದಾರರು ಅಧಿಕ ರಿಟರ್ನ್ಸ್​ನ ಆಶೆಗೆ ಒಳಗಾಗಿ ಆಫರ್ ಕೊಟ್ಟ ಕಂಪನಿಯ ಹಿನ್ನೆಲೆ ಕೂಡ ಪರಿಶೀಲಿಸುವ ಗೋಜಿಗೆ ಹೋಗುವುದಿಲ್ಲ. ನಿಮ್ಮಿಂದ ಹೂಡಿಕೆ ಪಡೆಯುತ್ತಿರುವ ಕಂಪನಿಯ ಹಿನ್ನೆಲೆ ಮತ್ತು ಸಾಚಾತನ ಪರಿಶೀಲಿಸಬೇಕಾದ್ದು ಬಹಳ ಮುಖ್ಯ. ನೀವು ಆರ್​ಬಿಐನ ಸಚೇತ್ ಪೋರ್ಟಲ್ ನೆರವು ಪಡೆಯಬಹುದು.

ಸಚೇತ್ ಪೋರ್ಟಲ್​ನಲ್ಲಿ ಸಂಸ್ಥೆಗಳ ಮಾನ್ಯತೆ ಪರಿಶೀಲಿಸಿ…

ಹಣಕಾಸು ಸ್ಕೀಮ್ ಆಫರ್ ಮಾಡುವ ಒಂದು ಕಂಪನಿಯು ಯಾವುದಾದರೂ ರೆಗ್ಯುಲೇಟರ್​ನಲ್ಲಿ ಮಾನ್ಯತೆ ಹೊಂದಿರಬೇಕು. ಷೇರು ಟಿಪ್ಸ್ ಕೊಡುವವರು ಸೆಬಿ ನೊಂದಾವಣಿ ಪಡೆದಿರಬೇಕು. ಠೇವಣಿ ಪಡೆಯುವವರು ಆರ್​ಬಿಐ ನೊಂದಾವಣಿ ಹೊಂದಿರಬೇಕು. ಹೀಗೆ ಆ ಕ್ಷೇತ್ರಕ್ಕೆ ಸಂಬಂಧಿಸಿದ ರೆಗ್ಯುಲೇಟರ್​ಗಳ ಮಾನ್ಯತೆ ಹೊಂದಿರಬೇಕು.

ಇದನ್ನೂ ಓದಿ: ಪಿಎಫ್ ಹಣಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತಾ? ವಿತ್​ಡ್ರಾ ಮಾಡಿದಾಗ ಟ್ಯಾಕ್ಸ್ ಎಷ್ಟು? ನೀವು ತಿಳಿದಿರಬೇಕಾದ ಸಂಗತಿಗಳಿವು…

ನಿಮಗೆ ಆಫರ್ ಮಾಡಿರುವ ಕಂಪನಿ ಮಾನ್ಯತೆ ಹೊಂದಿದೆಯಾ ಎಂದು ಪರಿಶೀಲಿಸಲು ಆರ್​ಬಿಐನ ಸಚೇತ್ ಪೋರ್ಟಲ್​ಗೆ ಭೇಟಿ ನೀಡಿ. ಅದರ ವಿಳಾಸ ಇಂತಿದೆ: sachet.rbi.org.in/

ಇಲ್ಲಿ ಮುಖ್ಯಪುಟದ ತಳದಲ್ಲಿ ರಿಜಿಸ್ಟರ್ಡ್ ಎಂಟಿಟೀಸ್ ಎನ್ನುವ ಟ್ಯಾಬ್ ಕಾಣುತ್ತದೆ. ಅದರಲ್ಲಿ ಆರ್​ಬಿಐ, ಸೆಬಿ, ಎನ್​ಎಚ್​ಬಿ ಇತ್ಯಾದಿ ರೆಗ್ಯುಲೇಟರ್​ಗಳ ಪಟ್ಟಿ ಇದೆ. ಸಂಬಂಧಿತ ರೆಗ್ಯುಲೇಟರ್ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ, ಅದರಲ್ಲಿ ಮಾನ್ಯತೆ ಪಡೆದ ಎಲ್ಲಾ ಸಂಸ್ಥೆಗಳ ಅಪ್​ಡೇಟೆಡ್ ಪಟ್ಟಿ ಕಾಣುತ್ತದೆ. ಅದನ್ನು ಪರಿಶೀಲಿಸಿ.

