ಹೊಸ ರಿಯಾಲಿಟಿ ಶೋ ಮೂಲಕ ಬಂದ ಸೃಜನ್ ಲೋಕೇಶ್; ಬಿಗ್ ಬಾಸ್ ಬಳಿಕ ಪ್ರಸಾರ – Kannada News | Srujan Lokesh Shruthi And Sadhu Kokila In Gicchi Gili Gili Junior Show

‘ಬಿಗ್ ಬಾಸ್ ಕನ್ನಡ ಸೀಸನ್ 12’ ಜನವರಿ 17 ಹಾಗೂ 18ರಂದು ಪ್ರಸಾರ ಕಾಣಲಿದೆ. ಈ ಶೋ ಮುಗಿದ ಬಳಿಕ ವೀಕೆಂಡ್​​ನಲ್ಲಿ ಪ್ರಸಾರ ಮಾಡೋಕೆ ಒಂದು ರಿಯಾಲಿಟಿ ಶೋ ಬೇಕಲ್ಲ. ಅದಕ್ಕೆ ಶೋ ಸಿದ್ಧವಾಗಿದೆ. ಸೃಜನ್ ಲೋಕೇಶ್ ಇದರ ನೇತೃತ್ವ ವಹಿಸಿಕೊಂಡಿದ್ದಾರೆ. ಅದುವೇ ‘ಗಿಚ್ಚಿ ಗಿಲಿಗಿಲಿ ಜೂನಿಯರ್ಸ್’. ಸೃಜನ್ ಲೋಕೇಶ್, ಸಾಧು ಕೋಕಿಲ ಹಾಗೂ ಶ್ರುತಿ ಶೋನ ನೇತೃತ್ವ ವಹಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಧ್ವಂಸಗೊಂಡಿದ್ದ ಸೋಮನಾಥ ದೇವಾಲಯವನ್ನು ಮತ್ತೆ ಕಟ್ಟುವುದು ನೆಹರುಗೆ ಇಷ್ಟವಿರಲಿಲ್ಲ: ಸುಧಾಂಶು ತ್ರಿವೇದಿ – Kannada News | Nehru Opposed Somnath Temple Reconstruction: Sudhanshu Trivedi Claims

ನವದೆಹಲಿ, ಜನವರಿ 07: ಸಾವಿರ ವರ್ಷಗಳ ಹಿಂದೆ ಮೊಹಮ್ಮದ್ ಘಜ್ನಿ ಗುಜರಾತ್​ನ ಸೋಮನಾಥ ದೇವಾಲಯ(Somnath Temple)ವನ್ನು ನೆಲಸಮಗೊಳಿಸಿದ್ದ. ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಪ್ರಥಮವೆಂದು ಪರಿಗಣಿಸಲಾಗಿರುವ ಸೋಮನಾಥ ದೇವಾಲಯವು ಭಾರತೀಯ ಸನಾತನ ಪರಂಪರೆಯ ಸಂಕೇತವಾಗಿದೆ. ಘಜ್ನಿಯಿಂದ ದೇವಾಲಯ ಧ್ವಂಸಗೊಂಡಿದ್ದ ಈ ಸೋಮನಾಥ ದೇವಾಲಯದ ಮರು ನಿರ್ಮಾಣ ಮಾಡುವುದು ಜವಾಹರ್​ಲಾಲ್ ನೆಹರು ಅವರಿಗೆ ಇಷ್ಟವಿರಲಿಲ್ಲ ಎಂದು ರಾಜ್ಯಸಭಾ ಸದಸ್ಯ ಡಾ. ಸುಧಾಂಶು ತ್ರಿವೇದಿ ತಮ್ಮ ಪೋಸ್ಟ್​ನಲ್ಲಿ ಬರೆದಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಜನವರಿ 11ರಂದು ಈ ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ.

ಸೋಮನಾಥ ದೇವಾಲಯದ ಪುನರ್ನಿರ್ಮಾಣದ ಅಗತ್ಯವನ್ನು ಪ್ರಶ್ನಿಸಿ ಮತ್ತು ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಬೇಡಿ ಎಂದು ಪಂಡಿತ್ ನೆಹರು ಅವರು ಸಂಪುಟ ಸಚಿವರಿಗೆ ಮಾತ್ರವಲ್ಲದೆ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಮತ್ತು ಉಪಾಧ್ಯಕ್ಷ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರಿಗೂ ಪತ್ರ ಬರೆದಿದ್ದರು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ ಎಂದು ದ್ವಿವೇದಿ ಬರೆದಿದ್ದಾರೆ.

ಆದರೆ ಸೋಮನಾಥ ದೇವಾಲಯದ ನಿರ್ಮಾಣದ ಬಗ್ಗೆ ದೂರು ನೀಡಿ, ಇದು ವಿದೇಶಗಳಲ್ಲಿ ಭಾರತದ ಪ್ರತಿಷ್ಠೆಯನ್ನು ಹಾಳು ಮಾಡಿದೆ ಎಂದು ಪಂಡಿತ್ ನೆಹರು ಎಲ್ಲಾ ಭಾರತೀಯ ಮುಖ್ಯಮಂತ್ರಿಗಳಿಗೆ ಎರಡು ಬಾರಿ ಪತ್ರ ಬರೆದಿದ್ದರು ಎಂಬುದು ಸತ್ಯ.ರಾಷ್ಟ್ರಪತಿ ಸಮಾರಂಭದಲ್ಲಿ ಭಾಗವಹಿಸಿದ್ದಕ್ಕೆ ಅವರು ಅತೃಪ್ತರಾಗಿದ್ದಾರೆ ಎಂದು ಅವರು ಬರೆದಿದ್ದಾರೆ.

ಸೋಮನಾಥ ಟ್ರಸ್ಟ್‌ಗೆ ಯಾವುದೇ ಸಹಾಯವನ್ನು ನೀಡಲು ಪಂಡಿತ್ ನೆಹರು ಸ್ಪಷ್ಟವಾಗಿ ನಿರಾಕರಿಸಿದ್ದರು, ಪವಿತ್ರೀಕರಣ ಸಮಾರಂಭಕ್ಕೆ ನದಿ ನೀರಿನ ವಿನಂತಿಗಳನ್ನು ಒಳಗೊಂಡಂತೆ ಭಾರತೀಯ ರಾಯಭಾರ ಕಚೇರಿಗಳಿಗೆ ಪತ್ರ ಬರೆದಿದ್ದರು.

ಮತ್ತಷ್ಟು ಓದಿ:ಏಷ್ಯಾದ ಅತಿದೊಡ್ಡ ಗಣಪತಿ ದೇವಾಲಯವಿದು; 56 ಅಡಿ ಎತ್ತರದ ಗಣೇಶನಿಗೆ ಇಲ್ಲಿ ವಿಶೇಷ ಪೂಜೆ

ಪಂಡಿತ್ ನೆಹರು ಅವರು ವಿದೇಶಾಂಗ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಮತ್ತು ವಿದೇಶಾಂಗ ಕಾರ್ಯದರ್ಶಿಗೆ ಪತ್ರ ಬರೆದರು, ಸೋಮನಾಥ ಟ್ರಸ್ಟ್‌ನಿಂದ ಪವಿತ್ರ ನದಿ ನೀರಿನ ಯಾವುದೇ ವಿನಂತಿಗಳನ್ನು ನಿರ್ಲಕ್ಷಿಸುವಂತೆ ರಾಯಭಾರ ಕಚೇರಿಗಳಿಗೆ ಸೂಚಿಸಿದರು.

