ಚಳಿಗಾಲದಲ್ಲಿ ಶ್ವಾಸಕೋಶವನ್ನ ಹೇಗೆ ಕಾಪಾಡಿಕೊಳ್ಳಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ – Kannada News | How to protect Healthy lungs during winter Session, here Is narayana hospital doctor Sagar Tips

ನಾವು ಸಾಮಾನ್ಯವಾಗಿ ಆರೋಗ್ಯ (Health) ಎಂದಾಗ ತೂಕ, ಕೂದಲಿನ ಆರೈಕೆ, ಚರ್ಮದ ರಕ್ಷಣೆ ಮತ್ತು ಜೀರ್ಣಕ್ರಿಯೆಯ ಬಗ್ಗೆ ಯೋಚಿಸುತ್ತೇವೆಯೇ ಹೊರತು ಅದಕ್ಕಿಂತ ಮುಂದೆ ಹೋಗುವುದಿಲ್ಲ. ನಮಗಾಗಿ ದಣಿವಿಲ್ಲದೆ ದುಡಿಯುವ ಶ್ವಾಸಕೋಶದ (lungs) ಬಗ್ಗೆ ಯೋಚಿಸಲು ನಾವು ಒಂದು ನಿಮಿಷವನ್ನೂ ಮೀಸಲಿಡುವುದಿಲ್ಲ. ಪ್ರತಿ ವರ್ಷ ನವೆಂಬರ್-ಡಿಸೆಂಬರ್ ತಿಂಗಳ ಚಳಿಗಾಲದ (Winter Session) ಆರಂಭದಲ್ಲಿ ನಮ್ಮ ಶ್ವಾಸಕೋಶಗಳು ಉಸಿರಾಟದ ತೊಂದರೆಗೆ ಸಿಲುಕುತ್ತವೆ. ಪಟಾಕಿಗಳ ಹೊಗೆ, ಕೃಷಿ ತ್ಯಾಜ್ಯ ಸುಡುವಿಕೆ, ಮದ್ಯಪಾನದ ಹೆಚ್ಚಳ, ತಾಪಮಾನದ ಏರುಪೇರು ಮತ್ತು ನಗರಗಳಲ್ಲಿ ಆಗುತ್ತಿರುವ ನಿರಂತರ…

Read More

2025ರಲ್ಲಿ 47 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ದಂಪತಿ – Kannada News | Content Creators’ Annual Spending Goes Viral: Bengaluru Duo’s Rs 47 Lakh Budget

ಬೆಂಗಳೂರು, ಜ.5: ಬೆಂಗಳೂರು ಮೂಲದ ಕಂಟೆಂಟ್ ಕ್ರಿಯೇಟರ್ ದಂಪತಿ (Bengaluru couple expenses) ತಮ್ಮ ವರ್ಷದ ಖರ್ಚಿನ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ವಾರ್ಷಿಕ ಖರ್ಚಿನ ಬಗ್ಗೆ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಪ್ರಕೃತಿ ಅರೋರಾ ಮತ್ತು ಆಶಿಶ್ ಕುಮಾರ್ ಅವರು ಕಳೆದ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬಾಡಿಗೆ ಮತ್ತು ಪ್ರಯಾಣದಿಂದ ಹಿಡಿದು ಫಿಟ್‌ನೆಸ್ ಮತ್ತು ಶಾಪಿಂಗ್‌ವರೆಗೆ ಎಷ್ಟು ಖರ್ಚು ಮಾಡಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಬೆಂಗಳೂರಿನಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಇವರ ವಾರ್ಷಿಕ…

Read More

ಇಪಿಎಫ್ ಅಕೌಂಟ್​ನಿಂದ ಎಲ್​​ಐಸಿ ಪ್ರೀಮಿಯಮ್ ಕಟ್ಟುವುದು ಹೇಗೆ? ಇಲ್ಲಿದೆ ಡೀಟೇಲ್ಸ್ – Kannada News | Facility to pay LIC policy premium using EPF account

ಇಪಿಎಫ್ ಅಕೌಂಟ್​ನಲ್ಲಿರುವ ಹಣವನ್ನು ಹಿಂಪಡೆಯುವುದು ಈಗ ಸುಲಭ. ಇದೇ ವೇಳೆ, ಇಪಿಎಫ್ ಹಣವನ್ನು ಎಲ್​ಐಸಿ ಪಾಲಿಸಿಯ ಪ್ರೀಮಿಯಮ್ ಕಟ್ಟಲು ಬಳಸುವ ಅವಕಾಶ ಇದೆ. ಇಪಿಎಫ್ ಸ್ಕೀಮ್​ನ ಪ್ಯಾರಾಗ್ರಾಫ್ 68ರ ಅಡಿಯಲ್ಲಿ ಈ ಸೌಲಭ್ಯ ಒದಗಿಸಲಾಗಿದೆ. ಇಪಿಎಫ್ (EPFO) ಮೂಲಕ ಒಂದೇ ಎಲ್​ಐಸಿ ಪ್ರೀಮಿಯಮ್ ಕಟ್ಟಬಹುದು, ಅಥವಾ ಇಡೀ ಪಾಲಿಸಿ ಅವಧಿಗೆ ಇಪಿಎಫ್​ನಿಂದ ಪ್ರೀಮಿಯಮ್ ಹಣ ಕಾಲ ಕಾಲಕ್ಕೆ ಸ್ವಯಂ ಆಗಿ ಸಂದಾಯವಾಗುವಂತೆ ಮಾಡಬಹುದು. ಎಲ್​ಐಸಿ ಪಾಲಿಸಿ ನಿಮ್ಮ ಹೆಸರಲ್ಲೇ ಇರಬೇಕು… ಇಪಿಎಫ್ ಅಕೌಂಟ್​ನಿಂದ ಎಲ್​ಐಸಿ ಪ್ರೀಮಿಯಮ್ ಹಣ…

Read More

ಅಮೆರಿಕದಲ್ಲಿ ಭಾರತೀಯ ಯುವತಿಯ ನಿಗೂಢ ಸಾವು; ಕೊಲೆ ಮಾಡಿ ಭಾರತಕ್ಕೆ ಓಡಿಬಂದನಾ ಬಾಯ್​ಫ್ರೆಂಡ್​? – Kannada News | Indian Woman Nikitha Godishala Found Dead In US apartment Ex Boyfriend Fled To India

ನ್ಯೂಯಾರ್ಕ್, ಜನವರಿ 5: ಅಮೆರಿಕದಲ್ಲಿ ವಾಸಿಸುತ್ತಿದ್ದ 27 ವರ್ಷದ ಭಾರತೀಯ ಯುವತಿಯಾದ ನಿಕಿತಾ ರಾವ್ ಗೋಡಿಶಾಲ ಎಂಬಾಕೆಯನ್ನು ಮೇರಿಲ್ಯಾಂಡ್‌ನಲ್ಲಿರುವ ತನ್ನ ಮಾಜಿ ಪ್ರಿಯಕರನ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಪೊಲೀಸರು ಆಕೆಯ ಮಾಜಿ ಪ್ರೇಮಿಯನ್ನೇ ಪ್ರಮುಖ ಶಂಕಿತ ಎಂದು ಹೆಸರಿಸಿದ್ದಾರೆ. ಆತ ಅಮೆರಿಕ (United States) ಬಿಟ್ಟು ಭಾರತಕ್ಕೆ ಪರಾರಿಯಾಗಿದ್ದಾನೆ ಎನ್ನಲಾಗಿದೆ. ನಿಕಿತಾ ಗೋಡಿಶಾಲ ಜನವರಿ 2ರಂದು ನಾಪತ್ತೆಯಾಗಿದ್ದಳು. ಮರುದಿನ ಆಕೆಯ ಶವ ಪತ್ತೆಯಾಗಿತ್ತು. ಆಕೆಯ ಸಾವಿನ ನಂತರ ಆಕೆಯ ಮಾಜಿ ಪ್ರಿಯಕರನಾದ 27 ವರ್ಷದ ಅರ್ಜುನ್ ಶರ್ಮಾ…

Read More

Bengaluru: ರಸ್ತೆ ಬದಿ ಕಸ ಎಸೆದ ಯುವತಿಗೆ ಸ್ಥಳೀಯರಿಂದ ಸಖತ್​ ಕ್ಲಾಸ್ – Kannada News | Bengaluru Littering: Jayanagar Woman Confronted for Dumping Garbage; Video Viral

ಬೆಂಗಳೂರು, ಜನವರಿ 05: ನಗರವನ್ನು ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಗ್ರೇಟರ್​​ ಬೆಂಗಳೂರು ಪ್ರಾಧಿಕಾರ ಹತ್ತು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ. ಎಲ್ಲೆಂದರಲ್ಲಿ ಕಸ ಎಸೆಯುವವರನ್ನು ಹುಡುಕಿ ಹುಡುಕಿ ದಂಡ ವಿಧಿಸಲಾಗುತ್ತಿದೆ. ಇದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ತ್ಯಾಜ್ಯ ಎಸೆಯುವವರ ಮನೆ ಮುಂದೆಯೇ ಲೋಡ್​​ಗಟ್ಟಲೆ ಕಸ ಸುರಿದು, ಅದನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್​​ ಮಾಡಿ ಅವರಿಗೆ ನಾಚಿಕೆ ಉಂಟು ಮಾಡುವ ಕೆಲಸವನ್ನೂ ಮಾಡಿದೆ. ಹೀಗಿದ್ದರೂ ಬೆಂಗಳೂರು ಮಂದಿ ಮಾತ್ರ ಬುದ್ಧಿ ಕಲಿಯುತ್ತಿಲ್ಲ. ನೀವೇನಾದ್ರೂ ಮಾಡ್ಕೊಳ್ಳಿ, ನಾವು ಮಾತ್ರ ಹೀಗೆ ಇರೋದು…

Read More

ದಿಲ್ಲಿ ಭಕ್ತರೊಬ್ಬರಿಂದ ಉಡುಪಿ ಶ್ರೀ ಕೃಷ್ಣನಿಗೆ ಬಂಗಾರದ ಭಗವದ್ಗೀತೆ ಕಾಣಿಕೆ – Kannada News | Udupi Shri Krishna Temple Receives Golden Bhagavad Gita as Offering from Delhi Devotee

ಉಡುಪಿ, ಜನವರಿ 05: ಉಡುಪಿ ಶ್ರೀ ಕೃಷ್ಣನಿಗೆ ದೆಹಲಿಯ ಭಕ್ತರೊಬ್ಬರು ಚಿನ್ನದ ಭಗವದ್ಗೀತೆ ಅರ್ಪಣೆಗೆ ಮುಂದಾಗಿದ್ದಾರೆ. ಜನವರಿ 8ರಂದು ನಡೆಯಲಿರುವ ವಿಶ್ವಗೀತಾ ಪರ್ಯಾಯ ಸಮಾರೋಪ ವಿಶೇಷ ಕಾರ್ಯಕ್ರಮದಂದು ಕೃಷ್ಣ ಸನ್ನಿಧಿಯಲ್ಲಿ ಹೊನ್ನಿನ ಭಗವದ್ಗೀತೆ ಲೋಕಾರ್ಪಣೆಗೊಳ್ಳಲಿದೆ. ಸುಮಾರು 2 ಕೋಟಿ ರೂ ವೆಚ್ಚದಲ್ಲಿ ಚಿನ್ನದ ಹಾಳೆಯಲ್ಲಿ ಭಗವದ್ಗೀತೆಯ 18 ಅಧ್ಯಾಯಗಳ 700 ಶ್ಲೋಕಗಳನ್ನು ಮುದ್ರಿಸಲಾಗಿದೆ. ಚಿನ್ನದ ರಥದಲ್ಲಿ ಭಗವದ್ಗೀತೆಯ ಮೆರವಣಿಗೆ ಮೂಲಕ ಅರ್ಪಿಸಲಿದ್ದಾರೆ. ಅಯೋಧ್ಯ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟೆಸ್ಟ್ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಸೇರಿ ಅನೇಕ…

Read More

ಬ್ಯಾನರ್ ಗಲಾಟೆ ಪ್ರಕರಣ: ಜನಾರ್ದನ ರೆಡ್ಡಿ ಕಚೇರಿಗೂ ಬಾಂಬ್ ನಿಷ್ಕ್ರಿಯ ದಳ ದೌಡು – Kannada News | Bellary violence: bomb Disposal squad Verification In MLA Gali Janardhan Reddy Office

ಬಳ್ಳಾರಿ, (ಜನವರಿ 05): ಬಳ್ಳಾರಿ ಬ್ಯಾನರ್ ಗಲಾಟೆ ಹಾಗೂ ಫೈರಿಂಗ್ ಪ್ರಕರಣದ (bellary violence) ತನಿಖೆ ಚುರುಕುಗೊಂಡಿದೆ. ಬಳ್ಳಾರಿಯ ಅವಂಭಾವಿಯಲ್ಲಿರುವ ರೆಡ್ಡಿ ನಿವಾಸದಲ್ಲಿ ಬಾಂಬ್ ನಿಷ್ಕ್ರಿಯ ದಳ ಇಂಚಿಂಚೂ ಪರಿಶೀಲನೆ ನಡೆಸಿದೆ. ಬುಲೆಟ್ ಪತ್ತೆ ಹಚ್ಚಲು ಬಾಂಬ್ ನಿಷ್ಕ್ರಿಯ ದಳ ಎಂಟ್ರಿ ಕೊಟ್ಟಿದ್ದು, ಬುಲೆಟ್‌ಗಳಿಗಾಗಿ ಹುಡುಕಾಟ ನಡೆಸಿತ್ತು. DSMD ಮಿಷನ್​ಗಳ ಮೂಲಕ ಘಟನಾ ಸ್ಥಳದ ಮೂಲೆ ಮೂಲೆಯನ್ನ ಸರ್ಚ್ ಮಾಡಿದ್ರು. ಬಾಂಬ್ ನಿಷ್ಕ್ರೀಯ ತಂಡಕ್ಕೆ FSL ಟೀಮ್ ಕೂಡಾ ಸಾಥ್ ನೀಡಿದೆ. ಇನ್ನು ಗಲಾಟೆ ವೇಳೆ ಹಾರಿದ್ದ…

Read More

‘ರಾಶಿಕಾಗೆ ಮಲಗೋಕೆ ರಘು ತೊಡೆ ಬೇಕು’; ಅಶ್ವಿನಿ ಹೆಣ್ಣು ಮಕ್ಕಳ ಪರ ನಿಲ್ಲೋದು ಅಂದ್ರೆ ಇದೇನಾ? – Kannada News | Ashwini Gowda’s Controversial Statement on Rashika: Needs Raghu’s Lap Sparks Outrage

ಕೆಲ ವಾರಗಳ ಹಿಂದಿನ ಮಾತು. ಬಿಗ್ ಬಾಸ್ (Bigg Boss)  ಮನೆಯಲ್ಲಿ ಉಂಟಾದ ಗಲಾಟೆಯಲ್ಲಿ ‘ನಾನು ಹೆಣ್ಣುಮಕ್ಕಳ ಪರವಾಗಿ ನಿಲ್ಲುತ್ತಿದ್ದೇನೆ’ ಎಂದು ಅಶ್ವಿನಿ ಗೌಡ ಹೇಳಿಕೊಂಡಿದ್ದರು. ಆದರೆ, ಈಗ ಹೆಣ್ಣು ಮಕ್ಕಳ ಬಗ್ಗೆಯೇ ಕೆಟ್ಟದಾಗಿ ಮಾತನಾಡಿ ಚರ್ಚೆಗೆ ಕಾರಣರಾಗಿದ್ದಾರೆ. ‘ರಾಶಿಕಾಗೆ ಮಲಗೋಕೆ ರಘು ತೊಡೆ ಬೇಕು’ ಎಂಬ ಮಾತು ಚರ್ಚೆಗೆ ಕಾರಣ ಆಗಿದೆ. ಅವರು ಆ ರೀತಿ ಮಾತನಾಡಬಾರದಿತ್ತು ಎಂದು ಅನೇಕರು ಹೇಳಿದ್ದಾರೆ. ‘ಅಶ್ವಿನಿ ಮಹಿಳೆಯರ ಪರ ನಿಲ್ಲೋದು ಅಂದ್ರೆ ಇದೇನಾ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ….

Read More

ದೀರ್ಘಾವಧಿ ಸಿಎಂ: ದೇವರಾಜ ಅರಸು ದಾಖಲೆ ಮುರಿಯುತ್ತಿರುವ ಬಗ್ಗೆ ಸಿದ್ದರಾಮಯ್ಯ ಹೇಳಿದ್ದಿಷ್ಟು – Kannada News | Siddaramaiah Reacts about Breaks Devaraj urs record of karnatakas long term chief minister

ಮೈಸೂರು, (ಜನವರಿ 05): ಕರ್ನಾಟಕದ ದೀರ್ಘಾವಧಿ ಸಿಎಂ ಎಂಬ ಹೆಗ್ಗಳಿಕೆಗೆ ಸಿದ್ದರಾಮಯ್ಯ (Siddaramaiah) ಅವರು ಪಾತ್ರರಾಗಲು ಕೇವಲ ಒಂದೇ ದಿನ ಬಾಕಿ ಇದ್ದು, ದೇವರಾಜ ಅರಸು ಅವರ ದಾಖಲೆಯನ್ನು ನಾಳೆ (ಜನವರಿ 06) ಮುರಿಯಲಿದ್ದಾರೆ. 7 ವರ್ಷ 239 ದಿನಗಳ ಕಾಲ ಡಿ. ದೇವರಾಜ ಅರಸು (D Devaraj urs )ಕರ್ನಾಟಕದ ಸಿಎಂ‌ ಆಗಿದ್ದ‌ರು. ಇದೀಗ ಈ ದಾಖಲೆಯನ್ನು ನಾಳೆ ಸಿದ್ದರಾಮಯ್ಯ ಮುರಿಯಲಿದ್ದಾರೆ. ಇನ್ನು ಈ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ ಇಂದು (ಜನವರಿ 05) ಮಾಧ್ಯಮಗಳಿಗೆ…

Read More

ರೋಷದಿಂದ ವೇದಿಕೆ ಕಡೆ ನುಗ್ಗಿ ಸೋಮಣ್ಣಗೆ ಎಚ್ಚರಿಕೆ ಕೊಟ್ಟ ಶಿವರಾಜ್ ತಂಗಡಗಿ – Kannada News | Talk of war Between V Somanna And Shivaraj Tangadagi at Koppal Over violate protocol

ಕೊಪ್ಪಳ, (ಜನವರಿ 05): ಹಿಟ್ನಾಳ ಗ್ರಾಮದ ಬಳಿ ಹಮ್ಮಿಕೊಂಡಿದ್ದ ರೈಲ್ವೆ ಮೇಲ್ಸೇತುವೆ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯಕ್ರಮವು ರಣರಂಗವಾಗಿ ಮಾರ್ಪಟ್ಟಿದೆ. ಹೌದು…ಇಂದು (ಜನವರಿ 05) ಕೊಪ್ಪಳದ (Koppal) ಹಿಟ್ನಾಳ ಗ್ರಾಮದಲ್ಲಿ 27 ಕೋಟಿ ರೂಪಾಯಿ ವೆಚ್ಚದ ರೈಲ್ವೆ ಮೇಲ್ಸೇತುವೆ ಕಾಮಗಾರಿ ಶಂಕುಸ್ಥಾಪನೆ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಕೇಂದ್ರ ಸಚಿವ ವಿ ಸೋಮಣ್ಣ ನಡುವೆ ಸಂಘರ್ಷ ಏರ್ಪಟ್ಟಿದೆ. ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸಂಸದರ ಹೆಸರು ಹಾಕಿಲ್ಲ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಕುರ್ಚಿ ತೂರಾಟ ನಡೆಸಿ,…

Read More