ಖಾಸಗಿ ಭೇಟಿ ವೇಳೆ ಗಿಲ್ಲಿಗೆ ಒಂದೊಳ್ಳೆ ಕಿವಿಮಾತು ಹೇಳಿದ ಸುದೀಪ್; ಅಳವಡಿಸಿಕೊಂಡರೆ ಬಾಳು ಬಂಗಾರ – Kannada News | English:** Kiccha Sudeep’s Golden Advice to Bigg Boss Winner Gilli: Think Before You Step!

ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ವಿನ್ನರ್ ಆಗಿದ್ದಾರೆ. ಇದರ ಹಿಂದೆ ಕಿಚ್ಚ ಸುದೀಪ್ ಶ್ರಮ ಕೂಡ ಇದೆ ಎಂದರೂ ತಪ್ಪಾಗಲಾರದು. ಬಿಗ್ ಬಾಸ್ ಮನೆಯಲ್ಲಿ ಇರುವಾಗ ಯಾವ ರೀತಿಯಲ್ಲಿ ಆಡುತ್ತಿದ್ದೇವೆ ಎಂಬುದು ಗೊತ್ತೇ ಆಗೋದಿಲ್ಲ. ಮಾತು, ಆಟ, ವ್ಯಕ್ತಿತ್ವ ಹೀಗೆಯೇ ಎಲ್ಲವೂ ತಪ್ಪುತ್ತದೆ. ಆಗ ಸುದೀಪ್ ಅದನ್ನು ತಿದ್ದೋ ಕೆಲಸ ಸುದೀಪ್ ಮಾಡುತ್ತಾರೆ. ಗಿಲ್ಲಿ ವಿಷಯದಲ್ಲೂ ಸುದೀಪ್ ಅನೇಕ ಸಲಹೆ ನೀಡಿದ್ದಾರೆ. ಇತ್ತೀಚೆಗೆ ಖಾಸಗಿಯಾಗಿ ಇಬ್ಬರ ಭೇಟಿ ನಡೆದಿದೆ. ಈ ವೇಳೆ ಸುದೀಪ್ ಕೊಟ್ಟ ಸಲಹೆ ಬಗ್ಗೆ ಗಿಲ್ಲಿ ನಟ ಮಾತನಾಡಿದ್ದಾರೆ.

ಈ ಬಾರಿಯ ಬಿಗ್ ಬಾಸ್ ಅಲ್ಲಿ ಗಿಲ್ಲಿ ಅನೇಕ ಬಾರಿ ತಪ್ಪು ಮಾಡಿದ್ದರು. ಆಗ ಗಿಲ್ಲಿಗೆ ಸುದೀಪ್ ಕಿವಿಮಾತುಗಳನ್ನು ಹೇಳಿದರು. ತಪ್ಪು ಮಾಡಿದಾಗ ಅವರನ್ನು ತಿದ್ದೋ ಕೆಲಸ ಮಾಡಿದ್ದಾರೆ. ಫಿನಾಲೆ ದಿನ ಸುದೀಪ್ ಎದುರು ಧನ್ಯವಾದ ಅರ್ಪಿಸಿದ್ದರು ಗಿಲ್ಲಿ. ‘ಸಾಯೋವರೆಗೂ ನಿಮ್ಮನ್ನು ಮರೆಯಲ್ಲ’ ಎಂದಿದ್ದರು. ಬಿಗ್ ಬಾಸ್ ಗೆದ್ದ ಬಳಿಕ ಗಿಲ್ಲಿ ಅವರು ಸುದೀಪ್ ಅವರನ್ನು ಭೇಟಿ ಮಾಡಿದ್ದಾರೆ.

ಸುದೀಪ್ ಅವರು ಗಿಲ್ಲಿಗೆ ಸಲಹೆ ನೀಡಿದ್ದಾರೆ. ‘ಯೋಚಿಸಿ ಹೆಜ್ಜೆ ಇಡಬೇಕು’ ಎಂದು ಗಿಲ್ಲಿಗೆ ಕಿವಿಮಾತು ಹೇಳಿದ್ದಾರೆ ಸುದೀಪ್. ಇದನ್ನು ಗಿಲ್ಲಿ ಅಳವಡಿಸಿಕೊಳ್ಳುವ ಭರವಸೆ ನೀಡಿದ್ದಾರೆ. ದೊಡ್ಡ ಗೆಲುವು ಸಿಕ್ಕಾಗ ಮನಸ್ಸು ನಮ್ಮ ಹಿಡಿತದಲ್ಲಿ ಇರೋದಿಲ್ಲ. ಗೆದ್ದಿದ್ದೇವೆ ಎಂಬ ಖುಷಿಯಲ್ಲಿ ಕೆಲವೊಮ್ಮೆ ತಪ್ಪು ಹೆಜ್ಜೆಗಳನ್ನು ಇಡೋ ಸಾಧ್ಯತೆ ಇರುತ್ತದೆ. ಆ ರೀತಿ ಆಗದಿರಲಿ ಎಂಬುದು ಸುದೀಪ್ ಬಯಕೆ.

ಇದನ್ನೂ ಓದಿ: ‘ಹೊಸ ದಾರಿ ಕಡೆ ಮುಖ ಮಾಡೋ ಹೊತ್ತು’; ದೊಡ್ಡ ಘೋಷಣೆ ಮಾಡಿದ ಗಿಲ್ಲಿ ನಟ

ಗಿಲ್ಲಿ ಅವರು ‘ಬಿಗ್ ಬಾಸ್’ ಗೆದ್ದ ಬಳಿಕ ಶಿವರಾಜ್​​​ಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಗಿಲ್ಲಿ ಗೆದ್ದೇ ಗೆಲ್ಲುತ್ತಾನೆ ಎಂದು ಶಿವಣ್ಣ ಹೇಳಿದ್ದರು. ಅದೇ ದಿನ ಸಂಜೆ ಬಿಗ್ ಬಾಸ್ ಮನೆಯಲ್ಲಿ ಗಿಲ್ಲಿ ಅವರು ಶಿವಣ್ಣನ ಬಗ್ಗೆ ಮಾತನಾಡಿದ್ದರಂತೆ. ಈ ವಿಷಯಗಳನ್ನು ಇವರು ಚರ್ಚೆ ಮಾಡಿದ್ದಾರೆ. ಶಿವಣ್ಣನ ಭೇಟಿ ವೇಳೆ ಸುದೀಪ್​​ಗೆ ವಿಡಿಯೋ ಕರೆ ಮಾಡಿ ಮಾತನಾಡಲಾಗಿತ್ತು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕರಾವಳಿಯಲ್ಲಿ ಮತ್ತೆ ಎಂಡೋಸಲ್ಫಾನ್ ಭೀತಿ: ಆರೋಗ್ಯ ಇಲಾಖೆಯಿಂದ ಆಘಾತಕಾರಿ ವರದಿ – Kannada News | Endosulfan Fear Returns to Karnataka Coast: unexpected Health Department Report Raises Alarm

ಎಂಡೋಸಲ್ಫಾನ್ ಪರಿಣಾಮ ವೈಕಲ್ಯಕ್ಕೆ ತುತ್ತಾಗಿರುವ ಮಗು

ಕಾರವಾರ, ಜನವರಿ 23: ಮಹಾಮಾರಿ ಎಂಡೋಸಲ್ಫಾನ್​ (Endosulfan) ಕರಾವಳಿ (Coastal Karnataka) ಭಾಗದ ಸಾವಿರಾರು ಮನೆಗಳ ನೆಮ್ಮದಿಯನ್ನೇ ಕದಡಿತ್ತು. ಗೇರುಬೀಜ ಇಳುವರಿಗೆ ಅಡ್ಡಿಯಾಗಿದ್ದ ಸೊಳ್ಳೆಗಳ ನಾಶಕ್ಕಾಗಿ ಸಿಂಪಡಿಸಿದ್ದ ಎಂಡೋಸಲ್ಫಾನ್, ಜನರ ಮೇಲೆ ಪರಿಣಾಮ ಬೀರಿತ್ತು. ಹುಟ್ಟುತ್ತಲೇ ಬುದ್ಧಿ ಭ್ರಮಣೆ ,ಬಹು ಅಂಗಾಂಗ ವೈಫಲ್ಯದಿಂದಾಗಿ ಅದೆಷ್ಟೋ ಮಕ್ಕಳು ನರಕಯಾತನೆ ಅನುಭವಿಸಿದ್ದರು. ಇದೀಗ ಮತ್ತೆ ಕರಾವಳಿ ಜನತೆಯಲ್ಲಿ ಎಂಡೋಸಲ್ಫಾನ್ ಭಯ ಆವರಿಸಿದೆ.

