VIDEO: ದಿಢೀರ್ ಚೆಂಡು ಬದಲಿಸಿದ ಅಂಪೈರ್: ಟಿಮ್ ಡೇವಿಡ್ಗೆ ಡೌಟ್..!
ಐಪಿಎಲ್ನ 20ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಮುಖಾಮುಖಿಯಾಗಿದ್ದವು. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಡೆತ್ ಓವರ್ಗಳ ವೇಳೆ ಅಂಪೈರ್ ಚೆಂಡು ಬದಲಿಸಿದ್ದರು. ಇತ್ತ ಅಂಪೈರ್ ಚೆಂಡು ಬದಲಿಸುತ್ತಿದ್ದಂತೆ ಆರ್ಸಿಬಿ ದಾಂಡಿಗ ಬಾಲ್ ಅನ್ನು ಪರೀಕ್ಷಿಸಿದರು. ಇದಕ್ಕೆ ಅಂಪೈರ್ ಆಕ್ಷೇಪಣೆ ವ್ಯಕ್ತಪಡಿಸಿದ್ದಾರೆ. ಈ ಪಂದ್ಯದ 18ನೇ ಓವರ್ನಲ್ಲಿ ಹಾರ್ದಿಕ್ ಪಾಂಡ್ಯ ಎಸೆದ ಎಸೆತವನ್ನು ಟಿಮ್ ಡೇವಿಡ್ ಭರ್ಜರಿ ಸಿಕ್ಸರ್ಗೆ ಅಟ್ಟಿದ್ದರು. ಔಟ್ಫೀಲ್ಡ್ನಲ್ಲಿ ತೇವಾಂಶ ಇದ್ದ ಕಾರಣ ಚೆಂಡು ಒದ್ದೆಯಾಗಿತ್ತು….