ಸರ್ ಶೂ ತೆಗೆಯಿರಿ, ನಾನು ಇದೇ ಕಾರಣಕ್ಕೆ ಬರುವುದಿಲ್ಲ: ಪೂಜೆ ವೇಳೆ ಪಾದರಕ್ಷೆ ಬಿಡಲು ವೈಷ್ಣೋದೇವಿ ಮಂಡಳಿ ಹೆಚ್ಚುವರಿ ಸಿಇಒ ನಿರಾಕರಣೆ!
ಜಮ್ಮು, ಏ.8 : ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್‌ನ (SMVDSB) ಹೆಚ್ಚುವರಿ ಸಿಇಒ (ACEO) ಅವರು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ನಡೆದುಕೊಂಡ ರೀತಿ ಈಗ ಭಾರಿ ವಿವಾದಕ್ಕೆ ಈಡಾಗಿದೆ. ಮಂಡಳಿಯ ಹೊಸ ಸ್ಮರಣಿಕೆ ಮಳಿಗೆಯ (Souvenir Shop) ಉದ್ಘಾಟನಾ ಸಮಾರಂಭದ ಪೂಜಾ ವಿಧಿವಿಧಾನಗಳ ವೇಳೆ ಪಾದರಕ್ಷೆಗಳನ್ನು ತೆಗೆಯಲು ಅಧಿಕಾರಿ ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಳಿಗೆಯ ಉದ್ಘಾಟನೆಗಾಗಿ ಅರ್ಚಕರು ಪೂಜೆ ನೆರವೇರಿಸುತ್ತಿದ್ದರು. ಈ ಸಂದರ್ಭದಲ್ಲಿ ಅಧಿಕಾರಿ ಶೂ ಧರಿಸಿಯೇ ಪೂಜೆಯಲ್ಲಿ ಭಾಗವಹಿಸಲು ಮುಂದಾಗಿದ್ದರು. ಇದನ್ನು ಗಮನಿಸಿದ ಪಂಡಿತರು…