ಚಿಕ್ಕಮಗಳೂರು, (ಏಪ್ರಿಲ್ 10): ಪ್ರವಾಸಕ್ಕೆ ಬಂದಿದ್ದ ಕೇರಳ ಮೂಲದ ಮೂಲದ ಬಾಲಕಿ ಶ್ರೀನಂದಾ (Srinanda) ಮೃತದೇಹ ಪತ್ತೆಯಾಗಿದೆ. ಮೂರು ದಿನದ ಬಳಿಕ ಚಿಕ್ಕಮಗಳೂರಿನ (Chikkamagaluru) ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್ಯಧಾರಾ ಜಲಪಾತದ ಶ್ರೀನಂದಾ ಶವ ಪತ್ತೆಯಾಗಿದೆ. ಇನ್ನು ಶ್ರೀನಂದಾ ಮೃತದೇಹ ಸಿಕ್ಕ ಸ್ಥಳ ನೋಡಿದ್ರೆ ಕೈ ಕಾಲು ನಡುಗುತ್ತವೆ. ಹೌದು… ಆಕೆ ಬಿದ್ದ ಜಾಗ ಅಷ್ಟೊಂದು ಭಯಾನಕವಾಗಿದೆ. ದೊಡ್ಡ ದೊಡ್ಡ ಗಿಡ ಮರಳು, ಬೃಹತ್ ಆಕಾದರ ಕಲ್ಲು ಬಂಡೆಯ ಸುಮಾರು 2000 ಅಡಿ ಆಳಕ್ಕೆ ಶ್ರೀನಂದಾ ಬಿದ್ದಿದ್ದಾಳೆ. ನೀವು ಆಕೆ ಬಿದ್ದ ಜಾಗವನ್ನು ನೋಡಿ.
ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ (Optical Illusion) ಸೇರಿದಂತೆ ಕಠಿಣ ಸವಾಲಿನ ಒಗಟಿನ ಚಿತ್ರಗಳು ಸಾಕಷ್ಟು ಜನಪ್ರಿಯವಾಗಿವೆ. ಮೆದುಳಿಗೆ ಕೆಲಸ ನೀಡುವ ಇಂತಹ ಒಗಟಿನ ಚಿತ್ರವನ್ನು ಬಿಡಿಸುವುದರಲ್ಲಿರುವ ಖುಷಿಯೇ ಬೇರೆ. ಇದು ನಿಮ್ಮ ಮೆದುಳಿಗೆ ವ್ಯಾಯಾಮವನ್ನು ನೀಡುತ್ತವೆ. ಇದೀಗ ನಿಮ್ಮ ಕಣ್ಣಿನ ತೀಕ್ಷ್ಣತೆಯನ್ನು ಪರೀಕ್ಷಿಸಲು ಇದೊಂದು ಒಳ್ಳೆಯ ಸಮಯ. ಕಳ್ಳಿ ಸಸ್ಯಗಳ ನಡುವೆ ಜಿಂಕೆಯೊಂದು ಅಡಗಿ ಕುಳಿತಿದ್ದು, ಈ ಪ್ರಾಣಿಯನ್ನು ಹದಿನೈದು ಸೆಕೆಂಡುಗಳ ಒಳಗೆ ಗುರುತಿಸಬೇಕು. ಜಿಂಕೆಯನ್ನು ಪತ್ತೆ ಹಚ್ಚಿ ಈ ಒಗಟು ಬಿಡಿಸಿದರೆ ನೀವು ಜಾಣರು ಎಂದರ್ಥ.
ಈ ಚಿತ್ರದಲ್ಲಿ ನಿಮ್ಮ ಕಣ್ಣಿಗೆ ಕಾಣಿಸಿದ್ದೇನು?
ಇಲ್ಯೂಷನ್ ಚಿತ್ರಗಳೇ ಹಾಗೆ, ಹೇಳಿದ್ದಷ್ಟು ಸುಲಭವಲ್ಲ. ಕಣ್ಣಿನ ಸೂಕ್ಷ್ಮತೆ ಮತ್ತು ಏಕಾಗ್ರತೆ ಎಷ್ಟಿದೆ ಎಂಬುದನ್ನು ಪರೀಕ್ಷಿಸಲು ಸಹಾಯಕವಾಗಿರುವ ಈ ಚಿತ್ರದತ್ತ ಒಮ್ಮೆ ಗಮನ ಹರಿಸಿ. ಪ್ರಕೃತಿ ಸೌಂದರ್ಯ. ಬೆಟ್ಟದ ಮೇಲೆ ಯಥವತ್ತಾಗಿ ಬೆಳೆದು ನಿಂತ ಕಳ್ಳಿ ಸಸ್ಯಗಳು ಕಂಡುಬರುತ್ತವೆ. ಈ ಸಸ್ಯಗಳ ನಡುವೆ ಜಿಂಕೆ ಕೂಡ ಇದೆ. ಬಹಳ ಸೂಕ್ಷ್ಮವಾಗಿ ಗಮನಿಸಿದರೆ ಮಾತ್ರ ಈ ಪ್ರಾಣಿ ನಿಮ್ಮ ಕಣ್ಣಿಗೆ ಬೀಳುತ್ತದೆ. ತಾಳ್ಮೆ ಹಾಗೂ ಏಕಾಗ್ರತೆಯಿಂದ ಕೇವಲ ಹದಿನೈದು ಸೆಕೆಂಡುಗಳೊಳಗೆ ಈ ಪ್ರಾಣಿಯನ್ನು ಪತ್ತೆ ಹಚ್ಚಲು ಪ್ರಯತ್ನಿಸಿ. ನೀವು ಈ ಸವಾಲನ್ನು ಸ್ವೀಕರಿಸಿದ್ದೀರಾ ಎಂದು ಭಾವಿಸುತ್ತೇವೆ.
ಬೆಟ್ಟದ ಮೇಲೆ ಇರುವ ಕಳ್ಳಿ ಸಸ್ಯಗಳ ನಡುವೆ ಇರುವ ಜಿಂಕೆಯನ್ನು ಪತ್ತೆ ಹಚ್ಚುವುದು ಹೇಳಿದ್ದಷ್ಟು ಸುಲಭವಲ್ಲ. ಜಿಂಕೆಯ ಮೈ ಬಣ್ಣವು ಕಳ್ಳಿ ಸಸ್ಯಗಳ ಬಣ್ಣದೊಂದಿಗೆ ಬೆರೆತು ಹೋಗಿದೆ. ಹೀಗಾಗಿ ನೀವು ಎಷ್ಟೇ ಸೂಕ್ಷ್ಮವಾಗಿ ಗಮನಿಸಿದ್ರೂ ಜಿಂಕೆ ನಿಮ್ಮ ಕಣ್ಣಿಗೆ ಕಾಣಿಸುವುದಿಲ್ಲ. ನೀವು ಹೆಚ್ಚು ಚಿಂತಿಸುವ ಅಗತ್ಯವಿಲ್ಲ.. ನಾವೇ ಈ ಕೆಳಗಿನ ಚಿತ್ರದಲ್ಲಿ ಜಿಂಕೆ ಎಲ್ಲಿದೆ ಎಂದು ಗುರುತಿಸಿ, ನೀವು ತಲೆಕಕೆಡಿಸಿಕೊಳ್ಳುವುದನ್ನು ಕಡಿಮೆ ಮಾಡಿದ್ದೇವೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಭೋಪಾಲ್, ಏಪ್ರಿಲ್ 10: ಕಾಡುಪ್ರಾಣಿಗಳ ಪಾಲಿಗೆ ಮನುಷ್ಯರು ಯಮಕಿಂಕರರಾಗುತ್ತಿದ್ದಾರೆ. ಇತ್ತೀಚೆಗೆ ಅಭಯಾರಣ್ಯದ ರಸ್ತೆಯೊಂದರಲ್ಲಿ ಚಿರತೆ ನಡೆದುಕೊಂಡು ಹೋಗುವಾಗ ಅದರ ಪಕ್ಕದವರೆಗೂ ಸಾಲುಗಟ್ಟಿ ವಾಹನಗಳನ್ನು ನಿಲ್ಲಿಸಿಕೊಂಡು ಫೋಟೋ ಕ್ಲಿಕ್ಕಿಸುತ್ತಾ, ಆ ಚಿರತೆಗೆ (Leopard) ಹೋಗಲು ದಾರಿಯನ್ನೂ ಬಿಡದೆ ಗೊಂದಲವನ್ನುಂಟುಮಾಡುತ್ತಿದ್ದ ವಿಡಿಯೋ ವೈರಲ್ ಆಗಿತ್ತು. ಕಾಡುಪ್ರಾಣಿಗಳ ಖಾಸಗಿತನಕ್ಕೆ ಸಫಾರಿಯ ಹೆಸರಿನಲ್ಲಿ ಯಾವ ರೀತಿ ತೊಂದರೆ ಮಾಡಲಾಗುತ್ತಿದೆ ಎಂಬ ಕುರಿತು ಸಾಕಷ್ಟು ಚರ್ಚೆಗಳಿಗೂ ಈ ವಿಡಿಯೋ ಕಾರಣವಾಗಿತ್ತು. ಇದೀಗ ಮಾಹಿತಿ ಹಕ್ಕಿನಡಿ ಪಡೆದ ಮಾಹಿತಿಯ ಪ್ರಕಾರ ಮಧ್ಯಪ್ರದೇಶದಲ್ಲಿ ಕಳೆದ 14 ತಿಂಗಳಲ್ಲಿ 149 ಚಿರತೆಗಳು ಮೃತಪಟ್ಟಿರುವ ಶಾಕಿಂಗ್ ಸಂಗತಿ ಬಯಲಾಗಿದೆ. ಈ ಸಾವಿಗೆ ಬಹುತೇಕವಾಗಿ ಅಪಘಾತಗಳೇ ಮುಖ್ಯ ಕಾರಣ ಎಂಬುದು ಇನ್ನೊಂದು ಆಘಾತಕಾರಿ ಸಂಗತಿ.
ಜನವರಿ 2025ರಿಂದ ಆರಂಭವಾದ 14 ತಿಂಗಳಲ್ಲಿ ಮಧ್ಯಪ್ರದೇಶದಲ್ಲಿ 149 ಚಿರತೆಗಳು ಸಾವನ್ನಪ್ಪಿವೆ ಎಂದು ಇಲಾಖೆ ತನ್ನ ಆರ್‌ಟಿಐ ಉತ್ತರದಲ್ಲಿ ತಿಳಿಸಿದೆ. ಇವುಗಳಲ್ಲಿ ಶೇ. 31ರಷ್ಟು ಸಾವುಗಳು ರಸ್ತೆ ಅಪಘಾತಗಳಿಂದಾಗಿವೆ. 19 ಸಾವುಗಳು ಹೆದ್ದಾರಿಗಳಲ್ಲಿ ಸಂಭವಿಸಿವೆ. ಶೇ. 24ರಷ್ಟು ಸಾವುಗಳು ವೃದ್ಧಾಪ್ಯ ಮತ್ತು ಕಾಯಿಲೆಯಂತಹ ನೈಸರ್ಗಿಕ ಕಾರಣಗಳಿಂದ ಸಂಭವಿಸಿದ್ದರೆ, ಶೇ. 21ರಷ್ಟು ಸಾವುಗಳು ವನ್ಯಜೀವಿಗಳ ನಡುವಿನ ಸಂಘರ್ಷದಿಂದಾಗಿ ಸಂಭವಿಸಿವೆ.
