ಫಸಲಿಗೆ ರೋಗದ ಜೊತೆಗೆ ಕೇಂದ್ರದ ಆಮದು ಹೊಡೆತ: ಡಬಲ್​​ ಶಾಕ್​​ಗೆ ಅಡಿಕೆ ಬೆಳೆಗಾರರು ಕಂಗಾಲು – Kannada News | Karnataka Areca Farmers Face Crisis as Crop Declines by More Than 50 percent Due to Multiple Diseases

ಬೆಂಗಳೂರು, ಜನವರಿ 07: ಉಳಿದ ಬೆಳೆಗಳಿಗೆ ಹೋಲಿಸಿದರೆ ಅಡಿಕೆ ಬೆಳೆ ಬೆಳೆಯೋದು ಸುಲಭ. ಒಮ್ಮೆ ಗಿಡ ನೆಟ್ಟರೆ ಮುಗೀತು. ಉಳಿದ ಬೆಳಗಳಷ್ಟು ಪಾಲನೆ ಇವಕ್ಕೆ ಬೇಕಿಲ್ಲ. ಆದಾಯವೂ ಭರ್ಜರಿಯಾಗಿ ಬರುತ್ತೆ ಎಂಬ ತಪ್ಪು ಕಲ್ಪನೆ ಹಲವರಲ್ಲಿದೆ. ಆದ್ರೆ ವಾಸ್ತವದಲ್ಲಿ ಅಡಿಕೆ ಬೆಳಗೆರಾರರ ಗೋಳು ಒಂದೆರಡಲ್ಲ. ಸುಳಿ ರೋಗ, ಕೊಳೆ ರೋಗ ಹೀಗೆ ನಾನಾ ಸಂಕಷ್ಟಗಳನ್ನು ಇವರು ಎದುರಿಸುತ್ತಿದ್ದಾರೆ. ಇವುಗಳ ಪಟ್ಟಿಗೆ ಈಗ ಎಲೆಚುಕ್ಕಿ ರೋಗವೂ ಸೇರ್ಪಡೆಯಾಗಿರೋದು, ಅಡಿಕೆಯನ್ನೇ ನಂಬಿ ಜೀವನ ನಡೆಸುತ್ತಿರುವವರ ಆತ್ಮಸ್ಥೈರ್ಯವನ್ನೇ ಕುಗ್ಗಿಸಿದೆ. ಈ ನಡುವೆ ಕೇಂದ್ರ ಸರ್ಕಾರ ವಿದೇಶಗಳಿಂದ ಅಡಿಕೆ ಆಮದು ಮಾಡಿಕೊಳ್ಳುತ್ತಿರುವ ಕಾರಣ ಬೆಳೆಗೆ ಉತ್ತಮ ಬೆಲೆಯ ನಿರೀಕ್ಷೆಯೂ ಹುಸಿಯಾಗಿದೆ.

ಅಡಿಕೆ ಬೆಳೆಯ ಕಾಡ್ತಿದೆ ಕೊಳೆ ಮತ್ತು ಎಲೆ ಚುಕ್ಕಿ ರೋಗ

ರಾಜ್ಯದಲ್ಲಿ ಹೆಚ್ಚಿರುವ ಕೊಳೆ ಮತ್ತು ಎಲೆ ಚುಕ್ಕಿ ರೋಗಕ್ಕೆ ರೈತರು ಅಕ್ಷರಶಃ ನಲುಗಿದ್ದಾರೆ. ಕೊಳೆ ರೋಗದ ಕಾರಣ ಅಡಿಕೆ ಉದುರಿ ಹಾಳಾದರೆ, ಹಿಡಿಮುಂಡಿ ರೋಗದಿಂದ ಮೇಲ್ಭಾಗ ಸಂಪೂರ್ಣ ಒಣಗಿ ಅಡಿಕೆ ಗಿಡಗಳು ಸಾಯುತ್ತಿವೆ. ಇದು ಸಾಲದಕ್ಕೆ ಎಲೆಚುಕ್ಕಿ ರೋಗವೂ ಗಿಡಗಳನ್ನು ಬಾಧಿಸುತ್ತಿರುವ ಕಾರಣ ಬೆಳೆ ಹಾಗಿರಲಿ, ಅಡಿಕೆ ಗಿಡಗಳನ್ನ ಉಳಿಸಿಕೊಳ್ಳುವುದೇ ಸವಾಲಿನ ಕೆಲಸವಾಗಿದೆ. ಮಲೆನಾಡು ಭಾಗದಲ್ಲಿ ಒಂದು ಎಕರೆಗೆ 80-90 ಕ್ವಿಂಟಾಲ್ ಬರುತ್ತಿದ್ದ​​ ಫಸಲು ಈಗ 10-30 ಕ್ವಿಂಟಾಲ್​​ಗಳಿಗೆ ಇಳಿಕೆ ಕಂಡಿದೆ. ಅಂದರೆ ಶೇ.50ಕ್ಕಿಂತ ಹೆಚ್ಚು ಇಳುವರಿ ಕಡಿಮೆಯಾಗಿದೆ. ಒಂದು ತೋಟದಿಂದ ಮತ್ತೊಂದು ತೋಟಕ್ಕೆ ಈ ರೋಗಗಳು ವ್ಯಾಪಿಸುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರುವಲ್ಲಿ ಕೃಷಿ ವಿಜ್ಞಾನಿಗಳೂ ವಿಫಲರಾಗಿದ್ದಾರೆ ಎನ್ನುವುದು ರೈತರ ಆರೋಪ.

ಇದನ್ನೂ ಓದಿ:  ಕರ್ನಾಟಕ ಅಡಕೆ ಬೆಳೆಗಾರರ ಸಮಸ್ಯೆ ಪರಿಹರಿಸಲು ಕೇಂದ್ರ ಕೈಗೊಂಡ ಕ್ರಮಗಳೇನು? ಕೇಂದ್ರ ಕೃಷಿ ಸಚಿವ ಹೇಳಿದ್ದೇನು?

ರೈತರ ಆತಂಕ ಹೆಚ್ಚಿಸಿದ ಆಮದು

ದೇಶದಲ್ಲಿ ಉತ್ಪಾದನೆ ಆಗುವ 14 ಲಕ್ಷ ಟನ್​​ ಅಡಿಕೆಯ ಪೈಕಿ ಸುಮಾರು 10 ಲಕ್ಷ ಟನ್​​ ಕರ್ನಾಟಕವೇ ಉತ್ಪಾದಿಸುತ್ತದೆ. ಅಂದ್ರೆ ಶೇ. 80ರಷ್ಟು ಅಡಿಕೆಯ ಬೆಳೆಯುವ ಮೂಲಕ ಇದರಲ್ಲಿ ಸಿಂಹಪಾಲು ರಾಜ್ಯಹೊಂದಿದೆ. ದೇಶಕ್ಕೆ ಅಗತ್ಯವಿರುವಷ್ಟು ಅಡಿಕೆ ನಮ್ಮಲ್ಲೇ ಉತ್ಪಾದನೆ ಆಗುವಾಗ ವಿದೇಶಗಳಿಂದ ಆಮದು ಯಾಕ ಎಂದು ರೈತರು ಪ್ರಶ್ನಿಸಿದ್ದಾರೆ. ಕ್ವಿಂಟಾಲ್​​ಗೆ 64 ರಿಂದ 65 ಸಾವಿರ ರೂಪಾಯಿ ವರೆಗೂ ಹೋಗಿದ್ದ ಅಡಿಕೆ ಬೆಲೆ ಈಗ ಕುಸಿದಿದೆ. ಭೂತಾನ್, ಮಯನ್ಮಾರ್, ಶ್ರೀಲಂಕಾಗಳಿಂದ ಕಳಪೆ ಗುಣಮಟ್ಟದ ಅಡಿಕೆ ಆಮದು ಮಾಡಿಕೊಳ್ಳಲಾಗುತ್ತಿರೋದು, ರಾಜ್ಯದಲ್ಲಿ ಗುಣಮಟ್ಟದ ಅಡಿಕೆ ಬೆಳೆಯುವ ಬೆಳೆಗಾರರಿಗೆ ಅನ್ಯಾಯಮಾಡಿದಂತಾಗಿದೆ. ಕನಅರ್ಟಕ ಸೇರಿ ದೇಶದಲ್ಲಿರುವ ಅಡಿಕೆ ಬೆಳೆಗಾರರಿಗೆ ಇದು ದೊಡ್ಡ ಹೊಡೆತ ಕೊಟ್ಟಿದೆ ಎಂದು ರೈತರು ಅಲವತ್ತುಕೊಂಡಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 2:28 pm, Wed, 7 January 26

