ಚಾಲಕ ಸಮೇತ ಅಕ್ಕಿ ಲಾರಿ ದರೋಡೆ ಮಾಡಿದ್ದ ಅಂತಾರಾಜ್ಯ ದರೋಡೆಕೋರರ ಬಂಧನ: ಲಾಕ್​​ ಆಗಿದ್ದೇಗೆ ಗೊತ್ತಾ? – Kannada News | Bagalkote: Mahalingapura Police Nab 8 Interstate Robbers in Rice Truck Heist Operation

ದರೋಡೆಕೋರರನ್ನು ಬಂಧಿಸಿದ ಮಹಾಲಿಂಗಪುರ ಪೊಲೀಸರು

ಬಾಗಲಕೋಟೆ, ಜನವರಿ 24: ಅಕ್ಕಿ (Rice) ಸಾಗಾಟ ಮಾಡುತ್ತಿದ್ದ ಚಾಲಕ ಸೇರಿದಂತೆ ಲಾರಿ ಅಪಹರಿಸಿದ್ದ 8 ಜನ ಅಂತಾರಾಜ್ಯ ದರೋಡೆಕೋರರನ್ನು (Robbers) ಪೊಲೀಸರು ಬಂಧಿಸಿದ್ದಾರೆ. ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರ ಪಟ್ಟಣದ ಪೊಲೀಸರು ರೋಚಕ ಕಾರ್ಯಾಚರಣೆ ನಡೆಸುವ ಮೂಲಕ ದರೋಡೆಕೋರರ ಹೆಡೆಮುರಿ ಕಟ್ಟಿದ್ದಾರೆ. ವಿಜಯಪುರ ಮೂಲದ ಜಾಕೀರ್ ಮಕಾಂದಾರ್, ಸಚಿನ್ ನಾಯ್ಕೊಡಿ, ಅರ್ಪಾತ್ ತಾಳಿಕೋಟಿ, ಸಂತೋಷ್​ ಕಾಂಬಳೆ, ಫಯಾಜ್ ಮಕಾಂದಾರ್, ಜಮಖಂಡಿಯ ಸಂಜು ಕಡಕೋಳ, ವಿಶ್ವನಾಥ ಲಗಳಿ, ಜಮಖಂಡಿ ತಾಲ್ಲೂಕಿನ ಮೈಗೂರು ಗ್ರಾಮದ ಸಂಗಮೇಶ್ ಕಾಂಬಳೆ ಬಂಧಿತರು. 3 ಲಕ್ಷ 90 ಸಾವಿರ ರೂ ಹಣ, ಸ್ಕಾರ್ಪಿಯೋ, ಇನ್ನೋವಾ ಮತ್ತು ಲಾರಿ ಜಪ್ತಿ ಮಾಡಲಾಗಿದೆ.

ನಡೆದದ್ದೇನು?

ಜನವರಿ 10ರ ರಾತ್ರಿ 12.45ಕ್ಕೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲ್ಲೂಕಿನ ಸೈದಾಪುರ ಬಳಿ ಘಟನೆ ನಡೆದಿದೆ. ಸ್ಕಾರ್ಪಿಯೋ ಕಾರಿನಲ್ಲಿ ವಿಜಯಪುರ ಗ್ಯಾಂಗ್​​ ಬಂದಿದ್ದು, ಇನ್ನೋವಾ ಕಾರಿನಲ್ಲಿ ಜಮಖಂಡಿ ಗ್ಯಾಂಗ್​​ ಬಂದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯಿಂದ ಕೊಲ್ಲಾಪುರಕ್ಕೆ ಹೊರಟಿದ್ದ (MH 09 UC 8190) ನಂಬರಿನ ಲಾರಿಯನ್ನ ಸೈದಾಪುರ ಬಳಿ ಅಡ್ಡಗಟ್ಟಿದ ದರೋಡೆಕೋರರು ಚಾಲಕನನ್ನು ಥಳಿಸಿ‌ದ್ದಾರೆ. ಅಷ್ಟೇ ಅಲ್ಲದೆ ಚಾಲಕನ ಕಣ್ಣಿಗೆ ಬಟ್ಟೆ ಕಟ್ಟಿ ಕಿಡ್ನ್ಯಾಪ್​​ ಮಾಡಿದ್ದಾರೆ.

ಇದನ್ನೂ ಓದಿ: ಅನ್ನಭಾಗ್ಯ ಅಕ್ಕಿ ಕೊಪ್ಪಳದಿಂದ ದುಬೈಗೆ ಕಳ್ಳ ಸಾಗಾಟ? ‘ಟಿವಿ9’ ವರದಿ ಬೆನ್ನಲ್ಲೇ ನಾಲ್ವರ ವಿರುದ್ಧ ಎಫ್​ಐಆರ್

ಬೆಳಗಾವಿ ಜಿಲ್ಲೆಯ ಕಾಗವಾಡದಲ್ಲಿ 6 ಲಕ್ಷ 12 ಸಾವಿರ 500 ರೂ ಮೌಲ್ಯದ 25 ಟನ್​​​ ಅಕ್ಕಿಯನ್ನು​ ಒಬ್ಬರಿಗೆ ಮಾರಾಟ ಮಾಡಿದ್ದಾರೆ. ಅಕ್ಕಿ ಮಾರಾಟದಿಂದ ಬಂದ ಹಣ ತೆಗೆದುಕೊಂಡು ದರೋಡೆಕೋರರು ಪರಾರಿ ಆಗಿದ್ದಾರೆ. ಸದ್ಯ ಲಾರಿ ಚಾಲಕ ಬಾಬಾಸಾಬ ರಾಮದುರ್ಗ ನೀಡಿದ ದೂರಿನ ಮೇರೆಗೆ ಪೊಲೀಸರು ಕಾರ್ಯಾಚರಣೆ ಮಾಡಿ ಆರೋಪಿಗಳನ್ನು ಬಂಧಿಸಿದ್ದಾರೆ.

ದರೋಡೆಕೋರರು ಲಾಕ್​​ ಆಗಿದ್ದೇಗೆ?

ಇನ್‌ಸ್ಟಾಗ್ರಾಮ್​ ವಾಯ್ಸ್​​ ಕಾಲ್​ ಆಧಾರವಾಗಿಟ್ಟುಕೊಂಡು ಮಹಾಲಿಂಗಪುರ ಪೊಲೀಸರು ರೋಚಕ ಕಾರ್ಯಾಚರಣೆ ಮಾಡಿದ್ದಾರೆ. ದರೋಡೆಕೋರರ ಪರಿಚಿತರಿಂದ ಅವರಿಗೆ ಮೆಸೇಜ್​ ಕಳುಹಿಸಲಾಗಿದೆ. ಬಳಿಕ ಐಡಿಪಿಆರ್, ಇಂಟರ್ನೆಟ್ ಆಪರೇಟ್ ಸ್ಥಳ ಗುರುತಿಸಿ ದರೋಡೆಕೋರರ ಕೈಗೆ ಕೋಳ ತೊಡಿಸಲಾಗಿದೆ.

ಇದನ್ನೂ ಓದಿ: ಕೊಪ್ಪಳದಲ್ಲಿ ರೇಷನ್ ಅಕ್ಕಿಗೆ ಕನ್ನ; ಖಡಕ್ ವಾರ್ನಿಂಗ್ ಕೊಟ್ಟ ಆಹಾರ ಇಲಾಖೆ

ಇನ್ನು ಅಕ್ಕಿ ಕಳ್ಳ ಸಾಗಾಣಿಕೆ ಮೂಲಕ ಸಾಗಾಟ ಮಾಡಲಾಗುತ್ತಿತ್ತಾ ಅಥವಾ ಕಾನೂನುಬದ್ಧ ಆಗಿತ್ತಾ, ಪಡಿತರ ಅಕ್ಕಿನಾ, ರೈಸ್ ಸ್ಮಗ್ಲಿಂಗ್ ಮಾಫಿಯಾನಾ ಎಂದು ಪೊಲೀಸರು‌ ತನಿಖೆ ನಡೆಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ತಾನು ಕಲಿತ ಶಾಲೆಗೆ ಹೋಗಿ ವಿದ್ಯಾರ್ಥಿಗಳೊಟ್ಟಿಗೆ ಬೆರೆತ ಗಿಲ್ಲಿ: ವಿಡಿಯೋ – Kannada News | Bigg Boss Kannada 12: Gilli visited his old school

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಗೆದ್ದ ಗಿಲ್ಲಿ, ಗೆದ್ದ ಬಳಿಕ ಬಿಡುವಿಲ್ಲದಂತೆ ಪರ್ಯಟನೆ ಮಾಡುತ್ತಿದ್ದಾರೆ. ಸುದೀಪ್, ಶಿವರಾಜ್ ಕುಮಾರ್ ಅವರ ಭೇಟಿ ಆಗಿ ಆಶೀರ್ವಾದ ಪಡೆದ ಬಳಿಕ ಸಿಎಂ ಸೇರಿದಂತೆ ರಾಜ್ಯದ ಕೆಲವು ಪ್ರಮುಖ ರಾಜಕಾರಣಿಗಳನ್ನು ಸಹ ಭೇಟಿಯಾಗಿ ಆಶೀರ್ವಾದ ಪಡೆದರು. ಇದೀಗ ತಮ್ಮ ಹುಟ್ಟೂರಿಗೆ ತೆರಳಿದ ಗಿಲ್ಲಿ, ಅಲ್ಲಿ ತಾವು ಪ್ರೌಢಶಾಲೆ ಕಲಿತ ಬಂಡೂರಿನ ಶಾಲೆಗೆ ಭೇಟಿ ನೀಡಿದ್ದರು. ಶಿಕ್ಷಕರು, ಊರಿನವರು, ಕೆಲವು ಹಳೆ ಗೆಳೆಯರ ಭೇಟಿ ಮಾಡಿದ ಗಿಲ್ಲಿ ನಟ, ತಾವು ಕೂರುತ್ತಿದ್ದ ಶಾಲೆಯ ಬೆಂಚಿನ ಮೇಲೆ ಕೂತು ಹಳೆಯ ದಿನಗಳನ್ನು ನೆನಪು ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

ಬೆಂಗಳೂರಿನಲ್ಲಿ ಫುಲ್ ಟ್ರಾಫಿಕ್: ತಡೆಯಲಾಗದೇ ರಸ್ತೆಯಲ್ಲಿ ಮೂತ್ರ ವಿಸರ್ಜನೆ ಮಾಡಿದ ವ್ಯಕ್ತಿ – Kannada News | Bengaluru Traffic Effect: A Man Stopped Car And passed urine On Chandapura flyover, video Goes Viral

ಬೆಂಗಳೂರು, (ಜನವರಿ 24): ಮೊದಲೇ ಬೆಂಗಳೂರು ಟ್ರಾಫಿಕ್ (Bengaluru traffic)​​​​​​ ಜನದಟ್ಟಣೆಗೆ ವಿಶ್ವಪ್ರಸಿದ್ಧಯನ್ನು ಪಡೆದುಕೊಂಡಿದೆ. ಅದರಲ್ಲೂ ವೀಕೆಂಡ್, ಸಾಲು ಸಾಲು ರಜೆಗಳು ಇದ್ದರೆ ಸಾಕು ಬೆಂಗಳೂರಿನ ಪ್ರಮುಖ ರಸ್ತೆಗಳಲ್ಲಿ ಫುಲ್ ಟ್ರಾಫಿಕ್ ಜಾಮ್ ಆಗಿರುತ್ತವೆ. ಅದರಂತೆ ಇಂದಿನಿಂದ ಸೋಮವಾರದವರೆಗೂ ರಜೆ ಇರುವುದರಿಂದ ಜನರ ಊರುಗಳತ್ತ ಮುಖ ಮಾಡುತ್ತಿದ್ದು, ಇದರಿಂದ ಎಲ್ಲೆಡೆ ಟ್ರಾಫಿಕ್ ಜಾಮ್ ಆಗಿದೆ. ಹೀಗಾಗಿ ವ್ಯಕ್ತಿ ಓರ್ವ ಟ್ರಾಫಿಕ್​​ನಲ್ಲಿ ಸಿಲುಕಿಕೊಂಡಿದ್ದು, ತಡೆಯಲಾಗದೇ ರಸ್ತೆಯಲ್ಲೇ ಮೂತ್ರ (urine) ವಿಸರ್ಜನೆ ಮಾಡಿರುವ ಪ್ರಸಂಗ ನಡೆದಿದೆ.

ಹೌದು…ವ್ಯಕ್ತಿಯೋರ್ವ ಕಾರಿನ ಎರಡು ಡೋರ್ ಓಪನ್ ರಸ್ತೆಯಲ್ಲೇ ನಿಂತು ಮೂತ್ರ ವಿಸರ್ಜನೆ ಮಾಡಿದ್ದಾನೆ. ಚಂದಾಪುರದ ಪ್ಲೈ ಓವರ್ ಮೇಲೆ ಈ ಘಟನೆ ನಡೆದಿದೆ. ಚಂದಾಪುರದಿಂದ ಅತ್ತಿಬೆಲೆ ಮಾರ್ಗದಲ್ಲಿ ವಿಪರೀತ ಟ್ರಾಫಿಕ್ ಉಂಟಾಗಿದ್ದರಿಂದ ಕಾರು ಚಾಲಕ ಗಂಟೆಗಟ್ಟಲೇ ಕಾದಿದ್ದಾನೆ. ಇದರಿಂದ ತಡೆದುಕೊಳ್ಳಲು ಆಗದೇ ರಸ್ತೆಯಲ್ಲೇ ಮೂತ್ರ ವಿಸರ್ಜನೆ ಮಾಡಿದ್ದಾರೆ. ಈ ವಿಡಿಯೋ ವ್ಯಕ್ತಿಯೊಬ್ಬರ ಮೊಬೈಲ್​​ನಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.

ಇದನ್ನೂ ಓದಿ: ‘ಟ್ರಾಫಿಕ್​​​ ಕಾರಣದಿಂದ ನಾನು ಹುಟ್ಟಿ ಬೆಳೆದ ಬೆಂಗಳೂರನ್ನು ಬಿಡುತ್ತಿದ್ದೇನೆ’: ಮಂಗಳೂರಿಗೆ ಹೋಗುವ ನಿರ್ಧಾರ ಮಾಡಿದ ಉದ್ಯಮಿ

Source link

T20 World Cup 2026: ಬಾಂಗ್ಲಾ ತಂಡವನ್ನು ಟಿ20 ವಿಶ್ವಕಪ್​ನಿಂದ ಹೊರಹಾಕಿದ ಐಸಿಸಿ – Kannada News | ICC Replaces Bangladesh with Scotland for 2026 T20 World Cup Amid India Security Refusal

ಸ್ಕಾಟ್ಲೆಂಡ್ ಅಧಿಕೃತವಾಗಿ ಬಾಂಗ್ಲಾದೇಶವನ್ನು ಬದಲಾಯಿಸಿದೆ. ಸ್ಕಾಟ್ಲೆಂಡ್ ಗ್ರೂಪ್ ಸಿ ಯ ಭಾಗವಾಗಿದ್ದು, ಈ ಗುಂಪಿನಲ್ಲಿ ಇಂಗ್ಲೆಂಡ್, ವೆಸ್ಟ್ ಇಂಡೀಸ್, ನೇಪಾಳ, ಇಟಲಿ ತಂಡಗಳು ಸೇರಿವೆ. ಐಸಿಸಿ ತಂಡದ ಶ್ರೇಯಾಂಕಗಳ ಆಧಾರದ ಮೇಲೆ ಸ್ಕಾಟ್ಲೆಂಡ್ ಅನ್ನು ಆಯ್ಕೆ ಮಾಡಲಾಗಿದೆ.

Source link

ಭೀಕರ ಅಪಘಾತ: ಮನೆಗೆ ದಿನಸಿ ತೆಗೆದುಕೊಂಡು ಬರ್ತಿದ್ದ ತಾಯಿ-ಮಗ ದುರಂತ ಸಾವು

ನೆಲಮಂಗಲ, ಜನವರಿ 24: ಡಿ ಮಾರ್ಟ್​​ಗೆ ಹೋಗಿ ಬರುತ್ತಿದ್ದ ತಾಯಿ ಮತ್ತು ಮಗ (mother and son) ಟಾಟಾ ಏಸ್ ವಾಹನ ಡಿಕ್ಕಿ ಹೊಡೆದು ಸ್ಥಳದಲ್ಲೇ ಸಾವನ್ನಪ್ಪಿರುವಂತಹ (death) ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಗೇಟ್​​​ ಬಳಿ ಸಂಭವಿಸಿದೆ. ಶೈಲಜಾ(45), ಪ್ರಜ್ವಲ್(26) ಮೃತ ತಾಯಿ, ಮಗ. ತ್ಯಾಮಗೊಂಡ್ಲು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ನಡೆದದ್ದೇನು?

ತಾಯಿ ಮತ್ತು ಮಗ ಡಿ ಮಾರ್ಟ್​​ಗೆ ಹೋಗಿ ದಿನಸಿ ಸಾಮಗ್ರಿಗಳನ್ನು ತೆಗೆದುಕೊಂಡು ಮನೆಗೆ ವಾಪಸ್ ಆಗುತ್ತಿದ್ದರು. ಈ ವೇಳೆ ನೆಲಮಂಗಲ ತಾಲೂಕಿನ ಗುಂಡೇನಹಳ್ಳಿ ಗೇಟ್ ಬಳಿ ವೇಗವಾಗಿ ಬಂದ ಟಾಟಾ ಏಸ್ ವಾಹನ ತಾಯಿ, ಮಗ ಇದ್ದ ಬೈಕ್​​ಗೆ ಡಿಕ್ಕಿ ಹೊಡೆದಿದ್ದು, ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಓವರ್​​ಟೇಕ್​ ಮಾಡಲು ಹೋಗಿ ಬಸ್​ಗೆ ಬೈಕ್​ ಡಿಕ್ಕಿ: ಸವಾರನಿಗೆ ಗಂಭೀರ ಗಾಯ

ಬಸ್​ಗೆ ಬೈಕ್​ ಡಿಕ್ಕಿಯಾಗಿ ಸವಾರನಿಗೆ ಗಂಭೀರ ಗಾಯವಾಗಿರುವಂತಹ ಘಟನೆ ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಶೆಟ್ರಕಟ್ಟೆ ಬಳಿ‌ ನಡೆದಿದೆ. ಕುಂದಾಪುರದಿಂದ ಕೊಲ್ಲೂರು ಕಡೆಗೆ ಹೊರಟಿದ್ದ ಕೆಎಸ್​ಆರ್​ಟಿಸಿ ಬಸ್​ ಓವರ್​​ಟೇಕ್​ ಮಾಡುವಾಗ ಎದುರಿಗೆ ಬರುತ್ತಿದ್ದ ಖಾಸಗಿ ಬಸ್​ಗೆ ಬೈಕ್ ಡಿಕ್ಕಿ ಹೊಡೆದಿದೆ. ಬೈಕ್​ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಅಪಘಾತದ ದೃಶ್ಯ ಬಸ್ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ.

ನಿಂತಿದ್ದ ಬೈಕ್​ಗೆ ಕಾರು ಡಿಕ್ಕಿ: ಸವಾರರಿಗೆ ಗಂಭೀರ ಗಾಯ

ನಿಂತಿದ್ದ ಬೈಕ್​ಗೆ ಕಾರು ಡಿಕ್ಕಿ ಹೊಡೆದಿದ್ದು, ಇಬ್ಬರು ಯುವಕರು ಗಂಭೀರವಾಗಿ ಗಾಯಗೊಂಡಿರುವಂತಹ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿ ಗ್ರಾಮದಲ್ಲಿ ನಡೆದಿದೆ. ಕಾರು ಡಿಕ್ಕಿ ಹೊಡೆಯುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. ಕಾರು ಮಾಲೀಕ ಹಾಗೂ ಬೈಕ್ ಸವಾರರ ಗುರುತು ಪತ್ತೆಯಾಗಿಲ್ಲ.

ಇದನ್ನೂ ಓದಿ: ಖಾಸಗಿ ಬಸ್​​- ಕ್ರೂಸರ್​ ನಡುವೆ ಮುಖಾಮುಖಿ ಡಿಕ್ಕಿ: ಮೂವರು ಸಾವು, 8 ಮಂದಿ ಗಂಭೀರ

ಯುವಕರಿಬ್ಬರು ರಸ್ತೆ ಬದಿ ಬೈಕ್ ನಿಲ್ಲಿಸಿ ಬೇಕರಿ ಕಡೆ ಹೋಗಲು ಮುಂದಾಗಿದ್ದರು. ಈ ವೇಳೆ ಕಾರು ಚಾಲಕ‌ನ ಅಜಾಗರೂಕತೆಯಿಂದ ಬೈಕ್​ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಇಬ್ಬರು ಯುವಕರು ನೆಲಕ್ಕೆ ಬಿದಿದ್ದು, ಗಾಯಗಳಾಗಿವೆ. ಕೂಡಲೇ ಸ್ಥಳೀಯರು ಆಸ್ಪತ್ರೆಗೆ ರವಾನಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Chanakya Niti: ಈ ರಹಸ್ಯಗಳನ್ನು ತಿಳಿದರೆ ನೀವು ಜೀವನದಲ್ಲಿ ಎಂದಿಗೂ ಸೋಲಲು ಸಾಧ್ಯವೇ ಇಲ್ಲ – Kannada News | Chanakya Niti: Chanakya says that if you know these secrets, you will never be defeated in life

ಪ್ರತಿಯೊಬ್ಬ ವ್ಯಕ್ತಿಯು ಜೀವನದಲ್ಲಿ ಯಶಸ್ವಿಯಾಗಲು ಬಯಸುತ್ತಾನೆ. ಯಶಸ್ಸನ್ನು (success) ಸಾಧಿಸಲು ಹಗಲು ರಾತ್ರಿ ಶ್ರಮಿಸುತ್ತಾರೆ, ಅನೇಕ ವಿಷಯಗಳಲ್ಲಿ ತ್ಯಾಗವನ್ನು ಮಾಡುತ್ತಾನೆ. ಇಷ್ಟೆಲ್ಲಾ ಶ್ರಮಿಸಿದರೂ, ಎಷ್ಟೇ ಪ್ರಯತ್ನಪಟ್ಟರೂ ಒಂದಷ್ಟು ಮಂದಿ ಯಶಸ್ಸಿನ ಮೆಟ್ಟಿಲನ್ನು ಏರಲು ಸಾಧ್ಯವೇ ಆಗುವುದಿಲ್ಲ, ಸತತ ಸೋಲುಗಳನ್ನೇ ಕಾಣುತ್ತಿರುತ್ತಾರೆ. ಅಂತಹವರು ಚಾಣಕ್ಯರು ಹೇಳಿರುವ ಈ ಕೆಲವು ಜೀವನ ರಹಸ್ಯಗಳನ್ನು ಪಾಲಿಸುವ ಮೂಲಕ ಯಶಸ್ಸಿನ ಶಿಖರವನ್ನು ಏರಬಹುದು. ಯಶಸ್ಸಿನ ಆ ರಹಸ್ಯಗಳು ಯಾವುವು ಎಂಬ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಚಾಣಕ್ಯರು ಹೇಳಿರುವ ಯಶಸ್ಸಿನ ರಹಸ್ಯಗಳಿವು:

ಗುರಿಯ ಬಗ್ಗೆ ಸ್ಪಷ್ಟತೆ: ತನ್ನ ಗುರಿಯ ಬಗ್ಗೆ ಸ್ಪಷ್ಟವಾಗಿರುವ ವ್ಯಕ್ತಿ ಖಂಡಿತವಾಗಿಯೂ ಯಶಸ್ಸನ್ನು ಸಾಧಿಸುತ್ತಾನೆ. ಗುರಿಯಿಲ್ಲದ ಜೀವನವು ಗಮ್ಯಸ್ಥಾನವಿಲ್ಲದ ಪ್ರಯಾಣದಂತೆ. ತನ್ನ ಮಾರ್ಗವನ್ನು ಸ್ಪಷ್ಟವಾಗಿ ಆರಿಸಿಕೊಂಡ ವ್ಯಕ್ತಿ ಎಂದಿಗೂ ದಾರಿ ತಪ್ಪುವುದಿಲ್ಲ ಎಂದು ಆಚಾರ್ಯ ಚಾಣಕ್ಯರು ಹೇಳುತ್ತಾರೆ. ಅಂತಹ ಜನರು ತಮ್ಮ ಸಮಯ ಮತ್ತು ಶಕ್ತಿಯನ್ನು ವ್ಯರ್ಥ ಮಾಡುವುದಿಲ್ಲ. ಅಲ್ಲದೆ ಗುರಿಯ ಬಗ್ಗೆ ಸ್ಪಷ್ಟವಾಗಿರುವವರು ಜೀವನದಲ್ಲಿ ಎಂದಿಗೂ ಸೋಲಲು ಸಾಧ್ಯವೇ ಇಲ್ಲ.

ಮಾತಿನ ಬಗ್ಗೆ ಸ್ಪಷ್ಟತೆ: ಮಾತಿಗಿರುವಷ್ಟು ಶಕ್ತಿ ಬೇರೆ ಯಾವುದಕ್ಕೂ ಇಲ್ಲ. ಅದಕ್ಕಾಗಿಯೇ ಎಲ್ಲಿ ಮಾತನಾಡಬೇಕು ಮತ್ತು ಎಲ್ಲಿ ಮೌನವಾಗಿರಬೇಕು ಎಂಬುದರ ಬಗ್ಗೆ ವಿವೇಚನೆಯಿಂದ ಇರುವುದು ಬಹಳ ಮುಖ್ಯ ಎಂದು ಚಾಣಕ್ಯರು ಹೇಳಿದ್ದು. ಅನಗತ್ಯವಾಗಿ ಮಾತನಾಡುವುದರಿಂದ ಶತ್ರುಗಳು ಹೆಚ್ಚಾಗಬಹುದು. ಸರಿಯಾದ ಸಮಯದಲ್ಲಿ ಮಾತನಾಡುವ ಮಾತುಗಳು ಸಮಾಜದಲ್ಲಿ ಗೌರವ ಮತ್ತು ಮನ್ನಣೆಯನ್ನು ತರುತ್ತವೆ. ಮೌನವನ್ನು ಆಯುಧವಾಗಿ ಬಳಸುವುದು ಹೇಗೆ ಎಂದು ತಿಳಿದಿರುವ ವ್ಯಕ್ತಿಗೆ ಯಾರೂ ಮಾನಸಿಕವಾಗಿ ಹಾನಿ ಮಾಡಲು ಸಾಧ್ಯವಿಲ್ಲ. ಮತ್ತು ಇಂತಹ ವ್ಯಕ್ತಿಗಳು ಜೀವನದಲ್ಲಿ ಸೋಲನ್ನು ಸಹ ಎದುರಿಸುವುದಿಲ್ಲ.

ಸುತ್ತಮುತ್ತಲಿನವರ ಬಗ್ಗೆ ಎಚ್ಚರಿಕೆಯಿಂದ ಇರುವುದು: ನಾವು ಯಶಸ್ವಿಯಾಗಬೇಕಾದರೆ, ನಮ್ಮ ಸುತ್ತಲಿನ ಜನರು ಎಂತಹವರೆಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ನಗುತ್ತಾ ಬೆನ್ನಿಗೆ ಚೂರಿ ಹಾಕುವ ಸ್ನೇಹಿತನಿಗಿಂತ ನೇರವಾಗಿ ದಾಳಿ ಮಾಡುವ ಶತ್ರುವೇ ಲೇಸು. ನಿಜವಾದ ಸ್ನೇಹಿತ ಮತ್ತು ಶತ್ರುವಿನ ನಡುವೆ ವ್ಯತ್ಯಾಸವನ್ನು ಗುರುತಿಸುವ ಬುದ್ಧಿವಂತಿಕೆ ಇರುವ ವ್ಯಕ್ತಿ ಎಂದಿಗೂ ಮೋಸ ಹೋಗುವುದಿಲ್ಲ ಎನ್ನುತ್ತಾರೆ ಚಾಣಕ್ಯ.

ಇದನ್ನೂ ಓದಿ: ಜೀವನದಲ್ಲಿ ಸದಾ ಸಂತೋಷವಾಗಿರಲು ಚಾಣಕ್ಯರ ಈ ಸರಳ ಸೂತ್ರವನ್ನು ಪಾಲಿಸಿ

ಕೆಟ್ಟವರ ಸಹವಾಸದಿಂದ ದೂರವಿರುವುದು: ಕೆಟ್ಟ ಸ್ವಭಾವದ ಜನರಿಂದ ದೂರವಿರುವುದರಿಂದ ಅನಗತ್ಯ ತೊಡಕುಗಳನ್ನು ತಪ್ಪಿಸಬಹುದು. ಜೊತೆಗೆ ಒಳ್ಳೆಯವರ ಜೊತೆ ಇರುವುದಿಂದ ನೀವು ಯಶಸ್ಸನ್ನು ಸಾಧಿಸಲು ಸಾಧ್ಯವಾಗುತ್ತದೆ. ಹಾಗಾಗಿ ಸಜ್ಜನರ ಸಹವಾಸದಲ್ಲಿಯೇ ಇರಬೇಕು ಎನ್ನುತ್ತಾರೆ ಚಾಣಕ್ಯ.

ಸವಾಲುಗಳನ್ನು ಧೈರ್ಯದಿಂದ ಎದುರಿಸುವುದು: ಜೀವನದ ಸವಾಲುಗಳನ್ನು ಧೈರ್ಯದಿಂದ ಎದುರಿಸುವವರು, ಜೀವನದಲ್ಲಿ ಎದುರಾಗುವ ಸವಾಲುಗಳ ಬಗ್ಗೆ ಭಯಪಡದವರು ಜೀವನದಲ್ಲಿ ಎಂದಿಗೂ ಸೋಲನ್ನು ಕಾಣಲು ಸಾಧ್ಯವೇ ಇಲ್ಲ ಎನ್ನುತ್ತಾರೆ ಚಾಣಕ್ಯರು. ಜೀವನದ ಈ ರಹಸ್ಯಗಳ ಬಗ್ಗೆ ತಿಳಿದರೆ ಯಶಸ್ಸನ್ನು ಸಾಧಿಸಲು ಸಾಧ್ಯ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತಂದೆ ಆಗುತ್ತಿದ್ದಾರೆ ಡಾಲಿ ಧನಂಜಯ್: ಸಿಹಿ ಸುದ್ದಿ ಹಂಚಿಕೊಂಡ ನಟ – Kannada News | Daali Dhananjay wife pregnant actor announce happy news

ಡಾಲಿ ಧನಂಜಯ್ (Daali Dhananjay) ಕನ್ನಡ ಚಿತ್ರರಂಗದ ಜನಪ್ರಿಯ ನಟ ಮತ್ತು ನಿರ್ಮಾಪಕ. ತಮ್ಮ ನಟನೆ ಮಾತ್ರವಲ್ಲದೆ ನಿರ್ಮಾಣದಿಂದಲೂ ಅದ್ಭುತ ಸಿನಿಮಾಗಳನ್ನು ಚಿತ್ರರಂಗಕ್ಕೆ ನೀಡುತ್ತಾ ಬರುತ್ತಿದ್ದಾರೆ. ಡಾಲಿ ಧನಂಜಯ್ ಕಳೆದ ವರ್ಷ ಫೆಬ್ರವರಿ ತಿಂಗಳಲ್ಲಿ ವೈದ್ಯೆ ಧನ್ಯತಾ ಅವರನ್ನು ಅದ್ದೂರಿಯಾಗಿ ವಿವಾಹವಾದರು. ಇದೀಗ ಡಾಲಿ ಧನಂಜಯ್ ಮತ್ತು ಧನ್ಯತಾ ಪೋಷಕರಾಗುತ್ತಿದ್ದು, ಖುಷಿಯ ವಿಷಯವನ್ನು ಡಾಲಿ ಧನಂಜಯ್ ಹಂಚಿಕೊಂಡಿದ್ದಾರೆ.

ಇತ್ತೀಚೆಗಷ್ಟೆ ಡಾಲಿ ಧನಂಜಯ್ ಅವರು ಮಾಧ್ಯಮವೊಂದರ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಭಾಗಿ ಆಗಿದ್ದರು. ಈ ವೇಳೆ ಡಾಲಿ ಅವರು ತಮ್ಮ ಕುಟುಂಬಕ್ಕೆ ಇನ್ನೊಂದು ಜೀವ ಸೇರ್ಪಡೆ ಆಗುತ್ತಿರುವ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಆ ಮೂಲಕ ತಾವು ತಂದೆ ಆಗುತ್ತಿರುವುದಾಗಿ ಡಾಲಿ ಧನಂಜಯ್ ಹೇಳಿದ್ದಾರೆ. ಡಾಲಿ ಧನಂಜಯ್ ಪತ್ನಿ ಧನ್ಯತಾ ಅವರು ವೈದ್ಯೆಯಾಗಿದ್ದು, ಫೆಬ್ರವರಿ 16 ರಂದು ಡಾಲಿ ಧನಂಜಯ್ ಮತ್ತು ಧನ್ಯತಾ ಅವರು ಮೈಸೂರಿನಲ್ಲಿ ಬಲು ಅದ್ಧೂರಿಯಾಗಿ ವಿವಾಹವಾಗಿದ್ದರು. ಇದೀಗ ಈ ಜೋಡಿ ಮತ್ತೊಂದು ಜೀವವನ್ನು ಸ್ವಾಗತಿಸುತ್ತಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Google Internship 2026: ಗೂಗಲ್ 2026ನೇ ಸಾಲಿನ ಇಂಟರ್ನ್‌ಶಿಪ್​​ಗೆ ಅರ್ಜಿ ಆಹ್ವಾನ; ಯುಜಿ, ಪಿಜಿ ವಿದ್ಯಾರ್ಥಿಗಳಿಗೆ ಅವಕಾಶ – Kannada News | Google Internships 2026 Open: Apply for UG, PG, PhD roles in India!

ಗೂಗಲ್ ಸಂಸ್ಥೆ 2026ನೇ ಸಾಲಿನ ತನ್ನ ವಿವಿಧ ಇಂಟರ್ನ್‌ಶಿಪ್ ಕಾರ್ಯಕ್ರಮಗಳಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಅಧಿಕೃತವಾಗಿ ಆರಂಭಿಸಿದೆ. ಈ ಇಂಟರ್ನ್‌ಶಿಪ್‌ಗಳು ಪದವಿಪೂರ್ವ (ಯುಜಿ), ಸ್ನಾತಕೋತ್ತರ (ಪಿಜಿ) ಹಾಗೂ ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮುಕ್ತವಾಗಿದ್ದು, ಆಯ್ಕೆಯಾದ ಅಭ್ಯರ್ಥಿಗಳಿಗೆ ವೃತ್ತಿಜೀವನಕ್ಕೆ ಅಗತ್ಯವಾದ ಪ್ರಾಯೋಗಿಕ ಅನುಭವದ ಜೊತೆಗೆ ಆಕರ್ಷಕ ಸ್ಟೈಫಂಡ್ ಕೂಡ ನೀಡಲಾಗುತ್ತದೆ. ಇಂಟರ್ನ್‌ಶಿಪ್ ಅವಧಿಯಲ್ಲಿ ವಿದ್ಯಾರ್ಥಿಗಳು ಗೂಗಲ್‌ನ ಕೆಲಸದ ಸಂಸ್ಕೃತಿ, ತಂತ್ರಜ್ಞಾನ, ಕೌಶಲ್ಯಗಳು ಮತ್ತು ವೃತ್ತಿಪರ ಕೆಲಸದ ನೀತಿಯನ್ನು ನೇರವಾಗಿ ಕಲಿಯುವ ಅವಕಾಶವನ್ನು ಪಡೆಯುತ್ತಾರೆ.

ಯಾವ ನಗರಗಳಲ್ಲಿ ಇಂಟರ್ನ್‌ಶಿಪ್ ಅವಕಾಶ?

ಗೂಗಲ್‌ನ ಈ ಪಾವತಿತ ಇಂಟರ್ನ್‌ಶಿಪ್ ಕಾರ್ಯಕ್ರಮಗಳಿಗೆ ಆಯ್ಕೆಯಾದ ಅಭ್ಯರ್ಥಿಗಳು ಭಾರತದಲ್ಲಿನ ಪ್ರಮುಖ ತಂತ್ರಜ್ಞಾನ ಕೇಂದ್ರಗಳಾದ ಕರ್ನಾಟಕದ ಬೆಂಗಳೂರು, ಮಹಾರಾಷ್ಟ್ರದ ಪುಣೆ ಮತ್ತು ತೆಲಂಗಾಣದ ಹೈದರಾಬಾದ್ ನಗರಗಳಲ್ಲಿ ಗೂಗಲ್‌ನೊಂದಿಗೆ ಕೆಲಸ ಮಾಡುವ ಅವಕಾಶವನ್ನು ಹೊಂದಿರುತ್ತಾರೆ. ಇದು ವಿದ್ಯಾರ್ಥಿಗಳಿಗೆ ಉದ್ಯಮ ಮಟ್ಟದ ಅನುಭವವನ್ನು ಪಡೆಯಲು ಅತ್ಯುತ್ತಮ ವೇದಿಕೆಯಾಗಿದೆ.

ಲಭ್ಯವಿರುವ ಪ್ರಮುಖ ಕಾರ್ಯಕ್ರಮಗಳು:

ಗೂಗಲ್ ವಿವಿಧ ವಿಭಾಗಗಳಲ್ಲಿ ಇಂಟರ್ನ್‌ಶಿಪ್‌ಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ವಿದ್ಯಾರ್ಥಿ ಸಂಶೋಧಕ (Student Researcher) 2026 ಕಾರ್ಯಕ್ರಮವು ಕಂಪ್ಯೂಟರ್ ಸೈನ್ಸ್, ಭಾಷಾಶಾಸ್ತ್ರ, ಅಂಕಿಅಂಶಗಳು, ಜೈವಿಕ ಅಂಕಿಅಂಶಗಳು, ಅನ್ವಯಿಕ ಗಣಿತ, ಕಾರ್ಯಾಚರಣೆ ಸಂಶೋಧನೆ, ಅರ್ಥಶಾಸ್ತ್ರ ಹಾಗೂ ನೈಸರ್ಗಿಕ ವಿಜ್ಞಾನಗಳಲ್ಲಿ ಯುಜಿ, ಪಿಜಿ ಅಥವಾ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಈ ಇಂಟರ್ನ್‌ಶಿಪ್‌ಗೆ ಅರ್ಜಿಗಳನ್ನು ಮಾರ್ಚ್ 31, 2026 ರವರೆಗೆ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳಿಗೆ ಗೂಗಲ್‌ನ ಸಂಶೋಧನೆ, ಎಂಜಿನಿಯರಿಂಗ್ ಮತ್ತು ವಿಜ್ಞಾನ ತಂಡಗಳೊಂದಿಗೆ ಕೆಲಸ ಮಾಡುವ ಅವಕಾಶ ದೊರೆಯುತ್ತದೆ.

ಇದರ ಜೊತೆಗೆ, Silicon Engineering Intern (PhD), Summer 2026 ಕಾರ್ಯಕ್ರಮವು ಪಿಎಚ್‌ಡಿ ವಿದ್ಯಾರ್ಥಿಗಳಿಗೆ ಮಾತ್ರ ಮೀಸಲಾಗಿದೆ. ಕಂಪ್ಯೂಟರ್ ಎಂಜಿನಿಯರಿಂಗ್, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಅಥವಾ ಸಂಬಂಧಿತ ತಾಂತ್ರಿಕ ಕ್ಷೇತ್ರಗಳಲ್ಲಿ ಪಿಎಚ್‌ಡಿ ಮಾಡುತ್ತಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಈ ಕಾರ್ಯಕ್ರಮಕ್ಕೂ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31, 2026 ಆಗಿದ್ದು, ಆಯ್ಕೆಯಾದವರು ಗೂಗಲ್‌ನ ಹಾರ್ಡ್‌ವೇರ್ ಮತ್ತು ಸಾಫ್ಟ್‌ವೇರ್ ವಾಸ್ತುಶಿಲ್ಪಿಗಳು ಹಾಗೂ ವಿನ್ಯಾಸಕರೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ.

ಇದನ್ನೂ ಓದಿ: ಸುಪ್ರೀಂ ಕೋರ್ಟ್​​ನಲ್ಲಿ 90 ಕಾನೂನು ಗುಮಾಸ್ತ ಹುದ್ದೆಗೆ ಅರ್ಜಿ ಆಹ್ವಾನ

ಅದೇ ರೀತಿ, Software Engineering PhD Intern, Summer 2026 ಕಾರ್ಯಕ್ರಮವು ಸಾಫ್ಟ್‌ವೇರ್ ಅಭಿವೃದ್ಧಿ ಅಥವಾ ಇತರ ತಾಂತ್ರಿಕ ವಿಭಾಗಗಳಲ್ಲಿ ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಮುಕ್ತವಾಗಿದೆ. ಈ ಇಂಟರ್ನ್‌ಶಿಪ್‌ನಲ್ಲಿ ಆಯ್ಕೆಯಾದ ಅಭ್ಯರ್ಥಿಗಳು ಸುಧಾರಿತ ಕಂಪ್ಯೂಟರ್ ವಿಜ್ಞಾನ ಪರಿಹಾರಗಳು, ಸ್ಕೇಲೆಬಲ್ ಮತ್ತು ವಿತರಿತ ಸಾಫ್ಟ್‌ವೇರ್ ಸಿಸ್ಟಮ್‌ಗಳ ಅಭಿವೃದ್ಧಿಯಲ್ಲಿ ಭಾಗವಹಿಸುವ ಅವಕಾಶವನ್ನು ಹೊಂದಿರುತ್ತಾರೆ. ಈ ಕಾರ್ಯಕ್ರಮಕ್ಕೂ ಅರ್ಜಿಗಳನ್ನು ಮಾರ್ಚ್ 31, 2026 ರವರೆಗೆ ಸಲ್ಲಿಸಬಹುದು.

ಅಪೂರ್ವ ಅವಕಾಶ:

ಟೆಕ್ನಾಲಜಿ ಕ್ಷೇತ್ರದಲ್ಲಿ ಭವಿಷ್ಯ ನಿರ್ಮಿಸಿಕೊಳ್ಳಲು ಬಯಸುವ ವಿದ್ಯಾರ್ಥಿಗಳಿಗೆ Google Internship ಒಂದು ಅಪೂರ್ವ ಅವಕಾಶವಾಗಿದೆ. ಜಾಗತಿಕ ಮಟ್ಟದ ಸಂಸ್ಥೆಯಲ್ಲಿ ಕೆಲಸ ಮಾಡುವ ಅನುಭವ, ಪ್ರಾಯೋಗಿಕ ಜ್ಞಾನ ಮತ್ತು ಸ್ಟೈಫಂಡ್ ಒಂದೇ ವೇದಿಕೆಯಲ್ಲಿ ದೊರೆಯುವುದರಿಂದ ಅರ್ಹ ಮತ್ತು ಆಸಕ್ತ ವಿದ್ಯಾರ್ಥಿಗಳು ಈ ಅವಕಾಶವನ್ನು ತಪ್ಪಿಸಿಕೊಳ್ಳದೇ ಅರ್ಜಿ ಸಲ್ಲಿಸಿ.

ಮತ್ತಷ್ಟು ಉದ್ಯೋಗಕ್ಕೆ ಸಂಬಂಧಿಸಿದ  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Hindu Rituals: ಸಂಜೆ ಹೊತ್ತು ಮನೆಯಲ್ಲಿ ಕರ್ಪೂರವನ್ನು ಉರಿಸಿ; ಪ್ರಯೋಜನ ಸಾಕಷ್ಟಿವೆ – Kannada News | Camphor benefits evening hindu rituals for prosperity peace and positive energy

ಹಿಂದೂ ಧರ್ಮದಲ್ಲಿ ಕರ್ಪೂರಕ್ಕೆ ವಿಶಿಷ್ಟ ಮತ್ತು ಮಹತ್ವದ ಸ್ಥಾನವಿದೆ. ದೇವರ ಪೂಜೆ, ಆರತಿ ಹಾಗೂ ಇತರ ಧಾರ್ಮಿಕ ಆಚರಣೆಗಳಲ್ಲಿ ಕರ್ಪೂರವನ್ನು ಬಳಸುವುದು ಶುದ್ಧತೆ ಮತ್ತು ತ್ಯಾಗದ ಸಂಕೇತವಾಗಿದೆ. ಕರ್ಪೂರವನ್ನು ಉರಿಸಿದಾಗ ಅದು ಸಂಪೂರ್ಣವಾಗಿ ಕರಗಿಬಿಡುತ್ತದೆ; ಯಾವುದೇ ಅವಶೇಷ ಉಳಿಯದು. ಈ ಕಾರಣದಿಂದಲೇ ಕರ್ಪೂರವನ್ನು ಅಹಂಕಾರ ಮತ್ತು ನಕಾರಾತ್ಮಕತೆಯ ನಾಶದ ಪ್ರತೀಕವಾಗಿ ಪರಿಗಣಿಸಲಾಗುತ್ತದೆ. ಧಾರ್ಮಿಕ ನಂಬಿಕೆಯ ಪ್ರಕಾರ, ಕರ್ಪೂರವನ್ನು ಉರಿಸುವುದರಿಂದ ವಾತಾವರಣದಲ್ಲಿರುವ ನಕಾರಾತ್ಮಕ ಶಕ್ತಿಗಳು ದೂರವಾಗಿ, ಮನೆಗೆ ಸಕಾರಾತ್ಮಕ ಶಕ್ತಿ ಪ್ರವೇಶಿಸುತ್ತದೆ.