ಸುಮಾರು ಶೇ. 14ರಷ್ಟು ಸಾವುಗಳು ಬೇಟೆಯಾಡುವುದು ಮತ್ತು ಪ್ರತೀಕಾರದ ಹತ್ಯೆಗಳಿಂದ ಸಂಭವಿಸಿವೆ. 8 ಪ್ರಾಣಿಗಳು ಉದ್ದೇಶಪೂರ್ವಕವಾಗಿ ಅಥವಾ ಆಕಸ್ಮಿಕವಾಗಿ ವಿದ್ಯುತ್ ಆಘಾತಕ್ಕೊಳಗಾಗಿದ್ದರೆ, ಎರಡು ಚಿರತೆಗಳು ಬಲೆಗಳಿಂದ ಸಾವನ್ನಪ್ಪಿವೆ. ಶೇ. 9ರಷ್ಟು ಪ್ರಕರಣಗಳಲ್ಲಿ ಸಾವಿಗೆ ಕಾರಣವನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ.
ಫೆಬ್ರವರಿ 2024ರಲ್ಲಿ ಬಿಡುಗಡೆಯಾದ’ಭಾರತದಲ್ಲಿ ಚಿರತೆಗಳ ಸ್ಥಿತಿ 2022′ ವರದಿಯ ಪ್ರಕಾರ, ಮಧ್ಯಪ್ರದೇಶವು ದೇಶದಲ್ಲಿಯೇ ಅತಿ ಹೆಚ್ಚು ಚಿರತೆ ಜನಸಂಖ್ಯೆಯನ್ನು ಹೊಂದಿದ್ದು, ಮಧ್ಯಪ್ರದೇಶದಲ್ಲಿ 3,907 ಚಿರತೆಗಳಿವೆ. ಮಹಾರಾಷ್ಟ್ರ ಮತ್ತು ಕರ್ನಾಟಕ ನಂತರದ ಸ್ಥಾನದಲ್ಲಿವೆ.
“ರಸ್ತೆಗಳ ಬಳಿ ನೀರಿನ ಮೂಲಗಳನ್ನು ರಚಿಸದಂತೆ ನಾವು ಸಲಹೆ ನೀಡುತ್ತಿದ್ದೇವೆ. ಏಕೆಂದರೆ ಪ್ರಾಣಿಗಳು ಹೆಚ್ಚಾಗಿ ಅವುಗಳ ಕಡೆಗೆ ಚಲಿಸುತ್ತವೆ ಮತ್ತು ಅಪಘಾತಗಳಿಗೆ ಗುರಿಯಾಗುತ್ತವೆ” ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಂಟ್ವಾಳ, ಏ.10: ನೆನ್ನೆ (ಏ.9) ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾಗಿದೆ. ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಪ್ರಥಮ ಸ್ಥಾನ ಹಾಗೂ ದಕ್ಷಿಣ ಕನ್ನಡ ದ್ವಿತೀಯ ಬಂದಿದೆ. ದಕ್ಷಿಣ ಕನ್ನಡ ಈ ಹಿಂದೆ ಮೊದಲ ಸ್ಥಾನವನ್ನು ಪಡೆದುಕೊಂಡಿತ್ತು. ಇದೀಗ ಇದರ ನಡುವೆ ಒಂದು ಅಪರೂಪದ ಸಾಧನೆಯೊಂದು ವೈರಲ್ ಆಗಿದೆ. ಅಮ್ಮ ಮತ್ತು ಮಗಳು ಇಬ್ಬರು ಪರೀಕ್ಷೆ ಬರೆದು ಪಾಸ್ ಆಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಕೈಕಂಬದ ತಾಯಿ ಮತ್ತು ಮಗಳು ಏಕಕಾಲದಲ್ಲಿ ಉತ್ತೀರ್ಣರಾಗುವ ಮೂಲಕ ಜಿಲ್ಲೆಯ ಗಮನ ಸೆಳೆದಿದ್ದಾರೆ.
ಬಿ.ಮೂಡ ಸರಕಾರಿ ಪದವಿಪೂರ್ವ ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿಯಾದ ಹೇಮಶ್ರೀ, 562 ಅಂಕಗಳನ್ನು (ವಿಶಿಷ್ಟ ಶ್ರೇಣಿ) ಗಳಿಸುವ ಮೂಲಕ ಕಾಲೇಜಿಗೆ ಪ್ರಥಮ ಸ್ಥಾನ (Topper) ಪಡೆದಿದ್ದಾರೆ. ಇವರ ತಾಯಿ ನೇತ್ರಾವತಿ ವಿ.ಆರ್ ಅವರು ಮೊಂಟೆಪದವು ಸರಕಾರಿ ಪದವಿಪೂರ್ವ ಕಾಲೇಜಿನ ಮೂಲಕ ಕಲಾ ವಿಭಾಗದಲ್ಲಿ ಖಾಸಗಿಯಾಗಿ ಪರೀಕ್ಷೆ ಬರೆದು 257 ಅಂಕಗಳನ್ನು ಪಡೆಯುವ ಮೂಲಕ ಪ್ರಥಮ ಪ್ರಯತ್ನದಲ್ಲೇ ಉತ್ತೀರ್ಣರಾಗಿದ್ದಾರೆ.
ನಂದಾವರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರವಿಕುಮಾರ್ ಅವರ ಪತ್ನಿಯಾದ ನೇತ್ರಾವತಿ ಅವರಿಗೆ ವಿದ್ಯಾಭ್ಯಾಸ ಮುಂದುವರಿಸುವ ಆಸೆ ಇತ್ತು. ಮಗಳು ಕಾಲೇಜಿಗೆ ಸೇರಿದಾಗ ಪತಿಯ ಪ್ರೋತ್ಸಾಹದಿಂದ ತಾವೂ ಪರೀಕ್ಷೆ ಬರೆಯಲು ನಿರ್ಧರಿಸಿದರು. ಮಗಳ ಅದ್ಭುತ ಸಾಧನೆಯ ಜೊತೆಗೆ ತಾವೂ ಪಾಸಾಗಿರುವುದು ಇಡೀ ಕುಟುಂಬದಲ್ಲಿ ಸಂತಸ ಮೂಡಿಸಿದೆ.
