ಪತ್ನಿಯನ್ನ ನೋಡಿ ಬೊಗಳಿದ್ದಕ್ಕೆ ಸ್ಕೂಬಿ ಮೇಲೆ ಕ್ರೌರ್ಯ ಮೆರೆದ ಪತಿ: ಪೊಲೀಸ್ ಮೆಟ್ಟಿಲೇರಿದ ನಾಯಿ ಗಲಾಟೆ
ಬೆಂಗಳೂರು, (ಏಪ್ರಿಲ್ 12): ಪಕ್ಕದ ಮನೆಯ ಸಾಕು ನಾಯಿ ಸ್ಕೂಬಿ ತನ್ನ ಹೆಂಡ್ತಿಯನ್ನು ನೋಡಿ ಬೊಗಳಿದಕ್ಕೆ ಆಕ್ರೋಶಗೊಂಡ ಪತಿ ಕ್ರೌರ್ಯ ಮೆರೆದಿದ್ದಾನೆ. ತನ್ನ ಪತ್ನಿಯನ್ನು ನೋಡಿ ಬೊಗಳಿದ್ದಕ್ಕೆ ವ್ಯಕ್ತಿಯೋರ್ವ ಪಕ್ಕದ ಮನೆಯ ಸ್ಕೂಬಿ ನಾಯಿಗೆ ಕಟ್ಟಿಗೆಯಿಂದ ಹೊಡೆದು ಸಾಯಿಸಲು ಯತ್ನಿಸಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಅವರೆಹಳ್ಳಿಯಲ್ಲಿ ನಡೆದಿದೆ. ಆಂಜಿನಪ್ಪ ಎಂಬುವವರಿಗೆ ಸೇರಿದ ಸಾಕು ನಾಯಿ ಸ್ಕೂಬಿ, ನಿನ್ನೆ (ಏಪ್ರಿಲ್ 11) ಸಂಜೆ ಪಕ್ಕದ ಮನೆಯ ಮಹಿಳೆಯನ್ನು ನೋಡಿ ಬೊಗಳಿದೆ. ಇದರಿಂದ ಕೋಪಗೊಂಡಿದ್ದ ಪತಿ ಗೋಪಿ, ರಾತ್ರಿ…