Headlines

ಅಡುಗೆ ಗ್ಯಾಸ್ ಸ್ಟಾಕ್ ಮಾಡುವ ಮುನ್ನ ಎಚ್ಚರ: ಇಷ್ಟು ದಿನದೊಳಗೆ ಬಳಸಿ ಮುಗಿಸಬೇಕು!

ಮನೆಯಲ್ಲಿ ಅಥವಾ ವಾಣಿಜ್ಯ ಬಳಕೆಗೆ ಅಡುಗೆ ಗ್ಯಾಸ್ (LPG) ಸಿಲಿಂಡರ್ ಅನ್ನು ಸಂಗ್ರಹಿಸಿಡುವಾಗ (Stock) ಅಥವಾ ಬಳಸುವಾಗ ಸುರಕ್ಷತೆಯ ದೃಷ್ಟಿಯಿಂದ ಕೆಲವು ನಿಯಮಗಳನ್ನು ಪಾಲಿಸುವುದು ಅತ್ಯಗತ್ಯ. ಸಿಲಿಂಡರ್ ಎಷ್ಟು ದಿನಗಳ ಒಳಗೆ ಖಾಲಿಯಾಗಬೇಕು ಮತ್ತು ಅದರ ಮೇಲೆ ನಮೂದಿಸಿರುವ ‘ಎಕ್ಸ್‌ಪೈರಿ ಡೇಟ್’ (Expiry Date) ಅನ್ನು ಹೇಗೆ ಗುರುತಿಸಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ. ಪ್ರತಿ ಗ್ಯಾಸ್ ಸಿಲಿಂಡರ್‌ನ ಮೇಲ್ಭಾಗದ ಮೂರು ಕಬ್ಬಿಣದ ಪಟ್ಟಿಗಳಲ್ಲಿ ಒಂದರ ಒಳಭಾಗದಲ್ಲಿ ಇಂಗ್ಲಿಷ್ ಅಕ್ಷರ ಮತ್ತು ಅಂಕಿಗಳನ್ನು ಬರೆಯಲಾಗಿರುತ್ತದೆ (ಉದಾಹರಣೆಗೆ: A-26,…

Read More

ಹೊಸ ಹೆಜ್ಜೆ ಇಟ್ಟ ಕೆವಿಎನ್ ಸಂಸ್ಥೆ; ಚಿರಂಜೀವಿ ಜೊತೆ ಬಿಗ್ ಬಜೆಟ್ ಸಿನಿಮಾ – Kannada News | KVN Productions Backs Chiranjeevi’s Mega 158: New Big Budget Action Film

‘ಟಾಕ್ಸಿಕ್’, ‘ಕೆಡಿ’, (KD Movie) ‘ಜನ ನಾಯಗನ್’ ರೀತಿಯ ಬಿಗ್ ಬಜೆಟ್ ಸಿನಿಮಾ ನಿರ್ಮಿಸೋ ಕೆವಿಎನ್ ಸಂಸ್ಥೆ ಈಗ ಹೊಸ ಹೆಜ್ಜೆ ಇಟ್ಟಿದೆ. ಚಿರಂಜೀವಿ ಅವರ 158ನೇ ಸಿನಿಮಾಗೆ ಈ ಸಂಸ್ಥೆ ಬಂಡವಾಳ ಹೂಡುತ್ತಿದೆ. ಈ ಚಿತ್ರಕ್ಕೆ ತಾತ್ಕಾಲಿಕವಾಗಿ ‘ಮೆಗಾ 158’ ಎಂದು ಹೆಸರಿಡಲಾಗಿದೆ. ಸಿನಿಮಾದ ಮುಹೂರ್ತ ಇಂದು (ಮೇ 21) ಅದ್ದೂರಿಯಾಗಿ ನೆರವೇರಿದೆ. ಆಂಧ್ರ ಪ್ರದೇಶದ ಉಪಮುಖ್ಯಮಂಯತ್ರಿ ಪವನ್ ಕಲ್ಯಾಣ್, ಚಿರಂಜೀವಿ ಸಹೋದರ, ನಟ ಪವನ್ ಕಲ್ಯಾಣ್ ಅವರು ಸಿನಿಮಾಗೆ ಕ್ಲ್ಯಾಪ್ ಮಾಡಿದ್ದಾರೆ. ಕೆವಿಎನ್ ಸಂಸ್ಥೆ…

Read More

Silver Astrology: ಚಿನ್ನಕ್ಕಿಂತ ಬೆಳ್ಳಿ ಧರಿಸಿದರೆ ಈ 5 ರಾಶಿಯವರಿಗೆ ಹೆಚ್ಚು ಅದೃಷ್ಟ! – Kannada News | Silver Astrology Benefits: Which Zodiac Signs Should Wear Silver for Luck and Peace?

ಬೆಳ್ಳಿ ಧರಿಸಿದರೆ ಅದೃಷ್ಟImage Credit source: Instagram/driftculturejewellery ಇತ್ತೀಚಿನ ದಿನಗಳಲ್ಲಿ ಬೆಳ್ಳಿಯ ಬೆಲೆಯೂ ಹೆಚ್ಚುತ್ತಿದೆ. ಆದ್ದರಿಂದ ಚಿನ್ನದಷ್ಟೇ ಬೆಳ್ಳಿಗೂ ವಿಶೇಷ ಸ್ಥಾನಮಾನವಿದೆ. ಇದು ಕೇವಲ ಆಭರಣವಾಗಿ ಮಾತ್ರವಲ್ಲ, ಆಧ್ಯಾತ್ಮಿಕ ಹಾಗೂ ಜ್ಯೋತಿಷ್ಯದ ದೃಷ್ಟಿಯಿಂದಲೂ ಮಹತ್ವ ಪಡೆದಿದೆ. ಜ್ಯೋತಿಷ್ಯದ ಪ್ರಕಾರ, ಚಿನ್ನವು ಎಲ್ಲರಿಗೂ ಸಮಾನವಾಗಿ ಶುಭಕರವಾಗಿರುವುದಿಲ್ಲ. ಕೆಲವು ರಾಶಿಯವರಿಗೆ ಬೆಳ್ಳಿ ಧರಿಸುವುದು ಹೆಚ್ಚು ಅನುಕೂಲಕರವೆಂದು ನಂಬಲಾಗಿದೆ. ಬೆಳ್ಳಿಯು ಮನಸ್ಸಿಗೆ ಶಾಂತಿ, ಆರ್ಥಿಕ ಸ್ಥಿರತೆ, ಅದೃಷ್ಟ ಮತ್ತು ಕುಟುಂಬದ ಸುಖ-ಸಮೃದ್ಧಿಯನ್ನು ಹೆಚ್ಚಿಸುತ್ತದೆ ಎಂದು ಜ್ಯೋತಿಷ್ಯದಲ್ಲಿ ಹೇಳಲಾಗುತ್ತದೆ. ಕರ್ಕಾಟಕ ರಾಶಿ: ಕರ್ಕಾಟಕ…

Read More

Bengaluru Air Quality: ಬೆಂಗಳೂರಿಗರೇ ನಿರಾಳವಾಗಿ ಉಸಿರಾಡಿ! ಮೆಜೆಸ್ಟಿಕ್ ಸೇರಿದಂತೆ ನಗರದ ಹಲವೆಡೆ ವಾಯು ಗುಣಮಟ್ಟ ಸೂಪರ್ – Kannada News | Karnataka AQI Today: Bengaluru Air Quality Improves Post Monsoon Rains

ಬೆಂಗಳೂರಿಗರೇ ನಿರಾಳವಾಗಿ ಉಸಿರಾಡಿ! ಬೆಂಗಳೂರು, ಜುಲೈ 13: ಇಂದು ಕರ್ನಾಟಕದ ಪ್ರಮುಖ ನಗರಗಳಲ್ಲಿ ಮತ್ತು ವಿಶೇಷವಾಗಿ ರಾಜಧಾನಿ ಬೆಂಗಳೂರಿನಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) ತೃಪ್ತಿದಾಯಕ ಹಾಗೂ ಸಾಧಾರಣ ಮಟ್ಟದಲ್ಲಿದೆ. ಮುಂಗಾರು ಮಳೆಯ ಪ್ರಭಾವದಿಂದಾಗಿ ವಾತಾವರಣದಲ್ಲಿನ ಮಾಲಿನ್ಯಕಾರಕ ಕಣಗಳು ಕಡಿಮೆಯಾಗಿದ್ದು, ರಾಜ್ಯದ ಬಹುತೇಕ ನಗರಗಳ ಜನತೆ ನಿಟ್ಟುಸಿರು ಬಿಡುವಂತಾಗಿದೆ. ಬೆಂಗಳೂರಿನ ಇಂದಿನ ವಾಯು ಗುಣಮಟ್ಟ ಹೇಗಿದೆ? ಬೆಂಗಳೂರಿನಲ್ಲಿ ಇಂದಿನ ಸರಾಸರಿ AQI 61 ರಿಂದ 69ರ ಆಸುಪಾಸಿನಲ್ಲಿ ದಾಖಲಾಗಿದ್ದು, ಇದನ್ನು ಸಾಧಾರಣ ಅಥವಾ ಕೆಲವು ಪ್ರದೇಶಗಳಲ್ಲಿ ಉತ್ತಮ…

Read More

Republic Day 2026: ಈ ಬಾರಿ ಗಣರಾಜ್ಯೋತ್ಸವದಲ್ಲಿ ಕೇವಲ ಮಿಲಿಟರಿ ಮೆರವಣಿಗೆಯಲ್ಲ, ಇರಲಿದೆ ಯುದ್ಧಭೂಮಿ – Kannada News | Republic Day 2026 Live Streaming in Tv9 Kannada, Grand Military Parade, Battlefield Display and Vande Mataram Theme

ನವದೆಹಲಿ, ಜನವರಿ 23: ಈ ಬಾರಿ ಗಣರಾಜ್ಯೋತ್ಸವ(Republic Day)ವನ್ನು ವಿಶಿಷ್ಟವಾಗಿ ಆಚರಿಸಲಾಗುತ್ತಿದೆ. ಕೇವಲ ಮಿಲಿಟರಿ ಮೆರವಣಿಗೆಯಲ್ಲ ಬದಲಾಗಿ ಯುದ್ಧಭೂಮಿಯೇ ಕಣ್ಣೆದುರು ಬರಲಿದೆ. ಸ್ವಾತಂತ್ರ್ಯ ಹೋರಾಟದಿಂದ ಸ್ವಾವಲಂಬಿ ಭಾರತದವರೆಗೆ, ಭಾರತ ತೆಗೆದುಕೊಂಡ ಹೆಜ್ಜೆಗಳು ಕಣ್ಮುಂದೆ ಬರಲಿದೆ. ಕಲಾವಿದರು ತಮ್ಮ ಪೂರ್ವಾಭ್ಯಾಸಕ್ಕೆ ಅಂತಿಮ ಸ್ಪರ್ಶ ನೀಡುತ್ತಿದ್ದಾರೆ. ಮೆರವಣಿಗೆಯ ಮುಖ್ಯ ವಿಷಯ ವಂದೇ ಮಾತರಂ ಆಗಿರುತ್ತದೆ. ವಿವಿಧ ರಾಜ್ಯಗಳ ಮೆರವಣಿಗೆಗಳು ದೇಶವು ಸಾಧಿಸಿದ ಆರ್ಥಿಕ ಅಭಿವೃದ್ಧಿ ಮತ್ತು ಅತ್ಯಾಧುನಿಕ ತಂತ್ರಜ್ಞಾನವನ್ನು ಪ್ರದರ್ಶಿಸುತ್ತವೆ. ಕಲಾವಿದರು ಅಭಿವೃದ್ಧಿ ಹೊಂದಿದ ಭಾರತದ ರೂಪಗಳನ್ನು ಅನಾವರಣಗೊಳಿಸಲಿದ್ದಾರೆ. ಕರ್ತವ್ಯಪಥದಲ್ಲಿ…

Read More

T20 World Cup: ಪಾಕ್ ವಿರುದ್ಧವೂ ಅಭಿಷೇಕ್ ಆಡಲ್ಲ: ಶಾಕಿಂಗ್ ಹೇಳಿಕೆ ನೀಡಿದ ಸೂರ್ಯ – Kannada News | Team India’s T20 World Cup Scare: Abhishek Sharma Doubtful for Pakistan Clash After Illness

ಇದರ ನಡುವೆ ಟಾಸ್ ಸಮಯದಲ್ಲಿ ಸೂರ್ಯ ನೀಡಿದ ಹೇಳಿಕೆ ಅಭಿಮಾನಿಗಳನ್ನು ಆತಂಕಗೊಳಿಸಿದೆ. ಅಷ್ಟಕ್ಕೂ ಸೂರ್ಯ ಹೇಳಿದ್ದೇನೆಂದರೆ, ಅನಾರೋಗ್ಯಕ್ಕೆ ತುತ್ತಾಗಿರುವ ಅಭಿಷೇಕ್ ಶರ್ಮಾ ನಮೀಬಿಯಾ ವಿರುದ್ಧ ಆಡುತ್ತಿಲ್ಲ, ಅವರು ಒಂದು ಅಥವಾ ಎರಡು ಪಂದ್ಯಗಳನ್ನು ತಪ್ಪಿಸಿಕೊಳ್ಳಬಹುದು ಎಂದರು. ಇದರರ್ಥ ಅಭಿಷೇಕ್ ಮುಂದಿನ ಪಂದ್ಯವನ್ನು ಆಡುವುದು ಅನುಮಾನವಾಗಿದೆ. Source link

Read More

ಮತ್ತೆ ವಿವಾದದಲ್ಲಿ ‘ಇಂಡಿಯಾಸ್ ಗಾಟ್ ಲೇಟೆಂಟ್ 2’; ಮತ್ತೆ ಬ್ಯಾನ್ ಭೀತಿ

ಖ್ಯಾತ ಸ್ಟ್ಯಾಂಡ್‌ಅಪ್ ಕಮಿಡಿಯನ್ ಸಮಯ್ ರೈನಾ ಸಾರಥ್ಯದ ‘ಇಂಡಿಯಾಸ್ ಗಾಟ್ ಲೇಟೆಂಟ್’ ಸೀಸನ್-2 ಭಾರಿ ನಿರೀಕ್ಷೆಯೊಂದಿಗೆ ನೆಟ್‌ಫ್ಲಿಕ್ಸ್ ಹಾಗೂ ಯೂಟ್ಯೂಬ್‌ನಲ್ಲಿ ಶನಿವಾರ ಪ್ರಸಾರ ಕಂಡಿದೆ. ಆದರೆ, ಮೊದಲ ಎಪಿಸೋಡ್ ರಿಲೀಸ್ ಆದ ಬೆನ್ನಲ್ಲೇ ಸೋಶಿಯಲ್ ಮೀಡಿಯಾದಲ್ಲಿ ಶೋ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ. ಆ ಒಂದು ಜೋಕ್ ವಿವಾದದ ಕಿಡಿ ಹೊತ್ತಿಸಿದೆ. ಮೊದಲ ಎಪಿಸೋಡ್‌ನಲ್ಲಿ ಬಾಲಿವುಡ್ ಸ್ಟಾರ್ ನಟಿಯರಾದ ಆಲಿಯಾ ಭಟ್ ಮತ್ತು ಶರ್ವರಿ ವಾಘ್ ಹಾಗೂ ಕಮಿಡಿಯನ್‌ಗಳಾದ ಆಶಿಶ್ ಸೋಲಂಕಿ ಮತ್ತು ಬಲರಾಜ್ ಘಾಯ್ ತೀರ್ಪುಗಾರರಾಗಿ…

Read More

ಜೈಲಿನಲ್ಲಿ ಜ್ಞಾನ ಜ್ಯೋತಿ: ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರ ಆರಂಭ! – Kannada News | Nation’s First: Parappana Agrahara Jail Launches Special Child Care Unit for Inmates’ Children

ಪರಪ್ಪನ ಅಗ್ರಹಾರದಲ್ಲಿ ದೇಶದ ಮೊದಲ ಶಿಶುಪಾಲನಾ ಕೇಂದ್ರ ಆರಂಭ! Image Credit source: The New Indian Express ಬೆಂಗಳೂರು, ಮೇ 07: ಪರಪ್ಪನ ಅಗ್ರಹಾರ (Parappana Agrahara) ತನ್ನಲ್ಲಿ ನಡೆಯುವ ಅಕ್ರಮಗಳ ಕಾರಣಕ್ಕೆ ಯಾವಗಲೂ ಸುದ್ದಿಯಲ್ಲಿರುತ್ತದೆ. ಈಗ ಮತ್ತೊಮ್ಮೆ ಕೇಂದ್ರ ಕಾರಾಗೃಹ ಸುದ್ದಿ ಮಾಡಿದೆ. ಆದರೆ ಅಲ್ಲಿ ನಡೆಯುವ ಅಕ್ರಮದಿಂದಲ್ಲ; ಬದಲಾಗಿ ದೇಶದ ಮೊದಲ ವಿಶೇಷ ಶಿಶುಪಾಲನಾ ಕೇಂದ್ರ ಆರಂಭಿಸುತ್ತಿರುವ ಕಾರಣದಿಂದಾಗಿ. ಹೌದು, ತಾಯಂದಿರು ಮಾಡಿದ ತಪ್ಪಿಗೆ ಶಿಕ್ಷೆ ಅನುಭವಿಸುವಾಗ, ಅವರನ್ನೇ ಅವಲಂಬಿಸಿರುವ ಹಸುಗೂಸುಗಳು ಮತ್ತು…

Read More

ಕೊಡಗು ಭೀಕರ ಪ್ರವಾಹ ಸಂತ್ರಸ್ತರಿಗೆ 7 ವರ್ಷಗಳಾದರೂ ಸಿಗದ ಪುನರ್ವಸತಿ ಆಸರೆ: ಮಳೆಗಾಲದಲ್ಲಿ ಪ್ರವಾಹದ ಭೀತಿ – Kannada News

ಪ್ಲಾಸ್ಟಿಕ್ ಶೀಟ್ ಹೊದಿಸಿದ ಶೆಡ್​​ನಲ್ಲಿ ಕೊಡಗು ಪ್ರವಾಹ ಸಂತ್ರಸ್ತರುImage Credit source: tv9 ಮಡಿಕೇರಿ, ಜೂನ್ 3: ಇನ್ನೇನು ಮಳೆಗಾಲ ಆರಂಭವಾಗುತ್ತಿದ್ದು ಕೊಡಗು (Kodagu) ಜಿಲ್ಲೆಯ ನಿವಾಸಿಗಳಲ್ಲಿ, ಅದರಲ್ಲೂ ಕುಶಾಲನಗರ ಭಾಗದಲ್ಲಿ ಜಲಪ್ರಳಯದ ಕರಾಳ ನೆನಪುಗಳು ಮತ್ತೆ ನಡುಕ ಹುಟ್ಟಿಸಿವೆ. ನದಿತೀರದ ಗ್ರಾಮಸ್ಥರಿಗೆ ವರ್ಷದ 365 ದಿನಗಳೂ ಕಾಡುಪ್ರಾಣಿಗಳ ಉಪಟಳ ಒಂದೆಡೆಯಾದರೆ, ಮುಂಗಾರು ಮಳೆ ಚುರುಕಾಗುತ್ತಿದ್ದಂತೆಯೇ ಉಕ್ಕಿ ಹರಿಯುವ ಕಾವೇರಿ ನದಿ ತಮ್ಮ ಬದುಕನ್ನು ಎಲ್ಲಿ ಕಸಿದುಕೊಳ್ಳುತ್ತದೋ ಎಂಬ ಜೀವಭಯ ಮತ್ತೊಂದೆಡೆ ಕಾಡುತ್ತಿದೆ. ಸುರಕ್ಷಿತ ಜಾಗದಲ್ಲಿ ಆಶ್ರಯ…

Read More

ಬೆಂಗಳೂರಿಗರೇ ಗಮನಿಸಿ: ಸಿಎಂ ಪದಗ್ರಹಣದ ಹಿನ್ನೆಲೆ ನಾಳೆ ನಗರದ ಈ ರಸ್ತೆಗಳ ಸಂಚಾರದಲ್ಲಿ ಮಾರ್ಪಾಡು – Kannada News

ಬೆಂಗಳೂರು, ಜೂನ್​​ 02: ಕರ್ನಾಟಕದ ನೂತನ ಸಿಎಂ ಆಗಿ ಡಿ.ಕೆ.ಶಿವಕುಮಾರ್ (DK Shivakumar)​​ ನಾಳೆ (ಜೂನ್​​ 03) ಲೋಕಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ದೇಶ ಹಾಗೂ ರಾಜ್ಯದ ಅತಿಗಣ್ಯವ್ಯಕ್ತಿಗಳು ಹಾಗೂ ಗಣ್ಯವ್ಯಕ್ತಿಗಳು ಭಾಗವಹಿಸಲಿದ್ದಾರೆ. ಲೋಕಭವನದಲ್ಲಿ ಪ್ರಮಾಣ ವಚನ ಕಾರ್ಯಕ್ರಮ ಹಾಗೂ ರೇಸ್‌ಕೋರ್ಸ್ ರಸ್ತೆಯ ಸಾರ್ವಜನಿಕ ಕಾರ್ಯಕ್ರಮದ ನಿಮಿತ್ತ ಹೆಚ್ಚಿನ ಸಂಚಾರ ದಟ್ಟಣೆಯಾಗುವ ಸಾಧ್ಯತೆ ಇದ್ದು, ಸಾರ್ವಜನಿಕರ ಸುಗಮ ಸಂಚಾರದ ಹಿತದೃಷ್ಟಿಯಿಂದ ಜೂನ್​​ 3ರ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 8ರ ವರೆಗೆ ಕೆಲ…

Read More