ಜಿಬಿಎ ಚುನಾವಣೆ: ಹೈಕಮಾಂಡ್ ಅಂಗಳದಲ್ಲಿದ್ಯಾ BJP, JDS ಮೈತ್ರಿ ಭವಿಷ್ಯ?
ಬೆಂಗಳೂರು, ಏಪ್ರಿಲ್ 07: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಚುನಾವಣೆಗೆ ಬಿಜೆಪಿ ಮತತು ಜೆಡಿಎಸ್ ಮೈತ್ರಿಯಾಗಿಯೇ ಕಣಕ್ಕೆ ಇಳಿಯುತ್ತವೆಯೇ ಎಂಬ ಪ್ರಶ್ನೆಗೆ ವಿಪಕ್ಷ ನಾಯಕ ಆರ್. ಅಶೋಕ್ ಉತ್ತರಿಸಿದ್ದು, ಮೈತ್ರಿ ಕುರಿತ ಯಾವುದೇ ನಿರ್ಧಾರ ತಮ್ಮ ಕೈಯಲ್ಲಿಲ್ಲ. ಆ ತಿರ್ಮಾನ ನಮ್ಮ ರಾಷ್ಟ್ರೀಯ ಅಧ್ಯಕ್ಷರಿಗೆ ಸೇರಿದ್ದು. ಮೈತ್ರಿ ಇದೆ ಎಂದರೆ ಇದೆ, ಇಲ್ಲ ಎಂದರೆ ಇಲ್ಲ. ಆದರೆ, ನಾವು ಚುನಾವಣೆಗೆ ಸಿದ್ಧತೆ ಮಾಡಿಕೊಂಡಿದ್ದೇವೆ ಎಂದು ಅವರು ತಿಳಿಸಿದ್ದಾರೆ. ಜೆಡಿಎಸ್ ಶೇಕಡಾ 50ರಷ್ಟು ಸ್ಥಾನಗಳನ್ನು ಕೇಳುತ್ತಿದೆ ಎಂಬ ಮಾತುಗಳ…