ಕೇಂದ್ರೀಯ ವಿ.ವಿ.ಯಲ್ಲಿ ಪದವಿ ಕೋರ್ಸಗೆ ಅರ್ಜಿ ಆಹ್ವಾನ: ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಶೇ8 ರಷ್ಟು ಮೀಸಲಾತಿ – Kannada News | Central University of Karnataka Admissions 2026: UG Admissions Open, CUET Exam, 8 percent reservation for candidates from Kalyan Karnataka region

ಕೇಂದ್ರೀಯ ವಿ.ವಿ.ಯಲ್ಲಿ ಪದವಿ ಕೋರ್ಸಗೆ ಅರ್ಜಿ ಆಹ್ವಾನ

ಕಲಬುರಗಿ, ಜನವರಿ 09: ರಾಜ್ಯದ ಏಕೈಕ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ 2026ನೇ ಶೈಕ್ಷಣಿಕ ಸಾಲಿನಲ್ಲಿ 15 ವಿವಿಧ ಪದವಿ ಕೋರ್ಸ್ ಗಳ ವ್ಯಾಸಂಗಕ್ಕೆ ಪ್ರವೇಶಾತಿ ಪ್ರಕ್ರಿಯೆ ಆರಂಭವಾಗಿದ್ದು, ಕಲ್ಯಾಣ ಕರ್ನಾಟಕ ಭಾಗದ ಅಭ್ಯರ್ಥಿಗಳಿಗೆ ಶೇ 8ರಷ್ಟು ಮೀಸಲಾತಿ ಸೌಲಭ್ಯ ಕಲ್ಪಿಸಿದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದ್ದಾರೆ.

ಜನವರಿ 3ರಿಂದಲೆ ಅರ್ಜಿ ಸಲ್ಲಿಕೆ ಆರಂಭ

ಕಲಬುರಗಿ ನಗರದ ಕಡಗಂಚಿ ಬಳಿ ಇರೋ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಅತಿಥಿಗೃಹದಲ್ಲಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕಳೆದ ಜನವರಿ 3 ರಿಂದಲೆ https://cuet.nta.nic.in/ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಆರಂಭಗೊಂಡಿದ್ದು, ಅನ್ ಲೈನ್ ಮೂಲಕ ಶುಲ್ಕ ಪಾವತಿಯೊಂದಿಗೆ ಅರ್ಜಿ ಸಲ್ಲಿಸಲು ಜನವರಿ 31 ಕೊನೆ ದಿನವಾಗಿದೆ. ಫೆಬ್ರವರಿ 2 ರಿಂದ 4ರ ವರೆಗೆ ಸಲ್ಲಿಸಿದ ಅರ್ಜಿಯಲ್ಲಿ ತಿದ್ದುಪಡಿ ಮಾಡಲು ಅವಕಾಶ ಕಲ್ಪಿಸಲಾಗಿದೆ ಎಂದು ಕುಲಪತಿ ಹೇಳಿದ್ದಾರೆ.

ಯಾವೆಲ್ಲಾ ಭಾಷೆಯಲ್ಲಿ ಪರೀಕ್ಷೆ?

ಮೇ-2026ರಲ್ಲಿ ಪ್ರವೇಶ ಪರೀಕ್ಷೆ ನಡೆಯುವುದರಿಂದ ಈಗಾಗಲೆ ದ್ವಿತೀಯ ಪಿ.ಯು.ಸಿ. ತೇರ್ಗಡೆಯಾದ ಮತ್ತು ದ್ವಿತೀಯ ಪಿ.ಯು.ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ಅಭ್ಯರ್ಥಿಗಳು ಸಹ ಪ್ರವೇಶಾತಿ ಪರೀಕ್ಷೆ ಬರೆಯಬಹುದಾಗಿದೆ. ಕಂಪ್ಯೂಟರ್ ಆಧಾರಿತ ಪರೀಕ್ಷೆ ಇದಾಗಿದ್ದು, ಇಂಗ್ಲೀಷ್, ಹಿಂದಿ, ಬಂಗಾಳಿ, ಗುಜರಾತಿ, ಕನ್ನಡ, ಮಲಯಾಳಂ, ಮರಾಠಿ, ಓಡಿಯಾ, ಪಂಜಾಬಿ, ತಮಿಳು, ತೆಲುಗು, ಮತ್ತು ಉರ್ದು ಭಾಷೆಯಲ್ಲಿ ಪರೀಕ್ಷೆ ಬರೆಯಬಹುದಾಗಿದೆ.

ಯಾವೆಲ್ಲಾ ಕೋರ್ಸ್​ಗಳು ಲಭ್ಯ?

ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬಿ.ಟೆಕ್ (ಎಲೆಕ್ಟ್ರಿಕಲ್ ಇಂಜಿನಿಯರಿಂಗ್), (ಎಲೆಕ್ಟ್ರಾನಿಕ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್), (ಆರ್ಟಿಫಿಷಿಯಲ್ ಇಂಟಲಿಜನ್ಸ್ ಅಂಡ್ ಮಷೀನ್ ಲರ್ನಿಂಗ್), (ಗಣಿತ ಮತ್ತು ಕಂಪ್ಯೂಟಿಂಗ್), (ಕಂಪ್ಯೂಟರ್ ಸೈನ್ಸ್), ಬಿ.ಎಸ್ಸಿ (ಭೌತಶಾಸ್ತ್ರ), (ರಸಾಯನಶಾಸ್ತ್ರ), (ಭೂವಿಜ್ಞಾನ), (ಮನೋವಿಜ್ಞಾನ), ಬಿಬಿಎ, ಸಮಾಜ ಕಾರ್ಯದಲ್ಲಿ ಪದವಿ (ಬಿ ಎಸ್ ಡಬ್ಲ್ಯೂ), ಬಿ.ಎ (ಅರ್ಥಶಾಸ್ತ್ರ), (ಇತಿಹಾಸ), (ಇಂಗ್ಲಿಷ್), (ಎಲ್.ಎಲ್.ಬಿ ಐದು ವರ್ಷದ ಇಂಟಿಗ್ರೇಟೆಡ್ ಪ್ರೋಗ್ರಾಮ್) ಲಭ್ಯವಿದೆ. ಪರೀಕ್ಷೆ ನಡೆಯುವ ಸ್ಥಳ, ದಿನಾಂಕ, ಪ್ರವೇಶ ಕಾರ್ಡ್‌, ಫಲಿತಾಂಶ ಎಲ್ಲವು ಎನ್.ಟಿ.ಎ. ಅಂತರ್ಜಾಲದಲ್ಲಿ ತಿಳಿಸಲಾಗುತ್ತದೆ. ಹೀಗಾಗಿ ಅಭ್ಯರ್ಥಿಗಳು ನಿರಂತರ ವೆಬ್ ಸೈಟ್ ವೀಕ್ಷಿಸಬೇಕೆಂದು ಕುಲಪತಿಗಳು ತಿಳಿಸಿದ್ದಾರೆ.

ಯಾವೆಲ್ಲಾ ಜಿಲ್ಲೆಗಳಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ ?

ಅರ್ಜಿ ಸಲ್ಲಿಸುವಲ್ಲಿ ಅಭ್ಯರ್ಥಿಗಳಿಗೆ ತೊಂದರೆ ಎದುರಾದಲ್ಲಿ ದೂ.ಸಂ. 011-40759000 ಅಥವಾ cuet-ug@nta.ac.in ಗೆ ಇಮೇಲ್ ಮೂಲಕ ಸಂಪರ್ಕಿಸಬಹುದಾಗಿದೆ. ಕರ್ನಾಟಕದ ಬೆಳಗಾವಿ, ಬಳ್ಳಾರಿ, ಕಲಬುರಗಿ, ಬೀದರ್, ದಾವಣಗೆರೆ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಧಾರವಾಡ ಮತ್ತು ಚಿಕ್ಕಮಗಳೂರಿನಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದೆ ಎಂದು ಪ್ರೊ.ಬಟ್ಟು ಸತ್ಯನಾರಾಯಣ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಕುಲಸಚಿವ ಪ್ರೊ. ಆರ್.ಆರ್.ಬಿರಾದಾರ, ಪರೀಕ್ಷಾ ನಿಯಂತ್ರಣಾಧಿಕಾರಿ ಕೋಟಾಸಾಯಿ ಕೃಷ್ಣಾ, ಪ್ರೊ. ಹನುಮೇಗೌಡ, ಪ್ರೊ. ಹೆಗಡಿ, ಸಹಾಯಕ ಸಂಪರ್ಕಾಧಿಕಾರಿ ಪ್ರಕಾಶ ಬಾಳಿಕಾಯಿ, ಡಾ. ಟಿ.ಎಸ್. ಕಟ್ಟಿಮನಿ ಸೇರಿದಂತೆ ಇತರರು ಉಪಸ್ಥಿತರಿದ್ದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರಾಜ್ಯ ರಾಜಕಾರಣದ ಮೇಲೆ ಕಣ್ಣು: ಹೇಗಿದೆ ಗೊತ್ತಾ ನಿಖಿಲ್​​, ಪ್ರತಾಪ್​​, ಸುಮಲತಾ ಪ್ಲ್ಯಾನ್​​? – Kannada News | Karnataka Elections 2028: Early Political Plans of Nikhil, Pratap, and Sumalatha

ಪ್ರತಾಪ್​​ ಸಿಂಹ, ಸುಮಲತಾ ಮತ್ತು ನಿಖಿಲ್​.

