RCBಯ ಪಂಚ ಬೌಲರ್​ಗಳೇ ವೈಭವ್​ ಸೂರ್ಯವಂಶಿಯ ಮುಂದಿನ ಟಾರ್ಗೆಟ್

RCBಯ ಪಂಚ ಬೌಲರ್​ಗಳೇ ವೈಭವ್​ ಸೂರ್ಯವಂಶಿಯ ಮುಂದಿನ ಟಾರ್ಗೆಟ್

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ 15 ವರ್ಷದ ಯುವ ದಾಂಡಿಗ ವೈಭವ್ ಸೂರ್ಯವಂಶಿ ದಿಗ್ಗಜ ಬೌಲರ್‌ಗಳ ನಿದ್ದೆಗೆಡಿಸುತ್ತಿದ್ದಾರೆ. ಇತ್ತೀಚೆಗೆ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ಜಸ್​ಪ್ರೀರ್ ಬುಮ್ರಾ ಅವರ ಓವರ್‌ನಲ್ಲಿ ಅಬ್ಬರಿಸಿದ್ದ ವೈಭವ್, ಈಗ ಏಪ್ರಿಲ್ 10 ರಂದು ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ವಿರುದ್ಧದ ಪಂದ್ಯಕ್ಕೆ ಭರ್ಜರಿ ತಯಾರಿ ನಡೆಸುತ್ತಿದ್ದಾರೆ.

ಬುಮ್ರಾ ವಿರುದ್ಧ ‘ಬಿರುಗಾಳಿ’!

ಮುಂಬೈ ಇಂಡಿಯನ್ಸ್ ವಿರುದ್ಧದ ಮಳೆಬಾಧಿತ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ತೋರಿದ ಆಟ ಅಪ್ರತಿಮವಾಗಿತ್ತು. ವಿಶ್ವದ ಶ್ರೇಷ್ಠ ಬೌಲರ್ ಎನಿಸಿಕೊಂಡಿರುವ ಜಸ್​ಪ್ರೀತ್ ಬುಮ್ರಾ ಅವರ ಎಸೆತವನ್ನೇ ವೈಭವ್ ಸಿಕ್ಸರ್‌ಗೆ ಅಟ್ಟುವ ಮೂಲಕ ಇನ್ನಿಂಗ್ಸ್ ಆರಂಭಿಸಿದರು. ಅಲ್ಲದೆ ಬುಮ್ರಾ ಅವರ 5 ಎಸೆತಗಳಲ್ಲಿ ಬರೋಬ್ಬರಿ 13 ರನ್ ಕಲೆಹಾಕಿದರು.

ಇತ್ತ ಬುಮ್ರಾ ವಿರುದ್ಧ ಅಬ್ಬರಿಸುವ ಮೂಲಕ ವೈಭವ್ ಸೂರ್ಯವಂಶಿ 14 ಎಸೆತಗಳಲ್ಲಿ 39 ರನ್ ಬಾರಿಸಿದ್ದರು. ಈ ಪ್ರಚಂಡ ಬ್ಯಾಟಿಂಗ್​ನೊಂದಿಗೆ ವೈಭವ್ ಮುಂದಿನ ಟಾರ್ಗೆಟ್​ಗಾಗಿ ಸಜ್ಜಾಗಿದ್ದಾರೆ.

‘ಪಂಚ’ ಟಾರ್ಗೆಟ್!

ಮುಂದಿನ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿರುವ ವೈಭವ್ ಸೂರ್ಯವಂಶಿ, ಐವರು ಪ್ರಮುಖ ಬೌಲರ್‌ಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ವಿಶೇಷವಾಗಿ ಕಳೆದ ಸೀಸನ್‌ನಲ್ಲಿ ತಮಗೆ ಕಾಡಿದ್ದ ಭುವನೇಶ್ವರ್ ಕುಮಾರ್ ವಿರುದ್ಧ ಸೇಡು ತೀರಿಸಿಕೊಳ್ಳಲು ಸಜ್ಜಾಗಿದ್ದಾರೆ.

  • ಭುವನೇಶ್ವರ್ ಕುಮಾರ್: ಕಳೆದ ಬಾರಿಯ ಐಪಿಎಲ್​ನಲ್ಲಿ ವೈಭವ್ ಸೂರ್ಯವಂಶಿ ಅವರನ್ನು 16 ರನ್‌ಗಳಿಗೆ ಔಟ್ ಮಾಡಿದ್ದ ಭುವನೇಶ್ವರ್ ಕುಮಾರ್ ವಿರುದ್ಧ ಈ ಬಾರಿ ಗುವಾಹಟಿಯ ತವರು ನೆಲದಲ್ಲಿ ಅಬ್ಬರಿಸುವ ಗುರಿ ಹೊಂದಿದ್ದಾರೆ.
  • ಕೃನಾಲ್ ಪಾಂಡ್ಯ: ಸ್ಪಿನ್ ಬಲೆ ಹೆಣೆಯುವ ಕೃನಾಲ್ ವಿರುದ್ಧ ದೊಡ್ಡ ಹೊಡೆತಗಳಿಗೆ ವೈಭವ್ ತಯಾರಿ ನಡೆಸಿದ್ದಾರೆ ಎಂಬುದನ್ನು ಕೋಚ್ ಬಹಿರಂಗಪಡಿಸಿದ್ದಾರೆ.
  • ಜೇಕಬ್ ಡಫಿ: ಆರ್‌ಸಿಬಿಯ ವಿದೇಶಿ ವೇಗಿಯ ವೇಗವನ್ನು ಎದುರಿಸಲು ವೈಭವ್ ಸಿದ್ಧರಾಗಿದ್ದಾರೆ.
  • ಅಭಿನಂದನ್ ಸಿಂಗ್: ಉದಯೋನ್ಮುಖ ವೇಗಿಯ ಬೌಲಿಂಗ್‌ನಲ್ಲಿ ರನ್ ಕದಿಯುವ ತಂತ್ರ ರೂಪಿಸಿದ್ದಾರೆ.
  • ಸುಯಶ್ ಶರ್ಮಾ: ಗೂಗ್ಲಿ ಸ್ಪಿನ್ನರ್ ಸುಯಶ್ ಶರ್ಮಾ ಅವರ ಸ್ಪಿನ್ ದಾಳಿ ಎದುರಿಸಲು ನೆಟ್ಸ್‌ನಲ್ಲಿ ಯುವ ದಾಂಡಿಗ ಕಠಿಣ ಅಭ್ಯಾಸ ನಡೆಸುತ್ತಿದ್ದಾರೆ.

