ಬಳ್ಳಾರಿ ಗಲಭೆಗೆ ಮತ್ತೊಂದು ಸ್ಫೋಟಕ ತಿರುವು! ಗಲಾಟೆ ಶುರುವಾಗಿದ್ದು ಹೇಗೆ ಗೊತ್ತಾ? – Kannada News | Ballari Banner Violence: Janardhan Reddy Supporters Accused in Fatal Clash, video goes viral

ಬಳ್ಳಾರಿ ಗಲಭೆಯಲ್ಲಿ ಮತ್ತೊಂದು ಸ್ಫೋಟಕ ತಿರುವು!

ಬಳ್ಳಾರಿ, ಜನವರಿ 06: ಜಿಲ್ಲೆಯಲ್ಲಿ ನಡೆದ ಬ್ಯಾನರ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರಂಭಿಕ ಹಂತದ ದೃಶ್ಯಗಳು ಬಹಿರಂಗವಾಗಿದ್ದು, ಇಡೀ ಗಲಾಟೆಗೆ ಹೊಸ ತಿರುವು ಪಡೆದುಕೊಂಡಿದೆ. ಗಲಾಟೆ ಆರಂಭಿಸಿದ್ದು ಜನಾರ್ದನ ರೆಡ್ಡಿ ಬೆಂಬಲಿಗರೆಂಬುದಾಗಿ ಕಾಂಗ್ರೆಸ್ ಗುಂಪು ಆರೋಪಿಸಿದ್ದು, ಇದಕ್ಕೆ ಸಾಕ್ಷಿಯಾಗಿ ಕೆಲವು ದೃಶ್ಯಗಳನ್ನು ಕಾಂಗ್ರೆಸ್ ಮುಖಂಡರು ಬಿಡುಗಡೆ ಮಾಡಿದ್ದಾರೆ.

ಶಾಸಕ ಭರತ್ ರೆಡ್ಡಿ ಬೆಂಬಲಿಗರು ಜನಾರ್ದನ ರೆಡ್ಡಿ ನಿವಾಸದೆದುರು ಬ್ಯಾನರ್ ಕಟ್ಟುತ್ತಿದ್ದಂತೆ ಬಿಜೆಪಿಗರು ಹರಿದು ಆಕ್ರೋಶ ಹೊರಹಾಕಿದ್ದರು. ವಿಷಯ ತಿಳಿದ ನಂತರ ಭರತ್ ರೆಡ್ಡಿ ಆಪ್ತ ಸತೀಶ್​ ರೆಡ್ಡಿ ಖಾಸಗಿ ಗನ್​​ ಮ್ಯಾನ್​​ಗಳು ಗಾಳಿಯಲ್ಲಿ ಗುಂಡು ಹಾರಿಸಿದ್ದು, ಈ ಗಲಾಟೆಯಲ್ಲಿ ಗುಂಡಿನ ದಾಳಿಗೆ ಕಾಂಗ್ರೆಸ್ ಕಾರ್ಯಕರ್ತನೊಬ್ಬ ಮೃತಪಟ್ಟಿದ್ದ. ಘಟನೆಯ ಕುರಿತಾಗಿ ಹಲವು ಗೊಂದಲ ಉಂಟಾಗಿದ್ದ ಹಿನ್ನೆಲೆಯಲ್ಲಿಯೇ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದ್ದು, ಗಲಾಟೆಗೆ ಸಂಬಂಧಿಸಿದ ಹಲವು ವೀಡಿಯೋಗಳು ಹೊರಬಂದಿವೆ.

ಉದ್ದೇಶಪೂರ್ವಕವಾಗಿ ಬ್ಯಾನರ್‌ ಕಿತ್ತ ಬಿಜೆಪಿಗರು

ದೃಶ್ಯಗಳಲ್ಲಿರುವಂತೆ ಜನಾರ್ದನ ರೆಡ್ಡಿ ಮನೆ ಕಾಂಪೌಂಡ್ ಹೊರಭಾಗದಲ್ಲಿ ವಾಲ್ಮೀಕಿ ಸಮುದಾಯದ ಮುಖಂಡರು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಬ್ಯಾನರ್ ಅಳವಡಿಸಿದ್ದರು. ರಸ್ತೆ ಬದಿಯಲ್ಲಿ ಅಳವಡಿಸಿದ್ದ ಈ ಬ್ಯಾನರ್‌ಗಳನ್ನು ಉದ್ದೇಶಪೂರ್ವಕವಾಗಿ ರೆಡ್ಡಿ ಬೆಂಬಲಿಗರು ಕಿತ್ತು ಹಾಕಿದ್ದಾರೆ ಎನ್ನಲಾಗಿದೆ. ಇದನ್ನು ಪ್ರಶ್ನಿಸಿ ಕಾಂಗ್ರೆಸ್ ಕಾರ್ಯಕರ್ತರು ಸ್ಥಳದಲ್ಲೇ ವಿರೋಧ ವ್ಯಕ್ತಪಡಿಸಿದ್ದು, ಬಳಿಕ ಮತ್ತೆ ಅದೇ ಜಾಗದಲ್ಲಿ ಬ್ಯಾನರ್ ಅಳವಡಿಸಲು ಮುಂದಾದಾಗ ಗಲಾಟೆ ತೀವ್ರಗೊಂಡಿತ್ತು. ಹೀಗೆ ಕ್ಷಣಾರ್ಧದಲ್ಲಿ ಎರಡೂ ಕಡೆಯಿಂದ ಸಾವಿರಾರು ಜನ ಸೇರಿ ಪರಿಸ್ಥಿತಿ ಗಲಭೆಯಾಗಿ ಮಾರ್ಪಟ್ಟಿದ್ದು, ತಳ್ಳಾಟ- ನೂಕಾಟ ಏರ್ಪಟ್ಟಿತ್ತು.

ಇದನ್ನೂ ಓದಿ ಬಳ್ಳಾರಿ ಗಲಭೆ: 20 ಜನರ ಬಂಧನ, ಕಾಂಗ್ರೆಸ್​​ನವರೆಷ್ಟು, ಬಿಜೆಪಿಯವರೆಷ್ಟು? ರೆಡ್ಡಿಗೂ ಸಂಕಷ್ಟ

ತೊಡೆತಟ್ಟಿ ಗಲಾಟೆಗೆ ಪ್ರಚೋದನೆ ನೀಡಿದ್ದ ಮಹಿಳೆ

ಈ ನಡುವೆ ಬಿಜೆಪಿ ಕಾರ್ಯಕರ್ತೆಯೊಬ್ಬರು ತೊಡೆತಟ್ಟಿ ಗಲಾಟೆಗೆ ಪ್ರಚೋದನೆ ನೀಡಿದ ವೀಡಿಯೋವೊಂದು ವೈರಲ್ ಆಗಿದೆ.  ಎರಡು ಪಕ್ಷಗಳ ಬೆಂಬಲಿಗರ ನಡುವೆ ಗಲಭೆ ಏರ್ಪಟ್ಟಾಗಲೇ ಈ ಘಟನೆಯೂ ನಡೆದಿದ್ದು, ಪೊಲೀಸರು ಆಕೆಯನ್ನು ಸಮಾಧಾನ ಪಡಿಸಿ ಕಳುಹಿಸಿದ್ದಾರೆ. ಅದರೊಂದಿಗೆ ಕಾಂಗ್ರೆಸ್ ಕಾರ್ಯಕರ್ತನ ಮೇಲೆ ಬಿಜೆಪಿ ಕಾರ್ಯಕರ್ತರು ಖಾರಿದ ಪುಡಿ ಎರಚಿದ್ದು, ಉರಿ ತಾಳದ ವ್ಯಕ್ತಿ ಮೈಮೇಲೆ ನೀರು ಹಾಕಿಕೊಂಡ ದೃಶ್ಯಗಳೂ ಸಹ ಹೊರಬಂದಿವೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ದೆಹಲಿಯ ಮೆಟ್ರೋ ಸಿಬ್ಬಂದಿ ವಸತಿಗೃಹದಲ್ಲಿ ಅಗ್ನಿ ಅವಘಡ, ಬಾಲಕಿ ಸೇರಿ ಮೂವರು ಸಜೀವ ದಹನ – Kannada News | Delhi Metro Quarters Fire: 3 Including Child Burnt Alive in Adarsh Nagar Tragedy

ನವದೆಹಲಿ, ಜನವರಿ 06: ದೆಹಲಿಯ ಮೆಟ್ರೋ ಸಿಬ್ಬಂದಿ ವಸತಿಗೃಹದಲ್ಲಿ ಭಾರಿ ಅಗ್ನಿ ಅವಘಡ(Fire Accident) ಸಂಭವಿಸಿದ್ದು, ಬಾಲಕಿ ಸೇರಿ ಮೂವರು ಸಜೀವದಹನವಾಗಿದ್ದಾರೆ.ದೆಹಲಿಯ ಆದರ್ಶನಗರದಲ್ಲಿರುವ ವಸತಿಗೃಹದಲ್ಲಿ ಈ ಘಟನೆ ನಡೆದಿದೆ. ಪತಿ, ಪತ್ನಿ ಮತ್ತು ಬಾಲಕಿ ದುರಂತವಾಗಿ ಸಾವನ್ನಪ್ಪಿದ್ದಾರೆ.ಮೂವರ ಮೃತದೇಹಗಳನ್ನು ಸುಟ್ಟು ಕರಕಲಾಗಿದೆ. ಪೊಲೀಸರು ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ.