ಬೆಂಗಳೂರು, ಜನವರಿ 09: 2028ರ ಕರ್ನಾಟಕ ವಿಧಾನಸಭಾ ಚುನಾವಣೆಗೆ ಹಲವು ನಾಯಕರು ಈಗಿನಿಂದಲೇ ತಯಾರಿ ಆರಂಭಿಸಿದ್ದಾರೆ . ಯಾವ ಕ್ಷೇತ್ರದಲ್ಲಿ ತಾವು ಚುನಾವಣೆಗೆ ಸ್ಪರ್ಧಿಸಿದ್ರೆ ಒಳಿತು, ರಣತಂತ್ರ ಹೇಗಿರಬೇಕು ಎಂಬ ಬಗ್ಗೆ ಲೆಕ್ಕಾಚಾರ ನಡೆಸುತ್ತಿದ್ದಾರೆ. ಈ ಸಾಲಿನಲ್ಲಿ ಈಗಾಗಲೇ ಬಿಜೆಪಿಯ ಪ್ರತಾಪ್​​ ಸಿಂಹ ಮತ್ತು ಸುಮಲತಾ ಹೆಸರು ಕೇಳಿಬಂದಿತ್ತು. ಇದಕ್ಕೀಗ ಕೇಂದ್ರ ಸಚಿವ ಹೆಚ್​​.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್​​ ಹೆಸರೂ ಸೇರ್ಪಡೆಯಾಗಿದೆ. ಹ್ಯಾಟ್ರಿಕ್​​ ಸೋಲಿನ ಬಳಿಕ ಪುಟಿದೇಳಲು ಜೆಡಿಎಸ್​​ ಯುವ ನಾಯಕ ತೆರೆಮರೆಯ ತಯಾರಿ ನಡೆಸಿದ್ದಾರೆ.

ಮಂಡ್ಯ ಅಥವಾ ಮದ್ದೂರಿನಿಂದ ನಿಖಿಲ್​​ ಸ್ಪರ್ಧೆ?

2028ರ ವಿಧಾನಸಭಾ ಚುನಾವಣೆ ಮೇಲೆ ಕಣ್ಣಿಟ್ಟಿರುವ ನಿಖಿಲ್, ಮಂಡ್ಯಕ್ಕೆ ಮತ್ತೆ ಎಂಟ್ರಿ ಕೊಡಲು ಪ್ಲ್ಯಾನ್​​ ಮಾಡಿದ್ದಾರೆ. 2019ರ ಲೋಕಸಭಾ ಚುನಾವಣೆಗೆ ಮಂಡ್ಯದಿಂದ ಸ್ಪರ್ಧಿಸಿದ್ದ ನಿಖಿಲ್​ ಪರಾಭವಗೊಂಡಿದ್ದರು. ಈ ನಡುವೆ ಇಲ್ಲಿಂದಲೇ ವಿಧಾನ ಸಭೆ ಚುನಾವಣೆಗೆ ಸ್ಪರ್ಧಿಸಬೇಕು ಎಂಬ ಇರಾದೆ ಇವರದ್ದು ಎನ್ನಲಾಗಿದೆ. ಹೀಗಾಗಿ ಮಂಡ್ಯದಲ್ಲೇ ಮನೆ ಮಾಡಲು ನಿಖಿಲ್ ಕುಮಾರಸ್ವಾಮಿ ಮುಂದಾಗಿದ್ದು, ಮಂಡ್ಯ ಅಥವಾ ಮದ್ದೂರು ವಿಧಾನಸಭಾ ಕ್ಷೇತ್ರದ ಮೇಲೆ ಒಲವು ಹೊಂದಿದ್ದಾರೆ ಎನ್ನಲಾಗಿದೆ. ರಾಮನಗರಕ್ಕಿಂತ ಮಂಡ್ಯವೇ ಸುಲಭ ಎಂಬುದು ಜೆಡಿಎಸ್​ ಲೆಕ್ಕಾಚಾರವೂ ಆಗಿರುವ ಕಾರಣ ಈ ಹಿನ್ನೆಲೆ ಮತ್ತೆ ಮಂಡ್ಯಕ್ಕೆ ಬರಲು ನಿಖಿಲ್​​ ಸಿದ್ಧತೆ ನಡೆಸಿದ್ದಾರೆ. ಸದ್ಯ ಮಂಡ್ಯದಲ್ಲಿ ಮನೆ ಹುಡುಕಲು ಬೆಂಬಲಿಗರಿಗೆ ನಿಖಿಲ್‌ ಸೂಚಿಸಿದ್ದು, ವಾರಕ್ಕೊಮ್ಮೆ ಮಂಡ್ಯದಲ್ಲೇ ಉಳಿಯಲು ನಿರ್ಧರಿಸಿದ್ದಾರಂತೆ. ಈ ಹಿಂದೆ ವಾರಕೊಮ್ಮೆ ಕ್ಷೇತ್ರಕ್ಕೆ ಬರುತ್ತೇನೆ ಎಂದು ಹೆಚ್​ಡಿಕೆ ಹೇಳಿದ್ದರೂ ಅಪರೂಪಕ್ಕೊಮ್ಮೆ ಮಾತ್ರ ಮಂಡ್ಯ ಜಿಲ್ಲೆಗೆ ಬರುತ್ತಿದ್ದಾರೆ. ಕೇಂದ್ರ ಸಚಿವ ಜವಾಬ್ದಾರಿ, ಅನಾರೋಗ್ಯದಿಂದ ವಾರಕ್ಕೊಮ್ಮೆ ಭೇಟಿ ಸಾಧ್ಯವಾಗುತ್ತಿಲ್ಲ. ಹೀಗಾಗಿ ಈಗ ಮಗನ ಮೂಲಕ ಜಿಲ್ಲೆ ಮೇಲೆ ಹಿಡಿತ ಸಾಧಿಸಲು HDK ಕೂಡ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಕೇಂದ್ರದ ವಿರುದ್ಧ ಸಿಡಿದೆದ್ದ ಸಿದ್ದರಾಮಯ್ಯ ಸರ್ಕಾರ; ವಿಶೇಷ ಅಧಿವೇಶನ ಕರೆಯಲು ತೀರ್ಮಾನ

ಇನ್ನು ಮಾಜಿ ಸಂಸದ ಪ್ರತಾಪ್​​ ಸಿಂಹ ಕೂಡ ವಿಧಾನಸಭೆ ಚುನಾವಣೆಗೆ ತಯಾರಿ ನಡೆಸಿದ್ದಾರೆ. ಜನವರಿ 5ರಂದು ಮೈಸೂರಿನ ಚಾಮರಾಜ ಕ್ಷೇತ್ರದಲ್ಲಿ ಆಯೋಜಿಸಿದ್ದ ಸ್ನೇಹ ಬಳಗದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಅವರು, ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲಿ ಟಿಕೆಟ್ ಕೈ ತಪ್ಪಿದ ಬಳಿಕ ರಾಷ್ಟ್ರ ರಾಜಕಾರಣದಿಂದ ರಾಜ್ಯ ರಾಜಕಾರಣದತ್ತ ಹೆಜ್ಜೆ ಇಡುವುದಾಗಿ ಪರೋಕ್ಷವಾಗಿ ಹೇಳಿದ್ದ ಪ್ರತಾಪ್ , ಚಾಮರಾಜ ಕ್ಷೇತ್ರದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನಲಾಗ್ತಿದೆ. ಮತ್ತೊಂದೆಡೆ ಮಾಜಿ ಸಂಸದೆ ಸುಮಲತಾ ಕೂಡ ರಾಜ್ಯ ರಾಜಕಾರಣದತ್ತ ಒಲವು ತೋರಿದ್ದು, ಮುಂದಿನ ಚುನಾವಣಾ ರಾಜಕೀಯದ ಬಗ್ಗೆ ನಮ್ಮ ಪಕ್ಷದ ನಾಯಕರ ಜೊತೆ ಚರ್ಚಿಸುವೆ ಎಂದಿದ್ದಾರೆ. ಆದರೆ ಅವರು ಯಾವ ಕ್ಷೇತ್ರದಿಂದ ಕಣಕ್ಕಿಳಿಯುವ ಇರಾದೆ ಹೊಂದಿದ್ದಾರೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿ ಲಭ್ಯವಿಲ್ಲ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 1:10 pm, Fri, 9 January 26

Source link

ಸೋಮನಾಥ ದೇವಾಲಯದ ಮೇಲೆ 1026ರಿಂದ ಎಷ್ಟು ಬಾರಿ ನಡೆದಿತ್ತು ದಾಳಿ ಮತ್ತು ಯಾವಾಗ? ಇಲ್ಲಿದೆ ಮಾಹಿತಿ – Kannada News | A Thousand Year Journey of Somnath Temple: Destruction, Revival and Faith

ಪದೇ ಪದೇ ದಾಳಿ ನಡೆದ ನಂತರ, ಭಾರತದ ಉಕ್ಕಿನ ಮನುಷ್ಯ ಮತ್ತು ಉಪ ಪ್ರಧಾನಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ನವೆಂಬರ್ 12, 1947 ರಂದು ಜುನಾಗಢಕ್ಕೆ ಭೇಟಿ ನೀಡಿದಾಗ ದೇವಾಲಯದ ಭವ್ಯತೆಯು ಹೆಚ್ಚಾಯಿತು. ಅವರು ಸೋಮನಾಥ ದೇವಾಲಯದ ಪುನರ್ನಿರ್ಮಾಣಕ್ಕೆ ಆದೇಶಿಸಿದರು. ದೇವಾಲಯದ ನಿರ್ಮಾಣವನ್ನು ಮೇಲ್ವಿಚಾರಣೆ ಮಾಡಲು ಮತ್ತು ಹಣಕಾಸು ವ್ಯವಸ್ಥೆ ಮಾಡಲು ಅವರು ಸೋಮನಾಥ ಟ್ರಸ್ಟ್ ಅನ್ನು ಸ್ಥಾಪಿಸಿದರು. ತರುವಾಯ, ಮೇ 11, 1951 ರಂದು, ಭಾರತದ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ದೇವಾಲಯದಲ್ಲಿ ವಿಗ್ರಹ ಪ್ರತಿಷ್ಠಾಪನಾ ಸಮಾರಂಭವನ್ನು ನೆರವೇರಿಸಿದರು.

