Kumkumarchana: ಕುಂಕುಮಾರ್ಚನೆಯನ್ನು ಮಹಿಳೆಯರು ಮಾಡಿಸಬಹುದಾ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | Kumkumarchana: Who Can Perform This Devotional Practice and Its Benefits

ಕುಂಕುಮಾರ್ಚನೆಯ ಮಹತ್ವ ಮತ್ತು ಅದನ್ನು ಯಾರು ಆಚರಿಸಬಹುದು ಎಂಬ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಮಾಹಿತಿ ನೀಡಿದ್ದಾರೆ. ದೇವಸ್ಥಾನಗಳಲ್ಲಿ, ಮನೆಯಲ್ಲಿ ದೇವಿಗೆ ಕುಂಕುಮಾರ್ಚನೆ ಮಾಡಿಸುವುದು ಸಾಮಾನ್ಯ. ಆದರೆ ಈ ಪೂಜಾ ವಿಧಿಯನ್ನು ವಯಸ್ಸಾದವರು, ದೇವ ಭಕ್ತಿ ಇರುವವರು ಅಥವಾ ಆಧ್ಯಾತ್ಮಿಕ ಕ್ಷೇತ್ರದಲ್ಲಿ ಇರುವವರು ಮಾತ್ರ ಮಾಡಬೇಕೇ ಎಂಬ ಪ್ರಶ್ನೆ ಹಲವರಲ್ಲಿದೆ. ಇದಕ್ಕೆ ಗುರೂಜಿಯವರು ‘ಕುಂಕುಮಾರ್ಚನೆಯನ್ನು ಎಲ್ಲರೂ ಮಾಡಿಸಬಹುದು’ ಎಂದು ಸ್ಪಷ್ಟ ಉತ್ತರವನ್ನು ನೀಡಿದ್ದಾರೆ.

ವಿದ್ಯಾರ್ಥಿಗಳು, ವ್ಯಾಪಾರಸ್ಥರು, ರೈತರು, ಮತ್ತು ಉದ್ಯೋಗಿಗಳು ಸೇರಿದಂತೆ ತಮ್ಮ ವೃತ್ತಿಗಳಲ್ಲಿ ಇರುವ ಪ್ರತಿಯೊಬ್ಬರೂ ಈ ಪೂಜೆಯನ್ನು ಆಚರಿಸಬಹುದು. ಇದು ಅವರವರ ಜೀವನದಲ್ಲಿ ಸಕಾರಾತ್ಮಕ ಪರಿಣಾಮಗಳನ್ನು ತರುತ್ತದೆ. ವಿಶೇಷವಾಗಿ, ಮಕ್ಕಳಿಂದ ಕುಂಕುಮಾರ್ಚನೆ ಮಾಡಿಸುವುದಕ್ಕೆ ಹೆಚ್ಚಿನ ಮಹತ್ವವಿದೆ. ಮಕ್ಕಳು, ಪುಟ್ಟ ಮಕ್ಕಳು, ಹತ್ತು ವರ್ಷದ ಗಂಡು ಮಕ್ಕಳು, ಮತ್ತು ಋತುಮತಿ ಆಗುವ ಹಂತದಲ್ಲಿರುವ ಹೆಣ್ಣು ಮಕ್ಕಳಿಂದ (ಅದಕ್ಕೆ ಸೂಕ್ತವಲ್ಲದ ಕಾಲವನ್ನು ಹೊರತುಪಡಿಸಿ) ಕುಂಕುಮಾರ್ಚನೆ ಮಾಡಿಸಿದರೆ, ಅವರಿಗೆ ಸಂಸ್ಕಾರ, ಸಪ್ತ ಚಕ್ರಗಳ ಜಾಗೃತಿ, ಜ್ಞಾನ ವೃದ್ಧಿ, ತಾಳ್ಮೆ, ಸಹನೆ ಮತ್ತು ದುಷ್ಟ ಶಕ್ತಿಗಳಿಂದ ರಕ್ಷಣೆ ದೊರೆಯುತ್ತದೆ. ಮಕ್ಕಳು ಗುರುವಾರಗಳಂದು ಈ ಪೂಜೆಯನ್ನು ಮಾಡಿದರೆ ಹೆಚ್ಚು ಶುಭ.

ಕುಂಕುಮಾರ್ಚನೆಯನ್ನು ಪುರುಷರು ಮಾಡಬಹುದೇ ಎಂಬ ಪ್ರಶ್ನೆಗೆ, ಹೌದು ಎಂದು ಉತ್ತರ ನೀಡಲಾಗಿದೆ. ಪುರುಷರು ಕುಂಕುಮಾರ್ಚನೆ ಮಾಡಿದರೆ, ವಿಶೇಷವಾಗಿ ವಾರಕ್ಕೊಮ್ಮೆ ಶುಕ್ರವಾರದಂದು, ತಾಯಿಯ ಅನುಗ್ರಹ ಬೇಗ ಸಿಗುತ್ತದೆ ಎಂದು ನಂಬಲಾಗಿದೆ. ವ್ಯಾಪಾರದಲ್ಲಿ ನಷ್ಟ ಅನುಭವಿಸಿದವರು, ಸಾಲದ ಹೊರೆಯಿಂದ ಬಳಲುತ್ತಿರುವವರು (ಬ್ಯಾಂಕ್ ಸಾಲ, ಬಡ್ಡಿ ಸಾಲ), ಮತ್ತು ವ್ಯವಸಾಯಕ್ಕೆ ಸಾಲ ಮಾಡಿದ ಪುರುಷರು ಶುಕ್ರವಾರದ ದಿನ ಸಂಧ್ಯಾಕಾಲದಲ್ಲಿ ಮನೆಯಲ್ಲಿ ಅಥವಾ ದೇವಸ್ಥಾನದಲ್ಲಿ ಅಷ್ಟೋತ್ತರ ಸಹಿತ ಕುಂಕುಮಾರ್ಚನೆ ಮಾಡಿದರೆ ಬಹಳ ಶುಭವಾಗುತ್ತದೆ. ತಾಯಿಗೆ ಮಗುವಿನ ರೂಪವಾಗಿ ಕಾಣಿಸಿ ಬೇಗ ಫಲ ಸಿಗುತ್ತದೆ ಎಂದು ಹೇಳಲಾಗುತ್ತದೆ.

ಮಹಿಳೆಯರು ಕುಂಕುಮಾರ್ಚನೆ ಮಾಡುವುದರಿಂದ ದೀರ್ಘ ಸೌಮಂಗಲ್ಯ, ಮಕ್ಕಳೊಂದಿಗೆ ಉತ್ತಮ ಬಾಂಧವ್ಯ, ಗಂಡನ ದುರಭ್ಯಾಸಗಳ ನಿವಾರಣೆ, ಆಸ್ತಿ ಕಲಹಗಳ ಇತ್ಯರ್ಥ, ಆಸ್ತಿ ವೃದ್ಧಿ, ಹಣಕಾಸಿನ ಅನುಕೂಲ, ಅಪವಾದಗಳ ನಿವಾರಣೆ, ಮತ್ತು ಗಂಡನಿಗೆ ಅಧಿಕಾರ ಪ್ರಾಪ್ತಿ ಸೇರಿದಂತೆ ಹಲವು ಶುಭ ಫಲಗಳು ದೊರೆಯುತ್ತವೆ. ಲಲಿತಾ ಸಹಸ್ರನಾಮ ಅಥವಾ ಅಷ್ಟೋತ್ತರ ಹೇಳಿಕೊಂಡು ಕುಂಕುಮಾರ್ಚನೆ ಮಾಡಿದಾಗ ಈ ಫಲಗಳು ಹೆಚ್ಚಾಗುತ್ತವೆ.

ಇದನ್ನೂ ಓದಿ: ಪ್ರಪಂಚದ ಏಕೈಕ ಜಲಾಧಿವಾಸ ಗಣಪ; ಗುಡ್ಡಟ್ಟು ವಿನಾಯಕ ದೇವಸ್ಥಾನದ ಇಂಟರೆಸ್ಟಿಂಗ್​ ಸಂಗತಿ ಇಲ್ಲಿದೆ

ರೋಗಿಗಳು ಮತ್ತು ದೇಹದಲ್ಲಿ ಯಾವುದಾದರೂ ಕಂಟಕ ಹೊಂದಿರುವವರೂ ಕುಂಕುಮಾರ್ಚನೆ ಮಾಡುವುದರಿಂದ ಸಾಕಷ್ಟು ಶುಭ ಫಲಗಳನ್ನು ಪಡೆಯುತ್ತಾರೆ. ಸಕಾರಾತ್ಮಕ ಆಲೋಚನೆಗಳೊಂದಿಗೆ ಗುರುವಾರ, ಶುಕ್ರವಾರ, ಬುಧವಾರದಂದು ಈ ಪೂಜೆಯನ್ನು ಆಚರಿಸುವವರಿಗೆ ಆಜ್ಞಾಚಕ್ರದ ಜಾಗೃತಿ, ರಕ್ತ ಸಂಚಾರ ಸುಧಾರಣೆ, ಮನಸ್ಸಿನ ಭಾವನೆಗಳಲ್ಲಿ ಸಕಾರಾತ್ಮಕ ಬದಲಾವಣೆಗಳು ಉಂಟಾಗುತ್ತವೆ. ಮಕ್ಕಳು, ಗಂಡಸರು, ವೃದ್ಧರು, ಅಶಕ್ತರು ಸೇರಿದಂತೆ ಎಲ್ಲರೂ ನಂಬಿಕೆಯಿಂದ ಕುಂಕುಮಾರ್ಚನೆ ಮಾಡಿದಾಗ ಅವರ ಆಸೆ ಆಕಾಂಕ್ಷೆಗಳು ಈಡೇರಿ, ಸಮಾಜದಲ್ಲಿ ಗುರುತಿಸಿಕೊಳ್ಳುವ ಅವಕಾಶ ಸಿಗುತ್ತದೆ. ಶನಿ ಕಾಟ ಮತ್ತು ದುಷ್ಟ ಶಕ್ತಿಗಳ ಕಾಟ ನಿವಾರಣೆಯಾಗಿ ಆತ್ಮಸ್ಥೈರ್ಯ ವೃದ್ಧಿಸುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಬಾಂಗ್ಲಾದೇಶ್​ನಲ್ಲಿ ಐಪಿಎಲ್ ಬ್ಯಾನ್: ಮುಂದೇನು?

ಬಾಂಗ್ಲಾದೇಶ್ ಸರ್ಕಾರವು ಇಂಡಿಯನ್ ಪ್ರೀಮಿಯರ್ ಲೀಗ್ಪ್ರೀಮಿಯರ್ ಲೀಗ್ (ಐಪಿಎಲ್) ಪಂದ್ಯಗಳ ಪ್ರಸಾರವನ್ನು ಅನಿರ್ದಿಷ್ಟಾವಧಿಗೆ ನಿಷೇಧಿಸಿದೆ. ಐಪಿಎಲ್​ನಿಂದ ಬಾಂಗ್ಲಾ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಹೊರಗಿಟ್ಟ ಬೆನ್ನಲ್ಲೇ ಬಾಂಗ್ಲಾದೇಶ್ ತನ್ನ ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಪ್ರಸಾರಕ್ಕೆ ನಿಷೇಧ ಹೇರಿದೆ.

ಇದಕ್ಕೂ ಮುನ್ನವೇ ಬಾಂಗ್ಲಾದೇಶ್​​ನ ಕ್ರೀಡಾ ಸಚಿವಾಲಯದ ಉಸ್ತುವಾರಿ ಸಚಿವ ಆಸಿಫ್ ನಜ್ರುಲ್ ಬಾಂಗ್ಲಾದಲ್ಲಿ ಐಪಿಎಲ್ ಬ್ಯಾನ್ ಮಾಡುವ ಸೂಚನೆ ನೀಡಿದ್ದರು.  ಬಾಂಗ್ಲಾದೇಶ್ ಆಟಗಾರನಿಗೆ ಮಾಡಲಾದ ಅವಮಾನಕ್ಕೆ ಪ್ರತೀಕಾರವಾಗಿ ನಮ್ಮ ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಪಂದ್ಯಗಳ ಪ್ರಸಾರವನ್ನು ನಿಲ್ಲಿಸುವಂತೆ ನಾನು ಮಾಹಿತಿ ಮತ್ತು ಪ್ರಸಾರ ಸಚಿವರನ್ನು ವಿನಂತಿಸಿದ್ದೇನೆ ಎಂದು ತಿಳಿಸಿದ್ದರು.

ಅಲ್ಲದೆ ಯಾವುದೇ ಸಂದರ್ಭದಲ್ಲೂ ಬಾಂಗ್ಲಾದೇಶ್, ಬಾಂಗ್ಲಾದೇಶ್ ಕ್ರಿಕೆಟ್ ಅಥವಾ ಬಾಂಗ್ಲಾದೇಶ ಕ್ರಿಕೆಟಿಗರ ಅವಮಾನವನ್ನು ನಾವು ಸಹಿಸುವುದಿಲ್ಲ. ಗುಲಾಮಗಿರಿಯ ದಿನಗಳು ಮುಗಿದಿವೆ. ಹೀಗಾಗಿ ನಮ್ಮ ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್​ನ ಪ್ರಸಾರ ನಿಷೇಧಿಸಲು ಮನವಿ ಸಲ್ಲಿಸಿದ್ದೇನೆ ಎಂದು ನಜ್ರುಲ್ ಬಹಿರಂಗ ಹೇಳಿಕೆ ನೀಡಿದ್ದರು.

ಈ ಹೇಳಿಕೆ ಬೆನ್ನಲ್ಲೇ ಇದೀಗ ಬಾಂಗ್ಲಾದೇಶ್​​ನಲ್ಲಿ ಐಪಿಎಲ್​ ಪ್ರಸಾರವನ್ನು ನಿಷೇಧಿಸಲಾಗಿದೆ. ಈಗಾಗಲೇ ಐಪಿಎಲ್ಪಂದ್ಯಗಳಿಗೆ ಪಾಕಿಸ್ತಾನ್ ಸರ್ಕಾರ ನಿಷೇಧ ಹೇರಿದ್ದಾರೆ. ಇತ್ತ ಬಾಂಗ್ಲಾದೇಶ್ ಕೂಡ ಪಾಕ್ ಮಾದರಿಯಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಲೈವ್ ಪ್ರಸಾರಕ್ಕೆ ಬ್ರೇಕ್ ಹಾಕಿದ್ದಾರೆ. 

ಮುಂದೇನು?

ಭಾರತದಲ್ಲಿ ನಡೆಯಲಿರುವ ಬಾಂಗ್ಲಾದೇಶ್ ತಂಡದ ಟಿ20 ವಿಶ್ವಕಪ್ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಈಗಾಗಲೇ ಮನವಿ ಸಲ್ಲಿಸಿದೆ. ಇಂಡಿಯನ್ ಪ್ರೀಮಿಯರ್ ಲೀಗ್​ನಿಂದ ಬಾಂಗ್ಲಾ ಆಟಗಾರ ಮುಸ್ತಫಿಝುರ್ ರೆಹಮಾನ್ ಅವರನ್ನು ಹೊರಗಿಟ್ಟ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಹೀಗಾಗಿ ಬಾಂಗ್ಲಾದೇಶ್ ತಂಡದ ಟಿ20 ವಿಶ್ವಕಪ್ ಪಂದ್ಯಗಳು ಭಾರತದಲ್ಲಿ ನಡೆಯುವುದು ಅನುಮಾನ.

ಈ ಬಗ್ಗೆ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಪ್ರತಿಕ್ರಿಯಿಸಿರುವ ಬಾಂಗ್ಲಾದೇಶದ ಕ್ರೀಡಾ ಸಲಹೆಗಾರ ಆಸಿಫ್ ನಜ್ರುಲ್, ಬಾಂಗ್ಲಾ ತಂಡದ ಪಂದ್ಯಗಳಿಗೆ ಪರ್ಯಾಯ ಸ್ಥಳವಾಗಿ ಶ್ರೀಲಂಕಾವನ್ನು ಪ್ರಸ್ತಾಪಿಸಲು ಮಧ್ಯಂತರ ಸರ್ಕಾರವು ಬಿಸಿಬಿಗೆ ನಿರ್ದೇಶನ ನೀಡಿದೆ ಎಂದು ತಿಳಿಸಿದ್ದಾರೆ.

ಬಾಂಗ್ಲಾದೇಶ್ ಕ್ರಿಕೆಟಿಗರ ಅವಮಾನವನ್ನು ನಾವು ಸಹಿಸುವುದಿಲ್ಲ. ತೀವ್ರವಾದಿ ಕೋಮುವಾದಿ ಶಕ್ತಿಗಳಿಗೆ ಮಣಿದು, ಭಾರತೀಯ ಕ್ರಿಕೆಟ್ ಮಂಡಳಿಯು ಬಾಂಗ್ಲಾದೇಶದ ಕ್ರಿಕೆಟಿಗ ಮುಸ್ತಾಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈ ಬಿಟ್ಟಿದ್ದಾರೆ.

ಬಾಂಗ್ಲಾದೇಶದ ಕ್ರಿಕೆಟಿಗನೊಬ್ಬನಿಗೆ ಭಾರತದಲ್ಲಿ ಆಡಲು ಸಾಧ್ಯವಾಗದಿದ್ದರೆ, ಬಾಂಗ್ಲಾದೇಶ್ ತನ್ನ ಇಡೀ ಕ್ರಿಕೆಟ್ ತಂಡವು ವಿಶ್ವಕಪ್ ಆಡಲು ಭಾರತಕ್ಕೆ ಪ್ರಯಾಣಿಸುವುದು ಸುರಕ್ಷಿತವೆಂದು ಪರಿಗಣಿಸಲು ಸಾಧ್ಯವಿಲ್ಲ. ಹೀಗಾಗಿ ಟಿ20 ವಿಶ್ವಕಪ್​ನ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಿಸಿಬಿ ಐಸಿಸಿಗೆ ಪತ್ರ ಬರೆದಿದೆ.

ಇದನ್ನೂ ಓದಿ: ಅಬ್ಬರ ಸಿಡಿಲಬ್ಬರ… ಟ್ರಾವಿಸ್ ಹೆಡ್​ ಬ್ಯಾಟ್​ನಿಂದ ದಾಖಲೆಯ ಸೆಂಚುರಿ

ಬಾಂಗ್ಲಾದೇಶ್ ಕ್ರಿಕೆಟ್ ಬೋರ್ಡ್​ನ ಈ ಮನವಿಯನ್ನು ಐಸಿಸಿ ಪರಿಗಣಿಸುವ ಸಾಧ್ಯತೆಯಿದೆ. ಅದರಂತೆ ಮುಂಬರುವ ಟಿ20 ವಿಶ್ವಕಪ್​ನ ಬಾಂಗ್ಲಾದೇಶದ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸುವ ಸಾಧ್ಯತೆ ಹೆಚ್ಚಿದೆ.

 

 

Source link

Suresh Kalmadi Death: ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್​ನ ಹಿರಿಯ ನಾಯಕ ಸುರೇಶ್ ಕಲ್ಮಾಡಿ ನಿಧನ – Kannada News | Former union minister, Senior Congress Leader Suresh Kalmadi Passes Away at 81 in Pune

ನವದೆಹಲಿ, ಜನವರಿ 06: ಕೇಂದ್ರದ ಮಾಜಿಸ ಚಿವ, ಕಾಂಗ್ರೆಸ್​​ನ ಹಿರಿಯ ನಾಯಕ ಸುರೇಶ್ ಕಲ್ಮಾಡಿ(Suresh Kalmadi) ನಿಧನರಾಗಿದ್ದಾರೆ. ಸುರೇಶ್ ಕಲ್ಮಾಡಿ ದೀರ್ಘಕಾಲದ ಅನಾರೋಗ್ಯದಿಂದ ಮಂಗಳವಾರ ಪುಣೆಯ ದೀನನಾಥ್ ಮಂಗೇಶ್ಕರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಅವರ ಪಾರ್ಥಿವ ಶರೀರವನ್ನು ಪುಣೆಯ ಎರಾಂಡ್‌ವಾನೆಯಲ್ಲಿರುವ ಕಲ್ಮಾಡಿ ಹೌಸ್‌ನಲ್ಲಿ ಮಧ್ಯಾಹ್ನ 2 ಗಂಟೆಯವರೆಗೆ ಇರಿಸಲಾಗುವುದು. ಮಧ್ಯಾಹ್ನ 3.30 ಕ್ಕೆ ವೈಕುಂಠ ಸ್ಮಶಾನಭೂಮಿಯಲ್ಲಿ ಅಂತ್ಯಕ್ರಿಯೆ ನಡೆಯಲಿದೆ ಎಂದು ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ.

ಅವರು ಭಾರತೀಯ ಒಲಿಂಪಿಕ್ ಅಸೋಸಿಯೇಷನ್‌ನ ಮಾಜಿ ಅಧ್ಯಕ್ಷರಾಗಿದ್ದರು.ಕಳೆದ ಕೆಲವು ದಿನಗಳಿಂದ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಸಕ್ರಿಯ ರಾಜಕೀಯದಿಂದ ಹಿಂದೆ ಸರಿದಿದ್ದರು. ಸುರೇಶ್ ಕಲ್ಮಾಡಿ ಮೇ 1, 1944 ರಂದು ಜನಿಸಿದ್ದರು.ರಾಜಕೀಯಕ್ಕೆ ಪ್ರವೇಶಿಸುವ ಮೊದಲು ಅವರು ಆರು ವರ್ಷಗಳಿಗೂ ಹೆಚ್ಚು ಕಾಲ ಭಾರತೀಯ ವಾಯುಪಡೆಯಲ್ಲಿ ಪೈಲಟ್ ಆಗಿ ಸೇವೆ ಸಲ್ಲಿಸಿದ್ದರು.

ವಾಯುಪಡೆಯಿಂದ ನಿವೃತ್ತರಾದ ನಂತರ, ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದೊಂದಿಗೆ ತಮ್ಮ ರಾಜಕೀಯ ಜೀವನವನ್ನು ಪ್ರಾರಂಭಿಸಿದರು. ಅವರು ಪುಣೆಯಿಂದ ದೀರ್ಘಕಾಲ ಸಂಸತ್ ಸದಸ್ಯರಾಗಿದ್ದರು ಮತ್ತು ಪಿ.ವಿ. ನರಸಿಂಹರಾವ್ ಸರ್ಕಾರದಲ್ಲಿ ರೈಲ್ವೆ ರಾಜ್ಯ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. ಅವರು ರೈಲ್ವೆ ಬಜೆಟ್ ಮಂಡಿಸಿದ ಏಕೈಕ ರಾಜ್ಯ ಸಚಿವರಾಗಿದ್ದರು.

ಹಿರಿಯ ಕಾಂಗ್ರೆಸ್ ನಾಯಕ ಸುರೇಶ್ ಕಲ್ಮಾಡಿ ಅವರನ್ನು ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ವ್ಯಕ್ತಿ ಎಂದು ಪರಿಗಣಿಸಲಾಗಿತ್ತು, ಹೈಕಮಾಂಡ್ ಜೊತೆ ಉತ್ತಮ ಸಂಬಂಧ ಹೊಂದಿದ್ದರು. ಅವರು ರೈಲ್ವೆ ರಾಜ್ಯ ಸಚಿವರಾಗಿ ಸೇವೆ ಸಲ್ಲಿಸಿದ್ದರು ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ​​(ಐಒಎ) ಅಧ್ಯಕ್ಷರೂ ಆಗಿದ್ದರು.

2010 ರ ಕಾಮನ್‌ವೆಲ್ತ್ ಕ್ರೀಡಾಕೂಟದ ಸಂದರ್ಭದಲ್ಲಿ ನಡೆದ ಭ್ರಷ್ಟಾಚಾರ ಪ್ರಕರಣದಲ್ಲಿ ಐಒಎಯಲ್ಲಿ ಅವರನ್ನು ಪ್ರಶ್ನಿಸಲಾಗಿತ್ತು ಮತ್ತು ಹಣ ದುರುಪಯೋಗದ ಆರೋಪದ ಮೇಲೆ ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿ ಅವರ ಮೇಲೆ ಆರೋಪ ಹೊರಿಸಲಾಯಿತು. ಅವರನ್ನು ಏಪ್ರಿಲ್ 2011 ರಲ್ಲಿ ಬಂಧಿಸಲಾಯಿತು, ನಂತರ ಕಾಂಗ್ರೆಸ್ ಅವರನ್ನು ಪಕ್ಷದಿಂದ ಅಮಾನತುಗೊಳಿಸಿತ್ತು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 8:35 am, Tue, 6 January 26

Source link

ಅಬ್ಬರ ಸಿಡಿಲಬ್ಬರ… ಟ್ರಾವಿಸ್ ಹೆಡ್​ ಬ್ಯಾಟ್​ನಿಂದ ದಾಖಲೆಯ ಸೆಂಚುರಿ – Kannada News | Travis Head record Breaking Century in Ashes 2026

ಆ್ಯಶಸ್ ಸರಣಿಯಲ್ಲಿ ಟ್ರಾವಿಸ್ ಹೆಡ್ (Travis Head) ಸಿಡಿಲಬ್ಬರ ಮುಂದುವರೆದಿದೆ. ಸಿಡ್ನಿ ಕ್ರಿಕೆಟ್​ ಗ್ರೌಂಡ್​ನಲ್ಲಿ ನಡೆಯುತ್ತಿರುವ ಈ ಸರಣಿಯ 5ನೇ ಪಂದ್ಯದಲ್ಲೂ ಹೆಡ್ ಭರ್ಜರಿ ಸೆಂಚುರಿ ಸಿಡಿಸಿದ್ದಾರೆ. ಅದು ಕೂಡ ಅತೀ ವೇಗದಲ್ಲಿ ಎಂಬುದು ವಿಶೇಷ. ಈ ಮ್ಯಾಚ್​ನಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್​ನಲ್ಲಿ 384 ರನ್​ ಕಲೆಹಾಕಿದ್ದರು.

Source link

Dharwad: ಶಾರ್ಟ್​​ ಸರ್ಕ್ಯೂಟ್​ನಿಂದ ಬೆಂಕಿ; ಮೂರು ಅಂಗಡಿಗಳು ಅಗ್ನಿಗಾಹುತಿ – Kannada News | Three Shops Catch Fire After Short Circuit in Malabaddi Layout, Dharwad

ಧಾರವಾಡ, ಜನವರಿ 06: ಶಾರ್ಟ್​​ ಸರ್ಕ್ಯೂಟ್​ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ ಮೂರು ಅಂಗಡಿಗಳು ಸುಟ್ಟು ಕರಕಲಾಗಿರುವ ಘಟನೆ ಧಾರವಾಡ ನಗರದ ಮಾಳಮಡ್ಡಿ ಬಡಾವಣೆಯಲ್ಲಿ ನಡೆದಿದೆ. ಹಣ್ಣಿನ ಅಂಗಡಿ ಸೇರಿ ಎರಡು ಅಂಗಡಿಗಳು ನಿರ್ನಾಮವಾಗಿದ್ದು, ಬೆಂಕಿ ಕಂಡು ಸ್ಥಳೀಯರು ಅದನ್ನು ಆರಿಸುವ ಯತ್ನ ಮಾಡಿದ್ದಾರೆ. ಬಳಿಕ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಿದ್ದು, ದೊಡ್ದ ಅನಾಹುತ ತಪ್ಪಿದೆ. ವಿದ್ಯಾಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಎದುರಾಳಿಯಾಗಿ ಗಿಲ್ಲಿನ ಆಯ್ಕೆ ಮಾಡಿದ ಧ್ರುವಂತ್; ಗೆದ್ದಿದ್ದು ಯಾರು?

ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಧ್ರುವಂತ್ ಹಾಗೂ ಗಿಲ್ಲಿ ಮಧ್ಯೆ ಟಾಸ್ಕ್ ನಡೆದಿದೆ. ಸ್ವತಃ ಧ್ರುವಂತ್ ಅವರು ಗಿಲ್ಲಿಯನ್ನು ಎದುರಾಳಿಯಾಗಿ ಆಯ್ಕೆ ಮಾಡಿಕೊಂಡರು. ಈ ವೇಳೆ ಕಠಿಣ ಟಾಸ್ಕ್ ಒಂದನ್ನು ಬಿಗ್ ಬಾಸ್ ನೀಡಿದರು. ಈ ಟಾಸ್ಕ್ ಅಲ್ಲಿ ಗಿಲ್ಲಿ ಅವರು ಸೋತಿದ್ದಾರೆ ಎನ್ನಲಾಗಿದೆ. ಧ್ರುವಂತ್ ಅವರು ಗೆಲುವು ಕಂಡಿದ್ದಾರೆ. ಟಾಪ್ 6ಗೆ ಆಯ್ಕೆ ಆಗೋಕೆ ಆಡುತ್ತಿರುವ ಟಾಸ್ಕ್ ಇದಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಡಿವೈಡರ್‌ಗೆ ಡಿಕ್ಕಿ ಹೊಡೆದ ಕಾರು; ಕ್ಷಣಾರ್ಧದಲ್ಲಿ ಬೆಂಕಿಗಾಹುತಿ! – Kannada News | Tumakuru Car Blaze: Gubbi NH 206 Accident; Occupants Survive Fire

ತುಮಕೂರು, ಜನವರಿ 06: ಜಿಲ್ಲೆಯ ಗುಬ್ಬಿ ತಾಲೂಕಿನ ಎಚ್‌ಎಎಲ್ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 206ರಲ್ಲಿ ನಿನ್ನೆ (ಜ.5) ಸಂಜೆ ಭೀಕರ ರಸ್ತೆ ಅಪಘಾತ ನಡೆದಿದೆ. ತಿಪಟೂರು ಕಡೆಯಿಂದ ತುಮಕೂರು ಕಡೆಗೆ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಡಿವೈಡರ್‌ಗೆ ಡಿಕ್ಕಿಯಾಗಿದೆ. ಡಿಕ್ಕಿಯಾದ ತಕ್ಷಣವೇ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲೇ ಬೆಂಕಿ ಕೆನ್ನಾಲಿಗೆಗೆ ಕಾರು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಾಹಿತಿ ಪಡೆದ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂಬಂಧ ಗುಬ್ಬಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

35 ವರ್ಷಗಳ ಹಿಂದಿನ ಉಪೇಂದ್ರ ಧಾರಾವಾಹಿಯ ಕ್ಲಿಪ್ ವೈರಲ್; ಆಗ ಉಪ್ಪಿ ಹೇಗಿದ್ರು ನೋಡಿ – Kannada News | Upendra’s Viral Doordarshan Clip: 1991 Serial video goes viral

ಉಪೇಂದ್ರ (Upendra) ಅವರು ಯಾವುದೇ ಹಿನ್ನೆಲೆ ಇಲ್ಲದೆ ಚಿತ್ರರಂಗಕ್ಕೆ ಬಂದವರು. ಧಾರಾವಾಹಿ ಹಾಗೂ ಸಿನಿಮಾಗಳಲ್ಲಿ ನಟಿಸಿ, ಸಿನಿಮಾ ನಿರ್ದೇಶನ ಮಾಡಿ, ವಿಲನ್ ಪಾತ್ರಗಳಲ್ಲಿ ಮಿಂಚಿ ಅವರು ಭೇಷ್ ಎನಿಸಿಕೊಂಡಿದ್ದಾರೆ. ಈಗ ಉಪೇಂದ್ರ 35 ವರ್ಷಗಳ ಹಿಂದೆ ನಟಿಸಿದ್ದ ಧಾರಾವಾಹಿಯ ಕ್ಲಿಪ್ ವೈರಲ್ ಆಗಿದೆ. ಇದಕ್ಕೆ ಫ್ಯಾನ್ಸ್ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಆ ಧಾರಾವಾಹಿಯ ಕ್ಲಿಪ್ ಹಾಗೂ ಅದರ ವಿವರ ಈ ಸ್ಟೋರಿಯಲ್ಲಿ ಇದೆ.

ಉಪೇಂದ್ರ ಅವರು 1989ರ ‘ಅನಂತನ ಅವಾಂತರ’ ಸಿನಿಮಾದಲ್ಲಿ ಅತಿಥಿ ಪಾತ್ರ ಮಾಡಿದರು. ಈ ಸಮಯದಲ್ಲಿ ಅವರು ಯಾವುದೇ ಅವಕಾಶ ಸಿಕ್ಕರೂ ಮಾಡುತ್ತಿದ್ದರು. 1991ರಲ್ಲಿ ದೂದರ್ಶನದಲ್ಲಿ ಪ್ರಸಾರ ಆಗಿದ್ದ, ‘ನಿರ್ಮಲೆಯ ಸಾಕ್ಷಿ’ ಧಾರಾವಾಹಿಯಲ್ಲಿ ಉಪ್ಪಿ ಕಾಣಿಸಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದೆ. ಉಪೇಂದ್ರ ಅವರು ಆಗ ಇರೋದಕ್ಕೂ, ಈಗ ಇರೋದಕ್ಕೂ ಸಾಕಷ್ಟು ವ್ಯತ್ಯಾಸ ಇದೆ ಎಂದು ಅನೇಕರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ಉಪೇಂದ್ರ ವೀಕ್​​ನೆಸ್ ಏನು ಎಂದು ಕಂಡು ಹಿಡಿದುಕೊಂಡ ರಾಜ್: ನಿಮ್ಗೂ ಅಚ್ಚರಿ ಆಗುತ್ತೆ