ಘಟನೆ ಬಗ್ಗೆ ಮಾಹಿತಿ
ಅಗ್ನಿ ಶಾಮಕದಳದ ಸಿಬ್ಬಂದಿ ನೀಡಿರುವ ಮಾಹಿತಿ ಪ್ರಕಾರ, ಬೆಳಗಿನ ಜಾವ 2.39ಕ್ಕೆ ಡಿಎಂಆರ್‌ಸಿ ಕ್ವಾರ್ಟರ್‌ನಲ್ಲಿರುವ ಗೃಹೋಪಯೋಗಿ ವಸ್ತುವೊಂದರಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿ ಮಾಡಲಾಗಿತ್ತು, ನಂತರ ಆರು ವಾಹನಗಳನ್ನು ಸ್ಥಳಕ್ಕೆ ಕಳುಹಿಸಲಾಯಿತು. ಐದನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ದಳದವರು ಬಂದಾಗ, ಮೂವರ ಸುಟ್ಟು ಕರಕಲಾದ ಶವಗಳು ಕಣ್ಣಿಗೆ ಬಿದ್ದಿದ್ದವು.

ಮೃತರನ್ನು ಅಜಯ್ (42), ನೀಲಂ (38) ಮತ್ತು ಜಾನ್ಹವಿ (10) ಎಂದು ಗುರುತಿಸಲಾಗಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ಡಿಎಂಆರ್‌ಸಿ ಕ್ವಾರ್ಟರ್ಸ್ ಮಜ್ಲಿಸ್ ಪಾರ್ಕ್ ಮೆಟ್ರೋ ನಿಲ್ದಾಣದ ಬಳಿ ಇದೆ. ಪತಿ, ಪತ್ನಿ ಮತ್ತು ಬಾಲಕಿ ಸುಟ್ಟ ಗಾಯಗಳಿಂದ ಸಾವನ್ನಪ್ಪಿದ್ದಾರೆ. ಎಲ್ಲರೂ ಒಂದೇ ಕೋಣೆಯಲ್ಲಿ ಮಲಗಿದ್ದರು.

ಮತ್ತಷ್ಟು ಓದಿ: ಆಂಧ್ರಪ್ರದೇಶದಲ್ಲಿ ಭಾರಿ ಅನಿಲ ಸೋರಿಕೆಯಾಗಿ ಬೆಂಕಿ ಅವಘಡ; ಸ್ಥಳೀಯ ನಿವಾಸಿಗಳ ಸ್ಥಳಾಂತರ

ಬೆಳಗ್ಗೆ 6.40 ರ ಹೊತ್ತಿಗೆ ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಯಿತು. ಮನೆಯ ವಸ್ತುಗಳು ಇದ್ದ ಕೋಣೆಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಒಳಗೆ ಮೂರು ಸುಟ್ಟ ದೇಹಗಳು ಪತ್ತೆಯಾಗಿವೆ ಎಂದು ಅಗ್ನಿಶಾಮಕ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಬೆಂಕಿಯನ್ನು ನಂದಿಸುವಾಗ ಅಗ್ನಿಶಾಮಕ ದಳದ ಸಿಬ್ಬಂದಿ ರಾಕೇಶ್ ಅವರ ಕೈಗೆ ಗಾಯವಾಗಿದ್ದು, ಅವರನ್ನು ಜಗಜೀವನ್ ಆಸ್ಪತ್ರೆಗೆ ಕರೆದೊಯ್ಯಲಾಯಿತು ಮತ್ತು ಪ್ರಥಮ ಚಿಕಿತ್ಸೆಯ ನಂತರ ಬಿಡುಗಡೆ ಮಾಡಲಾಯಿತು.

ರಾಷ್ಟ್ರಿಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೇಂದ್ರದ ಅನುಮೋದನೆ ಇದ್ರೂ ಆರಂಭವಾಗದ ಆರೆಂಜ್​​ ಲೈನ್​​ ಮೆಟ್ರೋ ಕಾಮಗಾರಿ: ಕಾರಣ ಏನು? – Kannada News | Namma Metro Orange Line: Why Bengaluru’s Approved Project Faces Delays

ಬೆಂಗಳೂರು, ಜನವರಿ 06: ಬಹು ನಿರೀಕ್ಷಿತ ನಮ್ಮ ಮೆಟ್ರೋ ಆರೆಂಜ್ ಲೈನ್ ಕಾಮಗಾರಿಗೆ ಕೇಂದ್ರ ಸರ್ಕಾರದ ಅನುಮೋದನೆ ದೊರೆತು ಒಂದು ವರ್ಷಕ್ಕಿಂತ ಹೆಚ್ಚು ಸಮಯ ಕಳೆದಿದೆ. ನಮ್ಮ ಮೆಟ್ರೋದ ಮೂರನೇ ಹಂತದ ಪ್ರಾಜೆಕ್ಟ್​​ಗೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದರೂ ಯೋಜನೆ ಮಾತ್ರ ಇನ್ನೂ ಆರಂಭವಾಗಿಲ್ಲ. 2024ರ ಆಗಸ್ಟ್‌ 16ರಂದು ನಮ್ಮ ಮೆಟ್ರೋ ಆರೆಂಜ್ ಲೈನ್ ಯೋಜನೆಗೆ ಕೇಂದ್ರ ಸರ್ಕಾರವು ಅನುಮೋದನೆ ನೀಡಿದೆ. ಅದಾಗಿ ಒಂದು ವರ್ಷಕ್ಕಿಂತ ಹೆಚ್ಚು ಕಾಲ ಕಳೆದರೂ ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (BMRCL) ಇನ್ನೂ ನಾಗರಿಕ ಕಾಮಗಾರಿಗಳಿಗಾಗಿ ಟೆಂಡರ್‌ಗಳನ್ನು ಆಹ್ವಾನಿಸಿಲ್ಲ.

ವಿಳಂಬಕ್ಕೆ ಕಾರಣ ಏನು?

