78 ವರ್ಷ ಹಳೆಯದಾದ ಸಿಲಿಗುರಿ ಕಾರಿಡಾರ್ ಅನ್ನು 1971ರಲ್ಲೇ ಸರಿಪಡಿಸಬೇಕಿತ್ತು; ಸದ್ಗುರು ಅಭಿಮತ – Kannada News | 78 Year Old Siliguri Corridor Should Have Been Corrected In 1971 says Sadhguru

ಬೆಂಗಳೂರು, ಡಿಸೆಂಬರ್ 29: ಬಾಂಗ್ಲಾದೇಶದ ಬೆದರಿಕೆಗಳ ನಡುವೆಯೇ ಸಿಲಿಗುರಿ ಕಾರಿಡಾರ್ ಬಗ್ಗೆ ಇಶಾ ಫೌಂಡೇಶನ್‌ನ (Isha Foundation) ಸಂಸ್ಥಾಪಕ ಸದ್ಗುರು (Sadhguru) ಪ್ರತಿಕ್ರಿಯೆ ನೀಡಿದ್ದಾರೆ. “78 ವರ್ಷಗಳಷ್ಟು ಹಳೆಯದಾದ ಸಿಲಿಗುರಿ ಕಾರಿಡಾರ್ ಅನ್ನು 1971ರಲ್ಲೇ ಸರಿಪಡಿಸಿಕೊಂಡಿದ್ದರೆ ಈ ಬಿಕ್ಕಟ್ಟು ಎದುರಾಗುತ್ತಿರಲಿಲ್ಲ” ಎಂದು ಟೀಕಿಸಿದ್ದಾರೆ. ಇದನ್ನು ದಶಕಗಳ ಹಿಂದೆಯೇ ಸರಿಪಡಿಸಬೇಕಾಗಿತ್ತು. ಚಿಕನ್ ನೆಕ್ ಎಂದು ಕರೆಯಲ್ಪಡುವ ಈ ಜಾಗವನ್ನು ಆನೆಯ ಕುತ್ತಿಗೆಯಾಗಿ ಮಾಡಬೇಕಿದೆ ಎಂದಿದ್ದಾರೆ.

ಸಿಲಿಗುರಿ ಕಾರಿಡಾರ್ ಕುರಿತು ಬಾಂಗ್ಲಾದೇಶದ ಮಧ್ಯಂತರ ಸರ್ಕಾರ ನೀಡಿದ ಹೇಳಿಕೆಗಳ ಕುರಿತು ಬೆಂಗಳೂರಿನಲ್ಲಿ ಪ್ರೇಕ್ಷಕರ ಪ್ರಶ್ನೆಗೆ ಉತ್ತರಿಸುವಾಗ ಅವರು ಈ ಹೇಳಿಕೆಗಳನ್ನು ನೀಡಿದ್ದಾರೆ. ಎಕ್ಸ್​​ನಲ್ಲಿ ತಮ್ಮ ಸಂವಾದದ ವಿಡಿಯೋವನ್ನು ಹಂಚಿಕೊಂಡ ಸದ್ಗುರು, “ಸಿಲಿಗುರಿ ಕಾರಿಡಾರ್ ಭಾರತದ ವಿಭಜನೆಯಿಂದ ಸೃಷ್ಟಿಸಲ್ಪಟ್ಟ 78 ವರ್ಷಗಳಷ್ಟು ಹಳೆಯದಾದ ಅಸಂಗತತೆಯಾಗಿದ್ದು, ಇದನ್ನು 1971ರಲ್ಲಿಯೇ ಸರಿಪಡಿಸಬೇಕಾಗಿತ್ತು. ಈಗ ಅದರಿಂದ ಭಾರತ ದೇಶದ ಸಾರ್ವಭೌಮತ್ವಕ್ಕೆ ಬಹಿರಂಗವಾಗಿ ಬೆದರಿಕೆ ಉಂಟಾಗಿದೆ. ಚಿಕನ್ ಅನ್ನು ಪೋಷಿಸಿ ಅದನ್ನು ಆನೆಯಾಗಿ ವಿಕಸನಗೊಳಿಸುವ ಸಮಯ ಬಂದಿದೆ” ಎಂದು ಸದ್ಗುರು ಹೇಳಿದ್ದಾರೆ.

ಇದನ್ನೂ ಓದಿ: ಅಂಗವಿಕಲರಿಗಾಗಿ ಮಿರಾಕಲ್ ಆಫ್ ಮೈಂಡ್ ಧ್ಯಾನ ಪರಿಚಯಿಸಿದ ಸದ್ಗುರುವಿನ ಇಶಾ ಫೌಂಡೇಷನ್​

“ಬಹುಶಃ 1946-47ರಲ್ಲಿ ನಮಗೆ ಗಡಿಯಲ್ಲಿ ಬದಲಾವಣೆ ಮಾಡುವ ಅಧಿಕಾರವಿರಲಿಲ್ಲ. ಆದರೆ 1972ರಲ್ಲಿ ನಮಗೆ ಅಧಿಕಾರವಿತ್ತು. ಆದರೂ ನಾವು ಅದನ್ನು ಸರಿ ಮಾಡಲಿಲ್ಲ. ಈಗ, ಜನರು ಅದರ ಬಗ್ಗೆ ಚರ್ಚಿಸುವಂತಾಗಿದೆ, ಬೇರೆ ದೇಶ ನಮಗೆ ಬೆದರಿಕೆ ಹಾಕುವಂತಾಗಿದೆ” ಎಂದು ಅವರು ಹೇಳಿದ್ದಾರೆ.

“ಈ ಅಸಂಗತತೆ ಕೇವಲ 78 ವರ್ಷಗಳ ಹಿಂದೆ ಸಂಭವಿಸಿದೆ. ಅದಕ್ಕೆ ಕೆಲವು ತಿದ್ದುಪಡಿ ಅಗತ್ಯವಿದೆ. ತಿದ್ದುಪಡಿ ಆಗಬೇಕು. ನಾವು ಕೋಳಿಗೆ ಚೆನ್ನಾಗಿ ಆಹಾರ ನೀಡಬೇಕು ಮತ್ತು ಅದನ್ನು ಆನೆಯನ್ನಾಗಿ ಮಾಡಬೇಕು ಎಂದು ನಾನು ಭಾವಿಸುತ್ತೇನೆ. ಕೋಳಿಗಿಂತಲೂ ಆನೆಯ ಕುತ್ತಿಗೆಯನ್ನು ನಿಭಾಯಿಸುವುದು ಸುಲಭ” ಎಂದು ಸದ್ಗುರು ಹೇಳಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ತುಮಕೂರು: 8 ವರ್ಷದ ಮಗನ ಜೊತೆಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ – Kannada News | Tumakuru: Mother Dies by Suicide After Jumping Into Lake With 8 Year Old Son

ತುಮಕೂರು, ಡಿಸೆಂಬರ್ 29: 8 ವರ್ಷದ ಮಗನ ಜೊತೆಗೆ ಕೆರೆಗೆ ಹಾರಿ ತಾಯಿ ಆತ್ಮಹತ್ಯೆ (suicide) ಮಾಡಿಕೊಂಡಿರುವಂತಹ ಘಟನೆ ತುಮಕೂರು (Tumakuru) ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಕೆರೆಯಲ್ಲಿ ನಡೆದಿದೆ. ತುಮಕೂರು ತಾಲೂಕಿನ ಸೋರೆಕುಂಟೆ ಗ್ರಾಮದ ತಾಯಿ ಹಂಸಲೇಖ(36) ಮತ್ತು ಪುತ್ರ ಗುರುಪ್ರಸಾದ್(8) ಮೃತರು. ಸ್ಥಳಕ್ಕೆ ಕಳ್ಳಂಬೆಳ್ಳ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದು, ಕೆರೆಯಿಂದ ತಾಯಿ, ಮಗನ ಮೃತದೇಹವನ್ನು ಪೊಲೀಸರು ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗೆ ಶವಗಳು ಜಿಲ್ಲಾಸ್ಪತ್ರೆಯ ಶವಾಗಾರಕ್ಕೆ ಶಿಫ್ಟ್ ಮಾಡಲಾಗಿದೆ.