ವೈಭವ್ ಸೂರ್ಯವಂಶಿ (Vaibhav Suryavanshi).. ಪ್ರಸ್ತುತ ಕ್ರಿಕೆಟ್ ಲೋಕದಲ್ಲಿ ಓಡುತ್ತಿರುವ ಕುದುರೆ. ತನ್ನ ಪ್ರತಿಭೆಯಿಂದ ಕೇವಲ 15ನೇ ವಯಸ್ಸಿನಲ್ಲೇ ವಿಶ್ವ ಕ್ರಿಕೆಟ್ನ ಮನೆಮಾತಾಗಿರುವ ಈ ಪೋರ ಪ್ರಸ್ತುತ ಮಿಲಿಯನ್ ಡಾಲರ್ ಟೂರ್ನಿ ಐಪಿಎಲ್‌ನಲ್ಲಿ (IPL) ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ಕಳೆದ ಆವೃತ್ತಿಯಲ್ಲೇ ರಾಜಸ್ಥಾನ್ ಪರ ಐಪಿಎಲ್‌ನಲ್ಲಿ ಅಬ್ಬರಿಸಿದ್ದ ವೈಭವ್, ಇದೀಗ ತನ್ನ ಹಳೆಯ ಆಟವನ್ನು ಈ ಆವೃತ್ತಿಯಲ್ಲೂ ಮುಂದುವರೆಸಿದ್ದಾರೆ. ಬಲಿಷ್ಠ ತಂಡಗಳೆದುರು ಅದರಲ್ಲೂ ಸ್ಟಾರ್ ಬೌಲರ್ಗಳ ಎದುರು ವೈಭವ್ ಅವರ ನಿರ್ಭೀತಿಯ ಆಟ ಪ್ರೇಕ್ಷಕರನ್ನು ಹುಚ್ಚೆದ್ದು ಕುಣಿಯುವಂತೆ ಮಾಡಿದೆ. ಇದೀಗ ಅದೇ ವೈಭವ್ ಸೂರ್ಯವಂಶಿ ಆರ್ಸಿಬಿ (RCB) ವಿರುದ್ಧ ತನ್ನ ಹಳೆಯ ಸೇಡನ್ನು ತೀರಿಸಿಕೊಳ್ಳುವ ಇರಾದೆಯಲ್ಲಿದ್ದಾರೆ.
351 ದಿನಗಳ ಹಿಂದಿನ ಸೇಡು
ಪ್ರಸ್ತುತ ಅದ್ಭುತ ಫಾರ್ಮ್ನಲ್ಲಿರುವ ವೈಭವ್ ಐಪಿಎಲ್ 2026 ರ ಮೊದಲ ಮೂರು ಪಂದ್ಯಗಳಲ್ಲಿ ಬೌಂಡರಿ ಮತ್ತು ಸಿಕ್ಸರ್‌ಗಳ ಮಳೆ ಸುರಿಸಿ, ಎಲ್ಲಾ ತಂಡಗಳಿಗೆ ಎಚ್ಚರಿಕೆ ನೀಡಿದ್ದಾರೆ. ಸನ್‌ರೈಸರ್ಸ್ ಹೈದರಾಬಾದ್, ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಂತರ, ವೈಭವ್ ಈಗ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಅಬ್ಬರಿಸಲು ಸಜ್ಜಾಗಿದ್ದು, 351 ದಿನಗಳ ಹಿಂದಿನ ಸೇಡಿಗೆ ಪ್ರತಿಕಾರ ತೀರಿಸಿಕೊಳ್ಳುವ ತವಕದಲ್ಲಿದ್ದಾರೆ.
ಮುಂದಿನ ಟಾರ್ಗೆಟ್ ಆರ್ಸಿಬಿ
ಮೇಲೆ ಹೇಳಿದಂತೆ ಐಪಿಎಲ್ 2026 ರ 16 ನೇ ಪಂದ್ಯವು ರಾಜಸ್ಥಾನ್ ರಾಯಲ್ಸ್ ಮತ್ತು ಬೆಂಗಳೂರು ರಾಯಲ್ಸ್ ನಡುವೆ ನಡೆಯಲಿದೆ. ಗುವಾಹಟಿಯಲ್ಲಿ ನಡೆಯಲಿರುವ ಈ ಪಂದ್ಯ ವೈಭವ್ ಸೂರ್ಯವಂಶಿ ಅವರಿಗೆ ತುಂಬಾ ವಿಶೇಷವಾಗಿದೆ. ಏಕೆಂದರೆ ಕಳೆದ ಆವೃತ್ತಿಯಲ್ಲಿ ಇದೇ ಆರ್ಸಿಬಿ ವಿರುದ್ಧ ವೈಭವ್ ಸೂರ್ಯವಂಶಿಗೆ ಮುಕ್ತವಾಗಿ ರನ್ ಗಳಿಸಲು ಆಗಿರಲಿಲ್ಲ. ಹೀಗಾಗಿ ಆ ಹಿಂದಿನ ವೈಫಲ್ಯವನ್ನು ಈ ಪಂದ್ಯದಲ್ಲಿ ಸರಿದೂಗಿಸುವತ್ತ ಸೂರ್ಯವಂಶಿ ಚಿತ್ತವಿದೆ. ಇದಕ್ಕೆ ಪೂರಕವಾಗಿ ಕಳೆದ ಆವೃತ್ತಿಯಲ್ಲಿ ಮುಂಬೈ ವಿರುದ್ಧ ರನ್ ಗಳಿಸಲು ವಿಫಲರಾಗಿದ್ದ ವೈಭವ್, ಈ ಆವೃತ್ತಿಯಲ್ಲಿ ಅಬ್ಬರಿಸಿದ್ದರು. ಕೇವಲ 14 ಎಸೆತಗಳಲ್ಲಿ 39 ರನ್ ಗಳಿಸಿದರು. ಹೀಗಾಗಿ ಇದೀಗ ಆರ್ಸಿಬಿ ವಿರುದ್ಧ ವೈಭವ್ ಯಾವ ರೀತಿಯ ಪ್ರದರ್ಶನ ನೀಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.
ಕಳೆದ ಆವೃತ್ತಿಯಲ್ಲಿ ಏಪ್ರಿಲ್ 24 ರಂದು, ಆರ್ಸಿಬಿ ಮತ್ತು ರಾಜಸ್ಥಾನ ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯದಲ್ಲಿ ವೈಭವ್ ರಾಜಸ್ಥಾನ್ ತಂಡದ ಭಾಗವಾಗಿದ್ದರು. 206 ರನ್‌ಗಳ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ಪರ ಆರಂಭಿಕರಾಗಿ ಕಣಕ್ಕಿಳಿದಿದ್ದ ವೈಭವ್, ಎರಡು ಸಿಕ್ಸರ್‌ಗಳನ್ನು ಬಾರಿಸುವ ಮೂಲಕ ಉತ್ತಮ ಆರಂಭವನ್ನು ಪಡೆದರು, ಆದರೆ ನಂತರ 12 ಎಸೆತಗಳಲ್ಲಿ 16 ರನ್‌ಗಳಿಸಿ ಔಟಾದರು. ಅವರನ್ನು ಅನುಭವಿ ವೇಗಿ ಭುವನೇಶ್ವರ ಕುಮಾರ್ ಔಟ್ ಮಾಡಿದ್ದರು.
ಈ ಆವೃತ್ತಿಯ ವೈಭವ್ ಪ್ರತಿ ಪಂದ್ಯದಲ್ಲೂ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ಈ ಮೂಲಕ ತಂಡದ ಸತತ ಮೂರು ಗೆಲುವುಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ವೈಭವ್ ಇದುವರೆಗೆ ಮೂರು ಇನ್ನಿಂಗ್ಸ್‌ಗಳಲ್ಲಿ 122 ರನ್ ಗಳಿಸಿದ್ದಾರೆ, ಅವರ ಗರಿಷ್ಠ ಸ್ಕೋರ್ 52 ರನ್ ಆಗಿದೆ. ಇದರಲ್ಲಿ 11 ಸಿಕ್ಸರ್ ಮತ್ತು 10 ಬೌಂಡರಿಗಳು ಸೇರಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಕೋಲ್ಕತ್ತಾ, ಏಪ್ರಿಲ್ 10: ಪಶ್ಚಿಮ ಬಂಗಾಳ(West Bengal) ವಿಧಾನಸಭಾ ಚುನಾವಣಾ ಕಣ ಈಗ ರಂಗೇರಿದೆ. ಮಮತಾ ಬ್ಯಾನರ್ಜಿ ಅವರ ಭದ್ರಕೋಟೆಯನ್ನು ಭೇದಿಸಲು ಬಿಜೆಪಿ ತನ್ನೆಲ್ಲಾ ಶಕ್ತಿಯನ್ನು ಬಳಸುತ್ತಿದ್ದು, ಭರಪೂರ ಭರವಸೆಗಳ ‘ಸಂಕಲ್ಪ ಪತ್ರ’ವನ್ನು ಮತದಾರರ ಮುಂದಿಟ್ಟಿದೆ. ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಇರುವಾಗ, ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಬಿಜೆಪಿಯ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದರು. ಸಂಕಲ್ಪ ಪತ್ರ ಎಂದು ಕರೆಯಲಾದ ಈ ಪ್ರಣಾಳಿಕೆಯು ರಾಜ್ಯದ ರಾಜಕೀಯ ಸಮೀಕರಣಗಳನ್ನು ಬದಲಿಸುವ ಆಕರ್ಷಕ ಯೋಜನೆಗಳನ್ನು ಒಳಗೊಂಡಿದೆ.
ಪ್ರತಿ ಮನೆಯ ಮಹಿಳಾ ಮುಖ್ಯಸ್ಥರಿಗೆ ಮಾಸಿಕ 3,000 ರೂ. ಆರ್ಥಿಕ ನೆರವು ನೀಡಲಾಗುವುದು. ಬಿಜೆಪಿ ಸರ್ಕಾರ ರಚನೆಯಾದ ಕೇವಲ ಆರು ತಿಂಗಳೊಳಗೆ ಪಶ್ಚಿಮ ಬಂಗಾಳದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸಲಾಗುವುದು. ನಿರುದ್ಯೋಗಿ ಯುವಕರಿಗೆ ಮಾಸಿಕ 3,000 ರೂ. ಭತ್ಯೆ ಮತ್ತು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿರುವ ಯುವಕರಿಗೆ 15,000 ರೂ. ಒದಗಿಸಲಾಗುವುದು. ಸರ್ಕಾರಿ ನೌಕರರಿಗೆ 45 ದಿನಗಳೊಳಗೆ 7ನೇ ವೇತನ ಆಯೋಗ ಜಾರಿ ಹಾಗೂ ಬಾಕಿ ಇರುವ ತುಟ್ಟಿ ಭತ್ಯೆಯನ್ನು (DA) ಪಾವತಿಸುವ ಭರವಸೆ ನೀಡಲಾಗಿದೆ.
ಮಮತಾ ಆಡಳಿತದ ಮೇಲೆ ಅಮಿತ್ ಶಾ ವಾಗ್ದಾಳಿ
ಪ್ರಣಾಳಿಕೆ ಬಿಡುಗಡೆ ಮಾಡಿ ಮಾತನಾಡಿದ ಅಮಿತ್ ಶಾ, ಕಳೆದ 15 ವರ್ಷಗಳ ತೃಣಮೂಲ ಕಾಂಗ್ರೆಸ್ ಆಡಳಿತವನ್ನು ಕತ್ತಲೆಯ ಅವಧಿ ಎಂದು ಬಣ್ಣಿಸಿದರು.ಬಂಗಾಳದ ಜನತೆ ಈಗ ಭಯದ ವಾತಾವರಣದಲ್ಲಿದ್ದಾರೆ ಮತ್ತು ಬದಲಾವಣೆಯನ್ನು ಬಯಸುತ್ತಿದ್ದಾರೆ.
ಬಂಗಾಳದಲ್ಲಿ ದಶಕಗಳಿಂದ ನಡೆಯುತ್ತಿರುವ ರಾಜಕೀಯ ಹಿಂಸಾಚಾರದ ಪ್ರಕರಣಗಳನ್ನು ತನಿಖೆ ಮಾಡಲು ಬಿಜೆಪಿಯು ವಿಶೇಷ ಆಯೋಗ ರಚಿಸುವ ಭರವಸೆ ನೀಡಿದೆ. ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಈ ಆಯೋಗವು ಕಾರ್ಯನಿರ್ವಹಿಸಲಿದ್ದು, ಎಲ್ಲಾ ಹಿಂಸಾಚಾರದ ಪ್ರಕರಣಗಳನ್ನು ತಾರ್ಕಿಕ ಅಂತ್ಯಕ್ಕೆ ತರುವುದಾಗಿ ಬಿಜೆಪಿ ಪ್ರತಿಜ್ಞೆ ಮಾಡಿದೆ.
ಮಮತಾ ಬ್ಯಾನರ್ಜಿ ಅವರ ‘ಲಕ್ಷ್ಮೀರ್ ಭಂಡಾರ್’ ಯೋಜನೆಗೆ ಪ್ರತಿಯಾಗಿ ಬಿಜೆಪಿ ‘3,000 ರೂ.’ ಮೊತ್ತದ ಭರವಸೆ ನೀಡಿದೆ. ಏಕರೂಪ ನಾಗರಿಕ ಸಂಹಿತೆ ಮತ್ತು ಭ್ರಷ್ಟಾಚಾರ ಮುಕ್ತ ಆಡಳಿತದ ಈ ಭರವಸೆಗಳು ಮತದಾರರ ಮನಗೆಲ್ಲುತ್ತದೆಯೇ ಎಂಬುದನ್ನು ಮೇ 4ರ ಫಲಿತಾಂಶ ನಿರ್ಧರಿಸಲಿದೆ.
ಟಿವಿ9 ಕನ್ನಡ ವತಿಯಿಂದ ಆಯೋಜಿತವಾಗಿರುವ ಶಿಕ್ಷಣ ಎಕ್ಸ್ಪೋ 2026 ಇಂದು ಪ್ರಾರಂಭವಾಗಿದ್ದು, ನಿರ್ದೇಶಕ ಪ್ರೇಮ್ (Director Prem), ನಟಿ ರೀಷ್ಮಾ ಇನ್ನೂ ಹಲವಾರು ಗಣ್ಯರು ಉದ್ಘಾಟನೆಯಲ್ಲಿ ಭಾಗಿ ಆಗಿದ್ದರು. ಹಲವಾರು ವಿದ್ಯಾರ್ಥಿಗಳು, ಪೋಷಕರು ಭಾಗಿ ಆಗಿದ್ದ ಈ ಕಾರ್ಯಕ್ರಮದಲ್ಲಿ, ನಿರ್ದೇಶಕ ಪ್ರೇಮ್ ಅವರು ಎಕ್ಸ್ಪೋನ ಉದ್ದೇಶದ ಕುರಿತಾಗಿ ಮಾತನಾಡಿದರು. ನಟಿ ರೀಷ್ಮಾ ಸಹ ಶಿಕ್ಷಣದ ಮಹತ್ವ, ಎಕ್ಸ್ಪೋ ಅನ್ನು ವಿದ್ಯಾರ್ಥಿಗಳು ಹೇಗೆ ಬಳಕೆ ಮಾಡಿಕೊಳ್ಳಬೇಕು ಎಂಬುದರ ಬಗ್ಗೆ ಹೇಳಿದರು. ವಿಡಿಯೋ ನೋಡಿ…
ರಣವೀರ್ ಸಿಂಗ್ ಅವರು ಚಿತ್ರರಂಗದ ಹಿನ್ನೆಲೆ ಹೊಂದಿದ್ದರೂ ಅವರು ಸಾಕಷ್ಟು ಏರಿಳಿತ ಅನುಭವಿಸಬೇಕಾಯಿತು. ಅವರನ್ನು ಅನೇಕರು ನಿರ್ಲಕ್ಷಿಸಿದ್ದರು. ಈಗ ‘ಧುರಂಧರ್’ ಹಾಗೂ ‘ಧುರಂಧರ್ 2’ ಮೂಲಕ ಎಲ್ಲರಿಗೂ ಅವರು ಉತ್ತರ ನೀಡಿದ್ದಾರೆ. ಈ ಸಂದರ್ಭದಲ್ಲಿ ಒಂದು ವಿಡಿಯೋ ವೈರಲ್ ಆಗಿದೆ. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shahr Rukh Khan) ಅವರನ್ನು ರಣವೀರ್ ಸಿಂಗ್ ಸಂಪೂರ್ಣವಾಗಿ ನಿರ್ಲಕ್ಷಿಸಿದರೇ ಎನ್ನುವ ಪ್ರಶ್ನೆ ಮೂಡಿದೆ. ರಣವೀರ್ಗೆ ಯಶಸ್ಸು ತಲೆಗೇರಿದೆ ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.
ಅನಂತ್ ಅಂಬಾನಿ ಗುಜರಾತ್ನ ಜಾಮ್ನಗರದಲ್ಲಿ ಅದ್ದೂರಿ ಬರ್ತ್ಡೇ ಪಾರ್ಟಿ ಆಯೋಜನೆ ಮಾಡಿದ್ದರು. ಇದಕ್ಕೆ ಸಲ್ಮಾನ್ ಖಾನ್, ಶಾರುಖ್ ಖಾನ್, ರಣವೀರ್ ಸಿಂಗ್ ಸೇರಿದಂತೆ ಅನೇಕರು ಆಗಮಿಸಿದ್ದರು. ಎಲ್ಲರೂ ಭರ್ಜರಿಯಾಗಿ ಪಾರ್ಟಿ ಮಾಡಿದ್ದಾರೆ. ಹಾಡಿಗೆ ಕುಣಿದು ಕುಪ್ಪಳಿಸಿದ್ದಾರೆ. ಪಾರ್ಟಿಯ ಹೈಲೈಟ್ ಎಂದರೆ ಅದು ರಣವೀರ್ ಸಿಂಗ್ ಆಗಿದ್ದರು.
‘ಧುರಂಧರ್ 2’ ಸಕ್ಸಸ್ ಬಳಿಕ ಬಾಲಿವುಡ್ ಸೆಲೆಬ್ರಿಟಿಗಳಿಗೆ ರಣವೀರ್ ಸಿಂಗ್ ಅವರು ಕಾಣಿಸಿದ್ದು ಈಗಲೇ. ಅವರನ್ನು ಎಲ್ಲರೂ ಬಂದು ಮಾತನಾಡಿಸುತ್ತಿದ್ದರು. ಈಗ ವೈರಲ್ ಆಗಿರೋ ವಿಡಿಯೋದಲ್ಲೂ ರಣವೀರ್ ಸಿಂಗ್ ಸುತ್ತಲೂ ಅತಿಥಿಗಳು ನಿಂತಿದ್ದರು. ಅನಂತ್ ಅಂಬಾನಿ ಕೂಡ ಇದ್ದರು. ಆಗ ಶಾರುಖ್ ಖಾನ್ ರಣವೀರ್ ಹೆಗಲ ಮೇಲೆ ಕೈ ಹಾಕಿದರು. ಆ ಬಳಿಕ ಕೆನ್ನೆಯನ್ನು ಮುಟ್ಟಿದರು. ಅವರು ಅನಂತ್ ಕಡೆ ಹೋದರು. ಆದರೆ ರಣವೀರ್ ಅದನ್ನು ನಿರ್ಲಕ್ಷಿಸಿದರು ಎಂದು ಅನೇಕರು ಮಾತನಾಡಿಕೊಂಡಿದ್ದಾರೆ.
Ranveer Singh Literally Ignored Shahrukh Khan on his face
When all the celebrities were together at Anant Ambani’s birthday party, everyone’s eyes were on Ranveer Singh and Shahrukh Khan were literally feeling left out
ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿದೆ. ‘ಶಾರುಖ್ ಖಾನ್ ಅವರನ್ನು ರಣವೀರ್ ಗಮನಕ್ಕೆ ತೆಗೆದುಕೊಳ್ಳಲಿಲ್ಲ’ ಎಂದು ಅನೇಕರು ಹೇಳಿದರು. ಇನ್ನೂ ಕೆಲವರು ‘ಇದೊಂದು ಕ್ಲಿಪ್ ನೋಡಿ ನೋಡಿ ನೀವು ಎಲ್ಲವನ್ನೂ ಹೇಗೆ ನಿರ್ಧರಿಸುತ್ತೀರಿ’ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ.
ಖ್ಯಾತ ಉದ್ಯಮಿ ಮೋಹಿತ್ ಕಾಂಬೋಜ್ ಅವರ ಪುತ್ರಿ ಮಿಷ್ಕಾ ಕಾಂಬೋಜ್ ಅವರ ಅದ್ದೂರಿ ಹುಟ್ಟುಹಬ್ಬದ ಪಾರ್ಟಿ ಮುಂಬೈನಲ್ಲಿ ಇತ್ತೀಚೆಗೆ ನಡೆದಿತ್ತು. ಈ ವೇಳೆ ಶಾರುಖ್ ಹಾಗೂ ರಣವೀರ್ ಒಟ್ಟಾಗಿ ಪಾರ್ಟಿ ಮಾಡಿದ್ದರು. ಹೀಗಾಗಿ, ಸಲ್ಲುನ ನಿರ್ಲಕ್ಷಿಸಿದರು ಎಂಬುದರಲ್ಲಿ ಅರ್ಥವಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.
ಮೈಸೂರು, ಏಪ್ರಿಲ್ 10: ಜೆಡಿಎಸ್ ಬಗ್ಗೆ ಹಗುರವಾಗಿ ಮಾತನಾಡುವ ಸಿಎಂ ಸಿದ್ದರಾಮಯ್ಯ ಅದೇ ಪಕ್ಷದಲ್ಲಿ ರಾಜಕೀಯ ಅಸ್ತಿತ್ವ ಕಂಡುಕೊಂಡವರು ಎಂಬುದನ್ನು ಮರೆಯಬಾರದು ಎಂದು ಕೇಂದ್ರ ಸಚಿವ ಹೆಚ್ಡಿ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಮೈಸೂರಿನಲ್ಲಿ ಮಾತನಾಡಿದ ಅವರು, 1999ರ ಚುನಾವಣೆಯಲ್ಲಿ ಮತ್ತು ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಸೋತಿದ್ದನ್ನು ಉಲ್ಲೇಖಿಸಿದರು. ಜನ ಅವರನ್ನು ರಾಜಕೀಯದಿಂದ ದೂರವಿಟ್ಟಿದ್ದರು ಎಂದು ಹೇಳಿದರು. ಅಲ್ಲದೆ, ಕಾಂಗ್ರೆಸ್ ತೊರೆದು ಐದರಿಂದ ಹತ್ತು ಕ್ಷೇತ್ರಗಳಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿ ಗೆದ್ದು ತೋರಿಸುವಂತೆ ಸವಾಲು ಹಾಕಿದರು.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
2026 ರ ಐಪಿಎಲ್‌ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಭರ್ಜರಿ ಆರಂಭ ಕಂಡಿದೆ. ಮೊದಲ ಪಂದ್ಯದಲ್ಲಿ ತಂಡ ಸೋತರೂ, ಮುಂದಿನ ಎರಡು ಪಂದ್ಯಗಳನ್ನು ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ. ಅದರಲ್ಲೂ ಮೂರನೇ ಪಂದ್ಯವನ್ನು ಅತ್ಯಂತ ರೋಚಕವಾಗಿ ಗೆದ್ದುಕೊಂಡಿದ್ದ ಲಕ್ನೋ ತಂಡ ಸಂತಸದ ಅಲೆಯಲ್ಲಿ ತೇಲುತ್ತಿತ್ತು. ಇದರ ನಡುವೆ ತಂಡಕ್ಕೆ ಆಘಾತವೊಂದು ಎದುರಾಗಿದೆ. ತಂಡದ ಸ್ಟಾರ್ ಸ್ಪಿನ್ನರ್ ಶ್ರೀಲಂಕಾದ ವನಿಂದು ಹಸರಂಗ ಐಪಿಎಲ್ನಿಂದ ಹೊರಬಿದ್ದಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಲಕ್ನೋ ತಂಡದ ನಿರ್ದೇಶಕ ಟಾಮ್ ಮೂಡಿ, ಲಂಕಾ ಆಲ್‌ರೌಂಡರ್ ವನಿಂದು ಹಸರಂಗ ಈ ಸೀಸನ್ನಲ್ಲಿ ತಂಡದ ಪರ ಆಡಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ 2-3 ದಿನಗಳಲ್ಲಿ ಫ್ರಾಂಚೈಸಿ ಅವರ ಬದಲಿ ಆಟಗಾರನನ್ನು ಘೋಷಿಸಲಿದೆ ಎಂದಿದ್ದಾರೆ. ಹರಾಜಿನಲ್ಲಿ ಹಸರಂಗಾ ಅವರನ್ನು 2 ಕೋಟಿ ಮೂಲ ಬೆಲೆಗೆ ಲಕ್ನೋ ಖರೀದಿ ಮಾಡಿತ್ತು.
ವಾಸ್ತವವಾಗಿ 2026 ರ ಟಿ20 ವಿಶ್ವಕಪ್ನ ಆರಂಭಿಕ ಪಂದ್ಯದಲ್ಲೇ ಹಸರಂಗಾ ಗಾಯಗೊಂಡಿದ್ದರು. ಹೀಗಾಗಿ ಅವರು ಟೂರ್ನಿಯಿಂದಲೇ ಹೊರಬಿದ್ದಿದ್ದರು. ಅಂದಿನಿಂದ ಕ್ರಿಕೆಟ್ನಿಂದ ದೂರ ಉಳಿದಿರುವ ಹಸರಂಗಾ ಚೇತರಿಕೆಯ ಹಾದಿಯಲ್ಲಿದ್ದಾರೆ. ಆದರೆ ಐಪಿಎಲ್ ಆರಂಭವಾಗಿ ಎರಡು ವಾರ ಕಳೆದರೂ ಹಸರಂಗಾ ಇನ್ನು ಸಂಪೂರ್ಣವಾಗಿ ಫಿಟ್ ಆಗಿಲ್ಲ.
ಹೀಗಾಗಿ ಸಂಪೂರ್ಣವಾಗಿ ಫಿಟ್ ಇರದ ಆಟಗಾರರಿಗೆ ವಿದೇಶಿ ಲೀಗ್ಗಳಲ್ಲಿ ಆಡಲು ಎನ್ಒಸಿ ನೀಡಲು ಸಾಧ್ಯವಿಲ್ಲ ಎಂಬ ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಆದೇಶ ಹಸರಂಗಾಗೆ ಮುಳುವಾಗಿದೆ. ಹಸರಂಗಾ ಐಪಿಎಲ್‌ನಲ್ಲಿ ಆಡಬೇಕಾದರೆ ಅವರು ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸ್ ಮಾಡಬೇಕು. ಹಾಗಾದರೆ ಮಾತ್ರ ಅವರಿಗೆ ನಿರಾಕ್ಷೇಪಣಾ ಪ್ರಮಾಣಪತ್ರ ನೀಡಲಾಗುವುದು ಎಂದು ಮಂಡಳಿ ಸ್ಪಷ್ಟಪಡಿಸಿದೆ.
ಇಎಸ್ಪಿಎನ್-ಕ್ರಿಕ್ಇನ್ಫೋ ವರದಿಯ ಪ್ರಕಾರ, ದಕ್ಷಿಣ ಆಫ್ರಿಕಾದ ಆಲ್‌ರೌಂಡರ್ ಜಾರ್ಜ್ ಲಿಂಡಾ ಲಕ್ನೋದಲ್ಲಿ ಹಸರಂಗ ಬದಲಿಗೆ ಸ್ಥಾನ ಪಡೆಯುವ ನಿರೀಕ್ಷೆಯಿದೆ. ಸ್ಫೋಟಕ ಮಧ್ಯಮ ಕ್ರಮಾಂಕದ ಬ್ಯಾಟಿಂಗ್ಗೆ ಹೆಸರುವಾಸಿಯಾಗಿರುವ ಎಡಗೈ ಸ್ಪಿನ್ನರ್ ಜಾರ್ಜ್ ಲಿಂಡಾ ಇನ್ನೂ ಐಪಿಎಲ್ಗೆ ಪಾದಾರ್ಪಣೆ ಮಾಡಿಲ್ಲ. ಆದಾಗ್ಯೂ, ಅವರು ಇತ್ತೀಚೆಗೆ ಟಿ20 ವಿಶ್ವಕಪ್ ಮತ್ತು ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದರು.