ಮ್ಯಾಟ್ರಿಮೋನಿಯಲ್ಲಿ ಪರಿಚಯ ಮಾಡಿಕೊಂಡು ಯುವತಿಗೆ 1.7 ಕೋಟಿ ರೂ. ವಂಚಿಸಿದ ವ್ಯಕ್ತಿ – Kannada News | Beware Matrimonial Apps: Bangalore Woman and Family Defrauded of 1.7 Cr

ಬೆಂಗಳೂರು, ಜ.19: ಮ್ಯಾಟ್ರಿಮೋನಿದಂತಹ ಆ್ಯಪ್​​ಗಳನ್ನು (Matrimonial scam )ಬಳಸುವ ಮುನ್ನ ಎಚ್ಚರವಾಗಿರಬೇಕು. ಇಂತಹ ಆ್ಯಪ್​​ಗಳಿಂದ ಮೋಸ ಹೋಗುತ್ತಿರುವ ಪ್ರಕರಣಗಳು ಆಗ್ಗಾಗೆ ಬಹಿರಂಗ ಆಗುತ್ತಿದೆ. ಇದೀಗ ಬೆಂಗಳೂರಿನ ನವ್ಯಾ ಎಂಬ ಯುವತಿಯಿಂದ ಈ ಆ್ಯಪ್​​ ಮೂಲಕ ಉದ್ಯಮಿ ಎಂದು ಹೇಳಿಕೊಂಡ ಲಕ್ಷ ಲಕ್ಷ ಹಣವನ್ನು ದೋಚಿದ್ದಾನೆ. ಬೆಂಗಳೂರಿನ 29 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್‌ ಆಗಿರುವ ನವ್ಯಾ ಅವರನ್ನು ಉದ್ಯಮಿ ಎಂದು ಹೇಳಿಕೊಂಡು ಮದುವೆಯಾಗುವುದಾಗಿ ನಂಬಿಸಿದ್ದಾನೆ. ಇತ ಮಾತ್ರವಲ್ಲದೆ  ಮನೆಯವರು ಕೂಡ ಈ ವಂಚನೆಯಲ್ಲಿ ಭಾಗಿಯಾಗಿದ್ದಾರೆ ಎಂದು NDTV ವರದಿ ಮಾಡಿದೆ.

ಮಾರ್ಚ್ 2024 ರಲ್ಲಿ, ನವ್ಯಾ ಶ್ರೀ ಅವರು ಒಕ್ಕಲಿಗ ಮ್ಯಾಟ್ರಿಮೋನಿ ಪ್ಲಾಟ್‌ಫಾರ್ಮ್ ಮೂಲಕ ವಿಜಯ್ ಎನ್ನುವ ವ್ಯಕ್ತಿಯನ್ನು ಪರಿಚಯ ಮಾಡಿಕೊಂಡಿದ್ದಾರೆ. ವಿಜಯ್ ತಾನು VRG ಎಂಟರ್‌ಪ್ರೈಸಸ್‌ನ ಮಾಲೀಕ ಎಂದು ಹೇಳಿಕೊಂಡಿದ್ದಾನೆ. ರಾಜಾಜಿನಗರ ಮತ್ತು ಸದಾಶಿವನಗರದಲ್ಲಿ ಕ್ರಷರ್‌ಗಳು, ಲಾರಿಗಳು, ಭೂಮಿ ಮತ್ತು ಪ್ರೀಮಿಯಂ ವಸತಿ ಆಸ್ತಿಗಳನ್ನು ಹೊಂದಿರುವುದಾಗಿ ಸುಳ್ಳು ಹೇಳಿದ್ದಾನೆ. ಇದನ್ನು ನವ್ಯಾ ಕೂಡ ನಂಬಿದ್ದರು. ತಾನು ದೊಡ್ಡ ಬಿಸಿನೆಸ್ ಮ್ಯಾನ್​ ಎಂದು ಬಿಂಬಿಸಲು 2019ರ ಜಾರಿ ನಿರ್ದೇಶನಾಲಯ ಪ್ರಕರಣಕ್ಕೆ ಸಂಬಂಧಿಸಿದ ಜಾಮೀನು ಆದೇಶದ ಪ್ರತಿಯನ್ನು ಹಂಚಿಕೊಂಡಿದ್ದಾನೆ. ನನ್ನ ಬಳಿ 715 ಕೋಟಿ ರೂ. ಮೌಲ್ಯ ಆಸ್ತಿ ಇದೆ. ಅದರ ಬಗ್ಗೆಯೂ ಸುಳ್ಳು ದಾಖಲೆಗಳನ್ನು ಕೂಡ ಹಂಚಿಕೊಂಡಿದ್ದಾನೆ.

NDTV ವರದಿಯ ಪ್ರಕಾರ ನವ್ಯಾ ಅವರಿಂದ ವಿಜಯ್​​​ ತಕ್ಷಣಕ್ಕೆ 15 ಸಾವಿರ ರೂ. ಬೇಕು, ನನ್ನ ಫೋನ್​ ಪೇ ವರ್ಕ್ ಆಗುತ್ತಿಲ್ಲ ಎಂದು ಪಡೆದಿದ್ದಾನೆ. ನಂತರ ಒಂದೇ ದಿನದಲ್ಲಿ ತನ್ನ ಸ್ನೇಹಿತರಿಂದ ಹಣ ಪಡೆದು ಅದನ್ನು ನವ್ಯಾಗೆ ವಾಪಸ್ ನೀಡಿದ್ದಾನೆ. ಇದು ನವ್ಯಾನನ್ನು ನಂಬಿಸಲು ಈ ರೀತಿ ಮಾಡಿದ್ದಾನೆ. ಕೆಂಗೇರಿ ಮೆಟ್ರೋ ನಿಲ್ದಾಣದಲ್ಲಿ ನವ್ಯಾಗೆ ವಿಜಯ್​ ತಮ್ಮ ಕುಟುಂಬ ಸದಸ್ಯರನ್ನು ಪರಿಚಯಿಸಿದ್ದಾನೆ. ತಂದೆ ಕೃಷ್ಣಪ್ಪ ಬಿ ಗೌಡ ಅವರು ನಿವೃತ್ತ ತಹಶೀಲ್ದಾರ್ ಎಂದು ಹೇಳಿದ್ದಾನೆ. ಜತೆಗೆ ತನ್ನ ಎಂಟರ್‌ಪ್ರೈಸಸ್​​ಗೆ ಸೇರಿಕೊಳ್ಳುವಂತೆ ಹೇಳಿದ್ದಾನೆ. ಇದರ ನವ್ಯಾ ಅಪ್ಪ-ಅಮ್ಮ, ಆಕೆ ಸ್ನೇಹಿತರಿಗೆ ಕೂಡ ಹೇಳಿದ್ದಾನೆ. ಅವರು 66 ಲಕ್ಷ ಮತ್ತು 23 ಲಕ್ಷ ರೂ.ಗಳನ್ನು ಹೂಡಿಕೆ ಮಾಡಿದ್ದಾರೆ. ಈ ಹಣವನ್ನು ವಾಪಸು ನೀಡಲು ಸಾಧ್ಯವಾಗದಿದ್ದಾಗ, ತನ್ನ ಬ್ಯಾಂಕ್ ಖಾತೆಗಳನ್ನು ಬ್ಲಾಕ್​ ಮಾಡಲಾಗಿದೆ ಎಂದು ಸುಳ್ಳು ಹೇಳಿದ್ದಾನೆ. ಈ ಬಗ್ಗೆಯೂ ಸುಳ್ಳು ದಾಖಲೆಗಳನ್ನು ನೀಡಿದ್ದಾನೆ. ನಾನು ಇದರಿಂದ ತುಂಬಾ ಕಷ್ಟಕ್ಕೆ ಸಿಲುಕಿಕೊಂಡಿದದ್ದೇನೆ ಎಂದು ನವ್ಯಾ ಮನೆಯವರ ಮುಂದೆ ಸುಳ್ಳು ಹೇಳಿದ್ದಾನೆ. ನಂತರ ನವ್ಯಾ ಅವರ ತಂದೆ 0.5 ಲಕ್ಷ ರೂ.ಗಳನ್ನು ನೀಡಿದ್ದರೆ, ಆಕೆಯ ತಾಯಿ 18 ಲಕ್ಷ ರೂ.ಗಳನ್ನು ನೀಡಿದ್ದಾರೆ. ನವ್ಯಾ ತಂದೆ ಮತ್ತು ತಾಯಿ ತಮ್ಮ ನಿವೃತ್ತಿ ಬಂದ ಹಣವನ್ನು ಆತನಿಗೆ ನೀಡಿದ್ದಾರೆ.

ಇದನ್ನೂ ಓದಿ: ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣಿಕರಿಗೆ ಗುಡ್​​​ ನ್ಯೂಸ್: ಕೊನೆಗೂ ಈ ರಸ್ತೆ ನಿರ್ಮಾಣಕ್ಕೆ NHAI ಒಪ್ಪಿಗೆ

ನವ್ಯಾಳ ಆಭರಣಗಳು ಮತ್ತು ಆಕೆ ಅಕ್ಕನಿಂದಲ್ಲೂ ಕೂಡ ಹಣವನ್ನು ಪಡೆದಿದ್ದಾನೆ. ಸ್ವಲ್ಪ ಸಮಯದ ನಂತರ ನವ್ಯಾ ಈ ಹಣವನ್ನು ಕೇಳಲು ಆತನ ಮನೆ ಮುಂದೆ ಹೋದಾಗ ಸತ್ಯ ತಿಳಿದಿದೆ. ಅವನಿಗೆ ಈಗಾಗಲೇ ಮದುವೆಯಾಗಿ ಒಂದು ಮಗುವಿದೆ. ಅವನು ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದನು. ಇಡೀ ಕುಟುಂಬವೇ ಈ ಹಗರಣದಲ್ಲಿ ಭಾಗಿಯಾಗಿದೆ. ಹಣ ನೀಡುವಂತೆ ಕೇಳಿದ್ರೆ ವಿಜಯ್​​ ಬೆದರಿಕೆ ಹಾಕಿದ್ದಾನೆ. ಪೊಲೀಸ್ ದಾಖಲೆಗಳ ಪ್ರಕಾರ ವಿಜಯ್ ಹಲವು ಬ್ಯಾಂಕ್ ಖಾತೆಗಳ ಮೂಲಕ 1,75,66,890 ರೂ. ಸಂಗ್ರಹಿಸಿ, ಕೇವಲ 22,51,800 ರೂ.ಗಳನ್ನು ಹಿಂದಿರುಗಿಸಿದ್ದಾನೆ. ವಿಜಯ್, ಆತನ ತಂದೆ ಮತ್ತು ತಾಯಿ ವಿರುದ್ಧ ವಂಚನೆ, ಕ್ರಿಮಿನಲ್ ಪಿತೂರಿ ಮತ್ತು ಕ್ರಿಮಿನಲ್ ಬೆದರಿಕೆ ಪ್ರಕರಣ ದಾಖಲಾಗಿದೆ.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕಚೇರಿಯಲ್ಲೇ ಮಹಿಳೆಯರ ಜತೆ ಡಿಜಿಪಿ ಸರಸ ಸಲ್ಲಾಪ: ರಾಮಚಂದ್ರ ರಾವ್​​ಗೆ ಸಂಕಷ್ಟ! – Kannada News | CM Siddaramaiah Talks Action Against DGP Ramachandra rao for obscene video viral

ಬೆಂಗಳೂರು, (ಜನವರಿ 19): ಕರ್ನಾಟಕ ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ (Karnataka DGP Ramachandra rao)  ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದೆ. ಕರ್ತವ್ಯದ ಸಮಯದಲ್ಲೇ ಬೆಂಗಳೂರಿನಲ್ಲಿರುವ ಡಿಜಿಪಿ ಕಚೇರಿಯಲ್ಲೇ ಮಹಿಳೆಯರ ಜೊತೆ ಡಾ.ರಾಮಚಂದ್ರರಾವ್ ರಾಸಲೀಲೆ ನಡೆಸಿದ್ದು, ಸೀಕ್ರೆಟ್ ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ.  ಕಚೇರಿಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಮಹಿಳೆಯರನ್ನು ತಬ್ಬಿಕೊಂಡು ಮುತ್ತು ಕೊಟ್ಟಿದ್ದಾರೆ. ಒಂದು ವರ್ಷದ ಹಿಂದಿನ ವಿಡಿಯೋ ಎಂದು ಹೇಳಲಾಗಿದ್ದು, ಇದೀಗ ವೈರಲ್ ಆಗಿದೆ. ಇದು ಪೊಲೀಸ್ ಇಲಾಖೆಯ ಶಿಸ್ತು, ಘನತೆ, ಗೌರವಕ್ಕೆ ಧಕ್ಕೆ ತರುವ ವಿಷಯ. ಕಚೇರಿಯ ವೇಳೆಯಲ್ಲಿ ಪೊಲೀಸ್ ವಸ್ತ್ರದಲ್ಲೇ ರಾಮಚಂದ್ರ ರಾವ್ ರಾಸಲೀಲೆ ನಡೆಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ.  ಸದ್ಯ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಗೃಹ ಸಚಿವ ಪರಮೇಶ್ವರ್ ನಿವಾಸಕ್ಕೆ ದೌಡಾಯಿಸಿದ್ದಾರೆ. ಆದ್ರೆ, ಪರಮೇಶ್ವರ್ ಅವರು ಭೇಟಿಗೆ ನಿರಾಕರಿಸಿ ಮನೆ ಗೇಟಿನಿಂದಲೇ ವಾಪ್ ಕಳುಹಿಸಿದ್ದಾರೆ. ಮತ್ತೊಂದೆಡೆ ಈ ರಾಸಲೀಲೆ ವಿಡಿಯೋ ಬಗ್ಗೆ ಸ್ವತಃ ಸಿಎಂ ಸಿದ್ದರಾಮಯ್ಯ (Siddaramaiah) ಪ್ರತಿಕ್ರಿಯಿಸಿದ್ದು, ಸೂಕ್ತ ಕ್ರಮಕೈಗೊಳ್ಳುವುದಾಗಿ ಹೇಳಿದ್ದಾರೆ. ಹೀಗಾಗಿ ಡಿಜಿಪಿ ರಾಮಚಂದ್ರ ರಾವ್​​​ಗೆ ಸಂಕಷ್ಟ ಎದುರಾಗಿದೆ.

ಕ್ರಮದ ಬಗ್ಗೆ ಮಾತನಾಡಿದ ಸಿಎಂ

ಈ ಬಗ್ಗೆ ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದ್ದು, ನನಗೆ ಮುಂಜಾನೆ ಈ ವಿಚಾರ ಗೊತ್ತಾಗಿದೆ.
ವಿಚಾರಣೆ ಮಾಡಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. ಕಾನೂನು ಮುಂದೆ ಯಾರೂ ದೊಡ್ಡವರಲ್ಲ.ಎಷ್ಟೇ ಎತ್ತರ ವ್ಯಕ್ತಿಯಾದರೂ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಟಪಡಿಸಿದರು.

ಇದನ್ನು ಓದಿ: ಡಿಜಿಪಿ ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ವೈರಲ್​​: ಪೊಲೀಸ್​​ ಇಲಾಖೆ ಮಾನ ಹರಾಜು ಹಾಕಿದ ಹಿರಿಯ IPS ಅಧಿಕಾರಿ

ತಮ್ಮ ರಾಸಲೀಲೆ ವಿಡಿಯೋ ಬಗ್ಗೆ ಡಿಜಿಪಿ ಹೇಳಿದ್ದೇನು?

