Video: 750 ಮೀಟರ್ ಪ್ರಯಾಣಕ್ಕೆ 21 ನಿಮಿಷ ತೆಗೆದುಕೊಂಡೆ; ಬೆಂಗಳೂರಿನ ಟ್ರಾಫಿಕ್ ಸಮಸ್ಯೆ ಬಿಚ್ಚಿಟ್ಟ ಮಹಿಳೆ – Kannada News | Bengaluru: Woman says traffic problem is a daily struggle for Bengaluru commuters

ಬೆಂಗಳೂರು, ಜನವರಿ 04: ಟ್ರಾಫಿಕ್ ಎಂದರೆ ಕಣ್ಣ ಮುಂದೆ ಬರುವುದೇ ಮಾಯಾನಗರಿ ಬೆಂಗಳೂರು (Bengaluru).ಇಲ್ಲಿ ಟ್ರಾಫಿಕ್‌ ಜಾಮ್‌ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಬೆಂಗಳೂರಿನ ಟ್ರಾಫಿಕ್ ಸಮಸ್ಯೆಗೆ ಮುಕ್ತಿ ಸಿಗುವಂತೆ ಕಾಣುತ್ತಿಲ್ಲ. ಪೀಕ್‌ ಟೈಮ್‌ಗಳಲ್ಲಿ ಟ್ರಾಫಿಕ್ ಜಾಮ್ ಹೆಚ್ಚಿರುತ್ತದೆ. ಬೆಂಗಳೂರಿನ ಟ್ರಾಫಿಕ್ ಸಿಲುಕಿದ ಮಹಿಳೆಯೂ 750 ಮೀಟರ್ ಪ್ರಯಾಣಕ್ಕೆ 21 ನಿಮಿಷ ತೆಗೆದುಕೊಂಡೆ ಎಂದು ಟ್ರಾಫಿಕ್ ಸಮಸ್ಯೆಯ ಬಗ್ಗೆ ಮಾತನಾಡಿದ್ದಾರೆ. ಈ ಕುರಿತಾದ ವಿಡಿಯೋ ಸದ್ಯ ವೈರಲ್ ಆಗಿದ್ದು, ನಗರದಲ್ಲಿನ ದೈನಂದಿನ ಸಂಚಾರ ತೊಂದರೆಗಳನ್ನು ಎತ್ತಿ ತೋರಿಸಿದೆ.

ಅಂಜಲಿ (anjaleeee_suresh) ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಈ ವಿಡಿಯೋವನ್ನು ಕಾರಿನ ಒಳಗಿನಿಂದ ರೆಕಾರ್ಡ್ ಮಾಡಲಾಗಿದ್ದು, ವಾಹನದ ನ್ಯಾವಿಗೇಷನ್ ಪರದೆಯ ಮೇಲೆ ಕೇಂದ್ರೀಕರಿಸಿರುವುದನ್ನು ನೋಡಬಹುದು. ಕೇವಲ 750 ಮೀಟರ್ ಕ್ರಮಿಸಲು ಅಂದಾಜು 21 ನಿಮಿಷ ತೆಗೆದುಕೊಂಡಿರುವುದನ್ನು ಇಲ್ಲಿ ತೋರಿಸಲಾಗಿದೆ. ರಾಜಧಾನಿಯಲ್ಲಿ ಅನೇಕ ಪ್ರಯಾಣಿಕರು ದೈನಂದಿನ ಹೋರಾಟ ಎಂದು ವಿವರಿಸಲಾಗಿದೆ.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ:ಜೀವನದ ಕಠಿಣ ಕ್ಷಣ: ಚರ್ಚ್ ಸ್ಟ್ರೀಟ್​​ನಲ್ಲಿ ಕಂಡ ಅದ್ಭುತ ದೃಶ್ಯ, ಕಲಿಕೆಗಾಗಿ ಈ ಹುಡುಗಿಯ ಹೋರಾಟ ನೋಡಿ

ಈ ವಿಡಿಯೋ ಒಂದೂವರೆ ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ನಡೆದುಕೊಂಡು ಹೋಗುವುದು ಉತ್ತಮ ಎಂದು ಹೇಳಿದ್ದಾರೆ. ಮತ್ತೊಬ್ಬರು, ನನಗೂ ಇಂತಹ ಅನುಭವ ಆಗಿದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನಗರದ ವಿವಿಧ ಭಾಗಗಳಲ್ಲಿ ಈ ಸಮಸ್ಯೆ ವ್ಯಾಪಕವಾಗಿದೆ ಎಂದು ಕಾಮೆಂಟ್ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಥಾರ್​ನಲ್ಲಿ ಬಂದು ಕಾರಿನ ಮೇಲೆ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು – Kannada News | Daylight Firing Incident Reported in Ghaziabad’s Raj Nagar Extension

ಗಾಜಿಯಾಬಾದ್, ಜನವರಿ 04: ಥಾರ್​ನಲ್ಲಿ ಬಂದ ದುಷ್ಕರ್ಮಿಗಳು ಕಾರಿನ ಮೇಲೆ ಗುಂಡಿನ ದಾಳಿ ನಡೆಸಿರುವ ಘಟನೆ ಗಾಜಿಯಾಬಾದ್​ನ ನಂದಗ್ರಾಮ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಬಲೆನೊ ಕಾರಿಗೆ ಮೂರು ಗುಂಡುಗಳು ತಗುಲಿವೆ. ಸಿಕ್ರೋಡ್ ನಿವಾಸಿ ಸುನಿಲ್ ಕುಮಾರ್, ಮುಖ್ಯ ರಸ್ತೆಯಲ್ಲಿರುವ ತಮ್ಮ ಮನೆಯಲ್ಲಿ ದಿನಸಿ ಅಂಗಡಿ ನಡೆಸುತ್ತಿದ್ದಾರೆ. ಶನಿವಾರ ಬೆಳಗ್ಗೆ 10 ಗಂಟೆ ಸುಮಾರಿಗೆ, ಅವರ ಮಗ ಶುಭಮ್ ಮನೆಯ ಬಳಿ ನಿಂತಿದ್ದರು, ಅವರ ಇನ್ನೊಬ್ಬ ಮಗ ಹರ್ಷ್ ತನ್ನ ಸ್ನೇಹಿತ ಅಂಕುರ್ ಜೊತೆ ಬಲೆನೊ ಕಾರಿನಲ್ಲಿದ್ದರು. ಮೀರತ್ ರಸ್ತೆಯಿಂದ ಬರುತ್ತಿದ್ದ ಕಪ್ಪು ಬಣ್ಣದ ಥಾರ್, ಬಲೆನೊ ಕಾರನ್ನು ಸಮೀಪಿಸುತ್ತಿದ್ದಂತೆ ಕಾರಿನಲ್ಲಿದ್ದ ದುಷ್ಕರ್ಮಿಗಳು ಮೂರು ಗುಂಡುಗಳನ್ನು ಹಾರಿಸಿದ್ದರು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

VIDEO: ಶತಕ ಬಾರಿಸಿ ಅಶ್ಲೀಲವಾಗಿ ಸಂಭ್ರಮಿಸಿದ RCB ಆಟಗಾರ – Kannada News | Swapnil Singh’s magnificent century in the Vijay Hazare Trophy

ವಿಜಯ ಹಝಾರೆ ಟೂರ್ನಿಯಲ್ಲಿ ಕರ್ನಾಟಕ ವಿರುದ್ಧ ಶತಕ ಸಿಡಿಸಿ ತ್ರಿಪುರ ಆಟಗಾರ ಸ್ವಪ್ನಿಲ್ ಸಿಂಗ್ ಅಶ್ಲೀಲವಾಗಿ ಸಂಭ್ರಮಿಸಿದ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕರ್ನಾಟಕ ತಂಡದ ಪರ ದೇವದತ್ ಪಡಿಕ್ಕಲ್ (108) ಶತಕ ಸಿಡಿಸಿದ್ದರು. ಈ ಶತಕದ ನೆರವಿನೊಂದಿಗೆ ಕರ್ನಾಟಕ ತಂಡವು 50 ಓವರ್​ಗಳಲ್ಲಿ 332 ರನ್ ಕಲೆಹಾಕಿತು.

ಈ ಕಠಿಣ ಗುರಿ ಬೆನ್ನತ್ತಿದ ತ್ರಿಪುರ ಪರ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸ್ವಪ್ನಿಲ್ ಸಿಂಗ್ 93 ಎಸೆತಗಳಲ್ಲಿ 2 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ ಶತಕ ಸಿಡಿಸಿದರು. ಈ ಶತಕದ ಬೆನ್ನಲ್ಲೇ ಬ್ಯಾಟ್ ಮೂಲಕ ಅಶ್ಲೀಲ ಸನ್ನೆ ಮಾಡಿ ಸ್ವಪ್ನಿಲ್ ವಿಚಿತ್ರವಾಗಿ ಸಂಭ್ರಮಿಸಿದರು. ಇದೀಗ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇನ್ನು ಈ ಪಂದ್ಯದಲ್ಲಿ 333 ರನ್​ಗಳ ಗುರಿ ಬೆನ್ನತ್ತಿದ ತ್ರಿಪುರ ತಂಡವು 49 ಎಸೆತಗಳಲ್ಲಿ 252 ರನ್ ಕಲೆಹಾಕಲಷ್ಟೇ ಶಕ್ತರಾದರು. ಈ ಮೂಲಕ ಕರ್ನಾಟಕ ತಂಡವು 80 ರನ್​ಗಳ ಜಯ ಸಾಧಿಸಿದೆ.

ಅಂದಹಾಗೆ ಸ್ವಪ್ನಿಲ್ ಸಿಂಗ್ ಮುಂಬರುವ ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಕಣಕ್ಕಿಳಿಯಲಿದ್ದಾರೆ. ಕಳೆದೆರಡು ಸೀಸನ್​ಗಳಿಂದ ಆರ್​ಸಿಬಿ ತಂಡದ ಭಾಗವಾಗಿರುವ ಸ್ವಪ್ನಿಲ್ ಮುಂಬರುವ ಟೂರ್ನಿಯಲ್ಲಿ ಆರ್​ಸಿಬಿ ತಂಡದ ಸ್ಪಿನ್ನರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.

