ಪ್ರಿಯಕರನ ಕರ್ಮಕಾಂಡ ಕಂಡು ಶಾಕ್​​: ಪೊಲೀಸ್​​ ಠಾಣೆಯಲ್ಲೇ ತಾಳಿ ಕಿತ್ತೆಸೆದ ಯುವತಿ – Kannada News | POCSO Accused Man Exposed at a Police Station in Front of His Lover in Chikkaballapura

ಚಿಕ್ಕಬಳ್ಳಾಪುರ, ಜನವರಿ 06: ಪೊಲೀಸ್​​ ಠಾಣೆಯಲ್ಲಿ ಪ್ರಿಯಕರನ ಬಂಡವಾಳ ಬಯಲಾಗುತ್ತಿದ್ದಂತೆ ಆತ ಕಟ್ಟಿದ್ದ ತಾಳಿಯನ್ನೇ ಕಿತ್ತೆಸೆದು ಯುವತಿಯೋರ್ವಳು ಪೋಷಕರ ಜೊತೆಗೆ ಮರಳಿ ತೆರಳಿರುವ ಘಟನೆ ಚಿಕ್ಕಬಳ್ಳಾಪುರದಲ್ಲಿ ನಡೆದಿದೆ. ಪ್ರೀತಿಸಿ ಮದುವೆಯಾಗಿದ್ದ ಜೋಡಿಯ ಕಾರು ಅಡ್ಡಗಟಿದ್ದ ಪೋಷಕರು ಅವರನ್ನು ಪೊಲೀಸ್​​ ಠಾಣೆಗೆ ಕರೆದೊಯ್ದಿದ್ದರು. ಈ ವೇಳೆ ಪ್ರೇಮಿಯ ನವರಂಗಿ ಆಟಗಳೆಲ್ಲ ಆರಕ್ಷಕರ ಮುಂದೆಯೇ ಬಯಲಾಗಿದ್ದು, ಪ್ರಿಯಕರನ ನಡೆ ಕಂಡು ಯುವತಿ ಬೆಚ್ಚಿಬಿದ್ದಿದ್ದಾಳೆ. ಇವನ ಸಹವಾಸವೇ ಸಾಕು ಎಂದು ಕೈಮುಗಿದಿದ್ದಾಳೆ. ಘಟನೆ ಏನು? ಚಿಕ್ಕಬಳ್ಳಾಪುರ ನಗರದ ಗಂಗನಮಿದ್ದೆ ಬಡಾವಣೆಯ ನಿವಾಸಿ,…

Read More

Video: ವೆನೆಜುವೆಲಾದ ಅಧ್ಯಕ್ಷೀಯ ಭವನದ ಬಳಿ ಗುಂಡಿನ ದಾಳಿ, ಸ್ಫೋಟದ ಸದ್ದು – Kannada News | Gunfire Reported Near Venezuela’s Presidential Palace Shortly After Swearing In

ಕ್ಯಾರಕಾಸ್, ಜನವರಿ 06: ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿರುವ ಅಧ್ಯಕ್ಷೀಯ ಭವನದ ಬಳಿ ಭಾರೀ ಗುಂಡಿನ ಚಕಮಕಿ ಮತ್ತು ಸ್ಫೋಟಗಳ ಸದ್ದು ಕೇಳಿಬಂದಿವೆ. ಅಧ್ಯಕ್ಷೀಯ ಭವನದ ಮೇಲೆ ಹಾರುತ್ತಿದ್ದ ಡ್ರೋನ್​ಗಳನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳು ದಾಳಿ ನಡೆಸಿವೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿರುವ ವರದಿಗಳೂ ಬಂದಿವೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅಮೆರಿಕ ಪಡೆಗಳು ನಿಕೋಲಸ್ ಮಡುರೊ ಸೆರೆಹಿಡಿದ ಬಳಿಕ ಡೆಲ್ಸಿ ರೊಡ್ರಿಗಸ್ ಮಧ್ಯಂತರ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದಾಗಿ ಸ್ವಲ್ಪ ಹೊತ್ತಲ್ಲೇ ಈ ಘಟನೆ ನಡೆದಿದೆ. ಯುಎಸ್…

Read More

ಕಂಬ್ಯಾಕ್ ಬೆನ್ನಲ್ಲೇ ಶ್ರೇಯಸ್ ಅಯ್ಯರ್​ಗೆ ಒಲಿದ ನಾಯಕತ್ವ

ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿ ವೇಳೆ ಗಂಭೀರವಾಗಿ ಗಾಯಗೊಂಡಿದ್ದ ಶ್ರೇಯಸ್ ಅಯ್ಯರ್ (Shreyas Iyer) ಇದೀಗ ಮತ್ತೆ ಮೈದಾನಕ್ಕಿಳಿಯಲು ಸಜ್ಜಾಗಿದ್ದಾರೆ. ಅದು ಸಹ ವಿಜಯ ಹಝಾರೆ ಟೂರ್ನಿಯ ಮೂಲಕ ಎಂಬುದು ವಿಶೇಷ. ಅಂದರೆ ಪ್ರಸ್ತುತ ನಡೆಯುತ್ತಿರುವ ವಿಜಯ ಹಝಾರೆ ಟೂರ್ನಿಯ ಪಂದ್ಯದಲ್ಲಿ ಅಯ್ಯರ್ ನಾಯಕನಾಗಿ ಕಣಕ್ಕಿಳಿಯಲಿದ್ದಾರೆ. ಮುಂಬೈ ತಂಡದ ನಾಯಕ ಶಾರ್ದೂಲ್ ಠಾಕೂರ್ ಗಾಯಗೊಂಡಿದ್ದು, ಹೀಗಾಗಿ ಉಳಿದ ಪಂದ್ಯಗಳಿಂದ ಅವರು ಹೊರಗುಳಿದಿದ್ದಾರೆ. ಹೀಗಾಗಿ ಮುಂಬೈ ತಂಡದ ಸಾರಥ್ಯವನ್ನು ಟೀಮ್ ಇಂಡಿಯಾ ಆಟಗಾರ ಶ್ರೇಯಸ್ ಅಯ್ಯರ್​ಗೆ ವಹಿಸಲಾಗಿದೆ.  ಅದರಂತೆ…

Read More

ಬಾಂಗ್ಲಾದೇಶದಲ್ಲಿ 24 ಗಂಟೆಯೊಳಗೆ ಮತ್ತೊಬ್ಬ ಹಿಂದೂ ಯುವಕನ ಹತ್ಯೆ – Kannada News | Minority Safety in Spotlight After Fresh Killing in Bangladesh

ಬಾಂಗ್ಲಾದೇಶ, ಜನವರಿ 06: ಬಾಂಗ್ಲಾದೇಶ(Bangladesh)ದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ 24 ಗಂಟೆಗಳಲ್ಲಿ ಇಬ್ಬರು ಹಿಂದೂ ಯುವಕರನ್ನು ಹತ್ಯೆ ಮಾಡಲಾಗಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನರಸಿಂಗ್ಡಿ ಜಿಲ್ಲೆಯ ಪಲಾಶ್ ಉಪಜಿಲ್ಲಾದ ಚೋರ್ಸಿಂದೂರ್ ಬಜಾರ್‌ನಲ್ಲಿ ದಿನಸಿ ಅಂಗಡಿ ಮಾಲೀಕ ಶರತ್ ಚಕ್ರವರ್ತಿ ಮೋನಿ ಮೇಲೆ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಮೋನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ದಾಳಿ ಹಠಾತ್ತನೆ ನಡೆದಿದ್ದು,…

Read More

ಯಶ್ ಬಾಲ್ಯದಲ್ಲಿ ಹೇಗೆ ಕಾಣ್ತಿದ್ರು ನೋಡಿ; ಇಲ್ಲಿದೆ ಕ್ಯೂಟ್ ಫೋಟೋ

ಯಶ್ (Yash) ಅವರು ಇಂದು ಪ್ಯಾನ್​ ಇಂಡಿಯಾ ಸ್ಟಾರ್ ಆಗಿರೋದು ಗೊತ್ತೇ ಇದೆ. ‘ಟಾಕ್ಸಿಕ್’ ಸಿನಿಮಾ ಮೂಲಕ ವಿಶ್ವಮಟ್ಟದಲ್ಲಿ ಗಮನ ಸೆಳೆಯಲು ಅವರು ರೆಡಿ ಆಗಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ. ಈಗ ಯಶ್ ಅವರ ಬಾಲ್ಯದ ಫೋಟೋ ವೈರಲ್ ಆಗಿದೆ. ಯಶ್ ಜನ್ಮದಿನದ ಸಂದರ್ಭದಲ್ಲಿ ಈ ಫೋಟೋ ವೈರಲ್ ಮಾಡಲಾಗಿದೆ. ಅವರ ಬರ್ತ್​​ಡೇ ಜನವರಿ 8. ಅದನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದೆ. ಯಶ್ ಅವರು ಮೈಸೂರಿನವರು. ಅವರ ತಂದೆ ಅರುಣ್ ಕುಮಾರ್ ಕೆಎಸ್​​​ಆರ್​​ಟಿಸಿ ಡ್ರೈವರ್ ಆಗಿದ್ದರು. ಅವರ…

Read More

‘ಹೋಗೆಲೇ..’, ‘ನೀನ್ ಹೋಗೆಲೇ’; ಅಶ್ವಿನಿ-ಕಾವ್ಯಾ ಮಧ್ಯೆ ತಾರಕಕ್ಕೇರಿದ ಕಿತ್ತಾಟ – Kannada News | Ashwini Gowda vs Kavya Gowda: Bigg Boss Kannada 12 Nomination Turns Ugly

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಅಶ್ವಿನಿ ಗೌಡ ಅವರಿಗೆ ಹುಟ್ಟಿಕೊಂಡ ವೈರಿಗಳು ಒಬ್ಬಿಬ್ಬರಲ್ಲ. ಅವರು ಆಡುವ ಮಾತುಗಳು ಕೂಡ ಇದಕ್ಕೆ ಕಾರಣ. ಈಗ ಅಶ್ವಿನಿ ಹಾಗೂ ಕಾವ್ಯಾ ಮಧ್ಯೆ ವಾಕ್ಸಮರ ನಡೆದಿದೆ. ಒಬ್ಬರಿಗೊಬ್ಬರು ಏಕವಚನದಲ್ಲಿ ಕರೆದುಕೊಂಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ವೇಳೆ ಈ ಕಿತ್ತಾಟ ನಡೆದಿದೆ. 100 ದಿನಗಳ ಆಟದಲ್ಲಿ ಮಾಡಿದ ತಪ್ಪನ್ನು ಹೇಳಿದ್ದಕ್ಕೆ ಪರಸ್ಪರ ಇಬ್ಬರೂ ಕೋಪಗೊಂಡರು. ಆ ಬಗ್ಗೆ ಇಲ್ಲಿದೆ ವಿವರ. ನಾಮಿನೇಷನ್ ವೇಳೆ ಮೊದಲು ಕಾವ್ಯಾ ಅವರು ಅಶ್ವಿನಿ ಗೌಡ…

Read More

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಚಳಿಗಾಲದ ಪ್ರಭಾವ ಹೆಚ್ಚಳ; ಇಂದು ಕೂಡ ಹಲವೆಡೆ ಒಣ ಹವೆ – Kannada News | Bengaluru temperature: Dry weather all over karnataka, misty weather in bengaluru

ಬೆಂಗಳೂರು, ಜನವರಿ 05: ರಾಜ್ಯದಲ್ಲಿ ಚಳಿಗಾಲದ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲವೆಡೆ ಮಂಜು ಹಾಗೂ ಒಣ ಹವೆಯ (Weather Forecast) ವಾತಾವರಣ ಜನಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಕಳೆದ ಕೆಲ ದಿನಗಳಿಂದ ಕೆಲವೆಡೆ ತುಂತುರು ಮಳೆಯಾದರೂ, ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆಯೇ ಮುಂದುವರಿದಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ, ನಿನ್ನೆಯಂತೆಯೇ ಇಂದೂ ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ. ಎಲ್ಲೆಲ್ಲಿ ಒಣಹವೆ? ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು…

Read More

ಕೇವಲ ೨೪ ಎಸೆತಗಳಲ್ಲಿ ೧೦ ಸಿಕ್ಸ್ ಸಿಡಿಸಿದ ವೈಭವ್ ಸೂರ್ಯವಂಶಿ – Kannada News | Vaibhav suryavanshi Smashed 10 Sixes in Just 24 Balls

ವೈಭವ್ ಸೂರ್ಯವಂಶಿಯ ಈ ಸಿಡಿಲಬ್ಬರದ ನೆರವಿನೊಂದಿಗೆ ಭಾರತ ತಂಡವು 8 ಓವರ್​ಗಳಲ್ಲಿ 95 ರನ್ ಕಲೆಹಾಕಿತು. ಇದಾದ ಬಳಿಕ ಅಭಿಮನ್ಯು ಕುಂದು 42 ಎಸೆತಗಳಲ್ಲಿ 48 ರನ್ ಬಾರಿಸಿದರು. ಈ ಮೂಲಕ ಭಾರತ ತಂಡವು 23.2 ಓವರ್​ಗಳಲ್ಲಿ 176 ರನ್​ ಗಳಿಸಿತ್ತು. ಈ ವೇಳೆ ವೇಳೆ ಮಂದ ಬೆಳಕಿನ ಕಾರಣ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಅಷ್ಟೇ ಅಲ್ಲದೆ ಪಂದ್ಯದ ಫಲಿತಾಂಶ ನಿರ್ಣಯಕ್ಕಾಗಿ ಡಕ್​ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಾಗಿದ್ದು, ಈ ವೇಳೆಗೆ ಭಾರತ ತಂಡವು 23.2…

Read More

‘ನಿನ್ನ ಟೈಮ್ ಸ್ಟಾರ್ಟ್ ಆಗಿದೆ’; ಗಿಲ್ಲಿಗೆ ವಾರ್ನ್ ಮಾಡಿ ಬಿಗ್ ಬಾಸ್ ಬಳಿ ಅಶ್ವಿನಿ ಗೌಡ ವಿಶೇಷ ಮನವಿ – Kannada News | Your Time Started in Big Boss Kannada Ashwini Gowda warns Gilli Nata

ಬಿಗ್ ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಹಾವು ಮುಂಗುಸಿ ರೀತಿ ಯಾವಾಗಲೂ ಕಚ್ಚಾಡುತ್ತಾ ಇರುತ್ತಾರೆ. ಇವರ ಮಧ್ಯೆ ಆಗಾಗ ಕಿರಿಕ್​​ಗಳು ಆಗುತ್ತಲೇ ಇರುತ್ತವೆ. ಅಶ್ವಿನಿ ಗೌಡ ಅವರು ಈ ಮೊದಲು ಸಿಟ್ಟನ್ನು ಬಿಟ್ಟು ಮೌನಕ್ಕೆ ಶರಣಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಪರಿಸ್ಥಿತಿ ಹಾಗೂ ಗಿಲ್ಲಿ ನಟನ ಚುಚ್ಚು ಮಾತುಗಳು ಇದಕ್ಕೆ ಅವಕಾಶ ಕೊಡುತ್ತಿಲ್ಲ. ಅವರು ಮತ್ತೆ ಮತ್ತೆ ಕೆರಳುತ್ತಿದ್ದಾರೆ. ಈಗ ಗಿಲ್ಲಿಗೆ ಅಶ್ವಿನಿ ಗೌಡ ನೇರವಾಗಿ ಗಿಲ್ಲಿಗೆ ವಾರ್ನ್ ಮಾಡಿದ್ದಾರೆ….

Read More

Daily Devotional: ಈ ಐದು ಜನರ ಸಹವಾಸ ಮಾಡಿದ್ರೆ ಸರ್ವನಾಶಕ್ಕೆ ದಾರಿ

ಬೆಂಗಳೂರು, ಜನವರಿ 06: ಮಾನವನ ಶ್ರೇಯಸ್ಸು, ಯಶಸ್ಸು ಮತ್ತು ಕೀರ್ತಿಗೆ ಸ್ನೇಹಿತರ ಪಾತ್ರ ಅತಿ ಮುಖ್ಯ. ಆದರೆ, ಕೆಲವೊಮ್ಮೆ ಸ್ನೇಹಿತರು ಶುಭವನ್ನು ತರುವ ಬದಲು ಅಶುಭವನ್ನು ಸಹ ತರಬಹುದು. ಮಹಾ ಮೇಧಾವಿ ಚಾಣಕ್ಯರು, ಜೀವನದಲ್ಲಿ ಪ್ರಗತಿ ಸಾಧಿಸಲು ಐದು ವಿಧದ ಮಿತ್ರರಿಂದ ದೂರವಿರಲು ಸಲಹೆ ನೀಡಿದ್ದಾರೆ. ಚಾಣಕ್ಯರ ಪ್ರಕಾರ, ಈ ಐದು ಬಗೆಯ ಸ್ನೇಹಿತರು ನಮ್ಮ ಜೀವನಕ್ಕೆ ಮಾರಕವಾಗಬಹುದು: ಅಸೂಯೆ ಪಡುವವರು, ನಿಮ್ಮನ್ನು ಇಷ್ಟಪಡದವರು, ಅತಿಯಾಗಿ ಮಾತನಾಡುವವರು, ಸಂಕುಚಿತ ಭಾವನೆಯನ್ನು ಹೊಂದಿರುವವರು ಮತ್ತು ಸುಳ್ಳು ಹೇಳುವವರು. ಇಂತಹವರ…

Read More