Source link

ಕೊಪ್ಪಳ ಗವಿಸಿದ್ದೇಶ್ವರ ಜಾತ್ರೆಗೆ ಆಗಮಿಸಿದ ಇಸ್ರೇಲ್ ದಂಪತಿ! – Kannada News | Foreign Couple Thrilled at Koppal’s Gavi Matha Jatre

ಕೊಪ್ಪಳ, ಜನವರಿ 09: ದಕ್ಷಿಣ ಭಾರತದ ಕುಂಭಮೇಳ ಎಂದೇ ಖ್ಯಾತಿ ಪಡೆದಿರುವ ಕೊಪ್ಪಳದ ಗವಿಸಿದ್ದೇಶ್ವರ ಮಹಾಶಿವಯೋಗಿಗಳ ಜಾತ್ರಾ ಮಹೋತ್ಸವಕ್ಕೆ ಜನ ಸಾಗರವೇ ಹರಿದು ಬಂದಿದ್ದು, ಮುಖ್ಯವಾಗಿ ವಿದೇಶಿ ದಂಪತಿಗಳು ಆಗಮಿಸಿರುವುದು ಎಲ್ಲರ ಗಮನ ಸೆಳೆದಿದೆ. ಹಂಪಿಗೆ ಪ್ರವಾಸಕ್ಕೆ ಬಂದಿದ್ದ ಇಸ್ರೇಲ್ ಮೂಲದ ದಂಪತಿಗಳಾದ ಹೀಲಾ ಮತ್ತು ನೋಯಿಂ, ಜಾತ್ರೆಯ ಹಿನ್ನಲೆಯಲ್ಲಿ ಗವಿ ಮಠಕ್ಕೆ ಭೇಟಿ ನೀಡಿದ್ದರು. ಮಠದ ಸಂಪ್ರದಾಯ, ಜಾತ್ರೆಯ ವೈಭವ ನೋಡಿ ಸಂತಸ ವ್ಯಕ್ತಪಡಿಸಿದ ದಂಪತಿಗಳು, ಸ್ಥಳೀಯ ಸಂಸ್ಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Vastu Tips: ವಾಸ್ತು ಪ್ರಕಾರ ಹೊಸ ವರ್ಷದ ಕ್ಯಾಲೆಂಡರನ್ನು ತಪ್ಪಿಯೂ ಈ ದಿಕ್ಕಿನಲ್ಲಿ ನೇತುಹಾಕಬೇಡಿ – Kannada News | Vastu Tips for Calendar Placement: Attract Good Luck and Prosperity to Your Home

2026ರ ಹೊಸ ವರ್ಷ ಆರಂಭವಾಗುತ್ತಿದ್ದಂತೆ, ವರ್ಷವಿಡೀ ಹಬ್ಬ, ವಿಶೇಷ ದಿನಗಳು ಮತ್ತು ರಜಾದಿನಗಳ ದಿನಾಂಕಗಳನ್ನು ನೆನಪಿಟ್ಟುಕೊಳ್ಳಲು ಪ್ರತಿಯೊಬ್ಬರೂ ತಮ್ಮ ಮನೆಗಳಲ್ಲಿ ಹೊಸ ಕ್ಯಾಲೆಂಡರ್‌ಗಳನ್ನು ಅಳವಡಿಸಿಕೊಂಡಿದ್ದಾರೆ. ಆದರೆ ಬಹುತೇಕ ಜನರು ಮಾಡುವ ಸಾಮಾನ್ಯ ತಪ್ಪೆಂದರೆ, ಕ್ಯಾಲೆಂಡರ್ ಅನ್ನು ಸರಿಯಾದ ಸ್ಥಳ ಅಥವಾ ದಿಕ್ಕನ್ನು ಪರಿಗಣಿಸದೆ ಗೋಡೆಯ ಮೇಲೆ ನೇತುಹಾಕುವುದು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿರುವ ಪ್ರತಿಯೊಂದು ವಸ್ತುವಿನ ಸ್ಥಾನಕ್ಕೂ ತನ್ನದೇ ಆದ ಮಹತ್ವವಿದೆ. ಕ್ಯಾಲೆಂಡರ್ ಕೂಡ ಇದಕ್ಕೆ ಹೊರತಲ್ಲ. ನೀವು ಹೊಸ ವರ್ಷದ ಕ್ಯಾಲೆಂಡರ್ ಖರೀದಿಸಿದ್ದರೆ, ಅದನ್ನು ಕೇವಲ ಕಾಣುವಂತೆ ಇಡುವುದಕ್ಕಿಂತ ಸರಿಯಾದ ದಿಕ್ಕಿನಲ್ಲಿ ನೇತುಹಾಕಿರುವುದನ್ನು ಖಚಿತಪಡಿಸಿಕೊಳ್ಳುವುದು ಉತ್ತಮವೆಂದು ವಾಸ್ತು ತಜ್ಞರು ಹೇಳುತ್ತಾರೆ.

ವಾಸ್ತು ಶಾಸ್ತ್ರದ ಪ್ರಕಾರ ಗೋಡೆಯ ಮೇಲೆ ಕ್ಯಾಲೆಂಡರ್ ನೇತುಹಾಕುವ ದಿಕ್ಕು ಜೀವನದ ಮೇಲೆ ನೇರ ಪರಿಣಾಮ ಬೀರುತ್ತದೆ. ತಪ್ಪಾದ ದಿಕ್ಕಿನಲ್ಲಿ ಇಡಲಾದ ಕ್ಯಾಲೆಂಡರ್ ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸಬಹುದು ಎಂದು ನಂಬಲಾಗುತ್ತದೆ. ಆದರೆ ಸರಿಯಾದ ದಿಕ್ಕಿನಲ್ಲಿ ನೇತುಹಾಕಿದ ಕ್ಯಾಲೆಂಡರ್ ಮನೆಗೆ ಶುಭಶಕ್ತಿ, ಅದೃಷ್ಟ ಮತ್ತು ಯಶಸ್ಸನ್ನು ತರಲು ಸಹಕಾರಿಯಾಗುತ್ತದೆ ಎಂಬುದು ವಾಸ್ತು ಶಾಸ್ತ್ರದ ಅಭಿಪ್ರಾಯ.

ಹೊಸ ವರ್ಷದ ಆರಂಭದೊಂದಿಗೆ ಹೊಸ ಗುರಿಗಳು ಮತ್ತು ಹೊಸ ಆಶಯಗಳನ್ನು ಹೊಂದಿರುವವರು ತಮ್ಮ ಕ್ಯಾಲೆಂಡರ್ ಅನ್ನು ಪೂರ್ವಕ್ಕೆ ಎದುರಾಗಿರುವ ಗೋಡೆಯ ಮೇಲೆ ಇಡುವುದು ಉತ್ತಮವೆಂದು ಹೇಳಲಾಗುತ್ತದೆ. ಪೂರ್ವ ದಿಕ್ಕನ್ನು ಸೂರ್ಯೋದಯದ ದಿಕ್ಕು ಎಂದು ಪರಿಗಣಿಸಲಾಗುತ್ತದೆ. ಇದು ಹೊಸ ಆರಂಭ, ಬೆಳವಣಿಗೆ ಮತ್ತು ಪ್ರಗತಿಯ ಸಂಕೇತವಾಗಿದೆ. ನಿಮ್ಮ ಕನಸುಗಳು ಮತ್ತು ಗುರಿಗಳನ್ನು ನೆನಪಿಸುವ ಉಲ್ಲೇಖಗಳು ಅಥವಾ ಚಿತ್ರಗಳಿರುವ ಕ್ಯಾಲೆಂಡರ್‌ಗಳು ಈ ದಿಕ್ಕಿನಲ್ಲಿ ವಿಶೇಷ ಶಕ್ತಿ ನೀಡುತ್ತವೆ.

ನೀವು ವ್ಯಾಪಾರದಲ್ಲಿ ಉತ್ತಮ ಅವಕಾಶಗಳನ್ನು ಪಡೆಯಲು ಮತ್ತು ನಿಮ್ಮ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಬಯಸಿದರೆ, ಕ್ಯಾಲೆಂಡರ್ ಅನ್ನು ಉತ್ತರ ದಿಕ್ಕಿನಲ್ಲಿ ಇಡುವುದು ಶುಭಕರ. ಉತ್ತರ ದಿಕ್ಕು ಕಾಂತೀಯ ಶಕ್ತಿಯೊಂದಿಗೆ ಸಂಬಂಧ ಹೊಂದಿದ್ದು ಸ್ಥಿರತೆ ಮತ್ತು ಸಮೃದ್ಧಿಯನ್ನು ಸೂಚಿಸುತ್ತದೆ. ಸರಳ ಮತ್ತು ವೃತ್ತಿಪರ ವಿನ್ಯಾಸದ ಕ್ಯಾಲೆಂಡರ್‌ಗಳು ಈ ದಿಕ್ಕಿನಲ್ಲಿ ಇರಿಸಿದರೆ ವ್ಯವಹಾರ ಮತ್ತು ಉದ್ಯೋಗದಲ್ಲಿ ಉತ್ತಮ ಫಲ ನೀಡುತ್ತವೆ ಎಂಬ ನಂಬಿಕೆಯಿದೆ.

ಆಧ್ಯಾತ್ಮಿಕ ಬೆಳವಣಿಗೆ ಮತ್ತು ಮನಸ್ಸಿನ ಶಾಂತಿಯನ್ನು ಬಯಸುವವರು ತಮ್ಮ ಕ್ಯಾಲೆಂಡರ್ ಅನ್ನು ಈಶಾನ್ಯ ದಿಕ್ಕಿನಲ್ಲಿ ನೇತುಹಾಕಬಹುದು. ಈ ದಿಕ್ಕು ಆಧ್ಯಾತ್ಮಿಕ ಶಕ್ತಿಗೆ ಅತ್ಯಂತ ಪ್ರಮುಖವೆಂದು ವಾಸ್ತು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಧ್ಯಾನ, ಶಾಂತಿ ಮತ್ತು ಆತ್ಮವಿಕಾಸವನ್ನು ಪ್ರತಿಬಿಂಬಿಸುವ ಚಿತ್ರಗಳು ಅಥವಾ ಉಲ್ಲೇಖಗಳಿರುವ ಕ್ಯಾಲೆಂಡರ್‌ಗಳು ಈ ದಿಕ್ಕಿನಲ್ಲಿ ಉತ್ತಮ ಪರಿಣಾಮ ನೀಡುತ್ತವೆ.

ಇದನ್ನೂ ಓದಿ: ಮನೆಯಲ್ಲಿ ತಪ್ಪಿಯೂ ಈ ಜಾಗದಲ್ಲಿ ಹಣ ಇಡಬೇಡಿ, ಸಾಲ ಹೆಚ್ಚಾಗಬಹುದು

ಮನೆಯಲ್ಲಿನ ಸಂಬಂಧಗಳು ಮತ್ತು ಪ್ರೀತಿಯನ್ನು ಬಲಪಡಿಸಲು ನೈಋತ್ಯ ದಿಕ್ಕಿನಲ್ಲಿ ಕ್ಯಾಲೆಂಡರ್ ಇಡುವುದು ಸಹಾಯಕವಾಗುತ್ತದೆ ಎಂದು ನಂಬಲಾಗಿದೆ. ಈ ದಿಕ್ಕನ್ನು ಬಾಂಧವ್ಯ, ವಾತ್ಸಲ್ಯ ಮತ್ತು ಕುಟುಂಬದ ಸ್ಥಿರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ. ಹೃದಯ ಸ್ಪರ್ಶಿಸುವ ಚಿತ್ರಗಳು ಅಥವಾ ಕುಟುಂಬ ಭಾವನೆಗಳನ್ನು ಪ್ರತಿಬಿಂಬಿಸುವ ವಿನ್ಯಾಸಗಳು ಈ ದಿಕ್ಕಿನಲ್ಲಿ ಸೂಕ್ತವಾಗಿರುತ್ತವೆ.

ಒಟ್ಟಾರೆ, ಕ್ಯಾಲೆಂಡರ್ ಅನ್ನು ನೇತುಹಾಕಲು ಸರಿಯಾದ ದಿಕ್ಕನ್ನು ಆರಿಸುವುದು ಬಹಳ ಮುಖ್ಯ. ವಾಸ್ತು ಶಾಸ್ತ್ರದ ಪ್ರಕಾರ, ದಕ್ಷಿಣಕ್ಕೆ ಎದುರಾಗಿ ಗೋಡೆಯ ಮೇಲೆ ಕ್ಯಾಲೆಂಡರ್ ಅನ್ನು ನೇತುಹಾಕುವುದನ್ನು ತಪ್ಪಿಸಬೇಕು. ಅದೇ ರೀತಿ ಬಾಗಿಲು ಅಥವಾ ಕಿಟಕಿಗಳ ಮೇಲೆ ಕ್ಯಾಲೆಂಡರ್ ಇಡುವುದು ಕೂಡ ಸೂಕ್ತವಲ್ಲ, ಏಕೆಂದರೆ ಅದು ಸಕಾರಾತ್ಮಕ ಶಕ್ತಿಯ ಹರಿವಿಗೆ ಅಡ್ಡಿಯಾಗುತ್ತದೆ. ಸರಿಯಾದ ಸ್ಥಳ ಮತ್ತು ದಿಕ್ಕಿನಲ್ಲಿ ಇಡಲಾದ ಕ್ಯಾಲೆಂಡರ್ ಹೊಸ ವರ್ಷದಲ್ಲಿ ನಿಮ್ಮ ಜೀವನಕ್ಕೆ ಶುಭಶಕ್ತಿ ಮತ್ತು ಸಮೃದ್ಧಿಯನ್ನು ತರಲಿದೆ ಎಂಬ ನಂಬಿಕೆ ಇದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪಿಎಫ್ ಹಣಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತಾ? ವಿತ್​ಡ್ರಾ ಮಾಡಿದಾಗ ಟ್ಯಾಕ್ಸ್ ಎಷ್ಟು? ನೀವು ತಿಳಿದಿರಬೇಕಾದ ಸಂಗತಿಗಳಿವು… – Kannada News | Different tax rules on EPF contributions and withdrawals

ಇಪಿಎಫ್ (EPF) ಎಂಬುದು ಕಾರ್ಮಿಕರು ಅಥವಾ ಉದ್ಯೋಗಿಗಳ ನಿವೃತ್ತಿ ಭವಿಷ್ಯಕ್ಕೆಂದು ರೂಪಿಸಲಾಗಿರುವ ರಿಟೈರ್ಮೆಂಟ್ ಸ್ಕೀಮ್. ಇದರಲ್ಲಿ ಉದ್ಯೋಗಿಯ ಮೂಲವೇತನದ ಶೇ. 12ರಷ್ಟನ್ನು ಮುರಿದುಕೊಂಡು ಇಪಿಎಫ್ ಅಕೌಂಟ್​ಗೆ ವರ್ಗಾಯಿಸಲಾಗುತ್ತದೆ. ಉದ್ಯೋಗದಾತರು ಅಥವಾ ಕಂಪನಿಯು ಕೂಡ ಶೇ. 12ರಷ್ಟನ್ನು ತಮ್ಮ ಪಾಲಿನ ಕೊಡುಗೆಯಾಗಿ ಇಪಿಎಫ್ ಫಂಡ್​ಗೆ ಸೇರಿಸುತ್ತದೆ. ವಾಲಂಟರಿ ಪಿಎಫ್ ಸ್ಕೀಮ್ ಅಡಿಯಲ್ಲಿ ಉದ್ಯೋಗಿಗಳು ಬಯಸಿದರೆ ಶೇ. 12ಕ್ಕಿಂತ ಹೆಚ್ಚಿನ ಮೊತ್ತವನ್ನು ಇಪಿಎಫ್ ಅಕೌಂಟ್​ಗೆ ಹಾಕುತ್ತಾ ಹೋಗಬಹುದು ಪ್ರತೀ ತಿಂಗಳು. ಈ ರೀತಿ ಇಪಿಎಫ್ ಅಕೌಂಟ್​ನಲ್ಲಿ ಜಮೆಯಾದ ಹಣಕ್ಕೆ ಸರ್ಕಾರ ಪ್ರತೀ ವರ್ಷ ಬಡ್ಡಿ ತುಂಬುತ್ತಾ ಹೋಗುತ್ತದೆ. ಉದ್ಯೋಗಿ, ಕೊಡುಗೆ ಮತ್ತು ಸರ್ಕಾರದಿಂದ ಬರುವ ಕೊಡುಗೆಗಳಿಂದ ಇಪಿಎಫ್ ಅಕೌಂಟ್ ಸಮೃದ್ಧಗೊಂಡು ಬೆಳೆಯುತ್ತಾ ಹೋಗುತ್ತದೆ. ಹಾಗಾದರೆ, ಇಷ್ಟೂ ಆದಾಯಕ್ಕೆ ತೆರಿಗೆ ಇರುವುದಿಲ್ಲವಾ? ಇಪಿಎಫ್​ಗೆ ಯಾವಾಗ ಟ್ಯಾಕ್ಸ್ ಅನ್ವಯ ಆಗುತ್ತೆ, ಹೇಗೆ ಆಗುತ್ತೆ ಎನ್ನುವ ವಿವರ ಇಲ್ಲಿದೆ.

ಇಪಿಎಫ್​ನ ನಿಮ್ಮ ಅಕೌಂಟ್​ನಲ್ಲಿ ಮೂರು ರೀತಿಯ ಕೊಡುಗೆಗಳಿರುತ್ತವೆ. ಉದ್ಯೋಗಿ, ಉದ್ಯೋಗದಾತರು ಮತ್ತು ಬಡ್ಡಿ ಹಣ, ಈ ಮೂರು ಕೊಡುಗೆಗಳಿರುತ್ತವೆ. ಈ ಮೂರಕ್ಕೂ ಕೂಡ ಟ್ಯಾಕ್ಸ್ ಬೇರೆ ಬೇರೆ ರೀತಿಯಲ್ಲಿ ಕೆಲಸ ಮಾಡುತ್ತದೆ.

