ದಾವಣಗೆರೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಲು ಫಂಡಿಂಗ್​​; ಅಯೂಬ್ ಪೈಲ್ವಾನ್

ದಾವಣಗೆರೆ ಉಪಚುನಾವಣೆ: ಕಾಂಗ್ರೆಸ್ ಅಭ್ಯರ್ಥಿಯನ್ನ ಸೋಲಿಸಲು ಫಂಡಿಂಗ್​​; ಅಯೂಬ್ ಪೈಲ್ವಾನ್

ದಾವಣಗೆರೆ, ಏಪ್ರಿಲ್​ 11: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯನ್ನು ಸೋಲಿಸಲು ಕೆಲವರು ಹುನ್ನಾರ ನಡೆಸಿದ್ದರು. ಮತ್ತೆ ಕೆಲ ನಾಯಕರು ಫಂಡಿಂಗ್​​ ಸಹ ಮಾಡಿದ್ದರು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್​​ ಗಂಭೀರ ಆರೋಪ ಮಾಡಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಫಂಡಿಂಗ್ ಮಾಡಿದವರ ಬಗ್ಗೆ ಪಕ್ಷದ ಹೈಕಮಾಂಡ ಬಳಿ ಮಾಹಿತಿ ಇದೆ.‌ ಸೂಕ್ತ ಕ್ರಮಕೈಗೊಳ್ಳುತ್ತಾರೆ. ಜೊತೆಗೆ ವಿಧಾನ ಪರಿಷತ್ ಸದಸ್ಯ ಅಬ್ದುಲ್ ಜಬ್ಬಾರ್ ಮೂರು ಸಲ ಎಂಎಲ್​​ಸಿ ಆಗಿದ್ದಾರೆ.‌ ಪಕ್ಷದ ಕೆಲಸ ಬಂದು ಮಾಡಿಬೇಕು. ಅದನ್ನ ಬಿಟ್ಟು ಕರೆದಿಲ್ಲ ಎಂದರೇ ಹೇಗೆ. ನನ್ನ ಸಹೋದರ ಸಾಧಿಕ್ ಪೈಲ್ವಾನ್ ಸ್ಪರ್ಧೆ ಮಾಡಲು ಮುಂದಾಗ ಸಿಎಂ ಸಿದ್ದರಾಮಯ್ಯ ನಮಗೆ ಫೋನ್​ ಮಾಡಿದ್ದರು. ಇದಾದ ಬಳಿಕ ಎಲ್ಲವೂ ಸರಿಯಾಗಿದೆ. ಒಂದಂತು ಸತ್ಯ ಈ ಚುನಾವಣೆಯಲ್ಲಿ ನಮ್ಮ ಕಾಂಗ್ರೆಸ್ ಅಭ್ಯರ್ಥಿ ಸಮರ್ಥ ಶಾಮನೂರ ಗೆಲ್ಲುತ್ತಾರೆ ಎಂದರು.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Leave a Reply

Your email address will not be published. Required fields are marked *