ಮಿಲ್ಲೆಟ್ ಟು ಮೈಕ್ರೋಚಿಪ್: ಹೇಗಿರಲಿದೆ ಗೊತ್ತಾ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಭಾಗಿಯಾಗಲಿರುವ ಕರ್ನಾಟಕದ ಸ್ತಭ್ಧಚಿತ್ರ? – Kannada News | Karnataka’s ‘Millet to Microchip’ Tableau Set to Shine at the Republic Day 2026 Parade

ಬೆಂಗಳೂರು, ಜನವರಿ 23: ಜನವರಿ 26ರಂದು ದೆಹಲಿಯ ಕೆಂಪು ಕೋಟೆಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಪರೇಡ್​​​ನಲ್ಲಿ ಕರ್ನಾಟಕದಿಂದ ಮಿಲ್ಲೆಟ್ ಟು ಮೈಕ್ರೋಚಿಪ್ ಪರಿಲ್ಪನೆಯ ಸ್ತಬ್ಧಚಿತ್ರ ಭಾಗವಹಿಸಲಿದೆ. ಕೃಷಿಯಿಂದ ಕೈಗಾರಿಕೆವರೆಗೆ ಹಾಗೂ ಆಧುನಿಕ ತಂತ್ರಜ್ಞಾನದ ಬಳಕೆಯಲ್ಲಿ ನಮ್ಮ ರಾಜ್ಯ ಮುಂಚೂಣಿಯಲ್ಲಿದ್ದು, ಈ ಪಯಣವನ್ನು ಸಂಕೇತಿಸುವಂತೆ ಟ್ಯಾಬ್ಲೋ ಇರಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಆಯುಕ್ತರಾದ ಹೇಮಂತ್ ಎಂ ನಿಂಬಾಳ್ಕರ್ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯದ ಪರವಾಗಿ ಗಣರಾಜ್ಯೋತ್ಸವದ ಪಥಸಂಚಲನ ಮತ್ತು ಭಾರತ ಪರ್ವದಲ್ಲಿ ಪಾಲ್ಗೊಳ್ಳುವ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ತನ್ನ ವೈಶಿಷ್ಟ್ಯಪೂರ್ಣ ಸ್ತಬ್ಧಚಿತ್ರಗಳ ಮೂಲಕವೇ ದೇಶದ ಗಮನ ಸೆಳೆಯುತ್ತಿದೆ. ವರ್ಷದಿಂದ ವರ್ಷಕ್ಕೆ ಹೊಸ ಮೈಲಿಗಲ್ಲುಗಳನ್ನು ಸ್ಥಾಪಿಸುತ್ತಲೇ ಸಾಗಿದೆ. ಈ ಬಾರಿ ಕೃಷಿ, ಶಿಕ್ಷಣ, ವಿಜ್ಞಾನ, ಉನ್ನತ ತಂತ್ರಜ್ಞಾನ ಹಾಗೂ ಮೈಕ್ರೋಚಿಪ್‍ಗಳ ಉತ್ಪಾದನೆಯಲ್ಲಿ ಸಾಧಿಸಿರುವ ಸಮತೋಲನಯುತ ಪ್ರಗತಿಯನ್ನು ಸ್ತಬ್ಧಚಿತ್ರದ ಮೂಲಕ ತೋರಿಸಲಾಗ್ತಿದೆ. ಸಿರಿಧಾನ್ಯಗಳ ಉತ್ಪಾದನೆ ಮತ್ತು ಪೌಷ್ಟಿಕ ಆಹಾರದ ಬಳಕೆಯನ್ನು ಉತ್ತೇಜಿಸುವಲ್ಲಿ ಕರ್ನಾಟಕವು ದೇಶದ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ಮಾಹಿತಿ ತಂತ್ರಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಬೆಂಗಳೂರು ಜಾಗತಿಕವಾಗಿ ಗಮನ ಸೆಳೆದಿದೆ. ಮೈಕ್ರೋಚಿಪ್, ಎಲೆಕ್ಟ್ರಾನಿಕ್ಸ್ ಹಾಗೂ ಸೆಮಿಕಂಡಕ್ಟರ್ ವಲಯಗಳಲ್ಲಿನ ಆವಿಷ್ಕಾರಗಳು ಕರ್ನಾಟಕವನ್ನು ಶ್ರೇಷ್ಠ ತಂತ್ರಜ್ಞಾನ ಕೇಂದ್ರವಾಗಿಸಿದೆ. ಇವೆಲ್ಲವೂ ಈ ಬಾರಿ ಸ್ತಬ್ಧಚಿತ್ರದಲ್ಲಿ ಮೇಳೈಸಲಿವೆ.

ಇದನ್ನೂ ಓದಿ: ಗಣರಾಜ್ಯೋತ್ಸವದಂದು ದೆಹಲಿಯ ಕರ್ತವ್ಯ ಪಥದಲ್ಲಿ ಏನೆಲ್ಲಾ ಕಾರ್ಯಕ್ರಮಗಳು ನಡೆಯಲಿವೆ? ಮುಖ್ಯ ಅತಿಥಿಗಳ್ಯಾರು?

2026ರ ಜನವರಿ 26ರಂದು ನಡೆಯುವ ದೆಹಲಿ ಗಣರಾಜ್ಯೋತ್ಸವದ ಸ್ತಬ್ಧಚಿತ್ರಕ್ಕಾಗಿ ಇಲಾಖೆಯು ಕಿತ್ತೂರು ರಾಣಿ ಚೆನ್ನಮ್ಮ ಮತ್ತು ರಾಣಿ ಅಬ್ಬಕ್ಕದೇವಿ, ಕರ್ನಾಟಕ ಪುಷ್ಪ ವೈಭವ, ಹಲಗಲಿ ಬೇಡರು, ಸಿರಿಧಾನ್ಯದಿಂದ ಮೈಕ್ರೋಚಿಪ್​​ವರೆಗೆ ಎಂಬ ನಾಲ್ಕು ವಿಷಯಗಳನ್ನು ಆಯ್ಕೆ ಮಾಡಿ ಕಳುಹಿಸಿತ್ತು. ಆ ಪೈಕಿ ಮೊದಲ ಸಭೆಯಲ್ಲಿಯೇ ಸಿರಿಧಾನ್ಯದಿಂದ ಮೈಕ್ರೋಚಿಪ್ ವರೆಗೆ ಎಂಬ ವಿಷಯವನ್ನು ಪರಿಣತರ ಸಮಿತಿಯು ಒಮ್ಮತದಿಂದ ಅಂತಿಮಗೊಳಿಸಿತ್ತು.

ಸ್ತಬ್ಧಚಿತ್ರದಲ್ಲಿ ಏನಿರಲಿದೆ?

ಸ್ತಬ್ಧಚಿತ್ರದ ಮುಂಭಾಗದಲ್ಲಿ ಉದಯಿಸುತ್ತಿರುವ ಸೂರ್ಯ ನಿರಂತರ ಪ್ರಗತಿ ಮತ್ತು ಚಲನಶೀಲತೆಯ ಸಂಕೇತವಾಗಿ ಹೊಳೆಯುತ್ತಿರಲಿದೆ. ದೊಡ್ಡ ಮಡಿಕೆಗಳಲ್ಲಿ ಪ್ರದರ್ಶಿಸಲಾದ ವಿವಿಧ ಸಿರಿಧಾನ್ಯಗಳು ಕೃಷಿ ಸಮೃದ್ಧಿಯನ್ನು ತೋರಿಸಲಿವೆ. ಬೆಳೆದ ಫಸಲನ್ನು ಎತ್ತಿಹಿಡಿದಿರುವ ರೈತ, ಆತನ ಪತ್ನಿ ಹಾಗೂ ಉಲ್ಲಾಸದಿಂದ ಕಾಣಿಸುತ್ತಿರುವ ಮಕ್ಕಳು ಗ್ರಾಮೀಣ ಶಕ್ತಿಯ ಜೀವಂತ ಚಿತ್ರಣವಾಗಿದ್ದಾರೆ. ಮಧ್ಯಭಾಗದಲ್ಲಿ ತಿರುಗುತ್ತಿರುವ ಅಣುವಿನ ಮಾಲಿಕ್ಯೂಲ್‍ಗಳ ಮಾದರಿ ತಂತ್ರಜ್ಞಾನ ಪ್ರಗತಿಯನ್ನು ಸೂಚಿಸುತ್ತದೆ. ಕೃತಕ ಬುದ್ಧಿಮತ್ತೆಯ ರೋಬೋಟ್ ಕಂಪ್ಯೂಟರ್​​ನಲ್ಲಿ ಕಾರ್ಯನಿರ್ವಹಿಸುತ್ತಿರುವುದು ಭವಿಷ್ಯದ ಆವಿಷ್ಕಾರಗಳ ಸಂಕೇತವಾಗಿದೆ.

ಇಕ್ಕೆಲಗಳಲ್ಲಿ ಬಾಹ್ಯಾಕಾಶ ಕ್ಷೇತ್ರವನ್ನು ಪ್ರತಿನಿಧಿಸುವ ರಾಕೆಟ್ ಮತ್ತು ವಿಜ್ಞಾನಿ, ಟೆಲಿಮೆಡಿಸಿನ್ ಮೂಲಕ ಮಾರ್ಗದರ್ಶನ ನೀಡುತ್ತಿರುವ ವೈದ್ಯೆ ಹಾಗೂ ಕೃಷಿಭೂಮಿಯಲ್ಲಿ ಡ್ರೋನ್ ಬಳಸುತ್ತಿರುವ ಮಹಿಳೆಯು ವಿಜ್ಞಾನ, ಆರೋಗ್ಯ ಮತ್ತು ಆಧುನಿಕ ಕೃಷಿಯ ಸಮನ್ವಯವನ್ನು ತೋರಿಸುತ್ತಾರೆ. ಕೈಗಾರಿಕಾ ವಲಯವನ್ನು ಪ್ರತಿನಿಧಿಸುವಂತೆ ಯಂತ್ರೋಪಕರಣಗಳೊಂದಿಗೆ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಉತ್ಪಾದನಾ ಶಕ್ತಿಗೆ ಸಾಕ್ಷಿಯಾಗಿದ್ದಾರೆ. ಇಡೀ ಸ್ತಬ್ಧಚಿತ್ರದ ಆಕರ್ಷಣೆಯ ಕೇಂದ್ರಬಿಂದುವಾಗಿ ಕೊನೆಯಲ್ಲಿ ಮಿನುಗುತ್ತಿರುವ ಮೈಕ್ರೋಚಿಪ್ ಹಾಗೂ ಬಂಗಾರದ ಬಣ್ಣದ ಸರ್ಕ್ಯೂಟ್‍ಗಳ ಮಧ್ಯೆ ರೋಬೋಟ್‍ನ ಮುಖವನ್ನು ಸಾಂಕೇತಿಕವಾಗಿ ಚಿತ್ರಿಸಲಾಗಿದೆ. ಇದು ಪರಂಪರೆಯಿಂದ ಪ್ರಗತಿಯತ್ತ, ಮಣ್ಣಿನಿಂದ ಯಂತ್ರಗಳತ್ತ ಸಾಗುತ್ತಿರುವ ಕರ್ನಾಟಕದ ಆತ್ಮನಿರ್ಭರ ಪಯಣದ ಸಾರವಾಗಿದೆ ಎಂದು ಇಲಾಖೆ ತಿಳಿಸಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:55 pm, Fri, 23 January 26

Source link

ಚಿಕ್ಕ ಮಕ್ಕಳೆಂದೂ ಲೆಕ್ಕಿಸದೆ ಬಾಸುಂಡೆ ಬರುವಂತೆ ಥಳಿಸಿದ ದುರುಳರು! – Kannada News | Doddaballapur Child Assault: Two Boys Brutally Attacked, One Arm Broken

ಚಿಕ್ಕ ಮಕ್ಕಳೆಂದೂ ಲೆಕ್ಕಿಸದೆ ಬಾಸುಂಡೆ ಬರುವಂತೆ ಥಳಿಸಿದ ದುರುಳರು!

ಬೆಂಗಳೂರು ಗ್ರಾಮಾಂತರ, ಜನವರಿ 23: ಜಿಲ್ಲೆಯ ದೊಡ್ಡಬಳ್ಳಾಪುರ (Bengaluru Rural) ನಗರದಲ್ಲಿ ಚಿಕ್ಕ ಮಕ್ಕಳ ಮೇಲೆ ಅಮಾನವೀಯ ಹಲ್ಲೆ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ. ದೊಡ್ಡಬಳ್ಳಾಪುರದ ಮುತ್ಯಾಲಮ್ಮ ದೇವಸ್ಥಾನದ ಬಳಿ 3 ಮತ್ತು 7 ವರ್ಷದ ಇಬ್ಬರು ಗಂಡು ಮಕ್ಕಳನ್ನು ದುರುಳರು ನಿರ್ದಯವಾಗಿ ಹಲ್ಲೆ ಮಾಡಿದ್ದು, ಮಕ್ಕಳನ್ನ ವಿಕ್ಟೋರಿಯಾ ಆಸ್ವತ್ರೆಗೆ ರವಾನಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಮಗುವಿನ ಕೈ ಮುರಿದಿರುವ ನಿರ್ದಯಿಗಳು

ಹಲ್ಲೆಯಿಂದ ಮಕ್ಕಳ ಮೈ, ಕೈ ಮತ್ತು ಕಾಲುಗಳ ಮೇಲೆ ತೀವ್ರ ಬಾಸುಂಡೆಗಳು ಉಂಟಾಗಿದ್ದು, ಒಂದು ಮಗುವಿನ ಕೈ ಮುರಿದಿದೆ ಎಂದು ಹೇಳಲಾಗಿದೆ. ಚಿಕ್ಕ ಮಕ್ಕಳು ಎಂಬುದನ್ನೂ ಲೆಕ್ಕಿಸದೇ ಹಲ್ಲೆ ನಡೆಸಿರುವ ಈ ವಿಕೃತ ಕೃತ್ಯವು ಮಾನವೀಯತೆಯನ್ನೇ ಪ್ರಶ್ನಿಸುವಂತಾಗಿದೆ. ಗಾಯಗೊಂಡ ಮಕ್ಕಳ ಸ್ಥಿತಿಯನ್ನು ಕಂಡ ಸ್ಥಳೀಯರು ಮಕ್ಕಳ ಸಹಾಯವಾಣಿ (ಚೈಲ್ಡ್ ಹೆಲ್ಪ್‌ಲೈನ್) ಗೆ ದೂರು ನೀಡಿದ್ದು, ದೂರಿನನ್ವಯ ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ ಹಲ್ಲೆ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣವೇ ಮಕ್ಕಳನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿ, ಚಿಕಿತ್ಸೆ ಕೊಡಿಸಲಾಗಿದೆ.

ತಾಯಿಯಿಲ್ಲದ ಸಮಯದಲ್ಲಿ ಘಟನೆ

ಮಕ್ಕಳ ತಾಯಿ ಗಾರ್ಮೆಂಟ್ಸ್ ಕೆಲಸಕ್ಕೆ ತೆರಳಿದ್ದ ವೇಳೆ ಅಪರಿಚಿತರು ಮಕ್ಕಳ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದು ಬಂದಿದೆ. ಘಟನೆಯ ನಂತರ ಹೆದರಿಕೊಂಡಿರುವ ಮಕ್ಕಳು, ಹಲ್ಲೆಯ ಬಗ್ಗೆ ಸ್ಪಷ್ಟವಾಗಿ ಏನೂ ಹೇಳಲು ಸಾಧ್ಯವಾಗದೆ ಆತಂಕದಲ್ಲಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಪ್ರಕರಣ ದಾಖಲಿಸಿಕೊಂಡಿದ್ದು, ಹಲ್ಲೆ ನಡೆಸಿದ ದುರುಳರ ಪತ್ತೆಗೆ ತನಿಖೆ ಮುಂದುವರಿದಿದೆ. ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಸಾರ್ವಜನಿಕರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Video: ಅಯೋಧ್ಯೆಯ ರಾಮ ಮಂದಿರಕ್ಕೆ ಬಂದಿಳಿದ 286 ಕೆಜಿ ತೂಕದ ಸ್ವರ್ಣ ಧನಸ್ಸು – Kannada News | Ayodhya Ram Mandir: Hands of Shakti, Spirit of Ram: Golden Kodanda Reaches the Sanctum

ಅಯೋಧ್ಯೆ, ಜನವರಿ 23: ಒಡಿಶಾದಿಂದ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರಕ್ಕೆ 286 ಕೆಜಿ ತೂಕದ ಸ್ವರ್ಣ ಧನಸ್ಸು ಬಂದಿಳಿದಿದೆ. ಈ ಬಿಲ್ಲನ್ನು ತಮಿಳುನಾಡಿನ ಕಾಂಚೀಪುರಂನ ಮಹಿಳಾ ಕುಶಲಕರ್ಮಿಗಳು ಸಿದ್ಧಪಡಿಸಿದ್ದಾರೆ. ಚಿನ್ನ, ಬೆಳ್ಳಿ,ತಾಮ್ರ, ಸತು ಮತ್ತು ಕಬ್ಬಿಣದಿಂದ ಈ ಬಿಲ್ಲನ್ನು ರಚಿಸಲಾಗಿದೆ. ಈ ಬಿಲ್ಲನ್ನು ಒಡಿಶಾದಲ್ಲಿ ಸಿದ್ಧಪಡಿಸಲಾಗಿದೆ. ಅಯೋಧ್ಯೆಯ ರಾಮ ಮಂದಿರ ನಿರ್ಮಾಣ ಕಾರ್ಯ ಪೂರ್ಣಗೊಂಡಿದೆ. ಭಕ್ತರ ಸಂಖ್ಯೆಯೂ ಹೆಚ್ಚಿದೆ.

 

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಜನವರಿ 24ರಿಂದ 27ರವರೆಗೆ, ಸತತ ನಾಲ್ಕು ದಿನ ದೇಶದ ಎಲ್ಲಾ ಬ್ಯಾಂಕುಗಳಿಗೆ ರಜೆ – Kannada News | Bank employees strike on Jan 27th, banks close for 4 days from Saturday to Tuesday

ನವದೆಹಲಿ, ಜನವರಿ 23: ಬ್ಯಾಂಕುಗಳು ನಾಳೆಯಿಂದ (ಜ. 24) ಸತತ ನಾಲ್ಕು ದಿನ ಬಂದ್ (Bank holiday) ಆಗಿರುತ್ತವೆ. ಜನವರಿ 24, ಶನಿವಾರದಿಂದ ಜನವರಿ 27, ಮಂಗಳವಾರದವರೆಗೂ ಬ್ಯಾಂಕುಗಳ ಬಾಗಿಲು ಮುಚ್ಚಲಾಗಿರುತ್ತದೆ. ತುರ್ತಾಗಿ ಬ್ಯಾಂಕ್ ಕೆಲಸ ಇದ್ದವರು ಇವತ್ತಿಗೇ ಪ್ಲಾನ್ ಮಾಡಿಕೊಳ್ಳಬಹುದು. ಬ್ಯಾಂಕ್ ನೌಕರರ ಮುಷ್ಕರ (Bank workers strike) ಹಾಗೂ ಗಣರಾಜ್ಯೋತ್ಸವ (Republic Day) ಇರುವ ಹಿನ್ನೆಲೆಯಲ್ಲಿ ಸತತ ನಾಲ್ಕು ದಿನ ಬ್ಯಾಂಕುಗಳಿಗೆ ರಜೆ ಇದೆ.

ಬ್ಯಾಂಕುಗಳಿಗೆ ರಜೆ

  • ಜ. 24: ನಾಲ್ಕನೇ ಶನಿವಾರದ ಪ್ರಯುಕ್ತ ರಜೆ
  • ಜ. 25: ಭಾನುವಾರದ ರಜೆ
  • ಜ. 26, ಸೋಮವಾರ: ಗಣರಾಜ್ಯೋತ್ಸವ ಅಂಗವಾಗಿ ರಜೆ
  • ಜ. 27, ಮಂಗಳವಾರ: ಬ್ಯಾಂಕ್ ನೌಕರರ ದೇಶವ್ಯಾಪಿ ಮುಷ್ಕರ.

ಜನವರಿ 24ರಿಂದ 27ರವರೆಗೂ ದೇಶವ್ಯಾಪಿ ಎಲ್ಲಾ ಬ್ಯಾಂಕುಗಳಿಗೂ ರಜೆ ಅನ್ವಯ ಆಗುತ್ತದೆ. ಬ್ಯಾಂಕ್ ನೌಕರರನ್ನು ಸಮಾಧಾನಗೊಳಿಸಿ ಮುಷ್ಕರ ನಿಲ್ಲಿಸಲು ಸರ್ಕಾರ ಪ್ರಯತ್ನಿಸುತ್ತಿದೆ. ನಿನ್ನೆ (ಜ. 22) ಕೂಡ ದೆಹಲಿಯಲ್ಲಿ ಸಂಧಾನ ಸಭೆ ನಡೆಯಿತು. ಆದರೂ ಕೂಡ ರಾಜಿ ಅಥವಾ ಪರಿಹಾರ ಬರಲಿಲ್ಲ. ಇವತ್ತೂ ಕೂಡ ಮಾತುಕತೆಗಳು ನಡೆಯಲಿವೆ. ಸಂಜೆ ಈ ಸಂಧಾನ ಯಶಸ್ವಿಯಾಗಿ ನೌಕರರ ಸಂಘ ಸಮಾಧಾನಗೊಂಡರೆ ಜನವರಿ 27ರಂದು ಮುಷ್ಕರವನ್ನು ಕೈಬಿಡಲಾಗಬಹುದು. ಇಲ್ಲದಿದ್ದರೆ ಮಂಗಳವಾರವೂ ಬ್ಯಾಂಕ್ ಬಂದ್ ಆಗಿರುತ್ತದೆ.

ಇದನ್ನೂ ಓದಿ: ಎಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ

ಬ್ಯಾಂಕ್ ನೌಕರರ ಮುಷ್ಕರಕ್ಕೆ ಬೇಡಿಕೆಗಳೇನು?

ಕೆಲ ಕೇಂದ್ರ ಸರ್ಕಾರಿ ಸಂಸ್ಥೆಗಳಲ್ಲಿ ಇರುವಂತೆ ಬ್ಯಾಂಕುಗಳಲ್ಲೂ ವಾರಕ್ಕೆ ಐದು ದಿನ ಕೆಲಸದ ನಿಯಮ ತರಬೇಕೆಂಬುದು ನೌಕರರ ಪ್ರಮುಖ ಒತ್ತಾಯವಾಗಿದೆ. ಸದ್ಯ ಪ್ರತೀ ಭಾನುವಾರ ರಜೆ ಇದೆ. ತಿಂಗಳಲ್ಲಿ ಎರಡನೇ ಮತ್ತು ನಾಲ್ಕನೇ ಶನಿವಾರಗಳಂದು ರಜೆ ಇದೆ. ಈಗ ಎಲ್ಲಾ ಶನಿವಾರ ಮತ್ತು ಭಾನುವಾರಗಳನ್ನು ರಜೆಯಾಗಿ ಮಾಡಬೇಕು ಎಂಬುದು ಬ್ಯಾಂಕ್ ಉದ್ಯೋಗಿಗಳ ಆಗ್ರಹವಾಗಿದೆ. ಬಹಳ ದಿನಗಳಿಂದ ಅವರು ಈ ಬೇಡಿಕೆ ಮುಂದಿಟ್ಟಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರೇ 3 ದಿನದ ರಜೆಯಲ್ಲಿ ಈ ಪ್ರವಾಸಿ ತಾಣಗಳಿಗೆ ಭೇಟಿ ನೀಡಬಹುದು: KSTDCನಿಂದ ವಿಶೇಷ ಪ್ಯಾಕೇಜ್ – Kannada News | Explore Mysore and Ooty: KSTDC’s Affordable 3 Day Weekend Tour Package

ಬೆಂಗಳೂರು, ಜ.23: ಈ ತಿಂಗಳ ಕೊನೆಯ ವಾರ ಅಂದರೆ ಶನಿವಾರ, ಭಾನುವಾರ, ಸೋಮವಾರ ಮೂರು ದಿನ ರಜೆ ಇದೆ. ಈ ಮೂರು ದಿನ ರಜೆಯಲ್ಲಿ ಏನ್ ಮಾಡೋದು ಎಂಬ ಯೋಚನೆ ಬರುವುದು ಸಹಜ, ಎಲ್ಲಿಗಾದರೂ ಹೋಗಬೇಕಲ್ಲ. ಅದರೂ ತಿಂಗಳ ಕೊನೆಗೆ ಹೇಳಿಕೊಳ್ಳುವಷ್ಟು ಬಜೆಟ್​​​ ಇಲ್ಲ, ಅದರೂ ಎಲ್ಲಿಗಾದರೂ ಹೋಗಬೇಕು ಎಂಬ ಆಸೆ ಇದ್ರೆ, ಈ ಪ್ಯಾಕೇಜ್​​ ಬೆಸ್ಟ್​​​ ನೋಡಿ. ಈ ಮೂರು ದಿನದ ರಜೆಯಲ್ಲಿ kstdc (ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ)ನ ಈ ಪ್ಯಾಕೇಜ್​​ನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಪ್ಯಾಕೇಜ್​​ನಲ್ಲಿ ಶ್ರೀರಂಗಪಟ್ಟಣ ಟಿಪ್ಪು ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಸೇಂಟ್ ಫಿಲೋಮಿಯಾ ಚರ್ಚ್, ಅರಮನೆ ಚಾಮುಂಡಿ ಬೆಟ್ಟ, ಮೃಗಾಲಯ, ಬೃಂದಾವನ ಗಾರ್ಡನ್, ನಂಜನಗೂಡು ಮತ್ತು ಊಟಿಗೆ ಭೇಟಿ ನೀಡಬಹುದು.

ಮೈಸೂರು ಒಂದು ವಿಶೇಷ ಪ್ರವಾಸಿ ತಾಣಗಳನ್ನು ಹೊಂದಿದೆ. ಇಲ್ಲಿ ಆಕರ್ಷಕ ತಾಣ ಇದೆ. ಕಳೆದ ಕೆಲವು ವರ್ಷಗಳಿಂದ ಮೈಸೂರು ನಗರದ ವೈಭವವನ್ನು ನೋಡಲು ಪ್ರಪಂಚದಾದ್ಯಂತದ ಪ್ರವಾಸಿಗರು ಇಲ್ಲಿಗೆ ಬರುತ್ತಿದ್ದಾರೆ. ಇತಿಹಾಸಪೂರ್ವ ತಾಣಗಳು, ಸ್ಮಾರಕಗಳು, ವಸ್ತು ಸಂಗ್ರಹಾಲಯಗಳು, ಕೋಟೆಗಳು, ದೇವಾಲಯಗಳು, ಮಸೀದಿಗಳು, ಚರ್ಚುಗಳು ಮತ್ತು ಮೃಗಾಲಯಗಳು ಇಲ್ಲಿನ ಪ್ರಮುಖ ಆರ್ಕಷಕ ಸ್ಥಳಗಳಾಗಿವೆ. ಊಟಿಯು ಕೂಡ ಒಳ್ಳೆಯ ಪ್ರವಾಸಿ ತಾಣಗಳನ್ನು ಹೊಂದಿದೆ. ಅದರಲ್ಲೂ ಈ ಸಮಯದಲ್ಲಿ ಅಂದರೆ ಚಳಿ ವಾತಾವರಣದಲ್ಲಿ ಭೇಟಿ ನೀಡಿದ್ರೆ, ಒಳ್ಳೆಯ ಅನುಭವನ್ನು ನೀಡುತ್ತದೆ.

ಶ್ರೀರಂಗಪಟ್ಟಣ ಟಿಪ್ಪು ದರಿಯಾ ದೌಲತ್ : ಶ್ರೀರಂಗಪಟ್ಟಣವು ಮೈಸೂರಿನಿಂದ ಸುಮಾರು 14 ಕಿ.ಮೀ ದೂರದಲ್ಲಿರುವ ಕಾವೇರಿ ನದಿಯಲ್ಲಿರುವ ಒಂದು ದ್ವೀಪ . ಶ್ರೀರಂಗಪಟ್ಟಣದಲ್ಲಿ ದರಿಯಾ ದೌಲತ್ ಅರಮನೆ ಇದೆ. ದರಿಯಾ ದೌಲತ್ ಬಾಗ್ ಎಂಬ ಸುಂದರವಾದ ಉದ್ಯಾನಗಳ ನಡುವೆ ಇದೆ. ಇನ್ನು ಹಲವಾರು ಪ್ರದೇಶಗಳು ಇಲ್ಲಿದೆ.

ಶ್ರೀ ರಂಗನಾಥ ಸ್ವಾಮಿ ದೇವಸ್ಥಾನ: ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿರುವ ರಂಗನಾಥಸ್ವಾಮಿ ದೇವಸ್ಥಾನ ಒಂದು ಅದ್ಭುತ ಕ್ಷೇತ್ರವಾಗಿದೆ. ಕಾವೇರಿ ನದಿಯ ಉದ್ದಕ್ಕೂ ಸ್ಮಾರ್ತ -ಬಾಬೂರ್ಕಮ್ಮೆ ಮತ್ತು ಶ್ರೀ ವೈಷ್ಣವರ ಐದು ಪ್ರಮುಖ ಯಾತ್ರಾ ಸ್ಥಳಗಳಲ್ಲಿ ಒಂದಾಗಿದೆ. ಈ ಐದು ಪವಿತ್ರ ಸ್ಥಳಗಳನ್ನು ಒಟ್ಟಾಗಿ ದಕ್ಷಿಣ ಭಾರತದಲ್ಲಿ ಪಂಚರಂಗ ಕ್ಷೇತ್ರಗಳು ಎಂದು ಕರೆಯಲಾಗುತ್ತದೆ.

ಸಂತ ಫಿಲೋಮಿನ ಚರ್ಚ್: ಈ ಚರ್ಚ್​​ಗೆ ಎರಡು ಶತಮಾನಗಳ ಇತಿಹಾಸವಿದೆ. ಮೈಸೂರು ನಗರದ ಹೃದಯ ಭಾಗದಲ್ಲಿರುವ ಈ ಚರ್ಚ್, ನಗರದ ಹೊರಗಿನ ಯಾವ ದಿಕ್ಕಿನಿಂದ ನೋಡಿದರೂ ಎದ್ದು ಕಾಣುತ್ತದೆ. ಇಂಡಿಯಾದಲ್ಲಿಯೇ ಅತ್ಯಂತ ಎತ್ತರದ ಗೋಪುರಗಳನ್ನು ಹೊಂದಿದೆ.

ಊಟಿ (Ooty): ಇದನ್ನು ಉದಗಮಂಡಲಂ ಎಂದು ಕರೆಯುತ್ತಾರೆ, ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿದೆ, ಇದು ತನ್ನ ಸುಂದರ ಚಹಾ ತೋಟಗಳು, ತಂಪಾದ ಹವಾಮಾನ, ಸರೋವರಗಳು (ಊಟಿ ಸರೋವರ), ಮತ್ತು ನೈಸರ್ಗಿಕ ಸೌಂದರ್ಯಕ್ಕೆ ಹೆಸರುವಾಸಿಯಾದ ಒಂದು ಪ್ರಸಿದ್ಧ ಗಿರಿಧಾಮವಾಗಿದೆ, ಇದನ್ನು ‘ಭಾರತದ ಸ್ವಿಟ್ಜರ್ಲ್ಯಾಂಡ್’ ಎಂದೂ ಕರೆಯಲಾಗುತ್ತದೆ, ಮತ್ತು ಇದು ಪ್ರವಾಸಿಗರಿಗೆ ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ನೀಲಗಿರಿ ಪರ್ವತ ರೈಲು (ಟಾಯ್ ಟ್ರೈನ್), ದೊಡ್ಡಬೆಟ್ಟ ಶಿಖರ, ಪೈಕಾರ ಜಲಪಾತ, ಮತ್ತು ಸರ್ಕಾರಿ ಗುಲಾಬಿ ಉದ್ಯಾನವನ ಮುಂತಾದ ಅನೇಕ ಪ್ರವಾಸಿ ಆಕರ್ಷಣೆಗಳಿವೆ.

ಸಾರಿಗೆ : ಡಿಲಕ್ಸ್ ಕೋಚ್ ಮೂಲಕ

ಹೋಟೆಲ್ : ಹೋಟೆಲ್ ಮಯೂರ ಕಾವೇರಿ ಕೆ.ಆರ್.ಎಸ್

ಊಟಿಯಲ್ಲಿರುವ ಹೋಟೆಲ್ ಮಯೂರ ಸುದರ್ಶನ್ ಅಥವಾ ಇದೇ ರೀತಿಯ ಹೋಟೆಲ್

ವ್ಯಾಪ್ತಿಯ ಸ್ಥಳಗಳು : ಶ್ರೀರಂಗಪಟ್ಟಣ ಟಿಪ್ಪು ದರಿಯಾ ದೌಲತ್, ಶ್ರೀರಂಗನಾಥ ಸ್ವಾಮಿ ದೇವಸ್ಥಾನ, ಸೇಂಟ್ ಫಿಲೋಮಿಯಾ ಚರ್ಚ್, ಅರಮನೆ ಚಾಮುಂಡಿ ಬೆಟ್ಟ, ಮೃಗಾಲಯ, ಬೃಂದಾವನ ಗಾರ್ಡನ್, ನಂಜನಗೂಡು ಮತ್ತು ಊಟಿ

ಇದನ್ನೂ ಓದಿ: ಬೆಂಗಳೂರಿನಿಂದ ಮಂತ್ರಾಲಯಕ್ಕೆ ಹೋಗುವವರಿಗೆ ಗುಡ್​​​ ನ್ಯೂಸ್​: KSTDC ವಿಶೇಷ ಪ್ಯಾಕೇಜ್

ಈ ಮೂರು ದಿನಗಳ ಪ್ರವಾಸ ಮಾಡುವವರು

ಮೊದಲ ದಿನ:

ಬೆಳಿಗ್ಗೆ 06.30 ಯಶವಂತಪುರದ ಬಿಎಂಟಿಸಿ ಬಸ್ ನಿಲ್ದಾಣದ ಕೆಎಸ್‌ಟಿಡಿಸಿ ಬುಕಿಂಗ್ ಕೌಂಟರ್‌ನಿಂದ ನಿರ್ಗಮನ.

ಬೆಳಿಗ್ಗೆ 08.30 – ಬೆಳಿಗ್ಗೆ 09.00 ದಾರಿಯಲ್ಲಿ ಉಪಾಹಾರ

ಬೆಳಿಗ್ಗೆ 10.00 – ಬೆಳಿಗ್ಗೆ 11.30 ಶ್ರೀರಂಗಪಟ್ಟಣ: ಕೋಟೆ, ಶ್ರೀ ರಂಗನಾಥಸ್ವಾಮಿ ದೇವಸ್ಥಾನ ಮತ್ತು ಬೇಸಿಗೆ ಅರಮನೆಗೆ ಭೇಟಿ.

ಬೆಳಿಗ್ಗೆ 12.00 – ಮಧ್ಯಾಹ್ನ 12.20 ಮೈಸೂರಿನ ಸಂತ ಫಿಲೋಮಿನಾ ಚರ್ಚ್‌ಗೆ ಭೇಟಿ ನೀಡಿ

ಮಧ್ಯಾಹ್ನ 01.00 – 01.30 ಚಾಮುಂಡಿ ಬೆಟ್ಟ ಮತ್ತು ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ

ಮಧ್ಯಾಹ್ನ 02.15 – 03.00 ಮೈಸೂರಿನ ಮಯೂರ ಹೊಯ್ಸಳ ಹೋಟೆಲ್‌ನಲ್ಲಿ ಊಟ

ಮಧ್ಯಾಹ್ನ 03.15 – 04.15 ಮೈಸೂರು ಅರಮನೆಗೆ ಭೇಟಿ

ಸಂಜೆ 05.15 – ರಾತ್ರಿ 08.00 ಹೋಟೆಲ್ ಮಯೂರ ಕಾವೇರಿ ಕೆಆರ್‌ಎಸ್‌ನಲ್ಲಿರುವ ಬೃಂದಾವನ ಗಾರ್ಡನ್ ಮತ್ತು ಹಾಲ್ಟ್‌ಗೆ ಭೇಟಿ ನೀಡಿ

ಎರಡನೇ ದಿನ;

ಬೆಳಿಗ್ಗೆ 06.00 ಹೋಟೆಲ್ ಮಯೂರ ಕಾವೇರಿಯಿಂದ ನಿರ್ಗಮನ

ಬೆಳಿಗ್ಗೆ 07.00 – ಬೆಳಿಗ್ಗೆ 07.30 ನಂಜನಗೂಡಿನ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ

ಬೆಳಿಗ್ಗೆ 08.30 ಗುಂಡ್ಲುಪೇಟೆಯಲ್ಲಿ ಉಪಾಹಾರ

ಬೆಳಿಗ್ಗೆ 09.00 – ಮಧ್ಯಾಹ್ನ 12.30 ಬಂಡೀಪುರ ಮತ್ತು ಮುದುಮಲೈ ಅರಣ್ಯದ ಮೂಲಕ ಊಟಿ ಸರೋವರಕ್ಕೆ

ಮಧ್ಯಾಹ್ನ 12.30 – 01.50 ಊಟಿ ಸರೋವರಕ್ಕೆ ಭೇಟಿ

ಮಧ್ಯಾಹ್ನ 01.50 – 02.30 ಊಟಿಯ ಹೋಟೆಲ್‌ನಲ್ಲಿ ಊಟ

ಮಧ್ಯಾಹ್ನ 03.15 – 04.00 ದೊಡ್ಡಬೆಟ್ಟ ಶಿಖರ ವೀಕ್ಷಣಾ ಕೇಂದ್ರಕ್ಕೆ ಭೇಟಿ

ಸಂಜೆ 04.30 – 06.30 ಬೊಟಾನಿಕಲ್ ಗಾರ್ಡನ್‌ಗೆ ಭೇಟಿ

ಸಂಜೆ 07.00 ಊಟಿಯಲ್ಲಿರುವ ಹೋಟೆಲ್‌ನಲ್ಲಿ ವಸತಿ

ಮೂರನೇ ದಿನ:

ಬೆಳಿಗ್ಗೆ 08.00 ಹೋಟೆಲ್‌ನಿಂದ ನಿರ್ಗಮನ (ಉಪಾಹಾರದ ನಂತರ)

ಬೆಳಿಗ್ಗೆ 08.40 – ಬೆಳಿಗ್ಗೆ 10.00 ಫಿಲ್ಮ್ ಶೂಟಿಂಗ್ ಪಾಯಿಂಟ್, ಪೈನ್ ಟ್ರೀ ಫಾರೆಸ್ಟ್ ಮತ್ತು 7 ನೇ ಮೈಲಿ ಬೆಟ್ಟದ ನೋಟ

ಮಧ್ಯಾಹ್ನ 01.30 – 02.15 ಗುಂಡ್ಲುಪೇಟೆ, ಮಧ್ಯಾಹ್ನ ಊಟ

ಮಧ್ಯಾಹ್ನ 03.30 – 05.00 ಮೃಗಾಲಯಗಳು, ಮೈಸೂರು

ಸಂಜೆ 06.30 ದಾರಿಯಲ್ಲಿ ಟೀ ವಿರಾಮ

ರಾತ್ರಿ 09.00 ಬೆಂಗಳೂರಿಗೆ

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Ugram Manju Wedding: ಸಂಧ್ಯಾ ಜೊತೆ ಮದುವೆ ಆದ ಮಂಜು; ಇಲ್ಲಿದೆ ಸುಂದರ ಆಲ್ಬಂ

Source link

ಗೆಳೆಯನ ಕೊಂದ ಯುವತಿಗೂ, ಐವರ ಕೊಂದ ಕೊಲೆಗಾರನ ನಡುವೆ ಜೈಲಿನಲ್ಲಿ ಮೊಳಕೆಯೊಡೆದ ಪ್ರೇಮ – Kannada News | Alwar Jail Love Story: Convicted Murderers Priya Seth and Hanuman Prasad Marry on Parole

ಅಲ್ವಾರ್, ಜನವರಿ 23: ಈ ಪ್ರೀತಿ(Love) ಎಂಬುದೇ ವಿಚಿತ್ರ, ಎಲ್ಲಿ ಯಾವಾಗ, ಯಾರ ಮೇಲೆ  ಹುಟ್ಟುತ್ತೆ ಎಂದು ಅರ್ಥ ಮಾಡಿಕೊಳ್ಳುವುದು ಕಷ್ಟ. ಕೆಲವೊಮ್ಮೆ ಗುಣ ನೋಡಿ ಹುಟ್ಟಿದ್ರೆ, ಕೆಲವೊಮ್ಮೆ ಬಣ್ಣ ನೋಡಿ ಹುಟ್ಟುತ್ತೆ. ಕೆಲವೊಮ್ಮೆ ಒಂದೇ ಮನಸ್ಥಿತಿಯವರು ಪ್ರೀತಿಯಲ್ಲಿ ಬಿದ್ದರೆ ಇನ್ನೂ ಕೆಲವೊಮ್ಮೆ ಬೇರೆ ಬೇರೆ ರೀತಿ ಗುಣದವರು ಕೂಡ ಒಂದಾಗುತ್ತಾರೆ. ಆದರೆ ಈ ಪ್ರೇಮ ಕಥೆ ತುಂಬಾ ವಿಚಿತ್ರ.

ಡೇಟಿಂಗ್ ಆ್ಯಪ್​ನಲ್ಲಿ ಭೇಟಿಯಾಗಿದ್ದ ಗೆಳೆಯನನ್ನು ಕೊಂದು ಜೈಲಿಗೆ ಸೇರಿದ್ದ ಯುವತಿ ಹಾಗು ಐದು ಕೊಲೆ ಮಾಡಿ ಅದೇ ಜೈಲಿಗೆ ಸೇರಿದ್ದ ವ್ಯಕ್ತಿ ನಡುವೆ ಪ್ರೇಮಾಂಕುರವಾಗಿದೆ. ಈ ಘಟನೆ ಅಲ್ವಾರ್​ನಲ್ಲಿ ನಡೆದಿದೆ.

ಅಲ್ವಾರ್‌ನ ಬರೋಡಮೇವ್‌ನಲ್ಲಿ ಇಂದು ಈ ಇಬ್ಬರ ವಿವಾಹ ಜರುಗಿದೆ. ಪ್ರಿಯಾ ಸೇಠ್ ಅಲಿಯಾಸ್ ನೇಹಾ ಸೇಠ್ ಮತ್ತು ಹನುಮಾನ್ ಪ್ರಸಾದ್ ಮದುವೆಗಾಗಿ ರಾಜಸ್ಥಾನ ಹೈಕೋರ್ಟ್‌ನಿಂದ 15 ದಿನಗಳ ತುರ್ತು ಪೆರೋಲ್‌ಗಳನ್ನು ಪಡೆದಿದ್ದಾರೆ.

ಡೇಟಿಂಗ್ ಆ್ಯಪ್‌ನಲ್ಲಿ ಭೇಟಿಯಾದ ದುಷ್ಯಂತ್ ಶರ್ಮಾ ಎಂಬ ಯುವಕನ ಕೊಲೆ ಪ್ರಕರಣದಲ್ಲಿ ರೂಪದರ್ಶಿ ಪ್ರಿಯಾ ಸೇಠ್‌ಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿತ್ತು. ಅವರು ಸಂಗನೇರ್ ಓಪನ್ ಜೈಲಿನಲ್ಲಿ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಆರು ತಿಂಗಳ ಹಿಂದೆ ಅದೇ ಜೈಲಿನಲ್ಲಿ ಪ್ರಸಾದ್ ಅವರನ್ನು ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದಿದ್ದರು.

ಮತ್ತಷ್ಟು ಓದಿ: ರಾಮನಗರ: ಪ್ರೀತಿ ಹೆಸರಲ್ಲಿ ದೈಹಿಕ ಸಂಪರ್ಕ ಸಾಧಿಸಿ ವಂಚನೆ, ಪೊಲೀಸ್ ಠಾಣೆ ಬಳಿಯೇ ಆತ್ಮಹತ್ಯೆಗೆ ಯತ್ನಿಸಿದ ಯುವತಿ

ಆಕೆಗೆ ಶಿಕ್ಷೆ ವಿಧಿಸಲಾದ ಕೊಲೆ ಪ್ರಕರಣವು 2018 ರ ಹಿಂದಿನದು. ಮೇ 2, 2018 ರಂದು, ಪ್ರಿಯಾ ತನ್ನ ಪ್ರೇಮಿ ಮತ್ತು ಇನ್ನೊಬ್ಬ ವ್ಯಕ್ತಿಯ ಸಹಾಯದಿಂದ ದುಷ್ಯಂತ್​ನನ್ನು ಕೊಂದಿದ್ದಳು. ಸೇಠ್ ಟಿಂಡರ್ ಮೂಲಕ ದುಷ್ಯಂತ್ ಜೊತೆ ಸ್ನೇಹ ಬೆಳೆಸಿಕೊಂಡು ಬಜಾಜ್ ನಗರದಲ್ಲಿರುವ ಫ್ಲಾಟ್‌ಗೆ ಕರೆದಳು. ನಂತರ ಅವಳು ಅವನ ತಂದೆ ಬಳಿ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದಳು.

ಅವರು 3 ಲಕ್ಷ ರೂಪಾಯಿಗಳನ್ನು ವ್ಯವಸ್ಥೆ ಮಾಡಿ ವರ್ಗಾಯಿಸುವಲ್ಲಿ ಯಶಸ್ವಿಯಾದರು.ಬಿಡುಗಡೆ ಮಾಡಿದರೆ, ಪೊಲೀಸರನ್ನು ತಮ್ಮ ಬಳಿಗೆ ಕರೆದೊಯ್ಯಬಹುದು ಎಂದು ಭಾವಿಸಿ ಹತ್ಯೆ ಮಾಡಿದ್ದರು.
ದುಷ್ಯಂತ್ ಶರ್ಮಾ ಕೊಲೆ ಪ್ರಕರಣದಲ್ಲಿ ಪ್ರಿಯಾ ಸೇಠ್ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾಳೆ. ಈ ಪ್ರಕರಣ ಹನಿಟ್ರ್ಯಾಪ್, ದರೋಡೆ ಮತ್ತು ಕೊಲೆಗೆ ಸಂಬಂಧಿಸಿದೆ. ತನ್ನ ಮಾಜಿ ಪ್ರಿಯಕರ ದಿಕ್ಷಾಂತ್ ಕಮ್ರಾನ ಸಾಲವನ್ನು ತೀರಿಸಲು ಪ್ರಿಯಾ ಜೋತ್ವಾರಾದ ನಿವಾಸಿ ದುಷ್ಯಂತ್ ಶರ್ಮಾನನ್ನು ಪ್ರೇಮ ಬಲೆಗೆ ಬೀಳಿಸಿದಳು.

ತನ್ನ ಫ್ಲಾಟ್‌ನಲ್ಲಿ ತನ್ನನ್ನು ಭೇಟಿಯಾಗಲು ದುಷ್ಯಂತ್‌ಗೆ ಕರೆ ಮಾಡಿದಳು, ಅಲ್ಲಿ ಅವಳ ಗೆಳೆಯ ದಿಕ್ಷಾಂತ್ ಮತ್ತು ಇನ್ನೊಬ್ಬ ಸ್ನೇಹಿತ ಈಗಾಗಲೇ ಇದ್ದರು. ಮೂವರು ಒಟ್ಟಾಗಿ ದುಷ್ಯಂತ್‌ನನ್ನು ಅಪಹರಿಸಿ 10 ಲಕ್ಷ ರೂ. ದೋಚಲು ಯೋಜಿಸಿದ್ದರು, ಆದರೆ ಯೋಜನೆ ವಿಫಲವಾಯಿತು. ಈ ಸಮಯದಲ್ಲಿ, ಅವರು ದುಷ್ಯಂತ್‌ಗೆ 3 ಲಕ್ಷ ರೂ.ಗಳನ್ನು ವರ್ಗಾಯಿಸುವಂತೆ ಮಾಡಿದರು. ಸಿಕ್ಕಿಬೀಳುವ ಭಯದಿಂದ, ಮೂವರು ಒಟ್ಟಾಗಿ ದುಷ್ಯಂತ್‌ನನ್ನು ಕತ್ತು ಹಿಸುಕಿ ಕೊಲೆ ಮಾಡಿದ್ದರು.

ದುಷ್ಯಂತ್ ಹತ್ಯೆಗೆ ಸಂಬಂಧಿಸಿದಂತೆ ಪ್ರಿಯಾಳನ್ನು ಪೊಲೀಸರು ಬಂಧಿಸಿದ್ದರು. ಮೇ 3, 2018 ರಿಂದ ಪ್ರಿಯಾ ಜೈಲಿನಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಈಗ, ಪ್ರಿಯಾ ತನ್ನ ಮಾಜಿ ಗೆಳೆಯ ದೀಕ್ಷಾಂತ್ ನನ್ನು ಅಲ್ಲ, ಬದಲಾಗಿ ತನ್ನ ಹೊಸ ಗೆಳೆಯ ಹನುಮಾನ್ ಪ್ರಸಾದ್ ನನ್ನು ಮದುವೆಯಾಗಲಿದ್ದಾರೆ.

ಹನುಮಾನ್ ಪ್ರಸಾದ್ ಯಾರು?
ಹನುಮಾನ್ ಪ್ರಸಾದ್ ಕೂಡ ಕೊಲೆ ಆರೋಪದಲ್ಲಿ ಶಿಕ್ಷೆಗೊಳಗಾಗಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾನೆ. ಐದು ಕೊಲೆಗಳಲ್ಲಿ ಭಾಗಿಯಾಗಿರುವ ಆರೋಪ ಅವರ ಮೇಲಿದೆ ಎಂದು ವರದಿಯಾಗಿದೆ. ಮುಕ್ತ ಜೈಲಿನಲ್ಲಿದ್ದಾಗ, ಅವರು ಮತ್ತು ಪ್ರಿಯಾ ಹತ್ತಿರವಾದರು ಮತ್ತು ಮದುವೆಯಾಗಲು ನಿರ್ಧರಿಸಿದರು. ಪ್ರಿಯಾ ಸೇಠ್ ಜೈಪುರದ ಅತ್ಯಂತ ಪ್ರಮುಖ ಮಹಿಳಾ ಗ್ಯಾಂಗ್​ಸ್ಟರ್ ಆಗಬೇಕೆಂಬ ಕನಸು ಕಂಡಿದ್ದಳು.ಅಧ್ಯಯನ ಮಾಡಲು ಜೈಪುರಕ್ಕೆ ಬಂದಳು, ಆದರೆ ಶೀಘ್ರದಲ್ಲೇ ಅಪರಾಧ ಜಗತ್ತಿಗೆ ಪ್ರವೇಶಿಸಿದ್ದಳು.

ಮೊದಲು ತನ್ನ ಸಂಬಂಧಿಕರ ಮನೆಯನ್ನು ತೊರೆದು ನಂತರ ಪೇಯಿಂಗ್ ಗೆಸ್ಟ್ ಆಗಿ ವಾಸಿಸಲು ಪ್ರಾರಂಭಿಸಿದ್ದಳು. ವೇಶ್ಯಾವಾಟಿಕೆ, ವಂಚನೆ ಮತ್ತು ಎಟಿಎಂ ದರೋಡೆಗಳಲ್ಲಿ ತೊಡಗಿದಳು. ಹನಿಟ್ರ್ಯಾಪ್ ಮಾರ್ಗವನ್ನು ಆರಿಸಿಕೊಂಡಳು, ಶ್ರೀಮಂತ ಯುವಕರನ್ನು ತನ್ನ ಬಲೆಗೆ ಬೀಳಿಸಿ ದರೋಡೆ ಮಾಡುತ್ತಿದ್ದಳು. ಪ್ರಸಾದ್ ತನ್ನ ಗೆಳತಿಯ ಪತಿ ಮತ್ತು ಮಕ್ಕಳನ್ನು ಕೊಲೆ ಮಾಡಿದ್ದಕ್ಕಾಗಿ ಶಿಕ್ಷೆಯನ್ನು ಅನುಭವಿಸುತ್ತಿದ್ದಾನೆ, ಆ ಗೆಳತಿ ಆತನಿಗಿಂತ 10 ವರ್ಷ ದೊಡ್ಡವಳಾಗಿದ್ದಳು. ಅಕ್ಟೋಬರ್ 2, 2017 ರ ರಾತ್ರಿ, ಅವಳು ತನ್ನ ಪತಿ ಮತ್ತು ಮಕ್ಕಳನ್ನು ಕೊಲ್ಲಲು ಅವನನ್ನು ತನ್ನ ಮನೆಗೆ ಕರೆದಿದ್ದಳು.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಗಣರಾಜ್ಯೋತ್ಸವದ ಹಿನ್ನೆಲೆ ಸಂವಿಧಾನ ಕುರಿತ ಪುಸ್ತಕಗಳಿಗೆ ಭಾರೀ ಬೇಡಿಕೆ! – Kannada News | Bengaluru Sees Surge in Constitution Book Sales: Republic Day Fuels Demand

ಗಣರಾಜ್ಯೋತ್ಸವದ ಹಿನ್ನೆಲೆ ಸಂವಿಧಾನ ಕುರಿತ ಪುಸ್ತಕಗಳಿಗೆ ಭಾರೀ ಬೇಡಿಕೆ!

ಬೆಂಗಳೂರು, ಜನವರಿ: ಗಣರಾಜ್ಯೋತ್ಸವದ (Republic Day) ಹಿನ್ನೆಲೆಯಲ್ಲಿ ನಗರದಲ್ಲಿ ಈ ತಿಂಗಳು ಭಾರತೀಯ ಸಂವಿಧಾನ, ನಾಗರಿಕರ ಹಕ್ಕುಗಳು ಹಾಗೂ ಫೆಡರಲಿಸಂ ವಿಷಯಗಳ ಕುರಿತ ಪುಸ್ತಕಗಳಿಗೆ ವಿಶೇಷ ಬೇಡಿಕೆ ಕಂಡುಬಂದಿದೆ. ಕೆಲವು ಓದುಗರು ಅಧ್ಯಯನಕ್ಕಾಗಿ ಈ ಪುಸ್ತಕಗಳನ್ನು ಖರೀದಿಸುತ್ತಿದ್ದರೆ, ಇನ್ನೂ ಕೆಲವರು ಕಾರ್ಯಕ್ರಮಗಳಿಗೆ ಬಹುಮಾನ ಹಾಗೂ ಉಡುಗೊರೆಯಾಗಿ ನೀಡಲು ಸಂವಿಧಾನ ಸಂಬಂಧಿತ ಪುಸ್ತಕಗಳನ್ನು ಆಯ್ಕೆ ಮಾಡುತ್ತಿದ್ದಾರೆ.

ಹೆಚ್ಚುತ್ತಿರುವ ‘ಸಂವಿಧಾನ ಓದು ಪುಸ್ತಕ’ದ ಡಿಮ್ಯಾಂಡ್

ಸಂವಿಧಾನ ಕುರಿತ ಕನ್ನಡ ಪುಸ್ತಕಗಳ ಮಾರಾಟದಲ್ಲಿ ಗಣನೀಯ ಏರಿಕೆ ಕಂಡುಬಂದಿದೆ. ನ್ಯಾಯಮೂರ್ತಿ ಎಚ್.ಎನ್. ನಾಗಮೋಹನ್ ದಾಸ್ ಬರೆದಿರುವ ಸಂವಿಧಾನ ಓದು ಪುಸ್ತಕ ಜನವರಿಯಲ್ಲಿ ಶೇ15ಕ್ಕಿಂತ ಹೆಚ್ಚು ಮಾರಾಟ ಹೆಚ್ಚಾಗಿದೆ. ಶಾಂತರಾಜ್ ಡಿ.ಎಂ. ಅವರ ಭಾರತ ಸಂವಿಧಾನಕ್ಕೂ ಉತ್ತಮ ಬೇಡಿಕೆ ಇದೆ ಎಂದು ಸಪ್ನಾ ಬುಕ್ ಹೌಸ್‌ನ ಕನ್ನಡ ಪುಸ್ತಕ ಮತ್ತು ಪ್ರಕಾಶನ ವಿಭಾಗದ ಪ್ರಧಾನ ವ್ಯವಸ್ಥಾಪಕ ಆರ್. ದೊಡಗೇಗೌಡ ಹೇಳಿದ್ದಾರೆ.ಈ ಬಾರಿ ನಿಯಮಿತ ಓದುಗರ ಜೊತೆಗೆ ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವ ಉದ್ಯೋಗಸ್ಥರೂ ಈ ಪುಸ್ತಕಗಳನ್ನು ಖರೀದಿಸುತ್ತಿರುವುದು ಗಮನಾರ್ಹವಾಗಿದೆ.

ಬಸವನಗುಡಿಯ ಡಿ.ವಿ.ಜಿ. ರಸ್ತೆಯ ಆಕೃತಿ ಪುಸ್ತಕ ಅಂಗಡಿಯ ಮಾಲೀಕ ಗುರುಪ್ರಸಾದ್ ಡಿ.ಎನ್, ಇತ್ತೀಚೆಗೆ ಓದುಗರು ಹಕ್ಕುಗಳು ಮತ್ತು ಪ್ರಜಾಸತ್ತಾತ್ಮಕ ಮೌಲ್ಯಗಳನ್ನು ವಿವರಿಸುವ ಪುಸ್ತಕಗಳತ್ತ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಕಳೆದ ವಾರದಲ್ಲಿ ಈ ವಿಭಾಗದ ಪುಸ್ತಕಗಳಿಗೆ ಶೇ 25–30ರಷ್ಟು ಬೇಡಿಕೆ ಹೆಚ್ಚಾಗಿದೆ ಎಂದಿದ್ದಾರೆ. ಜೊತೆಗೆ ಸಣ್ಣ ಗಾತ್ರದ ಭಾರತ ಸಂವಿಧಾನ ಪ್ರತಿಗಳೂ ಉತ್ತಮವಾಗಿ ಮಾರಾಟವಾಗುತ್ತಿವೆ ಎಂದು ತಿಳಿಸಿರುವುದಾಗಿ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಹರಿವು ಬುಕ್ಸ್ ಹಾಗೂ ಚರ್ಚ್ ಸ್ಟ್ರೀಟ್‌ನ ಬುಕ್‌ವರ್ಮ್ ಸೇರಿದಂತೆ ಹಲವು ಪುಸ್ತಕ ಅಂಗಡಿಗಳಲ್ಲಿಯೂ ಸಂವಿಧಾನ ಸಂಬಂಧಿತ ಕೃತಿಗಳ ಮಾರಾಟ ಚುರುಕಾಗಿದ್ದು, ಪ್ರಜಾಪ್ರಭುತ್ವ ಮೌಲ್ಯಗಳ ಕುರಿತು ಹೆಚ್ಚುತ್ತಿರುವ ಆಸಕ್ತಿಯೇ ಇದಕ್ಕೆ ಕಾರಣ ಎಂದು ಪುಸ್ತಕ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

IMF: ಎಐ ಕ್ಷೇತ್ರದಲ್ಲಿ ಭಾರತದ ಹೆಜ್ಜೆಗಳನ್ನು ಶ್ಲಾಘಿಸಿದ ಐಎಂಎಫ್ ಮುಖ್ಯಸ್ಥೆ – Kannada News | IMF chief praises India’s AI development path and Economic growth

ನವದೆಹಲಿ, ಜನವರಿ 23: ಎಐ ಕ್ಷೇತ್ರದಲ್ಲಿ ಭಾರತ ಇಡುತ್ತಿರುವ ಹೆಜ್ಜೆಗಳಿಗೆ ಐಎಂಎಫ್ (IMF) ಶ್ಲಾಘನೆ ನೀಡಿದೆ. ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಕ್ಷೇತ್ರದಲ್ಲಿ ವಿಶ್ವದ ಪ್ರಮುಖ ಶಕ್ತಿಗಳಲ್ಲಿ ಭಾರತವೂ ಸೇರ್ಪಡೆಯಾಗುತ್ತಿದೆ. ಉತ್ತಮ ಸುಧಾರಣಾ ಕ್ರಮಗಳು, ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್, ಕೌಶಲ್ಯವಂತ ತಂತ್ರಜ್ಞಾನ ಕಾರ್ಮಿಕ ವರ್ಗವು ಭಾರತದ ಮುನ್ನಡೆಗೆ ಬಲ ಕೊಟ್ಟಿವೆ ಎಂದು ಐಎಂಎಫ್​ನ ನಿರ್ವಾಹಕ ನಿರ್ದೇಶಕಿ ಕ್ರಿಸ್ಟಾಲಿನಾ ಜಾರ್ಜಿಯೆವಾ (Kristalina Georgieva) ಅಭಿಪ್ರಾಯಪಟ್ಟಿದ್ದಾರೆ.

ಸ್ವಿಟ್ಜರ್​ಲ್ಯಾಂಡ್​ನ ಡಾವೋಸ್​ನಲ್ಲಿ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ವೇದಿಕೆಯಲ್ಲಿ ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಿದ್ದ ಐಎಂಎಫ್ ಮುಖ್ಯಸ್ಥೆ, ಭಾರತದ ಇತ್ತೀಚಿನ ಆರ್ಥಿಕ ಸುಧಾರಣೆಗಳ ಗುಣಮಟ್ಟ ಮತ್ತು ವೇಗದ ಬಗ್ಗೆ ಐಎಂಎಫ್​ಗೆ ಮೆಚ್ಚುಗೆ ಇದೆ. ಎಐ ಕ್ಷೇತ್ರದಲ್ಲಿ ಭಾರತದ ಶಕ್ತಿ ನಿಜಕ್ಕೂ ಅಚ್ಚರಿ ಹುಟ್ಟಿಸುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.

ಇದನ್ನೂ ಓದಿ: ಎಐ ಟೆಕ್ನಾಲಜಿಯಲ್ಲಿ ಅಮೆರಿಕ, ಚೀನಾ ಸಮಕ್ಕೆ ಭಾರತ ಬೆಳೆಯಬಲ್ಲುದೆ? ಡಾವೊಸ್ ಸಮಿಟ್​ನಲ್ಲಿ ಭಾರತದ ಎಐ ಪ್ಲಾನ್ ಬಿಚ್ಚಿಟ್ಟ ಎ ವೈಷ್ಣವ್

ಭಾರತದ ಆರ್ಥಿಕ ವೇಗಕ್ಕೆ ಎಐನಿಂದ ಇನ್ನಷ್ಟು ಚುರುಕು: ಐಎಂಎಫ್

ಕೃತಕ ಬುದ್ಧಿಮತ್ತೆಯು ಜಾಗತಿಕ ಆರ್ಥಿಕ ಬೆಳವಣಿಗೆಯನ್ನು 0.8 ಪ್ರತಿಶತ ಅಂಕಗಳಷ್ಟು ಹೆಚ್ಚಿಸುವ ನಿರೀಕ್ಷೆ ಇದೆ. ಭಾರತದಂತಹ ಚುರುಕಿನ ಆರ್ಥಿಕತೆಗೆ ಎಐ ಇನ್ನೂ ದೊಡ್ಡ ಮಟ್ಟದ ಪುಷ್ಟಿ ಕೊಡಬಲ್ಲುದು. ಡಿಜಿಟಲ್ ಪಬ್ಲಿಕ್ ಇನ್​ಫ್ರಾಸ್ಟ್ರಕ್ಚರ್ ಹಾಗೂ ಐಟಿ ಕೌಶಲ್ಯವಂತ ಉದ್ಯೋಗಿಗಳ ದೊಡ್ಡ ಸಮೂಹವನ್ನು ಭಾರತ ಬಹಳ ವೇಗವಾಗಿ ಸಿದ್ಧಪಡಿಸಿದೆ. ಇದು ಭಾರತಕ್ಕಿರುವ ಪ್ರಮುಖ ಶಕ್ತಿ. ಎಐ ಅಭಿವೃದ್ಧಿಯಲ್ಲಿ ಭಾರತ ತನ್ನದೇ ಹಾದಿಯಲ್ಲಿ ಸಾಗುತ್ತಿರುವುದೂ ಶ್ಲಾಘನೀಯ ವಿಚಾರ ಎಂದು ಕ್ರಿಸ್ಟಿಯಾಲೆನಾ ಜಾರ್ಜಿಯೆವಾ ವಿವರಿಸಿದ್ದಾರೆ.

ಭಾರತ ಬೆಳ್ಳಿ ಚುಕ್ಕಿ

ಜಾಗತಿಕವಾಗಿ ಅನಿಶ್ಚಿತವೆನಿಸಿರುವ ಆರ್ಥಿಕ ವಾತಾವರಣದಲ್ಲಿ ಭಾರತವು ಬೆಳ್ಳಿ ಚುಕ್ಕಿಯಂತೆ ಕಾಣುತ್ತದೆ ಎಂದು ಹೇಳಿದ ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆಯ ಎಂಡಿ, ಭಾರತ ಹೇಗೆ ಅಭಿವೃದ್ಧಿ ಹೊಂದುತ್ತಿದೆ ಎಂದು ಕಣ್ಣಾರೆ ನೋಡಲು ಬಯಸುತ್ತಿದ್ದು, ಫೆಬ್ರುವರಿಯಲ್ಲಿ ಎಐ ಸಮಿಟ್​ಗೆ ಭಾರತಕ್ಕೆ ಹೋಗುತ್ತಿರುವುದಾಗಿ ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: ಜವಾಬ್ದಾರಿಯುತ ದೇಶಗಳ ಸೂಚ್ಯಂಕ; ಅಮೆರಿಕ, ಚೀನಾಗಿಂತ ಭಾರತ ಮೇಲೆ; ಪಾಕಿಸ್ತಾನ ಮತ್ತಿತರ ದೇಶಗಳು ಹೇಗೆ?

ಎಐನಿಂದ ನಿರೀಕ್ಷೆಗಳು ಗಹನವಾಗಿವೆಯಾದರೂ, ಈ ನಿರೀಕ್ಷೆ ಈಡೇರುವುದು ವಿಫಲವಾದರೆ ಬಹಳ ಅಪಾಯ ಇರುತ್ತದೆ. ಇಂಥ ಪರಿಸ್ಥಿತಿಯಲ್ಲಿ ದೇಶಗಳು ಪ್ರಬಲ ಆರ್ಥಿಕ ಅಂಶಗಳಿಗೆ ಗಮನ ಕೊಡಬೇಕು. ನಿಮ್ಮ ಮನೆ ಸುವ್ಯವಸ್ಥಿತ ರೀತಿಯಲ್ಲಿ ಇರುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದೂ ಜಾರ್ಜಿಯೆವಾ ಅವರು ಸಲಹೆ ನೀಡಿದ್ದಾರೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಾವೋಸ್​​ನಲ್ಲಿ ಭಾರತ ಹೊಗಳಿದ ಡಿ.ಕೆ. ಶಿವಕುಮಾರ್​: ರಾಹುಲ್​​ ಕಾಲೆಳೆದ ಕರ್ನಾಟಕ ಬಿಜೆಪಿ – Kannada News | DK Shivakumar Praises India Economy in Davos, Karnataka BJP Attacks Rahul Gandhi

ವರ್ಲ್ಡ್​​ ಎಕನಾಮಿಕ್​​ ಫೋರಂನಲ್ಲಿ ಡಿಕೆಶಿ.

ಬೆಂಗಳೂರು, ಜನವರಿ 23: ಭಾರತದ ಆರ್ಥಿಕತೆ ಬಗ್ಗೆ ಕಾಂಗ್ರೆಸ್​​ ನಾಯಕ ರಾಹುಲ್​​ ಗಾಂಧಿ ಟೀಕೆ ನಡುವೆ ದಾವೋಸ್​​ನಲ್ಲಿ ನಡೆದ ವರ್ಲ್ಡ್​​ ಎಕನಾಮಿಕ್​​ ಫೋರಂನಲ್ಲಿ ಭಾಗಿಯಾಗಿದ್ದ ಕರ್ನಾಟಕ ಡಿಸಿಎಂ ಡಿ.ಕೆ. ಶಿವಕುಮಾರ್​​ ಆಡಿರುವ ಮಾತುಗಳೀಗ ಬಿಜೆಪಿಗೆ ಅಸ್ತ್ರವಾಗಿ ಮಾರ್ಪಟ್ಟಿದೆ. ವಿಶ್ವ ಆರ್ಥಿಕ ವೇದಿಕೆಯಲ್ಲಿ ಮಾತನಾಡಿರುವ ಡಿಕೆಶಿ, ಇಂದು ಜಗತ್ತು ಭಾರತವನ್ನು ಹೆಚ್ಚಿನ ವಿಶ್ವಾಸದೊಂದಿಗೆ ನೋಡುತ್ತಿದೆ. ನಮ್ಮ ಸಾಧನೆಗಳ ಮೇಲೂ, ಮುಂದೆ ಸಾಗುತ್ತಿರುವ ನಮ್ಮ ನಿರಂತರ ವೇಗದ ಮೇಲೂ ಜಾಗತಿಕ ವಿಶ್ವಾಸ ಹೆಚ್ಚುತ್ತಿದೆ ಎಂದಿದ್ದರು. ಇದೇ ವಿಚಾರವನ್ನಿಟ್ಟುಕೊಂಡು ಕಾಂಗ್ರೆಸ್​​ಗೀಗ ಬಿಜೆಪಿ ತಿವಿದಿದೆ.

ಡಿಕೆಶಿಗೆ ಧನ್ಯವಾದ ಹೇಳಿದ ಬಿಜೆಪಿ!

ಬಿಜೆಪಿ ಪೋಸ್ಟ್​​

ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಭಾರತದ ಬೆಳವಣಿಗೆ ಎಷ್ಟೊಂದು ವೇಗವಾಗಿದೆ ಎಂಬುದನ್ನು ಈಗ ವಿರೋಧ ಪಕ್ಷವೂ ಸಹ ಒಪ್ಪಿಕೊಳ್ಳಲು ಆರಂಭಿಸಿದೆ. ಒಂದು ಕಡೆ ರಾಹುಲ್​​ ಗಾಂಧಿ ‘ಭಾರತದ ಆರ್ಥಿಕತೆ ಸತ್ತಿದೆ’ ಎಂಬ ಜಪವನ್ನೇ ಮುಂದುವರಿಸುತ್ತಿರುವಾಗ, ಮತ್ತೊಂದು ಕಡೆ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ವಿಶ್ವ ಆರ್ಥಿಕ ವೇದಿಕೆಯಲ್ಲಿ ಅದನ್ನು ಖಂಡಿಸಿರೋದನ್ನು ನೋಡುವುದೇ ಸಂತೋಷಕರವಾಗಿದೆ. ಸತ್ತಿರೋದು ಭಾರತದ ಆರ್ಥಿಕತೆಯಲ್ಲ, ನಿಮ್ಮ ಹೈಕಮಾಂಡ್ನ ವಾಸ್ತವದ ಜ್ಞಾನ ಎಂಬುದನ್ನು ದೃಢಪಡಿಸಿದ್ದಕ್ಕೆ ಧನ್ಯವಾದ ಡಿಕೆಶಿ ಅವರೇ ಎಂದು ಬಿಜೆಪಿ ಎಕ್ಸ್​​ ಪೋಸ್ಟ್​​ ಮಾಡಿದೆ.

ಇದನ್ನೂ ಓದಿ:  ಜಾಗತಿಕ ಹೂಡಿಕೆಗೆ ಭಾರತ ವಿಶ್ವಾಸಾರ್ಹ ತಾಣ; ಹೂಡಿಕೆ ಒಪ್ಪಂದಕ್ಕೆ ಜೋಶಿ ಮಾತುಕತೆ ಫಲಪ್ರದ

‘ಡಿಕೆಶಿ ಸಹನೆಯೂ ಕ್ಷೀಣಿಸುತ್ತಿದೆ’

ಮತ್ತೊಂದೆಡೆ ಡಿಕೆಶಿ ಹೇಳೀಕೆ ಬಗ್ಗೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್​. ಅಶೋಕ್, ಕರ್ನಾಟಕ ಕಾಂಗ್ರೆಸ್‌ನ ಗಾಳಿಯ ದಿಕ್ಕೇ ಬದಲಾಗುತ್ತಿದೆಯೇ? ಕರ್ನಾಟಕ ಕಾಂಗ್ರೆಸ್ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್​​ ದಾವೋಸ್​​ನಲ್ಲಿ ಭಾರತ ಪ್ರಕಾಶಿಸುತ್ತಿದೆ ಎಂದು ಹೇಳಿದ್ದಾರೆ. ಆ ಮೂಲಕ ತಮ್ಮ ಪಕ್ಷದ ವರಿಷ್ಠ ನಾಯಕನ ಹೇಳಿಕೆಯನ್ನು ಜಾಗತಿಕ ವೇದಿಕೆಯಲ್ಲಿ ನಿಂತು ವಿರೋಧಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಕಾಂಗ್ರೆಸ್​​ ಹೈಕಮಾಂಡ್ ವಿರುದ್ಧ ಅಸಮಾಧಾನಕ್ಕೆ ಕಾರಣಗಳಿವೆ ಎಂಬುದು ಎಲ್ಲರಿಗೂ ಗೊತ್ತಿದೆ . ಅಧಿಕಾರ ಹಂಚಿಕೆಯ ಭರವಸೆಗಳು ಮುಂದೂಡಲ್ಪಟ್ಟಿವೆ, ಅಧಿಕಾರಕ್ಕೂ ಕಡಿವಾಣ ಹಾಕಲಾಗಿದೆ. ಹೀಗಾಗಿ ಅವರ ಸಹನೆಯೂ ನಿಧಾನವಾಗಿ ಕ್ಷೀಣಿಸುತ್ತಿರುವುದು ಸ್ಪಷ್ಟ. ಇದೀಗ ಅವರ ಧಾಟಿಯೇ ಬದಲಾಗಿದೆ. ರಾಹುಲ್ ಗಾಂಧಿ ಕೇಳಲು ನಿರಾಕರಿಸುವ ಸತ್ಯವನ್ನೇ ಅವರೀಗ ಹೇಳುತ್ತಿದ್ದಾರೆ. ಇದು ದೆಹಲಿಗೆ ಡಿಕೆಶಿ ನೀಡುತ್ತಿರುವ ಸೌಮ್ಯ ಎಚ್ಚರಿಕೆಯೇ? ಎಂದು ಪ್ರಶ್ನಿಸಿದ್ದಾರೆ.

ಭಾರತದ ಆರ್ಥಿಕತೆ ‘ಸತ್ತ ಆರ್ಥಿಕತೆ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಹಿಂದೆ ಟೀಕಿಸಿದ್ದರು. ಅದಕ್ಕೆ ಬೆಂಬಲ ಸೂಚಿಸಿದ್ದ ವಿಪಕ್ಷ ನಾಯಕ ಹಾಗೂ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ, ಡೊನಾಲ್ಡ್ ಟ್ರಂಪ್ ಸತ್ಯ ಹೇಳಿದ್ದಕ್ಕೆ ಸಂತೋಷವಾಗಿದೆ. ಭಾರತದ ಪ್ರಧಾನಿ ಮತ್ತು ಹಣಕಾಸು ಸಚಿವರನ್ನು ಹೊರತುಪಡಿಸಿ ಎಲ್ಲರಿಗೂ ಭಾರತದ ಆರ್ಥಿಕತೆಯ ಪರಿಸ್ಥಿತಿ ಹೇಗಿದೆ ಎಂಬುದರ ವಾಸ್ತವದ ಅರಿವಿದೆ ಎಂದಿದ್ದರು ಎಂಬುದಿಲ್ಲಿ ಗಮನಾರ್ಹ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 12:02 pm, Fri, 23 January 26

Source link

Exit mobile version