ಹಾರ್ಮುಜ್ ನಂತರ ಮಲಕ್ಕಾ ಜಲಸಂಧಿ ಮೇಲೆ ಅಮೆರಿಕ ಕಣ್ಣು; ಭಾರತದ ಬಗಲಿನಲ್ಲೇ ದೊಡ್ಡ ಅಪಾಯದ ಬೀಸುಗತ್ತಿ – Kannada News | After the hormuz usa eyeing the malacca strait that see worlds 40pc trade
ನವದೆಹಲಿ, ಏಪ್ರಿಲ್ 15: ವಿಶ್ವದ ಶೇ. 20 ತೈಲ ಸಾಗಣೆಯಾಗುವ ಹಾರ್ಮುಜ್ ಜಲಸಂಧಿ ಬಂದ್ ಆಗಿದ್ದಕ್ಕೆ ಇಡೀ ಜಗತ್ತು ಶಾಕ್ ಪಡೆದಿದೆ. ಹಾರ್ಮುಜ್ ಜಲಸಂಧಿಯನ್ನು ಇರಾನ್ ನಿಯಂತ್ರಿಸುತ್ತಿದೆ. ಇದನ್ನು ತಡೆಯಲು ಅಮೆರಿಕ ಕಸರತ್ತು ನಡೆಸಿದೆ. ಇದೇ ವೇಳೆ, ಅಮೆರಿಕವು ಹಾರ್ಮುಜ್ಗಿಂತಲೂ ಮುಖ್ಯವಾಗಿರುವ ಇನ್ನೊಂದು ಜಲಸಂಧಿಗೆ ತಂಟೆಗೆ ತೆರಳುತ್ತಿದೆ ಎನ್ನುವಂತಹ ಸುದ್ದಿಗಳಿವೆ. ಇದು ಸ್ಟ್ರೇಟ್ ಆಫ್ ಮಲಾಕ್ಕ, ಅಥವಾ ಮಲಾಕ್ಕ ಜಲಸಂಧಿ (Malacca strait). ಜಗತ್ತಿನ ಶೇ. 40ರಷ್ಟು ವ್ಯಾಪಾರ ವಹಿವಾಟುಗಳಾಗುವ ಸರಕುಗಳು ಈ ಜಲಸಂಧಿ ಮೂಲಕ ಸಾಗುತ್ತವೆ….