ದೆಹಲಿಯ ಮೆಟ್ರೋ ಸಿಬ್ಬಂದಿ ವಸತಿಗೃಹದಲ್ಲಿ ಅಗ್ನಿ ಅವಘಡ, ಬಾಲಕಿ ಸೇರಿ ಮೂವರು ಸಜೀವ ದಹನ – Kannada News | Delhi Metro Quarters Fire: 3 Including Child Burnt Alive in Adarsh Nagar Tragedy
ನವದೆಹಲಿ, ಜನವರಿ 06: ದೆಹಲಿಯ ಮೆಟ್ರೋ ಸಿಬ್ಬಂದಿ ವಸತಿಗೃಹದಲ್ಲಿ ಭಾರಿ ಅಗ್ನಿ ಅವಘಡ(Fire Accident) ಸಂಭವಿಸಿದ್ದು, ಬಾಲಕಿ ಸೇರಿ ಮೂವರು ಸಜೀವದಹನವಾಗಿದ್ದಾರೆ.ದೆಹಲಿಯ ಆದರ್ಶನಗರದಲ್ಲಿರುವ ವಸತಿಗೃಹದಲ್ಲಿ ಈ ಘಟನೆ ನಡೆದಿದೆ. ಪತಿ, ಪತ್ನಿ ಮತ್ತು ಬಾಲಕಿ ದುರಂತವಾಗಿ ಸಾವನ್ನಪ್ಪಿದ್ದಾರೆ.ಮೂವರ ಮೃತದೇಹಗಳನ್ನು ಸುಟ್ಟು ಕರಕಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ. ಘಟನೆ ಬಗ್ಗೆ ಮಾಹಿತಿ ಅಗ್ನಿ ಶಾಮಕದಳದ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ, ಬೆಳಗಿನ ಜಾವ 2.39ಕ್ಕೆ ಡಿಎಂಆರ್‌ಸಿ ಕ್ವಾರ್ಟರ್‌ನಲ್ಲಿರುವ ಗೃಹೋಪಯೋಗಿ ವಸ್ತುವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿ…