Headlines

ಇನ್ನೆರಡು ದಿನ ಹೊರಗೆ ಬರಬೇಡಿ; ಇರಾನ್​ನಲ್ಲಿರುವ ಭಾರತೀಯರಿಗೆ ತುರ್ತು ಸೂಚನೆ ನೀಡಿದ ಭಾರತ

ನವದೆಹಲಿ, ಏಪ್ರಿಲ್ 7: ಕದನವಿರಾಮ ಅಥವಾ ಶಾಂತಿ ಮಾತುಕತೆಗೆ ಇರಾನ್‌ಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿದ್ದ 10 ದಿನಗಳ ಗಡುವು ನಾಳೆ ಬೆಳಗ್ಗೆ ಅಂತ್ಯಗೊಳ್ಳಲಿದೆ. ಹೀಗಾಗಿ, ಟೆಹ್ರಾನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಇಂದು ಸಂಜೆ ತುರ್ತು ಸಲಹೆಯನ್ನು ನೀಡಿದ್ದು, ಸಂಭಾವ್ಯ ಉದ್ವಿಗ್ನ ಪರಿಸ್ಥಿತಿಯ ನಡುವೆ ಇರಾನ್ ದೇಶದಲ್ಲಿರುವ ಭಾರತೀಯ ಪ್ರಜೆಗಳು ಸುರಕ್ಷತೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿದೆ. ಭಾರತೀಯ ಪ್ರಜೆಗಳು ಕನಿಷ್ಠ 48 ಗಂಟೆಗಳ ಕಾಲ ತಾವು ಎಲ್ಲಿದ್ದಾರೋ ಅದೇ ಸ್ಥಳಗಳಲ್ಲಿಯೇ ಇರಬೇಕೆಂದು ಸೂಚಿಸಲಾಗಿದೆ….

Read More

ಸಿದ್ದರಾಮಯ್ಯ ವಿರುದ್ಧದ ಆರೋಪ ಸಾಬೀತಿಗೆ ಮತ್ತೊಂದು ಅವಕಾಶ ಸಿಕ್ತು ಎಂದ ಸ್ನೇಹಮಯಿ ಕೃಷ್ಣ! ಅಂಥದ್ದೇನಾಯ್ತು?

ಮೈಸೂರು, ಏಪ್ರಿಲ್ 7: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (MUDA)ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಕುಟುಂಬ ಅಕ್ರಮವಾಗಿ ನಿವೇಶನ ಪಡೆದಿದೆ ಎಂಬ ಆರೋಪದ ಪ್ರಕರಣದಲ್ಲಿ, ಲೋಕಾಯುಕ್ತ ಸಲ್ಲಿಸಿದ್ದ ಬಿ ರಿಪೋರ್ಟ್ ಅನ್ನು ಪ್ರಶ್ನಿಸಿ ಜಾರಿ ನಿರ್ದೇಶನಾಲಯ (ED) ಇದೀಗ ಮೇಲ್ಮನವಿ ಸಲ್ಲಿಸಿದೆ. ಈ ಬೆಳವಣಿಗೆಯ ಕುರಿತು ದೂರುದಾರ ಹಾಗೂ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರು ‘ಟಿವಿ9’ಗೆ ಪ್ರತಿಕ್ರಿಯೆ ನೀಡಿದ್ದಾರೆ. ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಲೋಕಾಯುಕ್ತದ ಬಿ ರಿಪೋರ್ಟ್​ ಅಂಗೀಕರಿಸಿದ ಆದೇಶವನ್ನು ಪ್ರಶ್ನಿಸಿ ಸ್ನೇಹಮಯಿ ಕೃಷ್ಣ ಈಗಾಗಲೇ…

Read More

ಕೈ ಸನ್ನೆಯೊಂದಿಗೆ ​ವಿಶ್ಲೇಷಣೆ… ಬಿದ್ದು ಬಿದ್ದು ನಕ್ಕ RCB ಆಟಗಾರರು

ಇಂಡಿಯನ್ ಪ್ರೀಮಿಯರ್ ಲೀಗ್​ನ ಹೈವೋಲ್ಟೇಜ್ ಮ್ಯಾಚ್​​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯಭೇರಿ ಬಾರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ 20 ಓವರ್​​ಗಳಲ್ಲಿ ಕಲೆಹಾಕಿದ್ದು ಬರೋಬ್ಬರಿ 250 ರನ್​​​ಗಳು. ಈ ಗುರಿಯನ್ನು ಬೆನ್ನತ್ತಿದ ಸಿಎಸ್​​ಕೆ ಕೇವಲ 207 ರನ್​​ಗಳಿಸಿ 43 ರನ್​​ಗಳಿಂದ ಸೋಲೊಪ್ಪಿಕೊಂಡಿತು. ಈ ಗೆಲುವಿನ ಬಳಿಕ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಡ್ರೆಸ್ಸಿಂಗ್ ರೂಮ್‌ನಲ್ಲಿ ನಡೆದ ಆಟಗಾರರ ನಡುವಣ ಪ್ರಶಂಸೀಯ ಮಾತುಗಳ…

Read More

ಇಂದು ಯಾರೂ ರೈಲಿನಲ್ಲಿ ಓಡಾಡ್ಬೇಡಿ, ಇರಾನ್ ಜನರಿಗೆ ಇಸ್ರೇಲ್ ಎಚ್ಚರಿಕೆ, ಹೊಸ ಅಪಾಯದ ಮುನ್ಸೂಚನೆಯೇ?

ಟೆಲ್ ಅವಿವ್, ಏಪ್ರಿಲ್ 07: ಇರಾನ್(Iran) ಜನರು ರೈಲಿನಲ್ಲಿ ಪ್ರಯಾಣಿಸದಂತೆ ಇಸ್ರೇಲ್ ಎಚ್ಚರಿಕೆ ನೀಡಿದ್ದು, ಹೊಸ ಅಪಾಯದ ಮುನ್ನೆಚ್ಚರಿಕೆ ನೀಡಿದೆ. ಕಳೆದ ಐದು ವಾರಗಳಿಂದ ಮಧ್ಯಪ್ರಾಚ್ಯದಲ್ಲಿ ಯುದ್ಧ ನಡೆಯುತ್ತಿದೆ. ಫಾರ್ಸಿ ಭಾಷೆಯಲ್ಲಿ ಸಂದೇಶವೊಂದನ್ನು ಬಿಡುಗಡೆ ಮಾಡಿದ ಇಸ್ರೇಲ್ ಸೇನೆ ರೈಲಿನಲ್ಲಿ ಪ್ರಯಾಣಿದರೆ ಜೀವಕ್ಕೆ ಅಪಾಯವಿದೆ ಎಂದು ಹೇಳಿದೆ. ನಿಮ್ಮ ಸುರಕ್ಷತೆಗಾಗಿ ಇಂದು ರಾತ್ರಿ 9 ಗಂಟೆಯವರೆಗೆ ದೇಶಾದ್ಯಂತ ರೈಲುಗಳಲ್ಲಿ ಪ್ರಯಾಣಿಸುವುದನ್ನು ತಪ್ಪಿಸಿ ಎಂದು ಸೇನೆ ಹೇಳಿದೆ. ಟೆಹ್ರಾನ್ ವಾರಗಟ್ಟಲೆ ಇರಾನ್‌ನಾದ್ಯಂತ ಇಂಟರ್ನೆಟ್ ಅನ್ನು ನಿರ್ಬಂಧಿಸಿದೆ. ಇದರಿಂದಾಗಿ ಸಾಮಾನ್ಯ…

Read More

ಪ್ರಮುಖ ಬ್ಯಾಂಕುಗಳಲ್ಲಿ ಶೇ. 7.75ರವರೆಗೆ ಫಿಕ್ಸೆಡ್ ಡೆಪಾಸಿಟ್ ದರಗಳು

ಕೆಲವೇ ವರ್ಷಗಳಿಗೆ ಹಣವನ್ನು ಇರಿಸಬೇಕೆನ್ನುವವರಿಗೆ ಫಿಕ್ಸೆಡ್ ಡೆಪಾಸಿಟ್ ಸ್ಕೀಮ್​ಗಳು (Fixed Deposit) ಉತ್ತಮ ಎನಿಸುತ್ತವೆ. ಆರ್​ಬಿಐನ ರಿಪೋ ದರ ಬದಲಾವಣೆಗೆ ಅನುಗುಣವಾಗಿ ಎಫ್​ಡಿ ದರಗಳೂ ಬದಲಾಗಬಹುದು. ಸಾಮಾನ್ಯವಾಗಿ 1 ವರ್ಷ ಮೇಲ್ಪಟ್ಟ ಅವಧಿಗಳ ಠೇವಣಿಗಳಿಗೆ ಶೇ. 6ಕ್ಕಿಂತಲೂ ಹೆಚ್ಚು ಬಡ್ಡಿ ಸಿಗುತ್ತದೆ. ಕೆಲ ಬ್ಯಾಂಕುಗಳು ಕೆಲ ಅವಧಿಗಳ ಠೇವಣಿಗಳಿಗೆ ಗರಿಷ್ಠ ಬಡ್ಡಿ ಆಫರ್ ಮಾಡುತ್ತವೆ. ಕಮರ್ಷಿಯಲ್ ಬ್ಯಾಂಕುಗಳು ಇಂದು ಶೇ. 7.75ರವರೆಗೆ ಎಫ್​ಡಿ ದರಗಳನ್ನು ಹೊಂದಿವೆ. ಕೆಲ ಪ್ರಮುಖ ಬ್ಯಾಂಕುಗಳಲ್ಲಿನ ಡೆಪಾಸಿಟ್ ರೇಟ್​ಗಳ ವಿವರ ಈ ಕೆಳಕಂಡಂತಿದೆ:…

Read More

ಪ್ರಾಚೀನ ನಾಗರಿಕತೆಯಿಂದ ನಿಮಗೆ ಮರೆಯಲಾಗದ ಹೊಡೆತ ಕಾದಿದೆ; ಅಮೆರಿಕಕ್ಕೆ ಇರಾನ್ ತಿರುಗೇಟು

ಟೆಹ್ರಾನ್, ಏಪ್ರಿಲ್ 7: ಇಂದು ರಾತ್ರಿ ಇರಾನ್​ನ ನಾಗರಿಕತೆ ಸಂಪೂರ್ಣವಾಗಿ ನಾಶವಾಗುತ್ತದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಎಚ್ಚರಿಕೆ ನೀಡಿದ ಸ್ವಲ್ಪ ಸಮಯದ ನಂತರ ಅದಕ್ಕೆ ಇರಾನ್ ಪ್ರತ್ಯುತ್ತರ ನೀಡಿದೆ. ನಾವು ನಿಮ್ಮ ಬೆದರಿಕೆಗೆ ಹೆದರುವುದಿಲ್ಲ, ನಮ್ಮ ದಾಳಿಗಳನ್ನು ದ್ವಿಗುಣಗೊಳಿಸುತ್ತೇವೆ, ನಾವೆಂದೂ ಹಿಂಜರಿಯುವುದಿಲ್ಲ ಎಂದು ಹೇಳಿದೆ. ಟ್ರಂಪ್ ಅವರ ಇತ್ತೀಚಿನ ಬೆದರಿಕೆಗಳ ನಂತರ ಎಲ್ಲಾ ರಾಜತಾಂತ್ರಿಕ ಮಾರ್ಗಗಳು ಮತ್ತು ಪರೋಕ್ಷ ಮಾತುಕತೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಇರಾನ್ ಸ್ಪಷ್ಟಪಡಿಸಿದೆ “ಅಮೆರಿಕದ ವಿರುದ್ಧ ಫತಾಹ್ ಮತ್ತು…

Read More

ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅಕ್ಷಯ್ ಕುಮಾರ್; ಹಿಗ್ಗಾಮುಗ್ಗಾ ಟ್ರೋಲ್

ಬಾಲಿವುಡ್‌ ನಟ ಅಕ್ಷಯ್ ಕುಮಾರ್ (Akshay Kumar) ಅವರು ಯಾವಾಗಲೂ ತಮ್ಮ ಶಿಸ್ತು ಮತ್ತು ಸ್ಟೈಲಿಶ್ ಉಡುಗೆಯಿಂದಲೇ ಗುರುತಿಸಿಕೊಳ್ಳುವವರು. ಆದರೆ, ಇದೇ ಮೊದಲ ಬಾರಿಗೆ ಅವರ ಫ್ಯಾಷನ್ ಆಯ್ಕೆ ತಪ್ಪಾಗಿದೆ. ಚಪ್ರಿ ರೀತಿ ಬಟ್ಟೆ ಹಾಕಿಕೊಂಡು ಬಂದ ಅವರನ್ನು ಜನರು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೋಲ್‌ಗೆ ಒಳಗಾಗಿದ್ದಾರೆ. ಏಪ್ರಿಲ್ 6ರಂದು ‘ಭೂತ್ ಬಂಗ್ಲ’ (Bhoot Bangla) ಚಿತ್ರದ ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಅಕ್ಷಯ್ ಕುಮಾರ್ ಅವರನ್ನು ಈ ರೀತಿ ನೋಡಿ ಅಭಿಮಾನಿಗಳು ದಂಗಾಗಿದ್ದಾರೆ….

Read More

ಮಹಾ ಎಡವಟ್ಟು… ಅವೇಶ್ ಖಾನ್​ಗೆ ಬ್ಯಾನ್ ಭೀತಿ..!

IPL 2026: ಲಕ್ನೋ ಸೂಪರ್ ಜೈಂಟ್ಸ್ (LSG) ವೇಗಿ ಅವೇಶ್ ಖಾನ್ ಮತ್ತೊಮ್ಮೆ ತಮ್ಮ ವಿಲಕ್ಷಣ ಸಂಭ್ರಮಾಚರಣೆಯ ಮೂಲಕ ವಿವಾದಕ್ಕೆ ಸಿಲುಕಿದ್ದಾರೆ. ಸನ್ ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ರೋಚಕ ಪಂದ್ಯದಲ್ಲಿ ರಿಷಭ್ ಪಂತ್ ಬಾರಿಸಿದ ವಿನ್ನಿಂಗ್ ಶಾಟ್ ಬೌಂಡರಿ ಗೆರೆ ದಾಟುವ ಮೊದಲೇ, ಹೊರಗಡೆ ನಿಂತಿದ್ದ ಅವೇಶ್ ಖಾನ್ ಬ್ಯಾಟ್‌ನಿಂದ ಚೆಂಡನ್ನು ತಡೆದು ಸಂಭ್ರಮಿಸಿದ್ದು ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಏನಿದು ಘಟನೆ? ಹೈದರಾಬಾದ್​ನಲ್ಲಿ ನಡೆದ ಐಪಿಎಲ್​ನ 10ನೇ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ಲಕ್ನೋ…

Read More

ಅಮೆರಿಕ, ಜಪಾನ್, ಜರ್ಮನಿಗೂ ಸಾಧ್ಯವಾಗದ ಅಡ್ವಾನ್ಸ್ಡ್ ರಿಯಾಕ್ಟರ್ ಸಾಧಿಸಿದ ಭಾರತ; ದೇಶದ ಇಂಧನ ಭವಿಷ್ಯ ಸುರಕ್ಷಿತ?

ನವದೆಹಲಿ, ಏಪ್ರಿಲ್ 7: ಪರಮಾಣು ವಿದ್ಯುತ್ ಶಕ್ತಿ ಉತ್ಪಾದನೆಯಲ್ಲಿ ಭಾರತ ಪ್ರಮುಖ ತಂತ್ರಜ್ಞಾನವೊಂದನ್ನು ಅಭಿವೃದ್ಧಿಪಡಿಸುವ ಹಾದಿಯಲ್ಲಿ ಪ್ರಮುಖ ಮೈಲಿಗಲ್ಲು ಮುಟ್ಟಿದೆ. ಏಪ್ರಿಲ್ 6, ಸೋಮವಾರ ಭಾರತಕ್ಕೆ ಅವಿಸ್ಮರಣೀಯ ದಿನಗಳಲ್ಲಿ ಒಂದೆನಿಸಬಹುದು. ತಮಿಳುನಾಡಿನ ಕಲ್ಪಕ್ಕಮ್​ನಲ್ಲಿ ಪ್ರೋಟೋಟೈಪ್ ಫಾಸ್ಟ್ ಬ್ರೀಡರ್ ರಿಯಾಕ್ಟರ್ (PFBR) ಪ್ರಮುಖವಾದ ಸ್ವಾವಲಂಬನೆ (Criticality stage) ಹಂತ ಸಾಧಿಸಿದೆ. ಇನ್ನೊಂದು ಹಂತ ದಾಟಿಬಿಟ್ಟರೆ ಭಾರತಕ್ಕೆ ಮುಂದಿನ ನೂರಾರು ವರ್ಷ ಕಾಲ ವಿದ್ಯುತ್ ಸಮಸ್ಯೆ ಇಲ್ಲದಂತಾಗಬಹುದು. ಭಾರತದಲ್ಲಿ ಯುರೇನಿಯಂ ಕೊರತೆ, ಆದರೆ, ಥೋರಿಯಂ ಸಮೃದ್ಧ… ಸಾಂಪ್ರದಾಯಿಕ ಪರಮಾಣು ವಿದ್ಯುತ್…

Read More

ಕರಿಬೇವಿನ ಎಲೆ ಇಲ್ಲದೆಯೇ ಅಡುಗೆ ಆಗಲ್ವಾ? ಆದ್ರೆ ಈ ಸಮಸ್ಯೆ ಇದ್ದಲ್ಲಿ ಇದನ್ನು ಬಳಸದಿರುವುದೇ ಒಳ್ಳೆಯದು

ನಾವು ಮಾಡುವ ಬಹುತೇಕ ಪ್ರತಿಯೊಂದು ಅಡುಗೆಯಲ್ಲೂ ಕರಿಬೇವಿನ ಎಲೆ (Curry Leaves) ಅಥವಾ ಒಗ್ಗರಣೆ ಸೊಪ್ಪು ಹಾಕಿಯೇ ಹಾಕುತ್ತೇವೆ. ಅದಿಲ್ಲದಿದ್ದರೆ ಅಡುಗೆ ಆಗುವುದೇ ಇಲ್ಲ. ಇದನ್ನು ಕೇವಲ ರುಚಿಗಾಗಿ ಮಾತ್ರವಲ್ಲದೆ, ಅದರಲ್ಲಿರುವ ಔಷಧೀಯ ಗುಣಗಳ ಕಾರಣದಿಂದಲೂ ಆಯುರ್ವೇದದಲ್ಲಿ ವ್ಯಾಪಕವಾಗಿ ಬಳಸಲಾಗುತ್ತದೆ. ಇಷ್ಟೆಲ್ಲಾ ಆರೋಗ್ಯಕರ ಗುಣಗಳಿದ್ದರೂ ಕೂಡ ಎಲೆ ಎಲ್ಲರಿಗೂ ಸೂಕ್ತವಲ್ಲ ಎಂಬುದು ನಿಮಗೆ ತಿಳಿದಿದೆಯೇ… ಹೌದು, ಕೆಲವು ಆರೋಗ್ಯ ಸಮಸ್ಯೆಗಳಿರುವವರು ಇದನ್ನು ಸೇವಿಸುವಾಗ ಜಾಗ್ರತೆ ವಹಿಸಬೇಕು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಈ ಕರಿಬೇವಿನ ಎಲೆ…

Read More