ಇತ್ತ ಅಧ್ಯಕ್ಷರ ಸೆರೆ, ಅತ್ತ ವೆನೆಜುವೆಲಾ ಮಾರುಕಟ್ಟೆ ಹಿಗ್ಗು; ಕುಸಿಯಬೇಕಿದ್ದ ಷೇರುಪೇಟೆ ಹಿರಿಹಿರಿ ಹಿಗ್ಗುತ್ತಿರುವುದೇಕೆ? – Kannada News | Venezuela stock market rise 17pc in one day after US captures president Nicolas Maduro
ನ್ಯೂಯಾರ್ಕ್, ಜನವರಿ 6: ವೆನೆಜುವೆಲಾ ಅಧ್ಯಕ್ಷ ನಿಕೋಲಾಸ್ ಮೆಡುರೊರನ್ನು (Nicolas Maduro) ಅಮೆರಿಕ ಸೆರೆ ಹಿಡಿದ ಬೆನ್ನಲ್ಲೇ ಆ ದೇಶದ ಮಾರುಕಟ್ಟೆ ಜಿಗಿಜಿಗಿದಾಡತೊಡಗಿದೆ. ವೆನೆಜುವೆಲಾದ ಕ್ಯಾರಕಾಸ್ ಸ್ಟಾಕ್ ಎಕ್ಸ್ಚೇಂಜ್ ಜನವರಿ 5ರಂದು ಒಂದೇ ದಿನ ಶೇ. 17ರಷ್ಟು ಏರಿದೆ. ಅಧ್ಯಕ್ಷರ ನಿರ್ಗಮನದ ಸುದ್ದಿಗೆ ಮಾರುಕಟ್ಟೆ ಸಕಾರಾತ್ಮಕವಾಗಿ ಸ್ಪಂದಿಸುತ್ತಿರುವಂತೆ ಕಾಣುತ್ತಿದೆ. ಜನವರಿ 5ರಂದು ಕ್ಯಾರಕಾಸ್ ಸ್ಟಾಕ್ ಎಕ್ಸ್ಚೇಂಜ್ನ (Carcas stock exchange) ಸೂಚ್ಯಂಕವು 2,597.7 ಅಂಕಗಳೊಂದಿಗೆ ಟ್ರೇಡಿಂಗ್ ಮುಗಿಸಿತು. ಒಂದು ದಿನದಲ್ಲಿ ಶೇ. 16.45ರಷ್ಟು ಏರಿಕೆ ಆಗಿದೆ. ಹಲವು…