ಮದುವೆ ಮನೆಗೆ ಬಂದು ಗ್ರಾಮದ ಮುಖ್ಯಸ್ಥರನ್ನು ಗುಂಡಿಕ್ಕಿ ಕೊಂದಿದ್ದ ಗ್ಯಾಂಗ್​ಸ್ಟರ್ ಹರ್ನೂರ್​ ಎನ್​ಕೌಂಟರ್​ನಲ್ಲಿ ಸಾವು – Kannada News | Suspect in Punjab Sarpanch Killing Shot Dead in Police Encounter

ಅಮೃತಸರ, ಜನವರಿ 07: ಮದುವೆ(Marriage) ಮನೆಗೆ ಬಂದು ಗ್ರಾಮದ ಮುಖ್ಯಸ್ಥ ಜರ್ಮಲ್ ಸಿಂಗ್ ಅವರನ್ನು ಗುಂಡಿಕ್ಕಿ ಹತ್ಯೆಗೈದಿದ್ದ ಗ್ಯಾಂಗ್​ಸ್ಟರ್ ಹರ್ನೂರ್​ ಸಿಂಗ್​ನನ್ನು ಪೊಲೀಸರು ಎನ್​ಕೌಂಟರ್​ನಲ್ಲಿ ಹತ್ಯೆ ಮಾಡಿರುವ ಘಟನೆ ಪಂಜಾಬ್​ನ ತರಣ್ ತರಣ್ ಜಿಲ್ಲೆಯಲ್ಲಿ ಮಂಗಳವಾರ ನಡೆದಿದೆ. ಬೈಕ್​​ನಲ್ಲಿ ಹೋಗುತ್ತಿದ್ದಾಗ ಪೊಲೀಸರು ನಿಲ್ಲಿಸಲು ಸೂಚಿಸಿದ್ದರು, ಆದರೆ ಆತ ತಕ್ಷಣವೇ ಪೊಲೀಸರ ಮೇಲೆ ಗುಂಡು ಹಾರಿಸಲು ಶುರು ಮಾಡಿದ್ದ, ಒಂದು ಗುಂಡು ಪೊಲೀಸ್ ಅಧಿಕಾರಿಗೆ ತಗುಲಿತ್ತು.

ಆದರೆ ಬುಲೆಟ್ ಪ್ರೂಫ್ ಜಾಕೆಟ್ ಹಾಕಿದ್ದ ಪರಿಣಾಮ ಏನೂ ಆಗಲಿಲ್ಲ. ನಂತರ ಪೊಲೀಸರು ಆತನ ಮೇಲೆ ಗುಂಡು ಹಾರಿಸಿದ್ದರು. ಈ ಸಮಯದಲ್ಲಿ ಹರ್ನೂರ್ ಸಿಂಗ್ ಗಾಯಗೊಂಡಿದ್ದ. ಆತನನ್ನು ಹತ್ತಿರದ ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಅಷ್ಟರೊಳಗೆ ಆತ ಮೃತಪಟ್ಟಿದ್ದ.

ಹರ್ನೂರ್ ಸಿಂಗ್ ಗ್ಯಾಂಗ್​ಸ್ಟರ್ ಅಫ್ರಿದಿ ಮತ್ತು ಪ್ರಭಾ ದಾಸುವಾಲ್ ಸಹಚರನಾಗಿದ್ದ, ವಾಲ್ಟೋಹಾದ ಮುಖ್ಯಸ್ಥ ಜರ್ಮಲ್ ಸಿಂಗ್ ಅವರ ಹತ್ಯೆಯ ಹಿಂದಿನ ಪಿತೂರಿಯಲ್ಲಿ ಭಾಗಿಯಾಗಿದ್ದ. ಭಾನುವಾರ ಅಮೃತಸರದ ಮದುವೆ ಸ್ಥಳದಲ್ಲಿ ದುಷ್ಕರ್ಮಿಗಳ ಗುಂಪೊಂದು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿತ್ತು. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ದಾಸುವಾಲ್ ಮತ್ತು ಇತರ ಕೆಲವರು ಸಿಂಗ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದರು.

ಮತ್ತಷ್ಟು ಓದಿ: ಮಹಾರಾಷ್ಟ್ರ: ಸಾಹಿತ್ಯ ಸಮ್ಮೇಳನದ ಕಾರ್ಯಾಧ್ಯಕ್ಷ ವಿನೋದ್ ಕುಲಕರ್ಣಿ ಮೇಲೆ ಅಮಾನುಷ ಹಲ್ಲೆ

ಜರ್ಮಲ್ ಸಿಂಗ್ ಹತ್ಯೆ ಪಂಜಾಬ್​ನಲ್ಲಿ ರಾಜಕೀಯ ಬಿರುಗಾಳಿಯನ್ನೇ ಎಬ್ಬಿಸಿದೆ. ಕಾನೂನು ಮತ್ತು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ ಎಂದು ಹೇಳಿರುವ ಬಿಜೆಪಿ ಮುಖ್ಯಮಂತ್ರಿ ಭಗವಂತ್ ಮಾನ್ ರಾಜೀನಾಮೆಗೆ ಒತ್ತಾಯಿಸಿದೆ.ಜರ್ಮಲ್ ಸಿಂಗ್ ಮದುವೆ ಸಮಾರಂಭವೊಂದರಲ್ಲಿ ಪಾಲ್ಗೊಂಡಿದ್ದರು, ವೇದಿಕೆಯ ಕೆಳಗೆ ಕುರ್ಚಿಯಲ್ಲಿ ಕುಳಿತಿದ್ದರು. ಅಷ್ಟರೊಳಗೆ ಮಾಸ್ಕ್​ ಧರಿಸದೆ ಸಾಮಾನ್ಯರಂತೆ ಇಬ್ಬರು ವ್ಯಕ್ತಿಗಳು ಅಲ್ಲಿಗೆ ಬಂದಿದ್ದರು.

ಅದರಲ್ಲಿ ಒಬ್ಬ ಪಿಸ್ತೂಲ್​ನಿಂದ ಏಕಾಏಕಿ ಜರ್ಮಲ್ ಮೇಲೆ ಗುಂಡು ಹಾರಿಸಿದ್ದಾನೆ. ಸಿಂಗ್ ಸ್ಥಳದಲ್ಲೇ ಕುಸಿದು ಬಿದ್ದಿದ್ದಾರೆ. ಜನರು ದಿಗ್ಭ್ರಮೆಗೊಂಡು ನೋಡುತ್ತಿರುವಾಗಲೇ ದಾಳಿಕೋರರು ಸುಲಭವಾಗಿ ತಪ್ಪಿಸಿಕೊಂಡಿದ್ದರು. ಕಳೆದ ಭಾನುವಾರ ಮಧ್ಯಾಹ್ನ 2.30ರ ಸುಮಾರಿಗೆ ವಾಲ್ಟೋಹಾ ಗ್ರಾಮದ ಮೇರಿಗೋಲ್ಡ್ ಮ್ಯಾರೇಜ್ ಪ್ಯಾಲೇಸ್‌ನಲ್ಲಿ ಈ ಘಟನೆ ನಡೆದಿದೆ.ಗುಂಡಿನ ದಾಳಿ ನಡೆದ ಕೂಡಲೇ ಪೊಲೀಸ್ ತಂಡಗಳು ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿದವು. ಖೇಮ್ಕರನ್ ಕ್ಷೇತ್ರದ ಶಾಸಕ ಸರ್ವಾನ್ ಸಿಂಗ್ ಧುನ್, ಘಟನೆ ನಡೆದಾಗ ನಾನು ಸಮಾರಂಭದಲ್ಲಿದ್ದೆ ಎಂದು ಹೇಳಿದ್ದಾರೆ.

ನಾವು ಸಮಾರಂಭದಲ್ಲಿ ಒಟ್ಟಿಗೆ ಇದ್ದೆವು ಮತ್ತು ಚಹಾ ಕುಡಿದಿದ್ದೆವು. ಅದಾದ ನಂತರ, ನಾನು ಊಟ ಮಾಡಲು ಸಭಾಂಗಣದ ಒಳಗೆ ಹೋದೆ. ಜರ್ಮಲ್ ಸಿಂಗ್ ಇತರ ಅತಿಥಿಗಳೊಂದಿಗೆ ಹೊರಗೆ ಕುಳಿತಿದ್ದರು, ಆಗ ಗುಂಡಿನ ಸದ್ದು ಕೇಳಿಸಿತ್ತು ಎಂದು ಸರ್ವಾನ್ ತಿಳಿಸಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On – 7:23 am, Wed, 7 January 26

Source link

Chikkamagaluru: ಭದ್ರಾ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹುಲಿ ಕಳೇಬರ ಪತ್ತೆ – Kannada News | Eight Year Old Male Tiger Found Dead in Bhadra Tiger Reserve, Chikkamagaluru

ಚಿಕ್ಕಮಗಳೂರು, ಜನವರಿ 07: ಜಿಲ್ಲೆಯ ಭದ್ರಾ ಹುಲಿ ಸಂರಕ್ಷಿತಾರಣ್ಯ ಪ್ರದೇಶದ ಹೆಬ್ಬೆ ವಲಯ ಅರಣ್ಯದ ಗಂಗೆ ಗಿರಿಯಲ್ಲಿ ಹುಲಿಯ ಕಳೇಬರ ಪತ್ತೆಯಾಗಿದೆ. ಹುಲಿ ಗಣತಿ ವೇಳೆ 8 ವರ್ಷದ ಗಂಡು ಹುಲಿ ಮೃತಪಟ್ಟಿರೋದು ಬೆಳಕಿಗೆ ಬಂದಿದೆ. ಹುಲಿಗಳ ನಡುವೆ ಕಾದಾಟದ ವೇಳೆ ನಿತ್ರಾಣಗೊಂಡು ಸಾವಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದ್ದು, 5-6 ದಿನಗಳ ಹಿಂದೆ ಮೃತಪಟ್ಟ ವ್ಯಾಘ್ರ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿಸದೆ. ಸ್ಥಳಕ್ಕೆ ವನ್ಯಜೀವಿ ವಿಭಾಗದ ಅಧಿಕಾರಿಗಳು, ಪಶುವೈದ್ಯರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿ ಕಳೇಬರವನ್ನು ಅಧಿಕಾರಿಗಳು ಸುಟ್ಟಿದ್ದಾರೆ.

ನಾನಾ ಕಾರಣಗಳಿಂದಾಗಿ ರಾಜ್ಯದಲ್ಲಿ ಹುಲಿಗಳ ಸಾವು ಮೇಲಿಂದ ಮೇಲೆ ನಡೆಯುತ್ತಲೇ ಇವೆ. ದುಷ್ಟರ ಅಟ್ಟಹಾಸಕ್ಕೋ, ಅನಾರೋಗ್ಯ ಕಾರಣದಿಂದಲೋ ವ್ಯಾಘ್ರಗಳ ಸರಣಿ ಸಾವು ಮುಂದುವರಿದಿದೆ. ಇತ್ತೀಚೆಗಷ್ಟೇ ಮೈಸೂರು ಮೃಗಾಲಯದಲ್ಲಿ ತಾಯಮ್ಮ ಎಂಬ ಹುಲಿ ಮೃತಪಟ್ಟಿತ್ತು. ಅನಾರೋಗ್ಯದಿಂದ ಬಳಲುತ್ತಿದ್ದ 4 ವರ್ಷದ 10 ತಿಂಗಳ ವ್ಯಾಘ್ರ, ಚಿಕಿತ್ಸೆ ಫಲಕಾರಿಯಾಗದೆ ಪ್ರಾಣ ಬಿಟ್ಟಿತ್ತು, 2021ರಂದು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಿಂದ ರಕ್ಷಣೆ ಮಾಡಿದ್ದ ಈ ಹುಲಿಯನ್ನು ಮೈಸೂರು ಮೃಗಾಲಯಕ್ಕೆ ತಂದು ಆರೈಕೆ ಮಾಡಲಾಗಿತ್ತು. ಆದರೆ ರಕ್ತ ಕಣದ ಸಮಸ್ಯೆಯಿಂದ ಬಳಲುತ್ತಿದ್ದ ಹುಲಿ ಆಹಾರ ತ್ಯಜಿಸಿದ್ದ ಕಾರಣ ಪ್ರಾಣ ಕಳೆದುಕೊಂಡಿತ್ತು.