ಭೂಪಸಂದ್ರ ಗ್ರಾಮದ ನಾಗೇಶ್ ಜೊತೆಗೆ ಹಂಸಲೇಖರ ಮದುವೆಯಾಗಿತ್ತು. ಅನಾರೋಗ್ಯದಿಂದ ಹಂಸಲೇಖ ಪತಿ ನಾಗೇಶ್ ಮೃತಪಟ್ಟಿದ್ದರು. ದಂಪತಿಗೆ ಇಬ್ಬರು ಗಂಡು ಮಕ್ಕಳು ಇದ್ದಾರೆ. 3 ವರ್ಷದ ಹಿಂದೆ ನಾಗೇಶ್ ಸಹೋದರ ಲೋಕೇಶ್​ ಜತೆ ಹಂಸಲೇಖಳಿಗೆ ಮದುವೆ ಮಾಡಿ ಕೊಡಲಾಗಿತ್ತು. ಆದರೆ ಏಕಾಏಕಾ ಇಂದು ಬೆಳಗ್ಗೆ ಕೆರೆಯಲ್ಲಿ ಮಗನ ಜೊತೆಗೆ ತಾಯಿಯ ಶವ ಪತ್ತೆ ಆಗಿದೆ.

ಕೆ‌ಎಸ್‌ಆರ್‌ಟಿಸಿ ಬಸ್ ಡಿಕ್ಕಿ: ಬೈಕ್‌ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವು

ಬೈಕ್‌ಗೆ ಕೆ‌ಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವಂತಹ ಘಟನೆ  ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಎ.ಚೋಳೇನಹಳ್ಳಿ ಬಳಿ ನಡೆದಿದೆ. ದಡದಹಳ್ಳಿ ನಿವಾಸಿಗಳಾದ ಸುನೀಲ್(20) ಮತ್ತು ಶೃಂಗಾರ್(18) ಮೃತ ಯುವಕರು.

ಇದನ್ನೂ ಓದಿ: ಶೂಟ್​ ಮಾಡಿಕೊಂಡು ಪತಿ ಆತ್ಮಹತ್ಯೆ: ನನ್ನ ಗಂಡ ಸೈಕೋ ಎಂದ ಪತ್ನಿ, ಆಗಿದ್ದೇನು?

KA 13 EQ 1866 ಸಂಖ್ಯೆಯ ಬೈಕ್‌ನಲ್ಲಿ ತೆರಳುತ್ತಿದ್ದಾಗ ಅಪಘಾತ ಸಂಭವಿಸಿದೆ. ಅಜಾಗರೂಕತೆಯಿಂದ ಬಸ್ ಚಲಾಯಿಸಿ ಚಾಲಕ ಬೈಕ್‌ಗೆ ಡಿಕ್ಕಿ ಹೊಡೆದಿದ್ದಾನೆ. ಕೆ‌ಎಸ್‌ಆರ್‌ಟಿಸಿ ಬಸ್ ಚಾಲಕನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ನೀರಿನ ಸಂಪ್ ಸ್ವಚ್ಚತೆ ವೇಳೆ ವಿದ್ಯುತ್ ಶಾಕ್​​​ ಹೊಡೆದು ಕಾರ್ಮಿಕ ಸಾವು

ನೀರಿನ ಸಂಪ್ ಸ್ವಚ್ಚತೆ ವೇಳೆ ವಿದ್ಯುತ್ ಶಾಕ್​​ ಹೊಡೆದು ಒಡಿಶಾ ಮೂಲದ ಕಾರ್ಮಿಕ ಸಾವನ್ನಪ್ಪಿರುವಂತಹ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಜಿಗಣಿ ಟೌನ್ ಶಿವ ನಗರದಲ್ಲಿ ಘಟನೆ ನಡೆದಿದೆ. ಉಮಾಕಾಂತ್ ಮಾಲೀಕ್(26) ಮೃತ ಕಾರ್ಮಿಕ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್​​ ಪಲ್ಟಿ: ದೃಶ್ಯ ನೋಡಿದ್ರೆ ಎದೆ ಝಲ್​​ ಎನ್ನುತ್ತೆ!

ವೇಣುಗೋಪಾಲ ಎಂಬುವವರ ಸಂಪ್ ಸ್ವಚ್ಚತೆ ಮಾಡಲಾಗುತ್ತಿತ್ತು. ಮೊದಲು ಒಂದು ಸಂಪ್​​ ಸ್ವಚ್ಛ ಮಾಡಲಾಗಿದ್ದು, ಬಳಿಕ ಎರಡನೇ ಸಂಪ್ ಸ್ವಚ್ಚಗೊಳಿಸುವ ವೇಳೆ ಕರೆಂಟ್ ಶಾಕ್​ ಹೊಡೆದು ಸಂಪ್​ನಲ್ಲಿ ಕುಸಿದು ಬಿದ್ದಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

‘ಕೈ’ ನಾಯಕರಿಗೆ ಶಾಕ್​​ ಕೊಟ್ಟ ಖಾಕಿ: ದಾವಣಗೆರೆಯಲ್ಲಿ ಸಚಿವರ ಆಪ್ತರೇ ಡ್ರಗ್ಸ್​​ ದಂಧೆಕೋರರು! – Kannada News | Davangere Drugs Scandal: Minister Aides Nabbed in Major Police Crackdown

ದಾವಣಗೆರೆ, ಡಿಸೆಂಬರ್​​ 29: ರಾಜ್ಯ ಸರ್ಕಾರದಲ್ಲಿನ ಸಚಿವರ ಆಪ್ತರೇ ಡ್ರಗ್ಸ್​​ ದಂಧೆಯಲ್ಲಿ ಭಾಗಿಯಾಗಿರೋದನ್ನು ದಾವಣಗೆರೆ ಪೊಲೀಸರು ಬಟಾಬಯಲು ಮಾಡಿದ್ದಾರೆ. ಡಿ.23ರಂದು ನಡೆದಿದ್ದ ಡ್ರಗ್ಸ್ ದಂಧೆಕೋರರ ಗ್ಯಾಂಗ್​​ ಮೇಲಿನ ದಾಳಿ ಪ್ರಕರಣ ಸಂಬಂಧ ಮತ್ತೊಬ್ಬ ಸಚಿವರ ಪರಮಾಪ್ತನನ್ನು ಖಾಕಿ ಹೆಡೆಮುರಿ ಕಟ್ಟಿದೆ. ಆ ಮೂಲಕ ಸಿಂಥೆಟಿಕ್ ಡ್ರಗ್ಸ್ ಕೇಸ್‌ನಲ್ಲಿ ಈವರೆಗೆ ಒಟ್ಟು 8 ಆರೋಪಿಗಳ ಬಂಧನ ಆದಂತಾಗಿದೆ.