ಒಟ್ಟು ಸುಮಾರು 44.65 ಕಿಮೀ ಉದ್ದದ ಎರಡು ಕಾರಿಡಾರ್‌ಗಳನ್ನು ಆರೆಂಜ್​​ ಲೈನ್​ ಒಳಗೊಂಡಿದೆ. ಸಾರ್ವಜನಿಕ ಸಾರಿಗೆ ಸೌಲಭ್ಯಗಳ ಕೊರತೆಯಿರುವ ವಸತಿ ಪ್ರದೇಶಗಳು, ಕೈಗಾರಿಕಾ ವಲಯಗಳು ಹಾಗೂ ಐಟಿ ಹಬ್‌ಗಳನ್ನು ಸಂಪರ್ಕಿಸುವ ಉದ್ದೇಶ ಈ ಯೋಜನೆಗೆ ಇದೆ. ಪ್ರಾಜೆಕ್ಟ್​​ 1 ಜೆಪಿ ನಗರ 4ನೇ ಹಂತದಿಂದ ಕೆಂಪಾಪುರವರೆಗೆ ಮತ್ತು 32.15 ಕಿ.ಮೀ ಮತ್ತು ಪ್ರಾಜೆಕ್ಟ್​​ 2 ಹೊಸಹಳ್ಳಿಯಿಂದ ಕಡಬಗೆರೆಗೆ 12.5 ಕಿ.ಮೀ. ಸಂಪರ್ಕ ಕಲ್ಪಿಸಲಿದೆ. ರಾಜ್ಯ ಸರ್ಕಾರವು ಸಂಪೂರ್ಣ ಆರೆಂಜ್ ಲೈನ್‌ ಅನ್ನು ಡಬಲ್ ಡೆಕ್ಕರ್ ಕಾರಿಡಾರ್ ಆಗಿ ನಿರ್ಮಿಸುವ ಬಗ್ಗೆ ನಿರ್ಧಾರ ಕೈಗೊಂಡಿರುವುದೇ ಯೋಜನೆಯ ವಿಳಂಬಕ್ಕೆ ಪ್ರಮುಖ ಕಾರಣವಾಗಿದೆ. ರಸ್ತೆ ಜಾಗವನ್ನು ಉತ್ತಮವಾಗಿ ಬಳಸುವ ಉದ್ದೇಶ ಈ ನಿರ್ಧಾರದ ಹಿಂದೆ ಇದ್ದರೂ ಇದರಿಂದ ಯೋಜನೆಯ ವೆಚ್ಚ ಮತ್ತು ವಿನ್ಯಾಸದಲ್ಲಿ ದೊಡ್ಡ ಬದಲಾವಣೆಗಳಾಗಿವೆ. ಈ ಒಂದೇ ನಿರ್ಧಾರದಿಂದಲೇ ಯೋಜನೆಗೆ ಸುಮಾರು ₹9,000 ಕೋಟಿ ಹೆಚ್ಚುವರಿ ವೆಚ್ಚ ಸೇರ್ಪಡೆಯಾಗಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಡಬಲ್​​ ಗುಡ್​​ನ್ಯೂಸ್​​

ನಮ್ಮ ಮೆಟ್ರೋ ಆರೆಂಜ್ ಲೈನ್ ಕುರಿತಾದ ಟೆಂಡರ್‌ಗಳು ಯಾವಾಗ ಹೊರಬರುತ್ತವೆ ಅಥವಾ ಕಾಮಗಾರಿ ಯಾವಾಗ ಆರಂಭವಾಗುತ್ತದೆ ಎಂಬುದಕ್ಕೆ ಇನ್ನೂ ಸ್ಪಷ್ಟ ಉತ್ತರ ಸಿಕ್ಕಿಲ್ಲ. ಯೋಜನೆಗೆ ಅನುಮೋದನೆ ಇದ್ದರೂ ಈವರೆಗೆ ಯಾವುದೇ ಪ್ರಗತಿ ಆಗಿಲ್ಲ. ಹೀಗಾಗಿ ಯೋಜನೆಯ ವೆಚ್ಚಗಳು ಏರುತ್ತಲೇ ಇರೋದು ಒಂದೆಡೆಯಾದರೆ, ಆರೆಂಜ್​​ ಲೈನ್​​ ಮೆಟ್ರೋ ಆರಂಭದಿಂದ ಟ್ರಾಫಿಕ್​​ ಸಮಸ್ಯೆ ಇಳಿಕೆಯಾಗಿ ಸುಗಮ ಸಂಚಾರದ ಕನಸು ಕಂಡಿದ್ದ ಪಶ್ಚಿಮ ಮತ್ತು ದಕ್ಷಿಣ ಬೆಂಗಳೂರಿನ ಪ್ರಯಾಣಿಕರು ತಾತ್ಕಾಲಿಕ ನಿರಾಸೆಗೆ ಒಳಗಾಗಬೇಕಾದ ಸ್ಥಿತಿ ಉದ್ಭವಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಧರ್ಮೇಂದ್ರ ಆಸ್ಪತ್ರೆಯಲ್ಲಿದ್ದಾಗ ನಮಗೆ ಕಿರುಕುಳ ಆಗಿದೆ; ಹೇಮಾ ಮಾಲಿನಿ ಆರೋಪ – Kannada News | Dharmendra’s Demise: Hema Malini Slams Paparazzi Over Deol Family Harassment

ಬಾಲಿವುಡ್​ನ ಹಿರಿಯ ನಟ ಧರ್ಮೇಂದ್ರ ನವೆಂಬರ್ 24 ರಂದು ನಿಧನರಾದರು. ಅದಕ್ಕೂ ಮೊದಲು ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ಆಸ್ಪತ್ರೆಯ ಹೊರಗೆ ಪಾಪರಾಜಿಗಳು ನಿರಂತರವಾಗಿ ಇದ್ದ ಕಾರಣ, ಡಿಯೋಲ್ ಕುಟುಂಬವು ಅಂತಿಮವಾಗಿ ಅವರ ಚಿಕಿತ್ಸೆಯನ್ನು ಮನೆಯಲ್ಲಿಯೇ ಮುಂದುವರಿಸಲು ನಿರ್ಧರಿಸಿತು. ಧರ್ಮೇಂದ್ರ ಅವರನ್ನು ಮನೆಗೆ ಕರೆತಂದ ನಂತರವೂ, ಪಾಪರಾಜಿಗಳು ಮನೆಯ ಹೊರಗೆ ನಿಲ್ಲುತ್ತಿದ್ದರು. ಇದರಿಂದ ಕಿರುಕುಳ ಉಂಟಾಗಿದೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.

ಧರ್ಮೇಂದ್ರ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಈ ವೇಳೆ ಆಸ್ಪತ್ರೆ ಹೊರಗೆ ಹಾಗೂ ಡಿಯೋಲ್ ಕುಟುಂಬದ ಹಿಂದೆ ಪಾಪರಾಜಿಗಳು ಇದ್ದರು. ಇದು ಸನ್ನಿ ಡಿಯೋಲ್​​ಗೆ ಕೋಪ ತರಿಸಿತ್ತು. ಅವರು ಕೂಗಾಡಿದ್ದರು. ಈ ಬಗ್ಗೆ ಸನ್ನಿ ಡಿಯೋಲ್ ಮಲತಾಯಿ ಹೇಮಾ ಮಾಲಿನಿ ಮಾತನಾಡಿದರು.

‘ಸನ್ನಿ ತುಂಬಾ ಅಸಮಾಧಾನಗೊಂಡಿದ್ದರು ಮತ್ತು ಅವರು ತುಂಬಾ ಕೋಪಗೊಂಡಿದ್ದರು. ಏಕೆಂದರೆ ಆ ಸಮಯದಲ್ಲಿ ನಾವೆಲ್ಲರೂ ತುಂಬಾ ಭಾವನಾತ್ಮಕ ಹಂತದ ಮೂಲಕ ಸಾಗುತ್ತಿದ್ದೆವು. ಆ ಸ್ಥಿತಿಯಲ್ಲಿಯೂ ಸಹ, ಮಾಧ್ಯಮಗಳು ಮತ್ತು ಪಾಪರಾಜಿಗಳು ನಮ್ಮನ್ನು ಮತ್ತು ನಮ್ಮ ಕಾರುಗಳನ್ನು ನಿರಂತರವಾಗಿ ಹಿಂಬಾಲಿಸುತ್ತಿದ್ದರು. ಆ ಸಮಯದಲ್ಲಿ ನಮಗೆ ಸಾಕಷ್ಟು ಕಿರುಕುಳ ನೀಡಲಾಯಿತು’ ಎಂದು ಅವರು ಆರೋಪಿಸಿದ್ದಾರೆ.

