Headlines

Asha Bhosle Funeral: ಸರ್ಕಾರಿ ಗೌರವದೊಂದಿಗೆ ಗಾಯಕಿ ಆಶಾ ಭೋಸ್ಲೆ ಅಂತ್ಯಕ್ರಿಯೆ

ಅನಾರೋಗ್ಯದಿಂದ ನಿಧನರಾದ ಖ್ಯಾತ ಹಿನ್ನೆಲೆ ಗಾಯಕಿ ಆಶಾ ಭೋಸ್ಲೆ ಅವರ ಅಂತ್ಯಕ್ರಿಯೆ (Asha Bhosle Funeral) ಇಂದು (ಏಪ್ರಿಲ್ 13) ನಡೆದಿದೆ. ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ಮಾಡಲಾಗಿದೆ. ಅಪಾರ ಸಂಖ್ಯೆಯ ಅಭಿಮಾನಿಗಳು ಆಶಾ ಭೋಸ್ಲೆ ಅವರ ಅಂತಿಮ ದರ್ಶನ ಪಡೆದರು. ಕುಟುಂಬದವರು, ಆಪ್ತರು ಮತ್ತು ಚಿತ್ರರಂಗದ ಅನೇಕರು ಬಂದು ಅಂತಿಮ ನಮನ ಸಲ್ಲಿಸಿದರು. ಸಾವಿರಾರು ಗೀತೆಗಳ ಮೂಲಕ ಎಲ್ಲರ ಮನ ಗೆದ್ದಿದ್ದ ಆಶಾ ಭೋಸ್ಲೆ (Asha Bhosle) ಅವರು ಈಗ ಪಂಚಭೂತಗಳಲ್ಲಿ…

Read More

ಭುಗಿಲೆದ್ದ ಮಂತ್ರಾಲಯ ರಾಯರ ಜಪದ ಕಟ್ಟೆ ವಿವಾದ: ಸರ್ವೆ ವೇಳೆ ಹೈಡ್ರಾಮಾ, ರೈತರು ಪೊಲೀಸ್ ವಶಕ್ಕೆ

ರಾಯಚೂರು, ಏಪ್ರಿಲ್​ 13: ಮಂತ್ರಾಲಯ ರಾಯರು (Mantralaya Rayaru) ತಪಸ್ಸು ಮಾಡಿದ್ದ ಜಪದ ಕಟ್ಟೆ ಸಮೀಪವಿರುವ ಜಮೀನಿನ ವಿವಾದ (Land Dispute) ಇದೀಗ ತಾರಕ್ಕೇರಿದೆ. ಸರ್ಕಾರದ ಆದೇಶದನ್ವಯ ಇಂದು ಸರ್ವೆ ಕಾರ್ಯ ನಡೆಯುತ್ತಿದ್ದ ವೇಳೆ ಕೆಲ ಸ್ಥಳೀಯರು ವಿರೋಧ ವ್ಯಕ್ತಪಡಿಸಿದ್ದಾರೆ. ಈ ವೇಳೆ ತಳ್ಳಾಟ-ನೂಕಾಟ ಉಂಟಾಗಿದ್ದು, ದೊಡ್ಡ ಹೈಡ್ರಾಮಾವೇ ನಡೆದು ಹೋಗಿದೆ‌‌. ಏನಿದು ಪ್ರಕರಣ? ರಾಯಚೂರು ತಾಲ್ಲೂಕಿನ ಬಿಚ್ಚಾಲಿ ಗ್ರಾಮದಲ್ಲಿ ಮಂತ್ರಾಲಯ ರಾಯರ 13 ವರ್ಷಗಳ ಕಾಲ ತಪಸ್ಸು ಮಾಡಿದ್ದಾರೆ. ರಾಯರ ತಪಸ್ಸು ಮಾಡಿದ ಜಪದ ಕಟ್ಟೆ…

Read More

IPL 2026: ಅಂಪೈರ್​ಗೆ ಬಾಲ್ ನೀಡದೆ ಸತಾಯಿಸಿದ ಟಿಮ್ ಡೇವಿಡ್​ಗೆ ಭಾರಿ ದಂಡ

ಐಪಿಎಲ್ 2026 (IPL 2026) ರ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ (MI vs RCB) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಆರ್​ಸಿಬಿ ಇನ್ನಿಂಗ್ಸ್ ವೇಳೆ ಕ್ರೀಸ್​ನಲ್ಲಿದ್ದ ಟಿಮ್ ಡೇವಿಡ್ (Tim David), ಐಪಿಎಲ್ ನಿಯಮವನ್ನು ಉಲ್ಲಂಘಿಸಿದ ಕೃತ್ಯ ಎಸಗಿದರು. ಇದೀಗ ಅದಕ್ಕೆ ಪ್ರತಿಫಲವಾಗಿ ಟಿಮ್ ಡೇವಿಡ್​ಗೆ ಪಂದ್ಯ ಶುಲ್ಕ ಶೇಕಡಾ 25% ರಷ್ಟು ಮೊತ್ತವನ್ನು ದಂಡವಾಗಿ ವಿಧಿಸಲಾಗಿದೆ. ಟಿಮ್ ಡೇವಿಡ್ ಐಪಿಎಲ್ ನೀತಿ ಸಂಹಿತೆಯ ಸೆಕ್ಷನ್ 2.4 ಅನ್ನು ಉಲ್ಲಂಘಿಸಿದ್ದಾರೆ. ಈ ಸೆಕ್ಷನ್…

Read More

ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ತಾತ್ಕಾಲಿಕ ರಿಲೀಫ್

ಬೆಂಗಳೂರು, ಏಪ್ರಿಲ್​​ 13: ಮೈಸೂರು ಡಿಸಿಯಾಗಿದ್ದಾಗ ಬಟ್ಟೆ ಬ್ಯಾಗ್ ಖರೀದಿಯಲ್ಲಿ ಅಕ್ರಮ ಆರೋಪ ಸಂಬಂಧ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಗೆ ಮಧ್ಯಂತರ ರಿಲೀಫ್ ಸಿಕ್ಕಿದೆ. ಸೆಕ್ಷನ್ 17ಎ ಅಡಿ ತನಿಖೆಗೆ ಅನುಮತಿ ನೀಡಲು ಅಧೀನ ಕಾರ್ಯದರ್ಶಿ, ಸಿಬ್ಬಂದಿ, ಆಡಳಿತ ಸುಧಾರಣಾ ಇಲಾಖೆಗೆ ನಿರ್ದೇಶಿಸಿದ್ದ ಹೈಕೋರ್ಟ್​​ನ ಆದೇಶಕ್ಕೆ ಸುಪ್ರೀಂಕೋರ್ಟ್‌ ಮಧ್ಯಂತರ ತಡೆ ನೀಡಿದೆ. ಹೈಕೋರ್ಟ್ ಆದೇಶ ಪ್ರಶ್ನಿಸಿ ರೋಹಿಣಿ ಸಿಂಧೂರಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದು, ಈ ಕುರಿತು ವಿಚಾರಣೆ ನಡೆಸಿರುವ ಸರ್ವೋಚ್ಚ ನ್ಯಾಯಾಲಯ ಮಹತ್ವದ ಆದೇಶ ನೀಡಿದೆ. ರೋಹಿಣಿ ಸಿಂಧೂರಿ…

Read More

ಪತ್ನಿ ಗರ್ಭಿಣಿಯಾಗುತ್ತಿದ್ದಂತೆ ಪತಿಯ ರಂಗೀನಾಟ: ಇಂಜಿನೀಯರ್‌ ಅನ್ಕೊಂಡೇ ಹೆಣ್ಮಕ್ಕಳಿಗೆ ಖೆಡ್ಡಾ

ಬೆಂಗಳೂರು, (ಏಪ್ರಿಲ್ 13): ಮದುವೆಯನ್ನೇ ಒಂದು ವ್ಯವಹಾರ ಮಾಡಿಕೊಂಡಿದ್ದ ಕಾಮುಕ ಇಂಜಿನಿಯರ್ ಒಬ್ಬನ ಸರಣಿ ವಂಚನೆಗಳು ಬಟಾಬಯಲಾಗಿವೆ.. ಇಬ್ಬರು ಯುವತಿಯರನ್ನು ಮದುವೆಯಾಗಿ, ಮತ್ತೊಬ್ಬಳ ಜೊತೆ ನಿಶ್ಚಿತಾರ್ಥ ಮಾಡಿಕೊಂಡು ಅಮಾಯಕ ಹೆಣ್ಣುಮಕ್ಕಳ ಜೀವನದ ಜೊತೆ ಆಟವಾಡುತ್ತಿದ್ದ ರವಿಗೆ ಧರ್ಮದೇಟು ಬಿದ್ದಿವೆ. ತುಮಕೂರಿನ ಚಿಕ್ಕನಾಯಕನಹಳ್ಳಿ ಮೂಲದ ರವಿ, ಬೆಂಗಳೂರಿನ ಜಿಗಣಿ ಬಳಿಯ ಖಾಸಗಿ ಕಂಪನಿಯಲ್ಲಿ ಇಂಜಿನಿಯರ್ ಆಗಿದ್ದು, 2024ರ ಜನವರಿಯಲ್ಲಿ ಒಂದು ಮದುವೆಯಾಗಿದೆ. ಬಳಿಕ ಆಕೆ ಗರ್ಭಿಣಿಯಾದಾಗ ರವಿ ತನ್ನ ಆಟ ಶುರು ಮಾಡಿಕೊಂಡಿದ್ದ. ಮೊದಲ ಪತ್ನಿ ಗರ್ಭಿಣಿ ಆಗಿರುವಾಗ್ಲೇ…

Read More

ಏನ್ ಅದೃಷ್ಟ ನೋಡಿ ಈ 6 ರಾಶಿಯವರದ್ದು!: ಊಹೆಗೂ ಮೀರಿದ ಜವಾಬ್ದಾರಿ, ಜಯ

ಗ್ರಹಗಳ ಪ್ರಭಾವ ಮತ್ತು ರಾಜಕೀಯ ಸಮೀಕರಣ ​ಪ್ರಸ್ತುತ ಆಕಾಶಮಂಡಲದಲ್ಲಿ ಗುರುವು ಮಿಥುನ ರಾಶಿಯಲ್ಲಿ ಸಂಚರಿಸುತ್ತಿರುವುದು ಮತ್ತು ಶನಿಯು ಮೀನ ರಾಶಿಯಲ್ಲಿ ಇರುವುದು ರಾಜ್ಯದ ಆಡಳಿತಾರೂಢರಿಗೆ ಸವಾಲು ಮತ್ತು ಅವಕಾಶ ಎರಡನ್ನೂ ಒಟ್ಟಿಗೆ ತರುತ್ತಿದೆ. ಗುರುವಿನ ಪ್ರಭಾವದಿಂದಾಗಿ ಹೊಸ ಯೋಜನೆಗಳ ಘೋಷಣೆಯಾಗಬಹುದು, ಆದರೆ ಶನಿಯ ಪ್ರಭಾವದಿಂದಾಗಿ ಆ ಯೋಜನೆಗಳ ಅನುಷ್ಠಾನದಲ್ಲಿ ವಿರೋಧ ಪಕ್ಷಗಳಿಂದ ತೀವ್ರ ಟೀಕೆ ವ್ಯಕ್ತವಾಗಲಿದೆ. ​ಗೆಲುವು ಪಡೆಯುವ ರಾಶಿಗಳು: ​ಮೇಷ : ಸೂರ್ಯನು ನಿಮ್ಮ ರಾಶಿಯಲ್ಲಿ ಉಚ್ಚ ಸ್ಥಾನದಲ್ಲಿರುವುದರಿಂದ, ಈ ರಾಶಿಯ ನಾಯಕರಿಗೆ ಸಿಂಹ ಬಲ…

Read More

ವಚನಾನಂದ ಸ್ವಾಮೀಜಿ ಉಚ್ಚಾಟನೆ ಮಠದಲ್ಲಿ ತಳ್ಳಾಟ, ನೂಕಾಟ: ಶ್ರೀಗಳಿಗೆ ಗಾಯ

ದಾವಣಗೆರೆ, (ಏಪ್ರಿಲ್ 13): ಪಂಚಮಸಾಲಿ ಮಠದಲ್ಲಿ ಲೆಕ್ಕ ಕೊಡಿ ಅಭಿಯಾನ ಮುಂದುವರೆದಿದೆ. ಈ ಸಂಬಂಧ ಇದೀಗ ಪೀಠದಿಂದ ವಚನಾನಂದ ಸ್ವಾಮೀಜಿಗಳನ್ನ (vachanananda swamiji) ಉಚ್ಛಾಟನೆ ಮಾಡಲಾಗಿದೆ. ಇದರಿಂದ ದಾವಣಗೆರೆ (Davanagere) ಜಿಲ್ಲೆಯ ಹರಿಹರದ ಪಂಚಮಸಾಲಿ ಗುರುಪೀಠ ಈಗ ಅಕ್ಷರಶಃ ರಣಾಂಗಣವಾಗಿದೆ. ಮಠದ ಟ್ರಸ್ಟಿಗಳಿಗೆ ‘ಲೆಕ್ಕ ಕೊಡಿ ಎಂದು ಭಕ್ತರು ನಡೆಸುತ್ತಿರುವ ಅಭಿಯಾನ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಟ್ರಸ್ಟಿಗಳಿಗೆ ಚಪ್ಪಲಿ ತೋರಿಸಿ ಆಕ್ರೋಶ ಹೊರಹಾಕಿದ್ದಾರೆ. ಈ ವೇಳೆ ಮಠದ ಆವರಣದಲ್ಲಿ ತಳ್ಳಾಟ, ನೂಕಾಟ ಶುರುವಾಗಿದ್ದು, ಈ ಸಂದರ್ಭದಲ್ಲಿ ವಚನಾನಂದ…

Read More

ಬಿಸಿಲಿಂದ ದೂರವಿರಿ; ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಉಷ್ಣ ಅಲೆಯ ಎಚ್ಚರಿಕೆ

ನವದೆಹಲಿ, ಏಪ್ರಿಲ್ 13: ಭಾರತದಾದ್ಯಂತ ಉಷ್ಣ ಅಲೆಗಳ (Heatwave) ಪರಿಸ್ಥಿತಿ ತೀವ್ರಗೊಳ್ಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದೆ. ಭಾರತದಾದ್ಯಂತ ತಾಪಮಾನವು ಏರುತ್ತಲೇ ಇರುವುದರಿಂದ ಈ ವಾರ ಶಾಖ ಹೆಚ್ಚಾಗುವ ಸಾಧ್ಯತೆಯಿದೆ. ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಹೆಚ್ಚಿನ ಪ್ರದೇಶಗಳಲ್ಲಿ ಬೇಸಿಗೆಯ ಶಾಖ ಹೆಚ್ಚಾಗಲಿದೆ. ಈ ಬಗ್ಗೆ ಇಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಎಚ್ಚರಿಕೆ ನೀಡಿದ್ದು, ಏಪ್ರಿಲ್ 17ರ ವೇಳೆಗೆ ದೆಹಲಿಯು ಗರಿಷ್ಠ 41 ಡಿಗ್ರಿ ಸೆಲ್ಸಿಯಸ್ ಅನ್ನು ಮುಟ್ಟಲಿದೆ. ಏಪ್ರಿಲ್…

Read More

ಅರಹಳ್ಳಿ ಕೆರೆಯಲ್ಲಿ ದುರಂತ: ಮಕ್ಕಳನ್ನು ರಕ್ಷಿಸಲು ಹೋಗಿ ಜೀವ ತೆತ್ತ ಮಹಿಳೆಯರು

ಕೋಲಾರ, ಏಪ್ರಿಲ್​ 13: ಕೆರೆಗೆ ಬಿದ್ದಿದ್ದ ಮಕ್ಕಳನ್ನ ರಕ್ಷಿಸಲು ಹೋಗಿ ಇಬ್ಬರು ಮಹಿಳೆಯರು ನೀರುಪಾಲಾದ (death) ಘಟನೆ ಕೋಲಾರದ ಅರಹಳ್ಳಿ ಕೆರೆಯಲ್ಲಿ ನಡೆದಿದೆ. ಮೊಹಮದಿ(25) ಮತ್ತು ಸಲ್ಮಾ (26) ನೀರುಪಾಲಾದ ಮಹಿಳೆಯರು. ಮೃತ ಮಹಿಳೆಯರು ನಿಸಾರ್ ನಗರದ ನಿವಾಸಿಗಳು. ಸದ್ಯ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಸ್ಥಳಕ್ಕೆ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ. ನಡೆದಿದ್ದೇನು? ಕೋಲಾರದ ಅರಹಳ್ಳಿ ಕೆರೆಗೆ ಮಹಿಳೆಯರು ಸೇರಿದಂತೆ ಮಕ್ಕಳು…

Read More

‘ಜನ ನಾಯಗನ್’ ರೀತಿ ‘ಕೆವಿಎನ್ ಪ್ರೊಡಕ್ಷನ್ಸ್’ ನಿರ್ಮಾಣದ ‘ಕೆಡಿ’ ಸಿನಿಮಾಗೂ ಸೆನ್ಸಾರ್ ಸಮಸ್ಯೆ

‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ನಿರ್ಮಾಣ ಮಾಡಿರುವ ‘ಜನ ನಾಯಗನ್’ ಸಿನಿಮಾಗೆ ಸೆನ್ಸಾರ್ ಸಮಸ್ಯೆ ಆಗಿರುವುದು ಗೊತ್ತೇ ಇದೆ. ಈಗ ಅದೇ ನಿರ್ಮಾಣ ಸಂಸ್ಥೆಯ ‘ಕೆಡಿ’ ಸಿನಿಮಾ (KD Movie) ಕೂಡ ಇದೇ ರೀತಿಯ ಸಮಸ್ಯೆಗೆ ಸಿಲುಕಿದೆ. ಈ ಸಿನಿಮಾದಲ್ಲಿ ಧ್ರುವ ಸರ್ಜಾ ನಟಿಸಿದ್ದು, ಜೋಗಿ ಪ್ರೇಮ್ ಅವರು ನಿರ್ದೇಶನ ಮಾಡಿದ್ದಾರೆ. ಚಿತ್ರದ ಬಿಡುಗಡೆ ದಿನಾಂಕ ಹತ್ತಿರ ಆಗುತ್ತಿದ್ದಂತೆಯೇ ಹೊಸ ಸಂಕಷ್ಟ ಶುರುವಾಗಿದೆ. ಚಿತ್ರತಂಡದ ಗಮನಕ್ಕೂ ಬಾರದಂತೆ ಈ ಸಿನಿಮಾವನ್ನು ಸೆನ್ಸಾರ್ (Censor) ಮಂಡಳಿಯ ರಿವೈಸಿಂಗ್ ಕಮಿಟಿಗೆ…

Read More