ಪುರುಷರನ್ನು ನಾಯಿಗೆ ಹೋಲಿಸಿದರೇ ರಮ್ಯಾ: ನಟಿ ಹೇಳಿದ್ದೇನು? – Kannada News | Ramya on Stray Dogs and SC Ruling: Did She Compared Men to Dogs Full Details

ರಮ್ಯಾ (Ramya), ಕನ್ನಡ ಚಿತ್ರರಂಗದ ಸ್ಟಾರ್ ನಟಿ ಎನಿಸಿಕೊಂಡಿದ್ದವರು. ರಾಜಕೀಯಕ್ಕೆ ಸಿನಿಮಾಗಳಿಗೆ ವಿರಾಮ ಇರಿಸಿದ ರಮ್ಯಾ, ಈಗ ಸಕ್ರಿಯ ರಾಜಕೀಯದಿಂದಲೂ ದೂರಾಗಿದ್ದಾರೆ. ಸಿನಿಮಾಗಳಿಗೆ ಮರು ಪ್ರವೇಶ ಮಾಡುವ ಪ್ರಯತ್ನದಲ್ಲಿ ಸಿನಿಮಾ ನಿರ್ಮಾಣ ಸಂಸ್ಥೆ ಸಹ ಪ್ರಾರಂಭಿಸಿದ್ದಾರೆ. ಸಕ್ರಿಯ ರಾಜಕಾರಣಕ್ಕೆ ದೂರಾದರೂ ಸಹ ಸಾಮಾಜಿಕ ವಿಷಯಗಳಿಗೆ ಪ್ರತಿಕ್ರಿಯೆಗಳನ್ನು ನೀಡುತ್ತಾ ಸಕ್ರಿಯವಾಗಿದ್ದಾರೆ. ಪ್ರಾಣಿ ಪ್ರಿಯೆ ಆಗಿರುವ ರಮ್ಯಾ, ಪ್ರಾಣಿಗಳ ಹಕ್ಕು ರಕ್ಷಣೆ, ವಿಶೇಷವಾಗಿ ಶ್ವಾನಗಳ ವಿಷಯದಲ್ಲಿ ವಿಶೇಷ ಕಾಳಜಿವಹಿಸುತ್ತಾರೆ. ಮೂಕಜೀವಿಗಳ ಪರವಾಗಿ ಅಗತ್ಯವಾದಾಗೆಲ್ಲ ದನಿ ಎತ್ತುತ್ತಾ ಬಂದಿದ್ದಾರೆ.

ಕಳೆದ ವರ್ಷ ಜುಲೈನಲ್ಲಿ ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ಕುರಿತಾಗಿ ಆದೇಶವೊಂದನ್ನು ಹೊರಡಿಸಿತ್ತು, ಬೀದಿ ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಇಡುವಂತೆ ಸೂಚಿಸಿತ್ತು. ಇದರ ವಿರುದ್ಧ ರಮ್ಯಾ ಸೇರಿದಂತೆ ದೇಶದಾದ್ಯಂತ ಶ್ವಾನಪ್ರಿಯರು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ಸಹ ಮಾಡಿದ್ದರು. ಬಳಿಕ ಇತ್ತೀಚೆಗೆ ಮತ್ತೆ ಇದೇ ವಿಷಯವಾಗಿ ನಡೆದ ವಿಚಾರಣೆ ವೇಳೆ, ಬೀದಿ ನಾಯಿಗಳನ್ನು ಅವುಗಳ ವರ್ತನೆಯ ಆಧಾರದ ಮೇಲೆ ವಿಂಗಡಿಸಲು ಸಾಧ್ಯವಿಲ್ಲ. ‘ಬೀದಿ ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ, ಈ ನಾಯಿ ಕಚ್ಚಬಹುದು, ಈ ನಾಯಿ ಕಚ್ಚುವುದಿಲ್ಲ ಎಂದು ಕಂಡು ಹಿಡಿಯುವುದು ಅಸಾಧ್ಯ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ. ಆ ಮೂಲಕ ಎಲ್ಲ ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಇಡುವುದು ಸೂಕ್ತ ಎಂಬ ಅಭಿಪ್ರಾಯ ವ್ಯಕ್ತಪಡಿಸಿದೆ.

ಇದನ್ನೂ ಓದಿ:43ನೇ ವರ್ಷದ ಹುಟ್ಟುಹಬ್ಬ ಆಚರಿಸಿದ ನಟಿ ರಮ್ಯಾ

ಸುಪ್ರೀಂಕೋರ್ಟ್​​ನ ಈ ಅಭಿಪ್ರಾಯಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ನಟಿ ರಮ್ಯಾ, ಸುಪ್ರೀಂನ ಹೇಳಿಕೆಗೆ ವಿರುದ್ಧವಾಗಿ, ‘ಪುರುಷರ ಮನಸ್ಸನ್ನು ಓದುವುದು ಕಷ್ಟ, ಅವರು ಯಾವಾಗ ರೇಪ್ ಮಾಡುತ್ತಾರೊ, ಯಾವಾಗ ಕೊಲೆ ಮಾಡುತ್ತಾರೊ ಗೊತ್ತಾಗುವುದಿಲ್ಲ, ಹಾಗಾಗಿ ಎಲ್ಲ ಪುರುಷರನ್ನು ಜೈಲಿನಲ್ಲಿ ಇರಿಸಿಬಿಡಿ(!?)’ ಎಂದಿದ್ದಾರೆ. ಆ ಮೂಲಕ ಕಚ್ಚುವ ನಾಯಿಗಳು, ಸೌಮ್ಯ ನಾಯಿಗಳ ವರ್ಗೀಕರಣ ಕಷ್ಟವೆಂದು ಎಲ್ಲ ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಇಡುವುದು ಸೂಕ್ತವಲ್ಲ ಎಂದು ಹೇಳಿದ್ದಾರೆ.

ಇನ್​​ಸ್ಟಾಗ್ರಾಂ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ನಟಿ ರಮ್ಯಾ, ಸುಪ್ರೀಂಕೋರ್ಟ್​​ನಲ್ಲಿ ಬೀದಿನಾಯಿಗಳ ಹಕ್ಕಿನ ಪರವಾಗಿ ವಾದಿಸುತ್ತಿರುವ ಮಾಜಿ ಅಟಾರ್ನಿ ಜನರಲ್ ಕೆಕೆ ವೇಣುಗೋಪಾಲ್ ಅವರ ವಾದವನ್ನು ಕೊಂಡಾಡಿದ್ದಾರೆ. ನಾಯಿಗಳನ್ನು ಆಶ್ರಯ ತಾಣಗಳಲ್ಲಿ ಇಡುವುದರ ವಿರುದ್ಧ ವಾದಿಸಿರುವ ಕೆಕೆ ವೇಣುಗೋಪಾಲ್ ‘ಭಾರತದಲ್ಲಿ 5.25 ಕೋಟಿ ನಾಯಿಗಳಿವೆ. ಅವುಗಳನ್ನು ಆಶ್ರಯ ತಾಣದಲ್ಲಿ ಇಡಲು ದೇಶದಾದ್ಯಂತ 77347 ಆಶ್ರಯ ತಾಣಗಳು ಬೇಕಾಗುತ್ತವೆ. (ಪ್ರತಿ ಆಶ್ರಯ ತಾಣದಲ್ಲಿ 200 ನಾಯಿಗಳು). ಪ್ರತಿ ನಾಯಿಗೆ ಆಹಾರ ನೀಡಲು ದಿನಕ್ಕೆ 40 ರೂಪಾಯಿ ಬೇಕಾಗುತ್ತದೆ ಎಂದಾದರೆ ಅಷ್ಟು ನಾಯಿಗಳನ್ನು ಸಾಕಲು ಪ್ರತಿ ದಿನ ಆಹಾರದ ವೆಚ್ಚವೇ 200 ಕೋಟಿಗೂ ಹೆಚ್ಚು ಹಣ ಬೇಕಾಗುತ್ತದೆ. ಈಗ ದೇಶದಲ್ಲಿ ಇರುವ ಲಕ್ಷಾಂತರ ಶಾಲೆಗಳಲ್ಲಿಯೇ ಸರಿಯಾದ ಸೌಕರ್ಯ ಇಲ್ಲ ಹೀಗಿರುವಾಗ ನಾಯಿಗಳಿಗೆ ಆಶ್ರಯ ತಾಣ ನಿರ್ಮಿಸಲು ಸಾಧ್ಯವೇ’ ಎಂದು ಅವರು ಪ್ರಶ್ನಿಸಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಬೆಳಗಾವಿಯ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟ, ಮೂವರು ಕಾರ್ಮಿಕರ ಸಾವು, 5 ಮಂದಿಗೆ ಗಾಯ – Kannada News | Three Dies Several Injured in boiler explosion at sugar factory in belagavi

ಬೆಳಗಾವಿ, (ಜನವರಿ 07): ಸಕ್ಕರೆ ಕಾರ್ಖಾನೆಯಲ್ಲಿ (Sugar Factory) ಬಾಯ್ಲರ್ ಸ್ಫೋಟಗೊಂಡ (Boiler Blast) ಪರಿಣಾಮ ಮೂವರು ಕಾರ್ಮಿಕರು ಸಾವನ್ನಪ್ಪಿದ್ದು, ಐವರು ಕಾರ್ಮಿಕರಿಗೆ ಗಂಭೀರ ಗಾಯಗೊಂಡಿರುವ ಘಟನೆ ಬೆಳಗಾವಿ (Belagavi) ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿ ನಡೆದಿದೆ. ಅಕ್ಷಯ ತೋಪಡೆ(45), ದೀಪಕ್ ಮುನವಳ್ಳಿ(31), ಸುದರ್ಶನ ಬನೋಶಿ(25) ಮೃತ ದುರ್ದೈವಿಗಳು.

ಗ್ರಾಮದ ಹೊರವಲಯದಲ್ಲಿರುವ ವಿಕ್ರಮ ಇನಾಮದಾರ್‌ ಎನ್ನುವರಿಗೆ ಸೇರಿದ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿಈ ದುರಂತ ಸಂಭವಿಸಿದ್ದು, ಗಂಭೀರ ಗಾಯಗೊಂಡವರನ್ನು ಬೆಳಗಾವಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿರುವ ಐವರು ಜನರನ್ನು ಝೀರೋ ಟ್ರಾಫಿಕ್‌ನಲ್ಲಿಯೇ ಬೈಲಹೊಂಗಲದಿಂದ ಬೆಳಗಾವಿ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: ಸಚಿವೆ ಹೆಬ್ಬಾಳ್ಕರ್ ಪುತ್ರನ ಕಾರು ಚಾಲಕನಿಗೆ ಚಾಕು ಇರಿತ: ಬಸವಂತನ ಜೀವ ಉಳಿಸಿದ ಐಪಿಎಸ್ ಅಧಿಕಾರಿ

ಕಾರ್ಖಾನೆಯ ನಂಬರ್ 1 ಕಂಪಾರ್ಟಮೆಂಟ್ ನಲ್ಲಿ ವಾಲ್ ರಿಪೇರಿ ಮಾಡೋ ಸಂದರ್ಭದಲ್ಲಿ ಈ ದುರಂತ ಸಂಭವಿಸಿದ್ದು, ಘಟನೆಯಲ್ಲಿ ಮೂವರು ಸಾವನ್ನಪ್ಪಿರುವುದು ದೃಢಪಟ್ಟಿದೆ. ಸದ್ಯ ಆಸ್ಪತ್ರೆಗೆ ಬೆಳಗಾವಿ ಎಸ್ಪಿ ಕೆ.ರಾಮರಾಜನ್, ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದಾರೆ.

ಇನ್ನು ಘಟನೆ ಸಂಬಂಧ ಬೆಳಗಾವಿಯಲ್ಲಿ ಎಸ್ಪಿ ಕೆ ರಾಮರಾಜನ್ ಪ್ರತಿಕ್ರಿಯಿಸಿದ್ದು, ಮಧ್ಯಾಹ್ನ 2 ಗಂಟೆಯ ಸಮಯದಲ್ಲಿ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಘಟನೆ ಸಂಭವಿಸಿದೆ. 8 ಜನರಿಗೆ ಬಿಸಿ ಪದಾರ್ಥ (ಮಳ್ಳಿ) ಮೈ ಮೇಲೆ ಬಿದ್ದು ಗಾಯವಾಗಿದೆ. ಒಬ್ಬರನ್ನು ಬೈಲಹೊಂಗಲ ಆಸ್ಪತ್ರೆಗೆ ರವಾನಿಸಿದ್ದು, ಇನ್ನುಳಿದವರನ್ನು ಬೆಳಗಾವಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ಝೀರೋ ಟ್ರಾಫಿಕ್‌ನಲ್ಲಿ ಗಾಯಾಳುಗಳನ್ನು ಶಿಫ್ಟ್ ಮಾಡಲಾಗಿದೆ. ದೂರು ಆಧರಿಸಿ ತನಿಖೆ ಮಾಡುತ್ತೇವೆ ಎಂದರು.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಸರ್ಕಾರಿ ಬಸ್​ಗಳ ದುಸ್ಥಿತಿಯನ್ನು ಬಯಲು ಮಾಡಿದ ಟಿವಿ9, ತುಕ್ಕು ಹಿಡಿದ ಬಸ್ಸಿನಲ್ಲಿ ಅಪಾಯಕಾರಿ ಪ್ರಯಾಣ – Kannada News | Bagalkotes Dakota Buses: Passengers Endure Daily Hardship in Dilapidated Government Transport

ಬಾಗಲಕೋಟೆ, ಜ.7: ಟಿವಿ9 ರಿಯಾಲಿಟಿ ಚೆಕ್ ಮೂಲಕ ಬಾಗಲಕೋಟೆಯಲ್ಲಿ ಸರ್ಕಾರಿ ಬಸ್​ಗಳ ದುಸ್ಥಿತಿಯು ಬೆಳಕಿಗೆ ಬಂದಿದೆ. ಡಕೋಟಾ ಬಸ್ ಎಂದು ಕರೆಯಲ್ಪಡುವ ಹಳೆಯ ಮತ್ತು ಕಿತ್ತುಹೋದ ಬಸ್​ಗಳಲ್ಲಿ ಪ್ರಯಾಣಿಕರು ಪ್ರತಿದಿನ ಸಂಕಟ ಅನುಭವಿಸುತ್ತಿದ್ದಾರೆ. ಮೆಟ್ಟಿಲುಗಳು ಮುರಿದು, ಬಸ್​ನ ಟಾಪ್ ಹಾರುವ ಸ್ಥಿತಿಯಲ್ಲಿ, ಲೈಟ್​ಗಳು ಕಾರ್ಯನಿರ್ವಹಿಸದೆ, ತುಕ್ಕು ಹಿಡಿದ ಬಸ್‌ಗಳು ಅಪಾಯಕಾರಿ ಪ್ರಯಾಣಕ್ಕೆ ಕಾರಣವಾಗಿವೆ. ಒಂದು ಬಸ್ 14 ವರ್ಷ 10 ತಿಂಗಳು ಹಳೆಯದಾಗಿದ್ದು, ಅದರ ವೈರಿಂಗ್ ಸಹ ಹೊರಬಿದ್ದಿರುವ ದೃಶ್ಯ ಕಂಡುಬಂದಿದೆ. ಸಾರಿಗೆ ಇಲಾಖೆಗೆ ಉತ್ತಮ ಹೆಸರಿದ್ದರೂ, ಬಾಗಲಕೋಟೆಯ ನವನಗರ ಬಸ್ ನಿಲ್ದಾಣದಲ್ಲಿರುವ ಬಸ್​ಗಳ ಸ್ಥಿತಿ ಚಿಂತಾಜನಕವಾಗಿದೆ. ಶಕ್ತಿ ಯೋಜನೆ ಜಾರಿಯಾದಾಗಿನಿಂದ ಬಸ್​ಗಳಲ್ಲಿ ಮಹಿಳೆಯರ ದಟ್ಟಣೆ ಹೆಚ್ಚಿದ್ದು, 50-60 ಜನರ ಸಾಮರ್ಥ್ಯದ ಬಸ್​ಗಳಲ್ಲಿ ನೂರಾರು ಮಂದಿ ಪ್ರಯಾಣಿಸುತ್ತಿದ್ದಾರೆ. ಇದರಿಂದ ಸುರಕ್ಷತೆಗೆ ಧಕ್ಕೆಯಾಗುತ್ತಿದೆ ಎಂದು ಪ್ರಯಾಣಿಕರು ಆತಂಕ ವ್ಯಕ್ತಪಡಿಸಿದ್ದಾರೆ. ಪ್ರಯಾಣಿಕರು, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಾರಿಗೆ ಸಚಿವರಿಗೆ ಹಳೆಯ ಬಸ್​ಗಳನ್ನು ಬದಲಾಯಿಸಿ ಹೊಸ, ಸುರಕ್ಷಿತ ಬಸ್​ಗಳನ್ನು ಒದಗಿಸುವಂತೆ ಮನವಿ ಮಾಡಿದ್ದಾರೆ. ಇದು ಪ್ರಯಾಣಿಕರ ಜೀವದ ಸುರಕ್ಷತೆಯ ವಿಷಯ ಎಂದು ಅವರು ಒತ್ತಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Cap d’Agde: ಈ ನಗರದಲ್ಲಿ ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ – Kannada News | Cap d’Agde: World’s Most Famous no cloth Village; Checkout more details here

ಈ ಒಂದು ನಗರಕ್ಕೆ ನೀವು ಟ್ರಿಪ್​​ ಹೋಗಲು ಯೋಚಿಸುತ್ತಿದ್ದರೆ, ನೀವು ಬಟ್ಟೆ ಬಗ್ಗೆ ಚಿಂತಿಸುವ ಅಗತ್ಯವಿಲ್ಲ. ಹೌದು ಉಟ್ಟ ಬಟ್ಟೆಯಲ್ಲಿ ನೀವಿಲ್ಲಿಗೆ ಹೋಗಿ ದಿನಗಟ್ಟಲೆ ತಂಗಿ ಬರಬಹುದು. ಯಾಕೆಂದ್ರೆ ಈ ನಗರದಲ್ಲಿ ಎಲ್ಲೆಂದರಲ್ಲಿ ನಿಮಗೆ ಬೆತ್ತಲೆಯಾಗಿ ತಿರುಗಾಡುವ ಸ್ವಾತಂತ್ರ್ಯವಿದೆ. ಇಂತಹ ವಿಚಿತ್ರ ಸಂಸ್ಕೃತಿಯನ್ನು ಹೊಂದಿರುವ ಸ್ಥಳವೇ ಫ್ರಾನ್ಸ್‌ನ ಕ್ಯಾಪ್ ಡಿ’ಅಗ್ಡೆ (Cap d’Agde) ನಗರ. ಇದು ಫ್ರಾನ್ಸ್‌ನ ದಕ್ಷಿಣ ಭಾಗದಲ್ಲಿರುವ ಮೆಡಿಟರೇನಿಯನ್ ಕರಾವಳಿಯಲ್ಲಿರುವ ಇದು ಒಂದು ಸುಂದರ ನಗರ. ಈ ನಗರ ವಿಶ್ವದ  ಏಕೈಕ ನಗ್ನ ನಗರವಾಗಿದ್ದು, ಬೆತ್ತಲೆಯಾಗಿ ತಮ್ಮ ಪ್ರವಾಸವನ್ನು ಆನಂದಿಸಲೆಂದೇ ಸಾಕಷ್ಟು ಪ್ರವಾಸಿಗರು ಇಲ್ಲಿಗೆ ಭೇಟಿ ನೀಡುತ್ತಾರೆ. ಇತ್ತೀಚಿನ ದಿನಗಳಲ್ಲಿ ಈ ತಾಣ ಹನಿಮೂನ್ ಪಾಯಿಂಟ್​ ಎಂದೇ ಪ್ರಸಿದ್ಧವಾಗಿದೆ.

ಸುಂದರವಾದ ಕಡಲತೀರಗಳಿಗೆ ಹೆಸರುವಾಸಿಯಾದ ಈ ನಗರದಲ್ಲಿ ಜನರಿಗೆ ಬಟ್ಟೆ ಇಲ್ಲದೆ ಸುತ್ತಾಡುವ ಸ್ವಾತಂತ್ರ್ಯವಿದೆ. ಪ್ರವಾಸಿಗರು ರೆಸ್ಟೋರೆಂಟ್‌ಗಳು ಮತ್ತು ಸೂಪರ್‌ಮಾರ್ಕೆಟ್‌ಗಳಲ್ಲಿ ಬಟ್ಟೆ ಇಲ್ಲದೆಯೇ ತಿರುಗಾಡಬಹುದು. ಒಂದು ಅಂದಾಜಿನ ಪ್ರಕಾರ, ಪ್ರತಿ ವರ್ಷ 50 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಬೇಸಿಗೆಯಲ್ಲಿ ಇಲ್ಲಿಗೆ ಬರುವ ಪ್ರವಾಸಿಗರಲ್ಲಿ ಹೆಚ್ಚಿನವರು ಫ್ರಾನ್ಸ್, ಬೆಲ್ಜಿಯಂ, ಜರ್ಮನಿ, ಇಟಲಿ, ಅಮೆರಿಕ, ಡೆನ್ಮಾರ್ಕ್ ಮತ್ತು ಕೆನಡಾದವರು ಎಂದು ವರದಿಯಾಗಿದೆ.

ಇದನ್ನೂ ಓದಿ: ಭಾರತೀಯ ಸ್ಲೀಪರ್ ಬಸ್‌ನಲ್ಲಿ ಪ್ರಯಾಣಿಸಿ ಅನುಭವ ಬಿಚ್ಚಿಟ್ಟ ವಿದೇಶಿಗ

ಬಟ್ಟೆ ಧರಿಸಿ ಹೊರ ಬಂದರೆ ಬೀಳುತ್ತೆ ಭಾರೀ ದಂಡ:
ಈ ತಾಣದಲ್ಲಿ ಬಟ್ಟೆ ಧರಿಸಲು ಅವಕಾಶವಿದೆ.ಆದರೆ ಇಲ್ಲಿ ಬಟ್ಟೆ ಧರಿಸುವುದಕ್ಕೂ ನೇಕೆಡ್‌ ಟ್ಯಾಕ್ಸ್ ಕಟ್ಟಬೇಕಾಗುತ್ತದೆ. ನೀವು ಬಟ್ಟೆ ಧರಿಸಿ ಈ ಸಮುದ್ರ ದಂಡೆಗೆ ಹೋಗಲು ಬಯಸಿದ್ದಲ್ಲಿ ದುಡ್ಡು ಕಟ್ಟಿ ನೀವು ಇಲ್ಲಿ ಬಟ್ಟೆ ಧರಿಸಿ ಸುತ್ತಾಡಬಹುದು. ಆದರೆ ಬಟ್ಟೆ ಧರಿಸುವವರ ಸಂಖ್ಯೆ ಇಲ್ಲಿ ತೀರಾ ಕಡಿಮೆ. ಇದಲ್ಲದೇ ಇಲ್ಲಿ ಮತ್ತೊಂದು ನಿಯಮವಿದೆ. ಇಲ್ಲಿಗೆ ಬಂದ ಜೋಡಿ ಸಾವರ್ಜನಿಕ ಪ್ರದೇಶಗಳಲ್ಲಿ ಅಸಭ್ಯವಾಗಿ ವರ್ತಿಸಿದರೆ ಅಂದರೆ ಸುಮಾರು 12,860 ಪೌಂಡ್‌ ಅಂದರೆ ಭಾರತದ ಕರೆನ್ಸಿ ಪ್ರಕಾರ ಸುಮಾರು 12 ಲಕ್ಷ ರೂಪಾಯಿಗಳ ದಂಡವನ್ನು ಕಟ್ಟಬೇಕಾಗುತ್ತದೆ. ಇದಲ್ಲದೆ, ಈ ನಗರದಲ್ಲಿ ಫೋಟೋಗ್ರಫಿಗೂ ಕೂಡ ಅವಕಾಶವಿಲ್ಲ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬರಲಿದೆ ಹೊಸ ಆದಾಯ ತೆರಿಗೆ ಕಾಯ್ದೆ; ಬಜೆಟ್​ನಲ್ಲಿ ಘೋಷಣೆ, ಏ. 1ರಿಂದ ಜಾರಿ – Kannada News | New Income Tax law come into effect from 2026 April 1st, here are few highlights

ನವದೆಹಲಿ, ಜನವರಿ 7: ವಿವಿಧ ಕ್ಷೇತ್ರಗಳಲ್ಲಿ ಸುಧಾರಣೆಗಳನ್ನು ತಂದಿರುವ ಮತ್ತು ತರುತ್ತಿರುವ ಸರ್ಕಾರ ಇದೀಗ ಆದಾಯ ತೆರಿಗೆ (Income Tax) ವಿಭಾಗದಲ್ಲಿ ಗುರುತರ ಬದಲಾವಣೆ ತರಲು ಹೊರಟಿದೆ. 1961ರ ಇನ್ಕಮ್ ಟ್ಯಾಕ್ಸ್ ಕಾಯ್ದೆ ಬದಲು ಹೊಸ ಕಾಯ್ದೆಯನ್ನು ಜಾರಿಗೆ ತರಲಿದೆ. ಆರು ದಶಕದಲ್ಲೇ ಇದು ಭಾರತದ ಆದಾಯ ತೆರಿಗೆ ವ್ಯವಸ್ಥೆಯಲ್ಲಿ ಆಗುತ್ತಿರುವ ಬಹುದೊಡ್ಡ ಬದಲಾವಣೆ ಎನ್ನಲಾಗಿದೆ.

ಫೆಬ್ರುವರಿ 1ರಂದು ಮಂಡನೆಯಾಗಲಿರುವ ಕೇಂದ್ರ ಬಜೆಟ್​ನಲ್ಲಿ ನಿರ್ಮಲಾ ಸೀತಾರಾಮನ್ ಅವರು ಹೊಸ ಆದಾಯ ತೆರಿಗೆ ಜಾರಿಗೆ ತರಲಾಗುವುದನ್ನು ಘೋಷಿಸಲಿದ್ದಾರೆ. ಹೊಸ ಕಾಯ್ದೆಯ ಮುಖ್ಯಾಂಶಗಳನ್ನೂ ಅವರು ಬಹಿರಂಗಪಡಿಸಬಹುದು. ವರದಿಗಳ ಪ್ರಕಾರ, ಹೊಸ ಐಟಿ ಕಾಯ್ದೆಯು 2026ರ ಏಪ್ರಿಲ್ 1ರಿಂದ ಜಾರಿಗೆ ಬರಬಹುದು.

ಇದನ್ನೂ ಓದಿ: ಇಂಡಿಯಾ ರೇಟಿಂಗ್ಸ್ ಪ್ರಕಾರ ಮುಂದಿನ ವರ್ಷ ಭಾರತದ ಜಿಡಿಪಿ ಬೆಳವಣಿಗೆ ಶೇ. 6.9

ಹೊಸ ಆದಾಯ ತೆರಿಗೆ ಕಾಯ್ದೆಯಲ್ಲಿ ಏನಿರಬಹುದು?

ಈಗಿರುವ 1961ರ ಆದಾಯ ತೆರಿಗೆ ಕಾಯ್ದೆಗೆ ಹೋಲಿಸಿದರೆ ಹೊಸ ಆದಾಯ ತೆರಿಗೆ ಕಾಯ್ದೆ ಹೆಚ್ಚು ಸರಳವಾಗಿರುತ್ತದೆ. ಇದರ ನಿಯಮಗಳು ಸರಳವಾಗಿದ್ದು, ಸಾಮಾನ್ಯ ತೆರಿಗೆ ಪಾವತಿದಾರರಿಗೆ ಸ್ಪಷ್ಟವಾಗಿ ಅರ್ಥವಾಗುವಂತಿರುತ್ತವೆ ಎಂದು ಹೇಳಲಾಗುತ್ತಿದೆ. ಹಳೆಯದಲ್ಲಿ ಇರುವ 819 ಸೆಕ್ಷನ್ ಸಂಖ್ಯೆಯನ್ನು 536ಕ್ಕೆ ಇಳಿಸಲಾಗಿದೆ. 47 ಚಾಪ್ಟರ್​ಗಳನ್ನು 23ಕ್ಕೆ ಇಳಿಸಲಾಗಿದೆ.

ಹೊಸ ಕಾಯ್ದೆಯಲ್ಲಿ ಮತ್ತೊಂದು ಮುಖ್ಯ ಅಂಶ ಎಂದರೆ, ಟ್ಯಾಕ್ಸ್ ಸಿಸ್ಟಂನಲ್ಲಿ ತಂತ್ರಜ್ಞಾನ ಅಳವಡಿಕೆ ಹೆಚ್ಚು ಗಾಢವಾಗಿರಲಿದೆ. ಭೌತಿಕ ದಾಖಲೆಗಳ ಗೋಜಲುಗಳನ್ನು ಕಡಿಮೆ ಮಾಡಲಾಗುತ್ತದೆ. ಅಂದರೆ, ಪ್ರೀ ಫಿಲ್ಡ್ ರಿಟರ್ನ್​ಗಳು, ಎಐಎಸ್, ಟಿಐಎಸ್ ಸ್ಟೇಟ್ಮೆಂಟ್​ಗಳು ಇತ್ಯಾದಿ ಬಳಕೆ ಹೆಚ್ಚುವಂತೆ ಮಾಡಬಹುದು. ಈ ಆಟೊಮೇಟೆಡ್ ವ್ಯವಸ್ಥೆಯಿಂದ ಟಿಡಿಎಸ್ ಮತ್ತು ಟಿಸಿಎಸ್ ಹೊಂದಿಕೆಯಲ್ಲಿರುವ ದೋಷಗಳನ್ನು ಗುರುತಿಸಲು ಸಾಧ್ಯವಾಗುತ್ತದೆ.

ಇದನ್ನೂ ಓದಿ: 50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?

12 ಲಕ್ಷ ರೂವರೆಗೆ ತೆರಿಗೆ ವಿನಾಯಿತಿ ಕೊಟ್ಟಿರುವುದು ಮುಂದುವರಿಯುತ್ತದಾ?

