Headlines

ಆಯತೊಲ್ಲಾ ಅಲಿ ಖಮನೈ ಪುತ್ರನಿಗೆ ಇರಾನ್​​ ಸರ್ವೋಚ್ಚ ನಾಯಕನ ಪಟ್ಟ: ಟ್ರಂಪ್​​ ಮಹತ್ವದ ಎಚ್ಚರಿಕೆ

ಟೆಹ್ರಾನ್ಮ, ಮಾ.9: ಇಸ್ರೇಲ್​​​​, ಅಮೆರಿಕ ದಾಳಿಯಲ್ಲಿ ತಮ್ಮ ಪರಮೋಚ್ಚ ನಾಯಕ ಕಳೆದುಕೊಂಡಿರುವ ಇರಾನ್​​, ಇದೀಗ ಹೊಸ ನಾಯಕನನ್ನು ಆಯ್ಕೆ ಮಾಡಿದೆ. ಆದರೆ ಈ ಆಯ್ಕೆಗೆ ಅಮೆರಿಕ ಆಕ್ರೋಶ ವ್ಯಕ್ತಪಡಿಸಿದೆ.  ಇರಾನ್‌ನ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ಸೋಮವಾರ ಮಧ್ಯರಾತ್ರಿ ಮಹತ್ವದ ಘೋಷಣೆ ಮಾಡಿದ್ದು, ಅಯತೊಲ್ಲಾ ಸಯ್ಯದ್ ಮೊಜ್ತಬಾ ಹೊಸೇನಿ ಖಮೇನಿ (Mojtaba Khamenei) ಅವರನ್ನು ದೇಶದ ನೂತನ ಪರಮೋಚ್ಚ ನಾಯಕನನ್ನಾಗಿ ನೇಮಿಸಿದೆ. ಕಳೆದ ವಾರ ಅಮೆರಿಕ-ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ ಅಲಿ ಖಮೇನಿ ಹತರಾದ ಬೆನ್ನಲ್ಲೇ ಈ ನಿರ್ಧಾರ…

Read More

Tv9 Kannada News Live: ತ್ವಿಶಾ ಶರ್ಮಾ ಕೇಸ್​​ಗೆ ಟ್ವಿಸ್ಟ್, ಅಶೋಕ್​​ಗಿಲ್ಲ ಸೂರು​​, ಕಾಕ್ರೋಚ್ ಪಾರ್ಟಿಗೆ ಬ್ರೇಕ್: ಈ ಹೊತ್ತಿನ ಮುಖ್ಯ ಸುದ್ದಿಗಳು – Kannada News | TV9 Kannada News Live: Twist in Twisha Sharma Case; No House for Ashok, Setback for Cockroach Party

ತ್ವಿಶಾ ಶರ್ಮಾ, ಆರ್​ ಅಶೋಕ್​​, ಕಾಕ್ರೋಚ್ ಪಾರ್ಟಿImage Credit source: tv9 kannada ಬೆಂಗಳೂರು, ಮೇ 22: ಮಾಡೆಲ್ ತ್ವಿಶಾ ಶರ್ಮಾ ನಿಗೂಢ ಸಾವಿನ ಪ್ರಕರಣಕ್ಕೆ (Twisha Sharmas death case) ಸಂಬಂಧಿಸಿದಂತೆ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ. ಕಳೆದ ಹತ್ತು ದಿನಗಳಿಂದ ತಲೆಮರೆಸಿಕೊಂಡಿದ್ದ ಆಕೆಯ ಪತಿ ಸಮರ್ಥ್ ಸಿಂಗ್ ಜಬಲ್ಪುರ ನ್ಯಾಯಾಲಯಕ್ಕೆ ಬಂದು ಶರಣಾಗಿದ್ದಾರೆ. ತ್ವಿಶಾ ನಿಗೂಢ ಸಾವಿನ ಬಳಿಕ ಆಕೆಯ ಕುಟುಂಬಸ್ಥರು ಸಮರ್ಥ್ ಮತ್ತು ಆತನ ಕುಟುಂಬಸ್ತರ ವಿರುದ್ಧ ವರದಕ್ಷಿಣೆ ಕಿರುಕುಳ ಹಾಗೂ ಹತ್ಯೆಯ ಗಂಭೀರ…

Read More

ಮದುವೆಗೂ ಸ್ವಲ್ಪ ಮುನ್ನ ಗೆಳೆಯನೊಂದಿಗೆ ಅಕ್ಕ ಪರಾರಿ, ತಂಗಿಗಾದರೂ ಕೊಟ್ಟು ಮದುವೆ ಮಾಡೋಣವೆಂದ್ರೆ ಆಕೆಯ ಪ್ರಿಯಕರನೂ ಪ್ರತ್ಯಕ್ಷ – Kannada News

ಬರೇಲಿ, ಜೂನ್ 09: ಉತ್ತರ ಪ್ರದೇಶದ ಬರೇಲಿಯಲ್ಲಿ ಮದುವೆಯೊಂದು ನಿಶ್ಚಯವಾಗಿತ್ತು. ಇನ್ನೇನು ಮದುವೆ(Marriage) ಶಾಸ್ತ್ರಗಳು ನಡೆಯಬೇಕೆನ್ನುವಷ್ಟರಲ್ಲಿ ವಧು ಪ್ರಿಯಕರನೊಂದಿಗೆ ಪರಾರಿಯಾಗಿದ್ದಳು. ತಂಗಿಯನ್ನಾದರೂ ಆ ವರನಿಗೆ ಕೊಟ್ಟು ಮದುವೆ ಮಾಡಬೇಕೆಂದರೆ ಆಕೆಗೂ ಪ್ರಿಯಕರನಿದ್ದು ಕುಟುಂಬದವರ ಎದುರು ಬಂದು ನಿಂತಿದ್ದ ಘಟನೆ ನಡೆದಿದೆ. ವಧು ಮತ್ತು ಆಕೆಯ ತಂಗಿಯ ವೈಯಕ್ತಿಕ ನಿರ್ಧಾರಗಳಿಂದ ಮದುವೆ ಮನೆಯಲ್ಲಿ ಉಂಟಾದ ದಿಢೀರ್ ಗೊಂದಲವು ಸಮಾಜದಲ್ಲಿ ಯುವ ಪೀಳಿಗೆಯ ಆಲೋಚನೆಗಳು ಮತ್ತು ಕೌಟುಂಬಿಕ ಸಮ್ಮತಿಯ ಮಹತ್ವದ ಕುರಿತು ಹೊಸ ಸಂವಾದವನ್ನು ಹುಟ್ಟುಹಾಕಿದೆ. ನರಿಯಾವಾಲ್‌ನಲ್ಲಿರುವ ಮದುವೆ ಮಂಟಪದಲ್ಲಿ…

Read More

SSLC ಬೋರ್ಡ್ ಎಡವಟ್ಟಿಗೆ ಪ್ರತಿಭಾವಂತ ಅಂಧ ವಿದ್ಯಾರ್ಥಿನಿ ಫೇಲ್ – Kannada News | Karnataka SSLC Board Blunder: Visually Impaired Student Fails Due to Result Error

ಕಾರವಾರ, ಏಪ್ರಿಲ್​ 23: ಇತ್ತೀಚೆಗೆ ಪಿಯುಸಿ ಫಲಿತಾಂಶ ಪ್ರಕಟಣೆ ವೇಳೆ 600 ಅಂಕಗಳ ಪರೀಕ್ಷೆಗೆ 683 ಅಂಕಗಳನ್ನು ನೀಡಿದ ಬೋರ್ಡ್​ನ ಎಡವಟ್ಟು ಬೆಳಕಿಗೆ ಬಂದಿತ್ತು. ಇದೀಗ ಇಂತಹದೊಂದು ಎಡವಟ್ಟು ಇದೀಗ ಎಸ್​​ಎಸ್​ಎಲ್​ಸಿ ಪರೀಕ್ಷೆಯಲ್ಲೂ ನಡೆದಿದ್ದು, ಪ್ರತಿಭಾವಂತ ಅಂಧ ವಿದ್ಯಾರ್ಥಿನಿಯನ್ನ ಫೇಲ್​ ಮಾಡಲಾಗಿದೆ. ಶಿರಸಿಯ ಇಂದಿರಾ ನಗರದ ಯೂನಿಯನ್ ಉರ್ದು ಪ್ರೌಢಶಾಲೆಯ ವಿದ್ಯಾರ್ಥಿನಿ ಲೀಸಾ ಖಾನಮ್, ಎಲ್ಲಾ ಪರೀಕ್ಷೆಗೆ ಹಾಜರಾಗಿದ್ದರು ಸಮಾಜ-ವಿಜ್ಞಾನ ವಿಷಯದ ಪರೀಕ್ಷೆಗೆ ಗೈರು ಎಂದು ನಮೋದಿಸಲಾಗಿದೆ. ಕನ್ನಡ -100, ಇಂಗ್ಲಿಷ್​​ -92, ಅರ್ಥಶಾಸ್ತ್ರ-98 , ಪೊಲಿಟಿಕಲ್…

Read More

ನಾನ್ ವೆಜ್ ತಿಂದ ವಿಷಯ ವೈರಲ್; ಡಾಲಿ ಧನಂಜಯ್ ದೂರಿದ್ದು ಯಾರನ್ನ? – Kannada News | Daali Dhananjaya on Non Veg Row: My Food, My Choice Clarifies Lingayat controversy

ಡಾಲಿ ಧನಂಜಯ್ ಅವರು (Dhananjay) ಇತ್ತೀಚೆಗೆ ನಾನ್​ ವೆಜ್ ತಿಂದ ವಿಷಯ ಸಾಕಷ್ಟು ಚರ್ಚೆ ಆಯಿತು. ಅವರು ಲಿಂಗಾಯತ ಆಗಿ ನಾನ್​ ವೆಜ್ ತಿಂದಿದ್ದು ಎಷ್ಟು ಸರಿ ಎಂಬ ಪ್ರಶ್ನೆ ಅನೇಕರಲ್ಲಿ ಮೂಡಿತ್ತು. ಬಹುತೇಕರು ಡಾಲಿ ಅವರನ್ನು ಬೆಂಬಲಿಸಿದ್ದರು. ಆಹಾರ ಅವರ ಆಯ್ಕೆ ಎಂದು ನೇರ ಮಾತುಗಳಲ್ಲಿ ಹೇಳಿದ್ದರು. ಈಗ ಈ ವಿಷಯಕ್ಕೆ ಡಾಲಿ ಧನಂಜಯ್ ಅವರು ಸ್ಪಷ್ಟನೆ ನೀಡಿದ್ದಾರೆ. ಆಹಾರ ಪ್ರತಿಯೊಬ್ಬ ಮನುಷ್ಯನ ಆಯ್ಕೆ ಎಂದಿದ್ದಾರೆ. ಜನವರಿ 30ರಂದಿ ನಡೆದ ಸುದ್ದಿಗೋಷ್ಠಿಯಲ್ಲಿ ಧನಂಜಯ್ ಮಾತನಾಡಿದ್ದಾರೆ. ‘ನಾನು…

Read More

ನಾಯಿ ಕಡಿತ ನಿರ್ಲಕ್ಷಿಸಲು ಸಾಧ್ಯವಿಲ್ಲ, ಬೀದಿ ನಾಯಿಗಳನ್ನು ತೆರವುಗೊಳಿಸುವಂತೆ ಸುಪ್ರೀಂ ಖಡಕ್ ಆದೇಶ – Kannada News | Supreme Court of India Calls for Action on Rising Stray Dog Concerns

ನವದೆಹಲಿ, ಮೇ 19: ದೇಶಾದ್ಯಂತ ಸಾರ್ವಜನಿಕ ಸ್ಥಳಗಳು ಮತ್ತು ರಸ್ತೆಗಳಿಂದ ಬೀದಿ ನಾಯಿಗಳನ್ನು ಸಂಪೂರ್ಣವಾಗಿ ತೆರವುಗೊಳಿಸುವ ಹಾಗೂ ಅವುಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಮಂಗಳವಾರ ಅತ್ಯಂತ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂಬಂಧಿಸಿದಂತೆ ತಾನು ನವೆಂಬರ್ 2025 ರಲ್ಲಿ ನೀಡಿದ್ದ ಐತಿಹಾಸಿಕ ಆದೇಶವನ್ನು ಮಾರ್ಪಡಿಸಲು ಅಥವಾ ಹಿಂಪಡೆಯಲು ಕೋರಿ ಸಲ್ಲಿಕೆಯಾಗಿದ್ದ ಎಲ್ಲಾ ಅರ್ಜಿಗಳನ್ನು ನ್ಯಾಯಾಲಯವು ಸಂಪೂರ್ಣವಾಗಿ ವಜಾಗೊಳಿಸಿದೆ. ಸಾರ್ವಜನಿಕ ಸ್ಥಳಗಳಲ್ಲಿ ಬೀದಿ ನಾಯಿಗಳ ಉಪಸ್ಥಿತಿಯು ಮತ್ತು ಅವುಗಳ ಜನಸಂಖ್ಯೆ ಹೆಚ್ಚುತ್ತಿರುವುದು ಅತ್ಯಂತ ಆತಂಕಕಾರಿ…

