‘ಟಾಕ್ಸಿಕ್’ ಸಿನಿಮಾವನ್ನು ಆಸ್ಕರ್ ವಿಜೇತ ಸಿನಿಮಾಕ್ಕೆ ಹೋಲಿಸಿದ ಯಶ್ – Kannada News | Yash compares his Toxic movie to Hollywood’s Sinners movie

ಯಶ್ (Yash) ನಟನೆಯ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಪ್ರಸ್ತುತ ಭಾರತೀಯ ಚಿತ್ರರಂಗದ ಬಹು ನಿರೀಕ್ಷಿತ ಚಿತ್ರವಾಗಿದೆ. ಮಾರ್ಚ್ 19ರಂದೇ ಬಿಡುಗಡೆ ಆಗಬೇಕಿದ್ದ ಈ ಸಿನಿಮಾ, ಅಮೆರಿಕ-ಇರಾನ್ ಯುದ್ಧದ ಕಾರಣದಿಂದಾಗಿ ರಿಲೀಸ್ ಮುಂದೂಡಲ್ಪಟ್ಟಿದೆ. ಇದೀಗ ಸಿನಿಮಾ ಜೂನ್ 4 ರಂದು ರಿಲೀಸ್ ಆಗಲಿದ್ದು, ಸಿನಿಮಾದ ಪ್ರಚಾರವನ್ನು ಯಶ್ ಆರಂಭಿಸಿದಂತಿದ್ದಾರೆ. ಯಶ್ ನಟಿಸಿರುವ ‘ರಾಮಾಯಣ’ ಸಿನಿಮಾದ ಪ್ರಚಾರಕ್ಕಾಗಿ ಲಾಸ್ ಏಂಜಲ್ಸ್​​ನಲ್ಲಿ ನಡೆದ ಸಿನಿಮಾಕಾನ್ 2026ನಲ್ಲಿ ಯಶ್ ಭಾಗಿ ಆಗಿದ್ದರು. ಈ ವೇಳೆ ಅವರು ‘ಟಾಕ್ಸಿಕ್’ ಸಿನಿಮಾದ ಬಗ್ಗೆಯೂ ಮಾತನಾಡಿದ್ದು, ‘ಟಾಕ್ಸಿಕ್’ ಸಿನಿಮಾವನ್ನು ಆಸ್ಕರ್ ವಿಜೇತ ಹಾಲಿವುಡ್ ಸಿನಿಮಾಕ್ಕೆ ಹೋಲಿಕೆ ಮಾಡಿದ್ದಾರೆ.

ಯಶ್ ಅವರು ತಮ್ಮ ‘ಟಾಕ್ಸಿಕ್’ ಸಿನಿಮಾವನ್ನು ಹಾಲಿವುಡ್​​ನ ಹಿಟ್ ಸಿನಿಮಾ ‘ಸಿನ್ನರ್ಸ್’ಗೆ ಹೋಲಿಸಿದ್ದಾರೆ. ಮೈಕಲ್ ಬಿ ಜೋರ್ಡನ್ ದ್ವಿಪಾತ್ರದಲ್ಲಿ ನಟಿಸಿರುವ ಈ ಸಿನಿಮಾ ಬಹಳ ಭಿನ್ನ ಕತೆಯುಳ್ಳ ಹಾರರ್ ಸಿನಿಮಾ ಆಗಿದೆ. ಹೆಸರಿಗೆ ಇದು ಝಾಂಬಿ ಸಿನಿಮಾ ಆಗಿದ್ದರೂ ಸಹ ಸಿನಿಮಾದ ಒಳ ಅರ್ಥವೇ ಬೇರೆಯದ್ದಾಗಿದೆ. ಸಿನಿಮಾ, ಕಪ್ಪುವರ್ಣೀಯರ ಚರಿತ್ರೆ, ಅವರ ಮೇಲಾದ ದಬ್ಬಾಳಿಕೆಗಳ ಬಗ್ಗೆ ಮಾತನಾಡುತ್ತಾರೆ. ಬಹಳ ಒರಿಜಿನಲ್, ಪ್ರತ್ಯೇಕ ಕತೆಯನ್ನು ಈ ಸಿನಿಮಾ ಹೊಂದಿದ್ದು, ಇದೇ ಕಾರಣಕ್ಕೆ ಬಹಳ ಪ್ರಶಂಸೆಗೆ ಪಾತ್ರವಾಗಿದೆ ಮತ್ತು ಆಸ್ಕರ್​​ ಪ್ರಶಸ್ತಿಗಳನ್ನು ಸಹ ಗೆದ್ದಿದೆ.

‘ಸಿನರ್ಸ್’ ಸಿನಿಮಾ ಯಾವ ರೀತಿ ತನ್ನ ಶೈಲಿ ಮತ್ತು ನಿರೂಪಣೆಯಲ್ಲಿ ವಿಶಿಷ್ಟವಾಗಿದೆಯೋ, ಅದೇ ರೀತಿ ‘ಟಾಕ್ಸಿಕ್’ ಕೂಡ ಭಾರತೀಯ ಚಿತ್ರರಂಗಕ್ಕೆ ಒಂದು ಹೊಸ ಮಾದರಿಯ ಅನುಭವ ನೀಡಲಿದೆ ಎಂದು ಯಶ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇದು ಯಾವುದೇ ಸಿನಿಮಾದ ಪ್ರೇರಣೆಯಲ್ಲ ಅಥವಾ ರಿಮೇಕ್ ಅಲ್ಲ. ಬದಲಿಗೆ, ನಿರ್ದೇಶಕಿ ಗೀತು ಮೋಹನ್‌ದಾಸ್ ಅವರು ಸಿದ್ಧಪಡಿಸಿರುವ ಸಂಪೂರ್ಣ ವಿಶಿಷ್ಟವಾದ ಸ್ಕ್ರಿಪ್ಟ್ ಇದಾಗಿದೆ. “ನಾವು ಹೊಸದನ್ನು ಮತ್ತು ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುವಂತಹದ್ದನ್ನು ಮಾಡಲು ಪ್ರಯತ್ನಿಸುತ್ತಿದ್ದೇವೆ” ಎಂದು ಯಶ್ ಹೇಳಿದ್ದಾರೆ.

ಇದನ್ನೂ ಓದಿ:ತಮ್ಮನ್ನು ಬೆಂಬಲಿಸದವರನ್ನು ಅಮೆರಿಕದಲ್ಲೂ ನೆನಪಿಸಿಕೊಂಡ ಯಶ್

‘ಈ ಚಿತ್ರವು ಅಂತರಾಷ್ಟ್ರೀಯ ಗುಣಮಟ್ಟದ ಮೇಕಿಂಗ್ ಮತ್ತು ತಾಂತ್ರಿಕತೆಯನ್ನು ಹೊಂದಿರಲಿದ್ದು, ಕೇವಲ ಭಾರತೀಯ ಪ್ರೇಕ್ಷಕರಿಗಷ್ಟೇ ಅಲ್ಲದೆ ವಿಶ್ವದಾದ್ಯಂತ ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗುವಂತೆ ಸಿದ್ಧವಾಗುತ್ತಿದೆ. ನಮ್ಮದು ಮೇಲ್ನೋಟಕ್ಕೆ ಗ್ಯಾಂಗ್​​ಸ್ಟರ್ ಸಿನಿಮಾ ಆಗಿದ್ದರೂ ಸಹ ಆಳದಲ್ಲಿ ಅದು ಮಾನವೀಯತೆ ಪ್ರತಿಪಾದಿಸುವ ಸಿನಿಮಾ ಆಗಿದೆ. ಗೀತು ಮೋಹನ್​​ದಾಸ್ ಅವರು ವಿಶಿಷ್ಟವಾದ ಸಿನಿಮಾ ಮಾಡಿದ್ದಾರೆ’ ಎಂದಿದ್ದಾರೆ ಯಶ್.

‘ಟಾಕ್ಸಿಕ್’ ಸಿನಿಮಾದ ಟೀಸರ್​ಗಳಲ್ಲಿ ಸಖತ್ ಹಿಂಸಾತ್ಮಕವಾಗಿ ಯಶ್ ಕಾಣಿಸಿಕೊಂಡಿದ್ದಾರೆ. ಟೀಸರ್ ಬಿಡುಗಡೆ ಆದಾಗ ಸಿನಿಮಾದಲ್ಲಿರುವ ಹಿಂಸೆಯ ಬಗ್ಗೆ ಕೆಲವರು ತಕರಾರು ಎತ್ತಿದ್ದರು. ಆದರೆ ತಮ್ಮ ಸಿನಿಮಾದ ಆಶಯ ಮಾನವೀಯತೆ ಎಂದು ಯಶ್ ಹೇಳಿದ್ದಾರೆ. ‘ಟಾಕ್ಸಿಕ್’ ಸಿನಿಮಾನಲ್ಲಿ ಯಶ್ ಅವರೊಂದಿಗೆ ನಯನತಾರಾ, ಕಿಯಾರಾ ಅಡ್ವಾಣಿ, ಹುಮಾ ಖುರೇಷಿ, ರುಕ್ಮಿಣಿ ವಸಂತ್, ತಾರಾ ಸುತಾರಿಯಾ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಟಿಸಿಎಸ್ ಪ್ರಕರಣ: ತನಿಖೆ ತೀವ್ರ, ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಮ್ – Kannada News | TCS Nashik Probe: Conversion Attempts & Sexual Harassment Claims Lead to WFH, NIA

ಮುಂಬೈ, ಏಪ್ರಿಲ್ 16: ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (TCS) ಕಚೇರಿಯಲ್ಲಿ ಕೇಳಿಬಂದಿರುವ ಮತಾಂತರ ಪ್ರಯತ್ನ ಹಾಗೂ ಲೈಂಗಿಕ ಕಿರುಕುಳದ ಗಂಭೀರ ಆರೋಪಗಳು ಈಗ ರಾಷ್ಟ್ರೀಯ ಮಟ್ಟದಲ್ಲಿ ಸಂಚಲನ ಮೂಡಿಸಿವೆ. ಪ್ರಕರಣದ ಹಿನ್ನೆಲೆಯಲ್ಲಿ ತನಿಖೆ ತೀವ್ರಗೊಂಡಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ನೌಕರರಿಗೆ ವರ್ಕ್ ಫ್ರಮ್ ಹೋಮ್ (WFH) ಸೂಚಿಸಲಾಗಿದೆ. ನಾಸಿಕ್ ಪೊಲೀಸರು ತನಿಖೆ ವಿಸ್ತರಿಸುತ್ತಿದ್ದು, ಎನ್​ಐಎ, ಎಟಿಎಸ್ (ಭಯೋತ್ಪಾದನಾ ನಿಗ್ರಹ ದಳ) ಹಾಗೂ ರಾಜ್ಯ ಗುಪ್ತಚರ ಘಟಕಗಳ ಸಹಾಯ ಪಡೆಯುತ್ತಿದ್ದಾರೆ.

ಏನಿದು ಟಿಸಿಎಸ್ ಪ್ರಕರಣ?

ನಾಸಿಕ್‌ನ ಟಿಸಿಎಸ್ ಘಟಕದ ಹಿರಿಯ ಅಧಿಕಾರಿಯೊಬ್ಬರು ಉದ್ಯೋಗಿಗಳಿಗೆ ಮತಾಂತರಕ್ಕೆ ಪ್ರಚೋದನೆ ನೀಡುತ್ತಿದ್ದಾರೆ ಮತ್ತು ಮಹಿಳಾ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬಂದಿವೆ. ಈ ವಿಷಯವು ಸ್ಥಳೀಯವಾಗಿ ಉದ್ವಿಗ್ನತೆಗೆ ಕಾರಣವಾಗಿದ್ದು, ಕಂಪನಿಯ ಆಂತರಿಕ ಶಿಸ್ತು ಸಮಿತಿ ಹಾಗೂ ಬಾಹ್ಯ ಸಂಸ್ಥೆಗಳು ತನಿಖೆಗೆ ಇಳಿದಿವೆ.

ತನಿಖಾ ಸಂಸ್ಥೆಗಳ ಬಿರುಸಿನ ಕ್ರಮ

ಈ ದೂರುಗಳನ್ನು ಗಂಭೀರವಾಗಿ ಪರಿಗಣಿಸಿರುವ ಟಿಸಿಎಸ್ ಆಡಳಿತ ಮಂಡಳಿ, ದೆಹಲಿಯಿಂದ ವಿಶೇಷ ತಂಡವೊಂದನ್ನು ನಾಸಿಕ್‌ಗೆ ಕಳುಹಿಸಿಕೊಟ್ಟಿದೆ. ಈ ತಂಡವು ಈಗಾಗಲೇ ಉದ್ಯೋಗಿಗಳ ಹೇಳಿಕೆಗಳನ್ನು ದಾಖಲಿಸಿಕೊಳ್ಳುತ್ತಿದೆ.