Source link

ವಿದ್ಯಾರ್ಥಿನಿಯರಿಗೆ ಗುಡ್​​​​ನ್ಯೂಸ್ ಕೊಟ್ಟ ಸರ್ಕಾರ: ಬರಲಿದೆ ಮುಟ್ಟಿನ ಕಪ್‌ – Kannada News | Karnataka Students Get Menstrual Cups: Gov’t Saves 10 Cr, Boosts Health

ಬೆಂಗಳೂರು, ಜ.7: ಶಾಲಾ- ಕಾಲೇಜು ವಿದ್ಯಾರ್ಥಿನಿಯರು ಅನುಭವಿಸುವ ಮುಟ್ಟಿನ ಸಮಸ್ಯೆಯ ಬಗ್ಗೆ ಹೊಸ ಯೋಜನೆಯೊಂದನ್ನು ಸರ್ಕಾರ ಹಾಕಿಕೊಂಡಿದೆ. ಕರ್ನಾಟಕದ ಆಯ್ದ ಜಿಲ್ಲೆಗಳಲ್ಲಿ ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮುಟ್ಟಿನ ಕಪ್‌ಗಳನ್ನು ಒದಗಿಸುವ ಪ್ರಾಯೋಗಿಕ ಯೋಜನೆಯ ಯಶಸ್ವಿಯಾಗಿ ಅನುಷ್ಠಾನವಾದ ನಂತರ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಈ ಯೋಜನೆಯನ್ನು ರಾಜ್ಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ಸ್ವಚ್ಛ ಭಾರತ ಅಭಿಯಾನದ ಅಡಿಯಲ್ಲಿ ರಾಜ್ಯ ವೈದ್ಯಕೀಯ ಸರಬರಾಜು ನಿಗಮ ಲಿಮಿಟೆಡ್ (KSMSCL) ಮೂಲಕ 61 ಕೋಟಿ ರೂ.ಗಳಿಗೂ ಹೆಚ್ಚು ವೆಚ್ಚದಲ್ಲಿ 10,38,912 ಮುಟ್ಟಿನ ಕಪ್‌ಗಳನ್ನು ಒದಗಿಸಲು ಸರ್ಕಾರ ಅನುಮೋದನೆ ಸಿಕ್ಕಿದೆ.

ಈ ಹಿಂದೆ ವಾರ್ಷಿಕವಾಗಿ 2,35,74,084 ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಖರೀದಿಸಲು ಸರ್ಕಾರ 71 ಕೋಟಿ ರೂ.ಗಳನ್ನು ಖರ್ಚು ಮಾಡುತ್ತಿತ್ತು. ಆದರೆ ಇದೀಗ ಮುಟ್ಟಿನ ಕಪ್‌ ನೀಡುವ ಈ ನಿರ್ಧಾರವು ಸ್ಯಾನಿಟರಿ ನ್ಯಾಪ್ಕಿನ್‌ಗಳ ಮೇಲಿನ ಸರ್ಕಾರದ ವೆಚ್ಚವನ್ನು 10 ಕೋಟಿ ರೂ.ಗಳಷ್ಟು ಕಡಿತಗೊಳಿಸಲಿದೆ ಎಂದು ಹೇಳಿದ್ದಾರೆ. ಮೂರು ತಿಂಗಳು ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಮತ್ತು ಮುಂದಿನ ಶೈಕ್ಷಣಿಕ ವರ್ಷಕ್ಕೆ ಒಂದು ಮುಟ್ಟಿನ ಕಪ್ ಅನ್ನು ಒದಗಿಸುವುದನ್ನು ಮುಂದುವರಿಸುತ್ತದೆ ಎಂದು ಇಲಾಖೆ ಹೇಳಿದೆ.

ಇದನ್ನೂ ಓದಿ: ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಹೊಸ ಪ್ಲಾನ್: ಶಾಲಾ ಬಸ್‌ನಲ್ಲಿ ಬಯೋ-ಟಾಯ್ಲೆಟ್ ಸೌಲಭ್ಯ

ಇದಕ್ಕೂ ಮೊದಲು, ಡಿಸೆಂಬರ್ 2025ರಲ್ಲಿ ಶುಚಿ ಕಿಟ್ ಅಡಿಯಲ್ಲಿ ಒದಗಿಸಲಾದ ಸ್ಯಾನಿಟರಿ ನ್ಯಾಪ್ಕಿನ್‌ಗಳ ಕೊರತೆಯಿಂದಾಗಿ ಹದಿಹರೆಯದ ಹುಡುಗಿಯರು ಶಾಲೆಗೆ ಹೋಗುತ್ತಿಲ್ಲ ಎಂದು ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿತ್ತು. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದಲ್ಲಿ ಈ ವಿಷಯದ ಬಗ್ಗೆ ಸದನದಲ್ಲಿ ಚರ್ಚೆ ನಡೆದಿತ್ತು. ಈ ಬಗ್ಗೆ ಸಚಿವ ಗುಂಡೂರಾವ್ ತಕ್ಷಣವೇ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿದ್ದರು. ಇಲಾಖೆ ಮೂರು ತಿಂಗಳ ಕಾಲ ಸ್ಯಾನಿಟರಿ ನ್ಯಾಪ್ಕಿನ್‌ಗಳನ್ನು ಒದಗಿಸಲು ಅನುಮೋದನೆ ನೀಡಿದೆ. ಆದರೆ ಮುಟ್ಟಿನ ಕಪ್‌ ಬಗ್ಗೆ ಅನುಮೋದನೆ ಇನ್ನು ಸಿಕ್ಲಿಲ್ಲ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗಿಲ್ಲಿ ಏಕೆ ಇಷ್ಟ ಆಗಲ್ಲ? ಕಾರಣ ಕೊಟ್ಟ ರಾಶಿಕಾ ಶೆಟ್ಟಿ – Kannada News | Bigg Boss Kannada 12: Gilli vs Rashika Shetty – Why is Gilli not Rashika’s favorite?

ಬಿಗ್ ಬಾಸ್ (Bigg Boss) ಕನ್ನಡ ಸೀಸನ್ 12ರಲ್ಲಿ ಗಿಲ್ಲಿ ನಟ ಅವರು ಎಲ್ಲರ ಫೇವರಿಟ್ ಹೀರೋ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಗಿಲ್ಲಿ ಮಾಡುವ ಹಾಸ್ಯಕ್ಕೆ ದೊಡ್ಡ ಅಭಿಮಾನಿವರ್ಗ ಇದೆ. ಆದರೆ, ಕೆಲವರು ಗಿಲ್ಲಿಯನ್ನು ಇಷ್ಟಪಡುತ್ತಿಲ್ಲ. ಇದರಲ್ಲಿ ಬಿಗ್ ಬಾಸ್ ಸ್ಪರ್ಧಿ ರಾಶಿಕಾ ಕೂಡ ಒಬ್ಬರು. ಅವರು ಏಕೆ ಇಷ್ಟ ಆಗಲ್ಲ ಎಂಬುದಕ್ಕೆ ಕಾರಣ ನೀಡಿದ್ದಾರೆ.