ಉದ್ಯೋಗಿಯ ಪಿಎಫ್ ಕೊಡುಗೆಗೆ ಟ್ಯಾಕ್ಸ್ ಡಿಡಕ್ಷನ್

ಉದ್ಯೋಗಿಯ ಪಿಎಫ್ ಕೊಡುಗೆಯ ಹಣಕ್ಕೆ ಸೆಕ್ಷನ್ 80ಸಿ ಅಡಿಯಲ್ಲಿ ಡಿಡಕ್ಷನ್ ಅವಕಾಶ ಇರುತ್ತದೆ. ಉದ್ಯೋಗಿಯ ಪಿಎಫ್ ಕೊಡುಗೆ ವರ್ಷದಲ್ಲಿ 1.5 ಲಕ್ಷ ರೂವರೆಗೂ ಇದ್ದರೆ ಅದಕ್ಕೆ ಡಿಡಕ್ಷನ್ ಕ್ಲೇಮ್ ಮಾಡಬಹುದು.

ಇದನ್ನೂ ಓದಿ: ಲಕ್ಷ ರೂ ಸಂಬಳ ಪಡೆಯುತ್ತಿರುವ ಪಾಕಿಸ್ತಾನೀಯರ ಸಂಖ್ಯೆ ಎಷ್ಟು ಗೊತ್ತಾ?

ಉದ್ಯೋಗದಾತರಿಂದ 7.5 ಲಕ್ಷ ರೂವರೆಗಿನ ಕೊಡುಗೆಗೆ ಟ್ಯಾಕ್ಸ್ ಇಲ್ಲ

ಕಂಪನಿಯ ಕೊಡುಗೆಗೆ ವಿಭಿನ್ನವಾಗಿ ಟ್ಯಾಕ್ಸ್ ಅನ್ವಯ ಆಗುತ್ತದೆ. ಅಕೌಂಟ್​ಗೆ ಇವರಿಂದ ಹಣ ಜಮೆಯಾಗುವಾಗ ಟ್ಯಾಕ್ಸ್ ಕಡಿತ ಆಗುವುದಿಲ್ಲ. ಆದರೆ, ಒಂದು ವರ್ಷದಲ್ಲಿ ಇಪಿಎಫ್, ಎನ್​ಪಿಎಸ್ ಇತ್ಯಾದಿ ಸ್ಕೀಮ್​ಗಳಿಗೆ ಕಂಪನಿ 7.5 ಲಕ್ಷ ರೂಗಿಂತ ಹೆಚ್ಚಿನ ಕೊಡುಗೆ ಕೊಟ್ಟಿದ್ದರೆ ಆಗ ಹೆಚ್ಚುವರಿ ಹಣವು ಟ್ಯಾಕ್ಸಬಲ್ ಇನ್ಕಮ್ ಆಗುತ್ತದೆ. ಆ ಹೆಚ್ಚುವರಿ ಹಣಕ್ಕೆ ಸಿಗುವ ಬಡ್ಡಿಯೂ ಕೂಡ ಟ್ಯಾಕ್ಸಬಲ್ ಎನಿಸುತ್ತದೆ. ಭಾರತದಲ್ಲಿರುವ ಹೆಚ್ಚಿನ ಉದ್ಯೋಗಿಗಳ ಸಂಬಳವು ಆ ಮಟ್ಟದಲ್ಲಿರುವುದಿಲ್ಲವಾದ್ದರಿಂದ ಚಿಂತಿಸುವ ಅಗತ್ಯ ಇಲ್ಲ.

ವರ್ಷದಲ್ಲಿ ಬಡ್ಡಿ ಹಣ 2.5 ಲಕ್ಷ ರೂಗಿಂತ ಹೆಚ್ಚಿದ್ದರೆ ಟ್ಯಾಕ್ಸ್

ಇನ್ನು, ಇಪಿಎಫ್ ಅಕೌಂಟ್​ನಲ್ಲಿರುವ ಹಣಕ್ಕೆ ಸರ್ಕಾರದಿಂದ ಸಿಗುವ ಬಡ್ಡಿ ಟ್ಯಾಕ್ಸಬಲ್ ಆಗಿರುತ್ತದೆ. ಉದ್ಯೋಗಿಯ ಇಪಿಎಫ್ ಕೊಡುಗೆ ಒಂದು ಹಣಕಾಸು ವರ್ಷದಲ್ಲಿ 2.5 ಲಕ್ಷ ರೂ ಮೀರಿದ್ದರೆ, ಹೆಚ್ಚುವರಿ ಮೊತ್ತಕ್ಕೆ ಸಿಗುವ ಬಡ್ಡಿಯು ಟ್ಯಾಕ್ಸಬಲ್ ಇನ್ಕಮ್ ಎನಿಸುತ್ತದೆ. ಉದಾಹರಣೆಗೆ, ಒಂದು ವರ್ಷದಲ್ಲಿ ನಿಮ್ಮ ಇಪಿಎಫ್ ಕೊಡುಗೆ 3 ಲಕ್ಷ ರೂ ಇದ್ದಲ್ಲಿ 50,000 ರೂಗೆ ಸಿಗುವ ಬಡ್ಡಿಯು ಟ್ಯಾಕ್ಸಬಲ್ ಇನ್ಕಮ್ ಎನಿಸುತ್ತದೆ.

ಇಪಿಎಫ್ ಹಣ ವಿತ್​ಡ್ರಾ ಮಾಡಿದರೆ ಎಷ್ಟು ಟ್ಯಾಕ್ಸ್…

ನೀವು ಇಪಿಎಫ್ ಹಣವನ್ನು ವಿತ್​ಡ್ರಾ ಮಾಡುವುದು ಈಗ ಹೆಚ್ಚು ಸುಲಭ. ಆದರೆ, ಐದು ವರ್ಷದ ಸೇವೆ ಮುಗಿಯುವುದರೊಳಗೆ ಪಿಎಫ್ ಹಣ ವಿತ್​ಡ್ರಾ ಮಾಡಿದರೆ ಅದಕ್ಕೆ ಟ್ಯಾಕ್ಸ್ ಅನ್ವಯ ಆಗುತ್ತದೆ. 5 ವರ್ಷ ಸೇವೆ ಪೂರ್ಣಗೊಂಡ ನಂತರ ವಿತ್​ಡ್ರಾ ಮಾಡುವ ಪಿಎಫ್ ಹಣಕ್ಕೆ ಯಾವುದೇ ಟ್ಯಾಕ್ಸ್ ಇರುವುದಿಲ್ಲ.

ಇದನ್ನೂ ಓದಿ: ಈ ಬಾರಿ ಬಹಳ ಜನರಿಗೆ ಸಿಕ್ಕಿಲ್ಲ ಇನ್ಕಮ್ ಟ್ಯಾಕ್ಸ್ ರೀಫಂಡ್; ಏನು ಕಾರಣ?

ಇಲ್ಲಿ ಐದು ವರ್ಷದ ಸೇವಾವಧಿ ಎಂದರೆ ಒಂದೇ ಕಂಪನಿಯಲ್ಲೇ ಐದು ವರ್ಷ ನಿರಂತರ ಇರಬೇಕೆಂದಿಲ್ಲ. ಬೇರೆ ಬೇರೆ ಕಂಪನಿಗಳಲ್ಲಿ ಕೆಲಸ ಮಾಡಿ ಅಲ್ಲೆಲ್ಲಾ ಇಪಿಎಫ್ ಅಕೌಂಟ್ ಹೊಂದಿದ್ದರೂ ಸಾಕು, ಅಷ್ಟೂ ಅವಧಿಯನ್ನು ಕ್ರೋಢೀಕರಿಸಬಹುದು.

ಪಿಎಫ್ ವಿತ್​ಡ್ರಾಯಲ್​ಗೆ ಟಿಡಿಎಸ್

ಒಂದು ವೇಳೆ ಐದು ವರ್ಷ ಸೇವಾವಧಿ ಪೂರ್ಣಗೊಳ್ಳುವ ಮುನ್ನ ಪಿಎಫ್ ವಿತ್​ಡ್ರಾ ಮಾಡಿದರೆ ಟಿಡಿಎಸ್ ಅನ್ವಯ ಆಗುತ್ತದೆ. 50,000 ರೂ ಒಳಗಿನ ಹಣವಾದರೆ ಟ್ಯಾಕ್ಸ್ ಇರುವುದಿಲ್ಲ. ಹೆಚ್ಚಿನ ಮೊತ್ತಕ್ಕೆ ಟಿಡಿಎಸ್ ಕಡಿತ ಆಗುತ್ತದೆ.

ಪ್ಯಾನ್ ನಂಬರ್ ಇದ್ದರೆ ಶೇ 10 ಟಿಡಿಎಸ್ ಮಾತ್ರವೇ ಕಡಿತ ಆಗುತ್ತದೆ. ಪ್ಯಾನ್ ಸಲ್ಲಿಸದಿದ್ದರೆ ಶೇ. 30ರವರೆಗೂ ಟಿಡಿಎಸ್ ಕಡಿತ ಆಗುತ್ತದೆ. ಅಕಸ್ಮಾತ್ ನಿಮ್ಮ ಹಣಕ್ಕೆ ಟಿಡಿಎಸ್ ಮುರಿದುಕೊಂಡಿದ್ದರೆ ನೀವು ಐಟಿ ರಿಟರ್ನ್ ಸಲ್ಲಿಸುವಾಗ ರೀಫಂಡ್ ಕ್ಲೇಮ್ ಮಾಡಬಹುದು. ಹೀಗೆ ಮಾಡಬೇಕೆಂದರೆ ನಿಮ್ಮ ಆ ವರ್ಷದ ಒಟ್ಟೂ ಟ್ಯಾಕ್ಸಬಲ್ ಇನ್ಕಮ್ ಟ್ಯಾಕ್ಸ್ ಎಕ್ಸೆಂಪ್ಷನ್ ಲಿಮಿಟ್​ನಲ್ಲಿ ಇರಬೇಕಾಗುತ್ತದೆ.

