ಅದ್ಧೂರಿಯಾಗಿ ನಡೆದ ಗವಿಸಿದ್ದೇಶ್ವರ ಮಹಾರಥೋತ್ಸವ: ಪುಣ್ಯ ಕ್ಷಣಕ್ಕೆ ಸಾಕ್ಷಿಯಾದ 5 ಲಕ್ಷ ಮಂದಿ ಭಕ್ತರು – Kannada News | Meghalaya Governor Inaugurates Grand Gavisiddheshwara Rathotsava in Koppal

ಕೊಪ್ಪಳ, ಜನವರಿ 05: ಐತಿಹಾಸಿಕ ಗವಿಸಿದ್ದೇಶ್ವರ ಮಹಾರಥೋತ್ಸವವು ಭಕ್ತಿ ಮತ್ತು ಸಡಗರದಿಂದ ಜರುಗಿತು. ರಥೋತ್ಸವಕ್ಕೆ ಮೇಘಾಲಯದ ರಾಜ್ಯಪಾಲರಾದ ಸಿ.ಎಚ್. ವಿಜಯಶಂಕರ್ ಅವರು ಚಾಲನೆ ನೀಡಿದ್ದು, ಸುಮಾರು 5 ಲಕ್ಷ ಜನರು ಈ ವೇಳೆ ಭಾಗಿಯಾಗಿದ್ದರು. ರಾಜ್ಯದ ಅನೇಕ ಜನಪ್ರತಿನಿಧಿಗಳು  ಸ್ವ ಇಚ್ಛೆಯಿಂದ ಗವಿಸಿದ್ದೇಶ್ವರನ ಆಶೀರ್ವಾದ ಪಡೆಯಲು ಮತ್ತು ಈ ಪುಣ್ಯ ಕಾರ್ಯಕ್ಕೆ ಸಾಕ್ಷಿಯಾಗಲು ಆಗಮಿಸಿದ್ದರು. ಕೇಂದ್ರ ಸಚಿವ ವಿ.ಸೋಮಣ್ಣ, ಸಚಿವ ಶಿವರಾಜ ತಂಗಡಗಿ, ಸಂಸದರಾದ ಜಗದೀಶ್ ಶೆಟ್ಟರ್, ಬಸವರಾಜ ಬೊಮ್ಮಾಯಿ ಸೇರಿ ಹಲವರು ಉಪಸ್ಥಿತರಿದ್ದರು.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಚರ್ಮದ ಸಮಸ್ಯೆಗಳನ್ನು ನಿವಾರಿಸಬಲ್ಲುದು ಪತಂಜಲಿಯ ಈ ಆಯುರ್ವೇದ ತೈಲ – Kannada News | Patanjali Divya Kayakalp oil helps in overcoming various skin problems

ಇಂದಿನ ವೇಗದ ಜೀವನದಲ್ಲಿ ಚರ್ಮದ ಸಮಸ್ಯೆಗಳು (skin problems) ಹೆಚ್ಚಾಗಿ ಕಂಡುಬರುತ್ತಿವೆ. ಬದಲಾಗುತ್ತಿರುವ ಜೀವನಶೈಲಿ, ಮಾಲಿನ್ಯ, ಅನಾರೋಗ್ಯಕರ ಆಹಾರ ಪದ್ಧತಿ ಮತ್ತು ಒತ್ತಡವು ಚರ್ಮದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ತುರಿಕೆ, ರಿಂಗ್‌ವರ್ಮ್, ಫಂಗಲ್ ಇನ್ಫೆಕ್ಷನ್, ಶುಷ್ಕತೆ ಮತ್ತು ಉರಿಯಂತಹ ಸಮಸ್ಯೆಗಳು ಅನೇಕ ಜನರನ್ನು ಕಾಡುತ್ತವೆ. ಪತಂಜಲಿಯ ದಿವ್ಯ ಕಾಯಕಲ್ಪ್ ತೈಲವು (Patanjali Divya Kayakalp oil) ಚರ್ಮದ ಸಮಸ್ಯೆಗಳಿಗೆ ಪ್ರಯೋಜನಕಾರಿಯಾಗಿದೆ. ಈ ಎಣ್ಣೆಯನ್ನು ನೈಸರ್ಗಿಕ ಪದಾರ್ಥಗಳಿಂದ ರೂಪಿಸಲಾಗಿದೆ.

ದಿವ್ಯ ಕಾಯಕಲ್ಪ್ ತೈಲವನ್ನು ಪ್ರಾಥಮಿಕವಾಗಿ ಸಾಮಾನ್ಯ ಚರ್ಮದ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಬಳಸಲಾಗುತ್ತದೆ. ಈ ಎಣ್ಣೆ ಆರೋಗ್ಯಕರ ಚರ್ಮವನ್ನು ಶಮನಗೊಳಿಸಲು ಮತ್ತು ನಿರ್ವಹಿಸಲು ಸಹಾಯ ಮಾಡುತ್ತದೆ. ಆದಾಗ್ಯೂ, ನಿಯಮಿತವಾಗಿ ಮತ್ತು ಸರಿಯಾಗಿ ಬಳಸಿದಾಗ ಮಾತ್ರ ಇದರ ನಿಜವಾದ ಪ್ರಯೋಜನಗಳನ್ನು ಸಾಧಿಸಬಹುದು. ಈ ತೈಲವು ಯಾವ ಚರ್ಮದ ಸ್ಥಿತಿಗಳಿಗೆ ಪ್ರಯೋಜನಕಾರಿಯಾಗಿದೆ ಮತ್ತು ಅದನ್ನು ಹೇಗೆ ಬಳಸುವುದು ಎಂಬುದರ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ರಕ್ತದೊಡ್ಡ ಅಪಾಯ ಹೆಚ್ಚು; ಇಲ್ಲಿದೆ ಉಪಯುಕ್ತವಾಗಬಲ್ಲ ಕೆಲ ಯೋಗಾಸನಗಳು

ದಿವ್ಯ ಕಾಯಕಲ್ಪ್ ತೈಲ ಯಾವ ಚರ್ಮದ ಸಮಸ್ಯೆಗಳಿಗೆ ಪ್ರಯೋಜನಕಾರಿ?

ದಿವ್ಯ ಕಾಯಕಲ್ಪ್ ಎಣ್ಣೆಯನ್ನು ಚರ್ಮ ರೋಗ, ತುರಿಕೆ, ಫಂಗಲ್ ಸೋಂಕುಗಳು ಮತ್ತು ಎಸ್ಜಿಮಾ ಮುಂತಾದ ಚರ್ಮದ ಸಮಸ್ಯೆಗಳ ನಿವಾರಣೆಗೆ ಉಪಯುಕ್ತವೆಂದು ಪರಿಗಣಿಸಲಾಗುತ್ತದೆ. ಇದು ಚರ್ಮದ ಕಿರಿಕಿರಿ, ಕೆಂಪು ಮತ್ತು ಶುಷ್ಕತೆಯನ್ನು ನಿವಾರಿಸಲು ಸಹಾಯ ಮಾಡುತ್ತದೆ. ಅಲರ್ಜಿ ಅಥವಾ ಬೆವರಿನಿಂದಾಗಿ ಆಗುವ ತುರಿಕೆಗೆ ಈ ತೈಲದಿಂದ ಪರಿಹಾರ ಸಿಗುತ್ತದೆ.

ಈ ಆಯುರ್ವೇದ ತೈಲವು ಚರ್ಮವನ್ನು ಪೋಷಿಸುವುದು ಮಾತ್ರವಲ್ಲ, ತ್ವಚೆ ಮೃದುವಾಗಿಡಲು ನೆರವಾಗುತ್ತದೆ. ಇದರ ನಿಯಮಿತ ಬಳಕೆಯು ತ್ವಚೆಯಲ್ಲಿ ಶುಷ್ಕತೆ ನಿವಾರಿಸಿ, ತೇವಾಂಶವನ್ನು ಕಾಪಾಡಿಕೊಳ್ಳಲು ಮತ್ತು ತುರಿಕೆ ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ದಿವ್ಯ ಕಾಯಕಲ್ಪ ತೈಲದಲ್ಲಿ ಯಾವ್ಯಾವ ಪದಾರ್ಥಗಳಿವೆ?

ದಿವ್ಯ ಕಾಯಕಲ್ಪ ತೈಲದಲ್ಲಿ ಬೇವು, ಅರಿಶಿನ, ಶ್ರೀಗಂಧ ಮತ್ತು ಇತರ ಆಯುರ್ವೇದ ಗಿಡಮೂಲಿಕೆಗಳ ಸಾರ ಇದೆ. ಬೇವು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗುತ್ತದೆ. ಆದರೆ ಅರಿಶಿನವು ಊತ ಮತ್ತು ಉರಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶ್ರೀಗಂಧವು ಚರ್ಮವನ್ನು ತಂಪಾಗಿಸುತ್ತದೆ. ಈ ಪದಾರ್ಥಗಳು ಒಟ್ಟಾಗಿ ಚರ್ಮವನ್ನು ಶುದ್ಧೀಕರಿಸಲು ಮತ್ತು ಬಾಹ್ಯ ಸೋಂಕುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಆಯುರ್ವೇದದ ಪ್ರಕಾರ, ಈ ಪದಾರ್ಥಗಳು ಚರ್ಮದ ನೈಸರ್ಗಿಕ ತೇವಾಂಶವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತವೆ.

ಇದನ್ನೂ ಓದಿ: ಆಯುರ್ವೇದ ಬಳಸಿ, ದುಬಾರಿ ಚಿಕಿತ್ಸೆಗೆ ಮುಕ್ತಿ ಕೊಡಿ; ಕೈಗೆಟುಕುವ ಬೆಲೆಗೆ ಆನ್​ಲೈನ್​ನಲ್ಲೇ ಪತಂಜಲಿ ಔಷಧಗಳು

ಈ ತೈಲ ಹೇಗೆ ಬಳಸುವುದು?

ಪೀಡಿತ ಪ್ರದೇಶವನ್ನು ಸ್ವಚ್ಛಗೊಳಿಸಿ ಒಣಗಿಸಿದ ನಂತರ ದಿವ್ಯ ಕಾಯಕಲ್ಪ್ ತೈಲವನ್ನು ಹಚ್ಚಬೇಕು. ದಿನಕ್ಕೆ ಒಂದು ಅಥವಾ ಎರಡು ಬಾರಿ ನಿಧಾನವಾಗಿ ಮಸಾಜ್ ಮಾಡಿ. ಎಣ್ಣೆಯನ್ನು ಹಚ್ಚಿದ ನಂತರ ಸ್ವಲ್ಪ ಸಮಯದವರೆಗೆ ಆ ಜಾಗವನ್ನು ಮುಕ್ತವಾಗಿರಲು ಬಿಡಿ. ಕಣ್ಣು, ಬಾಯಿ ಅಥವಾ ತೆರೆದ ಗಾಯಗಳಿಗೆ ಈ ತೈಲ ಸೋಂಕದಂತೆ ನೋಡಿಕೊಳ್ಳಿ. ಉರಿ ಅಥವಾ ಅಲರ್ಜಿಯ ರಿಯಾಕ್ಷನ್ ಸಂಭವಿಸಿದಲ್ಲಿ, ಅದರ ಬಳಕೆಯನ್ನು ನಿಲ್ಲಿಸಿ. ಸಮಸ್ಯೆ ದೀರ್ಘಕಾಲದವರೆಗೆ ಮುಂದುವರಿದರೆ, ಚರ್ಮರೋಗ ವೈದ್ಯರನ್ನು ಸಂಪರ್ಕಿಸಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಚಿಕ್ಕ ಮಕ್ಕಳಂತೆ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ: ಹುಮ್ನಾಬಾದ್​​ನಲ್ಲಿ ನಿಷೇಧಾಜ್ಞೆ ಜಾರಿ – Kannada News | Section 144 imposed In humnabad Over BJP MLA Siddu Patil And Congress MLA Bhimrao Patil In KDP Meeting

ಬೀದರ್, (ಜನವರಿ 05): ನಗರದ ಜಿಲ್ಲಾ ಪಂಚಾಯಿತಿಯಲ್ಲಿ ಇಂದು (ಜನವರಿ 05) ನಡೆದ ಜಿಲ್ಲಾಮಟ್ಟದ ತ್ರೈಮಾಸಿಕ ಪ್ರಗತಿ ಪರಿಶೀಲನಾ(ಕೆಡಿಪಿ) ಸಭೆಯಲ್ಲಿ ಹುಮನಾಬಾದ್ (humnabad) ಕ್ಷೇತ್ರದ ಬಿಜೆಪಿ ಶಾಸಕ ಸಿದ್ಧಲಿಂಗಪ್ಪ ಪಾಟೀಳ್ ಹಾಗೂ ಕಾಂಗ್ರೆಸ್ ವಿಧಾನಪತಿಷತ್ ಸದಸ್ಯ ಭೀಮರಾವ್ ಪಾಟೀಲ್ ಪರಸ್ಪರ ಕೈ ಕೈ ಮಿಲಾಯಿಸಿ, ಅವಾಚ್ಯ ಶಬ್ಧಗಳಿಂದ ನಿಂದಿಸಿಕೊಂಡಿರುವ ಘಟನೆ ನಡೆದಿದೆ.

ಸಭೆ ನಡೆಯುತ್ತಿರುವ ವೇಳೆ ಮಾತನಾಡಿದ ಶಾಸಕ ಸಿದ್ದು ಪಾಟೀಲ್, ಹುಮ್ನಾಬಾದ್​​ನಲ್ಲಿ ಅರಣ್ಯ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಸಚಿವ ಈಶ್ವರ್​ ಖಂಡ್ರೆಗೆ ಹೇಳಿದ್ದಾರೆ. ಇದರಿಂದ ಕೆರಳಿದ ಭೀಮರಾವ್ ಪಾಟೀಲ್ ಅದನ್ನ ಕೇಳಲು ನೀನ್ಯಾರು? ಎಂದು ಏಕವಚನದಲ್ಲೇ ಪ್ರಶ್ನಿಸಿದ್ದಾರೆ. ಬಳಿಕ ಇಬ್ಬರು ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿದ್ದು, ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿದ್ದಾರೆ. ಇದರಿಂದ ಹುಮನಾಬಾದ್ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ ಹುಮ್ನಾಬಾದ್​​ ಪಟ್ಟಣದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ತಹಶೀಲ್ದಾರ್​​ ಅಂಜುಮ್ ತಬಸ್ಸುಮ ಆದೇಶಿಸಿದ್ದಾರೆ.

ಇದನ್ನೂ ನೋಡಿ: ಬೀದರ್ ಕೆಡಿಪಿ ಸಭೆಯಲ್ಲಿ ಕೈ ಕೈ ಮಿಲಾಯಿಸಿದ ಶಾಸಕ, ಎಂಎಲ್​ಸಿ!

Source link

ನದಿ ತಿರುವು ಯೋಜನೆಗಳಿಗೆ ವಿರೋಧ: ಜ. 11ರಂದು ಶಿರಸಿಯಲ್ಲಿ ಬೃಹತ್ ಸಮಾವೇಶ – Kannada News | Massive Protest Convention in Sirsi on Jan. 11 Against River Diversion Projects in Uttara Kannada

ಜ. 11ರಂದು ಬೃಹತ್​​ ಪ್ರತಿಭಟನೆ

ಕಾರವಾರ, ಜನವರಿ 05: ಉತ್ತರ ಕನ್ನಡ ಜಿಲ್ಲೆಯ ಬೇಡ್ತಿ ಹಾಗೂ ಅಘನಾಶಿನಿ ನದಿತಿರುವು ಯೋಜನೆಗಳನ್ನು ಕೈಬಿಟ್ಟು ಪಶ್ಚಿಮಘಟ್ಟ ಸಂರಕ್ಷಿಸಲು ಆಗ್ರಹಿಸಿ ಜ. 11ರಂದು ಬೃಹತ್​​ ಜನ ಸಮಾವೇಶವನ್ನು ಶಿರಸಿಯಲ್ಲಿ ಆಯೋಜಿಸಲಾಗಿದೆ. ಸ್ವರ್ಣವಲ್ಲೀ ಶ್ರೀಗಳ ನೇತೃತ್ವದ ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿಯ ಅಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವಿಶೇಷ ಆಹ್ವಾನಿತರಾಗಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್​​ ಹೆಗ್ಡೆ ಭಾಗಿಯಾಗಲಿದ್ದಾರೆ. ಪರಿಸರ ಅರ್ಥಶಾಸ್ತ್ರಜ್ಞ ಪ್ರೋ. ಬಿ.ಎಂ. ಕುಮಾರಸ್ವಾಮಿ ಕಾರ್ಯಕ್ರಮದಲ್ಲಿ ಉಪನ್ಯಾಸ ನೀಡಲಿದ್ದಾರೆ.

ಸಂತರ ಸಾನ್ನಿಧ್ಯ

ಶಿರಸಿಯ ಎಂಇಎಸ್​​ ಕಾಲೇಜು ಮೈದಾನದಲ್ಲಿ ಮಧ್ಯಾಹ್ನ 2ರಿಂದ ಸಮಾವೇಶ ಆರಂಭವಾಗಲಿದ್ದು, ಹಲವಾರು ಸಂತರ ದಿವ್ಯ ಉಪಸ್ಥಿತಿ ಈ ವೇಳೆ ಇರಲಿದೆ. ಸ್ವರ್ಣವಲ್ಲೀ ಮಠದ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ, ಮನ್ನೆಲೆಮಾವು ಮಠದ ಮಾಧವಾನಂದ ಭಾರತೀ ಶ್ರೀಗಳು, ಸೋದೆ ವಾದಿರಾಜ ಮಠದ ವಿಶ್ವವಲ್ಲಭ ತೀರ್ಥ ಶ್ರೀಪಾದರು, ಸ್ವಾದೀ ದಿಗಂಬರ ಜೈನ ಮಠದ ಭಟ್ಟಾಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಶ್ರೀಗಳು, ಸೊರಬದ ಜಡೆಯ ಡಾ. ಮಹಾಂತ ಮಹಾಸ್ವಾಮಿಗಳು ಮತ್ತು ಸಿದ್ದಾಪುರದ ಶಿರಳಗಿಯ ಶ್ರೀ ಚೈತನ್ಯ ರಾಜಾರಾಮ ಅಶ್ರಮದ ಬ್ರಹ್ಮಾನಂದ ಭಾರತೀ ಸ್ವಾಮಿಗಳು ಉಪಸ್ಥಿತರಿರಲಿದ್ದಾರೆ.

ಇದನ್ನೂ ಓದಿ: ಉತ್ತರ ಕನ್ನಡದ ನದಿ ತಿರುವು ಯೋಜನೆಗಳಿಗೆ ವಿರೋಧ ಯಾಕೆ?

ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ಹಳಿಯಾಳ ಶಾಸಕ ಆರ್​​.ವಿ. ದೇಶಪಾಂಡೆ, ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್​, ಅಂಕೋಲಾ-ಕಾರವಾರ ಶಾಸಕ ಸತೀಶ್​​ ಸೈಲ್​, ಶಿರಸಿ-ಸಿದ್ದಾಪುರ ಶಾಸಕ ಭೀಮಣ್ಣ ನಾಯ್ಕ, ವಿಧಾನ ಪರಿಷತ್​ ಸದಸ್ಯರಾದ ಗಣಪತಿ ಉಳ್ವೇಕರ್​​ ಮತ್ತು ಶಾಂತಾರಾಮ ಸಿದ್ಧಿ ಭಾಗವಹಿಸಿಲಿದ್ದಾರೆ ಎಂದು ಬೇಡ್ತಿ ಅಘನಾಶಿನಿ ಕೊಳ್ಳ ಸಂರಕ್ಷಣಾ ಸಮಿತಿ ಪ್ರಕಟಣೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 6:21 pm, Mon, 5 January 26

Source link

ಹೆತ್ತ ಮಗಳ ಮೇಲೆಯೇ ಲೈಂಗಿಕ ದೌರ್ಜನ್ಯವೆಸಗಿ ಗರ್ಭಿಣಿ ಮಾಡಿದ ಅಪ್ಪನಿಗೆ ಗಲ್ಲು ಶಿಕ್ಷೆ! – Kannada News | Tamil Nadu Tirunelveli POCSO Court orders Death Penalty To Father For Impregnating Daughter

ತಿರುನಲ್ವೇಲಿ, ಜನವರಿ 5: ಹೆಣ್ಣುಮಕ್ಕಳ ಪಾಲಿಗೆ ತಮ್ಮ ತಂದೆಯೇ ಮೊದಲ ಹೀರೋ. ಆದರೆ, ತಮಿಳುನಾಡಿನಲ್ಲಿ 14 ವರ್ಷದ ಬಾಲಕಿಯೊಬ್ಬಳ ಪಾಲಿಗೆ ಆಕೆಯ ಅಪ್ಪನೇ ವಿಲನ್ ಆಗಿದ್ದಾನೆ. ತಿರುನಲ್ವೇಲಿ ಜಿಲ್ಲೆಯ ವಲಿಯೂರು ಬಳಿ ಅಪ್ರಾಪ್ತ ಬಾಲಕಿಯನ್ನು ಆಕೆಯ ತಂದೆಯೇ ಗರ್ಭಿಣಿಯನ್ನಾಗಿ (Pregnant) ಮಾಡಿದ್ದಾನೆ. ಆಕೆ ಮಗುವನ್ನೂ ಹೆತ್ತಿದ್ದಾಳೆ. ಡಿಎನ್‌ಎ ಪರೀಕ್ಷೆಯಲ್ಲಿ ಆಕೆಯ ಮಗುವಿಗೆ ಆಕೆಯ ಅಪ್ಪನೇ ತಂದೆ ಎಂಬುದು ದೃಢಪಟ್ಟ ನಂತರ ಪೋಕ್ಸೊ ನ್ಯಾಯಾಲಯವು ಆ ಬಾಲಕಿಯ ತಂದೆಗೆ ಮರಣದಂಡನೆ ವಿಧಿಸಿದೆ.

ತಿರುನೆಲ್ವೇಲಿ ಜಿಲ್ಲೆಯ ಪಣಗುಡಿ ಪ್ರದೇಶದ ದಿನಗೂಲಿ ಕಾರ್ಮಿಕನಾಗಿ ಕೆಲಸ ಮಾಡುವ ವ್ಯಕ್ತಿಗೆ ಇಬ್ಬರು ಹೆಂಡತಿಯರಿದ್ದಾರೆ. ಅವನ ಎರಡನೇ ಹೆಂಡತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಆತನ 14 ವರ್ಷದ ಕಿರಿಯ ಮಗಳು 10ನೇ ತರಗತಿಯಲ್ಲಿ ಓದುತ್ತಿದ್ದಳು. ಕಳೆದ ವರ್ಷ ಅಂದರೆ 2025ರ ಜನವರಿಯಲ್ಲಿ ಆ ಹುಡುಗಿಯ ತಾಯಿಗೆ ತನ್ನ ಮಗಳ ದೇಹದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಿರುವುದು ಗಮನಕ್ಕೆ ಬಂದಿತ್ತು. ಹೀಗಾಗಿ, ಆಕೆ ತಪಾಸಣೆಗಾಗಿ ಮಗಳನ್ನು ಆಸ್ಪತ್ರೆಗೆ ಕರೆದೊಯ್ದರು. ಆಗ ವೈದ್ಯರು ಆ ಹುಡುಗಿ 5 ತಿಂಗಳ ಗರ್ಭಿಣಿಯಾಗಿದ್ದಾಳೆಂದು ಹೇಳಿದರು. ಈ ವಿಷಯವನ್ನು ತಿಳಿದು ತಾಯಿಗೆ ಮಾತ್ರವಲ್ಲದೆ ವೈದ್ಯರಿಗೂ ಆಘಾತ ಉಂಟಾಯಿತು.

ಇದನ್ನೂ ಓದಿ: ಗರ್ಭಿಣಿಯರೇ… ನೀವು ಚಳಿಗಾಲದಲ್ಲಿ ಮಾಡುವ ಈ ಒಂದು ತಪ್ಪು ಮಗುವಿನ ತೂಕದ ಮೇಲೆ ಪರಿಣಾಮ ಬೀರುತ್ತೆ

ಇದರ ನಂತರ, ಆ ಬಾಲಕಿಯನ್ನು ವಿಚಾರಿಸಿದಾಗ ತನ್ನ ತಂದೆ 2024ರಿಂದ ತನಗೆ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ಅವಳು ಅಳುತ್ತಾ ಹೇಳಿದಳು. ಇದನ್ನು ಕೇಳಿ ತೀವ್ರ ದುಃಖಿತಳಾದ ಆಕೆಯ ತಾಯಿ ಕಳೆದ ವರ್ಷ ಫೆಬ್ರವರಿಯಲ್ಲಿ ವಲ್ಲಿಯೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆತನ ವಿರುದ್ಧ ತಕ್ಷಣ ಕಾನೂನು ಕ್ರಮ ಕೈಗೊಳ್ಳಲಾಯಿತು, ತನಿಖೆಯ ಭಾಗವಾಗಿ ಡಿಎನ್ಎ ಪುರಾವೆಗಳನ್ನು ಸಂಗ್ರಹಿಸಲಾಯಿತು.

2024ರಲ್ಲಿ ಮನೆಯಲ್ಲಿ ಬೇರೆ ಯಾರೂ ಇಲ್ಲದಿದ್ದಾಗ ತನ್ನ ಕಿರಿಯ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಈ ಘಟನೆಯು ಕಳೆದ ವರ್ಷ ಬೆಳಕಿಗೆ ಬಂದ ನಂತರ ಸುತ್ತಮುತ್ತಲಿನ ಪ್ರದೇಶದಲ್ಲಿ ಭಾರೀ ಕೋಲಾಹಲವನ್ನು ಸೃಷ್ಟಿಸಿತ್ತು. ತನಿಖೆಯ ಭಾಗವಾಗಿ ನಡೆಸಲಾದ ಡಿಎನ್ಎ ಪರೀಕ್ಷೆಯಲ್ಲಿ ಆಕೆಯ ಗರ್ಭದಲ್ಲಿರುವ ಮಗುವಿನ ಡಿಎನ್ಎ ಆರೋಪಿಯ ಡಿಎನ್ಎಗೆ ಹೊಂದಿಕೆಯಾಗುವುದು ಕಂಡುಬಂದಿದ್ದು, ನ್ಯಾಯಾಲಯದಲ್ಲಿ ಅಪರಾಧವನ್ನು ದೃಢಪಡಿಸಿತ್ತು.

ಇದನ್ನೂ ಓದಿ: ತಂದೆಯಿಂದಲೇ ಗರ್ಭಿಣಿ ಮಗಳ ಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ಹಂತಕನ ಪ್ಲಾನ್ ಏನಿತ್ತು ಗೊತ್ತಾದ್ರೆ ಬೆಚ್ಚಿಬೀಳ್ತೀರಿ!

ಈ ಪ್ರಕರಣದ ಅಂತಿಮ ತೀರ್ಪು ಇಂದು ತಿರುನಲ್ವೇಲಿ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ತೀರ್ಪು ನೀಡಿದ ನ್ಯಾಯಾಧೀಶ ಸುರೇಶ್ ಕುಮಾರ್, ಈ ಪ್ರಕರಣದಲ್ಲಿ ಕನಿಷ್ಠ ಶಿಕ್ಷೆಯನ್ನು ಪರಿಗಣಿಸಲಾಗಿದೆ ಎಂದು ತೀರ್ಪಿನಲ್ಲಿ ತಿಳಿಸಿದ್ದರು. ಆದರೆ, ಸಂತ್ರಸ್ತ ಬಾಲಕಿ ಮತ್ತು ಆಕೆಯ ತಾಯಿ ಗರಿಷ್ಠ ಶಿಕ್ಷೆಯನ್ನು ಕೋರಿದ್ದರು. ಕೊನೆಗೆ, ತನ್ನ ಸ್ವಂತ ಮಗಳ ಮೇಲೆ ಪದೇ ಪದೇ ಅತ್ಯಾಚಾರ ಮಾಡಿದ ಅಪರಾಧಕ್ಕಾಗಿ ಅಪರಾಧಿಗೆ ಮರಣದಂಡನೆ ವಿಧಿಸಲಾಗುತ್ತಿದೆ ಎಂದು ನ್ಯಾಯಾಧೀಶರು ಘೋಷಿಸಿದರು.

ಇದೇ ತಿರುನಲ್ವೇಲಿಯ ಪೋಕ್ಸೊ ವಿಶೇಷ ನ್ಯಾಯಾಲಯವು 11 ದಿನಗಳ ಹಿಂದೆ ತನ್ನ ಮಗಳನ್ನು ಗರ್ಭಿಣಿಯನ್ನಾಗಿ ಮಾಡಿದ್ದಕ್ಕಾಗಿ ಮತ್ತೊಬ್ಬ ತಂದೆಗೆ ಕೂಡ ಮರಣದಂಡನೆ ವಿಧಿಸಿತ್ತು. ಕಡಿಮೆ ಅವಧಿಯಲ್ಲಿ ಒಂದೇ ರೀತಿಯ ಅಪರಾಧಕ್ಕೆ ಎರಡನೇ ಮರಣದಂಡನೆ ವಿಧಿಸಿರುವುದು ಈ ಪ್ರದೇಶದಲ್ಲಿ ಭಾರಿ ಆಘಾತ ಉಂಟು ಮಾಡಿದೆ. ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳು ಹೆಚ್ಚಾಗುತ್ತಿರುವುದಕ್ಕೆ ಕಳವಳವೂ ವ್ಯಕ್ತವಾಗಿದೆ. ಮಕ್ಕಳ ಪಾಲಿಗೆ ರಕ್ಷಕನಾಗಬೇಕಾದ ಅಪ್ಪನೇ ಅವರ ಜೀವನವನ್ನು ಹಾಳು ಮಾಡುತ್ತಿರುವುದು ಆತಂಕಕಾರಿ ಸಂಗತಿ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ರಾಯಚೂರು: ಸಿಎಂ ಚಾಲನೆ ನೀಡಿದ್ದ ಅಂಬಾದೇವಿ ಜಾತ್ರೆಯಲ್ಲಿ ಗಾಂಜಾ ಘಾಟು; ಇಬ್ಬರು ಅರೆಸ್ಟ್ – Kannada News | Raichur Amba Math Ganja Bust: Two Arrested After TV9 Report Exposes Sale

ರಾಯಚೂರು, ಜನವರಿ 05: ಗಡಿ ಜಿಲ್ಲೆ ರಾಯಚೂರಿನ (Raichur) ಅಂಬಾದೇವಿ ಜಾತ್ರಾ ಮಹೋತ್ಸವದಲ್ಲಿ ಸಾಧುಗಳ ಗಾಂಜಾ ಘಾಟಿನ ಬಗ್ಗೆ ಟಿವಿ9 ವರದಿ ಮಾಡಿತ್ತು. ಈ ಬೆನ್ನಲ್ಲೇ ಅಲರ್ಟ್ ಆದ ಪೊಲೀಸರು ಇಬ್ಬರು ಗಾಂಜಾ ಮಾರಾಟಗಾರರನ್ನು ಅರೆಸ್ಟ್ (Arrest) ​ ಮಾಡಿದ್ದಾರೆ. ಅಜಂ ಸೊಯೆಲ್ ಮತ್ತು ಮಹ್ಮದ್ ಶಾಬಾಜ್ ಬಂಧಿತ ಆರೋಪಿಗಳು. ಸಿಂಧನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

400 ವರ್ಷಗಳ ಇತಿಹಾಸವಿರುವ ರಾಯಚೂರು ಜಿಲ್ಲೆಯ ಸಿಂಧನೂರು ತಾಲ್ಲೂಕಿನ ಸೋಮಲಾಪುರ ಗ್ರಾಮದಲ್ಲಿರುವ ಅಂಬಾದೇವಿ ಜಾತ್ರಾ ಮಹೋತ್ಸವದಲ್ಲಿ ಗಾಂಜಾ ಘಾಟಿನ ಬಗ್ಗೆ ಆರೋಪಗಳು ಕೇಳಿ ಬಂದಿದ್ದವು. ಈ ಒಂದು ಜಾತ್ರಾ ಮಹೋತ್ಸವಕ್ಕೆ ದೇಶದ ಮೂಲೆಮೂಲೆಗಳಿಂದ ಸಾಧು-ಸಂತರು ಆಗಮಿಸುತ್ತಾರೆ.

ಇದನ್ನೂ ಓದಿ: ನಶೆರಾಣಿ ಆಗಲು ಹೋಗಿ ಖಾಕಿ ಕೈಲಿ ತಗಲಾಕಿಕೊಂಡ ಮಹಿಳೆ: ಗ್ಯಾಂಗ್​​ ಅಂದರ್​​

ದೇಶದಲ್ಲಿರುವ 18 ಶಕ್ತಿ ಪೀಠಗಳಲ್ಲಿ ಈ ದೇವಾಲಯ ಕೂಡ ಒಂದು. ಹೀಗಾಗಿ ಅಂಬಾದೇವಿ ದರ್ಶನ ಪಡೆಯುತ್ತಾರೆ. ಆದರೆ ಇಲ್ಲಿ ಸಾಧುಗಳಿಗೆ ಕೆಲ ಭಕ್ತರು ನೈವೇದ್ಯ ನೀಡುವ ಪದ್ದತಿ ಇದೆಯಂತೆ. ಹೀಗಾಗಿ ಭಕ್ತರು ಕೊಡುವ ಗಾಂಜಾದಿಂದ ಸಾಧುಗಳು ಕಿಕ್ಕೇರಿಸಿಕೊಳ್ಳುತ್ತಾರೆ. ಈ ಬಗ್ಗೆ ಟಿವಿ9 ವಿಸ್ತೃತ ವರದಿ ಬೆನ್ನಲ್ಲೇ ಅಂಬಾದೇವಿ ದೇವಸ್ಥಾನದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಸಿಂಧನೂರು ಗ್ರಾಮೀಣ ಪೊಲೀಸರು ಬಂಧಿಸಿದ್ದಾರೆ.

ಓರ್ವ ವೆಲ್ಡಿಂಗ್ ಕೆಲಸಗಾರ, ಮತ್ತೊಬ್ಬ ಮೆಕ್ಯಾನಿಕ್

ಬಂಧಿತ ಇಬ್ಬರು ಆರೋಪಿಗಳು ವಿಯಜನಗರ ಜಿಲ್ಲೆಯ ಹೊಸಪೇಟೆದವರು. ಆರೋಪಿಗಳ ಪೈಕಿ ಅಜಂ ಸೊಯೆಲ್ ವೆಲ್ಡಿಂಗ್ ಕೆಲಸ ಮಾಡುತ್ತಿದ್ದರೆ, ಆರೋಪಿ ಮಹ್ಮದ್ ಶಾಬಾಜ್ ಲಾರಿ ಮೆಕ್ಯಾನಿಕ್. ಆರೋಪಿಗಳಿಬ್ಬರು ಅಂಬಾದೇವಿ ದೇವಸ್ಥಾನದ ಹಳೆ ಯಾತ್ರಾ ನಿವಾಸದ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿ ಬಂದಿತ್ತು.

ಮಾಹಿತಿ ಆಧರಿಸಿ ದಾಳಿ ನಡೆಸಿದಾಗ ಇಬ್ಬರು ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಬಂಧಿತರಿಂದ 1 ಲಕ್ಷ 10 ಸಾವಿರ ರೂ ಮೌಲ್ಯದ 1.1 ಕೆಜಿ ಗಾಂಜಾವನ್ನ ಜಪ್ತಿ ಮಾಡಲಾಗಿದೆ. ಅಲ್ಲದೇ ಗಾಂಜಾವನ್ನ ಕಟ್ಟಿದ್ದ ಕಾಗದದ ಪೊಟ್ಟಣಗಳನ್ನು ಸೀಜ್ ಮಾಡಲಾಗಿದೆ.

ಇದನ್ನೂ ಓದಿ: ಹುಬ್ಬಳ್ಳಿಗೆ ಅವ್ಯಾಹತವಾಗಿ ಬರುತ್ತಿದೆ ಗಾಂಜಾ: ಡ್ರಗ್ ಪೆಡ್ಲರ್​ಗಳಿಗೆ ವರವಾಗಿ ಪರಿಣಮಿಸಿದ ತಪಾಸಣೆರಹಿತ ರೈಲು ಪ್ರಯಾಣ!

ಸಾಧುಗಳು ಗಾಂಜಾ ಸೇದುವ ಪದ್ದತಿ ಈಗಾಗಲೇ ಕಾಲಕ್ರಮೇಣ ಕಡಿಮೆಯಾಗುತ್ತಿದೆ ಎನ್ನಲಾಗುತ್ತಿದೆ. ಅಲ್ಲದೇ ಕಾನೂನಿನ ಬಿಗಿ ಹಿಡಿತ ಹಿನ್ನೆಲೆ ಬಾರಿ ಪ್ರಮಾಣದಲ್ಲಿ ಈ ಪದ್ದತಿ ನಿಯಂತ್ರಣಕ್ಕೆ ಬಂದಿದೆ. ಆದರೆ ಜಾತ್ರೆಗೆ ಪಕ್ಕದ ತೆಲಂಗಾಣ, ಆಂಧ್ರ, ಮಹಾರಾಷ್ಟ್ರ ಹಾಗೂ ತಮಿಳುನಾಡಿನಿಂದಲೂ ಲಕ್ಷಾಂತರ ಜನ ಭಕ್ತರು ಬರುತ್ತಾರೆ. ಹೀಗಾಗಿ ಅಲ್ಲಲ್ಲಿ ಗಾಂಜಾ ಘಾಟು ಸದ್ದಿಲ್ಲದೇ ಹೊಗೆಯಾಡುತ್ತಲೇ ಇದ್ದು, ಈ ಬಗ್ಗೆ ಪೊಲೀಸರು ಹದ್ದಿಣ ಕಣ್ಣಿಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:06 pm, Mon, 5 January 26

Source link

ಬಾತ್‌ರೂಮ್‌ ಟ್ಯಾಪ್, ಕನ್ನಡಿಯ ಮೇಲಿನ ಹಠಮಾರಿ ಕಲೆಗಳನ್ನು ಹೋಗಲಾಡಿಸಲು ಇಲ್ಲಿದೆ ಸಿಂಪಲ್‌ ಸಲಹೆ – Kannada News | You can easily remove stains from taps and mirrors with the help of these home remedies

ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವಂತೆ ಬಾತ್‌ರೂಮ್‌ ಕ್ಲೀನ್‌ ಮಾಡುವುದು ಸಹ ಅತೀ ಮುಖ್ಯವಾಗಿದೆ. ಸ್ನಾನಗೃಹದ ಶುಚಿತ್ವವನ್ನು ಕಾಪಾಡದೇ ಇದ್ದರೆ ಅನೇಕ ರೋಗಗಳನ್ನು ಆಹ್ವಾನ ಮಾಡಿದಂತೆ. ಹಾಗಾಗಿ ಬಹುತೇಕರು ಪ್ರತಿನಿತ್ಯ ತಪ್ಪದೇ ಬಾತ್‌ರೂಮ್‌ ಕ್ಲೀನ್‌ ಮಾಡುತ್ತಾರೆ. ಆದ್ರೆ ಬಾತ್‌ರೂಮ್‌ನಲ್ಲಿರು ಟ್ಯಾಪ್‌ ಮತ್ತು ನಲ್ಲಿಯ ಸ್ವಚ್ಛತೆಗೆ ಗಮನವೇ ಕೊಡುವುದಿಲ್ಲ. ಅವುಗಳಲ್ಲಿ ಮೊಂಡತನದ ಕಲೆಗಳು (stains) ಹಾಗೆಯೇ ಉಳಿದು ಬಿಡುತ್ತವೆ. ಈ ಹಠಮಾರಿ ಕಲೆಗಳನ್ನು ಹೋಗಲಾಡಿಸುವುದು ಬಲು ಕಷ್ಟದ ಕೆಲಸ. ಹಾಗಾಗಿ ಇವುಗಳ ಸ್ವಚ್ಛಗೊಳಿಸಲು ಜನ ದುಬಾರಿ ಕ್ಲೀನರ್‌ಗಳ ಮೊರೆ ಹೋಗ್ತಾರೆ. ಆದರೆ ಇದ್ಯಾವುದರ ಅವಶ್ಯಕತೆಯೇ ಇಲ್ಲ, ಈ ಕೆಲವು ಮನೆಮದ್ದುಗಳ ಸಹಾಯದಿಂದ ನಲ್ಲಿ ಮತ್ತು ಕನ್ನಡಿ ಮೇಲಿನ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಬಹುದು.

ಬಾತ್‌ರೂಮ್‌ನ ನಲ್ಲಿ, ಕನ್ನಡಿಯನ್ನು ಸ್ವಚ್ಛಗೊಳಿಸುವ ಮನೆಮದ್ದುಗಳು:

ವಿನೆಗರ್ ಮತ್ತು ನಿಂಬೆ:

ನಲ್ಲಿಯಿಂದ ಸೋಪಿನ ಕಲ್ಮಶ ಹಾಗೂ ಕಲೆಗಳನ್ನು ತೆಗೆದುಹಾಕಲು ನೀವು ವಿನೆಗರ್ ಮತ್ತು ನಿಂಬೆಹಣ್ಣನ್ನು ಬಳಸಬಹುದು. ಇದಕ್ಕಾಗಿ ಒಂದು ಹತ್ತಿ ಬಟ್ಟೆಯನ್ನು ವಿನೆಗರ್‌ನಲ್ಲಿ ಚೆನ್ನಾಗಿ ನೆನೆಸಿ  ಆ ಬಟ್ಟೆಯನ್ನು ನಲ್ಲಿಗೆ ಸುತ್ತಿ 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ಬಳಿಕ ಬಟ್ಟೆಯನ್ನು ತೆಗೆದು, ನಿಂಬೆ ಹೋಳಿನ ಮೇಲೆ ಸ್ವಲ್ಪ ಉಪ್ಪು ಸಿಂಪಡಿಸಿ, ಅದನ್ನು ನಲ್ಲಿಯ ಮೇಲೆ ಉಜ್ಜಿ. ಇದಾದ ಬಳಿಕ ನೀರಿನಿಂದ ತೊಳೆದು, ಒಣ ಬಟ್ಟೆಯಿಂದ ಒರೆಸಿದರೆ ಟ್ಯಾಪ್‌ ಹೊಸದರಂತೆ ಹೊಳೆಯುತ್ತದೆ.

ಇದನ್ನೂ ಓದಿ: ಇಲಿಗಳ ಕಾಟದಿಂದ ಶಾಶ್ವತ ಪಡೆಯಲು ನೆಲ ಒರೆಸುವ ನೀರಿಗೆ ಒಂದು ವಸ್ತುವನ್ನು ಬೆರಸಿ

ಬೇಕಿಂಗ್ ಸೋಡಾ ಸ್ಪ್ರೇ:

ಬಾತ್‌ರೂಮ್‌ನಲ್ಲಿರುವ ಕನ್ನಡಿಯ ಕಲೆಗಳನ್ನು ತೆಗೆದುಹಾಕಲು ಅಡುಗೆ ಸೋಡಾವನ್ನು ಬಳಸಬಹುದು. ಇದಕ್ಕಾಗಿ ಅಡಿಗೆ ಸೋಡಾವನ್ನು ನೀರಿನೊಂದಿಗೆ ಬೆರೆಸಿ ಸ್ಪ್ರೇ ಬಾಟಲಿಯನ್ನು ತುಂಬಿಸಿ. ಅದನ್ನು ಗಾಜಿನ ಮೇಲೆ ಸಿಂಪಡಿಸಿ ಮತ್ತು 2 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಒಂದು ನ್ಯೂಸ್‌ ಪೇಪರ್‌ ತೆಗೆದುಕೊಂಡು ವೃತ್ತಾಕಾರದ ಚಲನೆಯಲ್ಲಿ ಒರೆಸಿ. ಈ ಮನೆಮದ್ದು ಸುಲಭವಾಗಿ ಕನ್ನಡಿಯಲ್ಲಿ ಅಂಟಿರುವ ಕಲೆಗಳನ್ನು ತೆಗೆದುಹಾಕುತ್ತವೆ.

ಇದಲ್ಲದೆ ವಿನೆಗರ್‌ ಅಥವಾ ನಿಂಬೆ ರಸವನ್ನು ಹಲ್ಲುಜ್ಜುವ ಬ್ರಷ್‌ಗೆ ಹಚ್ಚಿ ನಲ್ಲಿಯನ್ನು ಚೆನ್ನಾಗಿ ತಿಕ್ಕಿ ತೊಳೆಯಿರಿ. ಇದು ಕೂಡ ತುಂಬಾನೇ ಪರಿಣಾಮಕಾರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಳಿಗಾಲದಲ್ಲಿ ಬೆಂಕಿ ಕಾಯಿಸುವಾಗ ಈ ತಪ್ಪನ್ನು ಮಾಡಲೇಬೇಡಿ! ಉಪಯೋಗಕ್ಕಿಂತ ಅಪಾಯಕಾರಿಯಾಗಬಹುದು ಎಚ್ಚರ – Kannada News | Winter Fire Safety: Protect Yourself

ಪ್ರಸ್ತುತ, ಕರ್ನಾಟಕ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ತೀವ್ರ ಚಳಿ (Winter) ಇದ್ದು ಈ ವಾತಾವರಣದಲ್ಲಿ ದೇಹವನ್ನು ರಕ್ಷಿಸಿಕೊಳ್ಳಲು, ಜನರು ವಿವಿಧ ರೀತಿಯ ಕ್ರಮಗಳನ್ನು ಅಳವಡಿಸಿಕೊಳ್ಳುವುದು ಸಹಜ. ಅವುಗಳಲ್ಲಿ ಬೆಂಕಿ ಕಾಯಿಸುವುದು ಕೂಡ ಒಂದು. ಇದು ಹಳ್ಳಿ ಅಥವಾ ಗ್ರಾಮೀಣ ಪ್ರದೇಶಗಳಲ್ಲಿ ಮತ್ತು ಸಣ್ಣ ಸಣ್ಣ ಮನೆಗಳಲ್ಲಿ, ಜನರು ಬೆಚ್ಚಗಿರಲು ಜೊತೆಗೆ ತೀವ್ರ ಚಳಿಯಿಂದ ಮುಕ್ತಿ ಪಡೆಯಲು ಅಗ್ಗಿಷ್ಟಿಕೆ (Brazier) ಅಥವಾ ಅಂಗೀತಿಯ ಬಳಕೆ ಮಾಡುತ್ತಾರೆ. ಆದರೆ ಶೀತದಿಂದ ಬೆಚ್ಚಗಿರಲು ಬಳಸುವ ಅಗ್ಗಿಷ್ಟಿಕೆ ಅಥವಾ ಮನೆಗಳಲ್ಲಿ ಸೌದೆ ಒಲೆಗಳನ್ನು ಸರಿಯಾಗಿ ಬಳಸದಿದ್ದರೆ ಆರೋಗ್ಯಕ್ಕೆ ಹಾನಿಯಾಗಬಹುದು. ಹೌದು ಇತ್ತೀಚಿನ ದಿನಗಳಲ್ಲಿ ಮನೆಯೊಳಗೆ ಬೆಂಕಿ ಒಟ್ಟಿಕೊಳ್ಳುವ ಸೌಲಭ್ಯ ಕಲ್ಪಿಸಿಕೊಂಡಿದ್ದು, ಮುಚ್ಚಿದ ಕೋಣೆಯಲ್ಲಿ ಉರಿಯುವ ಬೆಂಕಿಯ ಮುಂದೆ ಘಂಟೆಗಟ್ಟಲೆ ಕುಳಿತುಕೊಳ್ಳುತ್ತಾರೆ. ಆದರೆ ಅದಕ್ಕೂ ಮೊದಲು ಈ ಅಭ್ಯಾಸದಿಂದ ಎಷ್ಟೆಲ್ಲಾ ಅಪಾಯವಿದೆ, ಬಳಸುವಾಗ ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ.