ಇದನ್ನೂ ಓದಿ: ಹುಲಿ ಕಾಟದಿಂದ ಸದ್ಯಕ್ಕಿಲ್ಲ ಮುಕ್ತಿ; ವ್ಯಾಘ್ರಗಳನ್ನು ಹಿಡಿಯಲಾಗದೆ ತಲೆ ಮೇಲೆ ಕೈ ಹೊತ್ತು ಕುಳಿತ ಅರಣ್ಯ ಇಲಾಖೆ

ಮತ್ತೊಂದೆಡೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲೇ ಬಲೆಗೆ ಸಿಲುಕಿ 5 ವರ್ಷದ ಹುಲಿ ಮೃತಪಟ್ಟಿರೋದು ರಾಜ್ಯವ್ಯಾಪಿ ಸುದ್ದಿಯಾಗಿತ್ತು. ದುಬಾರೆ ಅರಣ್ಯದಿಂದ 5 ಕಿ.ಮೀ. ದೂರದಲ್ಲಿರುವ ಎಸ್ಟೇಟ್‌ನಲ್ಲಿ ಮೃತದೇಹವನ್ನು ಸ್ಥಳೀಯರು ಗಮನಿಸಿ ಮಾಹಿತಿ ನೀಡಿದ್ದರು. ಹುಲಿ ದೇಹದ ಮೇಲಿನ ಗಾಯಗಳನ್ನು ಗಮನಿಸಿದಾಗ ಎರಡು ದಿನಗಳ ಹಿಂದೆ ಇದು ಬಲೆಗೆ ಬಿದ್ದಿತ್ತು ಎನ್ನುವುದನ್ನು ಅಧಿಕಾರಿಗಳು ದೃಢಪಡಿಸಿದ್ದರು. ಒಟ್ಟಿನಲ್ಲಿ ಅರಣ್ಯ ಇಲಾಖೆಯ ಸಾಕಷ್ಟು ಮುಂಜಾಗೃತೆಯ ನಡುವೆಯೂ ಹುಲಿಗಳ ಸಾವಿಗೆ ಮಾತ್ರ ಬ್ರೇಕ್​​ ಬಿದ್ದಿಲ್ಲ. ಹುಲಿಗಳ ಸಂಖ್ಯೆಯಲ್ಲಿ ದೇಶದಲ್ಲೇ ಎರಡನೇ ಸ್ಥಾನದಲ್ಲಿವ ಕರ್ನಾಟಕದಲ್ಲಿ ಮೇಲಿಂದ ಮೇಲ ವರದಿಯಾಗುತ್ತಿರುವ ವ್ಯಾಘ್ರಗಳ ಸಾವು ಪ್ರಾಣಿ ಪ್ರಿಯರಲ್ಲಿ ನಿಜಕ್ಕೂ ಆತಂ ಸೃಷ್ಟಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಅಪ್ರಾಪ್ತೆ ಜೊತೆ ಕಾರ್ತಿಕ್ ಆರ್ಯನ್ ಡೇಟಿಂಗ್? ಇಬ್ಬರ ಮಧ್ಯೆ 18 ವರ್ಷ ವಯಸ್ಸಿನ ಅಂತರ – Kannada News | Kartik Aaryan Dating Underage Girl? Age Gap Controversy Explodes

ಡೇಟಿಂಗ್ ವಿಷಯದಲ್ಲಿ ಕಾರ್ತಿಕ್ ಆರ್ಯನ್ (Karthik Aryan) ಆಗಾಗ ಸುದ್ದಿಯಲ್ಲಿ ಇರುತ್ತಾರೆ. ಈ ಮೊದಲು ಅವರು ಅನನ್ಯಾ ಪಾಂಡೆ ಜೊತೆ ಸುತ್ತಿದ್ದರು ಎನ್ನಲಾಗಿತ್ತು. ಸಾರಾ ಅಲಿ ಖಾನ್ ಕೂಡ ಆರ್ಯನ್ ಜೊತೆ ಡೇಟಿಂಗ್ ನಡೆಸಿದ್ದರು. ಕನ್ನಡದ ಶ್ರೀಲೀಲಾ ಕೂಡ ಕೆಲ ಸಮಯ ಕಾರ್ತಿಕ್ ಜೊತೆ ಕಾಣಿಸಿಕೊಂಡಿದ್ದರು. ಇದಕ್ಕೆ ಕಾರಣ ಸಿನಿಮಾ ಎಂಬುದು ಬಳಿಕ ಸ್ಪಷ್ಟವಾಯಿತು. ಈಗ ಕಾರ್ತಿಕ್ ಅವರು ಡೇಟಿಂಗ್ ಮೂಲಕ ಮತ್ತೆ ಸುದ್ದಿ ಆಗಿದ್ದಾರೆ. ಅವರು ಅಪ್ರಾಪ್ತೆ ಜೊತೆ ಸುತ್ತಾಟ ನಡೆಸಿರುವುದು ಚರ್ಚೆಗೆ ಕಾರಣ ಆಗಿದೆ.

ಕಾರ್ತಿಕ್ ಆರ್ಯನ್ ಇತ್ತೀಚೆಗೆ ಗೋವಾ ತೆರಳಿದ್ದರು. ಈ ವೇಳೆ ಬೀಚ್ ಸಮೀಪ ಇರುವ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದರು. ಇದರಲ್ಲಿ ಹುಡುಗಿ ಕೂಡ ಇದ್ದರು. ಇದು ಡೇಟಿಂಗ್ ವದಂತಿ ಹಬ್ಬಿಸಿತ್ತು. ಆದರೆ, ಆ ಹುಡುಗಿ ಯಾರು ಎಂಬುದು ಅಭಿಮಾನಿಗಳಿಗೆ ಸ್ಪಷ್ಟವಾಗಿರಲಿಲ್ಲ. ಈಗ ಅದು ಗೊತ್ತಾಗಿದೆ. ಅವರ ಹೆಸರು ಕರೀನಾ ಕುಬಿಲಿಯುಟೆ. ಇವರಿಗೆ ಇನ್ನೂ 18 ವರ್ಷ ತುಂಬಿಲ್ಲ!

ಕಾರ್ತಿಕ್ ಆರ್ಯನ್ ಫೋಟೋದಲ್ಲಿರೋ ಹುಡುಗಿ ಯಾರು ಎಂಬ ಹುಡುಕಾಟದಲ್ಲಿ ಅಭಿಮಾನಿಗಳಿಕೆ ಕರೀನಾ ಅವರ ಖಾತೆ ಕಂಡಿದೆ. ಅದರಲ್ಲಿ ಕೆಲ ಗೋವಾ ಫೋಟೋಗಳು ಇದ್ದವು. ಕಾರ್ತಿಕ್ ಪೋಸ್ಟ್ ಮಾಡಿದ ಜಾಗದಲ್ಲೇ ಕರೀನಾ ಕೂಡ ಫೋಟೋ ತೆಗೆದುಕೊಂಡು ಪೋಸ್ಟ್ ಮಾಡಿದ್ದರು. ಹೀಗಾಗಿ ಇಬ್ಬರ ಮಧ್ಯೆ ಲಿಂಕ್ ಮಾಡಲಾಗಿದೆ. ಈ ಮೊದಲು ಕರೀನಾ ಅವರು ಕಾರ್ತಿಕ್​​ನ ಇನ್​​ಸ್ಟಾಗ್ರಾಮ್​​ನಲ್ಲಿ ಫಾಲೋ ಮಾಡುತ್ತಿದ್ದರಂತೆ. ಫೋಟೋ ವೈರಲ್ ಆಗುತ್ತಿದ್ದಂತೆ ಅವರು ಅನ್​​ಫಾಲೋ ಮಾಡಿದ್ದಾರೆ ಎನ್ನಲಾಗಿದೆ.

ಇನ್ನು, ಈ ಬಗ್ಗೆ ಕರೀನಾ ಸ್ಪಷ್ಟನೆ ನೀಡಿದ್ದಾರೆ. ಇನ್​​ಸ್ಟಾದಲ್ಲಿ ಸ್ಟೇಟಸ್ ಹಾಕಿರೋ ಅವರು, ‘ನಾನು ಅವರ ಗರ್ಲ್​​ಫ್ರೆಂಡ್ ಅಲ್ಲ’ ಎಂದು ಹೇಳಿದ್ದಾರೆ. ಆದರೆ, ಇದನ್ನು ಫ್ಯಾನ್ಸ್ ಒಪ್ಪಿಲ್ಲ. ‘ಬಾಲಕಿಗೆ 18 ವರ್ಷ ತುಂಬಿದ ಮೇಲೆ ಈ ವಿಷಯವನ್ನು ಕಾರ್ತಿಕ್ ಬಹಿರಂಗಪಡಿಸಬಹುದು’ ಎಂದು ಕೆಲವರು ಕಾಲೆಳೆದಿದ್ದಾರೆ.

ಇದನ್ನೂ ಓದಿ: ಕಾರ್ತಿಕ್ ಆರ್ಯನ್ ಮನೆಯಲ್ಲಿ ಹಬ್ಬ ಆಚರಿಸಿದ ಶ್ರೀಲೀಲಾ: ಹೆಚ್ಚಿತು ಅನುಮಾನ

ಕರೀನಾ ಅವರು ಇಂಗ್ಲೆಂಡ್​​ನಲ್ಲಿ ಬೆಳೆದವರು. ಅವರು 2008ರ ಜೂನ್ 16ರಂದು ಜನಿಸಿದರು. ಅಂದರೆ ಈ ವರ್ಷ ಜೂನ್​​ಗೆ ಅವರಿಗೆ 18 ವರ್ಷ ತುಂಬಲಿದೆ. ಕಾರ್ತಿಕ್ ವಯಸ್ಸು 35 ವರ್ಷ. ಹೀಗಾಗಿ ಇಬ್ಬರ ಮಧ್ಯೆ ಬರೋಬ್ಬರಿ 18 ವರ್ಷ ವಯಸ್ಸಿನ ಅಂತರ ಇದೆ. ಅವರು ಬ್ರಿಟನ್ ಪ್ರಜೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

AUS vs ENG: ಕುತೂಹಲಘಟ್ಟದತ್ತ ಆ್ಯಶಸ್ ಟೆಸ್ಟ್: ಗೆಲ್ಲೋದು ಯಾರು?

ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 5ನೇ ಪಂದ್ಯವು ಕುತೂಹಲ ಘಟ್ಟದತ್ತ ಸಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಜೋ ರೂಟ್ 160 ರನ್​​ಗಳ ಭರ್ಜರಿ ಇನಿಂಗ್ಸ್ ಆಡಿದರು. ಈ ಶತಕದ ನೆರವಿನೊಂದಿಗೆ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್​​ನಲ್ಲಿ 384 ರನ್​ ಪೇರಿಸಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ಪರ ಆರಂಭಿಕ ದಾಂಡಿಗ ಟ್ರಾವಿಸ್ ಹೆಡ್ 163 ರನ್​​ಗಳ ಇನಿಂಗ್ಸ್ ಆಡಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸ್ಟೀವ್ ಸ್ಮಿತ್ 138 ರನ್​​​ ಕಲೆಹಾಕಿದರು. ಇಬ್ಬರು ದಾಂಡಿಗರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​​ನಲ್ಲಿ 567 ರನ್ ಕಲೆಹಾಕಿದೆ.

183 ರನ್​​ಗಳ ಮುನ್ನಡೆ:

ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​​ನಲ್ಲಿ ಬರೋಬ್ಬರಿ 183 ರನ್​​ಗಳ ಮುನ್ನಡೆ ಸಾಧಿಸಿದೆ. ಅದರಂತೆ ಇದೀಗ ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್ ತಂಡವು 183 ರನ್​​ಗಳನ್ನು ಕಲೆಹಾಕಿದ ಬಳಿಕವಷ್ಟೇ ಎರಡನೇ ಇನಿಂಗ್ಸ್​ನ ರನ್ ಪರಿಗಣನೆಗೆ ಬರಲಿದೆ.

ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲಬೇಕಿದ್ದರೆ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಲ್ಲೇ ಬೃಹತ್ ಮೊತ್ತ ಪೇರಿಸಬೇಕು. ಅತ್ತ ಸಾಧಾರಣ ಮೊತ್ತ ಕಲೆಹಾಕಿದರೆ ಆಸ್ಟ್ರೇಲಿಯಾ ತಂಡ ಚೇಸ್ ಮಾಡುವುದು ಖಚಿತ.

