Video: ನೀರ್‌ ಹತ್ರ ಯಾಕೆ ಹೋಗ್ತೀಯಾ; ನೀರಿಗೆ ಬಿದ್ದ ಕಂದಮ್ಮನನ್ನು ರಕ್ಷಿಸಿದ ತಾಯಿ ಸಿಂಹ

Video: ನೀರ್‌ ಹತ್ರ ಯಾಕೆ ಹೋಗ್ತೀಯಾ; ನೀರಿಗೆ ಬಿದ್ದ ಕಂದಮ್ಮನನ್ನು ರಕ್ಷಿಸಿದ ತಾಯಿ ಸಿಂಹ

ತಾಯಿ (mother) ಪ್ರೀತಿಯೇ ಹಾಗೆ, ಬೆಲೆ ಕಟ್ಟಲು ಸಾಧ್ಯವಿಲ್ಲ. ಮೂಕ ಪ್ರಾಣಿಗಳು ತಮ್ಮ ಕಂದಮ್ಮಗಳನ್ನು ಪ್ರೀತಿಸುತ್ತವೆ, ಕಾಳಜಿ ವಹಿಸುತ್ತವೆ. ತಪ್ಪು ಮಾಡಿದರೆ ದಂಡಿಸುತ್ತವೆ. ಇದೀಗ ತಾಯಿ ಸಿಂಹವೊಂದು ನೀರಿಗೆ ಬಿದ್ದ ತನ್ನ ಕಂದನನ್ನು ರಕ್ಷಿಸಿದೆ. ಈ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ತಾಯಿಯ ನಿಷ್ಕಲ್ಮಶ ಪ್ರೀತಿಗೆ ಕರಗಿ ಹೋಗಿದ್ದಾರೆ.

gulnara.de ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋದಲ್ಲಿ ಮೃಗಾಲಯದ ದೃಶ್ಯವನ್ನು ಕಾಣಬಹುದು. ಕೆರೆಗೆ ಬಿದ್ದ ಮರಿಯನ್ನು ಹೆಣ್ಣು ಸಿಂಹವೊಂದು ರಕ್ಷಣೆ ಮಾಡಿದೆ. ಇದೇ ವೇಳೆ ಗಂಡು ಸಿಂಹವೂ ಅಡ್ಡಿ ಪಡಿಸಿದೆ.  ಆದರೆ ಗಂಡು ಸಿಂಹದೊಂದಿಗೆ ಜಗಳಕ್ಕಿಳಿದ ಹೆಣ್ಣು ಸಿಂಹವೊಂದು ಕೊನೆಗೂ ತನ್ನ ಮರಿಯನ್ನು ನೀರಿನಿಂದ ಮೇಲೆತ್ತಿ ರಕ್ಷಿಸಿರುವ ದೃಶ್ಯವನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ತನ್ನ ಕಂದಮ್ಮನಿಗೆ ನೀರು ಕೊಟ್ಟು ಬಾಯಾರಿಕೆ ನೀಗಿಸಿದ ಯುವಕನಿಗೆ ಧನ್ಯವಾದ ತಿಳಿಸಿದ ಯುವಕ

ಈ ವಿಡಿಯೋ 3.5 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ತಾಯಿಗಿಂತ ನಮ್ಮನ್ನು ಸದಾ ಕಾಪಾಡುವ ಜೀವ ಮತ್ತೊಂದಿಲ್ಲ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಂಗೆ ಒಂದು ಕ್ಷಣ ಗಾಬರಿಯಾಯ್ತು, ಒಳ್ಳೆಯ ತಾಯಿ ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ಎಲ್ಲಾ ಗಂಡಸರು ಒಂದೇ ರೀತಿ ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *