Video: ವೆನೆಜುವೆಲಾದ ಅಧ್ಯಕ್ಷೀಯ ಭವನದ ಬಳಿ ಗುಂಡಿನ ದಾಳಿ, ಸ್ಫೋಟದ ಸದ್ದು – Kannada News | Gunfire Reported Near Venezuela’s Presidential Palace Shortly After Swearing In

ಕ್ಯಾರಕಾಸ್, ಜನವರಿ 06: ವೆನೆಜುವೆಲಾದ ರಾಜಧಾನಿ ಕ್ಯಾರಕಾಸ್‌ನಲ್ಲಿರುವ ಅಧ್ಯಕ್ಷೀಯ ಭವನದ ಬಳಿ ಭಾರೀ ಗುಂಡಿನ ಚಕಮಕಿ ಮತ್ತು ಸ್ಫೋಟಗಳ ಸದ್ದು ಕೇಳಿಬಂದಿವೆ. ಅಧ್ಯಕ್ಷೀಯ ಭವನದ ಮೇಲೆ ಹಾರುತ್ತಿದ್ದ ಡ್ರೋನ್​ಗಳನ್ನು ಗುರಿಯಾಗಿಸಿಕೊಂಡು ಭದ್ರತಾ ಪಡೆಗಳು ದಾಳಿ ನಡೆಸಿವೆ. ಕೆಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತಗೊಂಡಿರುವ ವರದಿಗಳೂ ಬಂದಿವೆ. ಈಗ ಪರಿಸ್ಥಿತಿ ನಿಯಂತ್ರಣದಲ್ಲಿದೆ. ಅಮೆರಿಕ ಪಡೆಗಳು ನಿಕೋಲಸ್ ಮಡುರೊ ಸೆರೆಹಿಡಿದ ಬಳಿಕ ಡೆಲ್ಸಿ ರೊಡ್ರಿಗಸ್ ಮಧ್ಯಂತರ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಇದಾಗಿ ಸ್ವಲ್ಪ ಹೊತ್ತಲ್ಲೇ ಈ ಘಟನೆ ನಡೆದಿದೆ. ಯುಎಸ್ ಮಿಲಿಟರಿ ದಾಳಿಯಷ್ಟು ತೀವ್ರವಾಗಿರಲಿಲ್ಲ, ಆದರೆ ಅದು ಜನರನ್ನು ಭಯಗೊಳಿಸಿತ್ತು.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಂಬ್ಯಾಕ್ ಬೆನ್ನಲ್ಲೇ ಶ್ರೇಯಸ್ ಅಯ್ಯರ್​ಗೆ ಒಲಿದ ನಾಯಕತ್ವ

Source link

ಬಾಂಗ್ಲಾದೇಶದಲ್ಲಿ 24 ಗಂಟೆಯೊಳಗೆ ಮತ್ತೊಬ್ಬ ಹಿಂದೂ ಯುವಕನ ಹತ್ಯೆ – Kannada News | Minority Safety in Spotlight After Fresh Killing in Bangladesh

ಬಾಂಗ್ಲಾದೇಶ, ಜನವರಿ 06: ಬಾಂಗ್ಲಾದೇಶ(Bangladesh)ದಲ್ಲಿ ಹಿಂದೂ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರದ ಘಟನೆಗಳು ನಿರಂತರವಾಗಿ ನಡೆಯುತ್ತಿವೆ. ಕಳೆದ 24 ಗಂಟೆಗಳಲ್ಲಿ ಇಬ್ಬರು ಹಿಂದೂ ಯುವಕರನ್ನು ಹತ್ಯೆ ಮಾಡಲಾಗಿದೆ. ಸೋಮವಾರ ರಾತ್ರಿ 10 ಗಂಟೆ ಸುಮಾರಿಗೆ ನರಸಿಂಗ್ಡಿ ಜಿಲ್ಲೆಯ ಪಲಾಶ್ ಉಪಜಿಲ್ಲಾದ ಚೋರ್ಸಿಂದೂರ್ ಬಜಾರ್‌ನಲ್ಲಿ ದಿನಸಿ ಅಂಗಡಿ ಮಾಲೀಕ ಶರತ್ ಚಕ್ರವರ್ತಿ ಮೋನಿ ಮೇಲೆ ದುಷ್ಕರ್ಮಿಗಳು ಹರಿತವಾದ ಆಯುಧದಿಂದ ಹಲ್ಲೆ ನಡೆಸಿದ್ದಾರೆ.

ಗಂಭೀರವಾಗಿ ಗಾಯಗೊಂಡಿದ್ದ ಮೋನಿಯನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ದಾಳಿ ಹಠಾತ್ತನೆ ನಡೆದಿದ್ದು, ದಾಳಿಕೋರರು ಕೂಡಲೇ ಪರಾರಿಯಾಗಿದ್ದಾರೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ. ರಾಜಧಾನಿ ಢಾಕಾಗೆ ಸಮೀಪದಲ್ಲಿರುವ ಈ ಘಟನೆ ಇನ್ನಷ್ಟು ಆಘಾತಕಾರಿಯಾಗಿದೆ.