ಇದನ್ನೂ ಓದಿ: ಜಸ್​ಪ್ರೀತ್ ಬುಮ್ರಾ ವಿರುದ್ಧ ಅತ್ಯಧಿಕ ಸಿಕ್ಸ್ ಸಿಡಿಸಿದ ಬ್ಯಾಟರ್ ಯಾರು ಗೊತ್ತಾ?

ಈಗಾಗಲೇ ಜಸ್​ಪ್ರೀತ್ ಬುಮ್ರಾ ಮುಖಾಮುಖಿಯಲ್ಲಿ ಯಶಸ್ವಿಯಾಗಿ ವೈಭವ್ ಸೂರ್ಯವಂಶಿ, ಸ್ವಿಂಗ್ ಮಾಂತ್ರಿಕ ಭುವನೇಶ್ವರ್ ಕುಮಾರ್ ಅವರನ್ನು ಯಾವ ರೀತಿ ಎದುರಿಸಲಿದ್ದಾರೆ ಎಂಬುದೇ ಈಗ ಎಲ್ಲರ ಕುತೂಹಲ. ಅದರಲ್ಲೂ ಕಳೆದ ಸೀಸನ್​ನಲ್ಲಿ ಭುವಿ ಎಸೆತಕ್ಕೆ ಔಟಾಗಿರುವ ಕಾರಣ ಈ ಬಾರಿ ಲೆಕ್ಕ ಚುಕ್ತಾ ಮಾಡುವ ಇರಾದೆಯಲ್ಲಿದ್ದಾರೆ ಯುವ ದಾಂಡಿಗ. ಹೀಗಾಗಿ ಏಪ್ರಿಲ್ 10 ರಂದು ನಡೆಯಲಿರುವ ಆರ್​ಸಿಬಿ ಮತ್ತು ಆರ್​ಆರ್ ನಡುವಣ ಪಂದ್ಯದಲ್ಲಿ ವೈಭವ್ vs ಭುವಿ ಪೈಪೋಟಿಯನ್ನು ನಿರೀಕ್ಷಿಸಬಹುದು.

 

 

Source link

ಊಬರ್ ಕಂಪನಿ ಚಾಲಕರಿಗೆ ಮಾಡೋ ಮೋಸ ಎಂಥದ್ದು ಅಂತ ಬಿಚ್ಚಿಟ್ಟ ಚಾಲಕರು!

ಬೆಂಗಳೂರು, ಏಪ್ರಿಲ್ 08: ಬೊಮ್ಮನಹಳ್ಳಿಯ ಊಬರ್ ಕಚೇರಿ ಮುಂದೆ ಚಾಲಕರು ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಊಬರ್ ಕಂಪನಿಯಿಂದ ತಮಗೆ ಆಗುತ್ತಿರುವ ಅನ್ಯಾಯ ಮತ್ತು ಶೋಷಣೆಯನ್ನು ಖಂಡಿಸಿ, ಚಾಲಕರು ಮನವಿ ಸಲ್ಲಿಸಿದ್ದಾರೆ. ಸರ್ಕಾರ ನಿಗದಿಪಡಿಸಿದ ದರಗಳನ್ನು ಊಬರ್ ನೀಡುತ್ತಿಲ್ಲ ಎಂದು ಆರೋಪಿಸಿದ್ದಾರೆ. ವಿಶೇಷವಾಗಿ, ನಾನ್-ಪೀಕ್ ಅವರ್‌ಗಳಲ್ಲಿ ಸಿಗುವ ದರ ಅತ್ಯಂತ ಕಡಿಮೆಯಾಗಿದ್ದು, ಒಂದು ಟ್ರಿಪ್‌ಗೆ ಕೇವಲ 8 ರಿಂದ 15 ರೂಪಾಯಿ ಮಾತ್ರ ಸಿಗುತ್ತಿದೆ ಎಂದು ಚಾಲಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಎಲ್‌ಪಿಜಿ ಮತ್ತು ಸಿಎನ್‌ಜಿ ಇಂಧನ ಬೆಲೆಗಳು ಗಣನೀಯವಾಗಿ ಹೆಚ್ಚಾಗಿದ್ದರೂ, ಊಬರ್ ದರಗಳನ್ನು ಹೆಚ್ಚಿಸದೆ, ಬದಲಿಗೆ ಕಡಿಮೆ ಮಾಡಿರುವುದು ಚಾಲಕರ ಆಕ್ರೋಶಕ್ಕೆ ಕಾರಣವಾಗಿದೆ. ತಮ್ಮ ಬೇಡಿಕೆಗಳು ಈಡೇರದಿದ್ದರೆ ಮುಂದಿನ ದಿನಗಳಲ್ಲಿ ದೊಡ್ಡ ಮಟ್ಟದ ಹೋರಾಟ ನಡೆಸುವುದಾಗಿ ಚಾಲಕರು ಎಚ್ಚರಿಕೆ ನೀಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ರೈಲಿನಲ್ಲಿ ಹಣಕ್ಕಾಗಿ ಪಟ್ಟು: ಪ್ರಯಾಣಿಕರೆದುರೇ ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ ಟ್ರಾನ್ಸ್‌ಜೆಂಡರ್

ರೈಲಿನಲ್ಲಿ ಪ್ರಯಾಣಿಸುವಾಗ ಅದರಲ್ಲೂ ಉತ್ತರ ಭಾರತದ ರೈಲುಗಳಲ್ಲಿ ಮಂಗಳಮುಖಿಯರ ಸಂಖ್ಯೆ ಹೆಚ್ಚಿರುತ್ತದೆ. ಹಣ ಕೇಳುತ್ತಾರೆ, ಕೊಟ್ಟರೆ ಆಶೀರ್ವಾದ ಮಾಡುತ್ತಾರೆ, ಕೊಡದಿದ್ದರೆ ಏನೋ ಬೈದು ಶಾಪ ಹಾಕುತ್ತಾ ಹೋಗುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಇವರ ವರ್ತನೆ ಮಿತಿ ಮೀರಿದೆ, ಹಣ ಕೊಡದಿದ್ದರೆ ಹೊಡೆಯುವುದು, ಅನುಚಿತವಾಗಿ ವರ್ತಿಸುವ ಹಲವು ವಿಡಿಯೋಗಳು ವೈರಲ್ ಆಗಿವೆ. ಅಂಥದ್ದೇ ವಿಡಿಯೋವೊಂದರಲ್ಲಿ ಮಂಗಳಮುಖಿಯೊಬ್ಬರು ಹಣ ಕೇಳಿದಾಗ ಪ್ರಯಾಣಿಕ ಹಣ ಕೊಡದಿದ್ದಕ್ಕೆ ಪ್ರಯಾಣಿಕರೆದುರೇ ಬಟ್ಟೆ ಬಿಚ್ಚಿ ಕೆಟ್ಟದಾಗಿ ವರ್ತಿಸಿದ್ದು, ಎಲ್ಲರಿಗೂ ಮುಜುಗರ ತಂದಿತ್ತು.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಯುಎಇಗೆ ಸಾಲ ವಾಪಸ್ ಕೊಟ್ಟರೆ ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿ ಏನಾಗಬಹುದು? ಇಲ್ಲಿದೆ ಇಂಟರೆಸ್ಟಿಂಗ್ ಲೆಕ್ಕಾಚಾರ

ನವದೆಹಲಿ, ಏಪ್ರಿಲ್ 8: ತಾನು ನೀಡಿರುವ ಸಾಲವನ್ನು ವಾಪಸ್ ಮಾಡುವಂತೆ ಪಾಕಿಸ್ತಾನಕ್ಕೆ ಯುಎಇ ಕೇಳಿದೆ. ಸಾಲಗಳನ್ನು ಪಡೆದು ವಾಪಸ್ ಮಾಡದೇ ಹಾಗೇ ಉಳಿಸಿಕೊಂಡು ಹೋಗಿ ಅಭ್ಯಾಸಗೊಂಡಿರುವ ಪಾಕಿಸ್ತಾನಕ್ಕೆ (Pakistan) ಈಗ ಒತ್ತಡ ಶುರುವಾಗತೊಡಗಿದೆ. ಯುಎಇ ದೇಶಕ್ಕೆ ಭಿಕ್ಷೆ ಹಾಕುತ್ತಿದ್ದೇವೆ ಎಂಬಂತೆ ಪಾಕಿಸ್ತಾನದ ಕೆಲ ರಾಜಕಾರಣಿಗಳು ಕಿಚಾಯಿಸತೊಡಗಿದ್ದಾರೆ. ಸಾಲದ ಒತ್ತಡವು ಪಾಕಿಸ್ತಾನೀಯರ ಈ ವರ್ತನೆಗೆ ಕಾರಣವಾಗಿರಬಹುದು.

ಪಾಕಿಸ್ತಾನಕ್ಕೆ ಯುಎಇ ನೀಡಿದ ಸಾಲದಲ್ಲಿ ಒಂದು ಭಾಗವನ್ನು ವಾಪಸ್ ಮಾಡುವಂತೆ ಕೇಳಲಾಗಿದೆ. ಮೂರು ಕಂತುಗಳಲ್ಲಿ ಪಾಕಿಸ್ತಾನ ಕಟ್ಟಬೇಕು. ಏಪ್ರಿಲ್ 11ರಂದು 450 ಮಿಲಿಯನ್ ಡಾಲರ್, ಏಪ್ರಿಲ್ 17ರಂದು 2 ಬಿಲಿಯನ್ ಡಾಲರ್, ಹಾಗು ಎಪ್ರಿಲ್ 23ರಂದು 1 ಬಿಲಿಯನ್ ಡಾಲರ್ ಹಣವನ್ನು ಯುಎಇಗೆ ಪಾಕಿಸ್ತಾನ ನೀಡಬೇಕಾಗಿದೆ.

ಇದನ್ನೂ ಓದಿ: ಕದನವಿರಾಮ ಬೆನ್ನಲ್ಲೇ ತೈಲ ಬೆಲೆ ಐತಿಹಾಸಿಕ ಕುಸಿತ; ಪೆಟ್ರೋಲ್, ಡೀಸಲ್ ಬೆಲೆಯೂ ಇಳಿಯುತ್ತಾ?

ಇದಷ್ಟೇ ಅಲ್ಲ, ಸೌದಿ ಅರೇಬಿಯಾ ಹಾಗು ಚೀನಾ ದೇಶಗಳು ಕೂಡ ತಮ್ಮ ಕೆಲ ಸಾಲಗಳನ್ನು ಮರಳಿಸಬೇಕೆಂದು ಪಾಕಿಸ್ತಾನಕ್ಕೆ ತಿಳಿಸುವ ಸಾಧ್ಯತೆ ಇದೆ ಎಂಬುದು ಕುತೂಹಲದ ಸಂಗತಿ. ಸಾಮಾನ್ಯವಾಗಿ ಸಾಲ ಪಡೆದಾಗ ಅದರ ನಿರ್ದಿಷ್ಟ ಅವಧಿಗಳಲ್ಲಿ ಕಂತುಗಳ ರೂಪದಲ್ಲಿ ಮರುಪಾತಿಸುವ ಅವಕಾಶ ಇರುತ್ತದೆ. ಪಾಕಿಸ್ತಾನವು ಬಡ್ಡಿ ಮಾತ್ರವೇ ಕಟ್ಟುತ್ತಾ, ಅಸಲು ಹಣದ ಪಾವತಿಯನ್ನು ಮುಂದಕ್ಕೆ ಹಾಕುತ್ತಾ ಬಂದಿತ್ತು. ಈಗ ಕೆಲ ದೇಶಗಳು ಸಾಲದ ಹಣ ವಾಪಸ್ ಕೇಳಲು ತೊಡಗಿವೆ. ಪಾಕಿಸ್ತಾನದ ಸಾಲದಲ್ಲಿ ಅತಿಹೆಚ್ಚು ಬಂದಿರುವುದು ಚೀನಾದಿಂದ. ಒಂದು ವೇಳೆ ಚೀನಾದವರು ಖಡಕ್ ಆಗಿ ಸಾಲ ಮರಳಿಸುವಂತೆ ಕೇಳಿದರೆ ಪಾಕಿಸ್ತಾನ ಅತೀವ ಒತ್ತಡಕ್ಕೆ ಒಳಗಾಗಬಹುದು.

ಪಾಕಿಸ್ತಾನದ ಬಜೆಟ್ ಪರಿಪಾಟಲು

  • ಪಾಕಿಸ್ತಾನದ ಕೇಂದ್ರ ಸರ್ಕಾರದ ಒಟ್ಟಾರೆ ಆದಾಯ 11,072 ಕೋಟಿ ಪಿಕೆಆರ್ ಇದೆ (ಪಾಕಿಸ್ತಾನೀ ರುಪಾಯಿ).
  • ಬಜೆಟ್​ನಲ್ಲಿ ವೆಚ್ಚ ಮಾಡಲು ನಿಗದಿಯಾಗಿರುವ ಹಣ: 16,286 ಕೋಟಿ ಪಿಕೆಆರ್
  • ಸಾಲ ಮರುಪಾವತಿಸಬೇಕಿರುವುದು: 8,200 ಕೋಟಿ ಪಿಕೆಆರ್
  • ಡಿಫೆನ್ಸ್ ಬಜೆಟ್: 2,558 ಕೋಟಿ ಪಿಕೆಆರ್
  • ಅಭಿವೃದ್ಧಿ ವೆಚ್ಚ: 1,775 ಕೋಟಿ ಪಿಕೆಆರ್

ಇಲ್ಲಿ ಪಾಕಿಸ್ತಾನದ ಅರ್ಧದಷ್ಟು ಬಜೆಟ್ ಹಣವು ಬಡ್ಡಿ ಮರುಪಾವತಿಸಲೇ ವ್ಯಯವಾಗಿ ಹೋಗುತ್ತದೆ. ಈಗ ಯುಎಇಯ ಸಾಲ ವಾಪಸ್ ಮಾಡಿದರೆ ಅಭಿವೃದ್ಧಿ ವೆಚ್ಚಕ್ಕೆಂದು ಮೀಸಲಿರುವ ಹಣಕ್ಕೆ ಕತ್ತರಿ ಹಾಕಬೇಕಾಗುತ್ತದೆ.

ಇದನ್ನೂ ಓದಿ: ಯುದ್ಧ ಅಂತ್ಯವಾಗಿಲ್ಲ, ಕದನ ವಿರಾಮವಷ್ಟೇ: ಮೊಜ್ತಬಾ ಖಮೇನಿ

ಪಾಕಿಸ್ತಾನದ ಹಣದುಬ್ಬರ ಹೆಚ್ಚುತ್ತದೆ

ಪಾಕಿಸ್ತಾನವು ಯುಎಇ ಹಣವನ್ನು ಮರಳಿಸಿದರೆ ಈ ಕೆಳಗಿನ ಸಂಭಾವ್ಯ ಪರಿಣಾಮಗಳಾಗಬಹುದು:

  • ಪಾಕಿಸ್ತಾನದ ಸೆಂಟ್ರಲ್ ಬ್ಯಾಂಕ್​ನ ರಿಸರ್ವ್ಸ್ ಕುಸಿಯಬಹುದು
  • ಪಾಕಿಸ್ತಾನದ ರುಪಾಯಿ ಮತ್ತಷ್ಟು ಕುಸಿಯಬಹುದು
  • ತೈಲ, ಅನಿಲ, ರಸಗೊಬ್ಬರ ಆಮದು ವೆಚ್ಚ ಹೆಚ್ಚಬಹುದು
  • ಸರ್ಕಾರ ಪೆಟ್ರೋಲ್, ವಿದ್ಯುತ್ ಬೆಲೆ ಏರಿಸಬಹುದು, ಟ್ಯಾಕ್ಸ್ ಹೆಚ್ಚಿಸಬಹುದು
  • ಸಾರಿಗೆ, ಆಹಾರ ಹಾಗೂ ದಿನಸಿ ವಸ್ತುಗಳ ಬೆಲೆ ಹೆಚ್ಚಬಹುದು.
  • ಹಣದುಬ್ಬರ ಏರಿಕೆ ಆಗಬಹುದು.

ಪಾಕಿಸ್ತಾನ ಸರ್ಕಾರ ಯುಎಐ ಹಣವನ್ನು ಸರಿದೂಗಿಸಲು ಏನೇ ಕ್ರಮ ತೆಗೆದುಕೊಂಡರೂ ಅದರ ಪರಿಣಾಮ ಆರ್ಥಿಕತೆಯ ಮೇಲೆ ಉಂಟಾಗಬಲ್ಲುದು. ಅಭಿವೃದ್ಧಿ ಕಾರ್ಯಗಳಿಗೆ ಕತ್ತರಿ ಹಾಕಿದರೆ ಉದ್ಯೋಗಸೃಷ್ಟಿ ಕಡಿಮೆಗೊಳ್ಳಬಹುದು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ದಾವಣಗೆರೆ: ಮತದಾನಕ್ಕೆ ಸಿದ್ಧತೆ ಜೋರು, ಮತಗಟ್ಟೆಗೆ ಬಂದ ಚುನಾವಣಾ ಸಿಬ್ಬಂದಿಗೆ ಸ್ಥಳದಲ್ಲೇ ಹೆಲ್ತ್ ಚೆಕಪ್

ದಾವಣಗೆರೆ, ಏಪ್ರಿಲ್ 8: ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಗೆ ಅಂತಿಮ ಸಿದ್ಧತೆಗಳು ಭರದಿಂದ ಸಾಗಿವೆ. ಈ ಚುನಾವಣೆಯಲ್ಲಿ ಭಾಗವಹಿಸುವ 1430 ಮಂದಿ ಚುನಾವಣಾ ಸಿಬ್ಬಂದಿಗಳ ಆರೋಗ್ಯ ಸುರಕ್ಷತೆಗೆ ಜಿಲ್ಲಾಡಳಿತ ವಿಶೇಷ ಗಮನ ಹರಿಸಿದೆ. ಹೃದಯಾಘಾತ, ರಕ್ತದೊತ್ತಡದಂತಹ ಸಮಸ್ಯೆಗಳಿಂದ ಬಳಲುತ್ತಿರುವ ಸಿಬ್ಬಂದಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಳ್ಳಲು ಮತಗಟ್ಟೆಗಳಲ್ಲೇ ವೈದ್ಯಾಧಿಕಾರಿಗಳನ್ನು ನಿಯೋಜಿಸಲಾಗಿದೆ. ಅವರಿಗೆ ಪ್ರಾಥಮಿಕ ಚಿಕಿತ್ಸೆ ಮತ್ತು ಆರೋಗ್ಯ ತಪಾಸಣೆಯ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಮತದಾನವನ್ನು ಹೆಚ್ಚಿಸುವ ಉದ್ದೇಶದಿಂದ ಹಿರಿಯ ನಾಗರಿಕರು, ಅಂಗವಿಕಲರು ಮತ್ತು ಆರೋಗ್ಯ ಸಮಸ್ಯೆಗಳಿಂದ ಮತಗಟ್ಟೆಗೆ ಬರಲು ಕಷ್ಟಪಡುವ ಮತದಾರರಿಗಾಗಿ ಜಿಲ್ಲಾಡಳಿತವು ಉಚಿತ ವಾಹನ ಸೌಲಭ್ಯವನ್ನು ಒದಗಿಸಿದೆ. ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮತದಾನ ನಡೆಯಲಿದ್ದು, ಎಲ್ಲರೂ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಮನವಿ ಮಾಡಲಾಗಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Maa Bagdahi Temple: ಬಡ ಕುರುಬನ ಭಕ್ತಿಗೆ ಒಲಿದ ದೇವಿ; ಕಲ್ಲುಗಳನ್ನೇ ಕಾಣಿಕೆಯಾಗಿ ಪಡೆಯುವ ವಿಶಿಷ್ಟ ಶಕ್ತಿ ಪೀಠ

ಭಾರತದಾದ್ಯಂತ ಇರುವ ಶಕ್ತಿ ಪೀಠಗಳಲ್ಲಿ ದೇವಿಗೆ ರೇಷ್ಮೆ ಸೀರೆ, ಬಂಗಾರ, ಹಣ್ಣು-ಹಂಪಲು ಅಥವಾ ವೈಭವದ ನೈವೇದ್ಯಗಳನ್ನು ಅರ್ಪಿಸುವುದು ಸಾಮಾನ್ಯ. ಆದರೆ ಛತ್ತೀಸ್‌ಗಢದ ಬಿಲಾಸ್‌ಪುರ ಜಿಲ್ಲೆಯ ಅರಣ್ಯದ ನಡುವೆ ನೆಲೆಸಿರುವ ‘ಮಾ ಬಾಗದಾಯಿ’ ದೇವಾಲಯವು ಈ ಎಲ್ಲಾ ಸಂಪ್ರದಾಯಗಳಿಗಿಂತ ಭಿನ್ನವಾಗಿದೆ. ಇಲ್ಲಿ ಭಕ್ತರು ದೇವಿಗೆ ಅರ್ಪಿಸುವುದು ಕೇವಲ ಐದು ಕಲ್ಲುಗಳು ಮತ್ತು ಒಂದು ಹೂವು!

ಕಲ್ಲುಗಳ ಅರ್ಪಣೆಯ ಹಿಂದಿರುವ ‘ಕುರುಬ ಭಕ್ತಿ’ಯ ಕಥೆ:

ಶತಮಾನಗಳಷ್ಟು ಹಳೆಯದಾದ ಈ ವಿಶಿಷ್ಟ ಆಚರಣೆಯ ಹಿಂದೆ ಹೃದಯಸ್ಪರ್ಶಿ ಕಥೆಯೊಂದಿದೆ. ಜನಪದರ ನಂಬಿಕೆಯಂತೆ, ಸುಮಾರು ನೂರು ವರ್ಷಗಳ ಹಿಂದೆ ಒಬ್ಬ ಬಡ ಕುರುಬನು ಕಾಡಿನಲ್ಲಿ ದೇವಿಯ ಜೀವಂತ ಪ್ರತಿಮೆಯನ್ನು ಕಂಡುಕೊಂಡನು. ಅಂದೇ ದೇವಿಯು ಅವನ ಕನಸಿನಲ್ಲಿ ಬಂದು ತನ್ನನ್ನು ಅಲ್ಲಿಯೇ ಪ್ರತಿಷ್ಠಾಪಿಸುವಂತೆ ಸೂಚಿಸಿದಳು.

ದೇವಿಯ ಆಜ್ಞೆಯಂತೆ ಕುರುಬನು ಸಣ್ಣ ಗುಡಿಯನ್ನೇನೋ ನಿರ್ಮಿಸಿದ, ಆದರೆ ದೇವಿಗೆ ಅರ್ಪಿಸಲು ಅವನ ಬಳಿ ತೆಂಗಿನಕಾಯಿ ಅಥವಾ ಬೆಲೆಬಾಳುವ ಯಾವುದೇ ವಸ್ತುಗಳಿರಲಿಲ್ಲ. ತನ್ನ ಬಡತನಕ್ಕೆ ನೊಂದು ಕಣ್ಣೀರಿಟ್ಟ ಭಕ್ತನಿಗೆ ದೇವಿಯು ಮತ್ತೆ ದರ್ಶನ ನೀಡಿ ಹೀಗೆಂದಳಂತೆ: “ಮಗನೇ, ನನಗೆ ನಿನ್ನ ಆಡಂಬರ ಬೇಕಾಗಿಲ್ಲ, ನಿನ್ನ ನಿಷ್ಕಲ್ಮಶ ಪ್ರೀತಿ ಸಾಕು. ಇಲ್ಲಿ ಬಿದ್ದಿರುವ ಐದು ಕಲ್ಲುಗಳನ್ನೇ ನನಗೆ ಪ್ರೀತಿಯಿಂದ ಅರ್ಪಿಸು.” ಅಂದಿನಿಂದ ಇಂದಿನವರೆಗೆ, ಈ ದೇವಾಲಯದಲ್ಲಿ ಕಲ್ಲುಗಳೇ ಮಹಾಪ್ರಸಾದ.

ಇದನ್ನೂ ಓದಿ: ಮುಯ್ಯಿ ರೂಪದಲ್ಲಿ ಕೊಡುವ ಹಣಕ್ಕೆ 1ರೂ. ಸೇರಿಸಿ ಕೊಡಬೇಕು ಯಾಕೆ ಗೊತ್ತಾ?

ಹರಕೆ ತೀರಿಸುವ ವಿಶಿಷ್ಟ ಪದ್ಧತಿ:

ಈ ದೇವಾಲಯಕ್ಕೆ ಬರುವ ಭಕ್ತರು ತಮ್ಮ ಮನದ ಇಚ್ಛೆಯನ್ನು ದೇವಿಯ ಮುಂದೆ ತೋಡಿಕೊಳ್ಳುವಾಗ ಐದು ಕಲ್ಲುಗಳು ಮತ್ತು ಒಂದು ಹೂವನ್ನು ಪೂರ್ಣ ಹೃದಯದಿಂದ ಅರ್ಪಿಸುತ್ತಾರೆ. ಭಕ್ತರ ಆಸೆ ಈಡೇರಿದಾಗ, ಅವರು ಮತ್ತೆ ದೇವಾಲಯಕ್ಕೆ ಬಂದು ಕೃತಜ್ಞತೆಯ ಸಂಕೇತವಾಗಿ ಪುನಃ ಐದು ಕಲ್ಲುಗಳನ್ನು ದೇವಿಯ ಪಾದಕ್ಕೆ ಅರ್ಪಿಸುತ್ತಾರೆ. ಹೀಗೆ ಮಾಡುವುದರಿಂದ ದುಷ್ಟ ಶಕ್ತಿಗಳ ಪ್ರಭಾವ ಕಡಿಮೆಯಾಗಿ, ಜೀವನದಲ್ಲಿ ಸುಖ-ಶಾಂತಿ ನೆಲೆಸುತ್ತದೆ ಎಂಬುದು ಭಕ್ತರ ಗಾಢ ನಂಬಿಕೆ.

ಪ್ರಕೃತಿ ಮತ್ತು ಆಧ್ಯಾತ್ಮದ ಸಮಾಗಮ, ನವರಾತ್ರಿ ಜಾತ್ರೆ:

ಪ್ರತಿ ವರ್ಷ ಚೈತ್ರ ಮತ್ತು ಶರದೃತ ನವರಾತ್ರಿಯ ಸಮಯದಲ್ಲಿ ಮಾ ಬಾಗದಾಯಿ ದೇವಾಲಯವು ಭಕ್ತ ಸಾಗರದಿಂದ ತುಂಬಿರುತ್ತದೆ. ಒಂಬತ್ತು ದಿನಗಳ ಕಾಲ ದೇವಿಯನ್ನು ಅತ್ಯಂತ ಸುಂದರವಾಗಿ ಅಲಂಕರಿಸಲಾಗುತ್ತದೆ. ದಟ್ಟವಾದ ಕಾಡಿನ ಮಧ್ಯೆ ನಡೆಯುವ ಈ ಜಾತ್ರೆಯು ಪ್ರಕೃತಿಯ ಸೌಂದರ್ಯದೊಂದಿಗೆ ಆಧ್ಯಾತ್ಮಿಕತೆಯ ಅದ್ಭುತ ಅನುಭವವನ್ನು ನೀಡುತ್ತದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸರ್​​​ ಶೂ ತೆಗೆಯಿರಿ, ನಾನು ಇದೇ ಕಾರಣಕ್ಕೆ ಬರುವುದಿಲ್ಲ: ಪೂಜೆ ವೇಳೆ ಪಾದರಕ್ಷೆ ಬಿಡಲು ವೈಷ್ಣೋದೇವಿ ಮಂಡಳಿ ಹೆಚ್ಚುವರಿ ಸಿಇಒ ನಿರಾಕರಣೆ!

ಜಮ್ಮು, ಏ.8 : ಶ್ರೀ ಮಾತಾ ವೈಷ್ಣೋದೇವಿ ಶ್ರೈನ್ ಬೋರ್ಡ್‌ನ (SMVDSB) ಹೆಚ್ಚುವರಿ ಸಿಇಒ (ACEO) ಅವರು ಧಾರ್ಮಿಕ ಕಾರ್ಯಕ್ರಮವೊಂದರಲ್ಲಿ ನಡೆದುಕೊಂಡ ರೀತಿ ಈಗ ಭಾರಿ ವಿವಾದಕ್ಕೆ ಈಡಾಗಿದೆ. ಮಂಡಳಿಯ ಹೊಸ ಸ್ಮರಣಿಕೆ ಮಳಿಗೆಯ (Souvenir Shop) ಉದ್ಘಾಟನಾ ಸಮಾರಂಭದ ಪೂಜಾ ವಿಧಿವಿಧಾನಗಳ ವೇಳೆ ಪಾದರಕ್ಷೆಗಳನ್ನು ತೆಗೆಯಲು ಅಧಿಕಾರಿ ನಿರಾಕರಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಮಳಿಗೆಯ ಉದ್ಘಾಟನೆಗಾಗಿ ಅರ್ಚಕರು ಪೂಜೆ ನೆರವೇರಿಸುತ್ತಿದ್ದರು. ಈ ಸಂದರ್ಭದಲ್ಲಿ ಅಧಿಕಾರಿ ಶೂ ಧರಿಸಿಯೇ ಪೂಜೆಯಲ್ಲಿ ಭಾಗವಹಿಸಲು ಮುಂದಾಗಿದ್ದರು. ಇದನ್ನು ಗಮನಿಸಿದ ಪಂಡಿತರು (ಅರ್ಚಕರು), ಧಾರ್ಮಿಕ ನಿಯಮದಂತೆ ಪಾದರಕ್ಷೆಗಳನ್ನು ಹೊರಗೆ ಬಿಟ್ಟು ಬರುವಂತೆ ವಿನಂತಿಸಿದರು. ಆದರೆ, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಧಿಕಾರಿ, ತಾವು ಪಾದರಕ್ಷೆ ಬಿಡುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ ಎನ್ನಲಾಗಿದೆ. ಅಷ್ಟೇ ಅಲ್ಲದೆ, “ಇದೇ ಕಾರಣಕ್ಕೆ ನಾನು ಇಂತಹ ಧಾರ್ಮಿಕ ವಿಧಿವಿಧಾನಗಳಲ್ಲಿ ಭಾಗವಹಿಸಲು ಬರುವುದಿಲ್ಲ” ಎಂದು ಬಹಿರಂಗವಾಗಿಯೇ ಹೇಳಿಕೆ ನೀಡಿದ್ದಾರೆ ಎಂದು ವರದಿಯಾಗಿದೆ. ಲಕ್ಷಾಂತರ ಭಕ್ತರ ಆರಾಧ್ಯ ದೈವವಾಗಿರುವ ವೈಷ್ಣೋದೇವಿ ಮಂಡಳಿಯಲ್ಲೇ ಉನ್ನತ ಹುದ್ದೆಯಲ್ಲಿರುವ ಅಧಿಕಾರಿಯೊಬ್ಬರು ಧಾರ್ಮಿಕ ನಂಬಿಕೆಗಳಿಗೆ ಗೌರವ ನೀಡದಿರುವುದು ಶೋಚನೀಯ ಎಂದು ನೆಟ್ಟಿಗರು ಟೀಕಿಸುತ್ತಿದ್ದಾರೆ. “ಭಕ್ತಿ ಇಲ್ಲದಿದ್ದರೆ ಪರವಾಗಿಲ್ಲ, ಆದರೆ ಕನಿಷ್ಠ ಶಿಷ್ಟಾಚಾರ ಪಾಲಿಸಬೇಕಲ್ಲವೇ?” ಎಂದು ಅನೇಕರು ಪ್ರಶ್ನಿಸಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಾಲುಂಗರ ಹಾಕಿಕೊಳ್ತಾರೆ ನಟಿ ರಜಿನಿ ಪತಿ ಅರುಣ್ 

ಅರುಣ್ ಗೌಡ ಹಾಗೂ ಅಮೃತವರ್ಷಿಣಿ ರಜಿನಿ ವಿವಾಹ ಆಗಿದ್ದಾರೆ. ಅರುಣ್ ಫಿಟ್ನೆಸ್ ಟ್ರೇನರ್. ರಜಿನಿ ಹಾಗೂ ಅರುಣ್​​ಗೆ ಪರಿಚಯ ಆಗಿದ್ದು ಜಿಮ್ ಅಲ್ಲಿಯೇ. ಈಗ ಇಬ್ಬರೂ ‘ಜೋಡಿ ನಂಬರ್ 1’ ಶೋಗೆ ಬಂದಿದ್ದಾರೆ. ಅರುಣ್ ಅವರು ಶೋನಲ್ಲಿ ಒಂದು ಅಚ್ಚರಿಯ ವಿಷಯ ರಿವೀಲ್ ಮಾಡಿದ್ದಾರೆ. ಅವರು ಕಾಲುಂಗರ ಧರಿಸುತ್ತಾರಂತೆ. ‘ಮಮ್ಮಿಗೆ (ರಜಿನಿ) ಕಮಿಟ್ ಆಗಿದ್ದೇನೆ ಎಂಬುದರ ಅರ್ಥ ಇದು’ ಎಂದು ಅರುಣ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Viral: ವ್ಯವಹಾರ ಶುದ್ಧವಾಗಿರಲಿ; ಸಾಲ ಕೇಳುವವರಿಗೆ ಅಂಗಡಿ ಮುಂಭಾಗ ಬೋರ್ಡ್ ಹಾಕಿ ಎಚ್ಚರಿಕೆ ಕೊಟ್ಟ ಮಾಲೀಕ

ಹಣ ಅಂದ್ರೆ ಹೆಣ ಕೂಡ ಬಾಯಿ ಬಿಡುತ್ತೆ ಅನ್ನೋ ಮಾತಿದೆ. ಹಣದ ವಿಚಾರ ಬಂದ್ರೆ ಅತ್ಯಾಪ್ತರು ಸಹ ದೂರವಾಗಿ ಬಿಡ್ತಾರೆ. ಹೀಗಾಗಿ ವ್ಯಾಪಾರಸ್ಥರು ಹಾಗೂ ಅಂಗಡಿ ಮಾಲೀಕರು (shop owner) ವ್ಯವಹಾರ ವಿಷ್ಯದಲ್ಲಿ ಕಟ್ಟುನಿಟ್ಟಾಗಿ ಇರೋದನ್ನು ನೀವು ನೋಡಿರುತ್ತೀರಿ. ಅಷ್ಟೇ ಅಲ್ಲ, ಸಾಲ ಕೇಳಿ ಸ್ನೇಹ (Friendship) ಕಳೆದುಕೊಳ್ಳಬೇಡಿ ಅನ್ನೋದನ್ನು ದೊಡ್ಡ ಅಕ್ಷರದಲ್ಲಿ ಅಂಗಡಿಗಳಲ್ಲಿ ಬರೆದಿರುತ್ತಾರೆ. ಇದೀಗ ಇಂತಹದ್ದೇ ಅಂಗಡಿ ಮುಂಭಾಗದಲ್ಲಿನ  ಬೋರ್ಡ್‌ ಪೋಟೋ ವೈರಲ್‌ ಆಗಿದೆ. ಈ ಬೋರ್ಡ್‌ನಲ್ಲಿ ಸಾಲ ಕೇಳುವವರಿಗೆ  ಅಂಗಡಿ ಮಾಲೀಕ ಖಡಕ್ ವಾರ್ನಿಂಗ್‌ ನೀಡಿದ್ದಾರೆ. ಈ ಫೋಟೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಹುಬ್ಬೇರಿಸುವಂತೆ ಮಾಡಿದೆ.

ನಿಕ್ಷೇಪ್ ಗೌಡ (Nikshep gowda) ಹೆಸರಿನ ಖಾತೆಯಲ್ಲಿ ಅಂಗಡಿ ಮುಂಭಾಗದಲ್ಲಿ ಹಾಕಲಾದ ದೊಡ್ಡ ಬೋರ್ಡ್‌ನ ಫೋಟೋವನ್ನು ಹಂಚಿಕೊಳ್ಳಲಾಗಿದೆ. ಈ ಬೋರ್ಡ್‌ನಲ್ಲಿ ವ್ಯವಹಾರ ಶುದ್ಧವಾಗಿರಲಿ, ನಾಳೆ ಕೊಡ್ತೀನಿ, ಆಮೇಲೆ ಕೊಡ್ತೀನಿ, ಸ್ವಲ್ಪ ಹೊತ್ತಿನಲ್ಲಿ ಕೊಡ್ತೀನಿ, ಬಂದು ಕೊಡ್ತೀನಿ, ನಾ ಓಡಿ ಹೋಗ್ತಿನಾ?, ನನ್ನ ಮೇಲೆ ನಂಬಿಕೆ ಇಲ್ವಾ?, ನಾವೇನ್ ಮೋಸ ಮಾಡ್ತೀವಾ?, ದಿನಾ ನಾನು ಇಲ್ಲೇ ಬರ್ತಿನಿ? ಹಾಗೂ ನಾನು ಇದೇ ಊರಿನವನು, ಇನ್ನು ಮುಂತಾದ ವಾಕ್ಯಗಳನ್ನು ನಮ್ಮಲ್ಲಿ ದಯವಿಟ್ಟು ಬಳಸಬೇಡಿ. ಸ್ನೇಹ ಬೇರೆ ವ್ಯವಹಾರ ಬೇರೆ ನಮ್ಮಲ್ಲಿ ಸಾಲ ದೊರೆಯುವುದಿಲ್ಲ ಸಹಕರಿಸಿ ಎಂದು ಬರೆಯಲಾಗಿದೆ.

ವೈರಲ್ ಪೋಸ್ಟ್ ಇಲ್ಲಿದೆ

ಇದನ್ನೂ ಓದಿ: ಬೀದಿ ಬದಿ ಕಸ ಹಾಕುವವರಿಗೆ ವಿಶಿಷ್ಟ ಬ್ಯಾನರ್ ಹಾಕಿ ವಾರ್ನಿಂಗ್ ಕೊಟ್ಟ ವ್ಯಕ್ತಿ

ಈ ಪೋಸ್ಟ್ ಮೂವತ್ತೇರಡು ಸಾವಿರಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ, ಪಾಪ ತುಂಬಾ ಮೋಸ ಹೋಗಿದ್ದಾನೆ ಅನಿಸ್ತದೆ, ಅದಕ್ಕೆ ಹೀಗೆ ಬರೆದು ಹಾಕಿದ್ದಾನೆ ಅನಿಸ್ತದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ಈ ರೀತಿ ಇರುವವರಿಗೆ ಬೇಗನೆ ನಾಮ ಬೀಳೋದು ಎಂದು ಕಾಮೆಂಟ್ ಮಾಡಿದ್ದಾರೆ. ಮತ್ತೊಬ್ಬರು, ನೊಂದು ಬೆಂದಿರುವ ಜೀವ ಎಂದು ತಮಾಷೆ ಮಾಡಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಬಳಕೆ ಆಯ್ತು ಯಕ್ಷಗಾನ; ಇದೆ ಕನ್ನಡದ ಡೈಲಾಗ್

ಮಲಯಾಳಂ ಸಿನಿಮಾಗಳು ಮೊದಲಿನಿಂದಲೂ ಬೆಂಗಳೂರು ನಂಟನ್ನು ಹೊಂದಿವೆ. ಅವರ ಅನೇಕ ಸಿನಿಮಾಗಳು ಬೆಂಗಳೂರಿನಲ್ಲಿ ಶೂಟ್ ಆದ ಉದಾಹರಣೆ ಇದೆ. ‘ಬೆಂಗಳೂರು ಡೇಸ್’, ‘ಡಿಯರ್ ಫ್ರೆಂಡ್’, ‘ಲೋಕಃ: ಚಾಪ್ಟರ್ 1’ ಹೀಗೆಯೇ ಅನೇಕ ಚಿತ್ರಗಳು ಬೆಂಗಳೂರು ಕನೆಕ್ಷನ್ ಹೊಂದಿವೆ. ಈಗ ಮುಂಬರುವ ಮಲಯಾಳಂನ ‘ಪಳ್ಳಿ ಚಟ್ಟಂಬಿ’ ಚಿತ್ರಕ್ಕೂ ಕರ್ನಾಟಕದ ಲಿಂಕ್ ಇದೆ ಎಂಬ ವಿಷಯ ರಿವೀಲ್ ಆಗಿದೆ.