Read More

‘ರಾಮಾಯಣ’ ಟೀಸರ್ ಅಲ್ಲಿ ಯಶ್ ಲುಕ್ ಹೇಗಿದೆ? ಇಲ್ಲಿದೆ ಫೋಟೋಸ್

ರಾಕಿಂಗ್ ಸ್ಟಾರ್ ಯಶ್ ಅವರು ‘ರಾಮಾಯಣ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಟೀಸರ್ ಇಂದು (ಏಪ್ರಿಲ್ 2) ರಿಲೀಸ್ ಆಗಿದೆ. ಈ ಸಿನಿಮಾದಲ್ಲಿ ಯಶ್ ಹೇಗೆ ಕಾಣಿಸಿಕೊಳ್ಳುತ್ತಾರೆ ಎಂಬ ಕುತೂಹಲ ಅಭಿಮಾನಿಗಳಿಗೆ ಇತ್ತು. ಅದಕ್ಕೆ ಪೂರ್ಣ ಪ್ರಮಾಣದಲ್ಲಿ ಉತ್ತರ ಸಿಕ್ಕಿಲ್ಲ. ರಾಮನಾಗಿ ರಣಬೀರ್ ಕಪೂರ್ ಅವರು ಕಾಣಿಸಿಕೊಂಡಿದ್ದಾರೆ. ಅವರ ಲುಕ್ ಗಮನ ಸೆಳೆದಿದೆ. ರಾಮನ ಪಾತ್ರಕ್ಕೆ ಅವರು ಸೂಕ್ತವಾಗಿ ಹೊಂದಿಕೆ ಆಗಿದ್ದಾರೆ ಎಂದು ಅನೇಕರು ಹೇಳಿದ್ದಾರೆ. ಅವರ ಪಾತ್ರಕ್ಕೆ 10ಕ್ಕೆ 10 ಅಂಕ ಸಿಕ್ಕಿದೆ. ಸೀತಾ ಮಾತೆಯಾಗಿ…

Read More

Daily Devotional: ಯಾವ ಸಮಸ್ಯೆಗೆ ಯಾವ ಪೂಜೆ ಮಾಡಬೇಕು ಗೊತ್ತಾ? – Kannada News | Daily Devotional: Worshipping God according to your problems

ಬೆಂಗಳೂರು, ಜನವರಿ 27: ಮಾನವನ ಜೀವನದಲ್ಲಿ ಯಾವ ರೀತಿ ಸಮಸ್ಯೆ ಬಂದರೆ ಯಾವ ರೀತಿ ದೇವರನ್ನು ಪೂಜಿಸಬೇಕೆಂದು ಡಾ.ಬಸವರಾಜ್ ಗುರೂಜಿ ತಿಳಿಸಿಕೊಟ್ಟಿದ್ದಾರೆ. ಸೂರ್ಯ, ಚಂದ್ರ ಸೇರಿದಂತೆ ಎಲ್ಲಾ ಗ್ರಹಗಳ ದೋಷವಿದ್ದಲ್ಲಿ, ಆ ಗ್ರಹಕ್ಕೆ ಸಂಬಂಧಿಸಿದ ದಿನದಂದು ಭಕ್ತಿಪೂರ್ವಕವಾಗಿ ನಿರ್ದಿಷ್ಟ ನಿಯಮವನ್ನು ಅನುಸರಿಸಿ ಸ್ನಾನ ಮಾಡುವುದರಿಂದಲೇ ದೋಷ ಪರಿಹಾರವಾಗುತ್ತದೆ ಎಂದು ಗುರೂಜಿ ತಿಳಿಸಿದ್ದಾರೆ. ದೇವಸ್ಥಾನಕ್ಕೆ ಹೋಗುವುದು, ದಾನ-ಧರ್ಮ ಮಾದುವುದು, ವೃತಗಳನ್ನು ಮಾಡುವುದರ ಜೊತೆಗೆ ಕೆಲವೊಂದು ಹೋಮ ಹವನ, ಉಪಾಯಗಳ ಮೂಲಕವೂ ಸಂಕಷ್ಟಗಳು ಬಗೆರಿಯುತ್ತವೆ ಎಂದು ಗುರೂಜಿ ಹೇಳಿದ್ದಾರೆ.  …

Read More

19 ಕೆಜಿ ಕಮರ್ಷಿಯಲ್ ಗ್ಯಾಸ್​ ಸಿಲಿಂಡರ್​ಗೆ ಎಷ್ಟು ಖರ್ಚು ಆಗುತ್ತೆ ಗೊತ್ತಾ? – Kannada News | Mysuru Congress Leader M Laxman Revels how much expenditure commercial gas cylinder

ಮೈಸೂರು, (ಮೇ 03): ವಾಣಿಜ್ಯ ಸಿಲಿಂಡರ್ ಗ್ಯಾಸ್ ಬೆಲೆ ಏರಿಕೆಗೆ ಕೆಪಿಸಿಸಿ ವಕ್ತಾರ ಎಂ ಲಕ್ಷ್ಮಣ್ ಕೇಂದ್ರ ಸರ್ಕಾರವ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೇ ಕಚ್ಚಾ ತೈಲಗೆ 19 ಕೆಜಿಗೆ ಎಷ್ಟು ಖರ್ಚು? 19 ಕೆ.ಜಿ ಗ್ಯಾಸ್ ಸಿಲಿಂಡರ್​​ ತಯಾರಿಕೆಗೆ ಎಷ್ಟು ಖರ್ಚಾಗುತ್ತೆ ಎನ್ನುವುದನ್ನು ಎಳೆ ಎಳೆಯಾಗಿಬಿಚ್ಚಿಟ್ಟಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಎಂ ಲಕ್ಷ್ಮಣ್, ಕಚ್ಚಾ ತೈಲಗೆ 19 ಕೆಜಿಗೆ 1900 ಖರ್ಚು ಬೀಳುತ್ತದೆ. ಸಿಪ್ಪಿಂಗ್, ಟ್ರಾನ್ಸ್ಫರ್ಟ್ ,ರೀಫೈನ್ ಡೀಲರ್ ಕಮಿಷನ್ ಸೇರಿ ಒಟ್ಟು 2370 ರೂ…

Read More

‘ವಾರಣಾಸಿ’ ಚಿತ್ರೀಕರಣದ ಬಾಕಿ ಇರುವುದೆಷ್ಟು? ಮಾಹಿತಿ ನೀಡಿದ ರಾಜಮೌಳಿ – Kannada News | Rajamouli says Varanasi movie shooting will complete 90 percent

ರಾಜಮೌಳಿ (Rajamouli) ಮತ್ತು ಮಹೇಶ್ ಬಾಬು ಕಾಂಬಿನೇಷನ್‌ನಲ್ಲಿ ಮೂಡಿಬರುತ್ತಿರುವ ಸಿನಿಮಾ ‘ವಾರಣಾಸಿ’ ಸಿನಿಮಾ ಇದೀಗ ವಿಶ್ವ ಚಿತ್ರರಂಗದಲ್ಲಿ ಅತಿ ನಿರೀಕ್ಷಿತ ಸಿನಿಮಾಗಳಲ್ಲಿ ಒಂದು ಎನಿಸಿಕೊಂಡಿದೆ. ಈ ಅಡ್ವೆಂಚರಸ್ ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರು ವಿಲನ್ ಆಗಿ ನಟಿಸುತ್ತಿದ್ದಾರೆ. ಇದು ಭಾರತದ ಈ ವರೆಗಿನ ಅತಿ ದೊಡ್ಡ ಬಜೆಟ್ ಸಿನಿಮಾ ಎನಿಸಿಕೊಂಡಿತ್ತು. ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. ಹೀಗಿರುವಾಗ ಸಿನಿಮಾದ ಬಗ್ಗೆ ಅಪ್​​ಡೇಟ್ ಒಂದನ್ನು…

Read More