ಖಾಲಿಯಾದ ಪಾಕ್ ಬೊಕ್ಕಸಕ್ಕೆ ಬೂಸ್ಟರ್ ಡೋಸ್, ಮತ್ತೆ 3 ಬಿಲಿಯನ್ ಡಾಲರ್ ನೆರವು ನೀಡಲು ಮುಂದಾದ ಸೌದಿ ಅರೇಬಿಯಾ – Kannada News | Saudi Arabia Bails Out Pakistan with 3Billion Dollar Aid and Loan Extension, IMF Relief
ಸೌದಿ ಅರೇಬಿಯಾ, ಏಪ್ರಿಲ್ 15: ತೀವ್ರ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿ ಕಂಗಾಲಾಗಿರುವ ಪಾಕಿಸ್ತಾನ(Pakistan)ದ ಕೈಯನ್ನು ಸೌದಿ ಅರೇಬಿಯಾ ಮತ್ತೊಮ್ಮೆ ಹಿಡಿದಿದೆ. ಸೌದಿ ಸರ್ಕಾರವು ಪಾಕಿಸ್ತಾನಕ್ಕೆ 3 ಬಿಲಿಯನ್ ಅಮೆರಿಕನ್ ಡಾಲರ್ ಹೆಚ್ಚುವರಿ ಆರ್ಥಿಕ ಸಹಾಯವನ್ನು ಘೋಷಿಸಿದೆ. ಅಷ್ಟೇ ಅಲ್ಲದೆ, ಈಗಾಗಲೇ ನೀಡಿರುವ 5 ಬಿಲಿಯನ್ ಡಾಲರ್ ನೆರವಿನ ಅವಧಿಯನ್ನು ಮುಂದಿನ ಮೂರು ವರ್ಷಗಳವರೆಗೆ ವಿಸ್ತರಿಸುವ ಮೂಲಕ ದೊಡ್ಡ ಸಮಾಧಾನ ನೀಡಿದೆ. ಪಾಕಿಸ್ತಾನದ ಪಾಲಿಗೆ ಈ ನೆರವು ಅತ್ಯಂತ ನಿರ್ಣಾಯಕವಾಗಿದೆ. ಈ ತಿಂಗಳ ಅಂತ್ಯದ ವೇಳೆಗೆ ಪಾಕಿಸ್ತಾನವು ಯುನೈಟೆಡ್…