Personality Test: ಈ ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸುವ ಅಂಶ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ರಿವೀಲ್‌ ಮಾಡುತ್ತೆ – Kannada News | Personality Test: Discover the secret of your personality through this optical illusion picture

ಪ್ರತಿಯೊಬ್ಬರ ವ್ಯಕ್ತಿತ್ವ, ಅವರ ನಡೆ ನುಡಿ, ಭಾವನಾತ್ಮಕ ನಿಲುವು, ಪ್ರೀತಿ ವ್ಯಕ್ತಪಡಿಸುವ ರೀತಿ ಇವೆಲ್ಲವೂ ಭಿನ್ನವಾಗಿರುತ್ತವೆ. ಸಂಖ್ಯಾಶಾಸ್ತ್ರ, ಜ್ಯೋತಿಷ್ಯಶಾಸ್ತ್ರಗಳ ಮೂಲಕ ಈ ನಿಗೂಢ ಸ್ವಭಾವಗಳ ಬಗ್ಗೆ ತಿಳಿದುಕೊಳ್ಳುವಂತೆ ವ್ಯಕ್ತಿತ್ವ ಪರೀಕ್ಷೆಯ ಮೂಲಕವೂ ಪರೀಕ್ಷಿಸಬಹುದು. ಆಪ್ಟಿಕಲ್‌ ಇಲ್ಯೂಷನ್‌ ಪರ್ಸನಾಲಿಟಿ ಟೆಸ್ಟ್‌ (Personality Test) ಈ ವ್ಯಕ್ತಿತ್ವ ಪರೀಕ್ಷೆಯ ವಿಧವಾಗಿದ್ದು, ಈ ಚಿತ್ರಗಳಲ್ಲಿ ಮೊದಲು ಕಾಣಿಸುವ ಅಂಶಗಳ ಆಧಾರದ ಮೇಲೆ ನಾವು ನಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ತಿಳಿಯಬಹುದಾಗಿದೆ. ಇಲ್ಲೊಂದು ಅಂತಹದ್ದೇ ಚಿತ್ರ ಹರಿದಾಡುತ್ತಿದ್ದು, ಬೆಕ್ಕು, ಫ್ರೈಡ್‌ ಎಗ್‌ ಅಥವಾ ಕಿತ್ತಳೆ ಅದರಲ್ಲಿ ನಿಮ್ಮ ಕಣ್ಣಿಗೆ ಮೊದಲು ಕಾಣಿಸಿದ್ದೇನು ಎಂಬುದರ ಮೇರೆಗೆ ನೀವು ಭಾವನಾತ್ಮಕ ವ್ಯಕ್ತಿಯೇ ಎಂಬುದನ್ನು ಟೆಸ್ಟ್‌ ಮಾಡಿ.

ನಿಮ್ಮ ವ್ಯಕ್ತಿತ್ವದ ರಹಸ್ಯವನ್ನು ತಿಳಿಸುತ್ತೆ ಈ ಚಿತ್ರ:

ಈ ಚಿತ್ರದಲ್ಲಿ ಮಲಗಿರುವ ಬೆಕ್ಕು, ಫ್ರೈಡ್‌ ಎಗ್‌ ಮತ್ತು ಕಿತ್ತಳೆ ಈ ಮೂರು ಅಂಶಗಳಿದ್ದು, ಇದರಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು ಎಂಬುದರ ಆಧಾರದ ಮೇಲೆ ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.

ಕಿತ್ತಳೆ: ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನೀವು ಮೊದಲು ಕಿತ್ತಳೆ ಹಣ್ಣನ್ನು ನೋಡಿದ್ದರೆ, ಅದರರ್ಥ ನೀವು ಪ್ರಕಾಶಮಾನವಾದ ಆಂತರಿಕ ಶಕ್ತಿ ಮತ್ತು ಬಲವಾದ ಜೀವ ಶಕ್ತಿ ಹೊಂದಿರುವ ವ್ಯಕ್ತಿ. ನೀವು ಸಂತೋಷ, ಮತ್ತು ಭಾವನಾತ್ಮಕ ಪ್ರಾಮಾಣಿಕತೆಯನ್ನು ಹಂಬಲಿಸುತ್ತೀರಿ. ಏನಾದರೂ ಕೆಟ್ಟದ್ದು ಸಂಭವಿಸಿದರೆ ನೀವು ಬಹಳ ಬೇಗನೇ ಬೇಸರಗೊಳ್ಳುತ್ತೀರಿ. ಇನ್ನೂ ನಿಮ್ಮ ಮನಸ್ಥಿತಿ ಉತ್ತಮವಾಗಿದ್ದಾಗ, ನೀವು ಇತರರಿಗೆ ಸ್ಫೂರ್ತಿಯನ್ನು ತುಂಬುತ್ತೀರಿ.

ಇದನ್ನೂ ಓದಿ: ಕಣ್ಣಿನ ಬಣ್ಣದಿಂದ ತಿಳಿಯಬಹುದು ವ್ಯಕ್ತಿಯ ವ್ಯಕ್ತಿತ್ವದ ರಹಸ್ಯ

ಬೆಕ್ಕು: ಈ ನಿರ್ಧಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ನೀವು ಮೊದಲು ಬೆಕ್ಕನ್ನು ನೋಡಿದರೆ, ನೀವು ಅರ್ಥಗರ್ಭಿತರು, ಸ್ವತಂತ್ರರು ಮತ್ತು ಆಳವಾಗಿ ಗ್ರಹಿಸುವ ಸಾಮರ್ಥ್ಯವನ್ನು ಹೊಂದಿರುವವರು ಎಂದರ್ಥ.  ನೀವು ವೈಯಕ್ತಿಕ ಸ್ಥಳ ಮತ್ತು ಭಾವನಾತ್ಮಕ ಸುರಕ್ಷತೆಯನ್ನು ಗೌರವಿಸುವ ವ್ಯಕ್ತಿಯಾಗಿರುತ್ತೀರಿ.

ಫ್ರೈಡ್‌ ಎಗ್:‌ ನೀವು ಮೊದಲು ಹುರಿದ ಮೊಟ್ಟೆಗಳನ್ನು ನೋಡಿದರೆ, ನೀವು ದೃಢ ಮನಸ್ಸಿನವರು, ಪ್ರಾಯೋಗಿಕರು ಮತ್ತು ಭಾವನಾತ್ಮಕವಾಗಿ ಪ್ರಾಮಾಣಿಕರು ಎಂದರ್ಥ. ನೀವು ಇಷ್ಟವಾದರೂ ಇಷ್ಟವಾಗದಿದ್ದರೂ ಜನ ನಿಮ್ಮ ಬಳಿ ಸಲಹೆ ಕೇಳಲು ಯಾವಾಗಲೂ ಬರುತ್ತಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಜ್ಯ ರಾಜಕಾರಣದಲ್ಲಿ ಹೊಸ ದಾಖಲೆ ಮಾಡಿದ ಬೆನ್ನಲ್ಲೇ ಸಿದ್ದರಾಮಯ್ಯ ಅಚ್ಚರಿ ಮಾತು – Kannada News | I Don’t Know How Long Will I Stay In Politics Says Siddaramaiah Amid Power Tussle

ಹಾವೇರಿ (ಜನವರಿ 07): ಕರ್ನಾಟಕದ ದೀರ್ಘಾವಧಿ ಮುಖ್ಯಮಂತ್ರಿ ದಾಖಲೆ ಬರೆದು ಸಿದ್ದರಾಮಯ್ಯ (Siddaramaiah) ಅವರು ಇವತ್ತಿಗೆ ರೆಕಾರ್ಡ್ ರಾಮಯ್ಯ ಆಗಿದ್ದಾರೆ. ಹೌದು…ದೇವರಾಜು ಅರಸು ಅವರ ದಾಖಲೆ ಅಳಿಸಿ ಇವತ್ತಿಗೆ ಸಿದ್ದರಾಮಯ್ಯ ತಮ್ಮ ಹೆಸರಲ್ಲಿ ದಾಖಲೆ ಬರೆದಿದ್ದಾರೆ. ಕರ್ನಾಟಕದ ದೀರ್ಘಾವಧಿ ಸಿಎಂ ಆಗಿ ಸಿದ್ದರಾಮಯ್ಯ ರಾಜಕೀಯದಲ್ಲಿ ಮಿಂಚಿದ್ದಾರೆ. ಈ ನಡುವೆ ಪವರ್ ಶೇರ್ ಕಥೆ ಏನು? ಸಿದ್ದರಾಮಯ್ಯ ನೆಕ್ಸ್ಟ್ ಗೇಮ್ ಏನು? ಎಂಬ ಕುತೂಹಲ ಇದೆ. ಈ ಎಲ್ಲಾ ಬೆಳವಣಿಗೆಗಳ ನಡುವೆ ಜನರ ಆಶೀರ್ವಾದದಿಂದ ದಾಖಲೆ ಬರೆದಿದ್ದೀನಿ, ಇನ್ನೆಷ್ಟು ದಿನ ಇರ್ತಿನೋ ಎನ್ನುವ ಅಚ್ಚರಿ ಮಾತುಗಳನ್ನಾಡಿದ್ದಾರೆ.

ಕರ್ನಾಟಕ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಕಾಂಗ್ರೆಸ್ ಜೊತೆಗಿನ ಮೈತ್ರಿಗೆ ಬಿಜೆಪಿ ನಾಯಕರ ವಿರುದ್ಧ ಸಿಎಂ ಫಡ್ನವೀಸ್ ವಾಗ್ದಾಳಿ, ಕಠಿಣ ಕ್ರಮದ ಎಚ್ಚರಿಕೆ – Kannada News | Devendra Fadnavis angry on BJP Leaders for alliance with Congress in Ambernath local body

ಮುಂಬೈ, ಜನವರಿ 7: ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಇಂದು (ಜನವರಿ 7) ಕಾಂಗ್ರೆಸ್ ಜೊತೆಗಿನ ಯಾವುದೇ ಮೈತ್ರಿಯಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಂತಹ ಒಪ್ಪಂದವನ್ನು “ಸ್ವೀಕಾರಾರ್ಹವಲ್ಲ” ಎಂದು ಕರೆದಿದ್ದಾರೆ. ಅಂಬರ್ನಾಥ್‌ನಲ್ಲಿ ಸ್ಥಳೀಯ ಮಟ್ಟದಲ್ಲಿ ಬಿಜೆಪಿ (BJP) ನಾಯಕರು ಕಾಂಗ್ರೆಸ್ ಜೊತೆಗೆ ಮೈತ್ರಿ ಮಾಡಿಕೊಂಡಿದ್ದಕ್ಕೆ ಫಡ್ನವೀಸ್ ಅಸಮಾಧಾನ ಹೊರಹಾಕಿದ್ದಾರೆ. ಅವರು ತೆಗೆದುಕೊಂಡ ನಿರ್ಧಾರವನ್ನು ಸರಿಪಡಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಅಂಬರ್ನಾಥ್ ಮುನ್ಸಿಪಲ್ ಕೌನ್ಸಿಲ್‌ನಲ್ಲಿ ನಡೆದ ಅಚ್ಚರಿಯ ರಾಜಕೀಯ ಬೆಳವಣಿಗೆಯ ಹಿನ್ನೆಲೆಯಲ್ಲಿ ಈ ಸ್ಪಷ್ಟೀಕರಣ ಬಂದಿದೆ. ಅಲ್ಲಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನೆ ಅಧಿಕಾರಕ್ಕೆ ಬರುವುದನ್ನು ತಡೆಯಲು ಬಿಜೆಪಿ ಮತ್ತು ಕಾಂಗ್ರೆಸ್ ಕೈಜೋಡಿಸಿವೆ ಎಂದು ವರದಿಯಾಗಿದೆ. ಈ ಕ್ರಮವು ಮಹಾರಾಷ್ಟ್ರ ರಾಜ್ಯದಲ್ಲಿ ರಾಜಕೀಯ ಉದ್ವಿಗ್ನತೆಯನ್ನು ಹೆಚ್ಚಿಸಿದೆ.

ಇದನ್ನೂ ಓದಿ: ಕರ್ನಾಟಕ ಗೂಂಡಾ ರಾಜ್ಯವಾಗುತ್ತಿದೆ, ರಾಜ್ಯಪಾಲರ ಮಧ್ಯಪ್ರವೇಶವಾಗಲಿ; ಬಿಜೆಪಿ ನಾಯಕ ರವಿಕುಮಾರ್ ಆಗ್ರಹ

“ಕಾಂಗ್ರೆಸ್ ಜೊತೆಗಿನ ಮೈತ್ರಿ ಸ್ವೀಕಾರಾರ್ಹವಲ್ಲ. ಅಂಬರ್ನಾಥ್‌ನಲ್ಲಿ ಸ್ಥಳೀಯ ಮಟ್ಟದಲ್ಲಿ ತೆಗೆದುಕೊಂಡ ನಿರ್ಧಾರವನ್ನು ಸರಿಪಡಿಸಲಾಗುವುದು. ಕಾಂಗ್ರೆಸ್ ಜೊತೆ ಯಾವುದೇ ಮೈತ್ರಿ ಇರುವುದಿಲ್ಲ” ಎಂದು ಫಡ್ನವೀಸ್ ಹೇಳಿದ್ದಾರೆ.

“ಕಾಂಗ್ರೆಸ್ ಮುಕ್ತ ಭಾರತ”ಕ್ಕಾಗಿ ಬಿಜೆಪಿಯ ದೀರ್ಘಕಾಲದ ಅಭಿಯಾನದ ಹೊರತಾಗಿಯೂ ಮುಂಬೈನಿಂದ ಸುಮಾರು 70 ಕಿ.ಮೀ ದೂರದಲ್ಲಿರುವ ಅಂಬರ್ನಾಥ್​​ನಲ್ಲಿ ಶಿವಸೇನೆಯ ಶಿಂಧೆ ಬಣವನ್ನು ಅಧಿಕಾರದಿಂದ ದೂರವಿಡುವ ಉದ್ದೇಶದಿಂದಾಗಿ ಬಿಜೆಪಿ-ಕಾಂಗ್ರೆಸ್ ಮೈತ್ರಿಯು ರಾಜಕೀಯ ವಲಯಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ. ಅಲ್ಲಿನ ಕಾಂಗ್ರೆಸ್-ಬಿಜೆಪಿ ಮೈತ್ರಿಕೂಟಕ್ಕೆ ಅಂಬರ್ನಾಥ್ ವಿಕಾಸ್ ಅಘಾಡಿ ಎಂದು ಹೆಸರಿಸಲಾಗಿದೆ. ಈ ಬೆಳವಣಿಗೆಗಳು ಶಿವಸೇನೆಯ ಶಿಂಧೆ ಬಣದಲ್ಲಿ ಗಮನಾರ್ಹ ಅಸಮಾಧಾನವನ್ನು ಉಂಟುಮಾಡಿದೆ. ಬಿಜೆಪಿ-ಕಾಂಗ್ರೆಸ್ ಮೈತ್ರಿಕೂಟದ ನಂತರ ಶಿಂಧೆ ಬಣವು ಕೋಪಗೊಂಡಿದೆ.

ಇದನ್ನೂ ಓದಿ: ಸ್ಥಳೀಯ ಸಂಸ್ಥೆ ಚುನಾವಣೆ: JDS ಜೊತೆ ಮೈತ್ರಿಗೆ ಮಂಡ್ಯದಲ್ಲಿ ಬಿಜೆಪಿಗರ ಅಪಸ್ವರ

ಶಿವಸೇನೆಯ ಶಿಂಧೆ ಬಣದ ಭದ್ರಕೋಟೆ ಎಂದು ಅಂಬರ್ನಾಥ್ ಪರಿಗಣಿಸಲಾಗಿದೆ. ಏಕನಾಥ್ ಶಿಂಧೆ ಅವರ ಮಗ ಶ್ರೀಕಾಂತ್ ಶಿಂಧೆ ಈ ಕ್ಷೇತ್ರದ ಸಂಸದರಾಗಿದ್ದಾರೆ. ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಯಲ್ಲಿ ಶಿಂಧೆ ಬಣವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಆದರೆ ಬಹುಮತಕ್ಕೆ ಸ್ವಲ್ಪ ಕಡಿಮೆ ಇತ್ತು. ಬಿಜೆಪಿಯ ಅಭ್ಯರ್ಥಿಯನ್ನು ಮೇಯರ್ ಆಗಿ ಆಯ್ಕೆ ಮಾಡಲಾಯಿತು. ಮುನ್ಸಿಪಲ್ ಕೌನ್ಸಿಲ್ ಸರ್ಕಾರ ರಚಿಸಲು ಬಿಜೆಪಿ ತಮ್ಮೊಂದಿಗೆ ಮೈತ್ರಿ ಮಾಡಿಕೊಳ್ಳುತ್ತದೆ ಎಂದು ಶಿಂಧೆ ಬಣ ನಿರೀಕ್ಷಿಸಿತ್ತು. ಆದರೆ, ಅನಿರೀಕ್ಷಿತ ತಿರುವಿನಲ್ಲಿ ಶಿಂಧೆ ಬಣವನ್ನು ಬೈಪಾಸ್ ಮಾಡಿ ಸ್ಥಳೀಯ ಮಟ್ಟದಲ್ಲಿ ಕಾಂಗ್ರೆಸ್ ಜೊತೆ ಕೌನ್ಸಿಲ್ ಸರ್ಕಾರವನ್ನು ಬಿಜೆಪಿ ರಚಿಸಿತು. ಈ ನಿರ್ಧಾರವು ತೀಕ್ಷ್ಣವಾದ ರಾಜಕೀಯ ಪ್ರತಿಕ್ರಿಯೆಗಳನ್ನು ಹುಟ್ಟುಹಾಕಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 3:57 pm, Wed, 7 January 26