ಈ ಕೊಲೆ 18 ದಿನಗಳಲ್ಲಿ ನಡೆದ ಆರನೇ ಹಿಂದೂ ವ್ಯಕ್ತಿಯ ಕೊಲೆಯಾಗಿದೆ. ಇದಕ್ಕೂ ಕೆಲವು ಗಂಟೆಗಳ ಮೊದಲು, ಸೋಮವಾರ ಸಂಜೆ 6 ಗಂಟೆ ಸುಮಾರಿಗೆ, ಜಶೋರ್ ಜಿಲ್ಲೆಯ ಮಣಿರಾಂಪುರ ಉಪಜಿಲ್ಲಾದ ಕೊಪಾಲಿಯಾ ಬಜಾರ್‌ನಲ್ಲಿ 45 ವರ್ಷದ ರಾಣಾ ಪ್ರತಾಪ್ ಬೈರಾಗಿ ಅವರನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.
ರಾಣಾ ಪ್ರತಾಪ್ ಐಸ್ ಕಾರ್ಖಾನೆಯನ್ನು ಹೊಂದಿದ್ದರು ಮತ್ತು ನರೈಲ್ ಜಿಲ್ಲೆಯಿಂದ ಪ್ರಕಟವಾಗುವ ದಿನಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರೂ ಆಗಿದ್ದರು.

ಮತ್ತಷ್ಟು ಓದಿ: ಬಾಂಗ್ಲಾದೇಶದಲ್ಲಿ ಮತ್ತೋರ್ವ ಹಿಂದೂ ಹತ್ಯೆ; 3 ವಾರಗಳಲ್ಲಿ ಅಲ್ಪಸಂಖ್ಯಾತರ ಮೇಲೆ 5ನೇ ದಾಳಿ

ಸ್ಥಳೀಯ ನಿವಾಸಿಗಳ ಪ್ರಕಾರ, ಕೆಲವು ಪುರುಷರು  ಬೈಕ್​ನಲ್ಲಿ ಬಂದು ಅವರನ್ನು ಕಾರ್ಖಾನೆಯಿಂದ ಹೊರಗೆಳೆದು, ಒಂದು ಗಲ್ಲಿಗೆ ಕರೆದೊಯ್ದು ಅವರ ತಲೆಗೆ ಹಲವು ಬಾರಿ ಗುಂಡು ಹಾರಿಸಿದ್ದರು. ಅಷ್ಟೇ ಅಲ್ಲದೆ ಕುತ್ತಿಗೆ ಕೊಯ್ದು ಪರಾರಿಯಾಗಿದ್ದರು. ಪೊಲೀಸರು ದೇಹದಿಂದ ಏಳು ಖಾಲಿ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ರಾಣಾ ಪ್ರತಾಪ್ ಅವರ ತಲೆಗೆ ಮೂರು ಗುಂಡುಗಳು ತಗುಲಿವೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ದೃಢಪಡಿಸಿದ್ದಾರೆ.

ಈ ಘಟನೆಗಳು ಬಾಂಗ್ಲಾದೇಶದಲ್ಲಿ ಕೋಮು ಉದ್ವಿಗ್ನತೆಯನ್ನು ಹೆಚ್ಚಿಸಿವೆ ಮತ್ತು ಹಿಂದೂ ಸಮುದಾಯದಲ್ಲಿ ಭೀತಿಯ ವಾತಾವರಣವನ್ನು ಸೃಷ್ಟಿಸಿವೆ. ವಿದ್ಯಾರ್ಥಿ ನಾಯಕ ಷರೀಫ್ ಉಸ್ಮಾನ್ ಹಾದಿ ಸಾವಿನ ನಂತರ ಅಲ್ಲಿ ನಡೆದ ಅಶಾಂತಿಯ ಬಳಿಕ ಬಾಂಗ್ಲಾದೇಶದಲ್ಲಿ ನಡೆದ 6ನೇ ಘಟನೆ ಇದಾಗಿದೆ.ಹಾದಿ ಅವರ ಮರಣದ ನಂತರ, ಭಾರತ ವಿರೋಧಿ ಪ್ರತಿಭಟನೆಗಳು ಹಿಂದೂ ಸಮುದಾಯವನ್ನು ಗುರಿಯಾಗಿಸಿಕೊಂಡು ಕೋಮುವಾದಿ ತಿರುವು ಪಡೆದುಕೊಂಡವು.

ಮಧ್ಯಂತರ ಸರ್ಕಾರದ ಮುಖ್ಯಸ್ಥ ಮುಹಮ್ಮದ್ ಯೂನಸ್ ನೇತೃತ್ವದ ಆಡಳಿತವು ಅಲ್ಪಸಂಖ್ಯಾತರನ್ನು ರಕ್ಷಿಸುವಲ್ಲಿ ವಿಫಲವಾಗಿದೆ ಎಂದು ಆರೋಪಿಸಲಾಗಿದೆ. ಈ ಘಟನೆಗಳ ಬಗ್ಗೆ ಭಾರತ ತೀವ್ರ ಕಳವಳ ವ್ಯಕ್ತಪಡಿಸಿದ್ದು, ಅಲ್ಪಸಂಖ್ಯಾತರ ವಿರುದ್ಧ ನಡೆಯುತ್ತಿರುವ ದ್ವೇಷವನ್ನು ಗಂಭೀರ ವಿಷಯವೆಂದು ಬಣ್ಣಿಸಿದೆ. ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಘಟನೆಗಳು ಬಾಂಗ್ಲಾದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಹದಗೆಡುತ್ತಿರುವುದನ್ನು ಮತ್ತು ಅಲ್ಪಸಂಖ್ಯಾತರ ಮೇಲೆ ಹೆಚ್ಚುತ್ತಿರುವ ದಾಳಿಗಳನ್ನು ಖಂಡಿಸಿವೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಯಶ್ ಬಾಲ್ಯದಲ್ಲಿ ಹೇಗೆ ಕಾಣ್ತಿದ್ರು ನೋಡಿ; ಇಲ್ಲಿದೆ ಕ್ಯೂಟ್ ಫೋಟೋ

ಯಶ್ (Yash) ಅವರು ಇಂದು ಪ್ಯಾನ್​ ಇಂಡಿಯಾ ಸ್ಟಾರ್ ಆಗಿರೋದು ಗೊತ್ತೇ ಇದೆ. ‘ಟಾಕ್ಸಿಕ್’ ಸಿನಿಮಾ ಮೂಲಕ ವಿಶ್ವಮಟ್ಟದಲ್ಲಿ ಗಮನ ಸೆಳೆಯಲು ಅವರು ರೆಡಿ ಆಗಿದ್ದಾರೆ ಎಂದರೂ ತಪ್ಪಾಗಲಿಕ್ಕಿಲ್ಲ. ಈಗ ಯಶ್ ಅವರ ಬಾಲ್ಯದ ಫೋಟೋ ವೈರಲ್ ಆಗಿದೆ. ಯಶ್ ಜನ್ಮದಿನದ ಸಂದರ್ಭದಲ್ಲಿ ಈ ಫೋಟೋ ವೈರಲ್ ಮಾಡಲಾಗಿದೆ. ಅವರ ಬರ್ತ್​​ಡೇ ಜನವರಿ 8. ಅದನ್ನು ಅದ್ದೂರಿಯಾಗಿ ಆಚರಿಸಲು ಸಿದ್ಧತೆ ನಡೆದಿದೆ.

ಯಶ್ ಅವರು ಮೈಸೂರಿನವರು. ಅವರ ತಂದೆ ಅರುಣ್ ಕುಮಾರ್ ಕೆಎಸ್​​​ಆರ್​​ಟಿಸಿ ಡ್ರೈವರ್ ಆಗಿದ್ದರು. ಅವರ ತಾಯಿ ಪುಷ್ಪಾ ಮನೆ ನೋಡಿಕೊಂಡು ಇದ್ದವರು. ಈಗ ಅವರು ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಬಾಲ್ಯದಲ್ಲಿ ಮನೆಯಲ್ಲಿ ಕಷ್ಟ ಇದ್ದರೂ ಯಶ್ ಅವರ ವರೆಗೆ ಬರದಂತೆ ಕುಟುಂಬ ನೋಡಿಕೊಂಡಿತ್ತು. ಅವರು ಮೊದಲು ಧಾರಾವಾಹಿ ಮಾಡಿದರು. ಅನೇಕ ಧಾರಾವಾಹಿಗಳಲ್ಲಿ ನಟಿಸಿದ್ದರು.

ನಂತರ ಸಿನಿಮಾ ರಂಗಕ್ಕೆ ಕಾಲಿಟ್ಟರು. ‘ಮೊಗ್ಗಿನ ಮನಸ್ಸು’ ಅವರ ಮೊದಲ ಸಿನಿಮಾ. ಲವ್ ಕಥೆ ಹೊಂದಿದ್ದ ಈ ಚಿತ್ರ ಸೂಪರ್ ಹಿಟ್ ಆಯಿತು. ಆ ಬಳಿಕ ಯಶ್ ಅವರು ವೃತ್ತಿ ಜೀವನದಲ್ಲಿ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದರು. ಈಗ ಯಶ್ ಅವರು ಸೂಪರ್​ ಸ್ಟಾರ್. ಅವರನ್ನು ತಡೆಯುವವರೇ ಇಲ್ಲ ಎಂದರೂ ತಪ್ಪಾಗಲಾರದು.

ಇದನ್ನೂ ಓದಿ: ‘ರಾಕಿಂಗ್ ಸ್ಟಾರ್’ ಯಶ್ ಹುಟ್ಟುಹಬ್ಬಕ್ಕೆ ರಾಜ್ಯಾದ್ಯಂತ ರಾರಾಜಿಸುತ್ತಿರುವ ಬಿಲ್​ಬೋರ್ಡ್​

‘ಕೆಜಿಎಫ್’ ಬಳಿಕ ಅವರು ಪ್ಯಾನ್ ಇಂಡಿಯಾ ಸ್ಟಾರ್ ಆದರು. ‘ಕೆಜಿಎಫ್ 2’ ಚಿತ್ರ ಅವರನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋಗಿದೆ. ಇನ್ನು, ‘ಟಾಕ್ಸಿಕ್’ ಸಿನಿಮಾ ಯಾವ ರೀತಿಯಲ್ಲಿ ಇರಬಹುದು ಎಂಬ ಕುತೂಹಲ ಎಲ್ಲರಿಗೂ ಮೂಡಿದೆ. ಈ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಮೂಡಿದೆ. ಈ ಚಿತ್ರದ ಟ್ರೇಲರ್ ಅಥವಾ ಟೀಸರ್ ಯಶ್ ಜನ್ಮದಿನವಾದ ಜನವರಿ 8ರಂದು ರಿಲೀಸ್ ಆಗುವ ಸಾಧ್ಯತೆ ಇದೆ. ಮಾರ್ಚ್ 19ರಂದು ಈ ಸಿನಿಮಾ ವಿಶ್ವಾದ್ಯಂತ ತೆರೆಗೆ ಬರಲಿದೆ. ಈ ಚಿತ್ರಕ್ಕೆ ಸಾಕಷ್ಟು ದೊಡ್ಡ ಬಜೆಟ್ ಹೂಡಿಕೆ ಮಾಡಲಾಗಿದೆ ಎಂಬುದು ವಿಶೇಷ. ಕನ್ನಡದ ಕೆವಿಎನ್ ನಿರ್ಮಾಣ ಸಂಸ್ಥೆ ಇದಕ್ಕೆ ಹಣ ಹಾಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

‘ಹೋಗೆಲೇ..’, ‘ನೀನ್ ಹೋಗೆಲೇ’; ಅಶ್ವಿನಿ-ಕಾವ್ಯಾ ಮಧ್ಯೆ ತಾರಕಕ್ಕೇರಿದ ಕಿತ್ತಾಟ – Kannada News | Ashwini Gowda vs Kavya Gowda: Bigg Boss Kannada 12 Nomination Turns Ugly

‘ಬಿಗ್ ಬಾಸ್ ಕನ್ನಡ ಸೀಸನ್ 12’ರಲ್ಲಿ (BBK 12) ಅಶ್ವಿನಿ ಗೌಡ ಅವರಿಗೆ ಹುಟ್ಟಿಕೊಂಡ ವೈರಿಗಳು ಒಬ್ಬಿಬ್ಬರಲ್ಲ. ಅವರು ಆಡುವ ಮಾತುಗಳು ಕೂಡ ಇದಕ್ಕೆ ಕಾರಣ. ಈಗ ಅಶ್ವಿನಿ ಹಾಗೂ ಕಾವ್ಯಾ ಮಧ್ಯೆ ವಾಕ್ಸಮರ ನಡೆದಿದೆ. ಒಬ್ಬರಿಗೊಬ್ಬರು ಏಕವಚನದಲ್ಲಿ ಕರೆದುಕೊಂಡಿದ್ದಾರೆ. ನಾಮಿನೇಷನ್ ಪ್ರಕ್ರಿಯೆ ವೇಳೆ ಈ ಕಿತ್ತಾಟ ನಡೆದಿದೆ. 100 ದಿನಗಳ ಆಟದಲ್ಲಿ ಮಾಡಿದ ತಪ್ಪನ್ನು ಹೇಳಿದ್ದಕ್ಕೆ ಪರಸ್ಪರ ಇಬ್ಬರೂ ಕೋಪಗೊಂಡರು. ಆ ಬಗ್ಗೆ ಇಲ್ಲಿದೆ ವಿವರ.

ನಾಮಿನೇಷನ್ ವೇಳೆ ಮೊದಲು ಕಾವ್ಯಾ ಅವರು ಅಶ್ವಿನಿ ಗೌಡ ಹೆಸರನ್ನು ತೆಗೆದುಕೊಂಡರು. ಸೀಸನ್ ಆರಂಭದಿಂದ ಇಲ್ಲಿಯವರೆಗೆ ಅಶ್ವಿನಿ ಗೌಡ ಮಾಡಿದ ಕೆಟ್ಟ ಕೆಲಸಗಳ ಪಟ್ಟಿಯನ್ನು ಕಾವ್ಯಾ ತೆಗೆದಿಟ್ಟರು. ‘ಬಿಗ್ ಬಾಸ್ ಒಂದು ವ್ಯಕ್ತಿತ್ವದ ಆಟ. ಈ ರೀತಿಯ ವ್ಯಕ್ತಿತ್ವ ಗೆಲ್ಲೋದು ನಂಗೆ ಇಷ್ಟ ಇಲ್ಲ. ಅಶ್ವಿನಿ ಹೊರಗೆ ಹೆಣ್ಣಿನ ಪರ ಹೋರಾಡಿರಬಹುದು. ಆದರೆ, ಇಲ್ಲಿ ಹೆಣ್ಣು ಮಕ್ಕಳ ಬಗ್ಗೆ ಕೀಳಾಗಿ ಮಾತನಾಡುತ್ತಿದ್ದಾರೆ. ಅಶ್ವಿನಿ ಗೌಡ 2.O ವರ್ಷನ್ ನಾಟಕ’ ಎಂದು ಕಾವ್ಯಾ ಗೌಡ ಆರೋಪಿಸಿದರು.

ಇದಕ್ಕೆ ಅಶ್ವಿನಿ ಗೌಡ ಕೌಂಟರ್ ಕೊಟ್ಟರು. ‘ಕಾವ್ಯಾ ಇಲ್ಲಿಯವರೆಗೆ ಹೇಗೆ ಬಂದಿದ್ದಾರೆ ಎಂಬುದನ್ನು ಇಡೀ ಕರ್ನಾಟಕ ನೋಡಿದೆ’ ಎಂದರು. ಗಿಲ್ಲಿ ಸಹಾಯದಿಂದ ಕಾವ್ಯಾ ಇಲ್ಲಿಯವರೆಗೆ ಬಂದರು ಎಂಬುದು ಈ ವಾಕ್ಯದ ಒಳಾರ್ಥ. ಆದರೆ, ಇದನ್ನು ಕಾವ್ಯಾ ಒಪ್ಪಿಕೊಳ್ಳಲಿಲ್ಲ.

ಇದನ್ನೂ ಓದಿ: ‘ನಿನ್ನ ಟೈಮ್ ಸ್ಟಾರ್ಟ್ ಆಗಿದೆ’; ಗಿಲ್ಲಿಗೆ ವಾರ್ನ್ ಮಾಡಿ ಬಿಗ್ ಬಾಸ್ ಬಳಿ ಅಶ್ವಿನಿ ಗೌಡ ವಿಶೇಷ ಮನವಿ

ಆ ಬಳಿಕ ಅಶ್ವಿನಿ ಅವರು ತಮ್ಮ ಸರದಿಯಲ್ಲಿ ಕಾವ್ಯಾ ಅವರನ್ನು ನಾಮಿನೇಟ್ ಮಾಡಿದರು. ಈ ವೇಳೆ ಅಶ್ವಿನಿ ಗೌಡ ಅವರು ಕಾವ್ಯಾ ಬಗ್ಗೆ ಒಂದಷ್ಟು ಆರೋಪಗಳನ್ನು ಮಾಡಿದರು. ಇಬ್ಬರ ಮಧ್ಯೆ ವಾಕ್ಸಮರ ತಾರಕಕ್ಕೆ ಏರಿತು. ನಂತರ ಮಾತು ಏಕವಚನದ ಕಡೆ ತಿರುಗಿತು. ಪರಸ್ಪರ ಅಗೌರವ ನೀಡಿ ಇಬ್ಬರೂ ಮಾತನಾಡಲು ಆರಂಭಿಸಿದರು.
‘ನೀನು ಫ್ರೀ ಪ್ರಾಡಕ್ಟ್’ ಎಂದು ಅಶ್ವಿನಿ ಅವರು ಕಾವ್ಯಾಗೆ ಹೇಳಿದರು. ಆಗ ಕಾವ್ಯಾ ‘ಹೋಗೇಲೆ’ ಎಂದು ಅಶ್​ವಿನಿಗೆ ಹೇಳಿದರು. ನೀನು ಹೋಗೆಲೇ ಎಂದು ಅಶ್ವಿನಿ ತಿರುಗೇಟು ಕೊಟ್ಟರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿ ಚಳಿಗಾಲದ ಪ್ರಭಾವ ಹೆಚ್ಚಳ; ಇಂದು ಕೂಡ ಹಲವೆಡೆ ಒಣ ಹವೆ – Kannada News | Bengaluru temperature: Dry weather all over karnataka, misty weather in bengaluru

ಬೆಂಗಳೂರು, ಜನವರಿ 05: ರಾಜ್ಯದಲ್ಲಿ ಚಳಿಗಾಲದ ಪ್ರಭಾವ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಹಲವೆಡೆ ಮಂಜು ಹಾಗೂ ಒಣ ಹವೆಯ (Weather Forecast) ವಾತಾವರಣ ಜನಜೀವನದ ಮೇಲೆ ಪ್ರಭಾವ ಬೀರುತ್ತಿದೆ. ಕಳೆದ ಕೆಲ ದಿನಗಳಿಂದ ಕೆಲವೆಡೆ ತುಂತುರು ಮಳೆಯಾದರೂ, ರಾಜ್ಯದ ಬಹುತೇಕ ಭಾಗಗಳಲ್ಲಿ ಒಣ ಹವೆಯೇ ಮುಂದುವರಿದಿದೆ. ಹವಾಮಾನ ಇಲಾಖೆ ನೀಡಿರುವ ಮುನ್ಸೂಚನೆಯಂತೆ, ನಿನ್ನೆಯಂತೆಯೇ ಇಂದೂ ದಕ್ಷಿಣ ಒಳನಾಡು, ಕರಾವಳಿ ಹಾಗೂ ಉತ್ತರ ಒಳನಾಡಿನ ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯಲಿದೆ.

ಎಲ್ಲೆಲ್ಲಿ ಒಣಹವೆ?

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ರಾಮನಗರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ಚಾಮರಾಜನಗರ, ಮೈಸೂರು, ತುಮಕೂರು ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಳೆಯ ಲಕ್ಷಣಗಳಿಲ್ಲದೆ ಒಣ ಹವೆಯ ವಾತಾವರಣವಿರಲಿದೆ.

ಇದೇ ವೇಳೆ ಕರಾವಳಿ ಭಾಗದ ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿಯೂ ಒಣ ಹವೆ ಮುಂದುವರಿಯಲಿದೆ ಎಂದು ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿಯೂ ಕಳೆದ ಹಲವು ದಿನಗಳಿಂದ ಕಾಣಿಸಿಕೊಂಡಿರುವ ಒಣ ಹವೆಯ ವಾತಾವರಣ ಇಂದು ಸಹ ಮುಂದುವರಿಯಲಿದೆ.

ರಾಜಧಾನಿಯಲ್ಲಿ ಚಳಿ

ರಾಜಧಾನಿ ಬೆಂಗಳೂರಿನಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಬೆಳಗಿನ ಜಾವ ಮಂಜು ಮುಸುಕಿದ ವಾತಾವರಣ ಕಂಡುಬರುತ್ತಿದೆ. ಇಂದು ನಗರದ ಕನಿಷ್ಠ ತಾಪಮಾನ 15 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ 28 ಡಿಗ್ರಿ ಸೆಲ್ಸಿಯಸ್ ಇರಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಚಳಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಬೆಚ್ಚಗಿನ ಉಡುಪು ಧರಿಸುವುದು ಹಾಗೂ ಬಿಸಿ ಆಹಾರ ಸೇವಿಸುವಂತೆ ವೈದ್ಯರು ಸಲಹೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 7:33 am, Tue, 6 January 26

Source link

ಕೇವಲ ೨೪ ಎಸೆತಗಳಲ್ಲಿ ೧೦ ಸಿಕ್ಸ್ ಸಿಡಿಸಿದ ವೈಭವ್ ಸೂರ್ಯವಂಶಿ – Kannada News | Vaibhav suryavanshi Smashed 10 Sixes in Just 24 Balls

ವೈಭವ್ ಸೂರ್ಯವಂಶಿಯ ಈ ಸಿಡಿಲಬ್ಬರದ ನೆರವಿನೊಂದಿಗೆ ಭಾರತ ತಂಡವು 8 ಓವರ್​ಗಳಲ್ಲಿ 95 ರನ್ ಕಲೆಹಾಕಿತು. ಇದಾದ ಬಳಿಕ ಅಭಿಮನ್ಯು ಕುಂದು 42 ಎಸೆತಗಳಲ್ಲಿ 48 ರನ್ ಬಾರಿಸಿದರು. ಈ ಮೂಲಕ ಭಾರತ ತಂಡವು 23.2 ಓವರ್​ಗಳಲ್ಲಿ 176 ರನ್​ ಗಳಿಸಿತ್ತು. ಈ ವೇಳೆ ವೇಳೆ ಮಂದ ಬೆಳಕಿನ ಕಾರಣ ಪಂದ್ಯವನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಅಷ್ಟೇ ಅಲ್ಲದೆ ಪಂದ್ಯದ ಫಲಿತಾಂಶ ನಿರ್ಣಯಕ್ಕಾಗಿ ಡಕ್​ವರ್ತ್ ಲೂಯಿಸ್ ನಿಯಮದ ಮೊರೆ ಹೋಗಲಾಗಿದ್ದು, ಈ ವೇಳೆಗೆ ಭಾರತ ತಂಡವು 23.2 ಓವರ್​ಗಳಲ್ಲಿ 176 ರನ್​ಗಳಿಸಿ ನಿಗದಿತ ಗುರಿಗಿಂತ ಮುಂದಿದ್ದರಿಂದ ಟೀಮ್ ಇಂಡಿಯಾವನ್ನು 8 ವಿಕೆಟ್​ಗಳ ವಿಜಯಿ ಎಂದು ಘೋಷಿಸಲಾಯಿತು.

Source link

‘ನಿನ್ನ ಟೈಮ್ ಸ್ಟಾರ್ಟ್ ಆಗಿದೆ’; ಗಿಲ್ಲಿಗೆ ವಾರ್ನ್ ಮಾಡಿ ಬಿಗ್ ಬಾಸ್ ಬಳಿ ಅಶ್ವಿನಿ ಗೌಡ ವಿಶೇಷ ಮನವಿ – Kannada News | Your Time Started in Big Boss Kannada Ashwini Gowda warns Gilli Nata

ಬಿಗ್ ಬಾಸ್ (Bigg Boss) ಮನೆಯಲ್ಲಿ ಅಶ್ವಿನಿ ಗೌಡ ಹಾಗೂ ಗಿಲ್ಲಿ ನಟ ಹಾವು ಮುಂಗುಸಿ ರೀತಿ ಯಾವಾಗಲೂ ಕಚ್ಚಾಡುತ್ತಾ ಇರುತ್ತಾರೆ. ಇವರ ಮಧ್ಯೆ ಆಗಾಗ ಕಿರಿಕ್​​ಗಳು ಆಗುತ್ತಲೇ ಇರುತ್ತವೆ. ಅಶ್ವಿನಿ ಗೌಡ ಅವರು ಈ ಮೊದಲು ಸಿಟ್ಟನ್ನು ಬಿಟ್ಟು ಮೌನಕ್ಕೆ ಶರಣಾಗುವ ನಿರ್ಧಾರಕ್ಕೆ ಬಂದಿದ್ದರು. ಆದರೆ, ಪರಿಸ್ಥಿತಿ ಹಾಗೂ ಗಿಲ್ಲಿ ನಟನ ಚುಚ್ಚು ಮಾತುಗಳು ಇದಕ್ಕೆ ಅವಕಾಶ ಕೊಡುತ್ತಿಲ್ಲ. ಅವರು ಮತ್ತೆ ಮತ್ತೆ ಕೆರಳುತ್ತಿದ್ದಾರೆ. ಈಗ ಗಿಲ್ಲಿಗೆ ಅಶ್ವಿನಿ ಗೌಡ ನೇರವಾಗಿ ಗಿಲ್ಲಿಗೆ ವಾರ್ನ್ ಮಾಡಿದ್ದಾರೆ. ಜನವರಿ 5ರ ಎಪಿಸೋಡ್​​ನಲ್ಲಿ ಇದು ಹೈಲೈಟ್ ಆಗಿದೆ.

ಗಿಲ್ಲಿ ಅವರು ಅಶ್ವಿನಿ ಅವರನ್ನು ನಾಮಿನೇಟ್ ಮಾಡಿದರು. ಈ ವೇಳೆ ಅಶ್ವಿನಿ ವಿರುದ್ಧ ಗಿಲ್ಲಿ ಒಂದಷ್ಟು ಆರೋಪಗಳನ್ನು ಮಾಡಿದರು. ಇತ್ತೀಚೆಗೆ ರಾಶಿಕಾ ವಿರುದ್ಧ ಆರೋಪ ಮಾಡುವಾಗ ಅಶ್ವಿನಿ ಅವರು, ‘ರಾಶಿಕಾಗೆ ಮಲಗೋಕೆ ರಘು ತೊಡೆ ಬೇಕು’ ಎಂದು ಆರೋಪಿಸಿದ್ದರು. ಇದನ್ನು ಗಿಲ್ಲಿ ಖಂಡಿಸಿದ್ದಾರೆ. ‘ಅಶ್ವಿನಿ ಗೌಡ 2.O’ ಬಗ್ಗೆಯೂ ಪ್ರಶ್ನೆ ಮಾಡಿದ್ದಾರೆ. ಗಿಲ್ಲಿಯನ್ನು ಕೊಚ್ಚೆ ಎಂದು ಕರೆದರು ಅಶ್ವಿನಿ.

ಆ ಬಳಿಕ ಅಶ್ವಿನಿ ಅವರು ಗಿಲ್ಲಿಯನ್ನು ನಾಮಿನೇಟ್ ಮಾಡಿದರು. ಈ ವೇಳೆಯೂ ಕಿತ್ತಾಟ ನಡೆದಿದೆ. ‘ನಿನ್ನ ಟೈಮ್ ಸ್ಟಾರ್ಟ್ ಆಗಿದೆ’ ಎಂದು ಅಶ್ವಿನಿ ಅವರು ಗಿಲ್ಲಿಗೆ ಎಚ್ಚರಿಕೆ ನೀಡಿದರು. ಇದಕ್ಕೆ ಗಿಲ್ಲಿ ತಲೆಕೆಡಿಸಿಕೊಳ್ಳಲಿಲ್ಲ.
ನಾಮಿನೇಷನ್ ಪ್ರಕ್ರಿಯೆ ಮುಗಿದ ಬಳಿಕೆ ಎಲ್ಲರೂ ಪದೇ ಪದೇ ಅಶ್ವಿನಿ ಅವರನ್ನು ಟ್ರಿಗರ್ ಮಾಡಿದರು. ಇದರಿಂದ ಅಶ್ವಿನಿ ಅವರಿಗೆ ಕೋಪ ಬಂದಿದೆ. ಆದರೂ ಅದನ್ನು ಅವರ ಅದುಮಿಟ್ಟುಕೊಂಡರು. ‘ಇದೆಲ್ಲವನ್ನೂ ಸಹಿಸಿಕೊಳ್ಳಲು ತಾಳ್ಮೆ ಕೊಡಿ’ ಎಂದು ಬಿಗ್ ಬಾಸ್ ಬಳಿ ವಿಶೇಷ ಮನವಿ ಮಾಡಿಕೊಂಡರು.

ಇದನ್ನೂ ಓದಿ: ರಕ್ಷಿತಾ ಶೆಟ್ಟಿಯಿಂದ ಮ್ಯಾನ್​ಹ್ಯಾಂಡ್ಲಿಂಗ್? ಓಪನ್ ಆಗುತ್ತಾ ಬಿಗ್ ಬಾಸ್ ಬಾಗಿಲು?

ಅಶ್ವಿನಿ ಗೌಡ ಅವರು ಫಿನಾಲೆಗೆ ಏರುವ ಕನಸು ಕಾಣುತ್ತಿದ್ದಾರೆ. ಅವರು ಗೆಲ್ಲಬೇಕು ಎಂಬುದು ಅಭಿಮಾನಿಗಳ ಕೋರಿಕೆ. ಗಿಲ್ಲಿ ನಟ ಅವರು ಅವರಿಗೆ ಉತ್ತಮ ಪ್ರತಿಸ್ಪರ್ಧಿಯಾಗಿ ಕಾಣಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 6:59 am, Tue, 6 January 26

Source link

Daily Devotional: ಈ ಐದು ಜನರ ಸಹವಾಸ ಮಾಡಿದ್ರೆ ಸರ್ವನಾಶಕ್ಕೆ ದಾರಿ

ಬೆಂಗಳೂರು, ಜನವರಿ 06: ಮಾನವನ ಶ್ರೇಯಸ್ಸು, ಯಶಸ್ಸು ಮತ್ತು ಕೀರ್ತಿಗೆ ಸ್ನೇಹಿತರ ಪಾತ್ರ ಅತಿ ಮುಖ್ಯ. ಆದರೆ, ಕೆಲವೊಮ್ಮೆ ಸ್ನೇಹಿತರು ಶುಭವನ್ನು ತರುವ ಬದಲು ಅಶುಭವನ್ನು ಸಹ ತರಬಹುದು. ಮಹಾ ಮೇಧಾವಿ ಚಾಣಕ್ಯರು, ಜೀವನದಲ್ಲಿ ಪ್ರಗತಿ ಸಾಧಿಸಲು ಐದು ವಿಧದ ಮಿತ್ರರಿಂದ ದೂರವಿರಲು ಸಲಹೆ ನೀಡಿದ್ದಾರೆ.

ಚಾಣಕ್ಯರ ಪ್ರಕಾರ, ಈ ಐದು ಬಗೆಯ ಸ್ನೇಹಿತರು ನಮ್ಮ ಜೀವನಕ್ಕೆ ಮಾರಕವಾಗಬಹುದು: ಅಸೂಯೆ ಪಡುವವರು, ನಿಮ್ಮನ್ನು ಇಷ್ಟಪಡದವರು, ಅತಿಯಾಗಿ ಮಾತನಾಡುವವರು, ಸಂಕುಚಿತ ಭಾವನೆಯನ್ನು ಹೊಂದಿರುವವರು ಮತ್ತು ಸುಳ್ಳು ಹೇಳುವವರು. ಇಂತಹವರ ಸಹವಾಸವು ನಿಮ್ಮ ಅಭಿವೃದ್ಧಿಗೆ ಅಡ್ಡಿಯಾಗುವುದಲ್ಲದೆ, ನಿಮ್ಮ ಆಯುಷ್ಯವನ್ನು ಸಹ ವ್ಯರ್ಥ ಮಾಡುತ್ತದೆ. ಆದ್ದರಿಂದ, ನಿಮ್ಮ ಒಳಿತಿಗಾಗಿ ಇಂತಹವರ ಸಹವಾಸದಿಂದ ಜಾಗರೂಕರಾಗಿರುವುದು ಅತಿ ಅಗತ್ಯ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

Source link

Horoscope Today 06 January: ಇಂದು ಈ ರಾಶಿಯವರ ನಿರೀಕ್ಷೆಗಳು ಹುಸಿಯಾಗಬಹುದು – Kannada News | Daily Horoscope for January 6th 2025: Dr. Basavaraj Gurujis Predictions for Zodiac Signs

ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಡಾ. ಬಸವರಾಜ ಗುರೂಜಿ ಅವರು 2026ರ ಜನವರಿ 06, ಮಂಗಳವಾರದ ದಿನಭವಿಷ್ಯವನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ ಪುಷ್ಯಮಾಸ ಹೇಮಂತಋತು ಕೃಷ್ಣಪಕ್ಷ ತದಿಗೆ ಆಶ್ಲೇಷ ನಕ್ಷತ್ರ, ಪ್ರೀತಿಯೋಗ ಭದ್ರ ಕರಣದ ಮಹತ್ವದ ದಿನವಾಗಿದೆ. ಇಂದು ಸುಬ್ರಹ್ಮಣ್ಯ ಮತ್ತು ಹನುಮನ ವಿಶೇಷ ಪರ್ವದಿನವಾಗಿದ್ದು, ಸಂಕಷ್ಟ ಚತುರ್ಥಿಯೂ ಇದೆ. ನರಗುಂದ ಶಿವಜ್ಜಯ್ಯನ ಪುಣ್ಯತಿಥಿ ಹಾಗೂ ಅಫಜಲಪುರದಲ್ಲಿ ಮಲ್ಲಿಕಾರ್ಜುನ ಸ್ವಾಮಿಗಳ ಜಾತ್ರಾ ಮಹೋತ್ಸವವೂ ನಡೆಯುತ್ತಿದೆ.

ಗುರೂಜಿ ಅವರು ಮೇಷದಿಂದ ಮೀನದವರೆಗಿನ ದ್ವಾದಶ ರಾಶಿಗಳ ಫಲಾಫಲಗಳನ್ನು ಪ್ರಸ್ತುತಪಡಿಸಿದರು. ಆಶ್ಲೇಷ ನಕ್ಷತ್ರದಲ್ಲಿ ಚಂದ್ರನ ಸಂಚಾರವು ಪ್ರತಿಯೊಂದು ರಾಶಿಯ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ವಿವರಿಸಿದ್ದಾರೆ. ಕೆಲಸ-ಕಾರ್ಯಗಳು, ಆರ್ಥಿಕ ಸ್ಥಿತಿ, ಆರೋಗ್ಯ, ಕುಟುಂಬ ಸಂಬಂಧಗಳು ಮತ್ತು ಪ್ರಯಾಣದ ಕುರಿತು ಪ್ರಮುಖ ವಿವರಗಳನ್ನು ನೀಡಿದ್ದಾರೆ. ಅಲ್ಲದೆ, ಪ್ರತಿಯೊಂದು ರಾಶಿಯವರಿಗೆ ಶುಭಕರವಾದ ಬಣ್ಣ, ದಿಕ್ಕು, ಅದೃಷ್ಟ ಸಂಖ್ಯೆ ಮತ್ತು ಪಠಿಸಬೇಕಾದ ವಿಶೇಷ ಮಂತ್ರಗಳನ್ನು ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ.

Source link

Exit mobile version