ವಿಮಾನ ಪತನದಲ್ಲಿ ಡಿಸಿಎಂ ಅಜಿತ್ ಪವಾರ್​​ ನಿಧನ; ಇದುವರೆಗೂ ಏನೇನಾಯ್ತು? – Kannada News | Ajit Pawar Plane Crash What Happened in 40 Minutes before Aircraft Crash in Baramati

ಪುಣೆ, ಜನವರಿ 28: ಮಹಾರಾಷ್ಟ್ರದ ಪುಣೆ ಬಳಿ ಬಾರಾಮತಿಯಲ್ಲಿ ನಡೆದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ (Ajit Pawar) ಮತ್ತು ಇತರ 5 ಜನರು ಸಾವನ್ನಪ್ಪಿದ್ದಾರೆ. ಅಜಿತ್ ಪವಾರ್ ಅವರ ಪಾರ್ಥೀವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿದೆ. ಜನವರಿ 29ರಂದು ಬೆಳಿಗ್ಗೆ 11 ಗಂಟೆಗೆ ಪೂರ್ಣ ಸರ್ಕಾರಿ ಗೌರವಗಳೊಂದಿಗೆ ಅಂತ್ಯಕ್ರಿಯೆ ಮಾಡಲಾಗುವುದು. ಅಜಿತ್ ಪವಾರ್ ಅವರ ನಿಧನದ ನಂತರ 3 ದಿನಗಳ ರಾಜ್ಯ ಶೋಕಾಚರಣೆಯನ್ನು ಘೋಷಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಸರ್ಕಾರಿ ಮನರಂಜನಾ ಕಾರ್ಯಕ್ರಮವನ್ನು ಆಯೋಜಿಸಲಾಗುವುದಿಲ್ಲ.

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರ ವಿಮಾನ ಬಾರಾಮತಿಯಲ್ಲಿ ಇಳಿಯುವ ಮೊದಲೇ ಅಪಘಾತಕ್ಕೀಡಾಯಿತು. ವಿಮಾನ ಡಿಕ್ಕಿ ಹೊಡೆದ ತಕ್ಷಣ ಬೆಂಕಿ ಹೊತ್ತಿಕೊಂಡಿತು, ವಿಮಾನ ಛಿದ್ರವಾಯಿತು. ಅಜಿತ್ ಪವಾರ್ ಇಂದು ಬಾರಾಮತಿಯಲ್ಲಿ ಮೂರು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಬೇಕಿತ್ತು. ಈ ಹಿನ್ನೆಲೆಯಲ್ಲಿ ಅವರು ತಮ್ಮ ತವರು ಕ್ಷೇತ್ರವಾದ ಬಾರಾಮತಿಗೆ ತೆರಳುತ್ತಿದ್ದರು. ಭದ್ರತಾ ಪಡೆಗಳು, ಪೊಲೀಸ್ ಮತ್ತು ಅಗ್ನಿಶಾಮಕ ದಳದ ತಂಡಗಳು ತಕ್ಷಣ ಸ್ಥಳಕ್ಕೆ ತಲುಪಿ ಬೆಂಕಿಯನ್ನು ನಂದಿಸಿದವು.

ಇಂದು ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನ ಪತನವಾಗುವ ಆ 40 ನಿಮಿಷಗಳ ಕಾಲ ಏನೇನಾಯ್ತು? ಇದುವರೆಗೂ ಏನೆಲ್ಲ ಬೆಳವಣಿಗೆಗಳಾದವು ಎಂಬುದರ ಪೂರ್ತಿ ಮಾಹಿತಿ ಇಲ್ಲಿದೆ.

  1. ದೆಹಲಿ ಮೂಲದ ವಿಎಸ್ಆರ್ ವೆಂಚರ್ಸ್‌ನ ಲಿಯರ್‌ಜೆಟ್ 45 ವಿಮಾನ (ವಿಟಿ-ಎಸ್‌ಎಸ್‌ಕೆ) ಇಂದು ಬೆಳಿಗ್ಗೆ 8.10ಕ್ಕೆ ಮುಂಬೈನಿಂದ ಹೊರಟಿತು. ಬೆಳಿಗ್ಗೆ 8.45ರ ಸುಮಾರಿಗೆ ರಾಡಾರ್ ಸಂಪರ್ಕವನ್ನು ಕಳೆದುಕೊಂಡಿತು.
  2. ಕೆಟ್ಟ ಹವಾಮಾನದಿಂದಾಗಿ ಅಜಿತ್ ಪವಾರ್ ಪ್ರಯಾಣಿಸುತ್ತಿದ್ದ ವಿಮಾನದ ಪೈಲಟ್​ಗೆ ಸರಿಯಾಗಿ ಏನೂ ಕಾಣುತ್ತಿರಲಿಲ್ಲ. ಅತಿಯಾದ ಮಂಜು ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಆ ವಿಮಾನದಿಂದ ಕರೆ ಬಂದ ನಂತರ ಅವರಿಗೆ ಲ್ಯಾಂಡ್ ಮಾಡಲು ಸಲಹೆ ನೀಡಲಾಯಿತು.
  3. ಆಗ ಸಿಬ್ಬಂದಿಯ ಬಳಿ ಆಗಸದಲ್ಲಿ ಗಾಳಿ ಮತ್ತು ಗೋಚರತೆಯ ಬಗ್ಗೆ ವಿಚಾರಿಸಲಾಯಿತು. ಆಗ ಗಾಳಿಯು ಶಾಂತವಾಗಿದೆ ಮತ್ತು ಗೋಚರತೆ ಸುಮಾರು 3000 ಮೀಟರ್‌ಗಳಿವೆ ಎಂದು ಪೈಲಟ್​​ಗೆ ತಿಳಿಸಲಾಯಿತು.
  4. ಮುಂದೆ ವಿಮಾನವು ರನ್‌ವೇ 11ರ ಅಂತಿಮ ಮಾರ್ಗವನ್ನು ವರದಿ ಮಾಡಿದೆ. ಆದರೆ, ರನ್‌ವೇ ಅವರಿಗೆ ಕಾಣುತ್ತಿರಲಿಲ್ಲ. ಅಷ್ಟರಲ್ಲಿ ವಿಮಾನ ಪತನವಾಯಿತು. ಆ ವಿಮಾನದಲ್ಲಿ ಒಟ್ಟು 5 ಜನರಿದ್ದರು. ಪೊಲೀಸ್ ಅಧಿಕಾರಿಗಳ ಪ್ರಕಾರ, ವಿಮಾನ ಬೆಳಿಗ್ಗೆ 8.50ಕ್ಕೆ ಪತನವಾಯಿತು.
  5. ಅಜಿತ್ ಪವಾರ್ ಅವರ ದೇಹವನ್ನು ಅವರ ಕೈಗಡಿಯಾರದಿಂದ ಗುರುತಿಸಲಾಯಿತು. ಈ ವಾಚ್ ಅವರ ಗುರುತಿನ ಮುಖ್ಯ ಸುಳಿವು ಆಯಿತು.
  6. ಪೈಲಟ್ ಕ್ಯಾಪ್ಟನ್ ಸುಮಿತ್ ಕಪೂರ್ ಮತ್ತು ಸಹ ಪೈಲಟ್ ಕ್ಯಾಪ್ಟನ್ ಶಾಂಭವಿ ಕೂಡ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ತನಿಖೆಯ ನಂತರವೇ ಅಪಘಾತಕ್ಕೆ ನಿಖರವಾದ ಕಾರಣ ತಿಳಿದುಬರಲಿದೆ.
  7. ಅಜಿತ್ ಪವಾರ್ ಅವರ ಜೊತೆ ಅವರ ಭದ್ರತಾ ಸಿಬ್ಬಂದಿ ವಿದೀಪ್ ಜಾಧವ್ ಇದ್ದರು. ಈ ಅಪಘಾತದಲ್ಲಿ ವಿದೀಪ್ ಜಾಧವ್ ಕೂಡ ಸಾವನ್ನಪ್ಪಿದರು.
  8. ಅಜಿತ್ ಪವಾರ್ ಅವರ ನಿಧನದ ನಂತರ, ಮಹಾರಾಷ್ಟ್ರ ಸರ್ಕಾರ ಇಂದಿನ ಎಲ್ಲಾ ರಾಜಕೀಯ ಕಾರ್ಯಕ್ರಮಗಳನ್ನು ರದ್ದುಗೊಳಿಸಿದೆ. ಮಹಾರಾಷ್ಟ್ರದಲ್ಲಿ 3 ದಿನಗಳ ರಾಜ್ಯ ಶೋಕಾಚರಣೆ ಘೋಷಿಸಲಾಗಿದೆ.
  9. ಬಾರಾಮತಿ ವಿಮಾನ ಅಪಘಾತದ ತನಿಖೆ ಪೂರ್ಣ ವೇಗದಲ್ಲಿ ಆರಂಭವಾಗಿದೆ. ಎಎಐಬಿ (ವಿಮಾನ ಅಪಘಾತ ತನಿಖಾ ಬ್ಯೂರೋ) ತಂಡವು ದೆಹಲಿಯಿಂದ ಬಾರಾಮತಿಗೆ ತೆರಳಿದ್ದು, ತನಿಖೆ ನಡೆಸಲು ಸ್ಥಳಕ್ಕೆ ತೆರಳಲಿದೆ.
  10. ಈಗಾಗಲೇ ಅಜಿತ್ ಪವಾರ್ ಅವರ ದೇಹವನ್ನು ಅಂತಿಮ ದರ್ಶನಕ್ಕೆ ಇಡಲಾಗಿದ್ದು, ನಾಳೆ ಅಂತ್ಯಕ್ರಿಯೆ ನಡೆಯಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

T20 World Cup 2026: ‘ಭಾರತದ ಬ್ಯಾಟಿಂಗ್‌ ನೋಡಿ ಹೆದರಿದ್ದೀರಿ’; ಪಾಕ್ ತಂಡದ ಮಾನ ಹರಾಜು – Kannada News | 2026 T20 World Cup: Pakistan threatens boycott; Srikkanth slams fear of India’s batting