ಪಿಎಫ್ ವಿತ್​ಡ್ರಾ ಮಾಡುವಾಗ ಟಿಡಿಎಸ್ ಕಡಿತ ಆಗಬಾರದು ಎಂದಿದ್ದಲ್ಲಿ ಫಾರ್ಮ್ 15ಜಿ ಅಥವಾ 15ಎಚ್ ಅನ್ನು ಸಲ್ಲಿಸಬಹುದು.

ಇನ್ನಷ್ಟು ಪರ್ಸನಲ್ ಫೈನಾನ್ಸ್ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

Bengaluru: ಕ್ಷುಲ್ಲಕ ಕಾರಣಕ್ಕೆ ನಡು ರಸ್ತೆಯಲ್ಲೇ ಮಾರಾಮಾರಿ; ಬೈಕ್​​ ಸವಾರಿಗೆ ಬಿತ್ತು ಗೂಸಾ – Kannada News | Bike riders attack a delivery boy in Bengaluru; video goes viral

ಬೆಂಗಳೂರು, ಜನವರಿ 09: ಕ್ಷುಲ್ಲಕ ಡೆಲಿವರಿ ಬಾಯ್​​ಗೆ ಬೈಕ್​​ ಸವಾರರು ಥಳಿಸಿರುವ ಘಟನೆ ಬೆಂಗಳೂರಿನ ಮಹದೇವಪುರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಡೆಲಿವರಿ ಬಾಯ್​​ ಅಡ್ಡಬಂದ ಕಾರಣ ನಿಯಂತ್ರಣತಪ್ಪಿ ಬೈಕ್​​ ಸವಾರರು ಕೆಳಗೆ ಬಿದ್ದಿದ್ದಾರೆ. ಇದೇ ಕಾರಣಕ್ಕೆ ಕೋಪಗೊಂಡು ಮನಸೋ ಇಚ್ಛೆ ಹಲ್ಲೆ ನಡೆಸಿದ್ದಾರೆ. ಈ ವೇಳೆ ಡೆಲಿವರಿ ಬಾಯ್ ಸಹಾಯಕ್ಕೆ ಸ್ಥಳೀಯರು ಬಂದಿದ್ದು, ಸಮಾಧಾನಪಡಿಸಿದ್ರೂ ಸುಮ್ಮನಾಗದ ಹಿನ್ನೆಲೆ ಬೈಕ್ ಸವಾರರಿಗೆ ಧರ್ಮದೇಟು ನೀಡಿದ್ದಾರೆ. ಸ್ಥಳೀಯರ ಗೂಸಾ ಕೊಡ್ತಿದ್ದಂತೆ ಸವಾರರು ಎಸ್ಕೇಪ್​ ಆಗಿದ್ದು, ಜ.4ರ ರಾತ್ರಿ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಒಂದಲ್ಲ, ಎರಡಲ್ಲ 200 ಮಿಲಿಯನ್’; ‘ಟಾಕ್ಸಿಕ್’ ಟೀಸರ್ ಅಬ್ಬರಕ್ಕೆ ‘ಕೆಜಿಎಫ್ 2’ ದಾಖಲೆ ಉಡೀಸ್ – Kannada News | Toxic Teaser Shatters Records: Yash’s Film Hits 200M Views, Beats KGF 2!

ಯಶ್ ನಟನೆಯ ‘ಟಾಕ್ಸಿಕ್’ ಟೀಸರ್ (Toxic Teaser) ಅಬ್ಬರಕ್ಕೆ ‘ಕೆಜಿಎಫ್ 2’, ‘ಕಾಂತಾರ: ಚಾಪ್ಟರ್ 1’ ಮೊದಲಾದ ಸಿನಿಮಾಗಳು ಬರೆದಿದ್ದ ದಾಖಲೆಗಳೆಲ್ಲ ಉಡೀಸ್ ಆಗಿವೆ. ಏಕೆಂದರೆ 24 ಗಂಟೆಯಲ್ಲಿ ‘ಟಾಕ್ಸಿಕ್’ ಟೀಸರ್ ಬರೋಬ್ಬರಿ 200 ಮಿಲಿಯನ್ ಅಂದರೆ 20 ಕೋಟಿ ಡಿಜಿಟಿಲ್ ವೀವ್ಸ್ ಪಡೆದುಕೊಂಡಿದೆ. ಈ ಬಗ್ಗೆ ಕೆವಿಎನ್ ಪ್ರೊಡಕ್ಷನ್ಸ್ ಸೋಶಿಯಲ್ ಮೀಡಿಯಾದಲ್ಲಿ ಅಧಿಕೃತ ಮಾಹಿತಿ ನೀಡಿದೆ. ಇದು ತಂಡದ ಖುಷಿಗೆ ಕಾರಣ ಆಗಿದೆ.

‘ಟಾಕ್ಸಿಕ್’ ಸಿನಿಮಾ ಟೀಸರ್ ಯೂಟ್ಯೂಬ್ ಜೊತೆಗೆ ಇನ್​​ಸ್ಟಾಗ್ರಾಮ್, ಫೇಸ್​​ಬುಕ್ ಸೇರಿದಂತೆ ವಿವಿಧ ಡಿಜಿಟಲ್ ಪ್ಲ್ಯಾಟ್​​ಫಾರ್ಮ್​​ಗಳಲ್ಲಿ ಹಂಚಿಕೊಳ್ಳಲಾಗಿತ್ತು. ಈ ಎಲ್ಲಾ ಫ್ಲ್ಯಾಟ್​ಫಾರ್ಮ್​​ಗಳ ವೀಕ್ಷಣೆಗಳನ್ನು ಪರಿಗಣಿಸಿ, ‘ಟಾಕ್ಸಿಕ್’ ಟೀಸರ್ ವೀಕ್ಷಣೆ 200 ಮಿಲಿಯನ್ ಎಂದು ಕೆವಿಎನ್ ಪ್ರೊಡಕ್ಷನ್ಸ್ ಘೋಷಣೆ ಮಾಡಿದೆ. 55 ಲಕ್ಷಕ್ಕೂ ಅಧಿಕ ಲೈಕ್ಸ್​​ಗಳು ಸಿಕ್ಕಿವೆ. ಈ ಮೂಲಕ ಸಿನಿಮಾಗೆ ದೊಡ್ಡ ಬೂಸ್ಟ್ ಸಿಕ್ಕಿದೆ.

ಮಾರ್ಚ್ 19ರಂದು ‘ಟಾಕ್ಸಿಕ್’ ಜೊತೆಗೆ ‘ಧುರಂಧರ್ 2’ ಸಿನಿಮಾ ಕೂಡ ರಿಲೀಸ್ ಆಗುತ್ತಿದೆ. ಈಗಾಗಲೇ ‘ಧುರಂಧರ್’ ಹಿಟ್ ಆಗಿರುವುದರಿಂದ ‘ಧುರಂಧರ್ 2’ ಬಗ್ಗೆ ನಿರೀಕ್ಷೆ ಇದೆ. ಈ ಕಾರಣದಿಂದಲೇ ‘ಟಾಕ್ಸಿಕ್’ ಚಿತ್ರಕ್ಕೆ ಈ ಸಿನಿಮಾ ದೊಡ್ಡ ಸವಾಲಗಾಬಹುದು ಎಂದು ಹೇಳಲಾಗುತ್ತಿದೆ. ಆದರೆ, ‘ಟಾಕ್ಸಿಕ್’ ಚಿತ್ರದ ಅಬ್ಬರ ನೋಡಿ ಬಾಲಿವುಡ್ ಮಂದಿ ದಂಗಾಗಿದ್ದಾರೆ.

ಈ ಮೊದಲು ತೆರೆಗೆ ಬಂದಿದ್ದ ‘ಕೆಜಿಎಫ್ 2’ ಸಿನಿಮಾ 24 ಗಂಟೆಯಲ್ಲಿ 109 ಮಿಲಿಯನ್ ಡಿಜಿಟಿಲ್ ವ್ಯೂವ್ಸ್, ‘ಕಾಂತಾರ: ಚಾಪ್ಟರ್ 1’ 107 ಮಿಲಿಯನ್, ‘ಅನಿಮಲ್’ 71 ಮಿಲಿಯನ್ ಹಾಗೂ ‘ಪುಷ್ಪ 2’ 107 ಮಿಲಿಯನ್ ವೀಕ್ಷಣೆ ಕಂಡಿತ್ತು. ಈ ಎಲ್ಲಾ ದಾಖಲೆಗಳನ್ನು ಯಶ್ ಅವರು ಪೀಸ್ ಪೀಸ್ ಮಾಡಿದ್ದಾರೆ.

ಇದನ್ನೂ ಓದಿ: ದಾಖಲೆಯ ವೀಕ್ಷಣೆ ಕಂಡ ‘ಟಾಕ್ಸಿಕ್’ ಟೀಸರ್; ಇದು ಯಶ್ ಹವಾ

‘ಟಾಕ್ಸಿಕ್’ ಚಿತ್ರಕ್ಕೆ ಗೀತು ಮೋಹನ್​ದಾಸ್ ನಿರ್ದೇಶನ ಇದೆ. ಈ ಚಿತ್ರದಲ್ಲಿ ಯಶ್ ಜೊತೆ ತಾರಾ ಸುತಾರಿಯಾ, ನಯನತಾರಾ, ಕಿಯಾರಾ ಅಡ್ವಾಣಿ ಮೊದಲಾದವರು ನಟಿಸಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಗೆ ಹಿಂದಿ, ತೆಲುಗು, ಇಂಗ್ಲಿಷ್ ಮೊದಲಾದ ಭಾಷೆಗಳಲ್ಲಿ ತೆರೆಗೆ ಬರುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

KSTDCನಿಂದ ವಿಶೇಷ ಪ್ಯಾಕೇಜ್: 20% ರಿಯಾಯಿತಿ, ಎಲ್ಲಿಗೆಲ್ಲ ಟೂರ್ – Kannada News | New Year KSTDC South India Travel: Mysore, Ooty, Kodaikanal and 20% Discount

ದಕ್ಷಿಣ ಭಾರತ ಪ್ರವಾಸಗಳ ತವರು, ( KSTDC South India Tour) ಇಲ್ಲಿರುವಷ್ಟು ಪ್ರಕೃತಿ ಸೌಂದರ್ಯದ ಸೋಬಗು ಎಲ್ಲಿಯೂ ಇರಲು ಸಾಧ್ಯವಿಲ್ಲ. ಅದರಲ್ಲೂ ಕರ್ನಾಟಕ, ಕೇರಳ, ತಮಿಳುನಾಡು ತನ್ನದೇ ಆಗಿರುವ ಅದ್ಭುತ ಪ್ರಕೃತಿ ಸೌಂದರ್ಯ ಹೊಂದಿದೆ. ಆದರೆ ಇಲ್ಲಿ ಹೋಗುವುದಕ್ಕೆ ತುಂಬಾ ಖರ್ಚು ಆಗುತ್ತದೆ ಎಂಬುದು ಅನೇಕರ ಚಿಂತೆ. ಅದಕ್ಕೆ kstdc (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ) ಆಗ್ಗಾಗೆ ವಿಶೇಷ ಪ್ಯಾಕೇಜ್​​ಗಳನ್ನು ನೀಡುತ್ತದೆ. ಇದೀಗ ಹೊಸ ವರ್ಷದ ಎರಡನೇ ವಾರ ವಿಶೇಷ ಪ್ಯಾಕೇಜ್​​​​ ಒಂದನ್ನು ಬಿಡುಗಡೆ ಮಾಡಿದೆ. ದಕ್ಷಿಣ ಭಾರತದ ಅತ್ಯಂತ ಜನಪ್ರಿಯ ಪ್ರವಾಸೋದ್ಯಮ ತಾಣಗಳಾದ ಮೈಸೂರು, ಊಟಿ ಮತ್ತು ಕೊಡೈಕೆನಾಲ್ ಪ್ರವಾಸ ಹೋಗಲು ಬಯಸುವವರಿಗೆ ಇದೊಂದು ಉತ್ತಮ ಅವಕಾಶ. ಈ ಪ್ಯಾಕೇಜ್​​​​​ ಮೂಲಕ ವಿಶೇಷ ಸ್ಥಳಗಳನ್ನು ನೋಡಬಹುದು. ಒಂದು ವೇಳೆ ಈ ಪ್ಯಾಕೇಜ್​​​​ ಆಯ್ಕೆ ಮಾಡಿಕೊಂಡರೆ 20% ರಿಯಾಯಿತಿ ಇರುತ್ತದೆ. ಪ್ರವಾಸದ ಮಾರ್ಗ, ಸ್ಥಳ, ಟಿಕೆಟ್ ದರ, ಸಂಚಾರ ಸಮಯ, ಪ್ಯಾಕೇಜ್ ಬುಕ್ಕಿಂಗ್ ಹೇಗೆ ಎಂಬ ಮಾಹಿತಿ ಇಲ್ಲಿದೆ ನೋಡಿ:

ಭೇಟಿ ನೀಡುವ ಪ್ರಮುಖ ನಗರಗಳು:

ಮೈಸೂರು (ಅರಮನೆ ನಗರಿ): ಪ್ರಪಂಚದಾದ್ಯಂತ ಪ್ರವಾಸಿಗರನ್ನು ಸೆಳೆಯುವ ಮೈಸೂರು, ಭವ್ಯ ಅರಮನೆ, ಮ್ಯೂಸಿಯಂಗಳು, ಚರ್ಚುಗಳು ಮತ್ತು ಪ್ರಾಣಿಸಂಗ್ರಹಾಲಯಕ್ಕೆ ಹೆಸರುವಾಸಿಯಾಗಿರುವ ಕಾರಣ, ಇಲ್ಲಿ ಒಂದು ಅದ್ಭುತ ಕ್ಷಣಗಳನ್ನು ಕಳೆಯಬಹುದು. ವಿಶೇಷ ಪ್ರವಾಸಿ ತಾಣಗಳನ್ನು ನೋಡಬಹುದು.

ಊಟಿ (ಗಿರಿದಾಮಗಳ ರಾಣಿ): ಇಲ್ಲಿನ ಚಹಾ ತೋಟಗಳು ವಿಶ್ವಪ್ರಸಿದ್ಧ. ನೀವು ಮಸಾಲಾ, ಮಲ್ಲಿಗೆ, ಏಲಕ್ಕಿ ಮತ್ತು ಚಾಕೊಲೇಟ್ ಫ್ಲೇವರ್‌ನ ವಿವಿಧ ಚಹಾಗಳನ್ನು ಇಲ್ಲಿ ಸವಿಯಬಹುದು. ಇಲ್ಲಿನ ಬೆಟ್ಟಗಳು ಹಾಗೂ ವಿಶೇಷ ಪ್ರವಾಸಿ ತಾಣಗಳನ್ನು ನೋಡಬಹುದು.

ಕೊಡೈಕೆನಾಲ್ (ಗಿರಿಧಾಮಗಳ ರಾಜಕುಮಾರಿ): ತನ್ನ ಶಾಂತಿಯುತ ವಾತಾವರಣ ಮತ್ತು ಸುಂದರವಾದ ಬೆಟ್ಟಗುಡ್ಡಗಳಿಗೆ ಹೆಸರಾಗಿದೆ. ಈ ಪ್ರದೇಶವನ್ನು ದಂಪತಿಗಳು ಹೆಚ್ಚು ಇಷ್ಟಪಡುತ್ತಾರೆ. ಇಲ್ಲಿ ಹೆಚ್ಚು ಕಪಲ್ಸ್​ ಬರುತ್ತಾರೆ.

ಇದನ್ನೂ ಓದಿ: 2026ರಲ್ಲಿ ಪ್ರವಾಸ ಪ್ರಿಯರಿಗೆ ಸಿಗಲಿವೆ ಸಾಲು ಸಾಲು ರಜೆಗಳು; ಸಂಪೂರ್ಣ ವಿವರ ಇಲ್ಲಿದೆ

ನೋಡಬೇಕಾದ ಸ್ಥಳ:

ಶ್ರೀರಂಗಪಟ್ಟಣ: ಟಿಪ್ಪು ಸುಲ್ತಾನನ ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ.

ಮೈಸೂರು: ಸೇಂಟ್ ಫಿಲೋಮಿನಾ ಚರ್ಚ್, ಮೈಸೂರು ಅರಮನೆ, ಚಾಮುಂಡಿ ಬೆಟ್ಟ, ಮೈಸೂರು ಮೃಗಾಲಯ ಮತ್ತು ಬೃಂದಾವನ ಗಾರ್ಡನ್.

ನಂಜನಗೂಡು: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾದ ನಂಜುಂಡೇಶ್ವರ ದೇವಸ್ಥಾನ.

ಊಟಿ ಮತ್ತು ಕೊಡೈಕೆನಾಲ್: ಪ್ರಸಿದ್ಧ ಗಿರಿಧಾಮಗಳ ವೀಕ್ಷಣೆ.

ಸಾರಿಗೆ ಮತ್ತು ವಾಸ್ತವ್ಯದ ವಿವರ:

ಸಾರಿಗೆ: ಸುಸಜ್ಜಿತ ಡಿಲಕ್ಸ್ ಕೋಚ್ (Deluxe Coach) ಮೂಲಕ ಪ್ರಯಾಣ.

ಹೋಟೆಲ್ ವಾಸ್ತವ್ಯ:

ಮೈಸೂರಿನಲ್ಲಿ: ಹೋಟೆಲ್ ಮಯೂರ ಹೊಯ್ಸಳ (ಕೆಎಸ್‌ಟಿಡಿಸಿ ಹೋಟೆಲ್).

ಊಟಿಯಲ್ಲಿ: ಹೋಟೆಲ್ ಮಯೂರ ಸುದರ್ಶನ್ ಅಥವಾ ಸಮಾನ ದರ್ಜೆಯ ಹೋಟೆಲ್.

ಕೊಡೈಕೆನಾಲ್‌ನಲ್ಲಿ: ಹೋಟೆಲ್ ಎಸ್ ವಿ ಇಂಟರ್ನ್ಯಾಷನಲ್.

