ಮುಂಬೈ ವಿಮಾನ ನಿಲ್ದಾಣದೊಳಗೆ ಭಾರಿ ಬೆಂಕಿ ಅವಘಡ
ಮುಂಬೈ, ಏಪ್ರಿಲ್ 9: ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Mumbai Airport) ಟರ್ಮಿನಲ್ 1 ಬಿ ಒಳಗೆ ಇಂದು ಸಂಜೆ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಟರ್ಮಿನಲ್ ಒಳಗಿನ ಕೇಬಲ್ ಟ್ರೇಗಳು ಮತ್ತು ಸ್ವಿಚ್ ಬಾಕ್ಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಬೈ ಅಗ್ನಿಶಾಮಕ ದಳದ ಮುಖ್ಯ ಅಗ್ನಿಶಾಮಕ ಅಧಿಕಾರಿ ರವೀಂದ್ರ ಅಂಬಲ್ಗೇಕರ್ ಹೇಳಿದ್ದಾರೆ. ಬೆಂಕಿ ಟರ್ಮಿನಲ್‌ನ ನೆಲ ಮಹಡಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದು ಮಾಹಿತಿ ಪಡೆದ ಕೂಡಲೇ ಮುಂಬೈ ಅಗ್ನಿಶಾಮಕ ದಳ, ಪೊಲೀಸರು ಮತ್ತು ವಾರ್ಡ್…