ಸಿಲಿಕಾನ್ ಸಿಟಿಯಲ್ಲಿ ಮನೆಗಳ ಮುಳುಗಡೆಗೆ ರಸ್ತೆಗಳೇ ಕಂಟಕ: ಮಿಲ್ಲಿಂಗ್ ಮಾಡದೆ ಡಾಂಬರು ಹಾಕಿ ಮನೆಗಳಿಗಿಂತ ರಸ್ತೆ ಎತ್ತರಿಸುತ್ತಿರುವ ಜಿಬಿಎ – Kannada News | Bangalore’s Road Woes: Unscientific Resurfacing and Missing Milling Cause Home Flooding
ಬೆಂಗಳೂರು, ಜೂ.22: ರಾಜಧಾನಿ ಬೆಂಗಳೂರಿನಲ್ಲಿ ಸಾಮಾನ್ಯ ಮಳೆ ಬಂದರೂ ಹಳೆಯ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಜಲಾವೃತವಾಗಲು ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಇಂಜಿನಿಯರ್‌ಗಳ ಬೇಜವಾಬ್ದಾರಿತನವೇ ನೇರ ಕಾರಣ ಎಂಬ ಗಂಭೀರ ಆರೋಪ ಕೇಳಿಬಂದಿದೆ. ರಸ್ತೆಗಳಿಗೆ ಮರುಡಾಂಬರೀಕರಣ (Resurfacing) ಮಾಡುವ ಮುನ್ನ ಹಳೆಯ ಡಾಂಬರನ್ನು ಕೆರೆದು ತೆಗೆಯುವ ‘ಮಿಲ್ಲಿಂಗ್’ (Milling) ನಿಯಮವನ್ನು ಗಾಳಿಗೆ ತೂರಿ, ಹಳೆಯ ರಸ್ತೆಯ ಮೇಲೆಯೇ ಪದರ ಪದರವಾಗಿ ಹೊಸ ಡಾಂಬರು ಹಾಕುತ್ತಿರುವುದರಿಂದ ರಸ್ತೆಗಳ ಎತ್ತರ ಹೆಚ್ಚಾಗುತ್ತಿದ್ದು, ಮನೆಗಳು ತಗ್ಗು ಪ್ರದೇಶಕ್ಕೆ ತಳ್ಳಲ್ಪಡುತ್ತಿವೆ ಎಂಬ…