ದಾವಣಗೆರೆ ಡ್ರಗ್ಸ್‌ ಕೇಸ್‌ನಲ್ಲಿ ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್​​ ಪಕ್ಷದ ಘಟಾನುಘಟಿಗಳೇ ಬಂಧನ ಆಗಿರೋದು ಜನ ಹುಬ್ಬೇರಿಸುವಂತೆ ಮಾಡಿದೆ. ಡಿ.23ರಂದು ಡ್ರಗ್ಸ್ ದಂಧೆ ನಡೆಸುತ್ತಿದ್ದ ಗ್ಯಾಂಗ್‌ ಮೇಲೆ ಪೊಲೀಸರ ದಾಳಿ ವೇಳೆ ಕಾಂಗ್ರೆಸ್ ಮುಖಂಡ, ದಾವಣಗೆರೆ ಉಸ್ತುವಾರಿ ಸಚಿವ ಮಲ್ಲಿಕಾರ್ಜುನ್ ಆಪ್ತ ವೇದಮೂರ್ತಿ ಸೇರಿ ನಾಲ್ವರ ಬಂಧನವಾಗಿತ್ತು. ಬಂಧಿತರಿಂದ 90 ಗ್ರಾಂ ಎಂಡಿಎಂಎ , ಸಿಂಥೆಟಿಕ್ ಸೇರಿದಂತೆ ಲಕ್ಷಾಂತರ ಮೌಲ್ಯದ ಡ್ರಗ್ಸ್​​ನ ಪೊಲೀಸರು ವಶಕ್ಕೆ ಪಡೆದಿದ್ದರು.

ಇದನ್ನೂ ಓದಿ: ಬೆಂಗಳೂರಲ್ಲಿ ಡ್ರಗ್ಸ್ ಫ್ಯಾಕ್ಟರಿ ಸೀಜ್ ಪ್ರಕರಣ; ಇದರ ಹಿಂದಿದ್ಯಾ ಕೆಮಿಕಲ್ ಎಂಜಿನಿಯರ್ ಮಾಸ್ಟರ್ ಮೈಂಡ್?

ಇದೇ ಪ್ರಕರಣದಲ್ಲೀಗ ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಅನ್ವರ್ ಬಾಷಾ ಕೂಡ ಅರೆಸ್ಟ್‌ ಆಗಿದ್ದಾರೆ. ಜೊತೆಗೆ ಪಾರಸ್‌, ಕೃಷ್ಣಮೂರ್ತಿ, ಧೋನಿ ಅಲಿಯಾಸ್ ಮಂಜುನಾಥ್ ಎಂಬವರನ್ನು ಕೂಡ ಬಂಧಿಸಲಾಗಿದೆ. ಕಾಂಗ್ರೆಸ್ ಆಡಳಿತದಲ್ಲಿ ಸಚಿವರ ಆಪ್ತರಿಂದಲೇ ಡ್ರಗ್ಸ್ ದಂಧೆ ನಡೆಯುತ್ತಿದ್ದರೂ ಪೊಲೀಸರು ನಿರ್ಭೀತಿಯಿಂದ ಕಿಂಗ್ ಪಿನ್‌ಗಳ ಹೆಡೆಮುರಿ ಕಟ್ಟಿದ್ದಾರೆ. ಎಸ್ಪಿ ಉಮಾ ಪ್ರಶಾಂತ್‌ ಕಾರ್ಯವೈಖರಿಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

‘ಡ್ರಗ್ಸ್ ಹಾವಳಿ​ ನಿಯಂತ್ರಿಸಲು ಸರ್ಕಾರಕ್ಕೆ ಧಮ್ ಇಲ್ಲ’

ಕರ್ನಾಟಕಕ್ಕೆ 500-600 ಕೋಟಿ ಮೌಲ್ಯದ ಡ್ರಗ್ಸ್ ಬಂದಿದ್ದು, ಡ್ರಗ್ಸ್ ಹಂಚಿಕೆಯಲ್ಲಿ ಪೊಲೀಸರು ಶಾಮೀಲಾಗಿದ್ದಾರೆ ಎಂದು ವಿಪಕ್ಷ ನಾಯಕ ಆರ್​​. ಅಶೋಕ್​ ಆರೋಪಿಸಿದ್ದಾರೆ. ಉಡುಪಿಯಲ್ಲಿ ಮಾತನಾಡಿದ ಅವರು, ಇನ್ನು ಎರಡು ದಿನಗಳಲ್ಲಿ ಎಲ್ಲಾ ಡ್ರಗ್ಸ್​ ವಿಲೇವಾರಿ ಆಗಲಿದೆ. ಡ್ರಗ್ಸ್ ಹಾವಳಿ​ ನಿಯಂತ್ರಿಸಲು ಈ ಸರ್ಕಾರಕ್ಕೆ ಧಮ್, ತಾಕತ್ತು ಇಲ್ಲ. ಆಂಧ್ರ, ತೆಲಂಗಾಣ ಪೊಲೀಸರು ದಾಳಿ ಮಾಡೋದು ಬಾಕಿ ಇದ್ದು, ಬೇರೆ ರಾಜ್ಯದವರೇ ನಮ್ಮನ್ನು ಆಳುತ್ತಿದ್ದಾರೆ. ಹೊರ ರಾಜ್ಯದ ಪೊಲೀಸರು ನಮ್ಮ ಕಾನೂನು ವ್ಯವಸ್ಥೆ ಕಾಪಾಡುತ್ತಿದ್ದಾರೆ ಎಂದು ಅಶೋಕ್​​ ಆರೋಪಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Video: ಎತ್ತರದ ಅಪಾರ್ಟ್ಮೆಂಟ್​​ ಮೇಲೆ ಸಿಲುಕಿಕೊಂಡ ಬೆಕ್ಕು, ಅಗ್ನಿಶಾಮಕ ದಳದ ಕಾರ್ಯಚರಣೆ ಹೇಗಿತ್ತು? – Kannada News | Bengaluru Firefighters Save Cat Stuck on Apartment Ledge: Chandapura Rescue

ಬೆಂಗಳೂರು, ಡಿ.29: ಅಪಾರ್ಟ್ಮೆಂಟ್​​​ನ ಕಿಟಕಿ ಮೇಲೆ ಸಿಲುಕಿದ್ದ ಬೆಕ್ಕನ್ನು ಅಗ್ನಿಶಾಮಕ ತಂಡ ಕಾಪಾಡಿರುವ ಘಟನೆ ಚಂದಾಪುರದ ಹೀಲಲಿಗೆ ಸಮೀಪದ ಮಹೇಂದ್ರ ಆರ್ಯ ಅಪಾರ್ಟ್ಮೆಂಟ್ ನಲ್ಲಿ ನಡೆದಿದೆ. ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ತಂಡ ಬೆಕ್ಕಿನ ರಕ್ಷಣೆ ಮಾಡಲಾಗಿದೆ. ಪ್ಲಾಟ್​​​ ಹೊರೆಗೆ ಇರುವ ಕಿಟಕಿಯ ಸಜ್ಜದ ಮೇಲೆ ಹೋಗಿ ಕೂತಿದೆ. ಅಲ್ಲಿಂದ ಹೊರಬರಲಾಗದೆ ಬೆಕ್ಕು ಪರದಾಟ ಮಾಡಿದೆ. ಬೆಕ್ಕಿನ ಕಿರುಚಾಟ ಕೇಳಿ ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಲಾಗಿದೆ. ಅಗ್ನಿಶಾಮಕ ದಳ ಸ್ಥಳಕ್ಕಾಗಮಿಸಿ, ಬೆಕ್ಕನ್ನ ಸುರಕ್ಷಿತವಾಗಿ ರಕ್ಷಣೆ ಮಾಡಿದ್ದಾರೆ. ಎಲೆಕ್ಟ್ರಾನಿಕ್ ಸಿಟಿ ಅಗ್ನಿಶಾಮಕ ಅಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಲಾಗಿದೆ. ನಂತರ ಮಗುವಿನಂತೆ ಅಪ್ಪಿಕೊಂಡು ಬೆಕ್ಕನ್ನು ಎತ್ತಿಕೊಂಡು ಮಾಲೀಕರು ಮುದ್ದಾಡಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​​ ಮಾಡಿ

Source link

ವಿವಾದದ ಬಳಿಕ ಅರಾವಳಿ ಬೆಟ್ಟದ ಕುರಿತ ತನ್ನದೇ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ – Kannada News | Supreme Court Stays Its own Order On Aravalli Hills amid row

ನವದೆಹಲಿ, ಡಿಸೆಂಬರ್ 29: ಅರಾವಳಿ ಬೆಟ್ಟಗಳ ಏಕರೂಪದ ವ್ಯಾಖ್ಯಾನದ ಕುರಿತು ನವೆಂಬರ್ 20ರಂದು ನೀಡಿದ ತನ್ನದೇ ತೀರ್ಪು ಮತ್ತು ತಜ್ಞರ ಸಮಿತಿಯ ಶಿಫಾರಸುಗಳನ್ನು ಸುಪ್ರೀಂ ಕೋರ್ಟ್ (Supreme Court) ಇಂದು ತಡೆಹಿಡಿದಿದೆ. ತನ್ನದೇ ತೀರ್ಪಿಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿದೆ. ಅರಾವಳಿ ಬೆಟ್ಟಗಳು (Aravalli Hills) ಮತ್ತು ಶ್ರೇಣಿಗಳ ಏಕರೂಪದ ವ್ಯಾಖ್ಯಾನವನ್ನು ಒಪ್ಪಿಕೊಂಡು ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆ ನೀಡುವುದನ್ನು ನಿಷೇಧಿಸಿದ ಸುಪ್ರೀಂ ಕೋರ್ಟ್‌ನ ಹಿಂದಿನ ತೀರ್ಪು ಪ್ರಕಟವಾಗುತ್ತಿದ್ದಂತೆ ಅನಿಯಂತ್ರಿತ ಗಣಿಗಾರಿಕೆ ಮತ್ತು ಪರಿಸರ ಹಾನಿಯ ಬಗ್ಗೆ ಕಳವಳಗಳು ಹೆಚ್ಚಾಗಿತ್ತು. ಈ ತೀರ್ಪಿನ ವಿರುದ್ಧ ತೀವ್ರ ಪ್ರತಿಭಟನೆಗಳು ಕೂಡ ನಡೆದಿತ್ತು.

ನ್ಯಾಯಮೂರ್ತಿಗಳಾದ ಜೆ.ಕೆ ಮಹೇಶ್ವರಿ ಮತ್ತು ಎ.ಜಿ ಮಸಿಹ್ ಅವರನ್ನು ಒಳಗೊಂಡ ನ್ಯಾಯಪೀಠವು ಈ ವಿಷಯದಲ್ಲಿ ಪ್ರತಿಕ್ರಿಯೆ ನೀಡುವಂತೆ ಕೇಂದ್ರ ಸರ್ಕಾರ ಮತ್ತು 4 ಅರಾವಳಿ ಬೆಟ್ಟಗಳ ರಾಜ್ಯಗಳಾದ ರಾಜಸ್ಥಾನ, ಗುಜರಾತ್, ದೆಹಲಿ ಮತ್ತು ಹರಿಯಾಣಕ್ಕೆ ನೋಟಿಸ್ ನೀಡಿದೆ. ಜನವರಿ 21ರಂದು ಈ ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.

ಇದನ್ನೂ ಓದಿ: ಕರ್ನಾಟಕ ಸೇರಿದಂತೆ ಈ 10 ಹುಲಿ ಮೀಸಲು ತಾಣಗಳಿವು, ಸಫಾರಿ, ಐಷಾರಾಮಿ ರೆಸಾರ್ಟ್‌ಗಳ ಮಾಹಿತಿ ಇಲ್ಲಿದೆ.

ಇಂದು ಈ ವಿಷಯವನ್ನು ಸ್ವಯಂ ಪ್ರೇರಿತವಾಗಿ ಆಲಿಸಿದ ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜೆ.ಕೆ. ಮಹೇಶ್ವರಿ ಮತ್ತು ಎ.ಜಿ. ಮಸಿಹ್ ಅವರನ್ನೊಳಗೊಂಡ ನ್ಯಾಯಪೀಠವು ತನ್ನ ನವೆಂಬರ್ ತಿಂಗಳ ತೀರ್ಪಿಗೆ ತಡೆಯಾಜ್ಞೆ ನೀಡಿದೆ. ಈಗ ಉಳಿದಿರುವ 100 ಮೀಟರ್ ಎತ್ತರದ ಮಾನದಂಡವನ್ನು ಕಟ್ಟುನಿಟ್ಟಾಗಿ ಆಧರಿಸಿ ಅರಾವಳಿ ಪ್ರದೇಶಗಳನ್ನು ಗುರುತಿಸಲು ಕೇಂದ್ರ ಪರಿಸರ ಸಚಿವಾಲಯ ಮತ್ತು ರಾಜ್ಯ ಸರ್ಕಾರಗಳು ಪ್ರಾರಂಭಿಸಿದ ಮ್ಯಾಪಿಂಗ್ ಮತ್ತು ಡಿಲಿಮಿನೇಷನ್ ಪ್ರಕ್ರಿಯೆಯನ್ನು ಮಧ್ಯಂತರ ತಡೆಯಾಜ್ಞೆಯು ತಡೆಹಿಡಿಯುವ ಸಾಧ್ಯತೆಯಿದೆ. ಇದು ಈ ಪ್ರದೇಶದಲ್ಲಿ ಭವಿಷ್ಯದ ಗಣಿಗಾರಿಕೆ ನಿರ್ಧಾರಗಳಿಗೆ ಅಡಿಪಾಯವನ್ನು ರೂಪಿಸುವ ಉದ್ದೇಶವನ್ನು ಹೊಂದಿತ್ತು.

ಇದನ್ನೂ ಓದಿ: ಬೇರೆ ಜಾತಿ, ಧರ್ಮದವನನ್ನು ಮದುವೆಯಾದರೆ ಮಗಳಿಗೆ ಅಪ್ಪನ ಆಸ್ತಿಯಲ್ಲಿ ಪಾಲಿಲ್ಲ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ನವೆಂಬರ್ 20ರಂದು ಸುಪ್ರೀಂ ಕೋರ್ಟ್ ಅರಾವಳಿ ಬೆಟ್ಟಗಳು ಮತ್ತು ಶ್ರೇಣಿಗಳ ಏಕರೂಪದ ವ್ಯಾಖ್ಯಾನವನ್ನು ಒಪ್ಪಿಕೊಂಡಿತ್ತು. ತಜ್ಞರ ವರದಿಗಳು ಹೊರಬರುವವರೆಗೆ ದೆಹಲಿ, ಹರಿಯಾಣ, ರಾಜಸ್ಥಾನ ಮತ್ತು ಗುಜರಾತ್‌ಗಳಲ್ಲಿ ಹೊಸ ಗಣಿಗಾರಿಕೆ ಗುತ್ತಿಗೆಗಳನ್ನು ನೀಡುವುದನ್ನು ನಿಷೇಧಿಸಿತ್ತು. ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಸಮಿತಿಯು ಅರಾವಳಿ ಬೆಟ್ಟದ ವ್ಯಾಖ್ಯಾನದ ಕುರಿತು ನೀಡಿದ ಶಿಫಾರಸುಗಳನ್ನು ನ್ಯಾಯಾಲಯವು ಅಂಗೀಕರಿಸಿತ್ತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:30 pm, Mon, 29 December 25

Source link

ಬಿಗ್ ಬಾಸ್ ನಾಮಿನೇಷನ್ ಪ್ರಕ್ರಿಯೆ: ಕ್ಯಾಪ್ಟನ್ ಗಿಲ್ಲಿ ನಟ ಯಾರ ಪರ? – Kannada News | Bigg Boss Kannada Season 12 Nomination for 14th week in Gilli Nata captaincy

ಬಿಗ್ ಬಾಸ್ (Bigg Boss Kannada Season 12) ಮನೆಯಲ್ಲಿ ಈಗ ಕೆಲವೇ ಮಂದಿ ಇದ್ದಾರೆ. ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ಪೈಪೋಟಿ ಜೋರಾಗಿದೆ. ಈ ವಾರ ಯಾರೆಲ್ಲ ನಾಮಿನೇಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಮೂಡಿದೆ. ಸೋಮವಾರ (ಡಿಸೆಂಬರ್ 29) ನಾಮಿನೇಷನ್ ಪ್ರಕ್ರಿಯೆ ನಡೆದಿದೆ. ಕ್ಯಾಪ್ಟನ್ ಗಿಲ್ಲಿ ಅವರು ಇದರಲ್ಲಿ ಮುಖ್ಯ ಪಾತ್ರ ವಹಿಸಿದ್ದಾರೆ. ನಾಮಿನೇಷನ್ ವೇಳೆ ಪ್ರತಿ ಬಾರಿಯೂ ಕಿರಿಕ್ ಇದ್ದೇ ಇರುತ್ತದೆ. ಈ ಬಾರಿ ಕೂಡ ಅದು ಮುಂದುವರಿದಿದೆ. ಕಾವ್ಯಾ ಪರವಾಗಿ ಗಿಲ್ಲಿ ನಿಂತಿದ್ದಕ್ಕೆ ಅಶ್ವಿನಿ ಗೌಡ ಅವರು ಗರಂ ಆಗಿದ್ದಾರೆ. ಈ ವಾರ ಯಾರು ಔಟ್ ಆಗುತ್ತಾರೆ? ಫಿನಾಲೆ ತನಕ ಯಾರು ಬರುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ. ಧನುಶ್, ಸ್ಪಂದನಾ ಸೋಮಣ್ಣ, ಅಶ್ವಿನಿ ಗೌಡ, ಮ್ಯೂಟೆಂಟ್ ರಘು, ರಕ್ಷಿತಾ ಶೆಟ್ಟಿ, ರಾಶಿಕಾ ಶೆಟ್ಟಿ, ಕಾವ್ಯಾ ಶೈವ, ಗಿಲ್ಲಿ ನಟ (Gilli Nata) ಅವರ ನಡುವೆ ಪೈಪೋಟಿ ಮುಂದುವರಿದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಗಾನವಿ-ಸೂರಜ್ ಪ್ರಕರಣ: ಹನಿಮೂನ್‌ನಿಂದ ಅರ್ಧಕ್ಕೆ ಬಂದಿದ್ಯಾಕೆ? ಸ್ಫೋಟಕ ರಹಸ್ಯ ಬಯಲು – Kannada News | Bengaluru Ganavi And sooraj death case: here Is Reasons why She Death after Came from Srilanka honeymoon trip

ಅದ್ಧೂರಿ ಮದುವೆ ಬಳಿಕ ಸೂರಜ್ ಮತ್ತು ಗಾನವಿ ಹನಿಮೂನ್‌ಗಾಗಿ ಶ್ರೀಲಂಕಾಗೆ ತೆರಳಿದ್ದರು.
10 ದಿನದ ಹನಿಮೂನ್‌ ಪ್ಲಾನ್ ಮಾಡಿಕೊಂಡಿದ್ದ ಜೋಡಿ ಐದನೇ ದಿನಕ್ಕೆ ವಾಪಸ್ ಆಗಿದ್ದರು. ಹನಿಮೂನ್‌ನಿಂದ ಬರುತ್ತಿದ್ದಂತೆಯೇ ಗಾನವಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಇದಾದ ಎರಡು ದಿನದ ನಂತರ ಸೂರಜ್ ಸಹ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಇದೀಗ ಹನಿಮೂನ್ ಅರ್ಧದಲ್ಲಿಯೇ ಪ್ರವಾಸ ಮೊಟಕುಗೊಳಿಸಿ ಬಂದಿದ್ದು ಯಾಕೆ ಎಂಬುದಕ್ಕೆ ಉತ್ತರ ಸಿಕ್ಕಿದೆ.

ಗಾನವಿ‌ ಮತ್ತು ಸೂರಜ್ ಹನಿಮೂನ್ ಅಂತ ಶ್ರೀಲಂಕಾಗೆ ತೆರಳಿದ್ದರು.ಏಕಾಂತದಲ್ಲಿ ಇದ್ದಾಗ ಹರ್ಷನ ಜೊತೆಗಿನ ಪ್ರೇಮಕಥೆಯನ್ನ ಹೇಳಿದ್ದಳು ಗಾನವಿ.ನನಗೆ ನೀನು ಇಷ್ಟ ಇಲ್ಲ,ಹರ್ಷ ನನ್ನ ಮದುವೆಯಾಗಲು ನನಗೆ ಇಷ್ಟ ಇತ್ತು.ಮನೆಯವರ ಒತ್ತಾಯಕ್ಕೆ ನಿನ್ನನ್ನು ಮದುವೆಯಾದೆ ಎಂದು ಗಾನವಿ ಹೇಳಿದ್ದಳು.ಇದ್ರಿಂದ ಶಾಕ್ ಆದ ಸೂರಜ್ ಹನಿಮೂನ್ ನಿಂದ ಅರ್ಧದಲ್ಲೆ ವಾಪಸ್ಸಾಗಿದ್ದ.ನಂತರ ಗಾನವಿ ತನ್ನ ತಾಯಿ ಮನೆಗೆ ತೆರಳಿ ಅಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಳು.

ಗಾನವಿ ಆತ್ಮಹತ್ಯೆ ನಂತರ ದೊಡ್ಡ ಹೈಡ್ರಾಮವೇ ನಡೆದು ಹೋಗಿತ್ತು.ಗಾನವಿ ಕುಟುಂಬದವರು ಸೂರಜ್ ಫ್ಯಾಮಿಲಿ ಮೇಲೆ ಆರೋಪ ಮಾಡಿ ದೊಡ್ಡ ಪ್ರತಿಭಟನೆ ಮಾಡಿದ್ದರು.ಅಲ್ಲದೇ ಸೂರಜ್ ಗಂಡಸೇ ಅಲ್ಲ, ಅವನು ನಪುಂಸಕ ಅಂತೆಲ್ಲಾ ಆಕ್ರೋಶ ವ್ಯಕ್ತಪಡಿಸಿದ್ದು, ಈ ಸಂಬಂಧ ಸೂರಜ್ ಕುಟುಂಬದ ವಿರುದ್ಧ ದೂರು ದಾಖಲಿಸಿದ್ದರು.

ಈ ಎಲ್ಲಾ ಬೆವಣಿಗೆಗಳಿಂದ ಮಾನಸಿಕವಾಗಿ ಹೆದರಿ ಸೂರಜ್ ಮಹರಾಷ್ಟ್ರದ ನಾಗ್ಪರದಲ್ಲಿ ಅತ್ಮಹತ್ಯೆ ಮಾಡಿಕೊಂಡಿದ್ದ.ತಾಯಿ ಜಯಂತಿ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೀತಿದ್ದಾರೆ.ಗಾನವಿ ತನ್ನ ಲವ್ ಮ್ಯಾಟರ್ ಮುಚ್ಚಿಟ್ಟಿದ್ಲು ಅನ್ನೋದು ಈಗ ಗೊತ್ತಾಗಿದೆ.

ಗಾನವಿ ಮದುವೆಗೂ ಮುನ್ನ ಹರ್ಷ ಎಂಬಾತನನ್ನು ಪ್ರೀತಿಸುತ್ತಿದ್ದರಂತೆ. ಅವನನ್ನೇ ಮದುವೆಯಾಗಬೇಕೆಂದು ಗಾನವಿ ನಿರ್ಧರಿಸಿದ್ದರು ಎಂದು ವರದಿಯಾಗಿದೆ. ಇದೀಗ ಈ ಹರ್ಷ ಯಾರು ಎಂಬುವುದು ತಿಳಿದು ಬಂದಿಲ್ಲ. ರಾಮಮೂರ್ತಿ ನಗರದಲ್ಲಿ ಗಾನವಿ ಪೋಷಕರು, ವಿದ್ಯಾರಣ್ಯಪುರದಲ್ಲಿ ಸೂರಜ್ ಕುಟುಂಬ ದೂರು ದಾಖಲಿಸಿದೆ.

ಫ್ಯಾಮಿಲಿ ಮೇಲೆ ವಿದ್ಯಾರಣ್ಯಪುರ ಠಾಣೆಯಲ್ಲಿ ವರದಕ್ಷಿಣೆ ಕೇಸ್ ದಾಖಲಾದ ಬಳಿಕ ಮಹಾರಾಷ್ಟ್ರಕ್ಕೆ ಸೂರಜ್ ಮತ್ತು ಆತನ ತಾಯಿ ಜಯಂತಿ ತೆರಳಿದ್ದರು. ಆರೋಪದಿಂದ ನೊಂದಿದ್ದ ಸೂರಜ್​​ ಲಾಡ್ಜ್​​ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಈ ಬಗ್ಗೆ ಸೂರಜ್​​ ಭಾವ ರಾಜ್​​ಕುಮಾರ್​​ ವಿದ್ಯಾರಣ್ಯಪುರ ಪೊಲೀಸ್​​ ಠಾಣೆಗೆ ದೂರು ನೀಡಿದ್ದು, ಗಾನವಿ ಪ್ರೀತಿ ವಿಚಾರ ಮುಚ್ಚಿಟ್ಟು ಸುಳ್ಳು ಅಪಪ್ರಚಾರ ಮಾಡಲಾಗ್ತಿದೆ. ಸೂರಜ್ ಸಾವಿಗೆ ಗಾನವಿ, ಆಕೆಯ ತಾಯಿ ರುಕ್ಮಿಣಿ, ರಾಧಾ, ಬಾಬುಗೌಡ, ಸತೀಶ್ ಕಾರಣ ಎಂದು ದೂರಿದ್ದಾರೆ.

ಒಳ್ಳೆಯ ವ್ಯಕ್ತಿತ್ವ ಹೊಂದಿದ್ದರು ಸೂರಜ್ ಅನ್ನೋದು ತಿಳಿದವರ ಮಾತು.ತೋಟದಲ್ಲಿ ಕೆಲಸ ಮಾಡೋರನ್ನ ತುಂಬಾ ಚೆನ್ನಾಗಿ ನೋಡಿಕೊಳ್ಳುತ್ತಿದ್ದಂತೆ. ಯಾವುದೇ ಕೆಟ್ಟ ಅಭ್ಯಾಸ ಕೂಡ ಇರ್ಲಿಲ್ವಂತೆ. ನಮಗೆ ಇನ್ಯಾರು ಗತಿ ಅಂತ ತೋಟದ ಕೆಲಸಗಾರ ವೆಂಕಟಪ್ಪ ಕಣ್ಣೀತಾಕಿದ್ದಾರೆ.

Published On – 4:24 pm, Mon, 29 December 25

Source link

ಕಾರಿಗೆ ಗುದ್ದಿ ಪಾದಚಾರಿ ಮೇಲೆ ಕ್ಯಾಂಟರ್​​ ಪಲ್ಟಿ: ದೃಶ್ಯ ನೋಡಿದ್ರೆ ಎದೆ ಝಲ್​​ ಎನ್ನುತ್ತೆ! – Kannada News | Canter Overturns After Hitting Car, Strikes Pedestrian in Nitte, Karkala

ಉಡುಪಿ, ಡಿಸೆಂಬರ್​​ 29: ಸರಣಿ ಅಪಘಾತದ ವೇಳೆ ಪಾದಚಾರಿಮೇಲೆ ಕ್ಯಾಂಟರ್​​ ಮಗುಚಿ ಬಿದ್ದ ಘಟನೆ ಕಾರ್ಕಳ ತಾಲೂಕಿನ ನಿಟ್ಟೆ ಗ್ರಾಮದಲ್ಲಿ ನಡೆದಿದೆ. ಲಾರಿ ಮತ್ತು ಕ್ಯಾಂಟರ್​​ ನಡುವೆ ಮೊದಲು ಡಿಕ್ಕಿಯಾಗಿದ್ದು, ಅಪಘಾತದ ರಭಸಕ್ಕೆ ಕ್ಯಾಂಟರ್​​ ಪಲ್ಟಿಯಾಗಿದೆ. ಈ ವೇಳೆ ಹಿಂಬದಿಯಲ್ಲಿ ಬರುತ್ತಿದ್ದ ಮತ್ತೊಂದು ಕಾರು ಕೂಡ ಜಖಂ ಆಗಿದೆ. ಕ್ಯಾಂಟರ್​​ ದಾವಣಗೆರೆಯಿಂದ ಮಂಗಳೂರಿಗೆ ಮೊಟ್ಟೆ ಸಾಗಿಸುತ್ತಿದ್ದರೆ, ಕಾರು ಬೆಳ್ಮಣ್​​ನಿಂದ ಕಾರ್ಕಳ ಕಡೆಗೆ ಬರುತ್ತಿತ್ತು. ಅಪಘಾತದಲ್ಲಿ ಪಾದಚಾರಿ ಗಂಭೀರವಾಗಿ ಗಾಯಗೊಂಡಿದ್ದು, ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹುಬ್ಬಳ್ಳಿ ಮರ್ಯಾದಾ ಹತ್ಯೆ ಬೆನ್ನಲ್ಲೇ ಹೊಸ ಕಾನೂನು ತರಲು ಮುಂದಾದ ಸರ್ಕಾರ – Kannada News | Karnataka Government moves to bring new law in wake of Hubballi honor killing

ಹುಬ್ಬಳ್ಳಿ, ಡಿಸೆಂಬರ್​ 29: ಇತ್ತೀಚೆಗೆ ಹುಬ್ಬಳ್ಳಿಯಲ್ಲಿ (Hubballi) ಸ್ವತ ತಂದೆಯೇ ಆರು ತಿಂಗಳ ಗರ್ಭಿಣಿ ಮಗಳನ್ನು ಬರ್ಬರವಾಗಿ ಹತ್ಯೆಗೈದಿದ್ದ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಈ ಪ್ರಕರಣ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಸದ್ಯ ರಾಜ್ಯದಲ್ಲಿ ಮರ್ಯಾದಾ ಹತ್ಯೆ (honor killing) ತಡೆ ಸಂಬಂಧ ಕಾನೂನು ಜಾರಿಗೊಳಿಸುವ ವಿಚಾರವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಇನ್ನು ಕಳೆದ ರಾತ್ರಿ ಗ್ರಾಮದಲ್ಲಿ ಜಿಲ್ಲಾಡಳಿತ ಶಾಂತಿ ಸಭೆ ಕೂಡ ಮಾಡಿದೆ.

ಮರ್ಯಾದೆ ಹತ್ಯೆ ವಿರೋಧಿ ಕಾನೂನು ಜಾರಿಗೊಳಿಸಲು ಚಿಂತನೆ: ಸಿಎಂ ಸುಳಿವು

ಹುಬ್ಬಳ್ಳಿಯಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣ ರಾಜ್ಯ ಮತ್ತು ದೇಶದಲ್ಲಿ ದೊಡ್ಡ ಸುದ್ದಿಯಾಗಿದೆ. ಈ ಹಿನ್ನೆಲೆಯಲ್ಲಿ ಮರ್ಯಾದೆ ಹತ್ಯೆ ವಿರೋಧಿ ಕಾನೂನು ಜಾರಿಗೆ ತರಬೇಕು ಅಂತ ವಿವಿಧ ದಲಿತಪರ ಸಂಘಟನೆಗಳು ಆಗ್ರಹಿಸಿದ್ದವು. ಆದರೆ ಇದೀಗ ರಾಜ್ಯ ಸರ್ಕಾರ ಕೂಡ ಮರ್ಯಾದೆ ಹತ್ಯೆ ವಿರೋಧಿ ಕಾನೂನು ಜಾರಿಗೊಳಿಸಲು ಚಿಂತನೆ ನಡೆಸಿದೆ. ಈ ಬಗ್ಗೆ ಸಿಎಂ ಸಿದ್ದರಾಮಯ್ಯ ಸುಳಿವು ನೀಡಿದ್ದಾರೆ. ಬೆಂಗಳೂರಿನಲ್ಲಿ ಕಳೆದ ರಾತ್ರಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಮರ್ಯಾದೆ ಹತ್ಯೆ ಕಾನೂನು ಜಾರಿಗೆ ತರಲು ಚಿಂತನೆ ನಡೆಸಲಾಗಿದೆ. ಕೇವಲ ಕಾನೂನು ಜಾರಿಗೊಳಿಸಿದರೆ ಸಾಲದು, ಅದನ್ನು ಅನುಷ್ಠಾನಕ್ಕೆ ತರುವ ಕೆಲಸವಾಗಬೇಕು ಅಂತ ಹೇಳಿದ್ದಾರೆ.

ಇದನ್ನೂ ಓದಿ: ಹುಬ್ಬಳ್ಳಿ ಮರ್ಯಾದೆ ಹತ್ಯೆ: ಮೇಲ್ಜಾತಿ ಯುವತಿಯನ್ನ ಮದ್ವೆಯಾಗಿದ್ದಕ್ಕೆ ಲಿಂಗದೀಕ್ಷೆ ಪಡೆದಿದ್ದ ದಲಿತ ಕುಟುಂಬ

ಡಿಸೆಂಬರ್ 21ರಂದು ಹುಬ್ಬಳ್ಳಿ ತಾಲೂಕಿನ ಇನಾಂವೀರಾಪುರ ಗ್ರಾಮದಲ್ಲಿ ಬರ್ಬರ ಕೊಲೆಯಾಗಿತ್ತು. ಮಗಳು ಪ್ರೀತಿಸಿ ದಲಿತ ಸಮುದಾಯದ ಯುವಕನನ್ನು ಮದುವೆಯಾಗಿದ್ದಕ್ಕೆ ಸ್ವತ ತಂದೆಯೇ ಆರು ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿದ್ದ. ಈ ಘಟನೆ ಇಡೀ ನಾಗರಿಕ ಸಮಾಜವೇ ತಲೆ ತಗ್ಗಿಸುವಂತೆ ಮಾಡಿತ್ತು. ಒದಂಡೆ ಪ್ರೀತಿಸಿ ಮದುವೆಯಾಗಿದ್ದ ಮಾನ್ಯಾಳ ಬರ್ಬರ ಹತ್ಯೆಯಾಗಿದ್ದರೆ, ಮದುವೆಯಾಗಿದ್ದ ವಿವೇಕನಾಂದ ಕುಟುಂಬದ ಮೇಲೆ ಕೂಡ ದುಷ್ಕರ್ಮಿಗಳು ಅಟ್ಟಹಾಸ ಮೆರದಿದ್ದರು. ಘಟನೆ ನಡೆದು ಎಂಟು ದಿನವಾದರು ಕೂಡ ಗ್ರಾಮದಲ್ಲಿ ಭಯದ ವಾತಾವರಣ ಕಡಿಮೆಯಾಗಿರಲಿಲ್ಲ.

ಟಿವಿ9 ವರದಿ ಬೆನ್ನಲ್ಲೇ ಎಚ್ಚೆತ್ತ ಜಿಲ್ಲಾಡಳಿತ: ಗ್ರಾಮದಲ್ಲಿ ಶಾಂತಿ ಸಭೆ

ಇನ್ನು ಆಸ್ಪತ್ರೆಯಲ್ಲಿ ಅನೇಕ ದಿನಗಳ ಕಾಲ ಚಿಕಿತ್ಸೆ ಪಡೆದು ಚೇತರಿಸಿಕೊಂಡರು ಕೂಡ ವಿವೇಕಾನಂದ ಕುಟುಂಬ, ಮರಳಿ ಇನಾಂವೀರಾಪುರ ಗ್ರಾಮಕ್ಕೆ ಹೋಗಲು ಹಿಂದೇಟು ಹಾಕಿತ್ತು. ತಮಗೆ ಗ್ರಾಮದಲ್ಲಿ ಪ್ರಾಣಭಯವಿದೆ ಅಂತ ಆತಂಕ ವ್ಯಕ್ತಪಡಿಸಿತ್ತು. ಇನ್ನು ಘಟನೆ ನಡೆದು ಎಂಟು ದಿನವಾದರು ಕೂಡ ಜಿಲ್ಲಾಡಳಿತ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ, ಸರ್ವಧರ್ಮ ಮತ್ತು ಜಾತಿಗಳ ನಡುವೆ ಸಮನ್ವಯತೆ, ಶಾಂತಿ ಕಾಪಾಡುವ ಕೆಲಸಕ್ಕೆ ಮುಂದಾಗಿರಲಿಲ್ಲ. ಈ ಬಗ್ಗೆ ಟಿವಿ9 ವರದಿ ಪ್ರಸಾರ ಮಾಡಿತ್ತು. ವರದಿ ನಂತರ ಎಚ್ಚೆತ್ತ ಧಾರವಾಡ ಜಿಲ್ಲಾಡಳಿತ ಕಳೆದ ರಾತ್ರಿ ಇನಾಂವೀರಾಪುರ ಗ್ರಾಮದಲ್ಲಿ ಶಾಂತಿ ಸಭೆ ಮಾಡಿದೆ.

ಧಾರವಾಡ ಜಿಲ್ಲಾಧಿಕಾರಿ ದಿವ್ಯಪ್ರಭು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ, ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಗಳು ಸೇರಿದಂತೆ ಅಧಿಕಾರಿಗಳ ತಂಡ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ಮಾಡಿದೆ. ಎಲ್ಲಾ ಜಾತಿ ಮತ್ತು ಧರ್ಮದವರನ್ನು ಸೇರಿಸಿ, ಶಾಂತಿ ಮತ್ತು ಸೌಹಾರ್ದ ಸಭೆಯನ್ನು ನಡೆಸಿ, ಗ್ರಾಮದಲ್ಲಿ ಎಲ್ಲರು ಕೂಡಿ ಬಾಳುವಂತೆ ಸೂಚನೆ ನೀಡಲಾಗಿದೆ.

ಇನ್ನು ಗ್ರಾಮಸ್ಥರು ಕೂಡ ಆಗಿರುವ ಘಟನೆಯನ್ನು ಮರೆತು, ಶಾಂತಿ ಮತ್ತು ಸಹಬಾಳ್ವೆತೆಯಿಂದ ಬದುಕೋದಾಗಿ ಅಧಿಕಾರಿಗಳಿಗೆ ಭರವಸೆ ನೀಡಿದ್ದಾರೆ. ಗ್ರಾಮಕ್ಕೆ ಹೋಗಲು ಹಿಂದೇಟು ಹಾಕಿದ್ದ ವಿವೇಕಾನಂದ ಕುಟುಂಬವನ್ನು ಗ್ರಾಮಕ್ಕೆ ಕರೆಸಿ, ಅವರಿಗೆ ಧೈರ್ಯ ತುಂಬಿ, ಅವರ ಮನೆಗೆ ಕಳುಹಿಸಲಾಗಿದೆ. ಇನ್ನು ಮರ್ಯಾದೆ ಹತ್ಯೆಯನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ಇಂದು ಕೂಡ ಅನೇಕ ದಲಿತ ಪರಸಂಘಟನೆಗಳು ಪ್ರತಿಭಟನೆ ಮಾಡಿದ್ದಾರೆ.

ಇದನ್ನೂ ಓದಿ: ಮರ್ಯಾದೆ ಹತ್ಯೆ: ಮಾನ್ಯಾ ಜತೆ ಮಗುನೂ ಹೋಯ್ತು, ಪ್ರಾಣಕ್ಕಿಂತ ಹೆಚ್ಚು ಇಷ್ಟಪಡುವ ಅಮ್ಮನೂ ಸೀರಿಯಸ್

ರಾಜ್ಯದಲ್ಲಿ ಮರ್ಯಾದೆ ಹತ್ಯೆಗಳನ್ನು ತಡೆಯಲು ಸರ್ಕಾರ ಕಠಿಣ ಕಾನೂನು ಜಾರಿಗೊಳಿಸಲು ಮುಂದಾಗಿದೆ. ಆದರೆ ಕಾನೂನು ಒಂದಡೆ ಕೆಲಸ ಮಾಡಿದರೆ, ಜನರ ಮನಸಲ್ಲಿ ಉಳಿದಿರುವ ಜಾತಿ ವ್ಯವಸ್ಥೆಯನ್ನು ತೊಲಗಿಸುವ ಕೆಲಸ ಮೊದಲು ಆಗಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. 

Source link

ಅಸ್ತಿತ್ವದಲ್ಲೇ ಇಲ್ಲದ ಅಪಾರ್ಟ್​ಮೆಂಟ್ 12 ಕೋಟಿ ರೂ.ಗೆ ಮಾರಾಟ; ದೆಹಲಿಯ 200 ಕೋಟಿ ರೂ. ಆಸ್ತಿ ಹಗರಣ ಬಯಲಾಗಿದ್ದು ಹೇಗೆ? – Kannada News | Luxurious apartment which never existed sold for Rs 12 crore Delhi Police bust Rs 200 crore property scam

ನವದೆಹಲಿ, ಡಿಸೆಂಬರ್ 29: ದೆಹಲಿಯಲ್ಲಿ ಬರೋಬ್ಬರಿ 200 ಕೋಟಿ ರೂ. ಮೌಲ್ಯದ ಆಸ್ತಿ ಹಗರಣವೊಂದು (Property Scam) ಬೆಳಕಿಗೆ ಬಂದಿದೆ. ಗುರುಗ್ರಾಮದ ಡಿಎಲ್‌ಎಫ್ ಕ್ಯಾಮೆಲಿಯಾಸ್‌ನಲ್ಲಿ ಅಸ್ತಿತ್ವದಲ್ಲಿಲ್ಲದ ಐಷಾರಾಮಿ ಅಪಾರ್ಟ್‌ಮೆಂಟ್ ಅನ್ನು ನಕಲಿ ಬ್ಯಾಂಕ್ ಹರಾಜು ದಾಖಲೆಗಳನ್ನು ಬಳಸಿ 12 ಕೋಟಿ ರೂ.ಗೆ ಮಾರಾಟ ಮಾಡಲಾಗಿದೆ ಎಂದು ಮೋಸಕ್ಕೊಳಗಾದ ವ್ಯಕ್ತಿಯೊಬ್ಬರು ಪೊಲೀಸರಿಗೆ ದೂರು ನೀಡಿದ ನಂತರ ಈ ಹಗರಣ ಬೆಳಕಿಗೆ ಬಂದಿದೆ. ಇದೇ ರೀತಿ ಅವರು ಹಲವು ಜನರಿಗೆ ವಂಚಿಸಿದ್ದು, ಈ ವಂಚನೆಯ ಒಟ್ಟು ಮೊತ್ತ 200 ಕೋಟಿ ರೂ.ಗಿಂತ ಹೆಚ್ಚು ಎಂದು ಅಂದಾಜಿಸಲಾಗಿದೆ.

ಜೂನ್ 13ರಂದು ವಂಚನೆ, ನಕಲಿ ಮತ್ತು ಕ್ರಿಮಿನಲ್ ಪಿತೂರಿ ಆರೋಪ ಹೊರಿಸಿ ದೂರು ದಾಖಲಿಸಿದ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ದೆಹಲಿಯ ಬಳಿ ಇರುವ ಗುರುಗ್ರಾಮದಲ್ಲಿ ಅತ್ಯಂತ ಪ್ರೀಮಿಯಂ ವಸತಿ ಯೋಜನೆಗಳಲ್ಲಿ ಒಂದಾದ ಡಿಎಲ್‌ಎಫ್ ಕ್ಯಾಮೆಲಿಯಾಸ್‌ನಲ್ಲಿರುವ ಹೈ-ಎಂಡ್ ಅಪಾರ್ಟ್‌ಮೆಂಟ್‌ನ ನಕಲಿ ಹರಾಜು ಪತ್ರಗಳನ್ನು ದೂರುದಾರರಿಗೆ ತೋರಿಸಲಾಗಿದೆ. ಇದನ್ನು ನಂಬಿ ಆತ 12 ಕೋಟಿ ರೂ. ಹಣವನ್ನು ನೀಡಿದ್ದಾರೆ.

ದೂರುದಾರರು ಆ ಅಪಾರ್ಟ್​​ಮೆಂಟ್​​ನ ನಕಲಿ ದಾಖಲೆಗಳು ಮತ್ತು ಭರವಸೆಗಳನ್ನು ನಂಬಿ ಕಳೆದ ವರ್ಷ ಆಗಸ್ಟ್ ಮತ್ತು ಅಕ್ಟೋಬರ್ ನಡುವೆ RTGS ಮತ್ತು ಡಿಮ್ಯಾಂಡ್ ಡ್ರಾಫ್ಟ್‌ಗಳ ಮೂಲಕ 12 ಕೋಟಿ ರೂ.ಗಳನ್ನು ವರ್ಗಾಯಿಸಿದ್ದಾರೆ. ಆದರೆ, ಅನುಮಾನಗಳು ಹುಟ್ಟಿಕೊಂಡು ಪರಿಶೀಲನೆಗಾಗಿ ಬ್ಯಾಂಕ್ ಅನ್ನು ಸಂಪರ್ಕಿಸಿದಾಗ ಎಲ್ಲಾ ದಾಖಲೆಗಳು ನಕಲಿ ಎಂದು ತಿಳಿದುಬಂದಿದೆ. ಅಂತಹ ಯಾವುದೇ ಹರಾಜು ನಡೆದಿಲ್ಲ ಎಂದು ಗೊತ್ತಾಗಿದೆ. ಆ ಮಾರಾಟ ಪ್ರಮಾಣಪತ್ರಗಳು, ಕವರಿಂಗ್ ಪತ್ರಗಳು ಮತ್ತು ಹರಾಜು ರಶೀದಿಗಳು ನಕಲಿ ಎಂದು ಪೊಲೀಸ್ ತನಿಖೆ ವೇಳೆ ಬಯಲಾಗಿದೆ.

ದೆಹಲಿ ನಿವಾಸಿಯಾದ ಗೋಗಿಯಾ (38) ಅವರನ್ನು ನವೆಂಬರ್ 22 ರಂದು ಮುಂಬೈನಿಂದ ಉತ್ತರಾಖಂಡದ ಕಡೆಗೆ ಪಲಾಯನ ಮಾಡಲು ಪ್ರಯತ್ನಿಸುತ್ತಿದ್ದಾಗ ಬಂಧಿಸಲಾಯಿತು. ಅವರನ್ನು ರಿಷಿಕೇಶ್-ಡೆಹ್ರಾಡೂನ್ ರಸ್ತೆಯ ದೋಯಿವಾಲಾ ಬಳಿ ಬಂಧಿಸಲಾಯಿತು. ನಂತರ ಇನ್ನೂ 4 ಆರೋಪಿಗಳನ್ನು ಬಂಧಿಸಲಾಯಿತು. ಗೋಗಿಯಾ ವಿರುದ್ಧ ದೆಹಲಿ, ಪಂಜಾಬ್, ಗೋವಾ, ಮಧ್ಯಪ್ರದೇಶ ಮತ್ತು ಚಂಡೀಗಢದಲ್ಲಿ ಕನಿಷ್ಠ 16 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ  

Source link

Exit mobile version