ಅಂದಹಾಗೆ 1986ರಿಂದ 2011 ರ ಅವಧಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಸುಮಾರು 11,794 ಹೆಕ್ಟೇರ್ ಗೇರು ಬೆಳೆದ ಭೂಮಿಗೆ ಎಂಡೋಸಲ್ಫಾನ್​ ವಿಷದ್ರಾವಣವನ್ನು ಸಿಂಪಡಿಸಲಾಗಿತ್ತು. ಇದು ಗರ್ಭಿಣಿಯರ ಮೇಲೆ ನೇರ ಪರಿಣಾಮ ಬೀರಿತ್ತು. ಮಕ್ಕಳು ಹುಟ್ಟುತ್ತಲೇ ಬುದ್ಧಿಮಾಂದ್ಯ, ಅಂಗವೈಕಲ್ಯ, ನರ ದೌರ್ಬಲ್ಯಕ್ಕೆ ತುತ್ತಾಗಿದ್ದರು. ಇನ್ನು ಪುರುಷರೂ ಕೂಡಾ ಉಸಿರಾಟ ಸಮಸ್ಯೆ, ಪಾರ್ಶ್ವವಾಯು, ನರದೌರ್ಬಲ್ಯದಂತಹ ಸಮಸ್ಯೆ ಎದುರಿಸಿದ್ದರು. 2023-24 ರಲ್ಲಿ ಒಟ್ಟು 1554 ಜನರನ್ನು ಎಂಡೋಸಲ್ಫಾನ್ ಪೀಡಿತರನ್ನಾಗಿ ಗುರುತಿಸಲಾಗಿತ್ತು. ಇದೀಗ ಹೊಸ ಸರ್ವೆಯಲ್ಲಿ ಮಕ್ಕಳು ಸೇರಿ 543 ಜನರನ್ನು ಎಂಡೋ ಪೀಡಿತರನ್ನಾಗಿ ಗುರುತಿಸಲಾಗಿದೆ.

ವಂಶವಾಹಿ ಮೂಲಕ ಹರಡುತ್ತಿರುವ ಕಾಯಿಲೆಗಳು

ವಿಜ್ಞಾನಿಗಳ ಪ್ರಕಾರ, ಎಂಡೋಸಲ್ಫಾನ್ ಅಡ್ಡಪರಿಣಾಮದಿಂದ ಬರುವ ನ್ಯೂನತೆಗಳು ವಂಶವಾಹಿ ಮೂಲಕ ಒಬ್ಬರಿಂದ ಒಬ್ಬರಿಗೆ ಹಬ್ಬುತ್ತಿವೆ. ಎಂಡೋ ಬಾಧಿತರ ಸಂಖ್ಯೆ ಕಡಿಮೆಯಾಗಿದೆ ಎಂದು ಈ ಹಿಂದೆಯೇ ಸರ್ಕಾರ ಪೀಡಿತರಿಗೆ ನೀಡುವ ಸೌಲಭ್ಯವನ್ನು ನಿಲ್ಲಿಸಿತ್ತು. ಇದರಿಂದಾಗಿ ಎಂಡೋ ಪೀಡಿತರಿಗೆ ಯಾವ ಸೌಲತ್ತು ಇಲ್ಲದೇ ತೊಂದರೆ ಪಡುವಂತಾಗಿತ್ತು. ಆದರೆ ಈಗ ಮತ್ತೆ ಎಂಡೋ ಪೀಡಿತರ ಸಂಖ್ಯೆ ಹೆಚ್ಚಾಗಿರುವುದು ಆತಂಕ ತಂದಿದೆ. ಸರ್ಕಾರ ಈ ಸೂಕ್ತ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಮೋಜು ಮಸ್ತಿಗಾಗಿ ಅರಣ್ಯ ಅಧಿಕಾರಿಗಳಿಂದಲೇ ಮರಗಳ ಮಾರಣ ಹೋಮ? ತನಿಖೆಗೆ ಆದೇಶ

ಈ ಎಂಡೋ ಸಲ್ಫಾನ್ ಪರಿಣಾಮದಿಂದ ಬರುವ ಕಾಯಿಲೆಗಳು ಹುಟ್ಟಿದಾಗಿನಿಂದ ಸಾಯುವ ವರೆಗೂ ಜೀವ ಹಿಂಡುತ್ತವೆ. ಇದೀಗ ಮೂರನೇ ತಲೆಮಾರಿಗೂ ನರಕ ತೋರಿಸುತ್ತಿರುವುದು ವಿಪರ್ಯಾಸ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಯುಎಇಯಲ್ಲಿ ಇಂದು ರಷ್ಯಾ, ಅಮೆರಿಕ, ಉಕ್ರೇನ್ ನಡುವೆ ಮೊದಲ ತ್ರಿಪಕ್ಷೀಯ ಸಭೆ – Kannada News | A First at the Table: Russia, US and Ukraine Set for Trilateral Talks in UAE

ಪುಟಿನ್, ಟ್ರಂಪ್, ಝೆಲೆನ್ಸ್ಕಿImage Credit source: ABC News

ಯುಎಇ, ಜನವರಿ 23: ರಷ್ಯಾ-ಉಕ್ರೇನ್ ನಡುವಿನ ಉದ್ವಿಗ್ನತೆ ಬಗೆಹರಿಯುವಂತೆ ಕಾಣುತ್ತಿಲ್ಲ, ಡೊನಾಲ್ಡ್​ ಟ್ರಂಪ್(Donald Trump) ಎರಡು ದೇಶಗಳ ನಡುವೆ ಮಧ್ಯಸ್ಥಿಕೆವಹಿಸುವುದನ್ನು ಬಿಡುತ್ತಿಲ್ಲ. ಟ್ರಂಪ್ ಒಮ್ಮೆ ಉಕ್ರೇನ್ ಅಧ್ಯಕ್ಷರ ಬಳಿ ಒಮ್ಮೆ ರಷ್ಯಾ ಅಧ್ಯಕ್ಷರ ಬಳಿ ಮಾತನಾಡುತ್ತಿದ್ದರೂ ಸಮಸ್ಯೆ ಅಂತ್ಯ ಕಂಡಿಲ್ಲ. ಹೀಗಾಗಿ ಮೊದಲ ಬಾರಿಗೆ ರಷ್ಯಾ, ಅಮೆರಿಕ, ಉಕ್ರೇನ್ ಒಟ್ಟಾಗಿ ತ್ರಿಪಕ್ಷೀಯ ಸಭೆ ನಡೆಸಲು ನಿರ್ಧರಿಸಿದ್ದು, ಅದು ಯುಎಇ(ಯುನೈಟೆಡ್ ಅರಬ್ ಎಮಿರೇಟ್ಸ್​)ನಲ್ಲಿ ಇಂದು(ಜನವರಿ 23) ನಡೆಯಲಿದೆ. ಈ ಕುರಿತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಮಾಹಿತಿ ನೀಡಿದ್ದಾರೆ.

ಈ ಸಭೆ ತಾಂತ್ರಿಕ ಮಟ್ಟದಲ್ಲಿ ನಡೆಯುತ್ತಿದೆ. ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ ತಮ್ಮ ಭಾಷಣದ ನಂತರ ಝೆಲೆನ್ಸ್ಕಿ ಈ ಘೋಷಣೆ ಮಾಡಿದ್ದಾರೆ. ರಷ್ಯಾ-ಉಕ್ರೇನ್ ಯುದ್ಧ ಪ್ರಾರಂಭವಾದ ನಂತರ ಮೂರು ದೇಶಗಳು ಒಟ್ಟಾಗಿ ಮಾತುಕತೆ ನಡೆಸುತ್ತಿರುವುದು ಇದೇ ಮೊದಲು ಎಂದು ಝೆಲೆನ್ಸ್ಕಿ ಹೇಳಿದರು. ಈ ಮಾತುಕತೆ ಯುದ್ಧವನ್ನು ಕೊನೆಗೊಳಿಸಲು ಸಹಾಯಕವಾಗಬಹುದು ಎಂದು ಅವರು ಆಶಿಸಿದ್ದಾರೆ. ಪಕ್ಷೀಯ ಸಭೆ ಎರಡು ದಿನಗಳಲ್ಲಿ ನಡೆಯಲಿದೆ ಎಂದು ಅವರು ಹೇಳಿದರು.

ಯಾವುದೇ ಸಂವಾದವಿಲ್ಲದಿರುವುದಕ್ಕಿಂತ ಕನಿಷ್ಠ ಕೆಲವು ಮಾತುಕತೆ ಉತ್ತಮ ಎಂದು ಅವರು ಹೇಳಿದರು.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ಸುಮಾರು ಒಂದು ಗಂಟೆ ಕಾಲ ನಡೆದ ಸಭೆಯ ನಂತರ ಝೆಲೆನ್ಸ್ಕಿ ಈ ಹೇಳಿಕೆ ನೀಡಿದ್ದಾರೆ . ಈ ಸಭೆಯನ್ನು ಟ್ರಂಪ್ ಚೆನ್ನಾಗಿ ನಡೆಸಿದ್ದರು ಎಂದು ಬಣ್ಣಿಸಿದ್ದಾರೆ.

ಮತ್ತಷ್ಟು ಓದಿ: ತಾನೊಬ್ಬ ಸರ್ವಾಧಿಕಾರಿ ಎಂದು ಒಪ್ಪಿಕೊಂಡ ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್

ಉಕ್ರೇನಿಯನ್ ತಂಡವು ಮೊದಲು ಅಮೆರಿಕದ ಅಧಿಕಾರಿಗಳನ್ನು ಭೇಟಿ ಮಾಡಿ, ನಂತರ ಅಮೆರಿಕದ ನಿಯೋಗ ರಷ್ಯಾಕ್ಕೆ ಪ್ರಯಾಣಿಸಲಿದೆ ಎಂದು ಝೆಲೆನ್ಸ್ಕಿ ಹೇಳಿದರು. ಯುದ್ಧವನ್ನು ಕೊನೆಗೊಳಿಸಲು ಎಲ್ಲಾ ಪಕ್ಷಗಳು ರಾಜಿ ಮಾಡಿಕೊಳ್ಳಲು ಸಿದ್ಧರಿರಬೇಕು ಎಂದು ಝೆಲೆನ್ಸ್ಕಿ ಹೇಳಿದ್ದಾರೆ.

ಉಕ್ರೇನ್‌ನಿಂದ ಮಾತ್ರ ರಾಜಿ ನಿರೀಕ್ಷಿಸುವುದು ನ್ಯಾಯವಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ; ರಷ್ಯಾ ಕೂಡ ಮುಂದೆ ಬರಬೇಕು. ಆದಾಗ್ಯೂ, ಮಾತುಕತೆಯ ಸ್ವರೂಪ ಅಥವಾ ಅಧಿಕಾರಿಗಳು ಮುಖಾಮುಖಿಯಾಗಿ ಭೇಟಿಯಾಗುತ್ತಾರೆಯೇ ಎಂಬುದನ್ನು ಝೆಲೆನ್ಸ್ಕಿ ನಿರ್ದಿಷ್ಟಪಡಿಸಿಲ್ಲ.
ದಾವೋಸ್‌ಗೆ ಆಗಮಿಸಿದ ನಂತರ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್‌ನಿಂದ ಹಿಡಿದು ಯುರೋಪಿಯನ್ ಒಕ್ಕೂಟದ ಅಸಮಾಧಾನದವರೆಗೆ ಹಲವಾರು ಸಮಸ್ಯೆಗಳನ್ನು ಪರಿಹರಿಸುವತ್ತ ಸಾಗಿದರು.

ಈ ಸಭೆಯ ನಂತರ, ರಷ್ಯಾ-ಉಕ್ರೇನ್ ಯುದ್ಧದ ಅಂತ್ಯವು ಕೆಲವೇ ಗಂಟೆಗಳಲ್ಲಿದೆ ಎಂದು ಟ್ರಂಪ್ ಸ್ಪಷ್ಟಪಡಿಸಿದರು. ಅವರು ಪುಟಿನ್ ಅವರೊಂದಿಗಿನ ಸಭೆಯನ್ನು ಸಹ ಘೋಷಿಸಿದರು, ಅದರ ನಂತರ ಎರಡೂ ದೇಶಗಳ ನಡುವಿನ ಪರಿಸ್ಥಿತಿ ಸ್ಪಷ್ಟವಾಗುತ್ತದೆ. ಇದರರ್ಥ ಇಂದು ಎರಡೂ ದೇಶಗಳಿಗೆ ನಿರ್ಣಾಯಕ ದಿನವಾಗಿರುತ್ತದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

Daily Devotional: ವಸಂತ ಪಂಚಮಿ ಆಚರಣೆಯ ವಿಧಾನ ಹಾಗೂ ಮಹತ್ವ – Kannada News | Daily Devotional: Vasant Panchami: Significance, Celebration Methods, and Importance of Saraswati Worship

ಬೆಂಗಳೂರು, ಜನವರಿ 23: ವಸಂತ ಪಂಚಮಿ ಅಥವಾ ಶ್ರೀ ಪಂಚಮಿ ಎಂದು ಕರೆಯಲ್ಪಡುವ ಈ ದಿನವು ವಿದ್ಯಾರ್ಥಿಗಳಿಗೆ ಜ್ಞಾನವನ್ನು ವೃದ್ಧಿಸಿಕೊಳ್ಳಲು ಅತ್ಯಂತ ವಿಶೇಷವಾದ ಪರ್ವದಿನವಾಗಿದೆ. ಶಿಕ್ಷಣದ ತಾಯಿಯಾದ ಸರಸ್ವತಿ ದೇವಿಯನ್ನು ಆರಾಧಿಸಲು ಇದು ಒಂದು ಪ್ರಮುಖ ದಿನ. ಬ್ರಹ್ಮನ ಪತ್ನಿ ಸರಸ್ವತಿಯ ಆರಾಧನೆಯಿಂದ ಬುದ್ಧಿಶಕ್ತಿ ಚುರುಕಾಗುತ್ತದೆ.

ಈ ದಿನ ಅಕ್ಷರಾಭ್ಯಾಸ ಮಾಡಿಸುವುದು, ಸರಸ್ವತಿ ಪೂಜೆ ಮಾಡಿಕೊಳ್ಳುವುದು ಮತ್ತು ಓಂ ಐಂ ಸರಸ್ವತ್ಯೈ ನಮಃ ಮಂತ್ರವನ್ನು ಪಠಿಸುವುದು ಶುಭಕರ. ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಪೆನ್, ಪೇಪರ್, ಪೆನ್ಸಿಲ್‌ನಂತಹ ವಸ್ತುಗಳನ್ನು ದಾನ ಮಾಡುವುದರಿಂದ ಪಾಪಗಳಿಂದ ಮುಕ್ತರಾಗಬಹುದು. ವಿದ್ಯಾರ್ಥಿಗಳಿಗೆ ಅನ್ನದಾನ ಮಾಡುವುದು ಕೂಡ ಶ್ರೇಷ್ಠ. ಹಳದಿ ಬಟ್ಟೆ ಧರಿಸಿ, ಸಿಹಿ ತಿಂಡಿಗಳನ್ನು ಮಾಡಿ ಸರಸ್ವತಿ ಶ್ಲೋಕ ಅಥವಾ ಅಷ್ಟೋತ್ತರಗಳನ್ನು ಪಠಿಸಿ ಪೂಜಿಸುವುದರಿಂದ ಮನೆಯಲ್ಲಿ ಜ್ಞಾನ ಮತ್ತು ಶುಭ ಪ್ರಾಪ್ತವಾಗುತ್ತದೆ. ಇದು ಅಜ್ಞಾನದಿಂದ ಜ್ಞಾನದೆಡೆಗೆ ಸಾಗುವ ಹಬ್ಬವಾಗಿದೆ. ವಸಂತ ಋತು ಪ್ರಾರಂಭದ ದಿನವೂ ಇದಾಗಿದೆ ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

 

Source link

Horoscope Today 23 January: ಇಂದು ಈ ರಾಶಿಯವರ ಆದಾಯದಲ್ಲಿ ಏರಿಕೆ

ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 23 ಜನವರಿ 2026 ರ ದ್ವಾದಶ ರಾಶಿಗಳ ಫಲಾಫಲವನ್ನು ಪ್ರಸ್ತುತಪಡಿಸಿದ್ದಾರೆ. ಈ ದಿನ ಶುಕ್ರವಾರ, ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಘ ಮಾಸ, ಶಿಶಿರ ಋತು, ಪಂಚಮಿ, ಶುಕ್ಲ ಪಕ್ಷ, ಪೂರ್ವಭಾದ್ರ ನಕ್ಷತ್ರ, ಪರಿಘಯೋಗ, ಬವಕರಣ ಇರುವ ಶುಕ್ರವಾರದ ವಿಶೇಷ ದಿನವಾಗಿದೆ. ರವಿ ಮಕರ ರಾಶಿಯಲ್ಲಿ ಮತ್ತು ಚಂದ್ರ ಕುಂಭ ರಾಶಿಯಲ್ಲಿ ಸಂಚರಿಸುತ್ತಿರುವ ಈ ದಿನ ವಸಂತ ಪಂಚಮಿ ಹಾಗೂ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಜನ್ಮದಿನವೂ ಆಗಿದೆ.

ಗುರೂಜಿ ಅವರು ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದು, ಹಲವು ರಾಶಿಗಳಿಗೆ ಆರ್ಥಿಕ ಅಭಿವೃದ್ಧಿ, ಉದ್ಯೋಗದಲ್ಲಿ ಪ್ರಗತಿ, ಆರೋಗ್ಯದಲ್ಲಿ ಚೇತರಿಕೆ, ಶುಭ ಸುದ್ದಿ ಮತ್ತು ವಾಹನ ಯೋಗದಂತಹ ಸಕಾರಾತ್ಮಕ ಫಲಿತಾಂಶಗಳನ್ನು ಸೂಚಿಸಿದ್ದಾರೆ. ಆದಾಗ್ಯೂ, ಕೆಲವು ರಾಶಿಗಳಿಗೆ ಖರ್ಚುಗಳಲ್ಲಿ ನಿಯಂತ್ರಣ, ಸಂಬಂಧಗಳಲ್ಲಿ ಜಾಗ್ರತೆ, ಮತ್ತು ಹಿತಶತ್ರುಗಳ ಬಾಧೆಯಂತಹ ಸವಾಲುಗಳನ್ನು ಎದುರಿಸಬೇಕಾಗಬಹುದು ಎಂದು ಡಾ. ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

 

Source link

ಅಕ್ರಮ ಬಾಂಗ್ಲಾ ವಲಸಿಗರ ಪತ್ತೆಗೆ ಮುಂದಾದ ಪುನೀತ್​​​ ಕೆರೆಹಳ್ಳಿ ಮತ್ತೆ ಬಂಧನ – Kannada News | Puneeth Kerehalli Arrested in Bengaluru While Tracking Illegal Bangladeshi Immigrants

ನೆಲಮಂಗಲ, ಜನವರಿ 23: ಅಕ್ರಮ ಬಾಂಗ್ಲಾದೇಶ ವಲಸಿಗರ ಪತ್ತೆ ಕಾರ್ಯಾಚರಣೆಗೆ ಮುಂದಾದ ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿಯನ್ನು (Puneeth Kerehalli) ಪೊಲೀಸರು ಬಂಧಿಸಿದ್ದಾರೆ. ಸೋಲದೇವನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕೆಂಪಾಪುರದಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದಾರೆ ಎಂಬ ಆರೋಪದ ಹಿನ್ನೆಲೆ ಪುನೀತ್ ಕೆರೆಹಳ್ಳಿ ಅಲ್ಲಿಗೆ ತೆರಳಿದ್ದರು. ಹಸನ್ ಎಂಬಾತ ಅಕ್ರಮ ಬಾಂಗ್ಲಾ ವಲಸಿಗ ಎಂದು ಪುನೀತ್ ಕೆರೆಹಳ್ಳಿ ಆರೋಪಿಸಿದ್ದಲ್ಲದೆ, ಈ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರು ನೀಡಿ ಠಾಣೆಯಿಂದ ಹೋಗುತ್ತಿದ್ದ ವೇಳೆ, ಬಾಗಲಗುಂಟೆ ಪೊಲೀಸರು ಪುನೀತ್ ಕೆರೆಹಳ್ಳಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ಪುನೀತ್ ಕೆರೆಹಳ್ಳಿಯ ವಿರುದ್ಧ ಈ ಹಿಂದೆ ಅಕ್ರಮ ಗೋ ಸಾಗಾಟ ಸೇರಿದಂತೆ ಹಲವು ಪ್ರಕರಣಗಳು ದಾಖಲಾಗಿದ್ದವು. ಈ ಸಂಬಂಧ ಹಲವು ಬಾರಿ ನೋಟಿಸ್ ನೀಡಿದ್ದರೂ ವಿಚಾರಣೆಗೆ ಹಾಜರಾಗಿರಲಿಲ್ಲ ಎನ್ನಲಾಗಿದೆ. ಇದೇ ಹಿನ್ನೆಲೆಯಲ್ಲಿ ಬಾಗಲಗುಂಟೆ ಠಾಣೆಯ ಪೊಲೀಸರು ಈ ಪ್ರಕರಣಕ್ಕೆ ಸಂಬಂಧಿಸಿ ಅವರನ್ನು ಬಂಧಿಸಿದ್ದಾರೆ.

ಇದಕ್ಕೂ ಮುನ್ನ, ಡಿಸೆಂಬರ್ 18ರಂದು ಬನ್ನೇರುಘಟ್ಟ ಠಾಣಾ ವ್ಯಾಪ್ತಿಯಲ್ಲಿಯೂ ಪುನೀತ್ ಕೆರೆಹಳ್ಳಿ ಬಂಧನಕ್ಕೊಳಗಾಗಿ ನಂತರ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು. ಬಾಂಗ್ಲಾದೇಶದ ಅಕ್ರಮ ವಲಸಿಗರೆಂದು ಆರೋಪಿಸಿ ಶೆಡ್‌ಗಳಿಗೆ ತೆರಳಿ ದಾಖಲೆ ತೋರಿಸುವಂತೆ ದಾಂಧಲೆ ನಡೆಸಿದ ಆರೋಪ ಅವರ ಮೇಲೆ ದಾಖಲಾಗಿತ್ತು. ಎಲೆಕ್ಟ್ರಾನಿಕ್ ಸಿಟಿ, ಹೆಬ್ಬಗೋಡಿ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಅಕ್ರಮ ವಲಸಿಗರು ವಾಸಿಸುತ್ತಿದ್ದಾರೆ ಎಂದು ಹೇಳಿ, ಪುನೀತ್ ಕೆರೆಹಳ್ಳಿ ನೇತೃತ್ವದ ತಂಡವು ಕೆಲ ಶೆಡ್‌ಗಳಿಗೆ ತೆರಳಿ ವಿಡಿಯೋ ಚಿತ್ರೀಕರಣ ಮಾಡಿತ್ತು. ಈ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು. ಶೆಡ್‌ಗಳಿಗೆ ಅನಧಿಕೃತವಾಗಿ ಪ್ರವೇಶಿಸಿ ಗಲಾಟೆ ನಡೆಸಿದ್ದಾರೆ ಎಂದು ಸಿದ್ದೇಶ್ ಎಂಬುವವರು ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಪ್ರಕರಣ ದಾಖಲಿಸಿ ಬಂಧಿಸಿದ್ದರು. ನಂತರ ಅವರು ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಇದನ್ನೂ ಓದಿ: ವಲಸಿಗರ ಶೆಡ್​ಗೆ ನುಗ್ಗಿ ಬೆದರಿಕೆ: ಪುನೀತ್​ ಕೆರೆಹಳ್ಳಿಗೆ ಜಾಮೀನು; ಹೋರಾಟ ಆರಂಭವೆಂದ ಹಿಂದೂ ಕಾರ್ಯಕರ್ತ

ಒಟ್ಟಿನಲ್ಲಿ, ಅಕ್ರಮ ವಲಸಿಗರ ವಿಚಾರದಲ್ಲಿ ಸ್ವಯಂ ಪ್ರೇರಿತ ಕಾರ್ಯಾಚರಣೆ ನಡೆಸುತ್ತಿದ್ದ ಪುನೀತ್ ಕೆರೆಹಳ್ಳಿ ಮೇಲೆ ಒಂದರ ಮೇಲೊಂದು ಪ್ರಕರಣಗಳು ದಾಖಲಾಗುತ್ತಿವೆ. ಅವರ ಚಟುವಟಿಕೆಗಳು ಇದೀಗ ಮತ್ತೊಮ್ಮೆ ಚರ್ಚೆಗೆ ಗ್ರಾಸವಾಗಿವೆ.

ವರದಿ: ಮಂಜನಾಥ್, ಟಿವಿ9 ನೆಲಮಂಗಲ

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉದ್ಯೋಗಾಕಾಂಕ್ಷಿಗಳಿಗೆ ಸರ್ಕಾರ ಸಿಹಿ ಸುದ್ದಿ: ಸಿವಿಲ್ ಸೇವಾ ಹುದ್ದೆಗಳ ನೇರ ನೇಮಕಾತಿ ವಯೋಮಿತಿ ಸಡಿಲಿಕೆ! – Kannada News | Big Relief for Job Aspirants: Karnataka Government Approves Age Relaxation for Civil Services Recruitment

ಬೆಂಗಳೂರು, ಜನವರಿ 23: ಕರ್ನಾಟಕ ಸಚಿವ ಸಂಪುಟವು ರಾಜ್ಯದ ಸಿವಿಲ್ ಸೇವಾ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮಹತ್ವದ ಕೊಡುಗೆ ನೀಡಿದೆ. ವಯೋಮಿತಿ ಸಡಿಲಿಕೆಗೆ ಅನುಮೋದನೆ ನೀಡಿದೆ. ಈ ನಿರ್ಧಾರದ ಮೂಲಕ, ಎಲ್ಲಾ ವರ್ಗದ ಅಭ್ಯರ್ಥಿಗಳಿಗೆ ಐದು ವರ್ಷಗಳ ಹೆಚ್ಚುವರಿ ವಯೋಮಿತಿ ಸೌಲಭ್ಯವನ್ನು ನೀಡಲಾಗಿದೆ. ಇದು ಸಾವಿರಾರು ಉದ್ಯೋಗಾಕಾಂಕ್ಷಿಗಳಿಗೆ ಅನುಕೂಲವಾಗಲಿದೆ.

ಈ ಹಿಂದೆ, ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ 35 ವರ್ಷಗಳ ವಯೋಮಿತಿ ಇದ್ದು, ಪರಿಶಿಷ್ಟ ಜಾತಿ (ಎಸ್‌ಸಿ) ಮತ್ತು ಪರಿಶಿಷ್ಟ ಪಂಗಡ (ಎಸ್‌ಟಿ) ವರ್ಗದ ಅಭ್ಯರ್ಥಿಗಳಿಗೆ 38 ವರ್ಷಗಳ ಗರಿಷ್ಠ ವಯೋಮಿತಿ ಇತ್ತು. ಹೊಸ ಆದೇಶದ ಪ್ರಕಾರ, ಈ ಎಲ್ಲಾ ವರ್ಗದ ವಯೋಮಿತಿಗಳಿಗೆ ಐದು ವರ್ಷಗಳನ್ನು ಸೇರ್ಪಡೆ ಮಾಡಲಾಗಿದೆ. ಅಂದರೆ, ಸಾಮಾನ್ಯ ವರ್ಗಕ್ಕೆ ಈಗ 40 ವರ್ಷ ಮತ್ತು ಎಸ್‌ಸಿ, ಎಸ್‌ಟಿ ವರ್ಗಕ್ಕೆ 43 ವರ್ಷ ಗರಿಷ್ಠ ವಯೋಮಿತಿ ಆಗಲಿದೆ.

ಈ ವಯೋಮಿತಿ ಸಡಿಲಿಕೆಯು 2027ರ ಡಿಸೆಂಬರ್ 31 ವರೆಗೆ ಚಾಲ್ತಿಯಲ್ಲಿರುತ್ತದೆ. ಈ ಅವಧಿಯೊಳಗೆ ಎಷ್ಟು ಸಿವಿಲ್ ಸೇವಾ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಲಾಗುತ್ತದೆ ಎಂಬುದು ಸದ್ಯದ ಪ್ರಮುಖ ಪ್ರಶ್ನೆಯಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope Today 23 January : ಇಂದು ಈ ರಾಶಿಯವರ ಸಂಪರ್ಕ ಅತಿಯಾಗಿದ್ದು ತಪ್ಪಿಸಿ…

ಮೇಷ ರಾಶಿ:

ಮುಂದಿನ ದಾರಿ ಕಾಣದೇ ಬಿಟ್ಟಿದ್ದ ಯೋಜನೆಗೆ ಪುನಃ ಚಾಲನೆ ಸಿಗಲಿದೆ. ಪ್ರೇಮಿಯನ್ನು ಭೇಟಿಯಾಗಲು ದೂರದ ಊರಿಗೆ ಪ್ರಯಾಣ ಮಾಡಬೇಕಾಗುವುದು. ಹೂಡಿಕೆಯ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಮುಂದುವರಿಯಿರಿ. ಸಾಮಾಜಿಕ ಮುಖಂಡರು ಸಂಘಟನೆಯಲ್ಲಿ ತೊಡಗುವರು. ಸಣ್ಣ ಕಾರಣಕ್ಕೆ ನೆರೆಯವರ ಜೊತೆ ಕಲಹವಾಗಬಹುದು. ಮಕ್ಕಳಿಂದ ಹಣವನ್ನು ಪಡೆಯುವಿರಿ. ಯಾರೊಂದಿಗೂ ಅಧಿಕವಾಗಿ ಮಾತನಾಡುವ ಅಪೇಕ್ಷೆ ಇರದು. ಸಂಪತ್ತಿನ ನಿರ್ವಹಣೆಯಲ್ಲಿ ಸೋಲಬಹುದು. ಅಪರಿಚಿತರು ನಿಮ್ಮನ್ನು ಭೇಟಿಯಾಗಬಹುಸು. ಮನೆಗೆ ಬೇಕಾದ ವಸ್ತುಗಳನ್ನು ನೀವು ಖರೀದಿಸುವಿರಿ.

ವೃಷಭ ರಾಶಿ:

ಕುಟುಂಬವು ನಿಮಗೆ ಕೊಡುವ ಕಿಮ್ಮತ್ತು ಕಡಿಮೆ ಆಗಿದೆ ಎಂದು ಅನ್ನಿಸುವುದು. ಮನಸ್ಸಿನಲ್ಲಿ ಯಾವುದೋ ಆತಂಕವು ಇರಲಿದ್ದು ಹೊರಹಾಕಲು ಪ್ರಯತ್ನಿಸುವಿರಿ. ಸಂಗಾತಿಯಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ. ಬಂಗಾರದ ಖರೀದಿಗೆ ಉತ್ಸಾಹವನ್ನು ತೋರುವಿರಿ. ರಕ್ಷಣಾತ್ಮಕ ಉದ್ಯೋಗದಲ್ಲಿ ಸಾಧನೆ. ಮನೆಗೆ ಆಗಮಿಸಿದ ನಿಮಗೆ ಕುಟುಂಬದ ಪ್ರೀತಿಯು ಸಿಗಲಿದೆ. ಕಾರ್ಯದ ನಿಮಿತ್ತ ಓಡಾಟವು ಹೆಚ್ಚಾಗುವುದು. ಬಂಧುಗಳಿಂದ ಸಲ್ಲದ ಮಾತುಗಳನ್ನು ಕೇಳುವಿರಿ. ಆಲಸ್ಯದಿಂದ ನಿಮ್ಮ ಎಲ್ಲ ಕಾರ್ಯಗಳೂ ಉಳಿಯಬಹುದು. ಯಾವುದನ್ನೂ ನೀವು ಅತಿಯಾಗಿ ಆಸೆ ಪಡುವುದು ಬೇಡ.

ಮಿಥುನ ರಾಶಿ:

ಹೊಸ ಕಲಿಕೆಯ ಬಗ್ಗೆ ಆಸಕ್ತಿ ಉಂಟಾಗಬಹುದು. ಒಂದೇ ರೀತಿಯ ಕೆಲಸವನ್ನು ಮಾಡಿ ಬೇಸರವಾದೀತು. ಹೊಸ ವಸ್ತುಗಳನ್ನು ಕಳೆದುಕೊಳ್ಳುವಿರಿ. ಕುಟುಂಬದಲ್ಲಿ ಸಂತೋಷದ ವಾತಾವರಣವು ಇದ್ದು ಉತ್ಸಾಹದಿಂದ ಇರುವಿರಿ. ತಾಯಿಗೆ ಅಮೂಲ್ಯವಾದ ಉಡುಗೊರೆಯನ್ನು ಕೊಡುವಿರಿ. ನಿಮ್ಮ ಬಗ್ಗೆ ನೀವು ಹೇಳಿಕೊಳ್ಳದೇ ಇರುವ ಹಲವು ವಿಚಾರಗಳು ಸ್ನೇಹಿತರು ಹೇಳುವರು. ಸಂಗಾತಿಗೆ ನೀವು ಸಹಾಯವನ್ನು ಮಾಡುವಿರಿ. ಕಾರ್ಯ ಮಾಡುವ ಸುಲಭದ ಉಪಾಯಗಳು ನಿಮ್ಮ ಬುದ್ಧಿಗೆ ಹೊಳೆಯದು.

ಕರ್ಕಾಟಕ ರಾಶಿ:

ಅತಿವೇಗದ ಮಾತು ಇತರರಿಗೆ ಸ್ಪಷ್ಟವಾಗದೇ ಹೋಗಬಹುದು. ನೀವು ಗಟ್ಟಿಯಾಗಿದೇ ನಿಮ್ಮವರನ್ನು ಗಟ್ಟಿಮಾಡಲಾಗದು. ಬಂಧುಗಳ ಆಗಮನವು ನಿಮಗೆ ಸಂತೋಷವನ್ನು ಕೊಡುವುದು. ತಾಯಿಯ ಮೇಲೆ ನಿಮ್ಮ ಕೋಪವನ್ನು ತೋರಿಸುವಿರಿ. ಕುಟುಂಬದ ಸದಸ್ಯರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ. ಬಹಳ ದಿನಗಳ ಅನಂತರದ ಆಪ್ತರ ಒಡನಾಟ ಖುಷಿಯನ್ನು ಕೊಡಬಹುದು. ವಿದ್ಯಾರ್ಥಿಗಳ ಪ್ರಗತಿಯಲ್ಲಿ ಮಂದಗತಿ ಇರುವುದು. ಸಂಗಾತಿಗೆ ಆಭರಣವನ್ನು ಉಡುಗೊರೆಯಾಗಿ ಕೊಡುವಿರಿ. ಸಿಟ್ಟಿನಿಂದ ಯಾವ ನಿರ್ಧಾರವನ್ನೂ ತೆಗೆದುಕೊಳ್ಳುವುದು ಬೇಡ.

ಸಿಂಹ ರಾಶಿ:

ಮಲಿನ ವಸ್ತ್ರವನ್ನು ಅಜ್ಞಾನದಿಂದ ಧರಿಸಿದರೂ ಎಲ್ಲರೂ ಅಪಹಾಸ್ಯ ಮಾಡಬಹುದು. ನಿಮ್ಮ ಕೆಲಸಗಳಿಗೆ ಯಾರ ಸಹಕಾರವೂ ಇಲ್ಲ ಎಂದು ಬೇಸರ ಮಾಡಿಕೊಳ್ಳುವುದು ಬೇಡ. ನ್ಯಾಯಾಲಯದಿಂದ ಶುಭ ವಾರ್ತೆ ಬರಬಹುದು. ಧಾರ್ಮಿಕ ಕಾರ್ಯದಲ್ಲಿ ನಿಮ್ಮ ತೊಡಗುವಿಕೆ ಹೆಚ್ಚಿರುವುದು. ಶಿಕ್ಷಣಕ್ಷೇತ್ರದಲ್ಲಿ ಯಶಸ್ಸು ಸಿಗುವುದು. ಸಕಾಲಕ್ಕೆ ಆರ್ಥಿಕ ನೆರವು ಸಿಗಲಿದ್ದು ಸ್ವಲ್ಪ ನೆಮ್ಮದಿ ಸಿಗುವುದು. ನಿಮ್ಮ ಸುರಕ್ಷಿತ ತಾಣವನ್ನು ನೀವೇ ಆರಿಸಿಕೊಳ್ಳಿ. ಸ್ಥಿರಾಸ್ತಿ ಖರೀದಿಯ ಯೋಜನೆ ಮಾಡವಿರಿ. ವೃತ್ತಿಯ ಸ್ಥಳದಲ್ಲಿ ರೋಚಕ ಅನುಭವವು ಇರಲಿದೆ.

ಕನ್ಯಾ ರಾಶಿ:

ಮನೆಯ ಖರ್ಚನ್ನು ಕಡಿಮೆ ಮಾಡುವ ಚಿಂತನೆಯಲ್ಲಿ ಇರುವಿರಿ. ಅತಿಥಿ ಸತ್ಕಾರವೂ ಪೂಜಯಷ್ಟೇ ಯೋಗ್ಯತೆಯನ್ನು ಹೊಂದಿದೆ. ಹೊಸ ವ್ಯವಹಾರವನ್ನು ಪ್ರಾರಂಭಿಸಿವರು ಉತ್ಸಾಹದ ಕಾರಣ ಉತ್ತಮ ಲಾಭವನ್ನು ಪಡೆಯಬಹುದು. ಹೊಸ ವಸ್ತುಗಳ ಖರೀದಿಗೆ ಉತ್ಸಾಹವು ಅಧಿಕವಾಗಿರಲಿದೆ. ಯಾರ ಮಾತನ್ನೂ ಕೇಳುವ ವ್ಯವಧಾನವೂ ನಿಮ್ಮಲ್ಲಿ ಇರದು. ಎಲ್ಲರ ಮಾತಿಗೂ ನಿಮ್ಮ ಕೋಪ ಮಾಡಿಕೊಳ್ಳುವಿರಿ. ನಿಮ್ಮ ಎಲ್ಲ ನಿರ್ಧಾರಗಳೂ ನಿಮಗೇ ನಕಾರಾತ್ಮಕವಾಗಿ ಇರುವಂತೆ ತೋರುವುದು.

ತುಲಾ ರಾಶಿ:

ಸಮಯಪ್ರಜ್ಞೆಯಿಂದ ಕೆಲಸ ಮಾಡುವಿರಿ. ಹಣದ ಉಳಿತಾಯವು ಸಾಕೆಂದು ಅನ್ನಿಸದು. ನೀವು ಮಾಡುವ ಕೆಲಸದಲ್ಲಿ ಜಾಣ್ಮೆಯು ಅವಶ್ಯಕವಾಗಿರುವುದು. ಹಿತಮಿತವಾದ ಮಾತುಗಾರಿಕೆಯಿಂದ ಎಲ್ಲರಿಗೂ ಹಿತವಾಗುವುದು. ಮಂದಗತಿಯಲ್ಲಿ ಸಾಗುವ ನಿಮ್ಮ ಕೆಲಸದಿಂದ ಸಹೋದ್ಯೋಗಿಗಳು ಆಡಿಕೊಳ್ಳುವರು. ಬಂಧುಗಳ ಆಶ್ರಯದಲ್ಲಿ ಇಂದು ನೀವು ಇರಬೇಕಾದೀತು. ಅಸಮಾಧಾನವೆನಿಸುವ ಸಂಗತಿ ಸಿಕ್ಕರೆ ಸ್ವಲ್ಪ ತಾಳ್ಮೆ ಇರಲಿ. ಸಂಗಾತಿಗೆ ನೀವು ಉತ್ತಮ ಕೆಲಸವು ಕೊಡಿಸುವಿರಿ. ಸರಳತೆಯೇ ನಿಮ್ಮ ಪ್ರಶಂಸೆಗೆ ಕಾರಣವಾಗುವುದು.

ವೃಶ್ಚಿಕ ರಾಶಿ:

ಇಂದಿನ ಕಾರ್ಯವನ್ನು ಮಾಡಲು ಹಣವು ಅಧಿಕ ಬೇಕಾದೀತು. ನೀವು ಮಾಡುವ ಧಾರ್ಮಿಕ ಕಾರ್ಯದಲ್ಲಿ ಸಂಪೂರ್ಣ ಶ್ರದ್ಧೆಯಿರಲಿ. ಅನೇಕ ರೀತಿಯ ಫಲಗಳನ್ನು ನೀವು ಪಡೆಯಲಿದ್ದು ಕೋಪ ನಿಯಂತ್ರಿಸಬೇಖಾಗುವುದು. ನಿಮ್ಮನ್ನು ಅನುಕರಣೆ ಮಾಡಬಹುದು. ಮಕ್ಕಳ ಪ್ರಗತಿಯಿಂದ ನಿಮಗೆ ಶ್ರೇಯಸ್ಸು. ಆರೋಗ್ಯವನ್ನು ಹೆಚ್ಚಿಸಿಕೊಳ್ಳಲು ಬೇಕಾದ ಕ್ರಮಗಳನ್ನು ಮಾಡಿಕೊಳ್ಳಿ. ಸಮಯಪ್ರಜ್ಞೆಯಿಂದ ಆಗುವ ತಪ್ಪನ್ನು ಸರಿ ಮಾಡಿಕೊಳ್ಳುವಿರಿ. ವೃತ್ತಿಯ ಕೆಲಸಗಳ ನಡುವೆ ಮನೆಯ ಕೆಲಸವೂ ನಿಮಗೆ ಕಷ್ಟವಾದೀತು.

ಧನು ರಾಶಿ:

ಹೊಸ ಜೀವನದಲ್ಲಿ ಪ್ರೀತಿ ಹೆಚ್ಚಾಗಿರುವುದು. ವ್ಯವಹಾರದಲ್ಲಿ ಅಸಾಧ್ಯವನ್ನು ಸಾಧಿಸುವ ಛಲ ಬೇಡ. ಮನೆಗೆ ಬೇಕಾದ ಉಪಕರಣವನ್ನು ಹೆಚ್ಚು ಹಣವನ್ನು ಕೊಟ್ಟು ಖರೀದಿಸುವಿರಿ. ವ್ಯಾಪಾರದಲ್ಲಿ ಚಾಣಕ್ಷತೆಯಿಂದ ಲಾಭವನ್ನು ಪಡೆಯುವಿರಿ. ನಿಮ್ಮ ವರ್ತನೆಯನ್ನು ಬದಲಿಸಿಕೊಳ್ಳಬೇಕು ಎನಿಸುವುದು. ನಿಮ್ಮ ಪ್ರಭಾವ ಹೆಚ್ಚಾಗಿ ಇರುವುದರಿಂದ ಶತ್ರುಗಳು ದೂರ ಹೋಗುತ್ತಾರೆ ಮತ್ತು ದೀರ್ಘ ಕಾಲದಿಂದ ಬಾಕಿ ಉಳಿದಂತಹ ಯೋಜನೆ ಪೂರ್ಣಗೊಳ್ಳುವುವು. ಆರ್ಥಿಕ ಸಮಸ್ಯೆಯನ್ನು ಹಂಚಿಕೊಳ್ಳಿ. ಸೂಕ್ತ ದಾರಿ ಸಿಗಬಹುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಹಣವನ್ನು ಹೊಂದಿಸುವಿರಿ.

ಮಕರ ರಾಶಿ:

ನಿಮ್ಮ ಪ್ರೀತಿ ಮತ್ತು ವಿಶ್ವಾಸ ಭದ್ರವಾಗಿರುವುದು. ಇಂದು ನಿಮಗೆ ಉಂಟಾದ ಅನಾರೋಗ್ಯದಿಂದ ಆತಂಕಗೊಳ್ಳಬೇಕಾದೀತು. ಕಚೇರಿಯಲ್ಲಿ ಉತ್ತಮವಾದ ವಾತಾವರಣದ ಉತ್ಸಾಹದಿಂದ ಇರುವಿರಿ. ಜಾಣ್ಮೆಯಿಂದ ಮಾಡಿದ ವ್ಯವಹಾರಕ್ಕೆ ಪ್ರಶಂಸೆ ಸಿಗಲಿದೆ. ಬಯಸಿದ್ದನ್ನು ಪಡೆದುಕೊಳ್ಳುವ ಅರ್ಹತೆ ನಿಮಗೆ ಬರಲಿದೆ. ಉನ್ನತ ಪದವಿಯನ್ನು ಮಾಡುವವರಿಗೆ ಮುಂದಿನ ದಾರಿ ಸ್ಪಷ್ಟವಾಗುವುದು. ಹಲವು ಪ್ರಯತ್ನದ ಬಳಿಕ ಮಾನಸಿಕ ಕಿರಿಕಿರಿಯನ್ನು ನೀವು ದೂರ ಮಾಡಿಕೊಳ್ಳುವಿರಿ. ನಿರೀಕ್ಷಿತ ಸ್ಥಾನವನ್ನು ಪಡೆದುಕೊಳ್ಳುವ ಸಾಧ್ಯತೆ ಇದೆ.

ಕುಂಭ ರಾಶಿ:

ಪರಿಚಿತರು ನಿಮಗಾಗಿ ಅನುಕೂಲಕರ ವಾತಾವರಣವನ್ನು ಸಿದ್ಧ ಮಾಡುವರು. ಪ್ರೀತಿಯಲ್ಲಿ ಇಂದು ಸಮಯ ಸರಿಯುವುದೇ ಗೊತ್ತಾಗದು. ಭ್ರಾತೃಕಲಹದಿಂದ ಬೇಸರವಾಗಲಿದೆ. ಸಮಯದ ಹೊಂದಾಣಿಕೆಯಿಂದ ಕಾರ್ಯವನ್ನು ಸಾಧಿಸಬಹುದು. ಹೂಡಿಕೆಯನ್ನು ಅನೇಕ ಜನರು ಸೇರಿ ಮಾಡುವವರಿದ್ದೀರಿ. ಕುಟುಂಬ ಜೀವನ ಸಾಮಾನ್ಯವಾಗಿರುತ್ತದೆ. ಹೊಸ ಉದ್ಯೋಗಕ್ಕೆ ಅವಕಾಶವು ಪ್ರಾಪ್ತವಾಗಲಿದೆ. ಹೊಸ ಉದ್ಯೋಗವನ್ನು ಉತ್ಸಾಹದಿಂದ ಮಾಡುವಿರಿ. ಏಕಾಂತದಲ್ಲಿ ಇರುವುದು ನಿಮಗೆ ಇಷ್ಟವಾಗುವುದು.

ಮೀನ ರಾಶಿ:

ಆತ್ಮೀಯರ ವಿಯೋಗವು ಅನಿವಾರ್ಯವಾಗಿದ್ದು, ಅರ್ಥ ಮಾಡಿಕೊಂಡರೆ ಒಳ್ಳೆಯದು. ಇಂದು ನಿಮ್ಮ ಆದಾಯವನ್ನು ಇಮ್ಮಡಿಗೊಳಿಸಿಕೊಳ್ಳಬಹುದು. ಮಕ್ಕಳಿಗೆ ಬೇಕಾದ ವಿದ್ಯಾಭ್ಯಾಸವನ್ನು ಕೊಡಲು ಸಾಲ ಮಾಡಬೇಕಾದೀತು. ಆಸ್ತಿ ವ್ಯವಹಾರದಲ್ಲಿ ಹಿನ್ನಡೆಯಾದಂತೆ ಅನ್ನಿಸಬಹುದು. ಬರಬೇಕಾದ ಹಣವನ್ನು ನೀವು ಬಹಳ ಶ್ರಮದಿಂದ ಪಡೆಯಬೇಕಾಗಬಹುದು. ಭೂಮಿಯ ಉತ್ಪನ್ನಗಳಿಂದ ನಿಮಗೆ ಲಾಭ. ಅಪಘಾತ ಭೀತಿಯು ಕಾಡುವುದು.

ಜನವರಿ 23,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಉತ್ತರಾಷಾಢ, ವಾರ : ಶುಕ್ರ, ಪಕ್ಷ : ಶುಕ್ಲ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಉತ್ತರಾಭಾದ್ರ, ಯೋಗ : ಪರಿಘ, ಕರಣ : ಬಾಲವ, ಸೂರ್ಯೋದಯ – 06 – 54 am, ಸೂರ್ಯಾಸ್ತ – 06 – 18 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 11-11 – 12:36, ಯಮಗಂಡ ಕಾಲ 15:27 – 16:53, ಗುಳಿಕ ಕಾಲ 08:20 – 09:45

-ಲೋಹಿತ ಹೆಬ್ಬಾರ್ – 8762924271 (what’s app only)

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 23ರ ದಿನಭವಿಷ್ಯ

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನಿಮ್ಮಿಂದ ಎಷ್ಟು ದಕ್ಕಿಸಿಕೊಳ್ಳುವುದಕ್ಕೆ ಸಾಧ್ಯ ಎಂಬ ಸ್ಪಷ್ಟ ಚಿತ್ರಣವೊಂದು ಇರಿಸಿಕೊಂಡ ನಂತರವೇ ದೊಡ್ಡ ದೊಡ್ಡ ಪ್ರಾಜೆಕ್ಟ್ ಗಳಿಗೆ ಕೈ ಹಾಕುವುದು ಒಳ್ಳೆಯದು. ಏಕೆಂದರೆ ಈ ದಿನ ನಿಮಗೆ ಬರುವಂಥ ಕೆಲವು ಕೆಲಸಗಳು ಮೇಲ್ನೋಟಕ್ಕೆ ಬಹಳ ದೊಡ್ಡ ಲಾಭ ತಂದುಕೊಡುವಂತೆ ಅನಿಸಲಿದೆ. ಆದರೆ ಸರ್ಕಾರದ ಮಟ್ಟದಲ್ಲಿ ಆಗಿರುವ ಅಥವಾ ಮುಂದೆ ಆಗುವ ಬದಲಾವಣೆಗಳ ಕಾರಣಕ್ಕೆ ನೀವು ನಿರೀಕ್ಷೆ ಮಾಡಿರುವ ಮಟ್ಟಕ್ಕೆ ಲಾಭ ತಂದುಕೊಡುವುದಿಲ್ಲ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಯಾಕೆ ಅವರು ಹಾಗೆ ಮಾತನಾಡಿದರು ಎಂದು ಒಬ್ಬರೇ ವ್ಯಕ್ತಿಯು ಆಡಿದ ಮಾತು, ಬಳಸಿದ ಪದಗಳು ದಿನವಿಡೀ ನಿಮ್ಮನ್ನು ಕಾಡಲಿವೆ. ಈ ಹಿಂದೆ ಇದ್ದಂಥ ಉತ್ಸಾಹದಲ್ಲಿ ನಿಮ್ಮ ವೃತ್ತಿ- ವ್ಯಾಪಾರ- ವ್ಯವಹಾರದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಸಾಧ್ಯವಾಗುವುದಿಲ್ಲ. ಎಲ್ಲರನ್ನೂ ಒಟ್ಟುಗೂಡಿಸಿಕೊಂಡು, ಮುಂದಕ್ಕೆ ಹೋಗಬೇಕಾದ ಜವಾಬ್ದಾರಿಗಳಿಂದ ಕಳಚಿಕೊಳ್ಳಬೇಕು ಎಂಬ ಭಾವ ಬಲವಾಗಿ ಆವರಿಸಿಕೊಳ್ಳುತ್ತದೆ. ನಿಮ್ಮ ಜತೆ ಈ ಹಿಂದೆ ಉದ್ಯೋಗ ಮಾಡಿದ್ದವರು ಏನಾದರೂ ವ್ಯಾಪಾರ- ವ್ಯವಹಾರದ ಆಫರ್ ತಂದಲ್ಲಿ ಗಂಭೀರವಾಗಿ ಪರಿಗಣಿಸಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ಸಾವಯವ ಉತ್ಪನ್ನಗಳ ಮಾರಾಟ ಮಾಡುತ್ತಾ ಇರುವವರು ವ್ಯಾಪಾರದ ವಿಸ್ತರಣೆಗೆ ಹಲವು ರೀತಿ ಪ್ರಯತ್ನಗಳನ್ನು ಮಾಡಲಿದ್ದೀರಿ. ನಿಮ್ಮ ಉಳಿತಾಯ ಹಾಗೂ ಹೂಡಿಕೆ ಮಾಡಿದ್ದ ಹಣವನ್ನು ತೆಗೆದು, ಅದನ್ನು ಈ ಉದ್ದೇಶಕ್ಕೆ ಬಳಸುವುದಕ್ಕೆ ಮುಂದಾಗಲಿದ್ದೀರಿ. ಹೊಸ ಮಾರುಕಟ್ಟೆಯಲ್ಲಿ ಈಗಷ್ಟೇ ಕೆಲಸ ಆರಂಭಿಸಿದವರು ತಾಳ್ಮೆ- ಸಂಯಮ ವಹಿಸುವುದು ಮುಖ್ಯವಾಗುತ್ತದೆ. ಸೇಲ್ಸ್- ಮಾರ್ಕೆಟಿಂಗ್ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದೀರಿ ಅಂತಾದಲ್ಲಿ ಮೇಲಧಿಕಾರಿ ನೀಡುವ ಸಲಹೆಯನ್ನು ಗಂಭೀರವಾಗಿ ತೆಗೆದುಕೊಳ್ಳಿ.

ಲೇಖನ- ಸ್ವಾತಿ ಎನ್.ಕೆ.

Source link

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 4, 5, 6ರ ಜನವರಿ 23ರ ದಿನಭವಿಷ್ಯ

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4):

ಯಾವ ಕಾರ್ಯಗಳನ್ನು ಪೂರ್ಣಗೊಳ್ಳುವುದು ಬಹಳ ಕಷ್ಟ ಆಗಬಹುದು ಎಂದು ನೀವು ಅಂದುಕೊಳ್ಳುತ್ತಾ ಇರುತ್ತೀರೋ ಅಂಥವು ಬಹಳ ಆಶ್ಚರ್ಯಕರ ರೀತಿಯಲ್ಲಿ ಮಾಡಿ ಮುಗಿಸಲಿದ್ದೀರಿ. ಇಷ್ಟು ಸಮಯ ನಿಮ್ಮನ್ನು ಬೇಕಂತಲೆ ರೇಗಿಸುತ್ತಿದ್ದವರು, ತಮಾಷೆ ಮಾಡುತ್ತಿದ್ದವರು ಗಾಬರಿ ಆಗುವ ಮಟ್ಟಕ್ಕೆ ನೀವು ಈ ದಿನ ಅವರಿಗೆ ಕಾಡಲಿದ್ದೀರಿ. ತಂದೆ- ತಾಯಿಯ ಪ್ರವಾಸಕ್ಕಾಗಿ ಹಣ ಖರ್ಚು ಮಾಡಲಿದ್ದೀರಿ. ಇದರಿಂದ ಮನಸ್ಸಿಗೆ ತೃಪ್ತಿ ಸಿಗಲಿದೆ. ಪ್ರಮುಖವಾದ ಪ್ರಾಜೆಕ್ಟ್ ಒಂದನ್ನು ನಿಮಗೆ ವಹಿಸುವ ಸಾಧ್ಯತೆಯೂ ಇದೆ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5):

ಏಕಾಂಗಿತನ ಈ ದಿನ ನಿಮ್ಮನ್ನು ಕಾಡಲಿದೆ. ಕುಟುಂಬ ಸದಸ್ಯರು, ಸ್ನೇಹಿತರು, ಕೊನೆಗೆ ಸಹೋದ್ಯೋಗಿಗಳ ಸಹ ತಂತಮ್ಮ ಕೆಲಸದಲ್ಲಿ ಮುಳುಗಿ ಹೋಗುವುದರಿಂದ ಇಂಥದ್ದೊಂದು ಭಾವನೆ ನಿಮ್ಮಲ್ಲಿ ಹುಟ್ಟಿಕೊಳ್ಳಲಿದೆ. ಉದ್ಯೋಗ, ವೃತ್ತಿ- ವ್ಯಾಪಾರ ಹೀಗೆ ಯಾವುದೇ ವಿಚಾರದಲ್ಲಿಯೇ ಆಗಿರಲಿ, ಭೇಟಿ ಆಗಬೇಕು ಎಂದು ಸಮಯ ಕೇಳಿ, ಅದರ ಅಗತ್ಯವನ್ನು ಒತ್ತಿ ಹೇಳಿದ ನಂತರವೂ ಕೊನೆ ಕ್ಷಣದಲ್ಲಿ ನಿಮ್ಮನ್ನು ಇವತ್ತು ಕಾಣಲಿಕ್ಕೆ ಆಗಲ್ಲ ಎಂದು ವ್ಯಕ್ತಿಯೊಬ್ಬರು ಹೇಳಲಿದ್ದಾರೆ. ಇದರಿಂದ ಮಾನಸಿಕವಾಗಿ ಸ್ವಲ್ಪ ಮಟ್ಟಿಗೆ ಕುಗ್ಗುವಂತೆ ಆಗಲಿದೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6):

ಆಗಲಿ, ಮಾಡಿಕೊಡುತ್ತೇನೆ ಎಂದು ನೀವಾಗಿಯೇ ಭರವಸೆ ನೀಡಿದ್ದ ಕೆಲವು ಕಾರ್ಯಗಳನ್ನು ಅಂದುಕೊಂಡ ಸಮಯದ ಒಳಗಾಗಿ ಪೂರ್ಣ ಮಾಡುವುದು ಅಸಾಧ್ಯ ಎಂಬುದು ಖಚಿತ ಆಗಲಿದೆ. ಆದರೆ ಈ ವಿಚಾರವನ್ನು ಹೇಗೆ ಹೇಳುವುದು ಎಂಬುದು ಇಕ್ಕಟ್ಟಿಗೆ ಸಿಲುಕಿಸಲಿದೆ. ಆರ್ಥಿಕ ವಿಚಾರಗಳಿಗೆ ಅಭದ್ರತೆ ಭಾವವೊಂದು ನಿಮ್ಮನ್ನು ಮುತ್ತಿಕೊಳ್ಳಲಿದೆ. ಈಗ ನಿಮ್ಮ ಬಳಿ ಇರುವ ಎಲ್ಲ ಮೊತ್ತವನ್ನು ಒಂದೇ ಕಡೆಗೆ ಹೂಡಿಕೆ ಮಾಡುವ ಮುಂಚೆ ಒಂದಕ್ಕೆ ನಾಲ್ಕು ಬಾರಿಗೆ ಆಲೋಚನೆ ಮಾಡಿಕೊಳ್ಳುವುದು ಒಳ್ಳೆಯದು.

ಲೇಖನ- ಸ್ವಾತಿ ಎನ್.ಕೆ.

Source link

Exit mobile version