ಇದನ್ನೂ ಓದಿ: ಧರ್ಮೇಂದ್ರ ಕುಟುಂಬ ಹೇಮಾ ಮಾಲಿನಿಯನ್ನು ಒಂಟಿ ಮಾಡಿದೆ; ಕೇಳಿ ಬಂತು ಆರೋಪ

‘ಧರ್ಮೇಂದ್ರ ಅವರ ನಿಧನದಿಂದ ಎಲ್ಲರೂ ದುಃಖಿತರಾಗಿದ್ದಾರೆ. ಏಕೆಂದರೆ ನಾವೆಲ್ಲರೂ ಸುಮಾರು ಒಂದು ತಿಂಗಳಿನಿಂದ ಕಷ್ಟಪಡುತ್ತಿದ್ದೆವು. ಆಸ್ಪತ್ರೆಯಲ್ಲಿ ನಡೆಯುತ್ತಿರುವ ಎಲ್ಲವನ್ನೂ ನಿಭಾಯಿಸಲು ನಾವು ಪ್ರಯತ್ನಿಸುತ್ತಿದ್ದೆವು. ನಾವೆಲ್ಲರೂ ಅಲ್ಲಿದ್ದೆವು. ಧರ್ಮೇಂದ್ರ ಅವರನ್ನು ಈ ಮೊದಲು ಹಲವು ಬಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಪ್ರತಿ ಬಾರಿ ಅವರು ಚೇತರಿಸಿಕೊಂಡು ಮನೆಗೆ ಮರಳುತ್ತಿದ್ದರು. ಅವರು ಈ ಬಾರಿಯೂ ಚೇತರಿಸಿಕೊಳ್ಳುತ್ತಾರೆ ಎಂದು ನಾವು ಆಶಿಸಿದ್ದೆವು’ ಎಂದು ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಕದಿಯಲು ಬಂದು ಅಡುಗೆಮನೆಯ ಎಕ್ಸಾಸ್ಟ್​ನಲ್ಲಿ ಸಿಲುಕಿದ ಕಳ್ಳ, ಅರ್ಧ ದೇಹ ಒಳಗೆ, ಅರ್ಧ ಹೊರಗೆ – Kannada News | Kota Burglary Attempt Fails as Intruder Gets Stuck While Trying to Escape

ಕೋಟಾ, ಜನವರಿ 06: ಕಳ್ಳರು ಎಲ್ಲವನ್ನು ದರೋಡೆ ಮಾಡಿ ಓಡಿ ಹೋದ ಬಳಿಕ ಸಿಕ್ಕಿಬಿದ್ದಿರುವ ನಿದರ್ಶನಗಳಿವೆ, ಆದರೆ ಮನೆಯಲ್ಲಿ ಯಾರೂ ಇಲ್ಲದಿದ್ದರೂ ಕಳ್ಳ ಮನೆಯೊಳಗೆ ಸಿಕ್ಕಿಬಿದ್ದಿದ್ಹೇಗೆ ಎನ್ನುವ ಇಂಟರೆಸ್ಟಿಂಗ್ ಸುದ್ದಿ ಇಲ್ಲಿದೆ. ಈ ಘಟನೆ ರಾಜಸ್ಥಾನದ ಕೋಟಾದಲ್ಲಿ ಜನವರಿ 5 ರಂದು ನಡೆದಿದೆ. ಮನೆಮಂದಿಯಲ್ಲಾ ತೀರ್ಥಯಾತ್ರೆಗೆ ಹೋಗಿದ್ದರು. ಕಳ್ಳನೊಬ್ಬ ಅಡುಗೆ ಮನೆಯ ಎಕ್ಸಾಸ್ಟ್ ಒಡೆದು ಅದರಿಂದ ಮನೆಯೊಳಗೆ ಪ್ರವೇಶಿಸಲು ಹೋಗಿ ಸಿಕ್ಕಿಬಿದ್ದ ಘಟನೆ ನಡೆದಿದೆ.

ಆ ದರೋಡೆಕೋರ ಆ ಎಕ್ಸಾಸ್ಟ್​ ದ್ವಾರದಲ್ಲಿ ಸಿಲುಕಿ ನರಳಿದ್ದಾನೆ. ಮಾಲೀಕ ಬರುವವರೆಗೂ ಆತ ಅದರಲ್ಲೇ ಸಿಲುಕಿದ್ದು, ದೃಶ್ಯ ಬೆಚ್ಚಿಬಿಳಿಸುವಂತಿದೆ. ಅವನ ಅರ್ಧ ದೇಹವು ಹೊರಗಿದ್ದ ಇನ್ನರ್ಧ ದೇಹ ಒಳಗಿತ್ತು. ಬಳಿಕ ತಪ್ಪಾಯಿತೆಂದು ಮನೆ ಮಾಲೀಕನ ಬಳಿ ಬೇಡಿಕೊಂಡಿದ್ದಾನೆ. ಕೋಟಾದ ಪ್ರತಾಪ್ ನಗರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಮನೆ ಮಾಲೀಕ ಸುಭಾಷ್ ಕುಮಾರ್ ರಾವತ್ ಎಂದು ಗುರುತಿಸಲಾಗಿದ್ದು, ಜನವರಿ 3 ರಂದು ತಾನು ಮತ್ತು ತನ್ನ ಪತ್ನಿ ಖತು ಶ್ಯಾಮ್‌ಜಿಯಲ್ಲಿ ದರ್ಶನಕ್ಕೆ ಹೋಗಿದ್ದೆವು ಮತ್ತು ಜನವರಿ 5 ರ ರಾತ್ರಿ ಮನೆಗೆ ಮರಳಿದ್ದೆವು ಎಂದು ಮಾಹಿತಿ ನೀಡಿದ್ದಾರೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರೈಲ್ವೇಸ್ ವಿರುದ್ಧ ಕಣಕ್ಕಿಳಿಯದ ವಿರಾಟ್ ಕೊಹ್ಲಿ – Kannada News | Virat Kohli withdrew from the Vijay Hazare Trophy Match

ವಿಜಯ ಹಝಾರೆ ಟೂರ್ನಿಯ ಗ್ರೂಪ್-ಡಿ ಪಂದ್ಯದಲ್ಲಿ ದೆಹಲಿ ಪರ ವಿರಾಟ್ ಕೊಹ್ಲಿ ಕಣಕ್ಕಿಳಿದಿಲ್ಲ. ಇದಕ್ಕೂ ಮುನ್ನ ಜನವರಿ 6 ರಂದು ನಡೆಯಲಿರುವ ರೈಲ್ವೇಸ್ ವಿರುದ್ಧದ ಮ್ಯಾಚ್​ನಲ್ಲಿ ಕೊಹ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ದೆಹಲಿ ಕ್ರಿಕೆಟ್ ಅಸೋಸಿಯೇಷನ್ ತಿಳಿಸಿತ್ತು. ಆದರೆ ಬೆಂಗಳೂರಿನ ಆಲೂರಿನಲ್ಲಿ ನಡೆಯುತ್ತಿರುವ ರೈಲ್ವೇಸ್ ವಿರುದ್ಧದ ಮ್ಯಾಚ್​ನಿಂದ ವಿರಾಟ್ ಕೊಹ್ಲಿ ಹಿಂದೆ ಸರಿದಿದ್ದಾರೆ.

ಇದಕ್ಕೂ ಮುನ್ನ ವಿರಾಟ್ ಕೊಹ್ಲಿ ಎರಡು ಪಂದ್ಯಗಳನ್ನಾಡಿದ್ದಾರೆ. ಬೆಂಗಳೂರಿನ ಸಿಇಒ ಮೈದಾನದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕಿಂಗ್ ಕೊಹ್ಲಿ ಆಂಧ್ರ ಪ್ರದೇಶ್ ವಿರುದ್ಧ 131 ರನ್ ಬಾರಿಸಿದ್ದರು. ಇನ್ನು ದ್ವಿತೀಯ ಮ್ಯಾಚ್​ನಲ್ಲಿ ಗುಜರಾತ್ ವಿರುದ್ಧ 77 ರನ್ ಕಲೆಹಾಕಿದ್ದರು

ಈ ಪಂದ್ಯದ ಬಳಿಕ ಮುಂಬೈಗೆ ತೆರಳಿದ್ದ ವಿರಾಟ್ ಕೊಹ್ಲಿ ಜನವರಿ 6 ರೊಳಗೆ ಮತ್ತೆ ದೆಹಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ ಎಂದು ದೆಹಲಿ ತಂಡದ ಕೋಚ್ ಸರಣ್‌ದೀಪ್ ಸಿಂಗ್ ತಿಳಿಸಿದ್ದರು. ಆದರೆ ಪ್ರಸ್ತುತ ನಡೆಯುತ್ತಿರುವ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕಣಕ್ಕಿಳಿದಿಲ್ಲ.

ಇದಕ್ಕೆ ಮುಖ್ಯ ಕಾರಣ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಸರಣಿ ಎನ್ನಲಾಗಿದೆ. ಅಂದರೆ ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿಯು ಜನವರಿ 11 ರಿಂದ ಶುರುವಾಗಲಿದೆ. ಈ ಸರಣಿಗಾಗಿ ಜನವರಿ 7 ರಂದು ಬರೋಡಾದಲ್ಲಿ ಭಾರತೀಯ ಆಟಗಾರರು ಕೂಡಿಕೊಳ್ಳಲಿದ್ದಾರೆ. ಹೀಗಾಗಿಯೇ ರೈಲ್ವೇಸ್ ವಿರುದ್ಧದ ಪಂದ್ಯದಿಂದ ವಿರಾಟ್ ಕೊಹ್ಲಿ ಹೊರಗುಳಿದಿದ್ದಾರೆ ಎಂದು ವರದಿಯಾಗಿದೆ.

ರಿಷಭ್ ಪಂತ್ ನಾಯಕ:

ನ್ಯೂಝಿಲೆಂಡ್ ವಿರುದ್ಧದ ಸರಣಿಗೆ ಆಯ್ಕೆಯಾಗಿರುವ ರಿಷಭ್ ಪಂತ್ ರೈಲ್ವೇಸ್ ವಿರುದ್ಧದ ಪಂದ್ಯದಲ್ಲೂ ನಾಯಕನಾಗಿ ಕಣಕ್ಕಿಳಿದಿದ್ದಾರೆ. ಅಂದರೆ ಈ ಮ್ಯಾಚ್ ಮುಗಿದ ಬಳಿಕವಷ್ಟೇ ಅವರು ಭಾರತ ತಂಡವನ್ನು ಕೂಡಿಕೊಳ್ಳಲಿದ್ದಾರೆ. ಅದರಂತೆ ದೆಹಲಿ ಹಾಗೂ ರೈಲ್ವೇಸ್ ತಂಡಗಳ ಪ್ಲೇಯಿಂಗ್ ಇಲೆವೆನ್​ ಈ ಕೆಳಗಿನಂತಿದೆ…

ರೈಲ್ವೇಸ್ (ಪ್ಲೇಯಿಂಗ್ XI): ಅಂಶ್ ಯಾದವ್, ಪ್ರಥಮ್ ಸಿಂಗ್, ಸಾಹಬ್ ಯುವರಾಜ್, ಉಪೇಂದ್ರ ಯಾದವ್ (ವಿಕೆಟ್ ಕೀಪರ್), ರಾಜ್ ಚೌಧರಿ, ಅಶುತೋಷ್ ಶರ್ಮಾ, ಕುಶ್ ಮರಾಠೆ, ಜುಬೇರ್ ಅಲಿ ಖಾನ್, ಕರ್ಣ್ ಶರ್ಮಾ (ನಾಯಕ), ಕುನಾಲ್ ಯಾದವ್, ರಾಹುಲ್ ಶರ್ಮಾ.

ಇದನ್ನೂ ಓದಿ: ದಿಢೀರ್ ನಿವೃತ್ತಿ ಘೋಷಿಸಿದ ನ್ಯೂಝಿಲೆಂಡ್ ಆಟಗಾರ

ದೆಹಲಿ (ಪ್ಲೇಯಿಂಗ್ XI): ಸಾರ್ಥಕ್ ರಂಜನ್, ಪ್ರಿಯಾಂಶ್ ಆರ್ಯ, ನಿತೀಶ್ ರಾಣಾ, ರಿಷಭ್ ಪಂತ್ (ನಾಯಕ), ಆಯುಷ್ ಬಡೋನಿ, ತೇಜಸ್ವಿ ದಹಿಯಾ, ಹರ್ಷ್ ತ್ಯಾಗಿ, ಹರ್ಷಿತ್ ರಾಣಾ, ಪ್ರಿನ್ಸ್ ಯಾದವ್, ಇಶಾಂತ್ ಶರ್ಮಾ, ನವದೀಪ್ ಸೈನಿ.

Published On – 9:54 am, Tue, 6 January 26

Source link

‘ಜನ ನಾಯಗನ್’ ರಿಲೀಸ್​ಗೆ ಸಂಕಷ್ಟ? ಇನ್ನೂ ಸಿಕ್ಕಿಲ್ಲ ಸೆನ್ಸಾರ್ ಪತ್ರ – Kannada News | Jana Nayagan Movie Team in Trouble Censor Certificate not issued amid Release Preparation

ದೊಡ್ಡ ದೊಡ್ಡ ಸಿನಿಮಾಗಳು ರಿಲೀಸ್ ಆಗುತ್ತವೆ ಎಂದಾಗ ಅದಕ್ಕೆ ಸಾಕಷ್ಟು ಅಡೆತಡೆಗಳು ಎದುರಾಗುತ್ತವೆ. ಈ ರೀತಿ ಆಗಬಾರದು ಎಂಬ ಕಾರಣದಿಂದ ನಿರ್ಮಾಪಕರು ಈ ಬಗ್ಗೆ ಹೆಚ್ಚು ಜಾಗೃತಿವಹಿಸುತ್ತಾರೆ. ಸೆನ್ಸಾರ್ ಪ್ರಕ್ರಿಯೆಯನ್ನು ಬೇಗ ಪೂರ್ಣಗೊಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ‘ಜನ ನಾಯಗನ್’ ಸಿನಿಮಾ (Jana Nayagan Movie) ಕೂಡ ಇದೇ ಕೆಲಸ ಮಾಡಿತ್ತು. ಆದರೆ, ಸೆನ್ಸಾರ್ ಮಂಡಳಿಯವರು ಸಿನಿಮಾ ನೋಡಿ ತಿಂಗಳಾದರೂ ಸೆನ್ಸಾರ್ ಪತ್ರ ಸಿಕ್ಕಿಲ್ಲ. ಸಿನಿಮಾ ರಿಲೀಸ್​​ಗೆ ಮೂರು ದಿನ ಮಾತ್ರ ಬಾಕಿ ಉಳಿದಿದೆ. ಇದು ತಂಡದ ಚಿಂತೆಗೆ ಕಾರಣ ಆಗಿದೆ. ಈ ಪ್ರಕರಣ ರಾಜಕೀಯ ಬಣ್ಣವನ್ನು ಕೂಡ ಪಡೆದುಕೊಂಡಿದೆ.

‘ಜನ ನಾಯಗನ್’ ಚಿತ್ರ ಜನವರಿ 9ರಂದು ರಿಲೀಸ್ ಆಗುತ್ತಿದೆ. ಈ ಚಿತ್ರದಲ್ಲಿ ಪೂಜಾ ಹೆಗ್ಡೆ, ಮಲಯಾಳಂ ನಟಿ ಮಮಿತಾ ಬೈಜು ಮೊದಲಾದವರು ನಟಿಸಿದ್ದಾರೆ. ಎಚ್. ವಿನೋದ್ ಈ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಇದು ತೆಲುಗಿನ ‘ಭಗವಂತ ಕೇಸರಿ’ ಚಿತ್ರದ ರಿಮೇಕ್. ಈ ಚಿತ್ರದಲ್ಲಿ ರಾಜಕೀಯ ಅಂಶ ಕೂಡ ಸೇರಿಸಲಾಗಿದೆ. ಸಿನಿಮಾದ ಕೆಲವು ದೃಶ್ಯಕ್ಕೆ ಸೆನ್ಸಾರ್ ಮಂಡಳಿ ಅಪಸ್ವರ ತೆಗೆದಿದೆ ಎನ್ನಲಾಗಿದೆ.

2025ರ ಡಿಸೆಂಬರ್ 19ರಂದೇ ‘ಜನ ನಾಯಗನ್’ ಚಿತ್ರವನ್ನು ಸೆನ್ಸಾರ್ ಮಂಡಳಿ ವೀಕ್ಷಣೆ ಮಾಡಿದೆ. ಈ ವೇಳೆ ಕೆಲವು ದೃಶ್ಯಗಳಿಗೆ ಕತ್ತರಿ ಹಾಗೂ ಕೆಲವು ಶಬ್ದಕ್ಕೆ ಮ್ಯೂಟ್ ಮಾಡಲು ಸೂಚನೆ ನೀಡಿತ್ತು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿರುವ ತಂಡ, ಸಿನಿಮಾನ ಮತ್ತೆ ಮಂಡಳಿಗೆ ತೋರಿಸಿದೆ. ಆದಾಗ್ಯೂ ಸೆನ್ಸಾರ್ ಮಂಡಳಿ ಸೆನ್ಸಾರ್ ಪತ್ರ ನೀಡಿಲ್ಲ.ಇದು ಚರ್ಚೆಗೆ ಕಾರಣ ಆಗಿದೆ.