ಭಾರತ ಮತ್ತು ಶ್ರೀಲಂಕಾದ ಆತಿಥ್ಯದಲ್ಲಿ ನಡೆಯಲಿರುವ 2026 ರ ಟಿ20 ವಿಶ್ವಕಪ್​ಗೆ (T20 World Cup 2026) ಕೆಲವೇ ದಿನಗಳು ಬಾಕಿ ಉಳಿದಿವೆ. ಆದರೆ ಈ ಟೂರ್ನಿ ಆರಂಭಕ್ಕೂ ಮುನ್ನವೇ ವಿವಾದಗಳು ಹುಟ್ಟಿಕೊಂಡಿವೆ. ಭದ್ರತಾ ಕಾರಣಗಳನ್ನು ನೀಡಿ ಬಾಂಗ್ಲಾದೇಶ ಪಂದ್ಯಾವಳಿಯಿಂದ ಹಿಂದೆ ಸರಿದರೆ ಅದರ ಬದಲಿಗೆ ಸ್ಕಾಟ್ಲೆಂಡ್​ಗೆ ಆಡುವ ಅವಕಾಶ ಸಿಕ್ಕಿದೆ. ಇತ್ತ ಬಾಂಗ್ಲಾದೇಶವನ್ನು ಹೊರಗಿಟ್ಟಿದ್ದಕ್ಕೆ ಕೆರಳಿರುವ ಪಾಕಿಸ್ತಾನ ಕೂಡ ಟಿ20 ವಿಶ್ವಕಪ್​ನಿಂದ ಹಿಂದೆ ಸರಿಯುವ ಮಾತನಾಡುತ್ತಿದೆ. ಈ ಬಗ್ಗೆ ಹೇಳಿಕೆ ನೀಡಿರುವ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ (Mohsin Naqvi), ತಮ್ಮ ಸರ್ಕಾರ ಅನುಮತಿ ನೀಡಿದರೆ ಮಾತ್ರ ಟಿ20 ವಿಶ್ವಕಪ್ ಆಡುವುದಾಗಿ ಹೇಳಿದ್ದಾರೆ. ಒದೀಗ ಪಾಕಿಸ್ತಾನದ ಈ ನಾಟಕಗಳಿಗೆ ಸರಿಯಾಗಿ ಟಕ್ಕರ್ ನೀಡಿರುವ ಭಾರತದ ಮಾಜಿ ಆಯ್ಕೆದಾರ ಮತ್ತು 1983 ರ ವಿಶ್ವಕಪ್ ಹೀರೋ ಕೃಷ್ಣಮಾಚಾರಿ ಶ್ರೀಕಾಂತ್ (K Srikkanth), ಭಾರತದ ಬ್ಯಾಟಿಂಗ್‌ ನೋಡಿ ಹೆದರಿರುವ ಪಾಕಿಸ್ತಾನ ಈ ರೀತಿಯ ನಾಟಕ ಆರಂಭಿಸಿದೆ ಎಂದಿದ್ದಾರೆ.

ಭಾರತ ಬ್ಯಾಟಿಂಗ್ ನೋಡಿ ಹೆದರುತ್ತಿದ್ದಾರೆ

ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ ಶ್ರೀಕಾಂತ್, ‘ಪಾಕಿಸ್ತಾನದ ಆಟದ ಶೈಲಿ ಮತ್ತು ಮಂಡಳಿಯ ವಿಧಾನವನ್ನು ಟೀಕಿಸಿದರು. ಟೀಂ ಇಂಡಿಯಾ ಈಗ ಆಡುತ್ತಿರುವ ವಿನಾಶಕಾರಿ ಬ್ಯಾಟಿಂಗ್‌ಗೆ ಪಾಕಿಸ್ತಾನ ಹೆದರುತ್ತಿದೆ. ಕಳೆದ ಪಂದ್ಯಗಳಲ್ಲಿ ಭಾರತ ತಂಡ ಕೇವಲ 10 ಓವರ್‌ಗಳಲ್ಲಿ 150 ರನ್ ಕಲೆಹಾಕಿದೆ. ನಾನು ಅಂತಹ ಪವರ್ ಹಿಟಿಂಗ್ ಅನ್ನು ಎಂದಿಗೂ ನೋಡಿರಲಿಲ್ಲ. ಭಾರತ ತಂಡ ಕೊಲಂಬೊದಲ್ಲಿ ಸಿಕ್ಸ್ ಬಾರಿಸಿದ್ದರೆ, ಅದು ಚೆನ್ನೈನಲ್ಲಿ ಬಂದು ಬೀಳಲಿದೆ. ತಂಡದ ಬ್ಯಾಟ್ಸ್‌ಮನ್​ಗಳು ಹಾಗೆ ಹೊಡೆಯುತ್ತಿದ್ದಾರೆ. ಇದನ್ನು ನೋಡಿದ ಪಾಕಿಸ್ತಾನ ತಂಡ ತುಂಬಾ ಹೆದರುತ್ತಿದೆ. ನೀವು ಭಾರತ ಬ್ಯಾಟಿಂಗ್ ನೋಡಿ ಹೆದರುತ್ತಿದ್ದರೆ, ಟಿ20 ವಿಶ್ವಕಪ್ ಆಡಲು ಬರಬೇಡಿ, ಯಾರೂ ನಿಮ್ಮನ್ನು ಒತ್ತಾಯಿಸುತ್ತಿಲ್ಲ. ನೀವು ಬಂದರೆ, ನೀವು ಖಂಡಿತವಾಗಿಯೂ ಟೀಂ ಇಂಡಿಯಾ ವಿರುದ್ಧ ಕೆಟ್ಟದಾಗಿ ಸೋಲುತ್ತೀರಿ’ ಎಂದಿದ್ದಾರೆ.

ಮತ್ತೊಂದೆಡೆ, ಪಾಕಿಸ್ತಾನ ಮಂಡಳಿಯ ದ್ವಂದ್ವ ನಿಲುವಿನ ಬಗ್ಗೆಯೂ ಟೀಕೆಗಳಿವೆ. ಒಂದೆಡೆ, ನಖ್ವಿ ಪಂದ್ಯಾವಳಿಯಿಂದ ಹಿಂದೆ ಸರಿಯುವುದಾಗಿ ಹೇಳಿಕೆ ನೀಡುತ್ತಿದ್ದರೆ, ಮತ್ತೊಂದೆಡೆ ಪಿಸಿಬಿ, ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡವನ್ನು ತರಾತುರಿಯಲ್ಲಿ ಘೋಷಿಸಿದೆ. ಆದಾಗ್ಯೂ, ಈ ತಂಡವನ್ನು ಘೋಷಿಸಿದ ನಂತರವೂ, ಸರ್ಕಾರದಿಂದ ಹಸಿರು ನಿಶಾನೆ ಸಿಗುವವರೆಗೆ ಟಿ20 ವಿಶ್ವಕಪ್ ಆಡುವ ಬಗ್ಗೆ ಸ್ಪಷ್ಟತೆ ಇಲ್ಲ ಎಂದು ಮ್ಯಾನೇಜ್‌ಮೆಂಟ್ ಹೇಳುತ್ತಿದೆ. ಇದರರ್ಥ ಪಾಕಿಸ್ತಾನ ಭಾರತದ ಮೇಲೆ ಒತ್ತಡ ಹೇರಲು ಇಂತಹ ಮೈಂಡ್ ಗೇಮ್ ಆಡುತ್ತಿದೆ ಎಂಬುದು ಕ್ರೀಡಾ ವಿಶ್ಲೇಷಕರ ಅಭಿಪ್ರಾಯವಾಗಿದೆ.

T20 World Cup 2026: ಟಿ20 ವಿಶ್ವಕಪ್‌ನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ನಡೆಯುವುದು ಅನುಮಾನ

ಸೋಲಿನ ಭಯದಿಂದಾಗಿ ನೆಪ

ಪ್ರಸ್ತುತ ಪಾಕಿಸ್ತಾನ ಸರ್ಕಾರ ಮತ್ತು ಪಿಸಿಬಿ ಅಧ್ಯಕ್ಷರ ನಡುವೆ ಮಾತುಕತೆ ನಡೆಯುತ್ತಿದೆ. ಪಾಕಿಸ್ತಾನ ಟಿ20 ವಿಶ್ವಕಪ್ ಬಹಿಷ್ಕರಿಸಿದರೆ ಐಸಿಸಿಯಿಂದ ದಂಡಕ್ಕೆ ಗುರಿಯಾಗಬೇಕಾಗುತ್ತದೆ. ಪಾಕಿಸ್ತಾನದ ಈ ನಡೆಯನ್ನು ವ್ಯಂಗ್ಯ ಮಾಡಿರುವ ಶ್ರೀಕಾಂತ್‌, ‘ಪಾಕಿಸ್ತಾನದ ಬೆದರಿಕೆಗಳಿಗೆ ಗಮನ ಕೊಡಬೇಕಾಗಿಲ್ಲ. ಟೀಂ ಇಂಡಿಯಾ ಮೈದಾನದಲ್ಲಿ ತನ್ನ ವಿಶ್ವ ದರ್ಜೆಯ ಫಾರ್ಮ್ ಅನ್ನು ಪ್ರದರ್ಶಿಸುತ್ತದೆ ಎಂಬ ವಿಶ್ವಾಸ ನನಗಿದೆ ಸರಳ ಭಾಷೆಯಲ್ಲಿ ಹೇಳುವುದಾದರೆ, ಪಾಕಿಸ್ತಾನವು ಆಡಲು ಸಾಧ್ಯವಾಗದ ಕಾರಣ ಮತ್ತು ಸೋಲಿನ ಭಯದಿಂದಾಗಿ ಅಂತಹ ನೆಪಗಳನ್ನು ಹುಡುಕುತ್ತಿದೆ’ ಎಂದಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರದಿಂದ ಮಹತ್ವದ ಆದೇಶ: ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಕನಸು ಕಾಣುತ್ತಿದ್ದವರಿಗೆ ಬಿಗ್ ಶಾಕ್ – Kannada News | Karnataka Governmnet Orders continue 25 corporate board chairmen them positions for Next Order

