ಬೆಂಗಳೂರು, ಏಪ್ರಿಲ್ 09): ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ಮಾನಗೇಡಿ ಕೃತ್ಯವೊಂದು ನಡೆದಿದೆ. ಹಿಂದೂ ಬಾಲಕಿ ಮೇಲೆ ಮುಸ್ಲಿಂ ಯುವಕ ಅತ್ಯಾಚಾರ ಎಸಗಿರುವ ಘಟನೆ ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಹಾರದ (Bihar) ಮೂಲದ ಮೊಹಮ್ಮದ್ ಮುನ್ನ ಎನ್ನುವ ಯುವಕ, ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಎಸಗಿದ್ದಾನೆ. ಬಳಿಕ ಅಪ್ರಾಪ್ತೆ ಕೈಗೆ 150 ರೂಪಾಯಿ ಕೊಟ್ಟು ಎಸ್ಪೇಪ್ ಆಗಿದ್ದ ಮೊಹಮ್ಮದ್ ಮುನ್ನ ಪೊಲೀಸರು ಬಂಧಿಸಿದ್ದಾರೆ. ಹೊಟ್ಟೆಪಾಡಿಗಾಗಿ ದುಡಿಯಲೆಂದು ಬಿಹಾರದಿಂದ ಬೆಂಗಳೂರಿಗೆ ಬಂದು ಈ ನೀಚ ಕೃತ್ಯ ಎಸಗಿದ್ದಾನೆ.
ಆರೋಪಿ ಮೊಹಮ್ಮದ್ ಮುನ್ನ ನಿನ್ನೆ (ಏಪ್ರಿಲ್ 08) ಸಂಜೆ ಮನೆ ಬಳಿ ಆಟವಾಡುತ್ತಿದ್ದ 11 ವರ್ಷದ ಬಾಲಕಿಯನ್ನು ನಿರ್ಮಾಣ ಹಂತದ ಕಟ್ಟಡಕ್ಕೆ ಕರೆದೊಯ್ದು ಅತ್ಯಾಚಾರ ಮಾಡಿದ್ದಾನೆ. ಬಳಿಕ ಇದನ್ನು ಯಾರಿಗೂ ಹೇಳಬೇಡ ಎಂದು ಬಾಲಕಿ ಕೈಗೆ 150 ರೂಪಾಯಿ ಕೊಟ್ಟು ಪರಾರಿಯಾಗಿದ್ದ.
ಇನ್ನೊಂದೆಡೆ ಕೆಲ ಸಮಯದವರೆಗೆ ಮನೆ ಬಳಿ ಬಾಲಕಿ ಕಾಣದಿದ್ದಾಗ ಆತಂಕಕ್ಕೆ ಒಳಗಾಗಿದ್ದ ಪೋಷಕರು ಅಕ್ಕಪಕ್ಕದಲ್ಲಿ ಹುಡುಕಾಡಿದ್ದಾರೆ. ಬಳಿಕ ಕೆಲ ಹೊತ್ತಿನ ನಂತರ ಬಾಲಕಿ ಮನೆಗೆ ಬಂದಿದ್ದು, ಈ ವೇಳೆ ಬಾಲಕಿ ಕೈಯಲ್ಲಿ 150 ರೂ.ಹಣ ಇರುವುದನ್ನು ಪೋಷಕರು ನೀಡಿದ್ದಾರೆ. ನಂತರ ಹಣದ ಬಗ್ಗೆ ವಿಚಾರಿಸಿದಾಗ ಬಾಲಕಿ, ಮುನ್ನನ ನೀಚ ಕೃತ್ಯವನ್ನು ಬಿಚ್ಚಿಟ್ಟಿದ್ದಾಳೆ. ಕೂಡಲೇ ಪೋಷಕರು ಕೂಡಲೇ ಜ್ಞಾನಭಾರತಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಪೊಲೀಸರು, ಬಿಹಾರ ಮೂಲದ ಮೊಹಮ್ಮದ್ ಮುನ್ನ ಎನ್ನುವಾತನನ್ನು ಬಂಧಿಸಿ ತನಿಖೆ ನಡೆಸಿದ್ದಾರೆ.
ಬೆಂಗಳೂರು, ಏಪ್ರಿಲ್ 09: ಇತ್ತೀಚೆಗೆ ಒಂದು ವಿಡಿಯೋ ಭಾರೀ ವೈರಲ್ ಆಗಿತ್ತು. ಅದರಲ್ಲಿ ಓರ್ವ ವ್ಯಕ್ತಿ ಗಂಟೆಗಟ್ಟಲ್ಲೇ ನಿಂತಲ್ಲೇ ನಿಂತಿದ್ದ. ಇದನ್ನ ಕೆಲವರು ಬೆಂಗಳೂರಿನಲ್ಲಿ ಜೋಂಬಿ ಡ್ರಗ್ಸ್ (zombie drug) ಕಾಲಿಟ್ಟಿದೆ ಎಂದು ವೈರಲ್ ಮಾಡಲಾಗಿತ್ತು. ಇನ್ನು ಇದೇ ವಿಚಾರವಾಗಿ ಸ್ಯಾಂಡಲ್ವುಡ್ ನಟ ದುನಿಯಾ ವಿಜಯ್ ಕೂಡ ಧ್ವನಿ ಎತ್ತಿದ್ದಾರೆ. ಇದೀಗ ಈಶಾನ್ಯ ವಿಭಾಗದ ಪೊಲೀಸರಿಂದ ಈ ಬಗ್ಗೆ ತನಿಖೆ ಮಾಡಲಾಗಿದ್ದು, ಈ ವೇಳೆ ಅಸಲಿಯತ್ತು ಬಯಲಾಗಿದೆ. ಜೋಂಬಿ ಡ್ರಗ್ಸ್ ಎನ್ನುವುದೇ ಇಲ್ಲಾ ಎಂಬ ಸ್ಫೋಟಕ ಸತ್ಯ ಹೊರಬಿದ್ದಿದೆ.
ವಿಡಿಯೋದಲ್ಲಿರುವ ವ್ಯಕ್ತಿ ಯಾರು?
ಅಸಲಿಗೆ ವಿಡಿಯೋದಲ್ಲಿ ಇರುವ ವ್ಯಕ್ತಿ ಪಂಜಾಬ್ ಮೂಲದ ಲಾರಿ ಚಾಲಕ ರಾಜವೀರ್ ಸಿಂಗ್. ಈತ ಈ ಹಿಂದೆ ಅಫೀಮು ಎಂಬ ಡ್ರಗ್ಸ್ ಸೇವನೆ ಮಾಡಿದ್ದ. ಹೀಗಾಗಿ ಆತನ ಕುಟುಂಬ ಅವನನ್ನು ಡಿ ಅಡಿಕ್ಷನ್ ಸೆಂಟರ್ಗೆ ಸೇರಿಸಿದ್ದರು. ಬಳಿಕ ಆತ ಬೆಂಗಳೂರಿಗೆ ಬಂದಿದ್ದ. ಲಾರಿ ಚಾಲಕನಾಗಿ ಕೆಲಸ ಮಾಡಲು ಮುಂದಾಗಿದ್ದ. ಕೆಲ ಚಾಲಕರ ಜೊತೆಗೆ ಸೇರಿಕೊಂಡು ಶೆಡ್ನಲ್ಲಿ ವಾಸ ಮಾಡುತ್ತಿದ್ದ. ಇನ್ನು ಈತನಿಗೆ ಆರ್ಥರೈಟಿಸ್ (ಸಂಧಿವಾತ) ಮತ್ತು ಸೈನಸೈಟಿಸ್ ಎಂಬ ಕಾಯಿಲೆ ಕೂಡ ಇದೆ.