ನೆಹರು ಆಗಿನ ಗೃಹ ಸಚಿವ ಸಿ. ರಾಜಗೋಪಾಲಾಚಾರಿಗೆ ಎರಡು ಪತ್ರಗಳನ್ನು ಬರೆದರು, ಸೋಮನಾಥ ದೇವಾಲಯದ ಉದ್ಘಾಟನೆಯಲ್ಲಿ ರಾಷ್ಟ್ರಪತಿ ಭಾಗವಹಿಸುವುದನ್ನು ವಿರೋಧಿಸಿದ್ದರು.
ಹಿಂದೆ, ಸೋಮನಾಥವನ್ನು ಮೊಹಮ್ಮದ್ ಘಜ್ನಿ ಮತ್ತು ಖಿಲ್ಜಿ ಲೂಟಿ ಮಾಡಿದ್ದರು, ಆದರೆ ಸ್ವತಂತ್ರ ಭಾರತದಲ್ಲಿ, ಪಂಡಿತ್ ನೆಹರು ಭಗವಾನ್ ಸೋಮನಾಥನನ್ನು ಹೆಚ್ಚು ದ್ವೇಷಿಸುತ್ತಿದ್ದರು.

ಏಪ್ರಿಲ್ 21, 1951 ರಂದು, ಪಂಡಿತ್ ನೆಹರು ಪಾಕಿಸ್ತಾನದ ಪ್ರಧಾನಿ ಲಿಯಾಕತ್ ಅಲಿ ಖಾನ್ ಅವರನ್ನು ಪ್ರಿಯ ನವಾಬ್ಜಾದಾ ಎಂದು ಸಂಬೋಧಿಸಿ, ಸೋಮನಾಥ ದ್ವಾರಗಳ ಕಥೆಯನ್ನು ಸಂಪೂರ್ಣವಾಗಿ ಸುಳ್ಳು ಎಂದು ಕರೆದರು ಎಂದು ತ್ರಿವೇದಿ ಬರೆದಿದ್ದಾರೆ.

ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರು ಈ ಸಮಾರಂಭದ ಬಗ್ಗೆ ಉತ್ಸಾಹ ತೋರಲಿಲ್ಲ. ಇದು ಭಾರತದ ಪ್ರತಿಷ್ಠೆಗೆ ಹಾನಿಕಾರಕ ಎಂದು ಕರೆದರೂ, ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರು ದೃಢವಾಗಿ ನಿಂತು ಈ ಐತಿಹಾಸಿಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು ಎಂದೂ ಅವರು ಉಲ್ಲೇಖಿಸಿದ್ದಾರೆ.

ಸೋಮನಾಥ ದೇವಾಲಯದಲ್ಲಿ ವಿಶೇಷ ಕಾರ್ಯಕ್ರಮ
ಸೋಮನಾಥ ದೇವಾಲಯದಲ್ಲಿ ಜನವರಿ 8ರಿಂದ 11ರವರೆಗೆ ವಿಶೇಷ ಕಾರ್ಯಕ್ರಮಗಳು ಜರುಗಲಿವೆ. ಪ್ರಧಾನಿ ಮೋದಿ ಜನವರಿ 11ರಂದು ದೇವಾಲಯಕ್ಕೆ ಭೇಟಿ ನೀಡಲಿದ್ದಾರೆ. ಈ ಭೇಟಿಯು ದೇಶದಲ್ಲಿ ರಾಷ್ಟ್ರೀಯತೆಯ ಮನೋಭಾವವನ್ನು ಬಲಪಡಿಸುತ್ತದೆ. ಸೋಮನಾಥ ದೇವಾಲಯದ ನಿರ್ಮಾಣ ಮತ್ತು ಅಭಿವೃದ್ಧಿ ಕೇವಲ ದೇವಾಲಯವನ್ನು ನಿರ್ಮಿಸುವ ವಿಷಯವಲ್ಲ, ಬದಲಾಗಿ ಲಕ್ಷಾಂತರ ಭಾರತೀಯರ ಭಾವನೆಗಳನ್ನು ಒಳಗೊಂಡ ವಿಷಯವಾಗಿದೆ.

ಈ ವರ್ಷದ ಮಾರ್ಚ್ ಮತ್ತು ಏಪ್ರಿಲ್‌ನಲ್ಲಿ, ಐದು ರಾಜ್ಯಗಳು, ವಿಶೇಷವಾಗಿ ಪಶ್ಚಿಮ ಬಂಗಾಳ ಮತ್ತು ಅಸ್ಸಾಂ ವಿಧಾನಸಭಾ ಚುನಾವಣೆಗಳನ್ನು ಗಮನದಲ್ಲಿಟ್ಟುಕೊಂಡು ಇದನ್ನು ಮಹತ್ವದ ಭೇಟಿ ಎಂದು ಪರಿಗಣಿಸಲಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಥಿಯೇಟರ್​​ನಲ್ಲಿ ಫ್ಲಾಪ್; ಒಟಿಟಿಯಲ್ಲಿ? ನೆಟ್​​ಫ್ಲಿಕ್​ಗೆ ಬರ್ತಿದೆ ‘ಅಖಂಡ 2’ – Kannada News | Akhanda 2 Netflix Release: Can Balayya’s Flop Film Find OTT Success

ಥಿಯೇಟರ್​​ನಲ್ಲಿ ಸಿನಿಮಾ ಹಿಟ್ ಆಗಿ, ಅದೇ ಚಿತ್ರವನ್ನು ಒಟಿಟಿಯಲ್ಲಿ ನೋಡಿ ಇಷ್ಟ ಪಡದೇ ಇದ್ದ ಉದಾಹರಣೆ ಸಾಕಷ್ಟಿದೆ. ಅದೇ ರೀತಿ ಥಿಯೇಟರ್​​​ನಲ್ಲಿ ನಿರ್ಮಾಪಕರಿಗೆ ನಷ್ಟ ಮಾಡಿದ ಕೆಲ ಚಿತ್ರಗಳು ಒಟಿಟಿಯಲ್ಲಿ ಜನರಿಂದ ಮೆಚ್ಚುಗೆ ಪಡೆದಿದ್ದೂ ಇದೆ. ಈಗ ತೆಲುಗಿನ ‘ಅಖಂಡ 2’ (Akhanda 2) ಒಟಿಟಿಗೆ ಕಾಲಿಡುತ್ತಿದೆ. ಇದರ ಭವಿಷ್ಯವನ್ನು ಒಟಿಟಿ ವೀಕ್ಷಕರು ನಿರ್ಧರಿಸಲಿದ್ದಾರೆ.

‘ಅಖಂಡ’ ಸಿನಿಮಾ 2021ರಲ್ಲಿ ರಿಲೀಸ್ ಆಗಿ ಹಿಟ್ ಆಯಿತು. ಈ ಚಿತ್ರದಲ್ಲಿ ಬಾಲಯ್ಯ ನಟಿಸಿದ್ದರು. ಅದೇ ರೀತಿ 2025ರಲ್ಲಿ ‘ಅಖಂಡ 2’ ಚಿತ್ರವನ್ನು ತರಲಾಯಿತು. ಈ ಸಿನಮಾಗೆ ಬೋಯಪಾಟಿ ಶ್ರೀನು ನಿರ್ದೇಶನ ಇದೆ. ಈ ಚಿತ್ರವನ್ನು ಜನರು ಅಷ್ಟಾಗಿ ಇಷ್ಟಪಟ್ಟಿಲ್ಲ. ಈ ಸಿನಿಮಾದಲ್ಲಿ ಬಾಲಯ್ಯ ಅವರು ದ್ವಿಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಹಿಂದೂ ಧರ್ಮದ ಬಗ್ಗೆ ಹೇಳಲಾಗಿದೆ. ಈ ಚಿತ್ರ ನಿರ್ಮಾಪಕರಿಗೆ ನಷ್ಟವನ್ನುಂಟು ಮಾಡಿದೆ ಎನ್ನಲಾಗಿದೆ.

ಈಗ ಸಿನಿಮಾ ಒಟಿಟಿಯಲ್ಲಿ ಬರಲು ರೆಡಿ ಆಗಿದೆ. ನೆಟ್​​ಫ್ಲಿಕ್ಸ್​​ನಲ್ಲಿ ಜನವರಿ 9ರಂದು ಸಿನಿಮಾ ಪ್ರಸಾರ ಆರಂಭಿಸಲಿದೆ. ಈ ಚಿತ್ರ ನೋಡಲು ಕೆಲವರು ಕಾದಿದ್ದಾರೆ. ಥಿಯೇಟರ್​​ನಲ್ಲಿ ಚಿತ್ರವನ್ನು ಮಿಸ್ ಮಾಡಿಕೊಂಡವರು ಒಟಿಟಿಯಲ್ಲಿ ವೀಕ್ಷಣೆ ಮಾಡಬಹುದು. ಇಲ್ಲಿ ಜನರು ಚಿತ್ರವನ್ನು ಕೈ ಹಿಡಿಯುತ್ತಾರಾ ಎಂಬ ಕುತೂಹಲ ಮೂಡಿದೆ. ಕನ್ನಡದಲ್ಲೂ ಸಿನಿಮಾ ವೀಕ್ಷಣೆಗೆ ಲಭ್ಯವಿದೆ.

ಇದನ್ನೂ ಓದಿ: ಪ್ರಧಾನಿ ಮೋದಿ ‘ಅಖಂಡ 2’ ಸಿನಿಮಾ ವೀಕ್ಷಿಸುತ್ತಾರೆ ಎಂದು ಮಾಹಿತಿ ನೀಡಿದ ನಿರ್ದೇಶಕ ಬೋಯಪಾಟಿ ಶ್ರೀನು

ಬಾಲಯ್ಯ ಸಿನಿಮಾಗಳಲ್ಲಿ ಆ್ಯಕ್ಷನ್ ಭರ್ಜರಿಯಾಗೇ ಇರುತ್ತವೆ. ಅದರಲ್ಲೂ ಅವರ ಸಿನಿಮಾಗಳಲ್ಲಿ ಲಾಜಿಕ್​​​ಗಳನ್ನು ಮೂಟೆ ಕಟ್ಟಿ ಅಟ್ಟದ ಮೇಲೆ ಇಡಲಾಗುತ್ತದೆ. ‘ಅಖಂಡ 2’ ಚಿತ್ರದಲ್ಲೂ ಇದೇ ತಂತ್ರ ಮಾಡಲಾಗಿತ್ತು. ಈ ಕಾರಣದಿಂದಲೇ ಕೆಲವರಿಗೆ ಸಿನಿಮಾ ಇಷ್ಟ ಆಗಿಲ್ಲ. ಗ್ರಾಫಿಕ್ಸ್ ಕೂಡ ಕೆಲವು ಕಡೆಗಳಲ್ಲಿ ಕೈ ಕೊಟ್ಟಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಜಪಾನ್​​ನಿಂದ ಬಂದು ರಾಮ್ ಚರಣ್​​ಗಾಗಿ ಬಿರಿಯಾನಿ ಮಾಡಿದ ಶೆಫ್: ವಿಶೇಷತೆಯೇನು? – Kannada News | Celebrity Chef Takamasa Osawa visited Ram Charan house cook Biriyani

ರಾಮ್ ಚರಣ್​ಗೂ (Ram Charan) ಜಪಾನಿಗೂ ಆತ್ಮೀಯ ಬಂಧವಿದೆ. ಅವರ ಸಿನಿಮಾಗಳಿಗೆ ಜಪಾನ್​​ನಲ್ಲಿ ಭಾರಿ ಬೇಡಿಕೆ ಇದೆ. ಜಪಾನಿನಲ್ಲಿ ರಾಮ್ ಚರಣ್​​ಗೆ ದೊಡ್ಡ ಅಭಿಮಾನಿ ವರ್ಗವಿದೆ. ಮದುವೆಯಾಗಿ ಹತ್ತು ವರ್ಷಗಳ ಬಳಿಕ ಮೊದಲ ಮಗುವಾದಾಗಲೂ ಸಹ, ‘ಎಲ್ಲ ಮ್ಯಾಜಿಕ್​​ ಜಪಾನಿನಲ್ಲೇ ನಡೆಯಿತು’ ಎಂದು ತಮಾಷೆ ಸಹ ಮಾಡಿದ್ದರು ರಾಮ್ ಚರಣ್. ಇದೀಗ ರಾಮ್ ಚರಣ್ ಮನೆಗೆ ಬಿರಿಯಾನಿ ಮಾಡಲು ಜಪಾನಿನಿಂದ ಶೆಫ್ ಒಬ್ಬರು ಬಂದಿದ್ದಾರೆ.

ಬಿರಿಯಾನಿ ಅಸಲಿಗೆ ಏಷ್ಯಾದ ಖಾದ್ಯ. ಸ್ಪಷ್ಟವಾಗಿ ಬಿರಿಯಾನಿಯ ಉಗಮ ಎಲ್ಲಿ ಆಗಿದ್ದು ಎಂಬ ಬಗ್ಗೆ ಇತಿಹಾಸಕಾರರಿಗೆ ಖಾತ್ರಿ ಇಲ್ಲ. ಆದರೆ ಬಿರಿಯಾನಿ ಪ್ರಚಲಿತದಲ್ಲಿರುವುದು ಭಾರತ ಮತ್ತು ಏಷ್ಯಾದ ಮುಸ್ಲಿಂ ರಾಷ್ಟ್ರಗಳಲ್ಲಿಯೇ ಹೆಚ್ಚು. ಆದರೆ ರಾಮ್ ಚರಣ್ ಯಾಕೆ ಜಪಾನಿನಿಂದ ಶೆಫ್ ಕರೆಸಿ ಬಿರಿಯಾನಿ ಮಾಡಿಸಿದ್ದಾರೆ?

ರಾಮ್ ಚರಣ್ ಮನೆಯಲ್ಲಿ ಜಪಾನಿನ ಶೆಫ್ ಬಿರಿಯಾನಿ ಮಾಡಿ ಮನೆಯವರಿಗೆ ಉಣಬಡಿಸುತ್ತಿರುವ ಫೋಟೊ, ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ರಾಮ್ ಚರಣ್ ಮನೆಯಲ್ಲಿ ಬಿರಿಯಾನಿ ಮಾಡಿರುವ ಶೆಫ್​​ನ ಹೆಸರು ಟಕಮಾಸ ಓಸವಾ. ಇವರು ಜಪಾನಿನ ಸೆಲೆಬ್ರಿಟಿ ಶೆಫ್. ಇವರು ಬಿರಿಯಾನಿ ಮಾಡುವುದರಲ್ಲಿ ಅದರಲ್ಲೂ ಪಾಟ್ ಬಿರಿಯಾನಿ ಮಾಡುವುದರಲ್ಲಿ ನಿಷ್ಣಾತರು. ಟಕಮಾಸಾ ಒಸಾವಾ ಅವರನ್ನು ಬಿರಿಯಾನಿ ಒಸಾವ ಎಂದೇ ಕರೆಯುತ್ತಾರೆ ಅಭಿಮಾನಿಗಳು. ಮಿಷಲಿನ್ ಗೈಡ್ ಪ್ರಶಸ್ತಿಯನ್ನು ಸಹ ಒಸಾವಾ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ:ರಾಮ್ ಚರಣ್​ನ ಯಶ್ ಎಂದು ಕರೆದ ಕ್ಯಾಮೆರಾ ಮೆನ್; ಮುಂದೇನಾಯ್ತು?

ಒಸಾವ ಅವರು ಸೆಲೆಬ್ರಿಟಿ ಶೆಫ್. ಅವರು ಒಂದು ಬಾರಿಗೆ ಕೇವಲ 10 ಜನರಿಗೆ ಮಾತ್ರವೇ ಬಿರಿಯಾನಿ ಮಾಡುತ್ತಾರೆ. ಅದಕ್ಕೂ ಪ್ರೀ ಬುಕಿಂಗ್ ಮಾಡಿಕೊಳ್ಳಬೇಕು. ಅವರ ಕೈರುಚಿ ಸವಿಯಲು ಜನ ಸಾಲು ಗಟ್ಟಿರುತ್ತಾರೆ. ತಿಂಗಳುಗಟ್ಟಲೆ ಮುಂಗಡ ಬುಕಿಂಗ್ ಆಗಿರುತ್ತದೆಯಂತೆ. ಜಪಾನಿನಲ್ಲಿ ರಾಮ್ ಚರಣ್ ದೊಡ್ಡ ಸ್ಟಾರ್ ಆಗಿರುವ ಕಾರಣ ಒಸಾವಾ ಅವರು ಹೈದರಾಬಾದ್​​ನ ರಾಮ್ ಚರಣ್ ನಿವಾಸಕ್ಕೆ ಬಂದು ಬಿರಿಯಾನಿ ಮಾಡಿಕೊಟ್ಟಿದ್ದಾರೆ.

ಬಿರಿಯಾನಿ ಸವಿದ ರಾಮ್ ಚರಣ್, ಒಸಾವಾ ಕೈರುಚಿಯನ್ನು ಕೊಂಡಾಡಿದ್ದಾರೆ. ರಾಮ್ ಚರಣ್ ಮಾತ್ರವಲ್ಲದೆ ಪತ್ನಿ ಉಪಾಸನಾ, ತಾಯಿ ಸುರೇಖಾ ಇನ್ನೂ ಕೆಲವು ಕುಟುಂಬ ಸದಸ್ಯರು ಒಸಾವಾ ಮಾಡಿದ ಬಿರಿಯಾನಿ ಸವಿದು ಖುಷಿ ಪಟ್ಟಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

SBI Recruitment 2025: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ನೇಮಕಾತಿ; 1146 ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | SBI SCO Recruitment 2026: 1146 Specialist Officer Posts, Apply by Jan 10!

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ದೇಶಾದ್ಯಂತ ತನ್ನ ಶಾಖೆಗಳ ವಿವಿಧ ಇಲಾಖೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಸ್ಪೆಷಲಿಸ್ಟ್ ಕೇಡರ್ ಆಫೀಸರ್ (SCO) ಹುದ್ದೆಗಳ ನೇಮಕಾತಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸುವ ಅಧಿಸೂಚನೆಯನ್ನು ಹೊರಡಿಸಿದೆ. ಈ ಅಧಿಸೂಚನೆಯ ಅಡಿಯಲ್ಲಿ ಒಟ್ಟು 1146 ಸ್ಪೆಷಲಿಸ್ಟ್ ಕೇಡರ್ ಆಫೀಸರ್ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಒಟ್ಟು ಹುದ್ದೆಗಳಲ್ಲಿ, 582 VP ವೆಲ್ತ್ (SRM) ಹುದ್ದೆಗಳು, 237 AVP ವೆಲ್ತ್ (RM) ಹುದ್ದೆಗಳು ಮತ್ತು 327 ಗ್ರಾಹಕ ಸಂಬಂಧ ಕಾರ್ಯನಿರ್ವಾಹಕ ಹುದ್ದೆಗಳಾಗಿವೆ. ಅರ್ಹ ಅಭ್ಯರ್ಥಿಗಳು ಜನವರಿ 10 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಅಭ್ಯರ್ಥಿಗಳು ಸಂಬಂಧಿತ ಹುದ್ದೆಗಳ ಪ್ರಕಾರ ಸಂಬಂಧಿತ ವಿಭಾಗದಲ್ಲಿ ಪದವಿ ಪಡೆದಿರಬೇಕು. ಅಧಿಸೂಚನೆಯ ಪ್ರಕಾರ ಅವರು ಕೆಲಸದ ಅನುಭವವನ್ನು ಸಹ ಹೊಂದಿರಬೇಕು. ವಿವಿಧ ವಿಭಾಗಗಳಲ್ಲಿನ ಹುದ್ದೆಗಳ ಪ್ರಕಾರ ಅಭ್ಯರ್ಥಿಗಳ ವಯಸ್ಸಿನ ಮಿತಿ ಮೇ 1, 2025 ರಂತೆ 20 ರಿಂದ 42 ವರ್ಷಗಳ ನಡುವೆ ಇರಬೇಕು. ಒಬಿಸಿಗೆ ಮೂರು ವರ್ಷಗಳು, ಎಸ್‌ಸಿ, ಎಸ್‌ಟಿಗೆ ಐದು ವರ್ಷಗಳು ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಹತ್ತು ವರ್ಷಗಳವರೆಗೆ ವಯೋಮಿತಿ ಸಡಿಲಿಕೆ ಇದೆ.

ಇದನ್ನೂ ಓದಿ: ಬ್ಯಾಂಕ್ ಆಫ್ ಇಂಡಿಯಾದಲ್ಲಿ ಕ್ರೆಡಿಟ್ ಆಫೀಸರ್ ನೇಮಕಾತಿ; ಕೂಡಲೇ ಅರ್ಜಿ ಸಲ್ಲಿಸಿ

ಆಸಕ್ತ ಅಭ್ಯರ್ಥಿಗಳು ಜನವರಿ 10 ರವರೆಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಸಾಮಾನ್ಯ, ಒಬಿಸಿ ಮತ್ತು ಇಡಬ್ಲ್ಯೂಎಸ್ ಅಭ್ಯರ್ಥಿಗಳು ತಲಾ 750 ರೂ. ಅರ್ಜಿ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ಎಸ್‌ಸಿ, ಎಸ್‌ಟಿ ಮತ್ತು ಪಿಡಬ್ಲ್ಯೂಬಿಡಿ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕವಿಲ್ಲ. ಅಂತಿಮ ಆಯ್ಕೆಯು ಯಾವುದೇ ಲಿಖಿತ ಪರೀಕ್ಷೆಯಿಲ್ಲದೆ ಶೈಕ್ಷಣಿಕ ಅರ್ಹತೆ ಮತ್ತು ಸಂದರ್ಶನವನ್ನು ಆಧರಿಸಿರುತ್ತದೆ. ಕೆಳಗಿನ ಅಧಿಸೂಚನೆಯಲ್ಲಿ ಇನ್ನಷ್ಟು ವಿವರವಾದ ಮಾಹಿತಿಯನ್ನು ಪಡೆದುಕೊಳ್ಳಿ.

SBIನ  ಅಧಿಸೂಚನೆಯನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hallmark Silver: ಚಿನ್ನದಂತೆ ಬೆಳ್ಳಿಗೂ ಸದ್ಯದಲ್ಲೇ ಬರಲಿದೆ ಹಾಲ್ಮಾರ್ಕ್ ಗುರುತು – Kannada News | Hallmarking the silver may become mandatory soon, says report

ನವದೆಹಲಿ, ಜನವರಿ 7: ಚಿನ್ನದ ಪರಿಶುದ್ಧತೆಯ ಮಟ್ಟ ತೋರಿಸುವ ಹಾಲ್ಮಾರ್ಕ್ ಗುರುತು ವ್ಯವಸ್ಥೆಯನ್ನು ಬೆಳ್ಳಿಗೂ (Silver) ತರಲು ಸರ್ಕಾರ ಚಿಂತನೆ ನಡೆಸಿದೆ. ಗ್ರಾಹಕರಿಗೆ ನೈಜ ಬೆಳ್ಳಿ ವಸ್ತುಗಳು ದೊರಕಲು ಈ ಹಾಲ್ಮಾರ್ಕಿಂಗ್ ವ್ಯವಸ್ಥೆ ನೆರವಾಗಲಿದೆ. ಶೀಘ್ರದಲ್ಲೇ ಬೆಳ್ಳಿಗೂ ಹಾಲ್ಮಾರ್ಕಿಂಗ್ ಮುದ್ರೆ ಹಾಕುವುದನ್ನು ಕಡ್ಡಾಯಗೊಳಿಸಲಾಗುವುದು ಎಂದು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್ಸ್​ನ (ಬಿಐಎಸ್) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾಗಿ ಮನಿ ಕಂಟ್ರೋಲ್ ವೆಬ್​ಸೈಟ್​ನಲ್ಲಿ ವರದಿಯಾಗಿದೆ.

ಬೆಳ್ಳಿ ಆಭರಣಗಳು ಮತ್ತು ಗಟ್ಟಿಗಳಿಗೆ ಹಾಲ್ಮಾರ್ಕ್ ಗುರುತು ಮಾಡುವ ಕಾರ್ಯ ಈಗಾಗಲೇ ಮಾಡಲಾಗುತ್ತಿದೆ. ಈವರೆಗೂ 20 ಲಕ್ಷಕ್ಕೂ ಅಧಿಕ ಬೆಳ್ಳಿ ವಸ್ತುಗಳಿಗೆ ಹಾಲ್ಮಾರ್ಕ್ ಹಾಕಲಾಗಿದೆ. ಆದರೆ ಹಾಲ್ಮಾರ್ಕ್ ಅನ್ನು ಕಡ್ಡಾಯವಾಗಿ ಹಾಕಬೇಕೆಂಬ ನಿಯಮ ಇನ್ನೂ ಜಾರಿಯಾಗಿಲ್ಲ. ಚಿನ್ನಕ್ಕೆ ಹಾಲ್ಮಾರ್ಕ್ ಕಡ್ಡಾಯ ಮಾಡುವ ಮುಂಚೆಯೂ ಆ ಗುರುತು ಹಾಕಲಾಗುತ್ತಿತ್ತು. ಅದರಂತೆ ಬೆಳ್ಳಿಗೂ ಸದ್ಯದಲ್ಲೇ ಹಾಲ್ಮಾರ್ಕ್ ಹಾಕುವುದನ್ನು ಕಡ್ಡಾಯಪಡಿಸಬಹುದು.

ಇದನ್ನೂ ಓದಿ: ಈ ಎಸ್​ಎಂಬಿಯಲ್ಲಿ ಆಕರ್ಷಕ ಬಡ್ಡಿ ಆಫರ್; ನಿತ್ಯವೂ ಚಕ್ರಬಡ್ಡಿ; ಏನಿದರ ಅನುಕೂಲ?

ಹಾಲ್ಮಾರ್ಕ್ ಹೇಗೆ ಹಾಕಿಸುವುದು?

ಸರ್ಕಾರವೇನಾದರೂ ಬೆಳ್ಳಿಗೆ ಹಾಲ್ಮಾರ್ಕ್ ಕಡ್ಡಾಯಪಡಿಸಿದಂದಿನಿಂದ ಮಾರಾಟವಾಗುವ ಎಲ್ಲಾ ಬೆಳ್ಳಿ ವಸ್ತುಗಳಿಗೆ ಹಾಲ್ಮಾರ್ಕ್ ಇರುತ್ತದೆ. ಈಗಾಗಲೇ ಖರೀದಿಸಿರುವ ಬೆಳ್ಳಿ ಆಭರಣಕ್ಕೆ ಹಾಲ್ಮಾರ್ಕ್ ಇಲ್ಲವೆಂದರೆ ಅದನ್ನು ಹಾಕಿಸಲು ಅವಕಾಶ ಇದೆ.

ನಿಮ್ಮ ಪ್ರದೇಶದ ಸಮೀಪದಲ್ಲಿ ಇರುವ ಬಿಐಎಸ್ ಮಾನ್ಯತೆ ಇರುವ ಅಸ್ಸಾಯಿಂಗ್ ಅಂಡ್ ಹಾಲ್ಮಾರ್ಕಿಂಗ್ ಸೆಂಟರ್​ಗೆ (ಎಎಚ್​ಸಿ) ಹೋಗಿ ಚಿನ್ನದ ರೀತಿಯಲ್ಲಿ ಬೆಳ್ಳಿ ವಸ್ತುಗಳ ಶುದ್ಧತೆ ಪರೀಕ್ಷೆಗೆ ನೀಡಬಹುದು. ಒಂದು ವಸ್ತುವಿಗೆ 45 ರೂ ಶುಲ್ಕ ಇರುತ್ತದೆ. ಅದರ ಶುದ್ಧತೆ ಎಷ್ಟು ಎಂಬುದು ಈ ಪರೀಕ್ಷೆಯಲ್ಲಿ ಗೊತ್ತಾಗುತ್ತದೆ. ಪರೀಕ್ಷೆ ಬಳಿಕ 6 ಅಂಕಿಗಳ ಎಚ್​ಯುಐಡಿ ನಂಬರ್, ಬಿಐಎಸ್ ಲೋಗೋ ಇತ್ಯಾದಿ ಇರುವ ಹಾಲ್ಮಾರ್ಕ್ ಗುರುತನ್ನು ಬೆಳ್ಳಿ ಅಥವಾ ಚಿನ್ನದ ವಸ್ತುವಿನ ಮೇಲೆ ಮುದ್ರಿಸಲಾಗುತ್ತದೆ.

ಇದನ್ನೂ ಓದಿ: 50 ವರ್ಷದಲ್ಲಿ ವಿಶ್ವ ಹೇಗಿರುತ್ತೆ? ಫ್ರಾನ್ಸ್, ಜಪಾನ್, ಜರ್ಮನಿಯನ್ನೂ ಹಿಂದಿಕ್ಕುತ್ತಾ ಪಾಕಿಸ್ತಾನ? ಭಾರತ ಹೇಗಿದ್ದೀತು?

ಕಳೆದ ಒಂದೆರಡು ವರ್ಷದಿಂದ ಬೆಳ್ಳಿಗೆ ಸಿಕ್ಕಾಪಟ್ಟೆ ಬೇಡಿಕೆ ಹೆಚ್ಚಿದೆ. ಬೆಳ್ಳಿಯನ್ನು ಅನೇಕ ಉದ್ಯಮಗಳಲ್ಲಿ ಬಳಸಲಾಗುತ್ತದೆ. ಆಭರಣಕ್ಕಾಗಿಯೂ ಅದರ ಬಳಕೆ ಆಗುತ್ತದೆ. ಹೀಗಾಗಿ, ಚಿನ್ನಕ್ಕಿಂತ ಬೆಳ್ಳಿ ಬೆಲೆ ಹೆಚ್ಚು ವೇಗದಲ್ಲಿ ಏರುತ್ತಿದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಸ್ಥಳೀಯ ಸಂಸ್ಥೆ ಚುನಾವಣೆ: JDS ಜೊತೆ ಮೈತ್ರಿಗೆ ಮಂಡ್ಯದಲ್ಲಿ ಬಿಜೆಪಿಗರ ಅಪಸ್ವರ – Kannada News | Mandya BJP Leaders Oppose Alliance with JDS for Local Body Elections

ಮಂಡ್ಯ, ಜನವರಿ, 07: ಜಿಲ್ಲೆಯಲ್ಲಿ ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಜೆಡಿಎಸ್ ಜೊತೆಗಿನ ಮೈತ್ರಿಯನ್ನು ಬಿಜೆಪಿ ನಾಯಕರು ತೀವ್ರವಾಗಿ ವಿರೋಧಿಸಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷರು ಮತ್ತು ಕೋರ್ ಕಮಿಟಿ ಸದಸ್ಯರ ಮುಂದೆ ಈ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದು, ಮಾಜಿ ಸಂಸದೆ ಸುಮಲತಾ ಅಂಬರೀಷ್ ಮತ್ತು ಮಾಜಿ ಸಚಿವ ಕೆ.ಸಿ. ನಾರಾಯಣ ಗೌಡ ಹಾಗೂ ಜಿಲ್ಲೆಯ ಇತರ ಪರಾಜಿತ ಅಭ್ಯರ್ಥಿಗಳು ಇದಕ್ಕೆ ದನಿಗೂಡಿಸಿದ್ದಾರೆ. ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧಿಸಬೇಕೆಂದು ಆಗ್ರಹಿಸಲಾಗಿದೆ. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿ ಇದ್ದರೂ ಸ್ಥಳೀಯ ಮಟ್ಟದಲ್ಲಿ ಕಾರ್ಯಕರ್ತರ ಹಿತಾಸಕ್ತಿ ಕಾಪಾಡಲು ಮೈತ್ರಿ ಸಾಧ್ಯವಿಲ್ಲ ಎಂಬುದು ಅವರ ವಾದವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಬೇಕಿದ್ರೆ ಆಡಿ, ಇಲ್ಲಾಂದ್ರೆ ಹೊರ ನಡೀರಿ… ಬಾಂಗ್ಲಾಗೆ ಖಡಕ್ ಸೂಚನೆ! – Kannada News | ICC rejects Bangladesh’s T20 World Cup Matches Shifting request

ಟಿ20 ವಿಶ್ವಕಪ್​​ ತಮ್ಮ ಪಂದ್ಯಗಳನ್ನು ಭಾರತದಿಂದ ಶ್ರೀಲಂಕಾಕ್ಕೆ ಸ್ಥಳಾಂತರಿಸಬೇಕೆಂಬ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ (ಬಿಸಿಬಿ) ಮನವಿಯನ್ನು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತಿರಸ್ಕರಿಸಿದೆ. ಟಿ20 ವಿಶ್ವಕಪ್ಟೂರ್ನಿ ಆಡುವುದಾದರೆ ಭಾರತದಲ್ಲೇ ಆಡಿ, ಇಲ್ಲದಿದ್ದರೆ ವಾಕ್ ಓವರ್ ನೀಡಿ ಎಂದು ಐಸಿಸಿ ಬಿಸಿಬಿಗೆ ಸೂಚಿಸಿದೆ ಎಂದು ವರದಿಯಾಗಿದೆ.

ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಬಾಂಗ್ಲಾ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಹೊರಗಿಟ್ಟ ಬೆನ್ನಲ್ಲೇ ಬಾಂಗ್ಲಾದೇಶ್ ತಂಡದ ಟಿ20 ವಿಶ್ವಕಪ್ ಪಂದ್ಯಗಳನ್ನು ಶ್ರೀಲಂಕಾಗೆ ಸ್ಥಳಾಂತರಿಸುವಂತೆ ಬಾಂಗ್ಲಾ ಕ್ರಿಕೆಟ್ ಬೋರ್ಡ್ ಐಸಿಸಿಗೆ ಮನವಿ ಮಾಡಿತ್ತು.

ಬಾಂಗ್ಲಾದೇಶ್, ಬಾಂಗ್ಲಾದೇಶ್ ಕ್ರಿಕೆಟ್ ಅಥವಾ ಬಾಂಗ್ಲಾದೇಶ ಕ್ರಿಕೆಟಿಗರ ಅವಮಾನವನ್ನು ನಾವು ಸಹಿಸುವುದಿಲ್ಲ. ಗುಲಾಮಗಿರಿಯ ದಿನಗಳು ಮುಗಿದಿವೆ. ಬಾಂಗ್ಲಾದೇಶದ ಕ್ರಿಕೆಟಿಗನೊಬ್ಬನಿಗೆ ಭಾರತದಲ್ಲಿ ಆಡಲು ಸಾಧ್ಯವಾಗದಿದ್ದರೆ, ಬಾಂಗ್ಲಾದೇಶ್ ತನ್ನ ಇಡೀ ಕ್ರಿಕೆಟ್ ತಂಡವು ವಿಶ್ವಕಪ್ ಆಡಲು ಭಾರತಕ್ಕೆ ಪ್ರಯಾಣಿಸುವುದು ಸುರಕ್ಷಿತವೆಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಟಿ20 ವಿಶ್ವಕಪ್​ನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಿಸಿಬಿ ಐಸಿಸಿಗೆ ಪತ್ರ ಬರೆದಿದೆ ಬಾಂಗ್ಲಾದೇಶ್​​ನ ಕ್ರೀಡಾ ಸಚಿವಾಲಯದ ಉಸ್ತುವಾರಿ ಸಚಿವ ಆಸಿಫ್ ನಜ್ರುಲ್ ತಿಳಿಸಿದ್ದರು.

ಇದೀಗ ಮನವಿಯನ್ನು ಐಸಿಸಿಗೆ ತಿರಸ್ಕರಿಸಿದೆ. ಟಿ20 ವಿಶ್ವಕಪ್ಗಾಗಿ ಬಾಂಗ್ಲಾದೇಶ್ ತಂಡವು ಭಾರತಕ್ಕೆ ಪ್ರಯಾಣಿಸಬೇಕಾಗುತ್ತದೆ. ಇಲ್ಲದಿದ್ದರೆ ಅಂಕಗಳನ್ನು ಕಳೆದುಕೊಳ್ಳಬೇಕು.ಅಂದರೆ ಪಂದ್ಯದಿಂದ ಹಿಂದೆ ಸರಿಯೊಂದೇ ಆಯ್ಕೆ. ಇದರ ಹೊರತಾಗಿ ಬೇರೆ ಯಾವುದೇ ಆಯ್ಕೆಗಳಿಲ್ಲ ಎಂದು ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಗೆ ಐಸಿಸಿ ತಿಳಿಸಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಇತ್ತ ಐಸಿಸಿಯ ಸೂಚನೆಯಿಂದಾಗಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಇಕ್ಕಟ್ಟಿಗೆ ಸಿಲುಕಿದೆ. ಏಕೆಂದರೆ ಈಗಾಗಲೇ ಭಾರತದಲ್ಲಿ ಟಿ20 ವಿಶ್ವಕಪ್ ಆಡಲ್ಲ ಎಂದು ಸೂಚಿಸಿರುವ ಬಿಸಿಬಿಗೆ ಐಸಿಸಿ ಕಡೆಯಿಂದ ಖಡಕ್ ಸೂಚನೆ ದೊರೆತಿದೆ. ಹೀಗಾಗಿ ಭಾರತದಲ್ಲಿ ಟಿ20 ವಿಶ್ವಕಪ್ ಆಡಬೇಕು ಇಲ್ಲ ಟೂರ್ನಿಯಿಂದ ಹೊರ ನಡೆಯಬೇಕು.

ಒಂದು ವೇಳೆ ಟೂರ್ನಿಯಿಂದ ಹಿಂದೆ ಸರಿದರೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ವಿರುದ್ಧ ಐಸಿಸಿ ಕ್ರಮ ಕೈ ಗೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ. ಅದರಲ್ಲೂ ಬಿಸಿಬಿ ಮೇಲೆ ನಿಷೇಧ ಹೇರಿದರೆ ಮುಂಬರುವ ಐಸಿಸಿ ಏಕದಿನ ವಿಶ್ವಕಪ್​​​ನಲ್ಲಿ ಕಣಕ್ಕಿಳಿಯಲು ಸಾಧ್ಯವಾಗುವುದಿಲ್ಲ. ಇದರಿಂದ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಆದಾಯಕ್ಕೆ ಹೊಡೆತ ಬೀಳಲಿದೆ.

ಇದನ್ನೂ ಓದಿ: ಐಪಿಎಲ್​ನಿಂದ ಹೊರಬಿದ್ದ ಬೆನ್ನಲ್ಲೇ ಮುಸ್ತಫಿಝುರ್​ ರೆಹಮಾನ್​ಗೆ ಬಿಗ್ ಆಫರ್..!

ಹೀಗಾಗಿ ಸದ್ಯ ಬಾಂಗ್ಲಾದೇಶ್ ಮುಂದಿರುವುದು ಭಾರತದಲ್ಲಿ ಟೂರ್ನಿ ಆಡುವುದೊಂದೇ ಆಯ್ಕೆ. ಹಾಗಾಗಿ ಜನವರಿ 10 ರಂದು ನಡೆಯಲಿರುವ ಐಸಿಸಿ ಸಭೆಯಲ್ಲಿ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ ತನ್ನ ನಿಲುವನ್ನು ಸ್ಪಷ್ಟಪಡಿಸಲಿದೆ ಎಂದು ತಿಳಿದು ಬಂದಿದೆ.

Source link

Video: ಅಜ್ಜಿಗೆ ವಿಡಿಯೋ ಕಾಲ್ ಮಾಡುವುದನ್ನು ಹೇಳಿಕೊಟ್ಟ ಮೊಮ್ಮಗಳು – Kannada News | Grandmother learns to make video calls under the guidance of her granddaughter

ಮನೆಯಲ್ಲಿ ಅಜ್ಜ ಅಜ್ಜಿಯಂದಿರಿಂದರೆ (grandparents) ಅವರಿಗೆ ಮೊಬೈಲ್ ಬಳಕೆ ಅಷ್ಟಾಗಿ ತಿಳಿದಿರುವುದಿಲ್ಲ. ಯಾರದರೂ ಕಾಲ್ ಮಾಡಿದರೆ ಮೊಬೈಲ್ ಅನ್ನು ಕೈಯಲ್ಲಿ ಹಿಡಿದುಕೊಂಡು ನಿಂತು ಬಿಡುತ್ತಾರೆ. ಆದರೆ ಇಲ್ಲೊಬ್ಬಳು ಮೊಮ್ಮಗಳು (granddaughter) ತನ್ನ ಅಜ್ಜಿಗೆ ಸ್ಮಾರ್ಟ್ ಪೋನ್‌ನಲ್ಲಿ ವಿಡಿಯೋ ಕಾಲ್ ಮಾಡುವುದು ಹೇಗೆಂದು ಕಲಿಸಿ ಕೊಡುತ್ತಿರುವ ವಿಡಿಯೋ ಸದ್ಯ ವೈರಲ್ ಆಗಿದೆ. ಈ ವಿಡಿಯೋ ಕಲಿಕೆಗೆ ವಯಸ್ಸಿನ ಮಿತಿಯಿಲ್ಲ ಎನ್ನುವುದನ್ನು ಸಾರಿ ಹೇಳುತ್ತಿದೆ.

ಚಟೋರಿ ಅಮ್ಮ (chatori _ amma) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋ ಇದಾಗಿದೆ. ಕಲಿಕೆಗೆ ಯಾವುದೇ ವಯಸ್ಸಿಲ್ಲ. ಅವಳು ವೀಡಿಯೊ ಕರೆ ಮಾಡುವುದು ಹೇಗೆಂದು ಕಲಿಯುತ್ತಿದ್ದಾಳೆ” ಎಂಬ ಕ್ಲಿಪಿಂಗ್‌ನಲ್ಲಿ ಬರೆಯಲಾಗಿದೆ. ಈ ವಿಡಿಯೋದಲ್ಲಿ ಅಜ್ಜಿಯೊಬ್ಬರು ಮೊಮ್ಮಗಳು ಓಜಸ್ವಿ ಚತುರ್ವೇದಿ ಸಹಾಯದಿಂದ ವಾಟ್ಸಾಪ್‌ನಲ್ಲಿ ವೀಡಿಯೊ ಕರೆ ಮಾಡುವುದು ಹೇಗೆಂದು ಕಲಿಯುತ್ತಿರುವುದನ್ನು ತೋರಿಸಲಾಗಿದೆ. ಅಜ್ಜಿಯೂ ಮೊಮ್ಮಗಳು ನೀಡುವ ಪ್ರತಿ ಸೂಚನೆಯನ್ನು ಎಚ್ಚರಿಕೆಯಿಂದ ಅನುಸರಿಸಿ ಸ್ಕ್ರೀನ್ ಮೇಲೆ ಟ್ಯಾಪ್ ಮಾಡುತ್ತಿರುವುದನ್ನು ಕಾಣಬಹುದು. ಈ ವೇಳೆ ಅಜ್ಜಿಯ ಕೈಗಳು ನಡುಗುತ್ತಿದೆ. ಆದರೆ ಮೊಮ್ಮಗಳು ತನ್ನ ಪ್ರೀತಿಯ ಅಜ್ಜಿಗೆ  ಮಾರ್ಗದರ್ಶನ ನೀಡುತ್ತಾ, ಏನು ಮತ್ತು ಯಾವಾಗ ಒತ್ತಬೇಕೆಂದು ಎಂದು ವಿವರಿಸುವುದನ್ನು ನೋಡಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಅಜ್ಜಿಯ ಮುಂದೆ ಪ್ರತ್ಯಕ್ಷನಾಗಿ ಸರ್ಪ್ರೈಸ್ ನೀಡಿದ ಮೊಮ್ಮಗ

ಈ ವಿಡಿಯೋ ಇದುವರೆಗೆ 1.5 ಮಿಲಿಯನ್‌ಗೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಇಂತಹ ತಾಳ್ಮೆ ಎಲ್ಲರಲ್ಲೂ ಇರಲ್ಲ. ಇಂತಹ ಮೊಮ್ಮಗಳನ್ನು ಪಡೆದ ನೀವೇ ಧನ್ಯ ಎಂದು ಹೇಳಿದ್ದಾರೆ. ಮತ್ತೊಬ್ಬರು, ಶುದ್ಧ ಪ್ರೀತಿ ಇದು ಎಂದಿದ್ದಾರೆ. ಇನ್ನೊಬ್ಬರು, ಅಜ್ಜಿ ಮೊಮ್ಮಗಳ ಬಾಂಧವ್ಯ ಸೊಗಸಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಶ್ಮಿಕಾ ಮಂದಣ್ಣಗೂ ಸಂಜಯ್​​ ದತ್​​ಗೂ ಇದೆ ಸಾಮ್ಯತೆ ಏನದು? – Kannada News | Sanjay Dutt and Rashmika Mandanna has one similarity among them

ರಶ್ಮಿಕಾ ಮಂದಣ್ಣ (Rashmika Mandanna) ಪ್ಯಾನ್ ಇಂಡಿಯಾ ಸ್ಟಾರ್ ನಟಿ, ಒಂದರ ಹಿಂದೊಂದು ಹಿಟ್ ಸಿನಿಮಾಗಳನ್ನು ನೀಡುತ್ತಾ ಸಾಗುತ್ತಿದ್ದಾರೆ. ಇದೀಗ ವಿಜಯ್ ದೇವರಕೊಂಡ ಜೊತೆಗೆ ನಿಶ್ಚಿತಾರ್ಥ ಮಾಡಿಕೊಂಡಿರುವ ರಶ್ಮಿಕಾ, ಶೀಘ್ರವೇ ವಿಜಯ್ ದೇವರಕೊಂಡ ಜೊತೆ ಅದ್ಧೂರಿ ವಿವಾಹ ಸಹ ಆಗಲಿದ್ದಾರೆ. ಇನ್ನೊಂದೆಡೆ ಸಂಜಯ್ ದತ್, ಪ್ಯಾನ್ ಇಂಡಿಯಾ ಸ್ಟಾರ್ ವಿಲನ್ ಎನಿಸಿಕೊಂಡಿದ್ದಾರೆ. ಬಾಲಿವುಡ್​ನ ಸ್ಟಾರ್​​ಗಳಲ್ಲಿ ಒಬ್ಬರಾದ ಸಂಜಯ್ ದತ್ ಬಾಲಿವುಡ್​​ನಲ್ಲಿ ಮಾತ್ರವಲ್ಲ ದಕ್ಷಿಣ ಭಾರತದಲ್ಲೂ ಬೇಡಿಕೆಯ ಸ್ಟೈಲಿಷ್ ವಿಲನ್. ಸಂಜಯ್ ಮತ್ತು ರಶ್ಮಿಕಾ ಮಂದಣ್ಣ ಒಟ್ಟಿಗೆ ನಟಿಸಿದ್ದಿಲ್ಲ. ಆದರೆ ಈ ಇಬ್ಬರಿಗೂ ಒಂದು ಸಾಮ್ಯತೆ ಇದೆ, ಏನದು ಗೊತ್ತೆ?

1000 ಕೋಟಿ ಗಳಿಕೆ ಎನ್ನುವುದು ಭಾರತದ ಸಿನಿಮಾಗಳ ಪಾಲಿಗೆ ಅಲ್ಟಿಮೇಟ್ ಯಶಸ್ಸು. ಯಾವುದೇ ಸಿನಿಮಾ 1000 ಕೋಟಿ ಗಳಿಸಿತೆಂದರೆ ಅದು ದಾಖಲೆ ನಿರ್ಮಿಸಿದಂತೆಯೇ ಸರಿ. ಆದರೆ ಈ 1000 ಕೋಟಿ ಸಿನಿಮಾ ಯಾರ ಖಾತೆಯಲ್ಲಿ ಹೆಚ್ಚಿದೆ ಎಂದರೆ ಸಹಜವಾಗಿ ಪ್ರಭಾಸ್, ಶಾರುಖ್ ಖಾನ್, ಅಲ್ಲು ಅರ್ಜುನ್ ಎಂಬ ಉತ್ತರ ಬರಬಹುದು ಆದರೆ ಅತಿ ಹೆಚ್ಚು ಸಾವಿರ ಕೋಟಿ ಗಳಿಸಿರುವ ಸಿನಿಮಾಗಳಲ್ಲಿ ನಟಿಸಿರುವುದು ರಶ್ಮಿಕಾ ಮಂದಣ್ಣ ಮತ್ತು ಸಂಜಯ್ ದತ್. ಇದೇ ಈ ಇಬ್ಬರ ನಡುವೆ ಇರುವ ಸಾಮ್ಯತೆ.

ರಶ್ಮಿಕಾ ಮಂದಣ್ಣ ಮತ್ತು ಸಂಜಯ್ ದತ್ ಇಬ್ಬರೂ ಸಹ ಸಾವಿರ ಕೋಟಿಗೂ ಹೆಚ್ಚು ಗಳಿಕೆ ಮಾಡಿರುವ ಮೂರು ಸಿನಿಮಾಗಳಲ್ಲಿ ನಟಿಸಿದ್ದಾರೆ. ರಶ್ಮಿಕಾ ಮಂದಣ್ಣ ನಟಿಸಿರುವ ‘ಪುಷ್ಪ 2’ 1000 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ. ರಣ್​​ಬೀರ್ ಕಪೂರ್ ಜೊತೆಗೆ ನಟಿಸಿದ ‘ಅನಿಮಲ್’ ಸಿನಿಮಾ ಸಹ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1000 ಕೋಟಿ ಗಳಿಕೆ ಮಾಡಿದೆ. ಬಳಿಕ ವಿಕ್ಕಿ ಕೌಶಲ್ ಜೊತೆಗೆ ನಟಿಸಿದ ‘ಛಾವಾ’ ಸಿನಿಮಾ ಸಹ ವಿಶ್ವ ಬಾಕ್ಸ್ ಆಫೀಸ್​​ನಲ್ಲಿ 1000 ಕೋಟಿಗೂ ಹೆಚ್ಚಿನ ಮೊತ್ತವನ್ನು ಗಳಿಕೆ ಮಾಡಿದೆ. ಆ ಮೂಲಕ ಮೂರು, 1000 ಕೋಟಿ ಸಿನಿಮಾಗಳು ರಶ್ಮಿಕಾ ಫಿಲ್ಮಾಗ್ರಫಿ ಸೇರಿಕೊಂಡಿವೆ.

ಇದನ್ನೂ ಓದಿ:ಸಂಜಯ್ ದತ್​ಗೆ ಜೈಲಿನಲ್ಲಿ ಕೆಲಸ ಮಾಡಿದ್ದಕ್ಕೆ ಸಿಕ್ಕ ಹಣ ಎಷ್ಟು?

ಇನ್ನು ಸಂಜಯ್ ದತ್ ಅವರ ಮೊದಲ 1000 ಕೋಟಿ ಸಿನಿಮಾ ಕನ್ನಡದ ‘ಕೆಜಿಎಫ್ 2’. ಈ ಸಿನಿಮಾ ವಿಶ್ವಬಾಕ್ಸ್ ಆಫೀಸ್​​ನಲ್ಲಿ 1250 ಕೋಟಿ ಗಳಿಕೆ ಮಾಡಿದೆ. ಬಳಿಕ ಶಾರುಖ್ ಖಾನ್ ನಾಯಕರಾಗಿ ನಟಿಸಿರುವ ‘ಜವಾನ್’ ಸಿನಿಮಾನಲ್ಲೂ ಸಂಜಯ್ ದತ್ ನಟಿಸಿದ್ದು, ಈ ಸಿನಿಮಾ 1100 ಕೋಟಿ ಹಣ ಗಳಿಕೆ ಮಾಡಿತು. ಇದೀಗ ಸಂಜಯ್ ದತ್, ‘ಧುರಂಧರ್’ ಸಿನಿಮಾನಲ್ಲಿ ನಟಿಸಿದ್ದು, ಈ ಸಿನಿಮಾ ಸಹ 1000 ಕೋಟಿ ಕಲೆಕ್ಷನ್ ಗಡಿಯನ್ನು ದಾಟಿದೆ. 1000 ಕೋಟಿ ಗಳಿಸಿದ ಸಿನಿಮಾಗಳಲ್ಲಿ ಹೆಚ್ಚು ನಟಿಸಿದ ಶ್ರೇಯ ಸಂಜಯ್ ದತ್ ಮತ್ತು ರಶ್ಮಿಕಾ ಮಂದಣ್ಣ ಅವರ ಬಳಿ ಇದೆ. ಮುಂದೆ ಇದು ಬದಲಾದರೂ ಆಗಬಹುದು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Exit mobile version