ಅಂದರೆ ಇಂಗ್ಲೆಂಡ್ ತಂಡವು ಕೊನೆಯ ದಿನದಾಟದಲ್ಲಿ ಆಸ್ಟ್ರೇಲಿಯಾಗೆ ಕನಿಷ್ಠ 350 ರನ್​​ಗಳ ಗುರಿಯನ್ನಾದರೂ ನೀಡಲೇಬೇಕು. ಅದಕ್ಕಿಂತ ಕಡಿಮೆ ಮೊತ್ತವನ್ನು ಅಂತಿಮ ದಿನದಾಟದಲ್ಲಿ ಆಸ್ಟ್ರೇಲಿಯಾ ಚೇಸ್ ಮಾಡುವುದು ಖಚಿತ. ಏಕೆಂದರೆ ಆಸ್ಟ್ರೇಲಿಯಾ ತಂಡವು ಈಗಾಗಲೇ 3-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.

ಹೀಗಾಗಿ ಈ ಪಂದ್ಯವು ಆಸ್ಟ್ರೇಲಿಯಾ ಪಾಲಿಗೆ ಔಪಚಾರಿಕ. ಅತ್ತ ಇಂಗ್ಲೆಂಡ್ ತಂಡವು ಕೊನೆಯ ದಿನದಾಟದಲ್ಲಿ 350 ರನ್​ಗಳಿಗಿಂತ ಕಡಿಮೆ ಮೊತ್ತದ ಗುರಿ ನೀಡಿದರೆ ಟ್ರಾವಿಸ್ ಹೆಡ್ ಮುಂದಾಳತ್ವದಲ್ಲಿ ಆಸೀಸ್ ಪಡೆ ಚೇಸ್ ಮಾಡುವುದನ್ನು ಎದುರು ನೋಡಬಹುದು.

ಇತ್ತ ಇಂಗ್ಲೆಂಡ್ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗದೇ ಇದ್ದರೆ ನಾಲ್ಕನೇ ಮತ್ತು ಐದನೇ ದಿನದಾಟಗಳವರೆಗೆ ಬ್ಯಾಟಿಂಗ್ ಮುಂದುವರೆಸಿ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯಬೇಕು. ಅದರೊಳಗೆ ಆಂಗ್ಲರನ್ನು ಆಲೌಟ್ ಮಾಡಲು ಆಸ್ಟ್ರೇಲಿಯಾ ಬೌಲರ್​​​ಗಳು ಶತ ಪ್ರಯತ್ನ ನಡೆಸುವುದು ಖಚಿತ. ಹೀಗಾಗಿ ಐದನೇ ಟೆಸ್ಟ್ ಪಂದ್ಯವು ನಾಲ್ಕನೇ ದಿನದಾಟವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ ಎಂದರೆ ತಪ್ಪಾಗಲಾರದು.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಜೇಕ್ ವೆದರಾಲ್ಡ್​, ಮಾರ್ನಸ್ ಲ್ಯಾಬುಶೇನ್, ಉಸ್ಮಾನ್ ಖ್ವಾಜಾ, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಬ್ಯೂ ವೆಬ್‌ಸ್ಟರ್, ಮೈಕೆಲ್ ನೇಸರ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್.

ಇದನ್ನೂ ಓದಿ: IPL 2026: ಒಂದೇ ಸ್ಟೇಡಿಯಂ ಮೇಲೆ RCB ಮತ್ತು RR ಕಣ್ಣು..!

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಬ್ರೈಡನ್ ಕಾರ್ಸ್, ಮ್ಯಾಥ್ಯೂ ಪಾಟ್ಸ್, ಜೋಶ್ ಟಂಗ್.

Source link

Bengaluru Air Quality: ಬೆಂಗಳೂರಿನಲ್ಲಿ ವಾಯುಮಾಲಿನ್ಯ ಏರಿಕೆ, ಸುರಕ್ಷಿತವಾಗಿರಲು ಏನು ಮಾಡಬೇಕು? – Kannada News | Bangalore Air Pollution Crisis: Bengaluru’s air quality is getting worse, Here’s the things you should do

ಬೆಂಗಳೂರಿನಲ್ಲಿ ವಾಯುಮಾಲಿನ್ಯ ಏರಿಕೆ, ಸುರಕ್ಷಿತವಾಗಿರಲು ಏನು ಮಾಡಬೇಕು?

ಬೆಂಗಳೂರು, ಜನವರಿ 07: ಇಂದು ಬೆಂಗಳೂರಿನ ವಾಯು ಗುಣಮಟ್ಟ ಸೂಚ್ಯಂಕ (Bengaluru Air Quality) ಮಧ್ಯಮ ಮಟ್ಟದಲ್ಲಿದ್ದು, ನಗರದಲ್ಲಿನ ವಾಹನಗಳ ಹೊಗೆ, ಧೂಳು ಮತ್ತು ನಿರ್ಮಾಣ ಚಟುವಟಿಕೆಗಳಿಂದ ವಾಯುಮಾಲಿನ್ಯ ಹೆಚ್ಚಾಗಿರುವುದು ಗಮನಕ್ಕೆ ಬರುತ್ತಿದೆ. ಇದರಿಂದ ಮಕ್ಕಳಿಗೆ, ಹಿರಿಯ ನಾಗರಿಕರಿಗೆ ಹಾಗೂ ಉಸಿರಾಟ ಸಮಸ್ಯೆ ಇರುವವರಿಗೆ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಕಣ್ಣು ಕೆರಕು, ಉಸಿರಾಟದ ತೊಂದರೆ ಮತ್ತು ಅಲರ್ಜಿಗಳು ಕಾಣಿಸಿಕೊಳ್ಳಬಹುದು.

ಸುರಕ್ಷತಾ ಕ್ರಮಗಳನ್ನು ಅನುಸರಿಸಿ

ಈ ಪರಿಸ್ಥಿತಿಯಲ್ಲಿ ಸುರಕ್ಷತೆ ಅತ್ಯಂತ ಮುಖ್ಯ. ಹೊರಗೆ ಹೋಗುವಾಗ ಮಾಸ್ಕ್ ಧರಿಸುವುದು ಉತ್ತಮ. ಸಾಧ್ಯವಾದರೆ ಬೆಳಿಗ್ಗೆ ಅಥವಾ ಸಂಜೆ ಪೀಕ್ ಟ್ರಾಫಿಕ್ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು. ಮನೆಯೊಳಗೆ ಗಿಡಗಳನ್ನು ಬೆಳೆಸುವುದು, ಸಾಕಷ್ಟು ನೀರು ಕುಡಿಯುವುದು ಮತ್ತು ಸ್ವಚ್ಛತೆ ಕಾಪಾಡುವುದು ಮಾಲಿನ್ಯದ ಪರಿಣಾಮವನ್ನು ಕಡಿಮೆ ಮಾಡಲು ಸಹಾಯಕವಾಗುತ್ತದೆ.

