ಹುಬ್ಬಳ್ಳಿ, ಏಪ್ರಿಲ್ 10: ಹಜರತ್ ನಿಜಾಮುದ್ದೀನ್ ಹಾಗೂ ಯಶವಂತಪುರ ಮಧ್ಯೆ ಸಂಚರಿಸುವ ಕರ್ನಾಟಕ ಸಂಪರ್ಕ ಕ್ರಾಂತಿ ಎಕ್ಸ್‌ಪ್ರೆಸ್ (ರೈಲು ಸಂಖ್ಯೆ: 12650) ರೈಲಿನಲ್ಲಿ ಯುವಕರಿಬ್ಬರು ಬಹಿರಂಗವಾಗಿ ಗಾಂಜಾ ಸೇವನೆ ಮಾಡಿದ್ದಾರೆ. ರಾತ್ರಿ ಪ್ರಯಾಣದ ವೇಳೆ ಸಿಗರೇಟ್‌ನಲ್ಲಿ ಗಾಂಜಾ ಸೇರಿಸಿ ಸೇದುತ್ತಾ ಸಹಪ್ರಯಾಣಿಕರಿಗೆ ಕಿರಿಕಿರಿ ಉಂಟುಮಾಡಿದ್ದಾರೆ. ಸಾರ್ವಜನಿಕರ ಭಯವಿಲ್ಲದೆ ಅಟ್ಟಹಾಸ ಮೆರೆದ ಈ ಯುವಕರ ಕೃತ್ಯವನ್ನು ಪ್ರಯಾಣಿಕರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ವಿಡಿಯೋ ಈಗ ವೈರಲ್ ಆಗಿದೆ. ರೈಲ್ವೆ ಪೊಲೀಸರು ಇವರನ್ನು ಪತ್ತೆಹಚ್ಚಿ ಕಠಿಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಬೆಂಗಳೂರು, ಏಪ್ರಿಲ್ 10: ಭಾರತೀಯ ಹವಾಮಾನ ಇಲಾಖೆ (IMD) ನೀಡಿರುವ ಇತ್ತೀಚಿನ ಮುನ್ಸೂಚನೆಯಂತೆ, ಉತ್ತರ ಕರ್ನಾಟಕದ ಬಾಗಲಕೋಟೆ, ಬೆಳಗಾವಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಧಾರವಾಡ ಮತ್ತು ಗದಗ ಜಿಲ್ಲೆಗಳಲ್ಲಿ ಉಷ್ಣ ಅಲೆ (Heat Wave) ಮುಂದುವರಿಯಲಿದೆ. ವಿಜಯನಗರ, ಕಲಬುರಗಿ, ಯಾದಗಿರಿ ಮತ್ತು ಹಾವೇರಿಯಲ್ಲಿಯೂ ಬಿಸಿಲಿನ ಝಳ ಹೆಚ್ಚಾಗಲಿದೆ. ರಾಜ್ಯದಾದ್ಯಂತ ಮುಂದಿನ 5 ದಿನಗಳವರೆಗೆ ಗರಿಷ್ಠ ತಾಪಮಾನದಲ್ಲಿ ಯಾವುದೇ ದೊಡ್ಡ ಮಟ್ಟದ ಇಳಿಕೆ ಕಂಡುಬರುವುದಿಲ್ಲ. ಬದಲಿಗೆ ಹಂತ ಹಂತವಾಗಿ 2 ಡಿಗ್ರಿ ಸೆಲ್ಶಿಯಸ್ನಿಂದ 3 ಡಿಗ್ರಿ ಸೆಲ್ಶಿಯಸ್ ವರೆಗೆ ತಾಪಮಾನ ಏರಿಕೆಯಾಗುವ ಸಾಧ್ಯತೆಯಿದೆ.
ಮಧ್ಯ ಕರ್ನಾಟಕ ಭಾಗವಾದ ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಬಿಸಿಲು ಮತ್ತು ಆರ್ದ್ರತೆಯಿಂದ ಕೂಡಿದ ವಾತಾವರಣ ಇರಲಿದೆ. ಬಾಗಲಕೋಟೆ, ರಾಯಚೂರು, ಬೆಳಗಾವಿ ಮತ್ತು ವಿಜಯನಗರ ಜಿಲ್ಲೆಗಳಲ್ಲಿ ಹಗಲಿನಲ್ಲಿ ಉಷ್ಣ ಅಲೆ ಮಾತ್ರವಲ್ಲದೆ, ರಾತ್ರಿಯ ಅವಧಿಯಲ್ಲೂ ಸಾಮಾನ್ಯಕ್ಕಿಂತ ಹೆಚ್ಚಿನ ತಾಪಮಾನ ದಾಖಲಾಗುವ ಸಾಧ್ಯತೆಯಿದೆ.
ಉಷ್ಣ ಅಲೆ ಮತ್ತು ಮುನ್ನೆಚ್ಚರಿಕೆ
ಉತ್ತರ ಒಳನಾಡಿನ ಜಿಲ್ಲೆಗಳಾದ ಕಲಬುರಗಿ, ವಿಜಯಪುರ ಮತ್ತು ಬಾಗಲಕೋಟೆಯಲ್ಲಿ ಗರಿಷ್ಠ ತಾಪಮಾನವು 40 ಡಿಗ್ರಿ ಸೆಲ್ಶಿಯಸ್ನಿಂದ 42 ಡಿಗ್ರಿ ಸೆಲ್ಶಿಯಸ್ ವರೆಗೆ ದಾಖಲಾಗುವ ಸಾಧ್ಯತೆಯಿದೆ. ಹೀಗಾಗಿ ಮಧ್ಯಾಹ್ನದ ಸಮಯದಲ್ಲಿ ಸಾರ್ವಜನಿಕರು ಹೊರಗೆ ಹೋಗುವಾಗ ಎಚ್ಚರಿಕೆ ವಹಿಸಬೇಕು.
ಹಲವೆಡೆ ಮಳೆ ಸಾಧ್ಯತೆ
ಮತ್ತೊಂದೆಡೆ, ಬಿಸಿಲಿನ ಬೇಗೆಯಿಂದ ಕಂಗೆಟ್ಟಿರುವ ವಿವಿಧ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದು, ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಉಷ್ಣಾಘಾತದಿಂದ ಬಚಾವಾಗಲು ಇಲ್ಲಿದೆ ಟಿಪ್ಸ್
ಉಷ್ಣ ಅಲೆ ಹಾಗೂ ಉಷ್ಣಾಘಾತದಿಂದ (ಹೀಟ್ ಸ್ಟ್ರೋಕ್) ರಕ್ಷಿಸಿಕೊಳ್ಳಲು ಆರೋಗ್ಯ ಇಲಾಖೆ ಕೆಲವು ಸಲಹೆ ಸೂಚನೆಗಳನ್ನು ನೀಡಿದೆ. ಅವುಗಳು ಹೀಗಿವೆ;
ಮಧ್ಯಾಹ್ನ 12 ರಿಂದ 4 ಗಂಟೆಯವರೆಗೆ ಸೂರ್ಯನ ಬೆಳಕಿಗೆ ನೇರ ಮೈಯೊಡ್ಡುವುದನ್ನು ಆದಷ್ಟು ತಪ್ಪಿಸಿ.
ನಿಯಮಿತವಾಗಿ ನೀರು ಕುಡಿಯಿರಿ. ಎಳನೀರು, ಮಜ್ಜಿಗೆ ಅಥವಾ ಮನೆಯಲ್ಲಿ ತಯಾರಿಸಿದ ಹಣ್ಣಿನ ರಸಗಳನ್ನು ಸೇವಿಸಿ.
ತಿಳಿ ಬಣ್ಣದ, ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸಿ. ಹೊರಗೆ ಹೋಗುವಾಗ ಛತ್ರಿ ಅಥವಾ ಟೋಪಿಯನ್ನು ಬಳಸಿ.
ಕೆಫೀನ್ (ಕಾಫಿ/ಟೀ) ಮತ್ತು ಹೆಚ್ಚಿನ ಸಕ್ಕರೆಯುಕ್ತ ಪಾನೀಯಗಳ ಸೇವನೆ ಕಡಿಮೆ ಮಾಡಿ, ಇವು ದೇಹವನ್ನು ನಿರ್ಜಲೀಕರಣಗೊಳಿಸುತ್ತವೆ.
ಬೆಂಗಳೂರು ಸೇರಿ ಹಲವು ಜಿಲ್ಲೆಗಳಿಗೆ ಮಳೆ ಮುನ್ಸೂಚನೆ
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಮೇಲ್ವಿಚಾರಣಾ ಕೇಂದ್ರ (KSNDMC) ನೀಡಿರುವ ಮಾಹಿತಿಯಂತೆ, ದಕ್ಷಿಣ ಒಳನಾಡಿನ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಮಲೆನಾಡಿನ ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆ ಇರುವುದರಿಂದ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯಲ್ಲಿ ಸಮುದ್ರದ ಅಲೆಗಳ ಅಬ್ಬರ ಹೆಚ್ಚಿರಲಿದೆ ಎಂದು ಮುನ್ಸೂಚನೆ ನೀಡಲಾಗಿದೆ.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡದಲ್ಲೂ ಸಣ್ಣ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದೆ. ಜೊತೆಗೆ ದಾವಣಗೆರೆ ಮತ್ತು ಚಿತ್ರದುರ್ಗದಲ್ಲಿ ಬಿಸಿಯಾದ ಗಾಳಿ ಇರಲಿದೆ.
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿಕ್ಲಿಕ್ ಮಾಡಿ
ಭಾರತ ಚಿತ್ರರಂಗದಲ್ಲಿ (Indian Cinema) ಹಲವಾರು ಸೂಪರ್ ಸ್ಟಾರ್ ನಟರುಗಳಿದ್ದಾರೆ ಆದರೆ ಎಲ್ಲರಿಗಿಂತಲೂ ಭಿನ್ನ ಮತ್ತು ವರ್ಸಟೈಲ್ ಸೂಪರ್ ಸ್ಟಾರ್ ಮಲಯಾಳಂನ ಮಮ್ಮುಟಿ. 74 ವರ್ಷ ವಯಸ್ಸಿನಲ್ಲಿ ಅವರು ವರ್ಷಕ್ಕೆ ಮೂರು-ನಾಲ್ಕು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಅದೂ ಒಂದಕ್ಕಿಂತಲೂ ಒಂದು ಭಿನ್ನ ರೀತಿಯ ಪಾತ್ರಗಳು, ಪ್ರಯೋಗಾತ್ಮಕ ಸಿನಿಮಾಗಳು. ಸೀರಿಯಲ್ ಕಿಲ್ಲರ್, ಸಲಿಂಗಿ, ರಾಕ್ಷಸ, ಮಗಳಿಗಾಗಿ ಪುರುಷ ಲೈಂಗಿಕ ಸಂಗಾತಿ ಹುಡುಕುವ ತಂದೆ ಹೀಗೆ ಒಂದಕ್ಕಿಂತಲೂ ಒಂದು ಭಿನ್ನ ಮತ್ತು ಇತರೆ ಸ್ಟಾರ್ ನಟರು ಕತೆ ಕೇಳಲು ಸಹ ಒಪ್ಪದಂಥಹಾ ಸಿನಿಮಾಗಳಲ್ಲಿ ಮಮ್ಮುಟಿ ನಟಿಸುತ್ತಿದ್ದಾರೆ.
ಇದೀಗ ‘ಪೇಟ್ರಿಯಾಟ್’ ಹೆಸರಿನ ಆಕ್ಷನ್ ಥ್ರಿಲ್ಲರ್ ಸಿನಿಮಾನಲ್ಲಿ ಮಮ್ಮುಟಿ ನಟಿಸಿದ್ದು, ಸಿನಿಮಾದ ಪ್ರಚಾರದ ವೇಳೆ ತಮ್ಮ ಪುತ್ರ, ಪ್ಯಾನ್ ಇಂಡಿಯಾ ಸ್ಟಾರ್ ನಟ ದುಲ್ಕರ್ ಸಲ್ಮಾನ್ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ನನ್ನ ಮಗ ನನಗೆ ಮೋಸ ಮಾಡಿದ್ದಾನೆ’ ಎಂದಿದ್ದಾರೆ.
ಡೊಮಿನಿಕ್ ಅರುಣ್ ನಿರ್ದೇಶನದ ಸೂಪರ್ ಹೀರೋ ಚಿತ್ರ ‘ಲೋಕಃ ಚಾಪ್ಟರ್ 1: ಚಂದ್ರ’ ಕಳೆದ ವರ್ಷ ಬಿಡುಗಡೆಯಾಗಿ ಬ್ಲಾಕ್ ಬಸ್ಟರ್ ಆಗಿತ್ತು. ಕಲ್ಯಾಣಿ ಪ್ರಿಯದರ್ಶನ್, ನಸ್ಲೆನ್ ಮತ್ತು ಸ್ಯಾಂಡಿ ಅಭಿನಯದ ಈ ಚಿತ್ರವನ್ನು ಮಮ್ಮುಟಿಯ ಪುತ್ರ, ನಟ ದುಲ್ಕರ್ ಸಲ್ಮಾನ್ ನಿರ್ಮಿಸಿದ್ದರು. ಈ ಚಿತ್ರದಲ್ಲಿ ಮಮ್ಮುಟ್ಟಿ ಅವರು ‘ಮೂತನ್’ ಎಂಬ ಪಾತ್ರಕ್ಕೆ ಧ್ವನಿ ನೀಡಿದ್ದರು. ಇತ್ತೀಚಿನ ಸಂದರ್ಶನವೊಂದರಲ್ಲಿ ಮಮ್ಮುಟ್ಟಿ ಈ ಚಿತ್ರದ ಬಗ್ಗೆ ಕೆಲವು ಕುತೂಹಲಕಾರಿ ವಿಷಯಗಳನ್ನು ಹಂಚಿಕೊಂಡಿದ್ದಾರೆ.