ವಿಶೇಷವಾಗಿ ಸಂಜೆ ಸಮಯದಲ್ಲಿ ಕರ್ಪೂರವನ್ನು ಉರಿಸುವುದು ಅತ್ಯಂತ ಶುಭಕರವೆಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಸಂಜೆ ಹೊತ್ತಿನಲ್ಲಿ ಕರ್ಪೂರದ ಹೊಗೆ ಮನೆಯಾದ್ಯಂತ ಹರಡಿದರೆ, ಮನೆಯಲ್ಲಿ ಶಾಂತಿ, ಸಂತೋಷ ಮತ್ತು ಸಮೃದ್ಧಿ ನೆಲೆಸುತ್ತದೆ ಎನ್ನಲಾಗುತ್ತದೆ. ಹಗಲು ಅಥವಾ ರಾತ್ರಿ ಯಾವ ಸಮಯದಲ್ಲಾದರೂ ಕರ್ಪೂರವನ್ನು ಸುಡುವುದು ಶುಭವೇ ಆದರೂ, ಸಂಜೆ ಸಮಯದಲ್ಲಿ ಇದನ್ನು ಮಾಡಿದರೆ ಅದರ ಫಲ ಇನ್ನಷ್ಟು ಉತ್ತಮವಾಗುತ್ತದೆ ಎಂಬ ನಂಬಿಕೆ ಇದೆ.

ಶಾಸ್ತ್ರಗಳ ಪ್ರಕಾರ, ಸಂಜೆ ಕರ್ಪೂರವನ್ನು ಉರಿಸುವುದರಿಂದ ಲಕ್ಷ್ಮೀ ದೇವಿಯ ಕೃಪೆ ಲಭಿಸುತ್ತದೆ. ಕರ್ಪೂರದ ಸುಗಂಧದಿಂದ ವಾತಾವರಣ ಶುದ್ಧವಾಗುತ್ತದೆ ಮತ್ತು ಶುದ್ಧತೆ ಇರುವ ಮನೆಗೆ ಲಕ್ಷ್ಮೀ ದೇವಿ ಶೀಘ್ರವಾಗಿ ಪ್ರವೇಶಿಸುತ್ತಾಳೆ ಎಂದು ನಂಬಲಾಗುತ್ತದೆ. ಇದರಿಂದ ಮನೆಯಲ್ಲಿರುವ ಆರ್ಥಿಕ ಅಡಚಣೆಗಳು ಕ್ರಮೇಣ ದೂರವಾಗಿ, ಸಮೃದ್ಧಿಯ ದಾರಿಗಳು ತೆರೆದುಕೊಳ್ಳುತ್ತವೆ.

ಆರ್ಥಿಕ ಸಮಸ್ಯೆಗಳು ಮತ್ತು ಬಡತನದಿಂದ ಬಳಲುತ್ತಿರುವವರು ಪ್ರತಿದಿನ ಸಂಜೆ ಪ್ರಾರ್ಥನೆಯ ಸಮಯದಲ್ಲಿ ಕರ್ಪೂರವನ್ನು ಉರಿಸಿ, ಅದರ ಹೊಗೆಯನ್ನು ಮನೆಯಾದ್ಯಂತ ಹರಡುವುದು ಶುಭ ಫಲ ನೀಡುತ್ತದೆ ಎಂದು ಹೇಳಲಾಗುತ್ತದೆ. ಹೀಗೆ ಮಾಡುವುದರಿಂದ ಹಣಕಾಸಿನ ಸ್ಥಿತಿ ಸುಧಾರಿಸಿ, ಸ್ಥಗಿತಗೊಂಡಿರುವ ಪ್ರಗತಿ ಮತ್ತೆ ಚೇತರಿಸಿಕೊಳ್ಳುತ್ತದೆ ಎಂಬ ನಂಬಿಕೆ ಇದೆ.

ವಾಸ್ತು ಶಾಸ್ತ್ರದ ದೃಷ್ಟಿಯಿಂದಲೂ ಕರ್ಪೂರಕ್ಕೆ ಹೆಚ್ಚಿನ ಮಹತ್ವವಿದೆ. ಮನೆಯಲ್ಲಿ ವಾಸ್ತು ದೋಷಗಳಿದ್ದರೆ, ಪ್ರತಿದಿನ ಸಂಜೆ ಕರ್ಪೂರವನ್ನು ಸುಡುವುದರಿಂದ ಅದರ ದುಷ್ಪರಿಣಾಮಗಳು ಕಡಿಮೆಯಾಗುತ್ತವೆ. ಕರ್ಪೂರದ ಧೂಮವು ಮನೆಯನ್ನು ಶುದ್ಧಗೊಳಿಸಿ, ಶಕ್ತಿಸಂತುಲನವನ್ನು ಸರಿಪಡಿಸಲು ಸಹಾಯ ಮಾಡುತ್ತದೆ ಎನ್ನಲಾಗುತ್ತದೆ.

ಇದನ್ನೂ ಓದಿ: ಹವಳವನ್ನು ಯಾರು ಧರಿಸಬಹುದು? ಇದರ ಪ್ರಯೋಜನ ಮತ್ತು ಧರಿಸುವ ವಿಧಾನ ತಿಳಿಯಿರಿ

ಇದಷ್ಟೇ ಅಲ್ಲದೆ, ಶಾಸ್ತ್ರಗಳ ಪ್ರಕಾರ ಸಾಲಬಾಧೆ ಮತ್ತು ಮಾನಸಿಕ ಒತ್ತಡಗಳಿಂದ ಮುಕ್ತಿ ಪಡೆಯಲು ಕೂಡ ಕರ್ಪೂರ ಉಪಯುಕ್ತವಾಗಿದೆ. ಸಂಜೆ ಸಮಯದಲ್ಲಿ ಕರ್ಪೂರವನ್ನು ಉರಿಸುವುದರಿಂದ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿ, ಕುಟುಂಬದ ಕಲಹಗಳು, ಅಶಾಂತಿ ಮತ್ತು ಗೃಹ ಕಲಹಗಳು ಕಡಿಮೆಯಾಗುತ್ತವೆ ಎಂದು ನಂಬಲಾಗುತ್ತದೆ.

ಒಟ್ಟಾರೆ, ಸಂಜೆ ಕರ್ಪೂರವನ್ನು ಉರಿಸುವುದು ಧಾರ್ಮಿಕ, ವಾಸ್ತು ಮತ್ತು ಮಾನಸಿಕ ದೃಷ್ಟಿಯಿಂದಲೂ ಶುಭಕರವೆಂದು ಪರಿಗಣಿಸಲಾಗುತ್ತದೆ. ನಿಯಮಿತವಾಗಿ ಮತ್ತು ಭಕ್ತಿಭಾವದಿಂದ ಈ ಆಚರಣೆಯನ್ನು ಪಾಲಿಸಿದರೆ, ಮನೆಗೆ ಶಾಂತಿ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂಬ ನಂಬಿಕೆ ಬಹುಕಾಲದಿಂದಲೂ ನಡೆದುಕೊಂಡು ಬಂದಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Week Horoscope: ಮಕರದಲ್ಲಿ 4 ಗ್ರಹಗಳ ಪ್ರಭಾವ, ಪ್ರೀತಿ, ವೃತ್ತಿ, ಹಣಕಾಸು ಭವಿಷ್ಯ! – Kannada News | Weekly Horoscope: Jan 4th Week Predictions Planetary Changes in Capricorn and Your Zodiac Fortunes

ಜನವರಿ ತಿಂಗಳ ನಾಲ್ಕನೇ ವಾರ ನಾಲ್ಕು ಗ್ರಹಗಳು ಮಕರದಲ್ಲಿ ಇರುವರು. ಶನಿ ಸ್ಥಾನದಲ್ಲಿ ಇರುವ ರವಿ ತಂದೆ ಮಕ್ಕಳ‌ ನಡುವೆಯೇ ಕಲಹ, ಸರ್ಕಾರದ ಕಾರ್ಯಗಳು ಬೇಗ ಆಗದೇ ನಾನ ಕಾರಣದಿಂದ ಕುಂಟುತ್ತ ಸಾಗುವುದು. ಪ್ರೇಮಕ್ಕೂ ಕೆಲವೊಮ್ಮೆ ಫಲಿತಾಂಶ ಸಿಗದೇ, ಒದ್ದಾಡುವ ಸ್ಥಿತಿ. ಆದರೂ ನಿಮ್ಮ ಪ್ರಾಮಾಣಿಕ ವಿಶ್ವಾಸವು ಗೆಲ್ಲುವುದು.

ಮೇಷ:

ಆರ್ಥಿಕ ಲಾಭದಾಯಕ ವಾರ. ಕೆಲಸದಲ್ಲಿ ಬಡ್ತಿ ಸಾಧ್ಯತೆ. ಹಠಾತ್ ಧನಲಾಭವಾಗಲಿದೆ. ಆರೋಗ್ಯ ಸುಧಾರಿಸಲಿದ್ದು, ಕುಟುಂಬದೊಂದಿಗೆ ಸಂತೋಷದ ಸಮಯ ಕಳೆಯುವಿರಿ.

​ವೃಷಭ:

ಅಲ್ಪ ಹೂಡಿಕೆಯಲ್ಲಿಯೂ ಲಾಭ. ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿ ಬರಲಿವೆ. ವ್ಯಾಪಾರದಲ್ಲಿ ಪ್ರಗತಿ ಕಂಡುಬರಲಿದೆ. ಸಂಗಾತಿಯ ಸಹಕಾರ ಸದಾ ಇರುತ್ತದೆ.

​ಮಿಥುನ:

ತಾಳ್ಮೆಯ ಸಂವಹನದಿಂದ ಈ ವಾರ ಯಶಸ್ಸು. ಸಣ್ಣ ಪ್ರವಾಸದ ಯೋಗವಿದೆ. ಸಂಬಂಧಗಳಲ್ಲಿನ ಕಹಿ ಮರೆತು ಒಂದಾಗುವಿರಿ. ಹೊಸ ವಸ್ತುಗಳ ಖರೀದಿಗೆ ಇದು ಶುಭ ಸಮಯ.

​ಕರ್ಕಾಟಕ:

ಆತ್ಮವಿಶ್ವಾಸ ಹೆಚ್ಚಲಿದೆ. ವೃತ್ತಿಜೀವನದಲ್ಲಿ ಅತ್ಯುತ್ತಮ ಪ್ರಗತಿ. ಕಠಿಣ ಶ್ರಮಕ್ಕೆ ತಕ್ಕ ಗೌರವ ಸಿಗಲಿದೆ. ಆಸ್ತಿ ವಿಚಾರದಲ್ಲಿ ಶುಭ ಸುದ್ದಿ ಕೇಳುವಿರಿ.

​ಸಿಂಹ:

ಈ ವಾರ ನಿಮ್ಮ ನಾಯಕತ್ವಕ್ಕೆ ಮನ್ನಣೆ. ಕುಟುಂಬದ ಗೊಂದಲಗಳು ಪರಿಹಾರವಾಗಲಿವೆ. ಹಿರಿಯರ ಆಶೀರ್ವಾದದಿಂದ ಕೆಲಸಗಳು ಸುಗಮವಾಗಲಿವೆ. ಮನಸ್ಸಿಗೆ ಶಾಂತಿ ದೊರೆಯುವುದು.

​ಕನ್ಯಾ:

ಉದ್ಯೋಗ ಬದಲಾವಣೆಗೆ ಸಕಾಲ. ದೀರ್ಘಕಾಲದ ಕನಸುಗಳು ನನಸಾಗಲಿವೆ. ಮಕ್ಕಳಿಂದ ಸಂತಸದ ಸುದ್ದಿ. ಹಳೆಯ ಸ್ನೇಹಿತರ ಭೇಟಿ ಹೊಸ ಚೈತನ್ಯ ನೀಡಲಿದೆ.

​ತುಲಾ:

ಸಾಮಾಜಿಕ ಗೌರವ ವೃದ್ಧಿ. ಹಳೆಯ ಹೂಡಿಕೆಯಿಂದ ಲಾಭ. ಆರೋಗ್ಯದ ಮೇಲೆ ಸ್ವಲ್ಪ ಗಮನವಿರಲಿ. ಅನಿರೀಕ್ಷಿತ ಅತಿಥಿಗಳ ಆಗಮನದಿಂದ ಸಂಭ್ರಮದ ವಾತಾವರಣ.

​ವೃಶ್ಚಿಕ:

ಕೆಲಸದ ಒತ್ತಡವಿರಲಿದೆ. ಆದರೂ ಗುಪ್ತ ಮೂಲಗಳಿಂದ ಧನಲಾಭವಾಗಲಿದೆ. ತಾಳ್ಮೆಯಿಂದ ವರ್ತಿಸಿ. ಶತ್ರುಗಳ ಮೇಲೆ ಜಯ ಸಾಧಿಸುವಿರಿ.

​ಧನುಸ್ಸು:

ಆದಾಯ ಹೆಚ್ಚಳಕ್ಕೆ ಕಸರತ್ತು. ಹೊಸ ಉದ್ಯೋಗ ಸಿಗುವ ಸಾಧ್ಯತೆ. ದೈವಿಕ ಕಾರ್ಯಗಳಲ್ಲಿ ಆಸಕ್ತಿ ಮೂಡಲಿದೆ. ದೂರದ ಪ್ರಯಾಣ ಲಾಭದಾಯಕವಾಗಿರಲಿದೆ.

​ಮಕರ:

ನಿರ್ಧಾರಗಳಲ್ಲಿ ಜಾಗರೂಕರಾಗಿರಿ. ತಾಳ್ಮೆ ಅಗತ್ಯ. ವಾರದ ಅಂತ್ಯಕ್ಕೆ ಶುಭ ಫಲಗಳು ಸಿಗಲಿವೆ. ಪ್ರೇಮ ಜೀವನದಲ್ಲಿ ಮಧುರತೆ ಇರಲಿದೆ.

​ಕುಂಭ:

ಬದಲಾವಣೆಗಳಿಗೆ ಒಗ್ಗಿಕೊಳ್ಳುವುದು ಅನಿವಾರ್ಯ. ಹೊಸ ಹವ್ಯಾಸಗಳಿಂದ ಲಾಭ. ಸಂಗಾತಿಯ ಬೆಂಬಲ ಸಿಗಲಿದೆ. ನಿಮ್ಮ ಕ್ರಿಯಾಶೀಲತೆಗೆ ತಕ್ಕ ಪ್ರತಿಫಲ ದೊರೆಯಲಿದೆ.

​ಮೀನ:

ದೈವಿಕ ರಕ್ಷಣೆ ಇರಲಿದೆ. ಶ್ರಮಕ್ಕೆ ತಕ್ಕ ಫಲ ಲಭ್ಯ. ಆಸ್ತಿ ಖರೀದಿಗೆ ಮುನ್ನಡೆ. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ.

-ಲೋಹಿತ ಹೆಬ್ಬಾರ್ – 8762924271 (what’s app only)

Published On – 5:39 pm, Sat, 24 January 26

Source link

Exit mobile version