ಬೆಂಗಳೂರು, (ಜನವರಿ 28): ಅವಧಿ ಪೂರ್ಣಗೊಂಡಿದ್ದ ಕರ್ನಾಟಕದ ವಿವಿಧ 25 ನಿಗಮ ಮಂಡಳಿ (Karnataka Boards And Corporations) ಅಧ್ಯಕ್ಷರ ಪದಾವಧಿಯನ್ನು ಮುಂದುವರೆಸಲಾಗಿದೆ. 2024, ಜನವರಿ 26ರಿಂದ 2 ವರ್ಷಗಳವರೆಗೆ ವಿವಿಧ ನಿಗಮ ಮಂಡಳಿಗಳಿಗೆ ಸಚಿವ ಸಂಪುಟ ಸ್ಥಾನ ಮಾನಗಳೊಂದಿಗೆ 25 ಕಾಂಗ್ರೆಸ್​ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿತ್ತು.ಈಗ ನಿಗಮ ಮಂಡಳಿ ಅಧ್ಯಕ್ಷರ ಅಧಿಕಾರವಧಿ ಅಂತ್ಯವಾಗಿದ್ದರಿಂದ ಗಾದಿ ಕೈತಪ್ಪುವ ಆತಂಕದಲ್ಲಿದ್ದರು. ಆದ್ರೆ, ಇದೀಗ ಈ ಹಿಂದೆ ನೇಮಕಗೊಂಡಿದ್ದವರನ್ನೇ ಮುಂದುವರಿಸಲು ಸರ್ಕಾರ ಆದೇಶ ಹೊರಡಿಸಿದೆ. ಇನ್ನು ಮುಖ್ಯವಾಗಿ ಮುಂದಿನ ಆದೇಶದವರೆಗೆ ಎಂದು ಉಲ್ಲೇಖಿಸಿರುವುದು ಕುತೂಹಲಕ್ಕೆ ಕಾರಣವಾಗಿದೆ. ಯಾಕಂದ್ರೆ ಯಾವಾಗ ಬೇಕಿದ್ದರೂ ಸ್ಥಾನಕ್ಕೆ ಕುತ್ತು ಬರಹುದು.

ಏನು ಬೇಕಾದರೂ ಆಗ್ಬಹುದು

ಈ ಹಿಂದೆ ಎರಡು ವರ್ಷಗಳವರೆಗೆ ಅಥವಾ ಮುಂದಿನ ಆದೇಶವರೆಗೆ ಶಾಸಕರನ್ನು ವಿವಿಧ ನಿಗಮಗಳ ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈಗಿನ ಆದೇಶದಲ್ಲಿ ಮುಂದಿನ ಆದೇಶವರೆಗೆ ಎಂಬ ಸಾಲು ಉಲ್ಲೇಖಿಸಿದ್ದು, ಅಚ್ಚರಿಕೆ ಕಾರಣವಾಗಿದೆ. ಇದರ ಅರ್ಥ ಯಾವಾಗ ಬೇಕಾದರೂ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನಕ್ಕೆ ಕುತ್ತು ಬರಬಹುದು. ಸದ್ಯ ಪಕ್ಷದೊಳಗೆ ಒಂದೆಡೆ ಸಚಿವ ಸಂಪುಟ ಪುನಾರಚನೆ, ಇನ್ನೊಂದೆಡೆ ನಾಯಕತ್ವ ಬದಲಾವಣೆ ಚರ್ಚೆಗಳು ಜೋರಾಗಿವೆ. ಇದರಿಂದಈಗಾಗಲೇ ಎರಡು ವರ್ಷ ಪೂರೈಸಿರುವ ನಿಗಮ ಮಂಡಳಿ ಅಧ್ಯಕ್ಷರು ಸರ್ಕಾರ ಇರುವವರೆಗೆ ಮುಂದುವರೆಯುತ್ತಾರೋ ಅಥವಾ ಮಧ್ಯದಲ್ಲೇ ಸರ್ಕಾರ ಕೈಬಿಡುತ್ತದೆಯೋ ಎಂಬ ಕುತೂಹಲ ಮೂಡಿಸಿದೆ. ಒಂದು ವೇಳೆ ಸಂಪುಟ ಪುನಾರಚನೆಯಾದರೆ ನಿಗಮ ಮಂಡಳಿ ಅಧ್ಯಕ್ಷರಿಗೆ ಮುಂಬಡ್ತಿ ಅಂದರೆ ಸಚಿವ ಸ್ಥಾನ ನೀಡಿ ಹೊಸ ಮುಖಗಳಿಗೆ ನಿಗಮ ಮಂಡಳಿ ನೀಡುವ ಸಾಧ್ಯತೆಗಳು ಇರಬಹುದು.

ಇದನ್ನೂ ಓದಿ: ಮುಡಾ ಕೇಸ್: ಸಿದ್ದರಾಮಯ್ಯ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ನಿಗಮ ಮಂಡಳಿ ಕನಸು ಕಂಡವರಿಗೆ ನಿರಾಸೆ

ಸಚಿವ ಸಂಪುಟದಲ್ಲಿ ಅವಕಾಶ ಸಿಗದ ಶಾಸಕರಿಗೆ ನಿಗಮ ಮಂಡಳಿ ನೀಡಿ ತಲೆಸವರಲಾಗಿತ್ತು. ಇನ್ನು ತಮಗೂ ನಿಗಮ ಮಂಡಳಿ ಬೇಕೆಂದು ಪಟ್ಟು ಹಿಡಿದವರೆಗೆ ಇನ್ನುಳಿದ ಅವಧಿಗೆ ಮಾಡೋಣ ಎಂದು ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ಅಂದು ಬೀಸೋ ದೊಣ್ಣೆಯಿಂದ ಪಾರಾಗಿದ್ದರು. ಆದ್ರೆ, ಇದೀಗ ಅವರನ್ನೇ ಅಧ್ಯಕ್ಷರನ್ನಾಗಿ ಮುಂದುವರಿಸಿ ಆದೇಶ ಹೊರಡಿಸಿದ್ದರಿಂದ ನಿಗಮ ಮಂಡಳಿ ಕನಸು ಕಾಣುತ್ತಿದ್ದ ಕೆಲ ನಾಯಕರಿಗೆ ನಿರಾಸೆಯಾಗಿದ್ದು, ನಿಗಮ ಮಂಡಳಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಮುಂದಿನ ನಡೆ ಏನು ಎನ್ನುವುದು ಕಾದುನೋಡಬೇಕಿದೆ. ಇನ್ನು ಮುಂದಿನ ಆದೇಶ ಎಂದು ಉಲ್ಲೇಖಿಸಿದ್ದರಿಂದ ಆಕಾಂಕ್ಷಿಗಳು ಮುಂದೆ ಸಿಗಬಹುದೇನೋ ಎನ್ನುವ ಆಸೆ ಇಟ್ಟುಕೊಳ್ಳಬಹುದು ಅಷ್ಟೇ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

WPL 2026: 2 ಸ್ಥಾನ, 3 ಪಂದ್ಯಗಳು, 4 ತಂಡಗಳು; ಹೀಗಿದೆ ಎಲ್ಲಾ ತಂಡಗಳ ಪ್ಲೇಆಫ್‌ ಲೆಕ್ಕಾಚಾರ

Source link

ಬೆಂಗಳೂರು ವಿವಿ ವಿದ್ಯಾರ್ಥಿಗಳ ಜೊತೆ ‘ಲ್ಯಾಂಡ್​ಲಾರ್ಡ್’ ವಿಜಯ್ ಜಾಥಾ – Kannada News | Landlord movie actor Vijay Kumar aka Duniya Vijay marched with Bangalore University students

ದುನಿಯಾ ವಿಜಯ್ (Duniya Vijay), ರಚಿತಾ ರಾಮ್, ರಾಜ್ ಬಿ. ಶೆಟ್ಟಿ, ರಿತನ್ಯಾ, ಶಿಶಿರ್ ಬೈಕಾಡಿ ಮುಂತಾದವರು ನಟಿಸಿರುವ ‘ಲ್ಯಾಂಡ್​ಲಾರ್ಡ್’ ಸಿನಿಮಾ ಇತ್ತೀಚೆಗೆ ಬಿಡುಗಡೆ ಆಗಿ ಜನಮೆಚ್ಚುಗೆ ಗಳಿಸಿದೆ. ಈ ಸಿನಿಮಾಗೆ ಜಡೇಶ್ ಕೆ. ಹಂಪಿ ಅವರು ನಿರ್ದೇಶನ ಮಾಡಿದ್ದಾರೆ.ಈ ಸಿನಿಮಾದಲ್ಲಿನ ಕಲಾವಿದರ ನಟನೆ, ಕಥೆ, ಚಿತ್ರದ ಆಶಯವನ್ನು ಸಿನಿ ಪ್ರಿಯರು ಮೆಚ್ಚಿಕೊಂಡಿದ್ದಾರೆ. ಈ ಪ್ರಯುಕ್ತ ‘ಲ್ಯಾಂಡ್​ಲಾರ್ಡ್’ (Landlord) ಸಿನಿಮಾ ತಂಡದವರು ಇಂದು (ಜನವರಿ 28) ಮಧ್ಯಾಹ್ನ 1.45ಕ್ಕೆ ವಿದ್ಯಾರ್ಥಿಗಳ ಜೊತೆ ಜಾಥಾ ನಡೆಸಿದರು.