ಈ ಚಿತ್ರದಲ್ಲಿ ತಾವು ಇರುವುದೇ ತಮಗೆ ತಿಳಿದಿರಲಿಲ್ಲ ಎಂದು ಮಮ್ಮುಟ್ಟಿ ಹಾಸ್ಯಮಯವಾಗಿ ಹೇಳಿದ್ದಾರೆ. ‘ಆರಂಭದಲ್ಲಿ ದುಲ್ಕರ್ ಬರಲಿಲ್ಲ, ಬದಲಿಗೆ ಅವನ ಮ್ಯಾನೇಜರ್ ಮತ್ತು ಗೆಳೆಯ ಬಂದು ಕೇವಲ ಒಂದು ಧ್ವನಿ ನೀಡುವಂತೆ ಕೇಳಿದರು. ನಾನು ಬೇಡ ಎಂದು ಹೇಳಿದ್ದೆ, ಅಷ್ಟನ್ನೇ ಅವರು ರೆಕಾರ್ಡ್ ಮಾಡಿಕೊಂಡರು. ಚಿತ್ರ ಬಿಡುಗಡೆಯಾದಾಗ ಮಾತ್ರ ಅಲ್ಲಿರುವುದು ನಾನೇ ಮತ್ತು ಅಲ್ಲಿ ಕಂಡ ಕೈ ಕೂಡ ನನ್ನದೇ ಎಂದು ಹೇಳಿದರು. ನಿಜ ಹೇಳಬೇಕೆಂದರೆ ಅವರು ನನಗೆ ಮೋಸ ಮಾಡಿ ಆ ಪಾತ್ರ ಮಾಡಿಸಿದ್ದಾರೆ’ ಎಂದು ಮಮ್ಮುಟ್ಟಿ ವಿವರಿಸಿದ್ದಾರೆ.
ಚಿತ್ರದ ಎರಡನೇ ಭಾಗದಲ್ಲಿ ನಟಿಸಲು ಮಮ್ಮುಟ್ಟಿಯವರನ್ನು ಒಪ್ಪಿಸುವುದು ಕಷ್ಟ ಎಂದು ದುಲ್ಕರ್ ಹಿಂದೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಮಮ್ಮುಟ್ಟಿ, “ನಾನು ಸೀಕ್ವೆಲ್‌ನಲ್ಲಿ ನಟಿಸಲು ಒಪ್ಪುವುದು ಮಾತ್ರವಲ್ಲ, ನನ್ನ ಸಂಭಾವನೆಯ ಬಗ್ಗೆಯೂ ಅವರನ್ನು ಒಪ್ಪಿಸಬೇಕಾಗುತ್ತದೆ. ಅವರು ಸಂಭಾವನೆ ನೀಡಲು ಸಿದ್ಧರಿದ್ದರೆ ಮಾತ್ರ ನಾನು ನಟಿಸುತ್ತೇನೆ’ ಎಂದು ತಮಾಷೆಯಾಗಿ ಹೇಳಿದ್ದಾರೆ.
ಸಂದರ್ಶನದ ವೇಳೆ ವ್ಯಾಂಪೈರ್ ಪಾತ್ರ ಮಾಡುವ ಬಗ್ಗೆ ಕೇಳಿದಾಗ, ಮಮ್ಮುಟ್ಟಿ ನಗುತ್ತಾ ಅದು ‘ಸಸ್ಪೆನ್ಸ್’ ಎಂದು ಹೇಳಿದ್ದಾರೆ. ‘ಲೋಕಃ’ ಚಿತ್ರದಲ್ಲಿ ಕಲ್ಯಾಣಿ ಪ್ರಿಯದರ್ಶನ್ ‘ಯಕ್ಷಿಣಿ’ ಪಾತ್ರ ಮಾಡಿದ್ದರು. ಚಿತ್ರದ ಅಂತ್ಯದಲ್ಲಿ ಟೊವಿನೋ ಥಾಮಸ್, ದುಲ್ಕರ್ ಸಲ್ಮಾನ್ ಮತ್ತು ಮಮ್ಮುಟ್ಟಿ (ಧ್ವನಿ ಮಾತ್ರ) ಅವರ ಪಾತ್ರಗಳನ್ನು ಪರಿಚಯಿಸಿ ಸೀಕ್ವೆಲ್‌ನ ಸುಳಿವು ನೀಡಲಾಗಿತ್ತು. ಈ ಚಿತ್ರ ಜಾಗತಿಕವಾಗಿ ಸುಮಾರು 300 ಕೋಟಿ ರೂಪಾಯಿ ಗಳಿಕೆ ಮಾಡಿದೆ.
ಮಮ್ಮುಟ್ಟಿ ಅವರು ‘ಪೇಟ್ರಿಯಾಟ್’ ಸಿನಿಮಾನಲ್ಲಿ ನಟಿಸಿದ್ದು, ಸಿನಿಮಾನಲ್ಲಿ ಮಮ್ಮುಟಿಯ ಜೊತೆಗೆ ಮಲಯಾಳಂನ ಮತ್ತೊಬ್ಬ ಸೂಪರ್ ಸ್ಟಾರ್ ಮೋಹನ್ ಲಾಲ್, ಫಹಾದ್ ಫಾಸಿಲ್ ಮತ್ತು ನಯನತಾರಾ ಸಹ ನಟಿಸಿದ್ದಾರೆ. ಸಿನಿಮಾ ಮೇ 1ರಂದು ಬಿಡುಗಡೆ ಆಗಲಿದೆ. ಹಲವಾರು ವರ್ಷಗಳ ಬಳಿಕ ಮಮ್ಮುಟಿ ಮತ್ತು ಮೋಹನ್ಲಾಲ್ ಒಟ್ಟಿಗೆ ನಟಿಸಿದ್ದಾರೆ.
‘ಡಕಾಯತ್’ ಸಿನಿಮಾದಲ್ಲಿ ಟಾಲಿವುಡ್‌ನ ಯುವ ಮತ್ತು ಪ್ರತಿಭಾನ್ವಿತ ನಾಯಕ ಅಡಿವಿ ಶೇಷ್ ನಟಿಸಿದ್ದಾರೆ. ಶನಿಲ್ ಡಿಯೋ ನಿರ್ದೇಶನದ ಈ ಲವ್ ಮತ್ತು ಆಕ್ಷನ್ ಥ್ರಿಲ್ಲರ್ ಚಿತ್ರದಲ್ಲಿ ಮೃಣಾಲ್ ಠಾಕೂರ್ ನಾಯಕಿ. ಬಾಲಿವುಡ್ ನಿರ್ದೇಶಕ-ನಟ ಅನುರಾಗ್ ಕಶ್ಯಪ್ ಕೂಡ ಈ ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಶಕ್ತಿಶಾಲಿ ಖಳನಾಯಕನ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾ ಇಂದು (ಏಪ್ರಿಲ್ 10) ರಿಲೀಸ್ ಆಗಿದೆ. ಈ ಸಿನಿಮಾದ ಆಫರ್ ಹೋಗಿದ್ದು ಮೊದಲು ಯುವ ಹೀರೋಗೆ.
‘ಡಕಾಯತ್’ ಸಿನಿಮಾದಲ್ಲಿ ಪ್ರಕಾಶ್ ರಾಜ್, ಸುನಿಲ್, ಅತುಲ್ ಕುಲಕರ್ಣಿ, ಜಯನ್ ಮೇರಿ ಖಾನ್ ಮತ್ತು ಇತರರು ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಬಹಳ ದಿನಗಳಿಂದ ಮುಂದೂಡಲ್ಪಟ್ಟಿದ್ದ ಈ ಚಿತ್ರವು ಅಂತಿಮವಾಗಿ ವಿಶ್ವದಾದ್ಯಂತ ಬಿಡುಗಡೆಯಾಗಿದೆ. ಅನ್ನಪೂರ್ಣ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಸುಪ್ರಿಯಾ ನಿರ್ಮಿಸಿರುವ ಡೆಕಾಯ್ ಚಿತ್ರದಲ್ಲಿ ಶ್ರುತಿ ಹಾಸನ್ ಅವರನ್ನು ಆರಂಭದಲ್ಲಿ ನಾಯಕಿಯಾಗಿ ಆಯ್ಕೆ ಮಾಡಲಾಗಿತ್ತು. ಕೆಲವು ದೃಶ್ಯಗಳನ್ನು ಸಹ ಅವರ ಜೊತೆ ಚಿತ್ರೀಕರಿಸಲಾಯಿತು. ಆದಾಗ್ಯೂ, ಆದರೆ ಶ್ರುತಿ ಹಾಸನ್ ಅನಿರೀಕ್ಷಿತವಾಗಿ ಚಿತ್ರದಿಂದ ಹೊರಗುಳಿದರು. ಆಗ ಮೃಣಾಲ್ ಬಂದರು.
ನಾಯಕಿಯೊಂದಿಗೆ ಮಾತ್ರವಲ್ಲದೆ ನಾಯಕನ ವಿಷಯದಲ್ಲೂ ಇದೇ ರೀತಿಯ ಘಟನೆ ನಡೆದಿದೆ ಎಂದು ಹೇಳಲಾಗುತ್ತದೆ. ನಿರ್ಮಾಪಕರು ಮೊದಲು ಡಕಾಯಿತ್ ಚಿತ್ರದ ಕಥೆಯನ್ನು ಅಕ್ಕಿನೇನಿ ನಾಯಕ ಅಖಿಲ್‌ಗೆ ಹೇಳಿದರು. ಆದಾಗ್ಯೂ, ವಿವಿಧ ಕಾರಣಗಳಿಂದಾಗಿ, ಅಖಿಲ್ ಈ ಚಿತ್ರವನ್ನು ಮಾಡಲು ಆಸಕ್ತಿ ತೋರಿಸಲಿಲ್ಲ. ಆದ್ದರಿಂದ ನಿರ್ದೇಶಕರು ಕಥೆಯನ್ನು ಅಡಿವಿಶೇಷ್ ಬಳಿಗೆ ಕೊಂಡೊಯ್ದರು. ಅವರು ಕಥೆಯನ್ನು ಆಲಿಸಿ ಕೆಲವು ಬದಲಾವಣೆಗಳು ಮತ್ತು ಸೇರ್ಪಡೆಗಳನ್ನು ಸೂಚಿಸಿದರು. ಆ ಬಳಿಕ ಸಿನಿಮಾ ಮಾಡಿದರು.
ಅಡಿವಿ ಶೇಷ್ ಟಾಲಿವುಡ್‌ನಲ್ಲಿ ವಿಭಿನ್ನ ಕಥೆಗಳನ್ನು ಹೊಂದಿರುವ ಚಿತ್ರಗಳನ್ನು ಮಾಡುತ್ತಿದ್ದಾರೆ. ಕ್ಷಣಂ, ಗುಡಾಚಾರಿ, ಮೇಜರ್, ಹಿಟ್ 2 ನಂತಹ ಚಿತ್ರಗಳು ಬ್ಲಾಕ್‌ಬಸ್ಟರ್ ಆಗಿವೆ. ಅವು ಶೇಷ್‌ಗೆ ನಾಯಕನಾಗಿ ಉತ್ತಮ ಮನ್ನಣೆಯನ್ನು ತಂದುಕೊಟ್ಟಿವೆ. ಆದರೆ, ಹಿಟ್ 2 ನಂತರ ದೀರ್ಘ ಅಂತರ ತೆಗೆದುಕೊಂಡ ಅದಿವಿ ಶೇಷ್ ಈಗ ‘ಡಕಾಯಿತ್’ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ.
ಧನಬಾದ್, ಏಪ್ರಿಲ್ 10: ಪ್ರೀತಿ(Love) ಎಂಬುದು ಒಂದು ಮಾಯೆ, ಮನುಷ್ಯನನ್ನು ಯಾವ ಮಟ್ಟಕ್ಕೆ ಬೇಕಾದರೂ ಇಳಿಸುತ್ತೆ ಅಂತಾರೆ. ಆದರೆ ಧನ್‌ಬಾದ್‌ನ ಬಿಎಸ್‌ಎಸ್ (BSS) ಮಹಿಳಾ ಕಾಲೇಜಿನ ಮುಂದೆ ನಡೆದ ಘಟನೆ ಮಾತ್ರ ವಿದ್ಯಾರ್ಥಿನಿಯರಲ್ಲಿ ಮತ್ತು ಸಾರ್ವಜನಿಕರಲ್ಲಿ ಭೀತಿ ಮೂಡಿಸಿದೆ. ಒಬ್ಬ ಹತಾಶ ಪ್ರೇಮಿ ತನ್ನ ಪ್ರೇಯಸಿಯ ಕ್ಷಮೆ ಕೇಳಲು ಇಡೀ ಕಾಲೇಜಿನ ದ್ವಾರವನ್ನೇ ಪೋಸ್ಟರ್‌ಗಳಿಂದ ತುಂಬಿಸಿದ ಘಟನೆ ಗುರುವಾರ (ಏಪ್ರಿಲ್ 9) ನಡೆದಿದೆ.
ಕಾಲೇಜಿನ ಮುಖ್ಯ ದ್ವಾರದ ಗೋಡೆಗಳ ಮೇಲೆ ಬಿಳಿ ಬಣ್ಣದ ದೊಡ್ಡ ಪೋಸ್ಟರ್‌ಗಳು ಪ್ರತ್ಯಕ್ಷವಾಗಿದ್ದವು. ನನ್ನನ್ನು ಕ್ಷಮಿಸಿ ಡಿಂಪಿ, ನನ್ನಿಂದ ತಪ್ಪಾಗಿದೆ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳುತ್ತೇನೆ, ನೀನು ನನಗೆ ತುಂಬಾ ಮುಖ್ಯ ಎಂಬ ಪೋಸ್ಟರ್‌ಗಳು ದಾರಿಹೋಕರ ಗಮನ ಸೆಳೆದವು.
ಕಾಲೇಜಿನ ಭದ್ರತಾ ಸಿಬ್ಬಂದಿ ಮತ್ತು ಪ್ಯೂನ್ ಈ ಪೋಸ್ಟರ್‌ಗಳನ್ನು ತೆಗೆದುಹಾಕಲು ಮುಂದಾದಾಗ, ಅಲ್ಲಿಯೇ ಹೊಂಚು ಹಾಕುತ್ತಿದ್ದ ಯುವಕನೊಬ್ಬ ಅಟ್ಟಹಾಸ ಮೆರೆದಿದ್ದಾನೆ. ಪೋಸ್ಟರ್‌ಗಳನ್ನು ಮುಟ್ಟಿದರೆ ಪರಿಣಾಮ ನೆಟ್ಟಗಿರಲ್ಲ ಎಂದು ಗಾರ್ಡ್‌ಗಳಿಗೆ ಎಚ್ಚರಿಕೆ ನೀಡಿ ಗಲಾಟೆ ಮಾಡಿದ್ದಾನೆ. ಗದ್ದಲ ಕೇಳಿ ಕಾಲೇಜಿನ ಪ್ರಾಂಶುಪಾಲರಾದ ಡಾ. ಕರುಣಾ ಸಿಂಗ್ ಅವರು ಸ್ಥಳಕ್ಕೆ ಆಗಮಿಸುತ್ತಿದ್ದಂತೆಯೇ, ಆರೋಪಿ ಯುವಕ ಅಲ್ಲಿಂದ ಬೈಕ್ ಹತ್ತಿ ಪರಾರಿಯಾಗಿದ್ದಾನೆ.ನಂತರ ಸಿಬ್ಬಂದಿಗಳು ಎಲ್ಲಾ ಪೋಸ್ಟರ್‌ಗಳನ್ನು ಹರಿದು ಹಾಕಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು.