Source link

‘ನಮ್ಮ ಬ್ಯಾಟ್ ಬಳಸಬೇಡಿ’; ಬಾಂಗ್ಲಾ ಆಟಗಾರರೊಂದಿಗಿನ ಒಪ್ಪಂದ ಮುರಿದ ಭಾರತೀಯ ಬ್ಯಾಟ್ ಕಂಪನಿ – Kannada News | BCCI vs BCB: SG Ends Bangladesh Cricket Sponsorship After IPL Ban

ಏಟಿಗೆ ಎದುರೇಟು ನೀಡುವುದನ್ನು ಭಾರತೀಯರಿಗೆ ಹೊಸದಾಗಿ ಕಲಿಸಿಕೊಡಬೇಕಿಲ್ಲ. ಅದರಲ್ಲೂ ಕ್ರಿಕೆಟ್ ವಿಚಾರಕ್ಕೆ ಬಂದರೆ ಭಾರತೀಯರ ಮುಂದೆ ನಿಲ್ಲುವವರಿಲ್ಲ. ಹೀಗಿರುವಾಗ ವಿಶ್ವ ಕ್ರಿಕೆಟ್​ನ ದೊಡ್ಡಣ್ಣ ಎನಿಸಿಕೊಂಡಿರುವ ಬಿಸಿಸಿಐನ (BCCI) ಎದುರು ಹಾಕಿಕೊಂಡಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗೆ (BCB) ಸಂಕಷ್ಟದ ದಿನಗಳು ಆರಂಭವಾಗಿವೆ ಎನ್ನಬಹುದು. ಬಾಂಗ್ಲಾದೇಶದಲ್ಲಿ ಐಪಿಎಲ್ (IPL) ಪ್ರದರ್ಶನವನ್ನು ನಿಷೇಧಿಸಿದ ನಂತರ, ಅಲ್ಲಿನ ಬ್ಯಾಟ್ಸ್‌ಮನ್‌ಗಳು ಇನ್ನು ಮುಂದೆ ಭಾರತದ ಪ್ರಮುಖ ಬ್ಯಾಟ್ ತಯಾರಿಕಾ ಕಂಪನಿಯಾದ ಎಸ್‌ಜಿ ತಯಾರಿಸಿದ ಬ್ಯಾಟ್‌ಗಳನ್ನು ಬಳಸದಂತೆ ನಿಷೇಧ ಹೇರಲಾಗಿದೆ. ವರದಿಗಳ ಪ್ರಕಾರ, ಇತ್ತೀಚಿನ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಬಾಂಗ್ಲಾದೇಶ ಕ್ರಿಕೆಟಿಗರೊಂದಿಗಿನ ಒಪ್ಪಂದವನ್ನು ಎಸ್‌ಜಿ ಕೊನೆಗೊಳಿಸಲು ನಿರ್ಧರಿಸಿದೆ.

ಒಪ್ಪಂದ ಮುರಿದ ಭಾರತೀಯ ಬ್ಯಾಟ್ ಕಂಪನಿ

ಬಾಂಗ್ಲಾದೇಶದ ಅನೇಕ ಬ್ಯಾಟ್ಸ್‌ಮನ್‌ಗಳು ಎಸ್‌ಜಿ ಬ್ಯಾಟ್‌ಗಳನ್ನು ಬಳಸುತ್ತಾರೆ. ಅದರಲ್ಲಿ ಪ್ರಮುಖರು ಬಾಂಗ್ಲಾದೇಶ ಟಿ20 ವಿಶ್ವಕಪ್ ತಂಡದ ನಾಯಕ ಲಿಟ್ಟನ್ ದಾಸ್. ವರದಿಗಳ ಪ್ರಕಾರ, ಎಸ್‌ಜಿ ಬಾಂಗ್ಲಾದೇಶ ಆಟಗಾರರೊಂದಿಗಿನ ಎಲ್ಲಾ ಕಿಟ್ ಪ್ರಾಯೋಜಕತ್ವ ಒಪ್ಪಂದಗಳನ್ನು ರದ್ದುಗೊಳಿಸಿದೆ. ಭಾರತೀಯ ಕಂಪನಿಯು ಬಾಂಗ್ಲಾದೇಶದ ಆಟಗಾರರೊಂದಿಗಿನ ತನ್ನ ಒಪ್ಪಂದವನ್ನು ವಿಸ್ತರಿಸಲು ಯಾವುದೇ ಆಸಕ್ತಿಯನ್ನು ತೋರಿಸಿಲ್ಲ ಎಂದು ವರದಿಯಾಗಿದೆ.

ವಿವಾದ ಹುಟ್ಟಿಕೊಂಡಿದ್ದು ಎಲ್ಲಿ?

ಭಾರತ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಗಳ ನಡುವೆ ಸಂಘರ್ಷ ಹುಟ್ಟಿಕೊಳ್ಳಲು ಕಾರಣ ಮುಸ್ತಾಫಿಜುರ್ ರೆಹಮಾನ್ ಅವರನ್ನು ಐಪಿಎಲ್​ನಿಂದ ಹೊರಗಿಟ್ಟಿದ್ದು. ಬಿಸಿಸಿಐ ಮುಸ್ತಾಫಿಜುರ್ ಅವರನ್ನು ಐಪಿಎಲ್‌ನಿಂದ ಹೊರಗಿಟ್ಟಿರುವುದು ಬಾಂಗ್ಲಾದೇಶ ಕ್ರೀಡಾ ಸಚಿವಾಲಯ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯನ್ನು ಕೆರಳುವಂತೆ ಮಾಡಿದೆ. ಕ್ರೀಡಾ ಸಚಿವಾಲಯದ ಸೂಚನೆಗಳನ್ನು ಅನುಸರಿಸಿ, ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯು ಐಸಿಸಿಗೆ ಇಮೇಲ್ ಮಾಡಿ, ಬಾಂಗ್ಲಾ ತಂಡದ ಟಿ20 ವಿಶ್ವಕಪ್ ಪಂದ್ಯಗಳ ಸ್ಥಳವನ್ನು ಸ್ಥಳಾಂತರಿಸಬೇಕೆಂದು ಒತ್ತಾಯಿಸಿದೆ. ಏತನ್ಮಧ್ಯೆ, ಬಾಂಗ್ಲಾದೇಶದಲ್ಲಿ ಐಪಿಎಲ್ ಪ್ರಸಾರವನ್ನು ಸಹ ನಿಷೇಧಿಸಿದೆ.

ಮುಸ್ತಾಫಿಜುರ್ ಐಪಿಎಲ್​ನಿಂದ ಔಟ್; ಭಾರತದಲ್ಲಿ ಟಿ20 ವಿಶ್ವಕಪ್ ಆಡುವುದಿಲ್ಲ ಎಂದ ಬಾಂಗ್ಲಾ

ಬೇಡಿಕೆ ತಿರಸ್ಕರಿಸಿದ ಐಸಿಸಿ

ಬಾಂಗ್ಲಾದೇಶದ ಟಿ20 ವಿಶ್ವಕಪ್ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸುವ ಸಾಧ್ಯತೆಯನ್ನು ಐಸಿಸಿ ಸ್ಪಷ್ಟವಾಗಿ ನಿರಾಕರಿಸಿದೆ. ವರದಿಗಳ ಪ್ರಕಾರ, ಬಾಂಗ್ಲಾದೇಶ ತಂಡವು ತಮ್ಮ ಪಂದ್ಯಗಳನ್ನು ಈಗ ಪ್ರಕಟವಾಗಿರುವ ವೇಳಾಪಟ್ಟಿಯ ಪ್ರಕಾರವೇ ಆಡಬೇಕೆಂದು ಐಸಿಸಿ ಸ್ಪಷ್ಟವಾಗಿ ಹೇಳಿದೆ. ಇದರರ್ಥ ಬಾಂಗ್ಲಾದೇಶವು ತಮ್ಮ ಟಿ20 ವಿಶ್ವಕಪ್ 2026 ರ ಗುಂಪು ಪಂದ್ಯಗಳನ್ನು ಭಾರತದಲ್ಲಿ ಆಡಬೇಕಾಗುತ್ತದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:01 pm, Wed, 7 January 26

Source link

ಐಪಿಎಲ್​ಗೂ ಮುನ್ನ ವೈವಾಹಿಕ ಜೀವನಕ್ಕೆ ಕಾಲಿರಿಸಲಿದ್ದಾರೆ ಅರ್ಜುನ್- ಸಾನಿಯಾ; ದಿನಾಂಕ ಬಹಿರಂಗ – Kannada News | Arjun Tendulkar Wedding: Sachin’s Son Marries Sania Chandok in 2026. Date Revealed!

ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್ (Sachin Tendulkar) ಅವರ ಮಗ ಅರ್ಜುನ್ ತೆಂಡೂಲ್ಕರ್ (Arjun Tendulkar) ಶೀಘ್ರದಲ್ಲೇ ತಮ್ಮ ದೀರ್ಘಕಾಲದ ಸಂಗಾತಿ ಸಾನಿಯಾ ಚಾಂದೋಕ್ (Sania Chandok) ಅವರನ್ನು ವಿವಾಹವಾಗಲಿದ್ದಾರೆ. ವರದಿಗಳ ಪ್ರಕಾರ, ಈ ಜೋಡಿ ಮಾರ್ಚ್ 2026 ರಲ್ಲಿ ವಿವಾಹವಾಗಲಿದ್ದು, ದಿನಾಂಕವನ್ನೂ ಸಹ ಬಹಿರಂಗಪಡಿಸಲಾಗಿದೆ. ವಾಸ್ತವವಾಗಿ ಕಳೆದ ಆಗಸ್ಟ್​ನಲ್ಲಿ ಅರ್ಜುನ್ ಹಾಗೂ ಸಾನಿಯಾ ಅವರ ನಿಶ್ಚಿತಾರ್ಥ ಬಹಳ ಖಾಸಗಿಯಾಗಿ ನಡೆದಿತ್ತು. ಈ ಕಾರ್ಯಕ್ರಮದಲ್ಲಿ ಇಬ್ಬರ ಕುಟುಂಬ ಸದಸ್ಯರು ಮತ್ತು ಕೆಲವು ಆಪ್ತರು ಮಾತ್ರ ಹಾಜರಿದ್ದರು. ಅದಾದ ಕೆಲವು ದಿನಗಳ ಬಳಿಕ ಸ್ವತಃ ಸಚಿನ್ ತೆಂಡೂಲ್ಕರ್ ಅವರೇ ತಮ್ಮ ಮಗನ ನಿಶ್ಚಿತಾರ್ಥದ ವಿಚಾರವನ್ನು ಸಾರ್ವಜನಿಕಗೊಳಿಸಿದ್ದರು. ಇದೀಗ 2026 ರಲ್ಲಿ ಅರ್ಜುನ್ ಹಾಗೂ ಸಾನಿಯಾ ಹಸೆಮಣೆ ಏರಲಿದ್ದಾರೆ.

ಅರ್ಜುನ್ ಮದುವೆ ದಿನಾಂಕ ಬಹಿರಂಗ

ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ಐಪಿಎಲ್ 2026 ಕ್ಕೂ ಮುಂಚಿತವಾಗಿ ವಿವಾಹದ ಸಿದ್ಧತೆಗಳನ್ನು ಪ್ರಾರಂಭಿಸಿದ್ದಾರೆ. ಮಾಧ್ಯಮ ವರದಿಗಳ ಪ್ರಕಾರ, ಅರ್ಜುನ್ ಮತ್ತು ಸಾನಿಯಾ ಚಾಂದೋಕ್ ಅವರ ವಿವಾಹ ದಿನಾಂಕವನ್ನು ಮಾರ್ಚ್ 5, 2026 ಕ್ಕೆ ನಿಗದಿಪಡಿಸಲಾಗಿದೆ. ಮಾರ್ಚ್ 3 ರಂದು ವಿವಾಹಪೂರ್ವ ಸಮಾರಂಭಗಳು ಪ್ರಾರಂಭವಾಗಲಿವೆ. ಸಾನಿಯಾ ಮುಂಬೈನ ಪ್ರಮುಖ ಉದ್ಯಮಿ ರವಿ ಘಾಯ್ ಅವರ ಮೊಮ್ಮಗಳಾಗಿದ್ದು, ತೆಂಡೂಲ್ಕರ್ ಕುಟುಂಬಕ್ಕೆ ಬಹಳ ಹಿಂದಿನಿಂದಲೂ ಹತ್ತಿರವಾಗಿದ್ದಾರೆ. ವಿವಾಹ ಆಚರಣೆಗಳು ಮುಂಬೈನಲ್ಲಿ ನಡೆಯಲಿದ್ದು, ಕುಟುಂಬ, ಆಪ್ತ ಸ್ನೇಹಿತರು ಮತ್ತು ಕ್ರಿಕೆಟ್ ಜಗತ್ತಿನ ಆಯ್ದ ಕೆಲವರು ಮಾತ್ರ ಭಾಗವಹಿಸುವ ಖಾಸಗಿ ಕಾರ್ಯಕ್ರಮವಾಗಿರಲಿದೆ ಎಂದು ವರದಿಯಾಗಿದೆ.

SMAT 2025: W,W,W.. ಅರ್ಜುನ್ ಮಾರಕ ದಾಳಿಗೆ ತತ್ತರಿಸಿದ ಮಧ್ಯಪ್ರದೇಶ; ಗೋವಾಗೆ 2ನೇ ಜಯ

ಲಕ್ನೋ ಪರ ಆಡಲಿರುವ ಅರ್ಜುನ್

ಇತ್ತೀಚೆಗೆ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನಿಂದ ಲಕ್ನೋ ಸೂಪರ್ ಜೈಂಟ್ಸ್‌ ತಂಡಕ್ಕೆ ವರ್ಗಾವಣೆಗೊಂಡಿರುವ ಅರ್ಜುನ್ ತೆಂಡೂಲ್ಕರ್ ವೃತ್ತಿಜೀವನದಂತೆ ವೈಯಕ್ತಿಕ ಜೀವನದಲ್ಲೂ ಎರಡನೇ ಇನ್ನಿಂಗ್ಸ್ ಆರಂಭಿಸಲಿದ್ದಾರೆ. ಹೀಗಾಗಿ 2026 ರ ವರ್ಷವು ಅರ್ಜುನ್‌ಗೆ ಅವರ ವೃತ್ತಿಜೀವನ ಮತ್ತು ವೈಯಕ್ತಿಕ ಜೀವನದಲ್ಲಿ ಸ್ಮರಣೀಯ ವರ್ಷವಾಗಲಿದೆ. ಪ್ರಸ್ತುತ ಗೋವಾ ತಂಡದ ಪರ ವಿಜಯ್ ಹಜಾರೆ ಟ್ರೋಫಿಯನ್ನು ಆಡುತ್ತಿರುವ ಅರ್ಜುನ್ ಬೌಲಿಂಗ್‌ನಲ್ಲಿ ಮಿಂಚುತ್ತಿದ್ದಾರೆಯಾದರೂ, ಬ್ಯಾಟಿಂಗ್​ನಲ್ಲಿ ಅವರಿಂದ ಹೇಳಿಕೊಳ್ಳುವಂತಹ ಪ್ರದರ್ಶನ ಮೂಡಿಬಂದಿಲ್ಲ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:15 pm, Wed, 7 January 26

Source link

ಹೆಣ್ಣು ತಾಯಿಯಾಗುವುದು ದುರ್ಬಲತೆಯೇ? 30 ಲಕ್ಷ ರೂ. ಸಂಬಳದ ಉದ್ಯೋಗ ನಿರಾಕರಿಸಿದ ಬೆಂಗಳೂರಿನ ಮಹಿಳೆ – Kannada News | Workplace Bias: Bengaluru Woman Refuses 30L Salary Post Maternity

ಬೆಂಗಳೂರು, ಜ.7: ಬೆಂಗಳೂರು ಮೂಲದ ಮಹಿಳೆಯೊಬ್ಬರು 30 ಲಕ್ಷ ಸಂಬಳ ಸಿಗುವ ಬ್ಯಾಂಕ್ (Motherhood Discrimination)​​  ಉದ್ಯೋಗವನ್ನು ನಿರಾಕರಿಸಿದ್ದಾರೆ. ಈ ಬಗ್ಗೆ ಸೋಶಿಯಲ್​​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಮೊದಲ ಬಾರಿ ತಾಯಿ ಆಗಿರುವ ಬಗ್ಗೆ ಹಾಗೂ ಆ ತಾಯಿತನದ ಸುಖದ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಚರ್ಚೆಯಾಗಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ಕೋಮಲ್​​​ ಎಂಬ ಮಹಿಳೆ ಈ ಬಗ್ಗೆ ಹೇಳಿಕೊಂಡಿದ್ದಾರೆ. ತನ್ನ ನಿರ್ಧಾರವು ಹಣದ ಬಗ್ಗೆ ಅಲ್ಲ, ಹೆರಿಗೆಯ ನಂತರ ಕೆಲಸಕ್ಕೆ ಮರಳುವ ಮಹಿಳೆಯರಿಗೆ ಕಚೇರಿಯಲ್ಲಿ ಸಿಗುವ ಬೆಲೆ ಹೇಗಿರುತ್ತದೆ ಎಂಬುದನ್ನು ತಿಳಿಸಿದ್ದಾರೆ. ಮಗು ಪಡೆದ ನಂತರ ಮಹಿಳೆಯರು ದುರ್ಬಲರು ಎಂಬ ಭಾವನೆ ಯಾಕೆ ಎಂದು ಪ್ರಶ್ನಿಸಿದ್ದಾರೆ.