ಪ್ರವಾಸದ ಇತರ ಸೌಲಭ್ಯ:

ಮೈಸೂರು-ಊಟಿ-ಕೊಡೈಕೆನಾಲ್ ಪ್ರವಾಸ ಪ್ಯಾಕೇಜ್ ಗೆ ಒಬ್ಬರಿಗೆ ತಲಾ ₹9,310 ರೂಪಾಯಿ ಇದೆ. ಹಿರಿಯ ನಾಗರಿಕಿಗೆ ದರದಲ್ಲಿ ಶೇಕಡಾ 20ರಷ್ಟು ರಿಯಾಯಿತಿ ಇದೆ.

ಪ್ರತಿಯೊಂದು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಸಾಕಷ್ಟು ಸಮಯವನ್ನು ನಿಗದಿಪಡಿಸಲಾಗಿದೆ.

ಪ್ರತಿಯೊಂದು ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಸಾಕಷ್ಟು ಸಮಯವನ್ನು ನಿಗದಿಪಡಿಸಲಾಗಿದೆ.

ಪ್ರವಾಸಿ ತಾಣಗಳ ಇತಿಹಾಸ ಮತ್ತು ಮಹತ್ವವನ್ನು ವಿವರಿಸಲು ಪರಿಣಿತ ಗೈಡ್ ಸೌಲಭ್ಯ.

ರಾಜ್ಯ, ಕೇಂದ್ರ ಮತ್ತು ಸಾರ್ವಜನಿಕ ವಲಯದ (PSU) ನೌಕರರಿಗೆ LTC (Leave Travel Concession) ಸೌಲಭ್ಯ ಲಭ್ಯವಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 12:17 pm, Fri, 9 January 26

Source link

ಮೊದಲು ಗುಂಡು ಹಾರಿಸ್ತೀವಿ, ಆಮೇಲೆ ಪ್ರಶ್ನೆ ಕೇಳ್ತೀವಿ, ಡೆನ್ಮಾರ್ಕ್​ ಆದೇಶಕ್ಕೆ ಅಮೆರಿಕ ಗಢ ಗಢ – Kannada News | Denmark’s Greenland Sends Strong Warning Over Territorial Security

ಟ್ರಂಪ್-ಫ್ರೆಡೆರಿಕ್ಸೆನ್Image Credit source: India Today

ವಾಷಿಂಗ್ಟನ್, ಜನವರಿ 09: ಗ್ರೀನ್‌ಲ್ಯಾಂಡ್‌ಗೆ ಸಂಬಂಧಿಸಿದಂತೆ ಡೆನ್ಮಾರ್ಕ್ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌(Donald Trump)ಗೆ ಕಠಿಣ ಎಚ್ಚರಿಕೆ ನೀಡಿದೆ. ಅಮೆರಿಕ ಗ್ರೀನ್‌ಲ್ಯಾಂಡ್ ಮೇಲೆ ಆಕ್ರಮಣ ಮಾಡಿದರೆ, ಅದರ ಪಡೆಗಳು ಮೊದಲು ಗುಂಡು ಹಾರಿಸಿ ನಂತರ ಪ್ರಶ್ನೆಗಳನ್ನು ಕೇಳಬೇಕಾಗುತ್ತದೆ ಎಂದು ಡ್ಯಾನಿಶ್ ರಕ್ಷಣಾ ಸಚಿವಾಲಯ ಎಚ್ಚರಿಕೆ ನೀಡಿದೆ.

ಅಂದರೆ ಅವರು ಅನುಮತಿ ಅಥವಾ ಆದೇಶಗಳಿಗಾಗಿ ಕಾಯದೆ ತಕ್ಷಣವೇ ಪ್ರತೀಕಾರ ತೀರಿಸಿಕೊಳ್ಳುತ್ತಾರೆ ಎಂದು ಡೆನ್ಮಾರ್ಕ್ ರಕ್ಷಣಾ ಸಚಿವಾಲಯ ಹೇಳಿದೆ. 1952 ರ ಈ ಆದೇಶ ಇನ್ನೂ ಜಾರಿಯಲ್ಲಿದೆ ಮತ್ತು ಯಾವುದೇ ಸಂಭಾವ್ಯ ದಾಳಿಗೆ ತಕ್ಷಣದ ಪ್ರತಿಕ್ರಿಯೆಯನ್ನು ನೀಡುವ ಉದ್ದೇಶವನ್ನು ಇದು ಹೊಂದಿದೆ ಎಂದು ಡ್ಯಾನಿಶ್ ರಕ್ಷಣಾ ಸಚಿವಾಲಯ ಸ್ಪಷ್ಟಪಡಿಸಿದೆ.

ನಿಯಮದ ಅಡಿಯಲ್ಲಿ, ಪಡೆಗಳು ಮೇಲಿನಿಂದ ಆದೇಶಗಳಿಗಾಗಿ ಕಾಯಬಾರದು, ಆದರೆ ದಾಳಿಯ ಸಂದರ್ಭದಲ್ಲಿ ತಕ್ಷಣವೇ ಯುದ್ಧದಲ್ಲಿ ತೊಡಗಬೇಕು ಎಂದು ಸಚಿವಾಲಯ ಹೇಳಿದೆ. ಈ ಎಚ್ಚರಿಕೆ ಯುರೋಪಿಯನ್ ರಾಷ್ಟ್ರಗಳಲ್ಲಿ ಕಳವಳವನ್ನು ಹುಟ್ಟುಹಾಕಿದೆ.

ಫ್ರಾನ್ಸ್, ಜರ್ಮನಿ ಮತ್ತು ಇತರ NATO ಸದಸ್ಯರು ಗ್ರೀನ್‌ಲ್ಯಾಂಡ್‌ನ ಸಾರ್ವಭೌಮತ್ವವನ್ನು ಬೆಂಬಲಿಸುತ್ತಿದ್ದಾರೆ ಮತ್ತು ಪರಿಸ್ಥಿತಿಯನ್ನು ತಗ್ಗಿಸಲು ಅಮೆರಿಕವನ್ನು ಒತ್ತಾಯಿಸುತ್ತಿದ್ದಾರೆ.
ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ಸಾಮ್ರಾಜ್ಯ ನ್ಯಾಟೊ ಭಾಗವಾಗಿದೆ. ಪರಿಣಾಮವಾಗಿ, ಅವು ಮೈತ್ರಿಕೂಟದ ಭದ್ರತಾ ಖಾತರಿಗಳ ಅಡಿಯಲ್ಲಿ ಬರುತ್ತವೆ.

ಮತ್ತಷ್ಟು ಓದಿ: US threat: ರಷ್ಯನ್ ತೈಲ ಖರೀದಿ- ಭಾರತದ ಮೇಲೆ ಮತ್ತೆ ಟ್ಯಾರಿಫ್ ಬೆದರಿಕೆ ಹಾಕಿದ ಟ್ರಂಪ್

ಮುಂದಿನ ವಾರ ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್‌ನ ಅಧಿಕಾರಿಗಳನ್ನು ಭೇಟಿ ಮಾಡಲು ಯೋಜಿಸುತ್ತಿರುವುದಾಗಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರೂಬಿಯೊ ಹೇಳಿದ್ದಾರೆ. ವಾಲ್ ಸ್ಟ್ರೀಟ್ ಜರ್ನಲ್‌ನ ವರದಿಯ ಪ್ರಕಾರ, ಟ್ರಂಪ್ ಮಿಲಿಟರಿ ಬಲವನ್ನು ಬಳಸುವುದಲ್ಲ, ದ್ವೀಪವನ್ನು ಖರೀದಿಸಲು ಬಯಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಏತನ್ಮಧ್ಯೆ, ಡೆನ್ಮಾರ್ಕ್ ಅಮೆರಿಕದ ಅಧಿಕಾರಿಗಳೊಂದಿಗಿನ ಸಭೆಯನ್ನು ಸ್ವಾಗತಿಸಿದೆ ಮತ್ತು ಇದನ್ನು ಪ್ರಮುಖ ಚರ್ಚೆ ಎಂದು ಕರೆದಿದೆ.

ಗ್ರೀನ್‌ಲ್ಯಾಂಡ್ ಅನ್ನು ಹಿಡಿದಿಟ್ಟುಕೊಳ್ಳುವುದು ಅಮೆರಿಕದ ರಾಷ್ಟ್ರೀಯ ಭದ್ರತಾ ಆದ್ಯತೆಯಾಗಿದೆ ಮತ್ತು ಆರ್ಕ್ಟಿಕ್ ಪ್ರದೇಶದಲ್ಲಿ ನಮ್ಮ ವಿರೋಧಿಗಳನ್ನು ತಡೆಯುವುದು ಅತ್ಯಂತ ಮಹತ್ವದ್ದಾಗಿದೆ ಎಂದು ಅಧ್ಯಕ್ಷ ಟ್ರಂಪ್ ಸ್ಪಷ್ಟಪಡಿಸಿದ್ದಾರೆ.

ಈ ಪ್ರಮುಖ ವಿದೇಶಾಂಗ ನೀತಿ ಗುರಿಯನ್ನು ಸಾಧಿಸಲು ಅಧ್ಯಕ್ಷರು ಮತ್ತು ಅವರ ತಂಡವು ಹಲವಾರು ಆಯ್ಕೆಗಳ ಬಗ್ಗೆ ಚರ್ಚಿಸುತ್ತಿದ್ದಾರೆ ಮತ್ತು ಸಹಜವಾಗಿ, ಯುಎಸ್ ಮಿಲಿಟರಿಯನ್ನು ಬಳಸುವುದು ಯಾವಾಗಲೂ ಕಮಾಂಡರ್ ಇನ್ ಚೀಫ್‌ಗೆ ಲಭ್ಯವಿರುವ ಆಯ್ಕೆಯಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಹೇಳಿದರು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version