ಲಾರಿ ಚಾಲಕರ ಜೊತೆಗೆ ಸೇರಿ ಕಂಠ ಪೂರ್ತಿ ಮದ್ಯ ಸೇವನೆ ಮಾಡಿದ್ದ. ಬಳಿಕ ಎರಡು ಮಾತ್ರೆಯನ್ನು ಎಂದಿನಂತೆ ತೆಗೆದುಕೊಂಡಿದ್ದ. ಮಾತ್ರೆಗಳು ಮತ್ತು ಮದ್ಯ ಸೇರಿ ಕೆಮಿಕಲ್ ರಿಯಾಕ್ಷನ್ನಿಂದ ಕಣ್ಣು ಮಂಜಾಗಿತ್ತು. ನಡೆಯುವುದು, ಓಡಾಡುವುದು ಕಷ್ಟವಾಗಿತ್ತು. ಹೀಗಾಗಿ ಒಂದೇ ಕಡೆ ನಿಂತಲ್ಲಿಯೇ ನಿಂತಿದ್ದ. ಇದನ್ನ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಬೆಂಗಳೂರಿನಲ್ಲಿ ಜೋಂಬಿ ಡ್ರಗ್ಸ್ ಎಂದು ವೈರಲ್ ಮಾಡಲಾಗಿತ್ತು. ಸದ್ಯ ತನಿಖೆಯಿಂದ ಅಸಲಿಯತ್ತು ಬಯಲಿಗೆ. ವಿಡಿಯೋ ಮಾಡಿ ಹರಿಬಿಟ್ಟವರ ವಿರುದ್ಧ ಕೇಸ್ ದಾಖಲಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.
ವಿಡಿಯೋ ಮಾಡಿದವರಿಗೆ ಮತ್ತು ಶೇರ್ ಮಾಡಿದವರಿಗೆ ಶಿಕ್ಷೆ ಎಂದ ಸೀಮಂತ್ ಕುಮಾರ್ ಸಿಂಗ್
ಇನ್ನು ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಮಾತನಾಡಿದ್ದು, ವಿಡಿಯೋದಲ್ಲಿರುವ ವ್ಯಕ್ತಿಯನ್ನ ಪೊಲೀಸರು ಪತ್ತೆ ಮಾಡಿದ್ದಾರೆ. ಆ ವ್ಯಕ್ತಿ ಇಲ್ಲಿಯವರು ಅಲ್ಲ, ಎಣ್ಣೆ ಕುಡಿದು ಬಳಿಕ ಮೆಡಿಸಿನ್ ತೆಗೆದುಕೊಂಡಿದ್ದಕ್ಕೆ ಈ ರೀತಿ ಆಗಿದೆ. ಆತನಿಗೆ ಮೆಡಿಕಲ್ ಚಿಕಿತ್ಸೆ ಮಾಡಲಾಗಿದ್ದು ಯಾವುದೇ ಡ್ರಗ್ಸ್ ಪತ್ತೆಯಾಗಿಲ್ಲ ಎಂದು ಹೇಳಿದ್ದಾರೆ.
ಈ ರೀತಿ ವಿಡಿಯೋ ಹರಿಬಿಡುವ ಮುನ್ನ ಯೋಚನೆ ಮಾಡಿ. ಇಲ್ಲಾ ಮೊದಲು ಪೊಲೀಸರಿಗೆ ತಿಳಿಸಿ. ಈ ರೀತಿ ಸುಖಾ ಸುಮ್ಮನೆ ವೈರಲ್ ಮಾಡುವುದು ಸರಿಯಲ್ಲ. ಇದು ಸಿಟಿಗೆ ಮತ್ತು ಒಬ್ಬ ವ್ಯಕ್ತಿಗೆ ಕೆಟ್ಟ ಹೆಸರು ತರುವ ವಿಚಾರವಾಗಿದೆ. ಈ ವಿಡಿಯೋ ವೈರಲ್ ಮಾಡಿರುವ ವ್ಯಕ್ತಿ ಪತ್ತೆ ಮಾಡಿ ಕ್ರಮಕೈಗೊಳ್ಳುತ್ತೇವೆ. ನಮ್ಮ ಪೊಲೀಸರು ಡ್ರಗ್ಸ್ ವಿಚಾರವಾಗಿ ಕೆಲಸ ಮಾಡುತ್ತಿದ್ದಾರೆ. ಡ್ರಗ್ಸ್ ಬಗ್ಗೆ ಝೀರೋ ಟಾಲರೆನ್ಸ್ ಇದೆ. ಜನರು ಆತಂಕ ಪಡುವುದು ಬೇಡ. ಸಿಟಿ ಬಗ್ಗೆ ಅಪಪ್ರಚಾರ ಮಾಡಿದವರ ಮೇಲೆ ಕಾನುನೂ ಕ್ರಮ ಆಗಲಿದೆ. ವಿಡಿಯೋ ಶೇರ್ ಮಾಡಿದವರಿಗೂ ನೋಟಿಸ್ ಜಾರಿಯಾಗಲಿದೆ ಎಂದು ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.
ನವದೆಹಲಿ, ಏಪ್ರಿಲ್ 9: ಅಸ್ಸಾಂ, ಕೇರಳ ಮತ್ತು ಪುದುಚೇರಿಯಲ್ಲಿ ನಡೆದ ವಿಧಾನಸಭಾ ಚುನಾವಣೆಗಳಿಗೆ (Assembly Elections) ಇಂದು (ಏಪ್ರಿಲ್ 9) ಮತದಾನ ಮುಕ್ತಾಯವಾಯಿತು. ಬೆಳಿಗ್ಗೆ 7 ಗಂಟೆಗೆ ಪ್ರಾರಂಭವಾದ ಮತದಾನ ಪ್ರಕ್ರಿಯೆಯನ್ನು ಚುನಾವಣಾ ಆಯೋಗವು ಬಿಗಿ ಭದ್ರತೆಯಲ್ಲಿ ನಡೆಸಲಾಯಿತು. ಮೂರು ರಾಜ್ಯಗಳ ವಿಧಾನಸಭೆಗಳಲ್ಲಿ ನೂರಾರು ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲು ಮತದಾರರು ಕ್ಷೇತ್ರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಕೇರಳ ಸಿಎಂ ಪಿಣರಾಯಿ ವಿಜಯನ್ ಸೇರಿದಂತೆ ಪ್ರಮುಖ ನಾಯಕರು ಆರಂಭಿಕ ಮತದಾರರಲ್ಲಿ ಸೇರಿದ್ದರು. ಪುದುಚೇರಿ ಮುಖ್ಯಮಂತ್ರಿ ಎನ್ ರಂಗಸ್ವಾಮಿ ಕೂಡ ಮತ ಚಲಾಯಿಸಿದರು. ಅವರು ಮತಗಟ್ಟೆಗೆ ತಮ್ಮ ಮೋಟಾರ್ ಸೈಕಲ್ ಸವಾರಿ ಮಾಡುವ ದೀರ್ಘಕಾಲದ ಸಂಪ್ರದಾಯವನ್ನು ಮುಂದುವರೆಸಿದರು.
