ದ್ವಿತೀಯ ಪಿಯುಸಿಯಲ್ಲಿ ಕಡಿಮೆ ಅಂಕ ಬಂದಿದ್ದಕ್ಕೆ ವಿದ್ಯಾರ್ಥಿನಿ ಆತ್ಮಹತ್ಯೆ: ದುಡುಕಿನ ನಿರ್ಧಾರಕ್ಕೆ ಹೆತ್ತವರು ಕಂಗಾಲು
ಹುಬ್ಬಳ್ಳಿ, ಏಪ್ರಿಲ್ 11: ಏಪ್ರಿಲ್ 09ರಂದು ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ (2nd PUC Results) ಬಂದಿದ್ದು, ಹೆಚ್ಚು ಅಂಕ ಪಡೆದವರು ಸಂಭ್ರಮಿಸಿದ್ದಾರೆ. ಆದರೆ ಹುಬ್ಬಳ್ಳಿಯಲ್ಲಿ ಓರ್ವ ವಿದ್ಯಾರ್ಥಿನಿ ಪರೀಕ್ಷೆಯಲ್ಲಿ ನಿರೀಕ್ಷಿತ ಅಂಕ ಬಂದಿಲ್ಲ ಎಂದು ಮನನೊಂದು ಆತ್ಮಹತ್ಯೆಗೆ (death) ಶರಣಾಗಿದ್ದಾಳೆ. ಜೀವನದಲ್ಲಿ ಹತ್ತಾರು ಕನಸು ಕಂಡವಳು ಕಡಿಮೆ ಅಂಕ ಬಂದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬಕ್ಕೆ ಬರಸಿಡಿಲು ಬಡಿದಂತಾಗಿದೆ. ನಡೆದದ್ದೇನು? ಮೊನ್ನೆಯಷ್ಟೇ ರಾಜ್ಯದ ದ್ವಿತೀಯ ಪಿಯು ಪರೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳು ಸಂಭ್ರಮಸಿದ್ದಾರೆ….