ಈ ವಿಷಯ ರಾಜಕೀಯ ತಿರುವು ಕೂಡ ಪಡೆದುಕೊಂಡಿದೆ. ಟಿವಿಕೆ ಪ್ರಧಾನ ಕಾರ್ಯದರ್ಶಿಯೊಬ್ಬರು ಸೆನ್ಸಾರ್ ಮಂಡಳಿಯನ್ನು ಟೀಕಿಸಿದ್ದಾರೆ. ಇದು ಉದ್ದೇಶಪೂರ್ವಕ ಎಂದು ಆರೋಪಿಸಿದ್ದಾರೆ. ಇಂದು (ಜನವರಿ 6) ಕೂಡ ಸೆನ್ಸಾರ್ ಪತ್ರ ಸಿಗದಿದ್ದರೆ ಕೋರ್ಟ್​ಗೆ ಹೋಗುವ ಬಗ್ಗೆ ತಂಡ ಆಲೋಚಿಸಿದೆ.

ಇದನ್ನೂ ಓದಿ: ‘ಜನ ನಾಯಗನ್’ ತಂಡದಿಂದ ಇದೆಂಥಾ ತಪ್ಪು; ಟ್ರೋಲಿಗರಿಗೆ ಆಹಾರವಾದ ನಿರ್ದೇಶಕ

ಈ ಸಿನಿಮಾ ಬಳಿಕ ವಿಜಯ್ ರಾಜಕೀಯದಲ್ಲಿ ತೊಡಗಿಕೊಳ್ಳಲಿದ್ದಾರೆ. ಈ ವರ್ಷ ನಡೆಯುವ ತಮಿಳುನಾಡು ಚುನಾವಣೆಯಲ್ಲಿ ಅವರು ಭಾಗಿ ಆಗಲಿದ್ದಾರೆ. ಅವರ ಕೊನೆಯ ಸಿನಿಮಾ ರಿಮೇಕ್ ಎಂಬ ಬೇಸರ ಅಭಿಮಾನಿಗಳಿಗೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 9:54 am, Tue, 6 January 26

Source link

Video: ಶಿಲ್ಲಾಂಗ್ ಬೀದಿಯಲ್ಲಿ ಖುಷಿಯಿಂದ ಕುಣಿದ ವಿದೇಶಿ ಯುವತಿ, ಸ್ಥಳೀಯರ ಕಾಳಜಿಗೊಂದು ಸಲಾಂ – Kannada News | Shillong Street Moment Goes Viral as Locals Safeguard Dancing Tourist

ಶಿಲ್ಲಾಂಗ್, ಜನವರಿ 06: ವಿದೇಶಿ ಹೆಣ್ಣುಮಕ್ಕಳೆಂದರೆ ಸಾಕು ಕೆಟ್ಟ ದೃಷ್ಟಿಯಿಂದ ನೋಡುವ ಸಾಕಷ್ಟು ಜನರಿದ್ದಾರೆ. ಆದರೆ ಶಿಲ್ಲಾಂಗ್​ನ ಜನತೆ ನಡೆದುಕೊಂಡ ರೀತಿಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಶಿಲ್ಲಾಂಗನ ಬೀದಿಯಲ್ಲಿ  ವಿದೇಶಿ ಯುವತಿ ಖುಷಿಯಿಂದ ಕುಣಿದಿದ್ದಾಳೆ, ಆದರೆ ಸ್ಥಳೀಯರು ಯಾರೂ ಕೂಡ ಆಕೆಯನ್ನು ಕೆಟ್ಟದಾಗಿ ನೋಡುವುದು ಹಾಗಿರಲಿ, ಆಕೆಯ ಹತ್ತಿರ ಸುಳಿಯಲು ಕೂಡ ಯಾರಿಗೂ ಬಿಡದೆ ಆಕೆಯನ್ನು ರಕ್ಷಣೆ ಮಾಡಿರುವ ವಿಡಿಯೋ ಎಲ್ಲರ ಹೃದಯ ಗೆದ್ದಿದೆ. ಹೊಸ ವರ್ಷದ ಆಚರಣೆ ಸಂದರ್ಭದಲ್ಲಿ ವಿದೇಶಿ ಯುವತಿಯೊಬ್ಬರು ಶಿಲ್ಲಾಂಗ್​ನ ಬೀದಿಯಲ್ಲಿ ನೃತ್ಯ ಮಾಡಿದ್ದಾರೆ. ಅಲ್ಲಿದ್ದ ಜನರು ಆಕೆಯನ್ನು ಸುತ್ತುವರೆದು ಆಕೆಯನ್ನು ರಕ್ಷಣೆ ಮಾಡಿದ್ದಲ್ಲದೆ ಮುಕ್ತವಾಗಿ ಭಯವಿಲ್ಲದೆ ನೃತ್ಯ ಮಾಡಲು ಅವಕಾಶ ಮಾಡಿಕೊಟ್ಟಿರುವ ಘಟನೆ ನಡೆದಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಇರಾನ್ ಆರ್ಥಿಕತೆ ಪಾತಾಳಕ್ಕೆ, ನಿರುದ್ಯೋಗ, ಹಣದುಬ್ಬರದಿಂದ ಬೇಸತ್ತು ಬೀದಿಗಿಳಿದ ಜನ, ಪ್ರತಿಭಟನೆಯಲ್ಲಿ 35 ಮಂದಿ ಸಾವು – Kannada News | Iran Sees Deadly Unrest Amid Economic Protests India Advises Citizens to Stay Alert

ಇರಾನ್, ಜನವರಿ 06: ಇರಾನ್​(Iran)ನ ರಾಜಧಾನಿ ಟೆಹ್ರಾನ್​ನಲ್ಲಿ ಪ್ರತಿಭಟನೆಗಳು ಭುಗಿಲೆದ್ದಿವೆ. ಹಿಂಸಾಚಾರ ತೀವ್ರ ಸ್ವರೂಪವನ್ನು ಪಡೆದಿದ್ದು ಇಲ್ಲಿಯವರೆಗೆ 35ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 1,200 ಮಂದಿಯನ್ನು ಬಂಧಿಸಲಾಗಿದೆ. ಕೇವಲ ನಗರ ಮಾತ್ರವಲ್ಲ ಹಳ್ಳಿಯ ಜನರು ಕೂಡ ಬೀದಿಗಿಳಿದಿದ್ದಾರೆ.ಡಿಸೆಂಬರ್ ಅಂತ್ಯದಲ್ಲಿ ಪ್ರಾರಂಭವಾದ ಪ್ರತಿಭಟನೆಗಳು ಈಗ ದೊಡ್ಡ ಪ್ರಮಾಣದಲ್ಲಿ ಉಲ್ಬಣಗೊಂಡಿವೆ.

ಹದಗೆಡುತ್ತಿರುವ ಆರ್ಥಿಕತೆ, ಹಣದುಬ್ಬರ ಮತ್ತು ನಿರುದ್ಯೋಗ ಸಮಸ್ಯೆ ದೇಶದಲ್ಲಿ ತಾಂಡವವಾಡುತ್ತಿದ್ದು, ಆಯತೊಲ್ಲಾ ಅಲಿ ಖಮೇನಿ ವಿರುದ್ಧ ಜನರು ಬೀದಿಗಿಳಿದಿದ್ದಾರೆ. ಬೀದಿಗಿಳಿಯುತ್ತಿರುವ ಸಾರ್ವಜನಿಕರು ಸರ್ವಾಧಿಕಾರ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದಾರೆ, ಮುಲ್ಲಾ, ಇರಾನ್ ಬಿಟ್ಟು ಹೋಗಿ ಎಂದು ಘೋಷಣೆ ಕೂಗುತ್ತಿದ್ದಾರೆ. ಪ್ರತಿಭಟನೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಕರು, ಕಾಲೇಜು ವಿದ್ಯಾರ್ಥಿಗಳೇ ಪಾಲ್ಗೊಂಡಿದ್ದು, ಬಾಂಗ್ಲಾದೇಶದಂತೆ ಇಲ್ಲೂ ಕೂಡ ಇದು ಜೆನ್​ ಝಿ ಪ್ರತಿಭಟನೆ ಎಂದೇ ಕರೆಯಲಾಗುತ್ತಿದೆ.

ಕಳೆದ ಕೆಲವು ದಿನಗಳಿಂದ ಟೆಹ್ರಾನ್‌ನಿಂದ ಹಿಡಿದು ಇತರ ಹಲವಾರು ಪ್ರಾಂತ್ಯಗಳವರೆಗೆ ರಾಷ್ಟ್ರವ್ಯಾಪಿ ಪ್ರತಿಭಟನೆಗಳು ನಡೆಯುತ್ತಿವೆ. ಪ್ರತಿಭಟನೆಗಳು ಹೆಚ್ಚು ಹಿಂಸಾತ್ಮಕವಾಗುತ್ತಿವೆ, ಭದ್ರತಾ ಪಡೆಗಳು ಮತ್ತು ಪ್ರತಿಭಟನಾಕಾರರ ನಡುವಿನ ಘರ್ಷಣೆಯಲ್ಲಿ ಹಲವಾರು ಜನರು ಸಾವನ್ನಪ್ಪಿದ್ದಾರೆ ಮತ್ತು ಗಾಯಗೊಂಡಿದ್ದಾರೆ.

ಮತ್ತಷ್ಟು ಓದಿ: Iran Protests: ‘ಮುಲ್ಲಾಗಳೇ ದೇಶಬಿಟ್ಟು ತೊಲಗಿ’- ಇರಾನ್​ನಲ್ಲಿ ಜನಘೋಷ; ತೀವ್ರ ಪ್ರತಿಭಟನೆಯಲ್ಲಿ 7 ಬಲಿ

ಹಣದುಬ್ಬರ
ತೀವ್ರ ಆರ್ಥಿಕ ಬಿಕ್ಕಟ್ಟು ಪ್ರಾಥಮಿಕ ಕಾರಣ, ಇರಾನಿನ ರಿಯಾಲ್‌ನ ವಿನಿಮಯ ದರದ ಕುಸಿತವೂ ಒಂದು ಅಂಶವಾಗಿದೆ. ಡಾಲರ್ ವಿರುದ್ಧ ರಿಯಾಲ್‌ನ ಮೌಲ್ಯವು ಈಗ ಐತಿಹಾಸಿಕ ಕನಿಷ್ಠ ಮಟ್ಟದಲ್ಲಿದೆ, ಸಾಮಾನ್ಯ ನಾಗರಿಕರ ಖರೀದಿ ಶಕ್ತಿಯನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ. ಹಣದುಬ್ಬರವು ಗಗನಕ್ಕೇರುತ್ತಿದೆ. ಪರಿಸ್ಥಿತಿ ಹೇಗಿದೆ ಎಂದರೆ ಒಂದು ಡಾಲರ್‌ನ ಮೌಲ್ಯವು ಇರಾನಿನ ಕರೆನ್ಸಿಯಲ್ಲಿ 1.4 ಮಿಲಿಯನ್ ರಿಯಾಲ್‌ಗಳನ್ನು ತಲುಪಿದೆ.

ಗಗನಕ್ಕೇರಿದ ವಸ್ತುಗಳ ಬೆಲೆಗಳು
ಆಹಾರ, ಔಷಧ ಮತ್ತು ಇಂಧನದಂತಹ ಮೂಲಭೂತ ವಸ್ತುಗಳ ಬೆಲೆಗಳು ಅಭೂತಪೂರ್ವವಾಗಿ ಏರಿವೆ. ನಿರುದ್ಯೋಗ ಸಮಸ್ಯೆ ಒಂದೆಡೆ, ವ್ಯಾಪಾರ ನಷ್ಟ, ನೂರಾರು ಮಾರುಕಟ್ಟೆಗಳು ಬಂದ್, ವ್ಯವಹಾರಗಳನ್ನು ಕೂಡ ತಾತ್ಕಾಲಿಕವಾಗಿ ನಿಲ್ಲಿಸುವ ಪರಿಸ್ಥಿತಿ ಎದುರಾಗಿದೆ. ಆರ್ಥಿಕ ನೋವು ಇನ್ನು ಮುಂದೆ ಉದ್ಯಮಿಗಳು ಅಥವಾ ವಿದ್ಯಾರ್ಥಿಗಳಿಗೆ ಸೀಮಿತವಾಗಿಲ್ಲ. ಇದು ಸಮಾಜದ ಪ್ರತಿಯೊಂದು ವರ್ಗದ ಮೇಲೆ ಪರಿಣಾಮ ಬೀರಿದೆ.

ಆಡಳಿತ ಮತ್ತು ನಾಯಕತ್ವದ ಮೇಲಿನ ನಿರಾಸೆ
ಜನರು ಕೇವಲ ಹಣದುಬ್ಬರವನ್ನು ಸರಿಪಡಿಸುವುದು ಮಾತ್ರವಲ್ಲದೆ, ಇಡೀ ಆಡಳಿತ ರಚನೆಯಲ್ಲಿ ಬದಲಾವಣೆ ತರಲು ಒತ್ತಾಯಿಸುತ್ತಿವೆ. ಏಕೆಂದರೆ ಸಮಸ್ಯೆಗಳು ಆರ್ಥಿಕ ವೈಫಲ್ಯಗಳಿಂದ ಮಾತ್ರವಲ್ಲ, ಆಡಳಿತ ನಿರ್ಧಾರಗಳು, ಮಿಲಿಟರಿ ಖರ್ಚು ಮತ್ತು ಭ್ರಷ್ಟಾಚಾರದಿಂದಲೂ ಉಂಟಾಗುತ್ತವೆ ಎಂಬುದು ಜನರ ವಾದ.
ಇರಾನಿಯನ್ನರು ಸರ್ಕಾರವನ್ನು ಪ್ರಶ್ನಿಸಿದ್ದು ಇದೇ ಮೊದಲಲ್ಲ. 2022 ರಲ್ಲಿ, ಹಿಜಾಬ್ ವಿರೋಧಿ ಪ್ರತಿಭಟನೆಯ ಸಮಯದಲ್ಲಿ ಪೊಲೀಸ್ ಕಸ್ಟಡಿಯಲ್ಲಿ ಮಹ್ಸಾ ಅಮಿನಿ ಸಾವನ್ನಪ್ಪಿದ ನಂತರ ಮಹಿಳೆಯರು ಮತ್ತು ಯುವಕರಿಂದ ವ್ಯಾಪಕ ಪ್ರತಿಭಟನೆಗಳು ಭುಗಿಲೆದ್ದಿದ್ದವು.

ಈ ಪ್ರತಿಭಟನೆಗಳು ನೇರವಾಗಿ ಖಮೇನಿ ವಿರುದ್ಧವೇ?
ಇರಾನ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಗಳು ನೇರವಾಗಿ ಖಮೇನಿ ಆಡಳಿತದ ವಿರುದ್ಧ ಎಂದು ಹೇಳಬಹುದು. ಜನರು ಈಗ ಉನ್ನತ ನಾಯಕತ್ವವನ್ನು, ವಿಶೇಷವಾಗಿ ಸುಪ್ರೀಂ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ನೇರವಾಗಿ ಪ್ರಶ್ನಿಸುತ್ತಿದ್ದಾರೆ. ಘೋಷಣೆಗಳು ಮತ್ತು ಸಾರ್ವಜನಿಕ ಹೇಳಿಕೆಗಳು ಅವರ ಅಧಿಕಾರ, ನಿರ್ಧಾರಗಳು ಮತ್ತು ಆಡಳಿತ ಶೈಲಿಯನ್ನು ತೀವ್ರವಾಗಿ ಟೀಕಿಸಿವೆ.ಜನರು ಸರ್ವಾಧಿಕಾರಕ್ಕೆ ಧಿಕ್ಕಾರ ಕೂಗಿದ್ದಾರೆ.

ಸರ್ಕಾರದ ಪ್ರತಿಕ್ರಿಯೆ ಏನು?
ಅಧಿಕಾರಿಗಳು ಭಾರೀ ಭದ್ರತಾ ಪಡೆಗಳನ್ನು ನಿಯೋಜಿಸಿ ಕಠಿಣ ಕ್ರಮ ಕೈಗೊಂಡಿದ್ದಾರೆ. ಪ್ರತಿಭಟನೆಗಳನ್ನು ನಿಯಂತ್ರಿಸಲು ಇಂಟರ್​ನೆಟ್​ಗೆ ನಿರ್ಬಂಧ ಹೇರಲಾಗಿದೆ. ಕೆಲವು ಗುಂಪುಗಳನ್ನು ವಿದೇಶಿ ಏಜೆಂಟ್‌ಗಳು ಎಂದು ಹಣೆಪಟ್ಟಿ ಕಟ್ಟುವ ಮೂಲಕ ಸರ್ಕಾರವು ಪ್ರತಿಭಟನೆಗಳನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದೆ.

