Headlines

IPL 2026: ಲೀಗ್ ಹಂತದಲ್ಲಿ ಮತ್ತೆ ಮುಖಾಮುಖಿಯಾಗಲ್ಲ ಆರ್​ಸಿಬಿ- ಸಿಎಸ್​ಕೆ..!

ಅಂತರರಾಷ್ಟ್ರೀಯ ಕ್ರಿಕೆಟ್​ನಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಕ್ಕೆ ಇರುವಷ್ಟೇ ಮಹತ್ವ ಐಪಿಎಲ್‌ನಲ್ಲಿ (IPL) ಆರ್​ಸಿಬಿ ಹಾಗೂ ಸಿಎಸ್​ಕೆ (RCB vs CSK) ನಡುವಿನ ಪಂದ್ಯಕ್ಕೆ ಇರುತ್ತದೆ. ಈ ಉಭಯ ತಂಡಗಳ ಮುಖಾಮುಖಿಯನ್ನು ನೋಡಲು ಅಭಿಮಾನಿಗಳು ವರ್ಷಗಳಿಂದ ಕಾದು ಕುಳಿತಿರುತ್ತಾರೆ. ಹಾಗೆಯೇ ಪಂದ್ಯಗಳು ನಡೆದಾಗ ಕ್ರೀಡಾಂಗಣಗಳು ತುಂಬಿ ತುಳುಕುತ್ತಿರುತ್ತವೆ. ಇದನ್ನು ಗಮನಿಸಿಯೇ ಬಿಸಿಸಿಐ, ಲೀಗ್ ಹಂತದಲ್ಲಿ ಆರ್​ಸಿಬಿ ಹಾಗೂ ಸಿಎಸ್‌ಕೆ ನಡುವೆ ಎರಡು ಪಂದ್ಯಗಳನ್ನು ಆಯೋಜನೆ ಮಾಡುತ್ತದೆ. ಇದರಿಂದ ಅಭಿಮಾನಿಗಳು ಎರಡು ಬಾರಿ ಈ ತಂಡಗಳ ನಡುವಿನ…

Read More

ಚಾಕೋಲೇಟ್ ಕೊಳ್ಳಲು ಅಂಗಡಿಗೆ ಬಂದ, ಚಿನ್ನದ ಸರ ಎಳೆದುಕೊಂಡು ಓಡಿದ!

ನವದೆಹಲಿ, ಏಪ್ರಿಲ್ 6: ವಿಕ್ಸ್ ಚಾಕೋಲೇಟ್ ಖರೀದಿ ಮಾಡಲು ಅಂಗಡಿಗೆ ಬಂದ ಕಳ್ಳನೊಬ್ಬ ಅಂಗಡಿಯ ಮಾಲೀಕಳ ಕುತ್ತಿಗೆಯಿಂದ ಚಿನ್ನದ ಸರವನ್ನು ಎಳೆದುಕೊಂಡಿದ್ದಾನೆ. ದಿನಸಿ ಅಂಗಡಿಯಲ್ಲಿ ನಡೆದ ಈ ಚಿನ್ನದ ಸರ ಕಿತ್ತುಕೊಂಡ ಘಟನೆ ಅಲ್ಲಿನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಅದರಲ್ಲಿ ಕಳ್ಳನ ಮುಖವೂ ಸ್ಪಷ್ಟವಾಗಿ ದಾಖಲಾಗಿದೆ. ಸಂಜೆ ದಿನಸಿ ಅಂಗಡಿಗೆ ಬಂದ ಅಪರಿಚಿತನೊಬ್ಬ ವಿಕ್ಸ್ ಚಾಕೋಲೇಟ್​ಗಳನ್ನು ಕೇಳಿದ. ಇದಕ್ಕೆ ಅಂಗಡಿಯಲ್ಲಿದ್ದ ಮಹಿಳೆ ಅವನಿಗೆ ವಿಕ್ಸ್ ಕೊಟ್ಟಳು. ಆಗ ಚಿಲ್ಲರೆ ಹಣ ನೀಡಲು ಹತ್ತಿರ ಬಂದ ಆ ಕಳ್ಳ ಆಕೆಯ…

Read More

ಬಿಕ್ಲು ಶಿವ ಕೊಲೆ ಕೇಸ್: ಜೈಲಿನಿಂದ ಹೊರಬಂದಿದ್ದರೂ ಭೈರತಿ ಬಸವರಾಜ್​​ಗೆ ಎದುರಾಯ್ತು ಸಂಕಷ್ಟ

ಬೆಂಗಳೂರು, ಏಪ್ರಿಲ್​​ 06: ರೌಡಿಶೀಟರ್​ ಬಿಕ್ಲು ಶಿವ ಕೊಲೆ ಪ್ರಕರಣ ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿತ್ತು. ಇದೇ ಕೇಸ್​ನಲ್ಲಿ ಬಂಧನಕ್ಕೊಳಗಾಗಿದ್ದ ಕೆ.ಆರ್ ಪುರಂ ಶಾಸಕ ಭೈರತಿ ಬಸವರಾಜ್ (Byrathi Basavaraj) ಇತ್ತೀಚೆಗೆ ಜಾಮೀನು ಮೇಲೆ ಬಿಡುಗಡೆಯಾಗಿದ್ದರು. ಇದೀಗ ಜಾಮೀನು ರದ್ದುಪಡಿಸುವಂತೆ ಕೋರಿ ಸಿಐಡಿ ಪೊಲೀಸರಿಂದ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ. ಆ ಮೂಲಕ ಭೈರತಿ ಬಸವರಾಜ್​​ಗೆ ಮತ್ತೆ ಸಂಕಷ್ಟ ಶುರುವಾಗಿದೆ. ರೌಡಿಶೀಟರ್ ಬಿಕ್ಲು ಶಿವ ಅಲಿಯಾಸ್ ಶಿವಕುಮಾರ್ ಕೊಲೆ ಪ್ರಕರಣದಲ್ಲಿ 5ನೇ ಆರೋಪಿಯಾಗಿರುವ ಕೆ.ಆರ್.ಪುರಂ ಬಿಜೆಪಿ ಶಾಸಕ…

Read More

‘ನಾನು ಸ್ಟಾರ್ ಅಲ್ಲ, ಕಲಾವಿದೆ; ಕಲಾವಿದರಿಗೆ ಸಾವಿಲ್ಲ’: ನಟಿ ಶ್ರುತಿ ಹರಿಹರನ್

ನಟಿ ಶ್ರುತಿ ಹರಿಹರನ್ (Sruthi Hariharan) ಅವರು ಸಿನಿಮಾಗಳ ಆಯ್ಕೆಯಲ್ಲಿ ಬಹಳ ಚ್ಯೂಸಿ. ವಯಸ್ಸು ಆಗುತ್ತಿದ್ದಂತೆಯೇ ಇನ್ನೂ ಉತ್ತಮವಾದ ಪಾತ್ರಗಳು ಸಿಗುತ್ತಿವೆ ಎಂಬ ಖುಷಿ ಅವರಿಗೆ ಇದೆ. ‘ಲೈಫ್ ಚೆನ್ನಾಗಿ ನಡೆಯುತ್ತಿದೆ. ಇನ್ನೊಂದು ಬಿಸ್ನೆಸ್ ಕೂಡ ಶುರು ಮಾಡಿದ್ದೇನೆ. ಮನೆ, ಮಗು, ಸಿನಿಮಾ ಜೊತೆ ಬ್ಯುಸಿ ಆಗಿದ್ದೇನೆ. ಎನ್​ಹೆಚ್​ 66 ಸಿನಿಮಾ ಕೂಡ ನನಗೆ ಚಾಲೆಂಜಿಂಗ್ ಆಗಿದೆ. 15 ವರ್ಷಗಳಲ್ಲಿ ಅಂದಾಜು 40 ಪಾತ್ರ ಮಾಡಿರುತ್ತೇನೆ. ಆದರೆ ಅವುಗಳಿಗಿಂತ ಡಿಫರೆಂಟ್ ಆಗಿರುವ ಪಾತ್ರ ಈ ಸಿನಿಮಾದಲ್ಲಿ ನನಗೆ…

Read More

ಮದುವೆ ಬಳಿಕ ಮೊದಲ ಬಾರಿ ತವರಿಗೆ ಬಂದ ರಶ್ಮಿಕಾ: ಮಗಳಿಗೆ ಬಂಗಲೆ ಗಿಫ್ಟ್ ಕೊಟ್ಟ ತಂದೆ

ಸ್ಯಾಂಡಲ್‌ವುಡ್‌ನಿಂದ ಬಣ್ಣದ ಬದುಕು ಆರಂಭಿಸಿ ಬಳಿಕ ನ್ಯಾಷನಲ್ ಕ್ರಶ್ ಆಗಿ ಮಿಂಚಿದ ನಟಿ ರಶ್ಮಿಕಾ ಮಂದಣ್ಣ ಇತ್ತೀಚೆಗೆ ವಿಜಯ್ ದೇವರಕೊಂಡ (Vijay Deverakonda) ಜೊತೆ ಮದುವೆ ಮಾಡಿಕೊಂಡಿದ್ದರು. ಈಗ ಪತಿಯ ಜೊತೆ ಅವರು ಮೊದಲ ಬಾರಿಗೆ ತವರಿಗೆ ಆಗಮಿಸಿದ್ದಾರೆ. ಮದುವೆಯಾದ ನಂತರ ಇದೇ ಮೊದಲ ಬಾರಿಗೆ ರಶ್ಮಿಕಾ (Rashmika Mandanna) ಅವರು ಕೊಡಗಿನ (Kodagu) ವಿರಾಜಪೇಟೆಗೆ ಭೇಟಿ ನೀಡಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಅವರು ತವರಿಗೆ ಬಂದಿದ್ದಾರೆ. ಅವರಿಗೆ ತಂದೆಯಿಂದ ಭರ್ಜರಿ ಉಡುಗೊರೆ ಸಿಕ್ಕಿದೆ. ಭಾನುವಾರ (ಏಪ್ರಿಲ್ 5)…

Read More

ಆರ್​ಬಿಐ ಎಂಪಿಸಿ ಸಭೆ ಶುರು; ಬಡ್ಡಿ ದರ ಇಳಿಯುತ್ತಾ? ಏಪ್ರಿಲ್ 8ರಂದು ನಿರ್ಧಾರ

ನವದೆಹಲಿ, ಏಪ್ರಿಲ್ 6: ಭಾರತೀಯ ರಿಸರ್ವ್ ಬ್ಯಾಂಕ್​ನ ಮಾನಿಟರಿ ಪಾಲಿಸಿ ಕಮಿಟಿಯ ದ್ವೈಮಾಸಿಕ ಸಭೆ ಇವತ್ತು ಆರಂಭವಾಗಿದೆ. ಜಾಗತಿಕ ಪರಿಸ್ಥಿತಿ ಬಹಳ ಬಿಗಡಾಯಿಸಿದ ಕ್ಲಿಷ್ಟಕರ ಸಂದರ್ಭದಲ್ಲಿ ನಡೆಯುತ್ತಿರುವ ಈ ಸಭೆಯಲ್ಲಿ ತೆಗೆದುಕೊಳ್ಳಲಾಗುವ ನಿರ್ಧಾರಗಳ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಮೂರು ದಿನಗಳ ಕಾಲ ನಡೆಯುವ ಈ ಸಭೆಯ ನಿರ್ಧಾರಗಳನ್ನು ಆರ್​ಬಿಐ ಗವರ್ನರ್ ಸಂಜಯ್ ಮಲ್ಹೋತ್ರಾ ಅವರು ಏಪ್ರಿಲ್ 8ರಂದು ಬೆಳಗ್ಗೆ 10 ಗಂಟೆಗೆ ಪ್ರಕಟಿಸಲಿದ್ದಾರೆ. ಜಾಗತಿಕ ಕಚ್ಛಾ ತೈಲ ಬೆಲೆ ಬಹಳ ಎತ್ತರಕ್ಕೆ ಹೋಗಿದೆ. ಪಶ್ಚಿಮ ಏಷ್ಯಾ…