ಅಸ್ಸಾಂನಲ್ಲಿ ಈ ಬಾರಿಯ ಚುನಾವಣೆಯು ಬಿಜೆಪಿ ನೇತೃತ್ವದ ಎನ್‌ಡಿಎ ಮತ್ತು ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟದ ನಡುವಿನ ನೇರ ಸ್ಪರ್ಧೆಯಾಗಿ ಮಾರ್ಪಟ್ಟಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸತತ ಮೂರನೇ ಅವಧಿಗೆ ಸಿಎಂ ಆಗುವ ಗುರಿಯನ್ನು ಹೊಂದಿದ್ದಾರೆ. ಮತ್ತೊಂದೆಡೆ, ಕಾಂಗ್ರೆಸ್ ನಾಯಕ ಗೌರವ್ ಗೊಗೊಯ್ ವಿರೋಧ ಪಕ್ಷಗಳನ್ನು ಮುನ್ನಡೆಸುತ್ತಿದ್ದು, ಒಂದು ದಶಕದ ನಂತರ ಮತ್ತೆ ಅಧಿಕಾರವನ್ನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆಲ್ ಇಂಡಿಯಾ ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್, ರೈಜೋರ್ ದಳ ಮತ್ತು ಅಸ್ಸಾಂ ಜಾತಿಯ ಪರಿಷತ್‌ನಂತಹ ಪ್ರಾದೇಶಿಕ ಪಕ್ಷಗಳು ಸಹ ಸ್ಪರ್ಧಿಸುತ್ತಿವೆ ಮತ್ತು ನಿಕಟ ಸ್ಥಾನಗಳಲ್ಲಿ ಫಲಿತಾಂಶಗಳ ಮೇಲೆ ಪರಿಣಾಮ ಬೀರಬಹುದು.
ಅಸ್ಸಾಂನಲ್ಲಿ 126 ಸ್ಥಾನಗಳು, ಕೇರಳದಲ್ಲಿ 140 ಸ್ಥಾನಗಳು ಮತ್ತು ಪುದುಚೇರಿಯಲ್ಲಿ 30 ಸ್ಥಾನಗಳಿಗೆ ಚುನಾವಣೆಗಳು ನಡೆದವು. ಮೇ 4ರಂದು ಮತಗಳ ಎಣಿಕೆ ನಡೆಯಲಿದೆ. ಅಸ್ಸಾಂನಲ್ಲಿ 84.42% ಮತದಾನ ನಡೆದಿದೆ. 2021ರ ಚುನಾವಣೆಯಲ್ಲಿ ಶೇ. 82.04ರಷ್ಟು ಮತದಾನ ದಾಖಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದಲ್ಗಾಂವ್‌ನಲ್ಲಿ ಶೇ. 94.57ರಷ್ಟು ಅತಿ ಹೆಚ್ಚು ಮತದಾನ ದಾಖಲಾಗಿದ್ದರೆ, ಅಮ್ರಿಯಲ್ಲಿ ಶೇ. 70.40ರಷ್ಟು ಅತಿ ಕಡಿಮೆ ಮತದಾನವಾಗಿದೆ.
ಕೇರಳದಲ್ಲಿ ಶೇ.75ಕ್ಕಿಂತ ಹೆಚ್ಚು ಮತದಾನ ದಾಖಲಾಗಿದೆ. ಇದು 2021ರ ವಿಧಾನಸಭಾ ಚುನಾವಣೆಗಿಂತ ಸ್ವಲ್ಪ ಹೆಚ್ಚಾಗಿದೆ. ಕೇರಳದಲ್ಲಿ 140 ವಿಧಾನಸಭಾ ಸ್ಥಾನಗಳಿಗೆ ಇಂದು ಸಂಜೆ 6 ಗಂಟೆಗೆ ಮತದಾನ ಮುಗಿದಾಗ ಶೇ.74.06ರಷ್ಟು ಮತದಾನವಾಗಿತ್ತು. ಆಡಳಿತಾರೂಢ ಎಲ್‌ಡಿಎಫ್ ನೇರವಾಗಿ ಮೂರನೇ ಅವಧಿಗೆ ಅಧಿಕಾರಕ್ಕೆ ಬರುತ್ತದೆಯೇ ಅಥವಾ ಯುಡಿಎಫ್ ಪುನರಾಗಮನ ಮಾಡುತ್ತದೆಯೇ ಎಂಬುದನ್ನು ಈ ಚುನಾವಣೆಗಳು ನಿರ್ಧರಿಸುತ್ತವೆ.
ಇನ್ನು, ಪುದುಚೇರಿಯಲ್ಲಿ ಶೇ.86ಕ್ಕಿಂತ ಹೆಚ್ಚು ಮತದಾನವಾಗಿದೆ. ಕೇಂದ್ರಾಡಳಿತ ಪ್ರದೇಶ ಪುದುಚೇರಿಯ 30 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ಇಂದು ಸಂಜೆ 6 ಗಂಟೆಗೆ ಮುಕ್ತಾಯವಾಯಿತು. ಆರಂಭಿಕ ಅಂದಾಜಿನ ಪ್ರಕಾರ, ಮತದಾನದ ಶೇಕಡಾವಾರು ಶೇ. 86 ದಾಟಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬೆಂಗಳೂರು, (ಏಪ್ರಿಲ್ 09): 2025-26ನೇ ಸಾಲಿನ ಕರ್ನಾಟಕದ ದ್ವಿತೀಯ ಪಿಯುಸಿ ಮೊದಲ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಇಂದು (ಏಪ್ರಿಲ್ 09) ಸಂಜೆ ಶಿಕ್ಷಣ ಸಚಿವ ಮಧು ಬಂಗಾರಪ್ಪನವರು ಫಲಿತಾಂಶ ಪ್ರಕಟಿಸಿದ್ದು, ಇದೇ ವೇಳೆ ಮೊದಲ ಪರೀಕ್ಷೆಯಲ್ಲಿ ಫೇಲಾದವರಿಗೆ ಎರಡನೇ ಪರೀಕ್ಷೆಯ ದಿನಾಂಕವನ್ನು ಸಹ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿಯು, ದ್ವಿತೀಯ ಪಿಯುಸಿ ಪರೀಕ್ಷೆ-2 ವೇಳಾಪಟ್ಟಿಯನ್ನು (Karnataka Second PUC 2nd exam Timetable) ಬಿಡುಗಡೆ ಮಾಡಿದ್ದು, ಪರೀಕ್ಷೆಗಳು ಏಪ್ರಿಲ್ 30 ರಿಂದ ಮೇ 13ರ ವರೆಗೆ ನಡೆಯಲಿವೆ.