ಕೋಮಲ್​​ ಅವರು ಹೇರಿಗೆ ಕಾರಣಕ್ಕೆ ಹಿಂದಿನ ಕೆಲಸವನ್ನು ಐದನೇ ತಿಂಗಳಲ್ಲಿ ತೊರೆದು ನಂತರ, ತಾಯಿತನದ ಸುಖವನ್ನು ಪಡೆದಿದ್ದಾರೆ ಎಂದು ಈ ಪೋಸ್ಟ್​​​ನಲ್ಲಿ ಹೇಳಿದ್ದಾರೆ. ಕೋಮಲ್​​ ಅವರ ಗಂಡ ಬೆಂಗಳೂರಿನಲ್ಲಿ ಕೆಲಸದಲ್ಲಿದ್ದರು, ಆದರೆ ಕೋಮಲ್​ ಮುಂಬೈನಲ್ಲಿ ವಾಸವಾಗಿದ್ದರು. ನಂತರ ಅವರು ಕೂಡ ಬೆಂಗಳೂರಿಗೆ ಬಂದಿದ್ದಾರೆ. ಈ ವೇಳೆ ಇಲ್ಲಿನ ಬ್ಯಾಂಕ್​​​ವೊಂದು, ಅವರ ಪ್ರೊಫೈಲ್ ಮತ್ತು ಆದ್ಯತೆಯ ಸ್ಥಳ ಎರಡಕ್ಕೂ ಹೊಂದಿಕೆಯಾಗುವ ಕೆಲಸ ನೀಡಲು ಮುಂದಾಗಿತ್ತು. ಅದಕ್ಕಾಗಿ ಅವರಿಗೆ ಸಂದರ್ಶನವನ್ನು ಕೂಡ ಮಾಡಿತ್ತು. ಸಂದರ್ಶನಕ್ಕಾಗಿ 8 ತಿಂಗಳು ತೆಗೆದುಕೊಂಡಿದೆ.

ಉದ್ಯೋಗ ಪಡೆಯುವವರಿಗೆ ಬ್ಯಾಂಕ್​​​ ಯಾವುದೇ ಆಂತರಿಕ ನಿಯಮಗಳನ್ನು ಮಾಡಿರಲಿಲ್ಲ. ಆ ಕಾರಣಕ್ಕೆ ಇವರು ತಾಯಿ ಆಗಿರುವ ಬಗ್ಗೆ ಬ್ಯಾಂಕ್​​​ಗೆ ಹೇಳಿಲ್ಲ. ತಾಯೊಯಾದ ಕೇವಲ 14 ದಿನಗಳ ನಂತರ ಸಂದರ್ಶನವನ್ನು ಅಂತಿಮ ಮಾಡಿ, ಅವರಿಗೆ ಕೆಲಸ ಪಕ್ಕಾ ಮಾಡಿತ್ತು. ಆದರೆ ಈ ವೇಳೆ ಕೋಮಲ್​​ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಬ್ಯಾಂಕ್​​ಗೆ ತಿಳಿಯಿತು. ಅದಕ್ಕೆ ಕೋಮಲ್​​ ಕೂಡ ನಾನು ಇತ್ತೀಚೆಗೆ ತಾಯಿಯಾಗಿರುವುದು ಎಂದು ಸ್ಪಷ್ಟನೆ ನೀಡಿದ್ದಾರೆ. ಆದರೆ ಬ್ಯಾಂಕ್​​ ಇದಕ್ಕೆ ಒಪ್ಪಿಲ್ಲ. ಆದರೆ ಇದರ ಹೊರತಾಗಿಯೂ, ಪ್ರಕ್ರಿಯೆ ಮುಂದುವರೆದಿದೆ ಎಂದು ಕೋಮಲ್ ಹೇಳಿದ್ದಾರೆ. ಮುಖಾಮುಖಿ ಸಂದರ್ಶನದಲ್ಲಿ, ಸಂದರ್ಶಕರು, 3 ತಿಂಗಳ ಮಗು ಇರಬೇಕಾದರೆ ಇಷ್ಟು ಬೇಗ ಯಾಕೆ ಮತ್ತೆ ಕೆಲಸ ಬಂದಿದ್ದೀರಾ ಎಂದು ಕೇಳಿದ್ದಾರೆ. ಇದಕ್ಕೆ ವೈಯಕ್ತಿಕ ಕಾರಣ ನೀಡಿದ್ದಾರೆ.

ವೈರಲ್​​ ಪೋಸ್ಟ್​​ ಇಲ್ಲಿದೆ ನೋಡಿ:

“ಸಂಸ್ಥೆಯು ನನ್ನ ಪ್ರೊಫೈಲ್ ಅನ್ನು ಇಷ್ಟಪಟ್ಟಿದ್ದರೂ, ತಾಯಿ ಎಂದು ತಿಳಿದ ನಂತರ ಆಫರ್​​ನ್ನು ಕೂಡ ಕಡಿಮೆ ಮಾಡಲಾಗಿತ್ತು. 30 ಲಕ್ಷ ರೂ. ಆಫರ್ ಅನ್ನು ಸ್ವೀಕರಿಸಿ ಅಥವಾ ಆಫರ್ ಹಿಂಪಡೆಯಬಹುದು ಎಂದು ಹೇಳಿದ್ದಾರೆ. ಇಲ್ಲಿ ಹಣದ ಮೌಲ್ಯಕ್ಕಿಂತ, ಕೆಲಸ, ಸಾಮರ್ಥ್ಯ, ಭಾವನೆಗಳಿಗೆ ಬೆಲೆ ಇಲ್ಲ. ಮಗುವಿದೆ ಎಂಬ ಕಾರಣಕ್ಕೆ ನನ್ನನ್ನು ದುರ್ಬಲ ಎಂದು ನಿರ್ಧರಿಸಿದ್ದಾರೆ. ಹಾಗಾಗಿ ನಾನು ಅಲ್ಲಿಂದ ಹೊರನಡೆದೆ, ಅವರ ಈ ಪ್ರಸ್ತಾಪವನ್ನು ತಿರಸ್ಕರಿಸುವುದು ನನ್ನ ಜೀವನದ ಉತ್ತಮ ನಿರ್ಧಾರವಾಗಿತ್ತು. ನಾನು ಈ ಬಗ್ಗೆ ಯಾವುದೇ ವಿಷಾದ ವ್ಯಕ್ತಪಡಿಸುವುದಿಲ್ಲ” ಎಂದು ಹೇಳಿದ್ದಾರೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಹೊಸ ಪ್ಲಾನ್: ಶಾಲಾ ಬಸ್‌ನಲ್ಲಿ ಬಯೋ-ಟಾಯ್ಲೆಟ್ ಸೌಲಭ್ಯ

ಈ ಪೋಸ್ಟ್​​ಗೆ​ ಹಲವು ನೆಟ್ಟಿಗರು ಕಮೆಂಟ್​​ ಮಾಡಿದ್ದಾರೆ. ಒಳ್ಳೆಯ ನಿರ್ಧಾರ ಮಾತೃತ್ವ ರಜೆಯ ನಂತರ ಕೆಲಸಕ್ಕೆ ಮರಳುವವರ ದುಃಸ್ಥಿತಿ ಮತ್ತೊಂದು ವೃತ್ತಾಂತ ಎಂದು ಒಬ್ಬರು ಕಮೆಂಟ್​​ ಮಾಡಿದ್ದಾರೆ. ಇದು ಕಂಪನಿಯ ಸಮಸ್ಯೆ ಮಾತ್ರವಲ್ಲ, ಹಲವು ಕಡೆ ಇಂತಹ ಘಟನೆಗಳು ನಡೆದಿದೆ ಎಂದು ಮತ್ತೊಬ್ಬರು ಕಮೆಂಟ್​ ಮಾಡಿದ್ದಾರೆ. ವೇತನ, ಮನ್ನಣೆ ಮತ್ತು ನಿರೀಕ್ಷೆಗಳ ವಿಷಯದಲ್ಲಿ ಕಾರ್ಪೊರೇಟ್ ಸಂಸ್ಥೆಗಳಲ್ಲಿ ಮಹಿಳೆಯರ ಕಡೆಗೆ ಪಕ್ಷಪಾತ ಹೊಂದಿದೆ ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

GDP growth: ಇಂಡಿಯಾ ರೇಟಿಂಗ್ಸ್ ಪ್ರಕಾರ ಮುಂದಿನ ವರ್ಷ ಭಾರತದ ಜಿಡಿಪಿ ಬೆಳವಣಿಗೆ ಶೇ. 6.9 – Kannada News | India Ratings Agency estimates GDP growth to be 6.9pc in 27fy

ನವದೆಹಲಿ, ಜನವರಿ 7: ಈ ಹಣಕಾಸು ವರ್ಷದಲ್ಲಿ ಜಾಗತಿಕ ಅನಿಶ್ಚಿತ ವಾತಾವರಣ ನಡುವೆಯೂ ಮೊದಲ ಆರು ತಿಂಗಳಲ್ಲಿ ಭಾರತ ಶೇ. 8ರಷ್ಟು ಆರ್ಥಿಕ ಅಭಿವೃದ್ಧಿ ದಾಖಲಿಸಿದೆ. ಈ ವರ್ಷ ನಿರೀಕ್ಷೆಮೀರಿದ ಪ್ರಮಾಣದಲ್ಲಿ ಜಿಡಿಪಿ ಹಿಗ್ಗುವ ಸಾಧ್ಯತೆ ಹೆಚ್ಚಿದೆ. ಇಂಡಿಯಾ ರೇಟಿಂಗ್ಸ್ ಅಂಡ್ ರಿಸರ್ಚ್ ಏಜೆನ್ಸಿ (India Ratings) ಪ್ರಕಾರ ಈ ವರ್ಷ ಭಾರತ ಶೇ. 7.4ರಷ್ಟು ಬೆಳವಣಿಗೆ ಹೊಂದಬಹುದು. ಆದರೆ, ಮುಂದಿನ ವರ್ಷ ಹೇಗೆ? ಈ ಏಜೆನ್ಸಿ ಪ್ರಕಾರ ಮುಂದಿನ ವರ್ಷದಲ್ಲಿ (2026-27) ಭಾರತದ ಜಿಡಿಪಿ (GDP) ಶೇ. 6.9 ದರವನ್ನು ದಾಖಲಿಸಬಹುದು ಎಂದು ಅಂದಾಜಿಸಲಾಗಿದೆ.

ಸರ್ಕಾರ ಜಾರಿಗೆ ತಂದ ವಿವಿಧ ಸುಧಾರಣೆಗಳಿಂದ ಬೆಳವಣಿಗೆಗೆ ಪುಷ್ಟಿ

ಇಂಡಿಯಾ ರೇಟಿಂಗ್ ಏಜೆನ್ಸಿ ಅಭಿಪ್ರಾಯದ ಪ್ರಕಾರ ಕಳೆದ ಬಜೆಟ್​ನಲ್ಲಿ (2025-26) ತೆಗೆದುಕೊಳ್ಳಲಾದ ಕ್ರಮಗಳು, ಜಿಎಸ್​ಟಿ ದರ ಇಳಿಕೆ, ವಿವಿಧ ದೇಶಗಳ ನಡುವೆ ಮಾಡಿಕೊಳ್ಳಲಾದ ಮುಕ್ತ ವ್ಯಾಪಾರ ಒಪ್ಪಂದ, ಇವೆಲ್ಲವೂ ಅಭಿವೃದ್ಧಿಗೆ ಪುಷ್ಟಿ ಕೊಡಬಲ್ಲುವು. ಅಮೆರಿಕದ ಟ್ಯಾರಿಫ್ ಸೇರಿದಂತೆ ಬಾಹ್ಯ ಒತ್ತಡಗಳನ್ನು ಮೆಟ್ಟಿ ನಿಂತು ಬೆಳವಣಿಗೆ ಹೊಂದಲು ಈ ಸುಧಾರಣಾ ಕ್ರಮಗಳು ನೆರವಾಗಬಹುದು ಎಂದು ಈ ಏಜೆನ್ಸಿ ನಿರೀಕ್ಷಿಸಿದೆ.

ಇದನ್ನೂ ಓದಿ: 50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?

ಭಾರತದ ಬೆಳವಣಿಗೆಯ ಹಾದಿಯಲ್ಲಿರುವ ತೊಡಕುಗಳ್ಯಾವುವು?

ಇಂಡಿಯಾ ರೇಟಿಂಗ್ ಅಂಡ್ ರಿಸರ್ಚ್ ಸಂಸ್ಥೆಯು ಭಾರತದ ಬೆಳವಣಿಗೆಯ ಸಾಧಕಗಳ ಜೊತೆಗೆ ಬಾಧಕವಾಗಿರುವ ಅಂಶಗಳನ್ನೂ ತೋರಿಸಿ ಎಚ್ಚರಿಸಿದೆ. 2026ರ ಮಧ್ಯದಲ್ಲಿ ಎಲ್ ನಿನೋ ಪರಿಣಾಮ ಭಾರತದ ಮೇಲಾಗಬಹುದು. ಅಂದರೆ ಮುಂಗಾರು ಋತು ಮೊಟಕುಗೊಳ್ಳಬಹುದು. ಏಜೆನ್ಸಿ ಪ್ರಸ್ತಾಪಿಸಿರುವ ಪ್ರಮುಖ ತೊಡಕುಗಳಲ್ಲಿ ಇದೂ ಒಂದು.

ಇದರ ಜೊತೆಗೆ, ದುರ್ಬಲ ಕರೆನ್ಸಿ, ಬಂಡವಾಳ ಹೊರಹೋಗುವಿಕೆ, ಜಾಗತಿಕ ವ್ಯಾಪಾರ ವಹಿವಾಟು ಕುಂಠಿತಗೊಳ್ಳುವುದು, ತೆರಿಗೆ ಸಂಗ್ರಹ ಕಡಿಮೆಗೊಳ್ಳುವುದು ಇತ್ಯಾದಿ ಸವಾಲುಗಳು ಭಾರತದ ಮುಂದಿವೆ.

ಇದನ್ನೂ ಓದಿ: ಭಾರತದ ಜಿಡಿಪಿ ಲೆಕ್ಕಾಚಾರಕ್ಕೆ ಬೇಸ್ ಇಯರ್ 2011-12 ಅಲ್ಲ, 2022-23; ಇದರಿಂದೇನು ಪ್ರಯೋಜನ?

ಹಾಗೆಯೇ, 2025-26 ಅನ್ನು ಜಿಡಿಪಿ ಲೆಕ್ಕಾಚಾರಕ್ಕೆ ಆಧಾರ ವರ್ಷವಾಗಿ ಇಡಲಾಗುತ್ತದೆ. ಈ ವರ್ಷ ಪ್ರಬಲ ಬೆಳವಣಿಗೆ ದರ ದಾಖಲಾಗುತ್ತದೆ. ಇದರಿಂದಾಗಿ ಮುಂದಿನ ವರ್ಷ (2026-27) ಪ್ರಬಲ ಬೇಸ್ ಎಫೆಕ್ಟ್​ನಿಂದ ಜಿಡಿಪಿ ದರಕ್ಕೆ ಹಿನ್ನಡೆಯಾಗಲೂ ಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ನೀವು ಸೀಫುಡ್ ಪ್ರೀಯರೆ? ಇಷ್ಟಪಟ್ಟು ತಿನ್ನುವ ಆಹಾರದಲ್ಲಿರಬಹುದು ಮೈಕ್ರೋಪ್ಲಾಸ್ಟಿಕ್‌! ಹೇಗೆ ತಡೆಯುವುದು ತಿಳಿದುಕೊಳ್ಳಿ – Kannada News | Microplastics & Food Safety: Tips to Reduce Exposure

ಇತ್ತೀಚಿನ ದಿನಗಳಲ್ಲಿ ಜನರು ಪ್ಲಾಸ್ಟಿಕ್ ಕವರ್‌ ಮತ್ತು ಬಾಟಲಿಗಳ ಬಳಕೆಯನ್ನು ಕಡಿಮೆ ಮಾಡಿದ್ದಾರೆ. ಆದರೆ ಇದರಿಂದ ಪ್ಲಾಸ್ಟಿಕ್ ಮುಕ್ತ ಭಾರತ ನಮ್ಮದಾಗುತ್ತದೆ ಎಂಬುದು ತಪ್ಪು ಕಲ್ಪನೆ. ಮೈಕ್ರೋಪ್ಲಾಸ್ಟಿಕ್‌ ಕಣಗಳು ಈಗಾಗಲೇ ಎಲ್ಲೆಡೆ ಹರಡಿದ್ದು, ನಾವು ದಿನನಿತ್ಯ ಬಳಸುವ ಉಪ್ಪಿನಿಂದ ಹಿಡಿದು ಕುಡಿಯುವ ನೀರಿನವರೆಗೆ ಈ ಮೈಕ್ರೋಪ್ಲಾಸ್ಟಿಕ್‌ಗಳು (Microplastics) ನಮ್ಮ ಆಹಾರವನ್ನು ಪ್ರವೇಶಿಸಿದೆ. ಹಾಗಾಗಿ ಈ ಬಗ್ಗೆ ಇನ್ನಾದರೂ ಗಮನಹರಿಸಬೇಕಾಗಿದೆ. ಇಲ್ಲವಾದಲ್ಲಿ ಮುಂದೊಂದು ದಿನ ಇದರಿಂದ ಅಪಾಯ ಕಟ್ಟಿಟ್ಟ ಬುತ್ತಿ. ಹಾಗಾದರೆ ಮೈಕ್ರೋಪ್ಲಾಸ್ಟಿಕ್‌ ಕಣಗಳು ಹೇಗೆ ನಮ್ಮ ಆಹಾರದಲ್ಲಿ ಸೇರಿಕೊಳ್ಳುತ್ತದೆ, ಅವುಗಳಿಂದ ಯಾವ ರೀತಿಯ ಸಮಸ್ಯೆಗಳು ಉಂಟಾಗುತ್ತದೆ, ಅದನ್ನು ಹೇಗೆ ತಡೆಯಬಹುದು ಎಂಬುದರ ಬಗ್ಗೆ ತಿಳಿಯುವುದು ಬಹಳ ಅನಿವಾರ್ಯ. ಈ ಬಗ್ಗೆ ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಮೈಕ್ರೋಪ್ಲಾಸ್ಟಿಕ್‌ಗಳು ಎಂದರೇನು?

5 ಮಿಲಿಮೀಟರ್‌ಗಿಂತ ಚಿಕ್ಕದಾದ ಪ್ಲಾಸ್ಟಿಕ್ ಕಣಗಳನ್ನು ಮೈಕ್ರೋಪ್ಲಾಸ್ಟಿಕ್‌ ಎನ್ನಲಾಗುತ್ತದೆ. ಕೈಗಾರಿಕಾ ತ್ಯಾಜ್ಯ, ಪ್ಲಾಸ್ಟಿಕ್ ಪ್ಯಾಕೆಟ್‌ಗಳಲ್ಲಿ ಆಹಾರ ಸಂಗ್ರಹಣೆ, ಜಲ ಮಾಲಿನ್ಯ ಹೀಗೆ ನಾನಾ ರೀತಿಯ ಕಾರಣಗಳಿಂದ, ಅವು ನಮ್ಮ ಆಹಾರ ಸರಪಳಿಯನ್ನು ಪ್ರವೇಶಿಸುತ್ತಿವೆ. ಪ್ಯಾಕ್ ಮಾಡಿದ ಆಹಾರಗಳಲ್ಲಿ ಅವುಗಳ ಸಾಂದ್ರತೆ ಹೆಚ್ಚಾಗಿದ್ದು ಇವುಗಳನ್ನು ತಡೆಗಟ್ಟಲು, ಆಹಾರ ಶೇಖರಣಾ ವಿಧಾನಗಳಲ್ಲಿ ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ.

ಸಮುದ್ರಾಹಾರ ಅಥವಾ ಸೀಫುಡ್

ಮೀನು ಮತ್ತು ಸೀಗಡಿ ತಿನ್ನಲು ಇಷ್ಟಪಡುವವರು ಸೀಗಡಿಗಳಂತಹ ಚಿಪ್ಪುಗಳನ್ನು ಹೊಂದಿರುವ ಜೀವಿಗಳು ಸಮುದ್ರದಿಂದ ಹೆಚ್ಚು ಮೈಕ್ರೋಪ್ಲಾಸ್ಟಿಕ್‌ಗಳನ್ನು ಹೀರಿಕೊಳ್ಳುತ್ತವೆ. ಹಾಗಾಗಿ ಚಿಕ್ಕ ಮಿನುಗಳಿಗಿಂತ ದೊಡ್ಡ ಮೀನುಗಳ ಆಯ್ಕೆ ಮಾಡುವುದು ಸುರಕ್ಷಿತವಾಗಿದೆ.

ಉಪ್ಪಿನಲ್ಲಿ ಪ್ಲಾಸ್ಟಿಕ್

ಅಡುಗೆಯಲ್ಲಿ ಬಳಸುವ ಸಮುದ್ರದ ಉಪ್ಪಿನಲ್ಲಿ ಮೈಕ್ರೋಪ್ಲಾಸ್ಟಿಕ್ ಕಣಗಳನ್ನು ಹೊಂದಿರುತ್ತದೆ. ಹಾಗಾಗಿ ಅಯೋಡಿಕರಿಸಿದ ಉಪ್ಪು ಅಥವಾ ಸಾಕಷ್ಟು ಶುದ್ಧೀಕರಿಸಿದ ಉಪ್ಪನ್ನು ಆಯ್ಕೆ ಮಾಡುವುದು ಒಳ್ಳೆಯದು. ಸಾಧ್ಯವಾದಷ್ಟು ನೈಸರ್ಗಿಕ ವಿಧಾನಗಳನ್ನು ಬಳಸಿ ತಯಾರಿಸಿದ ಉಪ್ಪಿಗೆ ಆದ್ಯತೆ ನೀಡುವುದು ಸೂಕ್ತ.

ಪ್ಲಾಸ್ಟಿಕ್ ಬಾಟಲಿಗಳಲ್ಲಿ ನೀರು ಕುಡಿಯುವುದನ್ನು ತಪ್ಪಿಸಿ

ಅನೇಕರು ಪ್ರಯಾಣ ಮಾಡುವಾಗ ಪ್ಲಾಸ್ಟಿಕ್ ಬಾಟಲಿಗಳನ್ನು ಖರೀದಿಸಿ ಅದರಲ್ಲಿ ಶೇಖರಿಸಿಟ್ಟ ನೀರನ್ನು ಕುಡಿಯುತ್ತಾರೆ. ಆದರೆ ಆ ಬಾಟಲಿಗಳಿಂದ ಮೈಕ್ರೋಪ್ಲಾಸ್ಟಿಕ್‌ಗಳು ನೀರಿನಲ್ಲಿ ಬೆರೆತುಹೋಗಿರುತ್ತದೆ. ಬದಲಾಗಿ, ಕಾರ್ಬನ್ ಅಥವಾ ಯುಎಫ್ ಫಿಲ್ಟರ್‌ಗಳ ಮೂಲಕ ಫಿಲ್ಟರ್ ಮಾಡಿದ ನೀರನ್ನು ಕುಡಿಯುವುದು ಉತ್ತಮ. ಈ ನೀರನ್ನು ಸಂಗ್ರಹಿಸಲು, ಪ್ಲಾಸ್ಟಿಕ್ ಬಾಟಲಿಗಳ ಬದಲಿಗೆ ಸ್ಟೇನ್‌ಲೆಸ್ ಸ್ಟೀಲ್ ಬಾಟಲಿಗಳು ಅಥವಾ ಮಣ್ಣಿನ ಮಡಕೆಗಳನ್ನು ಬಳಸಬಹುದು.

ಇದನ್ನೂ ಓದಿ: ಪಾದಗಳು ತಣ್ಣಗಾಗುವುದಕ್ಕೆ ಮಧುಮೇಹ ಕಾರಣವೇ? ಇಲ್ಲಿದೆ ಸ್ಪಷ್ಟ ಮಾಹಿತಿ

ಜೇನುತುಪ್ಪ – ಟೀ ಬ್ಯಾಗ್‌ಗಳು

ಜೇನುತುಪ್ಪವನ್ನು ಶುದ್ಧೀಕರಿಸಿ ಪ್ಲಾಸ್ಟಿಕ್ ಬಾಟಲಿಗಳಲ್ಲಿ ಪ್ಯಾಕ್ ಮಾಡುವ ಪ್ರಕ್ರಿಯೆಯಲ್ಲಿ, ಪ್ಲಾಸ್ಟಿಕ್ ಕಣಗಳು ಅದರೊಳಗೆ ಹೋಗುತ್ತವೆ. ಆದ್ದರಿಂದ, ಗಾಜಿನ ಜಾಡಿಗಳಲ್ಲಿ ಲಭ್ಯವಿರುವ ಜೇನುತುಪ್ಪವನ್ನು ಮಾತ್ರ ಬಳಸಬೇಕು. ಅದೇ ರೀತಿ, ಟೀ ಬ್ಯಾಗ್‌ಗಳ ಬಗ್ಗೆಯೂ ಬಹಳ ಜಾಗರೂಕರಾಗಿರಬೇಕು. ನೈಲಾನ್‌ನಿಂದ ಮಾಡಿದ ಟೀ ಬ್ಯಾಗ್‌ಗಳು ಬಿಸಿ ನೀರಿನಲ್ಲಿ ಮುಳುಗಿಸಿದಾಗ ಮೈಕ್ರೋಪ್ಲಾಸ್ಟಿಕ್‌ಗಳನ್ನು ಬಿಡುಗಡೆ ಮಾಡುತ್ತವೆ. ಅದಕ್ಕಾಗಿಯೇ ಚಹಾ ಪುಡಿಗಳನ್ನು ನೇರವಾಗಿ ನೀರಿನಲ್ಲಿ ಕುದಿಸುವುದು ಆರೋಗ್ಯಕರ.

ಮೈಕ್ರೋಪ್ಲಾಸ್ಟಿಕ್‌ಗಳು ನಮ್ಮ ಕಣ್ಣಿಗೆ ಕಾಣದೆ ಆರೋಗ್ಯ ಹಾಳು ಮಾಡುತ್ತದೆ. ಹಾಗಾಗಿ ನಮ್ಮ ಆಹಾರ ಪದ್ಧತಿಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡುವ ಮೂಲಕ, ನಾವು ಇಂತಹ ಸಮಸ್ಯೆಯನ್ನು ಸ್ವಲ್ಪ ಮಟ್ಟಿಗೆ ತಪ್ಪಿಸಬಹುದು. ಜೊತೆಗೆ ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ಮೂಲಕ ಗಾಜು ಅಥವಾ ಸ್ಟೀಲ್ ಪಾತ್ರೆಗಳನ್ನು ಬಳಸುವುದರಿಂದ ನಮ್ಮ ಆರೋಗ್ಯವನ್ನು ರಕ್ಷಿಸಿಕೊಳ್ಳಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಶ್ವಿನಿ ಮೇಲೆ ಸಿಟ್ಟು ತೀರಿಸಿಕೊಂಡ ರಾಶಿಕಾ: ಮಾತುಗಳಿಗೆ ಮಿತಿ ಇಲ್ಲ – Kannada News | Bigg Boss Kannada 12: Rashika fight with Ashwini Gowda

ಬಿಗ್​​ಬಾಸ್ ಕನ್ನಡ 12 (Bigg Boss Kannada) ಇನ್ನೇನು ಮುಗಿಯುವ ಹಂತ ಬಂದಿದೆ. ಮೊದಲೆಲ್ಲ ಗೆಳೆಯರಾಗಿದ್ದವರು ಕೆಲವರು ಈಗ ದುಷ್ಮನ್​​ಗಳಾಗಿದ್ದಾರೆ. ಅಶ್ವಿನಿ ಅವರಂತೂ ಆಗಾಗ್ಗೆ ತಮ್ಮ ಅವತಾರ ಬದಲಾವಣೆ ಮಾಡಿಕೊಳ್ಳುತ್ತಲೇ ಇದ್ದಾರೆ. ಕೆಲವು ದಿನಗಳ ಹಿಂದಷ್ಟೆ ಅಶ್ವಿನಿ ಹಾಗೂ ರಾಶಿಕಾ ಒಳ್ಳೆಯ ಗೆಳೆಯರಂತಿದ್ದರು ಆದರೆ ಕಳೆದ ಕೆಲ ದಿನಗಳಿಂದ ಇದು ಬದಲಾಗಿದೆ. ಇಬ್ಬರೂ ಕೂಡ ಪರಸ್ಪರ ಹಾವು-ಮುಂಗುಸಿ ಆಗಿದ್ದಾರೆ. ಈಗ ಟಾಸ್ಕ್ ಒಂದರಲ್ಲಿ ರಾಶಿಕಾ, ಅಶ್ವಿನಿ ವಿರುದ್ಧ ಚೆನ್ನಾಗಿ ಸಿಟ್ಟು ತೀರಿಸಿಕೊಂಡಿದ್ದಾರೆ. ಮಾತ್ರವಲ್ಲದೆ ವಿಷಕಾರಿ ಮಾತುಗಳಿಂದ ಚುಚ್ಚಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಮದುವೆ ಬಳಿಕ ಸಮಂತಾ ಮೊದಲ ಸಿನಿಮಾ; ಹೇಗಿದೆ ನೋಡಿ ಫಸ್ಟ್ ಲುಕ್ – Kannada News | Samantha Ruth Prabhu starrer Maa Inti Bangaram movie first look poster released

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ನಿರ್ದೇಶಕ ರಾಜ್ ನಿಡಿಮೋರು ಜೊತೆ ಇತ್ತೀಚೆಗೆ ಮದುವೆ ಆದರು. ಈಗ ಮತ್ತೆ ಅವರು ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಸಮಂತಾ ನಟನೆಯ ಹೊಸ ಸಿನಿಮಾ ‘ಮಾ ಇಂಟಿ ಬಂಗಾರಂ’ (Maa Inti Bangaram) ಬಿಡುಗಡೆಗೆ ಸಜ್ಜಾಗುತ್ತಿದೆ. 2 ವರ್ಷಗಳ ಕಾಲ ಬ್ರೇಕ್ ತೆಗೆದುಕೊಂಡಿದ್ದ ಸಮಂತಾ (Samantha) ಅವರು ಈ ಸಿನಿಮಾ ಮೂಲಕ ಮತ್ತೆ ಅಭಿಮಾನಿಗಳನ್ನು ರಂಜಿಸಲು ಬರುತ್ತಿದ್ದಾರೆ. ಈ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಆಗಿದೆ. ಅದನ್ನು ನೋಡಿದ ಬಳಿಕ ಅಭಿಮಾನಿಗಳಿಗೆ ಈ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಸಮಂತಾ ರುತ್ ಪ್ರಭು ಅವರು ‘ಮಾ ಇಂಟಿ ಬಂಗಾರಂ’ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡಿದ್ದಾರೆ. ಮುಖ್ಯ ಪಾತ್ರದಲ್ಲಿ ನಟಿಸುವುದರ ಜೊತೆಗೆ ಸಮಂತಾ ಅವರೇ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ತಮ್ಮದೇ ಪ್ರೊಡಕ್ಷನ್ ಹೌಸ್ ಮೂಲಕ ಬಂಡವಾಳ ಹೂಡಿದ್ದಾರೆ. ಆ ಕಾರಣದಿಂದಲೂ ಅವರಿಗೆ ಈ ಸಿನಿಮಾ ತುಂಬಾ ಸ್ಪೆಷಲ್ ಆಗಿದೆ.

‘ಮಾ ಇಂಟಿ ಬಂಗಾರಂ’ ಸಿನಿಮಾದ ಫಸ್ಟ್ ಲುಕ್​​ನಲ್ಲಿ ಸಮಂತಾ ಅವರು ಸೀರೆ ಧರಿಸಿ ಕಾಣಿಸಿಕೊಂಡಿದ್ದಾರೆ. ಗ್ಲಾಮರ್ ಪಾತ್ರವನ್ನು ಬಿಟ್ಟು ಅವರು ರಫ್ ಆ್ಯಂಡ್ ಟಫ್ ಪಾತ್ರ ಮಾಡಿದ್ದಾರೆ. ವಿಲನ್​​ಗಳ ಮೂಳೆ ಮುರಿಯಲು ಸಜ್ಜಾಗಿರುವ ದುರ್ಗೆಯ ರೀತಿ ಅವರು ಪೋಸ್ ನೀಡಿದ್ದಾರೆ. ಸಮಂತಾ ರುತ್ ಪ್ರಭು ಅಭಿಮಾನಿಗಳು ಈ ಸಿನಿಮಾ ಮೇಲೆ ಭರವಸೆ ಇಟ್ಟುಕೊಂಡಿದ್ದಾರೆ.

ಈ ಪೋಸ್ಟರ್ ನೋಡಿದ ಅಭಿಮಾನಿಗಳು ಹಲವು ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ‘ಲೇಡಿ ಬಾಸ್ ಮರಳಿ ಬಂದಿದ್ದಾರೆ’, ‘ಸಮಂತಾ ಅವರ ಕಮ್​ಬ್ಯಾಕ್ ಬಹಳ ಮಾಸ್ ಆಗಿದೆ’ ಎಂಬಿತ್ಯಾದಿ ಕಮೆಂಟ್​ಗಳು ಬಂದಿವೆ. ಫ್ಯಾನ್ಸ್ ಪುಟಗಳಲ್ಲಿ ಈ ಪೋಸ್ಟರ್ ವೈರಲ್ ಆಗುತ್ತಿದೆ. ಬಿ.ವಿ. ನಂದಿನಿ ರೆಡ್ಡಿ ಅವರು ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಇದನ್ನೂ ಓದಿ: ನಿಧಿ ಅಗರ್​​ವಾಲ್ ಬಳಿಕ ಸಮಂತಾಗೂ ಫ್ಯಾನ್ಸ್ ಕಾಟ: ವಿಡಿಯೋ ವೈರಲ್

ಫಸ್ಟ್ ಲುಕ್ ಪೋಸ್ಟರ್ ಜೊತೆ ಇನ್ನೊಂದು ಗುಡ್ ನ್ಯೂಸ್ ನೀಡಲಾಗಿದೆ. ಜನವರಿ 9ರಂದು ಬೆಳಗ್ಗೆ 10 ಗಂಟೆಗೆ ‘ಮಾ ಇಂಟಿ ಬಂಗಾರಂ’ ಸಿನಿಮಾದ ಟೀಸರ್ ಬಿಡುಗಡೆ ಆಗಲಿದೆ ಎಂದು ಕೂಡ ತಿಳಿಸಲಾಗಿದೆ. ಆದರೆ ಸಿನಿಮಾದ ರಿಲೀಸ್ ದಿನಾಂಕ ಇನ್ನೂ ಬಹಿರಂಗ ಆಗಿಲ್ಲ. ಇದು ಸಮಂತಾ ಅವರು 2ನೇ ಮದುವೆ ಆದ ಬಳಿಕ ಬರುತ್ತಿರುವ ಮೊದಲ ಸಿನಿಮಾ ಎಂಬುದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version