ಚೀಟಿ ವ್ಯವಹಾರದಲ್ಲಿ ಕೈ ಸುಟ್ಟುಕೊಂಡವ ಮಾಡಬಾರದ್ದು ಮಾಡಲು ಹೋಗಿ ಮೈಯನ್ನೂ ಸುಟ್ಟುಕೊಂಡ! – Kannada News | Brother set himself on fire while attempting to burn down his elder brother’s house in Hoskote
ದೇವನಹಳ್ಳಿ, ಜನವರಿ 07: ಮಧ್ಯರಾತ್ರಿ ವೇಳೆ ಸಹೋದರನ ಮನೆ ಸುಡಲು ಹೋಗಿ ಆ ಬೆಂಕಿಯಲ್ಲಿ ತಾನೇ ಸುಟ್ಟು ವ್ಯಕ್ತಿಯೋರ್ವ ಆಸ್ಪತ್ರೆ ಸೇರಿರುವ ಘಟನೆ ಹೊಸಕೋಟೆ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ. ಘಟನೆಯ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಂಭೀರ ಗಾಯಗೊಂಡಿರುವ ಮುನಿರಾಜು ಎಂಬಾತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಅಣ್ಣನ ಕುಟುಂಬವನ್ನೇ ಮುಗಿಸಲು ಸಂಚು ಕಳೆದ 8 ವರ್ಷಗಳಿಂದ ಗ್ರಾಮದಲ್ಲಿ ಪಟಾಕಿ ಚೀಟಿ ನಡೆಸಿ ಮುನಿರಾಜು ಕೈಸುಟ್ಟುಕೊಂಡಿದ್ದ. ಚೀಟಿ ಹಾಕಿದ್ದವರು ಹಣ ವಾಪಸ್ ನೀಡುವಂತೆ ಗಲಾಟೆ ಮಾಡಿದ…