ಏಪ್ರಿಲ್ 30ರಿಂದ ದ್ವಿತೀಯ ಪಿಯುಸಿ 2ನೇ ಪರೀಕ್ಷೆ
ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ (Exam-2) ಏಪ್ರಿಲ್ 30ರಿಂದ ಆರಂಭವಾಗಿ ಮೇ 13ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ಮತ್ತೊಮ್ಮೆ ತಮ್ಮ ಫಲಿತಾಂಶವನ್ನು ಸುಧಾರಿಸಿಕೊಳ್ಳುವ ಅವಕಾಶ ಕಲ್ಪಿಸಲಾಗಿದೆ. ಆದರೆ ಈ ಬಾರಿ ಮೂರನೇ ಪರೀಕ್ಷೆ (Exam-3) ನಡೆಸುವುದಿಲ್ಲ ಎಂದು ಸಚಿವ ಮಧು ಬಂಗಾರಪ್ಪ ಸ್ಪಷ್ಟಪಡಿಸಿದೆ. ಇನ್ನು ಪರೀಕ್ಷೆ 2 ಬಹುತೇಕ ವಿಷಯಗಳ ಪರೀಕ್ಷೆ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಡೆಯಲಿವೆ. ಕೆಲವು ವೃತ್ತಿಪರ ಹಾಗೂ ತಾಂತ್ರಿಕ ವಿಷಯಗಳ ಪರೀಕ್ಷೆಗಳು ಮಧ್ಯಾಹ್ನದ ಅವಧಿಯಲ್ಲಿ ನಿಗದಿಯಾಗಿವೆ.
13/05/2026 ಹಿಂದೂಸ್ತಾನಿ ಸಂಗೀತ, ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ, ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು, ಮಾಹಿತಿ ತಂತ್ರಜ್ಞಾನ, ರೀಟೈಲ್, ಆಟೋಮೊಬೈಲ್, ಆರೋಗ್ಯ ರಕ್ಷಣೆ, ಬ್ಯೂಟಿ ಅಂಡ್ ವೆಲ್‌ನೆಸ್ (ಮಧ್ಯಾಹ್ನ 2ರಿಂದ ಸಂಜೆ 4.15ರವರೆಗೆ)
ದ್ವಿತೀಯ ಪಿಯುಸಿ ಪರೀಕ್ಷೆ-1 ಫೆಬ್ರವರಿ 28ರಿಂದ ಮಾರ್ಚ್ 12ರವರೆಗೆ ರಾಜ್ಯಾದ್ಯಂತ ಒಟ್ಟು 1217 ಕೇಂದ್ರಗಳಲ್ಲಿ ನಡೆದಿದ್ದು, 5174 ಕಾಲೇಜುಗಳ ಒಟ್ಟು 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ನೊಂದಣಿ ಮಾಡಿಕೊಂಡಿದ್ದರು. ಈ ಪೈಕಿ ಸೈನ್ಸ್ ವಿಷಯದಲ್ಲಿ 2.92 ಲಕ್ಷ, ವಾಣಿಜ್ಯ ವಿಭಾಗದಲ್ಲಿ 2.11 ಲಕ್ಷ ಹಾಗೂ ಕಲಾ ವಿಭಾಗದಲ್ಲಿ 1.42 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದರು.
ಐಪಿಎಲ್ 2026 (IPL 2026) ರ 16 ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RR vs RCB) ನಡುವೆ ನಡೆಯುತ್ತಿದೆ. ಈ ಟೂರ್ನಿಯಲ್ಲಿ ಇದುವರೆಗೆ ಎರಡೂ ತಂಡಗಳು ಉತ್ತಮ ಪ್ರದರ್ಶನ ನೀಡಿವೆ. ರಾಜಸ್ಥಾನ್ ರಾಯಲ್ಸ್ ಆಡಿರುವ ಮೂರಕ್ಕೆ ಮೂರು ಪಂದ್ಯಗಳಲ್ಲಿಯೂ ಗೆದ್ದಿದೆ. ಇತ್ತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎರಡು ಪಂದ್ಯಗಳನ್ನು ಆಡಿದ್ದು, ಎರಡರಲ್ಲೂ ಗೆದ್ದಿದೆ. ಹೀಗಾಗಿ ಈ ಪಂದ್ಯದ ಬಳಿಕ ಒಂದು ತಂಡ ಮೊದಲ ಸೋಲಿಗೆ ಕೊರಳೊಡ್ಡಬೇಕಾಗಿದೆ. ಇತ್ತ ವಿಜೇತ ತಂಡ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಪಡೆಯಲಿದೆ. ಆದ್ದರಿಂದ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಕಾಳಗವನ್ನು ನಿರೀಕ್ಷಿಸಲಾಗಿದೆ.
ಈ ಪಂದ್ಯವು ರಾಜಸ್ಥಾನ್ ರಾಯಲ್ಸ್‌ನ ತವರು ಮೈದಾನವಾದ ಗುವಾಹಟಿಯ ಬರ್ಸಪರ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆಯಲಿದೆ. ಕಳೆದ ಪಂದ್ಯದಲ್ಲಿ, ರಾಜಸ್ಥಾನ್ ಅದೇ ಮೈದಾನದಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು 27 ರನ್‌ಗಳಿಂದ ಸೋಲಿಸಿತ್ತು. ಈಗ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಸವಾಲನ್ನು ಎದುರಿಸಲಿದೆ.
ಗುವಾಹಟಿಯಲ್ಲಿ ಹವಾಮಾನ ಹೇಗಿದೆ?
ಈ ಪಂದ್ಯದ ಸಮಯದಲ್ಲಿ ಗುವಾಹಟಿಯಲ್ಲಿ ಮೋಡ ಕವಿದ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ವರದಿ ನೀಡಿದೆ. ಅಕ್ಯೂವೆದರ್ ಪ್ರಕಾರ, ಶುಕ್ರವಾರ ಗುವಾಹಟಿಯಲ್ಲಿ ಮಳೆಯಾಗುವ ಸಾಧ್ಯತೆ ಶೇ. 56 ರಷ್ಟು ಇದೆ. ಹೀಗಾಗಿ ಮಳೆಯು ಪಂದ್ಯದಲ್ಲಿ ಪ್ರಮುಖ ಪಾತ್ರವಹಿಸಲಿದ್ದು ಪಂದ್ಯಕ್ಕೆ ಅಡ್ಡಿಯಾಗಬಹುದು.
ಕಳೆದ ಪಂದ್ಯಕ್ಕೂ ಮಳೆ ಅಡ್ಡಿ
ಈ ಪಂದ್ಯಕ್ಕೂ ಮುನ್ನ ಏಪ್ರಿಲ್ 7 ರಂದು ಗುವಾಹಟಿಯಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಪಂದ್ಯ ನಡೆದಿತ್ತು. ಈ ಪಂದ್ಯಕ್ಕೂ ಮಳೆ ಅಡ್ಡಿಪಡಿಸಿತು, ಪರಿಣಾಮವಾಗಿ ತಲಾ 11 ಓವರ್‌ಗಳ ಪಂದ್ಯವನ್ನು ಆಡಿಸಲಾಯಿತು. ಇದರಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ 11 ಓವರ್‌ಗಳಲ್ಲಿ 150 ರನ್ ಗಳಿಸಿದರೆ, ಗುರಿ ಬೆನ್ನಟ್ಟಿದ ಮುಂಬೈ ಕೇವಲ 123 ರನ್ ಗಳಿಸಿ ಪಂದ್ಯವನ್ನು 27 ರನ್‌ಗಳಿಂದ ಸೋತಿತು.
ಐಪಿಎಲ್‌ನಲ್ಲಿ ಇದುವರೆಗೆ ರಾಜಸ್ಥಾನ ರಾಯಲ್ಸ್ ಮತ್ತು ಆರ್‌ಸಿಬಿ ನಡುವೆ 34 ಪಂದ್ಯಗಳು ನಡೆದಿವೆ. ಆರ್‌ಸಿಬಿ ಆಡಿರುವ 34 ಪಂದ್ಯಗಳಲ್ಲಿ 17 ರಲ್ಲಿ ಗೆದ್ದಿದ್ದರೆ, ರಾಜಸ್ಥಾನ ರಾಯಲ್ಸ್ 14 ಪಂದ್ಯಗಳನ್ನು ಗೆದ್ದಿದೆ. ಮೂರು ಪಂದ್ಯಗಳು ಫಲಿತಾಂಶವಿಲ್ಲದೆ ಕೊನೆಗೊಂಡಿವೆ. ಕಳೆದ ಸೀಸನ್ನಲ್ಲಿ ಈ ಎರಡೂ ತಂಡಗಳು ಎರಡು ಪಂದ್ಯಗಳನ್ನು ಆಡಿದ್ದವು. ಈ ಎರಡೂ ಪಂದ್ಯಗಳನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಗೆದ್ದಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಮುಂಬೈ ಮೂಲದ ಪ್ರಮುಖ ಉದ್ಯಮಿ ಮತ್ತು ಬಿಜೆಪಿ ಮುಖಂಡ ಮೋಹಿತ್ ಕಂಬೋಜ್ ಅವರ ಪುತ್ರಿ ಮಿಷ್ಕಾ ಕಂಬೋಜ್ ಅವರ 16ನೇ ಜನ್ಮದಿನದ ಸೆಲೆಬ್ರೇಷನ್ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಈ ಸಮಾರಂಭದಲ್ಲಿ ಬಾಲಿವುಡ್‌ನ ಘಟಾನುಘಟಿ ತಾರೆಗಳು ಪಾಲ್ಗೊಂಡಿದ್ದರು. ವಿಶೇಷವಾಗಿ ಶಾರುಖ್ ಖಾನ್ (Shah Rukh Khan) ಮತ್ತು ರಣವೀರ್ ಸಿಂಗ್ ಅವರ ನಡುವಿನ ಆತ್ಮೀಯ ಕ್ಷಣಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗಿವೆ. ‘ಧುರಂಧರ್ 2’ (Dhurandhar 2) ಸಕ್ಸಸ್ ಬೆನ್ನಲ್ಲೇ ಈ ಭೇಟಿ ನಡೆದಿರುವುದು ವಿಶೇಷ. ಈ ಬಗ್ಗೆ ಅಭಿಮಾನಿಗಳು ಬಗೆಬಗೆಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
‘ಧುರಂಧರ್ 2’ ಸಿನಿಮಾದ ಯಶಸ್ಸಿನ ಬಗ್ಗೆ ಅನೇಕ ಸೆಲೆಬ್ರಿಟಿಗಳು ಈಗಾಗಲೇ ಮಾತನಾಡಿದ್ದಾರೆ. ಆದರೆ ಶಾರುಖ್ ಖಾನ್ ಬಹಿರಂಗವಾಗಿ ಏನನ್ನೂ ಹೇಳಿಲ್ಲ. ಅವರಿಗೆ ರಣವೀರ್ ಸಿಂಗ್ ಬಗ್ಗೆ ಅಸಮಾಧಾನ ಇರಬಹುದು ಎಂದು ಅನೇಕರು ಊಹಿಸಿದ್ದರು. ಆದರೆ ಈಗ ಪಾರ್ಟಿಯಲ್ಲಿ ರಣವೀರ್ ಸಿಂಗ್ ಮತ್ತು ಶಾರುಖ್ ಖಾನ್ ಜೊತೆಯಾಗಿ ಇರುವ ವಿಡಿಯೋ ನೋಡಿ ಎಲ್ಲರ ಅನುಮಾನ ಪರಿಹಾರ ಆಗಿದೆ.
ವೈರಲ್ ಆಗಿರುವ ವಿಡಿಯೋದಲ್ಲಿ ರಣವೀರ್ ಸಿಂಗ್ ಅವರು ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಅವರೊಂದಿಗೆ ಸಂಭಾಷಣೆ ನಡೆಸುತ್ತಿರುವುದನ್ನು ಕಾಣಬಹುದು. ಈ ವೇಳೆ ಅಲ್ಲಿಗೆ ಆಗಮಿಸುವ ಶಾರುಖ್ ಖಾನ್ ಅವರು ರಣವೀರ್ ಹೆಗಲ ಮೇಲೆ ತಟ್ಟಿ ಅತ್ಯಂತ ಪ್ರೀತಿಯಿಂದ ಅವರ ಕೆನ್ನೆಯನ್ನು ಸವರಿದ್ದಾರೆ. ಶಾರುಖ್ ಮ್ಯಾನೇಜರ್ ಪೂಜಾ ದದ್ಲಾನಿ ಕೂಡ ರಣವೀರ್ ಕೆನ್ನೆಗೆ ಮುತ್ತಿಟ್ಟು ಪ್ರೀತಿ ತೋರಿದ್ದಾರೆ.
just see how Shah Rukh Khan is patting Ranveer Singh and touching his cheeks, probably congratulating him for Dhurandhar 2 success. And even SRK’s manager Pooja Dadlani is showing love to Ranveer. pic.twitter.com/qKiZVsxC0e
ಬಾಕ್ಸ್ ಆಫೀಸ್‌ನಲ್ಲಿ ‘ಧುರಂಧರ್ 2’ ಸೃಷ್ಟಿಸಿರುವ ಸುನಾಮಿಗೆ ಶಾರುಖ್ ಈ ಮೂಲಕ ಅಭಿನಂದನೆ ಸಲ್ಲಿಸಿದ್ದಾರೆ ಎಂದು ಅಭಿಮಾನಿಗಳು ಚರ್ಚಿಸುತ್ತಿದ್ದಾರೆ. ವಿಡಿಯೋದಲ್ಲಿ ರಣವೀರ್ ಕೂಡ ಮುಗುಳ್ನಗುತ್ತಾ ‘ಥ್ಯಾಂಕ್ ಯೂ’ ಎಂದು ಹೇಳುವುದು ಕೇಳಿಸುತ್ತದೆ. ‘ಇವರಿಬ್ಬರೂ ಒಂದು ಕುಟುಂಬದಂತೆ ಇದ್ದಾರೆ’ ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ.
ರಣವೀರ್ ಸಿಂಗ್ ಅವರಿಗೆ ಸದ್ಯ ಎಲ್ಲವೂ ಶುಭವಾಗಿಯೇ ನಡೆಯುತ್ತಿದೆ. ಆದಿತ್ಯ ಧರ್ ನಿರ್ದೇಶನದ ‘ಧುರಂಧರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಹೊಸ ಇತಿಹಾಸ ನಿರ್ಮಿಸಿವೆ. ಮಾರ್ಚ್ 19ರಂದು ಬಿಡುಗಡೆಯಾದ ‘ಧುರಂಧರ್ 2’ ಈಗಾಗಲೇ ವಿಶ್ವಾದ್ಯಂತ 1,600 ಕೋಟಿ ರೂಪಾಯಿ ಗಡಿ ದಾಟಿ ಮುನ್ನುಗ್ಗುತ್ತಿದೆ. ಅವರ ಹೊಸ ಸಿನಿಮಾ ಮೇಲೆ ಬೆಟ್ಟದಷ್ಟು ನಿರೀಕ್ಷೆ ಆಗಿದೆ.
ಶಿವಮೊಗ್ಗ, ಏಪ್ರಿಲ್ 09: ರಸ್ತೆ ಅಗಲೀಕರಣ ವೇಳೆ ಗುಡ್ಡ ಕುಸಿದು ಓರ್ವ ಹೊರ ರಾಜ್ಯದ ಕಾರ್ಮಿಕ ಸೇರಿ ಮೂವರು ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಹೊಸನಗರ ತಾಲೂಕಿನ ಹುಲಿಕಲ್ ಘಾಟ್ನಲ್ಲಿ ನಡೆದಿದೆ. ರಾಘವೇಂದ್ರ(37), ರಾಜು(30) ಮತ್ತು ಶಬ್ಬೀರ್(40) ಮೃತರು. ಘಟನಾ ಸ್ಥಳದಲ್ಲಿ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಬೈ, ಏಪ್ರಿಲ್ 9: ಮುಂಬೈನ ಛತ್ರಪತಿ ಶಿವಾಜಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Mumbai Airport) ಟರ್ಮಿನಲ್ 1 ಬಿ ಒಳಗೆ ಇಂದು ಸಂಜೆ ಭಾರಿ ಬೆಂಕಿ ಅವಘಡ ಸಂಭವಿಸಿದೆ. ಟರ್ಮಿನಲ್ ಒಳಗಿನ ಕೇಬಲ್ ಟ್ರೇಗಳು ಮತ್ತು ಸ್ವಿಚ್ ಬಾಕ್ಸ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ ಎಂದು ಮುಂಬೈ ಅಗ್ನಿಶಾಮಕ ದಳದ ಮುಖ್ಯ ಅಗ್ನಿಶಾಮಕ ಅಧಿಕಾರಿ ರವೀಂದ್ರ ಅಂಬಲ್ಗೇಕರ್ ಹೇಳಿದ್ದಾರೆ. ಬೆಂಕಿ ಟರ್ಮಿನಲ್‌ನ ನೆಲ ಮಹಡಿಯಲ್ಲಿ ಮಾತ್ರ ಕಾಣಿಸಿಕೊಂಡಿದ್ದು ಮಾಹಿತಿ ಪಡೆದ ಕೂಡಲೇ ಮುಂಬೈ ಅಗ್ನಿಶಾಮಕ ದಳ, ಪೊಲೀಸರು ಮತ್ತು ವಾರ್ಡ್ ಸಿಬ್ಬಂದಿ ಬೆಂಕಿಯನ್ನು ನಂದಿಸಲು ಸ್ಥಳಕ್ಕೆ ಧಾವಿಸಿದರು. ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಬೆಂಕಿಯ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಐಪಿಎಲ್ 2026 (IPL 2026) ರ 15 ನೇ ಪಂದ್ಯವು ಕೋಲ್ಕತ್ತಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (KKR vs LSG) ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೆಕೆಆರ್ಗೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಫಿನ್ ಅಲೆನ್ ಮತ್ತೊಮ್ಮೆ ಬಹುಬೇಗ ವಿಕೆಟ್ ಒಪ್ಪಿಸಿದ್ದಾರೆ. ಆದರೆ ಇದೀಗ ಆ ವಿಕೆಟ್ ಹೊಸ ವಿವಾದಕ್ಕೆ ಕಾರಣವಾಗಿದೆ. ಪಂದ್ಯದ ಎರಡನೇ ಓವರ್‌ನಲ್ಲಿ, ಲಕ್ನೋ ಸೂಪರ್ ಜೈಂಟ್ಸ್ ವೇಗಿ ಪ್ರಿನ್ಸ್ ಯಾದವ್ ಫಿನ್ ಅಲೆನ್ ಅವರನ್ನು ಔಟ್ ಮಾಡಿದರು. ಆದಾಗ್ಯೂ, ಅಂಪೈರ್ ಅವರ ಜಾಗರೂಕತೆಯಿಂದ ಕೆಕೆಆರ್ಗೆ ಅನ್ಯಾಯವಾಗಿದೆ ಎಂಬುದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಯಾಗುತ್ತಿರುವ ವಿಷಯವಾಗಿದೆ.
ಫಿನ್ ಅಲೆನ್ ನಾಟೌಟ್?
ವಾಸ್ತವವಾಗಿ, ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಇನ್ನಿಂಗ್ಸ್‌ನ ಎರಡನೇ ಓವರ್‌ನ ನಾಲ್ಕನೇ ಎಸೆತದಲ್ಲಿ ಪ್ರಿನ್ಸ್ ಯಾದವ್ ಕೆಕೆಆರ್ ಆರಂಭಿಕ ಆಟಗಾರ ಫಿನ್ ಅಲೆನ್ ಅವರನ್ನು ಔಟ್ ಮಾಡಿದರು. ಆಫ್ ಸ್ಟಂಪ್ ಹೊರಗೆ ಹೋಗುತ್ತಿದ್ದ ಚೆಂಡನ್ನು ಅಲೆನ್ ಪುಲ್ ಶಾಟ್ ಮಾಡಲು ಪ್ರಯತ್ನಿಸಿದನು, ಆದರೆ ಚೆಂಡು ಅವರ ಬ್ಯಾಟ್‌ನ ಮೇಲಿನ ಅಂಚನ್ನು ತಾಗಿ ಮೇಲಕ್ಕೆ ಏರಿತು. ಡೀಪ್ ಥರ್ಡ್ ಮ್ಯಾನ್ನಲ್ಲಿ ನಿಂತಿದ್ದ ದಿಗ್ವೇಶ್ ರಥಿ ಬೌಂಡರಿ ಬಳಿ ಅದ್ಭುತ ಕ್ಯಾಚ್ ಹಿಡಿದರು.
Digvesh Rathi ಹಿಡಿದ ಈ ಕ್ಯಾಚ್ ಬಗ್ಗೆ ನಿಮ್ಮ ಅಭಿಪ್ರಾಯವೇನು ಅಣ್ತಮ್ಮಾಸ್?
ವೀಕ್ಷಿಸಿ | #TATAIPL2026#KKRvsLSG | LIVE NOW | ನಿಮ್ಮ Star Sports ಕನ್ನಡ & JioHotstar ನಲ್ಲಿ.
— Star Sports Kannada (@StarSportsKan) April 9, 2026
ಬೌಂಡರಿ ಕುಶನ್‌ನಲ್ಲಿ ಸ್ವಲ್ಪ ಚಲನೆ
ಆರಂಭದಲ್ಲಿ, ಅದು ಅದ್ಭುತ ಕ್ಯಾಚ್‌ನಂತೆ ಕಾಣುತ್ತಿತ್ತು. ಆದರೆ ರಿಪ್ಲೇಗಳಲ್ಲಿ ದಿಗ್ವೇಶ್ ರಥಿ ಕ್ಯಾಚ್ ತೆಗೆದುಕೊಳ್ಳುವಾಗ ಬೌಂಡರಿ ಹಗ್ಗವನ್ನು ಮುಟ್ಟಿದ್ದಾರೆಂದು ಸ್ಪಷ್ಟವಾಗಿ ತೋರಿಸಿದೆ. ಒಂದು ಕ್ಷಣ, ಅವರ ಕಾಲು ಹಗ್ಗವನ್ನು ತಾಗುತ್ತಿರುವಂತೆ ಕಂಡುಬಂದಿದೆ. ಇದಲ್ಲದೆ, ಬೌಂಡರಿ ಕುಶನ್‌ನಲ್ಲಿ ಸ್ವಲ್ಪ ಚಲನೆ ಕಂಡುಬಂದಿದೆ. ಆದರೂ, ಅಂಪೈರ್ ಅದನ್ನು ಪರಿಶೀಲಿಸದೆ ಫಿನ್ ಅಲೆನ್‌ರನ್ನು ಔಟ್ ಎಂದು ಘೋಷಿಸಿದ್ದಾರೆ. ಈ ನಿರ್ಧಾರವು ತಕ್ಷಣವೇ ವಿವಾದವನ್ನು ಹುಟ್ಟುಹಾಕಿದ್ದು, ಅಂಪೈರ್ ಜಾಗರೂಕರಾಗಿದ್ದರೆ, ಅಲೆನ್ ಔಟ್ ಆಗುತ್ತಿರಲಿಲ್ಲ ಎಂಬುದು ನೆಟ್ಟಿಗರ ಅಭಿಪ್ರಾಯವಾಗಿದೆ.
ಅಂಪೈರ್ ಅವರ ಈ ನಿರ್ಧಾರದಿಂದ ಕೋಪಗೊಂಡಿರುವ ನೆಟ್ಟಿಗರು #FinnAllenNotOut ಮತ್ತು #BadUmpiring ನಂತಹ ಹ್ಯಾಶ್‌ಟ್ಯಾಗ್‌ಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಮಾಡಲು ಪ್ರಾರಂಭಿಸಿದ್ದಾರೆ. ಏತನ್ಮಧ್ಯೆ, ಈ ಅಂಪೈರ್‌ನ ತಪ್ಪಿನಿಂದಾಗಿ, ಕೋಲ್ಕತ್ತಾ ನೈಟ್ ರೈಡರ್ಸ್ ಕೇವಲ 15 ರನ್‌ಗಳಿಗೆ ತಮ್ಮ ಮೊದಲ ವಿಕೆಟ್ ಕಳೆದುಕೊಂಡಿತು. ಫಿನ್ ಅಲೆನ್ 8 ಎಸೆತಗಳಲ್ಲಿ 9 ರನ್ಗಳಿಸಲಷ್ಟೇ ಶಕ್ತರಾದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಇಂದಿನ ಈ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಾವು ಬಯಸಿದ ಕೆಲಸವನ್ನು (Job) ಗಳಿಸವುದು ಅಷ್ಟು ಸುಲಭವಲ್ಲ. ಒಂದು ಕೆಲಸ ಗಿಟ್ಟಿಸಿಕೊಳ್ಳಲು ತುಂಬಾನೇ ಕಷ್ಟಪಡಬೇಕಾಗುತ್ತದೆ. ಹೀಗೆ ಕೆಲಸವನ್ನು ಹುಡುಕಲು ಹಲವರು ಕಷ್ಟಪಡುತ್ತಿರುತ್ತಾರೆ. ಇನ್ನೂ ಕೆಲವರು ಕೆಲಸವೇ ಇಲ್ಲದೇ ಮನೆಯಲ್ಲಿಯೇ ಟೈಮ್ ಪಾಸ್ ಮಾಡುತ್ತಿರುತ್ತಾರೆ. ಇಂತಹವರಿಗೆ ಮನೆಯಲ್ಲಿಯೇ ಕುಳಿತು ಸುಲಭವಾಗಿ ಕೈ ತುಂಬಾ ಹಣ ಸಂಪಾದನೆ ಮಾಡಬಹುದು. ಹೌದು ಇಂದಿನ ಈ ಇಂಟರ್‌ನೆಟ್ ಯುಗದಲ್ಲಿ ಮನೆಯಲ್ಲಿಯೇ ಕುಳಿತು ಸ್ಮಾರ್ಟ್ ಫೋನ್ ಮೂಲಕ ಕೆಲಸ ಮಾಡಲು ಹಲವು ವೇದಿಕೆಗಳಿದ್ದು, ಇವುಗಳ ಸರಿಯಾದ ಸದ್ಬಳಕೆಯಿಂದ, ನಿಮ್ಮಲ್ಲಿರುವ ಕೌಶಲ್ಯಗಳಿಂದ ನೀವು ಕೂಡ ಕೈ ತುಂಬಾ ಹಣ ಸಂಪಾದನೆ ಮಾಡಬಹುದು.
ಮನೆಯಲ್ಲಿಯೇ ಕುಳಿತು ಹಣ ಗಳಿಸುವುದು ಹೇಗೆ?
ಸ್ವತಂತ್ರ್ಯೋದ್ಯಮ: ಕಂಟೆಂಟ್ ರೈಟಿಂಗ್, ವಿಡಿಯೋ ಎಡಿಟಿಂಗ್, ಗ್ರಾಫಿಕ್ ಡಿಸೈನ್ ಇತ್ಯಾದಿಗಳಲ್ಲಿ ನೀವು ಪರಿಣಿತಿಯನ್ನು ಹೊಂದಿದ್ದರೆ, ಈ ಫೀಲ್ಡ್‌ಗಳ ಮೂಲಕ ನೀವು ಮನೆಯಲ್ಲಿಯೇ ಕುಳಿತು ಸಾಕಷ್ಟು ಹಣ ಗಳಿಸಬಹುದು.
ಯೂಟ್ಯೂಬ್ ಬಾನೆಲ್: ಇಂದಿನ ಈ ಡಿಜಿಟಲ್ ಯುಗದಲ್ಲಿ ಹಲವರು ಯೂಟ್ಯೂಬ್ ಮೂಲಕವೇ ತಿಂಗಳಿಗೆ ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡುತ್ತಿದ್ದಾರೆ. ನೀವು ಕೂಡ ಫ್ಯಾಷನ್, ಲೈಫ್ ಸ್ಟೈಲ್, ಕುಕ್ಕಿಂಗ್ ಡೈಲಿ ವ್ಲಾಗಿಂಗ್ ಸೇರಿದಂತೆ ಹಲವು ವಿಡಿಯೋಗಳನ್ನು ಶೂಟ್ ಮಾಡಿ ಹರಿ ಬಿಡುವ ಮೂಲಕ ಯೂಟ್ಯೂಬ್‌ನಿಂದ ಹಣವನ್ನು ಗಳಿಸಬಹುದು. ಲಕ್ಷಾಂತರ ರೂಪಾಯಿ ಹಣ ಸಂಪಾದನೆ ಮಾಡಲು ಇದೊಂದು ಬೆಸ್ಟ್ ಪ್ಲಾಟ್‌ಫಾರ್ಮ್ ಅಂತಾನೇ ಹೇಳಬಹುದು. ಇದಲ್ಲದೆ ಇನ್‌ಸ್ಟಾಗ್ರಾಮ್, ಫೇಸ್‌ಬುಕ್‌ನಲ್ಲಿ ಕಂಟೆಂಟ್ ಕ್ರಿಯೇಟರ್ ಆಗಿಯೂ ಹಣ ಸಂಪಾದಿಸಬಹುದು.
ಆನ್‌ಲೈನ್ ಟೀಚಿಂಗ್, ಇ ಟ್ಯೂಷನ್: ನೀವು ಒಂದು ವಿಷಯದಲ್ಲಿ ಪರಿಣಿತರಾಗಿದ್ದರೆ, ಆ ಜ್ಞಾನವನ್ನು ಕಲಿಸಲು ಬಳಸಿ. ಈ ಮೂಲಕ ಹಣವನ್ನು ಸಂಪಾದನೆ ಮಾಡಬಹುದು. ಹೌದು TutorMe, Chegg, Vedantu ನಂತಹ ವೆಬ್‌ಸೈಟ್‌ಗಳು ವಿದ್ಯಾರ್ಥಿಗಳಿಗೆ ಆನ್‌ಲೈನ್‌ನಲ್ಲಿ ಬೋಧನೆ ಮಾಡಲು ನಿಮಗೆ ಅವಕಾಶ ನೀಡುತ್ತವೆ. ನಿಮ್ಮ ಪರಿಣತಿಯ ಆಧಾರದ ಮೇಲೆ ನೀವು ತರಗತಿಗಳು ಮತ್ತು ವಿಷಯಗಳನ್ನು ಆಯ್ಕೆ ಮಾಡಬಹುದು.
ವೆಬ್ ಡಿಸೈನಿಂಗ್: Wix ಮತ್ತು WordPress ನಂತಹ ಪ್ಲಾಟ್‌ಫಾರ್ಮ್‌ಗಳಲ್ಲಿ ವೆಬ್‌ಸೈಟ್‌ಗಳನ್ನು ವಿನ್ಯಾಸಗೊಳಿಸುವ ಮೂಲಕ ಮತ್ತು ಸಣ್ಣ ವ್ಯವಹಾರ ಯೋಜನೆಗಳಲ್ಲಿ ಕೆಲಸ ಮಾಡುವ ಮೂಲಕ ನೀವು ಹಣ ಗಳಿಸಬಹುದು.
ಬ್ಲಾಗಿಂಗ್: ಬ್ಲಾಗ್ ಬರೆಯುವ ಮೂಲಕವೂ ನೀವು ಹಣ ಗಳಿಸಬಹುದು. ಮನೆಯಲ್ಲಿ ಕುಳಿತು ನಿಮಗೆ ತಿಳಿದಿರುವ ವಿಷಯಗಳ ಬಗ್ಗೆ ಬ್ಲಾಗ್ ಬರೆಯುವ ಮೂಲಕ ನೀವು ಹಣ ಗಳಿಸಬಹುದು.ನಿಮಗೆ ಬೇಕಾಗಿರುವುದು ಲ್ಯಾಪ್‌ಟಾಪ್ ಮತ್ತು ಇಂಟರ್ನೆಟ್ ಸಂಪರ್ಕ. ನೀವು ದೊಡ್ಡ ಪ್ರಮಾಣದಲ್ಲಿ ಬ್ಲಾಗಿಂಗ್ ಪ್ರಾರಂಭಿಸಲು ಬಯಸಿದರೆ, ನೀವು ನಿಮ್ಮ ಸ್ವಂತ ವೆಬ್‌ಸೈಟ್ ಅನ್ನು ಸಹ ರಚಿಸಬಹುದು. ಈ ಡಿಜಿಟಲ್ ಯುಗದಲ್ಲಿ ಬ್ಲಾಗಿಂಗ್ ಹೆಚ್ಚು ಜನಪ್ರಿಯವಾಗುತ್ತಿದೆ.
ಡಿಜಿಟಲ್ ಪ್ರಾಡೆಕ್ಟ್: ನೀವು ಇ ಪುಸ್ತಕ, ಕೋರ್ಸ್ ಇತ್ಯಾದಿಗಳನ್ನು ರಚಿಸಬಹುದು. ಮತ್ತು ಅದನ್ನು ಮಾರಾಟ ಮಾಡಬಹುದು. ಅಲ್ಲದೆ ಕಸ್ಟಮೈಸ್ಡ್ ಉತ್ಪನ್ನಗಳನ್ನು ತಯಾರಿಸಿ ಅದನ್ನು ಮಾರಾಟ ಮಾಡುವ ಮೂಲಕವೂ ಹಣ ಸಂಪಾದನೆ ಮಾಡಬಹುದು.
ಸಾಮಾಜಿಕ ಮಾಧ್ಯಮ ನಿರ್ವಹಣೆ: ಅನೇಕ ವ್ಯವಹಾರಗಳಿಗೆ ತಮ್ಮ ಸಾಮಾಜಿಕ ಮಾಧ್ಯಮ ಪೇಜ್‌ಗಳನ್ನು ನಿರ್ವಹಿಸಲು ಸಹಾಯದ ಅಗತ್ಯವಿರುತ್ತದೆ. ನೀವು ಸೋಷಿಯಲ್ ಮೀಡಿಯಾ ಹ್ಯಾಂಡಲ್ ಮಾಡುವುದರಲ್ಲಿ ಎಕ್ಸ್‌ಪರ್ಟ್ ಆಗಿದ್ರೆ, ಕೆಲವೊಂದು ಬ್ರಾಂಡ್‌ಗಳ ಸೋಷಿಯಲ್ ಮೀಡಿಯಾ ಖಾತೆಗಳನ್ನು ನಿರ್ವಹಿಸುವ ಮೂಲಕ ಮನೆಯಲ್ಲಿಯೇ ಕುಳಿತು ಹಣ ಸಂಪಾದಿಸಬಹುದು.
ಷೇರು ವ್ಯಾಪಾರ ಮತ್ತು ಹೂಡಿಕೆ: ನಿಮಗೆ ಷೇರು ಮಾರುಕಟ್ಟೆಯಲ್ಲಿ ಹೆಚ್ಚಿನ ಆಸಕ್ತಿಯಿದ್ದರೆ ನೀವು ಷೇರು ವ್ಯಾಪಾರ ಅಥವಾ ಹಣಕಾಸು ಮಾರುಕಟ್ಟೆಗಳಲ್ಲಿ ಹೂಡಿಕೆ ಮಾಡಬಹುದು. ಅನೇಕ ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ಷೇರುಗಳು, ಕ್ರಿಪ್ಟೋಕರೆನ್ಸಿಗಳು ಅಥವಾ ಇತರ ಹಣಕಾಸು ಮೂಲಗಳನ್ನು ಖರೀದಿಸಲು ಮತ್ತು ಮಾರಾಟ ಮಾಡಲು ಬಳಕೆದಾರ ಸ್ನೇಹಿ ಇಂಟರ್ಫೇಸ್‌ಗಳನ್ನು ನೀಡುತ್ತವೆ. ಆದರೆ ಈ ಕ್ಷೇತ್ರವನ್ನು ಆಯ್ಕೆ ಮಾಡುವ ಮೊದಲು ಸಂಪೂರ್ಣ ಸಂಶೋಧನೆ ನಡೆಸುವುದು ಮತ್ತು ಇದರ ಸಾಧಕ ಬಾಧಕಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ.