ಪವಿತ್ರಾ ಮನೆಯೂಟಕ್ಕೆ ತಡೆ ಒಡ್ಡಲು ಮುಂದಾದ ಪೊಲೀಸರು: ಜೈಲೂಟವೇ ಗತಿ? – Kannada News | Pavithra Gowda got home food in Jail, police to file application to court
ರೇಣುಕಾ ಸ್ವಾಮಿ (Renuka Swamy) ಕೊಲೆ ಪ್ರಕರಣ ಆರೋಪಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರ ಜೈಲಿನಲ್ಲಿ ದಿನಗಳನ್ನು ದೂಡುತ್ತಿದ್ದಾರೆ. ಸುಪ್ರೀಂಕೋರ್ಟ್ನಲ್ಲಿ ಕೊಲೆ ಆರೋಪಿಗಳ ಜಾಮೀನು ರದ್ದಾದ ಬಳಿಕ ಪವಿತ್ರಾ ಗೌಡ ಸತತವಾಗಿ ಜಾಮೀನಿಗಾಗಿ ಪ್ರಯತ್ನ ಮಾಡುತ್ತಲೇ ಇದ್ದಾರೆ. ಆದರೆ ಜಾಮೀನು ಸಿಕ್ಕಿಲ್ಲ. ಆದರೆ ಈಗ ಜೈಲಿನಲ್ಲಿಯೇ ಕೆಲವು ಸವಲತ್ತುಗಳನ್ನು ಪಡೆದುಕೊಳ್ಳಲು ನ್ಯಾಯಾಲಯದ ಮೊರೆ ಹೋಗಿದ್ದರು. ಅದರಲ್ಲಿ ಮನೆಯೂಟವೂ ಒಂದಾಗಿತ್ತು. ಪವಿತ್ರಾ ಗೌಡ ಅವರ ಮನೆ ಊಟದ ಬೇಡಿಕೆಯನ್ನು ಇತ್ತೀಚೆಗಷ್ಟೆ ನ್ಯಾಯಾಲಯ ಒಪ್ಪಿತ್ತು. ಅದರಂತೆ ಜನವರಿ 2 ರಿಂದ…