Headlines

Job Horoscope: ನಿಮ್ಮ ರಾಶಿಗನುಗುಣವಾಗಿ ಏಪ್ರಿಲ್ 12 ರಿಂದ 18ರ ವರೆಗಿನ ಉದ್ಯೋಗ ಭವಿಷ್ಯ ತಿಳಿಯಿರಿ

ಏಪ್ರಿಲ್ 12ರಿಂದ 18ರ ಅವಧಿಯಲ್ಲಿ ಸಾಡೇ ಸಾಥ್ ಶನಿ ಮೀನ ರಾಶಿಯಲ್ಲಿ ಹಾಗೂ ಗುರು ಮಿಥುನ ರಾಶಿಯಲ್ಲಿದ್ದಾನೆ. ಈ ಗ್ರಹಸ್ಥಿತಿಗಳು ಉದ್ಯೋಗದ ಮೇಲೆ ಬೀರುವ ಅನೇಕ ಪ್ರಭಾವಗಳನ್ನು ಬೀರಲಿವೆ. ಮೇಷ: ಉದ್ಯೋಗದಲ್ಲಿ ಹಠಾತ್ ಬದಲಾವಣೆ ಸಾಧ್ಯತೆ. ಹಿರಿಯ ಅಧಿಕಾರಿಗಳಿಂದ ಒತ್ತಡ ಬರಬಹುದು. ಆದರೆ ನಿಮ್ಮ ಸಂವಹನ ಕಲೆ ಮತ್ತು ಶ್ರಮದಿಂದ ವಾರದ ಕೊನೆಯಲ್ಲಿ ಉತ್ತಮ ಲಾಭ ಹಾಗೂ ಕಚೇರಿಯಲ್ಲಿ ಸ್ಥಾನಮಾನ ಪಡೆಯುವಿರಿ. ವೃಷಭ: ವೃತ್ತಿಯಲ್ಲಿ ಬಹಳ ಸಮಯದಿಂದ ನಿರೀಕ್ಷಿಸುತ್ತಿದ್ದ ಬಡ್ತಿ ಸಿಗುವ ಸಮಯ. ಆರ್ಥಿಕವಾಗಿ ಲಾಭದಾಯಕ ದಿನಗಳು….

Read More

ತಾಯಿ ಸತ್ತ ನೋವಲ್ಲೂ ಪರೀಕ್ಷೆ ಬರೆದ ವಿದ್ಯಾರ್ಥಿ ಈಗ ಟಾಪರ್! ಸಾಧನೆಗೆ ಅಮ್ಮನ ಮಾತುಗಳೇ ಸ್ಪೂರ್ತಿಯಾಗಿದ್ದು ಹೇಗೆ?

ಮಂಗಳೂರು, ಏಪ್ರಿಲ್ 10: ಗುರುವಾರ ಪ್ರಕಟವಾದ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶದಲ್ಲಿ ವಾಣಿಜ್ಯ ವಿಭಾಗದಲ್ಲಿ ದಕ್ಷಿಣಕನ್ನಡ  ಜಿಲ್ಲೆಯ ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ (PUC Topper Disha) ಪಡೆದಿದ್ದಾಳೆ. ಈಕೆಯ ಈ ಸಾಧನೆಯ ಹಿಂದೆ ಒಂದು ನೋವಿನ ಕಥೆಯಿದೆ. ದ್ವಿತೀಯ ಪಿಯುಸಿ ಪರೀಕ್ಷೆ ನಡೆಯುತ್ತಿದ್ದ ಸಮಯದಲ್ಲೇ ಅಮ್ಮನನ್ನು ಕಳೆದುಕೊಂಡ ದಿಶಾಳಿಗೆ ಧೃತಿಗೆಡದೆ ತನ್ನ ಗುರಿ ಸಾಧಿಸಲು ಪ್ರೇರೇಪಿಸಿದ್ದು ಆಕೆಯ ತಾಯಿಯ ಮಾತುಗಳು. ಪರೀಕ್ಷೆ ಮುಗಿಸಿ ಬಂದ ದಿಶಾಳಿಗೆ ಕಾದಿತ್ತು ಆಘಾತ! ದಿನೇಶ್…

Read More

ವೈಭವ್ ಸೂರ್ಯವಂಶಿ ಕಟ್ಟಿ ಹಾಕಲು ಇಂದು ಕಣಕ್ಕೆ ಇಳಿಯುತ್ತಾರಾ ಹೇಜಲ್​ವುಡ್?

ಐಪಿಎಲ್​​ನ (IPL) ಈ ಸೀಸನ್ ಅಲ್ಲಿ ಆರ್​​​ಸಿಬಿ ಮೊದಲ ಎರಡು ಪಂದ್ಯಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ ತಂಡ ಆಡಿದ ಮೊದಲ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಎರಡೂ ತಂಡಗಳು ಸಮಬಲದಲ್ಲಿವೆ ಎಂದರೂ ತಪ್ಪಾಗಲಾರದು. ಇಂದು (ಏಪ್ರಿಲ್ 10) ಎರಡೂ ತಂಡಗಳು ಮುಖಾಮುಖಿ ಆಗುತ್ತಿವೆ. ಈ ಪೈಕಿ ಗೆಲವು ಯಾರ ಪಾಲಿಗೆ ಒಲಿಯಲಿದೆ ಎನ್ನುವ ಕುತೂಹಲ ಮೂಡಿದೆ. ಹೀಗಿರುವಾಗಲೇ ಜೋಶ್ ಹೇಜಲ್​​ವುಡ್ ಕಣಕ್ಕೆ ಇಳಿಯುತ್ತಾರಾ ಎನ್ನುವ ಪ್ರಶ್ನೆ ಮೂಡಿದೆ. ಆರ್​​ಸಿಬಿಯಲ್ಲಿ ಬೌಲಿಂಗ್ ಹಾಗೂ ಬ್ಯಾಟಿಂಗ್ ಎರಡೂ ಉತ್ತಮ ರೀತಿಯಲ್ಲಿ…

Read More

ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಬಾಲಕಿ ನಾಪತ್ತೆ ಕೇಸ್​: 3 ದಿನ ಕಳೆದರೂ ಸಿಕ್ಕಿಲ್ಲ ಸುಳಿವು

ಚಿಕ್ಕಮಗಳೂರು, ಏಪ್ರಿಲ್​​ 10: ಚಂದ್ರದ್ರೋಣ ಪರ್ವತ ಶ್ರೇಣಿಯಲ್ಲಿ ಕೇರಳ ಮೂಲದ 15 ವರ್ಷದ ಬಾಲಕಿ ಶ್ರೀನಂದಾ ಮೂರು ದಿನಗಳಿಂದ ನಾಪತ್ತೆಯಾಗಿದ್ದಾರೆ. ಏಪ್ರಿಲ್ 7ರಂದು ಚಿಕ್ಕಮಗಳೂರು ನಗರಕ್ಕೆ ಆಗಮಿಸಿದ್ದ 40 ಜನರ ಪ್ರವಾಸಿ ತಂಡದಲ್ಲಿ ಶ್ರೀನಂದಾ ಕೂಡ ಇದ್ದರು. ಮಾಣಿಕ್ಯಧಾರ ಜಲಪಾತದ ಬಳಿ ನಾಪತ್ತೆಯಾಗಿದ್ದು, ಇನಾಮು ದತ್ತಾತ್ರೇಯ ಬಾಬುಡಂ ಸ್ವಾಮಿ ದರ್ಗಾ ಹಾಗೂ ಮಾಣಿಕ್ಯಧಾರಕ್ಕೆ ಭೇಟಿ ನೀಡಿದ್ದಾಗ ಈ ಘಟನೆ ನಡೆದಿದೆ. ಎಸ್ಡಿಆರ್ಎಫ್, ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ಹಾಗೂ ಎಎನ್ಎಫ್ ತಂಡಗಳು ಸೇರಿ ಬಾಲಕಿಯ ಶೋಧ ಕಾರ್ಯದಲ್ಲಿ ತೊಡಗಿವೆ….

Read More

ಇಸ್ರೇಲ್ ಕ್ಯಾನ್ಸರ್ ಇದ್ದಂತೆ : ಪಾಕ್ ಸಚಿವ ಖ್ವಾಜಾ ಆಸಿಫ್ ವಿವಾದಾತ್ಮಕ ಹೇಳಿಕೆ, ನೆತನ್ಯಾಹು ತೀವ್ರ ವಾಗ್ದಾಳಿ

ಇಸ್ಲಾಮಾಬಾದ್, ಏಪ್ರಿಲ್ 10: ಮಧ್ಯಪ್ರಾಚ್ಯದ ರಣಾಂಗಣದಲ್ಲಿ ಬಾಂಬ್‌ಗಳ ಸದ್ದು ಕೇಳಿಸುತ್ತಿರುವಂತೆಯೇ, ಇತ್ತ ರಾಜತಾಂತ್ರಿಕ ವೇದಿಕೆಯಲ್ಲಿ ಪಾಕಿಸ್ತಾನ ಮತ್ತು ಇಸ್ರೇಲ್(Israel) ನಡುವೆ ‘ಪದಗಳ ಸಮರ’ ತಾರಕಕ್ಕೇರಿದೆ. ಅಮೆರಿಕ ಮತ್ತು ಇರಾನ್ ನಡುವಿನ ಶಾಂತಿ ಮಾತುಕತೆಗಳಿಗೆ ಪಾಕಿಸ್ತಾನ ಆತಿಥ್ಯ ವಹಿಸಲು ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ, ಪಾಕ್ ರಕ್ಷಣಾ ಸಚಿವರ ಸ್ಫೋಟಕ ಹೇಳಿಕೆ ಜಾಗತಿಕ ರಾಜಕಾರಣದಲ್ಲಿ ಕಿಚ್ಚು ಹಚ್ಚಿದೆ. ಇಸ್ರೇಲ್ ಒಂದು ಕ್ಯಾನ್ಸರ್: ಪಾಕ್ ಸಚಿವ ಖವಾಜಾ ಆಸಿಫ್ ಆಕ್ರೋಶ, ನೆತನ್ಯಾಹು ತಿರುಗೇಟು ಅಮೆರಿಕ ಮತ್ತು ಇರಾನ್ ನಡುವೆ 14 ದಿನಗಳ…

Read More

Virgo Horoscope: ನೀವು ಕನ್ಯಾ ರಾಶಿಯವರ? ಹಾಗಿದ್ರೆ ನಿಮಗಾಗಿ ಉಪಯುಕ್ತ ಮಾಹಿತಿ ಇಲ್ಲಿದೆ

ಬುಧನ ಆಧಿಪತ್ಯದ ಕನ್ಯಾ ರಾಶಿಗೆ 2026ರ ಏಪ್ರಿಲ್ ತಿಂಗಳಲ್ಲಿ ಶನಿ, ಕುಜ, ರವಿ, ಬುಧರ ದೃಷ್ಟಿಯೂ ನೇರವಾಗಿ ಇರುವುದರಿಂದ ಜೊತೆಗೆ ರಾಶಿಯ ಅಧಿಪತಿಯಾದ ಬುಧನು ನೀಚಸ್ಥಾನಕ್ಕೆ ಹೋಗಿ, ಅಲ್ಲಿಂದ ದೃಷ್ಟಿಯನ್ನು ಇಟ್ಟ ಕಾರಣ ನಾನಾರೀತಿಯ ತೊಂದರೆಗಳು ಆರಂಭದ ದಿನಗಳಲ್ಲಿ ಆಗಲಿದೆ. ಅನಂತರದಲ್ಲಿ ಒಂದೊಂದೇ ಭಾರಗಳು ಕಡಿಮೆಯಾಗಿ ನಿಶ್ಚಿಂತೆಯ ಬೆಳಕು ನಿಮ್ಮೊಂದಿಗೆ ಮುನ್ನಡೆಸಲಿದೆ. ​ಉದ್ಯೋಗ ಮತ್ತು ವ್ಯವಹಾರ: ಉದ್ಯೋಗದ ದೃಷ್ಟಿಯಿಂದ ಈ ತಿಂಗಳು ಶುಭ ಫಲಿತಾಂಶಗಳನ್ನು ನೀಡಲಿದೆ. ಶನಿಯು ಆರನೇ ಮನೆಯಲ್ಲಿರುವುದರಿಂದ ಕೆಲಸದ ಸ್ಥಳದಲ್ಲಿ ನಿಮ್ಮ ಪ್ರಭಾವ ಹೆಚ್ಚಾಗಲಿದೆ….

Read More

Viral: ಹುಷಾರಿಲ್ಲ ಅಂದ್ರೂ ರಜೆ ಕೊಡಲ್ಲ; ಮ್ಯಾನೇಜರ್ ವರ್ತನೆಗೆ ಬೇಸರ ವ್ಯಕ್ತಪಡಿಸಿದ ಉದ್ಯೋಗಿ

ಕೆಲಸ (job) ಅಂದ್ರೆ ಹಾಗೆನೇ, ಕತ್ತೆ ತರಹ ದುಡಿದ್ರೂ ಬೆಲೆ ಇಲ್ಲ. ನೀವು ಏನೇ ಹೇಳಿ, ನಮ್ಮ ಬಾಸ್ ಒಂದೇ ಒಂದು ರಜೆ ಕೇಳಿದ್ರು ಕೊಡಲ್ಲ. ಹುಷಾರಿಲ್ಲ ಅಂದ್ರೂ ಆಫೀಸಿಗೆ ಬಂದು ಕೆಲಸ ಮಾಡು ಅಂತಾರೆ. ಒಂದು ದಿನ ರಜೆ ಅಂದ್ರೆ ಆಕಾಶ ಭೂಮಿ ಒಂದು ಮಾಡ್ತಾರೆ. ಕೆಲ ಉದ್ಯೋಗಿಗಳು ಈ ರೀತಿ ಹೇಳುವುದನ್ನು ನೀವು ನೋಡಿರುತ್ತೀರಿ. ಇಲ್ಲೊಬ್ಬ ಉದ್ಯೋಗಿಯೂ ಹೊಟ್ಟೆ ಹಾಗೂ ಜ್ವರದ ಕಾರಣ ಶಿಫ್ಟ್ ಆರಂಭವಾಗುವ ಒಂದು ಗಂಟೆ ಮುಂಚಿತವಾಗಿ ಮ್ಯಾನೇಜರ್‌ಗೆ ಕರೆ ಮಾಡಿ…

Read More

ಲಂಚ ಪಡೆಯುತ್ತಾ ರೆಡ್​ಹ್ಯಾಂಡೆಡ್ ಆಗಿ ಸಿಕ್ಕ ಆಫೀಸರ್; ಸಿನಿಮೀಯ ರೀತಿಯಲ್ಲಿ ಆರೋಪಿಯನ್ನು ವಶಕ್ಕೆ ಪಡೆದ ಲೋಕಾಯುಕ್ತ!

ರಾಯಚೂರು, ಏಪ್ರಿಲ್ 10: ಜಿಲ್ಲೆಯಲ್ಲಿ ಲೋಕಾಯುಕ್ತರು (Lokayukta) ಸಿನಿಮೀಯ ರೀತಿಯಲ್ಲಿ ಕಾರ್ಯಾಚರಣೆ ನಡೆಸಿ ಭ್ರಷ್ಟಾಚಾರ ಆರೋಪದಡಿ ಸಿರವಾರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಪಂಚಾಯತ್‌ನ ಚೀಫ್ ಆಫೀಸರ್ ಸುರೇಶ್ ಶೆಟ್ಟಿ, ಖಾತಾ ಮ್ಯೂಟೇಶನ್ ಮಾಡಲು ಲೇಔಟ್ ಮಾಲೀಕ ರಘರಾಮ್ ರೆಡ್ಡಿಯಿಂದ 2 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದಾರೆ ಎಂದು ಆರೋಪಿಸಲಾಗಿದೆ. ಈ ಆರೋಪದ ಹಿನ್ನೆಲೆ ಸುರೇಶ್​ನನ್ನು ವಶಕ್ಕೆ ಪಡೆಯಲಾಗಿದೆ. ಲೇಔಟ್ ಮಾಲೀಕನಿಂದ ಲೋಕಾಯುಕ್ತಗೆ ದೂರು ಸಿರವಾರ ಪಟ್ಟಣದ ಹೊಸ ಲೇಔಟ್‌ನ 34 ನಿವೇಶನಗಳ ಖಾತಾ…

Read More

ಛೇ, ಇದೆಂಥಾ ಕ್ರೌರ್ಯ! ಜಗಳ ಬಿಡಿಸಲು ಹೋದ ಗರ್ಭಿಣಿಯ ಹೊಟ್ಟೆಗೆ ಒದ್ದ ಕಿರಾತಕರು, ಗರ್ಭದಲ್ಲಿದ್ದ ಅವಳಿ ಶಿಶುಗಳು ದಾರುಣ ಸಾವು

ಹಾವೇರಿ, ಏಪ್ರಿಲ್ 10: ಸಾಲದ ಹಣ ವಾಪಸ್ ಕೇಳುವ ಭರದಲ್ಲಿ ಗುಂಪೊಂದು ಗರ್ಭಿಣಿ ಮಹಿಳೆಯ ಮೇಲೆ ಹಲ್ಲೆ ನಡೆಸಿದ ಪರಿಣಾಮ, ಹೊಟ್ಟೆಯಲ್ಲಿದ್ದ ಆರು ತಿಂಗಳ ಅವಳಿ-ಜವಳಿ ಶಿಶುಗಳು ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಹಾವೇರಿ (Haveri) ಜಿಲ್ಲೆ ಸವಣೂರು ತಾಲೂಕಿನ ಅಲ್ಲಿಪುರ ಗ್ರಾಮದಲ್ಲಿ ನಡೆದಿದೆ. ಅಲ್ಲಿಪುರ ಗ್ರಾಮದ ಹಾಲವ್ವ ಎಂಬುವವರು ಮಗಳ ಸೀಮಂತ ಕಾರ್ಯಕ್ರಮಕ್ಕಾಗಿ ಊರಿಗೆ ಬಂದಿದ್ದರು. ಹಾಲವ್ವ ಅವರು ಗ್ರಾಮದ ಸುರೇಶ ಲಮಾಣಿ ಎಂಬುವವರಿಂದ 30 ಸಾವಿರ ರೂಪಾಯಿ ಸಾಲ ಪಡೆದಿದ್ದರು. ಮಾರ್ಚ್ 28ರಂದು ಹಣ ವಾಪಸ್…

Read More

ಟೀಂ ಇಂಡಿಯಾ ಮಾಜಿ ನಾಯಕನಿಗೆ ಗೆಲುವನ್ನು ಅರ್ಪಿಸಿದ LSG ಫಿನಿಶರ್ ಮುಕುಲ್ ಚೌಧರಿ

ಕೋಲ್ಕತ್ತಾ ನೈಟ್ ರೈಡರ್ಸ್ (KKR) ಹಾಗೂ ಲಖನೌ ಸೂಪರ್ ಜಯಂಟ್ಸ್ ನಡುವಿನ ಪಂದ್ಯದಲ್ಲಿ ಕೋಲ್ಕತ್ತ ಕೊನೆಯ ಕ್ಷಣದಲ್ಲಿ ಸೋತಿದೆ. ಎಲ್​​ಎಸ್​​ಜಿ ಪರ ಮುಕುಲ್ ಚೌಧರಿ ಅವರು 27 ಬಾಲ್​​ಗಳಿಗೆ 54 ರನ್ ಪೇರಿಸಿ, ತಂಡವನ್ನು ಗೆಲುವಿನ ದಡ ಸೇರಿಸಿದರು. ಅವರ ಅದ್ಭುತ ಆಟಕ್ಕೆ ಎಲ್ಲರೂ ತಲೆ ಬಾಗಿದ್ದಾರೆ. ಅವರು ತಮ್ಮ ಗೆಲುವನ್ನು ವಿಶೇಷ ವ್ಯಕ್ತಿಗೆ ಅರ್ಪಿಸಿದ್ದಾರೆ. ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್​ ಅಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. 182 ರನ್​​ಗಳ ಬೃಹತ್ ಮೊತ್ತವನ್ನು ಎಲ್​​ಎಸ್​ಜಿ ಬೆನ್ನು ಹತ್ತಿತು. ಉತ್ತಮ…

Read More