ಮೂರು ತಂಡಗಳನ್ನಾಗಿ ಮಾಡಿಕೊಂಡು ಟಾಸ್ಕ್ ಆಡುವಂತೆ ಬಿಗ್ ಬಾಸ್ ಸೂಚಿಸಿದ್ದರು. ಈ ವೇಳೆ ರಾಶಿಕಾ ಹಾಗೂ ರಘು ಒಂದು ತಂಡವಾಗುವ ಆಲೋಚನೆಯಲ್ಲಿ ಇದ್ದುರು. ಮತ್ತೊಂದು ಸ್ಥಾನಕ್ಕೆ ರಕ್ಷಿತಾನ ಆಯ್ಕೆ ಮಾಡಿಕೊಳ್ಳೋಣ ಎಂದು ರಘು ವಾದಿಸುತ್ತಿದ್ದರು. ಇದು ರಾಶಿಕಾ ಶೆಟ್ಟಿಗೆ ಇಷ್ಟ ಆಗಿಲ್ಲ. ಅವರು ಇದನ್ನು ವಿರೋಧಿಸಿದರು. ಈ ವೇಳೆ ಇಬ್ಬರ ಮಧ್ಯೆ ಕಿರಿಕ್ ಆಗಿದೆ. ಆಗ ಮಧ್ಯ ಪ್ರವೇಶಿಸಿದ ಗಿಲ್ಲಿ ಅವರು ರಾಶಿಕಾ ಜೊತೆ ಜಗಳ ಆಡಿದ್ದಾರೆ. ಇದು ರಾಶಿಕಾಗೆ ಇಷ್ಟ ಆಗಿಲ್ಲ. ಅವರು ಗಿಲ್ಲಿ ಜೊತೆ ಜಗಳವಾಡಿದ್ದಾರೆ.

ಆ ಬಳಿಕ ರಾಶಿಕಾ ಅವರು ಈ ವಿಷಯವನ್ನು ಕಾವ್ಯಾ ಜೊತೆ ಚರ್ಚೆ ಮಾಡಿದ್ದಾರೆ. ‘ಗಿಲ್ಲಿ ವ್ಯಕ್ತಿತ್ವ ಹಾಗೂ ಬುದ್ಧಿ ಬಿಟ್ಟು ಯಾವತ್ತೂ ಬಾಳಲ್ಲ. ಇದಕ್ಕೆ ಗಿಲ್ಲಿ ಇಷ್ಟ ಆಗೋದಿಲ್ಲ’ ಎಂದು ನೇರವಾಗಿ ರಾಶಿಕಾ ಹೇಳಿದರು. ಈ ವಿಷಯ ಚರ್ಚೆ ಆಗುತ್ತಿದೆ. ರಾಶಿಕಾ ಮಾತನ್ನು ಅನೇಕರು ಖಂಡಿಸಿದ್ದಾರೆ.

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ: ಟಾಪ್ 6 ಆಟದಿಂದ ಗಿಲ್ಲಿ ನಟ ಔಟ್; ಎಲ್ಲರಿಗೂ ಶಾಕ್

ಬಿಗ್ ಬಾಸ್ ಮನೆಯಲ್ಲಿರೋ ಗಿಲ್ಲಿ ಭರ್ಜರಿ ಮನರಂಜನೆ ನೀಡುತ್ತಿದ್ದಾರೆ. ಅವರು ಎಲ್ಲರ ಫೇವರಿಟ್ ಸ್ಪರ್ಧಿಯಾಗಿದ್ದಾರೆ. ಜನವರಿ 17 ಹಾಗೂ 18ರಂದು ಫಿನಾಲೆ ನಡೆಯಲಿದೆ. ಯಾರು ಕಪ್ ಎತ್ತುತ್ತಾರೆ ಎಂಬ ವಿಷಯ ಅಂದು ರಿವೀಲ್ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral Video: ಟ್ರ್ಯಾಕ್​ನಲ್ಲಿ ಓಡುವ ಬದಲು ಮಾಲ್ ಒಳಗೆ ಜಾಗಿಂಗ್ ಮಾಡಿದ ಯುವಕ – Kannada News | Man’s Indoor Run Goes Viral as City Grapples With Poor Air Quality in Mumbai

ಮುಂಬೈ, ಜನವರಿ 07: ಯುವಕನೊಬ್ಬ ಟ್ರ್ಯಾಕ್​ನಲ್ಲಿ ಓಡುವ ಬದಲು ಮಾಲ್ ಅನ್ನೇ ಪರ್ಸನಲ್ ಟ್ರ್ಯಾಕ್ ಆಗಿ ಮಾಡಿಕೊಂಡು ಜಾಗಿಂಗ್(Jogging) ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ದೆಹಲಿಯಷ್ಟಲ್ಲದಿದ್ದರೂ ಮುಂಬೈನಲ್ಲಿ ವಾಯು ಮಾಲಿನ್ಯ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ವಾಯು ಗುಣಮಟ್ಟ ಸೂಚ್ಯಂಕ(AQI)200ರ ಗಡಿ ದಾಟಿದೆ. ಹೀಗಾಗಿ ಯುವಕನೊಬ್ಬ ಟ್ರ್ಯಾಕ್​ನಲ್ಲಿ ಓಡುವ ಬದಲು ಮಾಲ್​ನಲ್ಲಿ ಜಾಗಿಂಗ್ ಮಾಡಿರುವ ವಿಡಿಯೋ ವೈರಲ್ ಆಗಿದೆ.

ಈ ವೈರಲ್ ಕ್ಲಿಪ್ ಅನ್ನು ಭವಿನ್ ಪಾರ್ಮರ್ ಎಂಬುವವರು ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ.ಅದರಲ್ಲಿ ಟಿ ಶರ್ಟ್​ ಹಾಗೂ ಟ್ರ್ಯಾಕ್ ಪ್ಯಾಂಟ್ ಮತ್ತು ಸ್ಪೋರ್ಟ್ಸ್​ ಶೂ ಧರಿಸಿರುವ ಯುವಕ ಮಾಲ್ ಅನ್ನು ತನ್ನ ಪರ್ಸನಲ್ ಜಾಗಿಂಗ್ ಟ್ರ್ಯಾಕ್​ ಆಗಿ ಪರಿವರ್ತಿಸಿಕೊಂಡಿರುವುದನ್ನು ಕಾಣಬಹುದು.
ಮಾಲ್​ನಲ್ಲಿ ಜಾಗಿಂಗ್ ಮಾಡಿದರೆ ಒಳಗೆ ಗಾಳಿಯೂ ಶುದ್ಧವಾಗಿರುತ್ತದೆ, ಅಕ್ಕ ಪಕ್ಕದ ಜಾಗ ಕೂಡ ಶುಚಿಯಾಗಿರುತ್ತದೆ.

ಎಸಿ ಇರುವ ಕಾರಣ ಯಾವುದೇ ಸಮಸ್ಯೆ ಇರುವುದಿಲ್ಲ. ಈ ವಿಡಿಯೋವನ್ನು ಜನವರಿ 05ರಂದು ಪೋಸ್ಟ್ ಮಾಡಲಾಗಿದೆ. ಆನ್​ಲೈನ್​ನಲ್ಲಿ ಒಳ್ಳೆಯ ಅಟೆನ್ಷನ್ ಪಡೆದಿದೆ. 2.94 ಲಕ್ಷ ವೀಕ್ಷಣೆಯನ್ನು ಪಡೆದಿದೆ. 6,600 ಲೈಕ್ಸ್​ಗಳನ್ನು ಪಡೆದಿದೆ.

ಮತ್ತಷ್ಟು ಒದಿ: ಜಾಗಿಂಗ್, ವ್ಯಾಯಾಮ ಶುರು ಮಾಡುವ ಮುನ್ನ ಈ 10 ಟೆಸ್ಟ್​ಗಳನ್ನು ಮಾಡಿಸಲು ಮರೆಯದಿರಿ

ಕಳಪೆ ಗಾಳಿಯಿಂದ ರಕ್ಷಿಸಿಕೊಳ್ಳಲು ಇದು ಒಳ್ಳೆಯ ಪ್ಲ್ಯಾನ್ ಎಂದು ನೆಟ್ಟಿಗರು ಖುಷಿ ಪಟ್ಟಿದ್ದಾರೆ. ಜನವರಿ 7 ರ ಮುಂಜಾನೆ ನಗರದ ಒಟ್ಟಾರೆ ವಾಯು ಗುಣಮಟ್ಟ ಸೂಚ್ಯಂಕ 332 ಕ್ಕೆ ತಲುಪಿದ್ದು, ಇದನ್ನು ‘ತೀವ್ರ’ ವರ್ಗಕ್ಕೆ ಸೇರಿದೆ. ಮಕ್ಕಳು, ಹಿರಿಯ ನಾಗರಿಕರು, ಉಸಿರಾಟ, ಹೃದಯ ಸಂಬಂಧಿ ಕಾಯಿಲೆಯಿಂದ ನರಳುವಂತಾಗಿದೆ.

ಮೆಟ್ರೋ ರೈಲು ಕಾರಿಡಾರ್‌ಗಳು, ಫ್ಲೈಓವರ್‌ಗಳು, ಕರಾವಳಿ ರಸ್ತೆ ವಿಸ್ತರಣೆಗಳು ಮತ್ತು ರಸ್ತೆ ಅಗಲೀಕರಣ ಕಾಮಗಾರಿಗಳಂತಹ ನಡೆಯುತ್ತಿರುವ ಮೂಲಸೌಕರ್ಯ ಅಭಿವೃದ್ಧಿಗಳು ಧೂಳಿನ ಮಟ್ಟವನ್ನು ಗಮನಾರ್ಹವಾಗಿ ಹೆಚ್ಚಿಸಿವೆ. ತ್ವರಿತ ಖಾಸಗಿ ರಿಯಲ್ ಎಸ್ಟೇಟ್ ನಿರ್ಮಾಣವು ಮಾಲಿನ್ಯಕಾರಕ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. ವಾಹನಗಳಿಂದ ಹೊರಸೂಸುವ ಹೊಗೆ, ವಿಶೇಷವಾಗಿ ಗರಿಷ್ಠ ಸಂಚಾರ ಸಮಯದಲ್ಲಿ, ಪರಿಸ್ಥಿತಿಯನ್ನು ಉಲ್ಬಣಗೊಳಿಸುತ್ತಲೇ ಇರುತ್ತದೆ, ಇದರಿಂದಾಗಿ ಗಾಳಿಯ ಗುಣಮಟ್ಟ ನಿರ್ವಹಣೆ ನಗರಕ್ಕೆ ದೊಡ್ಡ ಸವಾಲಾಗಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 11:10 am, Wed, 7 January 26

Source link

ಬೀದಿ ನಾಯಿಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ, ನಾಯಿಗಳ ಹಾವಳಿ ಬಗ್ಗೆ ಸುಪ್ರೀಂಕೋರ್ಟ್​ ಹೇಳಿದ್ದೇನು? – Kannada News | Supreme Court Comments on Balancing Animal Welfare and Public Safety

ನವದೆಹಲಿ, ಜನವರಿ 07: ‘‘ಬೀದಿ ನಾಯಿ(Stray Dog)ಗಳ ಮನಸ್ಸನ್ನು ಯಾರೂ ಓದಲು ಸಾಧ್ಯವಿಲ್ಲ, ಈ ನಾಯಿ ಕಚ್ಚಬಹುದು, ಈ ನಾಯಿ ಕಚ್ಚುವುದಿಲ್ಲ ಎಂದು ಕಂಡು ಹಿಡಿಯುವುದು ಅಸಾಧ್ಯ’’ ಎಂದು ಬೀದಿ ನಾಯಿಗಳ ಹಾವಳಿ ಬಗ್ಗೆ ಸುಪ್ರೀಂಕೋರ್ಟ್​ ಅಭಿಪ್ರಾಯಪಟ್ಟಿದೆ. ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ತಾ ಮತ್ತು ಎನ್.ವಿ. ಅಂಜಾರಿಯಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ಅಪಾಯಕಾರಿ ನಾಯಿಗಳನ್ನು ನಡವಳಿಕೆಯಿಂದ ಮಾತ್ರ ಗುರುತಿಸುವುದು ಅಸಾಧ್ಯವೆಂದಿದ್ದಾರೆ.

ರಸ್ತೆಗಳು ಮತ್ತು ಬೀದಿಗಳಲ್ಲಿ ಬೀದಿ ನಾಯಿಗಳ ಸಂಖ್ಯೆಯನ್ನು ನಿರ್ವಹಿಸುವಲ್ಲಿನ ಸವಾಲನ್ನು ಪೀಠವು ಒತ್ತಿ ಹೇಳಿದೆ. ಶಾಲೆಗಳು, ಆಸ್ಪತ್ರೆಗಳು ಅಥವಾ ನ್ಯಾಯಾಲಯಗಳ ಒಳಗೆ ಬೀದಿ ನಾಯಿಗಳು ಏಕಿರಬೇಕು ಎಂದು ಪ್ರಶ್ನಿಸಿದ ಸುಪ್ರೀಂ ಕೋರ್ಟ್, ಅಂತಹ ಸೂಕ್ಷ್ಮ ಆವರಣಗಳಿಂದ ನಾಯಿಗಳನ್ನು ಓಡಿಸುವಲ್ಲಿ ನಿಮಗಾಗುವ ತೊಂದರೆಗಳೇನು ಎಂದು ಕೇಳಿದೆ.

ಕಳೆದ ವರ್ಷ ನವೆಂಬರ್ 7 ರಂದು, ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಮತ್ತು ರೈಲ್ವೆ ನಿಲ್ದಾಣಗಳಂತಹ ಸಾಂಸ್ಥಿಕ ಪ್ರದೇಶಗಳಲ್ಲಿ ನಾಯಿ ಕಡಿತದ ಘಟನೆಗಳಲ್ಲಿ ಆತಂಕಕಾರಿ ಹೆಚ್ಚಳ ಗಮನಿಸಿದ ಸುಪ್ರೀಂ ಕೋರ್ಟ್, ದೆಹಲಿ-ಎನ್‌ಸಿಆರ್‌ನಲ್ಲಿ ಸಂತಾನಹರಣ ಮಾಡಿ , ಲಸಿಕೆ ಹಾಕಿದ ನಂತರ ಬೀದಿ ನಾಯಿಗಳನ್ನು ಆಶ್ರಯ ತಾಣಗಳಿಗೆ ತಕ್ಷಣವೇ ಸ್ಥಳಾಂತರಿಸುವಂತೆ ನಿರ್ದೇಶನ ನೀಡಿತ್ತು.

ಮತ್ತಷ್ಟು ಓದಿ: ಶಾಲೆಗಳ ಸುತ್ತಮುತ್ತ ಬೀದಿ ನಾಯಿ ಉಪಟಳ ತಡೆಯಲು ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಪ್ರಕಟ

ಬೀದಿ ನಾಯಿಗಳನ್ನು ಎಲ್ಲಿಂದ ಕರೆದುಕೊಂಡು ಹೋಗಿರುತ್ತೀರೋ ಮತ್ತೆ ಅದೇ ಸ್ಥಳಕ್ಕೆ ಬಿಡುವಂತೆಯೂ ಪೀಠವು ಅಧಿಕಾರಿಗಳಿಗೆ ಸೂಚನೆ ನೀಡಿತ್ತು. ರಾಜ್ಯ ಹೆದ್ದಾರಿಗಳು, ರಾಷ್ಟ್ರೀಯ ಹೆದ್ದಾರಿಗಳು ಮತ್ತು ಎಕ್ಸ್‌ಪ್ರೆಸ್‌ವೇಗಳಿಂದ ಎಲ್ಲಾ ದನಗಳು ಮತ್ತು ಇತರ ಬೀದಿ ಪ್ರಾಣಿಗಳನ್ನು ಅಲ್ಲಿಂದ ಬೇರೆಡೆಗೆ ಸ್ಥಳಾಂತರಿಸುವುದನ್ನು ಖಚಿತಪಡಿಸಿಕೊಳ್ಳಲು ಮೂವರು ನ್ಯಾಯಮೂರ್ತಿಗಳ ವಿಶೇಷ ಪೀಠವು ಅಧಿಕಾರಿಗಳಿಗೆ ನಿರ್ದೇಶನ ನೀಡಿತು.

ಪ್ರಾಣಿ ಪ್ರಿಯರು ಮತ್ತು ಕಾರ್ಯಕರ್ತರಿಂದ ವ್ಯಾಪಕ ಪ್ರತಿಭಟನೆಗೆ ಕಾರಣವಾದ ನಾಯಿ ಕಡಿತದ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ದೆಹಲಿ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿನ ಎಲ್ಲಾ ಬೀದಿ ನಾಯಿಗಳನ್ನು ವಸತಿ ಪ್ರದೇಶಗಳಿಂದ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕೆಂದು ಕಳೆದ ವರ್ಷ ಜುಲೈನಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ನಂತರ ಈ ತೀರ್ಪು ಬಂದಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಬೆಂಗಳೂರು ಟ್ರಾಫಿಕ್‌ ಸಮಸ್ಯೆಗೆ ಹೊಸ ಪ್ಲಾನ್: ಶಾಲಾ ಬಸ್‌ನಲ್ಲಿ ಬಯೋ-ಟಾಯ್ಲೆಟ್ ಸೌಲಭ್ಯ – Kannada News | Indus Int’l School Adds Bio Toilets to Buses to Combat Bengaluru Traffic Woes

ಬೆಂಗಳೂರು, ಜ.7: ಬೆಂಗಳೂರಿನ ಟ್ರಾಫಿಕ್​ ಇಲ್ಲಿ (Bengaluru traffic solution) ಜನರಿಗೆ ಶಾಪವಾಗಿದೆ. ಬೆಂಗಳೂರಿನಲ್ಲಿ ವಾಸಿಸುವ ಪ್ರತಿಯೊಬ್ಬರು ಹೇಳುವುದು ಟ್ರಾಫಿಕ್​​​​​​​​ ನಿರ್ವಹಣೆ ಬಗ್ಗೆ. ದಿನಕ್ಕೊಂದು ಬೆಂಗಳೂರು ಟ್ರಾಫಿಕ್​​ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಪೋಸ್ಟ್​ಗಳು ವೈರಲ್​​ ಆಗುತ್ತ ಇರುತ್ತದೆ. ಇದರಿಂದ ಸಾರ್ವಜನಿಕರಿಗೆ ತುಂಬಾ ಕಿರಿಕಿರಿ ಉಂಟಾಗುತ್ತಿದೆ. ಈ ಸಮಸ್ಯೆಗೆ ಮಕ್ಕಳು ಕೂಡ ಒಳಗಾಗುತ್ತಿದ್ದಾರೆ, ಇದೀಗ ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಸಂಚಾರ ಸಮಸ್ಯೆಯಿಂದ ವಿದ್ಯಾರ್ಥಿಗಳು ಎದುರಿಸುತ್ತಿರುವ ವೈಯಕ್ತಿಕ ಸಮಸ್ಯೆಗಳನ್ನು ಪರಿಹಾರ ಮಾಡಲು, ಹೊಸ ಯೋಜನೆಯನ್ನು ಶಾಲೆಯೊಂದು ಹಾಕಿಕೊಂಡಿದೆ. ಸರ್ಜಾಪುರ ರಸ್ತೆಯಲ್ಲಿರುವ ಇಂಡಸ್ ಇಂಟರ್ನ್ಯಾಷನಲ್ ಶಾಲೆಯು ಒಂದು ಆಸಕ್ತಿದಾಯಕ ಆಲೋಚನೆಯೊಂದನ್ನು ಮಾಡಿದೆ. ಈ ಬಗ್ಗೆ ಟೈಮ್ಸ್​​​​ ಆಫ್ ಇಂಡಿಯಾ ವರದಿಯನ್ನು ಮಾಡಿದೆ. ಬೆಂಗಳೂರಿನ ದೂರದ ನಗರಗಳಿಗೆ ಸಂಚಾರಿಸುವ ಎರಡು ಶಾಲಾ ಬಸ್​ಗಳಿಗೆ ಬಯೋಟಾಯ್ಲೆಟ್‌ ಅಳವಡಿಸಿದೆ. ಶಾಲೆ ಮತ್ತು ಮನೆಗೆ ಪ್ರಯಾಣಿಸುವಾಗ ಮೂಲಭೂತ ಸೌಲಭ್ಯಗಳಿಲ್ಲದೆ ಮಕ್ಕಳು ದೀರ್ಘ ಗಂಟೆಗಳ ಕಾಲ ಸಂಚಾರ ದಟ್ಟಣೆಯಲ್ಲಿ ಕಳೆಯುವುದರಿಂದ ಈ ಯೋಜನೆಗಳನ್ನು ತರಲಾಗಿದೆ.

ಇಂಡಸ್ ಇಂಟರ್ನ್ಯಾಷನಲ್ ಸ್ಕೂಲ್ಸ್, ಬೆಂಗಳೂರಿನ ಒಳಗೆ ಇರುವ ದೂರದ ನಗರಗಳಿಗೆ ಅಥವಾ ಊರುಗಳಿಗೆ ಹೋಗುವ ವಿದ್ಯಾರ್ಥಿಗಳಿಗಾಗಿ ಜೈವಿಕ ಶೌಚಾಲಯಗಳನ್ನು ಅಳವಡಿಸಿದೆ.  ಶಾಲೆಯಿಂದ ರಾಜಾಜಿನಗರ ಮತ್ತು ಯಶವಂತಪುರಕ್ಕೆ ಎರಡು ಗಂಟೆಗಳ ಕಾಲ ಪ್ರಯಾಣವನ್ನು ತೆಗೆದುಕೊಳ್ಳುತ್ತದೆ. ಇದಕ್ಕಾಗಿ ಈ ಸೌಲಭ್ಯಗಳನ್ನು ಮಾಡಲಾಗಿದೆ. ಇಂಡಸ್ ಇಂಟರ್‌ನ್ಯಾಷನಲ್‌ನ ನಿರ್ದೇಶಕ (ಆಡಳಿತ) ವಿನೋತ್ ಕುಮಾರ್, ದೂರದ ಪ್ರಯಾಣ ಮಾಡುವಾಗ ವಿದ್ಯಾರ್ಥಿಗಳಿಗೆ ಇದು ಅಗತ್ಯವಾಗಿದೆ. ಅನೇಕ ವಿದ್ಯಾರ್ಥಿಗಳು ದೀರ್ಘಕಾಲದವರೆಗೆ ಬಸ್‌ನಲ್ಲಿಯೇ ಇರುತ್ತಾರೆ. ಈ ಸಮಯದಲ್ಲಿ ಶೌಚಾಲಯ ಇಲ್ಲದಿದ್ದರೆ ಅಸ್ವಸ್ಥತೆ, ಆತಂಕ ಮತ್ತು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತದೆ ಎಂದು ಹೇಳಿದ್ದಾರೆ. ಅದಕ್ಕಾಗಿ ಈ ಸಮಸ್ಯೆ ಹೊಗಲಾಡಿಸಲು ವಿದ್ಯಾರ್ಥಿಗಳಿಗಾಗಿ ಜೈವಿಕ ಶೌಚಾಲಯವನ್ನು ಅಳವಡಿಸಲಾಗಿದೆ.

ಇದನ್ನೂ ಓದಿ: 1.31 ಕೋಟಿ ರೂ. ಸಂಬಳಕ್ಕಿಂತ ಬೆಂಗಳೂರಿನ 45 ಲಕ್ಷ ರೂ. ಹೆಚ್ಚು ಲಾಭದಾಯಕ ಎಂದ ಟೆಕ್ಕಿ, ಯಾಕೆ ಗೊತ್ತಾ?

ಬಯೋಟಾಯ್ಲೆಟ್ ಬೆಲೆ ಎಷ್ಟು?

ಈ ಶಾಲೆಯೂ ಹೊಸ ಸೌಲಭ್ಯಕ್ಕಾಗಿ ಎರಡು ಬಸ್‌ಗೆ ಸುಮಾರು 5 ಲಕ್ಷ ರೂ.ಗಳನ್ನು ಖರ್ಚು ಮಾಡಿದೆ. ಇದಲ್ಲದೆ, ಇದು ಪ್ರಯೋಗ ಯಶಸ್ವಿಯಾದರೆ ಇತರ ಬಸ್‌ಗಳಿಗೂ ಈ ಸೌಲಭ್ಯವನ್ನು ತರುವ ಪ್ಲಾನ್​​ ಇದೆ ಎಂದು ಹೇಳಲಾಗಿದೆ. ಈ ಸೌಲಭ್ಯಗಳು ಭಾರತೀಯ ರೈಲ್ವೆಯಲ್ಲಿ ಮಾತ್ರ ಇದೆ. ಇದೀಗ ಇಂತಹ ಸೌಲಭ್ಯಗಳನ್ನು ಶಾಲೆ ಬಸ್​​​​​​​​ಗಳಲ್ಲಿ ಮಾಡಿರುವುದು ಇದೇ ಮೊದಲು ಎಂದು ಹೇಳಲಾಗಿದೆ. ಇನ್ನು ಈ ಪ್ರಯತ್ನಕ್ಕೆ ಮಕ್ಕಳ ಪೋಷಕರು ಕೂಡ ಶ್ಲಾಘಿಸಿದ್ದಾರೆ. ಇದೊಂದು ಒಳ್ಳೆಯ ಚಿಂತನೆ ಎಂದು ಹೇಳಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral News: ಸತ್ತ ಕೀಟಗಳಿಗೂ ಶ್ರದ್ಧಾಂಜಲಿ ಸಲ್ಲಿಸುವ ಕೀಟನಾಶಕ ಕಂಪನಿ – Kannada News | Viral News Why a Japanese Firm Has Honoured Insects With Annual Memorials for Decades

ಸಾಮಾನ್ಯವಾಗಿ ಯಾರಾದರೂ ಮೃತಪಟ್ಟರೆ ಶ್ರದ್ಧಾಂಜಲಿ ಸಲ್ಲಿಸುವುದನ್ನು ನೋಡಿದ್ದೇವೆ, ಕೆಲವೊಮ್ಮೆ ತಾವು ಇಷ್ಟ ಪಟ್ಟು ಸಾಕಿರುವ ಪ್ರಾಣಿಗಳಿಗೂ ಶ್ರದ್ಧಾಂಜಲಿ ಸಲ್ಲಿಸುತ್ತೇವೆ ಆದರೆ ಕೀಟಗಳು ಸತ್ತರೆ ಅದಕ್ಯಾರಾದರೂ ಮೌನಾಚರಣೆ, ಶ್ರದ್ಧಾಂಜಲಿ ಸಲ್ಲಿಸುವುದನ್ನು ಕಂಡಿದ್ದೀರಾ. ಆದರೆ ಜಪಾನಿನಲ್ಲಿರುವ ಕೀಟನಶ ಕಂಪನಿಯೊಂದು ಪ್ರತಿ ವರ್ಷವೂ ಹೀಗೊಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿದೆ.

ಕಳೆದ 40 ವರ್ಷಗಳಲ್ಲಿ ತಾವು ಕೊಂದಿರುವ ಕೀಟಗಳಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಾರೆ. ಅರ್ಥ್ ಕಾರ್ಪೊರೇಷನ್ ಜಪಾನ್‌ನಲ್ಲಿ ಅತ್ಯುತ್ತಮ ಗೃಹ ಕೀಟನಾಶಕ ಕಂಪನಿಯಾಗಿದೆ. ಇದು ದಶಕಗಳ ಸಂಶೋಧನೆಯ ಮೂಲಕ ಈ ಖ್ಯಾತಿಯನ್ನು ಗಳಿಸಿದೆ. ತನ್ನ ಉತ್ಪನ್ನಗಳ ಪರಿಣಾಮಕಾರಿತ್ವವನ್ನು ಪರೀಕ್ಷಿಸಲು, ಕಂಪನಿಯು ಅಕೋ ನಗರದ ಸಂಶೋಧನಾ ಸೌಲಭ್ಯದಲ್ಲಿ ವಿವಿಧ ಕೀಟ ಪ್ರಭೇದಗಳನ್ನು ಬಳಸುತ್ತದೆ.

ಮತ್ತು ಕೆಲವು ಕೀಟಗಳು ಸಂಶೋಧನಾ ಪ್ರಕ್ರಿಯೆಯಲ್ಲಿ ಸಾಯುತ್ತವೆ. ಅರ್ಥ್ ಕಾರ್ಪೊರೇಷನ್ ಕೀಟಗಳ ಸಾವುಗಳನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ಅಕೋ ನಗರದ ಮೈಯೋಡೋಜಿಯಲ್ಲಿ ಈ ಕೀಟಗಳಿಗಾಗಿ ಸ್ಮರಣಾರ್ಥ ಸಮಾರಂಭವನ್ನು ಆಯೋಜಿಸುತ್ತದೆ. ಕಳೆದ ತಿಂಗಳು, 60 ಕ್ಕೂ ಹೆಚ್ಚು ಸಿಬ್ಬಂದಿ ಭಾಗವಹಿಸಿದ್ದ ಸಮಾರಂಭದಲ್ಲಿ  ಸತ್ತ ಕೀಟಗಳ ಚಿತ್ರಗಳ ಮುಂದೆ ಪ್ರಾರ್ಥನೆಗಳನ್ನು ಸಲ್ಲಿಸಿರುವುದನ್ನು ಕಾಣಬಹುದು.

ಮತ್ತಷ್ಟು ಓದಿ: Video: ಹಸಿದ ಶ್ವಾನಕ್ಕೆ ಆಹಾರ ನೀಡಿ ಹಸಿವು ನೀಗಿಸಿದ ಪುಣ್ಯಾತ್ಮ

ಸೊಳ್ಳೆಗಳು, ನೊಣಗಳು, ಜಿರಳೆಗಳು ಮತ್ತು ಇತರ ಕೀಟಗಳ ಚಿತ್ರಗಳನ್ನು ಅಲ್ಲಿ ಇರಿಸಲಾಗುತ್ತದೆ ಮತ್ತು ಜನರು ಅವುಗಳಿಗಾಗಿ ಪ್ರಾರ್ಥನೆ ಸಲ್ಲಿಸುತ್ತಾರೆ. ಅರ್ಥ್ ಕಾರ್ಪೊರೇಷನ್‌ನ ಸಂಶೋಧನಾ ತಂಡ 1 ಮಿಲಿಯನ್ ಜಿರಳೆಗಳ್ನು ಮತ್ತು 100 ಮಿಲಿಯನ್​ಗಿಂತಲೂ ಹೆಚ್ಚು ಕೀಟಗಳನ್ನು ಸಂಶೋಧನೆಗಾಗಿ ಬಳಕೆ ಮಾಡಲಾಗುತ್ತದೆ. ಈ ಕಟಗಳು ಮನುಷ್ಯನಿಗಾಗಿ ತಮ್ಮ ಪ್ರಾಣವ್ನೇ ಬಲಿಕೊಡುತ್ತವೆ.

ಹೀಗಾಗಿ ಪ್ರತಿ ವರ್ಷವೂ ಇಂಥಾ ಕಾರ್ಯಕ್ರಮಗಳನ್ನು ಆಯೋಜಿಸಿ ಸತ್ತ ಕೀಟಗಳಿಗೆ ಗೌರವ ಸೂಚಿಸಲಾಗುತ್ತದೆ.ಅರ್ಥ್ ಕಾರ್ಪೊರೇಷನ್ ಕಳೆದ ನಾಲ್ಕು ದಶಕಗಳಿಂದ ಪ್ರತಿ ವರ್ಷ ಈ ವಿಶಿಷ್ಟ ಸಮಾರಂಭವನ್ನು ನಡೆಸುತ್ತಿದೆ.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Railway Recruitment 2026: ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿ 54 ಜೂನಿಯರ್ ಹುದ್ದೆಗಳಿಗೆ ನೇಮಕಾತಿ – Kannada News | RRC South Eastern Railway Sports Quota Recruitment 2025 26: 54 Vacancies for Athletes

ರೈಲ್ವೆ ನೇಮಕಾತಿ ಕೋಶ (RRC) 2025-26ನೇ ಸಾಲಿಗೆ ಕೇಂದ್ರ ಸರ್ಕಾರದ ರೈಲ್ವೆ ಸಚಿವಾಲಯದ ಆಗ್ನೇಯ ರೈಲ್ವೆಯಲ್ಲಿ ಕ್ರೀಡಾ ಕೋಟಾದಡಿಯಲ್ಲಿ ಉದ್ಯೋಗಗಳ ನೇಮಕಾತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಯಾವುದೇ ಅರ್ಹ ಪುರುಷ ಮತ್ತು ಮಹಿಳಾ ಕ್ರೀಡಾಪಟುಗಳು ಅರ್ಜಿ ಸಲ್ಲಿಸಬಹುದು. ಈ ಅಧಿಸೂಚನೆಯಡಿಯಲ್ಲಿ ಒಟ್ಟು 54 ಜೂನಿಯರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆನ್‌ಲೈನ್ ಅರ್ಜಿಗಳು ಜನವರಿ 10 ರಿಂದ ಪ್ರಾರಂಭವಾಗುತ್ತವೆ.

ಖಾಲಿ ಹುದ್ದೆಗಳ ವಿವರ:

  • ಗ್ರೂಪ್-ಸಿ ಹುದ್ದೆಗಳ ಸಂಖ್ಯೆ (ಹಂತ-4, ಹಂತ-5): 5
  • ಗ್ರೂಪ್-ಸಿ (ಮಟ್ಟ-2/3) ಹುದ್ದೆಗಳ ಸಂಖ್ಯೆ: 16
  • ಗ್ರೂಪ್-ಡಿ (ಲೆವೆಲ್-1) ಹುದ್ದೆಗಳ ಸಂಖ್ಯೆ: 33

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಂಬಂಧಿತ ಹುದ್ದೆಯ ಪ್ರಕಾರ 10 ನೇ ತರಗತಿ, ಐಟಿಐ, ಇಂಟರ್, ಪದವಿಯಲ್ಲಿ ಉತ್ತೀರ್ಣರಾಗಿರಬೇಕು. ಅಲ್ಲದೆ, ಅಧಿಸೂಚನೆಯ ಪ್ರಕಾರ ಅಥ್ಲೆಟಿಕ್ಸ್, ಬ್ಯಾಸ್ಕೆಟ್‌ಬಾಲ್, ಕ್ರಿಕೆಟ್, ವಾಲಿಬಾಲ್, ಬ್ಯಾಡ್ಮಿಂಟನ್, ಹಾಕಿ, ಈಜು, ವಾಟರ್ ಪೋಲೊ, ಟೇಬಲ್ ಟೆನಿಸ್, ಗಾಲ್ಫ್, ಚೆಸ್ ಮುಂತಾದ ಯಾವುದೇ ಕ್ರೀಡೆಗಳಲ್ಲಿ ವಿವಿಧ ಹಂತಗಳಲ್ಲಿ ಪದಕಗಳನ್ನು ಗೆದ್ದಿರಬೇಕು. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸಿನ ಮಿತಿ ಜನವರಿ 1, 2026 ರಂತೆ 18 ರಿಂದ 25 ವರ್ಷಗಳ ನಡುವೆ ಇರಬೇಕು.

ಇದನ್ನೂ ಓದಿ: ರೈಲ್ವೆಯಲ್ಲಿ 22 ಸಾವಿರ ಲೆವೆಲ್-1 ಹುದ್ದೆಗಳಿಗೆ ನೇಮಕಾತಿ; ಶೀಘ್ರದಲ್ಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭ

ಈ ಅರ್ಹತೆಗಳನ್ನು ಪೂರೈಸುವವರು ಫೆಬ್ರವರಿ 9, 2026 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಶೈಕ್ಷಣಿಕ ಅರ್ಹತೆಗಳು, ಕ್ರೀಡಾ ಸಾಧನೆಗಳು, ಆಟದ ಕೌಶಲ್ಯಗಳು, ದೈಹಿಕ ಸಾಮರ್ಥ್ಯ ಮತ್ತು ತರಬೇತುದಾರರ ವೀಕ್ಷಣೆಯ ಆಧಾರದ ಮೇಲೆ ಅಂತಿಮ ಆಯ್ಕೆಯನ್ನು ಮಾಡಲಾಗುತ್ತದೆ. ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 500 ರೂ. ಮತ್ತು ಎಸ್‌ಸಿ, ಎಸ್‌ಟಿ, ಇಎಸ್‌ಎಂ, ದಿವ್ಯಾಂಗ, ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಇಬಿಸಿ ಅಭ್ಯರ್ಥಿಗಳಿಗೆ 250 ರೂ.

ಆಗ್ನೇಯ ರೈಲ್ವೆಯಲ್ಲಿನ ಉದ್ಯೋಗ ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಳ್ಳಾರಿ ಬ್ಯಾನರ್ ಗಲಾಟೆ: ಡಿಐಜಿಪಿ ವರ್ತಿಕಾ ಕಟಿಯಾರ್ ಎತ್ತಂಗಡಿ; ನೂತನ ಎಸ್ಪಿ ನೇಮಕ – Kannada News | Ballari Banner Clash: DIG Vertika Katiyar Transferred, New SP Appointed

ಡಿಐಜಿಪಿ ವರ್ತಿಕಾ ಕಟಿಯಾರ್ ಎತ್ತಂಗಡಿ

ಬೆಂಗಳೂರು, ಜನವರಿ 07: ಶಾಸಕರಾದ ಜನಾರ್ದನ ರೆಡ್ಡಿ ಮತ್ತು ಭರತ್​​ ರೆಡ್ಡಿ ಬೆಂಬಲಿಗರ ನಡುವೆ ಬ್ಯಾನರ್​ ವಿಚಾರವಾಗಿ ಗಲಾಟೆ ಸಂಬಂಧ ಎಸ್ಪಿ ತಲೆದಂಡದ ಬೆನ್ನಲ್ಲೇ ಡಿಐಜಿಪಿ ವರ್ತಿಕಾ ಕಟಿಯಾರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ. ಸಿವಿಲ್ ರೈಟ್ಸ್ ಮತ್ತು ಎನ್ಫೋರ್ಸ್​ಮೆಂಟ್​ ವಿಭಾಗಕ್ಕೆ ವರ್ತಿಕಾರನ್ನು ಟ್ರಾನ್ಸ್​​ಫರ್​​ ಮಾಡಲಾಗಿದ್ದು, ಬಳ್ಳಾರಿ ವಲಯದ ಐಜಿಪಿಯಾಗಿ ಡಾ.ಪಿ.ಎಸ್.ಹರ್ಷ ಅವರನ್ನು ನೇಮಕ ಮಾಡಲಾಗಿದೆ. ಪವನ್ ನೆಜ್ಜೂರು ಅವರ ಅಮಾನತಿನಿಂದ ತೆರವಾಗಿದ್ದ ಎಸ್ಪಿ ಸ್ಥಾನಕ್ಕೆ ಡಾ. ಸುಮನ ಪೆನ್ನೆಕರ್ ಅವರನ್ನು ನೇಮಿಸಿಯೂ ಆದೇಶಿಸಲಾಗಿದೆ.

ಬ್ಯಾನರ್​​ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್​ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಬಳ್ಳಾರಿ ಎಸ್ಪಿ ಪವನ್ ನೆಜ್ಜೂರು ಅವರನ್ನ ಅಮಾನತು ಮಾಡಿತ್ತು. ದುರ್ದೈವ ಅಂದರೆ ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲಿ ಪವನ್ ನೆಜ್ಜೂರು ಸಸ್ಪೆಂಡ್ ಆಗಿದ್ದರು. ಪರಿಸ್ಥಿತಿ ನಿಭಾಯಿಸುವಲ್ಲಿ ಪೊಲೀಸರು ವಿಫಲವಾಗಿದ್ದಾರೆ. ಹೀಗಾಗಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡುವಂತೆ ಬಳ್ಳಾರಿ ಡಿಐಜಿ ವರ್ತಿಕಾ ಕಟಿಯಾರ ಅವರು ಸರ್ಕಾರಕ್ಕೆ ವರದಿ ನೀಡಿದ್ದರು. ಆ ಬೆನ್ನಲ್ಲೇ ಸರ್ಕಾರ ಕ್ರಮ ಕೈಗೊಂಡಿತ್ತು.

ಇದನ್ನೂ ಓದಿ: ರೆಡ್ಡಿಗಳ ಸಂಘರ್ಷಕ್ಕೆ ಗಣಿ ನಾಡು ಉದ್ವಿಗ್ನ, ಕಾಂಗ್ರೆಸ್ ಕಾರ್ಯಕರ್ತ ಸಾವು; ಅಸಲಿಗೆ ಬಳ್ಳಾರಿಯಲ್ಲಿ ಆಗಿದ್ದೇನು?

ಅಮಾನತು ಬೆನ್ನಲ್ಲೇ ಪವನ್ ನಜ್ಜೂರ್ ತುಮಕೂರಿನಲ್ಲಿ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಆಘಾತಕಾರಿ ಸುದ್ದಿಗಳು ಹರಿದಾಡಿದ್ದವು. ಸ್ನೇಹಿತನ ಫಾರ್ಮ್‌ಹೌಸ್‌ನಲ್ಲಿ ಮಾತ್ರೆ ಸೇವಿಸಿದ್ದ ನಜ್ಜೂರ್ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪ್ರಾಣಾಪಾಯದಿಂದ ಅವರು ಪಾರಾಗಿದ್ದಾರೆ ಎನ್ನಲಾಗಿತ್ತು. ಬಳಿಕ ಈ ಬಗ್ಗೆ ಖುದ್ಧು ಸ್ಪಷ್ಟನೆ ನೀಡಿದ್ದ ಎಸ್​ಪಿ ಪವನ್ ನೆಜ್ಜೂರ್ ಅವರ ತಂದೆ ಯಾವುದೇ ಕಾರಣಕ್ಕೂ ನನ್ನ ಪುತ್ರ ಆತ್ಮಹತ್ಯೆಯ ಪ್ರಯತ್ನ ಮಾಡಿಲ್ಲ ಎಂದು ಹೇಳಿದ್ದರು. ಇದೇ ವಿಚಾರ ಇಟ್ಟುಕೊಂಡು ವಿಪಕ್ಷ ಬಿಜೆಪಿ ರಾಜ್ಯ ಸಕರ್ಕರದ ವಿರುದ್ಧ ಮುಗಿಬಿದ್ದಿತ್ತು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಮಿಳು ಸರಿಗಮಪ ಬಳಿಕ ಹೇಗಿದೆ ಶಿವಾನಿ ನವೀನ್ ಲೈಫ್? – Kannada News | Shivani Naveen Life Changed After Tamil Saregamapa Here are her Cute photos

ಶಿವಾನಿ ನವೀನ್ ಅವರು ಕಳೆದ ವರ್ಷ ತಮಿಳುನಾಡಿನಲ್ಲಿ ಮಿಂಚು ಹರಿಸಿದ್ದರು, ಇದಕ್ಕೆ ಕಾರಣ ಆಗಿದ್ದು ತಮಿಳಿನ ಸರಿಗಮಪ ಶೋ. ಅಲ್ಲಿ ಅವರು ಭಾಗವಹಿಸಿ ಸಾಕಷ್ಟು ಗಮನ ಸೆಳೆದಿದ್ದರು. ಈಗ ಶಿವಾನಿ ಅವರು ವಿವಿಧ ಶೋಗಳನ್ನು ನೀಡುತ್ತಿದ್ದಾರೆ.

ಶಿವಾನಿ ಅವರು ಜೀ ಕನ್ನಡದ ‘ಸರಿಗಮಪ ಲಿಟಲ್ ಚಾಂಪ್ಸ್ ಸೀಸನ್ 19’ರಲ್ಲಿ ಸ್ಪರ್ಧಿಸಿದ್ದರು. ಈ ವೇಳೆ ಅವರು ಮೊದಲ ರನ್ನರ್-ಅಪ್ ಆಗಿದ್ದರು. ಅವರಿಗೆ ಸಂಗೀತದ ಬಗ್ಗೆ ಅಪಾರ ಪ್ರೀತಿ ಇದೆ. ಪ್ರತಿ ಹಂತದಲ್ಲೂ ಕಲಿಕೆ ಮಾಡುತ್ತಾ ಸಾಗುತ್ತಿದ್ದಾರೆ.

ತಮಿಳಿನ ಸರಿಗಮಪ ಸೀನಿಯರ್ಸ್ ಸೀಸನ್ 5’ರಲ್ಲಿ ಶಿವಾನಿ ಫಿನಾಲೆ ತಲುಪಿದ್ದರು. ಆದರೆ, ಗೆಲುವು ಸಿಕ್ಕಿಲ್ಲ ತಮ್ಮ ಗಾಯನದ ಮೂಲಕ ಕನ್ನಡ ಹಾಗೂ ತಮಿಳು ವೀಕ್ಷಕರ ಮನಗೆದ್ದಿದ್ದಾರೆ. ಅವರ ಅಭಿಮಾನಿ ಬಳಗ ಈಗ ಹಿರಿದಾಗಿದೆ.

ಶಿವಾನಿ ನವೀನ್ ಅವರು ವಿವಿಧ ಕಡೆಗಳಲ್ಲಿ ಶೋಗಳನ್ನು ನೀಡುತ್ತಿದ್ದಾರೆ. ಇತ್ತೀಚೆಗೆ ಅವರು ಪಾಂಡಿಚೇರಿಗೆ ತೆರಳಿ ಶೋ ಕೊಟ್ಟಿದ್ದಾರೆ. ಈ ಮೂಲಕ ಬೇರೆ ಭಾಷೆ, ರಾಜ್ಯಗಿಂದಲೂ ಅವರಿಗೆ ಆಫರ್​​ಗಳು ಬರುತ್ತಿರುವುದು ಸ್ಪಷ್ಟವಾಗಿದೆ.

ಶಿವಾನಿ ನವೀನ್ ಮೂಲತಃ ಚಿಕ್ಕಮಗಳೂರಿನವರು. ಅವರಿಗೆ ರಾಜ್ಯಾದ್ಯಂತ ಅಭಿಮಾನಿಗಳಿದ್ದಾರೆ. ಅವರು ವಿವಿಧ ಆಲ್ಬಂಗಳಲ್ಲಿ ಹಾಡಿ ಎಲ್ಲರ ಮೆಚ್ಚುಗೆ ಪಡೆದಿದ್ದಾರೆ. ಅವರ ಖ್ಯಾತಿ ಮತ್ತಷ್ಟು ಹೆಚ್ಚಲಿ ಎಂಬುದು ಅಭಿಮಾನಿಗಳ ಕೋರಿಕೆ,

Published On – 12:33 pm, Wed, 7 January 26

Source link

Exit mobile version