‘ಲ್ಯಾಂಡ್​ಲಾರ್ಡ್’ ಸಿನಿಮಾ ತಂಡ ನಡೆಸಿದ ಜಾಥಾದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಸುಮಾರು 500ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡರು. ಅವರ ಜೊತೆ ನಟ ದುನಿಯಾ ವಿಜಯ್ ಅವರು ಭಾಗಿಯಾದರು. ಸುಮಾರು 2 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಎಲ್ಲರೂ ಸಾಗಿದರು. ಆ ಮೂಲಕ ‘ಲ್ಯಾಂಡ್​ಲಾರ್ಡ್’ ಸಿನಿಮಾವನ್ನು ಇನ್ನಷ್ಟು ಜನರಿಗೆ ತಲುಪಿಸುವ ಕೆಲಸ ಮಾಡಲಾಯಿತು.

ಈ ಸಂಧರ್ಭದಲ್ಲಿ ದುನಿಯಾ ವಿಜಯ್ ಅವರು ಒಂದು ಹೆಣ್ಣು ಮಗುವಿಗೆ ಭೀಮ ಪುತ್ರಿ ಎಂದು ಹೆಸರಿಟ್ಟು ನಾಮಕರಣ ಮಾಡಿದ್ದು ವಿಶೇಷವಾಗಿತ್ತು. ಆ ಮಗುವಿನ ಭವಿಷ್ಯಕ್ಕಾಗಿ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು 25 ಸಾವಿರ ರೂಪಾಯಿ ಮತ್ತು ದುನಿಯಾ ವಿಜಯ್ ಅವರು 75 ಸಾವಿರ ರೂಪಾಯಿ ಸೇರಿಸಿ ಒಟ್ಟು 1 ಲಕ್ಷ ರೂಪಾಯಿ ದೇಣಿಗೆ ನೀಡುವುದಾಗಿ ಘೋಷಿಸಲಾಯಿತು.

ಜಾಥಾ ಬಳಿಕ ದುನಿಯಾ ವಿಜಯ್ ಅವರು ಮಾತನಾಡಿದರು. ‘ಅಂಬೇಡ್ಕರ್ ಅವರು ಸಂವಿಧಾನ ಬರೆದಿರೋದು ಎಲ್ಲರಿಗೂ. ಯಾವುದೇ ಪ್ರತ್ಯೇಕ ಜಾತಿಗೋಸ್ಕರ ಅಲ್ಲ. ಪ್ರತಿಯೊಬ್ಬರಿಗೂ ಈ ಸಂವಿಧಾನ ಬೇಕು. ಈ ಹೋರಾಟ ಯಾರದ್ದೋ ಮೇಲಿನ ದ್ವೇಷಕ್ಕಾಗಿ ಅಲ್ಲ. ಅಥವಾ ಕಿಚ್ಚಿಗಲ್ಲ ಇದು ನನ್ನ ಸಂವಿಧಾನಕ್ಕಾಗಿ’ ಎಂದು ಅವರು ಹೇಳಿದರು. ವಿದ್ಯಾರ್ಥಿಗಳಿಗೆ ಹಾಗೂ ಬೆಂಗಳೂರ ವಿಶ್ವವಿದ್ಯಾಲಯಕ್ಕೆ ಅವರು ಧನ್ಯವಾದ ತಿಳಿಸಿದರು.

ಇದನ್ನೂ ಓದಿ: Landlord Movie Review: ಅಸಮಾನತೆ, ಅನ್ಯಾಯದ ಇತಿಹಾಸ ಕೆದಕಿದ ‘ಲ್ಯಾಂಡ್​ಲಾರ್ಡ್’

ಇತ್ತೀಚೆಗೆ ‘ಲ್ಯಾಂಡ್​ಲಾರ್ಡ್’ ಸಿನಿಮಾ ತಂಡದವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಆಗಿದ್ದರು. ಸಿನಿಮಾದ ಆಶಯಕ್ಕೆ ಸಿದ್ದರಾಮಯ್ಯ ಅವರು ಮೆಚ್ಚುಗೆ ಸೂಚಿಸಿದ್ದರು. ಅಲ್ಲದೇ ತಾವು ಕೂಡ ಈ ಸಿನಿಮಾವನ್ನು ನೋಡುವುದಾಗಿ ತಿಳಿಸಿದ್ದರು. ರೆಟ್ರೋ ಕಾಲದ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ. ಹಲವು ಕಡೆಗಳಲ್ಲಿ ಹೌಸ್​ಫುಲ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಫೆಬ್ರವರಿಯಲ್ಲಿ ನಡೆಯಲಿದೆ ಅಪರೂಪದ ಗ್ರಹ ಯೋಗ: ಈ ರಾಶಿಗೆ ಅದೃಷ್ಟವೋ ಅದೃಷ್ಟ – Kannada News | February 2026 Astrology: Pancha Graha Yoga and Guru’s Influence on Your Rashi

ಫೆಬ್ರವರಿ- 2026 ರಲ್ಲಿ ಪಂಚ ಗ್ರಹರ ಯೋಗವಾಗಲಿದೆ. ಅಪರೂಪದ ಈ ವಿಸ್ಮಯಕ್ಕೆ ಫೆಬ್ರವರಿ ತಿಂಗಳ ಸಾಕ್ಷಿಯಗಲಿದೆ. ಅನೇಕ ಬದಲಾವಣೆಗೂ ಇದು ಕಾರಣವಾಗಲಿದೆ. ವಿಶೇಷವೆಂದರೆ ಈ ಐದೂ ಗ್ರಹಗಳ ಮೇಲೆ ಗುರುವಿನ ಪ್ರಭಾವ ಇಲಿದ್ದು, ಸಂಕಟ ಎದುರಾದರೆ ಮಹಾವಿಷ್ಣುವನ್ನೂ ಗುರುವನ್ನು ದರ್ಶಿಸುವುದು, ಅನುಗ್ರಹ ಪಡೆಯುವುದು ಅಥವಾ ಗುರುಚರಿತೆಯನ್ನು ಪಠಿಸುವುದು ಅಥವಾ ಆಲಿಸಿ.

ಮೇಷ ರಾಶಿ :

ಆರ್ಥಿಕವಾಗಿ ಈ ತಿಂಗಳು ನಿಮಗೆ ಅತ್ಯಂತ ಲಾಭದಾಯಕವಾಗಿದೆ. ಹಳೆಯ ಹೂಡಿಕೆಗಳಿಂದ ಉತ್ತಮ ಲಾಭ ಬರಲಿದೆ. ವೃತ್ತಿಜೀವನದಲ್ಲಿ ಹೊಸ ಜವಾಬ್ದಾರಿಗಳು ಸಿಗುತ್ತವೆ. ಆದರೆ, ಅತಿಯಾದ ಆತ್ಮವಿಶ್ವಾಸದಿಂದ ಕೆಲಸ ಹಾಳುಮಾಡಿಕೊಳ್ಳಬೇಡಿ. ಕುಟುಂಬದಲ್ಲಿ ಶುಭ ಕಾರ್ಯಗಳು ನಡೆಯುವ ಸಾಧ್ಯತೆಯಿದೆ. ಆರೋಗ್ಯದ ಬಗ್ಗೆ ಗಮನವಿರಲಿ.

ವೃಷಭ ರಾಶಿ :

ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಾಬಲ್ಯ ಹೆಚ್ಚಾಗಲಿದೆ. ಸರ್ಕಾರಿ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಆಸ್ತಿ ಖರೀದಿ ಮಾಡುವ ನಿಮ್ಮ ಕನಸು ನನಸಾಗಬಹುದು. ಸಂಗಾತಿಯೊಂದಿಗೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೂ ಪ್ರೀತಿ ಹೆಚ್ಚಾಗುತ್ತದೆ. ನಿಮ್ಮ ಆಹಾರ ಕ್ರಮದ ಮೇಲೆ ನಿಯಂತ್ರಣವಿರಲಿ, ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಡಬಹುದು.

ಮಿಥುನ ರಾಶಿ :

ಅದೃಷ್ಟದ ಬೆಂಬಲ ನಿಮಗೆ ಪೂರ್ಣವಾಗಿ ಸಿಗಲಿದೆ. ಬಾಕಿ ಉಳಿದಿರುವ ಕೆಲಸಗಳು ಸುಲಭವಾಗಿ ಪೂರ್ಣಗೊಳ್ಳುತ್ತವೆ. ವಿದೇಶ ಪ್ರಯಾಣದ ಯೋಗವಿದೆ. ಆದಾಯದ ಮೂಲಗಳು ಹೆಚ್ಚಾಗಲಿವೆ. ವಿದ್ಯಾರ್ಥಿಗಳಿಗೆ ಉತ್ತಮ ಸಮಯ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ನಿಮ್ಮ ಮಾತಿನ ಮೇಲೆ ನಿಗಾ ಇರಲಿ, ಹಿರಿಯರ ಸಲಹೆ ಪಡೆದು ಮುನ್ನಡೆಯಿರಿ.

ಕರ್ಕಾಟಕ ರಾಶಿ :

ಈ ತಿಂಗಳು ಮಿಶ್ರಫಲ ನೀಡಲಿದೆ. ಆರ್ಥಿಕವಾಗಿ ಸ್ವಲ್ಪ ಏರಿಳಿತ ಇರಬಹುದು, ಆದ್ದರಿಂದ ಖರ್ಚಿನ ಮೇಲೆ ಹಿಡಿತವಿಡಿ. ಕೆಲಸದಲ್ಲಿ ಒತ್ತಡ ಹೆಚ್ಚಾಗಬಹುದು, ಆದರೆ ತಾಳ್ಮೆಯಿಂದ ಗೆಲ್ಲಬಹುದು. ಮಂಗಳನ ಪ್ರಭಾವದಿಂದ ನಿಮ್ಮ ಅಂತಃಪ್ರಜ್ಞೆ ಹೆಚ್ಚಾಗುತ್ತದೆ. ಕುಟುಂಬದವರ ಆರೋಗ್ಯದ ಕಡೆ ಗಮನ ಕೊಡಿ. ವಾಹನ ಚಾಲನೆಯಲ್ಲಿ ಎಚ್ಚರಿಕೆ ಅಗತ್ಯ.

ಸಿಂಹ ರಾಶಿ :

ವೈವಾಹಿಕ ಜೀವನದಲ್ಲಿ ಸಾಮರಸ್ಯ ಇರಲಿದೆ. ಪಾಲುದಾರಿಕೆ ವ್ಯವಹಾರದಲ್ಲಿ ಲಾಭದಾಯಕ ಬದಲಾವಣೆಗಳನ್ನು ಕಾಣುವಿರಿ. ಸಾಮಾಜಿಕವಾಗಿ ಗೌರವ ಹೆಚ್ಚಾಗುತ್ತದೆ. ಶತ್ರುಗಳ ಮೇಲೆ ಜಯ ಸಾಧಿಸುವಿರಿ. ಹೊಸ ಉದ್ಯೋಗಕ್ಕಾಗಿ ಹುಡುಕುತ್ತಿರುವವರಿಗೆ ಒಳ್ಳೆಯ ಸುದ್ದಿ ಸಿಗಲಿದೆ. ದೈಹಿಕ ವ್ಯಾಯಾಮಕ್ಕೆ ಆದ್ಯತೆ ನೀಡಿ, ಮಾನಸಿಕ ನೆಮ್ಮದಿಗಾಗಿ ಧ್ಯಾನ ಮಾಡಿ.

ಕನ್ಯಾ ರಾಶಿ :

ವೃತ್ತಿ ಮತ್ತು ವ್ಯವಹಾರದಲ್ಲಿ ಅಪಾರ ಯಶಸ್ಸು ಸಿಗಲಿದೆ. ನ್ಯಾಯಾಲಯದ ಕೆಲಸಗಳಲ್ಲಿ ನಿಮಗೆ ಜಯ ಸಿಗುವ ಸಾಧ್ಯತೆಯಿದೆ. ಸ್ಪರ್ಧಾತ್ಮಕ ಪರೀಕ್ಷೆ ಬರೆಯುವವರಿಗೆ ಉತ್ತಮ ಫಲಿತಾಂಶ ಸಿಗಲಿದೆ. ಸಾಲದ ಬಾಧೆಯಿಂದ ಮುಕ್ತಿ ಪಡೆಯುವಿರಿ. ಆದರೆ, ಕೆಲಸದ ಒತ್ತಡದಿಂದಾಗಿ ದಣಿವಾಗಬಹುದು. ಸಂಗಾತಿಯ ಬೆಂಬಲ ನಿಮಗೆ ಧೈರ್ಯ ನೀಡುತ್ತದೆ.

ತುಲಾ ರಾಶಿ :

ಈ ತಿಂಗಳು ಸೃಜನಾತ್ಮಕ ಕೆಲಸಗಳಿಗೆ ತುಂಬಾ ಒಳ್ಳೆಯದು. ಕಲೆ ಮತ್ತು ಸಾಹಿತ್ಯ ಕ್ಷೇತ್ರದಲ್ಲಿರುವವರಿಗೆ ಖ್ಯಾತಿ ಲಭಿಸುತ್ತದೆ. ಪ್ರೇಮ ಜೀವನದಲ್ಲಿ ಹೊಸ ತಿರುವು ಸಿಗಲಿದೆ. ಮಕ್ಕಳ ಪ್ರಗತಿಯಿಂದ ಸಂತೋಷವಾಗುತ್ತದೆ. ಆರ್ಥಿಕವಾಗಿ ಸ್ಥಿರತೆ ಇರಲಿದೆ. ಹಳೆಯ ಸ್ನೇಹಿತರ ಭೇಟಿಯಾಗುವ ಸಂಭವವಿದೆ. ಚರ್ಮದ ಅಲರ್ಜಿಯ ಬಗ್ಗೆ ಸ್ವಲ್ಪ ಜಾಗರೂಕರಾಗಿರಿ.

ವೃಶ್ಚಿಕ ರಾಶಿ :

ಮನೆಯಲ್ಲಿ ಸುಖ-ಸಂತೋಷ ಹೆಚ್ಚಾಗುತ್ತದೆ. ಹೊಸ ವಾಹನ ಅಥವಾ ಮನೆ ಖರೀದಿಸಲು ಇದು ಸೂಕ್ತ ಸಮಯ. ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆಯಿದೆ. ಮಂಗಳನ ಪ್ರಭಾವದಿಂದ ನಿಮ್ಮ ಧೈರ್ಯ ಹೆಚ್ಚಾಗುತ್ತದೆ. ತಾಯಿಯ ಆರೋಗ್ಯದ ಕಡೆ ಗಮನವಿರಲಿ. ಅನಗತ್ಯ ವಾದ, ವಿವಾದಗಳಿಂದ ದೂರವಿರಿ. ಧನಾತ್ಮಕ ಚಿಂತನೆ ನಿಮ್ಮ ಯಶಸ್ಸಿಗೆ ಕಾರಣವಾಗುತ್ತದೆ.

ಧನು ರಾಶಿ :

ನಿಮ್ಮ ಸಂವಹನ ಕೌಶಲ್ಯದಿಂದ ಕಠಿಣ ಕೆಲಸಗಳನ್ನು ಸಾಧಿಸುವಿರಿ. ಕಿರು ಪ್ರಯಾಣಗಳು ಲಾಭ ತರಲಿವೆ. ಸಹೋದರ, ಸಹೋದರಿಯರೊಂದಿಗೆ ಬಾಂಧವ್ಯ ವೃದ್ಧಿಸುತ್ತದೆ. ಉದ್ಯೋಗದಲ್ಲಿ ನಿಮ್ಮ ಶ್ರಮಕ್ಕೆ ತಕ್ಕ ಪ್ರತಿಫಲ ಸಿಗಲಿದೆ. ಹೂಡಿಕೆ ಮಾಡಲು ಇದು ಒಳ್ಳೆಯ ಸಮಯ. ಗಂಟಲು ಅಥವಾ ಶೀತದಂತಹ ಸಮಸ್ಯೆಗಳು ಕಾಡಬಹುದು, ಎಚ್ಚರವಿರಲಿ.

ಮಕರ ರಾಶಿ :

ಆರ್ಥಿಕವಾಗಿ ಬಲಿಷ್ಠರಾಗುವಿರಿ. ಅನ್ಯರ ಕೈಯಲ್ಲಿ ಸಿಕ್ಕಿಬಿದ್ದಿದ್ದ ಹಣ ಮರಳಿ ಕೈಸೇರಲಿದೆ. ಕುಟುಂಬದಲ್ಲಿ ಸಂತಸದ ವಾತಾವರಣ ಇರಲಿದೆ. ನಿಮ್ಮ ವ್ಯಕ್ತಿತ್ವದಲ್ಲಿ ಸುಧಾರಣೆ ಕಂಡುಬರುತ್ತದೆ. ಹೊಸ ಹೂಡಿಕೆಗಳಿಗೆ ಇದು ಸಕಾಲ. ಸಿಹಿ ಪದಾರ್ಥಗಳ ಸೇವನೆಯಲ್ಲಿ ಮಿತಿ ಇರಲಿ. ಕಣ್ಣಿನ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸಿ. ಆದಾಯ ಹೆಚ್ಚಾಗಲಿದೆ.

ಕುಂಭ ರಾಶಿ :

ಸೂರ್ಯ, ಮಂಗಳರ ಸಂಯೋಗ ನಿಮ್ಮ ರಾಶಿಯಲ್ಲೇ ಇರುವುದರಿಂದ ಆತ್ಮವಿಶ್ವಾಸ ಹೆಚ್ಚಿರುತ್ತದೆ. ಸಮಾಜದಲ್ಲಿ ನಿಮ್ಮ ಗೌರವ ವೃದ್ಧಿಸುತ್ತದೆ. ಹೊಸ ಉದ್ಯಮ ಆರಂಭಿಸಲು ಯೋಜಿಸಬಹುದು. ನಿಮ್ಮ ಕಠಿಣ ಪರಿಶ್ರಮಕ್ಕೆ ಮನ್ನಣೆ ಸಿಗಲಿದೆ. ತಲೆನೋವು ಅಥವಾ ರಕ್ತದೊತ್ತಡದ ಬಗ್ಗೆ ಕಾಳಜಿ ಇರಲಿ. ಸಂಗಾತಿಯೊಂದಿಗೆ ಪ್ರವಾಸಕ್ಕೆ ಹೋಗುವ ಸಾಧ್ಯತೆಯಿದೆ.

ಮೀನ ರಾಶಿ :

ಖರ್ಚುಗಳು ಹೆಚ್ಚಾಗಬಹುದು, ಆದ್ದರಿಂದ ಬಜೆಟ್ ಬಗ್ಗೆ ಜಾಗರೂಕರಾಗಿರಿ. ಆಧ್ಯಾತ್ಮಿಕತೆಯ ಕಡೆಗೆ ನಿಮ್ಮ ಒಲವು ಹೆಚ್ಚಾಗುತ್ತದೆ. ದೂರದ ಪ್ರಯಾಣದ ಯೋಗವಿದೆ. ಹೂಡಿಕೆ ಮಾಡುವಾಗ ಅನುಭವಸ್ಥರ ಸಲಹೆ ಪಡೆಯಿರಿ. ನಿದ್ರಾಹೀನತೆ ಕಾಡಬಹುದು, ವಿಶ್ರಾಂತಿಗೆ ಸಮಯ ಮೀಸಲಿಡಿ. ಶನಿ ದೆಸೆಯ ಪ್ರಭಾವವಿರುವುದರಿಂದ ತಾಳ್ಮೆಯಿಂದ ನಿರ್ಧಾರ ತೆಗೆದುಕೊಳ್ಳಿ.