Read More

IPL 2026: 0,0,0,0,0,0.. 14 ಪಂದ್ಯಗಳಲ್ಲಿ 6 ಸೊನ್ನೆ ಸುತ್ತಿದ ಅಭಿಷೇಕ್ ಶರ್ಮಾ

2024 ರ ಐಪಿಎಲ್​ನಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಸಂಚಲನ ಮೂಡಿಸಿದ ಅಭಿಷೇಕ್ ಶರ್ಮಾ, ಸುಮಾರು ಒಂದೂವರೆ ವರ್ಷಗಳ ಕಾಲ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಇದೇ ರೀತಿಯ ಸಂಚಲನ ಸೃಷ್ಟಿಸುವುದನ್ನು ಮುಂದುವರೆಸಿದ್ದರು. ಆದಾಗ್ಯೂ, 2026 ರ ವರ್ಷ ಅವರಿಗೆ ಇದುವರೆಗೆ ಉತ್ತಮವಾಗಿಲ್ಲ. ಒಂದೆಡೆ ರನ್ ಬರ ಎದುರಿಸುತ್ತಿರುವ ಅಭಿಷೇಕ್​ಗೆ ಖಾತೆ ತೆರೆಯುತ್ತಿರುವುದು ಕೂಡ ಕಷ್ಟವಾಗಿದೆ. 2026 ರ ಟಿ20 ವಿಶ್ವಕಪ್‌ನಲ್ಲಿ ಸತತ ಮೂರು ಬಾರಿ ಶೂನ್ಯಕ್ಕೆ ಔಟಾಗಿ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸುವ ಕೆಲಸ ಮಾಡಿದ್ದ ಅಭಿಷೇಕ್ ಶರ್ಮಾ ಇದೀಗ…

Read More

Karnataka 2nd PUC Results 2026: ದ್ವಿತೀಯ ಪಿಯು ಫಲಿತಾಂಶದ ಬಗ್ಗೆ ಬಿಗ್​ ಅಪ್​ಡೇಟ್, ವಿದ್ಯಾರ್ಥಿಗಳಿಗೆ-ಪೋಷಕರಿಗೆ ನಿರಾಸೆ

ಬೆಂಗಳೂರು, (ಏಪ್ರಿಲ್ 06): ಕರ್ನಾಟಕದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕುತೂಹಲದಿಂದ ಕಾಯುತ್ತಿದ್ದ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ (Puc Exam Result) ನಾಳೆ(ಏ.7) ಪ್ರಕಟವಾಗುವುದಿಲ್ಲ. ಶಿಕ್ಷಣ ಸಚಿವ ಮಧುಬಂಗಾರಪ್ಪ (Madhu Bangarappa) ಅವರೇ ಸುದ್ದಿಗೋಷ್ಠಿಯಲ್ಲಿ ಏಪ್ರಿಲ್ ಮೊದಲ ವಾರದಲ್ಲೇ ಫಲಿತಾಂಶ ನೀಡುವುದಾಗಿ ಘೋಷಿಸಿದ್ದರು. ಆದ್ರೆ, ನಾಳೆ(ಏಪ್ರಿಲ್ 7) ದ್ವಿತೀಯ ಪಿಯುಸಿ ರಿಸಲ್ಟ್ ಅನೌನ್ಸ್ ಆಗುವುದಿಲ್ಲ ಎಂದು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (ಕೆಎಸ್‌ಇಎಬಿ) ಅಧ್ಯಕ್ಷ ಪ್ರಕಾಶ್ ನಿಟ್ಟಾಲಿ ಅವರು ಸ್ಪಷ್ಟಪಡಿಸಿದ್ದಾರೆ. ಇದರೊಂದಿಗೆ ಬಹಳ…

Read More

ತುಮಕೂರು: ಸಾರ್ವಜನಿಕರಿಗೆ ಬಿತ್ತು ತೆರಿಗೆ ಬರೆ; ಪಾಲಿಕೆಯ ಹೊಸ ನೀತಿಗೆ ಜನ ಕಂಗಾಲು

ತುಮಕೂರು, ಏಪ್ರಿಲ್​ 06: ಸದ್ಯ ಇಸ್ರೇಲ್ ಹಾಗೂ ಇರಾನ್ ನಡುವಿನ ಯುದ್ಧದ ಹೊಡೆತ ಎಲ್ಲೆಡೆ ತಟ್ಟಿದೆ. ಅನಿಲ ಅಭಾವದಿಂದ ಜನ ತತ್ತರಿಸಿದ್ದಾರೆ. ಅತ್ತ ಅಡುಗೆ ಅನಿಲ ಕೊರತೆ ಉಂಟಾದರೆ, ಇತ್ತ ಅಗತ್ಯ ವಸ್ತುಗಳ ಬೆಲೆ ಏರಿಕೆ ಆಗಿದೆ. ಇದರ ಮಧ್ಯೆ ಮುಂದೇನಾಗುತ್ತೋ ಎಂಬ ಆತಂಕದಲ್ಲಿರುವ ತುಮಕೂರು (tumakuru) ನಗರದ ಜನರಿಗೆ ಪಾಲಿಕೆ ಈಗ ಶಾಕ್ ಕೊಟ್ಟಿದೆ. ತುಮಕೂರು ಮಹಾನಗರ ಪಾಲಿಕೆ ತೆರಿಗೆ ದರವನ್ನು (tax hike) ದಿಢೀರ್ ಏರಿಕೆ ಮಾಡಿದೆ. ಯುಜಿಡಿ, ನೀರಿನ ತೆರಿಗೆ ಸೇರಿದಂತೆ ಹಲವು…

Read More

ಈ ದೇವಸ್ಥಾನದಲ್ಲಿ ಪ್ರಸಾದವಾಗಿ ನೂಡಲ್ಸ್, ಪಿಜ್ಜಾ ಕೊಡ್ತಾರೆ!

ಕೊಲ್ಕತ್ತಾ, ಏಪ್ರಿಲ್ 6: ಭಾರತೀಯ ಭಕ್ತಿ, ಚೀನಾದ ಸಂಪ್ರದಾಯದ ಸಂಗಮವಾಗಿರುವ ಕೊಲ್ಕತ್ತಾದ ‘ಚೀನಾ ಕಾಳಿ ದೇವಸ್ಥಾನ’ದಲ್ಲಿ ಪಿಜ್ಜಾ ಮತ್ತು ನೂಡಲ್ಸ್​ ಅನ್ನೇ ಪ್ರಸಾದವಾಗಿ ನೀಡಲಾಗುತ್ತದೆ. ಹಲವು ದಶಕಗಳ ಹಿಂದೆ ಚೀನಾದಿಂದ ಇಲ್ಲಿ ನೆಲೆಸಿ ಬಂಗಾಳಿ ಸಂಸ್ಕೃತಿಯನ್ನು ಸ್ವೀಕರಿಸಿದವರು ಈ ದೇವಾಲಯವನ್ನು (Kali Temple) ನಿರ್ಮಿಸಿದರು. ಈ ಮಂದಿರ ವೈವಿಧ್ಯತೆಯಲ್ಲಿ ಏಕತೆಗೆ ಸಾಕ್ಷಿಯಾಗಿದೆ. ನೂಡಲ್ಸ್ ಮತ್ತು ಸೂಪ್ ಅನ್ನು ನೈವೇದ್ಯವಾಗಿ ನೀಡುವ ಈ ವಿಚಿತ್ರ ಪದ್ಧತಿಯ ಹಿಂದಿನ ವಿಷಯಗಳ ಕುರಿತಾದ ಮಾಹಿತಿ ಇಲ್ಲಿದೆ. ಸಾಮಾನ್ಯವಾಗಿ ನಾವು ದೇವಸ್ಥಾನಗಳಿಗೆ ಹೋದಾಗ…

Read More