ವೆನಿಜುವೆಲಾ ಅಧ್ಯಕ್ಷರನ್ನು ಅಮೆರಿಕದವರು ಸೆರೆಹಿಡಿದ ರೀತಿ ಮುಂಬೈ ದಾಳಿ ಮಾಸ್ಟರ್​ಮೈಂಡನ್ನೂ ಹಿಡಿಯಿರಿ: ಒವೈಸಿ ಆಗ್ರಹ – Kannada News | Referring developments in Venezuela, Asaduddin Owaisi asks PM Modi to capture Mumbai Attack Mastermind in Pakistan

ನವದೆಹಲಿ, ಜನವರಿ 4: ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊ (Nocolas Maduro) ಅವರನ್ನು ಅಮೆರಿಕದ ಭದ್ರತಾ ಪಡೆಗಳು ಶನಿವಾರ ಬೆಳಗ್ಗೆ ಸೆರೆಹಿಡಿದಿರುವ ಘಟನೆಗೆ ಜಾಗತಿಕವಾಗಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಭಾರತದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕದಲ್ಲಿರುವ ಪರಿಸ್ಥಿತಿ ಮತ್ತು ಬೆಳವಣಿಗೆಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ, ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಒವೈಸಿ (Asaduddin Owaisi) ಅವರು ನಿಲೋಲಾಸ್ ಮಡುರೊ ಬಂಧಿಸಿದ ರೀತಿಯಲ್ಲೇ 2009ರ ಮುಂಬೈ ದಾಳಿ ಘಟನೆಯ ಸಂಚುಕೋರರನ್ನೂ ಸೆರೆ ಹಿಡಿಯಬೇಕೆಂದು ಆಗ್ರಹಿಸಿದ್ದಾರೆ.

ಚುನಾವಣಾ ಸಮಾವೇಶವೊಂದರಲ್ಲಿ ಭಾಷಣ ಮಾಡುತ್ತಿದ್ದ ಒವೈಸಿ, ಅಮೆರಿಕದವರು ವೆನಿಜುವೆಲಾ ಮೇಲೆ ಏರ್ ಸ್ಟ್ರೈಕ್ ಮಾಡಿ ಅದರ ಅಧ್ಯಕ್ಷ ನಿಕೋಲಾಸ್ ಮಡುರೊ ಅವರನ್ನು ಸೆರೆಹಿಡಿದಿದೆ. ಆದರೆ, ಮುಂಬೈ ದಾಳಿ ಮಾಸ್ಟರ್​ಮೈಡ್​ಗಳನ್ನು ಅದೇ ರೀತಿ ಭಾರತಕ್ಕೆ ಸೆರೆಹಿಡಿಯಲು ಯಾಕೆ ಸಾಧ್ಯವಾಗಿಲ್ಲ ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ತೈಲಸಮೃದ್ಧ ವೆನಿಜುವೆಲಾ ಮೇಲೆ ಅಮೆರಿಕ ದಾಳಿ; ಭಾರತಕ್ಕೆ ಎಷ್ಟು ನಷ್ಟ?

‘ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪಡೆಗಳು ವೆನಿಜುವೆಲಾ ಅಧ್ಯಕ್ಷ ನಿಕೋಲಾಸ್ ಮಡುರೊರನ್ನು ಅವರ ದೇಶದಲ್ಲೇ ಸೆರೆ ಹಿಡಿದು ಅಮೆರಿಕಕ್ಕೆ ಕರೆದೊಯ್ದಿದ್ದಾರೆ. ವೆನಿಜುವೆಲಾ ಅಧ್ಯಕ್ಷರನ್ನು ಅವರ ದೇಶದಿಂದಲೇ ಟ್ರಂಪ್ ಅಪಹರಿಸಬಲ್ಲರೆಂದರೆ ನೀವು ಕೂಡ ಪಾಕಿಸ್ತಾನಕ್ಕೆ ಹೋಗಿ ಮುಂಬೈ ಉಗ್ರ ದಾಳಿ ಘಟನೆಯ ಮಾಸ್ಟರ್​ಮೈಂಡ್​ನನ್ನೂ ಹಿಡಿದು ಭಾರತಕ್ಕೆ ತರಬಹುದಲ್ಲ’ ಎಂದು ಹೈದರಾಬಾದ್​ನ ಸಂಸದರಾದ ಅವರು ಒತ್ತಾಯಿಸಿದ್ದಾರೆ.