ವಂಚನೆಯಾಗಿದ್ದರೆ ದೂರು ಕೊಡಲು ಅವಕಾಶ

ನಿಮಗೆ ಆನ್​ಲೈನ್ ಫ್ರಾಡ್ ಆಗಿದ್ದರೆ ಇದೇ ಸಚೇತ್ ಪೋರ್ಟಲ್​​ನಲ್ಲಿ ದೂರು ಕೊಡುವ ಅವಕಾಶ ಇದೆ. ಪೋರ್ಟಲ್ ಮುಖಪುಟದಲ್ಲಿ ‘ಫೈಲ್ ಎ ಕಂಪ್ಲೇಂಟ್’ ಟ್ಯಾಬ್ ಮೇಲೆ ಕ್ಲಿಕ್ ಮಾಡಿದರೆ ಪ್ರತ್ಯೇಕ ಪೇಜ್ ಓಪನ್ ಆಗುತ್ತದೆ.

ಇದನ್ನೂ ಓದಿ: ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?

ನಿಮ್ಮನ್ನು ವಂಚಿಸಿದ ಸಂಸ್ಥೆ ಯಾವ ರೆಗ್ಯುಲೇಟರ್ ವ್ಯಾಪ್ತಿಗೆ ಬರುತ್ತದೆ ಎಂಬುದು ಗೊತ್ತಿದ್ದರೆ ಅದನ್ನು ಆಯ್ದುಕೊಂಡು ದೂರು ಕೊಡಬಹುದು. ಒಂದು ವೇಳೆ ರೆಗ್ಯುಲೇಟರ್ ಯಾವುದು ಎಂದು ಗೊತ್ತಿಲ್ಲದಿದ್ದರೆ ಅದನ್ನೂ ಪರಿಗಣಿಸಲಾಗುತ್ತದೆ. ಅಂಥ ಸಂದರ್ಭದಲ್ಲಿ ನಿಮ್ಮ ದೂರು ಯಾವ ರೆಗ್ಯುಲೇಟರ್ ವ್ಯಾಪ್ತಿಗೆ ಬರುತ್ತದೆ ಎಂಬುದನ್ನು ಅಡ್ಮಿನಿಸ್ಟ್ರೇಟರ್ ನಿರ್ಧರಿಸಿ ದೂರನ್ನು ಸಂಬಂಧಿತ ಅಧಿಕಾರಿಗಳಿಗೆ ವರ್ಗಾಯಿಸಲಾಗುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸುಖಾಂತ್ಯವಾಯ್ತು ‘ಜನ ನಾಯಗನ್’ ವಿವಾದ, ‘ಪರಾಶಕ್ತಿ’ ಕತೆ ಏನಾಯ್ತು? – Kannada News | Sivakarthikeyan starrer Parasakthi Tamil movie got UA certificate from CBFC

ತಮಿಳು ಸಿನಿಮಾಗಳಿಗೆ ಸೆನ್ಸಾರ್ (Censor) ಸಮಸ್ಯೆ ಕಾಡುತ್ತಿದೆ. ಇಂದು (ಜನವರಿ 09) ಬಿಡುಗಡೆ ಆಗಬೇಕಿದ್ದ ‘ಜನ ನಾಯಗನ್’ ಸಿನಿಮಾಕ್ಕೆ ಸೆನ್ಸಾರ್ ಮಂಡಳಿ ಪ್ರಮಾಣ ಪತ್ರ ನೀಡಲು ಹಿಂದೇಟು ಹಾಕಿತ್ತು. ಇದೇ ಕಾರಣಕ್ಕೆ ನ್ಯಾಯಾಲಯದ ಮೆಟ್ಟಿಲೇರಿದ ನಿರ್ಮಾಪಕರು ‘ಯು/ಎ’ ಪ್ರಮಾಣ ಪತ್ರ ಪಡೆಯಲು ಯಶಸ್ವಿ ಆಗಿದ್ದಾರೆ. ನಾಳೆ (ಜನವರಿ 10) ಬಿಡುಗಡೆ ಆಗಲಿದ್ದ ಮತ್ತೊಂದು ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾ ‘ಪರಾಶಕ್ತಿ’ ಸಿನಿಮಾಕ್ಕೂ ಸಹ ಸಿಬಿಎಫ್​​ಸಿ ಪ್ರಮಾಣ ಪತ್ರ ಕುರಿತಂತೆ ಸಮಸ್ಯೆ ಎದುರಾಗಿತ್ತು.

ಸುಧಾ ಕೊಂಗರ ನಿರ್ದೇಶಿಸಿ, ಶಿವಕಾರ್ತಿಕೇಯನ್ ಮತ್ತು ಶ್ರೀಲೀಲಾ ನಟಿಸಿದ್ದ ‘ಪರಾಶಕ್ತಿ’ ಸಿನಿಮಾಕ್ಕೆ ತಮಿಳುನಾಡಿ ಸಿಬಿಎಫ್​​ಸಿ ಸಮಿತಿ ಬರೋಬ್ಬರಿ 23 ಕಟ್​​ಗಳನ್ನು ಸೂಚಿಸಿತ್ತು. ಇದನ್ನು ನಿರ್ದೇಶಕಿ ಸುಧಾ ಕೊಂಗರ ವಿರೋಧಿಸಿದ್ದರು. ಸೆನ್ಸಾರ್ ಮಂಡಳಿ ಹೇಳಿರುವ ದೃಶ್ಯಗಳಿಗೆ ಕತ್ತರಿ ಹಾಕಿದರೆ ಸಿನಿಮಾದ ವಿಷಯ ಗೌಣವಾಗುತ್ತದೆ ಎಂದು ವಾದಿಸಿದ್ದರು. ಬಳಿಕ ಸಿನಿಮಾವನ್ನು ಮುಂಬೈನ ರಿವ್ಯೂ ಕಮಿಟಿಗೆ ಕಳಿಸಿದ್ದರು. ಇಂದು (ಜನವರಿ 09) ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ನೀಡಲಾಗಿದೆ.

‘ಪರಾಶಕ್ತಿ’ ಸಿನಿಮಾ ತಮಿಳುನಾಡಿನ ಹಿಂದಿ ವಿರೋಧಿ ಚಳವಳಿಯ ಕುರಿತಾದ ಕತೆಯನ್ನು ಒಳಗೊಂಡಿದೆ. ಇದೇ ಕಾರಣಕ್ಕೆ ಸಹಜವಾಗಿಯೇ ಕೇಂದ್ರ ಸರ್ಕಾರದ ವಿರುದ್ಧ ಕೆಲವಾರು ಸಂಭಾಷಣೆಗಳು ಸಹ ಇವೆ, ಹಾಗಾಗಿ ಈ ಸಿನಿಮಾ ಭಾಷಾವಾರು ದ್ವೇಷಕ್ಕೆ ಕಾರಣ ಆಗಬಹುದೆಂದು ತಮಿಳುನಾಡು ಸಿಬಿಎಫ್​​ಸಿ ಹಲವು ದೃಶ್ಯಗಳಿಗೆ ಕಟ್ ಸೂಚಿಸಿತ್ತು. ಆದರೆ ಚಿತ್ರತಂಡ ಇದನ್ನು ವಿರೋಧಿಸಿತ್ತು. ಇದೇ ಕಾರಣಕ್ಕೆ ‘ಜನ ನಾಯಗನ್’ ರೀತಿ ‘ಪರಾಶಕ್ತಿ’ ಸಿನಿಮಾದ ಬಿಡುಗಡೆ ಸಹ ಇಕ್ಕಟ್ಟಿಗೆ ಸಿಲುಕಿತ್ತು. ಇದೀಗ ಸಿನಿಮಾಕ್ಕೆ ‘ಯು/ಎ’ ಪ್ರಮಾಣ ಪತ್ರ ದೊರೆತಿದ್ದು, ಸಿನಿಮಾ ನಿಗದಿಯಂತೆ ನಾಳೆ ಅಂದರೆ ಜನವರಿ 10 ರಂದು ಬಿಡುಗಡೆ ಆಗಲಿದೆ.