ಕಲುಷಿತ ಗಾಳಿಗೆ ಕಾರಣವೇನು?

ಇಂದು ಬೆಂಗಳೂರಿನ AQI ಗುಣಮಟ್ಟ 172 ಇದ್ದು, PM2.5 85 ಮತ್ತು PM10 120 ಇದೆ. PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ.

ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ.ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 103 ಆಗಿದ್ದು, PM10 144ಕ್ಕೆ ಏರಿಕೆಯಾಗಿದೆ. ಈ ಕಣಗಳು ನೇರವಾಗಿ ಉಸಿರಾಟ ವ್ಯವಸ್ಥೆಗೆ ಹೊಡೆತ ನೀಡುತ್ತವೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –172
  • ಮಂಗಳೂರು-170
  • ಮೈಸೂರು – 156
  • ಬೆಳಗಾವಿ – 150
  • ಕಲಬುರ್ಗಿ – 112
  • ಶಿವಮೊಗ್ಗ – 189
  • ಬಳ್ಳಾರಿ – 209
  • ಹುಬ್ಬಳ್ಳಿ- 154
  • ಉಡುಪಿ –168
  • ವಿಜಯಪುರ –66

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಫಿನಾಲೆ ಸಮೀಪಿಸುತ್ತಿದ್ದಂತೆ ಶಾಂತಮೂರ್ತಿಯಾದ ಅಶ್ವಿನಿ; ಇದರ ಹಿಂದಿದೆ ದೊಡ್ಡ ಲೆಕ್ಕಾಚಾರ?

‘ಬಿಗ್ ಬಾಸ್ ಕನ್ನಡ ಸೀಸನ್ 12’ರ ಫಿನಾಲೆ ಸಮೀಪಿಸುತ್ತಿದ್ದಂತೆ ಅಶ್ವಿನಿ ಗೌಡ ಶಾಂತಮೂರ್ತಿ ಆಗಿದ್ದಾರೆ. ಎದುರಾಳಿಗಳ ಆಟ ಹಾಳು ಮಾಡಲು ಅಶ್ವಿನಿಗೆ ಅವಕಾಶ ನೀಡಲಾಯಿತು. ಈ ವೇಳೆ ಅವರು ಶಾಂತ ರೀತಿಯಲ್ಲಿ ವರ್ತಿಸಿದ್ದಾರೆ. ಇದನ್ನು ರಕ್ಷಿತಾ ಪ್ರಶ್ನೆ ಮಾಡಿದ್ದಾರೆ. ‘ಅದು ನನ್ನ ವ್ಯಕ್ತಿತ್ವ ಅಲ್ಲ’ ಎಂದಿದ್ದಾರೆ ಅಶ್ವಿನಿ. ‘ಮುಖವಾಡ ಬದಲಿಸುತ್ತಾರೆ’ ಎಂಬ ಅಭಿಪ್ರಾಯವನ್ನು ರಕ್ಷಿತಾ ಹೊರಹಾಕಿದ್ದಾರೆ. ಫಿನಾಲೆ ಸಮೀಪಿಸಿದ್ದರಿಂದ ಅವರು ಮಾಡಿಕೊಂಡಿರುವ ತಂತ್ರ ಇದಾಗಿರಬಹುದು ಎಂದು ಅನೇಕರು ಊಹಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತ vs ನ್ಯೂಝಿಲೆಂಡ್ ಸರಣಿಗೆ 4 ತಂಡಗಳು ಹೀಗಿವೆ – Kannada News | India vs New Zealand Squad For IND vs NZ Series

ಭಾರತ ಟಿ20 ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಕ್ಷರ್ ಪಟೇಲ್ (ಉಪನಾಯಕ), ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಹಾರ್ದಿಕ್ ಪಾಂಡ್ಯ, ಶಿವಂ ದುಬೆ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಜಸ್​ಪ್ರೀತ್ ಬುಮ್ರಾ, ಅರ್ಷದೀಪ್ ಸಿಂಗ್, ವರುಣ್ ಚಕ್ರವರ್ತಿ, ಹರ್ಷಿತ್ ರಾಣಾ, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ರಿಂಕು ಸಿಂಗ್.

Source link

ಚೀಟಿ ವ್ಯವಹಾರದಲ್ಲಿ ಕೈ ಸುಟ್ಟುಕೊಂಡವ ಮಾಡಬಾರದ್ದು ಮಾಡಲು ಹೋಗಿ ಮೈಯನ್ನೂ ಸುಟ್ಟುಕೊಂಡ! – Kannada News | Brother set himself on fire while attempting to burn down his elder brother’s house in Hoskote

ದೇವನಹಳ್ಳಿ, ಜನವರಿ 07: ಮಧ್ಯರಾತ್ರಿ ವೇಳೆ ಸಹೋದರನ ಮನೆ ಸುಡಲು ಹೋಗಿ ಆ ಬೆಂಕಿಯಲ್ಲಿ ತಾನೇ ಸುಟ್ಟು ವ್ಯಕ್ತಿಯೋರ್ವ ಆಸ್ಪತ್ರೆ ಸೇರಿರುವ ಘಟನೆ ಹೊಸಕೋಟೆ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ನಡೆದಿದೆ. ಘಟನೆಯ ದೃಶ್ಯ ಮನೆಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಗಂಭೀರ ಗಾಯಗೊಂಡಿರುವ ಮುನಿರಾಜು ಎಂಬಾತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ.

ಅಣ್ಣನ ಕುಟುಂಬವನ್ನೇ ಮುಗಿಸಲು ಸಂಚು

ಕಳೆದ 8 ವರ್ಷಗಳಿಂದ ಗ್ರಾಮದಲ್ಲಿ ಪಟಾಕಿ ಚೀಟಿ ನಡೆಸಿ ಮುನಿರಾಜು ಕೈಸುಟ್ಟುಕೊಂಡಿದ್ದ. ಚೀಟಿ ಹಾಕಿದ್ದವರು ಹಣ ವಾಪಸ್ ನೀಡುವಂತೆ ಗಲಾಟೆ ಮಾಡಿದ ಕಾರಣ ಸ್ವಲ್ಪ ಜಮೀನು ಮಾರಿ ಕುಟುಂಬಸ್ಥರು ಹಣ ನೀಡಿದ್ದರು. ಆದ್ರೆ ಆ ಹಣ ಸಾಕಾಗದ ಕಾರಣ ಉಳಿದ ಜಮೀನು ಸಹ ಮಾರಾಟ ಮಾಡಿ ಹೆಚ್ಚಿನ ನೀಡುವಂತೆ ಆರೋಪಿ ಮುನಿರಾಜು ಕೇಳಿದ್ದ. ಆದ್ರೆ ಇರೋ ಅಲ್ಪ ಸ್ವಲ್ಪ ಜಮೀನು ಮಾರಲ್ಲ ಎಂದು ಅಣ್ಣ ಸ್ಪಷ್ಟವಾಗಿ ಹೇಳಿದ್ದ. ಹೀಗಾಗಿ ಸಹೋದರ ರಾಮಕೃಷ್ಣ ಕುಟುಂಬವನ್ನೇ ಮುಗಿಸುವ ಸಂಚುಮಾಡಿದ್ದ ಮುನಿರಾಜು, ಮನೆಯ ಬಾಗಿಲಿನ ಚಿಲಕ ಹಾಕಿ ನಂತರ ರೂಂನಿಂದ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ.

ಇದನ್ನೂ ಓದಿ: ಸಂಪ್​​ನಲ್ಲಿ ತಾಯಿ-ಮಕ್ಕಳ ಶವ ಪತ್ತೆ; ನಿಗೂಢ ಸಾವಿಗೆ ಕಾರಣ ಏನು?

ಆದ್ರೆ ಅಣ್ಣನ ಕುಟುಂಬವನ್ನೇ ನಿರ್ನಾಮ ಮಾಡಲು ಹೋದ ಮುನಿರಾಜುವಿಗೆ ದೇವರು ಅಲ್ಲೇ ಶಿಕ್ಷೆ ಕೊಟ್ಟಿದ್ದಾನೆ. ಬೆಂಕಿ ಹಚ್ಚುವ ವೇಳೆ ಈತನ ಕೈನಲ್ಲಿ ಪೆಟ್ರೋಲ್​​ ಡಬ್ಬ ಇದ್ದ ಕಾರಣ ಏಕಾಏಕಿ ಹೊತ್ತಿಕೊಂಡ ಬೆಂಕಿ ಈತನನ್ನೇ ಸುಟ್ಟಿದೆ.
ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆ ಕಾಪಾಡಿ ಕಾಪಾಡಿ ಅಂತ ಮುನಿರಾಜು ಕಿರುಚಾಡಿದ್ದು, ಕೂಡಲೇ ಅಕ್ಕಪಕ್ಕದ ಮನೆಯವರು ಸಹಾಯಕ್ಕೆ ಧಾವಿಸಿದ್ದಾರೆ. ಗಾಯಾಳುವಿಗೆ ಹೊಸಕೋಟೆ ಆಸ್ವತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದ್ದು, ಈ ಬಗ್ಗೆ ತಿರುಮಲಶೆಟ್ಟಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

‘ಅಮೃತಧಾರೆ’; ಮಿಂಚು ಕೂಡ ಗೌತಮ್ ಮಗಳು ಅನ್ನೋದು ಗೊತ್ತಾಗಿ ಹೋಯ್ತು – Kannada News | Amruthadhare: Gautam Bhoomika Reunion and Daughter Twist Revealed! Kannada Serial Updates

‘ಅಮೃತಧಾರೆ’ ಧಾರಾವಾಹಿ ನಾನಾ ಟ್ವಿಸ್ಟ್​​ಗಳನ್ನು ಪಡೆದು ಸಾಗುತ್ತಿದೆ. ಈಗ ಧಾರಾವಾಹಿಯಲ್ಲಿ ಪ್ರಮುಖ ಬೆಳವಣಿಗೆಗಳು ನಡೆದಿವೆ. ಖದೀಮರಿಗೆ ಮಾರಿ ಹಬ್ಬ ಉಂಟಾಗೋದು ಫಿಕ್ಸ್ ಎನ್ನಲಾಗುತ್ತಿದೆ. ಇನ್ನು, ಮಗಳನ್ನು ಹುಡುಕುವ ಟಾಸ್ಕ್ ಕೂಡ ಆರಂಭ ಆಗಲಿದೆ. ಇದರ ಮಧ್ಯೆ ಮಿಂಚು ಕೂಡ ಗೌತಮ್ ಮಗಳು ಅನ್ನೋದು ವೀಕ್ಷಕರಿಗೆ ಗೊತ್ತಾಗಿದೆ.

ಗೌತಮ್ ಹಾಗೂ ಭೂಮಿಕಾ ಇಷ್ಟು ದಿನ ಬೇರೆ ಆಗಿದ್ದರು. ಈ ಕಥೆ ತುಂಬಾ ದಿನಗಳಿಂದ ಸಾಗುತ್ತಾ ಇತ್ತು. ಆದರೆ, ಈಗ ಅದು ಬದಲಾಗಿದೆ. ಇಬ್ಬರೂ ಹತ್ತಿರ ಆಗಿದ್ದಾರೆ. ಇವರಿಬ್ಬರು ಪತಿ-ಪತ್ನಿ ಅನ್ನೋದು ಮಕ್ಕಳಿಗೂ ಗೊತ್ತಾಗಿದೆ. ‘ನೀವಿಬ್ಬರೂ ತಂದೆ ತಾಯಿ ಅನ್ನೋದು ನಮಗೆ ಗೊತ್ತಿತ್ತು’ ಎಂಬ ಅರ್ಥದಲ್ಲಿ ಇಬ್ಬರೂ ಮಾತನಾಡಿದ್ದಾರೆ.

ಈಗ ಮಗಳನ್ನು ಹುಡುಕುವ ಪಯಣದಲ್ಲಿ ಗೌತಮ್ ಹಾಗೂ ಭೂಮಿಕಾ ಒಂದಾಗಿದ್ದಾರೆ. ಗೌತಮ್ ಹೆಣ್ಣು ಮಗುವನ್ನು ದತ್ತು ಪಡೆದಿದ್ದಾನೆ. ಅದುವೇ ಅವರಿಬ್ಬರ ಮಗಳಾಗಿರುವ ಎಲ್ಲಾ ಸಾಧ್ಯತೆ ಇದೆ ಎಂಬುದು ಪ್ರೇಕ್ಷಕರ ಊಹೆ ಆಗಿತ್ತು. ಅದು ನಿಜವಾಗಿದೆ. ‘ಟ್ವಿನ್ ಆದರೆ, ಒಬ್ಬರಿಗೆ ಆಗಿದ್ದೆ ಇನ್ನೊಬ್ಬರಿಗೂ ಆಗುತ್ತದೆ ಎಂದು ಆಕಾಶ್ ಬಳಿ ಹೇಳಿದಳು ಮಿಂಚು. ಆ ಸಮಯಕ್ಕೆ ಇಬ್ಬರಿಗೂ ಒಟ್ಟಿಗೆ ಸೀನು ಬಂದಿದೆ. ಇವರು ಒಂದೇ ಮಕ್ಕಳ ತಾಯಿ ಅನ್ನೋದು ಇದರಿಂದ ಗೊತ್ತಾಗಿದೆ.

ಮಲ್ಲಿಗೆ ಮತ್ತೆ ಲವ್ ಮಾಡಿಸಿ, ಅವಳ ಹಾರ್ಟ್​​ನ ಬ್ರೇಕ್ ಮಾಡೋದು ಜಯದೇವ್ ಉದ್ದೇಶ. ಆತನ ಹಿಂದೆ ಒಬ್ಬನ ಬಿಟ್ಟಿದ್ದಾರೆ. ಆದರೆ, ಫೇಕ್ ಬಾಯ್​ಫ್ರೆಂಡ್​ಗೆ ಈಗ ನಿಜವಾಗಲೂ ಪ್ರೀತಿ ಆದಂತೆ ಇದೆ. ಹೀಗಾಗಿ, ಕಥೆಯಲ್ಲಿ ಇದು ದೊಡ್ಡ ಟ್ವಿಸ್ಟ್ ತರಬಹುದು.

ಇದನ್ನೂ ಓದಿ: ಶಾಕ್​ನಿಂದ ಭಾಗ್ಯಾಳಿಗೆ ಬಂತು ಮಾತು; ‘ಅಮೃತಧಾರೆ’ ಧಾರಾವಾಹಿಗೆ ದೊಡ್ಡ ಟ್ವಿಸ್ಟ್

ಇನ್ನು ಗೌತಮ್ ಮಲತಾಯಿ ಶಕುಂತಲಾ ಜಯದೇವ್ ಮನೆಯಲ್ಲಿ ಉಳಿದುಕೊಳ್ಳುತ್ತಿಲ್ಲ. ಆಕೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ. ಈಗಾಗಳೇ ಆಕೆಗೆ ಗೌತಮ್ ತಾಯಿಯಿಂದ ಎಚ್ಚರಿಕೆ ಬಂದಿದೆ. ‘ಯಾವಾಗ ಗೌತಮ್ ಹಾಗೂ ಭೂಮಿಕಾ ಒಂದಾಗುತ್ತಾಳೋ ಆಗ ನಿನ್ನ ಅವನತಿ ಶುರು’ ಎಂದು ಎಚ್ಚರಿಕೆ ನೀಡಿದ್ದಾಳೆ. ಈಗ ಇಬ್ಬರೂ ಒಂದಾಗಿರೋದು ಅಭಿಮಾನಿಗಳ ಖುಷಿಗೆ ಕಾರಣ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ರಾಮಲೀಲಾ ಮೈದಾನದ ಮಸೀದಿ ಬಳಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ವೇಳೆ ಘರ್ಷಣೆ – Kannada News | Tensions Flare During Demolition Drive Near Delhi Mosque

ನವದೆಹಲಿ, ಜನವರಿ 07: ದೆಹಲಿಯ ರಾಮಲೀಲಾ ಮೈದಾನದ ಮಸೀದಿ ಬಳಿ ಅಕ್ರಮ ಕಟ್ಟಡ ತೆರವು ಕಾರ್ಯಾಚರಣೆ ಹಿಂಸಾತ್ಮಕವಾಗಿ ಮಾರ್ಪಟ್ಟಿದ್ದು, ಐವರು ಪೊಲೀಸರು ಗಾಯಗೊಂಡಿದ್ದಾರೆ. ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ತೆರವು ಕಾರ್ಯಾಚರಣೆಯನ್ನು ಪ್ರಾರಂಭಿಸಿತ್ತು. ಫೈಜ್-ಎ-ಇಲಾಹಿ ದರ್ಗಾದ ಹೊರಗೆ ಅಕ್ರಮವಾಗಿ ಕಟ್ಟಿರುವ ಬ್ಯಾಂಕ್ವೆಟ್ ಹಾಲ್ ಮತ್ತು ಖಾಸಗಿ ಆರೋಗ್ಯ ಕೇಂದ್ರವನ್ನು ನೆಲಸಮ ಮಾಡಲಾಯಿತು. ಬೆಳಗ್ಗೆ 8 ಗಂಟೆಗೆ ನೆಲಸಮ ಕಾರ್ಯ ಆರಂಭವಾಗಬೇಕಿತ್ತು, ಆದರೆ ಬೆಳಗಿನ ಜಾವ 1.30 ರ ಸುಮಾರಿಗೆ ಇದನ್ನು ಆರಂಭಿಸಲಾಯಿತು.

ನ್ಯಾಯಾಲಯದ ನಿರ್ದೇಶನಗಳಿಗೆ ಅನುಸಾರವಾಗಿ ಮತ್ತು ಕಟ್ಟುನಿಟ್ಟಾದ ಕಾನೂನು ಮತ್ತು ಸುವ್ಯವಸ್ಥೆ ಅಡಿಯಲ್ಲಿ ಈ ಕಾರ್ಯಾಚರಣೆಯನ್ನು ನಡೆಸಲಾಯಿತು ಎಂದು ಜಂಟಿ ಪೊಲೀಸ್ ಆಯುಕ್ತ (ಕೇಂದ್ರ ವಲಯ) ಮಧುರ್ ವರ್ಮಾ ಹೇಳಿದರು. ಪ್ರದೇಶವನ್ನು ಒಂಬತ್ತು ವಲಯಗಳಾಗಿ ವಿಂಗಡಿಸಲಾಗಿದೆ, ಪ್ರತಿಯೊಂದನ್ನು ಹಿರಿಯ ಅಧಿಕಾರಿಯೊಬ್ಬರು ಮೇಲ್ವಿಚಾರಣೆ ಮಾಡುತ್ತಾರೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version