ಇನ್ನು ರಾಮಚಂದ್ರ ರಾವ್ ರಾಸಲೀಲೆ ವಿಡಿಯೋ ಭಾರೀ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ ಖುದ್ದು ರಾಮಚಂದ್ರ ರಾವ್ ಅವರು ಗೃಹ ಸಚಿವ ಡಾ ಜಿ ಪರಮೇಸ್ವರ್ ನಿವಾಸಕ್ಕೆ ದೌಡಾಯಿಸಿದ್ದಾರೆ. ಈ ವೇಳೆ ರಾಮಚಂದ್ರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು, ಎಂಟು ವರ್ಷದ ಹಿಂದೆ ನಾನು ಬೆಳಗಾವಿಯಲ್ಲಿದ್ದೆ. ಇದರ ಬಗ್ಗೆ ನಾನು ವಕೀಲರ ಜೊತೆಗೆ ಮಾತನಾಡುತ್ತೇನೆ. ಇದರ ಬಗ್ಗೆ ತನಿಖೆ ಆಗಬೇಕು.ಗೃಹ ಸಚಿವರಿಗೆ ಮಾಹಿತಿ ನೀಡಲು ಬಂದಿದ್ದೇನೆ ಎಂದು ತಿಳಿಸಿದರು.

ಗೇಟ್‌ನಲ್ಲೇ ವಾಪಸ್ ಕಳುಹಿಸಿದ ಪರಮೇಶ್ವರ್

ಸಮವಸ್ತ್ರದಲ್ಲೇ ಮಹಿಳೆಯರೊಂದಿಗಿನ ರಾಸಲೀಲೆ ವಿಡಿಯೋ ಬಯಲಿಗೆ ಬರುತ್ತಿದ್ದಂತೆಯೇ ಸ್ಪಷ್ಟನೆ ನೀಡಲು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರನ್ನು ಭೇಟಿ ಮಾಡಲು ಬಂದಿದ್ದರು. ಆದರೆ, ಪರಮೇಶ್ವರ್ ಅವರು ರಾಮಚಂದ್ರ ರಾವ್ ಅವರನ್ನು ಭೇಟಿಗೆ ನಿರಾಕರಿಸಿ್ದು, ಮನೆಯ ಗೇಟ್‌ನಿಂದಲೇ ವಾಪಸ್ ಕಳಿಸಿದ್ದಾರೆ.

ಸರ್ಕಾರಕ್ಕೆ ಶಾಸಕ ಸುರೇಶ್ ಕುಮಾರ್ ಮಹತ್ವದ ಸಲಹೆ

ಈ ಬಗ್ಗೆ ರಾಜಾಜಿನಗರ ಶಾಸಕ ಎಸ್. ಸುರೇಶ್ ಕುಮಾರ್ ಸಾಮಾಜಿಕ ‌ಜಾಲತಾಣದ ಮೂಲಕ ಪ್ರತಿಕ್ರಿಯಿಸಿದ್ದು, ಪೊಲೀಸ್ ಅಧಿಕಾರಿ ರಾಮಚಂದ್ರ ರಾವ್ ಘನಕಾರ್ಯ ಅಕ್ಷಮ್ಯ ಅಪರಾಧ. ರಾಮಚಂದ್ರ ರಾವ್ ಇಡೀ ಪೊಲೀಸ್ ಇಲಾಖೆಗೆ ಕಳಂಕ ಮೆತ್ತುವ ಕಾರ್ಯವೆಸಗಿದ್ದಾರೆ. ಹಿಂದೆ ಅವರ ಹೆಸರು ಮತ್ತು ಸ್ಥಾನದ ದುರುಪಯೋಗ ಮಾಡಿಕೊಂಡು ಭಾರಿ ಪ್ರಮಾಣದ ಚಿನ್ನದ ಸ್ಮಗ್ಲಿಂಗ್ ನಡೆದಿದ್ದಾಗ ಈ ಅಧಿಕಾರಿಯನ್ನು ಕಡ್ಡಾಯ ರಜೆಯ ಮೇಲೆ ಕಳಿಸಿ ಸರ್ಕಾರ ಕೈ ತೊಳೆದುಕೊಂಡಿತ್ತು. ಇದೀಗ ಪ್ರಕಟವಾಗಿರುವ ಈ ಪೊಲೀಸ್ ಅಧಿಕಾರಿಯ ಘನಂಧಾರಿ ಕಾರ್ಯವನ್ನು ಸರ್ಕಾರ ಅತ್ಯಂತ ಗಂಭೀರವಾಗಿ ಪರಿಶೀಲಿಸಬೇಕು. ಮತ್ತೆ ಕಡ್ಡಾಯ ರಜೆ ಮೇಲೆ ಕಳಿಸಿ ಕೈ ತೊಳೆದುಕೊಳ್ಳುವುದು ಸರ್ಕಾರಕ್ಕೆ ಭೂಷಣವಲ್ಲ ಎಂದು ಸಲಹೆ ನೀಡಿದ್ದಾರೆ.

ಸಮವಸ್ತ್ರದಲ್ಲಿಯೇ ತನ್ನ ಕಚೇರಿಯಲ್ಲಿಯೇ ಈ ಹಿರಿಯ ಅಧಿಕಾರಿ ಮಾಡಿರುವ ಕೃತ್ಯ ಪೊಲೀಸ ಇಲಾಖೆಯನ್ನೇ ಸಂಶಯದಿಂದ ಅನುಮಾನದಿಂದ ನೋಡುವಂತಾಗಿದೆ. ಐಪಿಎಸ್ ಎಂಬ ಅತ್ಯಂತ ಜವಾಬ್ದಾರಿಯುತ ಹೆಸರಿಗೆ ಈ ವ್ಯಕ್ತಿ ಇಂದು ಅಪಚಾರ ವೆಸಗಿದ್ದಾರೆ. ಸಮಾಜಕ್ಕೆ ಒಳ್ಳೆಯ ಸಂದೇಶ ಕಳಿಸಬೇಕೆಂದರೆ ಸರ್ಕಾರ ಈ ಬಗ್ಗೆ ತುರ್ತು ಮತ್ತು ಪರಿಣಾಮಕಾರಿ ಕ್ರಮವನ್ನು ಘೋಷಿಸಬೇಕು. ಇಲ್ಲದಿದ್ದರೆ ಇಡೀ ಆಡಳಿತವೇ ಕಡ್ಡಾಯ ರಜೆ ಮೇಲೆ ಹೋದಂತೆ ಜನ ಭಾವಿಸುತ್ತಾರೆ ಎಂದು ಹೇಳಿದ್ದಾರೆ.

ಒಟ್ಟಿನಲ್ಲಿ ಈ ರಾಸಲೀಲೆ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು ಪೊಲೀಸರ ನಡೆಯಿಂದಲೇ ಮೇಲಿಂದ ಮೇಲೆ ಸರ್ಕಾರಕ್ಕೆ ಮುಜುಗರ ಉಂಟು ಮಾಡುವ ಘಟನೆಗಳು ನಡೆಯುತ್ತಿವೆ. ಇದೀಗ ರಾಮಂಚಂದ್ರ ರಾಸಲೀಲೆ ಸಂಬಂಧ ಸಿಎಂ ಹಾಗೂ ಗೃಹ ಸಚಿವರು ಕೆಂಡಾಮಂಡಲರಾಗುದ್ದಾರೆ. ಹೀಗಾಗಿ ಡಿಜಿಪಿ ರಾಮಚಂದ್ರ ವಿರುದ್ಧ ಸೂಕ್ತ ಕ್ರಮಕೈಗೊಳ್ಳುವ ಎಲ್ಲಾ ಸಾಧ್ಯತೆಗಳಿವೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 5:01 pm, Mon, 19 January 26

Source link

ಬಿಗ್ ಬಾಸ್ ವಿನ್ನರ್ ಗಿಲ್ಲಿ ನಟ ಹೋದಲ್ಲೆಲ್ಲ ಜನಜಾತ್ರೆ: ಮುಗಿಬಿದ್ದ ಮದ್ದೂರು ಫ್ಯಾನ್ಸ್ – Kannada News | Bigg Boss Kannada Season 12 Winner Gilli Nata visits Maddur with BBK 12 Trophy