ಉಪೇಂದ್ರ ಅವರಿಗೆ ಹೀರೋ ಆಗಬೇಕು ಎಂಬ ಕನಸು ಇರಲಿಲ್ಲ. ಆದರೆ, ಸಮಯ ಅವರನ್ನು ಹೀರೋ ಆಗಿ ಮಾಡಿತು. ಆರಂಭದಲ್ಲಿ ನಿರ್ದೇಶನ ಮಾಡಬೇಕು ಎಂಬ ತುಡಿತ ಇತ್ತು. ಕಾಶಿನಾಥ್ ಅವರ ಶಿಷ್ಯವರ್ಗದಲ್ಲಿ ಕಾಣಿಸಿಕೊಂಡ ಉಪೇಂದ್ರ ಅವರು, ‘ತರ್ಲೆ ನನ್ ಮಗ’ ಸಿನಿಮಾ ನಿರ್ದೇಶನ ಮಾಡಿದರು. ಈ ಚಿತ್ರ ಯಶಸ್ಸು ಕಂಡಿತು. ಆ ಬಳಿಕ ಬಂದ ‘ಶ್’ ಸಿನಿಮಾ ಸೂಪರ್ ಹಿಟ್ ಆಯಿತು. ‘ಓಮ್’ ಚಿತ್ರ ಕನ್ನಡ ಚಿತ್ರರಂಗದಲ್ಲಿ ಹಲವು ದಾಖಲೆ ಬರೆಯಿತು.

1998ರಲ್ಲಿ ಬಂದ ‘ಎ’ ಸಿನಿಮಾದಲ್ಲಿ ಉಪ್ಪಿ ಹೀರೋ ಆದರು. ಹೀರೋ ಆಗಿ ಜನರು ಅವರನ್ನು ಇಷ್ಟಪ್ಟರು. ಇನ್ನು, ವಿಲನ್ ಪಾತ್ರದಲ್ಲಿ ಜನರು ಅವರನ್ನು ಒಪ್ಪಿಕೊಂಡಿದ್ದಾರೆ. ಅನೇಕ ಸಿನಿಮಾಗಳಲ್ಲಿ ವಿಲನ್ ಪಾತ್ರ ಮಾಡಿದ್ದಾರೆ. ಇತ್ತೀಚೆಗೆ ಅವರ ನಟನೆಯ ‘45’ ಸಿನಿಮಾ ರಿಲೀಸ್ ಆಯಿತು. ಉಪ್ಪಿ ಜೊತೆ ರಾಜ್ ಬಿ ಶೆಟ್ಟಿ ಹಾಗೂ ಶಿವಣ್ಣ ಕೂಡ ಕಾಣಿಸಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ರಕ್ಷಿತಾನ ಹೇಗೆ ಲಾಕ್ ಮಾಡಿದ್ರು ನೋಡಿ ಗಿಲ್ಲಿ; ಮಾತೇ ಇಲ್ಲ – Kannada News | Gilli Nata Tricked Rakshitha Shetty over her double stands

ರಕ್ಷಿತಾ ಶೆಟ್ಟಿ ಅವರು ತಮ್ಮದೇ ಆದ ಲೆಕ್ಕಾಚಾರದಲ್ಲಿ ಕಾವ್ಯಾ ಶೈವ ಅವರನ್ನು ಬಿಗ್ ಬಾಸ್ ಮನೆಯಲ್ಲಿ ಹಲವು ಬಾರಿ ನಾಮಿನೇಟ್ ಮಾಡಿದ್ದರು. ಇದು ಇತ್ತೀಚೆಗೆ ಹೆಚ್ಚಾಗಿದೆ. ಇದಕ್ಕೆ ಕಾರಣ ಏನು ಎಂಬುದನ್ನು ಗಿಲ್ಲಿ ಕೇಳಿದರು. ಕಾವ್ಯಾ ಇಷ್ಟ ಎಂದು ರಕ್ಷಿತಾ ಹೇಳುತ್ತಾರೆ ಮತ್ತು ನಾಮಿನೇಟ್ ಮಾಡುತ್ತಾರೆ. ಈ ದ್ವಂದ್ವ ನೀತಿಯನ್ನು ಗಿಲ್ಲಿ ಪ್ರಶ್ನೆ ಮಾಡಿದರು. ಸ್ಪಂದನಾ ಎಲಿಮಿನೇಟ್ ಆದಾಗ ರಕ್ಷಿತಾ ಏಕೆ ಅತ್ತಿಲ್ಲ ಎಂಬುದನ್ನು ಕೇಳಲಾಯಿತು. ಇದಕ್ಕೆ ರಕ್ಷಿತಾ ಬಳಿ ಉತ್ತರ ಇರಲಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಬೆಂಗಳೂರಿನ ಏರ್ ಕ್ವಾಲಿಟಿ ಸುಧಾರಿಸಿಲ್ಲ, ಇನ್ನಷ್ಟು ಹಾಳಾಗುತ್ತಿದೆ! – Kannada News | Bangalore Air Pollution Crisis: Bengaluru’s air quality has not improved, it is getting worse!

ಬೆಂಗಳೂರಿನ ಏರ್ ಕ್ವಾಲಿಟಿ ಸುಧಾರಿಸಿಲ್ಲ, ಇನ್ನಷ್ಟು ಹಾಳಾಗುತ್ತಿದೆ!