ಈ ಘಟನೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿರುವ ಪ್ರಾಂಶುಪಾಲರು, ಇದು ಕೇವಲ ಪ್ರೇಮದ ವಿಷಯವಲ್ಲ, ವಿದ್ಯಾರ್ಥಿನಿಯರ ಸುರಕ್ಷತೆಯ ಪ್ರಶ್ನೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಇಂದು ಪೋಸ್ಟರ್ ಅಂಟಿಸಿದವನು ನಾಳೆ ಕಾಲೇಜಿನ ಒಳಗೆ ಬಂದು ಅಹಿತಕರ ಕೃತ್ಯ ಎಸಗಬಹುದು. ಇಂತಹ ವ್ಯಕ್ತಿಗಳಿಂದ ವಿದ್ಯಾರ್ಥಿನಿಯರಿಗೆ ಅಪಾಯವಿದೆ, ಎಂದು ಡಾ. ಕರುಣಾ ಸಿಂಗ್ ಹೇಳಿದ್ದಾರೆ.
ಘಟನೆಯ ಕುರಿತು ಧನ್‌ಬಾದ್ ಉಪ ಆಯುಕ್ತರು (DC) ಮತ್ತು ಸ್ಥಳೀಯ ಪೊಲೀಸರಿಗೆ ದೂರು ನೀಡಲಾಗಿದೆ. ಕಾಲೇಜಿನ ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿರುವ ಪೊಲೀಸರು, ಡಿಂಪಿ ಯಾರು ಮತ್ತು ಆ ಹತಾಶ ಪ್ರೇಮಿ ಯಾರು ಎಂಬುದನ್ನು ಪತ್ತೆಹಚ್ಚಲು ತನಿಖೆ ಆರಂಭಿಸಿದ್ದಾರೆ.
ಐಪಿಎಲ್ 2026 ರಲ್ಲಿ ಇಂದು (ಏಪ್ರಿಲ್ 10) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ರಾಜಸ್ಥಾನ್ ರಾಯಲ್ಸ್ (RR) ಮುಖಾಮುಖಿಯಾಗುತ್ತಿದ್ದು, ಈ ಋತುವಿನ ಹೈ-ವೋಲ್ಟೇಜ್ ಪಂದ್ಯಗಳಲ್ಲಿ ಇದೂ ಒಂದಾಗಲಿದೆ. ಆರ್‌ಆರ್ ಇದುವರೆಗಿನ ಮೂರು ಪಂದ್ಯಗಳನ್ನು ಗೆದ್ದು ಅಗ್ರಸ್ಥಾನದಲ್ಲಿದ್ದರೆ, ಆರ್‌ಸಿಬಿ ಆಡಿರುವ ಎರಡು ಪಂದ್ಯಗಳನ್ನು ಗೆದ್ದು ಉತ್ತಮ ಫಾರ್ಮ್ನಲ್ಲಿದೆ. ಆರ್‌ಆರ್ ತಂಡ ಯಶಸ್ವಿ ಜೈಸ್ವಾಲ್ ಮತ್ತು ವೈಭವ್ ಸೂರ್ಯವಂಶಿ ಅವರಂತಹ ಯುವ ಆರಂಭಿಕ ಆಟಗಾರರಿಂದ ಪ್ರಬಲ ಪ್ರದರ್ಶನವನ್ನು ನೀಡಿದೆ. ಮುಂಬೈ ಇಂಡಿಯನ್ಸ್ ವಿರುದ್ಧ 11 ಓವರ್ಗಳಲ್ಲಿ 150 ರನ್ ಗಳಿಸಿದ್ದು ಅವರ ಸ್ಫೋಟಕ ಬ್ಯಾಟಿಂಗ್ಗೆ ಸಾಕ್ಷಿ. ಬೌಲಿಂಗ್ನಲ್ಲಿ ಸಂದೀಪ್ ಶರ್ಮಾ, ಜಾಫ್ರಾ ಆರ್ಚರ್ ಮತ್ತು ರಿಯಾನ್ ಪರಾಗ್ ಉತ್ತಮ ಪ್ರದರ್ಶನ ನೀಡಿದ್ದಾರೆ.
ಮತ್ತೊಂದೆಡೆ, ಆರ್‌ಸಿಬಿ ಕೂಡ ಬಲಿಷ್ಠವಾದ ‘ವಿನ್ನಿಂಗ್ ಕಾಂಬಿನೇಶನ್’ ಹೊಂದಿದೆ. ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಸೇರಿದಂತೆ ಎಲ್ಲಾ ವಿಭಾಗಗಳಲ್ಲಿಯೂ ತಂಡದ ಆಟಗಾರರು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಂಡದ ಭಾರತೀಯ ಆಟಗಾರರು ನಿರ್ಣಾಯಕ ಸಂದರ್ಭಗಳಲ್ಲಿ ಉತ್ತಮ ಕೊಡುಗೆ ನೀಡುತ್ತಿದ್ದಾರೆ. ತವರಿನಿಂದ ಹೊರಗೆ ಮೊದಲ ಪಂದ್ಯ ಇದಾಗಿದ್ದು, ಕುತೂಹಲ ಹೆಚ್ಚಿಸಿದೆ. ಹೇಗಿದೆ ಉಭಯ ತಂಡಗಳ ಬಲಾಬಲ ಎಂಬ ವಿಶ್ಲೇಷಣೆ ಇಲ್ಲಿದೆ ನೋಡಿ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಬಾಲಿವುಡ್ನಲ್ಲಿ (Bollywood) ಒಂದರ ಹಿಂದೊಂದು ಐತಿಹಾಸಿಕ ಸಿನಿಮಾಗಳು, ಜೀವನ ಆಧರಿತ ಬಯೋಪಿಕ್ ಸಿನಿಮಾಗಳು ನಿರ್ಮಾಣ ಆಗುತ್ತಲೇ ಇರುತ್ತವೆ. ಅದರಲ್ಲೂ ಇತ್ತೀಚೆಗೆ ಐತಿಹಾಸಿಕ ಮಹತ್ವವುಳ್ಳ ರಾಜರ, ಮಹಾರಾಜರ ಕತೆಗಳು ಸಿನಿಮಾಗಳಾಗುತ್ತಿವೆ. ಆದರೆ ಈ ಪದ್ಧತಿ ದಕ್ಷಿಣದಲ್ಲಿ ವಿಶೇಷವಾಗಿ ಕನ್ನಡದಲ್ಲಿ ಬಹಳ ವಿರಳ. ಎಲ್ಲೋ ಅಲ್ಲೊಂದು ಇಲ್ಲೊಂದು ಐತಿಹಾಸಿಕ ಸಿನಿಮಾಗಳು ಸೆಟ್ಟೇರುತ್ತವೆಯಷ್ಟೆ. ಅದರಲ್ಲೂ ರಾಜ-ಮಹಾರಾಜರ ಜೀವನ ಆಧರಿಸಿದ ಸಿನಿಮಾಗಳಂತೂ ಬಹಳ ವಿರಳ. ಆದರೆ ಇದೀಗ ಕನ್ನಡದ ದೊರೆ ಇಮ್ಮಡಿ ಪುಲಿಕೇಶಿ ಜೀವನ, ಸಾಹಸ, ಸಾಧನೆ ಕುರಿತು ಹೇಳುವ ಕನ್ನಡ ಸಿನಿಮಾ ಒಂದು ಸೆಟ್ಟೇರಲು ಸಿದ್ಧವಾಗಿದೆ.
ದಕ್ಷಿಣ ಭಾರತದ ಶ್ರೇಷ್ಠ ದೊರೆ, ಚಾಲುಕ್ಯ ಸಾಮ್ರಾಜ್ಯದ ಅಧಿಪತಿ ಇಮ್ಮಡಿ ಪುಲಕೇಶಿಯ ಸಾಹಸಮಯ ಬದುಕನ್ನು ತೆರೆಯ ಮೇಲೆ ತರಲು ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕರುಗಳಲ್ಲಿ ಒಬ್ಬರಾಗಿರುವ ಕೆಎಂ ಚೈತನ್ಯ ಸಜ್ಜಾಗಿದ್ದಾರೆ. ಈ ಬೃಹತ್ ಐತಿಹಾಸಿಕ ಚಿತ್ರಕ್ಕೆ ‘ಎರೆಯ’ ಎಂದು ಹೆಸರಿಡಲಾಗಿದ್ದು, ಈ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ನಿರ್ಮಾಣವಾಗಲಿದೆ. ಈ ಹಿಂದೆ ಡಾ ರಾಜ್ಕುಮಾರ್ ಅವರು ‘ಇಮ್ಮಡಿ ಪುಲಿಕೇಶಿ’ ಸಿನಿಮಾನಲ್ಲಿ ನಟಿಸಿದ್ದರು. ಡಾಲಿ ಧನಂಜಯ್ ನಟನೆಯ ಸಿನಿಮಾ ಘೋಷಣೆ ಆಗಿತ್ತಾದರೂ ಅದು ಸೆಟ್ಟೇರಿದಂತಿಲ್ಲ.
6ನೇ ಶತಮಾನದಲ್ಲಿ ದಕ್ಷಿಣ ಭಾರತವನ್ನಾಳಿದ ದಂತಕಥೆ ಇಮ್ಮಡಿ ಪುಲಕೇಶಿಯ ಜೀವನ, ಆಡಳಿತ ಚಾತುರ್ಯ ಮತ್ತು ಯುದ್ಧದ ಸಾಹಸಗಾಥೆಗಳನ್ನು ಈ ಸಿನಿಮಾ ಒಳಗೊಂಡಿರಲಿವೆ. ಇಮ್ಮಡಿ ಪುಲಕೇಶಿಯ ಆಳ್ವಿಕೆಯ ಸುವರ್ಣಯುಗವನ್ನು ಚಿತ್ರದಲ್ಲಿ ಮರುಸೃಷ್ಟಿಸುವ ಪ್ರಯತ್ನ ಮಾಡಲಾಗುತ್ತಿದೆ. ‘ಆ ದಿನಗಳು’ ನಿರ್ದೇಶಕ ಕೆಎಂ ಚೈತನ್ಯ ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಇತಿಹಾಸ ತಜ್ಞ ಡಾ ಭೂಷಣ್ ಶಾನಭಾಗ್ ಅವರು ನಡೆಸಿರುವ ಆಳವಾದ ಸಂಶೋಧನೆಯ ಆಧಾರದ ಮೇಲೆ ಚಿತ್ರಕಥೆಯನ್ನು ಸಿದ್ಧಪಡಿಸಿದ್ದಾರೆ ಚೈತನ್ಯ.
ವಿಂಗ್‌ಸ್ಪ್ಯಾನ್ ಮೋಷನ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಸುನೀತ್ ಜಾವಡೇಕರ್ ಮತ್ತು ನಿವೇದಿತಾ ಕೊಠಾರೆ ಈ ಬಿಗ್ ಬಜೆಟ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ಈ ಸಿನಿಮಾ ಕನ್ನಡದ ಜೊತೆಗೆ ಹಿಂದಿ ಮತ್ತು ದಕ್ಷಿಣ ಭಾರತದ ಉಳಿದ ಪ್ರಮುಖ ಭಾಷೆಗಳಲ್ಲಿ ಏಕಕಾಲಕ್ಕೆ ತೆರೆಗೆ ಬರಲಿದೆ. ಸಿನಿಮಾದ ನಾಯಕ ಸೇರಿದಂತೆ ಇತರೆ ಪಾತ್ರಗಳ ಆಯ್ಕೆ ಜಾರಿಯಲ್ಲಿದ್ದು, ಶೀಘ್ರವೇ ತಾರಾಗಣ ಹಾಗೂ ತಾಂತ್ರಿಕ ವರ್ಗವನ್ನು ಘೋಷಿಸಲಾಗುವುದು ಎಂದು ಚಿತ್ರತಂಡ ಹೇಳಿದೆ. ಕೆಎಂ ಚೈತನ್ಯ ಸದ್ಯಕ್ಕೆ ‘ಬಲರಾಮನ ದಿನಗಳು’ ಸಿನಿಮಾದ ಚಿತ್ರೀಕರಣ ಮತ್ತು ಬಿಡುಗಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು, ಆ ಸಿನಿಮಾದ ಕೆಲಸಗಳು ಮುಗಿದ ಬಳಿಕ ‘ಎರೆಯ’ ಸಿನಿಮಾದ ಕಾರ್ಯ ಶುರುವಾಗಲಿದೆ.
ವಾಷಿಂಗ್ಟನ್, ಏಪ್ರಿಲ್ 10: ಜಾಗತಿಕ ತೈಲ ಮಾರುಕಟ್ಟೆಯ ಜೀವನಾಡಿಯಂತಿರುವ ಹಾರ್ಮುಜ್ ಜಲಸಂಧಿ(Hormuz Strait)ಯ ಸುತ್ತ ಈಗ ರಾಜತಾಂತ್ರಿಕ ಸಮರ ತಾರಕಕ್ಕೇರಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಇರಾನ್ ನಡುವಿನ ಈ ಸಂಘರ್ಷವು ವಿಶ್ವದ ಆರ್ಥಿಕತೆಯ ಮೇಲೆ ಆತಂಕದ ನೆರಳು ಮೂಡಿಸಿದೆ. ಅಮೆರಿಕ ಮತ್ತು ಇರಾನ್ ನಡುವೆ ಏರ್ಪಟ್ಟಿರುವ ಎರಡು ವಾರಗಳ ಕದನ ವಿರಾಮದ ಒಪ್ಪಂದವು ಜಾರಿಗೆ ಬಂದ ಬೆನ್ನಲ್ಲೇ ಹೊಸ ವಿವಾದವೊಂದು ಸ್ಫೋಟಗೊಂಡಿದೆ.
ಹಾರ್ಮುಜ್ ಜಲಸಂಧಿಯ ಮೂಲಕ ಹಾದುಹೋಗುವ ತೈಲ ಟ್ಯಾಂಕರ್‌ಗಳ ಮೇಲೆ ಇರಾನ್ ಶುಲ್ಕ (Fee) ವಿಧಿಸುತ್ತಿದೆ ಎಂಬ ವರದಿಗಳು ಹೊರಬರುತ್ತಿದ್ದಂತೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇರಾನ್‌ನ ಈ ನಡವಳಿಕೆಯನ್ನು ಅವಮಾನಕರ ಎಂದು ಕರೆದಿದ್ದಾರೆ.
ಇರಾನ್ ಜಲಸಂಧಿಯ ಮೂಲಕ ಹಾದುಹೋಗುವ ಟ್ಯಾಂಕರ್‌ಗಳಿಗೆ ಶುಲ್ಕ ವಿಧಿಸುತ್ತಿದೆ ಎಂಬ ಮಾಹಿತಿ ನಮಗೆ ಸಿಕ್ಕಿದೆ. ಅವರು ಹಾಗೆ ಮಾಡದಿರುವುದು ಉತ್ತಮ, ಒಂದು ವೇಳೆ ಮಾಡುತ್ತಿದ್ದರೆ ಈಗಲೇ ನಿಲ್ಲಿಸುವುದು ಅವರಿಗೆ ಉತ್ತಮ ಎಂದು ಟ್ರಂಪ್ ಎಚ್ಚರಿಸಿದ್ದಾರೆ.
ಅಷ್ಟೇ ಅಲ್ಲದೆ, ಇರಾನ್ ಕದನ ವಿರಾಮ ಒಪ್ಪಂದದ ನಿಯಮಗಳನ್ನು ಉಲ್ಲಂಘಿಸುತ್ತಿದ್ದು, ಅತ್ಯಂತ ಕಳಪೆ ಕೆಲಸ ಮಾಡುತ್ತಿದೆ ಎಂದು ಟ್ರಂಪ್ ದೂರಿದ್ದಾರೆ. ಇದು ನಾವು ಮಾಡಿಕೊಂಡ ಒಪ್ಪಂದವಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪರ್ಷಿಯನ್ ಕೊಲ್ಲಿ ಮತ್ತು ಓಮನ್ ಕೊಲ್ಲಿ ನಡುವಿನ ಸುಮಾರು 167 ಕಿಲೋಮೀಟರ್ ಉದ್ದದ ಈ ಜಲಸಂಧಿಯು ವಿಶ್ವದ ಅತ್ಯಂತ ನಿರ್ಣಾಯಕ ತೈಲ ಸಾರಿಗೆ ಕೇಂದ್ರವಾಗಿದೆ. ಮಂಗಳವಾರ ನಡೆದ ಸಂಧಾನದ ಪ್ರಕಾರ, ಇರಾನ್ ಈ ಜಲಸಂಧಿಯನ್ನು ಮತ್ತೆ ತೆರೆಯಬೇಕಿತ್ತು.
ಆದರೆ ಎಎಫ್‌ಪಿ (AFP) ವರದಿಯ ಪ್ರಕಾರ, ಒಪ್ಪಂದದ ನಂತರ ಈವರೆಗೆ ಕೇವಲ 10 ಟ್ಯಾಂಕರ್‌ಗಳು ಮಾತ್ರ ಜಲಸಂಧಿಯನ್ನು ದಾಟಿವೆ. ಇರಾನ್ ಬೇಕೆಂದೇ ಹಡಗುಗಳನ್ನು ತಡೆಯುತ್ತಿದೆ ಅಥವಾ ಅನಗತ್ಯ ಶುಲ್ಕ ವಿಧಿಸಿ ಜಾಗತಿಕ ಆರ್ಥಿಕತೆಯನ್ನು ಅಸ್ತವ್ಯಸ್ತಗೊಳಿಸುತ್ತಿದೆ ಎಂಬುದು ಅಮೆರಿಕದ ಆರೋಪವಾಗಿದೆ.
ಈ ಬಿಕ್ಕಟ್ಟನ್ನು ಶಮನಗೊಳಿಸಲು ಅಮೆರಿಕ ಈಗ ತನ್ನ ಪ್ರಬಲ ನಿಯೋಗವನ್ನು ಅಖಾಡಕ್ಕಿಳಿಸಿದೆ. ಬರುವ ಶನಿವಾರ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ಇರಾನ್ ಅಧಿಕಾರಿಗಳೊಂದಿಗೆ ಮಹತ್ವದ ಮಾತುಕತೆ ನಡೆಯಲಿದೆ. ಅಮೆರಿಕದ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಈ ಮಾತುಕತೆಯ ನೇತೃತ್ವ ವಹಿಸಲಿದ್ದಾರೆ. ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್ ಮತ್ತು ವಿಶೇಷ ರಾಯಭಾರಿ ಸ್ಟೀವ್ ವಿಟ್ಕಾಫ್ ಈ ನಿಯೋಗದಲ್ಲಿದ್ದಾರೆ.
ಲೆಬನಾನ್ ಎಂಬ ಕಗ್ಗಂಟು
ಇರಾನ್ ತನ್ನ ಶಾಂತಿ ಒಪ್ಪಂದದಲ್ಲಿ ಲೆಬನಾನ್ ಅನ್ನೂ ಸೇರಿಸಬೇಕೆಂದು ಪಟ್ಟು ಹಿಡಿದಿದೆ. ಆದರೆ, ಇತ್ತೀಚೆಗಷ್ಟೇ ಇಸ್ರೇಲ್ ಲೆಬನಾನ್ ಮೇಲೆ ಭೀಕರ ದಾಳಿ ನಡೆಸಿ ನೂರಾರು ಜನರನ್ನು ಕೊಂದಿರುವುದು ಈ ಸಂಧಾನ ಪ್ರಕ್ರಿಯೆಗೆ ದೊಡ್ಡ ಅಡ್ಡಿಯಾಗಿ ಪರಿಣಮಿಸಿದೆ.
ಒಂದು ಕಡೆ ಇಸ್ಲಾಮಾಬಾದ್‌ನಲ್ಲಿ ರಾಜತಾಂತ್ರಿಕ ಮಾತುಕತೆಗಳಿಗೆ ವೇದಿಕೆ ಸಿದ್ಧವಾಗುತ್ತಿದ್ದರೆ, ಇನ್ನೊಂದು ಕಡೆ ಟ್ರಂಪ್ ಅವರ ಸೇನಾ ಬೆದರಿಕೆಗಳು ಇರಾನ್ ಮೇಲೆ ಒತ್ತಡ ಹೆಚ್ಚಿಸಿವೆ. ಹಾರ್ಮುಜ್ ಜಲಸಂಧಿಯು ಸುಸೂತ್ರವಾಗಿ ಕಾರ್ಯನಿರ್ವಹಿಸದಿದ್ದರೆ ಜಾಗತಿಕ ತೈಲ ಬೆಲೆಗಳಲ್ಲಿ ಭಾರಿ ಏರಿಕೆಯಾಗುವ ಭೀತಿ ಎದುರಾಗಿದೆ.
ಬೆಂಗಳೂರು, ಏಪ್ರಿಲ್ 10: ಕಳೆದ ಹಲವು ದಿನಗಳಿಂದ ಬೆಂಗಳೂರು ಸೆರಿದಂತೆ ರಾಜ್ಯದ ವಿವಿಧೆಡೆ ವಾಯು ಗುಣಮಟ್ಟ (Bengaluru Air Quality) ಸುಧಾರಿಸುತ್ತಿದೆ. ಇಷ್ಟು ದಿನ ಉಸಿರಾಟಕ್ಕೂ ಮಾರಕವಾಗಿದ್ದ ಗಾಳಿಯು ಇಂದು ಒಳ್ಳೆಯ ಗುಣಮಟ್ಟದಲ್ಲಿರುವುದು ಸ್ವಲ್ಪಮಟ್ಟಿಗೆ ಆತಂಕವನ್ನು ಕಡಿಮೆಯಾಗಿಸಿದೆ. ಆದರೂ ವಾಯು ಗುಣಮಟ್ಟ ಎಲ್ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.
ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 109ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.
ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)
ಸ್ಟಾರ್ ಸುವರ್ಣದ ‘ಆಸೆ’ ಧಾರಾವಾಹಿ ಪ್ರೇಕ್ಷಕರನ್ನು ಸೆಳೆದುಕೊಳ್ಳುತ್ತಿದೆ ಎಂದರೂ ತಪ್ಪಾಗಲಿಕ್ಕಿಲ್ಲ. ಈ ಧಾರಾವಾಗೆ ದೊಡ್ಡ ಅಭಿಮಾನಿ ಬಳಗ ಇದ್ದಿರೋದು ಗೊತ್ತೇ ಇದೆ. ಈಗ ‘ಆಸೆ’ ಧಾರಾವಾಹಿಯು ಒಂದು ಮಹತ್ವದ ಘಟ್ಟ ತಲುಪಿದೆ. ಈ ಧಾರಾವಾಹಿಯಲ್ಲಿ ಕ್ರಿಶ್ ಸೂರ್ಯನ ಮಗ ಎಂಬುದು ನಾಯಕಿ ಮೀನಾಗೆ ಗೊತ್ತಾಗಿ ಹೋಗಿದೆ. ಈ ವಿಷಯವನ್ನು ಮನೆಯ ಎಲ್ಲರಿಗೂ ಹೇಳುವಂತೆ ಆಕೆ ಒತ್ತಡ ಹೇರುವುದನ್ನು ನೀವು ಧಾರಾವಾಹಿಯಲ್ಲಿ ಕಾಣಬಹುದು.
‘ಆಸೆ’ ಧಾರಾವಾಹಿಯಲ್ಲಿ ರೋಹಿಣಿ ಪತಿಗೆ ಹಾಗೂ ಕುಟುಂಬಕ್ಕೆ ಮೋಸ ಮಾಡುತ್ತಲೇ ಬರುತ್ತಿದ್ದಾಳೆ. ಈ ವಿಷಯದಲ್ಲಿ ಆಕೆಗೆ ಯಾವುದೇ ಬೇಸರ ಇಲ್ಲ. ಆಕೆ ಮೋಸ ಮಾಡುವುದರಲ್ಲೇ ನಿರತರಾಗಿದ್ದಾಳೆ. ಮೊದಲು ತನ್ನ ತಂದೆ ಮಲೇಷಿಯಾದಲ್ಲಿದ್ದಾನೆ ಎಂದು ನಂಬಿಸಿ ಮನೋಜ್ ಜೊತೆ ಮದುವೆ ಆದಳು. ಆ ಬಳಿಕ ಅದು ಸುಳ್ಳು ಎಂಬುದು ಗೊತ್ತಾಯಿತು. ಎಲ್ಲಕ್ಕಿಂತ ಹೆಚ್ಚಾಗಿ ತನಗೆ ಮಗು ಇರುವ ವಿಷಯವನ್ನು ಆಕೆ ಮುಚ್ಚಿಟ್ಟಿದ್ದಳು.
ಈಗ ಅದು ಹೊರಗೆ ಬಂದಿದೆ. ಮೀನಾಗೆ ಈ ವಿಷಯ ಗೊತ್ತಾಗಿದೆ. ಆಕೆಗೆ ಸತ್ಯ ಗೊತ್ತಾದಾಗಿನಿಂದ ಆಕೆಯ ಮನಸ್ಸು ನಿಲ್ಲುತ್ತಿಲ್ಲ. ಈ ಸತ್ಯವನ್ನು ಎಲ್ಲರಿಗೂ ಹೇಳುವಂತೆ ಒತ್ತಡ ಹೇರುತ್ತಿದ್ದಾಳೆ. ಆದರೆ, ಇದನ್ನು ತೆಗೆದುಕೊಳ್ಳಲು ಆಕೆ ರೆಡಿ ಇಲ್ಲ. ಅವಳು ಒದ್ದಾಡುತ್ತಿದ್ದಾಳೆ. ಜೊತೆಗೆ ರೋಹಿಣಿಗೆ ಸತ್ಯ ಹೇಳುವಂತೆ ಒತ್ತಡ ಹೇರುತ್ತಿದ್ದಾಳೆ. ಇದರಿಂದ ಆಕೆ ಕಂಗಾಲಾಗಿ ಹೋಗಿದ್ದಾಳೆ.
ಈಗಾಗಲೇ ರೋಹಿಣಿಯನ್ನು ಆಕೆಯ ಅತ್ತೆ ಶಾಂತಿಯು ಒಮ್ಮೆ ಮನೆಯಿಂದ ಹೊರಹಾಕಿದ್ದಳು. ಇದಕ್ಕೆ ಕಾರಣ ಆಗಿದ್ದು, ಆಕೆಯ ಮಲೇಷ್ಯಾ ಸುಳ್ಳು ವಿಷಯ. ಆಕೆಯನ್ನು ಮನೆಯಿಂದ ಹೊರಕ್ಕೆ ಹಾಕಲಾಗಿತ್ತು. ಕೊನೆಗೆ ಶಾಂತಿಯ ಮನಸ್ಸು ಬದಲಿಸಿ ರೋಹಿಣಿಯನ್ನು ಮರಳಿ ಕರೆತರಲಾಯಿತು. ಈಗ ಈ ವಿಷಯ ಗೊತ್ತಾದರೆ, ಅತ್ತೆ ಜೀವಂತ ಉಳಿಸೋದಿಲ್ಲ ಎನ್ನುವ ಭಯ ಅವಳನ್ನು ಬಹುವಾಗಿ ಕಾಡುತ್ತಿದೆ. ಈ ಮಧ್ಯೆ ಕ್ರಿಶ್ ಮನೆಯಲ್ಲೇ ಬಂದು ಉಳಿದುಕೊಳ್ಳುವಂತೆ ಮಾಡಿದ್ದಾಳೆ ಮೀನಾ. ಇದರಿಂದ ರೋಹಿಣಿಗೆ ಸಂಕಷ್ಟ ಹೆಚ್ಚಿದೆ.