ಕಳೆದ ಬಾರಿಯ ಬಜೆಟ್​ನಲ್ಲಿ ಹೊಸ ಟ್ಯಾಕ್ಸ್ ರೆಜಿಮೆಯಲ್ಲಿ 12 ಲಕ್ಷ ರೂವರೆಗಿನ ಆದಾಯಕ್ಕೆ ತೆರಿಗೆ ವಿನಾಯಿತಿ ಘೋಷಿಸಲಾಗಿದೆ. 75,000 ರೂ ಟ್ಯಾಕ್ಸ್ ಡಿಡಕ್ಷನ್ ಸೇರಿಸಿದರೆ 12,75,000 ರೂ ಒಳಗಿನ ಆದಾಯ ಇರುವವರಿಗೆ ಟ್ಯಾಕ್ಸ್ ಬಾಧ್ಯತೆ ಇರುವುದಿಲ್ಲ. ಈಗ ಹೊಸ ಇನ್ಕಮ್ ಟ್ಯಾಕ್ಸ್ ಕಾಯ್ದೆ ಜಾರಿಗೆ ಬಂದರೆ ಈ ಟ್ಯಾಕ್ಸ್ ವಿನಾಯಿತಿ ಕ್ರಮಕ್ಕೆ ಸಂಚಕಾರವೇನೂ ಆಗದು. ಅದೆಲ್ಲವೂ ತನ್ನಂತಾನೇ ಮುಂದುವರಿಯಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಪಲ್ಲವಿ ಅನುಪಲ್ಲವಿ’ ಚಿತ್ರಕ್ಕೆ 43 ವರ್ಷ; ಮತ್ತೆ ಕನ್ನಡ ಚಿತ್ರರಂಗದಲ್ಲಿ ಅನಿಲ್ ಕಪೂರ್? – Kannada News | 43 Years of Pallavi Anupallavi Actor Anil Kapoor wants to do Kannada Cinema again

ನಟ ಅನಿಲ್ ಕಪೂರ್ (Anil Kapoor) ಅವರು ಬಾಲಿವುಡ್​​ನಲ್ಲಿ ತಮ್ಮದೇ ಛಾಪು ಮೂಡಿಸಿದ್ದಾರೆ. ಹೀರೋ ಆಗಿ ಮಾತ್ರವಲ್ಲದೇ ಪೋಷಕ ಪಾತ್ರಗಳ ಮೂಲಕವೂ ಅವರು ಜನಮನ ಗೆದ್ದಿದ್ದಾರೆ. ಚಿತ್ರರಂಗದಲ್ಲಿ ಅವರಿಗೆ ನಾಲ್ಕೂವರೆ ದಶಕಗಳ ಅನುಭವ ಇದೆ. ಹಿಂದಿ ಚಿತ್ರರಂಗದಲ್ಲಿ ಹೀರೋ ಆಗಿ ಮಿಂಚುವುದಕ್ಕೂ ಮುನ್ನ ಅವರು ತೆಲುಗು ಮತ್ತು ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಅನಿಲ್ ಕಪೂರ್ ಅವರು ಅಭಿನಯಿಸಿದ ಏಕೈಕ ಕನ್ನಡ ಸಿನಿಮಾ ‘ಪಲ್ಲವಿ ಅನುಪಲ್ಲವಿ’ (Pallavi Anupallavi) ತೆರೆಕಂಡು ಈಗ 43 ವರ್ಷಗಳು ಕಳೆದಿವೆ. ಅದನ್ನು ಈಗ ಅನಿಲ್ ಕಪೂರ್ ನೆನಪು ಮಾಡಿಕೊಂಡಿದ್ದಾರೆ.

ಮಣಿರತ್ನಂ ನಿರ್ದೇಶನ ಮಾಡಿದ್ದ ‘ಪಲ್ಲವಿ ಅನುಪಲ್ಲವಿ’ ಸಿನಿಮಾ 1983ರ ಜನವರಿ 7ರಂದು ಬಿಡುಗಡೆ ಆಗಿತ್ತು. ಅನಿಲ್ ಕಪೂರ್ ಅವರು ಹೀರೋ ಆಗಿ ನಟಿಸಿದ್ದರು. ಇಳೆಯರಾಜ ಸಂಗೀತ ನೀಡಿದ ಹಾಡುಗಳು ಸೂಪರ್ ಹಿಟ್ ಆದವು. ಇಂದಿಗೂ ಸಿನಿಪ್ರಿಯರಿಗೆ ‘ಪಲ್ಲವಿ ಅನುಪಲ್ಲವಿ’ ಸಿನಿಮಾದ ಹಾಡುಗಳು ಫೇವರಿಟ್ ಆಗಿವೆ. ‘ಓ ಪ್ರೇಮಿ ಓ ಪ್ರೇಮಿ’ ಹಾಡಿನ ತುಣುಕನ್ನು ಅನಿಲ್ ಕಪೂರ್ ಅವರು ಇಂದು (ಜನವರಿ 7) ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

‘43 ವರ್ಷಗಳ ಹಿಂದೆ ನಾನು ಕನ್ನಡ ಚಿತ್ರರಂಗದಲ್ಲಿ ಮೊದಲ ಹೆಜ್ಜೆ ಇಟ್ಟೆ. ಅಂದಿನಿಂದ ಇಂದಿನ ತನಕ, ಕನ್ನಡ ಸಿನಿಮಾ ಬೆಳೆದ ಭಾರತೀಯ ಚಿತ್ರರಂಗವನ್ನು ಜಾಗತಿಕ ಮಟ್ಟದಲ್ಲಿ ಮರು ವ್ಯಾಖ್ಯಾನಿಸುತ್ತಿರುವುದನ್ನು ನೋಡಿದರೆ ಅಚ್ಚರಿ ಆಗುತ್ತದೆ’ ಎಂದು ಅನಿಲ್ ಕಪೂರ್ ಅವರು ‘ಎಕ್ಸ್’ (ಟ್ವಿಟರ್) ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.

ಕನ್ನಡ ಚಿತ್ರರಂಗದ ಈಗಿನ ಸಾಧಕರಿಗೂ ಅನಿಲ್ ಕಪೂರ್ ಸಲಾಂ ಎಂದಿದ್​ದಾರೆ. ‘ಕನ್ನಡ ಚಿತ್ರರಂಗವನ್ನು ಮೇಲಕ್ಕೆ ತೆಗೆದುಕೊಂಡು ಹೋಗಿದ್ದಕ್ಕಾಗಿ ಯಶ್, ಪ್ರಶಾಂತ್ ನೀಲ್, ರಿಷಬ್ ಶೆಟ್ಟಿ ಹಾಗೂ ಕಾಂತಾರ, ಕೆಜಿಎಫ್ ತಂಡಗಳಿಗೆ ನಾನು ಸೆಲ್ಯೂಟ್ ಎನ್ನುತ್ತೇನೆ. ಈ ಅದ್ಭುತ ಚಿತ್ರರಂಗದ ಜೊತೆ ನನ್ನ ಕೊನೆಯ ಒಡನಾಟ ಇದಲ್ಲ ಎಂದು ಭಾವಿಸುತ್ತೇನೆ’ ಎಂದು ಅನಿಲ್ ಕಪೂರ್ ಹೇಳಿದ್ದಾರೆ.

ಇದನ್ನೂ ಓದಿ: ನಟ ಅನಿಲ್ ಕಪೂರ್​ಗೆ ‘ಪಲ್ಲವಿ ಅನುಪಲ್ಲವಿ’ ಆಫರ್ ಸಿಕ್ಕಿದ್ದು ಹೇಗೆ? ಇಲ್ಲಿದೆ ವಿವರ

ಈ ಮೂಲಕ ಮತ್ತೆ ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡಲು ಅನಿಲ್ ಕಪೂರ್ ಅವರು ಉತ್ಸಾಹ ತೋರಿಸಿದ್ದಾರೆ. ಈಗಾಗಲೇ ‘ಟಾಕ್ಸಿಕ್’ ಸಿನಿಮಾದಲ್ಲಿ ಅನಿಲ್ ಕಪೂರ್ ನಟಿಸಿರಬಹುದು ಎಂದು ಕೆಲಸ ಅಭಿಮಾನಿಗಳು ಊಹಿಸಿದ್ದಾರೆ. ಪ್ರಶಾಂತ್ ನೀಲ್ ಅವರ ‘ಡ್ರ್ಯಾಗನ್’ ಸಿನಿಮಾದಲ್ಲಿ ಅನಿಲ್ ಕೂಡ ಕೂಡ ಇರಬಹುದು ಎಂದು ಫ್ಯಾನ್ಸ್ ಕಮೆಂಟ್ ಮಾಡುತ್ತಿದ್ದಾರೆ. ಇದೆಲ್ಲವೂ ಬರೀ ಊಹೆಗಳಷ್ಟೇ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಪ್ರಧಾನಿ ಮೋದಿಗೆ ಕರೆ ಮಾಡಿದ ಇಸ್ರೇಲ್ ಪಿಎಂ ನೆತನ್ಯಾಹು; ಗಾಜಾ ಶಾಂತಿ ಯೋಜನೆ ಕುರಿತು ಚರ್ಚೆ – Kannada News | Israeli PM Benjamin Netanyahu Calls PM Modi Discuss Strategic Partnership and Gaza Peace Plan Status

ನವದೆಹಲಿ, ಜನವರಿ 7: ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ದೂರವಾಣಿ ಕರೆ ಮಾಡಿದ್ದರು. ಫೋನ್​ನಲ್ಲಿ ತಮ್ಮ ಗೆಳೆಯ ನೆತನ್ಯಾಹು ಜೊತೆ ಮಾತನಾಡಿದ ಮೋದಿ (PM Modi) ಹಲವು ವಿಷಯಗಳ ಬಗ್ಗೆ ಚರ್ಚಿಸಿದ್ದಾರೆ. “ಇಬ್ಬರು ನಾಯಕರು ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು ಮತ್ತು ಎರಡೂ ದೇಶಗಳ ಜನರಿಗೆ ಶಾಂತಿ ಮತ್ತು ಸಮೃದ್ಧಿಯನ್ನು ಹಾರೈಸಿದರು” ಎಂದು ಪ್ರಧಾನ ಮಂತ್ರಿ ಕಚೇರಿಯ ಹೇಳಿಕೆ ತಿಳಿಸಿದೆ. ಗಾಜಾ ಶಾಂತಿ ಯೋಜನೆಯ ಅನುಷ್ಠಾನದ ಕುರಿತು ನೆತನ್ಯಾಹು ಪ್ರಧಾನ ಮಂತ್ರಿ ಮೋದಿಗೆ ವಿವರಿಸಿದ್ದಾರೆ ಎಂದು ಪ್ರಕಟಣೆ ಹೇಳಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ತಮ್ಮ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳನ್ನು ಚರ್ಚಿಸಿದರು. ಎಕ್ಸ್​ನಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ ಪ್ರಧಾನಿ ಮೋದಿ, ಭಯೋತ್ಪಾದನೆಯ ವಿರುದ್ಧ ಹೋರಾಡುವ ನಮ್ಮ ಸಂಕಲ್ಪವನ್ನು ಹೆಚ್ಚಿನ ದೃಢನಿಶ್ಚಯದಿಂದ ಪುನರುಚ್ಚರಿಸಿದ್ದೇವೆ ಎಂದು ಹೇಳಿದರು.

ಇದನ್ನೂ ಓದಿ: ಪ್ರಧಾನಿ ಮೋದಿಗೆ ಇಸ್ರೇಲ್ ಪ್ರಧಾನಿ ನೆತನ್ಯಾಹು ಫೋನ್; ಭಯೋತ್ಪಾದನೆ, ಗಾಜಾ ಶಾಂತಿ ಯೋಜನೆಯ ಬಗ್ಗೆ ಚರ್ಚೆ

“ನನ್ನ ಸ್ನೇಹಿತರಾದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಮಾತನಾಡಿದ್ದಕ್ಕೆ, ಅವರಿಗೆ ಮತ್ತು ಇಸ್ರೇಲ್ ಜನರಿಗೆ ಹೊಸ ವರ್ಷದ ಶುಭಾಶಯಗಳನ್ನು ತಿಳಿಸಿ ಸಂತೋಷವಾಗಿದೆ. ಮುಂಬರುವ ವರ್ಷದಲ್ಲಿ ಭಾರತ-ಇಸ್ರೇಲ್ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಮಾರ್ಗಗಳ ಕುರಿತು ನಾವು ಚರ್ಚಿಸಿದ್ದೇವೆ” ಎಂದು ನರೇಂದ್ರ ಮೋದಿ ಹೇಳಿದರು.

“ನಾವು ಪ್ರಾದೇಶಿಕ ಪರಿಸ್ಥಿತಿಯ ಕುರಿತು ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡಿದ್ದೇವೆ. ಇನ್ನೂ ಹೆಚ್ಚಿನ ದೃಢನಿಶ್ಚಯದಿಂದ ಭಯೋತ್ಪಾದನೆಯನ್ನು ಎದುರಿಸಲು ನಮ್ಮ ದೃಢಸಂಕಲ್ಪವನ್ನು ಪುನರುಚ್ಚರಿಸಿದ್ದೇವೆ” ಎಂದು ಮೋದಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: ಇದು ಬುದ್ಧನ ಉದಾತ್ತ ಚಿಂತನೆಗೆ ಸಾಕ್ಷಿ: ಪವಿತ್ರ ಪಿಪ್ರಹ್ವಾ ಅವಶೇಷಗಳ ಪ್ರದರ್ಶನವನ್ನು ಉದ್ಘಾಟಿಸಿದ ಪ್ರಧಾನಿ ಮೋದಿ

2026ರಲ್ಲಿ ಭಾರತ ಮತ್ತು ಇಸ್ರೇಲ್ ನಾಯಕರ ನಡುವಿನ ಮೊದಲ ನೇರ ಸಂಭಾಷಣೆ ಇದಾಗಿದೆ. ಕಳೆದ ವರ್ಷ ಡಿಸೆಂಬರ್ 11ರಂದು ಪ್ರಧಾನಿ ಮೋದಿ ಅವರಿಗೆ ಬೆಂಜಮಿನ್ ನೆತನ್ಯಾಹು ಅವರಿಂದ ದೂರವಾಣಿ ಕರೆ ಬಂದಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸ್ಟಾರ್ ಹೀರೋಗಳ ಜೊತೆ ಕೆಲಸ ಮಾಡಿದ ಆ ನಿರ್ದೇಶಕ ಸಲಿಂಗಿ – Kannada News | Bollywood’s Hidden Truth: Simi Chandhok Reveals Gay Director who work with Salman Khan

ಸ್ಟಾರ್ ಹಿರೋಗಳು, ನಟಿಯರು, ನಿರ್ದೇಶಕರು ಹಾಗೂ ನಿರ್ಮಾಪಕರು ತಮ್ಮ ಲೈಂಗಿಕತೆ ಬಗ್ಗೆ ಮಾತನಾಡೋಕೆ ಹೆಚ್ಚು ಇಷ್ಟಪಡೋದಿಲ್ಲ. ಕರಣ್ ಜೋಹರ್ ಅವರು ಪರುಷಪ್ರಿಯ ಎಂಬ ಆರೋಪ ಇದೆ. ಆದರೆ, ಇದನ್ನು ಅವರು ಒಪ್ಪಿಕೊಳ್ಳೋದಿಲ್ಲ. ಹೀಗಿರುವಾಗಲೇ ಹಿರಿಯ ಪತ್ರಕರ್ತೆ ಸಿಮಿ ಚಂದೋಕ್ ಅವರು ಒಂದು ಬಾಂಬ್ ಸಿಡಿಸಿದ್ದಾರೆ. ಹಲವು ಸ್ಟಾರ್​​ಗಳ ಜೊತೆ ಕೆಲಸ ಮಾಡಿದ ನಿರ್ದೇಶಕ ಸಲಿಂಗಿ ಎಂದು ಆರೋಪ ಮಾಡಿದ್ದಾರೆ.

ಬಾಲಿವುಡ್ ಹೀರೋಗಳು ಈ ವಿಷಯವನ್ನು ಯಾಕೆ ಓಪನ್ ಆಗಿ ಒಪ್ಪಿಕೊಳ್ಳೋದಿಲ್ಲ ಎಂಬುದಕ್ಕೆ ಸಿಮಿ ಉತ್ತಮ ಉದಾಹರಣೆ ನೀಡಿದ್ದಾರೆ. ‘ಬಾಲಿವುಡ್ ನಟನೋರ್ವ ತಾನು ಗೇ ಎಂದು ಒಪ್ಪಿಕೊಂಡ ಎಂದಿಟ್ಟುಕೊಳ್ಳಿ. ಆ ಬಳಿಕ ಆತ ಸಿನಿಮಾದಲ್ಲಿ ಹೀರೋಯಿನ್ ಜೊತೆ ರೊಮ್ಯಾಂಟಿಕ್ ಆಗಿ ಕಾಣಿಸಿಕೊಳ್ಳುತ್ತಾನೆ. ಇದನ್ನು ಪ್ರೇಕ್ಷಕ ಒಪ್ಪಿಕೊಳ್ಳುತ್ತಾನಾ’ಎಂದು ಅವರು ಪ್ರಶ್ನೆ ಮಾಡಿದ್ದಾರೆ.

‘ಬಾಲಿವುಡ್​ನ ಓರ್ವ ಖ್ಯಾತ ನಿರ್ದೇಶಕ ಸಲಿಂಗಿ. ಅವರ ಹೆಸರನ್ನು ನಾನು ಇಲ್ಲಿ ಹೇಳುವುದಿಲ್ಲ. ಅವರು ಸಲ್ಮಾನ್ ಖಾನ್, ರಣವೀರ್ ಸಿಂಗ್, ಹೃತಿಕ್ ರೋಷನ್, ಶಾಹಿದ್ ಕಪೂರ್ ಹಾಗೂ ಇತರರ ಜೊತೆ ಕೆಲಸ ಮಾಡಿದ್ದಾರೆ. ಅವರು ಗೇ ಎಂದು ಆ ನಟರೆಲ್ಲರಿಗೂ ಗೊತ್ತು. ಮಹಿಳೆಯರ ಜೊತೆ ಆತ ಹೆಚ್ಚು ಸಮಯ ಇರೋದಿಲ್ಲ’ ಎಂದಿದ್ದಾರೆ ಅವರು.
‘ಓರ್ವ ನಿರ್ದೇಶಕ ತನ್ನ ಲೈಂಗಿಕತೆಯ ಬಗ್ಗೆ ಬಹಿರಂಗವಾಗಿ ಹೇಳಿದರೆ, ಅನೇಕ ಪ್ರಮುಖ ನಟರು ಅವರೊಂದಿಗೆ ಕೆಲಸ ಮಾಡಲು ಹಿಂಜರಿಯುತ್ತಾರೆ. ಹೀರೋಗಳು ಕಾಸ್ಟಿಂಗ್ ಕೌಚ್‌ಗೆ ಹೆದರುತ್ತಾರೆ’ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬಾಲಿವುಡ್ ವೇದಿಕೆಯಲ್ಲಿ ತುಳು ಸಿನಿಮಾವನ್ನು ಕೊಂಡಾಡಿದ ಸುನಿಲ್ ಶೆಟ್ಟಿ

‘ಅನೇಕ ನಟರಿಗೆ ಆರಂಭಿಕ ದಿನಗಳಲ್ಲಿ ಕಾಂಪ್ರಮೈಸ್ ಆಗುವಂತೆ ಕೇಳಲಾಯಿತು. ಆಯುಷ್ಮಾನ್ ಖುರಾನಾ, ರಣವೀರ್ ಸಿಂಗ್ ಇದನ್ನು ಓಪನ್ ಆಗಿ ಹೇಳಿದ್ದಾರೆ. ಶಾರುಖ್ ಖಾನ್ ಹಾಗೂ ಕರಣ್ ಜೋಹರ್ ಸಂಬಂಧದ ಬಗ್ಗೆ ಚರ್ಚೆ ಆಗಿತ್ತು. ಶಾರುಖ್ ಖಾನ್ ಇದನ್ನು ತಳ್ಳಿ ಹಾಕಿದ್ದರು’ ಎಂದು ಹಳೆಯ ಘಟನೆ ನೆನಪಿಸಿಕೊಂಡಿದ್ದಾರೆ. ಈಗ ಆ ನಿರ್ದೇಶಕ ಯಾರು ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗಳು ಆಗುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 3:04 pm, Wed, 7 January 26

Source link

ನನ್ನ ಮಗಳ ಬಟ್ಟೆ ಬಿಚ್ಚಿದ್ದು ಪೊಲೀಸರೇ: BJP ಕಾರ್ಯಕರ್ತೆ ತಾಯಿ ಕಣ್ಣೀರು – Kannada News | Hubballi Police assault On BJP Worker During arrest Alleged By Woman Mother

ಹುಬ್ಬಳ್ಳಿ, (ಜನವರಿ 07): ಹುಬ್ಬಳ್ಳಿಯ ಕೇಶ್ವಾಪುರ ಪೊಲೀಸರು, ಬಿಜೆಪಿ ಕಾರ್ಯಕರ್ತೆಯನ್ನ ಬಟ್ಟೆಬಿಚ್ಚಿ ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ. ಆದ್ರೆ, ಮಹಿಳೆಯೇ ವಿವಸ್ತ್ರಗೊಂಡು ಹೈಡ್ರಾಮಾ ಸೃಷ್ಟಿಸಿದ್ದಾಳೆ ಎಂದು ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. ಈ ಸಂಬಂಧ ಕಾಂಗ್ರೆಸ್ ಹಾಗೂ ಬಿಜೆಪಿ ನಾಯಕರ ನಡುವೆ ಆರೋಪ ಪ್ರತ್ಯಾರೋಪ ಜೋರಾಗಿದ್ದು, ಇದರ ನಡುವೆ ಮಹಿಳೆಯ ತಾಯಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿ ಪೊಲೀಸರ ಮೇಲೆ ಗಂಭೀರ ಆರೋಪ ಮಾಡಿ ಕಣ್ಣೀರಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ವೈಭವ್, ಜಾರ್ಜ್​ ಸ್ಫೋಟಕ ಶತಕ; ಆಫ್ರಿಕಾಗೆ ಬೃಹತ್ ಗುರಿ ನೀಡಿದ ಯಂಗ್ ಇಂಡಿಯಾ – Kannada News | Youth ODI: India U19 Dominates SA with 392 Runs; Vaibhav, Aaron Century Stars

ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ ಯೂತ್ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಟೀಂ ಇಂಡಿಯಾ ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ಮೊದಲು ಬೌಲಿಂಗ್ ಆಯ್ದುಕೊಂಡಿತು. ಹೀಗಾಗಿ ಮೊದಲು ಬ್ಯಾಟಿಂಗ್‌ ಮಾಡಿದ ಭಾರತ ಯುವ ತಂಡ ನಿಗದಿತ 50 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 392 ರನ್​ಗಳ ಬೃಹತ್ ಮೊತ್ತ ಕಲೆಹಾಕಿದೆ. ಈ ಮೂಲಕ ಆಫ್ರಿಕಾ ಗೆಲುವಿಗೆ 393 ರನ್​ಗಳ ಟಾರ್ಗೆಟ್ ನೀಡಿದೆ. ಟೀಂ ಇಂಡಿಯಾ ಪರ ಆರಂಭಿಕರಿಬ್ಬರು ಶತಕದ ಇನ್ನಿಂಗ್ಸ್ ಆಡಿದರು. ಆರನ್ ಜಾರ್ಜ್​ 118 ರನ್​ಗಳ ಇನ್ನಿಂಗ್ಸ್ ಆಡಿದರೆ, ನಾಯಕ ವೈಭವ್ ಸೂರ್ಯವಂಶಿ ಕೂಡ ಸ್ಫೋಟಕ 127 ರನ್ ಬಾರಿಸಿದರು.

ಸರಣಿಯ ಮೊದಲೆರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ತಂಡ, ಈ ಪಂದ್ಯವನ್ನು ಗೆದ್ದು ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವ ಇರಾದೆಯಲ್ಲಿದೆ. ಹೀಗಾಗಿ ಈ ಪಂದ್ಯವನ್ನು ಗೆಲ್ಲಬೇಕಾದರೆ, ಟೀಂ ಇಂಡಿಯಾ ಬೃಹತ್ ಮೊತ್ತವನ್ನು ಕಲೆಹಾಕಬೇಕಿತ್ತು. ಅದರಂತೆ ಮೊದಲು ಬ್ಯಾಟಿಂಗ್‌ ಆರಂಭಿಸಿದ ಟೀಂ ಇಂಡಿಯಾ ಪರ ಆರನ್ ಜಾರ್ಜ್​ ಹಾಗೂ ವೈಭವ್ ಸೂರ್ಯವಂಶಿ ಸ್ಫೋಟಕ ಆರಂಭ ಒದಗಿಸಿಕೊಟ್ಟರು.

ಈ ಜೋಡಿ ಮೊದಲ 6 ಓವರ್​ಗಳಲ್ಲೇ ತಂಡವನ್ನು 50 ರನ್​ಗಳ ಗಡಿ ದಾಟಿಸಿದರು. ಆರಂಭದಿಂದಲೂ ಎಂದಿನಂತೆ ಹೊಡಿಬಡಿ ಆಟವನ್ನಾಡಿದ ನಾಯಕ ವೈಭವ್ ಹಾಗೂ ಆರನ್ ಆಫ್ರಿಕಾ ಬೌಲರ್​ಗಳನ್ನು ಕಾಡಿದರು. ಇನ್ನಿಂಗ್ಸ್​ನ 7ನೇ ಓವರ್​ನಲ್ಲಿ ಬೌಂಡರಿಗಳ ಮಳೆಗರೆದ ವೈಭವ್ 2 ಸಿಕ್ಸರ್ ಹಾಗೂ 2 ಬೌಂಡರಿ ಬಾರಿಸಿ, 8ನೇ ಓವರ್​ನಲ್ಲಿ ಕೇವಲ 24 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಜಾರ್ಜ್​ ಕೂಡ 32 ಎಸೆತಗಳಲ್ಲಿ ಅರ್ಧಶತಕ ದಾಟಿದರು. ಇಲ್ಲಿಗೆ ನಿಲ್ಲದ ಇವರಿಬ್ಬರು ತಲಾ ಶತಕ ಕೂಡ ಬಾರಿಸಿದರು.

ವೈಭವ್ ಸೂರ್ಯವಂಶಿ ಕೇವಲ 63 ಎಸೆತಗಳಲ್ಲಿ ಎಂಟು ಸಿಕ್ಸರ್ ಮತ್ತು ಆರು ಬೌಂಡರಿಗಳ ಸಹಿತ ಶತಕ ಬಾರಿಸಿದರು. ಶತಕದ ಬಳಿಕ ಹೆಚ್ಚು ಹೊತ್ತು ನಿಲ್ಲದ ವೈಭವ್ 10 ಸಿಕ್ಸರ್ ಮತ್ತು ಒಂಬತ್ತು ಬೌಂಡರಿಗಳನ್ನು ಒಳಗೊಂಡಂತೆ ಒಟ್ಟು 127 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ಇದು ವೈಭವ್ ಅವರ ಅಂಡರ್-19 ಏಕದಿನ ವೃತ್ತಿಜೀವನದಲ್ಲಿ ಮೂರನೇ ಶತಕವಾಗಿದೆ. ಈ ಹಿಂದೆ ಅವರು ಇಂಗ್ಲೆಂಡ್ ಮತ್ತು ಯುಎಇ ಅಂಡರ್-19 ತಂಡದ ವಿರುದ್ಧ ಎರಡು ಶತಕಗಳನ್ನು ಬಾರಿಸಿದ್ದರು. ಆದರೆ ನಾಯಕನಾಗಿ ವೈಭವ್​ಗೆ ಇದು ಮೊದಲ ಶತಕವಾಗಿದೆ.

ಆದಾಗ್ಯೂ ಈ ಜೋಡಿ ಮೊದಲ ವಿಕೆಟ್​ಗೆ 227 ರನ್​ಗಳ ದಾಖಲೆಯ ಜೊತೆಯಾಟ ನೀಡಿತು. ಇದಕ್ಕೆ ತೆಗೆದುಕೊಂಡಿದ್ದು, ಕೇವಲ 26 ಓವರ್​ಗಳು ಮಾತ್ರ. ಇವರಿಬ್ಬರು ಇರುವವರೆಗೆ ತಂಡ 500 ರನ್ ಕಲೆಹಾಕುವ ಲಕ್ಷಣಗಳು ಗೋಚರಿಸಿದವು. ಆದರೆ ವೈಭವ್ ಔಟಾದ ಬಳಿಕ ಸ್ಕೋರ್ ಬೋರ್ಡ್​ ವೇಗ ಕುಸಿಯಿತು. ಜಾರ್ಜ್​ ಕೂಡ ಶತಕ ಬಾರಿಸಿದ ಬೆನ್ನಲ್ಲೇ ವಿಕೆಟ್ ಒಪ್ಪಿಸಿದರು. ಅಂತಿಮವಾಗಿ ಜಾರ್ಜ್​ 106 ಎಸೆತಗಳಲ್ಲಿ 16 ಬೌಂಡರಿ ಸಹಿತ 118 ರನ್ ಬಾರಿಸಿದರು.

ಆ ಬಳಿಕ ಬಂದ ವೇದಾಂತ್ 34 ರನ್​ಗಳ ಕಾಣಿಕೆ ನೀಡಿದರೆ, ಅಭಿಗ್ಯಾನ್ ಇನ್ನಿಂಗ್ಸ್ ಕೂಡ 21 ರನ್​ಗಳಿಗೆ ಅಂತ್ಯವಾಯಿತು. ಇಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿದ ಆಫ್ರಿಕಾ ವೇಗಿಗಳು ಭಾರತ ತಂಡವನ್ನು 400 ರನ್​ಗಳ ಗಡಿ ದಾಟದಂತೆ ನೋಡಿಕೊಂಡರು. ಕೊನೆಯಲ್ಲಿ ಮೊಹಮ್ಮದ್ 28 ರನ್, ಹೆನಿಲ್ 19 ರನ್ ಬಾರಿಸಿ ತಂಡವನ್ನು 400 ರನ್​ಗಳ ಸನಿಹಕ್ಕೆ ತಂದರು. ಆಫ್ರಿಕಾ ಪರ ಸೋನಿ 3 ವಿಕೆಟ್ ಪಡೆದರು.

Source link

Exit mobile version