ಬೆಂಗಳೂರು, ಜನವರಿ 06: ಬೆಂಗಳೂರು ನಗರದ ವಾಯು ಗುಣಮಟ್ಟ ಮತ್ತೆ ಆತಂಕದ ಹಂತಕ್ಕೆ ತಲುಪುತ್ತಿದೆ. ಇಂದಿನ ವಾಯು ಗುಣಮಟ್ಟ ಸೂಚ್ಯಂಕ (Bengaluru Air Quality) 184 ದಾಖಲಾಗಿದ್ದು, WHO ಪ್ರಕಾರ ಈ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿದೆ. ನಗರದ ಹಲವು ಭಾಗಗಳಲ್ಲಿ ಇದಕ್ಕೂ ಕಳಪೆ ಏರ್ ಕ್ವಾಲಿಟಿ ಕಂಡುಬರುತ್ತಿರುವುದು ಪರಿಸ್ಥಿತಿ ಇನ್ನಷ್ಟು ಗಂಭೀರವಾಗುತ್ತಿರುವ ಸೂಚನೆಯಾಗಿದೆ.

ಸೂಕ್ಷ್ಮ ಕಣಗಳಿಂದ ಉಸಿರಾಟದ ಸಮಸ್ಯೆ

PM10 ಎನ್ನುವುದು ನಮಗಿಂತ 7 ಪಟ್ಟು ತೆಳುವಾದ ಧೂಳಿನ ಕಣಗಳಾದರೆ, PM2.5 ಮಾನವನ ಕೂದಲಿನ ಶೇ. 3ರಷ್ಟು ಮಾತ್ರ ದಪ್ಪವಿರುವ ಅತಿ ಸೂಕ್ಷ್ಮ ಕಣಗಳು. ಈ ಕಣಗಳು ಉಸಿರಾಟದ ಮೂಲಕ ನೇರವಾಗಿ ಶ್ವಾಸಕೋಶದ ಒಳಗೆ ಹೋಗಿ ರಕ್ತವನ್ನು ಸೇರುತ್ತವೆ. ಇದರಿಂದ ಶ್ವಾಸಕೋಶದ ಕ್ಯಾನ್ಸರ್, ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಿದೆ. ಬೆಂಗಳೂರಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆಯ (WHO) ಮಿತಿಗಿಂತ 5 ಪಟ್ಟು ಹೆಚ್ಚಿರುವ ಸೂಕ್ಷ್ಮ ಕಣಗಳ ಪ್ರಮಾಣ ಆತಂಕಕಾರಿಯಾಗಿದೆ.

ಇಂದಿನ ಅಂಕಿಅಂಶಗಳ ಪ್ರಕಾರ PM2.5 ಪ್ರಮಾಣ 103 ಆಗಿದ್ದು, PM10 144ಕ್ಕೆ ಏರಿಕೆಯಾಗಿದೆ. ಈ ಕಣಗಳು ನೇರವಾಗಿ ಉಸಿರಾಟ ವ್ಯವಸ್ಥೆಗೆ ಹೊಡೆತ ನೀಡುತ್ತವೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ವಾಹನ ದಟ್ಟಣೆ ಕಾರಣವಿರಬಹುದೇ?

ನಗರದಲ್ಲಿ ವಾಹನಗಳ ಸಂಖ್ಯೆ ಹೆಚ್ಚಳ, ನಿರಂತರ ನಿರ್ಮಾಣ ಕಾಮಗಾರಿಗಳು ಹಾಗೂ ಗಾಳಿಯ ಚಲನೆ ಕಡಿಮೆಯಾಗಿರುವುದು ಮಾಲಿನ್ಯ ಕಣಗಳು ವಾತಾವರಣದಲ್ಲೇ ಸಿಲುಕಿಕೊಳ್ಳಲು ಕಾರಣವಾಗುತ್ತಿವೆ. ಪರಿಣಾಮ, ಹೊರಗೆ ಕಾಣುವ ಸ್ವಚ್ಛ ಆಕಾಶದ ಹಿಂದೆ ಕಣ್ಣಿಗೆ ಕಾಣದ ಅಪಾಯಕರ ಗಾಳಿ ಅಡಗಿಕೊಂಡಿದೆ. ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಗಾಳಿಯ ಗುಣಮಟ್ಟ ಇನ್ನಷ್ಟು ಕುಸಿಯುತ್ತಿದ್ದು, ಮಕ್ಕಳು, ಹಿರಿಯ ನಾಗರಿಕರು ಹಾಗೂ ಉಸಿರಾಟ ಸಮಸ್ಯೆ ಇರುವವರು ಹೆಚ್ಚಿನ ಅಪಾಯಕ್ಕೆ ಒಳಗಾಗುತ್ತಿದ್ದಾರೆ. ದೀರ್ಘಕಾಲ ಇದೇ ಸ್ಥಿತಿ ಮುಂದುವರಿದರೆ ಆರೋಗ್ಯ ಸಮಸ್ಯೆಗಳು ಹೆಚ್ಚುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸುತ್ತಿದ್ದಾರೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –184
  • ಮಂಗಳೂರು-172
  • ಮೈಸೂರು – 158
  • ಬೆಳಗಾವಿ – 170
  • ಕಲಬುರ್ಗಿ – 154
  • ಶಿವಮೊಗ್ಗ – 182
  • ಬಳ್ಳಾರಿ – 221
  • ಹುಬ್ಬಳ್ಳಿ- 159
  • ಉಡುಪಿ –166
  • ವಿಜಯಪುರ –99

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version