‘ಪಳ್ಳಿ ಚಟ್ಟಂಬಿ’ ಸಿನಿಮಾದಲ್ಲಿ ಟುವಿನೋ ಥಾಮಸ್ ನಟಿಸಿದ್ದಾರೆ. ಈ ಚಿತ್ರಕ್ಕೆ ಕಯಾದು ಲೋಹರ್ ನಾಯಕಿ. ಈ ಮೊದಲು ಕಯಾದು ಅವರು ‘ಮುಗಿಲ್​​ ಪೇಟೆ’ ಹೆಸರಿನ ಕನ್ನಡ ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರಕ್ಕೆ ಡಿಜೋ ಜೊಸೆ ಆಂಟೋನಿ ನಿರ್ದೇಶನ ಇದೆ. ಈ ಮೊದಲು ‘ಜನ ಗಣ ಮನ’ ಹೆಸರಿನ ಸಿನಿಮಾ ಮಾಡಿದ್ದರು. ಈ ಚಿತ್ರದ ಕಥೆ ನಡೆದಿದ್ದು ಕೂಡ ಕರ್ನಾಟಕದ ರಾಮನಗರದಲ್ಲಾಗಿತ್ತು. ಈಗ ಅವರ ನಿರ್ದೇಶನದ ‘ಪಳ್ಳಿ ಚಟ್ಟಂಬಿ’ ಚಿತ್ರದಲ್ಲಿ ಕನ್ನಡದ ಕಲೆಯ ಕನೆಕ್ಷನ್ ಇರುವ ವಿಷಯ ರಿವೀಲ್ ಆಗಿದೆ.

ಬೆಂಗಳೂರಿನಲ್ಲಿ ‘ಪಳ್ಳಿ ಚಟ್ಟಂಬಿ’ ಸಿನಿಮಾ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟುವಿನೋ, ‘ಈ ಸಿನಿಮಾದಲ್ಲಿ ಯಕ್ಷಗಾನದ ಬಳಕೆ ಆಗಿದೆ. ಅಲ್ಲಿ, ಕನ್ನಡದ ಡೈಲಾಗ್ ಬರುತ್ತದೆ’ ಎಂದು ಟುವಿನೋ ಮಾಹಿತಿ ನೀಡಿದರು. ಇದು ಕುತೂಹಲ ಹೆಚ್ಚಿಸಿದೆ. ಕನ್ನಡ ಪ್ರೇಕ್ಷಕರನ್ನು ಸೆಳೆಯುವ ಉದ್ದೇಶದಿಂದಲೇ ಕನ್ನಡವನ್ನು ಮಲಯಾಳಂನಲ್ಲಿ ಸೇರಿಸಲಾಗುತ್ತದೆಯೇ ಎನ್ನುವ ಪ್ರಶ್ನೆ ಮೂಡಿತು. ಇದಕ್ಕೆ ಉತ್ತರಿಸಿದ ಅವರು, ‘ಕಥೆ ಡಿಮ್ಯಾಂಡ್​ ಮಾಡಿದರೆ ಮಾತ್ರ ಅದನ್ನು ಸೇರಿಸೋದಾಗಿ’ ಹೇಳಿದ್ದಾರೆ ಟುವಿನೋ.

‘ಪಳ್ಳಿ ಚಟ್ಟಂಬಿ’ ಸಿನಿಮಾದ ಕಥೆ ಸಾಗೋದು ಹಳ್ಳಿಯಲ್ಲಿ. ಈ ಸಿನಿಮಾದ ಟ್ರೇಲರ್ ಗಮನ ಸೆಳೆದಿದೆ. ಮಲಯಾಳಂ ಜೊತೆ ಕನ್ನಡದಲ್ಲೂ ಸಿನಿಮಾ ರಿಲೀಸ್ ಆಗುತ್ತಿದೆ. ಈ ಚಿತ್ರವನ್ನು ಕರ್ನಾಟಕದಲ್ಲಿ ಹೊಂಬಾಳೆ ಫಿಲ್ಮ್ಸ್ ಹಂಚಿಕೆ ಮಾಡುತ್ತಿದೆ. ಏಪ್ರಿಲ್ 15ರಂದು ಸಿನಿಮಾ ತೆರೆಗೆ ಬರಲಿದೆ.

ಇದನ್ನೂ ಓದಿ: ‘ಟಾಕ್ಸಿಕ್’ ಚಿತ್ರದಲ್ಲಿ ಯಾವ ಪಾತ್ರ? ಕೊನೆಗೂ ಮೌನ ಮುರಿದ ಟೊವಿನೋ ಥಾಮಸ್

‘ಪಳ್ಳಿ ಚಟ್ಟಂಬಿ’ ಚಿತ್ರವನ್ನು ವರ್ಲ್ಡ್ ವೈಡ್ ಫಿಲಂಸ್, ಸಿ ಕ್ಯೂಬ್ ಬ್ರೋಸ್ ಎಂಟರ್ಟೇನ್ಮೆಂಟ್ ಬ್ಯಾನರ್ ಅಡಿಯಲ್ಲಿ ನೌಫಲ, ಬ್ರಿಜೇಶ್, ಚಾಣುಕ್ಯ ಚೈತನ್ಯ, ಚರಣ್ ನಿರ್ಮಾಣ ಮಾಡಿದ್ದಾರೆ. ಈ ಸಿನಿಮಾಗೆ ಎಸ್ ಸುರೇಶ್ ಬಾಬು ಕಥೆ ಬರೆದಿದ್ದಾರೆ. ಟಿಜೋ ಟಾಮಿ ಛಾಯಾಗ್ರಹಣ, ಶ್ರೀಜಿತ್ ಸಾರಂಗ್ ಸಂಕಲನ, ಜೇಕ್ಸ್ ಬಿಜೋಯ್ ಸಂಗೀತ ಸಂಯೋಜನೆ ಚಿತ್ರಕ್ಕೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Exit mobile version