ಇದನ್ನೂ ಓದಿ: ಹಿಜಾಬ್ vs ಕುಂಕುಮ; ವಿವಾದ ಸೃಷ್ಟಿಸಿದ ಲೆನ್ಸ್​ಕಾರ್ಟ್ ಪಾಲಿಸಿ ಡಾಕ್ಯುಮೆಂಟ್; ಆನ್​ಲೈನ್​ನಲ್ಲಿ ತಕರಾರು

ಕಾರ್ಮಿಕ ಉಪ ಆಯುಕ್ತರ ಕಚೇರಿಯ ತಂಡವು ಇತ್ತೀಚೆಗೆ ಕಚೇರಿಯ ಮೇಲೆ ದಾಳಿ ನಡೆಸಿತ್ತು. ದಾಳಿಯ ವೇಳೆ ಕಚೇರಿಯಲ್ಲಿ ಉದ್ಯೋಗಿಗಳು ಇರಲಿಲ್ಲವಾದರೂ, ತಂಡವು ‘ಅಂಗಡಿ ಮತ್ತು ವಾಣಿಜ್ಯ ಸಂಸ್ಥೆಗಳ ಕಾಯ್ದೆ’ಯ ಅಡಿಯಲ್ಲಿ ಕೆಲವು ಪ್ರಮುಖ ದಾಖಲೆಗಳನ್ನು ವಶಪಡಿಸಿಕೊಂಡಿದೆ.

ಪ್ರಕರಣದ ಗಂಭೀರತೆ ಅರಿತು ರಾಷ್ಟ್ರೀಯ ಮಹಿಳಾ ಆಯೋಗದ (NCW) ತಂಡವು ಏಪ್ರಿಲ್ 18 ರಂದು ನಾಸಿಕ್‌ಗೆ ಭೇಟಿ ನೀಡಲಿದ್ದು, ಕಿರುಕುಳಕ್ಕೊಳಗಾದ ಮಹಿಳಾ ಉದ್ಯೋಗಿಗಳೊಂದಿಗೆ ನೇರ ವಿಚಾರಣೆ ನಡೆಸಲಿದೆ.

ಮನೆಯಿಂದ ಕೆಲಸ ಮಾಡುವಂತೆ ಉದ್ಯೋಗಿಗಳಿಗೆ ಸೂಚನೆ

ಕಚೇರಿ ಆವರಣದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಮತ್ತು ನಡೆಯುತ್ತಿರುವ ತನಿಖೆಯ ದೃಷ್ಟಿಯಿಂದ, ಸುಮಾರು 150 ಉದ್ಯೋಗಿಗಳಿಗೆ ಸೋಮವಾರದಿಂದ ಮನೆಯಿಂದಲೇ ಕೆಲಸ ಮಾಡುವಂತೆ (Work From Home) ಸೂಚಿಸಲಾಗಿದೆ. ತನಿಖೆಗೆ ಯಾವುದೇ ಅಡ್ಡಿಯಾಗದಂತೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಐಟಿ ಉದ್ಯೋಗಿಗಳಿಗೆ ಲೈಂಗಿಕ ಕಿರುಕುಳ, ಮತಾಂತರಕ್ಕೆ ಯತ್ನ, ನಾಸಿಕ್​ನ ಟಿಸಿಎಸ್ ಕಚೇರಿಗೆ ಬೀಗ

ಟಿಸಿಎಸ್ ಸ್ಪಷ್ಟನೆ

ಕಂಪನಿಯು ತನ್ನ ಉದ್ಯೋಗಿಗಳ ಸುರಕ್ಷತೆ ಮತ್ತು ನೈತಿಕತೆಗೆ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ತಿಳಿಸಿದೆ. ಆಂತರಿಕ ವಿಚಾರಣೆ ಪ್ರಗತಿಯಲ್ಲಿದ್ದು, ದೋಷ ಸಾಬೀತಾದಲ್ಲಿ ಸಂಬಂಧಪಟ್ಟ ಅಧಿಕಾರಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಕಂಪನಿ ಮೂಲಗಳು ತಿಳಿಸಿವೆ.
ಪ್ರಸ್ತುತ, ವಿವಿಧ ತನಿಖಾ ಸಂಸ್ಥೆಗಳು ಈ ಪ್ರಕರಣದ ಪ್ರತಿಯೊಂದು ಮಗ್ಗುಲನ್ನೂ ಕೂಲಂಕಷವಾಗಿ ಪರಿಶೀಲಿಸುತ್ತಿವೆ.

ಇತರ ಐಟಿ ಕಂಪನಿಗಳ ಮೇಲೂ ಕಣ್ಣು

ಟಿಸಿಎಸ್​ನಲ್ಲಿ ಲೈಂಗಿಕ ಕಿರುಕುಳ ಮತಾಂತರ ಪಿತೂರಿ ಆರೋಪಗಳು ಕೇಳಿಬರುತ್ತಿರುವಂತೆಯೇ ಇತರ ಕಾರ್ಪೊರೇಟ್ ಸಂಸ್ಥೆಗಳತ್ತ ಎಲ್ಲರ ಚಿತ್ತ ನೆಡಲು ಶುರುವಾಗಿದೆ. ಲೆನ್ಸ್​ಕಾರ್ಟ್​ನಲ್ಲಿ ಉದ್ಯೋಗಿಗಳು ಹಿಜಾಬ್ ಹಾಕಬಹುದು, ಆದರೆ, ಸಿಂದೂರ ಇಡುವಂತಿಲ್ಲ ಎನ್ನುವ ನಿಯಮ ಇರುವುದನ್ನು ಕೆಲವರು ಎತ್ತಿ ತೋರಿಸಿದ್ದಾರೆ. ಇನ್ಫೋಸಿಸ್​ನಲ್ಲಿ ಲೈಂಗಿಕ ಕಿರುಕುಳ ಘಟನೆ ನಡೆಯುತ್ತಿರುವುದನ್ನು ಯಾರೋ ಬೊಟ್ಟು ಮಾಡಿದ್ದಾರೆ. ಟೆಕ್ ಮಹೀಂದ್ರ ಕಂಪನಿಯಲ್ಲಿ ರಂಜಾನ್ ಮುಗಿಯುವವರೆಗೂ ಪಾದರಕ್ಷೆಮುಕ್ತ ವಲಯ ನಿರ್ಮಿಸಿದ ಘಟನೆಯನ್ನು ಮತ್ತೊಬ್ಬರು ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

IPL 2026: ರೋಹಿತ್ ಶರ್ಮಾ ಗಾಯಗೊಂಡ ಬೆನ್ನಲ್ಲೇ ಮುಂಬೈ ತಂಡಕ್ಕೆ ಬದಲಿ ಆಟಗಾರನ ಎಂಟ್ರಿ – Kannada News | IPL 2026: Rohit Sharma’s Injury Hits MI Hard; Krish Bhagat Replaces Atharva Ankolekar

ಐಪಿಎಲ್ 2026 (IPL 2026) ರ ಆವೃತ್ತಿಯಲ್ಲಿ ಸರಣಿ ಸೋಲುಗಳಿಂದ ಬಳಲುತ್ತಿರುವ ಮುಂಬೈ ಇಂಡಿಯನ್ಸ್ (Mumbai Indians) ತಂಡಕ್ಕೆ ರೋಹಿತ್ ಶರ್ಮಾ (Rohit Sharma) ಅವರ ಗಾಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಈ ನಡುವೆ ಗಾಯದಿಂದಾಗಿ ಪಂದ್ಯಾವಳಿಯಿಂದ ಹೊರಗುಳಿದ ಯುವ ಆಟಗಾರ ಅಥರ್ವ ಅಂಕೋಲೆಕರ್ ಬದಲಿಗೆ ಕ್ರಿಶ್ ಭಗತ್ ಎಂಬ ಹೊಸ ಹುಡುಗನನ್ನು ಮುಂಬೈ ಫ್ರಾಂಚೈಸಿ ತಂಡಕ್ಕೆ ಸೇರಿಸಿಕೊಂಡಿದೆ. ಮೊಣಕಾಲಿನ ಗಾಯದಿಂದಾಗಿ ಅಂಕೋಲೆಕರ್ ಸೀಸನ್​ ಆರಂಭಕ್ಕೂ ಮುನ್ನವೇ ತಂಡವನ್ನು ತೊರೆಯಬೇಕಾಯಿತು. ಇದೀಗ ಮುಂಬೈ ಆಡಳಿತ ಮಂಡಳಿ ನಾಲ್ಕು ಪಂದ್ಯಗಳ ನಂತರ ಅಧಿಕೃತವಾಗಿ ಬದಲಿ ಆಟಗಾರನನ್ನು ಘೋಷಿಸಿದೆ. ಇಂದು ಪಂಜಾಬ್ ಕಿಂಗ್ಸ್ ವಿರುದ್ಧದ ನಿರ್ಣಾಯಕ ಪಂದ್ಯಕ್ಕೂ ಮುನ್ನ ಈ ಬದಲಾವಣೆ ನಡೆದಿರುವುದು ಗಮನಾರ್ಹ.

ಕ್ರಿಶ್ ಭಗತ್ ಯಾರು?

21 ವರ್ಷದ ಕ್ರಿಶ್ ಭಗತ್ ಆಲ್‌ರೌಂಡರ್ ಆಗಿದ್ದು, ದೇಶೀಯ ಕ್ರಿಕೆಟ್‌ನಲ್ಲಿ ಪಂಜಾಬ್ ರಾಜ್ಯವನ್ನು ಪ್ರತಿನಿಧಿಸುತ್ತಾರೆ. ಕ್ರಿಶ್ ಉತ್ತಮ ವೇಗದ ಬೌಲರ್ ಮಾತ್ರವಲ್ಲ, ಸಮರ್ಥ ಕೆಳ ಕ್ರಮಾಂಕದ ಬ್ಯಾಟರ್ ಕೂಡ. ಅವರು ಕಳೆದ ಎರಡು ವರ್ಷಗಳಿಂದ ಮುಂಬೈ ಇಂಡಿಯನ್ಸ್ ಟ್ರಯಲ್ಸ್‌ನಲ್ಲಿ ಭಾಗವಹಿಸುತ್ತಿದ್ದಾರೆ. ಈ ವರ್ಷ ಡಿವೈ ಪಾಟೀಲ್ ಟಿ20 ಕಪ್‌ನಲ್ಲಿ ರಿಲಯನ್ಸ್ ತಂಡದ ಪರ ಆಡುವ ಮೂಲಕ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿದ್ದರು.

ದಾಖಲೆಗಳು ಹೇಗಿವೆ?

ಕ್ರಿಶ್ ಭಗತ್ ಇಲ್ಲಿಯವರೆಗೆ ಆಡಿರುವ 7 ಪ್ರಥಮ ದರ್ಜೆ ಪಂದ್ಯಗಳಲ್ಲಿ 145 ರನ್ ಗಳಿಸಿದ್ದು 7 ವಿಕೆಟ್‌ಗಳನ್ನು ಪಡೆದಿದ್ದಾರೆ. ಲಿಸ್ಟ್-ಎ ಕ್ರಿಕೆಟ್‌ನಲ್ಲಿ 9 ಪಂದ್ಯಗಳನ್ನು ಆಡಿರುವ ಅವರು 52 ರನ್​ಗಳೊಂದಿಗೆ 9 ವಿಕೆಟ್‌ಗಳನ್ನು ಪಡೆದಿದ್ದಾರೆ.

IPL 2026: ಇದಕ್ಕಿದ್ದಂತೆ ಐಪಿಎಲ್ ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ ಬಿಸಿಸಿಐ

ಮುಂಬೈಗೆ ಇಂದು ನಿರ್ಣಾಯಕ ಪಂದ್ಯ

ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬೈ ಇಂಡಿಯನ್ಸ್ ಕಳೆದ ನಾಲ್ಕು ಪಂದ್ಯಗಳಲ್ಲಿ ಕೇವಲ ಒಂದನ್ನು ಮಾತ್ರ ಗೆದ್ದಿದೆ. ರೋಹಿತ್ ಶರ್ಮಾ ಅವರ ಫಿಟ್ನೆಸ್ ಕೂಡ ತಂಡಕ್ಕೆ ಕಳವಳಕಾರಿಯಾಗಿದೆ. ಈ ಗಾಯದಿಂದಾಗಿ ರೋಹಿತ್ ಪಂಜಾಬ್ ವಿರುದ್ಧ ಆಡಲು ಸಾಧ್ಯವಾಗುವುದಿಲ್ಲ ಎಂದು ಹೇಳಲಾಗುತ್ತಿದೆ. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಮುಂಬೈ ಇಂದು ವಾಂಖೆಡೆ ಕ್ರೀಡಾಂಗಣದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹೊಟ್ಟೆಗೂ ಇಲ್ಲ, ಜುಟ್ಟಿಗೂ ಇಲ್ಲ: ಬಿಸಿಲ ತಾಪಕ್ಕೆ ಕಮರಿದ ಹೂ; ನಷ್ಟದ ಸುಳಿಯಲ್ಲಿ ಬೆಳೆಗಾರರು – Kannada News | Chikkaballapur flower cultivation withers heatwave devastates farmers and blooms

ತಂಪಾದ ಹವಗುಣಕ್ಕೆ ಹೆಸರಾಗಿದ್ದ ಜಿಲ್ಲೆಯಲ್ಲಿ ಈಗ ಉಷ್ಣಾಂಶ ದಾಖಲೆ ಮಟ್ಟಕ್ಕೇರಿದೆ. ಚೆಂಡು ಹೂ, ಗುಲಾಬಿ ಸೇರಿದಂತೆ ವಿವಿಧ ತಳಿಯ ಹೂವುಗಳು ಗಿಡದಲ್ಲೇ ಒಣಗುತ್ತಿದ್ದು, ಬಿಸಿಲಿನ ತಾಪ ಹೂ ಬೆಳೆಗಾರರ ಬದುಕನ್ನು ಕಮರಿಸುತ್ತಿದೆ.

Source link

ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ಬಿರು ಬಿಸಿಲಲ್ಲೂ ಬಿರಿಯಾನಿ, ಸೀರೆಗಾಗಿ ಮುಗ್ಗಿಬಿದ್ದ ಜನ – Kannada News | Free Biryani, Saree Draw Crowd Rush in Tekal Village of Kolar’s Malur

ಕೋಲಾರ, ಏಪ್ರಿಲ್​​ 16: ಮಾಲೂರು ತಾಲೂಕಿನ ಟೇಕಲ್ ಗ್ರಾಮದಲ್ಲಿ ನಡೆದ ನೂತನ ಐಟಿಐ ಕಾಲೇಜು ಕಟ್ಟಡ ಲೋಕಾರ್ಪಣೆ ಹಾಗೂ ಕಟ್ಟಡ ಕಾರ್ಮಿಕರ ವಸತಿ ಶಾಲೆಯ ಗುದ್ದಲಿ ಪೂಜೆ ವೇಳೆ ಚಿಕನ್ ಬಿರಿಯಾನಿ ಮತ್ತು ಸೀರೆಗಾಗಿ ಜನ ಮುಗಿಬಿದ್ದ ಪ್ರಸಂಗ ನಡೆದಿದೆ. ಒಬ್ಬರ ಮೇಲೊಬ್ಬರು ಬಿದ್ದು ನೂಕುನುಗ್ಗಲು ಉಂಟಾದ ಕಾರಣ ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಡಬೇಕಾಯಿತು. ಶಾಸಕ ನಂಜೇಗೌಡ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಶರಣ ಪ್ರಕಾಶ್ ಪಾಟೀಲ್, MLC ಅನಿಲ್ ಕುಮಾರ್ ಭಾಗಿಯಾಗಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪುಣೆ–ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ: ಕಾಮಗಾರಿ ಯಾವಾಗ ಶುರು? ಏನೆಲ್ಲ ಉಪಯೋಗ? – Kannada News | Pune Bengaluru Greenfield Expressway: Final Approval Nears, Halving Travel Time

ಬೆಂಗಳೂರು, ಏಪ್ರಿಲ್​​ 16: ಕೇಂದ್ರ ಸರ್ಕಾರದಿಂದ ಶೀಘ್ರವೇ ಶುಭಸುದ್ದಿ ಸಿಗುವ ಸಾಧ್ಯತೆಯಿದ್ದು, ಪ್ರಸ್ತಾವಿತ ಪುಣೆ–ಬೆಂಗಳೂರು ಗ್ರೀನ್‌ಫೀಲ್ಡ್ ಎಕ್ಸ್‌ಪ್ರೆಸ್‌ವೇ ಯೋಜನೆಗೆ ಅಂತಿಮ ಮುದ್ರೆಗೆ ದಿನಗಣನೆ ಆರಂಭವಾಗಿದೆ. ಕೆಲವಾರಗಳಲ್ಲಿ ಇದರ ಮಾರ್ಗರೇಖೆಗೆ ಕೇಂದ್ರ ಅನುಮತಿ ನೀಡುವ ಸಾಧ್ಯತೆ ಇದೆ. ಭಾರತಮಾಲಾ ಯೋಜನೆಯಡಿ ರೂಪಿಸಲಾದ 25 ಗ್ರೀನ್‌ಫೀಲ್ಡ್ ಕಾರಿಡಾರ್‌ಗಳಲ್ಲಿ ಇದೂ ಒಂದಾಗಿದ್ದು, ಅನುಮೋದನಾ ಪ್ರಕ್ರಿಯೆ ಈಗ ಅಂತಿಮ ಹಂತದಲ್ಲಿದೆ. ಆ ಬಳಿಕ ಭೂಸ್ವಾಧೀನ ಪ್ರಕ್ರಿಯೆ ನಡೆದು, ಕಾಮಗಾರಿಯೂ ಆರಂಭವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುಮಾರು 700 ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್‌ವೇ 6ರಿಂದ 8 ಲೇನ್‌ಗಳನ್ನು ಹೊಂದಿರಲಿದೆ. ಒಟ್ಟು ವೆಚ್ಚವನ್ನು 45 ಸಾವಿರ ಕೋಟಿ ರೂಪಾಯಿಗಳಿಂದ 50 ಸಾವಿರ ಕೋಟಿ ಎಂದು ಅಂದಾಜಿಲಸಲಾಗಿದೆ. ಈ ಮಾರ್ಗವು ಮಹಾರಾಷ್ಟ್ರ ಮತ್ತು ಕರ್ನಾಟಕದ ಪ್ರಮುಖ ಜಿಲ್ಲೆಗಳ ಮೂಲಕ ಸಾಗಲಿದೆ. ಪುಣೆಯಿಂದ ಆರಂಭವಾಗಿ ಸತಾರಾ, ಸಾಂಗ್ಲಿ ಮೂಲಕ ಸಾಗಲಿರುವ ಈ ಮಾರ್ಗ ಬಳಿಕ ಬೆಳಗಾವಿ, ವಿಜಯನಗರ ಮತ್ತು ದಾವಣಗೆರೆ ಮೂಲಕ ಬೆಂಗಳೂರು ತಲುಪಲಿದೆ.

ಇದನ್ನೂ ಓದಿ: ಬೆಂಗಳೂರು–ಚೆನ್ನೈ ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಇನ್ನಷ್ಟು ವಿಳಂಬ? ಕಾರಣ ಇಲ್ಲಿದೆ

ಪುಣೆ–ಬೆಂಗಳೂರು ನಡುವಿನ ರಸ್ತೆ ಪ್ರಯಾಣಕ್ಕೆ ಟ್ರಾಫಿಕ್ ದಟ್ಟಣೆ ಮತ್ತು ಕಿರಿದಾದ ಮಾರ್ಗಗಳ ಕಾರಣದಿಂದ ಹಾಲಿ ಸುಮಾರು 14ರಿಂದ 15 ಗಂಟೆಗಳು ಬೇಕಾಗುತ್ತವೆ. ಆದರೆ ಈ ಎಕ್ಸ್‌ಪ್ರೆಸ್‌ವೇ ಪೂರ್ಣಗೊಂಡ ನಂತರ ಪ್ರಯಾಣ ಸಮಯವು ಸುಮಾರು 7 ಗಂಟೆಗಳವರೆಗೆ ಕಡಿಮೆಯಾಗುವ ನಿರೀಕ್ಷೆ ಇದೆ. ಇದರಿಂದ ಪ್ರಯಾಣಿಕರಿಗೂ, ಸರಕು ಸಾಗಣೆ ಮತ್ತು ಲಾಜಿಸ್ಟಿಕ್ಸ್ ಕ್ಷೇತ್ರಕ್ಕೂ ದೊಡ್ಡ ಅನುಕೂಲವಾಗುವ ನಿರೀಕ್ಷೆ ಇದೆ.

ಈ ಎಕ್ಸ್‌ಪ್ರೆಸ್‌ವೇ ಸಂಪರ್ಕವನ್ನು ಸುಧಾರಿಸುವುದರ ಜೊತೆಗೆ ಆರ್ಥಿಕ ಬೆಳವಣಿಗೆಗೂ ಉತ್ತೇಜನ ನೀಡಲಿದೆ. ಮಾರ್ಗದ ಸುತ್ತಮುತ್ತ ಕೈಗಾರಿಕೆಗಳು, ಗೋದಾಮುಗಳು, ಲಾಜಿಸ್ಟಿಕ್ಸ್ ಪಾರ್ಕ್‌ಗಳು ಮತ್ತು ಇತರೆ ವ್ಯಾಪಾರಿಕ ಚಟುವಟಿಕೆಗಳು ಬೆಳೆಯುವ ಸಾಧ್ಯತೆ ಇದೆ. ವೇಗವಾದ ಪ್ರಯಾಣ ಮತ್ತು ಉತ್ತಮ ರಸ್ತೆ ಮೂಲಸೌಕರ್ಯದೊಂದಿಗೆ ಪುಣೆ–ಬೆಂಗಳೂರು ಎಕ್ಸ್‌ಪ್ರೆಸ್‌ವೇ ಪಶ್ಚಿಮ ಮಹಾರಾಷ್ಟ್ರ ಮತ್ತು ಕರ್ನಾಟಕ ನಡುವಿನ ಪ್ರಮುಖ ಸಂಪರ್ಕ ಮಾರ್ಗವಾಗಿ ರೂಪುಗೊಳ್ಳಲಿದ್ದು, ಪ್ರಯಾಣಿಕರು ಹಾಗೂ ವಾಣಿಜ್ಯ ಚಟುವಟಿಕೆಗಳಿಗೆ ಮಹತ್ವದ ಬೆಂಬಲ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿರೋದಾಗಿ ಬೆಂಗಳೂರು ನೌ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 3:31 pm, Thu, 16 April 26

Source link

ಗಾಂಧಿ ಗ್ರಾಮ ಪುರಸ್ಕೃತ ಪಂಚಾಯತ್​​ ವ್ಯಾಪ್ತಿಯಲ್ಲಿಲ್ಲ ಕನಿಷ್ಠ ಮೂಲಸೌಕರ್ಯ: ಹನಿ ನೀರಿಗೂ ಜನರ ಪರದಾಟ! – Kannada News | Bidar: Gandhi Grama Awarded Jambagi Lacks Basic Infrastructure

ನೀರಿಗಾಗಿ ಮಹಿಳೆಯರ ಪರದಾಟImage Credit source: Tv9 Kannada

ಬೀದರ್​​, ಏಪ್ರಿಲ್​​ 16: ತೆಲಂಗಾಣ ರಾಜ್ಯದ ಜೊತೆ ಗಡಿ ಹಂಚಿಕೊಂಡಿರುವ ಬೀದರ್ ಜಿಲ್ಲೆಯ ಔರಾದಾ ತಾಲೂಕಿನ ಜಂಬಗಿ ಗ್ರಾಮ ಪಂಚಾಯತ್​​ 2025ನೇ ಸಾಲಿನ ಗಾಂಧಿ ಗ್ರಾಮ ಪುರಸ್ಕಾರಕ್ಕೆ ಭಾಜನವಾಗಿದೆ. ಹೀಗಿದ್ದರೂ ಈ ಪಂಚಾಯತ್​​ ವ್ಯಾಪ್ತಿಯಲ್ಲಿ ಮೂಲಸೌಕರ್ಯ ಎಂಬುದು ಮಾತ್ರ ಇನ್ನೂ ಮರೀಚಿಕೆಯಾಗಿಯೇ ಉಳಿದಿದೆ. ಕುಡಿಯುವ ನೀರಿಗೂ ಜನರು ಪರದಾಡಬೇಕಾದ ಸ್ಥಿತಿ ಇದ್ದು, ಸ್ವಚ್ಛತೆ ಎಂಬುದಂತೂ ಬಲು ದೂರದ ಮಾತು. ಜಂಬಗಿ ಸೇರಿದಂತೆ ಐದು ಗ್ರಾಮಗಳು ಈ ಪಂಚಾಯತ್​​ ವ್ಯಾಪ್ತಿಗೆ ಬರುತ್ತವೆ. 13 ತಾಂಡಾಗಳನ್ನು ಹೊಂದಿರುವ ಈ ಪಂಚಾಯತ್​​ಗೆ ಒಟ್ಟು 28 ಜನ ಸದಸ್ಯರಿದ್ದಾರೆ. ಆದರೂ ಜನರ ಪರದಾಟ ಕೇಳೋರು ಮಾತ್ರ ಯಾರೂ ಇಲ್ಲ ಎನ್ನುವ ಸ್ಥಿತಿ ಇಲ್ಲಿಯದ್ದು.

ಆಡಳಿತ ಮತ್ತು ಪಾರದರ್ಶಕತೆ, ಸ್ವಚ್ಛತೆ ಮತ್ತು ಹಸಿರು, ಮೂಲಸೌಕರ್ಯ ಮತ್ತು ಅಭಿವೃದ್ಧಿ, ಆರ್ಥಿಕ ಸ್ವಾವಲಂಬನೆ ಸೇರಿದಂತೆ ಹತ್ತು ಹಲವು ಮಾನದಂಡಗಳ ಆಧಾರದಲ್ಲಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡುತ್ತದೆ. ಆದರೆ ಅದೇ ಪ್ರಶಸ್ತಿಗೆ ಭಾಜನವಾಗಿರುವ ಈ ಪಂಚಾಯತ್​​ನಲ್ಲಿ ಜನ, ಜಾನುವಾರುಗಳು ಹನಿ ನೀರಿಗೂ ಪರದಾಡಬೇಕಿದೆ. ಗ್ರಾಮದಲ್ಲಿ ಜಲ ಜೀವನ ಮಿಷನ್ ಯೋಜನೆಯಡಿ ಮನೆ ಮನೆಗೆ ನಲ್ಲಿಗಳನ್ನ ಅಳವಡಿಸಿದ್ದಾರೆಯಾದರೂ ಅವುಗಳಲ್ಲಿ ಈವರೆಗೆ ಒಂದು ಹನಿ ನೀರು ಬಂದದ್ದನ್ನೂ ಕಂಡವರಿಲ್ಲ. ಹೀಗಾಗಿ ನೀರು ಬೇಕೆಂದರೆ ಕಿಲೋಮೀಟರ್​​ಗಟ್ಟಲೆ ದೂರವನ್ನು ಗ್ರಾಮಸ್ಥರು ಸಾಗಲೇಬೇಕಿದೆ. ಈ ವಿಚಾರದ ಬಗ್ಗೆ ಹತ್ತಾರು ಸಲ ಗ್ರಾಮಸ್ಥರು ಮೆಲಾಧಿಕಾರಿಗೆ ಗಮನಕ್ಕೆ ತಂದರು ಕೂಡ ಯಾವುದೆ ಪ್ರಯೋಜನವಾಗಿಲ್ಲ. ಹೀಗಾಗಿ ಗ್ರಾಮಸ್ಥರು ಬೋರ್​​ವೆಲ್​​ ನೀರನ್ನೇ ಅವಲಂಬಿಸಿ ಬದುಕಬೇಕಿದೆ ಎಂಬುದು ಸ್ಥಳೀಯ ಮಹಿಳೆಯರ ಆಕ್ರೋಶ.

ಇದನ್ನೂ ಓದಿ: ಈರುಳ್ಳಿ ಬೀಜದ ದರ ಅರ್ಧದಷ್ಟು ಇಳಿಕೆ; ರೈತರಲ್ಲಿ ಕಣ್ಣೀರು ತರಿಸಿದ ಈರುಳ್ಳಿ

ಹೀಗೆ ಹತ್ತಾರು ಸಮಸ್ಯೆಗಳಿಂದ ಬಳಲುತ್ತಿರುವ ಜಂಬಗಿ ಗ್ರಾಮ ಪಂಚಾಯತ್​​ಗೆ ಅದ್ಯಾವ ಮಾನದಂಡ ಪರಿಗಣಿಸಿ ಸರ್ಕಾರ ಗಾಂಧಿ ಗ್ರಾಮ ಪುರಸ್ಕಾರ ನೀಡಿದೆಯೋ ಗೊತ್ತಿಲ್ಲ. ಗ್ರಾಮದಲ್ಲಿರುವ ಸಮಸ್ಯೆಗಳನ್ನು ಪಂಚಾಯತ್​​ ಶೀಘ್ರ ಪರಿಹರಿಸಿದರೆ ಅದುವೇ ನಮಗೆ ದೊಡ್ಡ ಸಹಾಯ ಎಂದು ಗ್ರಾಮಸ್ಥರು ಅಲವತ್ತುಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ದರ್ಶನ್​ಗೆ ಮುಖ ತೋರಿಸಲು ಸಾಧ್ಯವಾಗದೇ ಊರು ಬಿಟ್ಟೆ: ಎಲ್ಲವನ್ನೂ ಹೇಳಿದ ಮಲ್ಲಿಕಾರ್ಜುನ್ – Kannada News | Darshan Ex Manager Mallikarjun reveals why he absconded

ನಟ ದರ್ಶನ್ (Darshan) ಅವರಿಗೆ ಮ್ಯಾನೇಜರ್ ಆಗಿದ್ದ ಮಲ್ಲಿಕಾರ್ಜುನ್ ಹಲವು ವರ್ಷಗಳಿಂದ ನಾಪತ್ತೆ ಆಗಿದ್ದರು. ಅವರು ಬದುಕಿಲ್ಲ ಎಂಬ ಅಭಿಪ್ರಾಯ ಕೂಡ ಕೆಲವರಿಗೆ ಇತ್ತು. ಆದರೆ ಈಗ ಮಲ್ಲಿಕಾರ್ಜುನ್ ಅವರು ಏಕಾಏಕಿ ಪ್ರತ್ಯಕ್ಷ ಆಗಿದ್ದಾರೆ. ತಾವು ಊರು ಬಿಟ್ಟು ಹೋಗಿ ಕಣ್ಮರೆ ಆಗಲು ಕಾರಣ ಏನು ಎಂಬುದನ್ನು ಅವರು ಈಗ ವಿವರಿಸಿದ್ದಾರೆ. ‘ತುಂಬಾ ಸಾಲ ಮಾಡಿಕೊಂಡಿದ್ದೆ. ಹಲವಾರು ಬಿಸ್ನೆಸ್​ನಲ್ಲಿ ದುಡ್ಡು ಹಾಕಿ ಕಳೆದುಕೊಂಡಿದ್ದೆ. ತುಂಬ ಸಾಲ ಆಗಿತ್ತು. ಅದನ್ನು ಎದುರಿಸಲು ಸಾಧ್ಯವಾಗದೇ ನಾನು ಊರು ಬಿಡಬೇಕಾಯಿತು. ಇದೆಲ್ಲವೂ ದರ್ಶನ್ ಅವರಿಗೆ ಗೊತ್ತಾದರೆ ಅವರು ಬೇಜಾರು ಮಾಡಿಕೊಳ್ಳುತ್ತಾರೆ ಅಂತ ಅನಿಸಿತು. ಅದಾಗಲೇ ಅವರು ನನಗೆ ಸಹಾಯ ಮಾಡಿದ್ದರು. ಪದೇ ಪದೇ ಅವರನ್ನೇ ಕೇಳೋದು ಸರಿ ಇರಲ್ಲ. ಅವರಿಗೆ ಹೇಗೆ ಮುಖ ತೋರಿಸೋದು ಅಂತ ಮುಜುಗರ ಆಗಿತ್ತು. ಆ ಸಂದರ್ಭದಲ್ಲಿ ಅನಿವಾರ್ಯವಾಗಿ ಊರು ಬಿಡಬೇಕಾದ ಪರಿಸ್ಥಿತಿ ಬಂತು’ ಎಂದು ಮಲ್ಲಿಕಾರ್ಜುನ್ (Darshan Ex Manager Mallikarjun) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Airport Jobs: ವಿಮಾನ ನಿಲ್ದಾಣದಲ್ಲಿ 2,442 ಹುದ್ದೆಗಳಿಗೆ ಭರ್ಜರಿ ನೇಮಕಾತಿ; 10th, ಪಿಯುಸಿ ಪಾಸ್​​ ಆಗಿದ್ರೆ ಸಾಕು – Kannada News | Jewar Airport Jobs: 2442 Freshers Vacancies for Ground Staff and Cargo | No Diploma Needed

ನೋಯ್ಡಾದ ಜೇವರ್‌ನಲ್ಲಿ ನಿರ್ಮಾಣವಾಗುತ್ತಿರುವ ಅಂತರಾಷ್ಟ್ರೀಯ ವಿಮಾನ ನಿಲ್ದಾಣವು ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಸಿಹಿಸುದ್ದಿ ನೀಡಿದೆ. ವಿಮಾನ ನಿಲ್ದಾಣದ ಕಾರ್ಯಾಚರಣೆ ಶೀಘ್ರದಲ್ಲೇ ಆರಂಭವಾಗಲಿರುವ ಹಿನ್ನೆಲೆಯಲ್ಲಿ, ಒಟ್ಟು 2,442 ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಹೊರಡಿಸಲಾಗಿದೆ. ಈ ನೇಮಕಾತಿಯಲ್ಲಿ ಗ್ರೌಂಡ್ ಸ್ಟಾಫ್, ಕಾರ್ಗೋ ಎಕ್ಸಿಕ್ಯೂಟಿವ್ ಮತ್ತು ಲೋಡರ್ ಹುದ್ದೆಗಳಿದ್ದು, ವಿಶೇಷವೆಂದರೆ ಯಾವುದೇ ಏವಿಯೇಷನ್ ಡಿಪ್ಲೊಮಾ ಅಥವಾ ವಿಶೇಷ ತರಬೇತಿಯ ಅಗತ್ಯವಿಲ್ಲದೆ ನೇರವಾಗಿ ಅರ್ಜಿ ಸಲ್ಲಿಸಬಹುದಾಗಿದೆ.

ಗ್ರೌಂಡ್ ಸ್ಟಾಫ್ ಮತ್ತು ಕಾರ್ಗೋ ಎಕ್ಸಿಕ್ಯೂಟಿವ್ ಹುದ್ದೆಗಳಿಗೆ 12ನೇ ತರಗತಿ ಪಾಸಾದ 18 ರಿಂದ 30 ವರ್ಷದೊಳಗಿನ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅವಕಾಶವಿದ್ದು, ಇವರಿಗೆ ಮಾಸಿಕ 25,000 ರಿಂದ 35,000ರೂ. ವರೆಗೆ ವೇತನ ಸಿಗಲಿದೆ. ಇನ್ನು ಲೋಡರ್ ಹುದ್ದೆಗೆ 10ನೇ ತರಗತಿ ಪಾಸಾದ 20 ರಿಂದ 40 ವರ್ಷದೊಳಗಿನ ಪುರುಷರು ಮಾತ್ರ ಅರ್ಜಿ ಸಲ್ಲಿಸಬಹುದಾಗಿದ್ದು, 15,000 ರಿಂದ 25,000ರೂ. ವರೆಗೆ ವೇತನ ನಿಗದಿಪಡಿಸಲಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಆಸಕ್ತ ಅಭ್ಯರ್ಥಿಗಳು ಜೂನ್ 15, 2026 ರೊಳಗೆ ಅಧಿಕೃತ ವೆಬ್‌ಸೈಟ್ www.niasjewar.com ಮೂಲಕ ತಮ್ಮ ಇಮೇಲ್ ಮತ್ತು ಮೊಬೈಲ್ ಸಂಖ್ಯೆಯನ್ನು ಬಳಸಿ ಆನ್‌ಲೈನ್‌ನಲ್ಲಿ ನೋಂದಾಯಿಸಿಕೊಳ್ಳಬಹುದು. ಅರ್ಜಿಯ ಜೊತೆಗೆ ಅಗತ್ಯ ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡುವುದು ಕಡ್ಡಾಯವಾಗಿದೆ. ವಿಮಾನಯಾನ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ಆರಂಭಿಸಲು ಬಯಸುವ ಹೊಸಬರಿಗೆ (Freshers) ಇದೊಂದು ಅತ್ಯುತ್ತಮ ವೇದಿಕೆಯಾಗಿದ್ದು, ಕೊನೆಯ ದಿನಾಂಕದ ಮುಂಚಿತವಾಗಿ ಅರ್ಜಿ ಸಲ್ಲಿಸಿ ಈ ಸುವರ್ಣಾವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಸೂಚಿಸಲಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್​​ಗೆ ಬೆಂಕಿ, ರಸ್ತೆ ಪಕ್ಕದ ಅರಣ್ಯಕ್ಕೂ ಅವರಿಸಿದ ಜ್ವಾಲೆ – Kannada News | Moving tanker fire reaches Road side Forest In Ankola

ಕಾರವಾರ, ಏಪ್ರಿಲ್ 16): ಪೆಟ್ರೋಲ್ ಸಾಗಿಸುತ್ತಿದ್ದ ಟ್ಯಾಂಕರ್​​ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿರುವ ಘಟನೆ ಉತ್ತರ ಕನ್ನಡ (Uttara Kannada) ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಾಬಾಗಿಲು ಬಳಿಯ ರಾಷ್ಟ್ರೀಯ ಹೆದ್ದಾರಿ 52 ರಲ್ಲಿ ನಡೆದಿದೆ. ಮಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಪೆಟ್ರೋಲ್ ತುಂಬಿದ್ದ ಟ್ಯಾಂಕರ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದೆ. ಮೊದಲೇ ಪೆಟ್ರೋಲ್ ಇದ್ದಿದ್ದರಿಂದ ನೋಡ ನೋಡುತ್ತಿದ್ದಂತೇ ಟ್ಯಾಂಕರ್ ಹೊತ್ತಿ ಉರಿದಿದೆ. ಅಲ್ಲದೇ ಬೆಂಕಿಯ ಜ್ವಾಲೆ ರಸ್ತೆ ಪಕ್ಕದ ಅರಣ್ಯಕ್ಕೂ ವ್ಯಾಪಿಸಿದ್ದು, ಬೆಂಕಿ ನಂದಿಸಲು ಆಗ್ನಿಶಾಮಕ ಸಿಬ್ಬಂದಿ ಹರಸಾಹಸಪಡುತ್ತಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version