‘ಮೋದಿಜಿ, ಪಾಕಿಸ್ತಾನಕ್ಕೆ ಸೇನೆಗಳನ್ನು ನುಗ್ಗಿಸಿ ಮುಂಬೈ ದಾಳಿಯ ಸಂಚುಕೋರ ಮಸೂದ್ ಅಝರ್ ಆಗಲೀ ಅಥವಾ ಲಷ್ಕರೆ ತೈಯಬಾದ ರಕ್ಕರೇ ಆಗಲೀ ಸೆರೆಹಿಡಿದು ಭಾರತಕ್ಕೆ ಕರೆತನ್ನಿ ಎಂದು ನಾವು ಹೇಳುತ್ತಿದ್ದೇವೆ. ಟ್ರಂಪ್​ಗೆ ಸಾಧ್ಯವಾಗುತ್ತೆ ಎಂದಾದರೆ ಮೋದಿಜಿ ನೀವೇನೂ ಕಡಿಮೆ ಅಲ್ಲ. ನೀವೂ ಕೂಡ ಈ ಕೆಲಸ ಮಾಡಬಹುದು’ ಎಂದು ಪ್ರಧಾನಿ ಮೋದಿ ವಿರುದ್ಧ ವ್ಯಂಗ್ಯ ಮಿಶ್ರಿತ ವಾಗ್ದಾಳಿ ಮಾಡಿದ್ದಾರೆ ಒವೈಸಿ.

ಇದನ್ನೂ ಓದಿ: ತೈಲ ಸಂಪತ್ತಿನ ಮೇಲೆ ಕಣ್ಣಿಟ್ಟರಾ ಟ್ರಂಪ್? ವೆನೆಜುವೆಲಾ ಮೇಲಿನ ಅಮೆರಿಕ ದಾಳಿ ಕುರಿತ ಕುತೂಹಲಕಾರಿ ಸಂಗತಿ ಇಲ್ಲಿದೆ

ಶನಿವಾರ ತಡರಾತ್ರಿ ಅಮೆರಿಕ ಸೇನೆ ಕ್ಷಿಪ್ರ ಕಾರ್ಯಾಚರಣೆ ನಡೆಸಿ ವೆನಿಜುವೆಲಾ ಅಧ್ಯಕ್ಷರ ಮಿಲಿಟರಿ ಬೇಸ್​ನಲ್ಲಿರುವ ಅವರ ಮನೆಗೆ ನುಗ್ಗಿ ನಿಕೋಲಾಸ್ ಮಡುರೊ ಮತ್ತವರ ಪತ್ನಿಯನ್ನು ಸೆರೆ ಹಿಡಿದಿದೆ. ನ್ಯೂಯಾರ್ಕ್​ಗೆ ಕರೆದೊಯ್ಯಲಾಗಿದ್ದು, ಕೋರ್ಟ್​ನಲ್ಲಿ ಹಾಜರುಪಡಿಸಿ ನಂತರ ಇದೀಗ ಬ್ರೂಕ್​ಲಿನ್​ನ ಮೆಟ್ರೊಪೊಲಿಟನ್ ಜೈಲಿನಲ್ಲಿ ಇಡಲಾಗಿದೆ.

ಇದೇ ವೇಳೆ, ನಿಕೋಲಾಸ್ ಮಡುರೊ ಜಾಗಕ್ಕೆ ವೆನಿಜುವೆಲಾಗೆ ಹಂಗಾಮಿ ಅಧ್ಯಕ್ಷರಾಗಿ ಉಪಾಧ್ಯಕ್ಷ ಡೆಲ್ಸಿ ರಾಡ್ರಿಗೆಸ್ ಅವರಿಗೆ ಅಲ್ಲಿಯ ಕೋರ್ಟ್ ಜವಾಬ್ದಾರಿ ಕೊಟ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On – 7:55 pm, Sun, 4 January 26

Source link

ಆಟಗಾರನಾಗಿ ವಿಫಲರಾದರೂ ನಾಯಕನಾಗಿ ಇತಿಹಾಸ ನಿರ್ಮಿಸಿದ ವೈಭವ್ ಸೂರ್ಯವಂಶಿ

Source link

ಗಂಡು ಮಗು ಆಸೆ: ಕನಸು ಈಡೇರದಿದ್ದಾಗ ಹೆಂಡ್ತಿ ಮಕ್ಕಳನ್ನ ಬಿಟ್ಟು ಹೋಗ್ಬಿಟ್ಟ – Kannada News | Husband Cheats Wife At Bengaluru for three Baby girls

ಬೆಂಗಳೂರು, (ಜನವರಿ 04): ಗಂಡು ಮಗುವಿನ ಹಂಬಲ, ಹೆಣ್ಣು ಮಗುವಿಗೆ ತಾತ್ಸಾರ ಇದು ಭಾರತೀಯ ಸಮಾಜದ ಡಿಎನ್’ಎಯಲ್ಲಿ ಹಾಸು ಹೊಕ್ಕಾಗಿರುವ ಸಮಸ್ಯೆ. ಹೌದು…ಈಗಾಗಲೇ ಎರಡು ಹೆಣ್ಣು ಮಕ್ಕಳಿದ್ದು, ಮೂರನೇಯದ್ದು ಗಂಡು ಮಗು ಆಗುತ್ತೆ ಎಂದು ಆಸೆ ಇಟ್ಟುಕೊಂಡಿದ್ದ. ಆದರೆ ಮೂರನೇ ಮಗು ಸಹ ಹೆಣ್ಣು ಆಗಿದೆ. ಇದರಿಂದ ಮನನೊಂದ ವ್ಯಕ್ತಿಯೋರ್ವ ಹೆಂಡತಿ ಮಕ್ಕಳನ್ನು ಬಿಟ್ಟು ನಾಪತ್ತೆಯಾಗಿದ್ದಾನೆ. ಬೆಂಗಳೂರಿನಲ್ಲಿ ಈ ಘಟನೆ ನಡೆದಿದ್ದು, ಮೂರು ಮಕ್ಳಳನ್ನು ಸಾಕಲಾಗದೇ ಕಂಗಾಲಾದ ಪತ್ನಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

Source link

ಬಿಸಿಸಿಐ ವಿರುದ್ಧ ತೊಡೆ ತಟ್ಟಿರುವ ಬಾಂಗ್ಲಾ ತಂಡದ ಟಿ20 ವಿಶ್ವಕಪ್ ಪ್ರದರ್ಶನ ಹೇಗಿದೆ? – Kannada News | Bangladesh T20 World Cup History: Poor Performance and 2026 India Boycott Reason

ಆ ಬಳಿಕ 2009, 2010 ಮತ್ತು 2012 ರಲ್ಲಿ ನಡೆದ ನಂತರದ ಆವೃತ್ತಿಗಳಲ್ಲೂ ಬಾಂಗ್ಲಾ ತಂಡ ನಿರಾಶಾದಾಯಕ ಪ್ರದರ್ಶನ ನೀಡಿತು, ಗುಂಪು ಹಂತದಲ್ಲಿ ಒಂದೇ ಒಂದು ಗೆಲುವು ದಾಖಲಿಸಲು ವಿಫಲವಾಯಿತು. 2014 ಮತ್ತು 2016 ರಲ್ಲಿ ಸೂಪರ್ 10 ಸುತ್ತಿಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿದ್ದ ಬಾಂಗ್ಲಾ, ಈ ಸುತ್ತಿನಲ್ಲಿ ಸತತ ಸೋಲುಗಳನ್ನು ಅನುಭವಿಸಿತು.

Source link

ಚಳಿಗಾಲದಲ್ಲಿ ರಕ್ತದೊಡ್ಡ ಅಪಾಯ ಹೆಚ್ಚು; ಇಲ್ಲಿದೆ ಉಪಯುಕ್ತವಾಗಬಲ್ಲ ಕೆಲ ಯೋಗಾಸನಗಳು

ಇತ್ತೀಚಿನ ದಿನಗಳಲ್ಲಿ ಅಧಿಕ ರಕ್ತದೊತ್ತಡ (ಬಿಪಿ) ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ. ಚಳಿಗಾಲದಲ್ಲಿ ಈ ಸಮಸ್ಯೆ ವಿಶೇಷವಾಗಿ ಗಂಭೀರವಾಗುತ್ತದೆ. ಶೀತವು ರಕ್ತನಾಳಗಳನ್ನು ಸಂಕುಚಿತಗೊಳಿಸುತ್ತದೆ. ಇದು ರಕ್ತದೊತ್ತಡ ಹೆಚ್ಚಿಸುತ್ತದೆ. ಹೈಬ್ಲಡ್ ಪ್ರೆಷರ್ ಸ್ಥಿತಿಯನ್ನು ದೀರ್ಘಕಾಲದವರೆಗೆ ನಿಯಂತ್ರಿಸದಿದ್ದರೆ, ಅದು ಹೃದಯ, ಮೂತ್ರಪಿಂಡಗಳು ಮತ್ತು ಮೆದುಳಿಗೆ ಹಾನಿಯನ್ನುಂಟುಮಾಡುತ್ತದೆ. ವೃದ್ಧರು, ಬೊಜ್ಜು ಹೊಂದಿರುವವರು ಮತ್ತು ಈಗಾಗಲೇ ಬಿಪಿ ಸಮಸ್ಯೆ ಹೊಂದಿರುವವರಿಗೆ ಈ ಚಳಿಗಾಲ ಹೆಚ್ಚಿನ ಅಪಾಯಕಾರಿಯಾಗಬಹುದು. ಆದ್ದರಿಂದ, ರಕ್ತದೊತ್ತಡವನ್ನು ನಿಯಂತ್ರಣದಲ್ಲಿ ಇಡುವುದು ಬಹಳ ಮುಖ್ಯ. ಯೋಗ ಆಸನಗಳು ದೇಹವನ್ನು ಸಕ್ರಿಯವಾಗಿಡುವುದಲ್ಲದೆ, ಒತ್ತಡವನ್ನು ಕಡಿಮೆ ಮಾಡಲು ಮತ್ತು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ.

ಬಾಬಾ ರಾಮದೇವ್ ಸೂಚಿಸಿದ ಯೋಗ ಆಸನಗಳು ನೈಸರ್ಗಿಕವಾಗಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯಕವಾಗಿವೆ. ಚಳಿಗಾಲದಲ್ಲಿ ಹೈಬಿಪಿ ನಿಯಂತ್ರಿಸಲು ಯಾವ ಯೋಗಾಸನಗಳು ಪ್ರಯೋಜನಕಾರಿ ಎನ್ನುವ ಮಾಹಿತಿ ಇಲ್ಲಿದೆ.

ಚಳಿಗಾಲದಲ್ಲಿ ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ಈ ಯೋಗಾಸನಗಳನ್ನು ಅನುಸರಿಸಿ

ಭುಜಂಗಾಸನ

ಭುಜಂಗಾಸನವು ಎದೆಯನ್ನು ಹಿಗ್ಗಿಸುತ್ತದೆ ಮತ್ತು ಶ್ವಾಸಕೋಶಗಳಿಗೆ ಆಮ್ಲಜನಕದ ಹರಿವನ್ನು ಸುಧಾರಿಸುತ್ತದೆ. ಚಳಿಗಾಲದಲ್ಲಿ, ಶೀತದಿಂದಾಗಿ ರಕ್ತನಾಳಗಳು ಸಂಕುಚಿತಗೊಂಡಾಗ, ಈ ಆಸನವು ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಇದು ಹೃದಯದ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ರಕ್ತದೊತ್ತಡದ ಸಮತೋಲನವನ್ನು ಕಾಪಾಡಿಕೊಳ್ಳುತ್ತದೆ ಎಂದು ಬಾಬಾ ರಾಮದೇವ್ ಹೇಳುತ್ತಾರೆ.

ಮಂಡೂಕಾಸನ

ಮಂಡೂಕಾಸನವು ಹೊಟ್ಟೆ ಮತ್ತು ನರಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ. ಚಳಿಗಾಲದಲ್ಲಿ ಬಿಪಿ ಹೆಚ್ಚಲು ಕಾರಣವಾಗುವ ಒತ್ತಡ ಹಾಗೂ ಆತಂಕವನ್ನು ಕಡಿಮೆ ಮಾಡಲು ಈ ಮಂಡೂಕಾಸನ ನೆರವಾಗುತ್ತದೆ. ಈ ಆಸನವು ದೇಹಕ್ಕೆ ಅಗತ್ಯ ವಿಶ್ರಾಂತಿ ಕೂಡ ನೀಡುತ್ತದೆ.

ಶಶಾಂಕಾಸನ

ಶಶಾಂಕಾಸನವು ಮನಸ್ಸನ್ನು ಶಾಂತಗೊಳಿಸುವ ಯೋಗಾಸನವಾಗಿದೆ. ಚಳಿಗಾಲದಲ್ಲಿ ಒತ್ತಡ ಮತ್ತು ಮಾನಸಿಕ ಒತ್ತಡವು ಬಿಪಿ ಹೆಚ್ಚಲು ಕಾರಣವಾಗಿರುತ್ತವೆ. ಮಂಡೂಕಾಸನದ ರೀತಿ ಶಶಾಂಕಾಸನವೂ ಒತ್ತಡ ನಿವಾರಿಸಿ, ಮನಸ್ಸನ್ನು ಹಗುರಗೊಳಿಸುತ್ತದೆ. ಹೃದಯದ ಬಡಿತವನ್ನು ಸಹಜ ಸ್ಥಿತಿಗೆ ತಂದು ರಕ್ತದೊತ್ತಡ ಕಡಿಮೆ ಮಾಡಲು ನೆರವಾಗುತ್ತದೆ.

ಸ್ಥಿತ ಕೋನಾಸನ

ಸ್ಥಿತ ಕೋನಾಸನವು ದೇಹದ ಸಮತೋಲನ ಮತ್ತು ರಕ್ತದ ಹರಿವನ್ನು ಸುಧಾರಿಸುತ್ತದೆ. ಇದು ಹೃದಯ ಮತ್ತು ಸ್ನಾಯುಗಳನ್ನು ಸಕ್ರಿಯವಾಗಿರಿಸುತ್ತದೆ. ಚಳಿಗಾಲದಲ್ಲಿ ರಕ್ತದೊತ್ತಡದಲ್ಲಿ ಹಠಾತ್ ಹೆಚ್ಚಳಗೊಳ್ಳುವ ಅಪಾಯವನ್ನು ಕಡಿಮೆ ಮಾಡುತ್ತದೆ. ಇದರ ನಿಯಮಿತ ಅಭ್ಯಾಸವು ದೇಹವನ್ನು ಬೆಚ್ಚಗಿಡುತ್ತದೆ ಮತ್ತು ರಕ್ತದೊತ್ತಡವನ್ನು ಸಮತೋಲನದಲ್ಲಿಡುತ್ತದೆ.

ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಈ ಅಂಶಗಳನ್ನು ಗಮನಿಸಿ

  • ಉಪ್ಪು ಸೇವನೆ ಮಿತಿಗೊಳಿಸಿ.
  • ಪ್ರತಿದಿನ ಲಘು ವ್ಯಾಯಾಮ ಅಥವಾ ನಡಿಗೆ ಮಾಡಿ.
  • ಒತ್ತಡ ಮತ್ತು ಆತಂಕದಿಂದ ದೂರವಿರಿ.
  • ಸಮಯಕ್ಕೆ ಸರಿಯಾಗಿ ಔಷಧಿಗಳನ್ನು ತೆಗೆದುಕೊಳ್ಳಿ.
  • ಸಾಕಷ್ಟು ನಿದ್ರೆ ಪಡೆಯಿರಿ.

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಈ ಜ್ಯೂಸ್‌ ಕುಡಿಯಿರಿ, ನಿಮ್ಮ ಹೊಟ್ಟೆಯ ಕೊಬ್ಬು ಬೆಣ್ಣೆಯಂತೆ ಕರಗುತ್ತದೆ – Kannada News | Drink bottled gourd juice to lose belly fat

ಪ್ರಸ್ತುತ ಕಾಲದಲ್ಲಿ ಬೊಜ್ಜಿನ (fat) ಸಮಸ್ಯೆ ಅಧಿಕ ಜನರನ್ನು ಕಾಡುತ್ತಿರುವ ಬಹು ದೊಡ್ಡ ಸಮಸ್ಯೆಯಾಗಿದೆ. ಅನಾರೋಗ್ಯಕರ ಆಹಾರ ಪದ್ಧತಿ, ಕೆಟ್ಟ ಜೀವನಶೈಲಿ ಇವೆಲ್ಲವೂ ಬೊಜ್ಜಿಗೆ ಪ್ರಮುಖ ಕಾರಣ. ಈ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡುತ್ತಾ ಹೋದರೆ ಮುಂದಿನ ದಿನಗಳಲ್ಲಿ ದೀರ್ಘಕಾಲದ ಕಾಯಿಲೆಗಳು ಕಾಣಿಸಿಕೊಳ್ಳುವ ಸಾಧ್ಯತೆ ಹೆಚ್ಚಿರುತ್ತದೆ. ಇದಲ್ಲದೆ ಹೊಟ್ಟೆಯ ಬೊಜ್ಜು ದೇಹ ಸೌಂದರ್ಯವನ್ನೇ ಹಾಳು ಮಾಡುತ್ತದೆ. ಹೀಗಿರುವಾಗ ಆರೋಗ್ಯಕರ ಆಹಾರ ಸೇವನೆ ಮಾಡುವ ಮೂಲಕ, ವ್ಯಾಯಾಮ ಮಾಡುವ ಮೂಲಕ ಬೊಜ್ಜು, ತೂಕ ಇಳಿಕೆಯನ್ನು ಮಾಡಬಹುದು. ಇದಲ್ಲದೆ ಸೋರೆಕಾಯಿ ಜ್ಯೂಸ್‌ ಸೇವನೆ ಮಾಡುವ ಮೂಲಕವೂ ಹೊಟ್ಟೆಯ ಸುತ್ತಲಿನ ಬೊಜ್ಜನ್ನು ಕರಗಿಸಬಹುದು.

ಹೊಟ್ಟೆಯ ಬೊಜ್ಜನ್ನು ಕರಗಿಸಲು ಸಹಕಾರಿ ಸೋರೆಕಾಯಿ ಜ್ಯೂಸ್:‌

ಸೋರೆಕಾಯಿ  ಅತ್ಯಂತ ಪೌಷ್ಟಿಕ ತರಕಾರಿಯಾಗಿದ್ದು, ಇದರಲ್ಲಿ ನೀರು, ನಾರು ಮತ್ತು ವಿಟಮಿನ್ ಸಿ, ಬಿ6, ಫೋಲೇಟ್, ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್‌ನಂತಹ ಅನೇಕ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿದೆ. ಈ ಪೋಷಕಾಂಶಗಳು ಆರೋಗ್ಯಕರ ದೇಹವನ್ನು ಕಾಪಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಇದಲ್ಲದೆ, ಸೋರೆಕಾಯಿಯು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಸೋರೆಕಾಯಿ ರಸವು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದ್ದು, ಇದು ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ ಮತ್ತು ವಿಷವನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ. ಅಲ್ಲದೆ ಬೊಜ್ಜನ್ನು ಕರಗಿಸಲು, ತೂಕ ಇಳಿಕೆಗೂ ಕೂಡ ಇದು ಸಹಕಾರಿ. ತೂಕ ಇಳಿಸಿಕೊಳ್ಳಲು ಬಯಸುವವರು ಪ್ರತಿನಿತ್ಯ ಸೋರೆಕಾಯಿ ಜ್ಯೂಸ್‌ ಸೇವನೆ ಮಾಡಬಹುದು.

ಇದನ್ನೂ ಓದಿ: ಆಲಸ್ಯವನ್ನು ಹೋಗಲಾಡಿಸಿ ದಿನವಿಡೀ ಆಕ್ಟಿವ್‌ ಆಗಿರಲು ಅಹಾರಗಳನ್ನು ಸೇವನೆ ಮಾಡಿ

ತೂಕ ಇಳಿಸುವಲ್ಲಿ ಸೋರೆಕಾಯಿ ಹೇಗೆ ಪರಿಣಾಮಕಾರಿ ?

  • ಇದರಲ್ಲಿ ಕ್ಯಾಲೋರಿಗಳು ತುಂಬಾ ಕಡಿಮೆ ಮತ್ತು ಫೈಬರ್ ಅಧಿಕವಾಗಿದ್ದು, ಇದು ದೀರ್ಘಕಾಲದವರೆಗೆ ಹೊಟ್ಟೆಯನ್ನು ತುಂಬಿರುವಂತೆ ಮಾಡುತ್ತದೆ.
  • ಇದು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಮಲಬದ್ಧತೆಯ ಸಮಸ್ಯೆಯನ್ನು ನಿವಾರಿಸುತ್ತದೆ.
  • ಇದರಲ್ಲಿರುವ ನೀರು ಮತ್ತು ಪೋಷಕಾಂಶಗಳು ದೇಹವನ್ನು ತಂಪಾಗಿಸಿ ಅತಿಯಾಗಿ ತಿನ್ನುವುದನ್ನು ತಡೆಯುತ್ತದೆ.
  • ಇದು ಚಯಾಪಚಯ ಕ್ರಿಯೆಯನ್ನು ಸಕ್ರಿಯವಾಗಿರಿಸುತ್ತದೆ, ಇದು ಕೊಬ್ಬನ್ನು ವೇಗವಾಗಿ ಸುಡಲು ಸಹಾಯ ಮಾಡುತ್ತದೆ.

ಸೋರೆಕಾಯಿ ಜ್ಯೂಸ್ ಹೇಗೆ ತಯಾರಿಸುವುದು?

ಈ ಜ್ಯೂಸ್‌  ತಯಾರಿಸಲು, ಮೊದಲು ಸೋರೆಕಾಯಿಯನ್ನು ತೊಳೆದು ಸಣ್ಣ ತುಂಡುಗಳಾಗಿ ಕತ್ತರಿಸಿ. ನಂತರ ಇದನ್ನು ಒಂದು ಬ್ಲೆಂಡರ್‌ಗೆ ಹಾಕಿ ಅದಕ್ಕೆ ಪುದೀನ ಎಲೆ, ಜೀರಿಗೆ ಮತ್ತು ಬ್ಲ್ಯಾಕ್‌ ಸಾಲ್ಟ್‌ ಸೇರಿಸಿ ನುಣ್ಣಗೆ ರುಬ್ಬಿ, ಬಳಿಕ  ಸೋಸಿ, ಕುಡಿಯಿರಿ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಹಿಂದೂ ಯುವತಿಯನ್ನು ಮುಸ್ಲಿಂ ವ್ಯಕ್ತಿ ಹತ್ಯೆ ಮಾಡಿದ್ಯಾಕೆ? ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಎಸ್ಪಿ – Kannada News | Uttara Kannada SP Talks about Muslim Rafiq Kills Hindu Woman Rajnitha In Yellapur

ಶಿರಸಿ, (ಜನವರಿ 04): ರಂಜಿತಾ ಎನ್ನುವ ಹಿಂದೂ ಯುವತಿಯ ಹತ್ಯೆ ಪ್ರಕಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದ್ದು, ಪ್ರಕರಣದ ಆರೋಪಿ ಯಲ್ಲಾಪುರದ ರಾಮಾಪುರ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕಾಳಮ್ಮನಗರದ ಆರೋಪಿ ಮಹಮ್ಮದ್ ರಫೀಕ್ ಇಮಾಮ್‌ಸಾಬ್ (30) ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ರಾಮಾಪುರ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ರಫಿಕ್‌ನ ಮೃತದೇಹ ಪತ್ತೆಯಾಗಿದೆ. ನಿನ್ನೆ ಆಶ್ರಯ ನಗರ ನಿವಾಸಿ ರಂಜಿತಾ ಮಲ್ಲಪ್ಪ ಬನ್ಸೊಡೆ (30) ಎಂಬ ಮಹಿಳೆಯ ಕೊಲೆಯಾಗಿತ್ತು. ಆರೋಪಿ ಮಹಮ್ಮದ್ ರಫೀಕ್ ಇಮಾಮ್‌ಸಾಬ್ ಕೊಲೆ ಮಾಡಿ ಪರಾರಿಯಾದ ಆರೋಪ ಕೇಳಿಬಂದಿತ್ತು. ಇನ್ನು ಈ ಕೊಲೆ ಖಂಡಿಸಿ ಇಂದು (ಜನವರಿ 04) ಹಿಂದೂಪರ ಸಂಘಟನೆಗಳು ಕರೆ ನೀಡಿದ್ದ ಯಲ್ಲಾಪುರ ಬಂದ್ ಯಶಸ್ವಿಯಾಗಿದೆ.  ಇನ್ನು ಈ ಪ್ರಕರಣ ಸಂಬಂಧ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ

ಇದನ್ನೂ ಓದಿ: ಮದುವೆಗೆ ಒಪ್ಪದಿದ್ದಕ್ಕೆ ಮಹಿಳೆ ಕೊಲೆ ಕೇಸ್​​ಗೆ ಟ್ವಿಸ್ಟ್​​: ಆರೋಪಿ ಕೂಡ ನೇಣಿಗೆ ಶರಣು

Source link

Ashes Sydney Test: ಹಠಾತ್ತನೆ ಸ್ಥಗಿತಗೊಂಡ ಸಿಡ್ನಿ ಟೆಸ್ಟ್ ಪಂದ್ಯ

Source link

ಆಗದವರ ಮುಖಕ್ಕೆ ಗುದ್ದಿದ ಸ್ಪರ್ಧಿಗಳು: ವಿಡಿಯೋ ನೋಡಿ – Kannada News | Bigg Boss Kannada 12: Contestants punched punching bags

ಬಿಗ್​​ಬಾಸ್ ಕನ್ನಡ ಸೀಸನ್ 12 (Bigg Boss Kannada) ಇನ್ನೇನು ಮುಗಿಯುವ ಹಂತದಲ್ಲಿದೆ. ಫಿನಾಲೆಗೆ ಇನ್ನು ಕೆಲವೇ ದಿನಗಳಷ್ಟೆ ಬಾಕಿ ಇದೆ. ಮನೆಯಲ್ಲಿ ಈಗ ಉಳಿದಿರುವುದು ಬಹುತೇಕ ಗಟ್ಟಿ ಸ್ಪರ್ಧಿಗಳೇ. ಇಂದು ಭಾನುವಾರದ ಎಪಿಸೋಡ್ ಆಗಿದ್ದು, ಇಂದು (ಡಿಸೆಂಬರ್ 04) ಮನೆಯಿಂದ ಒಬ್ಬರು ಹೊರಗೆ ನಡೆಯಲಿದ್ದಾರೆ. ಇದೀಗ ಬಿಗ್​​ಬಾಸ್ ಮನೆಯಲ್ಲಿ ಸ್ಪರ್ಧಿಗಳು ತಮಗೆ ಆಗದ ಸ್ಪರ್ಧಿಯ ಮುಖವನ್ನು ಪಂಚಿಂಗ್​ ಬ್ಯಾಗಿಗೆ ಅಂಟಿಸಿ ಮನಸೋ ಇಚ್ಛೆ ಗುದ್ದಿದ್ದಾರೆ. ರಕ್ಷಿತಾ ಅಂತೂ ಕಂಟ್ರೋಲ್ ತಪ್ಪಿ, ಬ್ಯಾಗ್ ಕಿತ್ತು ಹೋಗುವಂತೆ ಗುದ್ದಿದ್ದಾರೆ. ವಿಡಿಯೋ ನೋಡಿ…

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಸಭೆಯನ್ನ ನಗೆ ಗಡಲಲ್ಲಿ ತೇಲಿಸಿದ ಸಿಎಂ ಕುರ್ಚಿ ಮಾತು, ಜೋರಾಗಿ ನಕ್ಕ ಡಿಕೆಶಿ – Kannada News | Dk Shivakumar smile after CM Siddaramaiah jokes about chair at devanga Function

ಬೆಂಗಳೂರು, (ಜನವರಿ 04): ಸದ್ಯ ಕರ್ನಾಟಕ ಕಾಂಗ್ರೆಸ್​​ನಲ್ಲಿ ಸಿಎಂ ಕುರ್ಚಿಯದ್ದೇ ಮಾತು. ಈ ಸಂಬಂಧ ಸಿದ್ದರಾಮಯ್ಯ (Siddaramaiah) ಹಾಗೂ ಡಿಕೆ ಶಿವಕುಮಾರ್ (dk Shivakumar) ಬಣಗಳ ನಡುವೆ ಮುಸುಕಿನ ಗುದ್ದಾಟ ನಡೆದಿದೆ. ಇದರ ಮಧ್ಯೆ ಸಿಎಂ ಸಿದ್ದರಾಮಯ್ಯ, ಕುರ್ಚಿ ಬಗ್ಗೆ ಮಾತನಾಡಿ ಸಭೆಯನ್ನು ನಗೆ ಗಡಲಲ್ಲಿ ತೇಲಿಸಿದ್ದಾರೆ. ಹೌದು…ಬೆಂಗಳೂರಿನಲ್ಲಿ ದೇವಾಂಗ ಶತಮಾನೋತ್ಸವ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ವೇಳೆ ಸಿಎಂ, ತಮ್ಮ ಕುರ್ಚಿಯಲ್ಲಿ ಬೇರೊಬ್ಬರನ್ನು ಕುಳಿತುಕೊಳ್ಳಲು ಹೇಳಿದ್ದಾರೆ. ಇದನ್ನು ಕೇಳಿ ಸಿಎಂ ಕುರ್ಚಿ ಆಕಾಂಕ್ಷಿ ಡಿಸಿಎಂ ಡಿಕೆ ಶಿವಕುಮಾರ್ ಜೋರಾಗಿ ನಕ್ಕಿರುವ ಪ್ರಸಂಗ ನಡೆದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Exit mobile version