ಗಿಲ್ಲಿ ನಟ (Gilli Nata) ಅವರು ಬಿಗ್ ಬಾಸ್ ಟ್ರೋಫಿ ಗೆಲ್ಲಬೇಕು ಎಂದು ಕರ್ನಾಟಕದ ಜನರು ಬೆಂಬಲಿಸಿದ್ದರು. ಅದರಂತೆಯೇ ಆಗಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 12’ ವಿನ್ನರ್ ಆಗಿ ಗಿಲ್ಲಿ ನಟ ಅವರು ಹೊರಹೊಮ್ಮಿದ್ದಾರೆ. ಕಪ್ ಗೆದ್ದ ಬಳಿಕ ಗಿಲ್ಲಿ ಅವರು ಮಂಡ್ಯ, ಮದ್ದೂರು (Maddur), ಮಳವಳ್ಳಿಗೆ ಭೇಟಿ ನೀಡಿದ್ದಾರೆ. ಗಿಲ್ಲಿ ನಟ ಹೋದಲ್ಲೆಲ್ಲ ಜನಜಾತ್ರೆ ಸೇರುತ್ತಿದೆ. ಅವರ ಜೊತೆ ಸೆಲ್ಫಿ ತೆಗೆದುಕೊಳ್ಳಲು ಜನರು ಮುಗಿಬೀಳುತ್ತಿದ್ದಾರೆ. ಜನರನ್ನು ನಿಯಂತ್ರಿಸುವುದೇ ಕಷ್ಟ ಆಗುತ್ತಿದೆ. ಅಷ್ಟರಮಟ್ಟಿಗೆ ಗಿಲ್ಲಿ ಬಗ್ಗೆ ಜನರಿಗೆ ಕ್ರೇಜ್ ಸೃಷ್ಟಿ ಆಗಿದೆ. ಬಿಗ್ ಬಾಸ್ ಫಿನಾಲೆಯಲ್ಲಿ ರಕ್ಷಿತಾ ಶೆಟ್ಟಿ ಅವರು ಮೊದಲ ರನ್ನರ್ ಅಪ್ ಆದರು. ಅಶ್ವಿನಿ ಗೌಡ ಅವರು 2ನೇ ರನ್ನರ್ ಅಪ್ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬಂಗಾಳದ ಎಸ್​ಐಆರ್; ಹೊಂದಿಕೆಯಾಗದ 1.25 ಕೋಟಿ ಮತದಾರರ ಹೆಸರು ಘೋಷಿಸಲು ಚುನಾವಣಾ ಆಯೋಗಕ್ಕೆ ಸುಪ್ರೀಂ ಆದೇಶ – Kannada News | Bengal SIR Supreme Court orders Election Commission to display names of voters on logical discrepancies list

ನವದೆಹಲಿ, ಜನವರಿ 19: ಪಶ್ಚಿಮ ಬಂಗಾಳದಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ಪರಿಷ್ಕರಣೆಯ (SIR) ಸಮಯದಲ್ಲಿ “ತಾರ್ಕಿಕ ವ್ಯತ್ಯಾಸಗಳು” ಎಂದು ಗುರುತಿಸಲಾದ ಮತದಾರರ ಹೆಸರುಗಳನ್ನು ಸಾರ್ವಜನಿಕವಾಗಿ ಬಹಿರಂಗಗೊಳಿಸುವಂತೆ ಸುಪ್ರೀಂ ಕೋರ್ಟ್ ಇಂದು ಕೇಂದ್ರ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಿದೆ. ರಾಜ್ಯಾದ್ಯಂತ ಗ್ರಾಮ ಪಂಚಾಯತ್ ಭವನಗಳು, ತಾಲೂಕುಗಳ ಬ್ಲಾಕ್ ಕಚೇರಿಗಳು ಮತ್ತು ವಾರ್ಡ್ ಕಚೇರಿಗಳಲ್ಲಿ ಪಟ್ಟಿಯನ್ನು ಪ್ರದರ್ಶಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಚುನಾವಣಾ ಆಯೋಗದ ಪ್ರಕಾರ, ಪಶ್ಚಿಮ ಬಂಗಾಳದಲ್ಲಿ ಸುಮಾರು 1.25 ಕೋಟಿ ಮತದಾರರನ್ನು “ತಾರ್ಕಿಕ ವ್ಯತ್ಯಾಸಗಳು” ಪಟ್ಟಿಯಲ್ಲಿ ಇರಿಸಲಾಗಿದೆ. ಈ ವ್ಯತ್ಯಾಸಗಳು ಮುಖ್ಯವಾಗಿ 2002ರ ಮತದಾರರ ಪಟ್ಟಿಯೊಂದಿಗೆ ಮತದಾರರ ವಿವರಗಳನ್ನು ಲಿಂಕ್ ಮಾಡುವಲ್ಲಿನ ಸಮಸ್ಯೆಗಳಿಗೆ ಸಂಬಂಧಿಸಿವೆ. ಮತದಾರರ ಪೋಷಕರ ಹೆಸರು ಹಿಂದಿನ ದಾಖಲೆಗಳಿಗೆ ಹೊಂದಿಕೆಯಾಗದಿರುವ ಅಥವಾ ಮತದಾರರು ಮತ್ತು ಪೋಷಕರ ನಡುವಿನ ವಯಸ್ಸಿನ ಅಂತರವು ಬಹಳ ಕಡಿಮೆ ಇರುವ ಪ್ರಕರಣಗಳು ಈ ಸಮಸ್ಯೆಗಳಲ್ಲಿ ಸೇರಿವೆ. ಕೆಲವು ಪ್ರಕರಣಗಳಲ್ಲಿ ವಯಸ್ಸಿನ ವ್ಯತ್ಯಾಸವು 15 ವರ್ಷಗಳಿಗಿಂತ ಕಡಿಮೆ ಅಥವಾ 50 ವರ್ಷಗಳಿಗಿಂತ ಹೆಚ್ಚಾಗಿದೆ.

ಇದನ್ನೂ ಓದಿ: ಮಮತಾ ಬ್ಯಾನರ್ಜಿ ಸರ್ಕಾರ ನುಸುಳುಕೋರರನ್ನು ರಕ್ಷಿಸಲು ಎಸ್‌ಐಆರ್ ಅನ್ನು ವಿರೋಧಿಸುತ್ತಿದೆ; ಪ್ರಧಾನಿ ಮೋದಿ ಆರೋಪ

ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ತ್ರಿಸದಸ್ಯ ಪೀಠ, ನ್ಯಾಯಮೂರ್ತಿಗಳಾದ ದೀಪಂಕರ್ ದತ್ತ ಮತ್ತು ಜೋಯ್ಮಲ್ಯ ಬಾಗ್ಚಿ, ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಿಂದ ಪ್ರಭಾವಿತರಾಗಬಹುದಾದ ಮತದಾರರಿಗೆ ಪ್ರತಿಕ್ರಿಯಿಸಲು ನ್ಯಾಯಯುತ ಅವಕಾಶ ನೀಡಬೇಕು ಎಂದು ಹೇಳಿದೆ.

ಈ ಪ್ರಕ್ರಿಯೆಯನ್ನು ಸುಲಭಗೊಳಿಸಲು, ಪಂಚಾಯತ್ ಭವನಗಳು ಮತ್ತು ಬ್ಲಾಕ್ ಕಚೇರಿಗಳಲ್ಲಿ ದಾಖಲೆಗಳು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಸೌಲಭ್ಯಗಳನ್ನು ಸ್ಥಾಪಿಸಬೇಕು ಎಂದು ನ್ಯಾಯಾಲಯ ಆದೇಶಿಸಿದೆ. ಈ ಪ್ರಕ್ರಿಯೆಯ ಸಮಯದಲ್ಲಿ ರಾಜ್ಯ ಚುನಾವಣಾ ಆಯೋಗಕ್ಕೆ ಸಹಾಯ ಮಾಡಲು ಹೆಚ್ಚಿನ ಸಿಬ್ಬಂದಿಯನ್ನು ಒದಗಿಸುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ನಿರ್ದೇಶನ ನೀಡಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇದು ವಿದ್ಯುತ್ ಕ್ರಾಂತಿ..! ವೈಫೈ ಇಂಟರ್ನೆಟ್ ರೀತಿ ವೈರ್ಲೆಸ್ ಎಲೆಕ್ಟ್ರಿಸಿಟಿ ರವಾನಿಸಿದ ಫಿನ್​ಲ್ಯಾಂಡ್ ವಿಜ್ಞಾನಿಗಳು – Kannada News | Finland scientists successfully transmit electric power through the air without using physical wires

ಹೆಲ್ಸಿಂಕಿ, ಜನವರಿ 19: ಡಾಟಾ ಸೆಂಟರ್​ಗಳ ಸಿಸ್ಟಂಗಳಿಂದ ಸೃಷ್ಟಿಯಾಗುವ ಶಾಖ ಬಳಸಿ ವಿದ್ಯುತ್ ಉತ್ಪಾದಿಸುವ ಆವಿಷ್ಕಾರ ಮಾಡಿರುವ ಫಿನ್​ಲ್ಯಾಂಡ್ ಸಂಶೋಧಕರು ಇದೀಗ ಕೇಬಲ್ ವೈರ್ ಇಲ್ಲದೆಯೇ ವಿದ್ಯುತ್ ಹರಿಯಿಸುವ ಪ್ರಯೋಗ ನಡೆಸುತ್ತಿದ್ದಾರೆ. ಈ ನಿಟ್ಟಿನಲ್ಲಿ ತಂತ್ರಜ್ಞಾನ ಅಭಿವೃದ್ದಿ ಆಗುತ್ತಿದ್ದು ಇತ್ತೀಚಿನ ಆರಂಭಿಕ ಪ್ರಯೋಗಗಳು ಯಶಸ್ವಿಯಾಗಿವೆ. ಮುಂಬರುವ ದಿನಗಳಲ್ಲಿ ಇಂಟರ್ನೆಟ್ ಬಳಸುವ ರೀತಿಯಲ್ಲಿ ವಿದ್ಯುತ್ ಬಳಸುವ ಒಂದು ಟೆಕ್ನಾಲಜಿ ಬರುವ ಸಾಧ್ಯತೆ ದಟ್ಟವಾಗಿದೆ.

ವೈರ್ಲೆಸ್ ವಿದ್ಯುತ್ ಹೇಗೆ ಸಾಧ್ಯ?

ವೈಫೈ ಮೂಲಕ ಡಾಟಾ ವರ್ಗಾವಣೆ ಸಾಧ್ಯವಾಗುವಂತೆ, ಎಲೆಕ್ಟ್ರೋಮ್ಯಾಗ್ನೆಟಿಕ್ ಫೀಲ್ಡ್ (ವಿದ್ಯುದ್ಕಾಂತೀಯ) ಮತ್ತು ರಿಸೋನೆಂಟ್ ಕಪ್ಲಿಂಗ್ ಟೆಕ್ನಿಕ್ (ಪ್ರತಿಧ್ವನಿಸುವ) ಉಪಯೋಗಿಸಿ ಗಾಳಿ ಮೂಲಕ ವಿದ್ಯುತ್ ಅನ್ನು ಪ್ರವಹಿಸಬಹುದು ಎಂಬುದನ್ನು ಫಿನ್ನಿಶ್ ಸಂಶೋಧಕರು ತಮ್ಮ ಪ್ರಯೋಗಗಳಿಂದ ಸಾಬೀತುಪಡಿಸಿದ್ದಾರೆ.

ಇದನ್ನೂ ಓದಿ: ವಂದೇ ಭಾರತ್ ಸ್ಲೀಪರ್ ಟ್ರೈನ್​ನಲ್ಲಿ ಸಖತ್ ಫೀಚರ್ಸ್; ಟಿಕೆಟ್ ಕ್ಯಾನ್ಸಲೇಶನ್ ನಿಯಮಗಳೂ ಕಠಿಣ

ಹಲವಾರು ವರ್ಷಗಳಿಂದ ಈ ಕ್ಷೇತ್ರದಲ್ಲಿ ಪ್ರಯೋಗಗಳು ನಡೆಯುತ್ತಲೇ ಇವೆ. ಟ್ರಾನ್ಸ್​ಮಿಟ್ಟರ್ ಮತ್ತು ರಿಸೀವರ್ ನಡುವೆ ಯಾವುದೇ ಕೇಬಲ್ ಕನೆಕ್ಷನ್ ಇಲ್ಲದೆಯೇ, ರೇಡಿಯೋ ಫ್ರೀಕ್ವೆಸ್ಸಿ ಹೊಂದಾಣಿಕೆ ಮೂಲಕ ವಿದ್ಯುತ್ ಅನ್ನು ಸಾಗಿಸಲು ಸಾಧ್ಯ. ಅದನ್ನು ಸಾಧ್ಯವಾಗಿಸುವಂತಹ ತಂತ್ರಜ್ಞಾನದ ಆವಿಷ್ಕಾರಕ್ಕೆ ಪ್ರಯೋಗಗಳು ನಡೆಯುತ್ತಿವೆ. ಫಿನ್​ಲ್ಯಾಂಡ್ ವಿಜ್ಞಾನಿಗಳು ಒಂದು ಹಂತಕ್ಕೆ ಇದರಲ್ಲಿ ಯಶಸ್ವಿಯಾಗಿದ್ದಾರೆ. ಆದರೆ, ಸದ್ಯ ಬಹಳ ಕಿರು ಅಂತರಕ್ಕೆ ಮಾತ್ರ ಈ ವಿದ್ಯುತ್ ವರ್ಗಾವಣೆ ಮಾಡಲು ಸಾಧ್ಯ.

ಅಮೆರಿಕದ ‘ದರ್ಪ’ದಿಂದಲೂ ಇಂಥದ್ದೊಂದು ಪ್ರಯೋಗ

ಅಮೆರಿಕದ ಡಿಫೆನ್ಸ್ ರಿಸರ್ಚ್ ಸಂಸ್ಥೆಯಾದ ದರ್ಪ (DARPA) ಕೂಡ ವೈರ್ಲೆಸ್ ಎಲೆಕ್ಟ್ರಿಸಿಟಿ ತಂತ್ರಜ್ಞಾನದಲ್ಲಿ ಯಶಸ್ವಿಯಾಗಿದೆ. ಲೇಸರ್ ಮೂಲಕ ವೈರ್ಲೆಸ್ ಆಗಿ ಸುಮಾರು 8-9 ಕಿಮೀ ದೂರ ವಿದ್ಯುತ್ ಅನ್ನು ಹರಿಯಿಸಲು ಯಶಸ್ವಿಯಾಗಿದೆ. ಪರ್ಸಿಸ್ಟೆಂಟ್ ಆಪ್ಟಿಕಲ್ ವೈರ್ಲೆಸ್ ಎನರ್ಜಿ ರಿಲೇ ಯೋಜನೆ ಭಾಗವಾಗಿ ನಡೆದ ಇತ್ತೀಚಿನ ಪ್ರಯೋಗದಲ್ಲಿ 8.6 ಕಿಮೀ ದೂರಕ್ಕೆ 800 ವ್ಯಾಟ್​ನಷ್ಟು ವಿದ್ಯುತ್ ಅನ್ನು ರವಾನಿಸುವಲ್ಲಿ ಯಶಸ್ವಿ ಆಗಿದೆ. ಈ ಹಿಂದೆ ಇದೇ ಸಂಸ್ಥೆಯು 1.7 ಕಿಮೀ ದೂರ 25 ಸೆಕೆಂಡುಗಳ ಕಾಲ 230 ವ್ಯಾಟ್ ವಿದ್ಯುತ್ ಅನ್ನು ಹರಿಸಿತ್ತು.

ಇದನ್ನೂ ಓದಿ: ಕೇಂದ್ರ ಸರ್ಕಾರಿ ನೌಕರರಿಗೆ ಹೊಸ ಸ್ಯಾಲರಿ ಅಕೌಂಟ್; ಅಗ್ಗದ ಸಾಲ, ಭರ್ಜರಿ ಇನ್ಷೂರೆನ್ಸ್, ಝೀರೋ ಬ್ಯಾಲನ್ಸ್

ವೈರ್ಲೆಸ್ ವಿದ್ಯುತ್ ರವಾನೆ ತತ್ವ ಹೊಸದೇನಲ್ಲ. ಇದರ ಪ್ರಯೋಗ ಆರಂಭಕ್ಕೆ ಶತಮಾನಕ್ಕೂ ಹೆಚ್ಚಿನ ಇತಿಹಾಸ ಇದೆ. ಇತ್ತೀಚೆಗೆ ಈ ಬಗ್ಗೆ ಕುತೂಹಲ ಮತ್ತು ಆಸಕ್ತಿ ಹೆಚ್ಚುತ್ತಿದೆ. ಬಾಹ್ಯಾಕಾಶದಲ್ಲಿ ಸೂರ್ಯನ ಶಕ್ತಿ ಬಳಸಿ ವಿದ್ಯುತ್ ತಯಾರಿಸಿ ಭೂಮಿಗೆ ಹರಿಯಿಸುವ ತಂತ್ರಜ್ಞಾನದ ಆವಿಷ್ಕಾರಕ್ಕೂ ಪ್ರಯೋಗಗಳು ನಡೆಯುತ್ತಿವೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಾಳೆಹಣ್ಣನ್ನು ಈ ಸಮಯದಲ್ಲಿ ತಿನ್ನುವುದರಿಂದ ಸಿಗುತ್ತೆ ಊಹಿಸಲೂ ಸಾಧ್ಯವಾಗದ ಪ್ರಯೋಜನ! – Kannada News | Best Time to Eat Bananas for Energy & Digestion

ವರ್ಷಪೂರ್ತಿ ಲಭ್ಯವಿರುವ ಹಣ್ಣುಗಳಲ್ಲಿ ಬಾಳೆಹಣ್ಣುಗಳು ಕೂಡ ಒಂದು. ಮಕ್ಕಳಿಂದ ಹಿಡಿದು ವಯಸ್ಕರವರೆಗೆ ಎಲ್ಲರೂ ಬಾಳೆಹಣ್ಣು (Bananas) ತಿನ್ನಲು ಇಷ್ಟಪಡುತ್ತಾರೆ. ಆದರೆ ಬಾಳೆಹಣ್ಣನ್ನು ಯಾವಾಗಲೂ ಸರಿಯಾದ ರೀತಿಯಲ್ಲಿ ಮತ್ತು ಸರಿಯಾದ ಸಮಯಕ್ಕೆ ಸೇವನೆ ಮಾಡಿದಾಗ ಮಾತ್ರವೇ ಸಾಕಷ್ಟು ಪ್ರಯೋಜನಗಳು ಸಿಗಲು ಸಾಧ್ಯವಾಗುತ್ತದೆ. ಜೊತೆಗೆ ಅವುಗಳಲ್ಲಿರುವ ಪೋಷಕಾಂಶಗಳು ಸಂಪೂರ್ಣವಾಗಿ ದೇಹ ಹೀರಿಕೊಳ್ಳಲು ಸಹಾಯ ಮಾಡುತ್ತೆ. ಹಾಗಾಗಿ ಬಾಳೆಹಣ್ಣುಗಳು ಒಳ್ಳೆಯದು ಎಂದು ಮನ ಬಂದಾಗ ತಿನ್ನುವುದನ್ನು ಬಿಟ್ಟು ಅದನ್ನು ಯಾವಾಗ ಸೇವನೆ ಮಾಡಿದರೆ ಒಳ್ಳೆಯದು ಎಂದು ತಿಳಿದುಕೊಂಡು ಅದನ್ನು ಪಾಲನೆ ಮಾಡುವುದು ಒಳಿತು. ಇದರಿಂದ ನೀವು ಊಹಿಸಲೂ ಸಾಧ್ಯವಾಗದಂತಹ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು.

  • ಬೆಳಿಗ್ಗೆ ಎದ್ದ ತಕ್ಷಣ ಬಾಳೆಹಣ್ಣು ತಿನ್ನುವುದರಿಂದ ದೇಹಕ್ಕೆ ಶಕ್ತಿ ದೊರೆಯುತ್ತದೆ. ಇದರಲ್ಲಿರುವ ವಿಟಮಿನ್ ಬಿ6 ಮತ್ತು ಪೊಟ್ಯಾಸಿಯಮ್ ರಕ್ತ ಪರಿಚಲನೆ ಸುಧಾರಿಸಲು ಸಹಾಯ ಮಾಡುತ್ತದೆ. ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಬೆಳಿಗ್ಗೆ ಎದ್ದು ಬಾಳೆಹಣ್ಣು ತಿನ್ನುವುದು ಬಹಳ ಪ್ರಯೋಜನಕಾರಿ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
  • ಜಿಮ್‌ಗೆ ಹೋಗುವ ಮೊದಲು ಅಥವಾ ವ್ಯಾಯಾಮ ಮಾಡುವ ಮೊದಲು 1 ಅಥವಾ 2 ಬಾಳೆಹಣ್ಣುಗಳನ್ನು ತಿನ್ನುವುದು ಒಳ್ಳೆಯದು. ಬಾಳೆಹಣ್ಣಿನಲ್ಲಿರುವ ಕಾರ್ಬೋಹೈಡ್ರೇಟ್‌ಗಳು ವ್ಯಾಯಾಮಕ್ಕೆ ಅಗತ್ಯವಾದ ಶಕ್ತಿಯನ್ನು ಒದಗಿಸುತ್ತವೆ. ಹೆಚ್ಚುವರಿಯಾಗಿ, ಬಾಳೆಹಣ್ಣಿನಲ್ಲಿರುವ ಪೊಟ್ಯಾಸಿಯಮ್ ಸ್ನಾಯು ಸೆಳೆತವನ್ನು ತಡೆಯುತ್ತದೆ ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ.
  • ಊಟದ ನಂತರ ಬಾಳೆಹಣ್ಣು ತಿನ್ನುವುದರಿಂದ ಜೀರ್ಣಕ್ರಿಯೆ ವೇಗಗೊಳ್ಳುತ್ತದೆ. ಬಾಳೆಹಣ್ಣಿನಲ್ಲಿರುವ ನಾರಿನಾಂಶ ಆಹಾರವನ್ನು ಜೀರ್ಣಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದು ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ ಮತ್ತು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ.
  • ಸಂಜೆ 4 ರಿಂದ 6 ಗಂಟೆಯ ನಡುವೆ ಹಸಿವಾದಾಗ ಜಂಕ್ ಫುಡ್ ತಿನ್ನುವ ಬದಲು ಬಾಳೆಹಣ್ಣು ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು. ಇದು ಎಣ್ಣೆ ತಿಂಡಿ ತಿನ್ನುವ ಅಭ್ಯಾಸವನ್ನು ತಡೆಯಲು ಸಹಾಯ ಮಾಡುತ್ತದೆ ಮತ್ತು ದೇಹಕ್ಕೆ ಅಗತ್ಯವಾದ ಪೋಷಕಾಂಶಗಳನ್ನು ಸಹ ಒದಗಿಸುತ್ತದೆ. ಹಾಗಾಗಿ ಮಕ್ಕಳು ಶಾಲೆಯಿಂದ ಬಂದ ಬಳಿಕ ಒಂದು ಬಾಳೆಹಣ್ಣನ್ನು ಕೊಡಿ. ಆದರೆ ಯಾವುದೇ ಕಾರಣಕ್ಕೂ 7 ಗಂಟೆಯ ನಂತರ ಸಾಧ್ಯವಾದಷ್ಟು ಹಣ್ಣುಗಳ ಸೇವನೆ ಮಾಡುವುದನ್ನು ತಪ್ಪಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿರೋಧಿಗಳಿಗೆ ಜಿ.ಟಿ. ದೇವೇಗೌಡ ಟಕ್ಕರ್​​: JDSನಿಂದ ಹೊರ ಬರ್ತಾರಾ ಹಾಲಿ ಶಾಸಕ? – Kannada News | JDS MLA G.T. Devegowda Clarifies Rumours, Says He Will Remain in the Party

ಮೈಸೂರು, ಜನವರಿ 19: ರಾಜ್ಯದಲ್ಲಿ ಮುಂಬರಲಿರುವ ವಿಧಾನ ಸಭೆ ಚುನಾವಣೆಯಲ್ಲಿ JDSನಿಂದ ಮೈಸೂರಿನ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಾ.ರಾ. ಮಹೇಶ್​ ಸ್ಪರ್ಧೆ ಮಾಡ್ತಾರೆ ಎನ್ನುವ ವಿಚಾರ ಮುನ್ನೆಲೆಗೆ ಬಂದಿತ್ತು. ಆ ಮೂಲಕ ಪಕ್ಷದಿಂದ ಅಂತರ ಕಾಯ್ದುಕೊಂಡಿರುವ ಹಾಲಿ ಶಾಸಕ ಜಿ.ಟಿ. ದೇವೇಗೌಡರಿಗೆ ಶಾಕ್​​ ಕೊಡಲು ದಳಪತಿಗಳು ಮುಂದಾದ್ರಾ ಎನ್ನುವ ಪ್ರಶ್ನೆ ಉದ್ಭವಿಸಿತ್ತು. ಇದೇ ವಿಚಾರವಾಕ್ಕೀಗ ಸ್ವತಃ ಜಿಟಿಡಿ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ.

ಜಿ.ಟಿ. ದೇವೇಗೌಡರು ಹೇಳಿದ್ದೇನು?

ವಿಧಾನಸಭಾ ಚುನಾವಣೆಗೆ ಇನ್ನೂ ಎರಡೂವರೆ ವರ್ಷ ಇದ್ದು, ನಮ್ಮ ಪಕ್ಷದ ಕಾರ್ಯಕರ್ತರಿಗೆ ಯಾವುದೇ ಆತಂಕ ಬೇಡ. ಚುನಾವಣೆ ಬಂದಾಗ ಬೇರೆ ವಿಚಾರದ ಬಗ್ಗೆ ಚರ್ಚೆ ಮಾಡೋಣ. ಈಗ ಜೆಡಿಎಸ್​ನಲ್ಲಿ ಇದ್ದೇನೆ, ಜೆಡಿಎಸ್​ನಿಂದ ಒಂದು ಹೆಜ್ಜೆ ತೆಗೆದಿಲ್ಲ. ಕೆಲ ವಿಚಾರದಲ್ಲಿ ನೋವಾಗಿದೆ, ಅದು ನಾಯಕರಿಗೂ ಗೊತ್ತಿದೆ. ಹಾಗಂತ ನನಗೆ ನೋವಾಗಿದೆ ಅಂತಾ ಪಕ್ಷದಿಂದ ಹೊರ ಹೋಗಿಲ್ಲ. ಜೆಡಿಎಸ್ ವಿರುದ್ಧವಾಗಿ ನಾನು ಯಾವತ್ತೂ ಮಾತನಾಡಿಲ್ಲ. ಒಳ್ಳೆಯ ಟೈಮ್ ಬರುತ್ತದೆ, ಎಲ್ಲವೂ ಒಳ್ಳೆಯದಾಗುತ್ತೆ. ಕಾಲ ಕಳೆದಂತೆ ಎಲ್ಲಾ ಮುನಿಸು ನೋವು ಮಾಯವಾಗುತ್ತೆ ಎಂದು ಮೈಸೂರಿನಲ್ಲಿ ಜೆಡಿಎಸ್ ಶಾಸಕ ಜಿ.ಟಿ.ದೇವೇಗೌಡ ಹೇಳಿದ್ದಾರೆ.

ಇದನ್ನೂ ಓದಿ: ಜಿ.ಟಿ. ದೇವೇಗೌಡರಿಗೆ ಭರ್ಜರಿ ಶಾಕ್​​ ಕೊಡುತ್ತಾ ಜೆಡಿಎಸ್​​? ವರಿಷ್ಠರ ನಡೆಯೇನು?

ತಮ್ಮ ಅನುಪಸ್ಥಿತಿಯಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ಸಭೆ ವಿಚಾರ ಸಂಬಂಧವೂ ಮಾತನಾಡಿರುವ ಅವರು, ಯಾರಿಗೂ ದ್ರೋಹ ಮಾಡುವ ಬುದ್ಧಿ ನನಗಿಲ್ಲ. ಸಿದ್ದರಾಮಯ್ಯ ಕಾಂಗ್ರೆಸ್​ಗೆ ಹೋದ ಮೇಲೆ JDS ಕಟ್ಟಿದ್ದೇನೆ. ಹೆಚ್​.ಡಿ. ದೇವೇಗೌಡ, H.D. ಕುಮಾರಸ್ವಾಮಿ ಜೊತೆಗೆ ಒಟ್ಟಾಗಿ ಇದ್ದೇನೆ. ಕುಮಾರಸ್ವಾಮಿ ಸಿಎಂ ಆಗಬೇಕೆಂದು ಪಕ್ಷ ಕಟ್ಟಿದ್ದೇನೆ. ಜೆಡಿಎಸ್​ನಲ್ಲಿ ಗಟ್ಟಿಯಾಗಿ ಇದ್ದೇನೆ‌, ಜೆಡಿಎಸ್​ನಲ್ಲೇ ಇರುತ್ತೇನೆ. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕೆಲಸ ಜಾಸ್ತಿ ಇದೆ ಎಂದವರು ಹೇಳಿದ್ದಾರೆ.

ಜಿಟಿಡಿ ಮೇಲೆ ಮುಖಂಡರ ಮುನಿಸೇಕೆ?

ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ ಜಿ.ಟಿ. ದೇವೇಗೌಡ ಪಕ್ಷಕ್ಕೆ ಮೋಸ ಮಾಡಿದ್ದಾರೆ . MLC ಚುನಾವಣೆಯಲ್ಲೂ ಪಕ್ಷ ವಿರೋಧಿ ಕೆಲಸ ಮಾಡಿದ್ದಾರೆ ಎಂಬುದು ಜೆಡಿಎಸ್​​ ಮುಖಂಡರ ಪ್ರಮುಖ ಆರೋಪ. ಅಲ್ಲದೆ ಜೆಡಿಎಸ್​​ ಶಾಸಕರಾಗಿರುವ ಜಿಟಿಡಿ ಪದೇ ಪದೇ ಸಿದ್ದರಾಮಯ್ಯ ಸೇರಿದಂತೆ ಇತರ ನಾಯಕರನ್ನು ಹೊಗಳುತ್ತಿದ್ದಿದ್ದು ಪಕ್ಷಕ್ಕೆ ಮುಜುಗರವನ್ನೂ ತಂದಿದೆ ಎಂಬುದು ಕೆಲ ನಾಯಕರ ಅಭಿಪ್ರಾಯ ಎನ್ನಲಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ತಮಿಳುನಾಡು ಚುನಾವಣೆ, ಜನವರಿ 23ರಂದು ಎನ್​ಡಿಎ ಪರ ಪ್ರಚಾರಕ್ಕೆ ಚಾಲನೆ ನೀಡಲಿದ್ದಾರೆ ಪ್ರಧಾನಿ ಮೋದಿ – Kannada News | Narendra Modi Set to Sound Poll Bugle in Tamil Nadu as NDA Gears Up

ಚೆನ್ನೈ, ಜನವರಿ 19: ಮುಂಬರುವ ತಮಿಳುನಾಡು ವಿಧಾನಸಭಾ ಚುನಾವಣೆ(Assembly Election)ಗೆ ಪ್ರಧಾನಿ ನರೇಂದ್ರ ಮೋದಿ ಜನವರಿ 23 ರಂದು ಮಧುರಾಂತಕಂನಿಂದ ಎನ್‌ಡಿಎ ಚುನಾವಣಾ ಪ್ರಚಾರವನ್ನು ಪ್ರಾರಂಭಿಸಲಿದ್ದಾರೆ. ಆಡಳಿತಾರೂಢ ಡಿಎಂಕೆ ಸರ್ಕಾರದ ವಿರುದ್ಧ ಎನ್‌ಡಿಎ ಚುನಾವಣಾ ಪ್ರಚಾರವನ್ನು ಔಪಚಾರಿಕವಾಗಿ ಪ್ರಾರಂಭಿಸುವ ಮೂಲಕ ಪ್ರಧಾನಿ ಬೃಹತ್ ಸಾರ್ವಜನಿಕ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ ಎಂದು ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ನೈನಾರ್ ನಾಗೇಂದ್ರನ್ ತಿಳಿಸಿದ್ದಾರೆ.

ಎನ್‌ಡಿಎ ಮಿತ್ರಪಕ್ಷಗಳ ಅಂತಿಮ ಪಟ್ಟಿಯ ಬಗ್ಗೆ ಕೇಳಿದಾಗ, ನಾಗೇಂದ್ರನ್ ಹೆಸರುಗಳ ಬಗ್ಗೆ ಮೌನವಾಗಿದ್ದರು ಆದರೆ ತಮ್ಮ ಪಕ್ಷವು ಬಲವಾದ ಪ್ರದರ್ಶನ ನೀಡುವ ಭರವಸೆ ನೀಡಿದರು.
ಎನ್‌ಡಿಎ ಮೈತ್ರಿಕೂಟದ ಅಂತಿಮ ಪಟ್ಟಿಯಲ್ಲಿ ಟಿಟಿವಿ ದಿನಕರನ್ ಅವರ ಎಎಂಎಂಕೆ, ಮಾಜಿ ಮುಖ್ಯಮಂತ್ರಿ ಓ ಪನ್ನೀರ್‌ಸೆಲ್ವಂ ಮತ್ತು ಡಿಎಂಡಿಕೆ ಸೇರ್ಪಡೆಯಾಗುವ ಸಾಧ್ಯತೆಯ ಬಗ್ಗೆ ನಿರಂತರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ನಾಗೇಂದ್ರನ್, ಯಾವುದೇ ನಿರ್ದಿಷ್ಟ ಪಕ್ಷ ಅಥವಾ ನಾಯಕನ ಹೆಸರನ್ನು ಹೇಳಲು ನಿರಾಕರಿಸಿದರು.

ಎಐಎಡಿಎಂಕೆ ಈಗಾಗಲೇ ಪಿಎಂಕೆಯ ಒಂದು ಬಣದೊಂದಿಗೆ ಮೈತ್ರಿ ಮಾಡಿಕೊಂಡಿದೆ. ಸಂಸ್ಥಾಪಕ ಡಾ. ರಾಮದಾಸ್ ತಮ್ಮ ಮಗ ಅನ್ಬುಮಣಿ ರಾಮದಾಸ್ ಅವರನ್ನು ಹೊರಹಾಕಿದ ನಂತರ ಪಕ್ಷ ವಿಭಜನೆಯಾಗಿದೆ.ತಂದೆ ಇನ್ನೂ ಮೈತ್ರಿಗಳ ಬಗ್ಗೆ ತಮ್ಮ ಅಂತಿಮ ನಿಲುವನ್ನು ಬಹಿರಂಗಪಡಿಸಿಲ್ಲ, ಆದರೆ ಅನ್ಬುಮಣಿ ಈಗಾಗಲೇ ಎಐಎಡಿಎಂಕೆ ಜೊತೆ ಕೈಜೋಡಿಸಿ ಎನ್‌ಡಿಎ ಜೊತೆ ಮೈತ್ರಿ ಮಾಡಿಕೊಂಡಿದ್ದಾರೆ. ಟಿವಿಕೆ ಡಿಎಂಕೆ ಮತ್ತು ಬಿಜೆಪಿ ಎರಡರಿಂದಲೂ ಬಹಿರಂಗವಾಗಿ ಸಮಾನ ಅಂತರ ಕಾಯ್ದುಕೊಂಡಿದೆ.

ಮತ್ತಷ್ಟು ಓದಿ: ತಮಿಳುನಾಡು ಚುನಾವಣೆಗೆ ನಟ ವಿಜಯ್ ಸಿಎಂ ಅಭ್ಯರ್ಥಿ; ಟಿವಿಕೆ ಅಧಿಕೃತ ಘೋಷಣೆ

ಆದಾಗ್ಯೂ, ಎಐಎಡಿಎಂಕೆಯ ಒಂದು ಭಾಗ ನಾಯಕರು ವಿಜಯ್ ತಂಡದೊಂದಿಗೆ ರಹಸ್ಯ ಚರ್ಚೆಗಳಲ್ಲಿ ತೊಡಗಿದ್ದಾರೆ ಎಂದು ಹೇಳಲಾಗುತ್ತಿದೆ. ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಮತ್ತು ಭ್ರಷ್ಟಾಚಾರದ ಬಗ್ಗೆ ಸಾರ್ವಜನಿಕರ ಆಕ್ರೋಶವು ಈ ಬಾರಿ ಆಡಳಿತಾರೂಢ ಸ್ಟಾಲಿನ್ ಸರ್ಕಾರವನ್ನು ದುರ್ಬಲಗೊಳಿಸಬಹುದು ಎಂಬುದು ಬಿಜೆಪಿಯ ನಂಬಿಕೆಯಾಗಿದೆ.

ಇದನ್ನೇ ಲಾಭ ಮಾಡಿಕೊಳ್ಳಲು ಪ್ರಧಾನಿ ಮೋದಿಯವರಿಂದ ಪ್ರಚಾರವನ್ನು ಮೊದಲೇ ಪ್ರಾರಂಭಿಸಲು ಮುಂದಾಗಿದೆ. ಪ್ರಧಾನಿ ಮೋದಿ ಮುಂಬರುವ ವಾರಗಳಲ್ಲಿ ತಮಿಳುನಾಡಿನಾದ್ಯಂತ ಸರಣಿ ಪ್ರಚಾರ ಆರಂಭಿಸಲಿದ್ದಾರೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಓಡೇ ಭೈರವೇಶ್ವರನಿಗೆ ಭಕ್ತರಿಂದ ಮದ್ಯದ ನೈವೇದ್ಯ!

ತುಮಕೂರು, ಜನವರಿ 19: ಜಿಲ್ಲೆಯ ಭೈರವೇಶ್ವರ ದೇವಸ್ಥಾನದಲ್ಲಿ ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ವಿಶಿಷ್ಟ ಆಚರಣೆ ಇಂದು ಕೂಡ ಮುಂದುವರಿದಿದೆ. ಇಲ್ಲಿ ಭಕ್ತರು ಓಡೆ ಭೈರವೇಶ್ವರ ದೇವರಿಗೆ ಮದ್ಯ ಹಾಗೂ ಮಾಂಸವನ್ನು ನೈವೇದ್ಯವಾಗಿ ಅರ್ಪಿಸುವ ಸಂಪ್ರದಾಯವಿದೆ. ಹರಕೆ ತೀರಿಸಲು ತರಲಾಗುವ ಈ ನೈವೇದ್ಯವನ್ನು ಪೂಜೆಯ ನಂತರ ಭಕ್ತರಿಗೆ ಪ್ರಸಾದವಾಗಿ ವಿತರಿಸಲಾಗುತ್ತದೆ. ದೇವಸ್ಥಾನದಲ್ಲಿ ಗಂಡು-ಹೆಣ್ಣು ಭೇದವಿಲ್ಲದೆ ಎಲ್ಲರೂ ಮದ್ಯ ಮತ್ತು ಮಾಂಸವನ್ನು ಪ್ರಸಾದವಾಗಿ ಸೇವನೆ ಮಾಡುತ್ತಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

T20 World Cup 2026: ಪಾಕಿಸ್ತಾನ ಮೂಲದ 42 ಆಟಗಾರರು, ಸಿಬ್ಬಂದಿಗೆ ಭಾರತೀಯ ವೀಸಾ – Kannada News | T20 World Cup 2026: ICC Resolves India Visa Issues for Pakistan Origin Players

ವಾಸ್ತವವಾಗಿ, ಪಾಕಿಸ್ತಾನದೊಂದಿಗಿನ ಸಂಬಂಧಗಳು ಹದಗೆಟ್ಟಿರುವುದರಿಂದ, ಭಾರತ ಸರ್ಕಾರ ಇತ್ತೀಚೆಗೆ ಈ ವೀಸಾ ನೀತಿಯನ್ನು ಅಳವಡಿಸಿಕೊಂಡಿದೆ. ಭಾರತ ಪ್ರವಾಸ ಮಾಡುವ ಯಾವುದೇ ತಂಡದಲ್ಲಿ ಪಾಕಿಸ್ತಾನಿ ಮೂಲದ ಸದಸ್ಯರಿಗೆ ವೀಸಾ ಪರಿಶೀಲನೆ ಹೆಚ್ಚು ಕಠಿಣವಾಗಿದ್ದು, ಆಗಾಗ್ಗೆ ವಿಳಂಬಕ್ಕೆ ಕಾರಣವಾಗುತ್ತದೆ.

Source link

Exit mobile version