ಗಾಜಿಯಾಬಾದ್, ಏಪ್ರಿಲ್ 13: ಗಾಜಿಯಾಬಾದ್‌ನ ಶಾಲಿಮಾರ್ ಗಾರ್ಡನ್‌ನಲ್ಲಿ ನಿಲ್ಲಿಸಿದ್ದ ಕಾರಿನ ಕೆಳಗೆ 4 ವರ್ಷದ ಬಾಲಕಿಯ ಶವ ಪತ್ತೆಯಾಗಿದೆ. ಇದಕ್ಕೂ ಮೊದಲು ಆಕೆಯ ಮೇಲೆ ಅತ್ಯಾಚಾರ ನಡೆಸಲಾಗಿದೆ. ಈ ಅಪರಾಧದ ತನಿಖೆ ನಡೆಸುತ್ತಿದ್ದ ಪೊಲೀಸರು ಆಕೆಯ ಚಿಕ್ಕಪ್ಪನನ್ನು ವಶಕ್ಕೆ ಪಡೆದಿದ್ದಾರೆ. ಅವರೇ ಈ ಘಟನೆಯ ಹಿಂದೆ ಇದ್ದಾರೆ ಎಂದು ಹೇಳಲಾಗಿದೆ. ತಾನೇ ತನ್ನ ಅಣ್ಣನ ಮಗುವನ್ನು ಕೊಂದು ಅಮಾಯಕರಂತೆ ವರ್ತಿಸುತ್ತಿದ್ದಾರೆ ಎಂಬ ಅನುಮಾನ ಪೊಲೀಸರಿಗೆ ಬಂದ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಏಪ್ರಿಲ್ 11ರಂದು ರಾತ್ರಿ 8 ಗಂಟೆ ಸುಮಾರಿಗೆ 80 ಅಡಿ ರಸ್ತೆಯಲ್ಲಿ ಕಾರಿನ ಕೆಳಗೆ ಮಗುವಿನ ಮೃತದೇಹ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಶವವನ್ನು ವಶಕ್ಕೆ ಪಡೆದ ನಂತರ ಈ ಘಟನೆಯ ತನಿಖೆ ಆರಂಭಿಸಲಾಯಿತು. ತನಿಖೆಯ ಸಮಯದಲ್ಲಿ ಈ ಘಟನೆಯ ಹಿಂದೆ ಮಗುವಿನ ಚಿಕ್ಕಪ್ಪ ಜಮೀಲ್ ಅಲಿಯಾಸ್ ಛೋಟು ಅವರ ಕೈವಾಡವಿದೆ ಎಂದು ತಿಳಿದುಬಂದಿದೆ.
ಆರೋಪಿಯು ಒಂಟಿಯಾಗಿದ್ದ ಮಗುವನ್ನು ತನ್ನ ಕಾಮತೃಷೆಗೆ ಬಳಸಿಕೊಂಡಿದ್ದಾರೆ ಎಂದು ಆರೋಪಿಸಲಾಗಿದೆ. ಮಗು ಮನೆಯಲ್ಲಿ ಒಂಟಿಯಾಗಿ ಇದ್ದುದರಿಂದ ಆರೋಪಿಯು ಪರಿಸ್ಥಿತಿಯ ಲಾಭ ಪಡೆದು ಅವಳನ್ನು ತನ್ನ ರೂಂಗೆ ಕರೆದುಕೊಂಡು ಹೋಗಿ ಅತ್ಯಾಚಾರ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಇದಾದ ಸ್ವಲ್ಪ ಸಮಯದ ಬಳಿಕ ಆ ಹುಡುಗಿಯ ಶವವು ಕಾರಿನ ಅಡಿಯಲ್ಲಿ ಪತ್ತೆಯಾಗಿದೆ. ಬಾಲಕಿಯ ಮರಣೋತ್ತರ ಪರೀಕ್ಷೆಯಲ್ಲಿ ನಂತರ ಆಕೆಯ ಕೊಲೆಗೂ ಮೊದಲು ಅತ್ಯಾಚಾರ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆಕೆಯ ಕುತ್ತಿಗೆ ಮತ್ತು ಗುಪ್ತಾಂಗಗಳಲ್ಲಿ ಗಾಯದ ಗುರುತುಗಳಿವೆ. ತಪ್ಪಿಸಿಕೊಂಡಿರುವ ಆರೋಪಿಯನ್ನು ಹಿಡಿಯಲು ಪೊಲೀಸರು ಹಲವಾರು ತಂಡಗಳನ್ನು ರಚಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭಾನುವಾರ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ ಮುಂಬೈ ಇಂಡಿಯನ್ಸ್ ಹೀನಾಯ ಸೋಲು ದಾಖಲಿಸಿತು. ಈ ಸೋಲಿನೊಂದಿಗೆ ಈ ಆವೃತ್ತಿಯಲ್ಲಿ ಸತತ ಮೂರನೇ ಪಂದ್ಯ ಸೋತ ಮುಜುಗರಕ್ಕೀಡಾಗಿದೆ. ಇದೆಲ್ಲದರ ನಡುವೆ ಮುಂಬೈ ಇಂಡಿಯನ್ಸ್ ತಂಡದ ನಾಯಕ ಹಾರ್ದಿಕ್ ಪಾಂಡ್ಯಗೆ ಐಸಿಸಿ ದಂಡದ ಬರೆ ಎಳೆದಿದೆ.
ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ನಿಗದಿತ ಸಮಯದಲ್ಲಿ ಓವರ್ಗಳನ್ನು ಪೂರ್ಣಗೊಳಿಸಲು ವಿಫಲವಾದ ಕಾರಣ ಹಾರ್ದಿಕ್ ಪಾಂಡ್ಯಗೆ ದಂಡದ ರೂಪದಲ್ಲಿ ಶಿಕ್ಷೆ ವಿಧಿಸಲಾಗಿದೆ. ಐಪಿಎಲ್ ಶಿಸ್ತು ಸಂಹಿತೆಯ ಪ್ರಕಾರ, ನಿಗದಿತ ಸಮಯದಲ್ಲಿ ಓವರ್ಗಳನ್ನು ಪೂರ್ಣಗೊಳಿಸದಿದ್ದರೆ ತಂಡದ ನಾಯಕನಿಗೆ ದಂಡದ ರೂಪದಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಅದರಂತೆ ಹಾರ್ದಿಕ್ ಪಾಂಡ್ಯ ಅವರಿಗೆ 12 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ.
ಕ್ರಿಕೆಟ್ ನಿಯಮಗಳ ಪ್ರಕಾರ, ಸೀಮಿತ ಓವರ್ಗಳ ಪಂದ್ಯಗಳಲ್ಲಿ 20 ಓವರ್ಗಳನ್ನು ನಿರ್ದಿಷ್ಟ ಸಮಯದಲ್ಲಿ ಪೂರ್ಣಗೊಳಿಸಬೇಕು. ಆದರೆ ಈ ಪಂದ್ಯದಲ್ಲಿ ಪಾಂಡ್ಯ ಪಡೆ ನಿಗದಿತ ಸಮಯದಲ್ಲಿ ಓವರ್ಗಳನ್ನು ಪೂರ್ಣಗೊಳಿಸಿರಲಿಲ್ಲ. ಅದಕ್ಕಾಗಿಯೇ ಹಾರ್ದಿಕ್ ಅವರ ಮೊದಲ ತಪ್ಪಿಗೆ ದಂಡ ವಿಧಿಸಲಾಗಿದೆ. ಈ ಲೀಗ್ನಲ್ಲಿ ಹಾರ್ದಿಕ್ ಮತ್ತೆ ಇದೇ ರೀತಿಯ ತಪ್ಪುಗಳನ್ನು ಪುನರಾವರ್ತಿಸಿದರೆ ಪಂದ್ಯದಿಂದ ನಿಷೇಧ ಹೇರಬಹುದು.
ಇನ್ನು ಪಂದ್ಯದ ವಿಚಾರಕ್ಕೆ ಬರುವುದಾದರೆ.. ಹಾರ್ದಿಕ್ ಅವರ ಕೆಲವು ನಿರ್ಧಾರಗಳು ಕೂಡ ಟೀಕೆಗೆ ಗುರಿಯಾಗಿವೆ. ಹತ್ತು ಓವರ್ಗಳ ನಂತರ ಅನುಭವಿ ಬೌಲರ್ ಶಾರ್ದೂಲ್ ಠಾಕೂರ್ ಅವರನ್ನು ಬೌಲಿಂಗ್ಗೆ ಕರೆತಂದಿದ್ದು ಹಾರ್ದಿಕ್ ಅವರ ಸರಿಯಾದ ನಿರ್ಧಾರವಾಗಿರಲಿಲ್ಲ ಎಂಬುದು ಪರಿಣಿತರ ವಾದವಾಗಿದೆ.
ಶಾರ್ದೂಲ್ ತಮ್ಮ ಮೊದಲ ಓವರ್ನಲ್ಲೇ ವಿಕೆಟ್ ಪಡೆಯುವ ಮೂಲಕ ತಮ್ಮ ಸಾಮರ್ಥ್ಯವನ್ನು ತೋರಿಸಿದರೂ, ತಡವಾಗಿ ಬೌಲಿಂಗ್ ಮಾಡಿಸಿದ್ದರಿಂದ ಎದುರಾಳಿ ತಂಡಕ್ಕೆ ದೊಡ್ಡ ಸ್ಕೋರ್ ಗಳಿಸಲು ಅವಕಾಶ ಸಿಕ್ಕಿತು. ಹೀಗಾಗಿ ಹಾರ್ದಿಕ್ ಅವರ ನಾಯಕತ್ವದ ಬಗ್ಗೆ ಅಭಿಮಾನಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುತ್ತಿದ್ದಾರೆ.
ಭಾರತೀಯ ಚಿತ್ರರಂಗದ ಲೆಜೆಂಡರಿ ಗಾಯಕಿ ಆಶಾ ಭೋಸ್ಲೆ (Asha Bhosle) ಅವರ ಅಗಲಿಕೆಯಿಂದ ಅಭಿಮಾನಿಗಳಿಗೆ, ಆಪ್ತರಿಗೆ, ಕುಟುಂಬದವರಿಗೆ ತೀವ್ರ ನೋವಾಗಿದೆ. ಏಪ್ರಿಲ್ 12ರಂದು ನಿಧನರಾದ ಅವರ ಅಂತಿಮ ಸಂಸ್ಕಾರ ಇಂದು (ಏ.13) ಮುಂಬೈನ ಶಿವಾಜಿ ಪಾರ್ಕ್‌ನಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು. ಈ ಸಂದರ್ಭದಲ್ಲಿ ಬಾಲಿವುಡ್‌ನ ಹಲವು ಗಣ್ಯರು ಭಾಗವಹಿಸಿ ಅಂತಿಮ ನಮನ ಸಲ್ಲಿಸಿದರು. ಆದರೆ, ಅಲ್ಲಿ ನಡೆದ ಒಂದು ಘಟನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಖ್ಯಾತ ನಟ ಜಾಕಿ ಶ್ರಾಫ್ ಅವರು ಪಾಪರಾಜಿಗಳ (Paparazzi) ವರ್ತನೆಗೆ ಬೇಸರಗೊಂಡು ಗರಂ ಆದ ವಿಡಿಯೋ ಈಗ ವೈರಲ್ ಆಗಿದೆ.
ಅಂತಿಮ ಸಂಸ್ಕಾರದ ಸಂದರ್ಭದಲ್ಲಿ ಸಚಿನ್ ತೆಂಡೂಲ್ಕರ್, ಟಬು, ರಣವೀರ್ ಸಿಂಗ್, ಆಮಿರ್ ಖಾನ್, ವಿಕ್ಕಿ ಕೌಶಲ್ ಸೇರಿದಂತೆ ಹಲವು ಗಣ್ಯರು ಭೇಟಿ ನೀಡಿದ್ದರು. ಈ ವೇಳೆ ಅಲ್ಲಿಗೆ ಆಗಮಿಸಿದ ಜಾಕಿ ಶ್ರಾಫ್ ಅವರನ್ನು ಕಂಡು ಪಾಪರಾಜಿಗಳು ಮುಗಿಬಿದ್ದರು. ಆಶಾ ಭೋಸ್ಲೆ ಅವರ ನಿಧನದ ಬಗ್ಗೆ ‘ನಿಮಗೆ ಹೇಗನ್ನಿಸುತ್ತಿದೆ’ ಎಂಬ ಸಾಮಾನ್ಯ ಹಾಗೂ ವಿವೇಚನಾರಹಿತ ಪ್ರಶ್ನೆಯನ್ನು ಅವರು ನಟನಿಗೆ ಕೇಳಿದರು.
ಪಾಪರಾಜಿಗಳ ಈ ಪ್ರಶ್ನೆಯಿಂದ ತೀವ್ರ ಅಸಮಾಧಾನಗೊಂಡ ಜಾಕಿ ಶ್ರಾಫ್, ಅಲ್ಲೇ ನಿಂತು ಅವರಿಗೆ ಪಾಠ ಮಾಡಿದರು. ಪಾಪರಾಜಿಗಳಿಗೆ ಅವರು ಮರುಪ್ರಶ್ನೆ ಕೇಳಿದರು. ‘ಯಾರದ್ದಾದರೂ ತಾಯಿ ತೀರಿಕೊಂಡಾಗ ಹೇಗನ್ನಿಸುತ್ತದೆ? ನಮ್ಮ ತಾಯಿ ನಿಧನರಾಗಿದ್ದಾರೆ. ಯಾರಾದರೂ ತಮ್ಮ ತಾಯಿಯನ್ನು ಕಳೆದುಕೊಂಡಾಗ ಹೇಗನ್ನಿಸುತ್ತದೆ ಎಂದು ಕೇಳುವುದರಲ್ಲಿ ಅರ್ಥವಿದೆಯೇ? ನೀವು ಈ ಪರಿಸ್ಥಿತಿಯಲ್ಲಿ ಇದ್ದಿದ್ದರೆ ಹೇಗನಿಸುತ್ತದೆ’ ಎಂದು ಅವರು ಕೇಳಿದರು.
ಜಾಕಿ ಶ್ರಾಫ್ ಅವರ ಪ್ರಶ್ನೆಗೆ ಉತ್ತರಿಸಿದ ಪಾಪರಾಜಿಗಳು ‘ಬಹಳ ಬೇಸರವಾಗುತ್ತದೆ’ ಎಂದು ಉತ್ತರಿಸಿದರು. ತಕ್ಷಣ ಪ್ರತಿಕ್ರಿಯಿಸಿದ ಜಾಕಿ, ‘ಅಷ್ಟೇ, ಅಲ್ಲಿಗೆ ವಿಷಯ ಮುಗಿಯಿತು. ಇಂತಹ ಸಮಯದಲ್ಲಿ ಈ ರೀತಿಯ ಮಾತುಗಳು ಸರಿಯಲ್ಲ. ಬಿಟ್ಟುಬಿಡಿ ಸಹೋದರರೇ, ಮನೆಗೆ ಹೋಗಿ’ ಎಂದು ಹೇಳಿ ಅಲ್ಲಿಂದ ಹೊರನಡೆದರು. ಜಾಕಿ ಶ್ರಾಫ್ ಅವರು ಕ್ಲಾಸ್ ತೆಗೆದುಕೊಂಡ ಈ ವಿಡಿಯೋ ವೈರಲ್ ಆಗಿದೆ.
ಅಂತಿಮ ಸಂಸ್ಕಾರದಂತಹ ಗಂಭೀರ ಮತ್ತು ದುಃಖದ ಸಂದರ್ಭಗಳಲ್ಲಿ ಸೆಲೆಬ್ರಿಟಿಗಳ ಬಳಿ ಇಂತಹ ಪ್ರಶ್ನೆಗಳನ್ನು ಕೇಳುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಜಾಕಿ ಶ್ರಾಫ್ ಅವರ ಸಮಯೋಚಿತ ಪ್ರತಿಕ್ರಿಯೆ ಮತ್ತು ಆಶಾ ಭೋಸ್ಲೆ ಅವರ ಮೇಲೆ ಅವರಿಗಿದ್ದ ಗೌರವವನ್ನು ಅಭಿಮಾನಿಗಳು ಶ್ಲಾಘಿಸುತ್ತಿದ್ದಾರೆ. ಆಶಾ ಭೋಸ್ಲೆ ಅವರು ಭಾರತೀಯ ಸಂಗೀತಕ್ಕೆ ನೀಡಿದ ಕೊಡುಗೆ ಅಪಾರ. ಅವರ ಅಗಲಿಕೆಗೆ ಚಿತ್ರರಂಗದ ಪ್ರತಿಯೊಬ್ಬರೂ ಕಂಬನಿ ಮಿಡಿಯುತ್ತಿದ್ದು, ಜಾಕಿ ಶ್ರಾಫ್ ಅವರ ಈ ಆಕ್ರೋಶವು ಪರೋಕ್ಷವಾಗಿ ಇಡೀ ಚಿತ್ರರಂಗದ ನೋವನ್ನು ಪ್ರತಿಬಿಂಬಿಸಿದೆ.
ಇಸ್ಲಾಮಾಬಾದ್, ಏಪ್ರಿಲ್ 13: ಪಾಕಿಸ್ತಾನದ ಮಾಧ್ಯಮ ನಿಯಂತ್ರಣ ಪ್ರಾಧಿಕಾರವು ನೋಟಿಸ್ ಜಾರಿ ಮಾಡಿ, ಪಾಕಿಸ್ತಾನದ ಸುದ್ದಿ ವಾಹಿನಿಗಳು ಭಾರತದ ಗಾಯಕಿ ಆಶಾ ಭೋಸ್ಲೆ ಅವರ ನಿಧನದ ವರದಿ ಮಾಡುವಂತಿಲ್ಲ ಎಂದು ನಿರ್ಬಂಧ ವಿಧಿಸಿದೆ. ಭಾರತದ ಹಿರಿಯ ಗಾಯಕಿ ಆಶಾ ಭೋಸ್ಲೆ (Asha Bhosle) ಭಾನುವಾರ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಇದು ಭಾರತದಲ್ಲಿ ಮಾತ್ರವಲ್ಲದೆ ಪ್ರಪಂಚದಾದ್ಯಂತದ ಅವರ ಅಭಿಮಾನಿಗಳನ್ನು ಶೋಕದಲ್ಲಿ ಮುಳುಗಿಸಿದೆ.
ಆದರೆ, ಪಾಕಿಸ್ತಾನದ ಎಲೆಕ್ಟ್ರಾನಿಕ್ ಮಾಧ್ಯಮ ನಿಯಂತ್ರಣ ಪ್ರಾಧಿಕಾರ (PEMRA) ಆಶಾ ಭೋಸ್ಲೆ ಅವರ ಸಾವಿನ ವರದಿಗಾಗಿ ಪಾಕಿಸ್ತಾನದ ಸುದ್ದಿ ಚಾನೆಲ್‌ಗಳಿಗೆ ನೋಟಿಸ್ ಜಾರಿ ಮಾಡಿದೆ. ಆಶಾ ಭೋಸ್ಲೆ ಏಪ್ರಿಲ್ 12ರಂದು ಮುಂಬೈನಲ್ಲಿ ತಮ್ಮ 92ನೇ ವಯಸ್ಸಿನಲ್ಲಿ ನಿಧನರಾದರು. ಡಾನ್ ಎಂಬ ಪಾಕಿಸ್ತಾನದ ಮಾಧ್ಯಮ ಇಂದು ಗಾಯಕಿ ಆಶಾ ಭೋಸ್ಲೆ ಅವರ ಕುರಿತಾದ ಲೇಖನದಲ್ಲಿ ‘ಅವರ ಸಂಗೀತವು ಗಡಿಗಳನ್ನು ಮೀರಿ, ಅನೇಕ ಪಾಕಿಸ್ತಾನಿಗಳ ಹೃದಯಗಳನ್ನು ಮುಟ್ಟಿತು’ ಎಂದು ಹೇಳಿದೆ.
PEMRA issued a show cause notice to Geo News today about an airing report about the death of an Indian singer Asha Bhosle pic.twitter.com/KODNSH2Xb7
ಪಾಕಿಸ್ತಾನದೊಂದಿಗಿನ ಅವರ ಸಂಪರ್ಕ ಮತ್ತು ಪಾಕಿಸ್ತಾನದಲ್ಲಿ ಅವರ ಹೆಸರಿನ ಬಗ್ಗೆ ಇರುವ ಗೊಂದಲದ ಬಗ್ಗೆಯೂ ಆ ಸುದ್ದಿಯಲ್ಲಿ ವಿವರಿಸಲಾಗಿತ್ತು. ಜಿಯೋ ನ್ಯೂಸ್ ಕೂಡ ಅವರಿಗೆ ಸಂಬಂಧಿಸಿದ ವಿಷಯವನ್ನು ಪ್ರಸಾರ ಮಾಡಿತ್ತು. ಈಗ ಆ ಮಾಧ್ಯಮಗಳಿಗೆ ನೋಟಿಸ್ ನೀಡಲಾಗಿದೆ. ಪಾಕಿಸ್ತಾನದ ಹೆಚ್ಚಿನ ಪತ್ರಕರ್ತರು ಮತ್ತು ಈ ನೋಟಿಸ್ ಅನ್ನು ಖಂಡಿಸಿದ್ದಾರೆ.
PEMRA has issued a show-cause notice to Geo News for airing content related to the legendary subcontinent singer Asha Bhosle.
It has always been customary to revisit and celebrate the work of iconic artists when reporting on them. In fact, for an artist of Asha Bhosle’s stature,… pic.twitter.com/AuhFPyGZCL
“ಆಶಾ ಭೋಸ್ಲೆ ದೇಶದ ಗಡಿಯನ್ನು ಮೀರಿದ ಗಾಯಕಿ. ಆಶಾ ಭೋಸ್ಲೆ ಸ್ವತಃ ಪಾಕಿಸ್ತಾನದ ಪ್ರಸಿದ್ಧ ಗಾಯಕಿ ನೂರ್ ಜಹಾನ್ ಅವರನ್ನು ಮೆಚ್ಚಿಕೊಂಡಿದ್ದರು. ಅವರನ್ನು ಪ್ರೀತಿಯಿಂದ ‘ಅಕ್ಕ’ ಎಂದು ಕರೆಯುತ್ತಿರು. ಅವರು ನುಸ್ರತ್ ಫತೇಹ್ ಅಲಿ ಖಾನ್ ಅವರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದರು. ನಾಸಿರ್ ಕಾಜ್ಮಿಯಂತಹ ಶ್ರೇಷ್ಠ ಉರ್ದು ಕವಿಗಳ ಕಾವ್ಯಕ್ಕೆ ಅವರು ಜೀವ ತುಂಬಿದ್ದರು” ಎಂದು ಪತ್ರಕರ್ತ ಅಬ್ಬಾಸ್ ಹೇಳಿದ್ದಾರೆ.
ಜಿಯೋ ನ್ಯೂಸ್‌ನ ಹಿರಿಯ ಪತ್ರಕರ್ತ ಅಜಾಜ್ ಸೈಯದ್ ಕೂಡ ಪಾಕಿಸ್ತಾನ ಸರ್ಕಾರವನ್ನು ಟೀಕಿಸಿದ್ದು, “ಪಾಕಿಸ್ತಾನದ ಮುಖ್ಯವಾಹಿನಿಯ ಮಾಧ್ಯಮಗಳ ಮೇಲೆ ಇಂತಹ ನಿಯಂತ್ರಣವನ್ನು ಬಹುಶಃ ಹಿಂದೆಂದೂ ಕಂಡಿಲ್ಲ. ಆಶಾ ಭೋಸ್ಲೆ ಅವರ ಸಾವಿನ ಕುರಿತು ತಮ್ಮ ಕೆಲಸವನ್ನು ಪ್ರಸಾರ ಮಾಡಿದ್ದಕ್ಕೂ ಶೋ-ಕಾಸ್ ನೋಟಿಸ್‌ಗಳನ್ನು ನೀಡಲಾಯಿತು. ಮಾಧ್ಯಮಗಳು ಯಾವಾಗಲೂ ಜವಾಬ್ದಾರಿಯುತವಾಗಿ ಕೆಲಸ ಮಾಡಿವೆ. ಆದರೆ ಮಾಧ್ಯಮವನ್ನು ನಿಯಂತ್ರಿಸುವವರು ತಮ್ಮನ್ನು ದೇಶಭಕ್ತರೆಂದು ಬಿಂಬಿಸಿಕೊಳ್ಳುತ್ತಾ ಮಾಧ್ಯಮವನ್ನು ರಾಜ್ಯ ವಿರೋಧಿ ಎಂದು ಬ್ರಾಂಡ್ ಮಾಡಿದ್ದಾರೆ” ಎಂದು ಅವರು ಎಕ್ಸ್ನಲ್ಲಿ ಬರೆದಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಏಪ್ರಿಲ್ 13): ರಾಜ್ಯ ಸರ್ಕಾರವು 2026-27ನೇ ಸಾಲಿನ ಸರ್ಕಾರಿ ನೌಕರರ ವರ್ಗಾವಣೆಗೆ (employees transfer) ಸಂಬಂಧಿಸಿದಂತೆ ಹೊಸ ಮಾರ್ಗಸೂಚಿಗಳನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ. ಆಡಳಿತಾತ್ಮಕ ದಕ್ಷತೆ ಮತ್ತು ನೌಕರರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿಯಮಾವಳಿಗಳನ್ನು ರೂಪಿಸಲಾಗಿದೆ. ಈ ಬಾರಿಯ ವರ್ಗಾವಣೆ ಪ್ರಕ್ರಿಯೆಯಲ್ಲಿ ಸಂಪೂರ್ಣ ಪಾರದರ್ಶಕತೆ ಕಾಯ್ದುಕೊಳ್ಳಲು ಸರ್ಕಾರ ನಿರ್ಧರಿಸಿದ್ದು ಅರ್ಜಿ ಸಲ್ಲಿಸುವ ಪ್ರತಿಯೊಬ್ಬ ನೌಕರರು ತಮ್ಮ ಸೇವಾ ದಾಖಲೆಗಳನ್ನು (Service Records) ನಿಖರವಾಗಿ ಒದಗಿಸುವುದು ಕಡ್ಡಾಯವಾಗಿದೆ. ಕೇವಲ ವೈಯಕ್ತಿಕ ಬೇಡಿಕೆಗಳಲ್ಲದೆ, ಇಲಾಖೆಯ ಆಡಳಿತಾತ್ಮಕ ಅಗತ್ಯತೆಗಳನ್ನು (Administrative Exigencies) ಪ್ರಮುಖ ಮಾನದಂಡವಾಗಿ ಪರಿಗಣಿಸಿ ವರ್ಗಾವಣೆ ಆದೇಶ ಹೊರಡಿಸಲಾಗುತ್ತದೆ.
ಏಪ್ರಿಲ್ 13ರಿಂದ ಮೇ 31ರ ವರಗೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದ್ದು, ಈ ದಿನಾಂಕದೊಳಗೆ ಆಸಕ್ತ ಮತ್ತು ಅರ್ಹ ನೌಕರರು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನು ವಿಶೇಷಚೇತನ ನೌಕರರಿಗೆ ವಿನಾಯಿತಿ ಸೇರಿದಂತೆ ಹಲವು ನಿಯಮಗಳನ್ನು ವಿಧಿಸಲಾಗಿದೆ.
ಕೆಲವು ವಿಶೇಷ ಪ್ರಕರಣಗಳಲ್ಲಿ ಮಾನವೀಯ ನೆಲೆಯ ಮೇಲೆ ಆದ್ಯತೆ ನೀಡಲು ಮಾರ್ಗಸೂಚಿಯಲ್ಲಿ ಅವಕಾಶ ಕಲ್ಪಿಸಲಾಗಿದ್ದು, ಅವು ಈ ಕೆಳಗಿನಂತಿವೆ ನೋಡಿ.
ಆರೋಗ್ಯ ಸಮಸ್ಯೆ: ಗಂಭೀರ ಕಾಯಿಲೆಗಳಿಂದ ಬಳಲುತ್ತಿರುವ ನೌಕರರಿಗೆ ವಿಶೇಷ ಆದ್ಯತೆ.
ಮಹಿಳಾ ನೌಕರರು:ಗರ್ಭಿಣಿ ಮಹಿಳಾ ನೌಕರರ ವರ್ಗಾವಣೆ ವಿನಂತಿಗಳನ್ನು ಆದ್ಯತೆಯ ಮೇಲೆ ಪರಿಗಣಿಸಲಾಗುವುದು.
ಕುಟುಂಬದ ತುರ್ತು:ಕುಟುಂಬದ ಅನಿವಾರ್ಯ ಪರಿಸ್ಥಿತಿ ಅಥವಾ ಮಕ್ಕಳ ಶಿಕ್ಷಣದಂತಹ ಕಾರಣಗಳಿಗೆ ನಿಯಮಾನುಸಾರ ವಿನಾಯಿತಿ ನೀಡಲಾಗುತ್ತದೆ.
ಭತ್ಯೆ ಮತ್ತು ಸೌಲಭ್ಯಗಳು: ವರ್ಗಾವಣೆಗೊಂಡ ನೌಕರರಿಗೆ ಅವರ ಸೇವಾ ಅವಧಿ ಮತ್ತು ಪ್ರಸ್ತುತ ನಿರ್ವಹಿಸುತ್ತಿರುವ ಹುದ್ದೆಯ ಶ್ರೇಣಿಗೆ ಅನುಗುಣವಾಗಿ ನಿಗದಿಪಡಿಸಿದ ವರ್ಗಾವಣೆ ಭತ್ಯೆ (Transfer Allowance) ಹಾಗೂ ಇತರ ಸರ್ಕಾರಿ ಸೌಲಭ್ಯಗಳು ಲಭ್ಯವಿರಲಿವೆ.
ಸೂಚನೆ: ಅರ್ಹ ನೌಕರರು ನಿಗದಿತ ಕಾಲಮಿತಿಯೊಳಗೆ ಅಗತ್ಯ ದಾಖಲೆಗಳೊಂದಿಗೆ ಅರ್ಜಿಯನ್ನು ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ಇಲಾಖೆಯ ಅಧಿಕೃತ ಜಾಲತಾಣ ಅಥವಾ ಕಚೇರಿಯನ್ನು ಸಂಪರ್ಕಿಸಲು ಕೋರಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇಂದಿನ ವೇಗದ ಜೀವನದಲ್ಲಿ, ಒತ್ತಡ ನಿರಂತರವಾಗಿ ಹೆಚ್ಚುತ್ತಿದ್ದು, ಇಂತಹ ಸಂದರ್ಭದಲ್ಲಿ ಖುಷಿಯಿಂದ ಜೀವನ ನಡೆಸುವುದು ಹಲವರಿಗೆ ಸವಾಲಿನ ಸಂಗತಿಯಾಗಿದೆ. ಈ ನಿರಂತರ ಒತ್ತಡ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಹಾಳು ಮಾಡುತ್ತದೆ. ಹಾಗಾಗಿ ಜೀವನದಲ್ಲಿ ಖುಷಿಯಾಗಿರುವುದು (happy) ತುಂಬಾನೇ ಮುಖ್ಯ. ಹೌದು ಸಂತೋಷದಿಂದ ಇದ್ದರೆ, ಅದು ನಿಮ್ಮ ದೇಹದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಿದ್ದರೆ ಜೀವನದಲ್ಲಿ ಸಂತೋಷವಾಗಿರಲು ಏನು ಮಾಡಬೇಕು ಎಂಬುದನ್ನು ನೋಡೋಣ ಬನ್ನಿ.
ಜೀವನದಲ್ಲಿ ಸಂತೋಷವಾಗಿರಲು ಏನು ಮಾಡಬೇಕು?
ಸಕಾರಾತ್ಮಕವಾಗಿ ಯೋಚಿಸಿ:
ಈ ಸಕಾರಾತ್ಮಕ ಚಿಂತನೆಯು ನಿಮಗೆ ಸಂತೋಷ ಮತ್ತು ತೃಪ್ತಿಯನ್ನು ನೀಡುತ್ತದೆ. ನೀವು ಸಕಾರಾತ್ಮಕ ಆಲೋಚನೆಗಳನ್ನು ಬೆಳೆಸಿಕೊಂಡಾಗ ನಿಮ್ಮ ಮನಸ್ಸು ಅದೇ ರೀತಿಯಲ್ಲಿ ಯೋಚಿಸಲು ಪ್ರಾರಂಭಿಸುತ್ತದೆ. ಇದು ನಿಮ್ಮ ಇಡೀ ದಿನವನ್ನು ಉತ್ತಮಗೊಳಿಸುತ್ತದೆ ಮತ್ತು ನೀವು ಮಾಡುವ ಎಲ್ಲಾ ಕೆಲಸದಲ್ಲೂ ಸಂತೋಷವನ್ನು ನೀಡುತ್ತದೆ. ಹಾಗಾಗಿ ನಕಾರಾತ್ಮಕ ಆಲೋಚನೆಗಳನ್ನು ಬಿಟ್ಟು ಯಾವಾಗಲೂ ಸಕಾರಾತ್ಮಕವಾಗಿ ಯೋಚಿಸುವುದನ್ನು ಕಲಿಯಿರಿ. ಇದರಿಂದ ಖಂಡಿತವಾಗಿಯೂ ಯಾವಾಗಲೂ ಸಂತೋಷದಿಂದಿರುತ್ತೀರಿ.
ಕೃತಜ್ಞತೆಯನ್ನು ವ್ಯಕ್ತಪಡಿಸಿ: ಪ್ರತಿದಿನ ನಿಮ್ಮಲ್ಲಿರುವ ಎಲ್ಲದಕ್ಕೂ ಧನ್ಯವಾದ ಹೇಳಿ. ಒಳ್ಳೆಯ ಊಟ, ಉತ್ತಮ ಸ್ನೇಹಿತರ ಸಹವಾಸ ಅಥವಾ ನಿಮ್ಮಲ್ಲಿರು ಸವಲತ್ತು ಈ ಎಲ್ಲಾ ಸಣ್ಣ ವಿಷಯಗಳಿಗೂ ಸಹ ಧನ್ಯವಾದ ಹೇಳಿ. ಈ ಅಭ್ಯಾಸವು ನಾವು ಹೊಂದಿರುವ ವಸ್ತುಗಳ ಮೌಲ್ಯವನ್ನು ನಮಗೆ ಕಲಿಸುತ್ತದೆ ಅಲ್ಲದೆ ಇದು ನಮ್ಮನ್ನು ಹೆಚ್ಚು ಸಂತೋಷದಿಂದ ಇರುವಂತೆ ಮಾಡುತ್ತದೆ.
ನಿಮ್ಮನ್ನು ನೀವು ಪ್ರೀತಿಸಿ: ಸಂತೋಷದಿಂದ ಜೀವನ ನಡೆಸಲು ನಿಮಗಾಗಿ ಸ್ವಲ್ಪ ಸಮಯ ತೆಗೆದುಕೊಳ್ಳುವುದು ಮತ್ತು ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಮುಖ್ಯ. ಪ್ರತಿದಿನ ಸ್ವಲ್ಪ ಸಮಯ ನೀವು ಆನಂದಿಸುವ ಕೆಲಸವನ್ನು ಮಾಡಿ, ಉದಾಹರಣೆಗೆ ಪುಸ್ತಕ ಓದುವುದು, ಸಂಗೀತ ಕೇಳುವುದು ಅಥವಾ ನಡೆಯಲು ಹೋಗುವುದು. ಇದು ನಿಮ್ಮನ್ನು ಸಂತೋಷವಾಗಿರಿಸುತ್ತದೆ ಮತ್ತು ನಿಮ್ಮ ಶಕ್ತಿಯನ್ನು ಹೆಚ್ಚಿಸುತ್ತದೆ.
ಸಂಬಂಧಗಳಿಗೆ ಬೆಲೆ ಕೊಡಿ: ನಿಮ್ಮ ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯುವುದು ಅತ್ಯಗತ್ಯ. ಈ ಜನರು ಜೀವನವನ್ನು ವಿಶೇಷವಾಗಿಸುತ್ತಾರೆ ಮತ್ತು ನಮಗೆ ಸಂತೋಷವನ್ನು ತರುತ್ತಾರೆ. ನಾವು ಅವರೊಂದಿಗೆ ಇರುವಾಗ, ನಾವು ತುಂಬಾನೇ ಸಂತೋಷದಿಂದ ಇರುತ್ತೇವೆ. ಆದ್ದರಿಂದ ಆದಷ್ಟು ಕುಟುಂಬ ಮತ್ತು ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ಒಳ್ಳೆಯ ಸಂಬಂಧಗಳು ಸಂತೋಷ, ಸಕಾರಾತ್ಮಕತೆ ಇವೆರಡನ್ನೂ ದ್ವಿಗುಣಗೊಳಿಸುತ್ತವೆ. ಆದ್ದರಿಂದ, ನಿಮಗಾಗಿ ಸಮಯ ತೆಗೆದುಕೊಳ್ಳಿ ಮತ್ತು ನಿಮ್ಮ ಹತ್ತಿರವಿರುವವರೊಂದಿಗೆ ಸುಂದರವಾದ ಕ್ಷಣಗಳನ್ನು ಕಳೆಯಿರಿ.
ಒಳ್ಳೆಯ ಸಹವಾಸದಲ್ಲಿರಿ: ನೀವು ಸಮಯ ಕಳೆಯುವ ಜನರು ನಿಮ್ಮ ಆಲೋಚನೆಯ ಮೇಲೆ ಆಳವಾದ ಪ್ರಭಾವ ಬೀರುತ್ತಾರೆ. ಆದ್ದರಿಂದ, ಯಾವಾಗಲೂ ನಿಮ್ಮನ್ನು ಮುಂದುವರಿಯಲು ಪ್ರೇರೇಪಿಸುವ ಮತ್ತು ಸಕಾರಾತ್ಮಕ ಮನೋಭಾವವನ್ನು ಹೊಂದಿರುವ ಜನರೊಂದಿಗೆ ಇರಿ. ಇದರಿಂದ ನೀವು ಸಂತೋಷದಿಂದಿರಲು ಸಾಧ್ಯವಾಗುತ್ತದೆ.
ನಿಮ್ಮನ್ನು ಕ್ಷಮಿಸಲು ಕಲಿಯಿರಿ: ಎಲ್ಲರೂ ತಪ್ಪುಗಳನ್ನು ಮಾಡುತ್ತಾರೆ. ಆದ್ದರಿಂದ, ನಿಮ್ಮನ್ನು ಕ್ಷಮಿಸಲು ಕಲಿಯುವುದು ಮುಖ್ಯ. ತಪ್ಪುಗಳಿಂದ ಕಲಿಯುವುದು ನಾವು ಜೀವನದಲ್ಲಿ ಮುಂದುವರಿಯಲು ಇರುವ ಉತ್ತಮ ಮಾರ್ಗವಾಗಿದೆ. ಭೂತಕಾಲದ ಬಗ್ಗೆ ಯೋಚಿಸುವುದು ನೋವನ್ನು ಮಾತ್ರ ತರುತ್ತದೆ. ಸಕಾರಾತ್ಮಕ ಮನಸ್ಥಿತಿಯೊಂದಿಗೆ ಹೊಸ ಆರಂಭವನ್ನು ಪ್ರಾರಂಭಿಸಿ. ಇದರಿಂದ ನೀವು ಜೀವನದಲ್ಲಿ ಸಂತೋಷವಾಗಿರಬಹುದು.
ಧ್ಯಾನ ಮಾಡಿ: ದಿನಕ್ಕೆ 5 ರಿಂದ 10 ನಿಮಿಷಗಳ ಕಾಲ ಧ್ಯಾನ ಮಾಡುವುದರಿಂದ ನಿಮ್ಮ ಮನಸ್ಸು ಶಾಂತವಾಗುತ್ತದೆ. ಇದು ಮಾನಸಿಕ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಆಲೋಚನಾ ಶಕ್ತಿಯನ್ನು ಸುಧಾರಿಸುತ್ತದೆ. ಧ್ಯಾನವು ನಿಮ್ಮನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ.
ಬೆಂಗಳೂರು, ಏಪ್ರಿಲ್ 13: ಸಿಲಿಕಾನ್ ಸಿಟಿಯಲ್ಲಿ ಐಪಿಎಲ್ (IPL) ಕ್ರೇಜ್ ಶುರುವಾಗಿದೆ. ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಹೈವೋಲ್ಟೇಜ್ ಪಂದ್ಯಗಳನ್ನು ನೋಡಲು ಕಾತರರಾಗಿರುವ ಅಭಿಮಾನಿಗಳಿಗೆ ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತವು (BMRCL) ಗುಡ್ ನ್ಯೂಸ್ ನೀಡಿದೆ. ಏಪ್ರಿಲ್ 15, 18 ಮತ್ತು 24ರಂದು ನಡೆಯಲಿರುವ ಪಂದ್ಯಗಳ ದಿನದಂದು ರಾತ್ರಿ 11ರಿಂದ ತಡರಾತ್ರಿ 2 ಗಂಟೆವರೆಗೆ ನಮ್ಮ ಮೆಟ್ರೋ ಸಂಚಾರ ಅವಧಿಯನ್ನು ವಿಸ್ತರಿಸಿ ಆದೇಶ ಹೊರಡಿಸಲಾಗಿದೆ.
ಏಪ್ರಿಲ್ 15, 18 ಮತ್ತು 24ರಂದು ನಡೆಯುವ ಐಪಿಎಲ್ ಪಂದ್ಯಗಳಿಗೆ ಹೆಚ್ಚುವರಿ ಮೆಟ್ರೋ ಸೇವೆಯನ್ನು ಬಿಎಂಆರ್‌ಸಿಎಲ್ ಘೋಷಿಸಿದೆ. ಐಪಿಎಲ್ ಅಭಿಮಾನಿಗಳಿಗೆ ಸಹಕಾರಿ ಆಗುವ ದೃಷ್ಟಿಯಲ್ಲಿ ಹೆಚ್ಚುವರಿ ಸೇವೆಯನ್ನು ಒದಗಿಸಲಾಗುತ್ತಿದೆ. ರಾತ್ರಿ 11ರಿಂದ ತಡರಾತ್ರಿ 2 ಗಂಟೆವರೆಗೆ ಮೆಟ್ರೋ ಸಂಚಾರ ಇರಲಿದೆ.
ಬಿಎಂಆರ್‌ಸಿಎಲ್ ಟ್ವೀಟ್
Extension of Metro Services for IPL 2026 Match in Bengaluru. / ಬೆಂಗಳೂರಿನಲ್ಲಿ ನಡೆಯುವ ಐಪಿಎಲ್ 2026 ಪಂದ್ಯದ ಪ್ರಯುಕ್ತ ಮೆಟ್ರೋ ಸೇವೆ ವಿಸ್ತರಣೆ.ಹೆಚ್ಚಿನ ವಿವರಗಳಿಗೆ ಮಾಧ್ಯಮ ಪ್ರಕಟಣೆ ಯನ್ನು ವೀಕ್ಷಿಸಿ. pic.twitter.com/LAobmD1IT3
ಸಿಲ್ಕ್ ಇನ್‌ಸ್ಟಿಟ್ಯೂಟ್ ಮತ್ತು ಮಾದವಾರ: ರಾತ್ರಿ 12:45 ಗಂಟೆಗೆ
ಬೊಮ್ಮಸಂದ್ರ: ರಾತ್ರಿ 1 ಗಂಟೆಗೆ
ಆರ್.ವಿ. ರಸ್ತೆ: ರಾತ್ರಿ 2 ಗಂಟೆಗೆ
ಮೆಜೆಸ್ಟಿಕ್‌ನಿಂದ ನಾಲ್ಕೂ ದಿಕ್ಕುಗಳಿಗೆ ತಡರಾತ್ರಿ 1:30ಕ್ಕೆ ಕೊನೆಯ ರೈಲು ಹೊರಡಲಿದೆ.
ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ
ಇನ್ನು ಐಪಿಎಲ್ ಟಿಕೆಟ್‌ನಲ್ಲೇ ಮೆಟ್ರೋ ಕ್ಯೂಆರ್ (QR) ಕೋಡ್ ಲಭ್ಯವಿದ್ದು, ಎರಡು ಮಾರ್ಗಗಳ ಪ್ರಯಾಣಕ್ಕೆ ಇದನ್ನು ಬಳಸಬಹುದಾಗಿದೆ. ಸ್ಟೇಡಿಯಂಗೆ ಹತ್ತಿರವಿರುವ ಕಬ್ಬನ್ ಪಾರ್ಕ್ ಮತ್ತು ಎಂ.ಜಿ. ರಸ್ತೆ ನಿಲ್ದಾಣಗಳನ್ನು ಬಳಸಲು ಸೂಚಿಸಲಾಗಿದೆ. ಅದೇ ರೀತಿಯಾಗಿ ನಿಲ್ದಾಣಗಳಲ್ಲಿ ಹೆಚ್ಚಿನ ಪಾರ್ಕಿಂಗ್ ವ್ಯವಸ್ಥೆ ಕೂಡ ಕಲ್ಪಿಸಲಾಗಿದೆ. ದ್ವಿಚಕ್ರ ವಾಹನಗಳಿಗೆ 30 ರೂ, ಕಾರುಗಳಿಗೆ 60 ರೂ ಪಾರ್ಕಿಂಗ್ ಶುಲ್ಕ ನಿಗದಿ ಮಾಡಲಾಗಿದೆ. ಆ ಮೂಲಕ ಟ್ರಾಫಿಕ್ ಜಾಮ್ ತಪ್ಪಿಸಲು ಮೆಟ್ರೋ ಬಳಸುವಂತೆ ಬಿಎಂಆರ್‌ಸಿಎಲ್ ಮನವಿ ಮಾಡಿದೆ.
ಇನ್ನು ಕ್ರಿಕೆಟ್ ಪ್ರೇಮಿಗಳಿಗೆ ಅನುಕೂಲ ದೃಷ್ಟಿಯಿಂದ ಬಿಎಂಟಿಸಿ ಬಸ್ಗಳು ವಿಶೇಷ ಕಾರ್ಯಾಚರಣೆ ನಡೆಸಲಿವೆ. ಪಂದ್ಯ ನಡೆಯುವ ದಿನದಂದು ಬಿಎಂಟಿಸಿ ಬಸ್‌ಗಳ ಸೇವಾ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ. ಪ್ರಯಾಣಿಕರ ಬೇಡಿಕೆಗೆ ಅನುಸಾರವಾಗಿ ಬಿಎಂಟಿಸಿ ಬಸ್ಗಳನ್ನು ನಿಯೋಜಿಸಿದೆ.
ಚಿನ್ನಸ್ವಾಮಿ ಕ್ರೀಡಾಂಗಣದಿಂದ ವಿವಿಧ ಪ್ರದೇಶ ನಡುವೆ ಸಂಚರಿಸುವ ಬಸ್‌ಗಳ ವಿವರ
ಸರ್ಜಾಪುರ ಮತ್ತು ಕಾಡುಗೋಡಿ ಬಸ್ ನಿಲ್ದಾಣ
ಎಲೆಕ್ಟ್ರಾನಿಕ್ ಸಿಟಿ (ಹೊಸೂರು ರಸ್ತೆ)
ಬನ್ನೇರುಘಟ್ಟ ನ್ಯಾಷನಲ್ ಪಾರ್ಕ್
ಆರ್.ಕೆ. ಹೆಗಡೆ ನಗರ – ಯಲಹಂಕ (ನಾಗವಾರ, ಟ್ಯಾನರಿ ರಸ್ತೆ ಮೂಲಕ)
ಬೆಂಗಳೂರು (ಏ. 13): ಸ್ಮಾರ್ಟ್‌ಫೋನ್ (Smartphone) ಸ್ಟೋರೇಜ್ ಖಾಲಿಯಾಗುವುದು ಸಾಮಾನ್ಯ ಸಮಸ್ಯೆ. ನೀವು 1TB ಸ್ಟೋರೇಜ್ ಹೊಂದಿರುವ ಮೊಬೈಲ್ ರೂಪಾಂತರವನ್ನು ಖರೀದಿಸಿದರೂ, ಸ್ವಲ್ಪ ಸಮಯದ ನಂತರ ಆ ಸ್ಟೋರೇಜ್ ಕೂಡ ಸಾಕಾಗುವುದಿಲ್ಲ. ನೀವು ಹಳೆಯ ಫೋನ್ ಹೊಂದಿದ್ದರೆ ಈ ಸಮಸ್ಯೆ ಬಗ್ಗೆ ಕೇಳೋದೇ ಬೇಡ. ಅನೇಕ ಜನರು ಇದರಿಂದ ನಿರಾಶೆಗೊಂಡು ಹೊಸ ಫೋನ್ ಖರೀದಿಸಬೇಕಾಗುತ್ತದೆ. ಈಗ, ಈ ಸಮಸ್ಯೆಯನ್ನು ಪರಿಹರಿಸಲು ಗೂಗಲ್ ಆಟೋಮ್ಯಾಟಿಕ್ ಬ್ಯಾಕಪ್ ಎಂಬ ಹೊಸ ವೈಶಿಷ್ಟ್ಯವನ್ನು ತರುತ್ತಿದೆ. ಈ ವೈಶಿಷ್ಟ್ಯವು ಸ್ಟೋರೇಜ್-ಸಂಬಂಧಿತ ಸಮಸ್ಯೆಗಳನ್ನು ಪರಿಹರಿಸುತ್ತದೆ. ಈ ಫೀಚರ್ ಹೇಗೆ ಕಾರ್ಯನಿರ್ವಹಿಸುತ್ತದೆ ಮತ್ತು ಅದರ ಪ್ರಯೋಜನ ಏನು ಎಂಬುದನ್ನು ನೋಡೋಣ.
ಬೀಟಾ ಆವೃತ್ತಿಯಲ್ಲಿ ಸ್ವಯಂಚಾಲಿತ ಬ್ಯಾಕಪ್ ವೈಶಿಷ್ಟ್ಯ
ಮಾಧ್ಯಮ ವರದಿಗಳ ಪ್ರಕಾರ, ಈ ವೈಶಿಷ್ಟ್ಯವನ್ನು Google Play ಸೇವೆಗಳ ಬೀಟಾ ಆವೃತ್ತಿಯಲ್ಲಿ (v26.15.31) ಗುರುತಿಸಲಾಗಿದೆ. ಇದು ಬಳಕೆದಾರರಿಗೆ ತಮ್ಮ ಫೋನ್‌ನಿಂದ PC ಗೆ ಫೈಲ್‌ಗಳನ್ನು ಬ್ಯಾಕಪ್ ಮಾಡುವ ಆಯ್ಕೆಯನ್ನು ನೀಡುತ್ತದೆ. PC ಯಲ್ಲಿ ಬ್ಯಾಕಪ್ ಪೂರ್ಣಗೊಂಡ ನಂತರ, ನೀವು ನಿಮ್ಮ ಫೋನ್‌ನಿಂದ ಫೈಲ್‌ಗಳನ್ನು ಅಳಿಸಿದರೂ, ಅವು PC ಯಲ್ಲಿ ಸಂಗ್ರಹವಾಗಿರುತ್ತವೆ. ಈ ರೀತಿಯಾಗಿ, ನೀವು ನಿಮ್ಮ ಫೋನ್‌ನಲ್ಲಿ ಎಲ್ಲಾ ಫೈಲ್‌ಗಳನ್ನು ಇಟ್ಟುಕೊಳ್ಳುವ ಅಗತ್ಯವಿಲ್ಲ ಮತ್ತು ಸ್ಟೋರೇಜ್ ಫ್ರೀ ಆಗಿರುತ್ತದೆ.
ಅಟೊಮೆಟಿಕ್ ಬ್ಯಾಕಪ್ ವೈಶಿಷ್ಟ್ಯವು ಹೇಗೆ ಕಾರ್ಯನಿರ್ವಹಿಸುತ್ತದೆ?
ಈ ವೈಶಿಷ್ಟ್ಯವು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಆಯ್ಕೆ ಮಾಡಿದ ಫೈಲ್‌ಗಳನ್ನು ನಿಮ್ಮ ಕಂಪ್ಯೂಟರ್‌ಗೆ ಸ್ವಯಂಚಾಲಿತವಾಗಿ ಕಾಪಿ ಮಾಡಬಹುದು ಎಂದು ವರದಿಯಾಗಿದೆ. ಇದರ ಪ್ರಯೋಜನವೆಂದರೆ ನೀವು ಮೊದಲು ಫೋಟೋಗಳು ಮತ್ತು ವಿಡಿಯೋಗಳನ್ನು ಕ್ಲೌಡ್‌ಗೆ ಅಪ್‌ಲೋಡ್ ಮಾಡಬೇಕಾಗಿಲ್ಲ. ಈ ಫೈಲ್‌ಗಳನ್ನು ನಿಮ್ಮ ಕಂಪ್ಯೂಟರ್‌ನಲ್ಲಿ ವರ್ಗಾಯಿಸಲಾಗುತ್ತದೆ ಮತ್ತು ಸಂಗ್ರಹಿಸಲಾಗುತ್ತದೆ.
ಈ ಆಯ್ಕೆಯನ್ನು ಬಳಸಿಕೊಂಡು, ಬಳಕೆದಾರರು ಕ್ಯಾಮೆರಾದಿಂದ ತೆಗೆದ ಫೋಟೋಗಳು, ವಿಡಿಯೋಗಳು ಮತ್ತು ಆಡಿಯೊ ಫೈಲ್‌ಗಳನ್ನು ಸಂಗ್ರಹಿಸಲು ಸಾಧ್ಯವಾಗುತ್ತದೆ. ಈ ವೈಶಿಷ್ಟ್ಯವನ್ನು ಸಕ್ರಿಯಗೊಳಿಸಲು ಅಥವಾ ನಿಷ್ಕ್ರಿಯಗೊಳಿಸಲು ಟಾಗಲ್ ಅನ್ನು ಒದಗಿಸಲಾಗುತ್ತದೆ. ನೀವು ಅಟೊಮೆಟಿಕ್ ಸಿಂಕ್‌ಗಾಗಿ ಕಾಯಲು ಬಯಸದಿದ್ದರೆ, ಈ ವೈಶಿಷ್ಟ್ಯವು “ಈಗ ಬ್ಯಾಕಪ್ ಮಾಡಿ” ಬಟನ್ ಅನ್ನು ಸಹ ಒಳಗೊಂಡಿದೆ. ಈ ಬಟನ್ ಅನ್ನು ಟ್ಯಾಪ್ ಮಾಡುವುದರಿಂದ ನಿಮ್ಮ ಫೋನ್‌ನ ಫೋಟೋಗಳನ್ನು ನಿಮ್ಮ ಪಿಸಿಗೆ ಬ್ಯಾಕಪ್ ಮಾಡಲು ಪ್ರಾರಂಭಿಸುತ್ತದೆ.
ಈ ವೈಶಿಷ್ಟ್ಯವು ಆಂಡ್ರಾಯ್ಡ್‌ನ ಕ್ವಿಕ್ ಶೇರ್‌ನ ಭಾಗವಾಗಿದ್ದು, ಡಿವೈಸ್-ಟು-ಡಿವೈಸ್ ವರ್ಗಾವಣೆಯನ್ನು ಬಳಸುತ್ತದೆ. ಇದರರ್ಥ ಫೈಲ್‌ಗಳನ್ನು ವರ್ಗಾಯಿಸಲು ನಿಮಗೆ ಇಂಟರ್ನೆಟ್ ಸಂಪರ್ಕದ ಅಗತ್ಯವಿರುವುದಿಲ್ಲ. ಆದಾಗ್ಯೂ, ನೀವು ಎರಡೂ ಸಾಧನಗಳಲ್ಲಿ ಒಂದೇ ಗೂಗಲ್ ಖಾತೆಯೊಂದಿಗೆ ಲಾಗಿನ್ ಆಗಬೇಕಾಗಬಹುದು. ಗೂಗಲ್ ಪ್ರಸ್ತುತ ಈ ವೈಶಿಷ್ಟ್ಯದ ಮೇಲೆ ಕಾರ್ಯನಿರ್ವಹಿಸುತ್ತಿದೆ, ಇದನ್ನು ಸಾರ್ವಜನಿಕರಿಗೆ ಯಾವಾಗ ಬಿಡುಗಡೆ ಮಾಡಲಾಗುತ್ತದೆ ಎಂಬುದರ ಕುರಿತು ಕೆಲವೇ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಬಹುದು.
ಕೊಪ್ಪಳ, (ಏಪ್ರಿಲ್ 13): ಜಿಲ್ಲೆಯಲ್ಲಿ ಕುಕನೂರು ತಾಲೂಕಿನ ಮಸಬ ಹಂಚಿನಾಳ ಗ್ರಾಮದ ಹೊರವಲಯದಲ್ಲಿ ಪೈಪ್‌ಲೈನ್ ಕಾಮಗಾರಿಗಾಗಿ ಅಗೆದ ಗುಂಡಿಯಲ್ಲಿ ಇಬ್ಬರು ಯುವಕರ (Youths) ಮೃತದೇಹಗಳು ಪತ್ತೆಯಾಗಿದ್ದು, ಪ್ರಕರಣವು ಹಲವು ಅನುಮಾನಗಳಿಗೆ ಕಾರಣವಾಗಿದೆ. ಮೃತರನ್ನು ರುದ್ರೇಶ್ ಗಂಗಾವತಿ ಮತ್ತು ರವಿ ರಾಮಣ್ಣ ತಟ್ಟಿ ಎಂದು ಗುರುತಿಸಲಾಗಿದ್ದು, ಪೊಲೀಸರು ಇದು ಕೊಲೆ ಎಂದು ಶಂಕಿಸಿ ತನಿಖೆ ನಡೆಸುತ್ತಿದ್ದಾರೆ. ಇವರಿಬ್ಬರು ಸ್ನೇಹಿತರಾಗಿದ್ದು (Friends), ಒಟ್ಟಿಗೆ ಕೆಲಸ ಮಾಡಿಕೊಂಡಿದ್ದರು. ಆದ್ರೆ, ಇಂದು (ಏಪ್ರಿಲ್ 13) ಏಕಾಏಕಿ ಶವವಾಗಿ ಪತ್ತೆಯಾಗಿದ್ದು, ಸ್ಥಳೀಯರನ್ನು ಬೆಚ್ಚಿಬೀಳಿಸಿದೆ.
23 ವರ್ಷದ ರುದ್ರೇಶ್ ಗಂಗಾವತಿ ಮತ್ತು 32 ವರ್ಷದ ರವಿ ರಾಮಣ್ಣ ತಟ್ಟಿ ಇವರಿಬ್ಬರೂ ಕುಕನೂರು ನಿವಾಸಿಗಳಾಗಿದ್ದು, ಸ್ನೇಹಿತರಾಗಿದ್ದರೆಂದು ತಿಳಿದುಬಂದಿದೆ. ಕಳೆದ ಕೆಲವು ವರ್ಷಗಳಿಂದ ಕೋಳಿ ಫಾರಂನಲ್ಲಿ ಕೆಲಸ ಮಾಡುತ್ತಿದ್ದು, ಕುಟುಂಬದ ಆಧಾರಸ್ತಂಭರಾಗಿದ್ದರು. ನಾಲ್ಕೈದು ದಿನಗಳ ಹಿಂದೆ ಕೆಲಸಕ್ಕೆ ಎಂದು ಮನೆಯಿಂದ ತೆರಳಿದ್ದರು. ಇದೀಗ ಶವವಾಗಿ ಪತ್ತೆಯಾಗಿದ್ದಾರೆ.
ಘಟನಾ ಸ್ಥಳದಲ್ಲಿ ಮೃತದೇಹಗಳು ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದ್ದು, ಪಕ್ಕದಲ್ಲೇ ಎಣ್ಣೆ ಪ್ಯಾಕೆಟ್‌ಗಳು ಹಾಗೂ ತುಂಡಾದ ಚಪ್ಪಲಿಗಳು ಪತ್ತೆಯಾಗಿವೆ. ಇದರಿಂದ ಶವಗಳಿಗೆ ಬೆಂಕಿ ಹಚ್ಚಲಾಗಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಇನ್ನು ಮೃತರ ಬೈಕ್ ಘಟನೆ ನಡೆದ ಸ್ಥಳದಿಂದ ಬೇರೆಡೆ ಪತ್ತೆಯಾಗಿದ್ದು, ಅದಕ್ಕೆ ಹೆಚ್ಚಿನ ಹಾನಿ ಕಂಡುಬಂದಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ದಿ ಭೇಟಿ ನೀಡಿ ಪರಿಶೀಲಿಸಿದರು.
ಗೆಳೆಯರ ಸಾವಿನ ಹಿಂದೆ ಹತ್ತಾರು ಅನುಮಾನ
ಇಬ್ಬರು ಅನುಮಾನಸ್ಪದವಾಗಿ ಸಾವನ್ನಪ್ಪಿರುವುದನ್ನು ನೋಡಿ ಕೆಲವರು ಇದೊಂದು ಹಿಟ್ ಆ್ಯಂಡ್ ರನ್ ಇರಬಹುದು ಎನ್ನುತ್ತಿದ್ದಾರೆ. ಇನ್ನು ಕೆಲವರು ಪ್ರೀ ಪ್ಲ್ಯಾನ್ ಮರ್ಡರ್ ಎನ್ನುತ್ತಿದ್ದಾರೆ. ಅದಕ್ಕೆ ಅಕ್ಕ ಪಕ್ಕ ಬಿದ್ದಿರೋ ಡ್ರಿಂಕ್ಸ್ ಪಾಕೆಟ್ ಗಳು ಕೂಡಾ ಕಾರೆಣ. ರಾತ್ರಿ ಎಲ್ಲೋ ಪಾರ್ಟಿ ಮಾಡಿದ್ದು, ಅಲ್ಲಿ ಅವರನ್ನು ಕೊಲೆ ಮಾಡಿ ಇಲ್ಲಿಗೆ ತಂದು ಹಾಕಿರಬಹುದು ಎನ್ನುವ ಶಂಕೆ ಸಹ ವ್ಯಕ್ತವಾಗಿದೆ.
ಇನ್ನು ಅಪಘಾತ ಬೈಕ್ ಗೆ ಹಾನಿಯಾಗಬೇಕಾಗಿತ್ತು, ಆದ್ರೆ ಬೈಕ್ ಗೆ ಅಂತಹ ಯಾವುದೇ ಹಾನಿಯಾಗಿಲ್ಲ, ಹೀಗಾಗಿ ಈ ಪ್ರಕರಣ ಸಾಕಷ್ಟು ಅನುಮಾನ ಹುಟ್ಟುಹಾಕಿದೆ. ಇನ್ನು ಶವ ಬಿದ್ದಿವೆ ಅನ್ನೋ ವಿಚಾರ ತಿಳಿದು ಜನ ತಂಡೋಪ ತಂಡವಾಗಿ ದೌಡಾಯಿಸಿದ್ದು, ಇನ್ನೊಂದೆಡೆ ಜನರನ್ನ ನಿಯಂತ್ರಿಸಲು ಪೊಲೀಸರು ಹಸರಸಾಹ ಪಡಬೇಕಾಯ್ತ. ಇನ್ನು ಕುಕನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ವಿವಿಧ ಆಯಾಮಾಗಳಲ್ಲಿ ತನಿಖೆ ಕೈಗೊಂಡಿದ್ದಾರೆ.
ಇಂದಿನ ವೇಗದ ಜೀವನಶೈಲಿಯಲ್ಲಿ ಜನರು ಎಲ್ಲ ಕೆಲಸಗಳನ್ನು ಬೇಗ ಮುಗಿಸಲು ಪ್ರಯತ್ನಿಸುತ್ತಾರೆ. ಇದರಲ್ಲಿ ಊಟ ಮಾಡುವುದು ಕೂಡ ಹೊರತಾಗಿಲ್ಲ. ಕೆಲಸದ ಒತ್ತಡದಲ್ಲಿ ಊಟ, ತಿಂಡಿಯನ್ನು ಸರಿಯಾಗಿ ಮಾಡಲು ಕೂಡ ಸರಿಯಾಗಿ ಸಮಯವಿರುವುದಿಲ್ಲ. ಈ ರೀತಿ ಬದಲಾದ ಜೀವನಶೈಲಿಯಿಂದ ಹಲವರು ತ್ವರಿತವಾಗಿ ಅಂದರೆ ಫಾಸ್ಟ್ ಆಗಿ ಊಟ ಮಾಡುವ ಅಭ್ಯಾಸ ಬೆಳೆಸಿಕೊಂಡಿದ್ದಾರೆ. ಆದರೆ ಈ ಅಭ್ಯಾಸ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ ಅದರಲ್ಲಿಯೂ ಬೊಜ್ಜಿನ ಸಮಸ್ಯೆಯನ್ನು (Obesity)ಹೆಚ್ಚಿಸುತ್ತದೆ ಎಂಬುದು ನಿಮಗೆ ತಿಳಿದಿದೆಯೇ, ಹೌದು ವೇಗವಾಗಿ ಊಟ ಮಾಡುವುದು ನಾನಾ ರೀತಿಯ ಸಮಸ್ಯೆಗಳಿಗೆ ಕಾರಣವಾಗುತ್ತದೆ, ಹಾಗಾದರೆ ಇದನ್ನು ತಡೆಯಲು ಏನು ಮಾಡಬಹುದು, ಇದರ ಬದಲಾಗಿ ಆರೋಗ್ಯಕರ ಅಭ್ಯಾಸಗಳು ಬೆಳೆಸಿಕೊಳ್ಳಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ವೇಗವಾಗಿ ಊಟ ಮಾಡುವುದರಿಂದ ಏನಾಗುತ್ತದೆ?
ಆರೋಗ್ಯ ತಜ್ಞರು ಹೇಳುವ ಪ್ರಕಾರ, ವೇಗವಾಗಿ ಊಟ ಮಾಡಿದಾಗ ದೇಹಕ್ಕೆ ಹೊಟ್ಟೆ ತುಂಬಿದ ಸೂಚನೆ ಸರಿಯಾಗಿ ತಲುಪುವುದಿಲ್ಲ. ಇದರಿಂದ ವ್ಯಕ್ತಿ ಅಗತ್ಯಕ್ಕಿಂತ ಹೆಚ್ಚು ಆಹಾರ ಸೇವಿಸುತ್ತಾನೆ. ಇದರ ಪರಿಣಾಮವಾಗಿ ದೇಹದ ತೂಕ ಹೆಚ್ಚಾಗಿ, ಬೊಜ್ಜಿನ ಸಮಸ್ಯೆ ಉಂಟಾಗುತ್ತದೆ. ಅಷ್ಟೇಅಲ್ಲ, ಆಹಾರವನ್ನು ಸರಿಯಾಗಿ ಜಗಿದು ತಿನ್ನುವುದರಿಂದ ಜೀರ್ಣಕ್ರಿಯೆ ನಿಧಾನಗೊಳ್ಳುತ್ತದೆ. ಇದರಿಂದ ಅಜೀರ್ಣ, ಹೊಟ್ಟೆ ಉಬ್ಬರ ಸಮಸ್ಯೆಗಳು ಉಂಟಾಗುತ್ತವೆ. ದೀರ್ಘಕಾಲ ಈ ಅಭ್ಯಾಸ ಮುಂದುವರಿದರೆ ಮೆಟಾಬಾಲಿಸಂ ಕಡಿಮೆಯಾಗುತ್ತದೆ ಮತ್ತು ದೇಹದಲ್ಲಿ ಕೊಬ್ಬು ಜಮೆಯಾಗಲು ಶುರುವಾಗುತ್ತದೆ.
ತ್ವರಿತವಾಗಿ ಊಟ ಮಾಡುವವರು ಹೆಚ್ಚು ಕ್ಯಾಲೊರಿ ಸೇವಿಸುವ ಸಾಧ್ಯತೆ ಇರುವುದರಿಂದ ಹೃದಯ ಸಂಬಂಧಿತ ಕಾಯಿಲೆಗಳ ಅಪಾಯವೂ ಹೆಚ್ಚಾಗುತ್ತದೆ. ಜೊತೆಗೆ ಇನ್ಸುಲಿನ್ ಅಸಮತೋಲನ ಉಂಟಾಗಿ ಟೈಪ್- 2 ಮಧುಮೇಹದ ಅಪಾಯ ಹೆಚ್ಚಬಹುದು. ಹಾರ್ಮೋನ್ ಅಸಮತೋಲನ ಮತ್ತು ದಣಿವು ಕೂಡ ಹೆಚ್ಚಾಗಬಹುದು.
ಹೇಗೆ ತಡೆಯಬೇಕು?
ಈ ಸಮಸ್ಯೆಯನ್ನು ತಪ್ಪಿಸಲು ನಿಧಾನವಾಗಿ, ಊಟವನ್ನು ಆಸ್ವಾದಿಸುತ್ತಾ ತಿನ್ನುವುದು ಬಹಳ ಮುಖ್ಯ. ಆಹಾರವನ್ನು ಯಾವಾಗಲು ಚೆನ್ನಾಗಿ ಅಗಿದು ತಿನ್ನಬೇಕು. ಮೊಬೈಲ್ ಅಥವಾ ಟಿವಿ ನೋಡುತ್ತಾ ಊಟ ಮಾಡುವುದನ್ನು ತಪ್ಪಿಸಬೇಕು. ಇದೆಲ್ಲದರ ಜೊತೆಗೆ ಊಟದ ನಡುವೆ ಸ್ವಲ್ಪ ವಿರಾಮ ತೆಗೆದುಕೊಳ್ಳುವುದು ಕೂಡ ಸಹಾಯಕವಾಗುತ್ತದೆ. ನಿಯಮಿತ ಸಮಯಕ್ಕೆ ಊಟ ಮಾಡುವುದು, ಸಮತೋಲನ ಆಹಾರ ಸೇವಿಸುವುದು ಮತ್ತು ಜಂಕ್ ಫುಡ್ ಕಡಿಮೆ ಮಾಡುವುದು ಮುಖ್ಯ. ಹಣ್ಣು, ತರಕಾರಿ, ಪ್ರೋಟೀನ್ ಮತ್ತು ಫೈಬರ್ ಇರುವ ಆಹಾರವನ್ನು ಒಳಗೊಂಡ ಡೈಟ್ ಅನುಸರಿಸಬೇಕು. ದಿನವೂ ವ್ಯಾಯಾಮ ಮತ್ತು ಸರಿಯಾಗಿ ನಿದ್ರೆ ಮಾಡುವುದರಿಂದ ಆರೋಗ್ಯ ಕಾಪಾಡಲು ಸಹಾಯವಾಗುತ್ತದೆ.