ಹರಿದ್ವಾರದ ಘಾಟ್‌ಗಳಿಗೆ ಹಿಂದೂಯೇತರರ ಪ್ರವೇಶ ನಿಷೇಧವೇ? – Kannada News | Uttarakhand government plans to ban non Hindus entering 105 ghats in Haridwar
ನವದೆಹಲಿ, ಜನವರಿ 6: 2027ರಲ್ಲಿ ನಡೆಯುವ ಅರ್ಧ ಕುಂಭಮೇಳವನ್ನು ಗಮನದಲ್ಲಿಟ್ಟುಕೊಂಡು ಉತ್ತರಾಖಂಡ ಸರ್ಕಾರವು ಹರಿದ್ವಾರದ (Haridwar) ಗಂಗಾ ಘಾಟ್‌ಗಳಲ್ಲಿ ಹಿಂದೂಯೇತರರ ಪ್ರವೇಶದ ಕುರಿತು ಕಠಿಣ ನಿಯಮಗಳನ್ನು ಜಾರಿಗೆ ತರುವ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಿದೆ. ಹರಿದ್ವಾರದಲ್ಲಿ ಸುಮಾರು 120 ಚದರ ಕಿಲೋಮೀಟರ್ ಪ್ರದೇಶದಲ್ಲಿ ಹರಡಿರುವ 105 ಘಾಟ್‌ಗಳಲ್ಲಿ ಹಿಂದೂಯೇತರರಿಗೆ ಪ್ರವೇಶ ನಿಷೇಧವನ್ನು ಪರಿಗಣಿಸಲಾಗುತ್ತಿದೆ. ಇತ್ತೀಚೆಗೆ, ಶ್ರೀ ಗಂಗಾ ಸಭೆಗೆ ಸಂಬಂಧಿಸಿದ ಕೆಲವು ಅಧಿಕಾರಿಗಳು ಈ ನಿಟ್ಟಿನಲ್ಲಿ ಸರ್ಕಾರಕ್ಕೆ ಬೇಡಿಕೆಗಳನ್ನು ಸಲ್ಲಿಸಿದ್ದರು. 2027ರಲ್ಲಿ ನಡೆಯುವ ಅರ್ಧ ಕುಂಭಮೇಳದೊಂದಿಗೆ ಹರಿದ್ವಾರದ…