– ಲೋಹಿತ ಹೆಬ್ಬಾರ್ – 8762924271 (what’s app only)

Published On – 7:15 pm, Wed, 28 January 26

Source link

ಇಶಾ ಫೌಂಡೇಶನ್​ ಸ್ಮಶಾನ ನಿರ್ಮಿಸುವುದರ ವಿರುದ್ಧ ಹೈಕೋರ್ಟ್​​ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾ – Kannada News | Madras High Court Dismisses Plea Against Construction Of Gasifier Crematorium By Isha Foundation

ಚೆನ್ನೈ, ಜನವರಿ 28: ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಇಶಾ ಫೌಂಡೇಶನ್ (Isha Foundation) ನಿರ್ಮಿಸುತ್ತಿರುವ ಗ್ಯಾಸ್ ಆಧಾರಿತ ಸ್ಮಶಾನದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಆ ಸ್ಮಶಾನವು ಸಾಮಾಜಿಕ ಕಲ್ಯಾಣಕ್ಕೆ ಸೇವೆ ಸಲ್ಲಿಸುತ್ತದೆ ಮತ್ತು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ. ಇಶಾ ಫೌಂಡೇಶನ್ ಸ್ಮಶಾನ ನಿರ್ಮಾಣ ಮಾಡುವುದರ ವಿರುದ್ಧ ಸಲ್ಲಿಸಲಾದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಇಶಾ ಫೌಂಡೇಶನ್​ನಿಂದ ಕಾಲಭೈರವ ಧಗನ ಮಂಟಪದ ನಿರ್ಮಾಣವನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ.

ತಮಿಳುನಾಡು ಗ್ರಾಮ ಪಂಚಾಯತ್ ನಿಯಮಗಳ ಅಡಿಯಲ್ಲಿ ವಸತಿ ಪ್ರದೇಶ ಅಥವಾ ಕುಡಿಯುವ ನೀರು ಸರಬರಾಜು ಇರುವ ಪ್ರದೇಶದಿಂದ ಸುಮಾರು 90 ಮೀಟರ್ ಒಳಗೆ ಸ್ಮಶಾನಕ್ಕೆ ಪರವಾನಗಿ ನೀಡುವುದಕ್ಕೆ ಯಾವುದೇ ನಿಷೇಧವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ಮಣೀಂದ್ರ ಮೋಹನ್ ಶ್ರೀವಾಸ್ತವ ಮತ್ತು ನ್ಯಾಯಮೂರ್ತಿ ಜಿ. ಅರುಳ್ ಮುರುಗನ್ ಅವರನ್ನೊಳಗೊಂಡ ಪೀಠ ಹೇಳಿದೆ. ನಿಯಮಗಳ ಪ್ರಕಾರ, ಗ್ರಾಮ ಪಂಚಾಯತ್‌ನಿಂದ ಪರವಾನಗಿ ಪಡೆಯುವುದು ಮಾತ್ರ ಅಗತ್ಯ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಇದನ್ನೂ ಓದಿ: ಇಶಾ ಫೌಂಡೇಷನ್​ಗೆ ಬಿಗ್​ ರಿಲೀಫ್​: ಶೋಕಾಸ್‌ ನೋಟಿಸ್‌ ರದ್ದತಿಯನ್ನು ಎತ್ತಿ ಹಿಡಿದ ಸುಪ್ರೀಂ

ಸೂಕ್ತ ಅನುಮತಿ ಪಡೆದಿದ್ದರೆ ಸ್ಮಶಾನ ನಿರ್ಮಿಸುವುದನ್ನು ಕಾನೂನುಬಾಹಿರವೆಂದು ಪರಿಗಣಿಸಲಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ. ಗ್ಯಾಸ್ ಆಧಾರಿತ ಸ್ಮಶಾನವು ಪರಿಸರದ ಮೇಲೆ ಕಡಿಮೆ ಪರಿಣಾಮ ಬೀರುವ ಆಧುನಿಕ ಸೌಲಭ್ಯವಾಗಿರುವುದರಿಂದ, ಅದು ಸಮಾಜಕ್ಕೆ ಪ್ರಯೋಜನವನ್ನು ನೀಡುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಈ ಪ್ರಕರಣವು ಇಕಾರೈ ಪೊಲುವಂಪಟ್ಟಿ ಗ್ರಾಮ ಪಂಚಾಯತ್ ಅಧ್ಯಕ್ಷರು, ಗ್ರಾಮೀಣ ಪಂಚಾಯತ್‌ಗಳ ಸಹಾಯಕ ನಿರ್ದೇಶಕರು ಮತ್ತು ತಮಿಳುನಾಡು ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಯಮತ್ತೂರು ದಕ್ಷಿಣ ಜಿಲ್ಲಾ ಪರಿಸರ ಎಂಜಿನಿಯರ್ ಅವರ ಆದೇಶಗಳ ವಿರುದ್ಧ ಸಲ್ಲಿಸಲಾದ ಅರ್ಜಿಗಳಿಗೆ ಸಂಬಂಧಿಸಿದೆ. ಈ ಆದೇಶ ಇಶಾ ಫೌಂಡೇಶನ್‌ಗೆ ಸ್ಮಶಾನವನ್ನು ಸ್ಥಾಪಿಸಲು ಅನುಮತಿ ನೀಡಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್ಕಾರಕ್ಕೆ ಉದ್ಯೋಗ ಸೃಷ್ಟಿ ಗುರಿ; ಬಜೆಟ್​ನಲ್ಲಿ ಈ ಉದ್ದಿಮೆಗಳಿಗೆ ಸಿಗಲಿದೆ ಪುಷ್ಟಿ – Kannada News | Union Budget 2026, labour intensive sector to get boost

ನವದೆಹಲಿ, ಜನವರಿ 28: ಈ ಬಾರಿಯ ಬಜೆಟ್​ನಲ್ಲಿ (Union Budget) ಮ್ಯಾನುಫ್ಯಾಕ್ಚರಿಂಗ್ ಎಕನಾಮಿ ಸುದೃಢಗೊಳಿಸಲು ಪ್ರಯತ್ನಿಸುವ ನಿರೀಕ್ಷೆ ಇದೆ. ಉದ್ಯೋಗ ಸೃಷ್ಟಿ ಹೆಚ್ಚು ಆಗುವಂತೆ ಕ್ರಮಗಳನ್ನು ಕೈಗೊಳ್ಳಬಹುದು. ಕಾರ್ಮಿಕರ ಕೆಲಸ ಬೇಕಿರುವ ಉದ್ಯಮಗಳಿಗೆ ಉತ್ತೇಜನ ನೀಡಲು ಬಜೆಟ್​ನಲ್ಲಿ ಒತ್ತು ನೀಡುವ ನಿರೀಕ್ಷೆ ಇದೆ. ಜವಳಿ, ಲೆದರ್, ಆಭರಣ, ಕರಕುಶಲ ಸೆಕ್ಟರ್​ಗಳಿಗೆ ನೆರವು ಸಿಗಬಹುದು. ಈ ವಲಯದ ಮಧ್ಯಮ ಗಾತ್ರದ ಉದ್ದಿಮೆಗಳ ಪ್ರಬಲ ಸಮೂಹವನ್ನು ನಿರ್ಮಿಸುವುದು ಸರ್ಕಾರದ ಗುರಿಯಾಗಿದೆ. ಆ ನಿಟ್ಟಿನಲ್ಲಿ ಬಜೆಟ್​ನಲ್ಲಿ ಕ್ರಮ ಕೈಗೊಳ್ಳಬಹುದು. ಎಂಎಸ್​ಎಂಇಗಳಿಗೆ ಇನ್ನಷ್ಟು ಹೊಸ ಸ್ಕೀಮ್​ಗಳ ಘೋಷಣೆ ಆಗಬಹುದು.

ಭಾರತಕ್ಕೆ ಈ ಮೊದಲು ಜನಸಂಖ್ಯೆಯೇ ಆರ್ಥಿಕ ಉನ್ನತಿಗೆ ಅಡ್ಡಗಾಲಾಗಿತ್ತು. ಆರ್ಥಿಕತೆ ವೇಗವಾಗಿ ಬೆಳವಣಿಗೆ ಹೊಂದದೇ ಇರುವುದು, ಮತ್ತು ಉದ್ಯೋಗ ಸೃಷ್ಟಿ ಹೆಚ್ಚು ಆಗದೇ ಇದ್ದದ್ದು ಮಾನವ ಸಂಪನ್ಮೂಲದ ಸರಿಯಾದ ಬಳಕೆಗೆ ಅವಕಾಶ ಇರಲಿಲ್ಲ. ಈಗ ಆರ್ಥಿಕತೆ ಬೃಹತ್ತಾಗಿ ಬೆಳೆಯುತ್ತಿದೆ. ಅತಿವೇಗದ ಆರ್ಥಿಕತೆಗಳಲ್ಲಿ ಭಾರತ ಮುಂಚೂಣಿಯಲ್ಲಿದೆ. ಬೆಳವಣಿಗೆಗೆ ಅವಕಾಶ ಹೆಚ್ಚೆಚ್ಚು ಬೇಕಿದೆ. ಈ ನಿಟ್ಟಿನಲ್ಲಿ ನೀತಿಗಳು ರೂಪಿತವಾಗಬೇಕಾಗಿದೆ.

ಇದನ್ನೂ ಓದಿ: ಹೊಸ ಟ್ಯಾಕ್ಸ್ ರೆಜಿಮ್​ನಲ್ಲಿ ಇನ್ನಷ್ಟು ಡಿಡಕ್ಷನ್ ಕೊಟ್ಟು, ಹಳೆಯ ಟ್ಯಾಕ್ಸ್ ಸಿಸ್ಟಂ ನಿಲ್ಲಿಸಲಾಗುತ್ತಾ?

ಮಾನವ ಸಂಪನ್ಮೂಲ ಹೆಚ್ಚಿದ್ದು, ಅದರ ಸದ್ಬಳಕೆಗೆ ಬೇಕಾದಷ್ಟು ಅವಕಾಶಗಳಿಲ್ಲವಾದರೆ ಜನರ ಆದಾಯ ನಿಂತ ನೀರಾಗಿರುತ್ತದೆ. ಆರ್ಥಿಕತೆಯೂ ನಿಂತ ನೀರಾಗುತ್ತದೆ. ಹೀಗಾಗಿ, ಉದ್ಯೋಗ ಸೃಷ್ಟಿ ಹೆಚ್ಚಿರುವಂತಹ ಸೆಕ್ಟರ್​ಗಳು ಪ್ರಬಲವಾಗುವುದು ಅತ್ಯಗತ್ಯ. ಬಜೆಟ್​ನಲ್ಲಿ ಈ ಕ್ರಮ ತೆಗೆದುಕೊಳ್ಳಲು ಮುಂದಾಗಬಹುದು.

ಕಳೆದ ವರ್ಷದ ಬಜೆಟ್​ನಲ್ಲಿ ಕಾರ್ಮಿಕ ಸಮೃದ್ಧ ಕ್ಷೇತ್ರಗಳಿಗೆ ಹೆಚ್ಚಿನ ಹಣ ಒದಗಿಸಲಾಗಿತ್ತು. ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತರಲಾಗಿದೆ. ಈ ಬಾರಿಯೂ ಬಜೆಟ್ ಗಮನ ಇದೇ ನಿಟ್ಟಿನಲ್ಲಿ ಇರುವ ನಿರೀಕ್ಷೆ ಇದೆ.

ಇದನ್ನೂ ಓದಿ: ಹಲ್ವಾ ಕಾರ್ಯಕ್ರಮದಲ್ಲಿ ನಿರ್ಮಲಾ ಸೀತಾರಾಮನ್ ಭಾಗಿ; ಬಜೆಟ್​ಗೆ ಮುಂಚೆ ನಡೆಯುವ ಇದರ ವಿಶೇಷತೆ ಏನು?

ಎಂಎಸ್​ಎಂಇಗಳಿಗೆ ಇನ್ನಷ್ಟು ಒತ್ತು ಕೊಡುವುದು ಉತ್ತಮ ಮಾರ್ಗ ಎನ್ನುವುದು ತಜ್ಞರ ಅನಿಸಿಕೆ. ಈ ಸಣ್ಣ ಉದ್ದಿಮೆಗಳಿಗೆ ಉತ್ತಮ ಮೂಲಸೌಕರ್ಯ, ಸುಲಭ ಸಾಲ ಲಭ್ಯತೆ ಬಹಳ ಮುಖ್ಯ. ಜಾಗತಿಕ ಸರಬರಾಜು ಸರಪಳಿಯಲ್ಲಿ ಹೆಚ್ಚೆಚ್ಚು ಗುರುತಿಸಿಕೊಳ್ಳಬೇಕಾದರೆ ಸದೃಢವಾದ ಎಂಎಸ್​ಎಂಇಗಳ ಅವಶ್ಯಕತೆ ಇದೆ. ಇವುಗಳಿಂದ ಉದ್ಯೋಗ ಸೃಷ್ಟಿಯೂ ಅಧಿಕ ಇರುತ್ತದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಅಜಿತ್ ಪವಾರ್​​​ ಸಾವಿಗೆ ಈ ಯೋಗ ಕಾರಣ?: ಯಾವ ಕಾರಣಕ್ಕೂ ಈ ಸಮಯದಲ್ಲಿ ವಿಮಾನ ಪ್ರಯಾಣ ಮಾಡಬೇಡಿ – Kannada News | Baramati Air Accident: Ajit Pawar, Viral Prophecy, and Scientific Findings

ಬಾರಾಮತಿಯಲ್ಲಿ ಅಜಿತ್ ಪವಾರ್ ಅವರ ವಿಮಾನ ಪತನಗೊಂಡಿರುವುದು ಕಾಕತಾಳೀಯವೋ ಅಥವಾ ಭವಿಷ್ಯವಾಣಿಯೋ ಎಂಬ ಬಗ್ಗೆ ಪ್ರಶ್ನೆಗಳು ಹುಟ್ಟಿಕೊಂಡಿದೆ. ಇದೀಗ ಜ್ಯೋತಿಷ್ಯರೊಬ್ಬರು ಬಗ್ಗೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್​​ ಆಗಿದೆ. ಮೊದಲು ನಾವು ಸುದ್ದಿಯ ನಿಖರತೆಯನ್ನು ಗಮನಿಸೋಣ, ನಂತರ ಜ್ಯೋತಿಷ್ಯದ ಹಿಂದಿನ ಮನೋವಿಜ್ಞಾನವನ್ನು ಅರ್ಥಮಾಡಿಕೊಳ್ಳೋಣ. ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಮಾನ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಪತನಗೊಂಡಿರುವುದು ಸತ್ಯವಾದ ಮತ್ತು ಅತ್ಯಂತ ದುರದೃಷ್ಟಕರ ಸಂಗತಿ. ಈ ಅಪಘಾತದಲ್ಲಿ ಅಜಿತ್ ಪವಾರ್ ಸೇರಿದಂತೆ ಐವರು ಮೃತಪಟ್ಟಿದ್ದಾರೆ. ಇದೀಗ ಈ ಘಟನೆಗೂ ಹಾಗೂ ಜ್ಯೋತಿಷ್ಯರೊಬ್ಬರು ಹೇಳಿರುವ ಮಾತು ನಿಜವಾಗಿದೆ ಎಂದು ಹೇಳಿದ್ದಾರೆ. ಅವರು ಹೇಳಿರುವ ಪ್ರಕಾರ,ಈ ಅವಧಿಯಲ್ಲಿ ಭಾರಿ ಪ್ರಮಾಣದ ಅಗ್ನಿಕಾಂಡ ಸಂಭವಿಸುವ ಯೋಗವಿದೆ.

ಅಪಘಾತಕ್ಕೀಡಾಗುವ ವಿಮಾನವು ಈಶಾನ್ಯ (North-East) ಭಾಗಕ್ಕೆ ಸಂಬಂಧಿಸಿರಬಹುದು. ದೆಹಲಿಯಿಂದ ಬಿಹಾರ, ಕೊಲ್ಕತ್ತಾ ಅಥವಾ ಮ್ಯಾನ್ಮಾರ್, ಸಿಂಗಾಪುರದಂತಹ ದೇಶಗಳಿಗೆ ಪ್ರಯಾಣಿಸುವವರು ಜಾಗರೂಕರಾಗಿರಬೇಕು ಎಂದು ಹೇಳಿದ್ದಾರೆ. ಈ ಅವಧಿಯಲ್ಲಿ ವಿಮಾನ ಪ್ರಯಾಣವನ್ನು ತಪ್ಪಿಸಿ, ಬದಲಿಗೆ ರೈಲು ಅಥವಾ ಬಸ್ ಮೂಲಕ ಪ್ರಯಾಣಿಸುವುದು ಉತ್ತಮ ಎಂದು ಹೇಳಿದ್ದಾರೆ. ಜ್ಞಾನಿಗಳು ಮತ್ತು ವಿವೇಚನಾವಾದಿಗಳು ಇಂತಹ ಘಟನೆಗಳನ್ನು ಕೇವಲ ಕಾಕತಾಳೀಯ ಎಂದು ಕರೆಯುತ್ತಾರೆ. ಜ್ಯೋತಿಷಿಗಳು ನೀಡುವ ಭವಿಷ್ಯವಾಣಿಗಳು ಸಾಮಾನ್ಯವಾಗಿ ಅಸ್ಪಷ್ಟವಾಗಿರುತ್ತವೆ ಮತ್ತು ಲಕ್ಷಾಂತರ ಘಟನೆಗಳಲ್ಲಿ ಯಾವುದೋ ಒಂದು ನಿಜವಾದಾಗ ಅದನ್ನು ‘ಪವಾಡ’ದಂತೆ ಬಿಂಬಿಸಲಾಗುತ್ತದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಕೇವಲ 20 ದಿನಗಳ ಹಿಂದಷ್ಟೇ ಶಿಷ್ಟಾಚಾರವನ್ನು ಮುರಿದು ಗಾಯಗೊಂಡ ವ್ಯಕ್ತಿಗೆ ಸಹಾಯ ಮಾಡಿದ್ದ ಅಜಿತ್ ಪವಾರ್

ಇಲ್ಲಿದೆ ನೋಡಿ ವಿಡಿಯೋ:

ಅಜಿತ್ ಪವಾರ್ ಅವರ ವಿಮಾನ ಅಪಘಾತವು ತಾಂತ್ರಿಕ ಕಾರಣಗಳಿಂದ ಮತ್ತು ಹವಾಮಾನದ ವೈಪರೀತ್ಯದಿಂದ ನಡೆದಿದೆ ಎಂದು ಡಿಜಿಸಿಎ (DGCA) ಪ್ರಾಥಮಿಕ ವರದಿ ತಿಳಿಸಿದೆ. ಜ್ಯೋತಿಷ್ಯದ ಭವಿಷ್ಯವಾಣಿಯು ವೈರಲ್ ಆಗಿರಬಹುದು, ಆದರೆ ವೈಜ್ಞಾನಿಕವಾಗಿ ಇದಕ್ಕೆ ಯಾವುದೇ ಸಾಕ್ಷ್ಯಾಧಾರಗಳಿಲ್ಲ. ಇನ್ನು ಈ ಜ್ಯೋತಿಷ್ಯ ಹೇಳಿರುವ ಪ್ರಕಾರ, ಮುಂಬರುವ ದಿನಗಳಲ್ಲಿ ಅತ್ಯಂತ ದೊಡ್ಡ ಪ್ರಮಾಣದ ಅಗ್ನಿಕಾಂಡ ಅಥವಾ ಬೆಂಕಿ ಅನಾಹುತಗಳು ಸಂಭವಿಸುವ ಯೋಗವಿದೆ ಎಂದು ಅವರು ತಿಳಿಸಿದ್ದಾರೆ. ಮುಂದಿನ 3 ತಿಂಗಳವರೆಗೆ ವಿಮಾನ ಪ್ರಯಾಣವು ಅಪಾಯಕಾರಿ ಎಂದು ಅವರು ಹೇಳಿದ್ದಾರೆ. ಸಾಧ್ಯವಾದರೆ ವಿಮಾನದ ಟಿಕೆಟ್ ಕ್ಯಾನ್ಸಲ್ ಮಾಡಿ, ರೈಲು ಅಥವಾ ಬಸ್ ಮೂಲಕ ಪ್ರಯಾಣಿಸುವುದು ಉತ್ತಮ ಎಂದು ಅವರು ಸಲಹೆ ನೀಡಿದ್ದಾರೆ.ಈ ಅಪಘಾತದ ಅಪಾಯವು ಮುಖ್ಯವಾಗಿ ಈಶಾನ್ಯ (North-East) ಭಾಗಕ್ಕೆ ಅನ್ವಯಿಸಬಹುದು. ದೆಹಲಿಯಿಂದ ಬಿಹಾರ, ಕೋಲ್ಕತ್ತಾ ಅಥವಾ ಮ್ಯಾನ್ಮಾರ್, ಸಿಂಗಾಪುರ ಮತ್ತು ಮಲೇಷ್ಯಾ ಕಡೆಗೆ ಸಂಚರಿಸುವ ವಿಮಾನಗಳ ಮೇಲೆ ಹೆಚ್ಚಿನ ನಿಗಾ ಇಡಬೇಕು ಎಂದು ಅವರು ಹೇಳಿದ್ದಾರೆ.

ವೈರಲ್​ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:42 pm, Wed, 28 January 26

Source link

T20 World Cup 2026: ಟಿ20 ವಿಶ್ವಕಪ್​ಗೆ ಕೊನೆಗೂ ಅರ್ಹತೆ ಪಡೆದ ಬಾಂಗ್ಲಾದೇಶ – Kannada News | Bangladesh Women Qualify for 2026 T20 World Cup

ಬಾಂಗ್ಲಾದೇಶ ಮಹಿಳಾ ಕ್ರಿಕೆಟ್ ತಂಡವು (Bangladesh Women’s Cricket) 2026 ರ ಐಸಿಸಿ ಮಹಿಳಾ ಟಿ20 ವಿಶ್ವಕಪ್‌ಗೆ (T20 World Cup 2026) ಅರ್ಹತೆ ಪಡೆದಿದೆ. ನೇಪಾಳದ ಮುಲ್ಪಾನಿ ​​ಕ್ರಿಕೆಟ್ ಮೈದಾನದಲ್ಲಿ ನಡೆದ ಸೂಪರ್-ಸಿಕ್ಸ್ ಹಂತದ ಪಂದ್ಯದಲ್ಲಿ ಥೈಲ್ಯಾಂಡ್ ಮಹಿಳಾ ತಂಡವನ್ನು 39 ರನ್‌ಗಳಿಂದ ಸೋಲಿಸುವ ಮೂಲಕ ಬಾಂಗ್ಲಾದೇಶ ತನ್ನ ಸ್ಥಾನವನ್ನು ಭದ್ರಪಡಿಸಿಕೊಂಡಿದೆ. ಬಾಂಗ್ಲಾದೇಶ ಮಹಿಳಾ ಟಿ20 ವಿಶ್ವಕಪ್ ಅರ್ಹತಾ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿ ಒಂದೇ ಒಂದು ಪಂದ್ಯವನ್ನು ಸೋಲದೆ 2026 ರ ಟಿ20 ವಿಶ್ವಕಪ್‌ಗೆ ಸ್ಥಾನ ಪಡೆದುಕೊಂಡಿದೆ. ಗುಂಪು ಹಂತದಲ್ಲಿ ಎಲ್ಲಾ ನಾಲ್ಕು ಪಂದ್ಯಗಳನ್ನು ಗೆದ್ದಿದ್ದ ಬಾಂಗ್ಲಾದೇಶ, ಆ ನಂತರ ಸೂಪರ್-ಸಿಕ್ಸ್ ಸುತ್ತಿನಲ್ಲಿ ಸತತ ಮೂರು ಗೆಲುವುಗಳನ್ನು ಸಾಧಿಸಿ ಟಿ20 ವಿಶ್ವಕಪ್​ಗೆ ಟಿಕೆಟ್ ಪಡೆದುಕೊಂಡಿದೆ.

ಬಾಂಗ್ಲಾದೇಶಕ್ಕೆ ಸುಲಭ ಗೆಲುವು

ಈ ಪಂದ್ಯದಲ್ಲಿ, ಥೈಲ್ಯಾಂಡ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ಆಯ್ಕೆ ಮಾಡಿಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಬಾಂಗ್ಲಾದೇಶ 20 ಓವರ್‌ಗಳಲ್ಲಿ ಎಂಟು ವಿಕೆಟ್‌ಗಳ ನಷ್ಟಕ್ಕೆ 165 ರನ್ ಕಲೆಹಾಕಿತು. ತಂಡದ ಸೋಭಾನಾ ಮೊಸ್ತಾರಿ ಅದ್ಭುತ ಇನ್ನಿಂಗ್ಸ್ ಆಡಿ 42 ಎಸೆತಗಳಲ್ಲಿ ಒಂಬತ್ತು ಬೌಂಡರಿ ಮತ್ತು ಒಂದು ಸಿಕ್ಸರ್ ಸೇರಿದಂತೆ 59 ರನ್‌ ಗಳಿಸಿದರು. ಜುವೈರಿಯಾ ಫರ್ಡೌಸ್ ಕೂಡ 45 ಎಸೆತಗಳಲ್ಲಿ 56 ರನ್ ಗಳಿಸುವ ಮೂಲಕ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇನ್ನಿಂಗ್ಸ್ ಅಂತ್ಯದಲ್ಲಿ, ರಿತು ಮೋನಿ 6 ಎಸೆತಗಳಲ್ಲಿ 15 ರನ್ ಗಳಿಸಿ ತಂಡವನ್ನು ಈ ಸ್ಕೋರ್​ಗೆ ತಲುಪಿಸಿದರು. ಮತ್ತೊಂದೆಡೆ, ತಿಪಾಚಾ ಪುಟ್ಟವಾಂಗ್ ಥೈಲ್ಯಾಂಡ್ ಪರ ಅದ್ಭುತ ಬೌಲಿಂಗ್ ಮಾಡಿ, 4 ಓವರ್‌ಗಳಲ್ಲಿ 22 ರನ್‌ಗಳಿಗೆ 3 ವಿಕೆಟ್ ಪಡೆದರು. ಉಳಿದಂತೆ ಒನ್ನಿಚಾ ಕಮ್ಚೊಂಫು 2 ವಿಕೆಟ್ ಪಡೆದರೆ, ಫನ್ನಿತಾ ಮಾಯಾ ಕೂಡ 1 ವಿಕೆಟ್ ಪಡೆದರು.

ತತ್ತರಿಸಿದ ಥೈಲ್ಯಾಂಡ್

166 ರನ್‌ಗಳ ಗುರಿ ಬೆನ್ನಟ್ಟಿದ ಥೈಲ್ಯಾಂಡ್​ಗೆ ಬಾಂಗ್ಲಾ ಬೌಲರ್​ಗಳು ಆಘಾತ ನೀಡಿದರು. ಮಾರೂಫಾ ಅಖ್ತರ್ ಇನ್ನಿಂಗ್ಸ್‌ನ ಮೊದಲ ಎಸೆತದಲ್ಲೇ ವಿಕೆಟ್ ಉರುಳಿಸಿದರು. ಆದಾಗ್ಯೂ, ನಥಕನ್ ಚಾಂಥಮ್ 46, ನನ್ನಪತ್ ಕೊಂಚರೋಯೆಂಕೈ 29 ಮತ್ತು ನರುಯೆಮೋಲ್ ಚೈವೈ 30 ರನ್ ಬಾರಿಸಿ ಗೆಲುವಿಗಾಗಿ ಹೋರಾಟ ನೀಡಿದರು. ಆದಾಗ್ಯೂ, ಉಳಿದ ಬ್ಯಾಟರ್​ಗಳಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬರದ ಕಾರಣ ಥೈಲ್ಯಾಂಡ್ 20 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 126 ರನ್ ಗಳಿಸಲಷ್ಟೇ ಶಕ್ತವಾಯಿತು.

U19 World Cup 2026: ಭಾರತದ ಕೈಯಲ್ಲಿದೆ ಪಾಕಿಸ್ತಾನದ ಸೆಮಿಫೈನಲ್ ಭವಿಷ್ಯ

ಬಾಂಗ್ಲಾದೇಶ ಪರ ಮರುಫಾ ಅಖ್ತರ್ 3 ವಿಕೆಟ್‌ ಪಡೆದರೆ, ರಿತು ಮೋನಿ ಮತ್ತು ಶೋರ್ನಾ ಅಖ್ತರ್ ತಲಾ 2 ವಿಕೆಟ್ ಪಡೆದರು. ಫಹಿಮಾ ಖಾತುನ್ ಕೂಡ 1 ವಿಕೆಟ್ ಪಡೆಯುವ ಮೂಲಕ ತಂಡದ ಗೆಲುವಿಗೆ ಗಮನಾರ್ಹ ಕೊಡುಗೆ ನೀಡಿದರು. ಬಾಂಗ್ಲಾದೇಶಕ್ಕೆ ಸೂಪರ್ 6 ಸುತ್ತಿನಲ್ಲಿ ಇನ್ನೂ 2 ಪಂದ್ಯಗಳು ಉಳಿದಿವೆಯಾದರೂ ಈಗಾಗಲೇ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆದಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version