ಇದನ್ನೂ ಓದಿ:‘ಜನ ನಾಯಗನ್’ ಎದುರು ‘ಪರಾಶಕ್ತಿ’ ಬಿಡುಗಡೆ ರಾಜಕೀಯ ಪ್ರೇರಿತವೇ? ಸಿಕ್ತು ಸ್ಪಷ್ಟನೆ

ಇದೇ ದಿನ ನ್ಯಾಯಾಲಯದ ಮೂಲಕ ‘ಜನ ನಾಯಗನ್’ ಸಿನಿಮಾಕ್ಕೂ ‘ಯು/ಎ’ ಪ್ರಮಾಣ ಪತ್ರ ದೊರೆತಿದೆ. ಆದರೆ ಸಿನಿಮಾದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಾಗಿಲ್ಲ. ಒಂದೊಮ್ಮೆ ‘ಜನ ನಾಯಗನ್’ ಸಿನಿಮಾದ ಬಿಡುಗಡೆ ತಡವಾದರೆ ಅದು ‘ಪರಾಶಕ್ತಿ’ ಸಿನಿಮಾಕ್ಕೆ ಒಳಿತೇ ಆಗಲಿದೆ. ‘ಪರಾಶಕ್ತಿ’ ಸಿನಿಮಾವು ತಮಿಳು ಜನರು ಹಿಂದಿ ಭಾಷಾ ಹೇರಿಕೆ ವಿರುದ್ಧ ಮಾಡಿದ ಹೋರಾಟದ ಕತೆಯನ್ನು ಒಳಗೊಂಡಿದೆ. ನಾಯಕ ಶಿವಕಾರ್ತಿಕೇಯನ್ ಕ್ರಾಂತಿಕಾರಿಯ ಪಾತ್ರದಲ್ಲಿ ನಟಿಸಿದ್ದಾರೆ. ಶ್ರೀಲೀಲಾ, ಹಿಂದಿ ಶಿಕ್ಷಕಿ ಪಾತ್ರದಲ್ಲಿ ನಟಿಸಿದ್ದಾರೆ. ಸಿನಿಮಾನಲ್ಲಿ ಜಯಂ ರವಿ ವಿಲನ್ ಪಾತ್ರದಲ್ಲಿ ನಟಿಸಿರುವುದು ವಿಶೇಷ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Viral: ಗೆಳೆಯನನ್ನು ಭೇಟಿಯಾಗಲು ಬೆಂಗಳೂರಿಗೆ ಬಂದ ವಿದೇಶಿ ಮಹಿಳೆ ಹೀಗೆಂದಿದ್ದೇಕೆ? – Kannada News | Italian woman meets boyfriend and expresses admiration for Bengaluru

ಭಾರತಕ್ಕೆ ಬರುವ ವಿದೇಶಿಗರು ಬೆಂಗಳೂರಿಗೂ (Bengaluru) ಭೇಟಿ ನೀಡಿ ಇಲ್ಲಿನ ತಿಂಡಿ ತಿನಿಸುಗಳನ್ನು ಸವಿಯುವುದಿದೆ. ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ಇಲ್ಲಿನ ಸೌಂದರ್ಯಕ್ಕೆ ಮನಸೋಲುತ್ತಾರೆ. ಇದೀಗ ಇಟಾಲಿಯನ್ ಮಹಿಳೆಯೊಬ್ಬರು (Italian woman) ಬೆಂಗಳೂರಿಗೆ ಮೊದಲ ಬಾರಿಗೆ ಏಕಾಂಗಿಯಾಗಿ ಪ್ರಯಾಣ ಬೆಳೆಸಿದ್ದಾರೆ. ತನ್ನ ಗೆಳೆಯನನ್ನು ಭೇಟಿ ಮಾಡಲು ವಿದೇಶದಿಂದ ಇಲ್ಲಿಗೆ ಬಂದಿದ್ದು ತಮಗೆ ಏನು ಅನಿಸಿತು ಎಂಬ ಬಗ್ಗೆ ಪೋಸ್ಟ್‌ನಲ್ಲಿ ಹೇಳಿದ್ದಾರೆ. ಸಲಹೆ ಹಾಗೂ ಮಾರ್ಗದರ್ಶನ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದ್ದಾರೆ. ರೆಡ್ಡಿಟ್ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಇವರ ಪ್ರಾಮಾಣಿಕ ಅಭಿಪ್ರಾಯಕ್ಕೆ ನೆಟ್ಟಿಗರಿಂದ ಮೆಚ್ಚುಗೆ ವ್ಯಕ್ತವಾಗಿವೆ.

ರೆಡ್ಡಿಟ್ ಖಾತೆಯಲ್ಲಿ ಹಂಚಿಕೊಂಡ ಪೋಸ್ಟ್‌ನಲ್ಲಿ ತಿಂಗಳ ಹಿಂದೆ ನಾನು ನನ್ನ ಗೆಳೆಯನನ್ನು ಭೇಟಿ ಮಾಡಲು ಬೆಂಗಳೂರಿಗೆ ವಿಮಾನದಲ್ಲಿ ಹೋಗಲು ಯೋಜಿಸುತ್ತಿದ್ದರಿಂದ ಕೆಲವು ಸಲಹೆಗಳು ಮತ್ತು ಭೇಟಿ ನೀಡಲು ಸ್ಥಳಗಳನ್ನು ಕೇಳುವ ಪೋಸ್ಟ್ ಅನ್ನು ಮಾಡಿದ್ದೆ. ನಾನು ನನ್ನ ಅನುಭವವನ್ನು ಹಂಚಿಕೊಳ್ಳಲು ಬಯಸಿದ್ದೆ, ಆದರೆ ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಆಲೋಚನೆಗಳನ್ನು ಹಂಚಿಕೊಂಡು ನನಗೆ ಸಲಹೆ ನೀಡಿದ ಎಲ್ಲರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದಿದ್ದಾರೆ.

ವೈರಲ್‌ ಪೋಸ್ಟ್‌ ಇಲ್ಲಿದೆ

ಇಲ್ಲಿನ ರುಚಿಕರವಾದ ಆಹಾರ ಇಷ್ಟ ಪಟ್ಟು ಸವಿದೆ. ಭೇಟಿ ನೀಡಿದ ಎಲ್ಲಾ ಸ್ಥಳಗಳು ಇಷ್ಟ ಆಯ್ತು. ಆದರೆ ನಾನು ತನ್ನ ವಸತಿ ಸೌಕರ್ಯದ ವಿಷಯದಲ್ಲಿ ಸ್ವಲ್ಪ ಮೋಸ ಹೋದೆ. ಆದರೆ ಇದು ನಿಜವಾಗಿಯೂ ಅನ್ವೇಷಿಸಲು ಆಸಕ್ತಿದಾಯಕ ನಗರವಾಗಿತ್ತು. ನಾನು ಮತ್ತೆ ಭೇಟಿ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ ಅದು ಶೀಘ್ರದಲ್ಲೇ ಆಗುತ್ತದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಬೆಂಗಳೂರು ಜೀವನ ದುಬಾರಿಯಲ್ಲ; ತಿಂಗಳ ಖರ್ಚು ವೆಚ್ಚ ಹಂಚಿಕೊಂಡ ಯುವಕ

ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ಮತ್ತೆ ಬನ್ನಿ ಎಂದಿದ್ದಾರೆ. ಇನ್ನೊಬ್ಬರು, ನೀವು ನಿಮ್ಮ ಗೆಳೆಯನನ್ನು ಹೇಗೆ ಭೇಟಿಯಾದಿರಿ ಎಂದು ಕೇಳಿದ್ದಾರೆ. ಮತ್ತೊಬ್ಬರು, ಬೆಂಗಳೂರು ಎಲ್ಲರಿಗೂ ಇಷ್ಟವಾಗುತ್ತೆ, ನಿಮ್ಮ ಅಭಿಪ್ರಾಯ ಕೇಳಿ ಖುಷಿಯಾಯ್ತು ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version