 

Source link

ಯಶ್ ತಾಯಿ ಪುಷ್ಪಾ ಮನೆ ಕಾಂಪೌಂಡ್ ಧ್ವಂಸ: ಲಾಯರ್ ಮೊದಲ ಪ್ರತಿಕ್ರಿಯೆ – Kannada News | Yash mother Pushpa house compound demolished Layer first reaction

ಹಾಸನದಲ್ಲಿ ಇರುವ ಯಶ್ ತಾಯಿ (Yash Mother) ಪುಷ್ಪಾ ಅರುಣ್​ಕುಮಾರ್ ಅವರ ಮನೆಯ ಕಾಂಪೌಂಡ್ ಧ್ವಂಸ ಮಾಡಲಾಗಿದೆ. ದೇವರಾಜು ಎಂಬುವವರು ಕೋರ್ಟ್ ಆದೇಶದ ಮೇರೆಗೆ ಕೌಂಪೌಂಡ್ ತೆರವುಗೊಳಿಸಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪುಷ್ಪಾ ಅರುಣ್​ಕುಮಾರ್ ಪರ ಲಾಯರ್ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ‘ದೇವರಾಜು ಅವರು ಪಡೆದುಕೊಂಡ ಆದೇಶಕ್ಕೆ ಸಂಬಂಧಿಸಿದ ಆಸ್ತಿಯೇ ಬೇರೆ. ಈ ಆಸ್ತಿಯೇ ಬೇರೆ. ಇದರಲ್ಲಿ ಅವರು ಸ್ವಾದೀನ ಪಡೆಯಬೇಕು ಎಂದರೆ ಪ್ರತ್ಯೇಕ ಆದೇಶ ಪಡೆಯಬೇಕು. ದುರುದ್ದೇಶದಿಂದ ಅವರು ಆದೇಶ ಪಡೆದುಕೊಂಡಿದ್ದಾರೆ. ನೋಟಿಸ್ ಜಾರಿ ಆಗಿಲ್ಲ. ಅದೇ ಹಿನ್ನಲೆಯಲ್ಲಿ ನಾನು ಪ್ರಕರಣ ದಾಖಲಿಸಿದ್ದೇವೆ. ಕೊನೆ ಹಂತದಲ್ಲಿ ಈ ರೀತಿ ಮಾಡಿದ್ದಾರೆ’ ಎಂದು ಪುಷ್ಪಾ ಅರುಣ್​ಕುಮಾರ್ (Pushpa Arunkumar) ಪರ ವಕೀಲರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಟ್ಯಾಕ್ಸ್ ವಂಚನೆ ಆರೋಪ: ಬೆಂಗಳೂರಿನಲ್ಲಿ ಐಷಾರಾಮಿ ಕಾರು ಸೀಜ್!

ಬೆಂಗಳೂರು, ಜನವರಿ 04:  ಟ್ಯಾಕ್ಸ್ ವಂಚನೆ ಆರೋಪದ ಹಿನ್ನೆಲೆ ನಗರದಲ್ಲಿ ಐದೂವರೆ ಕೋಟಿ ರೂ. ಮೌಲ್ಯದ ಬೆಂಟ್ಲಿ ಕಾರನ್ನು ಕೋರಮಂಗಲದಲ್ಲಿ ಆರ್‌ಟಿಒ ಅಧಿಕಾರಿಗಳು ಸೀಜ್ ಮಾಡಿದ್ದಾರೆ. ಕಾರು ನೋಂದಣಿ ವೇಳೆ 5 ಕೋಟಿ 50 ಲಕ್ಷ ರೂ. ಮೌಲ್ಯದ ಕಾರನ್ನು ಕೇವಲ 2 ಕೋಟಿ 43 ಲಕ್ಷ 50 ಸಾವಿರ ರೂ. ಎಂದು ದಾಖಲಿಸಿದ್ದು, ಸುಮಾರು 70 ಲಕ್ಷ ರೂ. ತೆರಿಗೆ ವಂಚನೆ ಮಾಡಿರುವ ಆರೋಪ ಕೇಳಿಬಂದಿದೆ. ಕಾರು ಸೀಜ್ ಮಾಡುವ ವೇಳೆ ಮಾಲೀಕ ಗಲಾಟೆ ನಡೆಸಿದ್ದು, ವಿಜಯ್ ಮಲ್ಯ ಹಾಗೇ ನಾವು ಫ್ರಾಡ್ ಅಲ್ಲ. RTO ನವರೆ ಫ್ರಾಡ್ ಎಂದು ಎಂದು ವಾದಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಳ್ಳಾರಿ ಗಲಾಟೆ ಪ್ರಕರಣದ ತನಿಖೆ ಸಿಐಡಿಗೆ? ಕೇಸ್​ ಬಗ್ಗೆ ಪರಮೇಶ್ವರ್​​ ಬಿಗ್​​ಅಪ್ಡೇಟ್​ – Kannada News | Ballari Banner Clash: Is the Case Being Handed Over to the CBI?

ಗೃಹ ಸಚಿವ ಜಿ. ಪರಮೇಶ್ವರ್​​

ಬೆಂಗಳೂರು, ಜನವರಿ 04: ಬ್ಯಾನರ್​​ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದಿದ್ದ ಗಲಾಟೆ ವೇಳೆ  ಕಾಂಗ್ರೆಸ್​​ ಕಾರ್ಯಕರ್ತ ಮೃತಪಟ್ಟಿದ್ದ ಪ್ರಕರಣದ ತನಿಖೆ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್​​ ಅಪ್ಡೇಟ್​​ ನೀಡಿದ್ದಾರೆ. ಕೇಸ್​​ ತನಿಖೆ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತನಾಡ್ತೇನೆ. ಅಗತ್ಯಬಿದ್ದರೆ ಸಿಐಡಿಗೆ ಕೊಡುತ್ತೇವೆ ಎಂದು ತಿಳಿಸಿದ್ದಾರೆ.

ಪೊಲೀಸರ ಗನ್ ಹಾಗೂ ರಿವಾಲ್ವರ್​ನಿಂದ ಫೈರಿಂಗ್​ ಆಗಿಲ್ಲ, ಖಾಸಗಿ ಗನ್​ನಿಂದ ಫೈರಿಂಗ್​ ಆಗಿದ್ದೆಂದು ಎಡಿಜಿಪಿ ದೃಢಪಡಿಸಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಆರೋಪಿಗಳನ್ನು ಬಂಧಿಸ್ತೇವೆ. ಹತ್ಯೆಗೆ ಪೆಟ್ರೋಲ್ ಬಾಂಬ್ ಬಳಕೆ ಮಾಡಿದ್ದಾರೆಂಬ ಆರೋಪವೂ ಇದ್ದು,ತನಿಖೆ ಆದಮೇಲೆ ಅದೆಲ್ಲ ಗೊತ್ತಾಗುತ್ತೆ ಎಂದು ಗೃಹ ಸಚಿವರು ಹೇಳಿದ್ದೇರಾ. ತಮಗೆ ಮತ್ತು ತಮ್ಮ ಕುಟುಂಬಕ್ಕೆ ಭದ್ರತೆ ಕೋರಿ ಸಿಎಂ, ಗೃಹ ಸಚಿವರಿಗೆ ಶಾಸಕ ಜನಾರ್ದನರೆಡ್ಡಿ ಪತ್ರ ಬರೆದ ವಿಚಾರ ಸಂಬಂಧವೂ ಪ್ರತಿಕ್ರಿಯಿಸಿದ ಪರಮೆಶ್ವರ್​​, ಶಾಸಕರ ಲೆಟರ್ ನನಗೆ ಇನ್ನೂ ತಲುಪಿಲ್ಲ. ಪತ್ರ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಜನಾರ್ದನ ರೆಡ್ಡಿ ಬಳ್ಳಾರಿಗೆ ವಾಪಸಾದ ಮೇಲೆ ಗಲಾಟೆ ಎಂಬ ವಿಚಾರ ಕಾಕತಾಳೀಯವೋ ಏನೋ ಗೊತ್ತಿಲ್ಲ, ಆದರೆ ಅವರು ಬಂದ ಮೇಲೆ ಕಲಹ ಆಗಿರೋದು ನಿಜ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಬಳ್ಳಾರಿ ಬ್ಯಾನರ್​​ ಗಲಾಟೆಗೆ ಸ್ಫೋಟಕ ತಿರುವು​​: ರಾಜಶೇಖರ್​​ಗೆ ತಗುಲಿದ್ದ ಬುಲೆಟ್​​ ಸತ್ಯ ರಿವೀಲ್​​

ಬ್ಯಾನರ್ ಗಲಾಟೆ ವೇಳೆ ಸತೀಶ್ ರೆಡ್ಡಿ ಖಾಸಗಿ ಗನ್‌ಮ್ಯಾನ್‌ ಗುರುಚರಣ್ ಸಿಂಗ್ ಬಂದೂಕಿನಿಂದ ಹಾರಿದ್ದ ಬುಲೆಟ್‌ ತಗುಲಿ ಕಾಂಗ್ರೆಸ್​​ ಕಾರ್ಯಕರ್ತ ರಾಜಶೇಖರ್​​ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಟಿವಿ9ಗೆ ಈ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. ರಾಜಶೇಖರ ಬೆನ್ನು ಹೊಕ್ಕು ಎದಿಯಿಂದ ಆಚೆ ಬಂದಿದ್ದ ಗುಂಡನ್ನು ಪೋಸ್ಟ್ ಮಾರ್ಟಮ್ ವೇಳೆ ಹೊರ ತೆಗೆಯಲಾಗಿದೆ. ಹೊರ ತೆಗೆದ ಬುಲೆಟ್​​ನ ಫಾರೆನ್ಸಿಕ್ ಲ್ಯಾಬ್ ಗೆ ಪರಿಶೀಲನೆಗೆ ಕಳುಹಿಸಲಾಗಿದ್ದು, ದೊರೆತಿರೋದು 12 ಎಂಎಂ ಸಿಂಗಲ್‌ಬೋರ್ ಗುಂಡು ಎಂಬುದು ದೃಢಪಟ್ಟಿದೆ. ಕೇವಲ ನಾಲ್ಕೈದು ಅಡಿ ದೂರದಲ್ಲಿ ಗುಂಡು‌ಹಾರಿದ ಹಿನ್ನೆಲೆ ಓರ್ವ ಮಾತ್ರ ಸಾವನ್ನಪ್ಪಿದ್ದಾನೆ. ಯಾಕೆಂದ್ರೆ ಈ ಸಿಂಗಲ್‌ಬೋರ್ ಬುಲೆಟ್ ಹಾರಿದ ಬಳಿಕ ಸ್ಪ್ರೆಡ್ ಆಗೋ ವಿಶೇಷತೆ ಹೊಂದಿದೆ.
ಬುಲೆಟ್ ಹತ್ತು ಅಡಿಗಿಂತ ದೂರ ಹಾರಿದ್ರೇ ಬುಲೆಟ್ ಸ್ಪ್ರೆಡ್ ಆಗಿ ಇನ್ನಷ್ಟು ಜನರ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇತ್ತು ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Mangaluru: ಕೋಟಿ ಚೆನ್ನಯ್ಯರ ಕಟಕಟೆ ತಲುಪಿದ ಕೋಳಿ ಅಂಕ ವಿವಾದ: ದೈವ ಕೊಟ್ಟ ಅಭಯವೇನು? – Kannada News | Kankanady Traditional Cockfighting Ban: Daiva’s Assurance Amid Police Restrictions

ಮಂಗಳೂರು, ಜನವರಿ 04: ಕಾನೂನಿನ ನೆಪವೊಡ್ಡಿ ಪ್ರಸಿದ್ಧ ಕಂಕನಾಡಿ ಗರೋಡಿ ದೈವಸ್ಥಾನದ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಖಾಕಿ ತಡೆ ವಿಚಾರವೀಗ ಕೋಟಿ ಚೆನ್ನಯ್ಯರ ಕಟಕಟೆ ತಲುಪಿದೆ. ಜೂಜು, ಪ್ರಾಣಿ ಹಿಂಸೆ ಕಾರಣ ನೀಡಿ ಕೋಳಿ ಅಂಕಕ್ಕೆ ಮಂಗಳೂರು ಪೊಲೀಸರು ಅನುಮತಿ ನಿರಾಕರಣೆ ಬೆನ್ನಲ್ಲೇ ಗರೋಡಿ ಆಡಳಿತ ಸಮಿತಿ ದೈವಗಳ ಮೊರೆ ಹೋಗಿದೆ. ಈ ವೇಳೆ ಅಭy ನೀಡಿರುವ ದೈವ, ‘ಹಿಂದೆ ಕೋಳಿ ಅಂಕ ನಿಲ್ಲಲು ಬಿಟ್ಟಿಲ್ಲ, ಮುಂದೆಯೂ ಬಿಡುವುದಿಲ್ಲ’ ಎಂದು ತಿಳಿಸಿದೆ.

ವಿಟ್ಲ ಕೇಪು ಉಳ್ಳಾಲ್ತಿ ಬಳಿಕ ಇದೀಗ, 150 ವರ್ಷಗಳ ಇತಿಹಾಸವಿರುವ ಕಂಕನಾಡಿ ಗರೋಡಿ ಜಾತ್ರೆಯ ಸಾಂಪ್ರಾದಾಯಿಕ ಕೋಳಿ ಅಂಕಕ್ಕೆ ಅನುಮತಿ ನಿರಾಕರಿಸಲಾಗಿದೆ. ಹಲವು ಬಾರಿ ಮನವಿ, ಮನವರಿಕೆ ಮಾಡಿದರೂ ಪೊಲೀಸರು ಒಪ್ಪಿಲ್ಲ. ಹೀಗಾಗಿ ಬೇರೆ ದಾರಿ ಕಾಣದೆ ಗರೋಡಿ ಆಡಳಿತ ಸಮಿತಿ ಕೋಟಿ ಚೆನ್ನಯ್ಯ ದೈವಗಳ ಮೊರೆ ಹೋಗಿದೆ. ದೈವವೇ ದಾರಿ ತೋರಿಸಿಕೊಡಬೇಕು ಎಂದು ಪ್ರಾರ್ಥನೆ ಸಲ್ಲಿಸಿದೆ.
ಯಾಕೆ ಈ ಬಾರಿ ಕೋಳಿ ಅಂಕ ನಡೆದಿಲ್ಲ ಎಂದು ದರ್ಶನದ ವೇಳೆ ದೈವಗಳು ಪ್ರಶ್ನೆ ಮಾಡಿದ್ದು, ಪೊಲೀಸ್‌ ಇಲಾಖೆಯಿಂದ ಕೋಳಿ ಅಂಕಕ್ಕೆ ತಡೆ ಎಂದು ಭಕ್ತರು ತಿಳಿಸಿದ್ದಾರೆ.

ಇದನ್ನೂ ಓದಿ: ಕೋಳಿ ಅಂಕ; ಕಾಂಗ್ರೆಸ್ ಶಾಸಕ ಆಯ್ತು ಈಗ ಬಿಜೆಪಿ ಮಾಜಿ ಶಾಸಕ, ಜಿಲ್ಲಾಧ್ಯಕ್ಷ ಸೇರಿ 27 ಜನರ ವಿರುದ್ಧ ಕೇಸ್

ಇನ್ನು ಕೋಳಿ ಅಂಕಕ್ಕೆ ತಡೆ ವಿಚಾರವಾಗಿ ಗರಡಿ ಕ್ಷೇತ್ರದ ಟ್ರಸ್ಟಿ ಚಂದ್ರನಾಥ್ ಅತ್ತಾವರ ಟಿವಿ9ಗೆ ಪ್ರತಿಕ್ರಿಯಿಸಿದ್ದಾರೆ. ಕಂಕನಾಡಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಕಾರ್ಣಿಕದ ಕತೆ ಬಹಳ ಇದ್ದು,1997ರ ಆಯೋಧ್ಯೆ ರಾಮ ಮಂದಿರ ವಿವಾದದ ಕರ್ಫ್ಯೂ ವೇಳೆಯೂ ಇಲ್ಲಿ ಕೋಳಿ ಅಂಕ ನಡೆಸಲಾಗಿತ್ತು. ಕೊರೊನಾ ಸಂದರ್ಭದಲ್ಲೂ ಆಯೋಜಿಸಲಾಗಿತ್ತು. ದೈವಗಳಿಗೆ ಪ್ರಾರ್ಥನೆ ಬೆನ್ನಲ್ಲೆ ಎಲ್ಲಾ ಅಡೆತಡೆಗಳು ಪರಿಹಾರವಾಗಿತ್ತು. ಇದೀಗ ಮತ್ತೆ ಕೋಳಿ ಅಂಕವನ್ನ ಸುಸೂತ್ರವಾಗಿ ನಡೆಸೋದಾಗಿ  ದೈವ ನುಡಿ ಕೊಟ್ಟಿದೆ. ಜೂಜು ನಡೆದರೆ ಪೊಲೀಸರು ಕ್ರಮ ಕೈಗೊಳಲಿ. ಆದ್ರೆ ಭಕ್ತರ ಧಾರ್ಮಿಕ ನಂಬಿಕೆಗೆ ಅಡ್ಡಿಪಡಿಸಬಾರದು ಎಂದು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 10:21 am, Sun, 4 January 26

Source link

ಪ್ರಿಯಕರನ ಜತೆ ಓಡಿ ಹೋಗಲು 3 ಮಕ್ಕಳಿಗೆ ಹಣ್ಣಿನಲ್ಲಿ ನಿದ್ರೆ ಮಾತ್ರೆ ಬೆರೆಸಿ, ಕತ್ತು ಹಿಸುಕಿ ಕೊಂದ ಮಹಿಳೆ – Kannada News | Pakistan Woman Arrested After Deaths of Three Children in Domestic Tragedy

ಮಾತ್ರೆಗಳು-ಸಾಂದರ್ಭಿಕ ಚಿತ್ರImage Credit source: Dateline Health Africa

ಲಾಹೋರ್, ಜನವರಿ 04: ವಿವಾಹಿತ ಮಹಿಳೆಗೆ ಬೇರೆ ಪುರುಷನೊಟ್ಟಿಗೆ ಅಕ್ರಮ ಸಂಬಂಧವಿತ್ತು, ಆತನ ಜತೆಯೇ ಇರಲಿ ಆಕೆ ಬಯಸಿದ್ದಳು. ಹಾಗಾಗಿ ಮೂವರು ಮಕ್ಕಳಿಗೆ ನಿದ್ರೆ ಮಾತ್ರೆ ಹಾಕಿ ಸಾಯಿಸಿರುವ ಘಟನೆ ಪಾಕಿಸ್ತಾನ(Pakistan)ದಲ್ಲಿ ನಡೆದಿದೆ. ವಿವಾಹಿತ ಮಹಿಳೆ ಮತ್ತು ಆಕೆಯ ಪ್ರಿಯಕರನನ್ನು ಮದುವೆಯಾಗಲು ತನ್ನ ಮೂವರು ಚಿಕ್ಕ ಮಕ್ಕಳನ್ನು ಕೊಂದ ಆರೋಪದ ಮೇಲೆ ಬಂಧಿಸಲಾಗಿದೆ. ಲಾಹೋರ್‌ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಪಂಜಾಬ್ ಪ್ರಾಂತ್ಯದ ಗುಜರಾತ್ ಜಿಲ್ಲೆಯ ಸರೈ ಅಲಮ್‌ಗಿರ್‌ನಲ್ಲಿ ಈ ಹತ್ಯೆ ನಡೆದಿದೆ.

ಇಬ್ಬರು ಹೆಣ್ಣುಮಕ್ಕಳು ಮತ್ತು ಮೂರರಿಂದ ಏಳು ವರ್ಷದೊಳಗಿನ ಮಗನಿಗೆ ನಿದ್ರೆ ಮಾತ್ರೆಗಳನ್ನು ನೀಡಿ ನಂತರ ಕತ್ತು ಹಿಸುಕಿ ಕೊಲ್ಲಲಾಗಿದೆ ಎಂದು ಆರೋಪಿಸಲಾಗಿದೆ.

ಪೊಲೀಸರು ಆ ಮಹಿಳೆಯನ್ನು ಸಿದ್ರಾ ಬಶೀರ್ ಮತ್ತು ಆಕೆಯ ಸಹಚರ ಬಾಬರ್ ಹುಸೇನ್ ಎಂದು ಗುರುತಿಸಿದ್ದಾರೆ. ತನಿಖಾಧಿಕಾರಿಗಳ ಪ್ರಕಾರ, ಇಬ್ಬರೂ ಸುಮಾರು ಒಂದೂವರೆ ವರ್ಷಗಳ ಹಿಂದೆ ಭೇಟಿಯಾಗಿದ್ದರು ಮತ್ತು ನಂತರ ಮದುವೆಯಾಗಲು ನಿರ್ಧರಿಸಿದ್ದರು.

ಮಹಿಳೆ ಪದೇ ಪದೇ ತನ್ನ ಪತಿಗೆ ವಿಚ್ಛೇದನ ಕೇಳುತ್ತಿದ್ದಳು ಮತ್ತು ಆಗಾಗ ಅವರೊಂದಿಗೆ ಜಗಳವಾಡುತ್ತಿದ್ದರು ಎಂದು ಪಿಟಿಐ ಉಲ್ಲೇಖಿಸಿ ಪೊಲೀಸ್ ಅಧಿಕಾರಿ ಒಮರ್ ಫಾರೂಕ್ ಹೇಳಿದ್ದಾರೆ.
ಮಕ್ಕಳು ಜೀವಂತವಾಗಿರುವಾಗ ಮದುವೆಯಾಗಲು ಸಾಧ್ಯವಿಲ್ಲ ಎಂದು ಅವರಿಬ್ಬರು ಮಕ್ಕಳನ್ನು ಕೊಲ್ಲಲು ಪ್ಲ್ಯಾನ್ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಚಾರಣೆಯ ಸಮಯದಲ್ಲಿ, ಸಿದ್ರಾ ಮತ್ತು ಹುಸೇನ್ ಆ ಕಾರಣಕ್ಕಾಗಿ ಮಕ್ಕಳನ್ನು ಕೊಂದಿದ್ದಾಗಿ ಒಪ್ಪಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಪೊಲೀಸರ ಪ್ರಕಾರ, ಇಬ್ಬರು ಹಣ್ಣಿನ ಚಾಟ್‌ನಲ್ಲಿ ಹೆಚ್ಚಿನ ಪ್ರಮಾಣದ ನಿದ್ರೆ ಮಾತ್ರೆಗಳನ್ನು ಬೆರೆಸಿ ಮಕ್ಕಳಿಗೆ ನೀಡಿದ್ದರು. ಮಕ್ಕಳು ಗಾಢ ನಿದ್ರೆಗೆ ಜಾರಿದ ನಂತರ, ಅವರನ್ನು ಒಬ್ಬೊಬ್ಬರಾಗಿ ಕತ್ತು ಹಿಸುಕಲಾಯಿತು.

ಮತ್ತಷ್ಟು ಓದಿ: ಹೊಸ ವರ್ಷದ ದಿನ ಭಾರತಕ್ಕೆ ಬೆದರಿಕೆ ಹಾಕಿದ ಪಾಕಿಸ್ತಾನ

ಇಬ್ಬರೂ ಶವಗಳನ್ನು ಗುರುತಿಸಲಾಗದಂತೆ ನಿರ್ಜನ ಸ್ಥಳದಲ್ಲಿ ಸುಟ್ಟುಹಾಕಿ ನಂತರ ಅಲ್ಲಿ ಹೂತುಹಾಕಿದರು ಎಂದು ಫಾರೂಕ್ ಹೇಳಿದರು. ಸಿದ್ರಾ ಅವರ ಪತಿ ತನ್ನ ಪತ್ನಿ ಮತ್ತು ಅವರ ಮೂವರು ಮಕ್ಕಳು ಕಾಣೆಯಾಗಿರುವ ಕುರಿತು ದೂರು ದಾಖಲಿಸಿದ ನಂತರ ಅಪರಾಧ ಬೆಳಕಿಗೆ ಬಂದಿತ್ತು. ವರದಿ ದಾಖಲಾದ ನಂತರ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿದರು.
ಮಹಿಳೆಯನ್ನು ಪತ್ತೆಹಚ್ಚುವುದು ಕಷ್ಟಕರವಾದ ಕೆಲಸವಾಗಿತ್ತು.

ನಮ್ಮ ಗುಪ್ತಚರ ತಂಡವು ಯಶಸ್ವಿಯಾಗಿದೆ ಮತ್ತು ಆಕೆಯನ್ನು ಬಂಧಿಸಿದೆ ಎಂದು ಫಾರೂಕ್ ಹೇಳಿದರು. ಆಕೆಯ ಬಂಧನದ ನಂತರ, ನಾವು ಆಕೆಯ ಪ್ರಿಯಕರ ಬಾಬರ್ ಹುಸೇನ್‌ನನ್ನು ಸಹ ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ. ವಿಚಾರಣೆಯ ಸಮಯದಲ್ಲಿ, ಸಿದ್ರಾ ಕೊಲೆಗಳನ್ನು ಒಪ್ಪಿಕೊಂಡಿದ್ದಾಳೆ ಮತ್ತು ಶವಗಳನ್ನು ಹೂಳಿದ್ದ ಸ್ಥಳಕ್ಕೆ ಪೊಲೀಸರನ್ನು ಕರೆದೊಯ್ದಿದ್ದಾಳೆ ಎಂದು ಹೇಳಲಾಗಿದೆ.

ತನಿಖೆಯನ್ನು ಪೂರ್ಣಗೊಳಿಸಲು ವಿಧಿವಿಜ್ಞಾನ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇಬ್ಬರೂ ಶಂಕಿತರನ್ನು ಇನ್ನೂ ಬಂಧನದಲ್ಲಿಟ್ಟು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಭೂ ಒತ್ತುವರಿ ಆರೋಪ: ಯಶ್ ತಾಯಿ ಪುಷ್ಪಾ ಮನೆ ಕಾಂಪೌಂಡ್ ಧ್ವಂಸ – Kannada News | Yash mother Pushpa house Compound in Hassan demolished on court order

ಹಾಸನದಲ್ಲಿ ನಟ ಯಶ್ (Yash) ತಾಯಿ ಪುಷ್ಪಾ ಅವರ ವಿರುದ್ಧ ಭೂಒತ್ತುವರಿ ಆರೋಪ ಇದೆ. ​ಲಕ್ಷ್ಮಮ್ಮ ಎಂಬುವವರ ಜಾಗದಲ್ಲಿ ಪುಷ್ಪಾ ಅಕ್ರಮವಾಗಿ ಕಾಂಪೌಂಡ್ ನಿರ್ಮಾಣ ಮಾಡಿಸಿದ್ದಾರೆ ಎನ್ನಲಾಗಿದೆ. ​ಸುಮಾರು 1,500 ಅಡಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂದು ದೇವರಾಜು ಅವರು ಪುಷ್ಪಾ (Yash mother Pushpa) ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್​ ಆದೇಶದ ಮೇರೆಗೆ ಹಾಸನದ ವಿದ್ಯಾನಗರದಲ್ಲಿರುವ ಪುಷ್ಪಾ ಅವರ ಮನೆಯ ಕಾಂಪೌಂಡ್ ತೆರವುಗೊಳಿಸಲಾಗಿದೆ. ಅಕ್ರಮವಾಗಿ ಕಟ್ಟಿದ್ದ ಗೋಡೆಯನ್ನು ಜಿಪಿಎ ಹೋಲ್ಡರ್ ತೆರವುಗೊಳಿಸಿದ್ದಾರೆ. ಈ ಸಂದರ್ಭದ ವಿಡಿಯೋ ಲಭ್ಯವಾಗಿದೆ. ಸಿನಿಮಾ, ಹಣಕಾಸಿನ ವ್ಯವಹಾರ, ಜಮೀನು ಮುಂತಾದ ವಿಚಾರಗಳಿಗೆ ಸಂಬಂಧಿಸಿದಂತೆ ಈ ಮೊದಲು ಕೂಡ ಪುಷ್ಪಾ ಅರುಣ್​ಕುಮಾರ್ (Pushpa Arunkumar) ಅವರು ವಿವಾದ ಮಾಡಿಕೊಂಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Video: ಎಡಗಡೆಯಿಂದ ಲಾರಿ ಓವರ್ ಟೇಕ್ ಮಾಡಲು ಹೋಗಿ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಸಾವು – Kannada News | Fatal Road Accident in Hanumakonda as Biker Loses Control While Passing Truck

ಹನುಮಕೊಂಡ, ಜನವರಿ 04: ಎಡಗಡೆಯಿಂದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಪ್ರಾಣ ಕಳೆದುಕೊಂಡಿರುವ ಘಟನೆ ತೆಲಂಗಾಣದ ಹನುಮಕೊಂಡದಲ್ಲಿ ನಡೆದಿದೆ. ಎಲ್‌ಪಿಜಿ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡಲು ಹೋಗಿ ಬೈಕ್ ಸವಾರ ಚಕ್ರದಡಿ ಸಿಲುಕಿದ್ದಾನೆ.ಈ ಘಟನೆ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ವಿಡಿಯೋ ಆನ್‌ಲೈನ್‌ನಲ್ಲಿ ವೈರಲ್ ಆಗಿದೆ. ಜಿಲ್ಲೆಯ ಕಮಲಾಪುರ ಪ್ರದೇಶದಲ್ಲಿ ಲಾರಿಯನ್ನು ಎಡಭಾಗದಿಂದ ಹಿಂದಿಕ್ಕಲು ಪ್ರಯತ್ನಿಸಿದಾಗ ಈ ಅಪಘಾತ ಸಂಭವಿಸಿದೆ. ಸಿಸಿಟಿವಿ ದೃಶ್ಯಾವಳಿಗಳಲ್ಲಿ, ಭಾರೀ ವಾಹನವನ್ನು ಹಿಂದಿಕ್ಕಲು ಬೈಕ್ ಸವಾರ ತನ್ನ ಬೈಕಿನ ವೇಗ ಹೆಚ್ಚಿಸಲು ಪ್ರಯತ್ನಿಸಿದಾಗ ಈ ಘಟನೆ ನಡೆದಿದೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Exit mobile version