ತನ್ನ ಪ್ರಜೆಗಳಿಗೆ ಭಾರತ ಸಲಹೆ
ಇರಾನ್​ನಲ್ಲಿ ನಡೆಯುತ್ತಿರುವ ಪ್ರತಿಭಟನೆ ಹಿನ್ನೆಲೆ ಭಾರತವು ಇರಾನ್​ನಲ್ಲಿರುವ ತನ್ನ ಪ್ರಜೆಗಳಿಗೆ ಸಲಹೆ ನೀಡಿದೆ. ಪ್ರತಿಭಟನಾ ಪ್ರದೇಶಗಳಿಗೆ ತೆರಳದಂತೆ , ಅನಿವಾರ್ಯವಲ್ಲದ ಪ್ರಯಾಣವನ್ನು ತಪ್ಪಿಸುವಂತೆ ಸೂಚಿಸಲಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕೈ ಮುರಿದು, ಕಣ್ಣಿಗೆ ಚಾಕು ಇರಿದ ಪತ್ನಿ: ಪೊಲೀಸ್​​ ಠಾಣೆಗೆ ಓಡೋಡಿ ಬಂದ ರೌಡಿಶೀಟರ್​​ – Kannada News | Notorious Rowdy Syed Asgar Attacked by Wife: Hand Broken, Eye Stabbed in Bengaluru

ರೌಡಿಶೀಟರ್​​ ಮೇಲೆ ಪತ್ನಿಯಿಂದ ಹಲ್ಲೆ

ಬೆಂಗಳೂರು, ಜನವರಿ 06: ಖಾಕಿ ಭಯವಿಲ್ಲದೆ ರೌಡಿಶೀಟರ್​​ಗಳು ಮೇಲಿಂದ ಮೇಲೆ ಅಟ್ಟಹಾಸ ಮೆರೆಯೋದನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಜೈಲಿಗೆ ಹೋಗಿ ಶಿಕ್ಷೆ ಅನುಭವಿಸಿ ಬಂದರೂ ಕೆಲವರು ಮಾತ್ರ ಬುದ್ಧಿ ಕಲಿಯಲ್ಲ. ಕಾರಾಗೃಹದಿಂದ ಹೊರಬಂದ ಬಳಿಕವೂ ಮತ್ತದೇ ತಮ್ಮ ಹಳೇ ಚಾಳಿ ಮುಂದುವರಿಸುತ್ತಾರೆ. ಕೆಲವೊಮ್ಮೆ ಪೊಲೀಸರ ಕಣ್ಣಿಗೂ ಯಾಮಾರಿಸಿ ಓಡಾಡಿಕೊಂಡು ಇರ್ತಾರೆ. ಇಂತಹುದ್ದೇ ಸಾಲಿಗೆ ಸೇರುವ ರೌಡಿಶೀಟರ್​​ ಸೈಯದ್ ಅಸ್ಗರ್ ಈಗ ತಾನಾಗಿಯೇ ಪೊಲೀಸರ ಬಳಿ ಓಡೋಡಿ ಬಂದಿದ್ದಾನೆ. ಇದಕ್ಕೆಲ್ಲ ಕಾರಣ ಆತನ ಹೆಂಡತಿ ಅಂದ್ರೆ ನೀವು ನಂಬಲೇ ಬೇಕು.

ಹೌದು, ಪುಂಡರಿಗೆ ಅಂಜದ ಮತ್ತು ಪೊಲೀಸರು ಅಂದ್ರೂ ಭಯ ಪಡದ ರೌಡಿಶೀಟರ್​​ ಸೈಯದ್ ಅಸ್ಗರ್ ಹೆಂಡತಿ ಅಂದ್ರೆ ಬೆಚ್ಚಿ ಬೀಳ್ತಾನೆ. ಗಾಂಜಾ ಪೆಡ್ಲಿಂಗ್, ಕಳ್ಳತನ, ಕೊಲೆ ಯತ್ನದಂತಹ ಗಂಭೀರ ಆರೋಪ ಹೊಂದಿರೋ ಈತ ಕೇಸ್​ಗಳಾದ ಪೊಲೀಸರಿಗೂ ಚಳ್ಳೆಹಣ್ಣು ತಿನ್ನಿಸಿ ಎಸ್ಕೇಪ್​​ ಆಗ್ತಿದ್ದ. ಹೀಗಿರುವಾಗ ಇತ್ತೀಚೆಗಷ್ಟೇ ಜೈಲಿನಿಂದ ಹೊರ ಬಂದಿರೋ ಈತ ಮತ್ತೆ ಪೊಲೀಸ್​​ ಠಾಣೆ ಮೆಟ್ಟಿಲು ಹತ್ತಿದ್ದಾನೆ. ವಿಶೇಷ ಅಂದ್ರೆ ಪ್ರತಿಬಾರಿ ಆರೋಪಿಯಾಗಿ ಬರ್ತಿದ್ದ ಈತ ಈ ಬಾರಿ ಸಂತ್ರಸ್ತನಾಗಿ ಬಂದಿದ್ದಾನೆ. 2ನೇ ಪತ್ನಿಯನ್ನ ಬಿಡು ಎಂದು ಮೊದಲ ಹೆಂಡತಿ ರೌಡಿಶೀಟರ್ ಶೀಟರ್ ಕೈ ಮುರಿದಿದ್ದಲ್ಲದೆ, ಕಣ್ಣಿಗೆ ಚಾಕು ಕೂಡ ಇರಿದಿದ್ದಾಳೆ. ಹೀಗಾಗಿ ಪತ್ನಿ ವಿರುದ್ಧ ಜೆಜೆ ನಗರ ಠಾಣೆಗೆ ಸೈಯದ್ ಅಸ್ಗರ್ ದೂರು ನೀಡಿದ್ದಾರೆ. ಆತನಿಗೆ ಎರಡನೇ ಪತ್ನಿ ಸಾಥ್​​ ಕೊಟ್ಟಿದ್ದಾಳೆ.

ಇದನ್ನೂ ಓದಿ: ಬಳ್ಳಾರಿ ಬೆನ್ನಲ್ಲೇ ಬೆಂಗಳೂರಿನಲ್ಲೂ ಗಲಭೆ; ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲು ತೂರಾಟ

ರೌಡಿಶೀಟರ್​​ ಸೈಯದ್ ಅಸ್ಗರ್ ಮೊದಲ ಪತ್ನಿ ಈ ಮೊದಲು ಕೂಡ ವಿಡಿಯೋ ಮಾಡಿ ಬೆದರಿಕೆ ಹಾಕಿದ್ದಳು. ನಿನ್ನ ತಲೆ ಕಡಿಯುತ್ತೇನೆ, ಎರಡು ದಿನ ಕಾಯ್ತಿರು ಎಂದು ವಾರ್ನಿಂಗ್ ಮಾಡಿದ್ದಳು. ಮಚ್ಚು ಮತ್ತು ಬಾಕು ಹಿಡಿದು ವಿಡಿಯೋ ಮಾಡಿದ್ದ ಬೆನ್ನಲ್ಲೇ ಪತಿಯ ಮೇಲೆ ಆಕೆ ಅಟ್ಯಾಕ್​ ಮಾಡಿದ್ದಾಳೆ. ಸದ್ಯ ರೌಡಿಶೀಟರ್​​ನಿಂದ ದೂರು ಪಡೆದಿರುವ ಪೊಲೀಸರು, ಘಟನೆ ಸಂಬಂಧ ಕೇಸ್ ದಾಖಲಿಸಿಕೊಂಡಿದ್ದಾರೆ. ಇಷ್ಟು ದಿನ ಬೇರೆಯವರಿಗೆ ಬೆದರಿಕೆ ಹಾಕುತ್ತಿದ್ದ ಸೈಯದ್ ಅಸ್ಗರ್ ಈಗ ಪತ್ನಿ ಬೆದರಿಕೆಗೆ ಅಂಜಿರೋದಿಲ್ಲಿ ಗಮನಾರ್ಹ.

ವರದಿ: ಪ್ರದೀಪ್​​, ಟಿವಿ9 ಬೆಂಗಳೂರು

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Exit mobile version