Headlines

ಮದುವೆಯಾದ 14 ತಿಂಗಳಲ್ಲೇ ಸ್ಮರಣಶಕ್ತಿ ಕಳೆದುಕೊಂಡ ರಾಷ್ಟ್ರೀಯ ವಾಲಿಬಾಲ್ ಪಟು

ವಾರಾಣಸಿ, ಏಪ್ರಿಲ್ 10: ವಾಲಿಬಾಲ್(Volleyball) ಕೋರ್ಟ್​​ನಲ್ಲಿ ಎದುರಾಳಿಗಳನ್ನು ಮಣಿಸುತ್ತಿದ್ದ ಪ್ರಿಯಾ ಸರೋಜ್, ಇಂದು ಹಾಸಿಗೆಯ ಮೇಲೆ ಪ್ರಜ್ಞೆಯಿಲ್ಲದೆ ಮಲಗಿದ್ದಾರೆ. ಅವರ ಸ್ಮರಣಶಕ್ತಿ ಸಂಪೂರ್ಣವಾಗಿ ಹೋಗಿದೆ, ಮಾತು ಮರೆಯಾಗಿದೆ. ಅವರ ಈ ದುಸ್ಥಿತಿಗೆ ಗಂಡನೇ ಕಾರಣ ಎಂಬ ಆಘಾತಕಾರಿ ಸತ್ಯವನ್ನು ಅವರ ತಾಯಿ ನಿಶಾ ಈಗ ಕಣ್ಣೀರಿನೊಂದಿಗೆ ಬಿಚ್ಚಿಟ್ಟಿದ್ದಾರೆ. ಫೆಬ್ರವರಿ 2024 ರಲ್ಲಿ ವಾರಾಣಸಿಯ ಪರಮಾನಂದಪುರದ ಪ್ರಿಯಾ ಸರೋಜ್ ಅವರನ್ನು ಬಿಎಲ್‌ಡಬ್ಲ್ಯೂ ನಿವಾಸಿ, ಜೆಇ (Junior Engineer) ಆಗಿ ಕೆಲಸ ಮಾಡುತ್ತಿದ್ದ ಅಮಿತ್ ವರ್ಮಾ ಅವರೊಂದಿಗೆ ಅದ್ಧೂರಿಯಾಗಿ ಮದುವೆ…

Read More

ನೀನು ಬಂಗಾರದ ಮನುಷ್ಯ ಕಣಯ್ಯ!: ಅಭಿಮಾನಿಯ ಫೋನ್​​​ ನೋಡಿ ಕರಗಿದ ಸಂಜು ಸ್ಯಾಮ್ಸನ್ ಮನಸ್ಸು

ಕೇರಳ, ಏ.10: ಸಂಜು ಸ್ಯಾಮ್ಸನ್ (Sanju Samson) ಕ್ರೀಡಾ ಸಾಮ್ರಾಜ್ಯದ ಯುವ ಆಟಗಾರ, ಸೈಲೆಂಟ್​​ ಆಗಿರುವ ಇವರು, ಒಳ್ಳೆಯ ಮನಸ್ಸಿನ ವ್ಯಕ್ತಿ, ಒಂದು ದಿನವೂ ತಾಳ್ಮೆ ಕಳೆದುಕೊಂಡಿಲ್ಲ. ಎಲ್ಲವನ್ನು ಕೂಲ್​ ಆಗಿ ನಿಭಾಯಿಸಿದ್ದಾರೆ, ಇದೀಗ ಇವರ ಈ ಗುಣಕ್ಕೆ ಒಂದು ಒಳ್ಳೆಯ ಉದಾಹರಣೆ ಇಲ್ಲಿದೆ ನೋಡಿದೆ. ಐಪಿಎಲ್ 2026ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ (CSK) ಪರ ಆಡುತ್ತಿರುವ ಸಂಜು ಸ್ಯಾಮ್ಸನ್, ಸಾಲು ಸಾಲು ಸೋಲಿನ ನಂತರವೂ ಅಭಿಮಾನಿಗಳ ಮನಸ್ಸಿನಲ್ಲಿ ಉಳಿದುಕೊಂಡಿದ್ದಾರೆ. ಇದೀಗ ತಮ್ಮ ಗುಣದಿಂದ ಅಭಿಮಾನಗಳಿಗೆ ಮತ್ತಷ್ಟು…

Read More

Kaalashtami: ಸಾಲ ಮತ್ತು ಭಯದಿಂದ ಮುಕ್ತಿ ಬೇಕೆ? ಇಂದು ಕಾಲಾಷ್ಟಮಿ ದಿನ ಮರೆಯದೇ ಹೀಗೆ ಮಾಡಿ

ಕಾಲಾಷ್ಟಮಿಯ ಮಹತ್ವ ಮತ್ತು ಆಚರಣೆಯ ಕುರಿತು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ. ಹಬ್ಬ ಹರಿದಿನಗಳು, ವಿಶೇಷ ಕಾರ್ಯಕ್ರಮಗಳು ಮತ್ತು ಶುಭ ಕಾರ್ಯಗಳ ನಡುವೆ, ಕಾಲಾಷ್ಟಮಿಯು ಮಹತ್ತರವಾದ ಪ್ರಭಾವ, ಪರಿವರ್ತನೆ, ಅದೃಷ್ಟ ಮತ್ತು ಸಂಕಟ ನಿವಾರಣೆಯನ್ನು ತರುವ ವಿಶೇಷ ಪರ್ವಕಾಲವಾಗಿದೆ. ಇದು ಭಕ್ತರಲ್ಲಿ ನಂಬಿಕೆಯನ್ನು ಮೂಡಿಸುತ್ತದೆ. ಪ್ರತಿ ಚಂದ್ರಮಾನ ಮಾಸದ ಕೃಷ್ಣ ಪಕ್ಷದ ಎಂಟನೇ ದಿನವನ್ನು (ಅಷ್ಟಮಿ ತಿಥಿ) ಕಾಲಾಷ್ಟಮಿ ಎಂದು ಆಚರಿಸಲಾಗುತ್ತದೆ. ಈ…

Read More

ದ್ವಿತೀಯ ಪಿಯುಸಿಯಲ್ಲಿ 97 ಪರ್ಸೆಂಟ್ ಮಾಡಿದ ಅಂಕಿತಾ ಯಾರು?

ಬಣ್ಣದ ಲೋಕಕ್ಕೆ ಕಾಲಿಟ್ಟ ಬಳಿಕ ಓದಿನ ಬಗ್ಗೆ ಗಮನ ಹರಿಸೋದು ಎಂದರೆ ಅದು ದೊಡ್ಡ ಚಾಲೆಂಜ್. ಈ ಚಾಲೆಂಜ್ ಅನ್ನು ಅಂಕಿತಾ ಜಯರಾಮ್ ಅವರು ಯಶಸ್ವಿಯಾಗಿ ನಿರ್ವಹಿಸಿದ್ದಾರೆ. ದ್ವಿತೀಯ ಪಿಯುಸಿಯಲ್ಲಿ ಅಂಕಿತಾ ಅವರು ಶೇ. 97 ಅಂಕ ಪಡೆದು ಸಾಧನೆ ಮಾಡಿದ್ದಾರೆ. ಹಾಗಾದರೆ ಯಾವ ವಿಷಯಕ್ಕೆ ಎಷ್ಟು ಪಡೆದುಕೊಂಡಿದ್ದಾರೆ? ಆ ಬಗ್ಗೆ ಇಲ್ಲಿದೆ ವಿವರ. ಅಂಕಿತಾ ಜಯರಾಮ್ ಅವರು ಕಿರುತೆರೆ ಬಾಲ ನಟಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟರು. ‘ಭೂಮಿಗೆ ಬಂದ ಭಗವಂತ’ ಧಾರಾವಾಹಿಯಲ್ಲಿ ಕಥಾ ನಾಯಕನ ಮಗಳ…

Read More

ಕಿವಿ ಕೇಳಲ್ಲ, ಮಾತೂ ಬರಲ್ಲ! ಆದ್ರೂ ಸ್ನೇಹಿತನ ಹೆಂಡತಿ ಮೇಲೆ ಕಣ್ಣು ಹಾಕಿದ ವ್ಯಕ್ತಿ ಮಾಡಿದ್ದೇನು ಗೊತ್ತಾ?

ಮೈಸೂರು, ಏಪ್ರಿಲ್ 10: ಸಮಾಜದಲ್ಲಿ ವಿಶೇಷ ಚೇತನರಿಗೆ (Specially Abled) ಸೌಲಭ್ಯಗಳ ಜೊತೆ ಗೌರವವನ್ನೂ ನೀಡಲಾಗುತ್ತದೆ. ಎಲ್ಲರಂತಲ್ಲದ ಅವರನ್ನು ಕರುಣೆಯಿಂದಲೇ ನೋಡಲಾಗುತ್ತದೆ. ಅಂಗವೈಕಲ್ಯ ಹೊಂದಿದವರು ಇನ್ನೇನು ಅಪರಾಧ ಮಾಡಲು ಸಾಧ್ಯ ಎಂದು ಯೋಚಿಸುವವರನ್ನು ಬೆಚ್ಚಿಬೀಳಿಸುವ ಘಟನೆ ಜಿಲ್ಲೆಯ ನಂಜನಗೂಡು (Nanjanagudu) ತಾಲೂಕಿನ ದೇವಿರಮ್ಮನಹಳ್ಳಿಯಲ್ಲಿ ನಡೆದಿದೆ. ಮಾನವನ ವಿಕೃತ ಮನೋಭಾವಕ್ಕೆ ಅಂಗವೈಕಲ್ಯ ಅಡ್ಡಿಯಾಗುವುದಿಲ್ಲ ಎಂಬುದು ಈ ಪ್ರಕರಣದಲ್ಲಿ ಸಾಭೀತಾಗಿದೆ. ಸ್ನೇಹಿತನ ಮಡದಿಯನ್ನೇ ಮದುವೆಯಾಗಲು ಬಯಸಿದ್ದ ಸ್ವಾಮಿ ಮತ್ತು ಆತನ ಪತ್ನಿ ಸವಿತಾ ಇಬ್ಬರೂ ವಿಶೇಷ ಚೇತನರು. ಕಿವಿ ಕೇಳುವುದಿಲ್ಲ,…

Read More

ಹೊಟ್ಟೆಗೆ ಕ್ಲಿಪ್ ಹಾಕಿಕೊಂಡು ನಟನೆ: ರಣ್ವೀರ್ ಸಿಂಗ್ ಡೆಡಿಕೇಷನ್ ಎಂಥಹದ್ದು ಗೊತ್ತೆ?

ಬಾಲಿವುಡ್ ನಟ ರಣವೀರ್ ಸಿಂಗ್ (Ranveer Singh) ಅಭಿನಯದ ‘ಧುರಂಧರ್ 2’ ಸಿನಿಮಾ ದೊಡ್ಡ ಹಿಟ್ ಆಗಿದೆ. ಸತತ ಸೋಲಿನಿಂದ ಕಂಗೆಟ್ಟಿದ್ದ ರಣ್ವೀರ್ ಸಿಂಗ್​​ಗೆ ‘ಧುರಂಧರ್’ ಸರಣಿ ದೊಡ್ಡ ಗೆಲುವು ನೀಡಿದೆ, ಮಾತ್ರವಲ್ಲದೆ ತಾವೊಬ್ಬ ಸ್ಟಾರ್ ನಟ ಎಂಬುದನ್ನು ರಣ್ವೀರ್ ಮತ್ತೆ ಬಾಲಿವುಡ್​​ಗೆ ಸಾರಿ ಹೇಳಿದ್ದಾರೆ. ಸಿನಿಮಾನಲ್ಲಿ ರಣ್ವೀರ್ ನಟನೆಯ ಬಗ್ಗೆ ಬಹಳ ಮೆಚ್ಚುಗೆ ವ್ಯಕ್ತವಾಗಿದೆ. ಅದರಲ್ಲೂ ‘ಧುರಂಧರ್ 2’ ಕ್ಲೈಮ್ಯಾಕ್ಸ್ ವೇಳೆ ಸಾಕಷ್ಟು ದೈಹಿಕ ನೋವು ಅನುಭವಿಸಿ ನಟಿಸಿದ ರೀತಿಯ ಬಗ್ಗೆ ಅತೀವ ಮೆಚ್ಚುಗೆ ವ್ಯಕ್ತವಾಗಿದೆ….

Read More

“ಬೆಂಗಳೂರಿನ ಹೋಟೆಲ್ ಉದ್ಯಮಿಗಳಿಗೆ ಗುಡ್ ನ್ಯೂಸ್!”: ಮತ್ತೆ ಆರಂಭವಾಗಲಿವೆ ಮುಚ್ಚಿದ್ದ ಹೋಟೆಲ್‌ಗಳು

ಬೆಂಗಳೂರು, ಏ.10: ಬೆಂಗಳೂರಿನಲ್ಲಿ ದಿನನಿತ್ಯ ಎಲ್​​ಪಿಜಿ ಗ್ಯಾಸ್​​ ಬಗ್ಗೆ ಒಂದೊಂದು ಗೊಂದಲವಾಗಿತ್ತು. ಹೊಟೇಲ್​​​, ಹಲವಾರು ರೆಸ್ಟೋರೆಂಟ್‌ಗಳು ತುಂಬಾ ಸಂಕಷ್ಟಕ್ಕೆ ಒಳಗಾಗಿತ್ತು. ಜನರಿಗೆ ರುಚಿರುಚಿಯಾದ ತಿಂಡಿ, ಊಟಗಳನ್ನು ಮಾಡಲಾಗುತ್ತಿಲ್ಲ ಎಂಬ ಕೊರಗು ಕೂಡ ಅವರನ್ನು ಕಾಡುತ್ತಿತ್ತು. ಇದೀಗ ಕೇಂದ್ರ ಬೆಂಗಳೂರು ಹೊಟೇಲ್​​​, ರೆಸ್ಟೋರೆಂಟ್‌ಗಳಿಗೆ ಬಿಗ್​​ ಗುಡ್​​​​ ನ್ಯೂಸ್​​​​ವೊಂದನ್ನು ನೀಡಿದೆ. ಕೇಂದ್ರ ಸರ್ಕಾರವು ತಮ್ಮ ಎಲ್‌ಪಿಜಿ ಅವಶ್ಯಕತೆಗಳಲ್ಲಿ 70% ವರೆಗೆ ಪುನಃಸ್ಥಾಪಿಸುವುದಾಗಿ ಘೋಷಿಸಿದೆ ಇದರಿಂದ ಹೊಟೇಲ್ ಉದ್ಯಮಕ್ಕೆ ಬೂಸ್ಟ್​​​ ನೀಡಿದಂತಾಗಿದೆ. ನಗರದಲ್ಲಿ ಹಲವಾರು ರೆಸ್ಟೋರೆಂಟ್‌ಗಳು ಮತ್ತು ತಿನಿಸುಗಳು ತಾತ್ಕಾಲಿಕವಾಗಿ ಮುಚ್ಚಲ್ಪಟ್ಟ…

Read More

ಪಾರ್ಕಿಂಗ್ ವಿಚಾರಕ್ಕೆ ಜಗಳ, ಡ್ರೈವರ್ ತಲೆ ಕತ್ತರಿಸಿದ ವ್ಯಕ್ತಿ, ಪೊಲೀಸರೆದುರೇ ಆರೋಪಿಯನ್ನು ಕೊಂದ ಜನ

ಪಾಟ್ನಾ, ಏಪ್ರಿಲ್ 10: ಕಾನೂನು ಕೈಗೆತ್ತಿಕೊಂಡರೆ ಆಗುವ ಅನಾಹುತಕ್ಕೆ ಬಿಹಾರದ ಅರಾರಿಯಾ ಜಿಲ್ಲೆಯ ಫೋರ್ಬ್ಸ್‌ಗಂಜ್ ಸಾಕ್ಷಿಯಾಗಿದೆ. ಗುರುವಾರ ಇಲ್ಲಿ ನಡೆದ ಅವಳಿ ಕೊಲೆ(Murder)ಗಳು ಕೇವಲ ಕ್ರೌರ್ಯದ ಪರಾಕಾಷ್ಠೆಯಲ್ಲ, ಬದಲಿಗೆ ಕಾನೂನು ಸುವ್ಯವಸ್ಥೆಯ ವೈಫಲ್ಯದ ಪ್ರತಿಬಿಂಬದಂತಿದೆ. ಘಟನೆಯ ಆರಂಭವಾಗಿದ್ದು ಒಂದು ಸಣ್ಣ ಪಾರ್ಕಿಂಗ್ ವಿವಾದದಿಂದ. ರಸ್ತೆಬದಿಯ ವ್ಯಾಪಾರಿ ರವಿ ಚೌಹಾಣ್ ಹಾಗೂ ಪಿಕಪ್ ಚಾಲಕ ಅಲಿ ಹುಸೇನ್ ನಡುವೆ ವಾಹನ ನಿಲ್ಲಿಸುವ ವಿಚಾರವಾಗಿ ಮಾತಿನ ಚಕಮಕಿ ನಡೆದಿದೆ. ‘ಈ ಸಣ್ಣ ಜಗಳ ವಿಕೋಪಕ್ಕೆ ತಿರುಗಿದಾಗ, ರವಿ ಚೌಹಾಣ್ ಅತ್ಯಂತ…

Read More

ಬೆಂಗಳೂರು: ಬೈಕ್‌ನಲ್ಲೇ ಕೀ ಬಿಟ್ಟು ಹೋದ ಮಾಲೀಕ, ಹಾಡಹಗಲೇ ಸುಜುಕಿ ಆಕ್ಸೆಸ್ ಹೊತ್ತೊಯ್ದ ಖದೀಮ!

ಬೆಂಗಳೂರು, ಏಪ್ರಿಲ್ 10: ಮನೆ ಮುಂಭಾಗ ನಿಲ್ಲಿಸಿದ್ದ ಬೈಕನ್ನು ಕಳ್ಳನೊಬ್ಬ ಹಾಡಹಗಲೇ ಹೊತ್ತೊಯ್ದಿರುವ ಘಟನೆ ಬೆಂಗಳೂರಿನ ಲಕ್ಕಸಂದ್ರದಲ್ಲಿ ನಡೆದಿದೆ. ಮಾಲೀಕರು ಮಾಡಿದ ಒಂದು ಸಣ್ಣ ನಿರ್ಲಕ್ಷ್ಯ ಕಳ್ಳನಿಗೆ ವರದಾನವಾಗಿ ಪರಿಣಮಿಸಿದ್ದು, ಬೈಕ್ ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಲಕ್ಕಸಂದ್ರದ 16ನೇ ಕ್ರಾಸ್ ಬಳಿ ಏಪ್ರಿಲ್ 9 ರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಈ ಘಟನೆ ಸಂಭವಿಸಿದೆ. ನಿವಾಸಿಯೊಬ್ಬರು ಸುಜುಕಿ ಆಕ್ಸೆಸ್ 125 ಬೈಕ್ ಅನ್ನು ಮನೆ ಮುಂದೆ ನಿಲ್ಲಿಸಿದ್ದರು. ಆದರೆ, ಮರೆತು ಬೈಕ್‌ನಲ್ಲಿಯೇ ಕೀ ಬಿಟ್ಟು…

Read More

ನಟನೆಯಲ್ಲಿ ಸೂಪರ್ ಓದಿನಲ್ಲಿ ಬಂಪರ್, ನಟಿ ಅಂಕಿತಾ ಪಿಯುಸಿ ಅಂಕವೆಷ್ಟು?

ಸಿನಿಮಾ (Cinema) ಅಥವಾ ಧಾರಾವಾಹಿ ನಟನೆಯಲ್ಲಿ ಬ್ಯುಸಿಯಾದವರು ಓದಿಗೆ ತಿಲಾಂಜಲಿ ಇಡುವವರೇ ಹೆಚ್ಚು. ಮೊದಲೆಲ್ಲ ನಟಿಯರು ಸಿನಿಮಾ ಅವಕಾಶ ಸಿಕ್ಕರೆ ಓದನ್ನೇ ನಿಲ್ಲಿಸಿಬಿಡುತ್ತಿದ್ದರು, ಆದರೆ ಈಗ ಪರಿಸ್ಥಿತಿ ಬದಲಾಗಿದೆ. ಸಿನಿಮಾ ರಂಗದಲ್ಲಿ ಉತ್ತಮ ಶಿಕ್ಷಿತರು ಹೆಚ್ಚಾಗುತ್ತಿದ್ದಾರೆ, ಅದರಲ್ಲೂ ಶಿಕ್ಷಿತ ನಟಿಯರ ಸಂಖ್ಯೆ ಹೆಚ್ಚಾಗುತ್ತಿದೆ. ನಿನ್ನೆ (ಏಪ್ರಿಲ್ 09) ದ್ವಿತೀಯ ಪಿಯುಸಿ ಫಲಿತಾಂಶ ಹೊರಬಿದ್ದಿದ್ದು, ಕನ್ನಡ ಸಿನಿಮಾ ಮತ್ತು ಕಿರುತೆರೆಯಲ್ಲಿ ಜನಪ್ರಿಯವಾಗಿರುವ ನಟಿ ಅಂಕಿತಾ ಜಯರಾಮ್, ತಮ್ಮ ದ್ವಿತೀಯ ಪಿಯುಸಿ ಅಂಕಗಳ ಮಾಹಿತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ‘ಯುವರಾಜ’,…

Read More