ಅಗ್ಗಿಷ್ಟಿಕೆ ಅಥವಾ ಒಲೆಗಳಲ್ಲಿ ಸೌದೆ ಹಾಕಿ ಬೆಂಕಿ ಕಾಯಿಸುವುದರಿಂದ ಉಸಿರಾಟದ ತೊಂದರೆಗಳು, ಪ್ರಜ್ಞಾಹೀನತೆ ಮತ್ತು ತೀವ್ರತರವಾದ ಪ್ರಕರಣಗಳಲ್ಲಿ ಸಾವಿಗೂ ಕಾರಣವಾಗಬಹುದು. ಇದು ಕೇಳುವುದಕ್ಕೆ ಬಹಳ ಆಶ್ಚರ್ಯ ಉಂಟುಮಾಡಬಹುದು ಆದರೆ ಇದು ಸತ್ಯ. ಆರ್‌ಎಂಎಲ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಪ್ರೊಫೆಸರ್ ಡಾ. ಸುಭಾಷ್ ಗಿರಿ ಹೇಳುವ ಪ್ರಕಾರ, ಬ್ರೇಜಿಯರ್ ಅಥವಾ ಅಗ್ಗಿಷ್ಟಿಕೆಯನ್ನು ಯಾವಾಗಲೂ ಎಚ್ಚರಿಕೆಯಿಂದ ಬಳಸಬೇಕು. ಅದನ್ನು ಅಂಗಳ, ಮೇಲ್ಛಾವಣಿ ಅಥವಾ ಸಾಕಷ್ಟು ಗಾಳಿ ಇರುವ ಸ್ಥಳದಂತಹ ತೆರೆದ ಪ್ರದೇಶದಲ್ಲಿ ಇಡಬೇಕು. ಒಳಾಂಗಣದಲ್ಲಿ ಬ್ರೇಜಿಯರ್ ಇಟ್ಟುಕೊಳ್ಳುವುದು ಒಳ್ಳೆಯದಲ್ಲ. ಅಷ್ಟು ಅಗತ್ಯವಿದ್ದರೆ, ಹೊಗೆ ಹೊರಬರಲು ಕಿಟಕಿ ಅಥವಾ ಬಾಗಿಲನ್ನು ಸ್ವಲ್ಪ ತೆರೆದಿಡಿ ಎಂದು ಅವರು ಹೇಳುತ್ತಾರೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಗ್​​ ಶಾಕ್​​​​​: ಚಳಿಗಾಲದಲ್ಲಿ ಹೊರಗೆ ಹೋಗುವ ಮುನ್ನ ಎಚ್ಚರ

ಈ ತಪ್ಪನ್ನು ಮಾಡಬೇಡಿ;

ಮುಚ್ಚಿದ ಕೋಣೆಯಲ್ಲಿ ಒಲೆ ಇಟ್ಟು ಬೆಂಕಿ ಹಾಕುವುದರಿಂದ ಇಂಗಾಲದ ಮಾನಾಕ್ಸೈಡ್ ಉತ್ಪತ್ತಿಯಾಗುತ್ತದೆ. ಈ ಅನಿಲಕ್ಕೆ ಒಡ್ಡಿಕೊಳ್ಳುವುದರಿಂದ ತಲೆತಿರುಗುವಿಕೆ, ತಲೆನೋವು, ವಾಂತಿ ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ. ದೀರ್ಘಕಾಲದವರೆಗೆ ಒಡ್ಡಿಕೊಳ್ಳುವುದರಿಂದ ಪ್ರಜ್ಞಾಹೀನತೆ ಉಂಟಾಗುತ್ತದೆ ಮತ್ತು ಜೀವಕ್ಕೆ ಅಪಾಯವೂ ಉಂಟಾಗುತ್ತದೆ. ಜನರು ಬೆಚ್ಚಗಿರಲು ಮತ್ತು ರಾತ್ರಿ ನಿದ್ರೆ ಚೆನ್ನಾಗಿ ಬರಲು ಮಲಗುವ ಕೋಣೆಯ ಬಳಿ ಸಣ್ಣದಾಗಿ ಬೆಂಕಿ ಉರಿಯಲು ಬಿಟ್ಟಿಡುತ್ತಾರೆ ಆದರೆ ಇದು ಬಹಳ ಅಪಾಯಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಚಳಿಗಾಲದಲ್ಲಿ ಶ್ವಾಸಕೋಶವನ್ನ ಹೇಗೆ ಕಾಪಾಡಿಕೊಳ್ಳಬೇಕು? ಇಲ್ಲಿದೆ ಉಪಯುಕ್ತ ಮಾಹಿತಿ – Kannada News | How to protect Healthy lungs during winter Session, here Is narayana hospital doctor Sagar Tips

ನಾವು ಸಾಮಾನ್ಯವಾಗಿ ಆರೋಗ್ಯ (Health) ಎಂದಾಗ ತೂಕ, ಕೂದಲಿನ ಆರೈಕೆ, ಚರ್ಮದ ರಕ್ಷಣೆ ಮತ್ತು ಜೀರ್ಣಕ್ರಿಯೆಯ ಬಗ್ಗೆ ಯೋಚಿಸುತ್ತೇವೆಯೇ ಹೊರತು ಅದಕ್ಕಿಂತ ಮುಂದೆ ಹೋಗುವುದಿಲ್ಲ. ನಮಗಾಗಿ ದಣಿವಿಲ್ಲದೆ ದುಡಿಯುವ ಶ್ವಾಸಕೋಶದ (lungs) ಬಗ್ಗೆ ಯೋಚಿಸಲು ನಾವು ಒಂದು ನಿಮಿಷವನ್ನೂ ಮೀಸಲಿಡುವುದಿಲ್ಲ. ಪ್ರತಿ ವರ್ಷ ನವೆಂಬರ್-ಡಿಸೆಂಬರ್ ತಿಂಗಳ ಚಳಿಗಾಲದ (Winter Session) ಆರಂಭದಲ್ಲಿ ನಮ್ಮ ಶ್ವಾಸಕೋಶಗಳು ಉಸಿರಾಟದ ತೊಂದರೆಗೆ ಸಿಲುಕುತ್ತವೆ. ಪಟಾಕಿಗಳ ಹೊಗೆ, ಕೃಷಿ ತ್ಯಾಜ್ಯ ಸುಡುವಿಕೆ, ಮದ್ಯಪಾನದ ಹೆಚ್ಚಳ, ತಾಪಮಾನದ ಏರುಪೇರು ಮತ್ತು ನಗರಗಳಲ್ಲಿ ಆಗುತ್ತಿರುವ ನಿರಂತರ ಮಾಲಿನ್ಯ (ಕೆಲವು ನಗರಗಳಲ್ಲಿ ಗಾಳಿಯ ಗುಣಮಟ್ಟ ಸೂಚ್ಯಂಕ ಅಥವಾ ಎಕ್ಯೂಐ 500 ದಾಟಿರುವುದು ಗಮನಿಸಬಹುದು)- ಇವೆಲ್ಲವೂ ಸೇರಿ ಶ್ವಾಸಕೋಶದ ಮೇಲೆ ಅತೀವ ಒತ್ತಡ ಹೇರುತ್ತವೆ.

ಚಿಕಿತ್ಸೆಗಿಂತ ಮುನ್ನೆಚ್ಚರಿಕೆ ಯಾವಾಗಲೂ ಲೇಸು

ಸಾಮಾನ್ಯವಾಗಿ ನಿಮ್ಮ 20ರ ಹರೆಯದ ಮಧ್ಯಭಾಗದಲ್ಲಿ ಶ್ವಾಸಕೋಶದ ಸಾಮರ್ಥ್ಯವು ಜಾಸ್ತಿ ಇರುತ್ತದೆ. ನಿಮ್ಮ ದೈನಂದಿನ ಅಭ್ಯಾಸಗಳನ್ನು ಅವಲಂಬಿಸಿ ಅದರ ಸಾಮರ್ಥ್ಯ ಕಡಿಮೆಯಾಗುತ್ತದೆ. ಮಹಾನಗರಗಳಲ್ಲಿ ವಾಯು ಮಾಲಿನ್ಯವು ಸಾಮಾನ್ಯವಾಗಿದ್ದು, ಇದು ಈಗಾಗಲೇ ಅಸ್ತಮಾ ಮತ್ತು ಸಿಒಪಿಡಿಯಂಥ ಸಮಸ್ಯೆಗಳನ್ನು ಉಲ್ಬಣಗೊಳಿಸಿದೆ. ಮಾಲಿನ್ಯ ಹೆಚ್ಚಿರುವ ದಿನಗಳಲ್ಲಿ ಹೊರಗೆ ಹೋಗುವುದು ಅನಿವಾರ್ಯವಾದಾಗ ಎನ್95 ಅಥವಾ ಎನ್99 ಮಾಸ್ಕ್ ಧರಿಸುವುದು ಈಗ ಒಳ್ಳೆಯದು.

ಇದನ್ನೂ ಓದಿ: ಬೆಂಗಳೂರಿಗರಿಗೆ ಬಿಗ್​​ ಶಾಕ್​​​​​: ಚಳಿಗಾಲದಲ್ಲಿ ಹೊರಗೆ ಹೋಗುವ ಮುನ್ನ ಎಚ್ಚರ

ಈ ಸಮಸ್ಯೆಯನ್ನು ಸಶಕ್ತವಾಗಿ ಎದುರಿಸಲು ಕೆಲವು ದೈನಂದಿನ ವ್ಯಾಯಾಮವನ್ನು ಅಭ್ಯಾಸ ಮಾಡಿಕೊಳ್ಳಿ. ಕಾಯಿಲೆ ಬರುವವರೆಗೆ ಕಾಯಬೇಡಿ. ದಿನಕ್ಕೆ ಕನಿಷ್ಠ 30 ನಿಮಿಷಗಳ ಕಾಲ ಬ್ರಿಸ್ಕ್ ವಾಕಿಂಗ್ (ವೇಗದ ನಡಿಗೆ), ಸೈಕ್ಲಿಂಗ್ ಅಥವಾ ಈಜು ಮುಂತಾದ ಮಧ್ಯಮ ತೀವ್ರತೆಯ ಏರೋಬಿಕ್ ವ್ಯಾಯಾಮಗಳನ್ನು ಮಾಡಿ. ಇದು ನಿಮ್ಮ ಶ್ವಾಸಕೋಶವನ್ನು ಆರೋಗ್ಯವಾಗಿಡುವುದಲ್ಲದೆ ಅದರ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. ನೀವು ವ್ಯಾಯಾಮ ಮಾಡುವಾಗ ದೇಹಕ್ಕೆ ಹೆಚ್ಚಿನ ಆಮ್ಲಜನಕದ ಅಗತ್ಯವಿರುತ್ತದೆ, ಇದರಿಂದಾಗಿ ಶ್ವಾಸಕೋಶಗಳು ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡಲು ಕಲಿಯುತ್ತವೆ. ನಿಧಾನವಾಗಿ ಆರಂಭಿಸಿದರೂ ತೊಂದರೆ ಇಲ್ಲ, ಆದರೆ ನಿಯಮಿತವಾಗಿ ಮಾಡಿ. ಹೀಗೆ ಮಾಡಿದರೆ ನಿಮ್ಮ ಶ್ವಾಸಕೋಶ ನಿಮಗೆ ಕೃತಜ್ಞವಾಗಿರುತ್ತದೆ.

ನಿಮ್ಮ ನಗು ನಿಮ್ಮನ್ನು ಆರೋಗ್ಯವಾಗಿರಿಸಬಲ್ಲದು

ನಗು ಕೂಡ ಒಂದು ಸಣ್ಣ ವ್ಯಾಯಾಮವಿದ್ದಂತೆ. ಇದು ಶ್ವಾಸಕೋಶದಲ್ಲಿ ಉಳಿದುಹೋದ ಹಳೆಯ ಗಾಳಿಯನ್ನು ಹೊರಹಾಕಿ, ತಾಜಾ ಗಾಳಿಯು ಶ್ವಾಸಕೋಶದ ಅಂಗಾಂಶಗಳ ಆಳಕ್ಕೆ ಪ್ರವೇಶಿಸಲು ಅನುವು ಮಾಡಿಕೊಡುತ್ತದೆ. ನಿಮ್ಮ ಉಸಿರಾಟದ ವ್ಯವಸ್ಥೆಗೆ ನೀವು ನೀಡಬಹುದಾದ ಅತ್ಯಂತ ಆನಂದದಾಯಕ ವ್ಯಾಯಾಮ ಎಂದರೆ ನಗು. ನಗು ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ಎಂಡಾರ್ಫಿನ್‌ಗಳ (ನೈಸರ್ಗಿಕ ನೋವು ನಿವಾರಕಗಳು) ಬಿಡುಗಡೆಗೆ ಬೆಂಬಲ ನೀಡುತ್ತದೆ. ರಕ್ತದ ಹರಿವನ್ನು ಸರಾಗಗೊಳಿಸುತ್ತದೆ. ಒತ್ತಡ ಕಡಿಮೆಯಾದಾಗ ನರ ಮಂಡಲ ಶಾಂತಗೊಳ್ಳುತ್ತದೆ. ಅದರಿಂದ ಶ್ವಾಸನಾಳಗಳು ಸಡಿಲಗೊಳ್ಳುತ್ತವೆ. ಅಸ್ತಮಾ ಇರುವವರಿಗೆ ಒತ್ತಡ ಸಮಸ್ಯೆ ಜಾಸ್ತಿ ಮಾಡಬಹುದು, ನಗು ಅದಕ್ಕೆ ನೈಸರ್ಗಿಕ ಪ್ರತಿರೋಧವನ್ನು ಒಡ್ಡುತ್ತದೆ. ಆದ್ದರಿಂದ ನಿಮಗೆ ನಿಜವಾಗಿಯೂ ನಗು ತರುವ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಿ.

ನೀರು – ಶ್ವಾಸಕೋಶಕ್ಕೂ ಇದು ಅಮೃತ

ದೇಹದ ಒಟ್ಟಾರೆ ಆರೋಗ್ಯಕ್ಕೆ ಮಾತ್ರವಲ್ಲದೆ ಶ್ವಾಸಕೋಶಕ್ಕೂ ಸಾಕಷ್ಟು ನೀರು ಕುಡಿಯುವುದು ಬಹಳ ಮುಖ್ಯ. ಜನರು ಸಾಮಾನ್ಯವಾಗಿ ಹೆಚ್ಚು ನೀರು ಕುಡಿಯಬೇಕೆಂದು ತಿಳಿದಿದ್ದರೂ, ಚಳಿಗಾಲದಲ್ಲಿ ಇದನ್ನು ನಿರ್ಲಕ್ಷಿಸುತ್ತಾರೆ. ಚಳಿಗಾಲದಲ್ಲಿ ನೀರು ವಿಶೇಷವಾಗಿ ಮುಖ್ಯವಾಗಿದೆ ಏಕೆಂದರೆ ನಿರ್ಜಲೀಕರಣ ಅಥವಾ ಡಿಹೈಡ್ರೇಶನ್ ಶ್ವಾಸನಾಳದಲ್ಲಿನ ಲೋಳೆಯನ್ನು ದಪ್ಪವಾಗಿಸುತ್ತದೆ. ಸುಗಮ ಉಸಿರಾಟಕ್ಕೆ ಲೋಳೆಯು ತೆಳುವಾಗಿರುವುದು ಅಗತ್ಯ. ದೇಹದಲ್ಲಿ ನೀರಿನಂಶ ಕಡಿಮೆಯಾದಾಗ ಈ ಲೋಳೆಯು ಜಿಗುಟು ಮತ್ತು ದಪ್ಪವಾಗುತ್ತದೆ. ಇದರಿಂದ ಶ್ವಾಸನಾಳದ ಸಿಲಿಯಾ ಎಂಬ ಅಂಗಾಶಗಳಿಗೆ ಆ ಲೋಳೆಯನ್ನು ಹೊರಹಾಕಲು ಕಷ್ಟವಾಗುತ್ತದೆ ಮತ್ತು ಶ್ವಾಸಕೋಶದಲ್ಲಿ ಕಫ ಸಂಗ್ರಹವಾಗುತ್ತದೆ. ಇದು ಬ್ಯಾಕ್ಟೀರಿಯಾಗಳ ಬೆಳವಣಿಗೆಗೆ ದಾರಿಯಾಗಿ ನ್ಯುಮೋನಿಯಾದಂತಹ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ನೀರು ಕುಡಿಯುವುದನ್ನು ನಿರ್ಲಕ್ಷಿಸಬೇಡಿ.

ಶ್ವಾಸಕೋಶಕ್ಕೂ ಬೇಕು ಪೌಷ್ಟಿಕ ಆಹಾರ

ಶ್ವಾಸಕೋಶದ ಆರೋಗ್ಯ ಕಾಪಾಡಿಕೊಳ್ಳಲು ನೀವು ಉರಿಯೂತ ವಿರೋಧಿ ಆಹಾರಗಳ ಸೇವನೆ ಕಡೆಗೆ ಗಮನ ಹರಿಸಬೇಕು. ಬೆರ್ರಿ ಹಣ್ಣುಗಳು, ಅರಿಶಿನ, ಹಸಿರು ಎಲೆಗಳ ತರಕಾರಿ ಮತ್ತು ಒಮೆಗಾ-3 ಸಮೃದ್ಧವಾಗಿರುವ ಆಹಾರಗಳು (ಮೀನು, ಆಕ್ರೋಟ್) ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಅಸ್ತಮಾ ಮತ್ತು ಸಿಓಪಿಡಿ ಹೆಚ್ಚಾಗುವುದನ್ನು ತಡೆಯುತ್ತದೆ. ಹರ್ಬಲ್ ಟೀ ಅಥವಾ ಉಗುರುಬೆಚ್ಚಗಿನ ನೀರಿನಂತಹ ದ್ರವ ಪದಾರ್ಥಗಳು ಕಫವನ್ನು ಕರಗಿಸಲು ಸಹಾಯ ಮಾಡುತ್ತವೆ. ಶುಷ್ಕ ಅಥವಾ ಮಾಲಿನ್ಯಭರಿತ ಹವಾಮಾನದಲ್ಲಿ ಕೆಫೀನ್ (ಕಾಫಿ/ಟೀ) ಮತ್ತು ಮದ್ಯಪಾನವನ್ನು ಮಿತಿಗೊಳಿಸುವುದು ಉತ್ತಮ.

ವೈದ್ಯರ ಜೊತೆ ಭೇಟಿಯಾಗಲು ಸರಿಯಾದ ಸಮಯ ಯಾವುದು?

ನಾವು ಸಾಮಾನ್ಯವಾಗಿ ಮನೆಮದ್ದುಗಳ ಮೊರೆ ಹೋಗುತ್ತೇವೆ. ಆದರೆ ಆರೋಗ್ಯವು ಹದಗೆಟ್ಟಾಗ ಮನೆ ಮದ್ದಿಗಿಂತ ವೈದ್ಯರನ್ನು ಭೇಟಿ ಮಾಡುವುದು ಬಹಳ ಮುಖ್ಯ. ಎಂಟು ವಾರ ಅಥವಾ ಅದಕ್ಕಿಂತ ಹೆಚ್ಚು ಕಾಲ ಇರುವ ಕೆಮ್ಮು, ದೈನಂದಿನ ಕೆಲಸಗಳ ಸಮಯದಲ್ಲಿ ಉಸಿರಾಟದ ತೊಂದರೆ, ಕೆಮ್ಮಿದಾಗ ರಕ್ತ ಅಥವಾ ಲೋಳೆ ಬರುವುದು, ಅಥವಾ ಪದೇ ಪದೇ ಬರುವ ನ್ಯುಮೋನಿಯಾದಂತಹ ಎದೆಯ ಸೋಂಕುಗಳು ಕಾಣಿಸಿಕೊಳ್ಳುವುದು ಅಪಾಯದ ಮುನ್ಸೂಚನೆಗಳಾಗಿವೆ. ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರನ್ನು ಭೇಟಿ ಮಾಡಿ.

ನೆನಪಿಡಿ, ನಿಮ್ಮ ಶ್ವಾಸಕೋಶಗಳು ಶಕ್ತಿಯುತವಾಗಿರುತ್ತವೆ ಎನ್ನುವುದೇನೋ ನಿಜ, ಆದರೆ ಅವು ಕೂಡ ದುರ್ಬಲಗೊಳ್ಳಬಹುದು. ಆದ್ದರಿಂದ ನಿಮ್ಮ ಉಸಿರಾಟದ ಗುಣಮಟ್ಟವು ನಿಮ್ಮ ಜೀವನದ ಗುಣಮಟ್ಟವನ್ನು ನಿರ್ಧರಿಸುತ್ತದೆ. ಹಾಗಾಗಿ ನಿರ್ಲಕ್ಷ್ಯ ಮಾಡದಿರಿ. ಶ್ವಾಸಕೋಶದ ಬಗ್ಗೆ ಮುನ್ನೆಚ್ಚರಿಕೆ ವಹಿಸಿ.

ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

2025ರಲ್ಲಿ 47 ಲಕ್ಷ ರೂ. ಖರ್ಚು ಮಾಡಿದ ಬೆಂಗಳೂರಿನ ದಂಪತಿ – Kannada News | Content Creators’ Annual Spending Goes Viral: Bengaluru Duo’s Rs 47 Lakh Budget

ಬೆಂಗಳೂರು, ಜ.5: ಬೆಂಗಳೂರು ಮೂಲದ ಕಂಟೆಂಟ್ ಕ್ರಿಯೇಟರ್ ದಂಪತಿ (Bengaluru couple expenses) ತಮ್ಮ ವರ್ಷದ ಖರ್ಚಿನ ಬಗ್ಗೆ ಸೋಶಿಯಲ್​​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಅವರು ಹಂಚಿಕೊಂಡಿರುವ ವಾರ್ಷಿಕ ಖರ್ಚಿನ ಬಗ್ಗೆ ನೆಟ್ಟಿಗರನ್ನು ದಿಗ್ಭ್ರಮೆಗೊಳಿಸಿದೆ. ಪ್ರಕೃತಿ ಅರೋರಾ ಮತ್ತು ಆಶಿಶ್ ಕುಮಾರ್ ಅವರು ಕಳೆದ ವರ್ಷಗಳಿಂದ ಬೆಂಗಳೂರಿನಲ್ಲಿ ವಾಸಿಸುತ್ತಿದ್ದಾರೆ. ಬಾಡಿಗೆ ಮತ್ತು ಪ್ರಯಾಣದಿಂದ ಹಿಡಿದು ಫಿಟ್‌ನೆಸ್ ಮತ್ತು ಶಾಪಿಂಗ್‌ವರೆಗೆ ಎಷ್ಟು ಖರ್ಚು ಮಾಡಿದ್ದಾರೆ ಎಂಬ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಬೆಂಗಳೂರಿನಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿರುವ ಇವರ ವಾರ್ಷಿಕ ಬಾಡಿಗೆ 5 ಲಕ್ಷ ರೂ. ಜತೆಗೆ ಫಿಟ್‌ನೆಸ್‌ ಕೂಡ ಖರ್ಚು ಮಾಡಿದ್ದಾರೆ. ಇದಕ್ಕಾಗಿ ವೈಯಕ್ತಿಕ ಟ್ರೈನರ್​​​ನ್ನು ಕೂಡ ನೇಮಕಾ ಮಾಡಿಕೊಂಡಿದ್ದಾರೆ. ಇದಕ್ಕಾಗಿ ವರ್ಷಕ್ಕೆ ಒಟ್ಟು 1 ಲಕ್ಷ ರೂ. ಖರ್ಚಾಗುತ್ತಿತ್ತು. ದಿನಸಿ, ಸಲಾಡ್‌ಗಳನ್ನು ಆರ್ಡರ್ ಮಾಡಿ ಮತ್ತು ಹೊರಗೆ ತಿನ್ನುವುದರಿಂದ ವಾರ್ಷಿಕ 2.5 ಲಕ್ಷ ರೂ ಖರ್ಚಾಗಿದೆ ಎಂದು ಹೇಳಿದ್ದಾರೆ. ಇದಲ್ಲದೆ, ಮನೆ ಕೆಲಸದವರಿಗೆ, ಅಪ್ಲಿಕೇಶನ್ ಚಂದಾದಾರಿಕೆಗಳು ಒಟ್ಟು 1.5 ಲಕ್ಷ ರೂ ಖರ್ಚು ಮಾಡಲಾಗಿದೆ. ಆರೈಕೆ ಮತ್ತು ಕ್ಯಾಬ್ ಪ್ರಯಾಣದಂತಹ ಇತರ ವೆಚ್ಚಗಳು ಒಟ್ಟು 1.3 ಲಕ್ಷ ಖರ್ಚು ಮಾಡಿದ್ದಾರೆ.

ವೈರಲ್​​ ಪೋಸ್ಟ್​ ಇಲ್ಲಿದೆ ನೋಡಿ:

ಇನ್ನು ಈ ದಂಪತಿ ಹೆಚ್ಚು ಖರ್ಚು ಮಾಡಿದ್ದು ಪ್ರವಾಸಕ್ಕೆ, ವರ್ಷದಲ್ಲಿ 63 ವಿಮಾನಗಳಲ್ಲಿ ಪ್ರಯಾಣಿಸಿದ್ದಾರೆ. 2025ರಲ್ಲಿ 13 ದೇಶಗಳಿಗೆ ಭೇಟಿ ನೀಡಿದ್ದಾರೆ. ಹೋಟೆಲ್‌ಗಳು ಮತ್ತು ಏರ್ ಬೆಡ್ ಅಂಡ್ ಬ್ರೇಕ್‌ಫಾಸ್ಟ್ ಗಳಲ್ಲಿ 121 ರಾತ್ರಿ ಕಳೆದಿದ್ದಾರೆ. ಒಟ್ಟು 29 ಲಕ್ಷ ಖರ್ಚು ಮಾಡಿದ್ದಾರೆ. ಕಂಟೆಂಟ್ ಕ್ರಿಯೇಟರ್ ಆಗಿರುವ ಈ ದಂಪತಿ ಇದಕ್ಕಾಗಿ 2.5 ಲಕ್ಷ ರೂ ಖರ್ಚು ಮಾಡಿದ್ದಾರೆ. ಇದರ ಜತೆಗೆ ಇತರ ವಸ್ತುಗಳಿಗಾಗಿ 4.5 ಲಕ್ಷ ರೂ ಖರ್ಚು ಮಾಡಿದ್ದಾರೆ. 2025ರಲ್ಲಿ ಅವರ ವಾರ್ಷಿಕ ಖರ್ಚು ಸುಮಾರು 47 ಲಕ್ಷ ರೂ. ಎಂದು ಹೇಳಿದ್ದಾರೆ.

ಇದನ್ನೂ ಓದಿ: ಈ ಯೋಜನೆಗೆ ಕೇಂದ್ರದ ಅನುಮೋದನೆ ಸಿಕ್ಕರೆ ಬೆಂಗಳೂರಿನಿಂದ ಪುಣೆಗೆ ತಲುಪಲು 7 ಗಂಟೆ ಸಾಕು

ಇನ್ನು ಇವರು ಈ ಪೋಸ್ಟ್​​ನ್ನು ನೋಡಿ ಸೋಶಿಯಲ್​​​ ಮೀಡಿಯಾದಲ್ಲಿ ನೆಟ್ಟಿಗರು ಕಮೆಂಟ್ ಮಾಡಿದ್ದಾರೆ. ಒಬ್ಬರು ತಿಂಗಳಿಗೆ ಎಷ್ಟು ದುಡಿಯುತ್ತೀರಾ ಎಂದು ಒಬ್ಬರು ಕೇಳಿದ್ದಾರೆ. ಇನ್ನೊಬ್ಬರು ನನಗು ಪ್ರವಾಸ ಮಾಡುವ ಆಸೆ ಇದೆ. ಆದ್ರೆ ಗಳಿಕೆ ಕಡಿಮೆ ಎಂದು ಹೇಳಿದ್ದಾರೆ. ಹಣ ಗಳಿಸಿ ಏನ್​​ ಮಾಡೋದು, ಇರುವಷ್ಟು ದಿನ ಸುಖವಾಗಿರುವ ಎಂದು ಮತ್ತೊಬ್ಬರು ಕಮೆಂಟ್​​ ಮಾಡಿದ್ದಾರೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Exit mobile version